Dedicates Fertilizer plant at Ramagundam
“Experts around the world are upbeat about the growth trajectory of Indian economy”
“A new India presents itself to the world with self-confidence and aspirations of development ”
“Fertilizer sector is proof of the honest efforts of the central government”
“No proposal for privatization of SCCL is under consideration with the central government”
“The Government of Telangana holds 51% stake in SCCL, while the Central Government holds 49%. The Central Government cannot take any decision related to the privatization of SCCL at its own level”

ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!

ಎಲ್ಲರಿಗೂ ನಮಸ್ಕಾರಗಳು!

ತೆಲಂಗಾಣದ  ರಾಜ್ಯಪಾಲರಾದ ಡಾ. ತಮಿಳಿಸೈ ಸೌಂದರರಾಜನ್ ಜಿ, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾದ ಶ್ರೀ ಕಿಶನ್ ರೆಡ್ಡಿ ಜಿ ಮತ್ತು ಭಗವಂತ ಖೂಬಾ ಜಿ, ನನ್ನ ಸಹ ಸಂಸದರಾದ ಬಂಡಿ ಸಂಜಯ್ ಕುಮಾರ್ ಜಿ ಮತ್ತು ಶ್ರೀ ವೆಂಕಟೇಶ್ ನೇತಾ ಜಿ, ಇತರ ಗಣ್ಯರೇ, ಸಹೋದರ ಸಹೋದರಿಯರೇ!

ರಾಮಗುಂಡಂನಿಂದ ಇಡೀ ತೆಲಂಗಾಣಕ್ಕೆ ನನ್ನ ಗೌರವಪೂರ್ವಕ ನಮಸ್ಕಾರಗಳು!  ಟಿವಿ ಪರದೆಯ ಮೇಲೆ ನಾನು ನೋಡುತ್ತಿದ್ದೆ,  ಈ ಕಾರ್ಯಕ್ರಮದಲ್ಲಿ ತೆಲಂಗಾಣದ 70 ವಿಧಾನಸಭಾ ಕ್ಷೇತ್ರಗಳ ಸಾವಿರಾರು ರೈತ ಬಂಧುಗಳು ಸಹ ನಮ್ಮೊಂದಿಗೆ ಸೇರಿಕೊಂಡಿದ್ದಾರೆ ಎಂದು ನನಗೆ ಹೇಳಲಾಯಿತು. ಆ ಎಲ್ಲ ರೈತ ಸಹೋದರ ಸಹೋದರಿಯರನ್ನು ನಾನು ಸ್ವಾಗತಿಸುತ್ತೇನೆ.

ಸ್ನೇಹಿತರೇ,
ಇಂದು ತೆಲಂಗಾಣಕ್ಕೆ 10,000 ಕೋಟಿ ರೂ.ಗೂ ಹೆಚ್ಚು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯಾಗಿದೆ. ಈ ಯೋಜನೆಗಳು ಇಲ್ಲಿನ ಕೃಷಿ ಮತ್ತು ಕೈಗಾರಿಕೆ ಎರಡಕ್ಕೂ ಉತ್ತೇಜನ ನೀಡಲಿವೆ. ರಸಗೊಬ್ಬರ ಸ್ಥಾವರ, ಹೊಸ ರೈಲು ಮಾರ್ಗ, ಹೆದ್ದಾರಿ, ಕೈಗಾರಿಕೆಗಳು ಇವುಗಳ ಮೂಲಕವೂ ವಿಸ್ತರಣೆಯಾಗಲಿವೆ. ಈ ಯೋಜನೆಗಳೊಂದಿಗೆ, ತೆಲಂಗಾಣದಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ, ಸಾಮಾನ್ಯ ಜನರ ಜೀವನ ಸೌಕರ್ಯವೂ ಹೆಚ್ಚಾಗುತ್ತದೆ. ಈ ಎಲ್ಲ ಯೋಜನೆಗಳಿಗಾಗಿ ನಾನು ದೇಶವಾಸಿಗಳು ಮತ್ತು ತೆಲಂಗಾಣದ ಜನರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಕಳೆದ ಎರಡೂವರೆ ವರ್ಷಗಳಿಂದ ಇಡೀ ವಿಶ್ವವೇ ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡುತ್ತಿದೆ. ಮತ್ತೊಂದೆಡೆ, ನಡೆಯುತ್ತಿರುವ ಸಂಘರ್ಷಗಳು, ಉದ್ವಿಗ್ನತೆ ಮತ್ತು ಮಿಲಿಟರಿ ಕಾರ್ಯಾಚರಣೆಗಳು ದೇಶ ಮತ್ತು ಪ್ರಪಂಚದ ಮೇಲೆ ಪರಿಣಾಮ ಬೀರುತ್ತಿವೆ. ಆದರೆ ಈ ಪ್ರತಿಕೂಲ ಪರಿಸ್ಥಿತಿಗಳ ನಡುವೆ, ಇಂದು ನಾವು ಪ್ರಪಂಚದಾದ್ಯಂತ ಮತ್ತೊಂದು ವಿಷಯವನ್ನು ಪ್ರಮುಖವಾಗಿ ಕೇಳುತ್ತಿದ್ದೇವೆ. ಭಾರತವು ಅತಿ ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ವಿಶ್ವದ ಎಲ್ಲ ತಜ್ಞರು ಹೇಳುತ್ತಿದ್ದಾರೆ ಮತ್ತು ಭಾರತವು ಆ ದಿಕ್ಕಿನಲ್ಲಿ ವೇಗವಾಗಿ ಚಲಿಸುತ್ತಿದೆ. 90ರ ದಶಕದ ನಂತರದ 30 ವರ್ಷಗಳಲ್ಲಿ ಆದ ಬೆಳವಣಿಗೆ ಇನ್ನು ಕೆಲವೇ ವರ್ಷಗಳಲ್ಲಿ ಆಗಲಿದೆ ಎಂದು ಎಲ್ಲ ತಜ್ಞರು ಕೂಡ ಹೇಳುತ್ತಿದ್ದಾರೆ. ಅಷ್ಟಕ್ಕೂ ಜಗತ್ತು ಮತ್ತು ಆರ್ಥಿಕ ಪಂಡಿತರು ಇಂದು ಭಾರತದ ಮೇಲೆ ಏಕೆ ಅಷ್ಟೊಂದು ನಂಬಿಕೆ ಇಟ್ಟಿದ್ದಾರೆ? ಕಳೆದ ಎಂಟು ವರ್ಷಗಳಲ್ಲಿ ಭಾರತದಲ್ಲಿ ಆಗಿರುವ ಬದಲಾವಣೆಗಳೇ ಇದಕ್ಕೆ ದೊಡ್ಡ ಕಾರಣ. ಕಳೆದ ಎಂಟು ವರ್ಷಗಳಲ್ಲಿ ದೇಶವು ಹಳೆಯ ಕಾರ್ಯ ವಿಧಾನಗಳನ್ನು ಬದಲಾಯಿಸಿದೆ. ಈ ಎಂಟು ವರ್ಷಗಳಲ್ಲಿ ಆಡಳಿತದ ಬಗೆಗಿನ ಚಿಂತನೆ ಹಾಗೂ ವಿಧಾನದಲ್ಲೂ ಬದಲಾವಣೆಯಾಗಿದೆ. ಅದು ಮೂಲಸೌಕರ್ಯ, ಸರ್ಕಾರಿ ಪ್ರಕ್ರಿಯೆಗಳು ಅಥವಾ ವ್ಯವಹಾರವನ್ನು ಸುಲಭಗೊಳಿಸುವುದು, ಈ ಬದಲಾವಣೆಗಳು ಭಾರತದ ಮಹತ್ವಾಕಾಂಕ್ಷೆಯ ಸೊಸೈಟಿಗೆ ಉತ್ತೇಜನ ನೀಡುತ್ತಿವೆ. ಅಭಿವೃದ್ಧಿ ಹೊಂದಲು ಹಂಬಲಿಸುವ ಮತ್ತು ಆತ್ಮಸ್ಥೈರ್ಯ ತುಂಬಿದ ನವ ಭಾರತ ಪ್ರಪಂಚದ ಮುಂದೆ ಇದೆ.

ಸಹೋದರ ಸಹೋದರಿಯರೇ,

ದೇಶದ ಅಭಿವೃದ್ಧಿಯು ನಮಗೆ 24 ಗಂಟೆ, 7 ದಿನ ಮತ್ತು 12 ತಿಂಗಳ ಧ್ಯೇಯವಾಗಿದೆ. ನಾವು ಒಂದು ಯೋಜನೆಯನ್ನು ಪ್ರಾರಂಭಿಸಿದಾಗ, ನಾವು ಏಕಕಾಲದಲ್ಲಿ ಅನೇಕ ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತೇವೆ. ಇದನ್ನು ನಾವು ಇಂದು ಇಲ್ಲಿಯೂ ಅನುಭವಿಸುತ್ತಿದ್ದೇವೆ. ಹಾಗೂ ಶಂಕುಸ್ಥಾಪನೆಯಾಗಿರುವ ಯೋಜನೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡಿ ತ್ವರಿತವಾಗಿ ಪೂರ್ಣಗೊಳಿಸಬೇಕೆಂಬುದು ನಮ್ಮ ಪ್ರಯತ್ನವಾಗಿದೆ. ರಾಮಗುಂಡಂನಲ್ಲಿರುವ ಈ ರಸಗೊಬ್ಬರ ಕಾರ್ಖಾನೆ ಅಂತಹ ಒಂದು ಉದಾಹರಣೆಯಾಗಿದೆ. 2016ರಲ್ಲಿ ಇದರ ಶಂಕುಸ್ಥಾಪನೆ ಮಾಡಲಾಗಿದ್ದು, ಇಂದು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ.

ಸಹೋದರ ಸಹೋದರಿಯರೇ,

21ನೇ ಶತಮಾನದ ಭಾರತವು ದೊಡ್ಡ ಗುರಿಗಳನ್ನು ಹೊಂದುವುದರ ಮೂಲಕ ಮತ್ತು ಅವುಗಳನ್ನು ವೇಗವಾಗಿ ಸಾಧಿಸುವ ಮೂಲಕ ಮಾತ್ರ ಮುನ್ನಡೆಯಲು ಸಾಧ್ಯ. ಮತ್ತು ಗುರಿಗಳು ದೊಡ್ಡದಾದಾಗ, ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಹೊಸ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬೇಕು. ಇಂದು ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಈ ಪ್ರಯತ್ನದಲ್ಲಿ ತೊಡಗಿದೆ. ಇದಕ್ಕೆ ದೇಶದ ರಸಗೊಬ್ಬರ ಕ್ಷೇತ್ರವೂ ಸಾಕ್ಷಿಯಾಗಿದೆ. ಕಳೆದ ಕೆಲವು ದಶಕಗಳಿಂದ ದೇಶವು ವಿದೇಶಗಳಿಂದ ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುವುದನ್ನು ನಾವು ನೋಡಿದ್ದೇವೆ. ಯೂರಿಯಾ ಬೇಡಿಕೆಯನ್ನು ಪೂರೈಸಲು ಸ್ಥಾಪಿಸಲಾದ ಕಾರ್ಖಾನೆಗಳು ಬಳಕೆಯಲ್ಲಿಲ್ಲದ ತಂತ್ರಜ್ಞಾನದಿಂದಾಗಿ ಮುಚ್ಚಲ್ಪಟ್ಟವು. ಮತ್ತು ಇದರಲ್ಲಿ ರಾಮಗುಂಡಂನಲ್ಲಿರುವ ರಸಗೊಬ್ಬರ ಕಾರ್ಖಾನೆಯೂ ಸೇರಿತ್ತು. ಇದರ ಹೊರತಾಗಿ ಮತ್ತೊಂದು ದೊಡ್ಡ ಸಮಸ್ಯೆ ಎದುರಾಗಿತ್ತು. ವಿದೇಶದಿಂದ ಆಮದಾಗುವ ದುಬಾರಿ ಯೂರಿಯಾ ರೈತರಿಗೆ ತಲುಪುವ ಬದಲು ಅಕ್ರಮ ಕಾರ್ಖಾನೆಗಳಿಗೆ ಗುಟ್ಟಾಗಿ ಹರಿದು ಹೋಗುತ್ತಿತ್ತು. ಇದರಿಂದ ರೈತರು ಯೂರಿಯಾಕ್ಕಾಗಿ ರಾತ್ರಿಯಿಡೀ ಸರತಿ ಸಾಲಿನಲ್ಲಿ ನಿಂತು ಕೆಲವೆಡೆ ಲಾಠಿ ಏಟುಗಳನ್ನು ತಿನ್ನಬೇಕಾಯಿತು. 2014ರ ಮೊದಲು ಪ್ರತಿ ವರ್ಷ, ಪ್ರತಿ ಋತುವಿನಲ್ಲೂ ರೈತರು ಇದೇ ಸಮಸ್ಯೆ ಎದುರಿಸುತ್ತಿದ್ದರು.

ಸ್ನೇಹಿತರೇ,

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಾಡಿದ ಮೊದಲ ಕೆಲಸವೆಂದರೆ 2014 ರ ನಂತರ ಯೂರಿಯಾಕ್ಕೆ 100 ಪ್ರತಿಶತ ಬೇವಿನ ಲೇಪನ. ಇದು ಯೂರಿಯಾದ ಕಾಳದಂಧೆಯನ್ನು ನಿಲ್ಲಿಸಿತು. ರಾಸಾಯನಿಕ ಕಾರ್ಖಾನೆಗಳಿಗೆ ಹೋಗುತ್ತಿದ್ದ ಯೂರಿಯಾ ಕೂಡ ನಿಂತು ಹೋಯಿತು. ಜಮೀನಿಗೆ ಎಷ್ಟು ಯೂರಿಯಾ ಹಾಕಬೇಕು ಎಂಬ ಪರಿಣತಿ ರೈತರಿಗೆ ಇರಲಿಲ್ಲ. ಆದ್ದರಿಂದ, ನಾವು ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ನೀಡಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಮಣ್ಣಿನ ಆರೋಗ್ಯ ಕಾರ್ಡ್ಗಳು ರೈತರಿಗೆ ಯೂರಿಯಾ ಬಳಕೆಯ ಬಗ್ಗೆ ತಿಳಿವಳಿಕೆಯುಳ್ಳ ಮತ್ತು ಇಳುವರಿಯನ್ನು ಹೆಚ್ಚಿಸಲು ಯೂರಿಯಾವನ್ನು ಅನಗತ್ಯವಾಗಿ ಬಳಸದಿರುವ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಿತು ಇದಲ್ಲದೆ, ಅವರು ಮಣ್ಣಿನ ಗುಣವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದರು.

ಸ್ನೇಹಿತರೇ,

ಯೂರಿಯಾದಲ್ಲಿ ಸ್ವಾವಲಂಬನೆಗೆ ಸಂಬಂಧಿಸಿದಂತೆ ನಾವು ಬೃಹತ್ ಕಾರ್ಯವನ್ನು ಪ್ರಾರಂಭಿಸಿದ್ದೇವೆ. ವರ್ಷಗಟ್ಟಲೆ ಮುಚ್ಚಿ ಹೋಗಿರುವ ದೇಶದ ಐದು ದೊಡ್ಡ ರಸಗೊಬ್ಬರ ಕಾರ್ಖಾನೆಗಳನ್ನು ಪುನರಾರಂಭಿಸುವುದು ಅಗತ್ಯವಾಗಿತ್ತು. ಈಗ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ರಸಗೊಬ್ಬರ ಉತ್ಪಾದನೆ ಆರಂಭವಾಗಿದೆ. ರಾಮಗುಂಡಂ ರಸಗೊಬ್ಬರ ಕಾರ್ಖಾನೆಯೂ ಉದ್ಘಾಟನೆಯಾಗಿದೆ.  ಈ ಐದು ಕಾರ್ಖಾನೆಗಳ ಕಾರ್ಯಾರಂಭದಿಂದಾಗಿ ದೇಶವು 60 ಲಕ್ಷ ಟನ್ ಯೂರಿಯಾವನ್ನು ಪಡೆಯಲು ಪ್ರಾರಂಭಿಸುತ್ತದೆ.  ಅಂದರೆ ಸಾವಿರಾರು ಕೋಟಿ ರೂಪಾಯಿ ವಿದೇಶಕ್ಕೆ ಹೋಗುವುದು ಉಳಿತಾಯವಾಗಲಿದ್ದು, ರೈತರಿಗೆ ಸುಲಭವಾಗಿ ಯೂರಿಯಾ ಸಿಗಲಿದೆ. ರಾಮಗುಂಡಂ ರಸಗೊಬ್ಬರ ಘಟಕವು ತೆಲಂಗಾಣ ಹಾಗೂ ಆಂಧ್ರಪ್ರದೇಶ, ಕರ್ನಾಟಕ, ಛತ್ತೀಸ್ಗಢ ಮತ್ತು ಮಹಾರಾಷ್ಟ್ರದ ರೈತರಿಗೆ ಸಹಾಯ ಮಾಡುತ್ತದೆ. ಈ ಕಾರ್ಖಾನೆಯನ್ನು ತೆರೆಯುವುದರೊಂದಿಗೆ, ಸ್ಥಳೀಯರಿಗೆ ಸುತ್ತಲೂ ಇತರ ವ್ಯಾಪಾರ ಅವಕಾಶಗಳನ್ನು ಸಹ ರಚಿಸಲಾಗುತ್ತದೆ ಮತ್ತು ಸಾರಿಗೆಗೆ ಸಂಬಂಧಿಸಿದ ಕೆಲಸಗಳು ಪ್ರಾರಂಭವಾಗುತ್ತವೆ. ಅಂದರೆ ಕೇಂದ್ರ ಸರ್ಕಾರ ಇಲ್ಲಿ ಹೂಡಿರುವ 6,000 ಕೋಟಿ ರೂಪಾಯಿ ತೆಲಂಗಾಣದ ಯುವಕರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ.

ಸಹೋದರ ಸಹೋದರಿಯರೇ,

ದೇಶದ ರಸಗೊಬ್ಬರ ಕ್ಷೇತ್ರವನ್ನು ಆಧುನೀಕರಿಸಲು ನಾವು ಹೊಸ ತಂತ್ರಜ್ಞಾನಕ್ಕೆ ಸಮಾನ ಒತ್ತು ನೀಡುತ್ತಿದ್ದೇವೆ. ಭಾರತವು ಯೂರಿಯಾದ ನ್ಯಾನೊತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಒಂದು ಚೀಲ ಯೂರಿಯಾದಿಂದ ಸಿಗುವ ಪ್ರಯೋಜನವು ಕೇವಲ ಒಂದು ಬಾಟಲ್ ನ್ಯಾನೋ ಯೂರಿಯಾಕ್ಕೆ ಸಮಾನವಾಗಿರುತ್ತದೆ.

ಸ್ನೇಹಿತರೇ,

ಪ್ರಸ್ತುತ ಜಾಗತಿಕ ಪರಿಸ್ಥಿತಿಯ ಸಂದರ್ಭದಲ್ಲಿ ರಸಗೊಬ್ಬರಗಳಲ್ಲಿ ಸ್ವಾವಲಂಬನೆಯ ಮಹತ್ವವನ್ನು ಕಾಣಬಹುದು. ಕೊರೊನಾ ಮತ್ತು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ  ಏಕಾಏಕಿ ಪ್ರಪಂಚದಾದ್ಯಂತ ರಸಗೊಬ್ಬರದ ಬೆಲೆಗಳು ಏರಿದವು. ಆದರೆ ರಸಗೊಬ್ಬರಗಳ ಬೆಲೆ ಏರಿಕೆಯನ್ನು ನಾವು ನಮ್ಮ ರೈತ ಸಹೋದರ ಸಹೋದರಿಯರಿಗೆ ಹೊರೆಯಾಗಿಸಲಿಲ್ಲ. ಕೇಂದ್ರ ಸರ್ಕಾರಕ್ಕೆ ಆಮದು ಮಾಡಿಕೊಳ್ಳುವ ಪ್ರತಿ ಚೀಲ ಯೂರಿಯಾದ ಬೆಲೆ 2,000 ರೂಪಾಯಿಗಳು. ಆದರೆ ಸರಕಾರವು ರೈತರಿಗೆ 2000 ರೂಪಾಯಿಗಳನ್ನು ತೆಗೆದುಕೊಳ್ಳುವುದಿಲ್ಲ. ಭಾರತ ಸರ್ಕಾರವು ಎಲ್ಲ ವೆಚ್ಚವನ್ನು ಭರಿಸುತ್ತದೆ, ರೈತನಿಗೆ ಈ ರಸಗೊಬ್ಬರ ಚೀಲ ಕೇವಲ 270 ರೂ.ಗೆ ಸಿಗುತ್ತದೆ. ಅದೇ ರೀತಿ ಒಂದು ಚೀಲ ಡಿಎಪಿ ಕೂಡ ಸರಕಾರಕ್ಕೆ ಸುಮಾರು 4 ಸಾವಿರ ರೂ. ಆದರೆ ರೈತರಿಂದ 4 ಸಾವಿರ ರೂಪಾಯಿ ತೆಗೆದುಕೊಳ್ಳುವುದಿಲ್ಲ. ಈ ಒಂದು ಚೀಲದ ಮೇಲೂ ಸರಕಾರ ಪ್ರತಿ ಚೀಲದ ಮೇಲೆ ಎರಡೂವರೆ ಸಾವಿರ ರೂಪಾಯಿಗೂ ಹೆಚ್ಚು ಸಹಾಯಧನ ನೀಡುತ್ತದೆ.

ಸ್ನೇಹಿತರೇ,

ಕಳೆದ ಎಂಟು ವರ್ಷಗಳಲ್ಲಿ ರೈತರಿಗೆ ಹೆಚ್ಚು ಹೊರೆಯಾಗದಂತೆ ಕಡಿಮೆ ಬೆಲೆಯಲ್ಲಿ ರಸಗೊಬ್ಬರಗಳನ್ನು ಒದಗಿಸಲು ಭಾರತ ಸರ್ಕಾರ ಸುಮಾರು 10 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಸ್ನೇಹಿತರೇ, ಈ ಸಂಖ್ಯೆಯನ್ನು ನೆನಪಿಟ್ಟುಕೊಳ್ಳಿ ಮತ್ತು ಅದನ್ನು ಇತರರಿಗೂ ತಿಳಿಸಿ. ಈ ವರ್ಷವೇ ರೈತರಿಗೆ ಅಗ್ಗದ ರಸಗೊಬ್ಬರ ನೀಡಲು ಕೇಂದ್ರ ಸರ್ಕಾರ 2.5 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಲಿದೆ. ಎರಡೂವರೆ ಲಕ್ಷ ಕೋಟಿ ರೂಪಾಯಿ! ಇದಲ್ಲದೆ, ನಮ್ಮ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಸುಮಾರು 2.25 ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ವರ್ಗಾಯಿಸಿದೆ. ದೆಹಲಿಯಲ್ಲಿ ರೈತರ ಹಿತಾಸಕ್ತಿಗಳನ್ನು ಪ್ರಧಾನವಾಗಿಡುವ ಸರ್ಕಾರವಿದ್ದಾಗ, ಅದು ಅಂತಹ ಅನೇಕ ಯೋಜನೆಗಳನ್ನು ಮುಂದಕ್ಕೆ ತೆಗೆದುಕೊಂಡು ರೈತರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುತ್ತದೆ.

ಸ್ನೇಹಿತರೇ,

ದಶಕಗಳಿಂದ, ನಮ್ಮ ದೇಶದ ರೈತರು ರಸಗೊಬ್ಬರಕ್ಕೆ ಸಂಬಂಧಿಸಿದ ಮತ್ತೊಂದು ಸಮಸ್ಯೆಯೊಂದಿಗೆ ಹೋರಾಡುತ್ತಿದ್ದರು. ಇಂತಹ ರಸಗೊಬ್ಬರ ಮಾರುಕಟ್ಟೆಯು ದಶಕಗಳಿಂದ ಅಭಿವೃದ್ಧಿ ಹೊಂದಿದ್ದು, ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮತ್ತು ಬ್ರಾಂಡ್ಗಳ ರಸಗೊಬ್ಬರಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ರೈತರು ಮೋಸ ಹೋಗುತ್ತಿದ್ದರು. ಇದೀಗ ಕೇಂದ್ರ ಸರ್ಕಾರ ಕೂಡ ಈ ನಿಟ್ಟಿನಲ್ಲಿ ರೈತರಿಗೆ ಪರಿಹಾರ ನೀಡಲು ಮುಂದಾಗಿದೆ. ಈಗ ದೇಶದಲ್ಲಿ ಒಂದೇ ಬ್ರಾಂಡ್ ಯೂರಿಯಾ ಇರಲಿದೆ ಮತ್ತು ಅದು ‘ಭಾರತ್ ಯೂರಿಯಾ’. ಅದರ ಬೆಲೆ ಹಾಗೂ ಗುಣಮಟ್ಟವನ್ನು ಕೂಡ ನಿರ್ಧರಿಸಲಾಗಿದೆ. ಈ ಎಲ್ಲ ಪ್ರಯತ್ನಗಳು ನಾವು ದೇಶದ ರೈತರಿಗೆ, ವಿಶೇಷವಾಗಿ ಸಣ್ಣ ರೈತರಿಗೆ ವ್ಯವಸ್ಥೆಯನ್ನು ಹೇಗೆ ಸುಧಾರಿಸುತ್ತಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಸ್ನೇಹಿತರೇ,

ನಮ್ಮ ದೇಶದಲ್ಲಿ ಸಂಪರ್ಕದ ಮೂಲಸೌಕರ್ಯ ಮತ್ತೊಂದು ಸವಾಲಾಗಿದೆ. ಇಂದು ದೇಶವೂ ಈ ವಿಚಾರದ ಬಗ್ಗೆ ಕಾಳಜಿ ವಹಿಸುತ್ತಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಹೆದ್ದಾರಿಗಳು, ಆಧುನಿಕ ರೈಲುಗಳು, ವಿಮಾನ ನಿಲ್ದಾಣಗಳು, ಜಲಮಾರ್ಗಗಳು ಮತ್ತು ಇಂಟರ್ನೆಟ್ ಹೆದ್ದಾರಿಗಳ ತ್ವರಿತ ಕೆಲಸ ಪ್ರಗತಿಯಲ್ಲಿದೆ. ಈಗ ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಹಾಯೋಜನೆಯಿಂದ ಹೊಸ ಶಕ್ತಿ ಪಡೆಯುತ್ತಿದೆ. ಹಿಂದೆ ಏನಾಯಿತು ಎಂದು ನಿಮಗೆ ನೆನಪಿದೆಯೇ? ಕೈಗಾರಿಕೆಗಳಿಗೆ ವಿಶೇಷ ವಲಯಗಳನ್ನು ಘೋಷಿಸಲಾಯಿತು. ಆದರೆ ಅಲ್ಲಿಗೆ ರಸ್ತೆ, ವಿದ್ಯುತ್, ನೀರು ಮುಂತಾದ ಮೂಲ ಸೌಕರ್ಯಗಳು ತಲುಪಲು ಹಲವು ವರ್ಷಗಳೇ ಹಿಡಿಯುತ್ತಿತ್ತು. ನಾವು ಈಗ ಈ ಕೆಲಸದ ಶೈಲಿಯನ್ನು ಬದಲಾಯಿಸುತ್ತಿದ್ದೇವೆ. ಈಗ ಯೋಜನೆಯಲ್ಲಿ ಒಳಗೊಂಡಿರುವ ಎಲ್ಲ ಮಧ್ಯಸ್ಥಗಾರರು ಮತ್ತು ಏಜೆನ್ಸಿಗಳು ಮೂಲಸೌಕರ್ಯ ಯೋಜನೆಗಳ ಮೇಲೆ ವ್ಯಾಖ್ಯಾನಿಸಲಾದ ಕಾರ್ಯತಂತ್ರದಲ್ಲಿ ಒಟ್ಟಾಗಿ ಕೆಲಸ ಮಾಡುತ್ತವೆ. ಇದರಿಂದ ಯೋಜನೆಗಳಲ್ಲಿ ಅನಗತ್ಯ ವಿಳಂಬವಾಗುವ ಸಾಧ್ಯತೆಯೂ  ಇಲ್ಲವಾಗುತ್ತಿದೆ.

ಸ್ನೇಹಿತರೇ,

ಭದ್ರಾದ್ರಿ ಕೊತಗುಡೆಂ ಮತ್ತು ಖಮ್ಮಂ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ನೂತನ ರೈಲು ಮಾರ್ಗ ಇಂದು ನಿಮ್ಮ ಸೇವೆಗೆ ಸಮರ್ಪಿತವಾಗಿದೆ. ಈ ರೈಲು ಮಾರ್ಗವು ಇಲ್ಲಿನ ಸ್ಥಳೀಯ ಜನರಿಗೆ ಮಾತ್ರವಲ್ಲದೆ ಇಡೀ ತೆಲಂಗಾಣಕ್ಕೆ ಅನುಕೂಲವಾಗಲಿದೆ. ಇದು ತೆಲಂಗಾಣದ ವಿದ್ಯುತ್ ವಲಯ ಮತ್ತು ಕೈಗಾರಿಕೆಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಕಳೆದ ನಾಲ್ಕು ವರ್ಷಗಳ ಸತತ ಪ್ರಯತ್ನದಿಂದ ಈ ರೈಲು ಮಾರ್ಗ ಸಿದ್ಧವಾಗಿದ್ದು, ವಿದ್ಯುದ್ದೀಕರಣವೂ ನಡೆದಿದೆ. ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲಿನ ಸಾಗಣೆ ವೆಚ್ಚದಲ್ಲಿ ಕಡಿತ ಮತ್ತು ಮಾಲಿನ್ಯವೂ ಕಡಿಮೆಯಾಗುತ್ತದೆ.

ಸ್ನೇಹಿತರೇ,

ಇಂದು, ಮೂರು ಹೆದ್ದಾರಿಗಳ ಅಗಲೀಕರಣವು ಕಲ್ಲಿದ್ದಲು ಬೆಲ್ಟ್, ಕೈಗಾರಿಕಾ ವಲಯ ಮತ್ತು ಕಬ್ಬು ರೈತರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ. ಇಲ್ಲಿ ನಮ್ಮ ರೈತ ಬಂಧುಗಳು ಅರಿಶಿನ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ನಿರತರಾಗಿದ್ದಾರೆ. ಕಬ್ಬಿನ ರೈತರಾಗಲಿ ಅಥವಾ ಅರಿಶಿನ ಬೆಳೆಗಾರರಾಗಲಿ ಈಗ ಅವರ ಉತ್ಪನ್ನಗಳನ್ನು ಸಾಗಿಸಲು ಸುಲಭವಾಗುತ್ತದೆ. ಅದೇ ರೀತಿ ಕಲ್ಲಿದ್ದಲು ಗಣಿ ಮತ್ತು ವಿದ್ಯುತ್ ಸ್ಥಾವರಗಳ ನಡುವಿನ ರಸ್ತೆ ಅಗಲೀಕರಣದಿಂದ ಅನುಕೂಲವಾಗಲಿದ್ದು, ತಗಲುವ ಸಮಯ ಕಡಿಮೆಯಾಗಲಿದೆ. ಹೈದರಾಬಾದ್-ವಾರಂಗಲ್ ಇಂಡಸ್ಟ್ರಿಯಲ್ ಕಾರಿಡಾರ್ ಮತ್ತು ಕಾಕತೀಯ ಮೆಗಾ ಟೆಕ್ಸ್ಟೈಲ್ ಪಾರ್ಕ್ಗೆ ಸಂಪರ್ಕವೂ ಸುಧಾರಿಸುತ್ತದೆ.

ಸ್ನೇಹಿತರೇ,
ದೇಶದಲ್ಲಿ ಕ್ಷಿಪ್ರ ಅಭಿವೃದ್ಧಿ ಆದಾಗ ಕೆಲವರು ವಿಕೃತ ಮನಸ್ಸಿನವರು ಮತ್ತು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಜನರನ್ನು ಪ್ರಚೋದಿಸಲು ವದಂತಿಗಳನ್ನು ಹರಡಲು ಪ್ರಾರಂಭಿಸುತ್ತಾರೆ. ತೆಲಂಗಾಣದಲ್ಲಿ ಇತ್ತೀಚಿನ ದಿನಗಳಲ್ಲಿ 'ಸಿಂಗರೇಣಿ ಕಾಲೀರೀಸ್ ಕಂಪನಿ ಲಿಮಿಟೆಡ್-ಎಸ್ಸಿಸಿಎಲ್' ಮತ್ತು ವಿವಿಧ ಕಲ್ಲಿದ್ದಲು ಗಣಿಗಳ ಬಗ್ಗೆ ಇದೇ ರೀತಿಯ ವದಂತಿಗಳು ಹರಡುತ್ತಿವೆ. ಮತ್ತು ಅದಕ್ಕೆ ಹೊಸ ಬಣ್ಣಗಳನ್ನು ಕೊಟ್ಟು ಹೈದರಾಬಾದಿನಿಂದ ಪ್ರಚೋದಿಸಲಾಗುತ್ತಿದೆ ಎಂದು ಕೇಳಿದ್ದೇನೆ. ಈಗ ನಾನು ನಿಮ್ಮ ನಡುವೆ ಇದ್ದೇನೆ, ನಾನು ನಿಮ್ಮೊಂದಿಗೆ ಕೆಲವು ಸಂಗತಿಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಈ ವದಂತಿ ಹಬ್ಬಿಸುವವರಿಗೆ ತಮ್ಮ ಸುಳ್ಳುಗಳು ಬಯಲಾಗುತ್ತವೆ ಎಂಬುದೇ ಗೊತ್ತಿಲ್ಲ. ದೊಡ್ಡ ಸುಳ್ಳನ್ನು ಅರ್ಥಮಾಡಿಕೊಳ್ಳಿ ಮತ್ತು ಇಲ್ಲಿ ಕುಳಿತಿರುವ ಪತ್ರಕರ್ತ ಮಿತ್ರರು ಅದನ್ನು ಸೂಕ್ಷ್ಮವಾಗಿ ಗಮನಿಸಬೇಕು. ತೆಲಂಗಾಣ ರಾಜ್ಯ ಸರ್ಕಾರವು ಎಸ್ಸಿಸಿಎಲ್ನಲ್ಲಿ ಶೇ.51ರಷ್ಟು ಪಾಲನ್ನು ಹೊಂದಿದ್ದರೆ, ಭಾರತ ಸರ್ಕಾರವು ಕೇವಲ ಶೇ.49ರಷ್ಟು ಪಾಲನ್ನು ಹೊಂದಿದೆ. ಎಸ್ಸಿಸಿಎಲ್ನ ಖಾಸಗೀಕರಣದ ಬಗ್ಗೆ ಕೇಂದ್ರ ಸರ್ಕಾರವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ ಶೇ.51ರಷ್ಟು ಪಾಲು ರಾಜ್ಯ ಸರ್ಕಾರದಲ್ಲಿದೆ. ಎಸ್ಸಿಸಿಎಲ್ನ ಖಾಸಗೀಕರಣದ ಯಾವುದೇ ಪ್ರಸ್ತಾವನೆಯು ಕೇಂದ್ರ ಸರ್ಕಾರದೊಂದಿಗೆ ಪರಿಗಣನೆಯಲ್ಲಿಲ್ಲ ಅಥವಾ ಕೇಂದ್ರ ಸರ್ಕಾರವು ಅಂತಹ ಉದ್ದೇಶವನ್ನು ಹೊಂದಿಲ್ಲ ಎಂದು ನಾನು ಪುನರುಚ್ಚರಿಸುತ್ತೇನೆ. ಹಾಗಾಗಿ ಇಂತಹ ವದಂತಿಗಳಿಗೆ ಕಿವಿಗೊಡಬೇಡಿ ಎಂದು ನನ್ನ ಸಹೋದರ ಸಹೋದರಿಯರಿಗೆ ಮನವಿ ಮಾಡುತ್ತೇನೆ. ಈ ಸುಳ್ಳಿನ ವ್ಯಾಪಾರಿಗಳು ಹೈದರಾಬಾದ್ನಲ್ಲಿಯೇ ಇರಲಿ.

ಸ್ನೇಹಿತರೇ,
ಕಲ್ಲಿದ್ದಲು ಗಣಿಗಳಿಗೆ ಸಂಬಂಧಿಸಿದಂತೆ ದೇಶದಲ್ಲಿ ಸಾವಿರಾರು ಕೋಟಿ ರೂಪಾಯಿ ಹಗರಣಗಳನ್ನು ನೋಡಿದ್ದೇವೆ. ದೇಶ ಹಾಗೂ ಕಾರ್ಮಿಕರು, ಬಡವರು ಮತ್ತು ಈ ಗಣಿಗಳು ಇರುವ ಪ್ರದೇಶಗಳು ಈ ಹಗರಣಗಳಿಂದ ನಷ್ಟವನ್ನು ಅನುಭವಿಸಿದವು. ಇಂದು ದೇಶದಲ್ಲಿ ಹೆಚ್ಚುತ್ತಿರುವ ಕಲ್ಲಿದ್ದಲು ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ಪಾರದರ್ಶಕತೆಯೊಂದಿಗೆ ಕಲ್ಲಿದ್ದಲು ಗಣಿಗಳನ್ನು ಹರಾಜು ಮಾಡಲಾಗುತ್ತಿದೆ. ಖನಿಜಗಳ ಗಣಿಗಾರಿಕೆ ಮಾಡುವ ಪ್ರದೇಶದಲ್ಲಿ ವಾಸಿಸುವ ಜನರಿಗೆ ಪ್ರಯೋಜನಗಳನ್ನು ನೀಡಲು ನಮ್ಮ ಸರ್ಕಾರವು ಡಿಎಂಎಫ್ ಅಂದರೆ ಜಿಲ್ಲಾ ಖನಿಜ ನಿಧಿಯನ್ನು ಸಹ ರಚಿಸಿದೆ. ಈ ನಿಧಿಯಡಿ ರಾಜ್ಯಗಳಿಗೆ ಸಾವಿರಾರು ಕೋಟಿ ರೂಪಾಯಿ ಬಿಡುಗಡೆಯಾಗಿದೆ.

ಸಹೋದರ ಸಹೋದರಿಯರೇ,

'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್' ಮಂತ್ರವನ್ನು ಅನುಸರಿಸುವ ಮೂಲಕ ನಾವು ತೆಲಂಗಾಣವನ್ನು ಮುಂದಕ್ಕೆ ಕೊಂಡೊಯ್ಯಲು ಬಯಸುತ್ತೇವೆ. ತೆಲಂಗಾಣದ ತ್ವರಿತ ಅಭಿವೃದ್ಧಿಗಾಗಿ ನಿಮ್ಮ ಆಶೀರ್ವಾದವನ್ನು ಮುಂದುವರಿಸುತ್ತೀರಿ ಎಂಬ ಈ ನಂಬಿಕೆಯೊಂದಿಗೆ, ಹಲವಾರು ಅಭಿವೃದ್ಧಿ ಕಾರ್ಯಗಳಿಗಾಗಿ ಮತ್ತೊಮ್ಮೆ ನಿಮಗೆ ಅಭಿನಂದನೆಗಳು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ ನನ್ನ ರೈತ ಬಂಧುಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇಂದು ಹೈದರಾಬಾದ್ನಲ್ಲಿ ಕೆಲವರಿಗೆ ನಿದ್ದೆ ಬರುವುದಿಲ್ಲ. ಧನ್ಯವಾದಗಳು.

ನನ್ನೊಂದಿಗೆ ಹೇಳಿ ಭಾರತ್ ಮಾತಾ ಕಿ - ಜೈ. ನಿಮ್ಮ ಮುಷ್ಟಿಯನ್ನು ಬಿಗಿಗೊಳಿಸಿ ಮತ್ತು ಪೂರ್ಣ ಬಲದಿಂದ ಹೇಳಿರಿ:

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
5 Days, 31 World Leaders & 31 Bilaterals: Decoding PM Modi's Diplomatic Blitzkrieg

Media Coverage

5 Days, 31 World Leaders & 31 Bilaterals: Decoding PM Modi's Diplomatic Blitzkrieg
NM on the go

Nm on the go

Always be the first to hear from the PM. Get the App Now!
...
Prime Minister urges the Indian Diaspora to participate in Bharat Ko Janiye Quiz
November 23, 2024

The Prime Minister Shri Narendra Modi today urged the Indian Diaspora and friends from other countries to participate in Bharat Ko Janiye (Know India) Quiz. He remarked that the quiz deepens the connect between India and its diaspora worldwide and was also a wonderful way to rediscover our rich heritage and vibrant culture.

He posted a message on X:

“Strengthening the bond with our diaspora!

Urge Indian community abroad and friends from other countries  to take part in the #BharatKoJaniye Quiz!

bkjquiz.com

This quiz deepens the connect between India and its diaspora worldwide. It’s also a wonderful way to rediscover our rich heritage and vibrant culture.

The winners will get an opportunity to experience the wonders of #IncredibleIndia.”