“A robust energy sector bodes well for national progress”
“Global experts are upbeat about India's growth story”
“India is not just meeting its needs but is also determining the global direction”
“India is focusing on building infrastructure at an unprecedented pace”
“The Global Biofuels Alliance has brought together governments, institutions and industries from all over the world”
“We are giving momentum to rural economy through 'Waste to Wealth Management”
“India is emphasizing the development of environmentally conscious energy sources to enhance our energy mix”
“We are encouraging self-reliance in solar energy sector”
"The India Energy Week event is not just India's event but a reflection of 'India with the world and India for the world' sentiment"

ಗೋವಾದ ರಾಜ್ಯಪಾಲದ ಶ್ರೀ ಪಿ.ಎಸ್‌.ಶೀಧರನ್ ಪಿಳ್ಳೈ, ಗೋವಾದ ಕ್ರಿಯಾಶೀಲ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್, ನನ್ನ ಸಂಪುಟದ ಸಹೋದ್ಯೋಗಿಗಳಾದ ಹರ್ದೀಪ್ ಸಿಂಗ್ ಪುರಿ ಮತ್ತು ರಾಮೇಶ್ವರ ತೇಲಿ, ನಾನಾ ರಾಷ್ಟ್ರಗಳಿಂದ ಆಗಮಿಸಿರುವ ಅತಿಥಿ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ..!

ಇದು ಭಾರತ ಇಂಧನ ಸಪ್ತಾಹದ ಎರಡನೇ ಆವೃತ್ತಿ, ನಾನು ನಿಮ್ಮೆಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಇದು ಕ್ರಿಯಾಶೀಲ ಶಕ್ತಿಗೆ ಹೆಸರಾದ ರಾಜ್ಯ ಗೋವಾದಲ್ಲಿ ನಡೆಯುತ್ತಿರುವುದು ನನಗೆ ಅತೀವ ಆನಂದ ತಂದಿದೆ. ತನ್ನ ಆತಿಥ್ಯಕ್ಕೆ ಹೆಸರುವಾಸಿಯಾದ ಗೋವಾ ತನ್ನ ಶ್ರೀಮಂತ ಸೌಂದರ್ಯ ಮತ್ತು ಸಂಸ್ಕೃತಿಯಿಂದಾಗಿ ಜಗತ್ತಿನೆಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರಸ್ತುತ ಗೋವಾ ಅಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೆ ಏರುತ್ತಿದೆ. ಆದ್ದರಿಂದ, ಪರಿಸರ ಪ್ರಜ್ಞೆ ಮತ್ತು ಸುಸ್ಥಿರ ಭವಿಷ್ಯವನ್ನು ಚರ್ಚಿಸಲು ನಾವು ಸಭೆ ನಡೆಸುತ್ತಿರುವಾಗ, ಗೋವಾ ಒಂದು ಸೂಕ್ತ ಸ್ಥಳವಾಗಿದೆ. ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ನಮ್ಮ ಗೌರವಾನ್ವಿತ ವಿದೇಶಿ ಅತಿಥಿಗಳು ಜೀವಮಾನವಿಡೀ ಗೋವಾದ ಅಚ್ಚುಮೆಚ್ಚಿನ ನೆನಪುಗಳನ್ನು ತಮ್ಮೊಂದಿಗೆ ಒಯ್ಯುತ್ತಾರೆಂಬ ವಿಶ್ವಾಸ ನನಗಿದೆ

 

ಮಿತ್ರರೇ,

ಈ ಭಾರತ ಇಂಧನ ಸಪ್ತಾಹ ಕಾರ್ಯಕ್ರಮವನ್ನು ಒಂದು ಪ್ರಮುಖ ಘಟ್ಟದಲ್ಲಿ ಆಯೋಜಿಸಲಾಗಿದೆ. ಆರ್ಥಿಕ ವರ್ಷದ ಆರಂಭದ ಆರು ತಿಂಗಳಲ್ಲೇ, ಭಾರತದ ಜಿಡಿಪಿ ದರವು ಶೇ.7.5 ಕ್ಕಿಂತ ಹೆಚ್ಚಿದೆ, ಇದು ಜಾಗತಿಕ ಬೆಳವಣಿಗೆಯ ಅಂದಾಜುಗಳನ್ನು ಮೀರಿಸಿದೆ. ಸದ್ಯ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ನಿಂತಿದೆ. ಅಲ್ಲದೆ, ಐಎಂಎಫ್ ಇತ್ತೀಚೆಗೆ ನಮಗೆ ಅದೇ ರೀತಿಯ ಬೆಳವಣಿಗೆಯ ಮುನ್ಸೂಚನೆಯನ್ನು ನೀಡಿದೆ. ವಿಶ್ವಾದ್ಯಂತ ತಜ್ಞರು ಈಗ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ಶ್ರೇಣಿಗೆ ಏರುವುದನ್ನು ನಿರೀಕ್ಷಿಸುತ್ತಾರೆ. ಭಾರತದ  ಬೆಳವಣಿಗೆಯ ನಿರೂಪಣೆಯಲ್ಲಿ ಅದರ ಪ್ರಮುಖ ಪಾತ್ರವನ್ನು ಗಮನಿಸಿದರೆ, ಇಂಧನ ವಲಯದ ಪ್ರಾಮುಖ್ಯತೆಯು ಸ್ವಾಭಾವಿಕವಾಗಿ ಹೆಚ್ಚಿದೆ.

ಮಿತ್ರರೇ,

ಸದ್ಯ ಭಾರತವು ವಿಶ್ವದ ಮೂರನೇ ಅತಿದೊಡ್ಡ ಇಂಧನ ಗ್ರಾಹಕ, ತೈಲ ಗ್ರಾಹಕ ಮತ್ತು ಎಲ್ ಪಿಜಿ ಗ್ರಾಹಕ ಸ್ಥಾನದಲ್ಲಿದೆ. ಹೆಚ್ಚುವರಿಯಾಗಿ, ಇದು ಜಾಗತಿಕವಾಗಿ ಎಲ್ ಎನ್ ಜಿ, ರಿಫೈನರ್ ಮತ್ತು ಆಟೋಮೊಬೈಲ್ ಮಾರುಕಟ್ಟೆಯ ನಾಲ್ಕನೇ-ಅತಿದೊಡ್ಡ ಆಮದುದಾರನ ಸ್ಥಾನದಲ್ಲಿ ನಿಂತಿದೆ. ಸದ್ಯ ಎಲೆಕ್ಟ್ರಿಕ್ ವಾಹನಗಳಿಗೆ (ಇವಿಗಳಿಗೆ) ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಭಾರತ ದ್ವಿಚಕ್ರ ವಾಹನಗಳು ಮತ್ತು ನಾಲ್ಕು ಚಕ್ರಗಳೆರಡರಲ್ಲೂ ದಾಖಲೆಯ ಮಾರಾಟಕ್ಕೆ ಸಾಕ್ಷಿಯಾಗಿದೆ. 2045ರ ವೇಳೆಗೆ ಭಾರತದ ಪ್ರಾಥಮಿಕ ಇಂಧನ ಬೇಡಿಕೆಯು ದ್ವಿಗುಣಗೊಳ್ಳಲಿದೆ ಎಂದು ಅಂದಾಜಿಸಲಾಗುತ್ತಿದೆ, ಇದು ಪ್ರಸ್ತುತ ದಿನಕ್ಕೆ 19 ಮಿಲಿಯನ್ ಬ್ಯಾರೆಲ್‌ಗಳ ತೈಲದಿಂದ 2045ರ ವೇಳೆಗೆ 38 ಮಿಲಿಯನ್ ಬ್ಯಾರೆಲ್‌ಗಳಿಗೆ ಏರಿಕೆಯಾಗುತ್ತದೆ.

ಮಿತ್ರರೇ,

ಈ ಭವಿಷ್ಯದ ಅಗತ್ಯತೆಗಳ ನಿರೀಕ್ಷೆಯಲ್ಲಿ, ಭಾರತವು ಸಕ್ರಿಯವಾಗಿ ತನ್ನನ್ನು ತಾನು ಸಜ್ಜುಗೊಳಿಸಿಕೊಳ್ಳುತ್ತಿದೆ. ಹೆಚ್ಚುತ್ತಿರುವ ಇಂಧನ ಬೇಡಿಕೆಗಳ ಮಧ್ಯಯೇ, ಭಾರತವು ರಾಷ್ಟ್ರದಾದ್ಯಂತ ಕೈಗೆಟುಕುವ ದರದಲ್ಲಿ ಇಂಧನ ಲಭ್ಯತೆಯನ್ನು ಸ್ಥಿರವಾಗಿ ಖಾತ್ರಿಪಡಿಸುತ್ತಿದೆ. ಹಲವಾರು ಜಾಗತಿಕ ಅಂಶಗಳ ಹೊರತಾಗಿಯೂ, ಭಾರತದಲ್ಲಿ ಕಳೆದ ಎರಡು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಡಿಮೆಯಾಗಿದೆ ಎಂಬುದು ಗಮನಾರ್ಹ. ಅಲ್ಲದೆ, ಭಾರತ ಶೇ.100ರಷ್ಟು ವಿದ್ಯುತ್ ಲಭ್ಯತೆ ವ್ಯಾಪ್ತಿಯನ್ನು ಸಾಧಿಸಿದೆ ಮತ್ತು ಕೋಟಿಗಟ್ಟಲೆ ಮನೆಗಳಿಗೆ ವಿದ್ಯುತ್ ಒದಗಿಸಿದೆ. ಅಂತಹ ಪ್ರಯತ್ನಗಳ ಮೂಲಕವೇ ಭಾರತವು ಜಾಗತಿಕ ಇಂಧನ ಕ್ಷೇತ್ರದಲ್ಲಿ ಮಹತ್ವದ ಪಾಲುದಾರನಾಗಿ ಹೊರಹೊಮ್ಮಿದೆ, ಆ ಮೂಲಕ ತನ್ನದೇ ಆದ ಅಗತ್ಯತೆಗಳನ್ನು ಪೂರೈಸುವುದು ಮಾತ್ರವಲ್ಲದೆ ಜಾಗತಿಕ ಅಭಿವೃದ್ಧಿಯನ್ನು ರೂಪಿಸುತ್ತದೆ.

 

ಮಿತ್ರರೇ,

ಭಾರತ ಇಂದು ತನ್ನ ಮೂಲಸೌಕರ್ಯ ನಿರ್ಮಾಣ ಮಿಷನ್ ಭಾಗವಾಗಿ 21ನೇ ಶತಮಾನದ ಆಧುನಿಕ ಮೂಲಸೌಕರ್ಯ ನಿರ್ಮಿಸುತ್ತಿದೆ. ಈ ಆರ್ಥಿಕ ವರ್ಷದಲ್ಲಿ, ನಾವು ಅಂದಾಜು 10 ಲಕ್ಷ ಕೋಟಿ ರೂ.ಗಳನ್ನು ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುತ್ತಿದ್ದೇವೆ, ಇತ್ತೀಚಿನ ಭಾರತದ ಬಜೆಟ್‌ನಲ್ಲಿ ಈ ಉದ್ದೇಶಕ್ಕಾಗಿ 11 ಲಕ್ಷ ಕೋಟಿ ರೂ. ತೆಗೆದಿರಿಸಲಾಗಿದೆ. ಈ ಹೂಡಿಕೆಯ ಗಮನಾರ್ಹ ಭಾಗವು ನಿಸ್ಸಂದೇಹವಾಗಿ ಇಂಧನ ಕ್ಷೇತ್ರದ ಕಡೆಗೆ ವಿನಿಯೋಗವಾಗುತ್ತದೆ. ರೈಲ್ವೆ, ರಸ್ತೆ ಮಾರ್ಗಗಳು, ಜಲಮಾರ್ಗಗಳು, ವಾಯುಮಾರ್ಗಗಳು ಮತ್ತು ವಸತಿ ಸೇರಿದಂತೆ ದೇಶದ ಎಲ್ಲಾ ಮೂಲಸೌಕರ್ಯ ಅಭಿವೃದ್ಧಿಗಳಿಗೆ ಶಕ್ತಿಯ ಅಗತ್ಯವಿರುವುದರಿಂದ, ಭಾರತವು ಈ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ತನ್ನ ಇಂಧನ ಸಾಮರ್ಥ್ಯವನ್ನು ಸಕ್ರಿಯವಾಗಿ ವಿಸ್ತರಣೆ ಮಾಡುತ್ತಿದೆ.  ನಮ್ಮ ಸರ್ಕಾರವು ಜಾರಿಗೆ ತಂದ ಸುಧಾರಣೆಗಳಿಗೆ ಧನ್ಯವಾದಗಳು, ಭಾರತದಲ್ಲಿ ದೇಶೀಯ ಅನಿಲ ಉತ್ಪಾದನೆಯು ತ್ವರಿತ ಬೆಳವಣಿಗೆಯನ್ನು ಕಾಣುತ್ತಿದೆ. ಪ್ರಾಥಮಿಕ ಇಂಧನ ಮಿಶ್ರಣದಲ್ಲಿ ನೈಸರ್ಗಿಕ ಅನಿಲದ ಪಾಲನ್ನು ಶೇಕಡ ಆರರಿಂದ ಹದಿನೈದಕ್ಕೆ ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ. ಇದನ್ನು ಸಾಧಿಸಲು, ಮುಂದಿನ 5-6 ವರ್ಷಗಳವರೆಗೆ ಸುಮಾರು ಅರವತ್ತೇಳು ಶತಕೋಟಿ ಡಾಲರ್‌ಗಳ ಹೂಡಿಕೆ ಮಾಡಲು ಉದ್ದೇಶಿಸಲಾಗಿದೆ. ಹೆಚ್ಚುವರಿಯಾಗಿ ನಮ್ಮ ಪ್ರಸ್ತುತ ಸಂಸ್ಕರಣಾ ಸಾಮರ್ಥ್ಯವು 254 ಎಂಎಂಟಿಪಿಎ ಅನ್ನು ಮೀರಿಸುವ ಮೂಲಕ ನಾವು ಜಾಗತಿಕವಾಗಿ ಅತಿದೊಡ್ಡ ಸಂಸ್ಕರಣೆದಾರ( ರಿಫೈನರ್‌ಗಳಲ್ಲಿ)ರಲ್ಲಿ ಒಬ್ಬರಾಗಿ ನಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದೇವೆ. 2030ರ ವೇಳೆಗೆ, ನಾವು ಭಾರತದ ಸಂಸ್ಕರಣಾ ಸಾಮರ್ಥ್ಯವನ್ನು 450 ಎಂಎಂಟಿಪಿಎಗೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ. ಅಲ್ಲದೆ, ಪೆಟ್ರೋಕೆಮಿಕಲ್ಸ್ ಮತ್ತು ಇತರ ಸಿದ್ಧಪಡಿಸಿದ ಉತ್ಪನ್ನಗಳ ವಲಯಗಳಲ್ಲಿ ಗಮನಾರ್ಹ ರಫ್ತುದಾರನಾಗಿ ಭಾರತವು ಹೊರಹೊಮುತ್ತಿದೆ. ಈ ಅಂಶವನ್ನು ವಿವರಿಸಲು ನಾನು ಹಲವಾರು ಉದಾಹರಣೆಗಳನ್ನು ನೀಡಬಲ್ಲೆ, ಆದರೆ ವಿಷಯದ ತಿರುಳು ಏನೆಂದರೆ ಭಾರತವು ಸದ್ಯ ಇಂಧನ ಕ್ಷೇತ್ರದಲ್ಲಿ ಅಭೂತಪೂರ್ವ ಮಟ್ಟದಲ್ಲಿ ಹೂಡಿಕೆ ಮಾಡುತ್ತಿದೆ. ಪರಿಣಾಮವಾಗಿ, ತೈಲ, ಅನಿಲ ಮತ್ತು ಇಂಧನ ಕ್ಷೇತ್ರಗಳ ವಿಶ್ವಾದ್ಯಂತದ ನಾಯಕರು ಭಾರತದಲ್ಲಿ ಹೂಡಿಕೆ ಮಾಡಲು ಹೆಚ್ಚು ಉತ್ಸುಕರಾಗಿದ್ದಾರೆ. ಅಂತಹ ಹಲವಾರು ನಾಯಕರು ಇಂದು ನಮ್ಮೊಂದಿಗಿದ್ದಾರೆ.  ಅಂತಹ ಪ್ರತಿಯೊಬ್ಬರಿಗೂ ನಾವು ಆತ್ಮೀಯ ಸ್ವಾಗತವನ್ನು ನೀಡುತ್ತೇವೆ.

 

ಮಿತ್ರರೇ,

ಆರ್ಥಿಕ ಚಲಾವಣೆಯ ಪರಿಕಲ್ಪನೆಯು ಭಾರತದ ಪ್ರಾಚೀನ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿದೆ, ಇದು ಮರುಬಳಕೆ ಮತ್ತು ಮರುಸಂಸ್ಕರಣೆಯ ನಮ್ಮ ನೀತಿಯನ್ನು ಪ್ರತಿಬಿಂಬಿಸುತ್ತದೆ. ಈ ತತ್ವವು ಇಂಧನ ಕ್ಷೇತ್ರಕ್ಕೆ ಸಮಾನವಾಗಿ ಅನ್ವಯಿಸುತ್ತದೆ. ಕಳೆದ ವರ್ಷ ಜಿ-20 ಶೃಂಗಸಭೆಯಲ್ಲಿ ಆರಂಭಿಸಲಾದ ಜಾಗತಿಕ ಜೈವಿಕ ಇಂಧನ ಒಕ್ಕೂಟವು ಈ ಮನೋಭಾವವನ್ನು ಸಾರುತ್ತದೆ. ಈ ಒಕ್ಕೂಟವು ವಿಶ್ವಾದ್ಯಂತ ಸರ್ಕಾರಗಳು, ಸಂಸ್ಥೆಗಳು ಮತ್ತು ಕೈಗಾರಿಕೆಗಳನ್ನು ಒಗೂಡಿಸಿದೆ ಮತ್ತು ಇದು ಆರಂಭದಿಂದಲೂ ವ್ಯಾಪಕ ಬೆಂಬಲವನ್ನು ಗಳಿಸಿದೆ. ಕಡಿಮೆ ಸಮಯದಲ್ಲಿ 22 ದೇಶಗಳು ಮತ್ತು 12 ಅಂತಾರಾಷ್ಟ್ರೀಯ ಸಂಸ್ಥೆಗಳು ಈ ಒಕ್ಕೂಟವನ್ನು ಸೇರಿಕೊಂಡಿರುವುದು ಗಮನಾರ್ಹವಾಗಿದ್ದು, ಜಾಗತಿಕವಾಗಿ ಜೈವಿಕ ಇಂಧನಗಳ ಪ್ರಚಾರವನ್ನು ಉತ್ತೇಜಿಸುತ್ತದೆ ಮತ್ತು ಸುಮಾರು 500 ಶತಕೋಟಿ ಡಾಲರ್ ಮೌಲ್ಯದ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತಿದೆ.

ಮಿತ್ರರೇ,

ಈ ಕ್ಷೇತ್ರದಲ್ಲಿ ಭಾರತವೂ ಕೂಡ ಗಮನಾರ್ಹ ದಾಪುಗಾಲು ಹಾಕಿದೆ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಜೈವಿಕ ಇಂಧನಗಳ ಅಳವಡಿಕೆ ಹೆಚ್ಚಾಗಿದೆ. ಒಂದು ದಶಕದ ಹಿಂದೆ, ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣವು ಸುಮಾರು ಶೇ.1.5ರಷ್ಟಿತ್ತು. 2023ರ ವೇಳೆಗೆ ಈ ಪ್ರಮಾಣ ಶೇ.12 ರಷ್ಟನ್ನು ಮೀರಿದೆ, ಇದರ ಪರಿಣಾಮವಾಗಿ ಇಂಗಾಲದ ಹೊರಸೂಸುವಿಕೆ ಸುಮಾರು 42 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ತಗ್ಗಿದೆ. 2025 ರ ವೇಳೆಗೆ ಪೆಟ್ರೋಲ್‌ನಲ್ಲಿ ಶೇಕಡ 20 ರಷ್ಟು ಎಥೆನಾಲ್ ಅನ್ನು ಮಿಶ್ರಣ ಮಾಡುವ ಗುರಿಯನ್ನು ಸಾಧಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಹಿಂದಿನ ಭಾರತ ಇಂಧನ ಸಪ್ತಾಹದಲ್ಲಿ, ಭಾರತದ 80ಕ್ಕೂ ಅಧಿಕ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಶೇ.20ರಷ್ಟು ಎಥೆನಾಲ್ ಮಿಶ್ರಣವನ್ನು ಆರಂಭಿಸಿರುವುದು ನಿಮ್ಮಲ್ಲಿ ಕೆಲವರಿಗೆ ನೆನಪಿರಬಹುದು. ಸದ್ಯ, ನಾವು ಈ ಉಪಕ್ರಮವನ್ನು ರಾಷ್ಟ್ರವ್ಯಾಪಿ 9000 ಮಳಿಗೆಗಳಲ್ಲಿ ಪುನರಾವರ್ತಿಸುತ್ತಿದ್ದೇವೆ.

ಮಿತ್ರರೇ,

ತ್ಯಾಜ್ಯದಿಂದ ಸಂಪತ್ತು ನಿರ್ವಹಣೆಯ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಸರ್ಕಾರ ಶ್ರಮಿಸುತ್ತಿದೆ. ಈ ಗುರಿಯನ್ನು ಸಾಧಿಸಲು ಭಾರತದಲ್ಲಿ 5000 ಕಂಪ್ರೆಸ್ಡ್  ಜೈವಿಕ ಅನಿಲ ಘಟಕಗಳನ್ನು ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ.

 

ಮಿತ್ರರೇ,

ವಿಶ್ವದ ಜನಸಂಖ್ಯೆಯ ಶೇ.17ರಷ್ಟನ್ನು ಒಳಗೊಂಡಿದ್ದರೂ, ಭಾರತದ ಇಂಗಾಲದ ಹೊರಸೂಸುವಿಕೆಯ ಪಾಲು ಕೇವಲ ಶೇ.4ರಷ್ಟಿದೆ. ಅದೇನೇ ಇದ್ದರೂ, ನಮ್ಮ ಇಂಧನ ಮಿಶ್ರಣವನ್ನು ಮತ್ತಷ್ಟು ಹೆಚ್ಚಿಸಲು ನಾವು ಸುಸ್ಥಿರ ಪರಿಸರ ಇಂಧನ ಮೂಲಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇವೆ. 2070ರ ವೇಳೆಗೆ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆ ಸಾಧಿಸುವುದು ನಮ್ಮ ಗುರಿಯಾಗಿದೆ. ಸದ್ಯ ನವೀಕರಿಸಬಹುದಾದ ಇಂಧನ ಸ್ಥಾಪಿತ ಸಾಮರ್ಥ್ಯದಲ್ಲಿ ಭಾರತವು ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದೆ, ನಮ್ಮ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇ. 40ರಷ್ಟನ್ನು ಬಳಸಿದರೆ ಬರಿದಾಗಬಹುದಾದ ಇಂಧನ ಮೂಲಗಳಿಂದ ಪಡೆಯಲಾಗಿದೆ. ಭಾರತದ ಸೌರಶಕ್ತಿ ಸ್ಥಾಪಿತ ಸಾಮರ್ಥ್ಯವು ಕಳೆದ ದಶಕದಲ್ಲಿ 20 ಪಟ್ಟು  ಹೆಚ್ಚಾಗಿದೆ.

ಭಾರತದಲ್ಲಿ ಸೌರಶಕ್ತಿಯನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಯು ರಾಷ್ಟ್ರವ್ಯಾಪಿ ಆಂದೋಲನವಾಗಿ ಬೆಳೆಯುತ್ತಿದೆ. ಇತ್ತೀಚೆಗೆ, ದೇಶದಲ್ಲಿ 1 ಕೋಟಿ ಮನೆಗಳಲ್ಲಿ ಸೌರ ಮೇಲ್ಛಾವಣಿಗಳನ್ನು ಸ್ಥಾಪಿಸುವ ಯೋಜನೆ ಮತ್ತೊಂದು ಮಹತ್ವದ ಉಪಕ್ರಮವನ್ನು ಆರಂಭಿಸಲಾಗಿದೆ, ಈ ಉಪಕ್ರಮವು ಒಂದು ಕೋಟಿ ಕುಟುಂಬಗಳನ್ನು ಇಂಧನದಲ್ಲಿ ಸ್ವಾವಲಂಬಿಗಳಾಗಲು ಸಬಲೀಕರಣಗೊಳಿಸುತ್ತದೆ. ಅವರ ಮನೆಗಳಲ್ಲಿ ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್ ಅನ್ನು ನೇರವಾಗಿ ಗ್ರಿಡ್‌ಗೆ ತುಂಬಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಭಾರತದಂತಹ ದೇಶದಲ್ಲಿ ಈ ಯೋಜನೆಯ ಪರಿಣಾಮವು ಗಣನೀಯವಾಗಿರುತ್ತದೆ, ಇದು ಸೌರ ಮೌಲ್ಯ ಸರಪಳಿಯಾದ್ಯಂತ ಗಮನಾರ್ಹ ಹೂಡಿಕೆಯ ಅವಕಾಶವನ್ನು ಒದಗಿಸುತ್ತದೆ.

 

ಮಿತ್ರರೇ,

ಭಾರತವು ಹಸಿರು ಜಲಜನಕದ ಕ್ಷೇತ್ರದಲ್ಲಿ ಕ್ಷಿಪ್ರವಾಗಿ ದಾಪುಗಾಲು ಹಾಕುತ್ತಿದೆ. ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಜಾರಿಯೊಂದಿಗೆ ಭಾರತವು ಹೈಡ್ರೋಜನ್ ಉತ್ಪಾದನೆ ಮತ್ತು ರಫ್ತಿನ ತಾಣವಾಗಲು ಸಿದ್ಧವಾಗಿದೆ. ಭಾರತದ ಹಸಿರು ಇಂಧನ ವಲಯವು ಹೂಡಿಕೆದಾರರು ಮತ್ತು ಕೈಗಾರಿಕೆಗಳೆರಡಕ್ಕೂ ಖಚಿತವಾದ ಯಶಸ್ಸನ್ನು ನೀಡಬಲ್ಲದು ಎಂಬ ವಿಶ್ವಾಸ ನನಗಿದೆ.

 

ಮಿತ್ರರೇ,

ಈ ಭಾರತ ಇಂಧನ ಸಪ್ತಾಹ ಕಾರ್ಯಕ್ರಮ ಕೇವಲ ಭಾರತ ಆಯೋಜಿಸಿದ ಕಾರ್ಯಕ್ರಮವಲ್ಲ; ಇದು “ವಿಶ್ವದೊಂದಿಗೆ ಭಾರತ ಮತ್ತು ಪ್ರಪಂಚಕ್ಕಾಗಿ ಭಾರತ’’ ಎಂಬ ತತ್ವವನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ, ಈ ವೇದಿಕೆಯು ಇಂಧನ ವಲಯದಲ್ಲಿ ಅನುಭವಗಳನ್ನು ಚರ್ಚಿಸುವ ಮತ್ತು ವಿನಿಮಯ ಮಾಡಿಕೊಳ್ಳುವ ಸ್ಥಳವಾಗಿ ವಿಕಸನಗೊಂಡಿದೆ. ಬನ್ನಿ, ನಾವು ಪರಸ್ಪರ ಪಾಠಗಳನ್ನು ಕಲಿಯುವ ಮೂಲಕ, ತಾಂತ್ರಿಕ ಪ್ರಗತಿಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಮತ್ತು ಸುಸ್ಥಿರ ಶಕ್ತಿಯ ಕಡೆಗೆ ಹೊಸ ಮಾರ್ಗಗಳನ್ನು ರೂಪಿಸುವ ಮೂಲಕ ಸಾಮೂಹಿಕವಾಗಿ ಪ್ರಗತಿ ಸಾಧಿಸೋಣ. ನಾವು ಪರಸ್ಪರ ಕಲಿಯೋಣ, ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಸಹಭಾಗಿತ್ವ ಸಾಧಿಸೋಣ ಮತ್ತು ಸುಸ್ಥಿರ ಇಂಧನ ಅಭಿವೃದ್ಧಿಯ ಮಾರ್ಗಗಳನ್ನು ಕಂಡುಕೊಳ್ಳೋಣ. ನಾವು ಒಗ್ಗೂಡಿ ಸಮೃದ್ಧ ಮತ್ತು ಸುಸ್ಥಿರ ಪರಿಸರ ಭವಿಷ್ಯವನ್ನು ರೂಪಿಸಬಹುದು. ಈ ವೇದಿಕೆಯು ನಮ್ಮ ಸಾಮೂಹಿಕ ಪ್ರಯತ್ನಗಳಿಗೆ ಸಾಕ್ಷಿಯಾಗಿ ನಿಲ್ಲುತ್ತದೆಯೆಂಬ ವಿಶ್ವಾಸ ನನಗಿದೆ. ಮತ್ತೊಮ್ಮೆ, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ನಾನು ಶುಭಾಶಯಗಳನ್ನು ತಿಳಿಸಲು ಬಯಸುತ್ತೇನೆ.

ತುಂಬಾ ತುಂಬಾ ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.