ನಮೋ ಬುದ್ಧಾಯ!
ನಮೋ ಗುರುಭ್ಯೋ!
ಗೌರವಾನ್ವಿತ ರಾಷ್ಟ್ರಪತಿಯವರೇ, ಇತರೆ ಅತಿಥಿಗಳೇ, ಮಹಿಳೆಯರೇ, ಮಹನೀಯರೇ
ನಿಮಗೆಲ್ಲರಿಗೂ ಧಮ್ಮ ಚಕ್ರ ದಿನ ಮತ್ತು ಆಷಾಢ ಪೂರ್ಣಿಮೆಗೆ ಶುಭಾಶಯಗಳು. ಇಂದು ನಾವು ಗುರು ಪೂರ್ಣಿಮೆ ಆಚರಿಸುತ್ತಿದ್ದೇವೆ. ಭಗವಾನ್ ಬುದ್ಧ ಜ್ಞಾನೋದಯ ಪಡೆದ ನಂತರ ಜಗತ್ತಿಗೆ ತನ್ನ ಮೊದಲ ಧರ್ಮೋಪದೇಶ ನೀಡಿದ ದಿನ ಇದು. ಜ್ಞಾನ ಇರುವೆಡೆ ಪರಿಪೂರ್ಣತೆ ಇವರು ತ್ತದೆ ಎಂದು ನಮ್ಮ ದೇಶದಲ್ಲಿ ಹೇಳಲಾಗುತ್ತದೆ. ಧರ್ಮ ಪ್ರವಚನಕಾರ ಬುದ್ಧನ ಈ ತತ್ವಶಾಸ್ತ್ರ ಜಗದ ಕಲ್ಯಾಣಕ್ಕಾಗಿಯೇ ಇದೆ. ಬುದ್ಧ ಮಾತನಾಡುವಾಗ ತ್ಯಾಗ ಮತ್ತು ಸಹಿಷ್ಣುತೆ ಎಂಬುದು ಕೇವಲ ಬದಲಾವಣೆಯಲ್ಲ. ಬದಲಿಗೆ ದಮ್ಮದ ಸಂಪೂರ್ಣ ಚಕ್ರ ಪ್ರಾರಂಭವಾಗಲಿದೆ ಎಂದಿದ್ದಾರೆ. ಅಂದು ಬುದ್ಧ ಐದು ಶಿಷ್ಯರಿಗೆ ಮಾತ್ರ ಧರ್ಮೋಪದೇಶ ಮಾಡಿದರು. ಆದರೆ ಇಂದು ಪ್ರಪಂಚದಾದ್ಯಂತ ಬುದ್ಧನನ್ನು ನಂಬುವ, ಆ ತತ್ವಶಾಸ್ತ್ರದ ಅನುಯಾಯಿಗಳು ಇದ್ದಾರೆ.
ಸ್ನೇಹಿತರೇ
ಬುದ್ಧ ನಮಗೆ ಸಂಪೂರ್ಣ ಜೀವನದ ಸೂತ್ರ ಮತ್ತು ಸಾರ್ ನಾಥ್ ಕುರಿತು ಪರಿಪೂರ್ಣ ಜ್ಞಾನವನ್ನು ನೀಡಿದ್ದಾರೆ. ಅವರು ದುಃಖದ ಕಾರಣ ಮತ್ತು ಅದನ್ನು ಹೇಗೆ ಜಯಿಸಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಭಗವಾನ್ ಬುದ್ಧ ನಮಗೆ ಎಂಟು ಉದಾತ್ತ ಸೂತ್ರಗಳನ್ನು ಮತ್ತು ಜೀವನದ ಎಂಟು ಮಂತ್ರಗಳನ್ನು ಕಲ್ಪಿಸಿದ್ದಾರೆ. ಇವುಗಳೆಂದರೆ “ಸಮ್ಮದಿತ್ತಿ” [ಸರಿಯಾದ ತಿಳಿವಳಿಕೆ], “ಸಮ್ಮಸಂಕಲ್ಪ” [ಸರಿಯಾದ ಪರಿಹಾರ], “ಸಮ್ಮವಾಚ” [ಸರಿಯಾದ ಭಾಷಣ]. “ಸಮ್ಮಕಮ್ಮಂತ” [ಸರಿಯಾದ ನಡವಳಿಕೆ], “ಸಮ್ಮ ಅಜಿವ” [ಸರಿಯಾದ ಜೀವನೋಪಾಯ]. “ಸಮ್ಮ ವ್ಯಾಯಾಮ” [ಸರಿಯಾದ ಪ್ರಯತ್ನ]. “ಸಮ್ಮ ಸತಿ” [ಸರಿಯಾದ ಮನಸ್ಥಿತಿ] ಮತ್ತು “ಸಮ್ಮ ಸಮಾಧಿ” [ಸರಿಯಾದ ರೀತಿಯಲ್ಲಿ ಧ್ಯಾನ ಹೀರಿಕೊಳ್ಳುವಿಕೆ ಅಥವಾ ಏಕತೆ]. ನಮ್ಮ ಮನಸ್ಸು, ಮಾತು ಮತ್ತು ಸಂಕಲ್ಪದ ನಡುವೆ ಸಾಮರಸ್ಯ ಇದ್ದರೆ ಮತ್ತು ನಮ್ಮ ಕ್ರಿಯೆ ಹಾಗೂ ಪ್ರಯತ್ನ ಇದ್ದರೆ ಸಂಕಟದಿಂದ ಹೊರ ಬರಬಹುದು ಹಾಗೂ ಸಂತೋಷವನ್ನು ಸಾಧಿಸಬಹುದು. ಒಳ್ಳೆಯ ಸಮಯದಲ್ಲಿ ಸಾಮಾನ್ಯ ಕಲ್ಯಾಣಕ್ಕಾಗಿ ಕೆಲಸ ಮಾಡಲು ನಮಗೆ ಪ್ರೇರಣೆ ನೀಡುತ್ತದೆ ಮತ್ತು ಕಷ್ಟದ ಸಮಯವನ್ನು ಎದುರಿಸಲು ನಮಗೆ ಶಕ್ತಿ ಕೊಡುತ್ತದೆ.
ಸ್ನೇಹಿತರೇ
ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಇಂದು ಭಗವಾನ್ ಬುದ್ಧ ನಮಗೆ ಹೆಚ್ಚು ಪ್ರಸ್ತುತರಾಗುತ್ತಾರೆ. ಬುದ್ಧನ ಮಾರ್ಗವನ್ನು ಅನುಸರಿಸುವ ಮೂಲಕ ನಾವು ಹೇಗೆ ಅತ್ಯಂತ ಕಠಿಣ ಸವಾಲುಗಳನ್ನು ಎದುರಿಸಬಹುದು ಎಂಬುದನ್ನು ಭಾರತ ತೋರಿಸಿಕೊಟ್ಟಿದೆ. ಇಂದು ಎಲ್ಲಾ ದೇಶಗಳು ಒಗ್ಗಟ್ಟಿನಿಂದ ಸಾಗುತ್ತಿವೆ ಮತ್ತು ಬುದ್ಧನ ಬೋಧನೆಗಳನ್ನು ಅನುಸರಿಸುವ ಮೂಲಕ ಪರಸ್ಪರರ ಶಕ್ತಿಯಾಗುತ್ತಿವೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟದ “ಪ್ರಾರ್ಥನೆಯೊಂದಿಗೆ ಕಾಳಜಿ” ಉಪಕ್ರಮ ಶ್ಲಾಘನೀಯವಾಗಿದೆ.
ಸ್ನೇಹಿತರೇ
ಧಮ್ಮಪಾದ ಹೇಳಿದ್ದಾರೆ
न ही वेरेन वेरानि,
सम्मन्तीध कुदाचनम्।
अवेरेन च सम्मन्ति,
एस धम्मो सनन्ततो॥
ಅಂದರೆ ದ್ವೇಷವು ದ್ವೇಷವನ್ನು ತಣಿಸುವುದಿಲ್ಲ. ಬದಲಾಗಿ ದ್ವೇಷವು ಪ್ರೀತಿಯಿಂದ ಮತ್ತು ದೊಡ್ಡ ಹೃದಯದಿಂದ ಶಾಂತವಾಗುತ್ತದೆ. ದುರಂತದ ಈ ಸಮಯದಲ್ಲಿ ಜಗತ್ತು ಪ್ರೀತಿ ಮತ್ತು ಸೌಹಾರ್ದತೆಯ ಶಕ್ತಿಯನ್ನು ಅನುಭವಿಸಿದೆ. ಬುದ್ಧನ ಈ ಜ್ಞಾನ, ಮಾನವೀಯತೆಯ ಈ ಅನುಭವು ಸಮೃದ್ಧವಾಗುತ್ತದೆ, ಇದರಿಂದ ಜಗತ್ತು ಸಮೃದ್ಧಿ ಮತ್ತು ಯಶಸ್ಸಿನ ಹೊಸ ಶಿಖರವನ್ನು ಸ್ಪರ್ಷಿಸಲು ಸಾಧ್ಯವಾಗುತ್ತದೆ.
ಈ ಹಾರೈಕೆಯೊಂದಿಗೆ ನಿಮ್ಮೆಲ್ಲರಿಗೂ ಮತ್ತೊಮ್ಮೆ ಅನೇಕ ಅಭಿನಂದನೆಗಳು!
ಧನ್ಯವಾದಗಳು!