"ಜಮ್ಮು ಮತ್ತು ಕಾಶ್ಮೀರದ ಜನರು ಯೋಗದ ಬಗ್ಗೆ ಇಂದು ತೋರಿದ ಉತ್ಸಾಹ ಮತ್ತು ಬದ್ಧತೆ ಚಿರಸ್ಥಾಯಿಯಾಗಲಿದೆ"
"ಯೋಗವು ಸ್ವಾಭಾವಿಕವಾಗಿ ಬರಬೇಕು ಮತ್ತು ಜೀವನದ ಸಹಜ ಭಾಗವಾಗಬೇಕು"
"ಧ್ಯಾನವು ಸ್ವಯಂ ಸುಧಾರಣೆಗೆ ಉತ್ತಮ ಸಾಧನವಾಗಿದೆ"
"ಯೋಗವು ಸಮಾಜಕ್ಕೆ ಎಷ್ಟು ಮುಖ್ಯವೋ ಪ್ರತಿಯೊಬ್ಬ ವ್ಯಕ್ತಿಗೂ ಅಷ್ಟೇ ಮುಖ್ಯ"

ಸ್ನೇಹಿತರೇ,

ಇಂದು ಇಲ್ಲಿ ನಡೆದ ಈ ಯೋಗಾಭ್ಯಾಸದ ದೃಶ್ಯವು ಇಡೀ ಪ್ರಪಂಚದ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದೆ. ಮಳೆ ಬಾರದೇ ಇದ್ದಿದ್ದರೂ, ಅಥವಾ ಇನ್ನೂ ಅಧಿಕ ಮಳೆ ಬಂದರೂ ಕೂಡಾ, ಏನೂ ವ್ಯತ್ಯಾಸವಾಗದೆ ನೀವೆಲ್ಲ ಪ್ರದರ್ಶನ ನೀಡುತ್ತಿದ್ದೀರಿ, ಆದರೆ ಬಹುಶಃ ಇಷ್ಟು ಗಮನ ಸೆಳೆಯುತ್ತಿರಲಿಲ್ಲವೇನೋ.  ಹಾಗೂ ಶ್ರೀನಗರದಲ್ಲಿ ಮಳೆ ಬಂದರೆ ಸಹಜವಾಗಿಯೇ ಚಳಿಯೂ ಹೆಚ್ಚುತ್ತದೆ.  ನಾನೇ ಸ್ವೆಟರ್ ಹಾಕಿಕೊಳ್ಳಬೇಕಿತ್ತು.  ನೀವು ಇಲ್ಲಿನ ವಿವಿಧ ಪ್ರದೇಶಗಳಿಂದ ಇಲ್ಲಿಗೆ  ಬಂದವರು, ನೀವು ಈ ವಾತಾವರಣಕ್ಕೆ ಒಗ್ಗಿಕೊಂಡಿರುವಿರಿ ಮತ್ತು ಇದು ನಿಮಗೆ ಅನಾನುಕೂಲತೆಯ ವಿಷಯವಲ್ಲ. 

ಮಳೆಯಿಂದಾಗಿ ಸ್ವಲ್ಪ ತಡವಾಗಿ, ಕಾರ್ಯಕ್ರಮವನ್ನು ಎರಡು ಮೂರು ಭಾಗಗಳಾಗಿ ವಿಭಜಿಸಬೇಕಾಯಿತು. ಅದರ ಹೊರತಾಗಿಯೂ, ಸ್ವಯಂ ಮತ್ತು ಸಮಾಜದ ಪ್ರಯೋಜನಕ್ಕಾಗಿ ಇರುವ ಈ ಯೋಗದ ಪ್ರಾಮುಖ್ಯತೆಯನ್ನು ವಿಶ್ವ ಸಮುದಾಯವು ಅರ್ಥಮಾಡಿಕೊಳ್ಳುತ್ತದೆ .  ಯೋಗವು ಹೇಗೆ ಜೀವನದ ನೈಸರ್ಗಿಕ ಭಾಗವಾಗಬಹುದು ಎಂದು ನೀವು ತೋರಿಸಿಕೊಟ್ಟಿದ್ದೀರಿ. ಮುಂಜಾನೆ ನಿಮ್ಮ ಹಲ್ಲುಗಳನ್ನು ಹಲ್ಲುಜ್ಜುವುದು ಮತ್ತು ಪ್ರತಿನಿತ್ಯ ನಿಮ್ಮ ಕೂದಲನ್ನು ಬಾಚಿಕೊಳ್ಳುವುದು ಮುಂತಾದ ನೀವು ಮಾಡಿಕೊಂಡ ಕೆಲವು ನಿಯಮಿತ ವಾಡಿಕೆಯಂತೆ, ಯೋಗವನ್ನು ಕೂಡಾ ಅದೇ ರೀತಿಯಲ್ಲಿ ಸರಾಗವಾಗಿ ಜೀವನದಲ್ಲಿ ಸಂಯೋಜಿಸಿದಾಗ, ಅದು ಪ್ರತಿ ಕ್ಷಣವೂ ನಿಮಗೆ ಪ್ರಯೋಜನಗಳನ್ನು ನೀಡುತ್ತದೆ.

 

ಕೆಲವೊಮ್ಮೆ, ಯೋಗದ ಒಂದು ಭಾಗವಾದ ಧ್ಯಾನದ ವಿಷಯಕ್ಕೆ ಬಂದಾಗ, ಹೆಚ್ಚಿನ ಜನರು ಅದನ್ನು ಒಂದು ದೊಡ್ಡ ಆಧ್ಯಾತ್ಮಿಕ ಪ್ರಯಾಣ ಎಂದು ಭಾವಿಸುತ್ತಾರೆ.  ಇದು, ದೇವರನ್ನು ಸಾಧಿಸುವುದು ಅಥವಾ ದೈವಿಕ ದರ್ಶನವನ್ನು ಹೊಂದುವುದು ಎಂದು ಕೆಲವರು ಭಾವಿಸುತ್ತಾರೆ.  ತದನಂತರ ಕೆಲವರು "ಅಯ್ಯೋ, ನಾನು ಇದನ್ನು ಮಾಡಲು ಸಾಧ್ಯವಿಲ್ಲ, ಇದು ನನ್ನ ಸಾಮರ್ಥ್ಯವನ್ನು ಮೀರಿದೆ" ಎಂದು ಭಾವಿಸುತ್ತಾರೆ ಮತ್ತು ಕೆಲವರು ಇದನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ.  ಆದರೆ ನಾವು ಧ್ಯಾನವನ್ನು ಸರಳ ಪದಗಳಲ್ಲಿ ಅರ್ಥಮಾಡಿಕೊಂಡರೆ ಎಲ್ಲಾ ಸುಗಮವಾಗುತ್ತದೆ, ಅದು ಏಕಾಗ್ರತೆಯ ಬಗ್ಗೆ ಮಹತ್ವದ ಪ್ರಯೋಜನಗಳನ್ನು ನೀಡುತ್ತದೆ. ಶಾಲೆಯಲ್ಲಂತೂ ನಮ್ಮ ಅಧ್ಯಾಪಕರು ಸದಾ ಗಮನ ಕೊಡಿ, ಗಮನವಿಟ್ಟು ನೋಡು, ಗಮನವಿಟ್ಟು ಕೇಳು ಎಂದು ನಮಗೆ ಹೇಳುತ್ತಿದ್ದರು.  "ನಿಮ್ಮ ಗಮನ ಎಲ್ಲಿದೆ?"  ಅವರು ನಮಗೆ ಪದೇ ಪದೇ ಹೇಳುತ್ತಿದ್ದರು.  ಈ ಧ್ಯಾನವು ನಮ್ಮ ಏಕಾಗ್ರತೆಗೆ ಸಂಬಂಧಿಸಿದ ವಿಷಯವಾಗಿದೆ, ನಾವು ವಸ್ತುಗಳ ಮೇಲೆ ಎಷ್ಟು ಗಮನವನ್ನು ಹೊಂದಿದ್ದೇವೆ, ನಮ್ಮ ಮನಸ್ಸು ಎಷ್ಟು ಕೇಂದ್ರೀಕೃತವಾಗಿದೆ ಎಂದು ಈ ಧ್ಯಾನ ಶಕ್ತಿ ಹೇಳುತ್ತದೆ.

ಅನೇಕ ಜನರು ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ತಂತ್ರಗಳನ್ನು ಅಭಿವೃದ್ಧಿಪಡಿಸುವುದನ್ನು ನೀವು ನೋಡಿರಬಹುದು.  ಆ ತಂತ್ರಗಳನ್ನೂ ಇತರರಿಗೆ ಕಲಿಸುತ್ತಾರೆ.  ಈ ತಂತ್ರಗಳನ್ನು ಸರಿಯಾಗಿ ಅನುಸರಿಸುವವರು ಕ್ರಮೇಣ ತಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತಾರೆ.  ಅಂತೆಯೇ, ಯಾವುದೇ ಕಾರ್ಯವನ್ನು ಕೇಂದ್ರೀಕರಿಸುವ ಅಭ್ಯಾಸ, ಏಕಾಗ್ರತೆ ಮತ್ತು ಕೇಂದ್ರೀಕೃತ ರೀತಿಯಲ್ಲಿ ಕೆಲಸ ಮಾಡುವುದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ, ಸ್ವಯಂ-ಅಭಿವೃದ್ಧಿಗೆ ಕಾರಣವಾಗುತ್ತದೆ ಮತ್ತು ಕನಿಷ್ಠ ಆಯಾಸದೊಂದಿಗೆ ಗರಿಷ್ಠ ತೃಪ್ತಿಯನ್ನು ನೀಡುತ್ತದೆ.

 

ಒಂದು ಕೆಲಸವನ್ನು ಮಾಡುವಾಗ ಮನಸ್ಸು 10 ವಿಷಯಗಳಿಗೆ ಅಲೆದಾಡಿದಾಗ ಅದು ಆಯಾಸವನ್ನು ಉಂಟುಮಾಡುತ್ತದೆ.  ಆದ್ದರಿಂದ, (ನೀವು) ಧ್ಯಾನದ ಮೇಲೆ ಕೇಂದ್ರೀಕರಿಸಬೇಕು.  ಸದ್ಯಕ್ಕೆ ಆಧ್ಯಾತ್ಮಿಕ ಪ್ರಯಾಣವನ್ನು ಬಿಟ್ಟುಬಿಡಿ, ಅದು ನಂತರ ಬರಬಹುದು.  ಪ್ರಸ್ತುತ, ಯೋಗವು ನಿಮ್ಮ ವೈಯಕ್ತಿಕ ಜೀವನದಲ್ಲಿ ಏಕಾಗ್ರತೆ ಮತ್ತು ಗಮನವನ್ನು ಕೇಂದ್ರೀಕರಿಸಲು ಉತ್ತಮ ಪ್ರಯೋಜನಗಳನ್ನು ನೀಡುವ ತರಬೇತಿಯ ಒಂದು ಭಾಗವಾಗಿದೆ.  ನೀವು ಅದರೊಂದಿಗೆ ಸರಳವಾಗಿ ಸತತ ಸಂಪರ್ಕ ಹೊಂದಿದರೆ, ಸ್ನೇಹಿತರೇ, ನೀವು ಹೆಚ್ಚು ಪ್ರಯೋಜನ ಪಡೆಯುತ್ತೀರಿ ಎಂದು ನನಗೆ ಖಾತ್ರಿಯಿದೆ ಮತ್ತು ಅದು ಮುಂದಿನ ದಿನಗಳಲ್ಲಿ ನಿಮ್ಮ ಅಭಿವೃದ್ಧಿಯ ಪ್ರಯಾಣದ ಬಲವಾದ ಅಂಶವಾಗುತ್ತದೆ.

ಹೀಗಾಗಿ, ಯೋಗವು ಆತ್ಮಕ್ಕೆ ಅವಶ್ಯಕ ಮತ್ತು ಉಪಯುಕ್ತವಾಗಿದೆ, ಅಪಾರ ಶಕ್ತಿಯನ್ನು ನೀಡುತ್ತದೆ ಮತ್ತು ಅದು ಸಮಾಜಕ್ಕೂ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ.  ಸಮಾಜವು ಪ್ರಯೋಜನ ಪಡೆದಾಗ, ಮಾನವೀಯತೆಯು ಪ್ರಯೋಜನವನ್ನು ಪಡೆಯುತ್ತದೆ ಮತ್ತು ಪ್ರಪಂಚದ ಪ್ರತಿಯೊಂದು ಮೂಲೆಯಲ್ಲಿರುವ ಜನರು ಪ್ರಯೋಜನ ಪಡೆಯುತ್ತಾರೆ.

 

ಎರಡು ದಿನಗಳ ಹಿಂದೆ, ನಾನು ಈಜಿಪ್ಟ್ ನಲ್ಲಿ ಯೋಗ ಸ್ಪರ್ಧೆಯನ್ನು ಆಯೋಜಿಸಿದ ವೀಡಿಯೊವನ್ನು ನೋಡಿದೆ.  ಬಹಳ ಪ್ರಸಿದ್ಧ ಪ್ರವಾಸೋದ್ಯಮ ಕೇಂದ್ರಗಳಲ್ಲಿ ತೆಗೆದ ಅತ್ಯುತ್ತಮ ಯೋಗ ಫೋಟೋ ಅಥವಾ ವಿಡಿಯೊಗೆ ಪ್ರಶಸ್ತಿ ನೀಡಲಾಯಿತು.  ನಾನು ನೋಡಿದ ಚಿತ್ರಗಳಲ್ಲಿ , ಪುರಾತನ ಪಿರಮಿಡ್‌ ಗಳ ಬಳಿ ಈಜಿಪ್ಟಿನ ಪುತ್ರರು ಮತ್ತು ಪುತ್ರಿಯರ ಯೋಗಾಸನಗಳನ್ನು ಅಭ್ಯಾಸ ಮಾಡುತ್ತಿದ್ದರು.  ಅದು ತುಂಬಾ ಆಕರ್ಷಕವಾಗಿತ್ತು.  ಕಾಶ್ಮೀರಕ್ಕೆ ಕೂಡಾ, ಮುಂಬರುವ ದಿನಗಳಲ್ಲಿ ಯೋಗ ಇಲ್ಲಿನ ಜನರಿಗೆ ಉದ್ಯೋಗದ ಗಮನಾರ್ಹ ಮೂಲವಾಗಬಹುದು.  ಇದು ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಬಹುದು.

ಇಂದು ನೀವು ಪ್ರದರ್ಶಿಸಿದ ನಿಮ್ಮ ಯೋಗಾಭ್ಯಾಸ ತುಂಬಾ ಚೆನ್ನಾಗಿತ್ತು.  ಚಳಿ ಮತ್ತು ಹವಾಮಾನವು ಸವಾಲುಗಳನ್ನು ಎದುರಿಸುತ್ತಿದ್ದರೂ, ನೀವೆಲ್ಲರೂ ಪರಿಶ್ರಮ ಪಟ್ಟಿದ್ದೀರಿ.  ಅನೇಕ ಹುಡುಗಿಯರು ಮಳೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ತಮ್ಮ ಯೋಗ ಮ್ಯಾಟ್‌ ಗಳನ್ನು ಬಳಸುವುದನ್ನು ನಾನು ನೋಡಿದೆ. ಆದರೂ ಕೂಡ ಅವರು ಯೋಗ ಮಾಡುವುದನ್ನು ಬಿಡಲಿಲ್ಲ, ಅವರು ಏನೂ ಸಂಭವಿಸಲಿಲ್ಲ ಎಂಬ ರೀತಿಯಲ್ಲಿ ಹಾಗೆಯೇ ಯೋಗ ಮಾಡುತ್ತಲೇ ಇದ್ದರು.  ಇದು ಒಂದು ದೊಡ್ಡ ಹಾಗೂ ಮಹತ್ವದ ವಿಷಯವಾಗಿದೆ.

ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ ಮತ್ತು ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ.

 ಧನ್ಯವಾದಗಳು.  

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s organic food products export reaches $448 Mn, set to surpass last year’s figures

Media Coverage

India’s organic food products export reaches $448 Mn, set to surpass last year’s figures
NM on the go

Nm on the go

Always be the first to hear from the PM. Get the App Now!
...
Prime Minister lauds the passing of amendments proposed to Oilfields (Regulation and Development) Act 1948
December 03, 2024

The Prime Minister Shri Narendra Modi lauded the passing of amendments proposed to Oilfields (Regulation and Development) Act 1948 in Rajya Sabha today. He remarked that it was an important legislation which will boost energy security and also contribute to a prosperous India.

Responding to a post on X by Union Minister Shri Hardeep Singh Puri, Shri Modi wrote:

“This is an important legislation which will boost energy security and also contribute to a prosperous India.”