ನಮಸ್ಕಾರ ಮಿತ್ರರೇ,

ಇದು ಚಳಿಗಾಲದ ಅಧಿವೇಶನ ಮತ್ತು ವಾತಾವರಣವೂ ಸಹ ತಣ್ಣಗಿದೆ. ನಾವೆಲ್ಲರೂ ಇದೀಗ 2024ರ ಅಂತಿಮ ಘಟ್ಟದಲ್ಲಿದ್ದೇವೆ ಮತ್ತು ದೇಶ ಹೊಸ ಶಕ್ತಿ ಮತ್ತು ಕುತೂಹಲದೊಂದಿಗೆ 2025 ಅನ್ನು ಸ್ವಾಗತಿಸಲು  ಭಾರಿ ಉತ್ಸಾಹದಿಂದ ತಯಾರಿ ನಡೆಸುತ್ತಿದೆ.

ಮಿತ್ರರೇ,

ಹಲವು ರೀತಿಯಲ್ಲಿ ಈ ಸಂಸತ್‌ ಅಧಿವೇಶನ ವಿಶೇಷವಾಗಿದೆ, ಅತ್ಯಂತ ಮಹತ್ವದ ಅಂಶವೆಂದರೆ ನಮ್ಮ ಸಂವಿಧಾನದ 75 ವರ್ಷಗಳ ಪಯಣ, ಅಂದರೆ ಸಂವಿಧಾನ 75ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಪ್ರಜಾಪ್ರಭುತ್ವದಲ್ಲಿ ಇಂದು ಸ್ಮರಣೀಯ ಸಂದರ್ಭವಾಗಿದೆ. ನಾಳೆ ನಾವೆಲ್ಲೂರು ಸಾಮಾಹಿಕವಾಗಿ ಕಾನ್ಸಿಟ್ಯೂಟಷನ್ ಹಾಲ್‌ ನಲ್ಲಿ ನಮ್ಮ ಸಂವಿಧಾನದ 75ನೇ ವರ್ಷಾಚರಣೆಗೆ ಚಾಲನೆ ನೀಡುತ್ತಿದ್ದೇವೆ. ಸಂವಿಧಾನ ರಚನೆಕಾರರು ಸಂವಿಧಾನವನ್ನು ರಚಿಸುವಾಗ ಪ್ರತಿಯೊಂದು ಅಂಶವನ್ನು ಹೆಚ್ಚು ವಿಸ್ತೃತವಾಗಿ ಚರ್ಚಿಸಿದ್ದಾರೆ,ಅದರ ಪರಿಣಾಮವಾಗಿ ಈ ಅತ್ಯುತ್ತಮ ದಾಖಲೆಯನ್ನು ರೂಪಿಸಲಾಯಿತು. ಇದರ ಮಹತ್ವದ ಆಧಾರ ಸ್ತಂಭ, ನಮ್ಮ ಸಂಸತ್ತು ಮತ್ತು ಅದರ ಸದಸ್ಯರು. ಸಂಸತ್ತು ಆರೋಗ್ಯಕರ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ, ಅಲ್ಲಿ ಸಾಧ್ಯವಾದಷ್ಟು ಜನರು ತಮ್ಮ ಕೊಡುಗೆ ನೀಡುತ್ತಾರೆ. ದುರದೃಷ್ಟವೆಂದರೆ, ಜನರಿಂದ ತಿರಸ್ಕರಿಸಲ್ಪಟ್ಟ ಕೆಲವು ವ್ಯಕ್ತಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ವಿಚ್ಛಿದ್ರಕಾರಕ ತಂತ್ರಗಳ ಮೂಲಕ ಸಂಸತ್ತನ್ನು ನಿಯಂತ್ರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಸಂಸತ್ತಿನ ಕಲಾಪಗಳನ್ನು ಅಡ್ಡಿಪಡಿಸುವ ಅವರ ಪ್ರಾಥಮಿಕ ಗುರಿ ವಿರಳವಾಗಿ ಯಶಸ್ವಿಯಾಗುತ್ತದೆ ಮತ್ತು ಜನರು ಅವರ ಕಾರ್ಯಗಳನ್ನು ಗಮನಿಸುತ್ತಾರೆ, ಸಮಯ ಬಂದಾಗ ಅವರನ್ನು ಶಿಕ್ಷಿಸುತ್ತಾರೆ.

 

|

ಅತ್ಯಂತ ತೊಂದರೆದಾಯಕ ಅಂಶವೆಂದರೆ, ಅಂತಹ ನಡವಳಿಕೆಯು ಎಲ್ಲಾ ಪಕ್ಷಗಳಿಂದ ಹೊಸ ಆಲೋಚನೆಗಳು ಮತ್ತುಶಕ್ತಿಯೊಂದಿರುವ ಬಂದಿರುವ ಹೊಸ ಸಂಸದರ ಹಕ್ಕುಗಳನ್ನು ಕುಗ್ಗಿಸುತ್ತದೆ. ಈ ಹೊಸ ಸದಸ್ಯರಿಗೆ ಸದನದಲ್ಲಿ ಮಾತನಾಡಲು ಅವಕಾಶಗಳನ್ನು ನಿರಾಕರಿಸಲಾಗುತ್ತದೆ. ಪ್ರಜಾಸತ್ತಾತ್ಮಕ ಪರಂಪರೆಯಲ್ಲಿ ಮುಂದಿನ ಪೀಳಿಗೆಯನ್ನು ತಯಾರು ಮಾಡುವ ಜವಾಬ್ದಾರಿ ಪ್ರತಿ ಪೀಳಿಗೆಯ ಮೇಲಿದೆ. ಆದರೆ ಜನರಿಂದ ಪದೇ ಪದೇ ಅಂದರೆ 80, 90 ಬಾರಿ ತಿರಸ್ಕರಿಸಲ್ಪಟ್ಟವರು -ಸಂಸತ್ತಿನಲ್ಲಿ ಚರ್ಚೆಗಳಿಗೆ ಅವಕಾಶ ನೀಡುವುದಿಲ್ಲ ಅಥವಾ ಪ್ರಜಾಸತ್ತಾತ್ಮಕ ತತ್ವಗಳು ಅಥವಾ ಜನರ ಆಶೋತ್ತರಗಳನ್ನು ಗೌರವಿಸುವುದಿಲ್ಲ. ಅವರು ಜನರ ಬಗ್ಗೆಗಿನ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುವುದಿಲ್ಲ. ಅದರ ಪರಿಣಾಮ ಸಾರ್ವಜನಿಕ ನಿರೀಕ್ಷೆಗಳನ್ನು ಪೂರೈಸುವಲ್ಲಿ ಅವರು ಸತತವಾಗಿ ವಿಫಲರಾಗುತ್ತಾರೆ, ಇದು ಮತದಾರರಿಂದ ಮತ್ತೆ ಮತ್ತೆ ನಿರಾಕರಣೆಗೆ ಕಾರಣವಾಗುತ್ತದೆ.

ಮಿತ್ರರೇ,

 

|

ಸದನ ಪ್ರಜಾಪ್ರಭುತ್ವದ ಸಂಕೇತವಾಗಿದೆ. 2024ರ ಲೋಕಸಭಾ ಚುನಾವಣೆಗಳ ನಂತರ, ದೇಶದ ಜನತೆ ತಮ್ಮ ರಾಜ್ಯಗಳಲ್ಲಿ ತಮ್ಮ ಆಲೋಚನೆಗಳು, ಅಭಿಪ್ರಾಯಗಳು ಮತ್ತು ನಿರೀಕ್ಷೆಗಳನ್ನು ವ್ಯಕ್ತಪಡಿಸಲು ಅವಕಾಶಗಳನ್ನು ಹೊಂದಿದ್ದಾರೆ. ರಾಜ್ಯಗಳಲ್ಲಿನ ಈ ಚುನಾವಣೆಗಳ ಫಲಿತಾಂಶಗಳು 2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು ಮತ್ತಷ್ಟು ಬಲವರ್ಧನೆಗೊಳಿಸಿದೆ, ಬೆಂಬಲದ ನೆಲೆಯನ್ನು ವಿಸ್ತರಿಸಿದೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿನ ವಿಶ್ವಾಸವನ್ನು ಹೆಚ್ಚಿಸಿದೆ. ಪ್ರಜಾಪ್ರಭುತ್ವದಲ್ಲಿ, ಜನರ ಭಾವನೆಗಳನ್ನು ಗೌರವಿಸುವುದು ಮತ್ತು ಅವರ ಭರವಸೆ ಮತ್ತು ನಿರೀಕ್ಷೆಗಳನ್ನು ಪೂರೈಸಲು ಅವಿರತವಾಗಿ ಶ್ರಮಿಸುವುದು ನಮಗೆ ಅನಿವಾರ್ಯವಾಗಿದೆ. ನಾನು ಪ್ರತಿಪಕ್ಷಗಳನ್ನು ಪದೇ ಪದೇ ಒತ್ತಾಯಿಸುತ್ತಿದ್ದೇನೆ ಮತ್ತು ಕೆಲವು ವಿರೋಧ ಪಕ್ಷದ ಸದಸ್ಯರು ಬಹಳ ಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ. ಸದನದ ಸುಗಮ ಕಲಾಪವನ್ನು ಅವರು ಬಯಸುತ್ತಾರೆ. ಆದರೂ ಸಹ ಜನರಿಂದ ತಿರಸ್ಕರಿಸಲ್ಪಟ್ಟವರು ತಮ್ಮ ಸಹೋದ್ಯೋಗಿಗಳ ಧ್ವನಿಯನ್ನು ಕೂಡ ಹತ್ತಿಕ್ಕುತ್ತಾರೆ, ಅವರ ಭಾವನೆಗಳನ್ನು ಗೌರವಿಸುವುದಿಲ್ಲ ಮತ್ತು ಪ್ರಜಾಪ್ರಭುತ್ವದ ಮನೋಭಾವವನ್ನು ಹಾಳು ಮಾಡುತ್ತಿದ್ದಾರೆ. ಎಲ್ಲಾ ಪಕ್ಷಗಳ ನಮ್ಮ ಹೊಸ ಸದಸ್ಯರಿಗೆ ಅವಕಾಶಗಳು ಲಭಿಸಲಿವೆ ಎಂಬ ಭರವಸೆ ನನಗಿದೆ. ಅವರು ಭಾರತವನ್ನು ಮುನ್ನಡೆಸಲು ಹೊಸ ಚಿಂತನೆಗಳು ಮತ್ತು ನವೀನ ಮುನ್ನೋಟಗಳನ್ನು ತರಲಿದ್ದಾರೆ. ಇಂದು, ಇಡೀ ವಿಶ್ವ ಭಾರತವನ್ನು ಭಾರಿ ಭರವಸೆಯೊಂದಿಗೆ ನೋಡುತ್ತಿದೆ. ಸಂಸತ್ತಿನ ಸದಸ್ಯರಾಗಿ ನಾವು, ಭಾರತದ ಜಾಗತಿಕ ಗೌರವ ಮತ್ತು ಆಕರ್ಷಣೆಯನ್ನು ಮತ್ತಷ್ಟು ವೃದ್ಧಿಸಲು ನಮ್ಮ ಸಮಯವನ್ನು ವಿನಿಯೋಗಿಸಬೇಕಿದೆ. ಭಾರತಕ್ಕೆ ಇಂದು ವಿಶ್ವ ವೇದಿಕೆಯಲ್ಲಿ ಅಪರೂಪದ ಅವಕಾಶಗಳು ಸಿಗುತ್ತಿವೆ. ಭಾರತದ ಸಂಸತ್ತಿನ ಸಂದೇಶವು ಪ್ರಜಾಪ್ರಭುತ್ವಕ್ಕೆ ಮತದಾರರ ಸಮರ್ಪಣೆ, ಸಂವಿಧಾನಕ್ಕೆ ಅವರ ಬದ್ಧತೆ ಮತ್ತು ಸಂಸದೀಯ ಆಚರಣೆಗಳಲ್ಲಿ ಅವರ ನಂಬಿಕೆಯನ್ನು ಪ್ರತಿಬಿಂಬಿಸಬೇಕು. ಅವರ ಪ್ರತಿನಿಧಿಗಳಾದ ನಾವು ಆ ಭಾವನೆಗಳಿಗೆ ತಕ್ಕಂತೆ ಬದುಕಬೇಕು. ನಾವು ಇಲ್ಲಿಯವರೆಗೆ ಕಳೆದುಹೋದ ಸಮಯವನ್ನು ಪ್ರತಿಬಿಂಬಿಸಲು ಮತ್ತು ಸದನದಲ್ಲಿ ವಿವಿಧ ವಿಷಯಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸುವ ಮೂಲಕ ಸರಿದೂಗಿಸಲು ನಿರ್ಧರಿಸುವ ಸಮಯ ಇದಾಗಿದೆ. ಭವಿಷ್ಯದ ಪೀಳಿಗೆ ಈ ಸಮಾಲೋಚನೆಗಳನ್ನು ಓದಿ, ಸ್ಪೂರ್ತಿಯನ್ನು ಪಡೆಯಲಿದ್ದಾರೆ. ಈ ಅಧಿವೇಶನ ಫಲಪ್ರದವಾಗಲಿದೆ, ಸಂವಿಧಾನದ 75ನೇ ವರ್ಷದ ಘನತೆಯನ್ನು ಎತ್ತಿ ಹಿಡಿಯಲಿದೆ, ಭಾರತ ಜಾಗತಿಕ ಸ್ಥಾನವನ್ನು ಬಲಪಡಿಸುತ್ತದೆ, ಹೊಸ ಸಂಸರಿಗೆ ಅವಕಾಶಗಳನ್ನು ನೀಡುತ್ತದೆ ಮತ್ತು ಹೊಸ ಚಿಂತನೆಗಳನ್ನು ಸ್ವಾಗತಿಸುತ್ತದೆ ಎಂಬ ನನಗೆ ಭರವಸೆ ಇದೆ.  ಅದೇ ಉತ್ಸಾಹದೊಂದಿಗೆ ನಾನು ಮತ್ತೊಮ್ಮೆ ಎಲ್ಲಾ ಗೌರವಾನ್ವಿತ ಸಂಸತ್ತಿನ ಸದಸ್ಯರನ್ನು ಉತ್ಸಾಹ ಮತ್ತು ಹುರುಪಿನಿಂದ ಈ ಅಧಿವೇಶನವನ್ನು ಪಾಲ್ಗೊಳ್ಳಲು ಆಹ್ವಾನಿಸುತ್ತೇನೆ ಮತ್ತು ಸ್ವಾಗತಿಸುತ್ತೇನೆ. ಎಲ್ಲರಿಗೂ ತುಂಬಾ ಧನ್ಯವಾದಗಳು.

ನಮಸ್ಕಾರ..!

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Daily UPI-based transactions surpass 700 million for the first time

Media Coverage

Daily UPI-based transactions surpass 700 million for the first time
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 05 ಆಗಸ್ಟ್ 2025
August 05, 2025

Appreciation by Citizens for PM Modi’s Visionary Initiatives Reshaping Modern India