PM launches National Portal for Credit Linked Government schemes - Jan Samarth Portal
“This is a moment to infuse the dreams of our freedom fighters with new energy and dedicate ourselves to new pledges”
“Increased public participation has given impetus to the development of the country and empowered the poorest”
“We are witnessing a new confidence among the citizens to come out of the mentality of deprivation and dream big”
“21st century India is moving ahead with the approach of people-centric governance”
“When we move with the power of reform, simplification and ease, we attain a new level of convenience”
“World is looking at us with hope and confidence as a capable, game changing, creative, innovative ecosystem”
“We have trusted the wisdom of the common Indian. We encouraged the public as intelligent participants in Growth”

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಜೀ, ಶ್ರೀ ರಾವ್‌ ಇಂದ್ರಜಿತ್‌ ಸಿಂಗ್‌, ಪಂಕಜ್‌ ಚೌಧರಿ ಜೀ, ಶ್ರೀ ಭಾಗವತ್‌ ಕೃಷ್ಣರಾವ್‌ ಕರಾದ್‌ ಜೀ, ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!

ವರ್ಷಗಳಲ್ಲಿ, ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯವು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮದೇ ಆದ ಪರಂಪರೆಯನ್ನು ಸೃಷ್ಟಿಸುತ್ತಾ ಬಹಳ ದೂರ ಸಾಗಿವೆ. ನೀವೆಲ್ಲರೂ ಈ ಪರಂಪರೆಯ ಭಾಗವಾಗಿದ್ದೀರಿ. ಕಳೆದ 75 ವರ್ಷಗಳಲ್ಲಿಅನೇಕ ಸಹೋದ್ಯೋಗಿಗಳು ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸಲು ಅಥವಾ ದೇಶದ ಆರ್ಥಿಕತೆಯನ್ನು ಬಲಪಡಿಸಲು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ.

ಈ ಅಪ್ರತಿಮ  ಸಪ್ತಾಹವು ಅಂತಹ ಪ್ರತಿಯೊಬ್ಬ ಸಹೋದ್ಯೋಗಿಗೆ ಗತಕಾಲದ ಅಂತಹ ಪ್ರತಿಯೊಂದು ಪ್ರಯತ್ನವನ್ನು ಜೀವಂತಗೊಳಿಸಲು ಒಂದು ಅವಕಾಶವಾಗಿದೆ. ಸ್ವಾತಂತ್ರ್ಯದ ‘ಅಮೃತ ಕಾಲ’ದ ಸಮಯದಲ್ಲಿ ಗತಕಾಲದಿಂದ ಸೂಧರ್ತಿ ಪಡೆದು ನಮ್ಮ ಪ್ರಯತ್ನಗಳನ್ನು ಸುಧಾರಿಸಲು ಸಾಧ್ಯವಾದರೆ ಇದು ಬಹಳ ಉತ್ತಮ ಹೆಜ್ಜೆಯಾಗಿದೆ. ಇಂದು, ರೂಪಾಯಿಯ ಭವ್ಯ ಪ್ರಯಾಣವನ್ನು ಸಹ ಇಲ್ಲಿ ತೋರಿಸಲಾಯಿತು, ಈ ಪ್ರಯಾಣದ ಬಗ್ಗೆ ತಿಳಿದಿರುವ ಡಿಜಿಟಲ್‌ ಪ್ರದರ್ಶನವೂ ಪ್ರಾರಂಭವಾಯಿತು, ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಮೀಸಲಾದ ಹೊಸ ನಾಣ್ಯಗಳನ್ನು ಸಹ ಬಿಡುಗಡೆ ಮಾಡಲಾಯಿತು.

ಈ ಹೊಸ ನಾಣ್ಯಗಳು ‘ಅಮೃತ್‌ ಕಾಲ್‌’ ನ ಗುರಿಗಳ ಬಗ್ಗೆ ದೇಶದ ಜನರಿಗೆ ನಿರಂತರವಾಗಿ ನೆನಪಿಸುತ್ತವೆ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಅವರನ್ನು ಪ್ರೇರೇಪಿಸುತ್ತವೆ. ಮುಂದಿನ ಒಂದು ವಾರದಲ್ಲಿ ನಿಮ್ಮ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಈ ಸದ್ಗುಣಪೂರ್ಣ ಕಾರ್ಯದಲ್ಲಿತೊಡಗಿರುವ ಎಲ್ಲಾ ಇಲಾಖೆಗಳು ಮತ್ತು ಘಟಕಗಳಿಗೆ ನಾನು ನನ್ನ ಶುಭ ಹಾರೈಕೆಗಳನ್ನು ತಿಳಿಸುತ್ತೇನೆ.

ಸ್ನೇಹಿತರೇ,
ಸ್ವಾತಂತ್ರ್ಯದ ಈ ಅಮೃತ ಮಹೋತ್ಸವವು ಕೇವಲ 75 ವರ್ಷಗಳ ಆಚರಣೆಯಲ್ಲ, ಆದರೆ ಸ್ವಾತಂತ್ರ್ಯಕ್ಕಾಗಿ ಸುದೀರ್ಘ ಹೋರಾಟದಲ್ಲಿ ಭಾಗವಹಿಸಿದ ಸ್ವತಂತ್ರ ಭಾರತಕ್ಕಾಗಿ ನಮ್ಮ ಸ್ವಾತಂತ್ರ್ಯದ ವೀರರ ಕನಸುಗಳಿಗೆ ಹೊಸ ಸಾಮರ್ಥ್ಯ‌ವನ್ನು ತುಂಬುವ, ಆಚರಿಸುವ, ಈಡೇರಿಸುವ ಮತ್ತು ಹೊಸ ಸಾಮರ್ಥ್ಯ‌ವನ್ನು ತುಂಬುವ ಕಾರ್ಯಕ್ರಮವಾಗಿದೆ. ಈ ಚಳವಳಿಗೆ ವಿಭಿನ್ನ ಆಯಾಮವನ್ನು ಸೇರಿಸಿ ಅದರ ಶಕ್ತಿಯನ್ನು ತೀವ್ರಗೊಳಿಸಿತು. ಇದು ಹೊಸ ನಿರ್ಣಯಗಳೊಂದಿಗೆ ಮುಂದುವರಿಯುವ ಸಮಯ.

ಕೆಲವರು ಸತ್ಯಾಗ್ರಹದ ಮಾರ್ಗವನ್ನು ಅಳವಡಿಸಿಕೊಂಡರೆ, ಕೆಲವರು ಸಶಸ್ತ್ರ ಹೋರಾಟದ ಮಾರ್ಗವನ್ನು ಆರಿಸಿಕೊಂಡರು. ಕೆಲವರು ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಮಾರ್ಗವನ್ನು ಆರಿಸಿಕೊಂಡರೆ, ಕೆಲವರು ತಮ್ಮ ಲೇಖನಿಯ ಶಕ್ತಿಯನ್ನು ಬೌದ್ಧಿಕವಾಗಿ ಸ್ವಾತಂತ್ರ್ಯದ ಜ್ವಾಲೆಯನ್ನು ಜಾಗೃತಗೊಳಿಸಲು ಬಳಸಿದರು. ನ್ಯಾಯಾಲಯದ ಮೊಕದ್ದಮೆಗಳ ವಿರುದ್ಧ ಹೋರಾಡುವ ಮೂಲಕ ದೇಶದ ಸ್ವಾತಂತ್ರ್ಯಕ್ಕೆ ಶಕ್ತಿ ತುಂಬಲು ಯಾರೋ ಪ್ರಯತ್ನಿಸಿದರು. ನಾವು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ, ರಾಷ್ಟ್ರದ ಅಭಿವೃದ್ಧಿಯಲ್ಲಿತನ್ನದೇ ಆದ ಮಟ್ಟದಲ್ಲಿವಿಶೇಷ ಕೊಡುಗೆ ನೀಡುವುದು ಪ್ರತಿಯೊಬ್ಬ ದೇಶವಾಸಿಯ ಕರ್ತವ್ಯವಾಗಿದೆ.

ಒಂದು ರಾಷ್ಟ್ರವಾಗಿ, ಭಾರತವು ನಿರಂತರವಾಗಿ ವಿವಿಧ ಹಂತಗಳಲ್ಲಿಹೊಸ ಹೆಜ್ಜೆಗಳನ್ನು ಇಟ್ಟಿದೆ ಮತ್ತು ಕಳೆದ ಎಂಟು ವರ್ಷಗಳಲ್ಲಿಹೊಸ ಕೆಲಸಗಳನ್ನು ಮಾಡಲು ಪ್ರಯತ್ನಿಸಿದೆ. ಈ ಅವಧಿಯಲ್ಲಿಸಾರ್ವಜನಿಕ ಪಾಲ್ಗೊಳ್ಳುವಿಕೆಯು ದೇಶದ ಅಭಿವೃದ್ಧಿಗೆ ಉತ್ತೇಜನವನ್ನು ನೀಡಿದೆ, ದೇಶದ ಬಡ ನಾಗರಿಕರಲ್ಲಿಕಡುಬಡವರನ್ನು ಸಶಕ್ತಗೊಳಿಸಿದೆ.
ಸ್ವಚ್ಛ ಭಾರತ ಅಭಿಯಾನವು ಬಡವರಿಗೆ ಘನತೆಯಿಂದ ಬದುಕಲು ಅವಕಾಶ ನೀಡಿತು. ಪಕ್ಕಾ ಮನೆ, ವಿದ್ಯುತ್‌, ಅನಿಲ, ನೀರು ಮತ್ತು ಉಚಿತ ಚಿಕಿತ್ಸೆಯಂತಹ ಸೌಲಭ್ಯಗಳನ್ನು ಹೆಚ್ಚಿಸುವುದಲ್ಲದೆ, ನಮ್ಮ ಬಡವರ ಘನತೆಯನ್ನು ಸುಧಾರಿಸಿದವು ಮತ್ತು ನಮ್ಮ ನಾಗರಿಕರ ಆತ್ಮ ವಿಶ್ವಾಸದಲ್ಲಿಹೊಸ ಶಕ್ತಿಯನ್ನು ತುಂಬಿತು.

ಉಚಿತ ಪಡಿತರ ಯೋಜನೆಯು ಕೊರೊನಾ ಅವಧಿಯಲ್ಲಿ80 ಕೋಟಿಗೂ ಹೆಚ್ಚು ದೇಶವಾಸಿಗಳ ಹಸಿವಿನ ಭಯವನ್ನು ಕಡಿಮೆ ಮಾಡಿತು. ಔಪಚಾರಿಕ ವ್ಯವಸ್ಥೆಯಿಂದ ವಂಚಿತರಾದ ಮತ್ತು ದೇಶದ ಅಭಿವೃದ್ಧಿಯಿಂದ ಹೊರಗುಳಿದಿದ್ದ ದೇಶದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರನ್ನು ನಾವು ಮಿಷನ್‌ ಮೋಡ್‌ನಲ್ಲಿ ಸೇರಿಸಿದ್ದೇವೆ. ಆರ್ಥಿಕ ಒಳಗೊಳ್ಳುವಿಕೆಯ ಇಂತಹ ಮಹಾನ್‌ ಕೆಲಸವು ಇಷ್ಟು ಕಡಿಮೆ ಸಮಯದಲ್ಲಿಪ್ರಪಂಚದಲ್ಲಿಎಲ್ಲಿಯೂ ಸಂಭವಿಸಿಲ್ಲ. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ತಮ್ಮ ಕನಸುಗಳನ್ನು ನನಸಾಗಿಸಲು ದೇಶದ ಜನರಲ್ಲಿಹೊಸ ಧೈರ್ಯವನ್ನು ನಾವು ನೋಡಿದ್ದೇವೆ.

ಸ್ನೇಹಿತರೇ,
ಜನಕೇಂದ್ರಿತ ಆಡಳಿತ ಮತ್ತು ಉತ್ತಮ ಆಡಳಿತವು ಸ್ವಾತಂತ್ರ್ಯದ ಏಳು ದಶಕಗಳ ನಂತರ ಬಂದಂತಹ ದೊಡ್ಡ ಬದಲಾವಣೆಯ ಕೇಂದ್ರಬಿಂದುವಾಗಿದೆ. ನಮ್ಮ ದೇಶದಲ್ಲಿನ ನೀತಿಗಳು ಮತ್ತು ನಿರ್ಧಾರಗಳು ಸರ್ಕಾರ ಕೇಂದ್ರಿತವಾಗಿದ್ದ ಕಾಲವೊಂದಿತ್ತು. ಯಾವುದೇ ಯೋಜನೆಯ ಲಾಭವನ್ನು ಪಡೆಯಲು ಸರ್ಕಾರವನ್ನು ತಲುಪುವುದು ಜನರ ಜವಾಬ್ದಾರಿಯಾಗಿತ್ತು. ಅಂತಹ ವ್ಯವಸ್ಥೆಯಲ್ಲಿ, ಸರ್ಕಾರ ಮತ್ತು ಆಡಳಿತದ ಜವಾಬ್ದಾರಿಯು ಕ್ಷೀಣಿಸಿತು. ಈ ಹಿಂದೆ ಶಿಕ್ಷ ಣಕ್ಕಾಗಿ ಹಣಕಾಸಿನ ಸಹಾಯದ ಅಗತ್ಯವಿರುವ ಬಡ ವಿದ್ಯಾರ್ಥಿಯು ತನ್ನ ಕುಟುಂಬ, ಸಂಬಂಧಿಕರು ಅಥವಾ ಸ್ನೇಹಿತರಿಂದ ಸಹಾಯವನ್ನು ಪಡೆಯಬೇಕಾಯಿತು. ಸರ್ಕಾರದ ಯೋಜನೆಗಳಲ್ಲಿಅದೆಷ್ಟು ಪ್ರಕ್ರಿಯೆಗಳು ಒಳಗೂಡಿದ್ದವು ಎಂದರೆ, ಆ ಸಹಾಯವನ್ನು ಪಡೆಯುವುದು ಅವನಿಗೆ ಕಷ್ಟಕರ ಮತ್ತು ದಣಿವನ್ನುಂಟುಮಾಡುತ್ತದೆ.

ಅಂತೆಯೇ, ಒಬ್ಬ ಉದ್ಯಮಿ ಅಥವಾ ಉದ್ಯಮಿಗೆ ಸಾಲದ ಅಗತ್ಯವಿದ್ದರೆ, ಅವರು ಸಹ ಅನೇಕ ಇಲಾಖೆಗಳನ್ನು ಸುತ್ತಬೇಕಾಗಿತ್ತು ಮತ್ತು ಅನೇಕ ಕಾರ್ಯವಿಧಾನಗಳ ಮೂಲಕ ಹೋಗಬೇಕಾಗಿತ್ತು. ಆಗಾಗ್ಗೆ, ಅಪೂರ್ಣ ಮಾಹಿತಿಯಿಂದಾಗಿ ಅವರು ಸಚಿವಾಲಯದ ವೆಬ್‌ಸೈಟ್‌ಅನ್ನು ಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಸಂದರ್ಭಗಳಲ್ಲಿ, ಅದು ವಿದ್ಯಾರ್ಥಿಯಾಗಿರಲಿ ಅಥವಾ ವ್ಯಾಪಾರಿಯಾಗಿರಲಿ, ಅವರು ತನ್ನ ಕನಸುಗಳನ್ನು ಮಧ್ಯದಲ್ಲಿ ಬಿಟ್ಟುಬಿಡುತ್ತಿದ್ದರು ಮತ್ತು ಅವುಗಳನ್ನು ಸಾಕಾರಗೊಳಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ.

ಈ ಹಿಂದೆ ಸರ್ಕಾರ ಕೇಂದ್ರಿತ ಆಡಳಿತದ ಭಾರವನ್ನು ದೇಶವು ಹೊತ್ತುಕೊಂಡಿದೆ. ಆದರೆ ಇಂದು 21 ನೇ ಶತಮಾನದ ಭಾರತವು ಜನ-ಕೇಂದ್ರಿತ ಆಡಳಿತದ ವಿಧಾನದೊಂದಿಗೆ ಮುಂದೆ ಸಾಗಿದೆ. ಜನರು ನಮ್ಮನ್ನು ತಮ್ಮ ಸೇವೆಗಾಗಿ ಇಲ್ಲಿಗೆ ಕಳುಹಿಸಿದ್ದಾರೆ. ಆದ್ದರಿಂದ, ನಾವು ಸಾರ್ವಜನಿಕರನ್ನು ತಲುಪುವುದು, ಪ್ರತಿಯೊಬ್ಬ ಅರ್ಹ ವ್ಯಕ್ತಿಯನ್ನು ತಲುಪುವುದು ಮತ್ತು ಅವರಿಗೆ ಸಂಪೂರ್ಣ ಪ್ರಯೋಜನಗಳನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆ ಮತ್ತು ಜವಾಬ್ದಾರಿಯಾಗಿದೆ.

ವಿವಿಧ ಸಚಿವಾಲಯಗಳ ವಿವಿಧ ವೆಬ್‌ಸೈಟ್‌ಗಳ ಮೂಲಕ ಹೋಗುವ ಬದಲು, ಅವರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತ ಸರ್ಕಾರದ ಒಂದು ಪೋರ್ಟಲ್‌ಗೆ ಪ್ರವೇಶವನ್ನು ಹೊಂದಿರುವುದು ಉತ್ತಮ. ಇಂದು ಈ ಗುರಿಯನ್ನು ಗಮನದಲ್ಲಿಟ್ಟುಕೊಂಡು ‘ಜನ ಸಮರ್ಥ್‌’ ಪೋರ್ಟಲ್‌ ಅನ್ನು ಪ್ರಾರಂಭಿಸಲಾಗಿದೆ. ಈಗ ಭಾರತ ಸರ್ಕಾರದ ಎಲ್ಲಾ ಸಾಲ-ಸಂಬಂಧಿತ ಯೋಜನೆಗಳು ವಿವಿಧ ಮೈಕ್ರೋ ಸೈಟ್‌ಗಳಲ್ಲಿ ಲಭ್ಯವಿರುವುದಿಲ್ಲ, ಆದರೆ ಒಂದೇ ಸ್ಥಳದಲ್ಲಿಲಭ್ಯವಿರುತ್ತವೆ.

ಜನ ಸಮರ್ಥ್‌ ಪೋರ್ಟಲ್‌ ವಿದ್ಯಾರ್ಥಿಗಳು, ಉದ್ಯಮಿಗಳು, ವ್ಯಾಪಾರಿಗಳು, ಉದ್ಯಮಿಗಳು ಮತ್ತು ರೈತರ ಜೀವನವನ್ನು ಸುಲಭಗೊಳಿಸುವುದಲ್ಲದೆ, ಅವರ ಕನಸುಗಳನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ. ಈಗ ವಿದ್ಯಾರ್ಥಿಗಳಿಗೆ ಸರ್ಕಾರದ ಯೋಜನೆಗಳ ಬಗ್ಗೆ ಸುಲಭವಾಗಿ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ, ಅದು ಅವರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಅಂತೆಯೇ, ನಮ್ಮ ಯುವಕರು ಮುದ್ರಾ ಸಾಲ ಬೇಕೋ ಅಥವಾ ಸ್ಟಾರ್ಟ್‌ಅಪ್‌ ಇಂಡಿಯಾ ಸಾಲ ಬೇಕೋ ಎಂದು ನಿರ್ಧರಿಸಲು ಸಾಧ್ಯವಾಗುತ್ತದೆ.

ಈಗ ದೇಶದ ಯುವಕರು ಮತ್ತು ಮಧ್ಯಮ ವರ್ಗದ ಜನರು ತ್ವರಿತ ವಿತರಣೆಗಾಗಿ ಜನ ಸಮರ್ಥ್‌ ರೂಪದಲ್ಲಿಒಂದು ವೇದಿಕೆಯನ್ನು ಪಡೆದಿದ್ದಾರೆ. ಸುಲಭ ಮತ್ತು ಕನಿಷ್ಠ ಕಾರ್ಯವಿಧಾನಗಳೊಂದಿಗೆ, ಹೆಚ್ಚು ಹೆಚ್ಚು ಜನರು ಸಾಲಗಳನ್ನು ತೆಗೆದುಕೊಳ್ಳಲು ಮುಂದೆ ಬರುವುದು ಸಹ ಸ್ವಾಭಾವಿಕವಾಗಿದೆ. ಈ ಪೋರ್ಟಲ್‌ ಸ್ವಯಂ ಉದ್ಯೋಗವನ್ನು ಹೆಚ್ಚಿಸುವಲ್ಲಿಮತ್ತು ಸರ್ಕಾರದ ಯೋಜನೆಗಳನ್ನು ಎಲ್ಲಾ ಫಲಾನುಭವಿಗಳಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಜನ ಸಮರ್ಥ್‌ ಪೋರ್ಟಲ್‌ಗಾಗಿ ನಾನು ವಿಶೇಷವಾಗಿ ದೇಶದ ಯುವಕರನ್ನು ಅಭಿನಂದಿಸುತ್ತೇನೆ.

ಇಂದು ಈ ಕಾರ್ಯಕ್ರಮದಲ್ಲಿಬ್ಯಾಂಕಿಂಗ್‌ ಕ್ಷೇತ್ರದ ದೊಡ್ಡ ದೊಡ್ಡವರು ಸಹ ಇದ್ದಾರೆ. ಯುವಜನರು ಸಾಲ ಪಡೆಯಲು ಸುಲಭವಾಗುವಂತೆ ಮಾಡಲು ಮತ್ತು ಜನ ಸಮರ್ಥ್‌ ಪೋರ್ಟಲ್‌ಅನ್ನು ಯಶಸ್ವಿಗೊಳಿಸಲು ತಮ್ಮ ಭಾಗವಹಿಸುವಿಕೆಯನ್ನು ಸಾಧ್ಯವಾದಷ್ಟು ಹೆಚ್ಚಿಸುವಂತೆ ನಾನು ಎಲ್ಲಾ ಬ್ಯಾಂಕರ್‌ಗಳನ್ನು ಒತ್ತಾಯಿಸುತ್ತೇನೆ.

ಸ್ನೇಹಿತರೇ,
ಯಾವುದೇ ಸುಧಾರಣೆಯ ಗುರಿಯನ್ನು ಸ್ಪಷ್ಟವಾಗಿ ಮತ್ತು ಅದರ ಅನುಷ್ಠಾನದ ಬಗ್ಗೆ ಗಂಭೀರತೆ ಇದ್ದರೆ, ಅದರ ಉತ್ತಮ ಫಲಿತಾಂಶಗಳು ತಕ್ಷ ಣವೇ ಬರುತ್ತವೆ. ಕಳೆದ ಎಂಟು ವರ್ಷಗಳಲ್ಲಿ ಸುಧಾರಣೆಗಳಲ್ಲಿ, ನಮ್ಮ ದೇಶದ ಯುವಕರಿಗೆ ತಮ್ಮ ಸಾಮರ್ಥ್ಯ‌ವನ್ನು ಪ್ರದರ್ಶಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ.

ನಮ್ಮ ಯುವಕರು ತಮ್ಮ ಆಯ್ಕೆಯ ಕಂಪನಿಯನ್ನು ಸುಲಭವಾಗಿ ತೆರೆಯಲು, ತಮ್ಮ ಉದ್ಯಮಗಳನ್ನು ಸುಲಭವಾಗಿ ತೆರೆಯಲು ಮತ್ತು ಅವರಿಗೆ ಸುಲಭವಾಗಿ ನಡೆಸಲು ಹೆಚ್ಚಿನ ಒತ್ತು ನೀಡಲಾಗಿದೆ. ಆದ್ದರಿಂದ, 30,000 ಕ್ಕೂ ಹೆಚ್ಚು ಅನುಸರಣೆಗಳನ್ನು ಕಡಿಮೆ ಮಾಡುವ ಮೂಲಕ, 1500 ಕ್ಕೂ ಹೆಚ್ಚು ಕಾನೂನುಗಳನ್ನು ರದ್ದುಗೊಳಿಸುವ ಮೂಲಕ, ಕಂಪನಿಗಳ ಕಾಯ್ದೆಯ ಅನೇಕ ನಿಬಂಧನೆಗಳನ್ನು ಅಪರಾಧೀಕರಿಸುವ ಮೂಲಕ, ನಾವು ಭಾರತದ ಕಂಪನಿಗಳು ಬೆಳೆಯುವುದನ್ನು ಹೊಸ ಎತ್ತರವನ್ನು ಸಾಧಿಸುವುದನ್ನು ಖಚಿತಪಡಿಸಿದ್ದೇವೆ.

ಸ್ನೇಹಿತರೇ,
ಸುಧಾರಣೆಗಳ ಜೊತೆಗೆ ನಾವು ಸರಳೀಕರಣದ ಬಗ್ಗೆಯೂ ಗಮನ ಹರಿಸಿದ್ದೇವೆ. ಜಿಎಸ್‌ಟಿ ಈಗ ಕೇಂದ್ರ ಮತ್ತು ರಾಜ್ಯಗಳಲ್ಲಿಅನೇಕ ತೆರಿಗೆಗಳ ಜಾಲವನ್ನು ಬದಲಾಯಿಸಲಾಗಿದೆ. ಈ ಸರಳೀಕರಣದ ಫಲಿತಾಂಶಕ್ಕೆ ದೇಶವೂ ಸಾಕ್ಷಿಯಾಗುತ್ತಿದೆ. ಈಗ ಜಿಎಸ್‌ಟಿ ಸಂಗ್ರಹವು ಪ್ರತಿ ತಿಂಗಳು ಒಂದು ಲಕ್ಷ  ಕೋಟಿ ರೂಪಾಯಿಗಳನ್ನು ದಾಟುವುದು ಸಾಮಾನ್ಯವಾಗಿದೆ. ಐಪಿಎಫ್‌ಒ ನೋಂದಣಿಗಳ ಸಂಖ್ಯೆಯನ್ನು ಸ್ಥಿರವಾದ ಮೊತ್ತವನ್ನು ನಾವು ನೋಡುತ್ತೇವೆ. ಸುಧಾರಣೆಗಳು ಮತ್ತು ಸರಳೀಕರಣವನ್ನು ಮೀರಿ, ನಾವು ಈಗ ಪ್ರವೇಶಿಸಬಹುದಾದ ವ್ಯವಸ್ಥೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ.

ಜಿಇಎಂ ಪೋರ್ಟಲ್‌ನಿಂದ ಉದ್ಯಮಿಗಳು ಮತ್ತು ಉದ್ಯಮಗಳು ತಮ್ಮ ಸರ್ಕಾರಕ್ಕೆ ಮಾರಾಟ ಮಾಡುವುದು ತುಂಬಾ ಸುಲಭ. ಇದರಲ್ಲಿಯೂ ಖರೀದಿಯ ಸಂಖ್ಯೆ ಒಂದು ಲಕ್ಷ  ಕೋಟಿ ರೂಪಾಯಿಗಳನ್ನು ದಾಟುತ್ತಿದೆ. ಇನ್ವೆಸ್ಟ್‌ (ಹೂಡಿಕೆ) ಇಂಡಿಯಾ ಪೋರ್ಟಲ್‌ ದೇಶದಲ್ಲಿ ಹೂಡಿಕೆಯ ಸಾಧ್ಯತೆಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಹೊಂದಿದೆ.

ಇಂದು ವಿವಿಧ ರೀತಿಯ ಕ್ಲಿಯರೆನ್ಸ್‌ (ನಿವಾರಣೆ)ಗಾಗಿ  ಏಕಗವಾಕ್ಷಿ ನಿವಾರಣೆ ಪೋರ್ಟಲ್‌ ಇದೆ. ಈ ಜನ ಸಮರ್ಥ್‌ ಪೋರ್ಟಲ್‌ ಯುವಜನರಿಗೆ ಮತ್ತು ದೇಶದ ನವೋದ್ಯಮಗಳಿಗೆ ಸಾಕಷ್ಟು ಸಹಾಯ ಮಾಡಲಿದೆ. ಇಂದು ನಾವು ಸುಧಾರಣೆ, ಸರಳೀಕರಣ ಮತ್ತು ಸುಲಭ ಶಕ್ತಿಯೊಂದಿಗೆ ಮುಂದೆ ಸಾಗಿದರೆ, ಹೊಸ ಮಟ್ಟದ ಸೌಲಭ್ಯಗಳನ್ನು ಸಾಧಿಸಬಹುದು.
ಎಲ್ಲಾ ದೇಶವಾಸಿಗಳಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸುವುದು, ಅವರಿಗಾಗಿ ಹೊಸ ಪ್ರಯತ್ನಗಳನ್ನು ಮಾಡುವುದು ಮತ್ತು ಹೊಸ ಸಂಕಲ್ಪಗಳನ್ನು ಸಾಕಾರಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಸ್ನೇಹಿತರೇ,
ಕಳೆದ ಎಂಟು ವರ್ಷಗಳಲ್ಲಿ, ಭಾರತವು ಏನನ್ನಾದರೂ ಮಾಡಲು ದೃಢಸಂಕಲ್ಪ ಮಾಡಿದರೆ, ಅದು ಇಡೀ ವಿಶ್ವಕ್ಕೆ ಹೊಸ ಭರವಸೆಯಾಗುತ್ತದೆ ಎಂದು ನಾವು ತೋರಿಸಿಕೊಟ್ಟಿದ್ದೇವೆ. ಇಂದು ಜಗತ್ತು ಭರವಸೆ ಮತ್ತು ನಿರೀಕ್ಷೆಗಳೊಂದಿಗೆ ನಮ್ಮತ್ತ ನೋಡುತ್ತಿದೆ, ಇದು ಕೇವಲ ದೊಡ್ಡ ಗ್ರಾಹಕ ಮಾರುಕಟ್ಟೆಯಾಗಿ ಮಾತ್ರವಲ್ಲ, ಆದರೆ ಸಮರ್ಥ, ಗೇಮ್‌ ಚೇಂಜರ್‌, ಸೃಜನಶೀಲ ಮತ್ತು ನವೀನ ಪರಿಸರ ವ್ಯವಸ್ಥೆಯಾಗಿ. ಭಾರತವು ತನ್ನ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ವಿಶ್ವದ ಹೆಚ್ಚಿನ ಭಾಗವು ನಿರೀಕ್ಷಿಸುತ್ತದೆ. ಕಳೆದ ಎಂಟು ವರ್ಷಗಳಲ್ಲಿನಾವು ಸಾಮಾನ್ಯ ಭಾರತೀಯನ ಬುದ್ಧಿವಂತಿಕೆಯನ್ನು ನಂಬಿರುವುದರಿಂದ ಇದು ಸಾಧ್ಯವಾಗಿದೆ. ನಾವು ಬೆಳವಣಿಗೆಯಲ್ಲಿಬುದ್ಧಿವಂತ ಭಾಗವಹಿಸುವವರಾಗಿ ಜನರನ್ನು ಪ್ರೋತ್ಸಾಹಿಸಿದೆವು.

ಉತ್ತಮ ಆಡಳಿತಕ್ಕಾಗಿ ಯಾವುದೇ ತಂತ್ರಜ್ಞಾನವನ್ನು ತಂದರೂ, ಅದನ್ನು ದೇಶದ ಜನರು ಸ್ವೀಕರಿಸುತ್ತಾರೆ ಮತ್ತು ಪ್ರಶಂಸಿಸುತ್ತಾರೆ ಎಂಬ ಸಂಪೂರ್ಣ ನಂಬಿಕೆಯನ್ನು ನಾವು ದೇಶದ ಜನರ ಮೇಲೆ ಹೊಂದಿದ್ದೇವೆ. ಈ ಸಾರ್ವಜನಿಕ ನಂಬಿಕೆಯ ಫಲಿತಾಂಶವು ವಿಶ್ವದ ಅತ್ಯುತ್ತಮ ಡಿಜಿಟಲ್‌ ವಹಿವಾಟು ವೇದಿಕೆ ಯುಪಿಐ ಅಂದರೆ ಏಕೀಕೃತ ಪಾವತಿ ಇಂಟರ್ಫೇಸ್‌ ರೂಪದಲ್ಲಿಎಲ್ಲರ ಮುಂದೆ ಇದೆ. ಇಂದು, ಬೀದಿ ಬದಿ ವ್ಯಾಪಾರಿಗಳು ಮತ್ತು ದೂರದ ಹಳ್ಳಿಗಳಿಂದ ನಗರಗಳ ಪ್ರದೇಶಗಳವರೆಗೆ ದೇಶವಾಸಿಗಳು 10-20 ರೂ.ಗಳಿಂದ ಲಕ್ಷಾಂತರ ರೂ.ಗಳವರೆಗೆ ವಹಿವಾಟುಗಳನ್ನು ಸುಲಭವಾಗಿ ಮಾಡುತ್ತಿದ್ದಾರೆ.

ಭಾರತದ ಯುವಜನರಲ್ಲಿಆವಿಷ್ಕಾರ ಮತ್ತು ಉದ್ಯಮಶೀಲತೆಯ ಉತ್ಸಾಹದಲ್ಲಿ ನಮಗೆ ಅಪಾರ ನಂಬಿಕೆ ಇತ್ತು. ದೇಶದ ಯುವಜನರಲ್ಲಿಹುದುಗಿರುವ ಈ ಉತ್ಸಾಹಕ್ಕೆ ದಾರಿ ಮಾಡಿಕೊಡಲು ಸ್ಟಾರ್ಟ್‌ಅಪ್‌ ಇಂಡಿಯಾದ ವೇದಿಕೆಯನ್ನು ರಚಿಸಲಾಯಿತು. ಇಂದು ದೇಶದಲ್ಲಿಸುಮಾರು 70,000 ನವೋದ್ಯಮಗಳಿವೆ ಮತ್ತು ಪ್ರತಿದಿನ ಡಜನ್‌ಗಟ್ಟಲೆ ಹೊಸ ಸದಸ್ಯರನ್ನು ಅದಕ್ಕೆ ಸೇರಿಸಲಾಗುತ್ತಿದೆ.

ಸ್ನೇಹಿತರೇ,
ದೇಶವು ಇಂದು ಸಾಧಿಸುತ್ತಿರುವ ಸಾಧನೆಯಲ್ಲಿಸ್ವಯಂ-ಪ್ರೇರಣೆ ಮತ್ತು ಪ್ರತಿಯೊಬ್ಬರ ಪ್ರಯತ್ನಗಳು ದೊಡ್ಡ ಪಾತ್ರವನ್ನು ವಹಿಸಿವೆ. ಆತ್ಮನಿರ್ಭರ ಭಾರತ್‌ ಮತ್ತು ವೋಕಲ್‌ ಫಾರ್‌ ಲೋಕಲ್‌ ನಂತಹ ಅಭಿಯಾನಗಳಿಗೆ ದೇಶವಾಸಿಗಳು ಭಾವನಾತ್ಮಕವಾಗಿ ಅಂಟಿಕೊಂಡಿದ್ದಾರೆ. ಇದರ ಪರಿಣಾಮವಾಗಿ, ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯದ ಪಾತ್ರವೂ ಸಾಕಷ್ಟು ಹೆಚ್ಚಾಗಿದೆ. ಈಗ ನಾವು ಸ್ಕೀಮ್‌ಗಳ ಸ್ಯಾಚುರೇಶನ್‌ (ತೃಪ್ತಿದಾಯಕ ಮಟ್ಟ) ಅನ್ನು ವೇಗವಾಗಿ ತಲುಪಬೇಕಾಗಿದೆ.
ನಾವು ಆರ್ಥಿಕ ಸೇರ್ಪಡೆಗಾಗಿ ವೇದಿಕೆಗಳನ್ನು ಸಿದ್ಧಪಡಿಸಿದ್ದೇವೆ, ಈಗ ನಾವು ಅವುಗಳ ಬಳಕೆಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸಬೇಕಾಗಿದೆ. ಭಾರತಕ್ಕಾಗಿ ಸಿದ್ಧಪಡಿಸಲಾದ ಆರ್ಥಿಕ ಪರಿಹಾರಗಳು ಈಗ ವಿಶ್ವದ ಇತರ ದೇಶಗಳ ನಾಗರಿಕರಿಗೆ ಪರಿಹಾರಗಳನ್ನು ನೀಡಲು ಪ್ರಯತ್ನಿಸಬೇಕು.

ನಮ್ಮ ಬ್ಯಾಂಕುಗಳು ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಕರೆನ್ಸಿ ಅಂತಾರಾಷ್ಟ್ರೀಯ ಪೂರೈಕೆ ಸರಪಳಿಯ ವಿಶಾಲ ಭಾಗವಾಗಲು ಹೇಗೆ ಸಾಧ್ಯ ಎಂಬುದರ ಬಗ್ಗೆ ಗಮನ ಹರಿಸುವುದು ಸಹ ಮುಖ್ಯವಾಗಿದೆ. ಸ್ವಾತಂತ್ರ್ಯದ ‘ಅಮೃತ್‌ ಕಾಲ್‌’ ಸಮಯದಲ್ಲಿನೀವು ಉತ್ತಮ ಹಣಕಾಸು ಮತ್ತು ಸಾಂಸ್ಥಿಕ ಆಡಳಿತವನ್ನು  ಪ್ರೋತ್ಸಾಹಿಸುವುದನ್ನು ಮುಂದುವರಿಸುತ್ತೀರಿ ಎಂದು ನನಗೆ ಖಾತ್ರಿಯಿದೆ. ಈ ಕಾರ್ಯಕ್ರಮಕ್ಕಾಗಿ 75 ಸ್ಥಳಗಳಲ್ಲಿಉಪಸ್ಥಿತರಿದ್ದ ಎಲ್ಲಾ ಸಹೋದ್ಯೋಗಿಗಳಿಗೆ ಅನೇಕ ಶುಭ ಹಾರೈಕೆಗಳನ್ನು ಕೋರುವ ಮೂಲಕ ನಾನು ನನ್ನ ಭಾಷಣವನ್ನು ಕೊನೆಗೊಳಿಸುತ್ತೇನೆ.

ತುಂಬಾ ಧನ್ಯವಾದಗಳು !

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s organic food products export reaches $448 Mn, set to surpass last year’s figures

Media Coverage

India’s organic food products export reaches $448 Mn, set to surpass last year’s figures
NM on the go

Nm on the go

Always be the first to hear from the PM. Get the App Now!
...
Prime Minister lauds the passing of amendments proposed to Oilfields (Regulation and Development) Act 1948
December 03, 2024

The Prime Minister Shri Narendra Modi lauded the passing of amendments proposed to Oilfields (Regulation and Development) Act 1948 in Rajya Sabha today. He remarked that it was an important legislation which will boost energy security and also contribute to a prosperous India.

Responding to a post on X by Union Minister Shri Hardeep Singh Puri, Shri Modi wrote:

“This is an important legislation which will boost energy security and also contribute to a prosperous India.”