75ನೇ ಸ್ವಾತಂತ್ರ್ಯ ವರ್ಷ ಪೂರ್ಣವಾಗಿರುವ ಮಹತ್ವದ ಸಂದರ್ಭದಲ್ಲಿ ನನ್ನ ಪ್ರೀತಿಯ ದೇಶವಾಸಿಗಳಿಗೆ ಶುಭಾಶಯಗಳು. ಎಲ್ಲರಿಗೂ ತುಂಬಾ ತುಂಬಾ ಅಭಿನಂದನೆಗಳು!. ಕೇವಲ ಹಿಂದೂಸ್ಥಾನದ ಮೂಲೆ ಮೂಲೆಯಲ್ಲಿ ಅಷ್ಟೇ ಅಲ್ಲ, ವಿಶ್ವದ ವಿವಿಧ ಮೂಲೆಗಳಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಭಾರತೀಯರು ಅಥವಾ ಭಾರತದ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿರುವವರು ಮೂಲಕ ವಿಶ್ವದ ಎಲ್ಲ ಮೂಲೆಯಲ್ಲೂ ನಮ್ಮ ತ್ರಿವರ್ಣಧ್ವಜ ಗೌರವ, ಪ್ರತಿಷ್ಠೆಗಳಿಂದ ರಾರಾಜಿಸುತ್ತಿದೆ. ನಾನು ವಿಶ್ವಾದ್ಯಂತ ಭಾರತ ಪ್ರೇಮಿಗಳಿಗೆ, ಭಾರತೀಯರಿಗೆ ಆಜಾದಿ ಕಾ ಅಮೃತ ಮಹೋತ್ಸವದ ಶುಭಾಶಯ ಸಲ್ಲಿಸುತ್ತೇನೆ. ಈ ದಿನ ಐತಿಹಾಸಿಕ ದಿನವಾಗಿದೆ. ಪುಣ್ಯದ ಹೆಜ್ಜೆ, ಒಂದು ಹೊಸ ದಾರಿ, ಹೊಸ ಸಂಕಲ್ಪ, ಹೊಸ ಸಾಮರ್ಥ್ಯದೊಂದಿಗೆ ಮುಂದಡಿ ಇಡುವ ಶುಭ ಸಂದರ್ಭವಾಗಿದೆ. 
ಸ್ವಾತಂತ್ರ್ಯ ಸಂಗ್ರಾಮದಲ್ಲಿ, ದಾಸ್ಯದ ಪೂರ್ಣ ಕಾಲಘಟ್ಟ ಸಂಪೂರ್ಣವಾಗಿ ಸಂಘರ್ಷದಲ್ಲಿ ಸಾಗಿದೆ. ನೂರಾರು ವರ್ಷಗಳವರೆಗೆ ಗುಲಾಮಗಿರಿಯ ವಿರುದ್ಧ ನಿರಂತರ ಹೋರಾಟ ಮಾಡದ, ಜೀವನ ಮುಡಿಪಾಗಿಡದ, ಯಾತನೆ ಅನುಭವಿಸಿದ, ತ್ಯಾಗ ಮಾಡದ ಭಾರತದ ಯಾವುದೇ ಮೂಲೆಯೂ ಇರಲಿಲ್ಲ, ಅಂತಹ ಸಮಯ ಇರಲಿಲ್ಲ. ಇಂದು ನಾವೆಲ್ಲ ದೇಶವಾಸಿಗಳಿಗೆ ಅಂತಹ ಮಹಾಪುರುಷರನ್ನು, ತ್ಯಾಗಿಗಳನ್ನು, ಬಲಿದಾನಿಗಳನ್ನು ಸ್ಮರಿಸಿ, ನಮಿಸುವ ಅವಕಾಶ ದೊರೆತಿದೆ. ಅವರ ಋಣ ತೀರಿಸುವ ಅವಕಾಶ ಸಿಕ್ಕಿದೆ. ಅವರ ಸ್ಮರಣೆ ಮಾಡುತ್ತಾ, ಅವರ ಕನಸನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸಂಕಲ್ಪ ಮಾಡುವ ಅವಕಾಶವೂ ನಮ್ಮದಾಗಿದೆ. ನಾವೆಲ್ಲಾ ದೇಶವಾಸಿಗಳು, ಮಹಾತ್ಮಾಗಾಂಧೀ ಅವರಿಗೆ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ, ವೀರ ಸಾವರ್ಕರ್ ಅವರಿಗೆ ಕೃತಜ್ಞರಾಗಿದ್ದೇವೆ,   ಅವರೆಲ್ಲರೂ ಕರ್ತವ್ಯದ ಹಾದಿಯಲ್ಲಿ, ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಈ ದೇಶ ಮಂಗಲಪಾಂಡೆ, ತಾಂತ್ಯಾಟೋಪೆ, ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ ಆಜಾದ್, ಅಸ್ಫಾಕ್ ಉಲ್ಲಾ ಖಾನ್,  ರಾಮ್ ಪ್ರಸಾದ್ ಬಿಸ್ಮಿಲ್ಲಾ ಇಂತಹ ಹಲವು ಕ್ರಾಂತಿಕಾರಿಗಳಿಗೆ ದೇಶ ಕೃತಜ್ಞವಾಗಿದೆ. ಇವರೆಲ್ಲೂ ಆಂಗ್ಲರ ಆಡಳಿತದ ನಿದ್ದೆಗೆಡೆಸಿದ್ದರು. ಈ ರಾಷ್ಟ್ರ ವೀರನಾರಿಯರಿಗೂ ಕೃತಜ್ಞವಾಗಿದೆ. ರಾಣಿ ಲಕ್ಷ್ಮೀಬಾಯ್, ಜಲ್ಕರಿ ಬಾಯ್, ದುರ್ಗಾ ಭಾವಿ, ರಾಣಿ ಗೈಡಿನ್ಲಿಯು, ರಾಣಿ ಚೆನ್ನಮ್ಮ, ಬೇಗಂ ಹಜರತ್ ಮಹಲ್, ವೇಲೂ ನಾಚಿಯಾರ್, ಭಾರತದ ನಾರಿ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ.ಭಾರತದ ನಾರಿ ಶಕ್ತಿಯ ಸಂಕಲ್ಪ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಭಾರತದ ನಾರಿ ತ್ಯಾಗ ಮತ್ತು ಬಲಿದಾನದಲ್ಲೂ ಎಷ್ಟು ಶ್ರೇಷ್ಠತೆ ತೋರಬಹುದು ಎಂಬುದನ್ನು ತೋರಿಸಿದ್ದಾರೆ. ಇಂತಹ ಅಸಂಖ್ಯಾತ ವೀರಾಂಗನೆಯನ್ನು ಸ್ಮರಿಸುವಾಗ ಭಾರತೀಯರು ಹೆಮ್ಮೆಪಡುತ್ತಾರೆ. 

ಸ್ವಾತಂತ್ರ್ಯದ ಸಂಗ್ರಾಮದ ಹೋರಾಟದಲ್ಲಿ, ನಂತರ ದೇಶ ಕಟ್ಟುವಲ್ಲಿ, ಡಾ. ರಾಜೇಂದ್ರ ಪ್ರಸಾದ್ ಅವರಿರಲಿ, ನೆಹರೂ ಅವರಾಗಲೀ,  ಸರ್ದಾರ್ ವಲ್ಲಭ ಬಾಯಿ ಪಟೇಲ್ , ಶ್ಯಾಮಾ ಪ್ರಸಾದ್ ಮುಖರ್ಜಿ, ಲಾಲ್ ಬಹಾದ್ದೂರ್ ಶಾಸ್ತ್ರೀ, ದೀನದಯಾಳ್ ಉಪಾಧ್ಯಾಯ, ಜೈಪ್ರಕಾಶ್ ನಾರಾಯಣ್, ರಾಮ್ ಮನೋಹರ್ ಲೋಹಿಯಾ, ಆಚಾರ್ಯ ವಿನೋಭಾ ಭಾವೇ, ನಾನಾಜಿ ದೇಶ್ ಮುಖ್, ಸುಬ್ರಹ್ಮಣ್ಯ ಭಾರತಿ, ಇಂತಹ ಅಸಂಖ್ಯಾತ ಮಹಾಪುರುಷರಿಗೆ ಇಂದು ನಮನ ಸಲ್ಲಿಸುವ ಅವಕಾಶ ನಮ್ಮದಾಗಿದೆ. 
ನಾವು ಯಾವಾಗ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾತನಾಡುತ್ತೇವೋ.. ಆಗ ನಾವು ಕಾಡಿನಲ್ಲಿ ವಾಸಿಸುತ್ತಿದ್ದ ನಮ್ಮ ಆದಿವಾಸಿ ಸಮಾಜವನ್ನು ಕೂಡ ಗೌರವಿಸುವುದನ್ನು ನಾವು ಮರೆಯುವುದಿಲ್ಲ. ಭಗವಾನ್ ಬಿರ್ಸಾ ಮುಂಡಾ, ಸಿದ್ದು ಕಾನೂ, ಅಲ್ಲೂರಿ ಸೀತಾರಾಮ್ ರಾಜು, ಗೋವಿಂದ ಗುರು, ಅಸಂಖ್ಯಾತ ಹೆಸರುಗಳಿವೆ. ಇವರೆಲ್ಲರೂ ಸ್ವಾತಂತ್ರ್ಯ ಸಂಗ್ರಾಮದ ಧ್ವನಿಯಾಗಿ, ದೂರ ದೂರದ ಕಾಡಿನಲ್ಲೂ, ನಮ್ಮ ಆದಿವಾಸಿ ಮಾತೆಯರು, ಸೋದರಿಯರು, ಯುವಜನರಲ್ಲಿ ಮಾತೃಭೂಮಿಗಾಗಿ ಬದುಕುವ ಪ್ರೇರಣೆ ಮೂಡಿಸಿದರು. ಇದು ದೇಶದ ಸೌಭಾಗ್ಯವಾಗಿದೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ಹಲವು ರೂಪವಿದೆ. ಅದರಲ್ಲಿ ಒಂದು ರೂಪ, ನಾರಾಯಣ ಗುರುಗಳಾಗಿರಲಿ, ಸ್ವಾಮಿ ವಿವೇಕಾನಂದರಾಗಿರಲಿ, ಮಹರ್ಷಿ ಅರವಿಂದ, ಗುರುನಾಥ ರವೀಂದ್ರನಾಥ್ ಠಾಗೋರ್ ಅವರಾಗಿರಲೀ, ಇಂತಹ ಅನೇಕ ಮಹಾಪುರುಷರು, ಹಿಂದೂಸ್ತಾನದ ಪ್ರತಿಯೊಂದು ಮೂಲೆಯಲ್ಲಿ, ಎಲ್ಲ ಕಾಲದಲ್ಲೂ ಭಾರತದ ಚೇತನವನ್ನು ಜೀವಂತವಾಗಿಡುತ್ತಿದ್ದರು. ಭಾರತವನ್ನು ಚೈತನ್ಯಶೀಲ ಮಾಡುತ್ತಿದ್ದರು.

ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶ, ಕಳೆದ ಒಂದು ವರ್ಷದಿಂದ ನಾವು ನೋಡುತ್ತಿದೆ. 2021ರಲ್ಲಿ ದಾಂಡೀ ಯಾತ್ರೆಯಿಂದ ಪ್ರಾರಂಭವಾದ ಸ್ಮೃತಿ ದಿನ ಆಚರಿಸುತ್ತಾ ದೇಶದ ಪ್ರತಿ ಜಿಲ್ಲೆಯಲ್ಲಿ ಮೂಲೆಯಲ್ಲಿ, ದೇಶವಾಸಿಗಳು ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ಲಕ್ಷಾಂತರ ಕಾರ್ಯಕ್ರಮ ನಡೆಸಿದ್ದಾರೆ. ಬಹುಶಃ ಇತಿಹಾಸದಲ್ಲಿ ಒಂದೇ ಉದ್ದೇಶಕ್ಕಾಗಿ ಇಷ್ಟು ವಿಶಾಲ, ದೀರ್ಘ ಕಾಲದ ಉತ್ಸವ ನಡೆದಿದ್ದರೆ, ಅದು ಬಹುಶಃ ಮೊದಲ ಘಟನೆ ಆಗಿರಬೇಕು. ಹಿಂದೂಸ್ತಾನದ ಪ್ರತಿ ಮೂಲೆಯಲ್ಲೂ ಮಹಾಪುರುಷರ ಸ್ಮರಣೆ ಮಾಡುವ ಪ್ರಯತ್ನ ಮಾಡಲಾಗಿದೆ. ಇವರಿಗೆ ಒಂದಲ್ಲಾ ಒಂದು ಕಾರಣಕ್ಕಾಗಿ ಇತಿಹಾಸದಲ್ಲಿ ಸ್ಥಾನ ದೊರೆತಿರಲಿಲ್ಲ. ಅಥವಾ ಅವರನ್ನು ಮರೆತೇ ಬಿಡಲಾಗಿತ್ತು. ಆದರೆ ಇಂದು ದೇಶ ದೇಶದ ಮೂಲೆ ಮೂಲೆಯಲ್ಲಿ ಹುಡುಕಿ ಅಂತಹ ಮಹಾಪುರುಷರ, ತ್ಯಾಗಿಗಳ, ಬಲಿದಾನಿಗಳನ್ನು ಸ್ಮರಿಸಿ, ನಮಿಸಿದ್ದಾರೆ. ಅಮೃತ ಮಹೋತ್ಸವದ ಸಂದರ್ಭದಲ್ಲಿ, ಈ ಎಲ್ಲ ಮಹಾಪುರಷರಿಗೆ ನಮನ ಸಲ್ಲಿಸುವ ಅವಕಾಶ ಸಿಕ್ಕಿದೆ. 
ನಿನ್ನೆ 14ನೇ ಆಗಸ್ಟ್ ರಂದು  ಭಾರತ ದೇಶ ವಿಭಜನೆಯ ಭೀಕರತೆಯ  ಸ್ಮರಣೆಯ ದಿನವನ್ನೂ ಭಾರವಾದ ಮನದೊಂದಿಗೆ, ಹೃದಯಕ್ಕೆ ಆಗ ಗಾಯವನ್ನು ಸ್ಮರಿಸಿತು, ಆ ಕೋಟಿ ಕೋಟಿ ಜನರು ತ್ರಿವರ್ಣ ಧ್ವಜದ ಗೌರವಕ್ಕಾಗಿ ಸಹಿಸಿಕೊಂಡಿದ್ದರು, ಮಾತೃಭೂಮಿಯ ಮಣ್ಣಿನ ಪ್ರೀತಿಯಿಂದ ಸಹಿಸಿಕೊಂಡರು. ಆದರೆ ಧೈರ್ಯಗೆಡಲಿಲ್ಲ. ಭಾರತದ ಬಗೆಗಿನ ಪ್ರೀತಿಯಿಂದ ಹೊಸ ಜೀವನ ನಡೆಸುವ ಅವರ ಸಂಕಲ್ಪ, ನಮನಾರ್ಹವಾಗಿದೆ.

ಇಂದು ನಾವು ಆಜಾದೀ ಕಾ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಕಳೆದ 75 ವರ್ಷಗಳಲ್ಲಿ ದೇಶಕ್ಕಾಗಿ ಬದುಕಿದ, ಮಡಿದ, ದೇಶದ ಸುರಕ್ಷತೆಗೆ ಶ್ರಮಿಸುತ್ತಿರುವ, ದೇಶದ ಸಂಕಲ್ಪ ಪೂರೈಸುವವರಿಗೆ, ಅವರು ಸೇನೆಯ ಯೋಧರಾಗಿರಲಿ, ಪೊಲೀಸರೇ ಆಗಿರಲಿ, ಆಡಳಿತದಲ್ಲಿನ ಅಧಿಕಾರಿಗಳೇ ಆಗಿರಲಿ, ಜನಪ್ರತಿನಿಧಿಗಳೇ ಆಗಿರಲಿ, ಸ್ಥಳೀಯ ಆಡಳಿತದ ಜನರಿರಲಿ, ರಾಜ್ಯಗಳ ಆಡಳಿತಗಾರರೇ ಆಗಿರಲಿ, ಕೇಂದ್ರದ ಆಡಳಿತಗಾರರೇ ಆಗಿರಲಿ, 75 ವರ್ಷದಲ್ಲಿ ಅವರೆಲ್ಲರ ಕೊಡುಗೆಯನ್ನು ಇಂದು ಸ್ಮರಿಸುವ ಅವಕಾಶವಿದೆ. ಅನೇಕ ಸಂಕಷ್ಟಗಳ ನಡುವೆ ಸಾಗಿ, ದೇಶದ ಕೋಟಿ ಕೋಟಿ ನಾಗರಿಕರೂ ದೇಶವನ್ನು ಮುಂದೆ ಸಾಗುವಂತೆ ಮಾಡಲು, ತಮ್ಮಿಂದ ಏನೆಲ್ಲಾ ಸಾಧ್ಯವೋ ಅದನ್ನು ಮಾಡುವ ಪ್ರಯತ್ನ ಮಾಡಿದ್ದಾರೆ. 
ನನ್ನ ಪ್ರೀತಿಯ ದೇಶವಾಸಿಗಳೇ, 
75 ವರ್ಷಗಳ ಈ ನಮ್ಮ ಪಯಣ, ಹಲವು ಏರಿಳಿತಗಳಿಂದ ಕೂಡಿದೆ. ಸುಖ ದುಃಖದ ಛಾಯೆ ಕಾಣುತ್ತಿರುತ್ತದೆ. ಇದರ ನಡುವೆಯೂ ನಮ್ಮ ದೇಶವಾಸಿಗಳು, ಫಲಶ್ರುತಿ ಗಳಿಸಿದ್ದಾರೆ. ಪುರುಷಾರ್ಥ ಪಡೆದಿದ್ದಾರೆ. ಸೋಲನ್ನು ಒಪ್ಪಿಕೊಂಡಿಲ್ಲ. ಸಂಕಲ್ಪವನ್ನು ಕೈಚೆಲ್ಲಿಲ್ಲ. ಹೀಗಾಗಿಯೇ ಇದೂ ಸತ್ಯವಾಗಿದೆ. ನೂರಾರು ವರ್ಷಗಳ ಗುಲಾಮಗಿರಿಯ ಕಾಲಘಟ್ಟದಲ್ಲೂ, ಭಾರತದ ಮನಕ್ಕೆ, ಭಾರತದ ಮಾನವತೆಯ ಭಾವನೆಗೆ ಹಲವು ಘಾಸಿ ಆಗಿದೆ, ನೋವಾಗಿದೆ. ಇದರ ನಡುವೆಯೂ ಒಂದು ಹಠ ಇತ್ತು, ಒಂದ ಉತ್ಸಾಹ ಇತ್ತು. ಹೀಗಾಗಿಯೇ ಕೊರತೆಯ ನಡುವೆಯೂ, ಅಣಕದ ನಡುವೆಯೂ, ಯಾವಾಗ ಸ್ವಾತಂತ್ರ್ಯದ ಹೋರಾಟ ಅಂತಿಮ ಘಟ್ಟದಲ್ಲಿತ್ತೋ ಆಗ, ದೇಶವನ್ನು ಹೆದರಿಸಲು, ನಿರಾಶೆಗೊಳಿಸಲು, ಹತಾಶಗೊಳಿಸಲು ಹಲವು ಉಪಾಯ ಮಾಡಲಾಯಿತು. ಸ್ವಾತಂತ್ರ್ಯ ಬಂದರೆ, ಬ್ರಿಟಿಷರು ಹೊರಟು ಹೋದರೆ, ದೇಶ ಒಡೆದು ಹೋಗುತ್ತದೆ. ದೇಶ ಹಾಳಾಗಿ ಹೋಗುತ್ತದೆ. ದೇಶದ ಜನರು ತಾವೇ ಹೊಡೆದಾಡಿ ಸಾಯುತ್ತಾರೆ. ಏನೇನೂ ಉಳಿಯುವುದಿಲ್ಲ. ಕೇವಲ ಗಾಢಾಂದಕಾರದ ಯುಗಕ್ಕೆ ಭಾರತ ಹೋಗುತ್ತದೆ.  ಹೀಗೆ ಏನೆಲ್ಲಾ ಅನುಮಾನ, ಶಂಕೆ ಮೂಡಿಸಲಾಗಿತ್ತು. 

ಆದರೆ, ಅವರಿಗೆ ತಿಳಿದಿರಲಿಲ್ಲ. ಇದು ಹಿಂದೂಸ್ತಾನದ ಮಣ್ಣು ಎಂದು. ಈ ಮಣ್ಣಿನಲ್ಲಿ ಎಂತಹ ಸಾಮರ್ಥ್ಯವಿದೆ ಎಂದರೆ ಅದು ಆಡಳಿತವನ್ನೂ ಮೀರಿ, ಸಾಮರ್ಥ್ಯದ ಅಂತರ ಪ್ರವಾಹದೊಂದಿಗೆ ಜೀವಂತವಾಗಿರುತ್ತದೆ. ಅದು ಪೀಳಿಗೆಗಳವರೆಗೆ ಇರುತ್ತದೆ. ಇದರ ಪರಿಣಾಮವಾಗಿಯೇ ನಾವು ಏನೆಲ್ಲಾ ಎದುರಿಸಿದ್ದೇವೆ. ಕೆಲವು ಬಾರಿ ಅನ್ನಕ್ಕೂ ಸಂಕಟ ಎದುರಾಗಿತ್ತು. ಕೆಲವು ಬಾರಿ ಯುದ್ಧದ ಶಿಕಾರಿ ಆದೆವು, ಭಯೋತ್ಪಾದನೆ ಹಲವು ಸವಾಲು ಒಡ್ಡಿತು. ನಿರ್ದೋಷಿ ನಾಗರಿಕರನ್ನು ಸಾವಿನ ಮನೆಗೆ ತಳ್ಳಿತು. ಛದ್ಮಯುದ್ಧ ನಡೆಯುತ್ತಿತ್ತು. ಪ್ರಕೃತಿ ವಿಕೋಪಗಳೂ ನಡೆಯುತ್ತಿದ್ದವು. ಯಶಸ್ಸು, ವೈಫಲ್ಯ, ಆಶಾ, ನಿರಾಶಾ, ಎಷ್ಟೆಲ್ಲಾ ಸಂಕಷ್ಟ ಎದುರಾದವು. ಆದರೂ, ಈ ಎಲ್ಲ ಸವಾಲುಗಳ ನಡುವೆಯೂ ಭಾರತ ಮುಂದೆ ಸಾಗುತ್ತಿದೆ. ಭಾರತದ ವಿವಿಧತೆ, ಕೆಲವರ ಪ್ರಕಾರ ಭಾರತಕ್ಕೆ ಯಾವುದೇ ಭಾರ ಎನಿಸಿತ್ತೋ, ಆ ಭಾರತದ ವಿವಿಧತೆಯೇ ಭಾರತದ ಅಮೂಲ್ಯ ಶಕ್ತಿಯಾಗಿದೆ. ಶಕ್ತಿಯ ಒಂದು ಅದ್ಭುತ ಪ್ರವಾಹವಾಗಿದೆ.
ಭಾರತದ ಬಳಿ ಅಂತರ್ಗತವಾದ ಶಕ್ತಿ ಇದೆ ಎಂಬುದು ಜಗತ್ತಿಗೆ ತಿಳಿದಿರಲಿಲ್ಲ. ಅದರಲ್ಲಿ ಸಂಸ್ಕಾರ ಹರಿಯುತ್ತಿದೆ. ಮನ ಮಸ್ತಿಷ್ಕದ ವಿಚಾರದ ಬಂಧನವಿದೆ ಎಂಬುದು ತಿಳಿದಿರಲಿಲ್ಲ. ಅದೇನೆಂದರೆ ಭಾರತ ಪ್ರಜಾಪ್ರಭುತ್ವದ ಜನನಿ. ಮದರ್ ಆಫ್ ಡೆಮಾಕ್ರಸಿ. ಯಾರ ನರನಾಡಿಯಲ್ಲಿ ಲೋಕತಂತ್ರ ಇದೆಯೋ, ಯಾರು ಸಂಕಲ್ಪ ಮಾಡಿ ಮುನ್ನಡೆಯುತ್ತಾರೋ, ಆ ಅಧಿಕಾರವು ವಿಶ್ವದ ಅತಿ ದೊಡ್ಡ ದೊರೆಗೂ ಬಿಕ್ಕಟ್ಟಿನ ಕಾಲವಾಗಿರುತ್ತದೆ. ಪ್ರಜಾಪ್ರಭುತ್ವದ ಈ ಜನನಿ. ಇದು ಲೋಕತಂತ್ರದ ಜನನಿ. ನಮ್ಮ ಬಳಿ ಅಮೌಲ್ಯ ಸಾಮರ್ಥ್ಯ ಇದೆ ಎಂಬುದನ್ನು ನಮ್ಮ ಭಾರತ ಸಾಬೀತು ಮಾಡಿ ತೋರಿದೆ. 
ನನ್ನ ಪ್ರೀತಿಯ ದೇಶವಾಸಿಗಳೇ,
75 ವರ್ಷಗಳ ಯಾತ್ರೆಯಲ್ಲಿ, ಆಶಾ, ಅಪೇಕ್ಷೆಯ ನಡುವೆ ಪ್ರತಿಯೊಬ್ಬರ ಪ್ರಯತ್ನಗಳು, ನಮ್ಮನ್ನು ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ತಲುಪಿಸಿವೆ. 2014ರಲ್ಲಿ ದೇಶವಾಸಿಗಳು ನನಗೆ ಜವಾಬ್ದಾರಿ ನೀಡಿದರು. ಕೆಂಪುಕೋಟೆಯ ಮೇಲಿಂದ ದೇಶವಾಸಿಗಳ ಗುಣಗಾನ ಮಾಡುವ ಅವಕಾಶ ದೊರೆತ ಸ್ವಾತಂತ್ರ್ಯಾನಂತರ ಜನಿಸಿದ ಮೊದಲ ವ್ಯಕ್ತಿ ನಾನಾಗಿದ್ದೇನೆ. ಆದರೆ ನನ್ನ ಹೃದಯದಲ್ಲಿ ನಾನು ನಿಮ್ಮಿಂದ ಏನೆಲ್ಲಾ  ಕಲಿತಿದ್ದೇನೆ, ನಿಮ್ಮನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇನೆ. ಸ್ನೇಹಿತರೆ, ನಾನು ನಿಮ್ಮ ಸುಖ ದುಃಖ ಅರ್ಥ ಮಾಡಿಕೊಂಡಿದ್ದೇನೆ. ದೇಶದ ಆಸೆ ಆಕಾಂಕ್ಷೆಯ ನಡುವೆ ಯಾವ ಆತ್ಮ ಇದೆಯೋ ಅದನ್ನು ನಾನು ಅರ್ಥ ಮಾಡಿಕೊಂಡಿದ್ದೇನೋ, ಅದನ್ನು ನಾನು ಪೂರ್ಣ ಕಾರ್ಯಾಕಾಲದವರೆಗೆ ದೇಶದ ಜನರನ್ನು, ದಲಿತರು, ಶೋಷಿತರು, ಪೀಡಿತರು, ವಂಚಿತರು, ಆದಿವಾಸಿಗಳು, ಮಹಿಳೆಯರು, ಯುವಜನರು, ರೈತರು, ದಿವ್ಯಾಂಗರು ಯಾರೇ ಇರಲಿ, ಸಬಲೀಕರಿಸಲು ವಿನಿಯೋಗಿಸುತ್ತೇನೆ. ಅದು.ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣವಿರಲಿ, ಸಮುದ್ರದ ತಟವಿರಲಿ, ಹಿಮಾಲಯದ ಶಿಖರವೇ ಇರಲಿ, ಎಲ್ಲ ಮೂಲೆಯಲ್ಲೂ ಇರುವ, ಕೊನೆಯ ವ್ಯಕ್ತಿಯ ಬಗ್ಗೆ ಚಿಂತಿಸುವ  ಮಹಾತ್ಮಾಗಾಂಧೀ ಅವರ ಕನಸು ಏನಿತ್ತು, ಕೊನೆ ಸಾಲಿನಲ್ಲಿ ನಿಂತ ವ್ಯಕ್ತಿಯನ್ನೂ ಸಬಲೀಕರಿಸುವ ಮಹಾತ್ಮಾ ಗಾಂಧೀ ಅವರ ಆಕಾಂಕ್ಷೆ ಏನಿತ್ತು, ನಾನು ಅದಕ್ಕಾಗಿ ನನ್ನನ್ನು ನಾನು ಸಮರ್ಪಿತಗೊಳಿಸಿಕೊಂಡಿದ್ದೇನೆ. ಕಳೆದ 8 ವರ್ಷಗಳ ಫಲಿತಾಂಶ, ಸ್ವಾತಂತ್ರ್ಯದ ಇಷ್ಟು ದಶಕಗಳ ಅನುಭವ, ಇಂದು 75 ವರ್ಷದಲ್ಲಿ ಭಾರತ ಅಮೃತ ಕಾಲಕ್ಕೆ ಕಾಲಿಡುತ್ತಿರುವಾಗ, ಅಮೃತಕಾಲದ ಈ ಮೊದಲ ಬೆಳಗ್ಗೆ, ನಾನು ಎಂತಹ ಸಾಮರ್ಥ್ಯವನ್ನು ನೋಡುತ್ತಿದ್ದೇನೆ ಎಂದರೆ, ನಾನು ಹೆಮ್ಮೆಯಿಂದ ತುಂಬಿ ಹೋಗಿದ್ದೇನೆ. 
ಪ್ರೀತಿಯ ದೇಶವಾಸಿಗಳೇ,
ನಾನು ಇಂದು ದೇಶದ ಅತ್ಯಂತ ದೊಡ್ಡ ಸೌಭಾಗ್ಯವನ್ನು ನೋಡುತ್ತಿದ್ದೇನೆ. ಭಾರತದ ಜನ ಮನ, ಆಕಾಂಕ್ಷೆಯ ಜನಮನವಾಗಿದೆ. ಎಕ್ಸ್ ಪೆಕ್ಟೇಷನಲ್ ಸೊಸೈಟಿ. ಯಾವುದೇ ದೇಶದ ಅತಿ ದೊಡ್ಡ ಆಸ್ತಿಯಾಗುತ್ತದೆ. ಇಂದು ಹಿಂದೂಸ್ತಾನದ ಪ್ರತಿ  ಮೂಲೆಯಲ್ಲೂ, ಸಮಾಜದ ಎಲ್ಲ ವರ್ಗದಲ್ಲೂ, ಎಲ್ಲೆಡೆ ಆಕಾಂಕ್ಷೆ ಉತ್ತುಂಗದಲ್ಲಿದೆ ಎಂಬ ಹೆಮ್ಮೆ ನಮಗಿದೆ.
ದೇಶದ ಎಲ್ಲ ನಾಗರಿಕರೂ, ಬದಲಾಗ ಬಯಸುತ್ತಾರೆ, ಬದಲಾವಣೆ ನೋಡಲು ಬಯಸುತ್ತಾರೆ. ಆದರೆ, ಅದಕ್ಕಾಗಿ ಕಾಯಲು ತಯಾರಿಲ್ಲ. ಅದನ್ನು ಅವರು ತಮ್ಮ ಕಣ್ಣೆದುರೇ ಆಗುವುದನ್ನು ನೋಡಲು ಇಚ್ಛೆ ಪಡುತ್ತಾರೆ. ಕರ್ತವ್ಯದ ಜೊತೆ ಸೇರಿಸಿ ನೋಡಲು ಬಯಸುತ್ತಾರೆ. ಅವರು ಗತಿ ಬಯಸುತ್ತಾರೆ, ಪ್ರಗತಿ ಬಯಸುತ್ತಾರೆ. 75 ವರ್ಷಗಳಲ್ಲಿನ ಎಲ್ಲ ಕನಸು ತಮ್ಮ ಕಣ್ಣ ಮುಂದೆಯೇ ಸಾಕಾರವಾಗುವುದನ್ನು ನೋಡುವ ಆಕಾಂಕ್ಷೆ ಹೊಂದಿದ್ದಾರೆ. ಆ ಆಸೆ ಅವರಲ್ಲಿದೆ. ಕೆಲವರಿಗೆ ಸಂಕಟವಾಗಬಹುದು. ಏಕೆಂದರೆ, ಯಾವಾಗ ಆಸ್ಪಿರೇಷನಲ್ ಸೊಸೈಟಿ ಇರುತ್ತದೋ ಆಗ ಸರ್ಕಾರಗಳಿಗೂ ಕತ್ತಿಯ ಅಲುಗಿನ ಮೇಲೆ ನಡೆಯುವಂತಾಗುತ್ತದೆ. ಸರ್ಕಾರಗಳಿಗೂ ಸಮಯದ ಜೊತೆ ಓಡುವ ಅಗತ್ಯ ಬರುತ್ತದೆ. ನನಗೆ ವಿಶ್ವಾಸವಿದೆ. ಅದು ಕೇಂದ್ರ ಸರ್ಕಾರವೇ ಇರಲಿ, ರಾಜ್ಯ ಸರ್ಕಾರವೇ ಇರಲಿ, ಸ್ಥಳೀಯ ಸಂಸ್ಥೆಗಳ ಆಡಳಿತವೇ ಇರಲಿ, ಯಾವುದೇ ರೀತಿಯ ಆಡಳಿತ ವ್ಯವಸ್ಥೆ ಇರಲಿ, ಪ್ರತಿಯೊಬ್ಬರಿಗೂ  ಈ ಆಸ್ಪಿರೇಷನಲ್ ಸೊಸೈಟಿಯನ್ನು ಎದುರಿಸಬೇಕಾಗುತ್ತದೋ ಆಗ, ನಾವು ಅವರ ಆಕಾಂಕ್ಷೆಗಳಿಗಾಗಿ ಹೆಚ್ಚು ಕಾಯಲು ಆಗುವುದಿಲ್ಲ. ಮ ಆಸ್ಪಿರೇಷನಲ್ ಸೊಸೈಟಿ ದೀರ್ಘ ಕಾಲ ಕಾದಿದೆ. ಇನ್ನು ಈಗ, ಅವರು ತಮ್ಮ ಮುಂಬರುವ ಪೀಳಿಗೆ, ಕಾಯುತ್ತಾ ಜೀವನ ಕಳೆಯುವಂತೆ ಮಾಡಲು ಸಿದ್ಧರಿಲ್ಲ. ಇದಕ್ಕಾಗಿ ಈ ಅಮೃತ ಕಾಲದಲ್ಲಿ ಪ್ರಥಮ ಪ್ರಭಾತದಲ್ಲಿ, ಆ ಆಸ್ಪಿರೇಷನಲ್ ಸೊಸೈಟಿಯ ಆಕಾಂಕ್ಷೆಯನ್ನು ಪೂರ್ಣಗೊಳಿಸಲು ಉತ್ತಮ ಅವಕಾಶವನ್ನು ಕಲ್ಪಿಸಿದೆ. 

ನನ್ನ ಪ್ರೀತಿಯ ದೇಶವಾಸಿಗಳೇ,
ನಾವು ಹಿಂದಿನ ದಿನ ನೋಡಿದ್ದೇವೆ. ಮತ್ತೊಂದು ಶಕ್ತಿಯ ಅನುಭವ ನಮಗಾಗಿದೆ. ಅದೇನೆಂದರೆ ಭಾರತದ ಸಾಮೂಹಿಕ ಚೈತನ್ಯದ ಜಾಗೃತಿ. ಒಂದು ಸಾಮೂಹಿಕ ಚೈತನ್ಯದ ಮರು ಜಾಗೃತಿಯಾಗಿದೆ. ಸ್ವಾತಂತ್ರ್ಯದ ಇಷ್ಟು ಸಂಘರ್ಷದಲ್ಲಿ ಏನು ಅಮೃತ ಇತ್ತು, ಅದು ಈಗ ಸಂಕಲಿತವಾಗುತ್ತಿದೆ. ಸಂಕಲ್ಪವಾಗಿ ಪರಿವರ್ತನೆಯಾಗುತ್ತಿದೆ. ಪುರುಷಾರ್ಥದ ಪರಾಕಾಷ್ಟೆಯೊಂದಿಗೆ ಸೇರುತ್ತಿದೆ. ಸಿದ್ಧಿಯ ಮಾರ್ಗದಲ್ಲಿ ಸಾಗುತ್ತಿದೆ. ನಾನು ಅರ್ಥ ಮಾಡಿಕೊಳ್ಳುತ್ತೇನೆ ಈ ಚೇತನ, ಚೇತನದ ಜಾಗೃತಿ, ಮರು ಜಾಗೃತಿ, ನಮ್ಮ ಅತಿ ದೊಡ್ಡ ಆಸ್ತಿಯಾಗಿದೆ. ಈಗ ಮರು ಜಾಗೃತಿ ನೋಡಿ, 15ನೇ ಆಗಸ್ಟ್ ವರೆಗೆ ಜನರಿಗೆ ಬಹುಶಃ ತಿಳಿಯುವುದಿಲ್ಲ. ದೇಶದ ಹಿಂದೆ ಎಂತಹ ಶಕ್ತಿ ಇದೆ ಎಂದು. ಕಳೆದ 3 ದಿನಗಳಿಂದ ಯಾವ ರೀತಿಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು, ತಿರಂಗಾ ಯಾತ್ರೆಯಲ್ಲಿ ದೇಶ ಸಾಗುತ್ತಿದೆ. ದೊಡ್ಡ ದೊಡ್ಡ ಸೋಸಿಯಲ್ ಸೈನ್ಸ್ ಎಕ್ಸ್ ಪರ್ಟ್ ಗಳು, ಕೂಡ ನಮ್ಮ ದೇಶದ ಹಿಂದೆ, ಎಂತಹ ಶಕ್ತಿ ಇದೆ ಎಂಬುದನ್ನು ಕಲ್ಪಿಸಿಕೊಂಡಿರಲಿಲ್ಲ.ತ್ರಿವರ್ಣ ಧ್ವಜ ಇದನ್ನು ಸಾಬೀತು ಮಾಡಿದೆ. ಈ ಪುನರ್ ಚೇತನ, ಪುನರ್ ಜಾಗೃತಿಯ ಫಲ. ಇವರಿಗೆ  ಅರ್ಥವಾಗಿಲ್ಲ ದೇಶದ ಜನರು ದೇಶಕ್ಕಾಗಿ ಮೂಲೆ ಮೂಲೆಯಿಂದ ಬರುತ್ತಾರೋ ಆಗ ಚೇತನದ ಅನುಭೂತಿ ಆಗುತ್ತದೆ. ಕೊರೊನಾ ಯೋಧರ ಜೊತೆಗೆ ದೇಶ ಚಪ್ಪಾಳೆ ತಟ್ಟಿ, ಹೆಗಲಿಗೆ ಹೆಗಲುಕೊಟ್ಟು ನಿಲ್ಲುತ್ತದೋ ಆಗ ಚೇತನದ ಅನುಭೂತಿ ಆಗುತ್ತದೆ. ಯಾವಾಗ ದೇಶ ದೀಪ ಹಚ್ಚಿ, ಕೊರೋನಾ ಯೋಧರಿಗೆ ಶುಭ ಕೋರಲು ದೇಶ ಹೊರ ಬರುತ್ತದೆಯೋ ಆಗ ಚೇತನದ ಅನುಭೂತಿ ಆಗುತ್ತದೆ. ಜಗತ್ತು, ಕೊರೊನಾ ಕಾಲಘಟ್ಟದಲ್ಲಿ ಲಸಿಕೆ, ಪಡೆಯಬೇಕೋ ಬೇಡವೋ, ಅದು ಪ್ರಯೋಜನಕಾರಿಯೋ ಅಲ್ಲವೋ ಎಂಬ ಗೊಂದಲದಲ್ಲಿ ಸಿಲುಕಿದ್ದಾಗ, ನಮ್ಮ ದೇಶದ ಗ್ರಾಮದ ಮತ್ತು ಬಡವರು ಕೂಡ 200 ಕೋಟಿ ಡೋಸ್ ಲಸಿಕೆ ಪಡೆದು ವಿಶ್ವಕ್ಕೆ ಸವಾಲು ಎಸೆಯುವ ಕೆಲಸ ಮಾಡುತ್ತಾರೆ. ಇದು ಚೇತನ. ಇದು ಸಾಮರ್ಥ್ಯ. ಈ ಸಾಮರ್ಥ್ಯವೇ ಇಂದು ದೇಶಕ್ಕೆ ಹೊಸ ತಾಕತ್ತು ನೀಡಿದೆ.
ನನ್ನ ಪ್ರೀತಿಯ ಸೋದರ ಸೋದರಿಯರೇ,
ನಾನು ಒಂದು ಮಹತ್ವಪೂರ್ಣ ಸಾಮರ್ಥ್ಯವನ್ನು ನೋಡುತ್ತಿದ್ದೇನೆ. ಆಸ್ಪಿರೇಷನಲ್ ಸೊಸೈಟಿ, ಮರು ಜಾಗೃತಿ, ಸ್ವಾತಂತ್ರ್ಯದ ಇಷ್ಟು ದಶಕಗಳ ನಂತರ, ಇಡೀ ವಿಶ್ವ  ಭಾರತದತ್ತ ನೋಡುವ ನೋಟವೇ ಬದಲಾಗಿದೆ. ವಿಶ್ವ ಭಾರತದತ್ತ ಗೌರವದಿಂದ ನೋಡುತ್ತಿದೆ. ಅಪೇಕ್ಷೆಯಿಂದ ನೋಡುತ್ತಿದೆ. ಸಮಸ್ಯೆಗಳಿಗೆ ಭಾರತದ ಮಣ್ಣಿನಲ್ಲಿ ಪರಿಹಾರವನ್ನು ಹುಡುಕುತ್ತಿದೆ. ವಿಶ್ವದಲ್ಲಿನ ಈ ಬದಲಾವಣೆ, ವಿಶ್ವದ ಆಲೋಚನೆಯಲ್ಲಿನ ಈ ಬದಲಾವಣೆ, 75ವರ್ಷಗಳ ನಮ್ಮ ಅನುಭವ ಯಾತ್ರೆಯ ಪರಿಣಾಮವಾಗಿದೆ.
ನಾವು ಯಾರ ರೀತಿಯಲ್ಲಿ, ಸಂಕಲ್ಪದೊಂದಿಗೆ ಸಾಗುತ್ತಿದ್ದೇವೆಯೋ, ವಿಶ್ವ ಅದನ್ನು ನೋಡುತ್ತಿದೆ. ವಿಶ್ವವೂ ಭಾರತದ ಭರವಸೆಯೊಂದಿಗೆ ಬದುಕುತ್ತಿದೆ. ಈ ಭರವಸೆಯನ್ನು ಪೂರ್ಣಗೊಳಿಸುವ ಶಕ್ತಿ ಅಡಗಿದೆ ಎಂಬುದು ಕಾಣತೊಡಗಿದೆ. ಇದನ್ನು ನಾನು ತ್ರಿ ಶಕ್ತಿಯ ರೂಪದಲ್ಲಿ, ಮೂರು ಶಕ್ತಿಯ ರೂಪದಲ್ಲಿ ನೋಡುತ್ತೇನೆ. ಆ ಮೂರು ಶಕ್ತಿ, ಆಸ್ಪಿರೇಷನ್, ಪುನರ್ ಜಾಗೃತಿ, ಮತ್ತು ವಿಶ್ವದ ಭರವಸೆಯಾಗಿದೆ. ಇದನ್ನು ಪೂರ್ಣಗೊಳಿಸಲು.. ನಮಗೆ ತಿಳಿದಿದೆ ಸ್ನೇಹಿತರೆ, ಇಂದು ವಿಶ್ವದಲ್ಲಿ ಒಂದು ಭರವಸೆ ಮೂಡಲು ನಮ್ಮ ದೇಶವಾಸಿಗಳ ಅತಿ ದೊಡ್ಡ ಕೊಡುಗೆ ಇದೆ. 130 ಕೋಟಿ ದೇಶವಾಸಿಗಳು, ಹಲವು ದಶಕಗಳ ಅನುಭವದೊಂದಿಗೆ ಸ್ಥಿರ ಸರ್ಕಾರದ ಮಹತ್ವ ಏನು ಎಂಬುದನ್ನು, ರಾಜನೀತಿಯ ಸ್ಥಿರತೆ ಏನು ಎಂಬುದನ್ನು, ಪೊಲಿಟಿಕಲ್ ಸ್ಟೆಬಿಲಿಟಿ ವಿಶ್ವದಲ್ಲಿ ಹೇಗೆ ಶಕ್ತಿ ಪ್ರದರ್ಶಿಸುತ್ತದೆ ಎಂಬುದನ್ನು, ನೀತಿಗಳಲ್ಲಿ ಯಾವ ರೀತಿ ಸಾಮರ್ಥ್ಯ ಮೂಡುತ್ತದೆ ಎಂಬುದನ್ನು, ಆ ನೀತಿಗಳಲ್ಲಿ ವಿಶ್ವಕ್ಕೆ ಹೇಗೆ ಭರವಸೆ ಮೂಡುತ್ತದೆ ಎಂಬುದನ್ನು ಭಾರತ ತೋರಿಸಿದೆ. ವಿಶ್ವವೂ ಇದನ್ನು ಅರ್ಥ ಮಾಡಿಕೊಂಡಿದೆ.
ಯಾವಾಗ ರಾಜನೀತಿಯಲ್ಲಿ ಸ್ಥಿರತೆ ಇರುತ್ತದೆಯೋ, ನೀತಿಯಲ್ಲಿ ಗತಿಶೀಲತೆ ಇರುತ್ತದೆಯೋ, ನಿರ್ಣಯಗಳಲ್ಲಿ ವೇಗ ಇರುತ್ತದೆಯೋ, ಸರ್ವ ವ್ಯಾಪಕತೆ ಇರುತ್ತದೆಯೋ, ಸರ್ವ ಸಮಾವೇಶಿ ಇರುತ್ತದೆಯೋ, ಆಗ ಪ್ರಗತಿಯಲ್ಲಿ ಪ್ರತಿಯೊಬ್ಬರೂ ಭಾಗೀಧಾರರಾಗುತ್ತಾರೆ. ನಾವು ಎಲ್ಲರೊಂದಿಗೆ ಎಲ್ಲರ ವಿಶ್ವಾಸ, ಎಲ್ಲರ ವಿಕಾಸ ಮಂತ್ರದೊಂದಿಗೆ ಮುನ್ನಡೆಯುತ್ತಿದ್ದೇವೆ. ನೋಡ ನೋಡುತ್ತಿದ್ದಂತೆ ದೇಶವಾಸಿಗಳು, ಎಲ್ಲರ ವಿಶ್ವಾಸ ಮತ್ತು ಎಲ್ಲರ ಪ್ರಯತ್ನದೊಂದಿಗೆ ಇದಕ್ಕೆ ಮತ್ತಷ್ಟು ರಂಗು ತುಂಬಿದ್ದಾರೆ.

ಹೀಗಾಗಿ ನಾವು ನಮ್ಮ ಸಮೂಹಿಕ ಶಕ್ತಿಯನ್ನು ನಾವು ನೋಡಿದ್ದೇವೆ. ಆಜಾದಿ ಕಾ ಅಮೃತ ಮಹೋತ್ಸವವನ್ನು ಯಾರ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂಬುದನ್ನು ನೋಡಿದ್ದೇನೆ. ಯಾವ ರೀತಿಯಲ್ಲಿ ಪ್ರತಿ ಜಿಲ್ಲೆಯಲ್ಲಿ, 75 ಅಮೃತ ಸರೋವರ ನಿರ್ಮಾಣ ಮಾಡುವ ಅಭಿಯಾನ ಏನು ನಡೆಯುತ್ತಿದೆ. ಇದರಲ್ಲಿ ಗ್ರಾಮ ಗ್ರಾಮಗಳ ಜನರು ಕೈಜೋಡಿಸುತ್ತಿದ್ದಾರೆ. ಕರಸೇವೆ ಮಾಡುತ್ತಿದ್ದಾರೆ. ತಮ್ಮ ಗ್ರಾಮದಲ್ಲಿ ಜಲ ಸಂರಕ್ಷಣೆಗಾಗಿ ಅಭಿಯಾನ ಮಾಡುತ್ತಿದ್ದಾರೆ. ಹೀಗಾಗಿ 
ಸಹೋದರ ಸಹೋದರಿಯರೇ,
ಅದು ಸ್ವಚ್ಛತೆಯ ಅಭಿಯಾನವಾಗಿರಲಿ, ಇಲ್ಲವೇ ಬಡವರ ಕಲ್ಯಾಣದ ಕಾರ್ಯಕ್ರಮವೇ ಆಗಿರಲಿ, ದೇಶ ಇಂದು ಪೂರ್ಣ ಶಕ್ತಿಯೊಂದಿಗೆ ಮುಂದೆ ಸಾಗುತ್ತಿದೆ. ಆದರೆ ಸೋದರ ಸೋದರಿಯರೇ, ಜನರು ಅಮೃತ ಕಾಲದಲ್ಲಿ, ನಮ್ಮ 75 ವರ್ಷಗಳ ಯಾತ್ರೆಯನ್ನು ಅದರ ಗುಣಗಾನವನ್ನು ಮಾಡುವಾಗ, ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದರೆ. ನಮ್ಮ ಕನಸು ದೂರ ಸಾಗುತ್ತದೆ.  ಹೀಗಾಗಿ 75 ವರ್ಷಗಳ ಕಾಲಘಟ್ಟ ಎಷ್ಟು ಸುಂದರವಾಗಿತ್ತೋ, ಎಷ್ಟು ಸಂಕಟಮಯವಾಗಿತ್ತೋ, ಎಷ್ಟು ಸವಾಲಿನದಾಗಿತ್ತೋ, ಎಷ್ಟೋ ಕನಸುಗಳು ಅಪೂರ್ಣವಾಗಿದ್ದರೂ, ಅದೆಲ್ಲದರ ಹೊರತಾಗಿಯೂ ನಾವು ಅಮೃತ ಕಾಲದಲ್ಲಿ ಪ್ರವೇಶ ಮಾಡುತ್ತಿರುವಾಗ, ಮುಂದಿನ 25 ವರ್ಷಗಳ ಕಾಲ, ನಮ್ಮ ದೇಶಕ್ಕಾಗಿ ಅತ್ಯಂತ ಮಹತ್ವಪೂರ್ಣವಾದುದಾಗಿದೆ.  ಆದ್ದರಿಂದ ನಾನು ಈ ಕೆಂಪುಕೋಟೆಯ ಮುಂದಿನಿಂದ 130 ಕೋಟಿ ಜನರ ಸಾಮರ್ಥ್ಯದ ಸ್ಮರಣೆ ಮಾಡುತ್ತೇನೆ. ಅವರ ಕನಸು ನೋಡುತ್ತೇನೆ. ಅವರ ಸಂಕಲ್ಪದ ಅನುಭೂತಿ ಕಾಣುತ್ತೇನೆ. ಸ್ನೇಹಿತರೆ, ನನಗೆ ಅನಿಸುತ್ತದೆ. ಮುಂದಿನ 25 ವರ್ಷಗಳಿಗೆ ನಾವು ಪಂಚ ಪ್ರಾಣಗಳಿಗೆ ನಮ್ಮ ಶಕ್ತಿಯನ್ನು ಕೇಂದ್ರೀಕರಿಸಬೇಕಾಗಿದೆ. ನಮ್ಮ ಸಂಕಲ್ಪವನ್ನು ಕೇಂದ್ರೀಕರಿಸಬೇಕಾಗಿದೆ. ನಮ್ಮ ಸಾಮರ್ಥ್ಯವನ್ನು ಕೇಂದ್ರೀಕರಿಸಬೇಕಾಗಿದೆ. ನಮಗೆ ಆ ಪಂಚ ಪ್ರಾಣದೊಂದಿಗೆ ನಾವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ಹೊತ್ತಿಗೆ, ಸ್ವಾತಂತ್ರ್ಯ ಯೋಧರ ಕನಸು ಪೂರ್ಣಗೊಳಿಸುವ ಜವಾಬ್ದಾರಿ ಹೊತ್ತು ಸಾಗಬೇಕಾಗಿದೆ. 
ನಾನು ಪಂಚ ಪ್ರಾಣದ ಬಗ್ಗೆ ಮಾತನಾಡುವಾಗ, ಮೊದಲ ಪ್ರಾಣ ದೇಶ ದೊಡ್ಡ ಸಂಕಲ್ಪದೊಂದಿಗೆ ಸಾಗಬೇಕು. ಆ ದೊಡ್ಡ ಸಂಕಲ್ಪ, ವಿಕಸಿತ  ಭಾರತ. ಅದರಲ್ಲಿ ಏನೂ ಕಮ್ಮಿ ಆಗಬಾರದು. ದೊಡ್ಡ ಸಂಕಲ್ಪ. 
ಎರಡನೇ ಪ್ರಾಣ, ನಮ್ಮ ವರ್ತನೆಯ ನಡುವೆಯೂ ಯಾವುದೇ ಮೂಲೆಯಲ್ಲಿ, ಗುಲಾಮಿಯ ಅಂಶ ಒಂದಿಷ್ಟು ಇನ್ನೂ ಇದ್ದರೂ, ಅದನ್ನು ಯಾವುದೇ ಸಂದರ್ಭದಲ್ಲಿ ಉಳಿಯಲು ಬಿಡಬೇಡಿ. ನೂರಕ್ಕೆ ನೂರರಷ್ಟು, ನೂರಾರು ವರ್ಷಗಳ ನಮ್ಮ ಗುಲಾಮಗಿರಿ, ನಮ್ಮ ಮನೋಭಾವವನ್ನು ಬಂಧಿಸಿಟ್ಟಿದೆ. ನಮ್ಮ ಕಾರ್ಯವನ್ನು ಬಂಧಿಸಿಟ್ಟಿದೆ. ನಮಗೆ, ಗುಲಾಮಗಿರಿಯ ಒಂದು ಕಿಂಚಿತ್ತು ಕಂಡು ಬಂದರೂ, ಇದಕ್ಕೂ ಮುಕ್ತಿ ನೀಡಲೇಬೇಕು
ಮೂರನೇ ಪ್ರಾಣಶಕ್ತಿ, ನಮ್ಮ ಪರಂಪರೆಯ ಬಗ್ಗೆ ನಮಗೆ ಗೌರವ ಇರಬೇಕು. ನಮ್ಮ ಪರಂಪರೆ ಭಾರತಕ್ಕೆ ಸುವರ್ಣ ಯುಗವನ್ನು ನೀಡಿತ್ತು. ಈ ಪರಂಪರೆಯೇ ಸಮನ್ವಯತೆಯ ಪರಿವರ್ತನೆಯ ಪರಿಪಾಠವನ್ನು ಹೊಂದಿದೆ. ಈ ಪರಂಪರೆಯೇ ಜಡವಾಗಿ ನಿಲ್ಲದೆ, ನಿತ್ಯನೂತನತೆಯನ್ನು ಸ್ವೀಕರಿಸುತ್ತಿದೆ. ಇಂತಹ ಪರಂಪರೆಯ ಬಗ್ಗೆ ನಮಗೆ ಹೆಮ್ಮೆ ಇರಬೇಕು. 
ನಾಲ್ಕನೇ ಪ್ರಾಣವೂ ಅಷ್ಟೇ ಮಹತ್ವದ್ದಾಗಿದೆ. ಅದು ಏಕತೆ ಮತ್ತು ಒಗ್ಗೂಡವಿಕೆ. ದೇಶದ 130 ಕೋಟಿ ದೇಶವಾಸಿಗಳ ಏಕತೆ, ಅವ ನಮ್ಮವ, ಅವ ಅನ್ಯ ಎಂಬುದಿಲ್ಲದೆ ಒಗ್ಗಟ್ಟಿನ ಶಕ್ತಿ, ಏಕ ಭಾರತ ಶ್ರೇಷ್ಠ ಭಾರತದ ಕನಸಿಗಾಗಿ ನಮ್ಮ ನಾಲ್ಕನೇ ಪ್ರಾಣವಾಗಿದೆ.
ಇನ್ನು ಐದನೇ ಪ್ರಾಣ, ಐದನೇ ಪ್ರಾಣ ನಾಗರಿಕರ ಕರ್ತವ್ಯ. ನಾಗರಿಕರ ಕರ್ತವ್ಯ ಇದರಲ್ಲಿ ಪ್ರಧಾನಿಮಂತ್ರಿ ಹೊರತಲ್ಲ, ಮುಖ್ಯಮಂತ್ರಿಯೂ ಹೊರತಲ್ಲ. ಅವರೂ ನಾಗರಿಕರೇ. ನಾಗರಿಕರ ಕರ್ತವ್ಯ. ಮುಂದಿನ 25 ವರ್ಷಗಳಲ್ಲಿ ನಮ್ಮ ಕನಸುಗಳನ್ನು ಈಡೇರಿಸಲು ಅತಿ ದೊಡ್ಡ ಪ್ರಾಣ ಶಕ್ತಿಯಾಗಿದೆ. 
ನನ್ನ ಪ್ರೀತಿಯ ದೇಶವಾಸಿಗಳೇ, 
ಯಾವಾಗ ಕನಸು ದೊಡ್ಡದಾಗಿರುತ್ತದೋ, ಯಾವಾಗ ಸಂಕಲ್ಪ ದೊಡ್ಡದಾಗಿರುತ್ತದೋ, ಆಗ ಪುರುಷಾರ್ಥವೂ ದೊಡ್ಡದಾಗಿರುತ್ತದೆ.  ಶಕ್ತಿಯೂ ದೊಡ್ಡ ರೂಪದಲ್ಲಿ ಇರುತ್ತದೆ. ಯಾರಾದರೂ ಊಹಿಸಿಕೊಳ್ಳಲು ಸಾಧ್ಯವೇ.  ದೇಶದ 40-42 ರ ಅವಧಿಯನ್ನು ನೆನಪಿಸಿಕೊಳ್ಳಿ.  ದೇಶವು ಎದ್ದು ನಿಂತಿತ್ತು. ಯಾರೋ ಕೈಯಲ್ಲಿ ಪೊರಕೆ ಹಿಡಿದಿದ್ದರು, ಯಾರೋ ಚರಕ ಹಿಡಿದಿದ್ದರು, ಯಾರೋ ಒಬ್ಬರು ಸತ್ಯಾಗ್ರಹದ ಮಾರ್ಗವನ್ನು ಆರಿಸಿಕೊಂಡಿದ್ದರು, ಮತ್ತೊಬ್ಬರು ಹೋರಾಟದ ಮಾರ್ಗವನ್ನು ಆರಿಸಿಕೊಂಡಿದ್ದರು, ಯಾರೋ ಒಬ್ಬರು ಕಾಲ ಕ್ರಾಂತಿಯ ಶೌರ್ಯದ ಮಾರ್ಗವನ್ನು ಆರಿಸಿಕೊಂಡಿದ್ದರು. ಆದರೆ 'ಸ್ವಾತಂತ್ರ್ಯ'ದ ಸಂಕಲ್ಪವು ದೊಡ್ಡದಾಗಿತ್ತು, ಆ ಶಕ್ತಿಯನ್ನು ನೋಡಿ, ಒಂದು ದೊಡ್ಡ ನಿರ್ಣಯವಿದ್ದರೆ, ಸ್ವಾತಂತ್ರ್ಯವನ್ನು ಪಡೆದುಕೊಂಡೆವು. ನಾವು ಸ್ವತಂತ್ರರಾದೆವು. ನಿರ್ಣಯವು ಸಣ್ಣದಾಗಿದ್ದರೆ, ಸೀಮಿತವಾಗಿದ್ದರೆ, ಬಹುಶಃ ಹೋರಾಟದ ದಿನಗಳು ಇಂದಿಗೂ ಮುಂದುವರಿಯುತ್ತಿದ್ದವು, ಆದರೆ ನಿರ್ಣಯವು ದೊಡ್ಡದಾಗಿತ್ತು ಹೀಗಾಗಿ, ನಾವು ಅದನ್ನು ಸಾಧಿಸಿದ್ದೇವೆ. 
ನನ್ನ ಪ್ರೀತಿಯ ದೇಶವಾಸಿಗಳೇ
ಈಗ ಅಮೃತ ಕಾಲದ ಮೊದಲ ಬೆಳಗಾಗಿರುವುದರಿಂದ, ಈ ಇಪ್ಪತ್ತೈದು ವರ್ಷಗಳಲ್ಲಿ ನಾವು ಅಭಿವೃದ್ಧಿ ಹೊಂದಿದ ಭಾರತವಾಗಿ ಉಳಿಯಬೇಕಾಗಿದೆ. ನನ್ನ ಕಣ್ಣಮುಂದೆ ಮತ್ತು 20-22-25 ವರ್ಷಗಳ ಯುವಕರು ನನ್ನ ಮುಂದೆ ಇದ್ದಾರೆ,  ದೇಶವು ಸ್ವಾತಂತ್ರ್ಯದ 100ನೇ  ವರ್ಷವನ್ನು ಆಚರಿಸುವಾಗ ನನ್ನ ದೇಶದ ಯುವಕರಾದ ನೀವು. ಆಗ 50-55  ವರ್ಷಗಳನ್ನು ಪೂರೈಸಿರುತ್ತೀರಿ, ಅಂದರೆ, ನಿಮ್ಮ ಜೀವನದ ಈ ಸುವರ್ಣ ಅವಧಿಯಲ್ಲಿರುತ್ತೀರಿ,  ನಿಮ್ಮ ವಯಸ್ಸಿನ ಈ 25-30 ವರ್ಷಗಳು ಭಾರತದ ಕನಸುಗಳನ್ನು ಈಡೇರಿಸುವ ಅವಧಿಯಾಗಿದೆ. ನೀವು ಪ್ರತಿಜ್ಞೆ ಮಾಡಿ ನನ್ನೊಂದಿಗೆ ಹೆಜ್ಜೆ ಇಡೆ, ಸ್ನೇಹಿತರೇ,  ತ್ರಿವರ್ಣ ಧ್ವಜದ ಪ್ರತಿಜ್ಞೆ ಮಾಡಿ, ನಾವೆಲ್ಲರೂ ಪೂರ್ಣ ಶಕ್ತಿಯೊಂದಿಗೆ ನಡೆಯೋಣ. ದೊಡ್ಡ ಸಂಕಲ್ಪ. ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶವಾಗಬೇಕು. ಅಭಿವೃದ್ಧಿಯ ಪ್ರತಿಯೊಂದು ಮಾನದಂಡದಲ್ಲೂ ನಾವು ಮಾನವ ಕೇಂದ್ರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸೋಣ, ನಮ್ಮ ಕೇಂದ್ರದಲ್ಲಿ ಮಾನವರು ಇರುತ್ತಾರೆ, ನಮ್ಮ ಕೇಂದ್ರದಲ್ಲಿ ಮಾನವ ಭರವಸೆಗಳು ಮತ್ತು ಆಕಾಂಕ್ಷೆಗಳು ಇರುತ್ತವೆ.   ಭಾರತವು ದೊಡ್ಡ ನಿರ್ಣಯಗಳನ್ನು ಮಾಡಿದಾಗ, ಅದು ಅದನ್ನು ಸಾಧಿಸಿ ತೋರಿಸುತ್ತದೆ ಎಂದು ನಮಗೆ ತಿಳಿದಿದೆ. 
ನಾನು ನನ್ನ ಮೊದಲ ಭಾಷಣದಲ್ಲಿ ಇಲ್ಲಿಂದ ಸ್ವಚ್ಛತೆಯ ಬಗ್ಗೆ ಮಾತನಾಡಿದಾಗ,  ದೇಶವು ಮುಂದೆ ಬಂತು,  ಅದು ಸಾಧ್ಯವಿರುವಲ್ಲೆಲ್ಲಾ ಸ್ವಚ್ಛತೆಯತ್ತ ಸಾಗಿದೆ ಮತ್ತು ಕೊಳಕನ್ನು ದ್ವೇಷಿಸುವುದು ಒಂದು ಸ್ವಭಾವವಾಗಿ ಮಾರ್ಪಟ್ಟಿದೆ. ಈ ದೇಶವು ಅದನ್ನು ಮಾಡಿದೆ ಮತ್ತು ಅದನ್ನು ಮಾಡುತ್ತಿದೆ,  ಅದು ಅದನ್ನು ಇನ್ನೂ ಹೆಚ್ಚು ಮಾಡುತ್ತಿದೆ; ಇದು ದೇಶ.   ಜಗತ್ತು ಸಂದಿಗ್ಧತೆಯಲ್ಲಿದ್ದಾಗ, ವ್ಯಾಕ್ಸಿನೇಷನ್ ನಲ್ಲಿ ದೇಶ, 200  ಕೋಟಿಯ ಗುರಿಯನ್ನು ದಾಟಿದೆ, ಕಾಲಮಿತಿಯಲ್ಲಿ ಅದನ್ನು ಮಾಡಿದೆ ,  ಎಲ್ಲಾ ಹಳೆಯ ದಾಖಲೆಗಳನ್ನು ಮುರಿದಿದೆ  , ಈ ದೇಶವು ಅದನ್ನು ಮಾಡಿದೆ. . ಗಲ್ಫ್ ತೈಲದ ಮೇಲೆ ದೇಶ ಅವಲಂಬಿತವಾಗಿದೆ. ನಾವು ದೇಶವನ್ನು ಉಳಿಸಿಕೊಳ್ಳಬೇಕೆಂದು ನಿರ್ಧರಿಸಿದ್ದೆವು, ಜೈವಿಕ ತೈಲದ ಕಡೆಗೆ ಹೇಗೆ ಚಲಿಸಬೇಕು, 10 ಪ್ರತಿಶತದಷ್ಟು ಎಥೆನಾಲ್ ಮಿಶ್ರಣದ ಕನಸು ದೊಡ್ಡದಾಗಿ ಕಾಣುತ್ತಿತ್ತು.. ಇದು ಸಾಧ್ಯವಾಗುವುದಿಲ್ಲ ಎಂದು ಹಳೆಯ ಇತಿಹಾಸ ಹೇಳುತ್ತಿತ್ತು, ಆದರೆ  ಸಮಯಕ್ಕಿಂತ ಮುಂಚಿತವಾಗಿ 10 ಪ್ರತಿಶತದಷ್ಟು ಎಥೆನಾಲ್ ಅನ್ನು ಮಿಶ್ರಣ ಮಾಡುವ ಮೂಲಕ, ದೇಶವು ಈ ಕನಸನ್ನು ಈಡೇರಿಸಿದೆ. 
ಸಹೋದರ ಸಹೋದರಿಯರೇ,
ಇಷ್ಟು ಕಡಿಮೆ  ಅವಧಿಯಲ್ಲಿ 2.5 ಕೋಟಿ ಜನರಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸುವುದು ಸಣ್ಣ ಕೆಲಸವಲ್ಲ, ದೇಶವು ಅದನ್ನು ಮಾಡಿ ತೋರಿಸಿದೆ. ಇಂದು, ದೇಶವು ಲಕ್ಷಾಂತರ ಕುಟುಂಬಗಳ ಮನೆಗಳಿಗೆ ಕೊಳವೆ ಮೂಲಕ  'ನಲ್ಲಿ ನೀರನ್ನು' ಒದಗಿಸಲು ವೇಗವಾಗಿ ಕೆಲಸ ಮಾಡುತ್ತಿದೆ. ಇಂದು ಭಾರತದೊಳಗೆ ಬಯಲು ಮಲವಿಸರ್ಜನೆಯಿಂದ  ಮುಕ್ತಿ ನೀಡಲು ಸಾಧ್ಯವಾಗಿದೆ. 
ನನ್ನ ಪ್ರೀತಿಯ ದೇಶವಾಸಿಗಳೇ,
ಅನುಭವ ಹೇಳುತ್ತದೆ. ನಾವೆಲ್ಲರೂ ಒಮ್ಮೆ ಸಂಕಲ್ಪ ಮಾಡಿ ನಡೆದರೆ, ನಾವು ನಿಗದಿಪಡಿಸಿದ ಗುರಿಗಳನ್ನು ನಾಧಿಸುತ್ತೇವೆ. ನವೀಕರಿಸಬಹುದಾದ ಇಂಧನದ ಗುರಿ ಆಗಿರಲಿ, ದೇಶದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸುವ ಉದ್ದೇಶವಾಗಿರಲಿ, ವೈದ್ಯರ ತಯಾರಿ ಮಾಡುವ ಗುರಿಯಾಗಿರಲಿ,  ಪ್ರತಿಯೊಂದು ಕ್ಷೇತ್ರದಲ್ಲೂ ಈಗ ವೇಗ ಹೆಚ್ಚಾಗಿದೆ. ಅದಕ್ಕಾಗಿಯೇ ನಾನು ಹೇಳುವುದೇನೆಂದರೆ, ಈಗ ಮುಂದಿನ 25 ವರ್ಷಗಳು ದೊಡ್ಡ ಸಂಕಲ್ಪದಿಂದ ಕೂಡಿರಬೇಕು,  ಇದು ನಮ್ಮ ಪ್ರತಿಜ್ಞೆಯಾಗಿರಬೇಕು, ಇದು ನಮ್ಮ ಪ್ರತಿಜ್ಞೆಯೂ ಆಗಿರಬೇಕು. 
ನಾನು ಹೇಳಿರುವ ಎರಡನೆಯ ವಿಷಯ, ನಾನು ಆ ಸಂಕಲ್ಪ ಶಕ್ತಿಯ ಬಗ್ಗೆ ಚರ್ಚಿಸಿದ್ದೇನೆ, ಗುಲಾಮಗಿರಿಯ ಮನಸ್ಥಿತಿ, ದೇಶದ ಬಗ್ಗೆ ಯೋಚಿಸಿ, ಸಹೋದರರೇ, ಜಗತ್ತು ನಮಗೆ ಎಷ್ಟು ಸಮಯದವರೆಗೆ ಪ್ರಮಾಣಪತ್ರಗಳನ್ನು ವಿತರಿಸುತ್ತಲೇ ಇರಬೇಕು?  ಪ್ರಪಂಚದ ಪ್ರಮಾಣಪತ್ರದಲ್ಲಿ ನಾವು ಎಷ್ಟು ಕಾಲ ಬದುಕುತ್ತೇವೆ? ನಾವು ನಮ್ಮದೇ ಆದ ಮಾನದಂಡಗಳನ್ನು ಹೊಂದ ಬೇಕಲ್ಲವೇ?    130 ಕೋಟಿಯ ಒಂದು ದೇಶವು ತನ್ನ ಮಾನದಂಡಗಳನ್ನು ದಾಟಲು ಪ್ರಯತ್ನಿಸಲು ಸಾಧ್ಯವಿಲ್ಲವೇ? ನಾವು ಯಾವುದೇ ಪರಿಸ್ಥಿತಿಯಲ್ಲಿ ಇತರರಂತೆ ಕಾಣಲು ಪ್ರಯತ್ನಿಸುವ ಅಗತ್ಯವಿಲ್ಲ. ನಾವು ಹೇಗಿದ್ದೇವೋ ಹಾಗೆಯೇ ನಿಲ್ಲುತ್ತೇವೆ, ಆದರೆ ನಾವು ಅಧಿಕಾರದೊಂದಿಗೆ ನಿಲ್ಲುತ್ತೇವೆ, ಇದು ನಮ್ಮ ಮನಸ್ಥಿತಿಯಾಗಿರಬೇಕು. ನಮಗೆ, ಗುಲಾಮಗಿರಿಯಿಂದ ಮುಕ್ತಿ ಬೇಕು. 
ಗುಲಾಮಗಿರಿಯ ಅಂಶವು ದೂರ ಮತ್ತು ಏಳು ಸಮುದ್ರಗಳ ಅಡಿಯಲ್ಲಿಯೂ ಸಹ ನಮ್ಮ ಮನಸ್ಸಿನಲ್ಲಿ ಉಳಿಯಬಾರದು, ಯಾವ ರೀತಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ.  ಅದನ್ನು ಯಾವ ಚರ್ಚೆಯಿಂದ ಮಾಡಲಾಗಿದೆಯೋ, ಕೋಟಿ ಕೋಟಿ ಜನರ ಆಲೋಚನೆಗಳನ್ನು ಕ್ರೋಢೀಕರಿಸಿ ಅದನ್ನು ಮಾಡಲಾಗಿದೆ   ಮತ್ತು ಭಾರತದ ನೆಲಕ್ಕೆ ಹೊಂದುವಂತಹ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ, ನಮ್ಮ ನೆಲದ ನಿಲುವು, ಕೌಶಲ್ಯಕ್ಕೆ ಬಲ ನೀಡಿದೆ. ಇದು ಎಂತಹ ಸಾಮರ್ಥ್ಯವೆಂದರೆ, ಅದು ಗುಲಾಮಗಿರಿಯಿಂದ ಮುಕ್ತಿ   ಪಡೆಯುವ ಶಕ್ತಿ ನೀಡುತ್ತದೆ. 
ಕೆಲವೊಮ್ಮೆ ನಮ್ಮ ಪ್ರತಿಭೆಯು ಭಾಷೆಯ ಬಂಧನದಲ್ಲಿ ಸಿಲುಕಿರುರುತ್ತದೆ, ಅದು ಗುಲಾಮಗಿರಿಯ ಮನಸ್ಥಿತಿಯ ಪರಿಣಾಮವಾಗಿದೆ. ನಮ್ಮ ದೇಶದ ಪ್ರತಿಯೊಂದು ಭಾಷೆಯ ಬಗ್ಗೆ ನಾವು ಹೆಮ್ಮೆ ಪಡಬೇಕು. ನಮಗೆ ಭಾಷೆ ತಿಳಿದಿರಲಿ ಅಥವಾ ತಿಳಿಯದೇ ಇರಲಿ, ಅದು ನನ್ನ ದೇಶದ ಭಾಷೆ, ಇದು ನನ್ನ ಪೂರ್ವಜರು ಜಗತ್ತಿಗೆ ನೀಡಿದ ಭಾಷೆ, ನಾವು ಹೆಮ್ಮೆ ಪಡಬೇಕು. 
ನನ್ನ ಸ್ನೇಹಿತರೆ,
ಇಂದು, ನಾವು ಡಿಜಿಟಲ್ ಇಂಡಿಯಾದ ರೂಪವನ್ನು ನೋಡುತ್ತಿದ್ದೇವೆ. ಸ್ಟಾರ್ಟ್ ಅಪ್ ಗಳನ್ನು ನೋಡುತ್ತಿದ್ದೇವೆ. ಆ ಜನರು ಯಾರು? ಇದು ಟಯರ್ -2, ಟೈರ್ -3   ಸಿಟಿಯ ಹಳ್ಳಿಯ ಬಡವರ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಇವರು ಪ್ರತಿಭಾವಂತರು. ನಮ್ಮ ಯುವಕರು ಇಂದು ಹೊಸ ಆವಿಷ್ಕಾರಗಳೊಂದಿಗೆ ಪ್ರಪಂಚದ ಮುಂದೆ ಬರುತ್ತಿದ್ದಾರೆ. ನಾವು ಗುಲಾಮಗಿರಿಯ ಮನಸ್ಥಿತಿಯನ್ನು ತ್ಯಜಿಸಬೇಕು. ನೀವು ನಿಮ್ಮ ಸಾಮರ್ಥ್ಯವನ್ನು ನಂಬಬೇಕು. 
ನಾನು ಹೇಳಿರುವ ಎರಡನೆಯ ವಿಷಯವೆಂದರೆ, ಮೂರನೆಯ ಪ್ರಾಣ ಶಕ್ತಿಯ  ಬಗ್ಗೆ ಹೇಳಿದೆ, ಅದು ನಮ್ಮ ಪರಂಪರೆಯ ಬಗ್ಗೆ. ನಾವು ಹೆಮ್ಮೆ ಪಡಬೇಕು. ನಾವು ನಮ್ಮ ಭೂಮಿಯೊಂದಿಗೆ ಸಂಪರ್ಕ ಹೊಂದಿದಾಗ, ನಾವು ನಮ್ಮ ಭೂಮಿಯೊಂದಿಗೆ ಸಂಪರ್ಕ ಹೊಂದಿದಾಗ, ಆಗ ಮಾತ್ರ ನಾವು ಎತ್ತರಕ್ಕೆ ಹಾರುತ್ತೇವೆ, ಮತ್ತು ನಾವು ಎತ್ತರಕ್ಕೆ ಹಾರಿದಾಗ, ನಾವು ಜಗತ್ತಿಗೆ ಪರಿಹಾರಗಳನ್ನು ನೀಡಲು ಸಹ ಸಾಧ್ಯವಾಗುತ್ತದೆ. ನಾವು ನಮ್ಮ ವಿಷಯಗಳ ಬಗ್ಗೆ ಹೆಮ್ಮೆ ಪಡುವಾಗ ನಾವು ನೋಡಿದ್ದೇತ್ತೇವೆ. ಇಂದು ಜಗತ್ತು  ಸಮಗ್ರ ಆರೋಗ್ಯ ರಕ್ಷಣೆಯ ಬಗ್ಗೆ ಮಾತನಾಡುತ್ತಿದೆ, ಆದರೆ ಅದು ಸಮಗ್ರ ಆರೋಗ್ಯ ರಕ್ಷಣೆಯ ಬಗ್ಗೆ ಚರ್ಚಿಸಿದಾಗ, ಅದರ ಕಣ್ಣುಗಳು ಭಾರತದ ಯೋಗದ ಮೇಲೆ ಹೋಗುತ್ತದೆ,  ಭಾರತದ ಆಯುರ್ವೇದದ ಮೇಲೆ ಹೋಗುತ್ತದೆ, ಭಾರತದ ಸಮಗ್ರ ಜೀವನಶೈಲಿಯತ್ತ ಹೋಗುತ್ತದೆ. ಇದು ನಾವು ಜಗತ್ತಿಗೆ ನೀಡುತ್ತಿರುವ ನಮ್ಮ ಪರಂಪರೆಯಾಗಿದೆ. ಜಗತ್ತು ಇಂದು ಅದನಿಂದ ಪ್ರಭಾವಿತವಾಗುತ್ತಿದೆ. ಈಗ ನಮ್ಮ ಶಕ್ತಿಯನ್ನು ನೋಡಿ. ನಾವು ಪ್ರಕೃತಿಯೊಂದಿಗೆ ಹೇಗೆ ಬದುಕಬೇಕೆಂದು ತಿಳಿದಿರುವ ಜನರು. ನಮ್ಮ ಪೂರ್ವಜರು ಪ್ರಕೃತಿಯನ್ನು ಹೇಗೆ ಪ್ರೀತಿಸಬೇಕೆಂದು ತಿಳಿದಿದ್ದಾರೆ. ಇಂದು, ಜಗತ್ತು ಪರಿಸರದ ಸಮಸ್ಯೆಯೊಂದಿಗೆ ಹೆಣಗಾಡುತ್ತಿದೆ. ನಾವು ಆ ಪರಂಪರೆಯನ್ನು ಹೊಂದಿದ್ದೇವೆ, ಜಾಗತಿಕ ತಾಪಮಾನ ಏರಿಕೆಯ ಸಮಸ್ಯೆಗಳನ್ನು ಪರಿಹರಿಸಲು ನಮಗೆ ಮಾರ್ಗವಿದೆ. ನಮ್ಮ ಪೂರ್ವಜರು ಅದನ್ನು ನೀಡಿದ್ದಾರೆ.
ನಾವು  ಜೀವನಶೈಲಿ, ಪರಿಸರ ಸ್ನೇಹಿ ಜೀವನಶೈಲಿಯ ಬಗ್ಗೆ ಮಾತನಾಡುವಾಗ, ನಾವು ಜೀವನ ಉದ್ದೇಶದ ಬಗ್ಗೆ ಮಾತನಾಡುವಾಗ, ನಾವು ವಿಶ್ವದ ಗಮನವನ್ನು ಸೆಳೆಯುತ್ತೇವೆ. ನಮಗೆ ಈ ಸಾಮರ್ಥ್ಯವಿದೆ. ನಮ್ಮ ದೊಡ್ಡ ಭತ್ತದ ದಪ್ಪ ಭತ್ತದ ರಾಗಿ, ನಾವು ಇಲ್ಲಿ ಮನೆ-ಮನೆ ವಸ್ತುವನ್ನು ಹೊಂದಿದ್ದೇವೆ. ಇದು ನಮ್ಮ ಪರಂಪರೆ, ನಮ್ಮ ಭತ್ತ ನಮ್ಮ ಸಣ್ಣ ರೈತರ ಕಠಿಣ ಪರಿಶ್ರಮದಿಂದ ಸಣ್ಣ ತುಂಡು ಭೂಮಿಯಲ್ಲಿ ಬೆಳೆಯುತ್ತದೆ. ಇಂದು, ವಿಶ್ವವು  ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಲೆಟ್ - ಸಿರಿಧಾನ್ಯ ವರ್ಷವನ್ನು  ಆಚರಿಸಲು ಮುಂದೆ ಬಂದಿದೆ. ನಮ್ಮ ಪರಂಪರೆಯನ್ನು ಇಂದು ಜಗತ್ತು ಗೌರವಿಸುತ್ತಿದೆ ಎಂದರ್ಥ, ನಾವು ಅದರ ಬಗ್ಗೆ ಹೆಮ್ಮೆಪಡಲು ಕಲಿಯೋಣ. ನಮ್ಮಲ್ಲಿ ಜಗತ್ತಿಗೆ ನೀಡಲು ಸಾಕಷ್ಟು ಇದೆ. ನಮ್ಮ ಕೌಟುಂಬಿಕ ಮೌಲ್ಯಗಳು. ಪ್ರಪಂಚದ ಸಾಮಾಜಿಕ ಉದ್ವಿಗ್ನತೆಗಳ ಬಗ್ಗೆ ಚರ್ಚಿಸಲಾಗುತ್ತದೆ. ವೈಯಕ್ತಿಕ ಒತ್ತಡದ ಬಗ್ಗೆ ಚರ್ಚಿಸಿದಾಗ, ಜನರು ಯೋಗವನ್ನು ನೋಡುತ್ತಾರೆ. ಸಾಮೂಹಿಕ ಉದ್ವಿಗ್ನತೆಯ ವಿಷಯಕ್ಕೆ ಬಂದಾಗ, ಭಾರತದ ಕುಟುಂಬ ವ್ಯವಸ್ಥೆಯು ಗೋಚರಿಸುತ್ತದೆ. ಶತಶತಮಾನಗಳಿಂದ ನಮ್ಮ ತಾಯಂದಿರು ಮತ್ತು ಸಹೋದರಿಯರ ತ್ಯಾಗದಿಂದ ಬೆಳೆದಿರುವ ಕುಟುಂಬ ವ್ಯವಸ್ಥೆಯು ನಮ್ಮ ಪರಂಪರೆಯಾಗಿದೆ. ಈ ಪರಂಪರೆಯ ಬಗ್ಗೆ ನಾವು ಹೆಮ್ಮೆ ಪಡಲು ಸಾಧ್ಯವಿಲ್ಲವೇ? ನಾವು ಜೀವಿಯಲ್ಲಿ ಶಿವನನ್ನು ನೋಡುವ ಜನರು. ನಾವು ನರನಲ್ಲಿ ನಾರಾಯಣನನ್ನು ನೋಡುವ ಜನರು. ನಾರಿ ತೋ ನಾರಾಯಣಿ ಎಂದು ಕರೆಯುವ ಜನರು ನಾವು. ನಾವು ಸಸ್ಯದಲ್ಲಿ ದೇವರನ್ನು ಕಾಣುವ ಜನರು. ನಾವು ನದಿಯನ್ನು ತಾಯಿ ಎಂದು ಪರಿಗಣಿಸುವ ಜನರು. ಪ್ರತಿ ಕಲ್ಲಿನಲ್ಲಿಯೂ ಶಂಕರ್ ಅವರನ್ನು ನೋಡುವ ಜನರು ನಾವು. ಇದು ನಮ್ಮ ಸಾಮರ್ಥ್ಯ, ನಾವು ಪ್ರತಿ ನದಿಯಲ್ಲಿ ತಾಯಿಯ ರೂಪವನ್ನು ನೋಡುತ್ತೇವೆ. ಪರಿಸರದಲ್ಲಿನ ವ್ಯಾಪಕತೆ, ವಿಶಾಲತೆ ನಮ್ಮ ಗೌರವ.   ನಾವು ಪ್ರಪಂಚದ ಮುಂದೆ ಗೌರವ ಪಡಬೇಕು. 
ಸಹೋದರ ಸಹೋದರಿಯರೇ,
ವಸುದೈವ ಕುಟುಂಬಕಂ ಎಂಬ ಮಂತ್ರವನ್ನು ಜಗತ್ತಿಗೆ ನೀಡಿದ ಜನರು ನಾವು. ಜಗತ್ತನ್ನು 'ಏಕಂ ಸತ್ ವಿಪ್ರ ಬಹುಧಾ ವದಂತಿ' ಎಂದು ಕರೆಯುವ ಜನರು ನಾವು. ಇಂದು, ನಾನು ನಿಮಗಿಂತ ದೊಡ್ಡವನು ಎಂಬುದು ಬಿಕ್ಕಟ್ಟಿನ ಕಾರಣವಾಗಿದೆ. ಜಗತ್ತನ್ನು 'ಏಕಂ ಸತ್ ವಿಪ್ರ ಬಹುಧಾ ವದಂತಿ' ಎಂಬ ಜ್ಞಾನವನ್ನು ನೀಡುವ ಪರಂಪರೆ ನಮ್ಮ ಬಳಿ ಇದೆ.  ಸತ್ಯವು ಒಂದೇ ಎಂದು ಹೇಳುವ, ಜ್ಞಾನವುಳ್ಳ ಜನರು ನಾವು, ಅದನ್ನು ವಿಭಿನ್ನ ರೀತಿಯಲ್ಲಿ ಹೇಳುತ್ತಾರೆ. ಈ ಹೆಮ್ಮೆ ನಮ್ಮದು.  ಯತ್ ಪಿಂಡೆ ತತ್ ಬ್ರಹ್ಮಾಂಡೇ ಎಂದು ಹೇಳುವ ಜನರು ನಾವು. ದೇಹವೇ ಬ್ರಹ್ಮಾಂಡ, ಎಂಥ ದೊಡ್ಡ ಆಲೋಚನೆ, ಬ್ರಹ್ಮಾಂಡದಲ್ಲಿ ಏನಿದೆಯೋ ಅದು ಪ್ರತಿಯೊಂದು ಜೀವಿಯಲ್ಲೂ ಇದೆ ಎಂದು ಹೇಳುವ ಜನರು  ನಾವು.  ನಾವು ಲೋಕ ಕಲ್ಯಾಣವನ್ನು ಕಂಡಿರುವ ಜನರು, ನಾವು ಲೋಕ ಕಲ್ಯಾಣದಿಂದ ಜನರ ಕಲ್ಯಾಣಕ್ಕಾಗಿ ಜೀವಿಸುತ್ತಿದ್ದೇವೆ. ಲೋಕ ಕಲ್ಯಾಣದ ಹಾದಿಯಲ್ಲಿ ಸಾಗುತ್ತಿರುವ ನಾವು, ಜಗತ್ತಿಗಾಗಿ ನಾವು ಹೇಳುವುದು - ಸರ್ವೇ ಭವಂತು ಸುಖಿನಾಃ. ಸರ್ವೇ ಸಂತು ನಿರಾಮಯಃ. ಇದು ನಾವು ಪ್ರಾರ್ಥಿಸುವ ನಮ್ಮ ಮೌಲ್ಯಗಳಲ್ಲಿ ಅಂತರ್ಗತವಾಗಿದೆ, ನಾವೆಲ್ಲರೂ ಸಮೃದ್ಧರಾಗಿ ಮತ್ತು ಸಂತೋಷದಿಂದಿರಲಿ, ಎಲ್ಲರೂ ಅನಾರೋಗ್ಯದಿಂದ ಮುಕ್ತರಾಗಲಿ, ಎಲ್ಲರೂ ಶುಭವಾದದ್ದನ್ನು ನೋಡಲಿ ಮತ್ತು ಯಾರೂ ತೊಂದರೆ ಅನುಭವಿಸದಿರಲಿ ಎಂದು  ನಾವು ಪ್ರಾರ್ಥಿಸುತ್ತೇವೆ ಎಂಬುದು ನಮ್ಮ ಮೌಲ್ಯಗಳಲ್ಲಿ ಬೇರೂರಿದೆ. ಎಲ್ಲರ ಸಂತೋಷ ಮತ್ತು ಉತ್ತಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಪರಂಪರೆಯಾಗಿದೆ. ಆದ್ದರಿಂದ, ನಾವು ನಮ್ಮ ಪರಂಪರೆ ಮತ್ತು ಮೌಲ್ಯ ವ್ಯವಸ್ಥೆಯ ಬಗ್ಗೆ ಗೌರವಿಸಲು ಮತ್ತು ಹೆಮ್ಮೆಪಡಲು ಕಲಿಯಬೇಕು. ಮುಂದಿನ 25 ವರ್ಷಗಳಲ್ಲಿ ಕನಸುಗಳನ್ನು ಸಾಧಿಸುವಲ್ಲಿ ನಿರ್ಣಾಯಕವಾಗುವುದು ನಮ್ಮ ಸಂಕಲ್ಪದ ಶಕ್ತಿಯಾಗಿದೆ.
ಅದೇ ರೀತಿ, ನನ್ನ ಪ್ರೀತಿಯ ದೇಶವಾಸಿಗಳೇ,
ಮತ್ತೊಂದು ಅತ್ಯಂತ ಪ್ರಮುಖ ವಿಷಯವೆಂದರೆ ಏಕತೆ ಮತ್ತು ಒಗ್ಗಟ್ಟು. ನಾವು ನಮ್ಮ ಬೃಹತ್ ದೇಶದ ವೈವಿಧ್ಯತೆಯನ್ನು ಆಚರಿಸಬೇಕಾಗಿದೆ. ಅಸಂಖ್ಯಾತ ಸಂಪ್ರದಾಯಗಳು ಮತ್ತು ಪಂಥಗಳ ಶಾಂತಿಯುತ ಸಹಬಾಳ್ವೆಯು ನಮ್ಮ ಹೆಮ್ಮೆಯಾಗಿದೆ. ನಮಗೆ ಎಲ್ಲರೂ ಸಮಾನರು. ಯಾರೂ ಕೀಳು ಅಥವಾ ಶ್ರೇಷ್ಠರಲ್ಲ; ಎಲ್ಲರೂ ನಮ್ಮವರೇ. ಏಕತೆಗೆ ಈ ಏಕತೆಯ ಭಾವನೆ ಮುಖ್ಯ. ಮಗ ಮತ್ತು ಮಗಳು ಸಮಾನತೆಯನ್ನು ಅನುಭವಿಸಿದರೆ ಮಾತ್ರ ಪ್ರತಿ ಮನೆಯಲ್ಲೂ ಏಕತೆಯ ಅಡಿಪಾಯವನ್ನು ಹಾಕಬಹುದು. ಕುಟುಂಬವು ತನ್ನ ತಲೆಮಾರುಗಳಾದ್ಯಂತ ಲಿಂಗ ತಾರತಮ್ಯವನ್ನು ಬಿತ್ತಿದರೆ, ಸಮಾಜದಲ್ಲಿ ಏಕತೆಯ ಮನೋಭಾವವನ್ನು ಎಂದಿಗೂ ಹೆಣೆಯಲಾಗುವುದಿಲ್ಲ. ಲಿಂಗ ಸಮಾನತೆ ನಮ್ಮ ಮೊದಲ ಷರತ್ತು. ನಾವು ಏಕತೆಯ ಬಗ್ಗೆ ಮಾತನಾಡುವಾಗ, ಕೇವಲ ಒಂದು ಮಾನದಂಡ ಅಥವಾ ಮಾನದಂಡವನ್ನು ಮಾತ್ರ ಏಕೆ ಹೊಂದಬಾರದು- ಭಾರತ ಮೊದಲು. ನನ್ನ ಎಲ್ಲಾ ಪ್ರಯತ್ನಗಳು, ನಾನು ಯೋಚಿಸುತ್ತಿರುವ, ಹೇಳುತ್ತಿರುವ, ಕಲ್ಪಿಸಿಕೊಳ್ಳುವ ಅಥವಾ ಕಲ್ಪಿಸಿಕೊಳ್ಳುವ ಎಲ್ಲವೂ ಭಾರತ ಮೊದಲು ಎಂಬುದಕ್ಕೆ ಅನುಗುಣವಾಗಿವೆ. ಈ ರೀತಿಯಾಗಿ ಏಕತೆಯ ಮಾರ್ಗವನ್ನು ನಮ್ಮೆಲ್ಲರಿಗೂ ತೆರೆಯಬಹುದು ಗೆಳೆಯರೇ. ನಮ್ಮೆಲ್ಲರನ್ನೂ ಏಕತೆಯಲ್ಲಿ ಬಂಧಿಸಲು ನಾವು ಅಳವಡಿಸಿಕೊಳ್ಳಬೇಕಾದ ಮಂತ್ರ ಇದು. ಈ ಮೂಲಕ ನಾವು ನಮ್ಮ ಸಮಾಜದಲ್ಲಿ ಪ್ರಚಲಿತದಲ್ಲಿರುವ ತಾರತಮ್ಯವನ್ನು ಕಡಿಮೆ ಮಾಡಬಹುದು ಎಂದು ನನಗೆ ಸಂಪೂರ್ಣ ನಂಬಿಕೆ ಇದೆ. ಶ್ರಮ ಏವ ಜಯತೇಯ ಮೌಲ್ಯವನ್ನು ನಾವು  ಅನುಮೋದಿಸುತ್ತೇವೆ, ಅಂದರೆ ಶ್ರಮಿಕನನ್ನು ಗೌರವಿಸುವುದು ನಮ್ಮ ಸ್ವಭಾವದಲ್ಲಿ ಇರಬೇಕು.
ಆದರೆ ನನ್ನ ಸಹೋದರ ಸಹೋದರಿಯರೇ
ಕೆಂಪು ಕೋಟೆಯ ಮೇಲಿಂದ, ನಾನು ನನ್ನ ಶಾಶ್ವತ ನೋವುಗಳಲ್ಲಿ ಒಂದನ್ನು ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ನೋವನ್ನು ವ್ಯಕ್ತಪಡಿಸುವುದನ್ನು ನಾನು ತಡೆಯಲಾರೆ. ಇದು ಕೆಂಪು ಕೋಟೆಯ ವೇದಿಕೆಗೆ ಸರಿಹೊಂದದಿರಬಹುದು ಎಂದು ನಾನು ಭಾವಿಸುತ್ತೇನೆ. ಆದರೆ ನಾನು ಇನ್ನೂ ನನ್ನ ದೇಶವಾಸಿಗಳಿಗೆ ನನ್ನ ಆಳವಾದ ಯಾತನೆಯ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ. ದೇಶವಾಸಿಗಳ ಮುಂದೆ ನಾನು ಮುಕ್ತವಾಗಿ ಮಾತನಾಡದಿದ್ದರೆ, ನಾನು ಅದನ್ನು ಎಲ್ಲಿ ಹೇಳಲಿ? ನಾನು ಹಂಚಿಕೊಳ್ಳಲು ಬಯಸುವುದೇನೆಂದರೆ, ನಮ್ಮ ದೈನಂದಿನ ಮಾತುಗಳಲ್ಲಿ, ನಡವಳಿಕೆಯಲ್ಲಿ ನಾವು ವಿಕೃತಿಯನ್ನು ಕಂಡಿದ್ದೇವೆ ಎಂದು ಹೇಳುವುದು ನನಗೆ ನೋವುಂಟು ಮಾಡುತ್ತದೆ. ನಾವು ಮಹಿಳೆಯರಿಗೆ ಅವಮಾನಕರವಾದ ಭಾಷೆ ಮತ್ತು ಪದಗಳನ್ನು ಸಾಂದರ್ಭಿಕವಾಗಿ ಬಳಸುತ್ತಿದ್ದೇವೆ. ಮಹಿಳೆಯರನ್ನು ಅವಮಾನಿಸುವ ಮತ್ತು ಅವಮಾನಿಸುವ ನಮ್ಮ ನಡವಳಿಕೆ, ಸಂಸ್ಕೃತಿ ಮತ್ತು ದೈನಂದಿನ ಜೀವನದಲ್ಲಿ ಎಲ್ಲವನ್ನೂ ತೊಡೆದುಹಾಕಲು ನಾವು ಪ್ರತಿಜ್ಞೆ ಮಾಡಬಹುದಲ್ಲವೇ? ರಾಷ್ಟ್ರದ ಕನಸುಗಳನ್ನು ಈಡೇರಿಸುವಲ್ಲಿ ಮಹಿಳೆಯರ ಹೆಮ್ಮೆ ದೊಡ್ಡ ಆಸ್ತಿಯಾಗಲಿದೆ. ನಾನು ಈ ಶಕ್ತಿಯನ್ನು ನೋಡುತ್ತೇನೆ ಮತ್ತು ಆದ್ದರಿಂದ ನಾನು ಅದನ್ನು ಮಾಡುವಂತೆ ಒತ್ತಾಯಿಸುತ್ತೇನೆ.
ಪ್ರೀತಿಯ ದೇಶವಾಸಿಗಳೇ,
ನಾನು ಈಗ ಐದನೇ ಜೀವ ಚೈತನ್ಯದ ಬಗ್ಗೆ ಮಾತನಾಡುತ್ತೇನೆ - ಪ್ರಾಣ್, ಇದು ನಾಗರಿಕರ ಕರ್ತವ್ಯವಾಗಿದೆ. ಪ್ರಗತಿ ಸಾಧಿಸಿದ ವಿಶ್ವದ ಎಲ್ಲಾ ದೇಶಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗ; ವೈಯಕ್ತಿಕ ಜೀವನದಲ್ಲಿಯೂ ಏನನ್ನಾದರೂ ಸಾಧಿಸಿದ ಪ್ರತಿಯೊಂದು ದೇಶವೂ ಕೆಲವು ವಿಷಯಗಳು ಹೊರಹೊಮ್ಮಿದವು. ಒಂದು ಶಿಸ್ತುಬದ್ಧ ಜೀವನ, ಇನ್ನೊಂದು ಕರ್ತವ್ಯನಿಷ್ಠೆ. ವ್ಯಕ್ತಿಯ, ಸಮಾಜದ, ಕುಟುಂಬದ, ರಾಷ್ಟ್ರದ ಜೀವನದಲ್ಲಿ ಯಶಸ್ಸು ಇರಬೇಕು. ಇದು ಮೂಲಭೂತ ಮಾರ್ಗ ಮತ್ತು ಮೂಲಭೂತ ಪ್ರಮುಖ ಶಕ್ತಿಯಾಗಿದೆ.
24 ಗಂಟೆಗಳ ಕಾಲ ವಿದ್ಯುತ್ ಒದಗಿಸಲು ಪ್ರಯತ್ನಿಸುವುದು ಸರ್ಕಾರದ ಕೆಲಸವಾಗಿದೆ ಆದರೆ ಸಾಧ್ಯವಾದಷ್ಟು ಯೂನಿಟ್ ಗಳನ್ನು ಉಳಿಸುವುದು ನಾಗರಿಕರ ಕರ್ತವ್ಯವಾಗಿದೆ. ಪ್ರತಿಯೊಂದು ಹೊಲಕ್ಕೂ ನೀರು ಪೂರೈಸುವುದು ಸರ್ಕಾರದ ಜವಾಬ್ದಾರಿ ಮತ್ತು ಪ್ರಯತ್ನವಾಗಿದೆ, ಆದರೆ ನನ್ನ ಪ್ರತಿಯೊಂದು ಹೊಲಗಳಿಂದ 'ಪ್ರತಿ ಹನಿ ಹೆಚ್ಚು ಬೆಳೆ'ಯ ಮೇಲೆ ಗಮನ ಹರಿಸುವ ಮೂಲಕ ನಾವು ನೀರನ್ನು ಉಳಿಸುತ್ತಾ ಮುಂದುವರಿಯುತ್ತೇವೆ ಎಂಬ ಒಂದು ಧ್ವನಿ ಬರಬೇಕು, ರಾಸಾಯನಿಕ ಮುಕ್ತ ಕೃಷಿ, ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ ಮಾಡುವುದು ನಮ್ಮ ಕರ್ತವ್ಯವಾಗಿದೆ. ಸ್ನೇಹಿತರೇ, ಅದು ಪೊಲೀಸರಾಗಿರಲಿ ಅಥವಾ ಜನರಾಗಿರಲಿ, ಆಳುವವರಾಗಿರಲಿ ಅಥವಾ ಆಡಳಿತಗಾರರಾಗಿರಲಿ, ಈ ನಾಗರಿಕ ಕರ್ತವ್ಯದಿಂದ ಯಾರನ್ನೂ ಮುಟ್ಟಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಒಬ್ಬ ನಾಗರಿಕನ ಕರ್ತವ್ಯಗಳನ್ನು ನಿರ್ವಹಿಸಿದರೆ, ನಾವು ಸಮಯಕ್ಕಿಂತ ಮುಂಚಿತವಾಗಿ ಅಪೇಕ್ಷಿತ ಗುರಿಗಳನ್ನು ಸಾಧಿಸಬಹುದು ಎಂಬ ಖಾತ್ರಿ ನನಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ,
ಇಂದು ಮಹರ್ಷಿ ಅರವಿಂದರ ಜನ್ಮದಿನವೂ ಆಗಿದೆ. ನಾನು ಆ ಮಹಾಪುರುಷನ ಪಾದಗಳಿಗೆ ನಮಸ್ಕರಿಸುತ್ತೇನೆ. ಆದರೆ 'ಸ್ವರಾಜ್ಯಕ್ಕೆ ಸ್ವದೇಶಿ' ಮತ್ತು 'ಸುರಾಜ್ ಗೆ ಸ್ವರಾಜ್ಯ' ಎಂದು ಕರೆ ನೀಡಿದ ಮಹಾನ್ ವ್ಯಕ್ತಿಯನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ. ಇದು ಅವರ ಮಂತ್ರ. ನಾವು ವಿಶ್ವದ ಇತರ ಜನರ ಮೇಲೆ ಎಷ್ಟು ಸಮಯದವರೆಗೆ ಅವಲಂಬಿತರಾಗಿದ್ದೇವೆ ಎಂದು ನಾವೆಲ್ಲರೂ ಯೋಚಿಸಬೇಕಾಗಿದೆ. ನಮ್ಮ ದೇಶಕ್ಕೆ ಆಹಾರ ಧಾನ್ಯಗಳ ಅಗತ್ಯವಿರುವಾಗ ನಾವು ಹೊರಗುತ್ತಿಗೆ ನೀಡಬಹುದೇ? ನಾವು ನಮ್ಮ ಆಹಾರದ ಅವಶ್ಯಕತೆಗಳನ್ನು ಪೂರೈಸುತ್ತೇವೆ ಎಂದು ದೇಶವು ನಿರ್ಧರಿಸಿದಾಗ, ದೇಶವು ಅದನ್ನು ಪ್ರದರ್ಶಿಸಿದೆಯೇ ಅಥವಾ ಇಲ್ಲವೇ? ಒಮ್ಮೆ ನಾವು ಒಂದು ನಿರ್ಣಯವನ್ನು ತೆಗೆದುಕೊಂಡರೆ, ಅದು ಸಾಧ್ಯ. ಆದ್ದರಿಂದ, 'ಆತ್ಮನಿರ್ಭರ ಭಾರತ' ಪ್ರತಿಯೊಬ್ಬ ನಾಗರಿಕನ, ಪ್ರತಿ ಸರ್ಕಾರ ಮತ್ತು ಸಮಾಜದ ಪ್ರತಿಯೊಂದು ಘಟಕದ ಜವಾಬ್ದಾರಿಯಾಗುತ್ತದೆ. 'ಆತ್ಮನಿರ್ಭರ ಭಾರತ' ಸರ್ಕಾರದ ಕಾರ್ಯಸೂಚಿ ಅಥವಾ ಸರ್ಕಾರದ ಕಾರ್ಯಕ್ರಮವಲ್ಲ. ಇದು ಸಮಾಜದ ಜನಾಂದೋಲನವಾಗಿದ್ದು, ಇದನ್ನು ನಾವು ಮುಂದಕ್ಕೆ ಒಯ್ಯಬೇಕಾಗಿದೆ.
ನನ್ನ ಸ್ನೇಹಿತರೇ, ಸ್ವಾತಂತ್ರ್ಯದ 75 ವರ್ಷಗಳ ನಂತರ ಇಂದು ನಾವು ಈ ಶಬ್ದವನ್ನು ಕೇಳಿದ್ದೇವೆ, ಅದಕ್ಕಾಗಿ ನಮ್ಮ ಕಿವಿಗಳು ಕೇಳಲು ಹಾತೊರೆಯುತ್ತಿದ್ದವು. 75 ವರ್ಷಗಳ ನಂತರ ಮೊದಲ ಬಾರಿಗೆ ಮೇಡ್ ಇನ್ ಇಂಡಿಯಾ ಫಿರಂಗಿ ಕೆಂಪು ಕೋಟೆಯಿಂದ ತ್ರಿವರ್ಣ ಧ್ವಜಕ್ಕೆ ನಮಸ್ಕರಿಸಿದೆ. ಈ ಶಬ್ದದಿಂದ ಸ್ಫೂರ್ತಿ ಪಡೆಯದ ಯಾವುದೇ ಭಾರತೀಯರು ಇರುತ್ತಾರೆಯೇ? 
ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ಇಂದು ನಾನು ನನ್ನ ದೇಶದ ಸೈನ್ಯದ ಸೈನಿಕರನ್ನು ನನ್ನ ಹೃದಯದಿಂದ ಅಭಿನಂದಿಸಲು ಬಯಸುತ್ತೇನೆ. ಸ್ವಾವಲಂಬನೆಯ ಈ ಜವಾಬ್ದಾರಿಯನ್ನು ಸೇನಾ ಯೋಧರು ಸಂಘಟಿತ ರೀತಿಯಲ್ಲಿ ಮತ್ತು ಧೈರ್ಯದಿಂದ ನಿಭಾಯಿಸಿದ ರೀತಿಗೆ ನಾನು ವಂದಿಸುತ್ತೇನೆ.  ಸೈನ್ಯದ ಸೈನಿಕನು ಸಾವನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿರುತ್ತಾನೆ. ಸಾವು ಮತ್ತು ಜೀವನದ ನಡುವೆ ಯಾವುದೇ ಅಂತರವಿಲ್ಲದಿದ್ದಾಗ ಅವನು ಮಧ್ಯದಲ್ಲಿ ದೃಢವಾಗಿ ನಿಲ್ಲುತ್ತಾನೆ. ಸಶಸ್ತ್ರ ಪಡೆಗಳು ಪಟ್ಟಿಯನ್ನು ತಯಾರಿಸಿ 3೦೦ ರಕ್ಷಣಾ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳದಿರಲು ನಿರ್ಧರಿಸಿದಾಗ ನಮ್ಮ ದೇಶದ ನಿರ್ಣಯವು ಸಣ್ಣದೇನೂ ಅಲ್ಲ. ಈ ಸಂಕಲ್ಪದಲ್ಲಿ, ಈ ಕನಸನ್ನು ಆಲದ ಮರವಾಗಿ ಪರಿವರ್ತಿಸುವ 'ಆತ್ಮನಿರ್ಭರ ಭಾರತ'ದ ಉಜ್ವಲ ಭವಿಷ್ಯದ ಬೀಜವನ್ನು ನಾನು ನೋಡಬಲ್ಲೆ. ಸೆಲ್ಯೂಟ್! ಸೆಲ್ಯೂಟ್! ನನ್ನ ಸೇನಾಧಿಕಾರಿಗಳಿಗೆ ಸೆಲ್ಯೂಟ್!
ನಾನು 5 ರಿಂದ 7 ವರ್ಷದೊಳಗಿನ ಪುಟ್ಟ ಮಕ್ಕಳಿಗೆ ನಮಸ್ಕರಿಸಲು ಬಯಸುತ್ತೇನೆ. ರಾಷ್ಟ್ರದ ಪ್ರಜ್ಞೆ ಜಾಗೃತಗೊಂಡಿದೆ. 5-7 ವರ್ಷದ ಮಕ್ಕಳು ತಮ್ಮ ಹೆತ್ತವರಿಗೆ ವಿದೇಶಿ ಆಟಿಕೆಗಳೊಂದಿಗೆ ಆಟವಾಡಲು ಬಯಸುವುದಿಲ್ಲ ಎಂದು ಹೇಳುತ್ತಾರೆ ಎಂದು ನಾನು ಅಸಂಖ್ಯಾತ ಕುಟುಂಬಗಳಿಂದ ಕೇಳಿದ್ದೇನೆ. 5 ವರ್ಷದ ಮಗುವು ಅಂತಹ ನಿರ್ಣಯವನ್ನು ಮಾಡಿದಾಗ, ಅದು ಅದರಲ್ಲಿರುವ ಸ್ವಾವಲಂಬಿ ಭಾರತದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ.
ಪಿಎಲ್ಐ ಯೋಜನೆಯ ಬಗ್ಗೆ ಹೇಳುವುದಾದರೆ, ಒಂದು ಲಕ್ಷ ಕೋಟಿ ರೂಪಾಯಿಗಳು, ವಿಶ್ವದಾದ್ಯಂತದ ಜನರು ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಭಾರತಕ್ಕೆ ಬರುತ್ತಿದ್ದಾರೆ. ಅವರು ತಮ್ಮೊಂದಿಗೆ ಹೊಸ ತಂತ್ರಜ್ಞಾನವನ್ನು ತರುತ್ತಿದ್ದಾರೆ. ಅವರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ. ಭಾರತವು ಉತ್ಪಾದನಾ ಕೇಂದ್ರವಾಗುತ್ತಿದೆ. ಇದು ಸ್ವಾವಲಂಬಿ ಭಾರತಕ್ಕೆ ಅಡಿಪಾಯವನ್ನು ನಿರ್ಮಿಸುತ್ತಿದೆ. ಅದು ವಿದ್ಯುನ್ಮಾನ ಸರಕುಗಳು ಅಥವಾ ಮೊಬೈಲ್ ಫೋನ್ ಗಳ ಉತ್ಪಾದನೆಯಾಗಿರಲಿ, ಇಂದು ದೇಶವು ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ನಮ್ಮ ಬ್ರಹ್ಮೋಸ್ ಅನ್ನು ವಿಶ್ವಕ್ಕೆ ರಫ್ತು ಮಾಡಿದಾಗ ಯಾವ ಭಾರತೀಯನು ಹೆಮ್ಮೆಪಡುವುದಿಲ್ಲ? ಇಂದು ವಂದೇ ಭಾರತ್ ರೈಲು ಮತ್ತು ನಮ್ಮ ಮೆಟ್ರೋ ಬೋಗಿಗಳು ವಿಶ್ವದ ಆಕರ್ಷಣೆಯ ವಸ್ತುಗಳಾಗುತ್ತಿವೆ.
ನನ್ನ ಪ್ರೀತಿಯ ದೇಶವಾಸಿಗಳೇ,
ಇಂಧನ ಕ್ಷೇತ್ರದಲ್ಲಿ ನಾವು ಸ್ವಾವಲಂಬಿಗಳಾಗಬೇಕು. ಇಂಧನ ಕ್ಷೇತ್ರದಲ್ಲಿ ನಾವು ಎಷ್ಟು ಕಾಲ ಇತರರ ಮೇಲೆ ಅವಲಂಬಿತರಾಗಿರಬೇಕು? ಸೌರಶಕ್ತಿ, ಪವನಶಕ್ತಿ ಮತ್ತು ಜಲ ಜನಕ ಅಭಿಯಾನ, ಜೈವಿಕ ಇಂಧನ ಮತ್ತು ವಿದ್ಯುತ್ ಚಾಲಿತ ವಾಹನಗಳಂತಹ ವಿವಿಧ ಇತರ ನವೀಕರಿಸಬಹುದಾದ ಇಂಧನ ಮೂಲಗಳ ಕ್ಷೇತ್ರಗಳಲ್ಲಿ ನಾವು ಸ್ವಾವಲಂಬಿಗಳಾಗಿರಬೇಕು.
ನನ್ನ ಪ್ರೀತಿಯ ದೇಶವಾಸಿಗಳೇ,
ಇಂದು ನೈಸರ್ಗಿಕ ಕೃಷಿಯು ಸ್ವಾವಲಂಬಿಗಳಾಗುವ ಒಂದು ಮಾರ್ಗವಾಗಿದೆ. ಇಂದು ನ್ಯಾನೊ ರಸಗೊಬ್ಬರದ ಕಾರ್ಖಾನೆಗಳು ದೇಶದಲ್ಲಿ ಹೊಸ ಭರವಸೆಯನ್ನು ತಂದಿವೆ. ಆದರೆ ನೈಸರ್ಗಿಕ ಕೃಷಿ ಮತ್ತು ರಾಸಾಯನಿಕ ಮುಕ್ತ ಕೃಷಿ ಸ್ವಾವಲಂಬನೆಗೆ ಉತ್ತೇಜನ ನೀಡುತ್ತದೆ. ಇಂದು, ಹಸಿರು ಉದ್ಯೋಗಗಳ ರೂಪದಲ್ಲಿ ಹೊಸ ಉದ್ಯೋಗಾವಕಾಶಗಳು ದೇಶದಲ್ಲಿ ಬಹಳ ವೇಗವಾಗಿ ತೆರೆದುಕೊಳ್ಳುತ್ತಿವೆ. ಭಾರತವು ತನ್ನ ನೀತಿಗಳ ಮೂಲಕ 'ಬಾಹ್ಯಾಕಾಶ'ವನ್ನು ತೆರೆದಿದೆ. ಭಾರತವು ವಿಶ್ವದ ಡ್ರೋನ್ ಗಳಿಗೆ ಸಂಬಂಧಿಸಿದಂತೆ ಅತ್ಯಂತ ಪ್ರಗತಿಪರ ನೀತಿಯೊಂದಿಗೆ ಬಂದಿದೆ. ನಾವು ದೇಶದ ಯುವಕರಿಗೆ ಅವಕಾಶಗಳ ಹೊಸ ಬಾಗಿಲುಗಳನ್ನು ತೆರೆದಿದ್ದೇವೆ.
ನನ್ನ ಪ್ರೀತಿಯ ಸಹೋದರ ಸಹೋದರಿಯರೇ,
ಖಾಸಗಿ ವಲಯವು ಮುಂದೆ ಬರಬೇಕೆಂದು ನಾನು ಕರೆ ನೀಡುತ್ತೇನೆ. ನಾವು ಪ್ರಪಂಚದ ಮೇಲೆ ಪ್ರಾಬಲ್ಯ ಸಾಧಿಸಬೇಕು. ವಿಶ್ವದ ಅಗತ್ಯಗಳನ್ನು ಪೂರೈಸುವಲ್ಲಿ ಭಾರತವು ಹಿಂದೆ ಬೀಳದಂತೆ ನೋಡಿಕೊಳ್ಳುವುದು ಸ್ವಾವಲಂಬಿ ಭಾರತದ ಕನಸುಗಳಲ್ಲಿ ಒಂದಾಗಿದೆ. ಇದು ಎಂ.ಎಸ್.ಎಂ.ಇ.ಗಳಾಗಿದ್ದರೂ ಸಹ ನಾವು ನಮ್ಮ ಉತ್ಪನ್ನಗಳನ್ನು 'ಶೂನ್ಯ ದೋಷ - ಶೂನ್ಯ ಪರಿಣಾಮ'ದೊಂದಿಗೆ ಜಗತ್ತಿಗೆ ಕೊಂಡೊಯ್ಯಬೇಕಾಗುತ್ತದೆ. ನಾವು ಸ್ವದೇಶಿ ಬಗ್ಗೆ ಹೆಮ್ಮೆ ಪಡಬೇಕು.
ನನ್ನ ಪ್ರೀತಿಯ ದೇಶವಾಸಿಗಳೇ,
ಜೈ ಜವಾನ್ ಜೈ ಕಿಸಾನ್ ಎಂಬ ಸ್ಪೂರ್ತಿದಾಯಕ ಘೋಷಣೆಗಾಗಿ ನಮ್ಮ ಪೂಜ್ಯ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಇಂದಿಗೂ ಸದಾ ಸ್ಮರಿಸುತ್ತೇವೆ. ನಂತರ ಅಟಲ್ ಬಿಹಾರಿ ವಾಜಪೇಯಿ ಅವರು ಜೈ ವಿಜ್ಞಾನದ ಹೊಸ ಕೊಂಡಿಯನ್ನು ಸೇರಿಸಿದರು, ಅದರರ್ಥ "ಜೈ ವಿಜ್ಞಾನ" ಮತ್ತು ನಾವು ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದೇವೆ. ಆದರೆ ಈ ಹೊಸ ಹಂತದಲ್ಲಿ ಅಮೃತ್ ಕಾಲದಲ್ಲಿ ಈಗ ಜೈ ಅನುಸಂಧಾನ್ ಅನ್ನು  ಸೇರಿಸುವುದು ಅನಿವಾರ್ಯವಾಗಿದೆ  , ಅದು " ನಾವೀನ್ಯತೆಗೆ ಜಯವಾಗಲಿ".
ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ್ ಜೈ ಅನುಸಂಧಾನ್.
ನಾನು ನಮ್ಮ ರಾಷ್ಟ್ರದ ಯುವಕರಲ್ಲಿ ನನ್ನ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದೇನೆ. ಅನಿರ್ಬಂಧಿತ ಆವಿಷ್ಕಾರಗಳ ಶಕ್ತಿಗೆ ಸಾಕ್ಷಿಯಾಗಿರಿ. ಇಂದು ನಾವು ಜಗತ್ತಿಗೆ ತೋರಿಸಲು ಅನೇಕ ಯಶೋಗಾಥೆಗಳನ್ನು ಹೊಂದಿದ್ದೇವೆ - ಯುಪಿಐ-ಭೀಮ್, ನಮ್ಮ ಡಿಜಿಟಲ್ ಪಾವತಿ, ಫಿನ್ಟೆಕ್ ಡೊಮೇನ್ ನಲ್ಲಿ ನಮ್ಮ ಬಲವಾದ ಸ್ಥಾನವಿದೆ.   ಇಂದು ಜಗತ್ತಿನಲ್ಲಿ, ಶೇ. 40 ರಷ್ಟು ನೈಜ ಸಮಯದ ಡಿಜಿಟಲ್ ಹಣಕಾಸು ವಹಿವಾಟುಗಳು ನಮ್ಮ ದೇಶದಲ್ಲಿ ನಡೆಯುತ್ತಿವೆ. ಭಾರತವು ವಿಶ್ವಕ್ಕೆ ನಾವಿನ್ಯತೆಯ ಪರಾಕ್ರಮವನ್ನು ತೋರಿಸಿದೆ.
ನನ್ನ ಪ್ರೀತಿಯ ದೇಶವಾಸಿಗಳೇ,
ಇಂದು ನಾವು 5 ಜಿ ಯುಗವನ್ನು ಪ್ರವೇಶಿಸಲು ಸಿದ್ಧರಾಗಿದ್ದೇವೆ. ನಾವು ಜಾಗತಿಕ ಹಂತಗಳನ್ನು ಹೊಂದಿಸಲು ನೀವು ಹೆಚ್ಚು ಸಮಯ ಕಾಯಬೇಕಾಗಿಲ್ಲ. ಆಪ್ಟಿಕಲ್ ಫೈಬರ್ ಕೊನೆಯ ಮೈಲಿಯವರೆಗೆ ಪ್ರತಿ ಹಳ್ಳಿಯನ್ನು ತಲುಪುತ್ತದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಡಿಜಿಟಲ್ ಇಂಡಿಯಾದ ಕನಸನ್ನು ಗ್ರಾಮೀಣ ಭಾರತದ ಮೂಲಕ ಸಾಧಿಸಲಾಗುವುದು ಎಂದು ನನಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಇಂದು ಭಾರತದ ನಾಲ್ಕು ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳನ್ನು ಹಳ್ಳಿಗಳಲ್ಲಿ ಅಭಿವೃದ್ಧಿಪಡಿಸುತ್ತಿರುವುದು ನನಗೆ ಸಂತೋಷ ತಂದಿದೆ, ಅವುಗಳನ್ನು ಆ ಹಳ್ಳಿಯ ಯುವಕರು ನಿರ್ವಹಿಸುತ್ತಿದ್ದಾರೆ. ಹಳ್ಳಿಗಳಲ್ಲಿ ನಾಲ್ಕು ಲಕ್ಷ ಡಿಜಿಟಲ್ ಉದ್ಯಮಿಗಳನ್ನು ಪೋಷಿಸಲಾಗುತ್ತಿದೆ ಮತ್ತು ಗ್ರಾಮೀಣ ಜನರು ಎಲ್ಲಾ ಸೇವೆಗಳಿಂದ ಪ್ರಯೋಜನ ಪಡೆಯಲು ಒಗ್ಗಿಕೊಂಡಿದ್ದಾರೆ ಎಂಬ ಅಂಶದ ಬಗ್ಗೆ ರಾಷ್ಟ್ರವು ಹೆಮ್ಮೆ ಪಡಬಹುದು. ಸ್ವತಃ ತಂತ್ರಜ್ಞಾನದ ತಾಣ ಆಗುವ ಭಾರತದ ಶಕ್ತಿ ಇದು.
ನನ್ನ ಪ್ರೀತಿಯ ದೇಶವಾಸಿಗಳೇ,
ಸಮಿ ಕಂಡಕ್ಟರ್ ಗಳನ್ನು ಅಭಿವೃದ್ಧಿಪಡಿಸುವ, 5ಜಿ ಯುಗವನ್ನು ಪ್ರವೇಶಿಸುವ, ಆಪ್ಟಿಕಲ್ ಫೈಬರ್ ಗಳ ಜಾಲವನ್ನು ಹರಡುವ ಈ ಡಿಜಿಟಲ್ ಇಂಡಿಯಾ ಆಂದೋಲನವು ನಮ್ಮನ್ನು ನಾವು ಆಧುನಿಕ ಮತ್ತು ಅಭಿವೃದ್ಧಿ ಹೊಂದಿದವರೆಂದು ಸ್ಥಾಪಿಸಲು ಅಷ್ಟೇ ಅಲ್ಲ, ಬದಲಾಗಿ ಮೂರು ಆಂತರಿಕ ಕಾರ್ಯಾಚರಣೆಗಳಿಂದಾಗಿ ಇದು ಸಾಧ್ಯವಾಗುತ್ತದೆ. ಶಿಕ್ಷಣ ಪರಿಸರ ವ್ಯವಸ್ಥೆಯ ಸಂಪೂರ್ಣ ಪರಿವರ್ತನೆ, ಆರೋಗ್ಯ ಮೂಲಸೌಕರ್ಯದಲ್ಲಿ ಕ್ರಾಂತಿ ಮತ್ತು ಕೃಷಿ ಜೀವನದ ಗುಣಮಟ್ಟದಲ್ಲಿ ಸುಧಾರಣೆ ಡಿಜಿಟಲೀಕರಣದಿಂದ ಮಾತ್ರ ಸಾಧ್ಯವಾಗುತ್ತದೆ.
ಸ್ನೇಹಿತರೇ,
ಮಾನವತೆಗೆ ಟೆಕ್ಕೇಡ್ ಎಂದು ಶ್ಲಾಘಿಸಲಾದ ಈ ದಶಕದಲ್ಲಿ ಭಾರತವು ಅಸಾಧಾರಣವಾಗಿ ಮುಂದುವರಿಯುತ್ತದೆ ಎಂದು ನಾನು ಊಹಿಸಬಲ್ಲೆ. ಇದು ಒಂದು ದಶಕದ ತಂತ್ರಜ್ಞಾನವಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಜಾಗತಿಕವಾಗಿ ಗಣನೆಗೆ ತೆಗೆದುಕೊಳ್ಳುವ ಶಕ್ತಿಯಾಗಿ ಮಾರ್ಪಟ್ಟಿದೆ. ಈ ಟೆಕ್ಕೇಡ್ ನಲ್ಲಿ ಕೊಡುಗೆ ನೀಡಲು ನಾವು ಸಾಮರ್ಥ್ಯಗಳನ್ನು ಹೊಂದಿದ್ದೇವೆ.
ನಮ್ಮ ಅಟಲ್ ಇನ್ನೋವೇಶನ್ ಅಭಿಯಾನ, ನಮ್ಮ ಇಂಕ್ಯುಬೇಶನ್ ಕೇಂದ್ರಗಳು, ನಮ್ಮ ನವೋದ್ಯಮಗಳು ಸಂಪೂರ್ಣ ಹೊಸ ವಲಯವನ್ನು ಅಭಿವೃದ್ಧಿಪಡಿಸುತ್ತಿವೆ, ಯುವ ಪೀಳಿಗೆಗೆ ಹೊಸ ಅವಕಾಶಗಳನ್ನು ತೆರೆಯುತ್ತಿವೆ. ಇದು ಬಾಹ್ಯಾಕಾಶ ಕಾರ್ಯಾಚರಣೆಯ ವಿಷಯವಾಗಿರಲಿ, ಅದು ನಮ್ಮ ಆಳವಾದ ಸಾಗರ ಅಭಿಯಾನವೇ ಆಗಿರಲಿ, ನಾವು ಸಾಗರದ ಆಳಕ್ಕೆ ಹೋಗಲು ಬಯಸುತ್ತೇವೆಯೇ ಅಥವಾ ನಾವು ಆಕಾಶವನ್ನು ಸ್ಪರ್ಶಿಸಬೇಕೇ, ಇವು ಹೊಸ ಪ್ರದೇಶಗಳು, ಅದರ ಮೂಲಕ ನಾವು ಮುಂದುವರಿಯುತ್ತಿದ್ದೇವೆ.
ನನ್ನ ಪ್ರೀತಿಯ ದೇಶವಾಸಿಗಳೇ,
ಇದನ್ನು ನಾವು ಮರೆಯಬಾರದು ಮತ್ತು ಭಾರತವು ಶತಮಾನಗಳಿಂದ ಇದನ್ನು ನೋಡಿದೆ, ಆದರೆ ದೇಶದಲ್ಲಿ ಕೆಲವು ಮಾದರಿ ಕೆಲಸಗಳು ಬೇಕಾಗುತ್ತವೆ, ಆದರೆ ಕೆಲವು ದೊಡ್ಡ ಔನ್ನತ್ಯ ಸಾಧಿಸಬೇಕು, ಆದರೆ ಅದೇ ಸಮಯದಲ್ಲಿ ನಾವು ಒಂದು ರಾಷ್ಟ್ರವಾಗಿ ಎತ್ತರಗಳನ್ನು ಸಾಧಿಸುವಾಗ ಬೇರೂರಬೇಕು ಮತ್ತು ತಳಹದಿಯಲ್ಲಿ ಉಳಿಯಬೇಕು.
ಭಾರತದ ಆರ್ಥಿಕ ಪ್ರಗತಿಯ ಸಾಮರ್ಥ್ಯವು ತಳಮಟ್ಟದ ಶಕ್ತಿಯ ಮೇಲೆ ಅವಲಂಬಿತವಾಗಿದೆ. ಆದ್ದರಿಂದ, ನಾವು ನಮ್ಮ ಸಣ್ಣ ರೈತರು, ಉದ್ಯಮಿಗಳು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು, ಗುಡಿ ಕೈಗಾರಿಕೆಗಳು, ಸೂಕ್ಷ್ಮ ಕೈಗಾರಿಕೆಗಳು, ಬೀದಿಬದಿ ವ್ಯಾಪಾರಿಗಳು, ಗೃಹ ಕಾರ್ಮಿಕರು, ದಿನಗೂಲಿಗಳು, ಆಟೋ ರಿಕ್ಷಾ ಚಾಲಕರು, ಬಸ್ ಸೇವಾ ಪೂರೈಕೆದಾರರು ಇತ್ಯಾದಿಗಳ ಸಾಮರ್ಥ್ಯವನ್ನು ಗುರುತಿಸಬೇಕು ಮತ್ತು ಬಲಪಡಿಸಬೇಕು. ಇವು ಸಮಾಜದ ಅತಿ ದೊಡ್ಡ ಜನಸಂಖ್ಯೆಯನ್ನು ರೂಪಿಸುತ್ತವೆ, ಅವರನ್ನು ಸಶಕ್ತಗೊಳಿಸಬೇಕಾಗಿದೆ. ಹಾಗೆ ಮಾಡಲು ಸಾಧ್ಯವಾಗುವುದು ಭಾರತದ ಸಾಮರ್ಥ್ಯವನ್ನು ಖಾತರಿಪಡಿಸುತ್ತದೆ ಮತ್ತು ಆದ್ದರಿಂದ ನಮ್ಮ ಪ್ರಯತ್ನಗಳು ನಮ್ಮ ಆರ್ಥಿಕ ಅಭಿವೃದ್ಧಿಯ ಮೂಲಭೂತ ತಳಮೂಲದ ಶಕ್ತಿಯಾದ ಈ ಸ್ತರಕ್ಕೆ ಗರಿಷ್ಠ ಒತ್ತು ನೀಡುವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ.
ನನ್ನ ಪ್ರೀತಿಯ ದೇಶವಾಸಿಗಳೇ
ನಾವು 75 ವರ್ಷಗಳ ಅನುಭವವನ್ನು ಹೊಂದಿದ್ದೇವೆ, ಮತ್ತು ಈ 75 ವರ್ಷಗಳಲ್ಲಿ ನಾವು ಅನೇಕ ಸಾಧನೆಗಳನ್ನು ಸಹ ಸಾಧಿಸಿದ್ದೇವೆ. ನಾವು ಹೊಸ ಕನಸುಗಳನ್ನು ಕಂಡಿದ್ದೇವೆ ಮತ್ತು 75 ವರ್ಷಗಳ ಅನುಭವದಲ್ಲಿ ಹೊಸ ಸಂಕಲ್ಪಗಳನ್ನು ತೆಗೆದುಕೊಂಡಿದ್ದೇವೆ. ಆದರೆ, 'ಅಮೃತ್ ಕಾಲ'ಕ್ಕೆ ನಮ್ಮ ಮಾನವ ಸಂಪನ್ಮೂಲಗಳ ಗರಿಷ್ಠ ಫಲಿತಾಂಶ ಏನಾಗಿರಬೇಕು? ನಮ್ಮ ನೈಸರ್ಗಿಕ ಸಂಪತ್ತಿನ ಗರಿಷ್ಠ ಫಲಿತಾಂಶವನ್ನು ಪಡೆಯುವುದು ಹೇಗೆ? ನಾವು ಈ ಗುರಿಯೊಂದಿಗೆ ಮುಂದುವರಿಯಬೇಕು. ಕಳೆದ ಕೆಲವು ವರ್ಷಗಳ ಅನುಭವದಿಂದ ನಾನು ಏನನ್ನಾದರೂ ಹೇಳಲು ಬಯಸುತ್ತೇನೆ. ಕಾನೂನು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನ್ಯಾಯಾಲಯಗಳಲ್ಲಿ 'ನಾರಿ ಶಕ್ತಿ'ಯ ಶಕ್ತಿಯನ್ನು ನೀವು ನೋಡಿರಬಹುದು. ಗ್ರಾಮೀಣ ಪ್ರದೇಶದ ಜನ ಪ್ರತಿನಿಧಿಗಳನ್ನು ನೋಡಿ. ನಮ್ಮ 'ನಾರಿ ಶಕ್ತಿ' ನಮ್ಮ ಹಳ್ಳಿಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿಷ್ಠೆಯಿಂದ ತೊಡಗಿಸಿಕೊಂಡಿದೆ. ಜ್ಞಾನ ಅಥವಾ ವಿಜ್ಞಾನದ ಕ್ಷೇತ್ರವನ್ನೇ ನೋಡಿ, ನಮ್ಮ ದೇಶದ 'ನಾರಿ ಶಕ್ತಿ' ಮೇಲ್ ಸ್ತರದಲ್ಲಿಯೇ ಗೋಚರಿಸುತ್ತದೆ. ಪೊಲೀಸ್ ಪಡೆಯಲ್ಲಿಯೂ ಸಹ, ನಮ್ಮ 'ನಾರಿ ಶಕ್ತಿ' ಜನರನ್ನು ರಕ್ಷಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದೆ. ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ, ಅದು ಆಟದ ಮೈದಾನವಾಗಿರಲಿ ಅಥವಾ ಯುದ್ಧಭೂಮಿಯಾಗಿರಲಿ, ಭಾರತದ 'ನಾರಿ ಶಕ್ತಿ' ಹೊಸ ಶಕ್ತಿ ಮತ್ತು ಹೊಸ ನಂಬಿಕೆಯೊಂದಿಗೆ ಮುಂದೆ ಬರುತ್ತಿದೆ. ಭಾರತದ ಪ್ರಯಾಣದ ಕಳೆದ 75 ವರ್ಷಗಳ ಕೊಡುಗೆಗೆ ಹೋಲಿಸಿದರೆ ಮುಂದಿನ 25 ವರ್ಷಗಳಲ್ಲಿ ನನ್ನ ತಾಯಂದಿರು, ಸಹೋದರಿಯರು ಮತ್ತು ಪುತ್ರಿಯರಾದ 'ನಾರಿ ಶಕ್ತಿ'ಯ ಅನೇಕ ಕೊಡುಗೆಗಳನ್ನು ನಾನು ನೋಡಬಹುದು. ಮತ್ತು ಆದ್ದರಿಂದ, ಇದು ಮೌಲ್ಯಮಾಪನವನ್ನು ಮೀರಿದೆ. ಎಲ್ಲವೂ ನಿಮ್ಮ ನಿಯತಾಂಕಗಳನ್ನು ಮೀರಿದೆ. ಈ ಅಂಶದ ಬಗ್ಗೆ ನಾವು ಹೆಚ್ಚು ಗಮನ ಹರಿಸಿದಷ್ಟೂ, ನಮ್ಮ ಹೆಣ್ಣುಮಕ್ಕಳಿಗೆ ನಾವು ಹೆಚ್ಚು ಅವಕಾಶಗಳು ಮತ್ತು ಸೌಲಭ್ಯಗಳನ್ನು ಒದಗಿಸಿದಷ್ಟೂ, ಅವರು ಅದಕ್ಕಿಂತ ಹೆಚ್ಚಿನದನ್ನು ನಮಗೆ ಹಿಂದಿರುಗಿಸುತ್ತಾರೆ. ಅವರು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ. ನಮ್ಮ 'ನಾರಿ ಶಕ್ತಿ'ಯ ಗಣನೀಯ ಪ್ರಯತ್ನಗಳನ್ನು ಈ 'ಅಮೃತ್ ಕಾಲ'ದಲ್ಲಿ ಕನಸುಗಳನ್ನು ಈಡೇರಿಸಲು ಅಗತ್ಯವಿರುವ ಕಠಿಣ ಪರಿಶ್ರಮಕ್ಕೆ ಸೇರಿಸಿದರೆ, ಅದು ಕಡಿಮೆ ಕಠಿಣ ಪರಿಶ್ರಮವನ್ನು ತೆಗೆದುಕೊಳ್ಳುತ್ತದೆ ಮತ್ತು ನಮ್ಮ ಸಮಯದ ಮಿತಿಯನ್ನು ಸಹ ಕಡಿಮೆ ಮಾಡುತ್ತದೆ. ನಮ್ಮ ಕನಸುಗಳು ಹೆಚ್ಚು ತೀವ್ರವಾಗಿರುತ್ತವೆ, ಲವಲವಿಕೆಯಿಂದ ಕೂಡಿರುತ್ತವೆ ಮತ್ತು ಪ್ರಜ್ವಲಿಸುತ್ತವೆ.
ಆದ್ದರಿಂದ, ಸ್ನೇಹಿತರೇ, 
ನಾವು ನಮ್ಮ ಜವಾಬ್ದಾರಿಗಳೊಂದಿಗೆ ಮುಂದುವರಿಯೋಣ. ಇಂದು ನಾನು ನಮಗೆ ಒಕ್ಕೂಟ ವ್ಯವಸ್ಥೆಯ ರಚನೆಯನ್ನು ನೀಡಿದ ಭಾರತದ ಸಂವಿಧಾನದ ನಿರ್ಮಾತೃಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಚೈತನ್ಯವನ್ನು ಕಾಪಾಡಿಕೊಳ್ಳುವ ಮೂಲಕ ಮತ್ತು ಈ 'ಅಮೃತ ಕಾಲ'ದಲ್ಲಿ ಅದರ ಭಾವನೆಗಳನ್ನು ಗೌರವಿಸುವ ಮೂಲಕ ನಾವು ಹೆಗಲಿಗೆ ಹೆಗಲುಕೊಟ್ಟು ನಡೆದರೆ ನಮ್ಮ ಕನಸುಗಳು ನನಸಾಗುತ್ತವೆ. ಕಾರ್ಯಕ್ರಮಗಳು ಭಿನ್ನವಾಗಿರಬಹುದು, ಕಾರ್ಯಶೈಲಿಗಳು ಭಿನ್ನವಾಗಿರಬಹುದು, ಆದರೆ ನಿರ್ಣಯಗಳು ಭಿನ್ನವಾಗಿರುವುದಿಲ್ಲ, ಒಂದು ರಾಷ್ಟ್ರದ ಕನಸುಗಳು ಭಿನ್ನವಾಗಿರುವುದಿಲ್ಲ.
ನಾವು ಅಂತಹ ಯುಗದತ್ತ ಸಾಗೋಣ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿನ ಸರ್ಕಾರವು ನಮ್ಮ ಸಿದ್ಧಾಂತಕ್ಕೆ ಸೇರಿರಲಿಲ್ಲ ಎಂದು ನನಗೆ ನೆನಪಿದೆ. ಆದರೆ ಗುಜರಾತಿನ ಪ್ರಗತಿ ಭಾರತದ ಪ್ರಗತಿಗಾಗಿ ಎಂಬ ಅದೇ ಮಂತ್ರವನ್ನು ನಾನು ಅನುಸರಿಸುತ್ತಿದ್ದೆ. ನಾವು ಎಲ್ಲೇ ಇದ್ದರೂ ಭಾರತದ ಪ್ರಗತಿ ನಮ್ಮ ಹೃದಯದ ತಿರುಳಾಗಿರಬೇಕು. ನಮ್ಮ ದೇಶದ ಅನೇಕ ರಾಜ್ಯಗಳು, ದೇಶವನ್ನು ಮುನ್ನಡೆಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿವೆ, ಅನೇಕ ಕ್ಷೇತ್ರಗಳಲ್ಲಿ ಮುನ್ನಡೆಸಿವೆ ಮತ್ತು ಉದಾಹರಣೆಯಾಗುವಂತಹ ಕೆಲಸ ಮಾಡಿವೆ. ಇದು ನಮ್ಮ ಒಕ್ಕೂಟ ವ್ಯವಸ್ಥೆಗೆ ಬಲವನ್ನು ನೀಡುತ್ತದೆ. ಆದರೆ ಇಂದು ನಮಗೆ ಸಹಕಾರಿ ಒಕ್ಕೂಟ ವ್ಯವಸ್ಥೆಯ ಜೊತೆಗೆ ಸಹಕಾರಿ ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯ ಅಗತ್ಯವಿದೆ. ಅಭಿವೃದ್ಧಿಗಾಗಿ ನಮಗೆ ಸ್ಪರ್ಧೆಯ ಅಗತ್ಯವಿದೆ.
ಪ್ರತಿಯೊಂದು ರಾಜ್ಯವೂ ತಾನು ಮುಂದೆ ಸಾಗುತ್ತಿರುವುದಾಗಿ, ಕಷ್ಟಪಟ್ಟು ದುಡಿಯುವ ಮೂಲಕ ತಾನು ಮುಂದೆ ಓಡುತ್ತೇನೆ ಎಂದು ಭಾವಿಸಬೇಕು. ಒಂದು ನಿರ್ದಿಷ್ಟ ರಾಜ್ಯವು 10 ಉತ್ತಮ ಕಾರ್ಯಗಳನ್ನು ಮಾಡಿದ್ದರೆ, ಇತರರು 15 ಉತ್ತಮ ಕಾರ್ಯಗಳನ್ನು ಮಾಡುತ್ತಾರೆ. ಒಂದು ರಾಜ್ಯವು ಮೂರು ವರ್ಷಗಳಲ್ಲಿ ಒಂದು ಕೆಲಸವನ್ನು ಪೂರ್ಣಗೊಳಿಸಿದರೆ, ಇತರರು ಅದೇ ಕೆಲಸವನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಬೇಕು. ರಾಜ್ಯಗಳು ಮತ್ತು ಸರ್ಕಾರದ ಎಲ್ಲಾ ಘಟಕಗಳ ನಡುವೆ ಸ್ಪರ್ಧೆಯ ವಾತಾವರಣ ಇರಬೇಕು, ಅದು ನಮ್ಮನ್ನು ಅಭಿವೃದ್ಧಿಯ ಹೊಸ ಉತ್ತುಂಗಕ್ಕೆ ಕೊಂಡೊಯ್ಯಲು ಶ್ರಮಿಸಬೇಕು.
ನನ್ನ ಪ್ರೀತಿಯ ದೇಶವಾಸಿಗಳೇ,
ನಾವು ಅಮೃತ್ ಕಾಲದ 25 ವರ್ಷಗಳ ಬಗ್ಗೆ ಮಾತನಾಡುವಾಗ, ಅನೇಕ ಸವಾಲುಗಳು, ಮಿತಿಗಳು ಮತ್ತು ಸಮಸ್ಯೆಗಳು ಇರುತ್ತವೆ ಎಂದು ನನಗೆ ತಿಳಿದಿದೆ. ನಾವು ಇವುಗಳನ್ನು ಕಡಿಮೆ ಅಂದಾಜು ಮಾಡುವುದಿಲ್ಲ. ನಾವು ಮಾರ್ಗಗಳನ್ನು ಹುಡುಕುತ್ತಲೇ ಇರುತ್ತೇವೆ ಮತ್ತು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ ಆದರೆ ನಾನು ಇಲ್ಲಿ ಎರಡು ವಿಷಯಗಳನ್ನು ಚರ್ಚಿಸಲು ಬಯಸುತ್ತೇನೆ. ಚರ್ಚಿಸಲು ಅನೇಕ ವಿಷಯಗಳಿರಬಹುದು ಆದರೆ ಸಮಯದ ನಿರ್ಬಂಧವನ್ನು ಪರಿಗಣಿಸಿ, ನಾನು ಈಗಲೇ ಎರಡು ವಿಷಯಗಳ ಬಗ್ಗೆ ಚರ್ಚಿಸಲು ಬಯಸುತ್ತೇನೆ. ಮತ್ತು ಈ ಎಲ್ಲಾ ಸವಾಲುಗಳು ಮತ್ತು ಸಮಸ್ಯೆಗಳಿಂದಾಗಿ ನಾವು 'ಅಮೃತ್ ಕಾಲ್'ನ 25 ವರ್ಷಗಳ ಅವಧಿಯಲ್ಲಿ ಇನ್ನೂ ಸಮಯವಿರುವಾಗ ನಾವು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಅದು ವಿಕಾರ ರೂಪಕ್ಕೆ ತಿರುಗಬಹುದು ಎಂದು ನಾನು ನಂಬುತ್ತೇನೆ. ಆದ್ದರಿಂದ, ನಾನು ಎಲ್ಲವನ್ನೂ ಚರ್ಚಿಸಲು ಬಯಸುವುದಿಲ್ಲ ಆದರೆ ಖಂಡಿತವಾಗಿಯೂ ಎರಡು ವಿಷಯಗಳ ಮೇಲೆ ಕೇಂದ್ರೀಕರಿಸಲು ಬಯಸುತ್ತೇನೆ. ಒಂದು ಭ್ರಷ್ಟಾಚಾರ ಮತ್ತು ಇನ್ನೊಂದು ಸ್ವಜನ ಪಕ್ಷಪಾತ ಮತ್ತು ಪರಿವಾರ ವಾದ. ಭಾರತದಂತಹ ಪ್ರಜಾಪ್ರಭುತ್ವದಲ್ಲಿ ಜನರು ಬಡತನದೊಂದಿಗೆ ಹೋರಾಡುತ್ತಿರುವ ಮತ್ತು ವಾಸಿಸಲು ಸ್ಥಳವಿಲ್ಲದಿರುವಾಗ, ಮತ್ತೆ ಕೆಲವರು ಅಕ್ರಮವಾಗಿ ಸಂಪಾದಿಸಿದ ಹಣವನ್ನು ಇಟ್ಟುಕೊಳ್ಳಲು ಸ್ಥಳವಿಲ್ಲದವರಾಗಿದ್ದಾರೆ. ಇದು ಆದರ್ಶ ಸನ್ನಿವೇಶವಲ್ಲ. ಆದ್ದರಿಂದ ನಾವು ಭ್ರಷ್ಟಾಚಾರದ ವಿರುದ್ಧ ನಮ್ಮ ಸಂಪೂರ್ಣ ಶಕ್ತಿಯಿಂದ ಹೋರಾಡಬೇಕು. ಕಳೆದ ಎಂಟು ವರ್ಷಗಳಲ್ಲಿ, ನೇರ ಲಾಭ ವರ್ಗಾವಣೆ, ಆಧಾರ್ ಮತ್ತು ಮೊಬೈಲ್ ನಂತಹ ಎಲ್ಲಾ ಆಧುನಿಕ ವ್ಯವಸ್ಥೆಗಳನ್ನು ಬಳಸಿಕೊಂಡು, ತಪ್ಪು ಕೈಗಳಿಗೆ ಹೋಗುತ್ತಿದ್ದ ಎರಡು ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸುವ ಮೂಲಕ ನಾವು ದೇಶದ ಒಳಿತಿಗಾಗಿ ಕೆಲಸ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಬ್ಯಾಂಕುಗಳನ್ನು ಲೂಟಿ ಮಾಡಿದ ನಂತರ ದೇಶದಿಂದ ಪಲಾಯನ ಮಾಡಿದವರನ್ನು ನಾವು ಅವರ ಆಸ್ತಿಯನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಅವುಗಳನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಕೆಲವರು ಕಂಬಿಗಳ ಹಿಂದೆ ಹೋಗುವಂತೆ ಮಾಡಲಾಗಿದೆ. ದೇಶವನ್ನು ಲೂಟಿ ಮಾಡಿದವರು ಹಿಂದಿರುಗುವಂತೆ ಒತ್ತಾಯಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ.
ಸಹೋದರ ಸಹೋದರಿಯರೇ,
ನಾವು ಭ್ರಷ್ಟಾಚಾರದ ವಿರುದ್ಧ ನಿರ್ಣಾಯಕ ಕಾಲಘಟ್ಟ ಪ್ರವೇಶಿಸುತ್ತಿದ್ದೇವೆ ಎಂದು ನಾನು ಸ್ಪಷ್ಟವಾಗಿ ನೋಡಬಲ್ಲೆ. ದೊಡ್ಡವರು ಸಹ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಮನೋಭಾವದಿಂದ, ಭಾರತವು ಈಗ ಭ್ರಷ್ಟಾಚಾರದ ವಿರುದ್ಧ ನಿರ್ಣಾಯಕ ಕಾಲಘಟ್ಟದಲ್ಲಿ ಕಾಲಿಡುತ್ತಿದೆ. ಮತ್ತು ನಾನು ಇದನ್ನು ಕೆಂಪು ಕೋಟೆಯ ಮೇಲಿಂದ ದೊಡ್ಡ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ. ಸಹೋದರ ಸಹೋದರಿಯರೇ, ಭ್ರಷ್ಟರು ಗೆದ್ದಲುಗಳಂತೆ ದೇಶವನ್ನು ತಿನ್ನುತ್ತಿದ್ದಾರೆ. ಅದರ ವಿರುದ್ಧ ಹೋರಾಡಬೇಕು, ಹೋರಾಟವನ್ನು ತೀವ್ರಗೊಳಿಸಬೇಕು ಮತ್ತು ಅದನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ಯಬೇಕು. ಆದ್ದರಿಂದ, ನನ್ನ 130 ಕೋಟಿ ದೇಶವಾಸಿಗಳೇ, ದಯವಿಟ್ಟು ನನ್ನನ್ನು ಆಶೀರ್ವದಿಸಿ ಮತ್ತು ನನ್ನನ್ನು ಬೆಂಬಲಿಸಿ! ಇಂದು ನಾನು ನಿಮ್ಮ ಬೆಂಬಲ ಮತ್ತು ಸಹಕಾರವನ್ನು ಕೋರಲು ಬಂದಿದ್ದೇನೆ, ಇದರಿಂದ ನಾನು ಈ ಯುದ್ಧದಲ್ಲಿ ಹೋರಾಡಬಹುದು. ಈ ಯುದ್ಧದಲ್ಲಿ ದೇಶವು ವಿಜಯಶಾಲಿಯಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಭ್ರಷ್ಟಾಚಾರದಿಂದ ಸಾಮಾನ್ಯ ನಾಗರಿಕರ ಜೀವನವು ಹಾಳಾಗಿದೆ. ಆದ್ದರಿಂದ, ಸಾಮಾನ್ಯ ನಾಗರಿಕರು ಮತ್ತೊಮ್ಮೆ ಘನತೆಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ. ನನ್ನ ಪ್ರೀತಿಯ ದೇಶವಾಸಿಗಳೇ, ದೇಶದಲ್ಲಿನ ಭ್ರಷ್ಟಾಚಾರದ ಬಗ್ಗೆ ಅಸಹ್ಯ ಇದೆ. ಅದನ್ನು ವ್ಯಕ್ತಪಡಿಸುತ್ತಿದ್ದರೂ, ಕೆಲವೊಮ್ಮೆ ಭ್ರಷ್ಟರ ಬಗ್ಗೆ ಔದಾರ್ಯವನ್ನು ತೋರಿಸಲಾಗುತ್ತದೆ, ಅದು ಯಾವುದೇ ದೇಶದಲ್ಲಿ ಸ್ವೀಕಾರಾರ್ಹವಲ್ಲ ಎಂಬುದು ಬಹಳ ಕಳವಳಕಾರಿ ವಿಷಯವಾಗಿದೆ. ಮತ್ತು ಅನೇಕ ಜನರು ಎಷ್ಟು ನಾಚಿಕೆಗೇಡಿನವರಾಗಿ ಹೋಗಿದ್ದಾರೆಂದರೆ, ನ್ಯಾಯಾಲಯದಲ್ಲಿ ಶಿಕ್ಷೆಗೆ ಗುರಿಯಾಗಿದ್ದರೂ, ಭ್ರಷ್ಟರೆಂದು ಸಾಬೀತಾದರೂ, ಜೈಲು ಶಿಕ್ಷೆಗೆ ಗುರಿಯಾಗಿದ್ದರೂ, ಜೈಲಿನಲ್ಲಿ ಸೇವೆ ಸಲ್ಲಿಸುತ್ತಿರುವಾಗ, ಅವರು ವೈಭವೀಕರಿಸುವುದನ್ನು, ಹೆಮ್ಮೆಪಡುವುದನ್ನು ಮತ್ತು ತಮ್ಮ ಸ್ಥಾನಮಾನವನ್ನು ಉನ್ನತೀಕರಿಸುವುದನ್ನು ಮುಂದುವರಿಸಿದ್ದಾರೆ.  ಸಮಾಜದಲ್ಲಿ ಕೊಳಕಿನ ಬಗ್ಗೆ ದ್ವೇಷ ಮೂಡದಿದ್ದರೆ, ಶುಚಿತ್ವದ ಪ್ರಜ್ಞೆ ಉದ್ಭವಿಸುವುದಿಲ್ಲ, ನಾವು ಭ್ರಷ್ಟರು ಮತ್ತು ಭ್ರಷ್ಟಾಚಾರದ ಬಗ್ಗೆ ದ್ವೇಷವನ್ನು ಬೆಳೆಸದ ಹೊರತು, ನಾವು ಈ ಜನರನ್ನು ಸಾಮಾಜಿಕ ಅವಮಾನಕ್ಕೆ ತಳ್ಳುವವರೆಗೆ, ಅಂತಹ ಮನಸ್ಥಿತಿ ಬದಲಾಗುವುದಿಲ್ಲ. ಅದಕ್ಕಾಗಿಯೇ ನಾವು ಭ್ರಷ್ಟಾಚಾರ ಮತ್ತು ಭ್ರಷ್ಟ ಜನರ ಬಗ್ಗೆ ತುಂಬಾ ಜಾಗೃತರಾಗಿರಬೇಕು.
ಎತ್ತಿ ತೋರಿಸಬೇಕಾದ ಮತ್ತೊಂದು ಅಂಶವೆಂದರೆ ವ್ಯಾಪಕವಾದ ಸ್ವಜನಪಕ್ಷಪಾತ. ಮತ್ತು ನಾನು ಸ್ವಜನಪಕ್ಷಪಾತ ಅಥವಾ ರಾಜವಂಶದ ಬಗ್ಗೆ ಮಾತನಾಡುವಾಗಲೆಲ್ಲಾ, ಜನರು ನಾನು ರಾಜಕೀಯದ ಸಂದರ್ಭದಲ್ಲಿ ಮಾತ್ರ ಮಾತನಾಡುತ್ತಿದ್ದೇನೆ ಎಂದು ಭಾವಿಸುತ್ತಾರೆ. ಇಲ್ಲವೇ ಇಲ್ಲ. ದುರದೃಷ್ಟವಶಾತ್, ಇದನ್ನು ಇತರ ಭಾರತೀಯ ಸಂಸ್ಥೆಗಳಲ್ಲೂ ಪೋಷಿಸಲಾಗುತ್ತಿದೆ. ಪರಿವಾರವಾದ ಸ್ವಜನಪಕ್ಷಪಾತವು ಇಂದು ನಮ್ಮ ಅನೇಕ ಸಂಸ್ಥೆಗಳನ್ನು ಹಿಡಿದಿಟ್ಟಿದೆ. ಇದು ನಮ್ಮ ದೇಶದ ಅಗಾಧ ಪ್ರತಿಭೆಗಳ ಸಮೂಹಕ್ಕೆ ಹಾನಿಯುಂಟುಮಾಡುತ್ತಿರುವುದು ವಿಷಾದನೀಯ. ನನ್ನ ದೇಶದ ಭವಿಷ್ಯದ ಸಾಮರ್ಥ್ಯವು ನರಳುತ್ತಿದೆ. ಈ ಅವಕಾಶಗಳ ನ್ಯಾಯಸಮ್ಮತ ಪ್ರತಿಸ್ಪರ್ಧಿಗಳು ಮತ್ತು ನಿಜವಾಗಿಯೂ ಅರ್ಹರಾಗಿರುವವರು ಸ್ವಜನ ಪಕ್ಷಪಾತದಿಂದಾಗಿ ಮೂಲೆಗುಂಪಾಗುತ್ತಾರೆ. ಇದು ಭ್ರಷ್ಟಾಚಾರಕ್ಕೆ ಉತ್ತಮ ಕಾರಣವಾಗಿದೆ. ನಿಯಮಗಳ ಪ್ರಕಾರ ಅವಕಾಶಗಳನ್ನು ಪಡೆಯಲು ತಮಗೆ ಯಾವುದೇ ಅವಕಾಶವಿಲ್ಲ ಎಂದು ಅವರು ಭಾವಿಸುವುದರಿಂದ, ಈ ಸಂಭಾವ್ಯ ಮತ್ತು ಅರ್ಹ ಅಭ್ಯರ್ಥಿಗಳು ಕೆಲಸವನ್ನು ಪಡೆಯಲು ಲಂಚವನ್ನು ಪಾವತಿಸುತ್ತಾರೆ. ನಾವೆಲ್ಲರೂ ಸ್ವಜನಪಕ್ಷಪಾತದ ವಿರುದ್ಧ ಹೋರಾಡಲು ಹೆಚ್ಚು ಜಾಗೃತರಾಗುವ ಮೂಲಕ ಮತ್ತು ಇದಕ್ಕಾಗಿ ವಿರೋಧವನ್ನು ಸೃಷ್ಟಿಸುವ ಮೂಲಕ ಶ್ರಮಿಸಬೇಕಾಗಿದೆ. ಅಂತಹ ಪ್ರಯತ್ನಗಳು ಮಾತ್ರ ನಮ್ಮ ಸಂಸ್ಥೆಗಳನ್ನು ಉಳಿಸಬಹುದು ಮತ್ತು ನಮ್ಮ ಮುಂದಿನ ಪೀಳಿಗೆಯಲ್ಲಿ ನೈತಿಕ ನಡವಳಿಕೆಯನ್ನು ಬೇರೂರಿಸುತ್ತದೆ. ನಮ್ಮ ಸಂಸ್ಥೆಗಳ ಉಜ್ವಲ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಇದು ಕಡ್ಡಾಯವಾಗಿದೆ.  ಅಂತೆಯೇ, ರಾಜಕೀಯದಲ್ಲಿಯೂ ಸಹ, ಕುಟುಂಬ ಪಕ್ಷಪಾತ ಅಥವಾ ರಾಜವಂಶವು ದೇಶದ ಶಕ್ತಿಗೆ ಹೆಚ್ಚು ಅನ್ಯಾಯ ಮಾಡಿದೆ. ಇದು ಕೇವಲ ಕುಟುಂಬಕ್ಕೆ ಮಾತ್ರ ಪ್ರಯೋಜನವಾಗುವ ಒಂದು ಮಾರ್ಗವಾಗುತ್ತದೆ ಮತ್ತು ರಾಷ್ಟ್ರೀಯ ಒಳಿತಿನ ಬಗ್ಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.
ಆದ್ದರಿಂದ, ಕೆಂಪು ಕೋಟೆಯ ಮೇಲಿನಿಂದದ ತ್ರಿವರ್ಣ ಧ್ವಜದ ಕೆಳಗೆ ನಿಂತು ಭಾರತದ ಸಂವಿಧಾನವನ್ನು ನೆನಪಿಸಿಕೊಳ್ಳುವಾಗ, ನಾನು ಎಲ್ಲಾ ದೇಶವಾಸಿಗಳಿಗೆ ಮುಕ್ತ ಹೃದಯದಿಂದ ಹೇಳಬಯಸುತ್ತೇನೆ- ಭಾರತೀಯ ರಾಜಕೀಯದ ಶುದ್ಧೀಕರಣ ಮತ್ತು ಶುದ್ಧೀಕರಣಕ್ಕಾಗಿ ನಾವೆಲ್ಲರೂ ಕೈ ಜೋಡಿಸೋಣ ಮತ್ತು ಭಾರತದ ಎಲ್ಲಾ ಸಂಸ್ಥೆಗಳನ್ನು ಶುದ್ಧೀಕರಿಸಲು, ನಾವು ಈ ಕುಟುಂಬವಾದ ಮನಸ್ಥಿತಿಯಿಂದ ದೇಶವನ್ನು ಮುಕ್ತಗೊಳಿಸಬೇಕು ಮತ್ತು ದೇಶವನ್ನು ಮುನ್ನಡೆಸುವತ್ತ ಸಾಗಬೇಕು. ಅರ್ಹತೆ. ಇದು ಹಿಂದೆಂದಿಗಿಂತಲೂ ಈಗ ಹೆಚ್ಚು ಅನಿವಾರ್ಯವಾಗಿದೆ. ಇಲ್ಲದಿದ್ದರೆ, ಪ್ರತಿಯೊಬ್ಬರೂ ಅವರು ಅರ್ಹರು ಆದರೆ ಪರಿಸರ ವ್ಯವಸ್ಥೆಯಲ್ಲಿ ಯಾವುದೇ ಕುಟುಂಬ ಸದಸ್ಯರು ತಮಗೆ ಭರವಸೆ ನೀಡದ ಕಾರಣ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಭಾರಿ ಅಸಮಾಧಾನವನ್ನು ಹೊಂದಿರುತ್ತಾರೆ. ಅಂತಹ ಮನಸ್ಥಿತಿ ಯಾವುದೇ ದೇಶಕ್ಕೆ ಒಳ್ಳೆಯದಲ್ಲ.
ನನ್ನ ದೇಶದ ಪ್ರೀತಿಯ ಯುವಕರೇ, ನಿಮ್ಮ ಉಜ್ವಲ ಭವಿಷ್ಯಕ್ಕಾಗಿ, ನಿಮ್ಮ ಕನಸುಗಳಿಗಾಗಿ, ಸ್ವಜನಪಕ್ಷಪಾತದ ವಿರುದ್ಧದ ಹೋರಾಟದಲ್ಲಿ ನಾನು ನಿಮ್ಮ ಬೆಂಬಲವನ್ನು ಕೋರುತ್ತೇನೆ. ವಂಶಪಾರಂಪರ್ಯ ರಾಜಕಾರಣದ ವಿರುದ್ಧದ ಹೋರಾಟಕ್ಕೆ ನಿಮ್ಮ ಬೆಂಬಲ ನನಗೆ ಬೇಕು. ನಾನು ಇದನ್ನು ನನ್ನ ಸಾಂವಿಧಾನಿಕ ಜವಾಬ್ದಾರಿ ಎಂದು ಪರಿಗಣಿಸುತ್ತೇನೆ. ಪ್ರಜಾಪ್ರಭುತ್ವದ ಜವಾಬ್ದಾರಿ. ಈ ಕೆಂಪು ಕೋಟೆಯಿಂದ ಮಾತನಾಡುವ ಪದಗಳ ಶಕ್ತಿಯನ್ನು ನಾನು ನಂಬುತ್ತೇನೆ. ಆದ್ದರಿಂದ ಈ ಅವಕಾಶವನ್ನು ಬೆಂಬಲಿಸುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ. ಕಳೆದ ಕೆಲವು ದಿನಗಳಲ್ಲಿ ಕ್ರೀಡಾ ಜಗತ್ತಿನಲ್ಲಿ ನಾವು ಪಡೆದ ಪ್ರಶಂಸೆಗಳಲ್ಲಿ ನಾವು ಇದನ್ನು ಗಮನಿಸಿದ್ದೇವೆ. ಈ ಹಿಂದೆ ನಾವು ಅಂತಹ ಮಹಾನ್ ಪ್ರತಿಭೆಗಳು ಇರಲಿಲ್ಲ ಎಂದಲ್ಲ. ನಮ್ಮ ಮಕ್ಕಳು ಮತ್ತು ಹೆಣ್ಣುಮಕ್ಕಳು, ಭಾರತದ ಯುವಕರು, ಕ್ರೀಡಾ ಜಗತ್ತಿನಲ್ಲಿ ಏನನ್ನೂ ಸಾಧಿಸುತ್ತಿಲ್ಲ ಎಂದಲ್ಲ. ಆದರೆ ದುರದೃಷ್ಟವಶಾತ್ ಸ್ವಜನಪಕ್ಷಪಾತದ ಮಾರ್ಗದಿಂದಾಗಿ ಅವರನ್ನು ಹೊರಹಾಕಲಾಗಿದೆ.  ಇತರ ದೇಶಗಳಲ್ಲಿ ಸ್ಪರ್ಧೆಯನ್ನು ತಲುಪಲು ಅರ್ಹತೆ ಪಡೆದವರು ದೇಶಕ್ಕಾಗಿ ಪದಕಗಳನ್ನು ಗೆಲ್ಲುವ ಬಗ್ಗೆ ಕನಿಷ್ಠ ಕಾಳಜಿ ವಹಿಸುತ್ತಿದ್ದರು. ಆದರೆ ಪಾರದರ್ಶಕತೆಯನ್ನು ಪುನಃಸ್ಥಾಪಿಸಿದಾಗ, ಆಯ್ಕೆಯು ಕ್ರೀಡಾಪಟುವಿನ ಅರ್ಹತೆಯ ಮೇಲೆ ಮತ್ತು ಆಟದ ಮೈದಾನಗಳಲ್ಲಿ ಪ್ರತಿಭೆಯನ್ನು ಗೌರವಿಸಲಾಯಿತು. ಜಾಗತಿಕವಾಗಿ ಕ್ರೀಡಾಂಗಣಗಳಲ್ಲಿ ತ್ರಿವರ್ಣ ಧ್ವಜವು ಎತ್ತರಕ್ಕೆ ಹಾರುವುದನ್ನು ಮತ್ತು ರಾಷ್ಟ್ರಗೀತೆಯು ಪ್ರತಿಧ್ವನಿಸುವುದನ್ನು ನೋಡುವುದು ಇಂದು ಹೆಮ್ಮೆಯ ಕ್ಷಣವಾಗಿದೆ.
ವಂಶ ಮತ್ತು ಸ್ವಜನಪಕ್ಷಪಾತದಿಂದ ಮುಕ್ತವಾದಾಗ, ಒಬ್ಬರು ಹೆಮ್ಮೆ ಪಡುತ್ತಾರೆ, ಮತ್ತು ಅಂತಹ ಫಲಿತಾಂಶಗಳು ಬರುತ್ತವೆ. ನನ್ನ ಪ್ರೀತಿಯ ದೇಶವಾಸಿಗಳೇ, ನಿಸ್ಸಂದೇಹವಾಗಿಯೂ ಅನೇಕ ಸವಾಲುಗಳಿವೆ. ಆದರೆ ಈ ದೇಶದ ಮುಂದೆ ಕೋಟಿಗಟ್ಟಲೆ ಸಮಸ್ಯೆಗಳಿದ್ದರೆ, ಆಗ ಕೋಟ್ಯಂತರ ಪರಿಹಾರಗಳಿವೆ ಮತ್ತು ನನಗೆ 130 ಕೋಟಿ ದೇಶವಾಸಿಗಳ ಮೇಲೆ ನಂಬಿಕೆ ಇದೆ. 130 ಕೋಟಿ ದೇಶವಾಸಿಗಳು ಒಂದು ನಿರ್ದಿಷ್ಟ ಗುರಿ ಮತ್ತು ಸಂಕಲ್ಪದ ಬದ್ಧತೆಯೊಂದಿಗೆ ಒಂದು ಹೆಜ್ಜೆ ಮುಂದೆ ಇಟ್ಟಾಗ, ಭಾರತವು 130 ಹೆಜ್ಜೆ ಮುಂದೆ ಹೋಗುತ್ತದೆ. ಈ ಸಾಮರ್ಥ್ಯದೊಂದಿಗೆ ನಾವು ಮುಂದುವರಿಯಬೇಕು. ಇದು 'ಅಮೃತ್ ಕಾಲ'ದ ಮೊದಲ ಪ್ರಭಾತ ಮತ್ತು ಮುಂದಿನ 25 ವರ್ಷಗಳವರೆಗೆ ನಾವು ಒಂದೇ ಒಂದು ಕ್ಷಣವನ್ನು ಮರೆಯಬಾರದು. ಪ್ರತಿ ದಿನ ತಾಯ್ನಾಡಿಗಾಗಿ ಬದುಕಲು, ಸಮಯದ ಪ್ರತಿ ಕ್ಷಣ ಮತ್ತು ಜೀವನದ ಪ್ರತಿಯೊಂದು ಕಣವೂ ಸ್ವಾತಂತ್ರ್ಯ ಹೋರಾಟಗಾರರಿಗೆ ನಮ್ಮ ನಿಜವಾದ ಗೌರವವಾಗಿರುತ್ತದೆ. ಆಗ ಮಾತ್ರ, ಕಳೆದ 75 ವರ್ಷಗಳಲ್ಲಿ ದೇಶವನ್ನು ಈ ಹಂತಕ್ಕೆ ಕೊಂಡೊಯ್ಯಲು ಕೊಡುಗೆ ನೀಡಿದ ಎಲ್ಲರ ಮಹಾನುಭಾವರ ಸ್ಮರಣೆ ಉಪಯುಕ್ತವಾಗುತ್ತದೆ.
ಹೊಸ ಸಾಧ್ಯತೆಗಳನ್ನು ಪೋಷಿಸುವ ಮೂಲಕ, ಹೊಸ ಸಂಕಲ್ಪಗಳನ್ನು ಸಾಕಾರಗೊಳಿಸುವ ಮೂಲಕ ಮತ್ತು ಆತ್ಮವಿಶ್ವಾಸದಿಂದ ಮುಂದುವರಿಯುವ ಮೂಲಕ ಇಂದು 'ಅಮೃತ ಕಾಲ'ವನ್ನು ಪ್ರಾರಂಭಿಸುವಂತೆ ನಾನು ದೇಶವಾಸಿಗಳನ್ನು ಒತ್ತಾಯಿಸುತ್ತೇನೆ. ಸ್ವಾತಂತ್ರ್ಯದ 'ಅಮೃತ ಮಹೋತ್ಸವ'ವು 'ಅಮೃತ ಕಾಲ'ದ ದಿಕ್ಕಿನಲ್ಲಿ ತಿರುಗಿದೆ ಮತ್ತು ಆದ್ದರಿಂದ, ಈ 'ಅಮೃತ ಕಾಲ'ದಲ್ಲಿ ಎಲ್ಲರ ಪ್ರಯತ್ನ ಅನಿವಾರ್ಯವಾಗಿದೆ. ಎಲ್ಲರ ಪ್ರಯತ್ನ ಈ ಫಲಿತಾಂಶವನ್ನು ನೀಡಲಿದೆ. ಟೀಮ್ ಇಂಡಿಯಾದ ಸ್ಫೂರ್ತಿ ದೇಶವನ್ನು ಮುಂದಕ್ಕೆ ಕೊಂಡೊಯ್ಯಲಿದೆ. 130 ಕೋಟಿ ದೇಶವಾಸಿಗಳ ಈ ಟೀಮ್ ಇಂಡಿಯಾ ಒಂದು ತಂಡವಾಗಿ ಮುಂದುವರಿಯುವ ಮೂಲಕ ಎಲ್ಲಾ ಕನಸುಗಳನ್ನು ನನಸಾಗಿಸುತ್ತದೆ. ಈ ನಂಬಿಕೆಯೊಂದಿಗೆ, ನನ್ನೊಂದಿಗೆ ಕೂಗಿ,
ಜೈ ಹಿಂದ್!
ಜೈ ಹಿಂದ್!
ಜೈ ಹಿಂದ್!
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ವಂದೇ ಮಾತರಂ!
ವಂದೇ ಮಾತರಂ!
ವಂದೇ ಮಾತರಂ!
ತುಂಬಾ ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Double engine govt becoming symbol of good governance, says PM Modi

Media Coverage

Double engine govt becoming symbol of good governance, says PM Modi
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಡಿಸೆಂಬರ್ 2024
December 17, 2024

Unstoppable Progress: India Continues to Grow Across Diverse Sectors with the Modi Government