Quote“ಡಿಜಿಟಲ್ ಆರ್ಥಿಕತೆ ಬಗ್ಗೆ ಚರ್ಚಿಸಲು ಬೆಂಗಳೂರಿಗಿಂತ ಉತ್ತಮ ಸ್ಥಳವಿಲ್ಲ’’
Quote“ಭಾರತದ ಡಿಜಿಟಲ್ ಪರಿವರ್ತನೆಯು ನಾವೀನ್ಯತೆಯ ಮೇಲಿನ ಅಚಲ ನಂಬಿಕೆ ಮತ್ತು ತ್ವರಿತ ಅನುಷ್ಠಾನಕ್ಕೆ ಅದರ ಬದ್ಧತೆ ಶಕ್ತಿ ಹೊಂದಿದೆ’’
Quote“ಆಡಳಿತವನ್ನು ಪರಿವರ್ತಿಸಲು ಮತ್ತು ಅದನ್ನು ಹೆಚ್ಚು ಪರಿಣಾಮಕಾರಿ, ಅಂತರ್ಗತ, ತ್ವರಿತ ಮತ್ತು ಪಾರದರ್ಶಕಗೊಳಿಸಲು ರಾಷ್ಟ್ರವು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ’’
Quote“ಭಾರತದ ಡಿಜಿಟಲ್ ಮೂಲಸೌಕರ್ಯವು ಜಾಗತಿಕ ಸವಾಲುಗಳಿಗೆ ಸುಲಭ, ಸುರಕ್ಷಿತ ಮತ್ತು ಅಂತರ್ಗತ ಪರಿಹಾರಗಳನ್ನು ಒದಗಿಸುತ್ತದೆ’’
Quote“ವೈವಿಧ್ಯತೆಯ ಕಾರಣದಿಂದ ಭಾರತ ಪರಿಹಾರಗಳಿಗೆ ಸೂಕ್ತ ಪ್ರಯೋಗಾಲಯ. ಭಾರತದಲ್ಲಿ ಯಶಸ್ವಿಯಾಗುವ ಪರಿಹಾರಗಳನ್ನು ಜಗತ್ತಿನೆಲ್ಲೆಡೆ ಸುಲಭವಾಗಿ ಅನುಷ್ಠಾನಗೊಳಿಸಬಹುದು’’
Quote“ಸುರಕ್ಷಿತ, ವಿಶ್ವಾಸಾರ್ಹ ಮತ್ತು ಚೇತರಿಸಿಕೊಳ್ಳುವ ಡಿಜಿಟಲ್ ಆರ್ಥಿಕತೆಗಾಗಿ ಜಿ-20 ಉನ್ನತ ಮಟ್ಟದ ತತ್ವಗಳ ಮೇಲೆ ಸಹಮತ ಮೂಡಿಸುವುದು ಮುಖ್ಯ’’
Quote“ಮನುಕುಲ ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ತಂತ್ರಜ್ಞಾನ ಅಧಾರಿತ ಪರಿಹಾರಗಳ ಸಂಪೂರ್ಣ ಪೂರಕ ವ್ಯವಸ್ಥೆಗಳನ್ನು ನಿರ್ಮಿಸಬಹುದು. ಅದಕ್ಕೆ ನಮ್ಮಿಂದ ಬೇಕಾಗಿರುವುದು ನಾಲ್ಕು “ಸಿ’ ಅಂದರೆ- ಕನ್ವಿಕ್ಷನ್ (ನಿರ್ಣಯ) , ಕಮಿಟ್‌ ಮೆಂಟ್ (ಬದ್ಧತೆ) , ಕೋ ಆರ್ಡಿನೇಷನ್ (ಸಮನ್ವಯ) ಮತ್ತು ಕೊಲಾಬರೇಷನ್ (ಸಹಭಾಗಿತ್ವ)’’

ಗೌರವಾನ್ವಿತರೇ, ಮಹಿಳೆಯರೇ ಮತ್ತು ಮಹನೀಯರೇ, ನಮಸ್ಕಾರ!

ನಾನು ನಿಮ್ಮನ್ನು 'ನಮ್ಮ ಬೆಂಗಳೂರು'ಗೆ ಸ್ವಾಗತಿಸುತ್ತೇನೆ. ಇದು ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಸ್ಫೂರ್ತಿಗೆ ನೆಲೆಯಾಗಿರುವ ನಗರವಾಗಿದೆ. ಡಿಜಿಟಲ್ ಆರ್ಥಿಕತೆಯ ಬಗ್ಗೆ ಚರ್ಚಿಸಲು ಬೆಂಗಳೂರಿಗಿಂತ ಉತ್ತಮ ಸ್ಥಳವಿಲ್ಲ!

ಸ್ನೇಹಿತರೇ,

ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದ ಡಿಜಿಟಲ್ ರೂಪಾಂತರವು ಅಭೂತಪೂರ್ವವಾಗಿದೆ. ಇದು 2015ರಲ್ಲಿ ನಮ್ಮ ಡಿಜಿಟಲ್ ಇಂಡಿಯಾ ಉಪಕ್ರಮವನ್ನು ಪ್ರಾರಂಭಿಸುವುದರೊಂದಿಗೆ ಆರಂಭವಾಯಿತು. ನಾವೀನ್ಯತೆಯಲ್ಲಿ ನಮ್ಮ ಅಚಲ ನಂಬಿಕೆಯಿಂದ ಇದು ಶಕ್ತಿಯುತವಾಗಿದೆ. ತ್ವರಿತ ಅನುಷ್ಠಾನಕ್ಕೆ ನಮ್ಮ ಬದ್ಧತೆಯಿಂದ ಇದು ಚಾಲಿತವಾಗಿದೆ. ಮತ್ತು, ಇದು ಯಾರನ್ನೂ ಹಿಂದೆ ಬಿಡದೆ ನಮ್ಮ ಒಳಗೊಳ್ಳುವಿಕೆಯ ಮನೋಭಾವದಿಂದ ಪ್ರೇರೇಪಿಸಲ್ಪಟ್ಟಿದೆ. ಈ ರೂಪಾಂತರದ ಪ್ರಮಾಣ, ವೇಗ ಮತ್ತು ವ್ಯಾಪ್ತಿ ಕಲ್ಪನೆಗೂ ಮೀರಿದ್ದಾಗಿದೆ. ಇಂದು, ಭಾರತವು 850 ದಶಲಕ್ಷಕ್ಕೂ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ, ಇದು ವಿಶ್ವದ ಅಗ್ಗದ ಡೇಟಾ ವೆಚ್ಚಗಳನ್ನು ಆನಂದಿಸುತ್ತಿದೆ. ಆಡಳಿತವನ್ನು ಹೆಚ್ಚು ದಕ್ಷ, ಅಂತರ್ಗತ, ವೇಗ ಮತ್ತು ಪಾರದರ್ಶಕವಾಗಿಸಲು ನಾವು ತಂತ್ರಜ್ಞಾನವನ್ನು ಬಳಸಿಕೊಂಡಿದ್ದೇವೆ. ನಮ್ಮ ವಿಶಿಷ್ಟ ಡಿಜಿಟಲ್ ಗುರುತಿನ ವೇದಿಕೆಯಾದ ಆಧಾರ್ ನಮ್ಮ ಒಂದು ಬಿಲಿಯನ್ ಗಿಂತಲೂ ಹೆಚ್ಚು ಜನರನ್ನು ಒಳಗೊಂಡಿದೆ. ಭಾರತದಲ್ಲಿ ಆರ್ಥಿಕ ಸೇರ್ಪಡೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ನಾವು ಜನ್ ಧನ್ ಬ್ಯಾಂಕ್ ಖಾತೆಗಳು, ಆಧಾರ್ ಮತ್ತು ಮೊಬೈಲ್ ಎಂಬ JAM ತ್ರಿಮೂರ್ತಿಗಳ ಶಕ್ತಿಯನ್ನು ಬಳಸಿದ್ದೇವೆ. ಪ್ರತಿ ತಿಂಗಳು, ನಮ್ಮ ತ್ವರಿತ ಪಾವತಿ ವ್ಯವಸ್ಥೆಯಾದ ಯುಪಿಐನಲ್ಲಿ ಸುಮಾರು 10 ಶತಕೋಟಿ ರೂ. ವಹಿವಾಟುಗಳು ನಡೆಯುತ್ತವೆ. ಜಾಗತಿಕ ನೈಜ ಸಮಯದ ಪಾವತಿಗಳಲ್ಲಿ ಶೇ.45 ಕ್ಕಿಂತ ಹೆಚ್ಚು ಭಾರತದಲ್ಲಿ ನಡೆಯುತ್ತದೆ. ನೇರ ಪ್ರಯೋಜನಗಳು ಸರ್ಕಾರದ ಬೆಂಬಲದ ವರ್ಗಾವಣೆಯು ಸೋರಿಕೆಯನ್ನು ತಡೆಯುತ್ತಿದೆ ಮತ್ತು 33 ಶತಕೋಟಿ ಡಾಲರ್ ಗಳನ್ನು ಉಳಿಸಿದೆ. ಕೋವಿನ್ ಪೋರ್ಟಲ್

ಭಾರತದ ಕೋವಿಡ್ ಲಸಿಕಾ ಅಭಿಯಾನವನ್ನು ಬೆಂಬಲಿಸಿತು. ಇದು ಡಿಜಿಟಲ್ ಪರಿಶೀಲಿಸಬಹುದಾದ ಪ್ರಮಾಣಪತ್ರಗಳೊಂದಿಗೆ 2 ಶತಕೋಟಿ ಲಸಿಕೆ ಡೋಸ್ ಗಳನ್ನು ತಲುಪಿಸಲು ಸಹಾಯ ಮಾಡಿತು. ಗತಿ-ಶಕ್ತಿ ಪ್ಲಾಟ್ ಫಾರ್ಮ್ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಅನ್ನು ನಕ್ಷೆ ಮಾಡಲು ತಂತ್ರಜ್ಞಾನ ಮತ್ತು ಪ್ರಾದೇಶಿಕ ಯೋಜನೆಯನ್ನು ಬಳಸುತ್ತದೆ. ಇದು ಯೋಜಿಸಲು, ವೆಚ್ಚವನ್ನು ಕಡಿಮೆ ಮಾಡಲು ಮತ್ತು ವಿತರಣೆಯ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತಿದೆ. ನಮ್ಮ ಆನ್ ಲೈನ್ ಸಾರ್ವಜನಿಕ ಖರೀದಿ ವೇದಿಕೆ - ಸರ್ಕಾರಿ ಇ-ಮಾರ್ಕೆಟ್ ಪ್ಲೇಸ್ - ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ತಂದಿದೆ. ಓಪನ್ ನೆಟ್ ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ಇ-ಕಾಮರ್ಸ್ ಅನ್ನು ಪ್ರಜಾಪ್ರಭುತ್ವಗೊಳಿಸುತ್ತಿದೆ. ಸಂಪೂರ್ಣ ಡಿಜಿಟಲೀಕರಣಗೊಂಡ ತೆರಿಗೆ ವ್ಯವಸ್ಥೆಗಳು ಪಾರದರ್ಶಕತೆ ಮತ್ತು ಇ-ಆಡಳಿತವನ್ನು ಉತ್ತೇಜಿಸುತ್ತಿವೆ. ನಾವು ಭಾಶಿನಿ ಎಂಬ ಎಐ ಚಾಲಿತ ಭಾಷಾ ಅನುವಾದ ವೇದಿಕೆಯನ್ನು ನಿರ್ಮಿಸುತ್ತಿದ್ದೇವೆ. ಇದು ಭಾರತದ ಎಲ್ಲಾ ವೈವಿಧ್ಯಮಯ ಭಾಷೆಗಳಲ್ಲಿ ಡಿಜಿಟಲ್ ಸೇರ್ಪಡೆಯನ್ನು ಬೆಂಬಲಿಸುತ್ತದೆ.

ಗೌರವಾನ್ವಿತರೇ,

ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಜಾಗತಿಕ ಸವಾಲುಗಳಿಗೆ ಸ್ಕೇಲೆಬಲ್ (ಆರೋಹಣೀಯವಾಗಿದೆ), ಸುರಕ್ಷಿತ ಮತ್ತು ಅಂತರ್ಗತ ಪರಿಹಾರಗಳನ್ನು ನೀಡುತ್ತದೆ. ಭಾರತವು ನಂಬಲಾಗದಷ್ಟು ವೈವಿಧ್ಯಮಯ ದೇಶ. ನಮ್ಮಲ್ಲಿ ಡಜನ್ ಗಟ್ಟಲೆ ಭಾಷೆಗಳು ಮತ್ತು ನೂರಾರು ಉಪಭಾಷೆಗಳಿವೆ. ಇದು ವಿಶ್ವದ ಪ್ರತಿಯೊಂದು ಧರ್ಮ ಮತ್ತು ಅಸಂಖ್ಯಾತ ಸಾಂಸ್ಕೃತಿಕ ಆಚರಣೆಗಳಿಗೆ ನೆಲೆಯಾಗಿದೆ. ಪ್ರಾಚೀನ ಸಂಪ್ರದಾಯಗಳಿಂದ ಹಿಡಿದು, ಇತ್ತೀಚಿನ ತಂತ್ರಜ್ಞಾನಗಳವರೆಗೆ, ಭಾರತವು ಪ್ರತಿಯೊಬ್ಬರಿಗೂ ಏನನ್ನಾದರೂ ಹೊಂದಿದೆ. ಅಂತಹ ವೈವಿಧ್ಯತೆಯೊಂದಿಗೆ, ಭಾರತವು ಪರಿಹಾರಗಳಿಗೆ ಸೂಕ್ತ ಪರೀಕ್ಷಾ ಪ್ರಯೋಗಾಲಯವಾಗಿದೆ. ಭಾರತದಲ್ಲಿ ಯಶಸ್ವಿಯಾದ ಪರಿಹಾರವನ್ನು ವಿಶ್ವದ ಎಲ್ಲಿಯಾದರೂ ಸುಲಭವಾಗಿ ಅನ್ವಯಿಸಬಹುದು. ಭಾರತವು ತನ್ನ ಅನುಭವಗಳನ್ನು ವಿಶ್ವದೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಜಾಗತಿಕ ಒಳಿತಿಗಾಗಿ ನಾವು ನಮ್ಮ ಕೋವಿನ್ ವೇದಿಕೆಯನ್ನು ನೀಡಿದ್ದೇವೆ. ನಾವು ಈಗ ಇಂಡಿಯಾ ಸ್ಟ್ಯಾಕ್ ಎಂಬ ಆನ್ ಲೈನ್ ಜಾಗತಿಕ ಸಾರ್ವಜನಿಕ ಡಿಜಿಟಲ್ ಸರಕುಗಳ ಭಂಡಾರವನ್ನು ರಚಿಸಿದ್ದೇವೆ. ಇದು ಯಾರೂ ಹಿಂದೆ ಉಳಿಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಹಕಾರಿಯಾಗಲಿದೆ. ವಿಶೇಷವಾಗಿ ಜಾಗತಿಕ ದಕ್ಷಿಣದ ನಮ್ಮ ಸಹೋದರ ಸಹೋದರಿಯರು.

ಗೌರವಾನ್ವಿತರೇ,

ಜಿ20 ವರ್ಚುವಲ್ ಗ್ಲೋಬಲ್ ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ರೆಪೊಸಿಟರಿಯನ್ನು ರಚಿಸಲು ನೀವು ಕೆಲಸ ಮಾಡುತ್ತಿದ್ದೀರಿ ಎಂದು ನನಗೆ ಸಂತೋಷವಾಗಿದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕಾಗಿ ಸಾಮಾನ್ಯ ಚೌಕಟ್ಟಿನ ಪ್ರಗತಿಯು ಎಲ್ಲರಿಗೂ ಪಾರದರ್ಶಕ, ಉತ್ತರದಾಯಿತ್ವ ಮತ್ತು ನ್ಯಾಯಯುತ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ರಚಿಸಲು ಸಹಾಯ ಮಾಡುತ್ತದೆ. ಡಿಜಿಟಲ್ ಕೌಶಲ್ಯಗಳ ಕ್ರಾಸ್ ಕಂಟ್ರಿ ಹೋಲಿಕೆಗೆ ಅನುಕೂಲವಾಗುವಂತೆ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸುವ ನಿಮ್ಮ ಪ್ರಯತ್ನಗಳನ್ನು ನಾನು ಸ್ವಾಗತಿಸುತ್ತೇನೆ. ಮತ್ತು, ಡಿಜಿಟಲ್ ಕೌಶಲ್ಯದ ಮೇಲೆ ವರ್ಚುವಲ್ ಸೆಂಟರ್ ಆಫ್ ಎಕ್ಸಲೆನ್ಸ್(ಶ್ರೇಷ್ಠತಾ ಕೇಂದ್ರ) ಸ್ಥಾಪಿಸುವುದು. ಭವಿಷ್ಯದಲ್ಲಿ ಸಿದ್ಧವಾಗಿರುವ ಕಾರ್ಯಪಡೆಯ ಅಗತ್ಯಗಳನ್ನು ಪೂರೈಸುವ ಪ್ರಮುಖ ಪ್ರಯತ್ನಗಳು ಇವು. ಡಿಜಿಟಲ್ ಆರ್ಥಿಕತೆಯು ಜಾಗತಿಕವಾಗಿ ಹರಡುತ್ತಿದ್ದಂತೆ, ಅದು ಭದ್ರತಾ ಬೆದರಿಕೆಗಳು ಮತ್ತು ಸವಾಲುಗಳನ್ನು ಎದುರಿಸುತ್ತದೆ. ಈ ಹಿನ್ನೆಲೆಯಲ್ಲಿ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕ ಡಿಜಿಟಲ್ ಆರ್ಥಿಕತೆಗಾಗಿ ಜಿ20 ಉನ್ನತ ಮಟ್ಟದ ತತ್ವಗಳ ಬಗ್ಗೆ ಒಮ್ಮತವನ್ನು ನಿರ್ಮಿಸುವುದು ಮುಖ್ಯವಾಗಿದೆ.

ಸ್ನೇಹಿತರೇ,

ತಂತ್ರಜ್ಞಾನವು ಹಿಂದೆಂದಿಗಿಂತಲೂ ನಮ್ಮನ್ನು ಸಂಪರ್ಕಿಸಿದೆ. ಇದು ಎಲ್ಲರಿಗೂ ಅಂತರ್ಗತ ಮತ್ತು ಸುಸ್ಥಿರ ಅಭಿವೃದ್ಧಿಯ ಭರವಸೆಯನ್ನು ಹೊಂದಿದೆ. ಅಂತರ್ಗತ, ಸಮೃದ್ಧ ಮತ್ತು ಸುರಕ್ಷಿತ ಜಾಗತಿಕ ಡಿಜಿಟಲ್ ಭವಿಷ್ಯಕ್ಕೆ ಅಡಿಪಾಯ ಹಾಕಲು ಜಿ20 ನಲ್ಲಿ ನಮಗೆ ಒಂದು ಅನನ್ಯ ಅವಕಾಶವಿದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮೂಲಕ ನಾವು ಆರ್ಥಿಕ ಸೇರ್ಪಡೆ ಮತ್ತು ಉತ್ಪಾದಕತೆಯನ್ನು ಮುನ್ನಡೆಸಬಹುದು. ರೈತರು ಮತ್ತು ಸಣ್ಣ ಉದ್ಯಮಗಳು ಡಿಜಿಟಲ್ ತಂತ್ರಜ್ಞಾನದ ಬಳಕೆಯನ್ನು ನಾವು ಉತ್ತೇಜಿಸಬಹುದು. ಜಾಗತಿಕ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ನಾವು ಚೌಕಟ್ಟನ್ನು ಸ್ಥಾಪಿಸಬಹುದು. ಕೃತಕ ಬುದ್ಧಿಮತ್ತೆಯ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಗಾಗಿ ನಾವು ಚೌಕಟ್ಟನ್ನು ಸಹ ಅಭಿವೃದ್ಧಿಪಡಿಸಬಹುದು. ವಾಸ್ತವವಾಗಿ, ಮಾನವಕುಲವು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನ ಆಧಾರಿತ ಪರಿಹಾರಗಳ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ನಾವು ನಿರ್ಮಿಸಬಹುದು. ಇದಕ್ಕೆ ನಮ್ಮಿಂದ ಬೇಕಾಗಿರುವುದು ನಾಲ್ಕು ಸಿಗಳು - ದೃಢನಿಶ್ಚಯ, ಬದ್ಧತೆ, ಸಮನ್ವಯ ಮತ್ತು ಸಹಯೋಗ. ಮತ್ತು, ನಿಮ್ಮ ಗುಂಪು ನಮ್ಮನ್ನು ಆ ದಿಕ್ಕಿನಲ್ಲಿ ಮುಂದೆ ಕೊಂಡೊಯ್ಯುತ್ತದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ನಿಮ್ಮೆಲ್ಲರಿಗೂ ಬಹಳ ಫಲಪ್ರದ ಚರ್ಚೆಯನ್ನು ನಾನು ಬಯಸುತ್ತೇನೆ. ಧನ್ಯವಾದಗಳು! ತುಂಬ ಧನ್ಯವಾದಗಳು!

 

  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम 🚩 वन्दे मातरम् जय भाजपा विजय भाजपा
  • Devendra Kunwar October 08, 2024

    BJP
  • दिग्विजय सिंह राना September 20, 2024

    हर हर महादेव
  • JBL SRIVASTAVA May 27, 2024

    मोदी जी 400 पार
  • Vaishali Tangsale February 12, 2024

    🙏🏻🙏🏻🙏🏻
  • ज्योती चंद्रकांत मारकडे February 11, 2024

    जय हो
  • Shyam Mohan Singh Chauhan mandal adhayksh January 11, 2024

    जय हो
  • Nisha Kushwaha Media social Media pharbhi October 03, 2023

    Jai shree Ram
  • Saurabh Pandey September 16, 2023

    jaigurudev Modifi JaishreeRam jaiBajrangbali jaiho My Great Leader kaynder perbhari saltauwa Basti Bjp JaishreeRam
  • Mintu Kumar September 01, 2023

    नमस्कार सर, मैं कुलदीप पिता का नाम स्वर्गीय श्री शेरसिंह हरियाणा जिला महेंद्रगढ़ का रहने वाला हूं। मैं जून 2023 में मुम्बई बांद्रा टर्मिनस रेलवे स्टेशन पर लिनेन (LILEN) में काम करने के लिए गया था। मेरी ज्वाइनिंग 19 को बांद्रा टर्मिनस रेलवे स्टेशन पर हुई थी, मेरा काम ट्रेन में चदर और कंबल देने का था। वहां पर हमारे ग्रुप 10 लोग थे। वहां पर हमारे लिए रहने की भी कोई व्यवस्था नहीं थी, हम बांद्रा टर्मिनस रेलवे स्टेशन पर ही प्लेटफार्म पर ही सोते थे। वहां पर मैं 8 हजार रूपए लेकर गया था। परंतु दोनों समय का खुद के पैसों से खाना पड़ता था इसलिए सभी पैसै खत्म हो गऍ और फिर मैं 19 जुलाई को बांद्रा टर्मिनस से घर पर आ गया। लेकिन मेरी सैलरी उन्होंने अभी तक नहीं दी है। जब मैं मेरी सैलरी के लिए उनको फोन करता हूं तो बोलते हैं 2 दिन बाद आयेगी 5 दिन बाद आयेगी। ऐसा बोलते हुए उनको दो महीने हो गए हैं। लेकिन मेरी सैलरी अभी तक नहीं दी गई है। मैंने वहां पर 19 जून से 19 जुलाई तक काम किया है। मेरे साथ में जो लोग थे मेरे ग्रुप के उन सभी की सैलरी आ गई है। जो मेरे से पहले छोड़ कर चले गए थे उनकी भी सैलरी आ गई है लेकिन मेरी सैलरी अभी तक नहीं आई है। सर घर में कमाने वाला सिर्फ मैं ही हूं मेरे मम्मी बीमार रहती है जैसे तैसे घर का खर्च चला रहा हूं। सर मैंने मेरे UAN नम्बर से EPFO की साइट पर अपनी डिटेल्स भी चैक की थी। वहां पर मेरी ज्वाइनिंग 1 जून से दिखा रखी है। सर आपसे निवेदन है कि मुझे मेरी सैलरी दिलवा दीजिए। सर मैं बहुत गरीब हूं। मेरे पास घर का खर्च चलाने के लिए भी पैसे नहीं हैं। वहां के accountant का नम्बर (8291027127) भी है मेरे पास लेकिन वह मेरी सैलरी नहीं भेज रहे हैं। वहां पर LILEN में कंपनी का नाम THARU AND SONS है। मैंने अपने सारे कागज - आधार कार्ड, पैन कार्ड, बैंक की कॉपी भी दी हुई है। सर 2 महीने हो गए हैं मेरी सैलरी अभी तक नहीं आई है। सर आपसे हाथ जोड़कर विनती है कि मुझे मेरी सैलरी दिलवा दीजिए आपकी बहुत मेहरबानी होगी नाम - कुलदीप पिता - स्वर्गीय श्री शेरसिंह तहसील - कनीना जिला - महेंद्रगढ़ राज्य - हरियाणा पिनकोड - 123027
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India Eyes Rs 3 Lakh Crore Defence Production By 2025 After 174% Surge In 10 Years

Media Coverage

India Eyes Rs 3 Lakh Crore Defence Production By 2025 After 174% Surge In 10 Years
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 26 ಮಾರ್ಚ್ 2025
March 26, 2025

Empowering Every Indian: PM Modi's Self-Reliance Mission