ನಮಸ್ಕಾರ ಸ್ವಾಮಿನಾರಾಯಣ!
ನಮಸ್ಕಾರ ಸ್ವಾಮಿನಾರಾಯಣ!
ಪರಮಪೂಜ್ಯ ಮಹಾಂತ ಸ್ವಾಮೀಜಿ, ಪೂಜ್ಯರಾದ ಸಾಧುಸಂತರೇ, ರಾಜ್ಯಪಾಲರೇ, ಮುಖ್ಯಮಂತ್ರಿಗಳೇ ಹಾಗೂ ಉಪಸ್ಥಿತರಿರುವ ಸತ್ಸಂಗಿ ಕುಟುಂಬದ ಎಲ್ಲ ಸದಸ್ಯರೇ, ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿರುವುದು ಮತ್ತು ಈ ಸತ್ಸಂಗಿಯ ಭಾಗ್ಯ ಸಿಕ್ಕಿರುವುದು ನನ್ನ ಸೌಭಾಗ್ಯ. ಈ ಕಾರ್ಯಕ್ರಮವು ದೊಡ್ಡ ಪ್ರಮಾಣದಲ್ಲಿ ಮತ್ತು ಒಂದು ತಿಂಗಳವರೆಗೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಸಂಖ್ಯೆಗಳ ವಿಷಯದಲ್ಲಿ ಮಾತ್ರ ದೊಡ್ಡದಾಗಿದೆ ಎಂದು ನಾನು ನಂಬುವುದಿಲ್ಲ, ಇದು ಸಮಯದ ದೃಷ್ಟಿಯಿಂದ ಸಹ ವಿಸ್ತಾರವಾಗಿದೆ. ನಾನು ಇಲ್ಲಿ ಕಳೆದ ಸಮಯವನ್ನು ಇಲ್ಲಿ ದೈವಿಕತೆಯ ಭಾವನೆ ಎಂದು ನಾನು ಭಾವಿಸುತ್ತೇನೆ. ಇಲ್ಲಿ ಚಿಂತನೆಗಳ ಭವ್ಯತೆ ಇದೆ. ಇಲ್ಲಿ ನಮ್ಮ ಪರಂಪರೆ ಏನು? ನಮ್ಮ ಪರಂಪರೆ ಎಂತಹದು? ನಮ್ಮ ನಂಬಿಕೆ ಏನು ? ನಮ್ಮ ಆಧ್ಯಾತ್ಮಿಕತೆ ಏನು? ನಮ್ಮ ಸಂಪ್ರದಾಯ ಏನು ?ನಮ್ಮ ಸಂಸ್ಕೃತಿ ಏನು? ನಮ್ಮ ಸ್ವಭಾವ ಏನು? ಎಂಬ ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಾಟ ಈ ಕಾರ್ಯಕ್ರಮದಲ್ಲಿ ಸೇರಿಸಲಾಗಿದೆ.
ಭಾರತದ ಪ್ರತಿಯೊಂದರ ಬಣ್ಣವೂ ಇಲ್ಲಿ ಗೋಚರಿಸುತ್ತದೆ. ಈ ಸಂದರ್ಭದಲ್ಲಿ, ಈ ಕಾರ್ಯಕ್ರಮಕ್ಕಾಗಿ ನಾನು ಎಲ್ಲಾ ಗೌರವಾನ್ವಿತ ಸಂತರ ಪಾದಗಳಿಗೆ ನಮಸ್ಕರಿಸುತ್ತೇನೆ, ಈ ಕಾರ್ಯಕ್ರಮಕ್ಕಾಗಿ ಸಂತರ ಸಾಮರ್ಥ್ಯ ಮತ್ತು ಆ ದೃಷ್ಟಿಯನ್ನು ಸಾಕಾರಗೊಳಿಸಲು ಅವರು ಮಾಡಿದ ಪ್ರಯತ್ನಕ್ಕಾಗಿ ನಾನು ಅವರನ್ನು ನನ್ನ ಹೃದಯಪೂರ್ವಕ ಅಭಿನಂದಿಸುತ್ತೇನೆ ಮತ್ತು ಗೌರವಾನ್ವಿತರ ಆಶೀರ್ವಾದವನ್ನು ಕೋರುತ್ತೇನೆ. ಮಹಾಂತ ಸ್ವಾಮಿಜೀ ಇಂತಹ ಭವ್ಯವಾದ ಕಾರ್ಯಕ್ರಮ ರಾಷ್ಟ್ರ ಮತ್ತು ಜಗತ್ತನ್ನು ಆಕರ್ಷಿಸುತ್ತದೆ. ಅಷ್ಟೇ ಅಲ್ಲದೇ ಪ್ರಭಾವವನ್ನೂ ಬೀರುತ್ತದೆ. ಇದು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ.
ಜನವರಿ 15 ರವರೆಗೆ ಪ್ರಪಂಚದಾದ್ಯಂತದ ಲಕ್ಷಾಂತರ ಜನರು ಗೌರವಾನ್ವಿತ ಪ್ರಮುಖ ಸ್ವಾಮೀಜಿಯವರನ್ನ ನನ್ನಂತೆ ಪಿತೃಪ್ರಧಾನರಿಗೆ ನಮನ ಸಲ್ಲಿಸಲು ಇಲ್ಲಿಗೆ ಬರಲಿದ್ದಾರೆ. ವಿಶ್ವಸಂಸ್ಥೆಯಲ್ಲೂ ಪ್ರಮುಖ್ ಸ್ವಾಮೀಜಿಯವರ ಶತಮಾನೋತ್ಸವವನ್ನು ಆಚರಿಸಲಾಯಿತು ಮತ್ತು ಅವರ ಚಿಂತನೆಗಳು ಎಷ್ಟು ಶಾಶ್ವತವಾಗಿವೆ, ಅವು ಎಷ್ಟು ಸಾರ್ವತ್ರಿಕವಾಗಿವೆ. ನಮ್ಮ ಶ್ರೇಷ್ಠ ಸಂತರ ಪರಂಪರೆಯಿಂದ ಪ್ರೇರಿತಗೊಂಡಿವೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ನಿಮ್ಮಲ್ಲಿ ಅನೇಕರಿಗೆ ತಿಳಿದಿರಬಹುದು. ಸ್ಥಾಪಿತ ವೇದಗಳಿಂದ ವಿವೇಕಾನಂದರಿಂದಲೂ ಪ್ರಮುಖ ಸ್ವಾಮಿಗಳಂತಹ ಮಹಾನ್ ಸಂತರಿಂದ ಮುನ್ನಡೆಸಲ್ಪಟ್ಟ ವಸುಧೈವ ಕುಟುಂಬಕಂನ ಚೈತನ್ಯವು ಇಂದು ಶತಮಾನೋತ್ಸವದ ಆಚರಣೆಯಲ್ಲಿಯೂ ಕಂಡುಬರುತ್ತದೆ. ನಿರ್ಮಾಣವಾಗಿರುವ ಈ ನಗರದಲ್ಲಿ ಸಾವಿರಾರು ವರ್ಷಗಳ ನಮ್ಮ ಶ್ರೇಷ್ಠ ಸಂತ ಪರಂಪರೆ, ಶ್ರೀಮಂತ ಸಂತ ಪರಂಪರೆಯನ್ನು ಒಟ್ಟಾಗಿ ದರ್ಶನ ಮಾಡಲಾಗುತ್ತಿದೆ. ನಮ್ಮ ಸಂತ ಪರಂಪರೆ ಕೇವಲ ಯಾವುದೇ ಧರ್ಮ, ಪಂಥ, ನಡತೆ, ಚಿಂತನೆಗಳನ್ನು ಹರಡುವುದಕ್ಕೆ ಸೀಮಿತವಾಗಿಲ್ಲ. ಇದು ನಮ್ಮ ಸಂತರು ಇಡೀ ಜಗತ್ತನ್ನು ಸಂಪರ್ಕಿಸಲು ವಸುಧೈವ ಕುಟುಂಬಕದ ಸನಾತನ ಚೈತನ್ಯವನ್ನು ಸಶಕ್ತಗೊಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ನಾನು ಅದೃಷ್ಟಶಾಲಿ.ಈಗ ಬ್ರಹ್ಮವಿಹಾರಿ ಸ್ವಾಮಿ ಜೀ ಅವರು ನನಗೆ ಕೆಲವು ಆಂತರಿಕ ವಿಷಯಗಳನ್ನು ತಿಳಿಸಿದ್ದಾರೆ.ಸಲಹೆ ನೀಡುತ್ತಿದ್ದಾರೆ. ಬಾಲ್ಯದಿಂದಲೂ ನನಗೆ ಅಂತಹ ಕೆಲವು ಕ್ಷೇತ್ರಗಳಲ್ಲಿ ಆಕರ್ಷಣೆ ಇತ್ತು, ಆದ್ದರಿಂದ ನಾನು ದೂರದಿಂದಲೂ ಪ್ರಮುಖ ಸ್ವಾಮೀಜಿಯವರನ್ನು ಭೇಟಿ ಮಾಡುತ್ತಿದ್ದೆ. ನಾವು ಅವರನ್ನು ತುಂಬಾ ಹತ್ತಿರಕ್ಕೆ ತಲುಪುತ್ತೇವೆ ಎಂಬ ಕಲ್ಪನೆಯೂ ನನಗೆ ಇರಲಿಲ್ಲ. ಆಗಾಗ ದೂರದಿಂದಲೂ ದರ್ಶನ ಪಡೆಯುವ ಅವಕಾಶ ಸಿಗುತ್ತಿತ್ತು.ಆಗ ನನ್ನ ವಯಸ್ಸು ಕೂಡ ತುಂಬಾ ಚಿಕ್ಕದಾಗಿತ್ತು, ಆದರೆ ಕುತೂಹಲ ಹೆಚ್ಚುತ್ತಲೇ ಇತ್ತು. ಬಹಳ ವರ್ಷಗಳ ನಂತರ, ಬಹುಶಃ 1981 ರಲ್ಲಿ, ಮೊದಲ ಬಾರಿಗೆ ನಾನು ಅವರೊಂದಿಗೆ ಏಕಾಂಗಿಯಾಗಿ ಸತ್ಸಂಗ ಮಾಡುವ ಭಾಗ್ಯವನ್ನು ಪಡೆದುಕೊಂಡೆ . ನನಗೆ ಆಶ್ಚರ್ಯವಾಗುವಂತಹ ಸಂಗತಿಯೆಂದರೆ ಅವರು ನನ್ನ ಬಗ್ಗೆ ಕೆಲವು ಮಾಹಿತಿಯನ್ನು ಸಂಗ್ರಹಿಸಿದ್ದು. ಅವರು ನನ್ನೊಂದಿಗೆ ಇಡೀ ಸಮಯವನ್ನು ಧರ್ಮ ಅಥವಾ ದೇವರ ಬಗ್ಗೆ ಮಾತ್ರ ಚರ್ಚಿಸಲಿಲ್ಲ. ಆಧ್ಯಾತ್ಮಿಕತೆ, ಏನೂ ಇಲ್ಲ, ಸಂಪೂರ್ಣವಾಗಿ ಸೇವೆ, ಮಾನವ ಸೇವೆ, ಈ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು. ಅದು ನನ್ನ ಮೊದಲ ಭೇಟಿಯಾಗಿತ್ತು ಮತ್ತು ಪ್ರತಿಯೊಂದು ಪದವೂ ನನ್ನ ಹೃದಯದಲ್ಲಿ ಅಚ್ಚೊತ್ತುತ್ತಿತ್ತು. ಸೇವೆಯು ಜೀವನದ ಅತ್ಯುನ್ನತ ಗುರಿಯಾಗಬೇಕು ಎಂಬ ಒಂದೇ ಒಂದು ಸಂದೇಶವನ್ನು ಅವರು ಹೊಂದಿದ್ದರು. ಕೊನೆಯ ಉಸಿರು ಇರುವವರೆಗೂ ಸೇವೆಯಲ್ಲಿ ತೊಡಗಬೇಕು.
ನಮ್ಮ ಧರ್ಮಗ್ರಂಥಗಳಲ್ಲಿ ಮನುಷ್ಯ ಸೇವೆಯೇ ನಾರಾಯಣನ ಸೇವೆ ಎಂದು ಹೇಳಲಾಗಿದೆ. ಜೀವಿಯಲ್ಲಿ ಮಾತ್ರ ಶಿವನಿದ್ದಾನೆ.ವಿಶಾಲವಾದ ಆಧ್ಯಾತ್ಮಿಕ ಚರ್ಚೆಯನ್ನು ಸರಳ ಪದಗಳಲ್ಲಿ ಹೇಳಲಾಗಿದೆ.ಅವರು ವ್ಯಕ್ತಿಗೆ ತಕ್ಕಂತೆ ಆಧ್ಯಾತ್ಮಿಕ ಸೇವೆ ಸಲ್ಲಿಸುತ್ತಿದ್ದರು. ಒಬ್ಬ ವ್ಯಕ್ತಿ ಎಷ್ಟು ಆಧ್ಯಾತ್ಮವನ್ನು ಜೀರ್ಣಿಸಿಕೊಳ್ಳಬಹುದು, ಎಷ್ಟು ಸ್ವೀಕರಿಸಬಹುದು ಎಂಬುದರ ಮೇಲೆ ಅವರ ಪ್ರವಚನವಿರುತ್ತಿತ್ತು.ಮಾಜಿ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಂ ಜೀ, ಅವರಂತಹ ಮಹಾನ್ ವಿಜ್ಞಾನಿ ಸಹ ಇವರನ್ನು ಒಮ್ಮೊಮ್ಮೆ ಭೇಟಿಯಾಗಿ ಸಮಾಧಾನ ಹೊಂದುತ್ತಿದ್ದರು.
ಅವರ ವ್ಯಕ್ತಿತ್ವದ ವೈಶಾಲ್ಯ, ಅಗಲ, ಆಳ ಮತ್ತು ಆಧ್ಯಾತ್ಮಿಕ ಸಂತರಾಗಿದ್ದರೆಂಬುದ ನ್ನು ತಿಳಿಸುತ್ತದೆ. ಅವರು ನಿಜವಾದ ಅರ್ಥದಲ್ಲಿ ಸಮಾಜ ಸುಧಾರಕರಾಗಿದ್ದರು. ನಾವು ಅವರನ್ನು ನಮ್ಮದೇ ಆದ ರೀತಿಯಲ್ಲಿ ನೆನಪಿಸಿಕೊಂಡಾಗ ನನ್ನ ಮನಸ್ಸಿನಲ್ಲಿ ಯಾವಾಗಲೂ ಕಲಾಮ್ ಅವರ ಸೇವಾ ಭಾವನೆಯೇ ಬರುತ್ತದೆ.ಈಗ ನನ್ನಂತಹ ಸಾಮಾನ್ಯ ಸಮಾಜ ಸೇವಕನಿಗೆ ಸೇವೆಯ ಭಾಗ್ಯ ಸಿಕ್ಕಿದೆ.
ನಾವು ಅವರನ್ನು ನಮ್ಮದೇ ಆದ ರೀತಿಯಲ್ಲಿ ನೆನಪಿಸಿಕೊಂಡಾಗ ಆದರೆ ನಾನು ಯಾವಾಗಲೂ ನೋಡುವ ಒಂದು ಎಳೆಯು ಆ ಮಾಲೆಯಲ್ಲಿ ವಿಭಿನ್ನವಾಗಿರಬಹುದು ಎಂಬುದು ನನ್ನ ಮನಸ್ಸಿನಲ್ಲಿ ಯಾವಾಗಲೂ ಇದೆ. ನಾವು ವಿವಿಧ ರೀತಿಯ ಮಣಿಗಳನ್ನು ನೋಡುತ್ತಿರಬೇಕು, ನಾವು ಮುತ್ತುಗಳನ್ನು ನೋಡಬೇಕು, ಆದರೆ ಒಳಗಿನ ಎಳೆಯು ಮನುಷ್ಯ ಹೇಗಿರಬೇಕು, ಭವಿಷ್ಯ ಹೇಗಿರಬೇಕು, ವ್ಯವಸ್ಥೆಗಳಲ್ಲಿ ಏಕೆ ಬದಲಾವಣೆಯಾಗಬೇಕು ಎಂಬುದಕ್ಕೆ ಸಂಬಂಧಿಸಿದೆ. ಉನ್ನತ ಆದರ್ಶಗಳೊಂದಿಗೆ ಸಂಪರ್ಕ ಹೊಂದಿದೆ.ಆದರೆ ಆಧುನಿಕತೆಯ ಕನಸುಗಳು, ಆಧುನಿಕತೆಯ ಎಲ್ಲವನ್ನೂ ಒಪ್ಪಿಕೊಳ್ಳುವುದು, ಅದ್ಭುತ ಸಂಯೋಜನೆ, ಅದ್ಭುತ ಸಂಗಮ, ಅವರ ವಿಧಾನವೂ ಅತ್ಯಂತ ವಿಶಿಷ್ಟವಾಗಿತ್ತು, ಅವರು ಯಾವಾಗಲೂ ಜನರ ಒಳಗಿನ ಒಳ್ಳೆಯತನವನ್ನು ಪ್ರೋತ್ಸಾಹಿಸಿದರು. ಹೌದೆಂದು ಯಾವತ್ತೂ ಹೇಳಿಲ್ಲ ಅಣ್ಣ, ನೀನು ಹೀಗೆ ಮಾಡು, ದೇವರ ನಾಮಸ್ಮರಣೆ ಮಾಡು, ಒಳ್ಳೆಯದಾಗುವುದು, ಇಲ್ಲ, ನಿನ್ನಲ್ಲಿ ಕೊರತೆಗಳಾಗುವುದು, ತೊಂದರೆ ಆಗುವುದು,ಆದರೆ ನಿನ್ನಲ್ಲಿ ಈ ಒಳ್ಳೆತನವಿದೆ, ಅದರತ್ತ ಗಮನ ಹರಿಸಿ ಎನ್ನುತ್ತಿದ್ದರು. ಅವರು ಅದೇ ಶಕ್ತಿಗೆ ಬೆಂಬಲವೆನ್ನುವ ಗೊಬ್ಬರ ಮತ್ತು ನೀರನ್ನು ಬಳಸುತ್ತಿದ್ದರು. ನಿಮ್ಮೊಳಗಿನ ಒಳ್ಳೆಯತನವೇ ನಿಮ್ಮೊಳಗೆ ಬಂದು ಬೆಳೆಯುತ್ತಿರುವ ಕೆಡುಕುಗಳನ್ನು ನಿವಾರಿಸುತ್ತದೆ, ಅಂತಹ ಉನ್ನತ ಚಿಂತನೆಯನ್ನು ಮತ್ತು ಸರಳ ಪದಗಳಲ್ಲಿ ಅವರು ನಮಗೆ ಹೇಳುತ್ತಿದ್ದರು. ಮತ್ತು ಒಂದು ರೀತಿಯಲ್ಲಿ, ಅವರು ಈ ಮಾಧ್ಯಮವನ್ನು ಮಾನವನನ್ನು ಪರಿವರ್ತಿಸುವ ಮಾಧ್ಯಮವನ್ನಾಗಿ ಮಾಡಿದರು. ಅವರು ನಮ್ಮ ಸಾಮಾಜಿಕ ಜೀವನದಲ್ಲಿ ಹೆಚ್ಚು-ಕಡಿಮೆ ಎಂಬ ತಾರತಮ್ಯದ ಎಲ್ಲಾ ಹಳೆಯ ಅನಿಷ್ಟಗಳನ್ನು ತೆಗೆದುಹಾಕಿದರು.ಈ ಮೂಲಕ ಅವರ ವೈಯಕ್ತಿಕ ಸ್ಪರ್ಶ ಉಳಿದುಕೊಂಡಿತು. ಎಲ್ಲರಿಗೂ ಸಹಾಯ ಮಾಡುವ, ಎಲ್ಲರ ಬಗೆಗೂ ಚಿಂತಿಸುವ, ಸಾಮಾನ್ಯ ಸಮಯವಾಗಲಿ ಅಥವಾ ಸವಾಲಿನ ಸಮಯವಾಗಲಿ, ಪೂಜ್ಯ ಪ್ರಮುಖ ಸ್ವಾಮೀಜಿಗಳು ಯಾವಾಗಲೂ ಸಮಾಜದ ಕಲ್ಯಾಣಕ್ಕಾಗಿ ಎಲ್ಲರಿಗೂ ಸ್ಫೂರ್ತಿ ನೀಡುತ್ತಿದ್ದರು. ಮುಂದೆ, ಮುಂದೆ ಸಾಗುವ ಮೂಲಕ ಕೊಡುಗೆ ನೀಡಿದ್ದಾರೆ. ಮೊರ್ಬಿಯಲ್ಲಿ ಮೊದಲ ಬಾರಿಗೆ ಮಚ್ಚು ಅಣೆಕಟ್ಟಿಗೆ ತೊಂದರೆಯಾದಾಗ ನಾನು ಅಲ್ಲಿ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದೆ. ನಮ್ಮ ಮೇಷ್ಟ್ರುಗಳನ್ನು, ಕೆಲವು ಸಂತರನ್ನು, ಸತ್ಸಂಗಿಯರನ್ನು ಜೊತೆಯಲ್ಲಿ ಕಳುಹಿಸಿದ್ದರು. ಅವರೆಲ್ಲರೂ ನಮ್ಮೊಂದಿಗೆ ಅಲ್ಲಿ ಮಣ್ಣು ಎತ್ತುವ ಕೆಲಸದಲ್ಲಿ ತೊಡಗಿದ್ದರು.
ಮೃತದೇಹಗಳ ಅಂತ್ಯಸಂಸ್ಕಾರದಲ್ಲಿ ನಿರತರಾಗಿದ್ದರು. ನನಗೆ ಇನ್ನೂ ನೆನಪಿದೆ, 2012ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅವರ ಬಳಿ ಹೋಗಿದ್ದೆ. ಸಾಮಾನ್ಯವಾಗಿ ನಾನು ನನ್ನ ಜೀವನದಲ್ಲಿ ಯಾವುದೇ ಪ್ರಮುಖ ಘಟ್ಟಕ್ಕೆ ಬಂದರೂ ಪ್ರಮುಖ್ ಸ್ವಾಮೀಜಿಯವರನ್ನು ಭೇಟಿ ಮಾಡುತ್ತೇನೆ. ನಾನು 2002 ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಬಹುಶಃ ಕೆಲವೇ ಜನರಿಗೆ ತಿಳಿದಿರಬಹುದು. ನಾನು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಬೇಕಾಗಿತ್ತು, ಮೊದಲ ಬಾರಿಗೆ ನಾನು ನಾಮಪತ್ರ ಸಲ್ಲಿಸಬೇಕಾಗಿತ್ತು ಮತ್ತು ನಾನು ರಾಜ್‌ಕೋಟ್‌ನಿಂದ ಅಭ್ಯರ್ಥಿಯಾಗಬೇಕಾಗಿತ್ತು, ಆಗ ಅಲ್ಲಿ ಇಬ್ಬರು ಸಂತರು ಉಪಸ್ಥಿತರಿದ್ದರು, ನಾನು ಅಲ್ಲಿಗೆ ಹೋದಾಗ, ಅವರು ನನಗೆಒಂದು ಪೆಟ್ಟಿಗೆಯನ್ನು ನೀಡಿದ್ದರು, ನಾನು ಅದನ್ನು ತೆರೆದು ನೋಡಿದಾಗ ಅದರೊಳಗೆ ಒಂದು ಪೆನ್ನು (ಲೇಖನಿ) ಇತ್ತು. ಇದನ್ನು ಪ್ರಮುಖ್ ಸ್ವಾಮೀಜಿ ಕಳುಹಿಸಿದ್ದಾರೆ, ನೀವು ನಾಮಪತ್ರಕ್ಕೆ ಈ ಪೆನ್ನಿನಿಂದ ಸಹಿ ಮಾಡಲು ಹೇಳಿದ್ದರು. ನಂತರ ಅಲ್ಲಿಂದ ಕಾಶಿಗೆ ಚುನಾವಣೆಗೆ ಹೋಗಿದ್ದೆ.
ನಾನು ದಾಖಲಾತಿ ಮಾಡಲು ಹೋದಾಗ ಒಂದೇ ಒಂದು ಚುನಾವಣೆಯೂ ಈ ರೀತಿಯಾಗಿರಲಿಲ್ಲ. ಗೌರವಾನ್ವಿತ ಪ್ರಮುಖ ಸ್ವಾಮೀಜಿಯವರ ಯಾವ ವ್ಯಕ್ತಿಗಳು ಸಹ ಬಂದು ನನ್ನೊಂದಿಗೆ ಸಹಿ ಹಾಕಲು ನಿಲ್ಲಲಿಲ್ಲ. ಆದರೆ ನಾನು ಕಾಶಿಗೆ ಹೋದಾಗ ನನಗೆ ಆಶ್ಚರ್ಯ ನಡೆದಿದ್ದು ಏನೆಂದರೆ , ಪ್ರಮುಖ್ ಸ್ವಾಮೀಜಿಯವರು ಪೆಟ್ಟಿಗೆಯಲ್ಲಿ ನನಗೆ ನೀಡಿದ್ದ ಪೆನ್ನಿನ ಬಣ್ಣವು ಬಿಜೆಪಿ ಧ್ವಜದ ಬಣ್ಣವಾಗಿ ಅದರ ಮುಚ್ಚಳವು ಹಸಿರು ಬಣ್ಣದ್ದಾಗಿ ಕೆಳಭಾಗವು ಕಿತ್ತಳೆ ಬಣ್ಣದ್ದಾಗಿತ್ತು.
ಈ ಮೂಲಕ ಪ್ರಮುಖ್ ಸ್ವಾಮೀಜಿಯವರು ನನಗೆ ಮೊದಲ ಬಾರಿಗೆ ಹೇಳಿ ಕಳಿಸಿದ್ದು ಏನೆಂದರೆ, ನಾನು (ಅವನು ) ಪೆನ್ನನ್ನು ಕೆಲವು ದಿನಗಳವರೆಗೆ ಎಚ್ಚರಿಕೆಯಿಂದ ಇಟ್ಟುಕೊಂಡಿರಬೇಕು ಮತ್ತು ಅದೇ ಬಣ್ಣದ ಪೆನ್ನನ್ನು ಸ್ವಾಮೀಜಿಯವರಿಗೆ ಕಳುಹಿಸಲು ಮರೆಯಬಾರದು ಎಂದಾಗಿತ್ತು. ಬಹುಶಃ ಅನೇಕ ಜನರು ನಾನು ಇದನ್ನು ಹೇಳಿದ್ದನ್ನು ಕೇಳಿ ಆಶ್ಚರ್ಯ ಪಡಲೂಬಹುದು. ಈ 40 ವರ್ಷಗಳಲ್ಲಿ,ಪ್ರತಿ ವರ್ಷ ಪ್ರಮುಖ್ ಸ್ವಾಮೀಜಿ ನನಗೆ ಕುರ್ತಾ-ಪೈಜಾಮ ಬಟ್ಟೆಯನ್ನು ಮರೆಯದೇ ಕಳುಹಿಸುತ್ತಿರುವುದು ನನ್ನ ಅದೃಷ್ಟ. ಏಕೆಂದರೆ ನಾನು ಅವರ ಮಗನಂತೆ. ಒಬ್ಬ ಮಗ ಏನೇ ಆಗಲಿ, ಅವನು ಎಷ್ಟೇ ದೊಡ್ಡವನಾಗಿರಲಿ ಹೆತ್ತವರಿಗೆ ಅವನೆಂದಿಗೂ ಮಗು ಎಂದು ನನಗೆ ತಿಳಿದಿದೆ.
ದೇಶ ನನ್ನನ್ನು ಪ್ರಧಾನಿಯನ್ನಾಗಿ ಮಾಡಿದೆ.ಪ್ರಧಾನಿಯಾದ ಮೇಲೂ ಸಹ ಪ್ರಮುಖ್ ಸ್ವಾಮೀಜಿ ನಡೆಸುತ್ತಿದ್ದ ಸಂಪ್ರದಾಯದಂತೆ ನನಗೆ ಈಗಲೂ ಬಟ್ಟೆ ಕಳುಹಿಸಲಾಗುತ್ತಿದೆ. ಇದರರ್ಥ ಈ ಬಾಂಧವ್ಯ ಕೇವಲ ಸಾಂಸ್ಥಿಕ PRCV ಯ ಕೆಲಸ ಎಂದಷ್ಟೇ ನಾನು ನಂಬುವುದಿಲ್ಲ, ಇದು ಆಧ್ಯಾತ್ಮಿಕ ಸಂಬಂಧ. ಇದು ತಂದೆ-ಮಗನ ವಾತ್ಸಲ್ಯ, ಅವಿನಾಭಾವ ಸಂಬಂಧ ಮತ್ತು ಇಂದಿಗೂ ನಾನು ಎಲ್ಲಿದ್ದರೂ, ನನ್ನ ಪ್ರತಿ ಕ್ಷಣವನ್ನು ಅವರು ಗಮನಿಸುತ್ತಿರುತ್ತಾರೆ. ನನ್ನ ಕೆಲಸವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ.ನಾನು ಅವರು ಹಾಕಿಕೊಟ್ಟಿರುವ ಅದೇ ದಾರಿಯಲ್ಲಿ ನಡೆಯುತ್ತಿದ್ದೇನೆಯೋ ಇಲ್ಲವೋ ಎಂಬುದನ್ನು ಗಮನಿಸುತ್ತಿರುತ್ತಾರೆ. ಕಛ್‌ನಲ್ಲಿ ಭೂಕಂಪ ವಾದಾಗ ನಾನು ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದೆ , ಆಗ ನಾನು ಮುಖ್ಯಮಂತ್ರಿಯಾಗಿರುವ ಪ್ರಶ್ನೆಯೇ ಇರಲಿಲ್ಲ. ಆದರೆ ಅಲ್ಲಿ ಎಲ್ಲ ಪುಣ್ಯಾತ್ಮ ಸಂತರನ್ನು ಭೇಟಿಯಾದಾಗ,ಅವರೆಲ್ಲ ನನಗೆ ಮೊಟ್ಟಮೊದಲು ನಿಮ್ಮ ಊಟದ ವ್ಯವಸ್ಥೆ ಏನು ಅಂತ ಕೇಳಿದ್ದರು. ನಾನು ಆಗ ನನ್ನ ಕಾರ್ಯಕರ್ತರ ಜೊತೆಗೆ ಊಟ ಇರುವ ಜಾಗಕ್ಕೆ ಬರುತ್ತೇನೆ ಎಂದಿದ್ದೆ, ಎಲ್ಲಿಗೆ ಹೋದರೂ ಅಲ್ಲಿಯೇ ಊಟ ಬರಲಿ ಎಂದು ಹೇಳಲಿಲ್ಲ, ತಡವಾಗಿ ಬಂದರೂ ರಾತ್ರಿ ಯಾವುದೇ ಆಹಾರವನ್ನು ಸೇವಿಸುತ್ತೇನೆ ಎಂದೆ.
ಅಂದರೆ, ನಾನು ಕಛ್‌ನಲ್ಲಿ ಕೆಲಸ ಮಾಡುವವರೆಗೂ, ನನ್ನ ಆಹಾರದ ಬಗ್ಗೆ ಮುಖ್ಯ ಕಾಳಜಿ ವಹಿಸಲು ಬಹುಶಃ ಪ್ರಮುಖ್ ಸ್ವಾಮೀಜಿ ಅವರು ಸಂತರಿಗೆ ಸೂಚಿಸಿರಬೇಕು.ಅದಕ್ಕೆ ಅವರೆಲ್ಲ ನನ್ನನ್ನು ಮುತುರ್ವರ್ಜಿ ವಹಿಸುತ್ತಿದ್ದರು. ಇದೆಲ್ಲ ನಾ ಜನರೊಂದಿಗೆ ತುಂಬಾ ಪ್ರೀತಿಯಿಂದ ಹೇಳುತ್ತಿದ್ದೇನೆ. ನಾನು ಯಾವುದೇ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ, ನಾನು ನಿಮ್ಮೊಂದಿಗೆ(ಜನರೊಂದಿಗೆ) ಸರಳ ಮತ್ತು ಸಾಮಾನ್ಯ ನಡವಳಿಕೆಯ ಬಗ್ಗೆ ಮಾತನಾಡುತ್ತಿದ್ದೇನೆ.
ಜೀವನದ ಅತ್ಯಂತ ಕಷ್ಟದ ಕ್ಷಣಗಳಲ್ಲಿ ಸ್ವತಃ ಪ್ರಮುಖ್ ಸ್ವಾಮಿಯೇ ನನಗೆ ಕರೆ ಮಾಡದ ಅಥವಾ ನನ್ನೊಂದಿಗೆ ಫೋನ್‌ನಲ್ಲಿ ಮಾತನಾಡದ ಪ್ರಸಂಗ ಇಲ್ಲವೇ ಇಲ್ಲ.