Quoteಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿದರು
Quote"ಬೆಂಗಳೂರಿನ ಆಗಸವು ನವ ಭಾರತದ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿದೆ. ಈ ಹೊಸ ಎತ್ತರವೇ ನವ ಭಾರತದ ವಾಸ್ತವವಾಗಿದೆ”
Quote"ದೇಶವನ್ನು ಬಲಪಡಿಸಲು ಕರ್ನಾಟಕದ ಯುವಜನತೆ ತಮ್ಮ ತಾಂತ್ರಿಕ ಪರಿಣತಿಯನ್ನು ರಕ್ಷಣಾ ಕ್ಷೇತ್ರದಲ್ಲಿ ತೊಡಗಿಸಬೇಕು"
Quote"ಹೊಸ ಚಿಂತನೆ, ಹೊಸ ವಿಧಾನದೊಂದಿಗೆ ದೇಶವು ಮುನ್ನಡೆದರೆ, ಅದರ ವ್ಯವಸ್ಥೆಗಳು ಹೊಸ ಚಿಂತನೆಗೆ ಅನುಗುಣವಾಗಿ ಬದಲಾಗಲು ಆರಂಭಿಸುತ್ತವೆ"
Quote"ಇಂದು, ಏರೋ ಇಂಡಿಯಾ ಕೇವಲ ಪ್ರದರ್ಶನ ಮಾತ್ರವಲ್ಲ, ಇದು ರಕ್ಷಣಾ ಉದ್ಯಮದ ವ್ಯಾಪ್ತಿಯನ್ನು ಮಾತ್ರವಲ್ಲದೆ ಭಾರತದ ಆತ್ಮ ವಿಶ್ವಾಸವನ್ನು ಪ್ರದರ್ಶಿಸುತ್ತದೆ"
Quote"21ನೇ ಶತಮಾನದ ನವ ಭಾರತವು ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ ಅಥವಾ ಪ್ರಯತ್ನದಲ್ಲಿ ಕೊರತೆ ಕಾಣುವುದಿಲ್ಲ"
Quote"ಭಾರತವು ಅತಿ ದೊಡ್ಡ ರಕ್ಷಣಾ ಉತ್ಪಾದನಾ ರಾಷ್ಟ್ರಗಳಲ್ಲಿ ಸೇರ್ಪಡೆಗೊಳ್ಳಲು ತ್ವರಿತ ದಾಪುಗಾಲುಗಳನ್ನು ಹಾಕುತ್ತದೆ ಮತ್ತು ನಮ್ಮ ಖಾಸಗಿ ವಲಯ ಮತ್ತು ಹೂಡಿಕೆದಾರರು ಅದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಾರೆ"
Quote"ಇಂದಿನ ಭಾರತವು ವೇಗವಾಗಿ ಯೋಚಿಸುತ್ತದೆ, ದೂರದೃಷ್ಟಿಯಿಂದ ಯೋಚಿಸುತ್ತದೆ ಮತ್ತು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ"
Quote"ಏರೋ ಇಂಡಿಯಾದ ಕಿವಿಗಡಚಿಕ್ಕುವ ಘರ್ಜನೆಯು ಭಾರತದ ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯ ಸಂದೇಶವನ್ನು ಪ್ರತಿಧ್ವನಿಸುತ್ತದೆ"

ಇಂದಿನ ಮಹತ್ವಪೂರ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಕರ್ನಾಟಕದ ರಾಜ್ಯಪಾಲರು, ಮುಖ್ಯಮಂತ್ರಿಗಳು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೀ, ನನ್ನ ಹಲವು ಸಂಪುಟ ಸಹೋದ್ಯೋಗಿಗಳು, ವಿದೇಶಗಳ ರಕ್ಷಣಾ ಸಚಿವರು, ಉದ್ಯಮದ ಗೌರವಾನ್ವಿತ ಪ್ರತಿನಿಧಿಗಳು, ಇತರೆ ಗಣ್ಯರು, ಮಹಿಳೆಯರು ಮತ್ತು ಗೌರವಾನ್ವಿತರೆ!

ಏರೋ ಇಂಡಿಯಾದ ರೋಚಕ ಕ್ಷಣಗಳನ್ನು ವೀಕ್ಷಿಸುತ್ತಿರುವ ಎಲ್ಲಾ ಸಹೋದ್ಯೋಗಿಗಳನ್ನು ನಾನಿಲ್ಲಿ ಅಭಿನಂದಿಸುತ್ತೇನೆ. ಬೆಂಗಳೂರಿನ ಶುಭ್ರಾಗಸವು ಇಂದು ನವಭಾರತದ ಶಕ್ತಿ ಸಾಮರ್ಥ್ಯವನ್ನು ಕಣ್ಣಾರೆ ನೋಡುತ್ತಿದೆ. ಹೊಸ ಎತ್ತರಗಳು ನವ ಭಾರತದ ವಾಸ್ತವ ಎಂಬುದಕ್ಕೆ ಇಂದು ಬೆಂಗಳೂರಿನ ನೀಲಾಗಸವೇ ಸಾಕ್ಷಿಯಾಗಿದೆ. ಇಂದು ದೇಶವು ಹೊಸ ಎತ್ತರವನ್ನು ಮುಟ್ಟುವ ಜೊತೆಗೆ ಅವುಗಳ ಮಾಪನ ಮಾಡುತ್ತಿದೆ.

ಇಲ್ಲಿ ನೆರೆದಿರುವ ಎಲ್ಲಾ ಸ್ನೇಹಿತರೆ,

ಏರೋ ಇಂಡಿಯಾದ ಈ ವೈಮಾನಿಕ ಪ್ರದರ್ಶನವು ಭಾರತದ ಬೆಳೆಯುತ್ತಿರುವ ಸಾಮರ್ಥ್ಯಕ್ಕೆ ನೈಜ ಉದಾಹರಣೆಯಾಗಿದೆ. ಏರೋ ಇಂಡಿಯಾದಲ್ಲಿ ವಿಶ್ವದ ಸುಮಾರು 100 ದೇಶಗಳ ಉಪಸ್ಥಿತಿಯು ಭಾರತದ ಮೇಲೆ ವಿಶ್ವಾದ್ಯಂತ ವೇಗವಾಗಿ ಬೆಳೆಯುತ್ತಿರುವ ನಂಬಿಕೆ, ಆತ್ಮವಿಶ್ವಾಸವನ್ನು ತೋರಿಸುತ್ತಿದೆ. ಭಾರತ ಮತ್ತು ವಿದೇಶಗಳಿಂದ 700ಕ್ಕೂ ಹೆಚ್ಚು ವೈಮಾನಿಕ ಪ್ರದರ್ಶಕರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಇದು ಹಿಂದಿನ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದೆ. ಭಾರತದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳು(ಎಂಎಸ್‌ಎಂಇಗಳು), ಸ್ಥಳೀಯ ಸ್ಟಾರ್ಟಪ್‌ಗಳು ಮತ್ತು ಹೆಸರಾಂತ ಜಾಗತಿಕ ಕಂಪನಿಗಳು ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿವೆ. ಒಂದು ರೀತಿಯಲ್ಲಿ, ಏರೋ ಇಂಡಿಯಾದ ಧ್ಯೇಯವಾಕ್ಯವು 'ದಿ ರನ್‌ವೇ ಟು ಎ ಬಿಲಿಯನ್ ಆಪರ್ಚುನಿಟೀಸ್' ನೆಲದಿಂದ ಆಗಸದವರೆಗೆ ಎಲ್ಲೆಡೆ ಗೋಚರಿಸುತ್ತಿದೆ. 'ಸ್ವಾವಲಂಬಿ ಭಾರತ'ದ ಈ ಸಾಮರ್ಥ್ಯವು ಹೀಗೆ ಬೆಳೆಯಲಿ ಎಂದು ನಾನು ಬಯಸುತ್ತೇನೆ.

ಸ್ನೇಹಿತರೆ,

ಏರೋ ಇಂಡಿಯಾ ಜತೆಗೆ 'ರಕ್ಷಣಾ ಮಂತ್ರಿಗಳ ಸಮಾವೇಶ' ಮತ್ತು 'ಸಿಇಒಗಳ ದುಂಡು ಮೇಜಿನ ಸಭೆ'ಯನ್ನು ಕೂಡ ಇಲ್ಲಿ ಆಯೋಜಿಸಲಾಗಿದೆ. ವಿಶ್ವದ ವಿವಿಧ ದೇಶಗಳ ಸಿಇಒಗಳ ಸಕ್ರಿಯ ಭಾಗವಹಿಸುವಿಕೆ ಏರೋ ಇಂಡಿಯಾದ ಜಾಗತಿಕ ಸಾಮರ್ಥ್ಯವನ್ನು ಹೆಚ್ಚಿಸಲು ನಿಜಕ್ಕೂ ಸಹಾಯ ಮಾಡುತ್ತದೆ. ಸ್ನೇಹಪರ ರಾಷ್ಟ್ರಗಳೊಂದಿಗೆ ಭಾರತದ ವಿಶ್ವಾಸಾರ್ಹ ಪಾಲುದಾರಿಕೆಯನ್ನು ಮುಂದಕ್ಕೆ ಕೊಂಡೊಯ್ಯುವ ಮಾಧ್ಯಮವೂ ಇದಾಗಲಿದೆ. ಈ ಎಲ್ಲಾ ಉಪಕ್ರಮಗಳಿಗಾಗಿ ನಾನು ರಕ್ಷಣಾ ಸಚಿವಾಲಯ ಮತ್ತು ಉದ್ಯಮದ ಸಹೋದ್ಯೋಗಿಗಳನ್ನು ಮನಪೂರ್ವಕ ಅಭಿನಂದಿಸುತ್ತೇನೆ.

ಆತ್ಮೀಯ ಸ್ನೇಹಿತರೆ,

ಇನ್ನೊಂದು ಕಾರಣಕ್ಕಾಗಿ ಏರೋ ಇಂಡಿಯಾ ಪ್ರಾಮುಖ್ಯತೆಯು ಬಹು ನಿರ್ಣಾಯಕವಾಗಿದೆ. ತಂತ್ರಜ್ಞಾನ ರಂಗದಲ್ಲಿ ಪರಿಣತಿ ಮತ್ತು ಪ್ರಸಿದ್ಧ ಹೊಂದಿರುವ ಕರ್ನಾಟಕದಲ್ಲಿ ಇದು ನಡೆಯುತ್ತಿದೆ. ಇದು ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಇದು ಕರ್ನಾಟಕದ ಯುವಕರಿಗೆ ಹೊಸ ಸಾಧ್ಯತೆಗಳನ್ನು ತೆರೆದಿಡಲಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮ ಪರಿಣತಿಯನ್ನು ರಕ್ಷಣಾ ಕ್ಷೇತ್ರದಲ್ಲಿ ದೇಶದ ಶಕ್ತಿಯನ್ನಾಗಿ ಮಾಡುವಂತೆ ನಾನು ಕರ್ನಾಟಕದ ಯುವ ಸಮುದಾಯದಲ್ಲಿ ಮನವಿ ಮಾಡುತ್ತೇನೆ. ಈ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡರೆ ರಕ್ಷಣಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳ ದಾರಿ ಮತ್ತಷ್ಟು ತೆರೆದುಕೊಳ್ಳಲಿದೆ.

|

ಸ್ನೇಹಿತರೆ,

ಒಂದು ದೇಶವು ಹೊಸ ಆಲೋಚನೆ ಮತ್ತು ಹೊಸ ಕಾರ್ಯವಿಧಾನದೊಂದಿಗೆ ಮುನ್ನಡೆಯುವಾಗ, ಅದರ ವ್ಯವಸ್ಥೆಗಳು ಸಹ ಅದಕ್ಕೆ ತಕ್ಕಂತೆ ಬದಲಾಗಲು ಪ್ರಾರಂಭಿಸುತ್ತವೆ. ಏರೋ ಇಂಡಿಯಾದ ಈ ವೈಮಾನಿಕ ಪ್ರದರ್ಶನವು ಇಂದಿನ ನವ ಭಾರತದ ಹೊಸ ಕಾರ್ಯವಿಧಾನವನ್ನು ಪ್ರತಿಬಿಂಬಿಸುತ್ತಿದೆ. ಇದು ಕೇವಲ ಪ್ರದರ್ಶನ ಅಥವಾ ಕೇವಲ 'ಭಾರತಕ್ಕೆ ಮಾರಾಟ'ದ ಗವಾಕ್ಷಿ ಎಂದು ಪರಿಗಣಿಸಲ್ಪಟ್ಟ ಸಮಯವಿತ್ತು. ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಜನರ ಈ ಗ್ರಹಿಕೆಯೂ ಬದಲಾಗಿದೆ. ಇಂದು ಏರೋ ಇಂಡಿಯಾ ಕೇವಲ ಪ್ರದರ್ಶನವಲ್ಲ; ಇದು ಭಾರತದ ಶಕ್ತಿಯೂ ಹೌದು. ಇಂದು ಇದು ಭಾರತೀಯ ರಕ್ಷಣಾ ಉದ್ಯಮದ ವ್ಯಾಪ್ತಿಯ ಮೇಲೆ ಮಾತ್ರವಲ್ಲದೆ, ಆತ್ಮವಿಶ್ವಾಸದ ಮೇಲೂ ಗಮನ ಹರಿಸುತ್ತಿದೆ. ಏಕೆಂದರೆ ಇಂದು ಭಾರತ ಕೇವಲ ವಿಶ್ವದ ರಕ್ಷಣಾ ಕಂಪನಿಗಳ ಮಾರುಕಟ್ಟೆಯಾಗಿಲ್ಲ, ಭಾರತ ಇಂದು ಸಂಭಾವ್ಯ ರಕ್ಷಣಾ ಪಾಲುದಾರ ರಾಷ್ಟ್ರವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚು ಮುಂದಿರುವ ದೇಶಗಳೊಂದಿಗೂ ನಮ್ಮ ಈ ಪಾಲುದಾರಿಕೆ ಮತ್ತು ಸಹಭಾಗಿತ್ವ ಇದೆ. ತಮ್ಮ ರಕ್ಷಣಾ ಅಗತ್ಯಗಳಿಗಾಗಿ ವಿಶ್ವಾಸಾರ್ಹ ಪಾಲುದಾರರನ್ನು ಹುಡುಕುತ್ತಿರುವ ದೇಶಗಳಿಗೆ ಭಾರತವು ಪ್ರಮುಖ ಪಾಲುದಾರನಾಗಿ ಹೊರಹೊಮ್ಮುತ್ತಿದೆ. ನಮ್ಮ ತಂತ್ರಜ್ಞಾನವು ಈ ದೇಶಗಳಿಗೆ ವೆಚ್ಚದಾಯಕ ಮತ್ತು ವಿಶ್ವಾಸಾರ್ಹವಾಗಿದೆ. ನೀವು ಭಾರತದಲ್ಲಿ 'ಅತ್ಯುತ್ತಮ ನಾವೀನ್ಯತೆ'ಯನ್ನು ಕಾಣುತ್ತೀರಿ ಮತ್ತು 'ಪ್ರಾಮಾಣಿಕ ಉದ್ದೇಶ' ನಿಮ್ಮ ಮುಂದೆ ಗೋಚರಿಸುತ್ತಿದೆ.

ಸ್ನೇಹಿತರೆ,

ನಮ್ಮ ದೇಶದಲ್ಲಿ ಒಂದು ಮಾತಿದೆ: “ಪ್ರತ್ಯಕ್ಷಂ ಕಿಂ ಪ್ರಮಾಣಂ”. ಅಂದರೆ: ಪ್ರತ್ಯಕ್ಷಿಸಿಯಾದರೂ ಪ್ರಮಾಣಿಸಿ ನೋಡು ಅಥವಾ ಸ್ವಯಂ-ಸ್ಪಷ್ಟವಾಗಿರುವ ವಿಷಯಗಳಿಗೆ ಯಾವುದೇ ಪುರಾವೆ ಅಗತ್ಯವಿಲ್ಲ. ಇಂದು, ನಮ್ಮ ಯಶಸ್ಸುಗಳು ಭಾರತದ ತಾಕತ್ತು ಮತ್ತು ಶಕ್ತಿ ಸಾಮರ್ಥ್ಯಗಳಿಗೆ ಪುರಾವೆಗಳಾಗಿವೆ. ಇಂದು ಆಕಾಶದಲ್ಲಿ ಘರ್ಜಿಸುತ್ತಿರುವ ತೇಜಸ್ ಯುದ್ಧ ವಿಮಾನಗಳೇ ‘ಮೇಕ್ ಇನ್ ಇಂಡಿಯಾ’ದ ಶಕ್ತಿಗೆ ಸಾಕ್ಷಿ. ಇಂದು ಹಿಂದೂ ಮಹಾಸಾಗರದಲ್ಲಿರುವ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ 'ಮೇಕ್ ಇನ್ ಇಂಡಿಯಾ' ವಿಸ್ತರಣೆಗೆ ಸಾಕ್ಷಿಯಾಗಿದೆ. ಅದು ಗುಜರಾತ್‌ನ ವಡೋದರಾದಲ್ಲಿರುವ ಸಿ-295 ವಿಮಾನ ತಯಾರಿಕಾ ಘಟಕವಾಗಿರಲಿ ಅಥವಾ ತುಮಕೂರಿನ ಎಚ್ಎಎಲ್ ನ ಹೆಲಿಕಾಪ್ಟರ್ ಘಟಕವಾಗಿರಲಿ, ಇದು ‘ಆತ್ಮನಿರ್ಭರ್ ಭಾರತ್’ನ ಬೆಳವಣಿಗೆಯ ನೈಜ ಸಾಮರ್ಥ್ಯವಾಗಿದೆ, ಇದರಲ್ಲಿ ಭಾರತ ಮತ್ತು ಜಗತ್ತಿಗೆ ಹೊಸ ಆಯ್ಕೆಗಳಿಗೆ ಉತ್ತಮ ಅವಕಾಶಗಳಿವೆ.

ಸ್ನೇಹಿತರೆ,
21ನೇ ಶತಮಾನದ ನವ ಭಾರತವು ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ ಅಥವಾ ಯಾವುದೇ ಪ್ರಯತ್ನದ ಕೊರತೆ ಹೊಂದಿಲ್ಲ, ನಾವು ಎಲ್ಲಕ್ಕೂ ಸಜ್ಜಾಗಿದ್ದೇವೆ. ನಾವು ಸುಧಾರಣೆಗಳ ಹಾದಿಯಲ್ಲಿ ಪ್ರತಿ  ಕ್ಷೇತ್ರದಲ್ಲೂ ಕ್ರಾಂತಿ ತರುತ್ತಿದ್ದೇವೆ. ಹಲವು ದಶಕಗಳಿಂದ ಅತಿದೊಡ್ಡ ರಕ್ಷಣಾ ಆಮದುದಾರನಾಗಿದ್ದ ಭಾರತ ದೇಶವು ಈಗ ವಿಶ್ವದ 75 ದೇಶಗಳಿಗೆ ರಕ್ಷಣಾ ಸಾಧನಗಳನ್ನು ರಫ್ತು ಮಾಡುತ್ತಿದೆ. ಕಳೆದ 5 ವರ್ಷಗಳಲ್ಲಿ ದೇಶದ ರಕ್ಷಣಾ ರಫ್ತು 6 ಪಟ್ಟು ಹೆಚ್ಚಾಗಿದೆ. 2021-22ರಲ್ಲಿ ನಾವು 1.5 ಶತಕೋಟಿ ಡಾಲರ್‌ಗೂ ಹೆಚ್ಚು ಮೌಲ್ಯದ ರಕ್ಷಣಾ ಸಾಧನ ಸಲಕರಣೆಗಳನ್ನು ರಫ್ತು ಮಾಡಿದ್ದೇವೆ.

ಸ್ನೇಹಿತರೆ,

ರಕ್ಷಣೆಯು ತಂತ್ರಜ್ಞಾನ, ಮಾರುಕಟ್ಟೆ ಮತ್ತು ವ್ಯವಹಾರವನ್ನು ಅತ್ಯಂತ ಸಂಕೀರ್ಣವೆಂದು ಪರಿಗಣಿಸುವ ಕ್ಷೇತ್ರವಾಗಿದೆ ಎಂಬುದು ನಿಮಗೆ ತಿಳಿದಿದೆ. ಇದರ ಹೊರತಾಗಿಯೂ, ಕಳೆದ 8-9 ವರ್ಷಗಳಲ್ಲಿ ಭಾರತ ತನ್ನ ರಕ್ಷಣಾ ಕ್ಷೇತ್ರವನ್ನು ಮಾರ್ಪಡಿಸಿದೆ. ಆದಾಗ್ಯೂ, ನಾವು ಇದನ್ನು ಕೇವಲ ಪ್ರಾರಂಭವೆಂದು ಪರಿಗಣಿಸುತ್ತೇವೆ. 2024-25ರ ವೇಳೆಗೆ ಈ ರಫ್ತು ಪ್ರಮಾಣವನ್ನು 1.5 ಶತಕೋಟಿಯಿಂದ 5 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಈ ಅವಧಿಯಲ್ಲಿ ಮಾಡಿದ ಪ್ರಯತ್ನಗಳು ಭಾರತಕ್ಕೆ ಉಡಾವಣಾ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತವೆ. ವಿಶ್ವದ ಅತಿದೊಡ್ಡ ರಕ್ಷಣಾ ಉತ್ಪಾದನಾ ರಾಷ್ಟ್ರಗಳಿಗೆ ಸೇರಲು ಭಾರತವು ಈಗ ವೇಗವಾಗಿ ಚಲಿಸಲಿದೆ. ಈ ನಿಟ್ಟಿನಲ್ಲಿ ನಮ್ಮ ಖಾಸಗಿ ವಲಯ ಮತ್ತು ಹೂಡಿಕೆದಾರರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಇಂದು ನಾನು ಭಾರತದ ಖಾಸಗಿ ವಲಯವನ್ನು ಭಾರತದ ರಕ್ಷಣಾ ಕ್ಷೇತ್ರದಲ್ಲಿ ಸಾಧ್ಯವಾದಷ್ಟು ಹೂಡಿಕೆ ಮಾಡುವಂತೆ ಕರೆ ನೀಡುತ್ತೇನೆ. ಭಾರತದ ರಕ್ಷಣಾ ಕ್ಷೇತ್ರದಲ್ಲಿನ ನಿಮ್ಮ ಪ್ರತಿ ಹೂಡಿಕೆಯು ಭಾರತವನ್ನು ಹೊರತುಪಡಿಸಿ ವಿಶ್ವದ ಅನೇಕ ದೇಶಗಳಲ್ಲಿ ನಿಮ್ಮ ವ್ಯವಹಾರಕ್ಕೆ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತದೆ. ನಿಮ್ಮ ಮುಂದೆ ಅಪಾರ ಹೊಸ ಸಾಧ್ಯತೆಗಳು ಮತ್ತು ವಿಫುಲ ಅವಕಾಶಗಳಿವೆ. ಭಾರತದ ಖಾಸಗಿ ವಲಯವು ಈ ಅವಕಾಶವನ್ನು ಎಂದಿಗೂ ಬಿಡಬಾರದು ಎಂದು ನಾನು ಕರೆ ನೀಡುತ್ತೇನೆ.

ಸ್ನೇಹಿತರೆ,

‘ಅಮೃತ ಕಾಲ’ದ ಭಾರತ ಯುದ್ಧ ವಿಮಾನದ ಪೈಲಟ್‌ನಂತೆ ಮುನ್ನಡೆಯುತ್ತಿದೆ. ಎತ್ತರವನ್ನು ಮಾಪನ ಮಾಡಲು ಹೆದರದ ದೇಶ, ಅತಿ ಎತ್ತರಕ್ಕೆ ಹಾರಲು ಉತ್ಸುಕರಾಗಿರುವ ದೇಶ. ಇಂದಿನ ಭಾರತವು ಆಗಸದಲ್ಲಿ ಹಾರುವ ಯುದ್ಧ ವಿಮಾನದ ಪೈಲಟ್‌ನಂತೆ ವೇಗವಾಗಿ ಯೋಚಿಸುತ್ತಿದೆ, ಬಹಳ ಮುಂದೆ ಯೋಚಿಸುತ್ತಿದೆ ಮತ್ತು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಮುಖ್ಯವಾಗಿ, ಭಾರತದ ವೇಗವು ಎಷ್ಟೇ ರಭಸವಾಗಿದ್ದರೂ, ಅದು ಯಾವಾಗಲೂ ತನ್ನ ಬೇರುಗಳೊಂದಿಗೆ ನಿರಂತರ ಸಂಪರ್ಕ ಹೊಂದಿದೆ, ಅದು ಯಾವಾಗಲೂ ನೆಲದ ವಾಸ್ತವ ಪರಿಸ್ಥಿತಿಯ ಬಗ್ಗೆ ತಿಳಿದಿರುತ್ತದೆ. ನಮ್ಮ ಪೈಲಟ್‌ಗಳೂ ಅದನ್ನೇ ಮಾಡುತ್ತಾರೆ.

ಏರೋ ಇಂಡಿಯಾದ ಕಿವಿಗಡಚಿಕ್ಕುವ ಘರ್ಜನೆಯು ಭಾರತದ ‘ಸುಧಾರಣೆ, ಕಾರ್ಯಕ್ಷಮತೆ ಮತ್ತು ರೂಪಾಂತರ’ದ ಪ್ರತಿಧ್ವನಿಯನ್ನು ಹೊಂದಿದೆ. ಇಂದು, ಭಾರತ ಹೊಂದಿರುವಂತಹ ನಿರ್ಣಾಯಕ ಸರ್ಕಾರ, ಸುಸ್ಥಿರ ನೀತಿಗಳು, ನೀತಿಗಳಲ್ಲಿನ ಸ್ಪಷ್ಟ ಉದ್ದೇಶ ಅಭೂತಪೂರ್ವವಾಗಿದೆ. ಪ್ರತಿಯೊಬ್ಬ ಹೂಡಿಕೆದಾರರು ಭಾರತದಲ್ಲಿನ ಈ ಪೂರಕ ವಾತಾವರಣದ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು. ಭಾರತದಲ್ಲಿ ಸುಲಭವಾಗಿ ಉದ್ಯಮ ವ್ಯವಹಾರ ನಡೆಸುವ  ದಿಕ್ಕಿನ ಸುಧಾರಣೆಗಳು ಇಂದು ಜಾಗತಿಕ ಮಟ್ಟದಲ್ಲಿ ವ್ಯಾಪಕ ಚರ್ಚೆ ಆಗುತ್ತಿರುವುದನ್ನು ನೀವು ನೋಡುತ್ತಿದ್ದೀರಿ. ಜಾಗತಿಕ ಹೂಡಿಕೆ ಮತ್ತು ಭಾರತೀಯ ಆವಿಷ್ಕಾರಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸಲು ನಾವು ಹಲವಾರು ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಭಾರತದಲ್ಲಿ ರಕ್ಷಣಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ ಅನುಮೋದಿಸುವ ನಿಯಮಗಳನ್ನು ಸರಳೀಕರಿಸಲಾಗಿದೆ. ಈಗ ಹಲವು ಕ್ಷೇತ್ರಗಳಲ್ಲಿ ಎಫ್‌ಡಿಐಗೆ ಸ್ವಯಂಚಾಲಿತ ಮಾರ್ಗದ ಮೂಲಕ ಅನುಮೋದನೆ ನೀಡಲಾಗಿದೆ. ಕೈಗಾರಿಕೆಗಳಿಗೆ ಪರವಾನಗಿ ನೀಡುವ ಪ್ರಕ್ರಿಯೆಯನ್ನು ನಾವು ಸರಳಗೊಳಿಸಿದ್ದೇವೆ, ಅವುಗಳ ಸಿಂಧುತ್ವವನ್ನು ಹೆಚ್ಚಿಸಿದ್ದೇವೆ. ಇದರಿಂದಾಗಿ ಅವರು ಮತ್ತೆ ಮತ್ತೆ ಅದೇ ಪ್ರಕ್ರಿಯೆಗೆ ಹೋಗಬೇಕಾಗಿಲ್ಲ. 10-12 ದಿನಗಳ ಹಿಂದೆ ಪರಿಚಯಿಸಲಾದ ಭಾರತದ ಬಜೆಟ್‌ನಲ್ಲಿ ಉತ್ಪಾದನೆ ಅಥವಾ ತಯಾರಿಕಾ ಕಂಪನಿಗಳಿಗೆ ಲಭ್ಯವಿರುವ ತೆರಿಗೆ ಪ್ರಯೋಜನಗಳನ್ನು ಸಹ ಹೆಚ್ಚಿಸಲಾಗಿದೆ. ರಕ್ಷಣಾ ವಲಯಕ್ಕೆ ಸಂಬಂಧಿಸಿದ ಕಂಪನಿಗಳು ಸಹ ಈ ಉಪಕ್ರಮದಿಂದ ಅನೇಕ ಪ್ರಯೋಜನ ಪಡೆಯಲಿವೆ.

|

ಸ್ನೇಹಿತರೆ,

ಪ್ರಕೃತಿ ಅಥವಾ ನೈಸರ್ಗಿಕ ತತ್ವ(ನಿಯಮಗಳ)ಗಳ ಪ್ರಕಾರ, ಬೇಡಿಕೆ, ಸಾಮರ್ಥ್ಯ ಮತ್ತು ಅನುಭವ ಇರುವಲ್ಲಿ ದೇಶದಲ್ಲಿ ಉದ್ಯಮವು ವಿಫುಲವಾಗಿ ಬೆಳೆಯುತ್ತದೆ. ಭಾರತದಲ್ಲಿ ರಕ್ಷಣಾ ವಲಯವನ್ನು ಬಲಪಡಿಸುವ ಪ್ರಕ್ರಿಯೆಯು ಇನ್ನೂ ಹೆಚ್ಚಿನ ವೇಗದಲ್ಲಿ ಆವೇಗ ಪಡೆಯುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಒಟ್ಟಾಗಿ ನಾವು ಈ ದಿಕ್ಕಿನಲ್ಲಿ ಮುನ್ನಡೆಯಬೇಕು. ಭವಿಷ್ಯದಲ್ಲಿ ಏರೋ ಇಂಡಿಯಾದ ಇನ್ನಷ್ಟು ಭವ್ಯ ಕಾರ್ಯಕ್ರಮಗಳಿಗೆ ನಾವು ಸಾಕ್ಷಿಯಾಗಲಿದ್ದೇವೆ ಎಂದು ನನಗೆ ಖಾತ್ರಿಯಿದೆ. ಇದರೊಂದಿಗೆ ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಮತ್ತು ನಿಮಗೆ ಶುಭ ಹಾರೈಸುತ್ತೇನೆ! ಭಾರತ್ ಮಾತಾ ಕಿ - ಜೈ!

  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम 🚩 वन्दे मातरम् जय भाजपा विजय भाजपा
  • दिग्विजय सिंह राना September 20, 2024

    हर हर महादेव
  • JBL SRIVASTAVA May 27, 2024

    मोदी जी 400 पार
  • Vaishali Tangsale February 12, 2024

    🙏🏻🙏🏻❤️❤️
  • ज्योती चंद्रकांत मारकडे February 11, 2024

    जय हो
  • Binod Mittal March 29, 2023

    What a SMARTY look!
  • Talib talib TalibTalibt04268829@gmail.com March 11, 2023

    PM modi ji Ham Bihar ke sarkar Hain aapko jita rahe hain Abu Talib Naam hai firaun mere sath hai karo na mere sath hai jindagi mere sath hai aapse mang raha hai pahunche karo rupaye de denge to aapka kya chale jaega aap nahin to call karte ho nahin to fir message bhejte ho aakhir kab tak yah mahabharat chalta rahega kab tak main fight bankar jindagi gujarta rahunga sabko maloom pad Gaya
  • Vidhansabha Yamuna Nagar February 25, 2023

    जय हिंद
  • Vidhansabha Yamuna Nagar February 25, 2023

    नमो
  • RABI BISWAS February 23, 2023

    vandematram
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
We've to achieve greater goals of strong India, says PM Narendra Modi

Media Coverage

We've to achieve greater goals of strong India, says PM Narendra Modi
NM on the go

Nm on the go

Always be the first to hear from the PM. Get the App Now!
...
Prime Minister condoles the passing of His Highness Prince Karim Aga Khan IV
February 05, 2025

The Prime Minister, Shri Narendra Modi today condoled the passing of His Highness Prince Karim Aga Khan IV. PM lauded him as a visionary, who dedicated his life to service and spirituality. He hailed his contributions in areas like health, education, rural development and women empowerment.

In a post on X, he wrote:

“Deeply saddened by the passing of His Highness Prince Karim Aga Khan IV. He was a visionary, who dedicated his life to service and spirituality. His contributions in areas like health, education, rural development and women empowerment will continue to inspire several people. I will always cherish my interactions with him. My heartfelt condolences to his family and the millions of followers and admirers across the world.”