ಬನಾಸ್ ಸಮುದಾಯ ರೇಡಿಯೋ ಕೇಂದ್ರ ಉದ್ಘಾಟನೆ
ಸುಮಾರು 600 ಕೋಟಿ ರೂ. ವೆಚ್ಚದಲ್ಲಿ ಬನಸಂಕ್ತ ಜಿಲ್ಲೆಯ ದಿಯೋದರ್ ನಲ್ಲಿ ಹೊಸ ಡೈರಿ ಸಂಕೀರ್ಣ ಮತ್ತು ಆಲೂಗಡ್ಡೆ ಸಂಸ್ಕರಣಾ ಘಟಕ ನಿರ್ಮಾಣ
ಪಾಲನ್ ಪುರದ ಬನಾಸ್ ಡೈರಿ ಘಟಕದಲ್ಲಿ ಚೀಸ್ ಉತ್ಪನ್ನಗಳು ಮತ್ತು ಒಡೆದ ಹಾಲಿನ ಪುಡಿ ಉತ್ಪನ್ನಗಳ ಸೌಕರ್ಯ ವಿಸ್ತರಣೆ
ಗುಜರಾತ್ ನ ದಾಮದಲ್ಲಿ ಸಾವಯವ ಗೊಬ್ಬರ ಮತ್ತು ಜೈವಿಲ ಅನಿಲ ಉತ್ಪಾದನಾ ಘಟಕ
ಖಿಮಾನ, ರತನ್ ಪುರ-ಭಿಲ್ಡಿ, ರಾಧಾನ್ ಪುರ ಮತ್ತು ಥಾವರ್ ನಲ್ಲಿ 100 ಟನ್ ಸಾಮರ್ಥ್ಯದ ನಾಲ್ಕು ಗೋಬರ್ ಗ್ಯಾಸ್ ಘಟಕಗಳ ಸ್ಥಾಪನೆಗೆ ಶಂಕುಸ್ಥಾಪನೆ
“ಕಳೆದ ಕೆಲವು ವರ್ಷಗಳಿಂದೀಚೆಗೆ ಬನಾಸ್ ಡೈರಿ ಸ್ಥಳೀಯ ಸಮುದಾಯಗಳು ವಿಶೇಷವಾಗಿ ರೈತರು ಮತ್ತು ಮಹಿಳೆಯರ ಸಬಲೀಕರಣದ ತಾಣವಾಗಿದೆ’’
ಬನಸ್ಕಾಂತ ಕೃಷಿಯಲ್ಲಿ ಮೂಡಿಸಿರುವ ಛಾಪು ಶ್ಲಾಘನೀಯ. ರೈತರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರು, ನೀರಿನ ಸಂರಕ್ಷಣೆ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದರು ಮತ್ತು ಅದರ ಫಲಿತಾಂಶ ಇಂದು ಎಲ್ಲರೂ ನೋಡಬಹುದಾಗಿದೆ’’
“ವಿದ್ಯಾ ಸಮೀಕ್ಷಾ ಕೇಂದ್ರವು ಗುಜರಾತ್ ನ 54000 ಶಾಲೆಗಳು, 4.5 ಲಕ್ಷ ಶಿಕ್ಷಕರು ಮತ್ತು 1.5 ಕೋಟಿ ವಿದ್ಯಾರ್ಥಿಗಳ ಶಕ್ತಿ ರೋಮಾಂಚಕ ತಾಣವಾಗಿದೆ’’
“ನಿಮ್ಮ ವಲಯಗಳಲ್ಲಿ ನಾನು ನಿಮ್ಮೊಂದಿಗೆ ಪಾಲುದಾರನಾಗಿರುತ್ತೇನೆ’’

ನಮಸ್ತೆ!

ನೀವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೀರಿ ಎಂದು ಭಾವಿಸುತ್ತೇನೆ. ನಾನು ಆರಂಭದಲ್ಲಿ ಹಿಂದಿಯಲ್ಲಿ ಮಾತನಾಡಬೇಕಾಗಿರುವುದರಿಂದ ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ. ಏಕೆಂದರೆ ಮಾಧ್ಯಮದ ಸ್ನೇಹಿತರು ನಾನು ಹಿಂದಿಯಲ್ಲಿ ಮಾತನಾಡುವುದು ಒಳ್ಳೆಯದು ಎಂದು ವಿನಂತಿಸಿದರು. ಆದ್ದರಿಂದ, ನಾನು ಅವರ ಮನವಿಯನ್ನು ಅಂಗೀಕರಿಸಲು ನಿರ್ಧರಿಸಿದೆ.

ಮೃದುಭಾಷಿ ಮತ್ತು ಜನಪ್ರಿಯ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಸಂಸತ್ತಿನಲ್ಲಿ ನನ್ನ ಹಿರಿಯ ಸಹೋದ್ಯೋಗಿ ಮತ್ತು ಗುಜರಾತ್ ಪ್ರದೇಶ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾದ ಶ್ರೀ ಸಿ.ಆರ್. ಪಾಟೀಲ್, ಗುಜರಾತ್ ಸರ್ಕಾರದ ಸಚಿವ ಜಗದೀಶ್ ಪಾಂಚಾಲ್, ಈ ಮಣ್ಣಿನ ಮಕ್ಕಳಾದ ಶ್ರೀ ಕೀರ್ತಿಸಿಂಗ್ ವಘೇಲಾ ಮತ್ತು ಗಜೇಂದ್ರ ಸಿಂಗ್ ಪರ್ಮಾರ್, ಸಂಸತ್ ಸದಸ್ಯರಾದ ಶ್ರೀ ಪರ್ಬತ್ ಭಾಯ್, ಶ್ರೀ ಭರತ್ ಸಿಂಗ್ ದಭಿ ಮತ್ತು ದಿನೇಶ್ ಭಾಯಿ ಅನವಡಿಯಾ, ಬನಾಸ್ ಡೇರಿಯ ಅಧ್ಯಕ್ಷ ಮತ್ತು ಸಹೋದ್ಯೋಗಿ ಶಂಕರ್ ಚೌಧರಿ, ಇತರ ಗಣ್ಯರು, ಸಹೋದರಿಯರು ಮತ್ತು ಸಹೋದರರೇ!

ಮಾ ನರೇಶ್ವರಿ ಮತ್ತು ಮಾ ಅಂಬಾಜಿಯ ಈ ಪವಿತ್ರ ಭೂಮಿಗೆ ನಾನು ತಲೆಬಾಗುತ್ತೇನೆ. ನಾನು ನಿಮ್ಮೆಲ್ಲರಿಗೂ ಶುಭಾಶಯ ಕೋರುತ್ತೇನೆ. ಬಹುಶಃ ನನ್ನ ಜೀವನದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ಸುಮಾರು ಎರಡು ಲಕ್ಷ ತಾಯಂದಿರು ಮತ್ತು ಸಹೋದರಿಯರು ಇಂದು ನಮ್ಮೆಲ್ಲರನ್ನು ಆಶೀರ್ವದಿಸುತ್ತಿದ್ದಾರೆ. ನೀವು ನನ್ನನ್ನು ಆಶೀರ್ವದಿಸುವಾಗ ನನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ಮಾ ಜಗದಾಂಬ ಭೂಮಿಯ ತಾಯಂದಿರ ಆಶೀರ್ವಾದವು ಅಮೂಲ್ಯವಾಗಿದೆ ಮತ್ತು ಅಮೂಲ್ಯವಾದ ಶಕ್ತಿ ಮತ್ತು ಶಕ್ತಿಯ ತಿರುಳು. ನಾನು ಬನಾಸ್ ನ ಎಲ್ಲಾ ತಾಯಂದಿರು ಮತ್ತು ಸಹೋದರಿಯರಿಗೆ ಗೌರವಪೂರ್ವಕವಾಗಿ ನಮಿಸುತ್ತೇನೆ.

ಸಹೋದರ ಸಹೋದರಿಯರೇ,

ನಾನು ಕಳೆದ ಒಂದು ಅಥವಾ ಎರಡು ಗಂಟೆಗಳಲ್ಲಿ ಇಲ್ಲಿನ ವಿವಿಧ ಸ್ಥಳಗಳಿಗೆ ಹೋಗಿದ್ದೇನೆ. ನಾನು ಹೈನುಗಾರಿಕೆ ವಲಯಕ್ಕೆ ಸಂಬಂಧಿಸಿದ ಸರ್ಕಾರದ ಯೋಜನೆಗಳ ಫಲಾನುಭವಿ ಸಹೋದರಿಯರೊಂದಿಗೆ ಬಹಳ ವಿವರವಾಗಿ ಸಂವಾದ ನಡೆಸಿದ್ದೇನೆ. ಆಲೂಗೆಡ್ಡೆ ಸಂಸ್ಕರಣಾ ಘಟಕವನ್ನು ನಿರ್ಮಿಸಿರುವ ಹೊಸ ಸಂಕೀರ್ಣಕ್ಕೆ ಭೇಟಿ ನೀಡುವ ಅವಕಾಶವೂ ನನಗೆ ಸಿಕ್ಕಿತು. ಈ ಇಡೀ ಅವಧಿಯಲ್ಲಿ ನಾನು ನೋಡಿದ ವಿಷಯಗಳು, ನಡೆದ ಚರ್ಚೆಗಳು ಮತ್ತು ನನಗೆ ನೀಡಿದ ಮಾಹಿತಿಯಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ ಮತ್ತು ಬನಾಸ್ ಡೇರಿಯ ಎಲ್ಲಾ ಸಹೋದ್ಯೋಗಿಗಳಿಗೆ ಮತ್ತು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಗ್ರಾಮೀಣ ಅರ್ಥವ್ಯವಸ್ಥೆ ಮತ್ತು ತಾಯಂದಿರು ಮತ್ತು ಸಹೋದರಿಯರ ಸಬಲೀಕರಣವನ್ನು ಹೇಗೆ ಬಲಪಡಿಸಬಹುದು ಮತ್ತು ಸಹಕಾರ ಚಳವಳಿಯು ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಹೇಗೆ ಉತ್ತೇಜನ ನೀಡಬಹುದು ಎಂಬುದನ್ನು ಇಲ್ಲಿ ಸ್ಪಷ್ಟವಾಗಿ ತಿಳಿಯಬಹುದು. ಕೆಲವು ತಿಂಗಳುಗಳ ಹಿಂದೆ, ನನ್ನ ಸಂಸದೀಯ ಕ್ಷೇತ್ರ ವಾರಾಣಸಿಯಲ್ಲಿ ಬನಾಸ್ ಡೇರಿ ಸಂಕುಲಕ್ಕೆ ಶಂಕುಸ್ಥಾಪನೆ ಮಾಡುವ ಅವಕಾಶ ನನಗೆ ಸಿಕ್ಕಿತು.

ನನ್ನ ಸಂಸದೀಯ ಕ್ಷೇತ್ರವಾದ ಕಾಶಿಯ ರೈತರು ಮತ್ತು ಜಾನುವಾರು ಸಾಕಣೆದಾರರಿಗೆ ಸೇವೆ ಸಲ್ಲಿಸಲು ಗುಜರಾತ್ ನ ಮಣ್ಣಿನಿಂದ ಸಂಕಲ್ಪ ಮಾಡಿದ್ದಕ್ಕಾಗಿ ನಾನು ಬನಾಸ್ ಡೇರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಕಾಶಿಯ ಸಂಸದನಾಗಿ ನಾನು ನಿಮ್ಮೆಲ್ಲರಿಗೂ ಋಣಿಯಾಗಿದ್ದೇನೆ ಮತ್ತು ನಾನು ವಿಶೇಷವಾಗಿ ಬನಾಸ್ ಡೇರಿಗೆ ನನ್ನ ಹೃದಯಾಂತರಾಳದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಬನಾಸ್ ಡೇರಿ ಸಂಕುಲವನ್ನು ಇಲ್ಲಿ ಪ್ರಾರಂಭಿಸುವ ಕಾರ್ಯಕ್ರಮದ ಒಂದು ಭಾಗವಾಗುವ ಮೂಲಕ ಇಂದು ನನ್ನ ಸಂತೋಷವು ಅನೇಕ ಪಟ್ಟು ಹೆಚ್ಚಾಗಿದೆ.

ಸಹೋದರ ಸಹೋದರಿಯರೇ,

ವಿವಿಧ ಯೋಜನೆಗಳ ಉದ್ಘಾಟನೆಗಳು ಮತ್ತು ಶಂಕುಸ್ಥಾಪನೆಗಳು ನಮ್ಮ ಸಾಂಪ್ರದಾಯಿಕ ಶಕ್ತಿಯೊಂದಿಗೆ ಭವಿಷ್ಯವನ್ನು ನಿರ್ಮಿಸುವ ಅತ್ಯುತ್ತಮ ಉದಾಹರಣೆಗಳಾಗಿವೆ. ಬನಾಸ್ ಡೇರಿ ಸಂಕೀರ್ಣ, ಚೀಸ್ ಮತ್ತು ವೀ ಪೌಡರ್ ಘಟಕಗಳು ಹೈನುಗಾರಿಕೆ ಕ್ಷೇತ್ರದ ವಿಸ್ತರಣೆಯಲ್ಲಿ ಪ್ರಮುಖವಾಗಿವೆ. ಆದರೆ ಬನಾಸ್ ಡೇರಿ ಸ್ಥಳೀಯ ರೈತರ ಆದಾಯವನ್ನು ಹೆಚ್ಚಿಸಲು ಇತರ ಸಂಪನ್ಮೂಲಗಳನ್ನು ಸಹ ಬಳಸಬಹುದು ಎಂದು ಸಾಬೀತುಪಡಿಸಿದೆ.

ಈಗ ಹೇಳಿ, ಆಲೂಗಡ್ಡೆ ಮತ್ತು ಹಾಲಿಗೆ ಏನಾದರೂ ಸಂಬಂಧವಿದೆಯೇ, ಏನಾದರೂ ಸಂಬಂಧವಿದೆಯೇ? ಆದರೆ ಬನಾಸ್ ಡೇರಿ ಕೂಡ ಇವೆರಡರ ನಡುವಿನ ಸಂಪರ್ಕವನ್ನು ಕಂಡುಕೊಂಡಿತು. ಹಾಲು, ಮಜ್ಜಿಗೆ, ಮೊಸರು, ಚೀಸ್, ಐಸ್ ಕ್ರೀಮ್ ಜೊತೆಗೆ, ಬನಾಸ್ ಡೇರಿ ಆಲೂ-ಟಿಕ್ಕಿ, ಆಲೂ ವೆಜ್, ಫ್ರೆಂಚ್ ಫ್ರೈಸ್, ಹ್ಯಾಶ್ ಬ್ರೌನ್ ಮತ್ತು ಬರ್ಗರ್ ಪ್ಯಾಟೀಸ್ ನಂತಹ ಉತ್ಪನ್ನಗಳ ಮೂಲಕ ರೈತರನ್ನು ಸಶಕ್ತಗೊಳಿಸಿದೆ. ಇದು ಭಾರತದ ಸ್ಥಳೀಯ ಉತ್ಪನ್ನಗಳನ್ನು ಜಾಗತಿಕಗೊಳಿಸುವ ನಿಟ್ಟಿನಲ್ಲಿ ಉತ್ತಮ ಹೆಜ್ಜೆಯಾಗಿದೆ.

ಸ್ನೇಹಿತರೇ,

ಕಂಕ್ರೇಜ್ ಹಸುಗಳು, ಮೆಹ್ಸಾನಿ ಎಮ್ಮೆಗಳು ಮತ್ತು ಆಲೂಗಡ್ಡೆಗಳು ಕಡಿಮೆ ಮಳೆ ಬೀಳುವ ಬನಸ್ಕಾಂತ ಜಿಲ್ಲೆಯ ರೈತರ ಅದೃಷ್ಟವನ್ನು ಹೇಗೆ ಬದಲಾಯಿಸುತ್ತವೆ ಎಂಬುದನ್ನು ನಾವು ನೋಡಬಹುದು. ಬನಾಸ್ ಡೇರಿ ರೈತರಿಗೆ ಅತ್ಯುತ್ತಮ ಆಲೂಗಡ್ಡೆ ಬೀಜಗಳನ್ನು ಒದಗಿಸುತ್ತದೆ ಮತ್ತು ಆಲೂಗಡ್ಡೆಯ ಉತ್ತಮ ಬೆಲೆಯನ್ನು ಸಹ ನೀಡುತ್ತದೆ. ಇದು ಆಲೂಗಡ್ಡೆ ಬೆಳೆಗಾರರಿಗೆ ಕೋಟಿಗಟ್ಟಲೆ ರೂಪಾಯಿಗಳನ್ನು ಗಳಿಸಲು ಹೊಸ ಮಾರ್ಗವನ್ನು ತೆರೆದಿದೆ. ಮತ್ತು ಇದು ಕೇವಲ ಆಲೂಗಡ್ಡೆಗೆ ಮಾತ್ರ ಸೀಮಿತವಾಗಿಲ್ಲ. ನಾನು ನಿರಂತರವಾಗಿ ಸಿಹಿ ಕ್ರಾಂತಿಯ ಬಗ್ಗೆ ಮಾತನಾಡಿದ್ದೇನೆ ಮತ್ತು ಹೆಚ್ಚುವರಿ ಆದಾಯಕ್ಕಾಗಿ ಜೇನುತುಪ್ಪದ ಉತ್ಪಾದನೆಗೆ ರೈತರನ್ನು ಕರೆದಿದ್ದೇನೆ. ಬನಾಸ್ ಡೇರಿ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಬನಸ್ಕಾಂತನ ಶಕ್ತಿಯಾದ ನೆಲಗಡಲೆ ಮತ್ತು ಸಾಸಿವೆಯ ಬಗ್ಗೆ ಬನಾಸ್ ಡೇರಿ ಒಂದು ಉತ್ತಮ ಯೋಜನೆಯನ್ನು ರೂಪಿಸಿದೆ ಎಂದು ತಿಳಿದಾಗ ಸಂತೋಷವಾಯಿತು. ಖಾದ್ಯತೈಲದಲ್ಲಿ ಸ್ವಾವಲಂಬನೆಗಾಗಿ ಸರ್ಕಾರದ ಅಭಿಯಾನಕ್ಕೆ ಉತ್ತೇಜನ ನೀಡಲು ನಿಮ್ಮ ಸಂಸ್ಥೆಯು ತೈಲ ಘಟಕಗಳನ್ನು ಸ್ಥಾಪಿಸುತ್ತಿದೆ. ಇದು ಎಣ್ಣೆಕಾಳುಗಳ ರೈತರಿಗೆ ದೊಡ್ಡ ಪ್ರೋತ್ಸಾಹಕವಾಗಿದೆ.

ಸಹೋದರ ಸಹೋದರಿಯರೇ,

ಇಂದು ಇಲ್ಲಿ ಜೈವಿಕ ಸಿಎನ್ ಜಿ ಘಟಕವನ್ನು ಉದ್ಘಾಟಿಸಲಾಗಿದ್ದು, ನಾಲ್ಕು ಗೋಬರ್ ಗ್ಯಾಸ್ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಬನಾಸ್ ಡೇರಿ ದೇಶಾದ್ಯಂತ ಇಂತಹ ಅನೇಕ ಘಟಕಗಳನ್ನು ಸ್ಥಾಪಿಸಲು ಹೊರಟಿದೆ. ಇವು ಸರ್ಕಾರದ 'ತ್ಯಾಜ್ಯದಿಂದ ಸಂಪತ್ತು' ಅಭಿಯಾನಕ್ಕೆ ಸಹಾಯ ಮಾಡಲಿವೆ. ಗೋಬರ್ ಧನ್ ಮೂಲಕ ಏಕಕಾಲದಲ್ಲಿ ಅನೇಕ ಗುರಿಗಳನ್ನು ಸಾಧಿಸಲಾಗುತ್ತಿದೆ. ಇದು ಹಳ್ಳಿಗಳಲ್ಲಿ ಸ್ವಚ್ಛತೆಯನ್ನು ಬಲಪಡಿಸುತ್ತಿದೆ. ಜಾನುವಾರು ರೈತರು ಹಸುವಿನ ಸಗಣಿ ಮತ್ತು ಬಯೋ-ಸಿಎನ್ ಜಿಯಿಂದ ಆದಾಯವನ್ನು ಉತ್ಪಾದಿಸುತ್ತಿದ್ದಾರೆ ಮತ್ತು ಹಸುವಿನ ಸಗಣಿಯಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಮುಖ್ಯವಾಗಿ, ಈ ಪ್ರಕ್ರಿಯೆಯ ಮೂಲಕ ಸಂಗ್ರಹಿಸಲಾದ ಸಾವಯವ ಗೊಬ್ಬರವು ರೈತರಿಗೆ ಸಾಕಷ್ಟು ಸಹಾಯ ಮಾಡುತ್ತದೆ ಮತ್ತು ನಮ್ಮ ಭೂಮಿ ತಾಯಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ. ಬನಾಸ್ ಡೇರಿಯ ಇಂತಹ ಉಪಕ್ರಮಗಳು ಇಡೀ ದೇಶವನ್ನು ತಲುಪಿದಾಗ ನಮ್ಮ ಗ್ರಾಮೀಣ ಆರ್ಥಿಕತೆ ಮತ್ತು ಗ್ರಾಮಗಳು ಬಲಗೊಳ್ಳುತ್ತವೆ ಮತ್ತು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಸಶಕ್ತರಾಗುತ್ತಾರೆ.

ಸ್ನೇಹಿತರೇ,

ಗುಜರಾತ್ ನ ಯಶಸ್ಸು ಮತ್ತು ಅಭಿವೃದ್ಧಿಯ ಉತ್ತುಂಗವು ಪ್ರತಿಯೊಬ್ಬ ಗುಜರಾತಿಯನ್ನು ಹೆಮ್ಮೆಪಡುವಂತೆ ಮಾಡುತ್ತದೆ. ನಾನು ಇದನ್ನು ನಿನ್ನೆ ಗಾಂಧಿನಗರದ ವಿದ್ಯಾ ಸಮೀಕ್ಷಾ ಕೇಂದ್ರದಲ್ಲಿ ಅನುಭವಿಸಿದೆ. ವಿದ್ಯಾ ಸಮೀಕ್ಷಾ ಕೇಂದ್ರವು ಗುಜರಾತ್ ಮತ್ತು ನಮ್ಮ ಮುಂದಿನ ಪೀಳಿಗೆಯ ಮಕ್ಕಳ ಭವಿಷ್ಯವನ್ನು ರೂಪಿಸುವ ದೊಡ್ಡ ಶಕ್ತಿಯಾಗುತ್ತಿದೆ. ನಮ್ಮ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಂತ್ರಜ್ಞಾನದ ಬಳಕೆಯು ಜಗತ್ತಿಗೆ ಒಂದು ಅದ್ಭುತವಾಗಿದೆ.

ನಾನು ಮೊದಲಿನಿಂದಲೂ ಈ ಕ್ಷೇತ್ರದೊಂದಿಗೆ ಸಂಬಂಧ ಹೊಂದಿದ್ದರೂ, ಗುಜರಾತ್ ಸರ್ಕಾರದ ಆಹ್ವಾನದ ಮೇರೆಗೆ ನಾನು ನಿನ್ನೆ ಗಾಂಧಿನಗರಕ್ಕೆ ಅದನ್ನು ನೋಡಲು ವಿಶೇಷವಾಗಿ ಹೋಗಿದ್ದೆ. ವಿದ್ಯಾ ಸಮೀಕ್ಷಾ ಕೇಂದ್ರದ ವಿಸ್ತರಣೆ ಮತ್ತು ತಂತ್ರಜ್ಞಾನದ ಅತ್ಯುತ್ತಮ ಬಳಕೆಯನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ಈ ವಿದ್ಯಾ ಸಮೀಕ್ಷಾ ಕೇಂದ್ರವು ನಮ್ಮ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಅವರ ನಾಯಕತ್ವದಲ್ಲಿ ಇಡೀ ದೇಶಕ್ಕೆ ನಿರ್ದೇಶನ ನೀಡುವ ಕೇಂದ್ರವಾಗಿ ಹೊರಹೊಮ್ಮಿದೆ.

ಮೊದಲು ನಾನು ಅಲ್ಲಿ ಒಂದು ಗಂಟೆ ಇರಬೇಕಾಗಿತ್ತು. ಆದರೆ ನಾನು ಎಲ್ಲವನ್ನೂ ಅರ್ಥಮಾಡಿಕೊಳ್ಳುವಲ್ಲಿ ಎಷ್ಟು ತಲ್ಲೀನನಾಗಿದ್ದೆನೆಂದರೆ ನಾನು ಎರಡೂವರೆ ಗಂಟೆಗಳ ಕಾಲ ಕಳೆದೆ. ನಾನು ಶಾಲಾ ಮಕ್ಕಳು ಮತ್ತು ಶಿಕ್ಷಕರೊಂದಿಗೆ ಸುದೀರ್ಘವಾಗಿ ಮಾತನಾಡಿದೆ. ಅನೇಕ ಮಕ್ಕಳು ದಕ್ಷಿಣ ಗುಜರಾತ್, ಉತ್ತರ ಗುಜರಾತ್ ಮತ್ತು ಕಚ್-ಸೌರಾಷ್ಟ್ರ - ವಿವಿಧ ಸ್ಥಳಗಳಿಗೆ ಸೇರಿದವರಾಗಿದ್ದರು.

ಇಂದು, ಈ ವಿದ್ಯಾ ಸಮೀಕ್ಷಾ ಕೇಂದ್ರವು ಗುಜರಾತ್ ನ 54,000 ಕ್ಕೂ ಹೆಚ್ಚು ಶಾಲೆಗಳ 4.5 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಮತ್ತು 1.5 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳಿಗೆ ಶಕ್ತಿಯ ಕೇಂದ್ರವಾಗಿದೆ. ಈ ಕೇಂದ್ರವು ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಬಿಗ್ ಡೇಟಾ ಅನಾಲಿಸಿಸ್ ಮುಂತಾದ ಆಧುನಿಕ ಸೌಲಭ್ಯಗಳನ್ನು ಹೊಂದಿದೆ.

ವಿದ್ಯಾ ಸಮೀಕ್ಷಾ ಕೇಂದ್ರವು ಪ್ರತಿ ವರ್ಷ 5೦೦ ಕೋಟಿ ಡೇಟಾ ಸೆಟ್ ಗಳನ್ನು ವಿಶ್ಲೇಷಿಸುತ್ತದೆ. ಮೌಲ್ಯಮಾಪನ ಪರೀಕ್ಷೆ, ಸೆಷನ್ ನ ಕೊನೆಯಲ್ಲಿ ಪರೀಕ್ಷೆ, ಶಾಲಾ ಮಾನ್ಯತೆ ಮತ್ತು ಮಕ್ಕಳು ಮತ್ತು ಶಿಕ್ಷಕರ ಹಾಜರಾತಿಗೆ ಸಂಬಂಧಿಸಿದ ಕಾರ್ಯಗಳನ್ನು ಮಾಡಲಾಗುತ್ತದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಒಂದೇ ರೀತಿಯ ವೇಳಾಪಟ್ಟಿಯನ್ನು ಖಚಿತಪಡಿಸಿಕೊಳ್ಳುವಲ್ಲಿ, ಪ್ರಶ್ನೆ ಪತ್ರಿಕೆಗಳನ್ನು ಸ್ಥಾಪಿಸುವಲ್ಲಿ ಮತ್ತು ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ವಿದ್ಯಾ ಸಮೀಕ್ಷಾ ಕೇಂದ್ರವು ಪ್ರಮುಖ ಪಾತ್ರ ವಹಿಸುತ್ತದೆ. ಈ ಕೇಂದ್ರದಿಂದಾಗಿ, ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಶೇಕಡ 26 ರಷ್ಟು ಹೆಚ್ಚಾಗಿದೆ.

ಈ ಆಧುನಿಕ ಕೇಂದ್ರವು ಇಡೀ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳನ್ನು ತರಬಹುದು. ವಿದ್ಯಾ ಸಮೀಕ್ಷಾ ಕೇಂದ್ರವನ್ನು ಅಧ್ಯಯನ ಮಾಡುವಂತೆ ಸಂಬಂಧಪಟ್ಟ ಸಚಿವಾಲಯಗಳು ಮತ್ತು ಭಾರತ ಸರ್ಕಾರದ ಅಧಿಕಾರಿಗಳನ್ನು ನಾನು ಕೇಳುತ್ತೇನೆ. ವಿವಿಧ ರಾಜ್ಯಗಳ ಸಂಬಂಧಿತ ಸಚಿವಾಲಯಗಳು ಸಹ ಗಾಂಧಿನಗರಕ್ಕೆ ಬಂದು ಅದರ ಕಾರ್ಯವಿಧಾನವನ್ನು ಅಧ್ಯಯನ ಮಾಡಬೇಕು. ವಿದ್ಯಾ ಸಮೀಕ್ಷಾ ಕೇಂದ್ರದಂತಹ ಆಧುನಿಕ ವ್ಯವಸ್ಥೆಯ ಪ್ರಯೋಜನವನ್ನು ದೇಶದ ಮಕ್ಕಳು ಹೆಚ್ಚು ಹೆಚ್ಚು ಪಡೆದರೆ ಭಾರತದ ಭವಿಷ್ಯವು ಹೆಚ್ಚು ಉಜ್ವಲವಾಗಿರುತ್ತದೆ.

ಈಗ ನಾನು ಬನಾಸ್ ನತ್ತ ಗಮನ ಹರಿಸಬೇಕು. ನಾನು ಬನಾಸ್ ನಾಡಿಗೆ ಭೇಟಿ ನೀಡಬೇಕಾದಾಗ, ಬನಾಸ್ ಡೇರಿಯ ಪರಿಕಲ್ಪನೆಯನ್ನು ರೂಪಿಸಿದ್ದಕ್ಕಾಗಿ ಶ್ರೀ ಗಲ್ಬಾ ಕಾಕಾ ಅವರಿಗೆ ಗೌರವಪೂರ್ವಕವಾಗಿ ತಲೆಬಾಗುತ್ತೇನೆ. ಸುಮಾರು 60 ವರ್ಷಗಳ ಹಿಂದೆ ರೈತನ ಮಗ ಗಲ್ಬಾ ಕಾಕಾ ಅವರ ಕನಸು ಇಂದು ದೊಡ್ಡ ಆಲದ ಮರವಾಗಿ ಮಾರ್ಪಟ್ಟಿದೆ. ಅವನು ಬನಸ್ಕಾಂತದ ಪ್ರತಿಯೊಂದು ಮನೆಗೂ ಒಂದು ಹೊಸ ಆರ್ಥಿಕ ಶಕ್ತಿಯನ್ನು ಸೃಷ್ಟಿಸಿದ್ದಾನೆ. ಆದ್ದರಿಂದ, ನಾನು ಗಲ್ಬಾ ಕಾಕಾಗೆ ನನ್ನ ಗೌರವವನ್ನು ಸಲ್ಲಿಸುತ್ತೇನೆ. ತಮ್ಮ ಸ್ವಂತ ಮಕ್ಕಳಂತೆ ಪ್ರಾಣಿಗಳನ್ನು ನೋಡಿಕೊಳ್ಳುತ್ತಿರುವ ಬನಾಸ್ಕಾಂತದ ತಾಯಂದಿರು ಮತ್ತು ಸಹೋದರಿಯರಿಗೂ ನಾನು ನಮಸ್ಕರಿಸುತ್ತೇನೆ. ನನ್ನ ಬನಸ್ಕಾಂತದ ತಾಯಂದಿರು ಮತ್ತು ಸಹೋದರಿಯರು ಜಾನುವಾರುಗಳಿಗೆ ಮೇವು ಅಥವಾ ನೀರು ಸಿಗದಿದ್ದರೆ ಸ್ವತಃ ನೀರು ಕುಡಿಯಲು ಹಿಂಜರಿಯುತ್ತಾರೆ. ಅವರು ತಮ್ಮ ಕುಟುಂಬದಲ್ಲಿ ಅಥವಾ ಹಬ್ಬದಲ್ಲಿ ಯಾವುದೇ ಮದುವೆಗೆ ಹಾಜರಾಗಲು ತಮ್ಮ ಮನೆಗಳನ್ನು ತೊರೆಯಬೇಕಾದರೂ ಸಹ ಅವರು ಜಾನುವಾರುಗಳನ್ನು ಒಂಟಿಯಾಗಿ ಬಿಡುವುದಿಲ್ಲ. ತಾಯಂದಿರು ಮತ್ತು ಸಹೋದರಿಯರ ತ್ಯಾಗ ಮತ್ತು ತಪಸ್ಸಿನ ಪರಿಣಾಮವಾಗಿಯೇ ಬನಾಸ್ ಇಂದು ಪ್ರವರ್ಧಮಾನಕ್ಕೆ ಬಂದಿದೆ. ಆದ್ದರಿಂದ, ನಾನು ಬನಸ್ಕಾಂತದ ತಾಯಂದಿರು ಮತ್ತು ಸಹೋದರಿಯರಿಗೆ ಗೌರವಪೂರ್ವಕವಾಗಿ ತಲೆಬಾಗುತ್ತೇನೆ.

ಕೊರೊನಾ ಸಮಯದಲ್ಲಿಯೂ ಬನಾಸ್ ಡೇರಿ ಪ್ರಶಂಸನೀಯ ಕೆಲಸ ಮಾಡಿದೆ. ಇದು ಗಲ್ಬಾ ಕಾಕಾ ಹೆಸರಿನಲ್ಲಿ ವೈದ್ಯಕೀಯ ಕಾಲೇಜನ್ನು ನಿರ್ಮಿಸಿತು ಮತ್ತು ಈಗ ಅದು ಆಲೂಗಡ್ಡೆ, ಪ್ರಾಣಿಗಳು, ಹಾಲು, ಹಸುವಿನ ಸಗಣಿ, ಜೇನುತುಪ್ಪದ ಮೇಲೆ ಕೇಂದ್ರೀಕರಿಸಿದೆ ಮತ್ತು ಶಕ್ತಿ ಕೇಂದ್ರವನ್ನು ನಡೆಸುತ್ತಿದೆ. ಅದು ಈಗ ಮಕ್ಕಳ ಶಿಕ್ಷಣದಲ್ಲಿ ತೊಡಗಿದೆ. ಒಂದು ರೀತಿಯಲ್ಲಿ, ಬನಾಸ್ ಡೇರಿಯ ಸಹಕಾರಿ ಆಂದೋಲನವು ಇಡೀ ಬನಾಸ್ಕಾಂತದ ಉಜ್ವಲ ಭವಿಷ್ಯದ ಕೇಂದ್ರವಾಗಿದೆ. ಅದಕ್ಕೂ ಒಂದು ದೃಷ್ಟಿಕೋನ ಇರಬೇಕು ಮತ್ತು ಕಳೆದ ಏಳೆಂಟು ವರ್ಷಗಳಲ್ಲಿ ಬನಾಸ್ ಡೇರಿ ವಿಸ್ತರಿಸಿದ ರೀತಿ ಸ್ಪಷ್ಟವಾಗಿದೆ. ಬನಾಸ್ ಡೇರಿಯಲ್ಲಿ ನನ್ನ ನಂಬಿಕೆಯಿಂದಾಗಿಯೇ ನಾನು ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಕಾರ್ಯಕ್ರಮದಲ್ಲಿ ಯಾವಾಗಲೂ ಇರುತ್ತಿದ್ದೆ ಮತ್ತು ಈಗ ನೀವು ನನ್ನನ್ನು ದೆಹಲಿಗೆ ಕಳುಹಿಸಿದ್ದೀರಿ. ನಾನು ನಿಮ್ಮನ್ನು ಸಹ ತ್ಯಜಿಸಿಲ್ಲ. ನಿಮ್ಮ ಸಂತೋಷ ಮತ್ತು ದುಃಖದ ಕ್ಷಣಗಳಲ್ಲಿ ನಾನು ಯಾವಾಗಲೂ ನಿಮ್ಮೊಂದಿಗೆ ಇದ್ದೆ.

ಇಂದು ಬನಾಸ್ ಡೇರಿ ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ಒಡಿಶಾದಲ್ಲಿ ಸೋಮನಾಥ್ ಭೂಮಿಯಿಂದ ಜಗನ್ನಾಥ್, ಆಂಧ್ರಪ್ರದೇಶ ಮತ್ತು ಜಾರ್ಖಂಡ್ ವರೆಗೆ ತಮ್ಮ ಜಾನುವಾರು ಸಾಕಣೆದಾರರಿಗೆ ಗರಿಷ್ಠ ಪ್ರಯೋಜನಗಳನ್ನು ನೀಡಲು ಕಾರ್ಯನಿರ್ವಹಿಸುತ್ತಿದೆ. ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ದೇಶವಾಗಿರುವುದರಿಂದ, ಕೋಟ್ಯಂತರ ರೈತರ ಜೀವನೋಪಾಯವು ಹಾಲನ್ನು ಅವಲಂಬಿಸಿದೆ. ಉನ್ನತ ಅರ್ಥಶಾಸ್ತ್ರಜ್ಞರು ಸಹ ಈ ಉದ್ಯಮಕ್ಕೆ ಸಂಬಂಧಿಸಿದ ಅಂಕಿಅಂಶಗಳ ಬಗ್ಗೆ ಗಮನ ಹರಿಸುವುದಿಲ್ಲ. ನಮ್ಮ ದೇಶದಲ್ಲಿ ವಾರ್ಷಿಕ 8.5 ಲಕ್ಷ ಕೋಟಿ ಟನ್ ಹಾಲು ಉತ್ಪಾದನೆಯಾಗುತ್ತಿದೆ. ಹಳ್ಳಿಗಳಲ್ಲಿನ ವಿಕೇಂದ್ರೀಕೃತ ಆರ್ಥಿಕ ವ್ಯವಸ್ಥೆಯು ಇದಕ್ಕೆ ಒಂದು ಉದಾಹರಣೆಯಾಗಿದೆ. ಗೋಧಿ ಮತ್ತು ಅಕ್ಕಿಯ ಉತ್ಪಾದನೆಯು ಹಾಲು ಉತ್ಪಾದನೆಗೆ ಹೋಲಿಸಿದರೆ 8.5 ಲಕ್ಷ ಕೋಟಿ ಟನ್ ಗಳಷ್ಟಿಲ್ಲ. ಹಾಲಿನ ಉತ್ಪಾದನೆಯು ಅದಕ್ಕಿಂತ ಹೆಚ್ಚಾಗಿದೆ. ಮತ್ತು ಎರಡು-ಮೂರು-ಐದು ಬಿಘಾ ಭೂಮಿಯನ್ನು ಹೊಂದಿರುವ ಸಣ್ಣ ರೈತರು ಹೈನುಗಾರಿಕೆ ಕ್ಷೇತ್ರದ ಗರಿಷ್ಠ ಪ್ರಯೋಜನವನ್ನು ಪಡೆಯುತ್ತಾರೆ.

 ಮಳೆ ಇಲ್ಲದಿದ್ದಾಗ ಅಥವಾ ನೀರಿನ ಕೊರತೆ ಇಲ್ಲದಿದ್ದಾಗ ನಮ್ಮ ರೈತ ಸಹೋದರರಿಗೆ ಜೀವನವು ಕಷ್ಟಕರವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ರೈತರು ಜಾನುವಾರುಗಳನ್ನು ಸಾಕುವ ಮೂಲಕ ಕುಟುಂಬವನ್ನು ಪೋಷಿಸುತ್ತಾರೆ. ಈ ಹೈನುಗಾರಿಕೆಯು ಸಣ್ಣ ರೈತರ ಬಗ್ಗೆ ಅತ್ಯಂತ ಕಾಳಜಿ ವಹಿಸಿದೆ. ಸಣ್ಣ ರೈತರ ಕಾಳಜಿಗಳ ಬಗ್ಗೆ ಈ ಪಾಲನೆಯೊಂದಿಗೆ ನಾನು ದೆಹಲಿಗೆ ಹೋದೆ. ನಾನು ಇಡೀ ದೇಶದ ಸಣ್ಣ ರೈತರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ, ಮತ್ತು ಇಂದು, ನಾನು ವರ್ಷಕ್ಕೆ ಮೂರು ಬಾರಿ ರೈತರ ಖಾತೆಗಳಿಗೆ ಎರಡು ಸಾವಿರ ರೂಪಾಯಿಗಳನ್ನು ನೇರವಾಗಿ ಜಮಾ ಮಾಡುತ್ತೇನೆ.

ದೆಹಲಿಯಿಂದ ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಜನರನ್ನು ತಲುಪುತ್ತದೆ ಎಂದು ಮಾಜಿ ಪ್ರಧಾನಿಯೊಬ್ಬರು ಈ ಹಿಂದೆ ಹೇಳಿದ್ದರು. ಮತ್ತು ಈ ಪ್ರಧಾನ ಮಂತ್ರಿಗಳು ಕೇಂದ್ರವು ಖರ್ಚು ಮಾಡುವ ಪ್ರತಿ ರೂಪಾಯಿಯಲ್ಲಿ, ಇಡೀ 100 ಪೈಸೆಗಳು ಫಲಾನುಭವಿಗಳನ್ನು ತಲುಪುತ್ತವೆ ಮತ್ತು ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಈ ಎಲ್ಲ ಕೆಲಸಗಳನ್ನು ಒಟ್ಟಿಗೆ ಮಾಡಿದ್ದಕ್ಕಾಗಿ ಭಾರತ ಸರ್ಕಾರ, ಗುಜರಾತ್ ಸರ್ಕಾರ ಮತ್ತು ಗುಜರಾತ್ ನ ಸಹಕಾರಿ ಆಂದೋಲನಕ್ಕೆ ನಾನು ನನ್ನ ಹೃದಯಾಂತರಾಳದಿಂದ ಎಲ್ಲರನ್ನೂ ಅಭಿನಂದಿಸುತ್ತೇನೆ.ಹಾಗೆಯೇ ಅವರನ್ನು ಶ್ಲಾಘಿಸಬೇಕು.

ಈಗಷ್ಟೇ ಭೂಪೇಂದ್ರಭಾಯಿ ಅವರು ಸಾವಯವ ಕೃಷಿಯನ್ನು ಬಹಳ ಭಾವೋದ್ರಿಕ್ತವಾಗಿ ಉಲ್ಲೇಖಿಸಿದರು. ಬನಾಸ್ಕಾಂತದ ಜನರು ಒಮ್ಮೆ ಏನನ್ನಾದರೂ ಅರ್ಥಮಾಡಿಕೊಂಡರೆ, ಅವರು ಹಿಂದೆ ಸರಿಯುವುದಿಲ್ಲ ಎಂಬುದು ನನ್ನ ಅನುಭವ. ಆರಂಭದಲ್ಲಿ, ಇದಕ್ಕೆ ಕಠಿಣ ಪರಿಶ್ರಮದ ಅಗತ್ಯವಿದೆ. ವಿದ್ಯುಚ್ಛಕ್ತಿಯನ್ನು ತ್ಯಜಿಸುವಂತೆ ಜನರಿಗೆ ಹೇಳಲು ನಾನು ದಣಿದಿದ್ದೆ ಎಂದು ನನಗೆ ನೆನಪಿದೆ. ಮೋದಿಗೆ ಏನೂ ಗೊತ್ತಿಲ್ಲ ಎಂದು ಬನಾಸ್ ನ ಜನರು ಭಾವಿಸುತ್ತಿದ್ದರು ಮತ್ತು ನನ್ನನ್ನು ವಿರೋಧಿಸುತ್ತಿದ್ದರು. ಆದರೆ ಬನಾಸ್ ನ ರೈತರು ಅಂತಿಮವಾಗಿ ಅದರ ಪ್ರಯೋಜನಗಳನ್ನು ಅರಿತುಕೊಂಡಾಗ, ಅವರು ನನಗಿಂತ 10 ಹೆಜ್ಜೆ ಮುಂದೆ ಹೋದರು. ಅವರು ನೀರನ್ನು ಸಂರಕ್ಷಿಸಲು ಬೃಹತ್ ಅಭಿಯಾನವನ್ನು ಪ್ರಾರಂಭಿಸಿದರು, ಹನಿ ನೀರಾವರಿಯನ್ನು ಅಳವಡಿಸಿಕೊಂಡರು ಮತ್ತು ಇಂದು ಬನಾಸ್ಕಾಂತದ ಜನರು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತಿದ್ದಾರೆ.

ಬನಾಸ್ ನಲ್ಲಿ ನರ್ಮದಾ ಮಾತೆಯ ನೀರನ್ನು ಜನರು ದೇವರ ಅರ್ಪಣೆ ಎಂದು ಪರಿಗಣಿಸುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ದೇಶವು ಸ್ವಾತಂತ್ರ್ಯದ 75 ನೇ ವರ್ಷದ ಸಂದರ್ಭದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಒಂದು ಅಥವಾ ಎರಡು ಉತ್ತಮ ಮಳೆಯ ನಂತರ ಈ ಒಣ ಭೂಮಿಯಲ್ಲಿ ಸಾಕಷ್ಟು ನೀರು ಇರುವಂತೆ 75 ಬೃಹತ್ ಕೊಳಗಳನ್ನು ನಿರ್ಮಿಸುವಂತೆ ನಾನು ಬನಾಸ್ ಜನರನ್ನು ಒತ್ತಾಯಿಸುತ್ತೇನೆ. ನೀವು ಅಂತಹ ಏರ್ಪಾಡುಗಳನ್ನು ಮಾಡಿದರೆ ಮತ್ತು ಕೊಳಗಳನ್ನು ನಿರ್ಮಿಸಲು ಪ್ರಾರಂಭಿಸಿದರೆ, ಈ ಭೂಮಿ ಸದ್ಗುಣ ಶೀಲವಾಗುತ್ತದೆ. ಜೂನ್ ನಲ್ಲಿ ಮಳೆಗಾಲ ಬರುವ ಮೊದಲು ಮುಂದಿನ ಎರಡು-ಮೂರು ತಿಂಗಳುಗಳಲ್ಲಿ ಜನರು ಈ ನಿಟ್ಟಿನಲ್ಲಿ ಬೃಹತ್ ಅಭಿಯಾನವನ್ನು ನಡೆಸುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ಇದರಿಂದ 2023 ರ ಆಗಸ್ಟ್ 15 ಒಳಗೆ ಎಲ್ಲಾ 75 ಕೆರೆಗಳು ನೀರಿನಿಂದ ತುಂಬಿ ತುಳುಕುತ್ತವೆ. ಇದರ ಪರಿಣಾಮವಾಗಿ, ನಾವು ಸಣ್ಣ ಸಮಸ್ಯೆಗಳನ್ನು ನಿವಾರಿಸುತ್ತೇವೆ.

ಹೊಲದಲ್ಲಿ ಕೆಲಸ ಮಾಡುವ ವ್ಯಕ್ತಿಯಂತೆ ನಾನು ನಿಮ್ಮ ಸಂಗಾತಿಯಾಗಿದ್ದೇನೆ. ಆದ್ದರಿಂದ, ನಾನು ನಿಮ್ಮೊಂದಿಗೆ ನಿಲ್ಲುವ ಮೂಲಕ ನಿಮ್ಮೊಂದಿಗೆ ಸಂಗಾತಿಯಾಗಿ ಕೆಲಸ ಮಾಡಲು ಬಯಸುತ್ತೇನೆ.

ಈಗ ನಾಡಾ ಬೆಟ್ ಪ್ರವಾಸೋದ್ಯಮದ ಕೇಂದ್ರವಾಗಿ ಮಾರ್ಪಟ್ಟಿದೆ. ಭಾರತದ ಗಡಿ ಜಿಲ್ಲೆಯನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂಬುದಕ್ಕೆ ಗುಜರಾತ್ ಉದಾಹರಣೆಯನ್ನು ತೋರಿಸಿದೆ. ಕಚ್ ಗಡಿಯಲ್ಲಿನ ರಣ್ ಉತ್ಸವವು ಇಡೀ ಪ್ರದೇಶದ ಹಳ್ಳಿಗಳನ್ನು ಆರ್ಥಿಕವಾಗಿ ರೋಮಾಂಚಕಾರಿಯನ್ನಾಗಿ ಮಾಡಿದೆ. ನಾಡಾ ಬೆಟ್ ನಲ್ಲಿ ಗಡಿ ವೀಕ್ಷಣಾ ಕೇಂದ್ರವನ್ನು ಪ್ರಾರಂಭಿಸುವುದರೊಂದಿಗೆ, ಬನಾಸ್ ಮತ್ತು ಪಟಾನ್ ಜಿಲ್ಲೆಗಳ ಗಡಿಯಲ್ಲಿರುವ ಎಲ್ಲಾ ಗ್ರಾಮಗಳು ಪ್ರವಾಸೋದ್ಯಮದೊಂದಿಗೆ ಜೀವ ತುಂಬುತ್ತವೆ. ದೂರದ ಹಳ್ಳಿಗಳಲ್ಲಿಯೂ ಸಹ ಜೀವನೋಪಾಯಕ್ಕಾಗಿ ಹಲವಾರು ಅವಕಾಶಗಳು ಇರುತ್ತವೆ. ಅಭಿವೃದ್ಧಿಗಾಗಿ ಅನೇಕ ಮಾರ್ಗಗಳು ಹೇಗೆ ಇರಬಹುದು ಮತ್ತು ಪ್ರಕೃತಿಯ ಮಡಿಲಲ್ಲಿ ಉಳಿಯುವ ಮೂಲಕ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ನಾವು ಹೇಗೆ ಬದಲಾವಣೆಗಳನ್ನು ತರಬಹುದು ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆಯಾಗಿದೆ. ಈ ಅಮೂಲ್ಯ ರತ್ನವನ್ನು ನಾನು ಗುಜರಾತ್ ಮತ್ತು ದೇಶದ ನಾಗರಿಕರಿಗೆ ಅರ್ಪಿಸುತ್ತಿದ್ದೇನೆ. ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಾನು ಬನಾಸ್ ಡೇರಿಗೆ ಆಭಾರಿಯಾಗಿದ್ದೇನೆ. ನಿಮ್ಮ ಕೈಗಳನ್ನು ಮೇಲೆತ್ತಿ 'ಭಾರತ್ ಮಾತಾ ಕೀ ಜೈ' ಎಂದು ಜೋರಾಗಿ ಹೇಳಿ.

ಭಾರತ್ ಮಾತಾ ಕಿ - ಜೈ, ಭಾರತ್ ಮಾತಾ ಕಿ - ಜೈ!

ತುಂಬಾ ಧನ್ಯವಾದಗಳು!

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ನವೆಂಬರ್ 2024
November 21, 2024

PM Modi's International Accolades: A Reflection of India's Growing Influence on the World Stage