ಸುಪ್ರೀಂಕೋರ್ಟ್ ನ ತೀರ್ಪಿಗೆ ಅನುಸಾರವಾಗಿ ರಾಮಜನ್ಮಭೂಮಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ರಚಿಸಲಾಗುವುದು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂಸತ್ತಿನಲ್ಲಿ ಹೇಳಿದರು.
‘ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ತತ್ವದಿಂದ ಪ್ರೇರಣೆ ಪಡೆದು ಪ್ರತಿಯೊಬ್ಬ ಭಾರತೀಯರ ಕಲ್ಯಾಣಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಗೌರವಾನ್ವಿತ ಸಭಾಧ್ಯಕ್ಷರೇ,

ಇಂದು, ಬಹಳ ಮುಖ್ಯವಾದ ಮತ್ತು ಐತಿಹಾಸಿಕ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲು ನಾನು ನಿಮ್ಮೆಲ್ಲರ ಮುಂದೆ ಬಂದಿದ್ದೇನೆ.

ಈ ವಿಷಯವು ನಮ್ಮ ಕೋಟ್ಯಂತರ ಸಹೋದರ ಸಹೋದರಿಯರ ಹೃದಯಕ್ಕೆ ಹತ್ತಿರವಾಗಿದೆ. ಮತ್ತು ಈ ಬಗ್ಗೆ ಮಾತನಾಡಲು ನನಗೆ ಹಮ್ಮೆಯಿದೆ.

ಈ ವಿಷಯವು ಶ್ರೀ ರಾಮ ಜನ್ಮ ಭೂಮಿಗೆ ಸೇರಿದುದಾಗಿದೆ ಮತ್ತು ಭಗವಾನ್ ಶ್ರೀ ರಾಮರ ಭವ್ಯವಾದ ದೇವಾಲಯವನ್ನು ಅಯೋಧ್ಯೆಯಲ್ಲಿ ಅವರ ಜನ್ಮಸ್ಥಳದಲ್ಲಿ ನಿರ್ಮಿಸುವ ಕುರಿತಾಗಿದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ತಾರೀಖು 9 ನವೆಂಬರ್ 2019 ರಂದು, 550 ನೇ ಪ್ರಕಾಶ್ ಪರ್ವೋಫ್ ಗುರುನಾನಕದೇವ್ ಜಿ ಅವರ ಸಂದರ್ಭದಲ್ಲಿ ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ರಾಷ್ಟ್ರಕ್ಕೆ ಅರ್ಪಿಸುವುದ್ದಕ್ಕಾಗಿ ನಾನು ಪಂಜಾಬಿನಲ್ಲಿದ್ದೆ. ಆ ಭಕ್ತಿಪೂರ್ವ ವಾತಾವರಣದಲ್ಲಿಯೇ, ರಾಮ ಜನ್ಮ ಭೂಮಿ ಯ ವಿಷಯದ ಬಗ್ಗೆ ದೇಶದ ಅತ್ಯುನ್ನತ ನ್ಯಾಯಾಲಯದ ಐತಿಹಾಸಿಕ ತೀರ್ಪಿನ ಬಗ್ಗೆ ನನಗೆ ತಿಳಿಯಿತು.

ಈ ತೀರ್ಪಿನಲ್ಲಿ, ಮಾನ್ಯ ಸರ್ವೋಚ್ಛ ನ್ಯಾಯಾಲಯವು ರಾಮ ಜನ್ಮ ಭೂಮಿಯಲ್ಲಿನ ವಿವಾದಿತ ಭೂಮಿಯ ಒಳ ಮತ್ತು ಹೊರ ಪ್ರಾಂಗಣವು ಭಗವಾನ್ ಶ್ರೀ ರಾಮ ಲಲ್ಲ ವಿರಾಜ್ಮಾನ್ ಅವರಿಗೆ ಸೇರಿದೆ ಎಂದು ತೀರ್ಮಾನಿಸಿತು.

ಮಾನ್ಯ ಸರ್ವೋಚ್ಛ ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಪರಸ್ಪರ ಸಮಾಲೋಚಿಸಿ 5 ಎಕರೆ ಭೂಮಿಯನ್ನು ಸುನ್ನಿ ಕೇಂದ್ರ ವಕ್ಫ್ ಮಂಡಳಿಗೆ ನೀಡಲಿದೆ ಎಂದು ತಿಳಿಸಿತ್ತು.

ಗೌರವಾನ್ವಿತ ಸಭಾಧ್ಯಕ್ಷರೇ,

ಇಂದು ಬೆಳಿಗ್ಗೆ ನಡೆದ ಕೇಂದ್ರ ಸಚಿವ ಸಂಪುಟವು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಷಯದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿರುವುದನ್ನು ಈ ಘನತೆವೆತ್ತ ಸದನದೊಂದಿಗೆ ಮತ್ತು ಇಡೀ ದೇಶದೊಂದಿಗೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ,

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳಿಗೆ ಅನುಗುಣವಾಗಿ, ಭಗವಾನ್ ಶ್ರೀ ರಾಮರ ಭವ್ಯವಾದ ದೇವಾಲಯವನ್ನು ಅವರ ಜನ್ಮಸ್ಥಳದಲ್ಲಿ ಮತ್ತು ಇತರ ಸಂಬಂಧಿತ ವಿಷಯಗಳಲ್ಲಿ ನಿರ್ಮಿಸಲು ನನ್ನ ಸರ್ಕಾರ ಸವಿವರವಾದ ಯೋಜನೆಯನ್ನು ಸಿದ್ಧಪಡಿಸಿದೆ.

ಸುಪ್ರೀಂ ಕೋರ್ಟ್ನ ಆದೇಶದಂತೆ, ಸ್ವಾಯತ್ತ ಟ್ರಸ್ಟ್ ಒಂದನ್ನು ಸ್ಥಾಪಿಸುವ ಪ್ರಸ್ತಾಪ – “ಶ್ರೀ ರಾಮ್ ಜನ್ಮ ಭೂಮಿ ತೀರ್ಥ ಕ್ಷೇತ್ರ”ವನ್ನು ಅಂಗೀಕರಿಸಲಾಗಿದೆ.

ಅಯೋಧ್ಯೆಯ ಭಗವಾನ್ ಶ್ರೀ ರಾಮನ ಜನ್ಮಸ್ಥಳದಲ್ಲಿ ಭವ್ಯವಾದ ಮತ್ತು ದೈವಿಕ ಶ್ರೀ ರಾಮ ದೇವಾಲಯವನ್ನು ನಿರ್ಮಿಸಲು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಈ ಟ್ರಸ್ಟ್ ಸಂಪೂರ್ಣ ಸ್ವಾಯತ್ತತೆಯನ್ನು ಹೊಂದಿರುತ್ತದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳಿಗೆ ಅನುಗುಣವಾಗಿ ಮತ್ತು ವಿವರವಾದ ಸಮಾಲೋಚನೆ ಮತ್ತು ಚರ್ಚೆಗಳ ನಂತರ, ಉತ್ತರ ಪ್ರದೇಶ ಸರ್ಕಾರಕ್ಕೆ 5 ಎಕರೆ ಭೂಮಿಯನ್ನು ಸುನ್ನಿ ಕೇಂದ್ರ ವಕ್ಫ್ ಮಂಡಳಿಗೆ ಮಂಜೂರು ಮಾಡುವಂತೆ ಕೋರಲಾಗಿತ್ತು. ಇದಕ್ಕೆ ರಾಜ್ಯ ಸರ್ಕಾರವೂ ಸಮ್ಮತಿಸಿದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ಭಗವಾನ್ ಶ್ರೀ ರಾಮನ ದೈವಿಕ ಹಿರಿಮೆ, ಅಯೋಧ್ಯೆಯ ಐತಿಹಾಸಿಕ ಸನ್ನಿವೇಶ ಮತ್ತು ಅಯೋಧ್ಯ ಧಾಮದ ಬಗ್ಗೆ ಇರುವ ಧಾರ್ಮಿಕ್ ಶ್ರದ್ಧೆಯ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ, ಇವೆಲ್ಲವೂ ಭಾರತದ ಆತ್ಮ, ಆದರ್ಶಗಳು ಮತ್ತು ನೈತಿಕತೆಯ ಅವಿಭಾಜ್ಯವಾಗಿವೆ.

ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮನವರ ಭವ್ಯವಾದ ದೇವಾಲಯದ ನಿರ್ಮಾಣವನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ರಾಮ್ ಲಲ್ಲಾ ದರ್ಶನಕ್ಕಾಗಿ ಬರುವ ಯಾತ್ರಾರ್ಥಿಗಳ ಸಂಖ್ಯೆ ಮತ್ತು ಭವಿಷ್ಯದಲ್ಲಿ ಬರಲಿರುವ ಎಲ್ಲರನ್ನೂ ಮತ್ತು ಅವರ ಭಾವನೆಗಳನ್ನು ಪರಿಗಣಿಸಿ, ಇನ್ನೂ ಒಂದು ಪ್ರಮುಖ ನಿರ್ಧಾರವನ್ನು ಸರ್ಕಾರದಿಂದ ತೆಗೆದುಕೊಳ್ಳಲಾಗಿದೆ.

ಅಯೋಧ್ಯಾ ಕಾಯ್ದೆಯಡಿಯಲ್ಲಿ ಸ್ವಾಧೀನಪಡಿಸಿಕೊಂಡಿರುವ ಒಳ ಮತ್ತು ಹೊರ ಪ್ರಾಂಗಣ ಸೇರಿದಂತೆ ಸುಮಾರು 67.703 ಎಕರೆ ವಿಸ್ತೀರ್ಣವಿರುವ ಸಂಪೂರ್ಣ ಭೂಮಿಯನ್ನು ಹೊಸದಾಗಿ ಸ್ಥಾಪಿಸಲಾದ ಟ್ರಸ್ಟ್ ಆದ “ಶ್ರೀ ರಾಮ್ ಜನ್ ಭೂಮಿ ತೀರ್ಥ ಕ್ಷೇತ್ರ” ಕ್ಕೆ ಹಸ್ತಾಂತರಿಸುವ ನಿರ್ಧಾರವನ್ನು ನನ್ನ ಸರ್ಕಾರ ತೆಗೆದುಕೊಂಡಿದೆ.

ಗೌರವಾನ್ವಿತ ಸಭಾಧ್ಯಕ್ಷರೇ,

ನವೆಂಬರ್ 9, 2019ರಂದು ರಾಮ ಜನ್ಮ ಭೂಮಿ ಯ ಬಗ್ಗೆ ಹೊರಬಿದ್ದ ತೀರ್ಪಿನ ನಂತರ ಭಾರತೀಯರು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿ ಸಂಪೂರ್ಣ ನಂಬಿಕೆ ಇಟ್ಟುಕೊಂಡು ಹೆಚ್ಚಿನ ಪ್ರಬುದ್ಧತೆಯನ್ನು ಮೆರೆದರು.

ಇಂದು ಈ ಸದನದಲ್ಲಿ, ನಮ್ಮ ಭಾರತೀಯರ ಈ ಪ್ರಬುದ್ಧ ವರ್ತನೆಗಾಗಿ ನಾನು ವಂದಿಸುತ್ತೇನೆ.

ನಮ್ಮ ಸಂಸ್ಕೃತಿ ಮತ್ತು ನಮ್ಮ ಸಂಪ್ರದಾಯಗಳು “ವಸುದೈವ ಕುಟುಂಬಕಂ ” ಮತ್ತು “ಸರ್ವೇ ಭವಂತು ಸುಖಿನಃ” ಎನ್ನುವ ತತ್ತ್ವಗಳನ್ನು ನೀಡುತ್ತವೆ ಮತ್ತು ಈ ಮನೋಭಾವದೊಂದಿಗೆ ಮುಂದುವರಿಯಲು ನಮಗೆ ಪ್ರೇರಣೆ ನೀಡುತ್ತವೆ.

ಭಾರತದ ಎಲ್ಲಾ ಧರ್ಮದ ಜನರು, ಅವರು ಹಿಂದೂಗಳಾಗಿರಲಿ, ಮುಸ್ಲಿಮರಾಗಿರಲಿ, ಸಿಖ್ಖರಾಗಿರಲಿ, ಕ್ರಿಶ್ಚಿಯನ್ನರಾಗಿರಲಿ, ಬೌದ್ಧರಾಗಿರಲಿ, ಪಾರ್ಸಿಗಳಾಗಿರಲಿ, ಜೈನರಾಗಿರಲಿ, ಎಲ್ಲರೂ ಒಂದೇ ದೊಡ್ಡ ಕುಟುಂಬದ ಸದಸ್ಯರು.

ನನ್ನ ಸರ್ಕಾರವು “ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್” ಎಂಬ ಮಂತ್ರದೊಂದಿಗೆ ಮುಂದುವರಿಯುತ್ತಿದೆ ಇದರಿಂದಾಗಿ ಈ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಅಭಿವೃದ್ಧಿ ಹೊಂದುತ್ತಾರೆ, ಸಂತೋಷದಿಂದ ಮತ್ತು ಆರೋಗ್ಯವಾಗಿರುತ್ತಾರೆ, ಸಮೃದ್ಧಿಯಾಗುತ್ತಾರೆ ಮತ್ತು ದೇಶವು ಪ್ರಗತಿ ಹೊಂದುತ್ತದೆ.

ಈ ಮಹತ್ವದ ಸಂದರ್ಭದಲ್ಲಿ, ಅಯೋಧ್ಯೆಯಲ್ಲಿನ ಶ್ರೀ ರಾಮ್ ಧಾಮ್ ನವೀಕರಣವನ್ನು ಮತ್ತು ಭವ್ಯವಾದ ರಾಮರ ದೇವಾಲಯದ ನಿರ್ಮಾಣವನ್ನು ಈ ಘನತೆವೆತ್ತ ಸದನದ ಎಲ್ಲ ಸದಸ್ಯರು ಒಕ್ಕೊರಲಿನಿಂದ ಬೆಂಬಲಿಸಬೇಕೆಂದು ನಾನು ಕರೆ ನೀಡುತ್ತಿದ್ದೇನೆ. 

 
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Budget 2025: Defence gets Rs 6.81 trn; aircraft, engines, ships in focus

Media Coverage

Budget 2025: Defence gets Rs 6.81 trn; aircraft, engines, ships in focus
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 1 ಫೆಬ್ರವರಿ 2025
February 01, 2025

Budget 2025-26 Viksit Bharat’s Foundation Stone: Inclusive, Innovative & India-First Policies under leadership of PM Modi