Quote“ನಿಮ್ಮಂತಹ ಆಟಗಾರರ ಉತ್ಸಾಹ ಹೆಚ್ಚಾಗಿದೆ: ತರಬೇತಿಯೂ ಉತ್ತಮವಾಗಿದೆ ಮತ್ತು ಕ್ರೀಡೆಯ ಬಗ್ಗೆ ದೇಶದ ವಾತಾವರಣವೂ ಅದ್ಭುತವಾಗಿದೆ”
Quote“ತ್ರಿವರ್ಣ ಧ್ವಜ ಎತ್ತದಲ್ಲಿ ಹಾರಾಡುವುದನ್ನು ನೋಡುವುದು, ರಾಷ್ಟ್ರಗೀತೆ ನುಡಿಸುವುದನ್ನು ಕೇಳುವುದು ನಮ್ಮ ಗುರಿ”
Quote“ದೇಶ 75 ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಸಮಯದಲ್ಲಿ ಅಥ್ಲೀಟ್ ಗಳು ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ತೆರಳುತ್ತಿದ್ದಾರೆ”
Quote“ನೀವು ಎಲ್ಲರೂ ಉತ್ತಮವಾಗಿ ತರಬೇತಿ ಪಡೆದಿದ್ದೀರಿ, ಜಗತ್ತಿನ ಉತ್ತಮ ಸೌಲಭ್ಯಗಳ ಮೂಲಕ ತರಬೇತಿ ಪಡೆದುಕೊಂಡಿದ್ದೀರಿ. ಆ ತರಬೇತಿ ಮತ್ತು ನಿಮ್ಮ ಇಚ್ಛಾಶಕ್ತಿಯನ್ನು ಮೈಗೂಡಿಸಿಕೊಳ್ಳುವ ಸಮಯ ಇದಾಗಿದೆ”
Quote“ ನೀವು ಈವರೆಗೆ ಸಾಧಿಸಿರುವುದು ಸ್ಫೂರ್ತಿದಾಯಕ. ಆದರೆ ಈಗ ನೀವು ಹೊಸ ದಾಖಲೆಗಳತ್ತ ಹೊಸದಾಗಿ ನೋಡಬೇಕು”

ಅವರೊಂದಿಗೆ ಮಾತನಾಡುವ ಮೊದಲು ಒಂದೆರಡು ಮಾತು ಹೇಳುತ್ತೇನೆ.  

 

ಸ್ನೇಹಿತರೇ,

 

ನಿಮ್ಮನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಖುಷಿಯಾಗಿದೆ. ನಾನು ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾದರೆ ನನಗೆ ಇನ್ನೂ ಹೆಚ್ಚು ಸಂತೋಷವಾಗುತ್ತಿತ್ತು, ಆದರೆ ನಿಮ್ಮಲ್ಲಿ ಹಲವರು ವಿದೇಶದಲ್ಲಿ ನಿಮ್ಮ ತರಬೇತಿಯಲ್ಲಿ ಇನ್ನೂ ನಿರತರಾಗಿದ್ದೀರಿ. ಇನ್ನೊಂದೆಡೆ ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ನಾನು ಕೂಡ ನಿರತನಾಗಿದ್ದೇನೆ.

 

ಸ್ನೇಹಿತರೇ,

 

ಇಂದು ಜುಲೈ 20. ಕ್ರೀಡಾ ಜಗತ್ತಿಗೂ ಇದು ಅತ್ಯಂತ ಮಹತ್ವದ ದಿನ. ಇಂದು ಅಂತರಾಷ್ಟ್ರೀಯ ಚೆಸ್ ದಿನ ಎಂದು ನಿಮ್ಮಲ್ಲಿ ಕೆಲವರಿಗೆ ತಿಳಿದಿರಬೇಕು. ಕಾಮನ್‌ವೆಲ್ತ್ ಗೇಮ್ಸ್ ಜುಲೈ 28 ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ಪ್ರಾರಂಭವಾಗಲಿದೆ ಮತ್ತು ಅದೇ ದಿನ ತಮಿಳುನಾಡಿನ ಮಹಾಬಲಿಪುರಂನಲ್ಲಿ ಚೆಸ್ ಒಲಿಂಪಿಯಾಡ್ ಪ್ರಾರಂಭವಾಗಲಿದೆ ಎನ್ನುವುದು ತುಂಬಾ ಕುತೂಹಲಕಾರಿಯಾಗಿದೆ. ಅಂದರೆ, ಮುಂದಿನ 10-15 ದಿನಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ವಿಶ್ವದ ಮೇಲೆ ಪ್ರಾಬಲ್ಯ ಸಾಧಿಸಲು ಭಾರತೀಯ ಆಟಗಾರರಿಗೆ ಸುವರ್ಣಾವಕಾಶವಿದೆ. ದೇಶದ ಪ್ರತಿಯೊಬ್ಬ ಆಟಗಾರರಿಗೂ ನಾನು ಶುಭ ಹಾರೈಸುತ್ತೇನೆ.

 

ಸ್ನೇಹಿತರೇ,

 

ಈಗಾಗಲೇ ಹಲವು ಪ್ರಮುಖ ಕ್ರೀಡಾ ಸ್ಪರ್ಧೆಗಳಲ್ಲಿ ಹಲವು ಕ್ರೀಡಾಪಟುಗಳು ದೇಶಕ್ಕೆ ಹೆಮ್ಮೆಯ ಕ್ಷಣಗಳನ್ನು ನೀಡಿದ್ದಾರೆ. ಈ ಬಾರಿಯೂ ಎಲ್ಲಾ ಆಟಗಾರರು, ಕೋಚ್‌ಗಳು ಉತ್ಸಾಹದಿಂದ ಇದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಡಿದ ಅನುಭವವನ್ನು ಹೊಂದಿರುವವರು ಮತ್ತೊಮ್ಮೆ ಪ್ರಯತ್ನಿಸಲು ಅವಕಾಶವಿದೆ. ಈ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿರುವ 65ಕ್ಕೂ ಹೆಚ್ಚು ಕ್ರೀಡಾಪಟುಗಳು ಸಹ ಅದ್ಭುತವಾದ ಪ್ರಭಾವ ಬೀರುತ್ತಾರೆ ಎಂದು ನನಗೆ ಖಾತ್ರಿಯಿದೆ. ನೀವು ಏನು ಮಾಡಬೇಕು ಮತ್ತು ಹೇಗೆ ಆಡಬೇಕು ಎನ್ನುವುದರಲ್ಲಿ ನೀವು ಪರಿಣಿತರು. ನಿಮ್ಮ ಪೂರ್ಣ ಶಕ್ತಿಯಿಂದ ಮತ್ತು ಯಾವುದೇ ಉದ್ವೇಗವಿಲ್ಲದೆ ಆಟವಾಡಿ ಎಂದು ನಾನು ಹೇಳುತ್ತೇನೆ.

 

ಮತ್ತು ಆ ಹಳೆಯ ಮಾತನ್ನ ನೀವು ಕೇಳಿರಬೇಕು. ನಿಮಗೆ ಸವಾಲು ಹಾಕವವರು ಯಾರೂ ಇಲ್ಲವೇ ಇಲ್ಲ, ನೀವೇಕೆ ತಲೆಕೆಡಿಸಿಕೊಳ್ಳಬೇಕು? ಈ ಮನೋಭಾವದಿಂದ ಅಲ್ಲಿಗೆ ಹೋಗಿ ಆಟವಾಡಬೇಕು. ನಾನು ಹೆಚ್ಚಿನ ಸಲಹೆ ನೀಡಲು ಬಯಸುವುದಿಲ್ಲ. ಮಾತುಕತೆಯನ್ನು ಪ್ರಾರಂಭಿಸೋಣ. ನಾನು ಮೊದಲು ಯಾರ ಜೊತೆ ಮಾತನಾಡಬೇಕು?

 

ನಿರೂಪಕರು: ಅವಿನಾಶ್ ಸೇಬಲ್ ಮಹಾರಾಷ್ಟ್ರದಿಂದ ಬಂದ ಕ್ರೀಡಾಪಟು.

 

ಪ್ರಧಾನಿ:  ಅವಿನಾಶ್, ನಮಸ್ಕಾರ!

 

ಅವಿನಾಶ್ ಸಾಬಲ್: ಜೈ ಹಿಂದ್  ಸರ್. ನಾನು, ಅವಿನಾಶ್ ಸೇಬಲ್, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 3000 ಮೀಟರ್ ಓಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ.

 

ಪ್ರಧಾನಿ: ಅವಿನಾಶ್, ನೀವು ಸೈನ್ಯದಲ್ಲಿದ್ದೀರಿ ಮತ್ತು ನಿಮ್ಮನ್ನು ಸಿಯಾಚಿನ್‌ನಲ್ಲಿ ನಿಯೋಜಿಸಲಾಗಿದೆ ಎಂದು ನನಗೆ ಹೇಳಲಾಗಿದೆ. ಮೊದಲನೆಯದಾಗಿ, ನೀವು ಮಹಾರಾಷ್ಟ್ರದಿಂದ ಬಂದು ಹಿಮಾಲಯದಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಅನುಭವವನ್ನು ನನಗೆ ತಿಳಿಸಿ.

 

ಅವಿನಾಶ್ ಸಾಬಳೆ: ಸರ್, ನಾನು ಮಹಾರಾಷ್ಟ್ರದ ಬಿಡ್ ಜಿಲ್ಲೆಯವನು. ನಾನು 2012 ರಲ್ಲಿ ಭಾರತೀಯ ಸೇನೆಗೆ ಸೇರಿದೆ. ನಾನು ನಾಲ್ಕು ವರ್ಷಗಳ ಕಾಲ ಸೇನೆಯಲ್ಲಿ ನಿಯಮಿತ ಕರ್ತವ್ಯವನ್ನು ಮಾಡಿದ್ದೇನೆ ಮತ್ತು ಆ ವರ್ಷಗಳಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ನಾಲ್ಕು ವರ್ಷಗಳಲ್ಲಿ, ಒಂಬತ್ತು ತಿಂಗಳ ಕಾಲ ಅತ್ಯಂತ ಕಠಿಣ ತರಬೇತಿ ಇದೆ. ಆ ತರಬೇತಿಯು ನನ್ನನ್ನು ತುಂಬಾ ಬಲಶಾಲಿಯನ್ನಾಗಿಸಿತು. ಆ ತರಬೇತಿಯಿಂದಾಗಿ ನಾನು ಯಾವುದೇ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ನನಗೆ ವಿಶ್ವಾಸವಿದೆ. ನನ್ನನ್ನು ಕಾಮನ್‌ವೆಲ್ತ್ ಗೇಮ್ಸ್‌ಗೆ ಕಳುಹಿಸಿದ ಸೇನೆಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಸೇನೆಯಲ್ಲಿನ ಶಿಸ್ತಿನಿಂದಾಗಿ ಮತ್ತು ಕಷ್ಟಕರವಾದ ಭೂಪ್ರದೇಶದಲ್ಲಿ ನನ್ನ ಪೋಸ್ಟಿಂಗ್‌ನಿಂದಾಗಿ ನಾನು ಸಾಕಷ್ಟು ಪ್ರಯೋಜನ ಪಡೆದಿದ್ದೇನೆ.

 

ಪ್ರಧಾನಿ: ಅವಿನಾಶ್, ನೀವು ಸೇನೆಗೆ ಸೇರಿದ ನಂತರವೇ ಸ್ಟೀಪಲ್‌ಚೇಸ್ ಆಯ್ಕೆ ಮಾಡಲು ನಿರ್ಧರಿಸಿದ್ದೀರಿ ಎಂದು ನಾನು ಕೇಳಿದ್ದೇನೆ. ಸಿಯಾಚಿನ್ ಮತ್ತು ಸ್ಟೀಪಲ್‌ಚೇಸ್ ನಡುವೆ ಏನಾದರೂ ಸಂಬಂಧವಿದೆಯೇ?

 

ಅವಿನಾಶ್ ಸಾಬಳೆ: ಹೌದು ಸರ್. ಸ್ಟೀಪಲ್‌ಚೇಸ್ ನಲ್ಲಿ ಕೂಡ ತುಂಬಾ ಅಡೆತಡೆಗಳಿರುವುವಂತೆಯೇ  ನಾವು ಸೈನ್ಯದಲ್ಲಿ ಇದೇ ರೀತಿಯ ತರಬೇತಿಯನ್ನು ಹೊಂದಿದ್ದೇವೆ. ಸ್ಟೀಪಲ್‌ಚೇಸ್‌ನಲ್ಲಿ ಹಲವಾರು ಅಡೆತಡೆಗಳು ಮತ್ತು ನೀರಿನ ಜಿಗಿತಗಳಿವೆ. ಸೇನಾ ತರಬೇತಿಯಲ್ಲೂ ನಾವು ಅನೇಕ ಅಡೆತಡೆಗಳನ್ನು ದಾಟಬೇಕಾಗಿರುತ್ತದೆ. ತೆವಳ ಬೇಕು ಮತ್ತು ಒಂಬತ್ತು ಅಡಿಯ ಕಂದಕವನ್ನು ಜಿಗಿಯಬೇಕು. ಸೇನೆಯಲ್ಲಿ ನಮ್ಮ ತರಬೇತಿಯ ಸಮಯದಲ್ಲಿ ನಾವು ಎದುರಿಸಬೇಕಾದ ಹಲವಾರು ಅಡೆತಡೆಗಳಿವೆ. ಆದ್ದರಿಂದ, ಸೈನ್ಯದಲ್ಲಿ ಪಡೆದ ತರಬೇತಿಯಿಂದಾಗಿ ನನಗೆ ಈ ಸ್ಟೀಪಲ್‌ಚೇಸ್ ತುಂಬಾ ಸುಲಭವಾಗಿದೆ.

 

ಪ್ರಧಾನಿ: ಅವಿನಾಶ್, ಒಂದು ವಿಷಯ ಹೇಳಿ. ನೀವು ಮೊದಲು ಅಧಿಕ ತೂಕ ಹೊಂದಿದ್ದಿರಿ ಮತ್ತು ನೀವು ಕಡಿಮೆ ಸಮಯದಲ್ಲಿ ನಿಮ್ಮ ತೂಕವನ್ನು ಕಳೆದುಕೊಂಡಿದ್ದೀರಿ. ಮತ್ತು ನಾನು ಇಂದು ನಿಮ್ಮನ್ನು ನೋಡುವಂತೆ, ನೀವು ತುಂಬಾ ತೆಳ್ಳಗೆ ಕಾಣುತ್ತೀರಿ. ನೀರಜ್ ಚೋಪ್ರಾ ಕೂಡ ಕಡಿಮೆ ಸಮಯದಲ್ಲಿ ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡಿರುವುದನ್ನು ನಾನು ಗಮನಿಸಿದ್ದೇನೆ. ನಿಮ್ಮ ತೂಕವನ್ನು ನೀವು ಹೇಗೆ ಕಡಿಮೆಗೊಳಿಸಿದ್ದೀರಿ ಎಂದು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡರೆ ಕ್ರೀಡೆಗಳಲ್ಲಿರುವವರಿಗಿಂತ ಇತರ ಜನರಿಗೆ ಇದು ಅನುಕೂಲಕರವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ.

 

ಅವಿನಾಶ್ ಸಾಬಳೆ: ಸಾರ್, ನಾನು ಸೈನ್ಯದಲ್ಲಿ ಜವಾನ್‌ ಆಗಿದ್ದಾಗ ನನ್ನ ತೂಕ ಜಾಸ್ತಿ ಇತ್ತು. ಆ ಸಮಯದಲ್ಲಿ ನಾನು ಕ್ರೀಡೆಗೆ ಸೇರಬೇಕೆಂದು ಯೋಚಿಸಿದೆ. ನನ್ನ ತುಕಡಿ ಮತ್ತು ಸೇನೆ ಕೂಡ ನನ್ನನ್ನು ಕ್ರೀಡೆಗೆ ಸೇರಲು ಪ್ರೇರೇಪಿಸಿತು. ಓಡುವಾಗ ನನ್ನ ತೂಕ ತುಂಬಾ ಹೆಚ್ಚಿತ್ತು. ನಾನು ಸುಮಾರು 74 ಕೆಜಿ ತೂಕ ಹೊಂದಿದ್ದೆ ಮತ್ತು ನಾನು ತುಂಬಾ ಚಿಂತಿತನಾಗಿದ್ದೆ. ಆದರೆ ಸೈನ್ಯವು ನನ್ನನ್ನು ಬೆಂಬಲಿಸಿತು ಮತ್ತು ನನಗೆ ತರಬೇತಿ ನೀಡಲು ಹೆಚ್ಚುವರಿ ಸಮಯವನ್ನು ನಿಗದಿಪಡಿಸಿತು. ನನ್ನ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸುಮಾರು ಮೂರು-ನಾಲ್ಕು ತಿಂಗಳುಗಳು ಬೇಕಾಯಿತು.

 

ಪ್ರಧಾನಿ: ನೀವು ಎಷ್ಟು ತೂಕವನ್ನು ಕಳೆದುಕೊಂಡಿದ್ದೀರಿ?

 

ಅವಿನಾಶ್ ಸೇಬಲ್: ಸರ್, ಈಗ   53 ಕೆ.ಜಿ. ಇದ್ದೇನೆ,  ಮೊದಲು 74 ಕೆ.ಜಿ. ಇದ್ದೆ.  ಹಾಗಾಗಿ ಸುಮಾರು 20 ಕೆಜಿ ತೂಕ ಕಳೆದುಕೊಂಡೆ.

 

ಪ್ರಧಾನಿ: ಓಹ್, ನೀವು ನಿಜವಾಗಿಯೂ ಬಹಳಷ್ಟು ತೂಕ ಕಳೆದುಕೊಂಡಿದ್ದೀರಿ. ಅವಿನಾಶ್, ನಾನು ಕ್ರೀಡೆಯಲ್ಲಿ ಇಷ್ಟಪಡುವ ಅತ್ಯುತ್ತಮ ವಿಷಯ -  ಗೆಲುವು ಅಥವಾ ಸೋಲಿನ ಹೊರೆಯನ್ನು ಯಾರೂ ಒಯ್ಯುವುದಿಲ್ಲ ಎನ್ನುವ ಮಾತು ನನ್ನ ಹೃದಯವನ್ನು ಖಂಡಿತವಾಗಿ ಸ್ಪರ್ಶಿಸುತ್ತದೆ. ಪ್ರತಿ ಬಾರಿ ಸ್ಪರ್ಧೆಯು ಹೊಸದಾಗಿ ಮತ್ತು ತಾಜಾವಾಗಿರುತ್ತದೆ. ಮತ್ತು ನೀವು ಸಿದ್ಧರಾಗಿರುವಿರಿ ಎಂದು ಹೇಳಿದ್ದೀರಿ. ಎಲ್ಲಾ ಭಾರತೀಯರ ಶುಭಾಶಯಗಳು ನಿಮ್ಮೊಂದಿಗಿವೆ. ಪೂರ್ಣ ಸಾಮರ್ಥ್ಯದೊಂದಿಗೆ ಆಟವಾಡಿ. ನಾವು ಈಗ ಯಾರ ಜೊತೆ ಮಾತನಾಡಬೇಕು?

ನಿರೂಪಕರು: ಸರ್, ಅಚಿಂತ ಶೆಯುಲಿ ಪಶ್ಚಿಮ ಬಂಗಾಳದವರು ಮತ್ತು ಅವರು ವೇಟ್‌ಲಿಫ್ಟರ್.

 

ಪ್ರಧಾನಿ: ಅಚಿಂತಾ ಜೀ, ನಮಸ್ತೆ!

 

ಅಚಿಂತ ಶೆಯುಲಿ: ನಮಸ್ತೆ, ಸರ್. ನಾನು ಪಶ್ಚಿಮ ಬಂಗಾಳದವನು ಮತ್ತು 12 ನೇ ತರಗತಿಯಲ್ಲಿ ಓದುತ್ತಿದ್ದೇನೆ.

 

ಪ್ರಧಾನಿ: ನಿಮ್ಮ ಬಗ್ಗೆ ಹೇಳಿ.

 

ಅಚಿಂತಾ ಶೆಯುಲಿ: ಸರ್, ನಾನು 73 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತೇನೆ.

ಪ್ರಧಾನಿ: ಅಚಿಂತಾ, ನೀವು ತುಂಬಾ ಶಾಂತ ಸ್ವಭಾವದವರು ಎಂದು ಜನರು ಹೇಳುತ್ತಾರೆ. ಏಕ್‌ ಧಂ ಕೂಲ್‌ ! ಮತ್ತೆ ನಿಮ್ಮ ಕ್ರೀಡೆಯು ಶಕ್ತಿಗೆ ಸಂಬಂಧಿಸಿದೆ. ಹಾಗಾದರೆ, ಈ ಶಕ್ತಿ ಮತ್ತು ಶಾಂತಿಯನ್ನು ನೀವು ಹೇಗೆ ತೂಗಿಸಿಕೊಂಡಿದ್ದೀರಾ ?

ಅಚಿಂತ ಶೆಯುಲಿ: ಸರ್, ನಾನು ಯೋಗ ಮಾಡುತ್ತೇನೆ ಮತ್ತು ಅದರಿಂದಾಗಿ  ಮನಸ್ಸು ಶಾಂತವಾಗಿರುತ್ತದೆ. ತರಬೇತಿಯ ಸಮಯದಲ್ಲಿ, ನಾನು ಉತ್ಸಾಹದಿಂದ ತುಂಬಿರುತ್ತೇನೆ.

ಪ್ರಧಾನಿ: ಅಚಿಂತಾ, ನೀವು ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಿದ್ದೀರಾ?

ಅಚಿಂತಾ ಶೆಯುಲಿ: ಹೌದು ಸರ್. ಆದರೆ ಕೆಲವೊಮ್ಮೆ ತಪ್ಪಿ ಹೋಗುತ್ತೆ .

ಪ್ರಧಾನಿ: ಸರಿ, ನಿಮ್ಮ ಕುಟುಂಬದಲ್ಲಿ ಯಾರು ಯಾರಿದ್ದಾರೆ?

ಅಚಿಂತಾ ಶೆಯುಲಿ: ನನ್ನ ತಾಯಿ ಮತ್ತು ಅಣ್ಣ ಇದ್ದಾರೆ ಸರ್.

ಪ್ರಧಾನಿ: ನಿಮಗೆ ಕುಟುಂಬದಿಂದ ಬೆಂಬಲ ಸಿಗುತ್ತದೆಯೇ?

ಅಚಿಂತಾ ಶೆಯುಲಿ: ಹೌದು ಸರ್. ನನ್ನ ಕುಟುಂಬದವರಿಂದ ನನಗೆ ಸಂಪೂರ್ಣ ಬೆಂಬಲವಿದೆ. ಅವರು ಉತ್ತಮ ಪ್ರದರ್ಶನ ನೀಡಲು ನನ್ನನ್ನು ಪ್ರೋತ್ಸಾಹಿಸುತ್ತಾರೆ. ನಾನು ಪ್ರತಿದಿನ ಅವರೊಂದಿಗೆ ಮಾತನಾಡುತ್ತೇನೆ.  ಅವರ ಬೆಂಬಲ ಸದಾ ಇದೆ ಸರ್.

ಪ್ರಧಾನಿ: ಆದರೆ ನಿಮ್ಮ ತಾಯಿ ನೀವು ಗಾಯಗೊಳ್ಳುವುದರ ಬಗ್ಗೆ ತುಂಬಾ ಚಿಂತಿತರಾಗಿರಬೇಕು, ಏಕೆಂದರೆ ವೇಟ್‌ಲಿಫ್ಟಿಂಗ್ ಸಮಯದಲ್ಲಿ ಗಾಯಗೊಳ್ಳುವುದರ ಬಗ್ಗೆ ಆತಂಕ ಯಾವಾಗಲೂ ಇರುತ್ತದೆ.

ಅಚಿಂತಾ ಶೆಯುಲಿ: ಹೌದು ಸರ್. ನಾನು ನನ್ನ ತಾಯಿಯೊಂದಿಗೆ ಮಾತನಾಡುವಾಗ, ಅವರು ಯಾವಾಗಲೂ ಎಚ್ಚರಿಕೆಯಿಂದ ಆಟವಾಡಲು ಹೇಳುತ್ತಾರೆ.

ಪ್ರಧಾನಿ: ನೀವು ಚೆನ್ನಾಗಿ ಆಡಬೇಕು ಮತ್ತು ನೀವು ಪ್ರಯೋಜನ ಪಡೆಯ ಬೇಕೆಂದು ನಾನು ಬಯಸುತ್ತೇನೆ. ಗಾಯಗೊಳ್ಳದಿರುವಂತೆ ನೀವು ಹೇಗೆ ಮುನ್ನೆಚ್ಚರಿಕೆ ವಹಿಸಿದ್ದೀರಿ? ನೀವು ಏನಾದರೂ ವಿಶೇಷ ತಯಾರಿ ನಡೆಸಿದ್ದೀರಾ?

ಅಚಿಂತ ಶೆಯುಲಿ: ಇಲ್ಲ ಸರ್. ಗಾಯಗೊಳ್ಳುವುದು ಸಾಮಾನ್ಯ. ಆದರೆ ನಾನು ಗಾಯಗೊಂಡಾಗ ನಾನು ಅದರ ಕಾರಣದ ಬಗ್ಗೆ ಯೋಚಿಸುತ್ತೇನೆ. ಗಾಯಗೊಳ್ಳಲು ಕಾರಣವಾದ ನನ್ನ ತಪ್ಪು ಏನು? ನಂತರ ನಾನು ನನ್ನನ್ನು ಸರಿಪಡಿಸಿಕೊಳ್ಳುತ್ತೇನೆ.  ನಿಧಾನವಾಗಿ, ಗಾಯಗೊಳ್ಳುವುದು ಮರೆಯಾಯಿತು.

ಪ್ರಧಾನಿ: ಅಚಿಂತಾ, ನೀವು ಚಲನಚಿತ್ರಗಳನ್ನು ನೋಡುವುದನ್ನು ತುಂಬಾ ಇಷ್ಟಪಡುತ್ತೀರಿ ಎಂದು ನನಗೆ ಹೇಳಿದರು. ನೀವು ಚಲನಚಿತ್ರಗಳನ್ನು ನೋಡುತ್ತೀರಾ? ನಿಮ್ಮ ತರಬೇತಿಯಿಂದಾಗಿ ನಿಮಗೆ ಸಾಕಷ್ಟು ಸಮಯ ಸಿಗುತ್ತದೆಯೇ?

ಅಚಿಂತ ಶೆಯುಲಿ: ಹೌದು ಸರ್. ನನಗೆ ಅಷ್ಟು ಸಮಯ ಸಿಗುವುದಿಲ್ಲ. ಆದರೆ ಬಿಡುವಿದ್ದಾಗಲೆಲ್ಲ ನೋಡುತ್ತೇನೆ ಸರ್.

ಪ್ರಧಾನಿ: ಅಂದರೆ ನೀವು ಪದಕದೊಂದಿಗೆ ಹಿಂತಿರುಗಿದ ನಂತರ ನೀವು ಚಲನಚಿತ್ರಗಳನ್ನು ವೀಕ್ಷಿಸಲು ಪ್ರಾರಂಭಿಸುತ್ತೀರಿ ಎಂದಾಯ್ತು.

ಅಚಿಂತಾ ಶೆಯುಲಿ: ಇಲ್ಲ, ಇಲ್ಲ, ಸರ್.

ಪ್ರಧಾನಿ: ಸರಿ, ನನ್ನ ಹಾರೈಕೆಗಳು ನಿಮ್ಮೊಂದಿಗಿವೆ. ನಿಮ್ಮ ತಯಾರಿಯಲ್ಲಿ ಯಾವುದೇ ಸಮಸ್ಯೆಗೆ ಅವಕಾಶ ನೀಡದ ನಿಮ್ಮ ಕುಟುಂಬವನ್ನು, ವಿಶೇಷವಾಗಿ ನಿಮ್ಮ ತಾಯಿ ಮತ್ತು ಸಹೋದರನನ್ನು ನಾನು ಪ್ರಶಂಸಿಸುತ್ತೇನೆ. ಆಟಗಾರನ ಜೊತೆಗೆ ಇಡೀ ಕುಟುಂಬವೂ ಸಾಕಷ್ಟು ಶ್ರಮ ಹಾಕಬೇಕು ಎನ್ನುವುದು ನನ್ನ ಅಭಿಪ್ರಾಯ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನಿಮ್ಮ ಅತ್ಯುತ್ತಮ ಪ್ರದರ್ಶನ ನೀಡಿ. ನಿಮಗೆ ನಿಮ್ಮ ತಾಯಿ ಮತ್ತು ದೇಶದ ಜನತೆಯ ಆಶೀರ್ವಾದವಿದೆ. ಅಚಿಂತಾ ನಿಮಗೆ ಶುಭ ಹಾರೈಕೆಗಳು.

ಅಚಿಂತಾ ಶೆಯುಲಿ: ಧನ್ಯವಾದಗಳು ಸರ್.

ನಿರೂಪಕರು: ಸರ್, ಟ್ರೀಸಾ ಜಾಲ್ಲಿ ಕೇರಳದವರು. ಅವರು ಬ್ಯಾಡ್ಮಿಂಟನ್ ಆಡುತ್ತಾರೆ.

ಟ್ರೀಸಾ ಜಾಲ್ಲಿ: ಶುಭೋದಯ, ಸರ್. ನಾನು ಟ್ರೀಸಾ ಜಾಲ್ಲಿ. ಸರ್, ನಾನು 2020 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ನಲ್ಲಿ ಭಾಗವಹಿಸುತ್ತಿದ್ದೇನೆ

ಪ್ರಧಾನಿ: ಟ್ರೀಸಾ, ನೀವು ಕಣ್ಣೂರು ಜಿಲ್ಲೆಯವರು. ಅಲ್ಲಿ ಕೃಷಿ ಮತ್ತು ಫುಟ್ಬಾಲ್ ಬಹಳ ಜನಪ್ರಿಯವಾಗಿವೆ. ನಿಮಗೆ ಬ್ಯಾಡ್ಮಿಂಟನ್‌ಗೆ ಬರಲು ಯಾರು ಸ್ಫೂರ್ತಿ?

ಟ್ರೀಸಾ ಜಾಲ್ಲಿ: ಸರ್, ನನ್ನ ಊರಿನಲ್ಲಿ ವಾಲಿಬಾಲ್ ಮತ್ತು ಫುಟ್‌ಬಾಲ್ ಹೆಚ್ಚು ಜನಪ್ರಿಯವಾಗಿರುವ ಕಾರಣ ನನ್ನ ತಂದೆ ನನ್ನನ್ನು ಕ್ರೀಡೆಯನ್ನು ಆಡಲು ಪ್ರೇರೇಪಿಸಿದರು. ಆದರೆ ಬ್ಯಾಡ್ಮಿಂಟನ್ ಆ ವಯಸ್ಸಿನಲ್ಲಿ ಆಡಲು ಹೆಚ್ಚು ಅನುಕೂಲಕರವಾಗಿತ್ತು - 5 ನೇ ವಯಸ್ಸಿನಲ್ಲಿ.

ಪ್ರಧಾನಿ: ಟ್ರೀಸಾ, ನೀವು ಮತ್ತು ಗಾಯತ್ರಿ ಗೋಪಿಚಂದ್ ಇಬ್ಬರೂ ತುಂಬಾ ಒಳ್ಳೆಯ ಸ್ನೇಹಿತರು ಮತ್ತು ಡಬಲ್ಸ್ ಪಾರ್ಟನರ್ಸ್‌ ಎಂದು ನನಗೆ ಹೇಳಲಾಗಿದೆ. ನಿಮ್ಮ ಸ್ನೇಹ ಮತ್ತು ಆನ್-ಫೀಲ್ಡ್ ಪಾರ್ಟನರ್‌ ಬಗ್ಗೆ ಹೇಳಿ.

ಟ್ರೀಸಾ ಜಾಲ್ಲಿ: ಸರ್, ನಾನು ಗಾಯತ್ರಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ನಾವು ಆಡುವಾಗ, ನಾವು ಉತ್ತಮ ಜೋಡಿಯಾಗಿದ್ದೇವೆ.  ಜೊತೆಯಲ್ಲಿ ಆಡುವವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ.

ಪ್ರಧಾನಿ: ಸರಿ, ಟ್ರೀಸಾ. ನೀವು ಹಿಂದಿರುಗಿದ ನಂತರ ಗೆಲುವನ್ನು ಆಚರಿಸಲು ನಿಮ್ಮ ಮತ್ತು ಗಾಯತ್ರಿಯ ಯೋಜನೆಗಳೇನು?

ಟ್ರೀಸಾ ಜಾಲ್ಲಿ: ಅಲ್ಲಿ ಪದಕ ಗೆದ್ದರೆ ಸಂಭ್ರಮಿಸುತ್ತೇವೆ. ಈಗ, ನಾವು ಹೇಗೆ ಆಚರಿಸುತ್ತೇವೆ ಎಂದು ನಾನು ಹೇಳಲಾಗದು.

ಪ್ರಧಾನಿ: ಪಿ.ವಿ. ಸಿಂಧು ಹಿಂದಿರುಗಿದ ನಂತರ ಐಸ್ ಕ್ರೀಮ್ ತಿನ್ನಬೇಕೆಂದು ನಿರ್ಧರಿಸಿದ್ದರು. ನೀವು ಅದ್ಭುತ ಆರಂಭವನ್ನು ಮಾಡಿದ್ದೀರಿ. ನಿಮ್ಮ ಮುಂದೆ ನಿಮ್ಮ ಸಂಪೂರ್ಣ ವೃತ್ತಿಜೀವನವಿದೆ. ಇದು ಕೇವಲ ವಿಜಯಗಳ ಆರಂಭವಾಗಿದೆ ಮತ್ತು ನೀವು ಪ್ರತಿ ಪಂದ್ಯದಲ್ಲೂ ನಿಮ್ಮ ನೂರು ಪ್ರತಿಶತವನ್ನು ನೀಡುತ್ತೀರಿ. ಪ್ರತಿ ಪಂದ್ಯವನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಿ. ಫಲಿತಾಂಶ ಏನಾಗಿದೆ ಎನ್ನುವುದು ಮುಖ್ಯವಲ್ಲ. ನೋಡಿ, ನೀವು ನಿಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದೀರಿ ಎಂದು ನೀವು ಭಾವಿಸಬೇಕು. ನಿಮಗೆ ಮತ್ತು ಇತರರಿಗೆ ಅನೇಕ ಶುಭಾಶಯಗಳು!

ಟ್ರೀಸಾ ಜಾಲ್ಲಿ: ಧನ್ಯವಾದಗಳು ಸರ್.

ನಿರೂಪಕರು: ಸರ್, ಈಗ ನಮ್ಮ ಜೊತೆ ಜಾರ್ಖಂಡ್‌ನ ಹಾಕಿ ಆಟಗಾರ್ತಿ ಸಲೀಮಾ ಟೆಟೆ ಇದ್ದಾರೆ.

ಪ್ರಧಾನಿ: ಸಲೀಮಾ ಜೀ, ನಮಸ್ತೆ!

ಸಲೀಮಾ ಟೆಟೆ: ಶುಭೋದಯ, ಸರ್.

ಪ್ರಧಾನಿ: ಸಲೀಮಾ ಜೀ ಹೇಗಿದ್ದೀರಾ?

ಸಲೀಮಾ ಟೆಟೆ: ತುಂಬಾ ಚೆನ್ನಾಗಿದ್ದೀನಿ ಸರ್. ನೀವು ಹೇಗಿದ್ದೀರಿ?

ಪ್ರಧಾನಿ: ಹಾಗಾದರೆ ನೀವು ಈಗ ಕೋಚಿಂಗ್‌ಗಾಗಿ ಎಲ್ಲಿದ್ದೀರಿ, ವಿದೇಶದಲ್ಲಿ?

ಸಲೀಮಾ ಟೆಟೆ: ಹೌದು, ಸರ್. ಇಡೀ ತಂಡ ಇಂಗ್ಲೆಂಡ್‌ನಲ್ಲಿದೆ.

ಪ್ರಧಾನಿ: ಸಲೀಮಾ, ನಾನು ನಿಮ್ಮ ಬಗ್ಗೆ ಓದುತ್ತಿದ್ದೆ, ನೀವು ಮತ್ತು ನಿಮ್ಮ ತಂದೆ ಹಾಕಿಗೋಸ್ಕರ ತುಂಬಾ ಕಷ್ಟಪಡಬೇಕಾಗಿತ್ತು. ಅಲ್ಲಿಂದ ಇಲ್ಲಿಯವರೆಗಿನ ಪಯಣದ ಬಗ್ಗೆ ಒಂದಿಷ್ಟು ಹೇಳಿದರೆ ದೇಶದ ಆಟಗಾರರಿಗೂ ಬೇಕಾದ ಸ್ಫೂರ್ತಿ ಸಿಗುತ್ತದೆ.

ಸಲೀಮಾ ಟೆಟೆ: ಹೌದು, ಸರ್. ನಾನು ಹಳ್ಳಿಯಿಂದ ಬಂದವಳು. ನನ್ನ ತಂದೆಯೂ ಆಡುತ್ತಿದ್ದರು. ಅಪ್ಪ ಆಡುವುದನ್ನು ಬಿಟ್ಟು ಬಹಳ ದಿನಗಳಾಗಿವೆ. ಅಪ್ಪ ಎಲ್ಲಿಗೆ ಆಟವಾಡಲು ಹೋದರೂ ನಾನು ಸೈಕಲ್‌ನಲ್ಲಿ ಅವರ ಜೊತೆ ಹೋಗುತ್ತಿದ್ದೆ. ನಾನು ಅವರು ಆಡುವುದನ್ನು ಗಮನಿಸುತ್ತಿದ್ದೆ ಮತ್ತು ಆಟವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ನಾನು ನನ್ನ ಅಪ್ಪನಿಂದ ಹಾಕಿ ಕಲಿಯಲು ಬಯಸಿದ್ದೆ. ನಾನು ಜಾರ್ಖಂಡ್‌ನ ಅಸುಂತಾ ಲಾಕ್ರ ಅವರ ಆಟವನ್ನೂ ನೋಡುತ್ತಿದ್ದೆ. ನಾನು ಅವರಂತೆ ಆಗಬೇಕೆಂದು ಬಯಸಿದ್ದೆ. ನಿಧಾನವಾಗಿ, ನಾನು ಆಟವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ ಮತ್ತು ಅದು ನನ್ನ ಜೀವನಕ್ಕೆ ಬಹಳಷ್ಟು ನೀಡುತ್ತದೆ ಎಂದು ಅರಿತುಕೊಂಡೆ. ಕಷ್ಟಪಟ್ಟರೆ ಮಾತ್ರ ಬಹಳಷ್ಟು ಸಿಗುತ್ತದೆ ಎಂಬುದನ್ನು ಅಪ್ಪನಿಂದ ಕಲಿತಿದ್ದೇನೆ. ನಾನು ಅವರಿಂದ ಬಹಳಷ್ಟು ಕಲಿತಿದ್ದೇನೆ ಎಂದು ನನಗೆ ತುಂಬಾ ಸಂತೋಷವಾಗಿದೆ.

ಪ್ರಧಾನಿ: ಸಲೀಮಾ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಿಮ್ಮ ಆಟವು ಎಲ್ಲರನ್ನೂ ಮೆಚ್ಚಿಸಿದೆ
ಟೋಕಿಯೋ ಪಂದ್ಯದ ಸಮಯದಲ್ಲಿ ನಿಮ್ಮ ಅನುಭವವನ್ನು ನೀವು ಹಂಚಿಕೊಂಡರೆ, ಪ್ರತಿಯೊಬ್ಬರೂ ಅದನ್ನು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ.

ಸಲೀಮಾ ಟೆಟೆ: ಖಂಡಿತ, ಸರ್. ಟೋಕಿಯೊ ಒಲಿಂಪಿಕ್ಸ್‌ಗೂ ಮುನ್ನ ನಾವು ನಿಮ್ಮೊಂದಿಗೆ ಮಾತನಾಡಿದ್ದೇವೆ. ಈಗ, ಕಾಮನ್‌ವೆಲ್ತ್ ಗೇಮ್ಸ್‌ಗೂ ಮುನ್ನ ನಾವು ನಿಮ್ಮೊಂದಿಗಿದ್ದೇವೆ. ನಾವು ಟೋಕಿಯೋ ಒಲಿಂಪಿಕ್ಸ್‌ ಗೆ ಹೋಗುವ ಮೊದಲು ನೀವು ನಮ್ಮನ್ನು ಪ್ರೇರೇಪಿಸಿದ್ದೀರಿ.   ನಮಗೆ ತುಂಬಾ ಸಂತೋಷವಾಯಿತು ಮತ್ತು ಪ್ರೇರಣೆ ಸಿಕ್ಕಿತು. ನಾವು ಟೋಕಿಯೊ ಒಲಿಂಪಿಕ್ಸ್‌ಗೆ ಹೋದಾಗ, ನಮ್ಮ ಮನಸ್ಸಿನಲ್ಲಿ  ಕೇವಲ ನಾವು ಅಸಾಮಾನ್ಯವಾದುದನ್ನು ಮಾಡಬೇಕೆಂದು ಮಾತ್ರ ಇತ್ತು. ಈ ಟೂರ್ನಿಗೂ ಇದೇ ವಿಧಾನವನ್ನು ಅನುಸರಿಸುತ್ತೇವೆ. ಟೋಕಿಯೊ ಒಲಿಂಪಿಕ್ಸ್ ಸಮಯದಲ್ಲಿ ಕೋವಿಡ್ ಇತ್ತು ಮತ್ತು ಅದು ತುಂಬಾ ಕಷ್ಟಕರವಾಗಿತ್ತು. ಟೋಕಿಯೊದಲ್ಲಿ ಏನನ್ನಾದರೂ ಕಲಿಯಲು ಮತ್ತು ಮಾಡಲು ನಾವು ಸಿದ್ಧರಿದ್ದೇವೆ. ನೀವು ನಮ್ಮನ್ನು ಹೀಗೆ ಬೆಂಬಲಿಸುತ್ತಿದ್ದೀರಿ ಇದರಿಂದ ನಾವು ಮತ್ತಷ್ಟು ಪ್ರಗತಿ ಸಾಧಿಸಬಹುದು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಮ್ಮ ತಂಡವು ಉತ್ತಮ ಪ್ರದರ್ಶನ ನೀಡಿತು ಮತ್ತು ಅದು ನಮ್ಮ ಗುರುತನ್ನು ಸೃಷ್ಟಿಸಿತು. ನಾವು ಇದನ್ನೇ ಮುಂದುವರೆಸಬೇಕು ಸರ್.

ಪ್ರಧಾನಿ: ಸಲೀಮಾ, ನೀವು ತುಂಬಾ ಚಿಕ್ಕವರು ಆದರೆ ಅನೇಕ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದೀರಿ. ನಿಮ್ಮ ಅನುಭವವು ಭವಿಷ್ಯದಲ್ಲಿ ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ ಎಂದು ನನಗೆ ದೃಢವಾದ ನಂಬಿಕೆ ಇದೆ.  ಭವಿಷ್ಯದಲ್ಲಿ ನೀವು ತುಂಬಾ ದೂರ ಸಾಗುತ್ತೀರಿ. ನಾನು, ದೇಶದೊಂದಿಗೆ, ಮಹಿಳಾ ಮತ್ತು ಪುರುಷರ ಹಾಕಿ ತಂಡಗಳಿಗೆ ನನ್ನ ಶುಭಾಶಯಗಳನ್ನು ಅರ್ಪಿಸುತ್ತೇನೆ. ನೀವೆಲ್ಲರೂ ಪೂರ್ಣ ಉತ್ಸಾಹದಿಂದ ಮತ್ತು ಯಾವುದೇ ಉದ್ವೇಗವಿಲ್ಲದೆ ಆಡಬೇಕು. ಎಲ್ಲರೂ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲಿದ್ದು, ಪದಕ ಗೆಲ್ಲುವುದು ಖಚಿತವಾಗಿದೆ. ನಿಮ್ಮೆಲ್ಲರಿಗೂ ಅನೇಕ ಶುಭಾಶಯಗಳು!

ಸಲೀಮಾ ಟೆಟೆ: ಧನ್ಯವಾದಗಳು ಸರ್.

ನಿರೂಪಕರು: ಸರ್, ಶರ್ಮಿಳಾ ಹರಿಯಾಣದವರು.  ಪ್ಯಾರಾ-ಅಥ್ಲೆಟಿಕ್ಸ್‌ನಲ್ಲಿ ಶಾಟ್‌ಪುಟ್ ಆಟಗಾರ್ತಿ.

ಶರ್ಮಿಳಾ: ನಮಸ್ತೆ, ಸರ್.

ಪ್ರಧಾನಿ: ನಮಸ್ತೆ, ಶರ್ಮಿಳಾ ಜೀ. ನೀವು ಹರಿಯಾಣದವರು ಮತ್ತು ಹರಿಯಾಣ ಕ್ರೀಡೆಗಳಿಗೆ ಹೆಸರುವಾಸಿಯಾಗಿದೆ. ನೀವು 34ನೇ ವಯಸ್ಸಿನಲ್ಲಿ ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದೀರಿ ಮತ್ತು ಎರಡು ವರ್ಷಗಳಲ್ಲಿ ನೀವು ಚಿನ್ನದ ಪದಕವನ್ನು ಗೆದ್ದಿದ್ದೀರಿ. ನಾನು ಈ ಪವಾಡದ ಬಗ್ಗೆ ತಿಳಿಯಲು ಬಯಸುತ್ತೇನೆ? ನಿಮಗೆ ಸ್ಫೂರ್ತಿ ಏನು?

ಶರ್ಮಿಳಾ: ನಾನು ಹರಿಯಾಣದ ಮಹೇಂದ್ರಗಢ ಜಿಲ್ಲೆಯ ರೇವಾರಿಯವಳು. ನನ್ನ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೇನೆ ಸರ್. ನನಗೆ ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಇತ್ತು, ಆದರೆ ನನಗೆ ಅವಕಾಶಗಳು ಸಿಗಲಿಲ್ಲ. ನನ್ನ ಕುಟುಂಬ ತುಂಬಾ ಬಡವಾಗಿತ್ತು. ನನ್ನ ತಾಯಿ ಕುರುಡರಾಗಿದ್ದರು. ನನಗೆ ಮೂವರು ಸಹೋದರಿಯರು ಮತ್ತು ಒಬ್ಬ ಸಹೋದರ ಇದ್ದಾರೆ. ನಾವು ತುಂಬಾ ಬಡವರಾಗಿದ್ದೆವು ಸರ್. ನನಗೆ ಚಿಕ್ಕ ವಯಸ್ಸಿನಲ್ಲೇ ಮದುವೆಯಾಯಿತು. ನನ್ನ ಪತಿ ಕೆಟ್ಟವನಾಗಿದ್ದನು ಮತ್ತು ಅವನ ಕೈಯಲ್ಲಿ ನಾನು ದೌರ್ಜನ್ಯವನ್ನು ಎದುರಿಸಬೇಕಾಯಿತು. ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರೂ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಾನು ಮತ್ತು ನನ್ನ ಹೆಣ್ಣುಮಕ್ಕಳು ತುಂಬಾ ಕಷ್ಟಪಟ್ಟೆವು ನಂತರ ನನ್ನ ಪೋಷಕರು ನನ್ನನ್ನು ಮನೆಗೆ ಕರೆತಂದರು. ನಾನು ಕಳೆದ ಆರು ವರ್ಷಗಳಿಂದ ನನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದೇನೆ. ಆದರೆ ನನಗೆ ಬಾಲ್ಯದಿಂದಲೂ ಏನಾದರೂ ಮಾಡಬೇಕು  ಎನ್ನವ ಆಸೆ ಇತ್ತು. ಆದರೆ ನನಗೆ ಯಾವುದೇ ದಾರಿ ಸಿಗಲಿಲ್ಲ ಸರ್. ನನ್ನ ಎರಡನೇ ಮದುವೆಯ ನಂತರ ನಾನು ಕ್ರೀಡೆಯಲ್ಲಿ ವೃತ್ತಿಜೀವನವನ್ನು ಕಂಡೆ. ನಮ್ಮ ಸಂಬಂಧಿ ತೆಕಚಂದ್ ಭಾಯಿ ಇದ್ದಾರೆ, ಅವರು ಫ್ಲ್ಯಾಗ್‌ ಬೇರರ್‌ ಆಗಿದ್ದರು. ಅವರು ನನಗೆ ಸಾಕಷ್ಟು ಬೆಂಬಲ ನೀಡಿದರು ಮತ್ತು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ನಾಲ್ಕು ಗಂಟೆಗಳ ಕಾಲ ನನಗೆ ತೀವ್ರ ತರಬೇತಿ ನೀಡಿದರು. ನಾನು ಅವರಿಗೆ ತುಂಬಾ ಋಣಿಯಾಗಿದ್ದು, ಎರಡೇ ವರ್ಷದಲ್ಲಿ ಅವರ ಕಾರಣದಿಂದಲೇ ನನಗೆ ಚಿನ್ನದ ಪದಕ ಸಿಕ್ಕಿದ್ದು.

ಪ್ರಧಾನಿ: ಶರ್ಮಿಳಾ ಜೀ, ನಿಮ್ಮ ಜೀವನದಲ್ಲಿ ನೀವು ತುಂಬಾ ಕಷ್ಟಗಳನ್ನು ಅನುಭವಿಸಬೇಕಾಯಿತು. ನಿಮ್ಮ ಜಾಗದಲ್ಲಿ  ಬೇರೆ ಯಾರಾದರೂ ಇದ್ದಿದ್ದರೆ ಕೈ ಚೆಲ್ಲುತ್ತಿದ್ದರು, ಆದರೆ ನೀವು ಹಾಗೆ ಮಾಡಲಿಲ್ಲ. ಶರ್ಮಿಳಾ ಜೀ, ನೀವು ಇಡೀ ದೇಶಕ್ಕೆ ಮಾದರಿ. ನಿಮಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನೀವು ಹೇಳಿದಂತೆ ಅವರಿಗೂ ಕ್ರೀಡೆಯಲ್ಲಿ ಆಸಕ್ತಿ ಇದೆ. ದೇವಿಕಾ ಅವರೂ ಆಸಕ್ತಿ ವಹಿಸಿ ನಿಮ್ಮ ಆಟದ ಬಗ್ಗೆ ಕೇಳುತ್ತಾರೆಯೇ? ನಿಮ್ಮ ಹೆಣ್ಣುಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆ?

ಶರ್ಮಿಳಾ: ಸರ್, ಹಿರಿಯ ಮಗಳು ಜಾವೆಲಿನ್‌ನಲ್ಲಿದ್ದು, ಶೀಘ್ರದಲ್ಲೇ ಅಂಡರ್-14 ನಲ್ಲಿ ಆಡುತ್ತಾಳೆ. ಅವಳು ಉತ್ತಮ ಆಟಗಾರ್ತಿಯಾಗುತ್ತಾಳೆ. ಹರಿಯಾಣದಲ್ಲಿ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಡೆದಾಗ ಗೊತ್ತಾಗಲಿದೆ. ನನ್ನ ಕಿರಿಯ ಮಗಳು ಟೇಬಲ್ ಟೆನ್ನಿಸ್ ಆಡುತ್ತಾಳೆ. ನನ್ನ ಮಕ್ಕಳನ್ನು ಕ್ರೀಡೆಗೆ ಕರೆತರುವ ಮೂಲಕ ಅವರ ಜೀವನವನ್ನು ಉತ್ತಮಗೊಳಿಸಲು ನಾನು ಬಯಸುತ್ತೇನೆ, ಇದರಿಂದ ಅವರು ನಾನು ಅನುಭವಿಸಿದಂತ ತೊಂದರೆಗಳಿಗೆ ಒಳಗಾಗಬಾರದು.

ಪ್ರಧಾನಿ: ಶರ್ಮಿಳಾಜೀ, ನಿಮ್ಮ ತರಬೇತುದಾರರಾದ ತೇಕಚಂದ್‌ಜಿ ಪ್ಯಾರಾಲಿಂಪಿಯನ್ ಆಗಿದ್ದಾರೆ. ನೀವು ಅವರಿಂದ ಬಹಳಷ್ಟು ಕಲಿತಿರಬೇಕು.

ಶರ್ಮಿಳಾ: ಹೌದು ಸರ್. ಅವರು ನನಗೆ ಸ್ಫೂರ್ತಿ ಮತ್ತು ನಾಲ್ಕು-ನಾಲ್ಕು ಗಂಟೆಗಳ ಕಾಲ ಅಭ್ಯಾಸ ಮಾಡಿಸಿದರು. ನಾನು ಸ್ಟೇಡಿಯಂಗೆ ಹೋಗದಿದ್ದಾಗ ಬಲವಂತವಾಗಿ ಕರೆದುಕೊಂಡು ಹೋಗುತ್ತಿದ್ದರು. ನಾನು ದಣಿದಿರುತ್ತಿದ್ದೆ, ಆದರೆ ಅವರು ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳದಂತೆ ನನ್ನನ್ನು ಪ್ರೇರೇಪಿಸಿದರು. ಉತ್ತಮ ಫಲಿತಾಂಶಕ್ಕಾಗಿ ನನ್ನ ಎಲ್ಲಾ ಪ್ರಯತ್ನಗಳನ್ನು ಮಾಡುವಂತೆ ಅವರು ಯಾವಾಗಲೂ ನನಗೆ ಹೇಳುತ್ತಿದ್ದರು.

ಪ್ರಧಾನಮಂತ್ರಿ: ಶರ್ಮಿಳಾ ಜೀ, ನೀವು ಕ್ರೀಡೆಯನ್ನು ತೆಗೆದುಕೊಳ್ಳಲು ನಿರ್ಧರಿಸಿದಾಗ, ಆ ವಯಸ್ಸಿನಲ್ಲಿ ಅನೇಕರು ಕಷ್ಟಪಡುತ್ತಾರೆ. ಗೆಲುವಿನ ಉತ್ಸಾಹವಿದ್ದರೆ ಯಾವ ಗುರಿಯೂ ಅಸಾಧ್ಯವಲ್ಲ ಎಂಬುದನ್ನು ಸಾಬೀತು ಪಡಿಸಿದ್ದೀರಿ. ಉತ್ಸಾಹವಿದ್ದರೆ ಪ್ರತಿ ಸವಾಲು ಸೋಲುತ್ತದೆ.  ಕ್ರೀಡೆಗಾಗಿ ನಿಮ್ಮ ಸಮರ್ಪಣೆ  ಇಡೀ ದೇಶಕ್ಕೆ ಸ್ಫೂರ್ತಿ ನೀಡುತ್ತದೆ. ನಿಮಗೆ ಅನೇಕ ಶುಭಾಶಯಗಳು! ಮತ್ತು ನಿಮ್ಮ ಹೆಣ್ಣುಮಕ್ಕಳಿಗಾಗಿ ಕಾಣುವ ನಿಮ್ಮ ಕನಸು ಖಂಡಿತವಾಗಿಯೂ ಈಡೇರುತ್ತದೆ. ನಿಮ್ಮ ಕೆಲಸ ಮಾಡುವ ಉತ್ಸಾಹದಿಂದಾಗಿ, ನಿಮ್ಮ ಹೆಣ್ಣುಮಕ್ಕಳ ಜೀವನವು ಅಷ್ಟೇ ಉಜ್ವಲವಾಗುತ್ತದೆ. ನಿಮಗೆ ಅನೇಕ ಶುಭಾಶಯಗಳು ಮತ್ತು ನಿಮ್ಮ ಮಕ್ಕಳಿಗೆ ಆಶೀರ್ವಾದಗಳು!

ನಿರೂಪಕರು: ಹ್ಯಾವ್ಲಾಕ್‌ನಿಂದ ಶ್ರೀ. ಡೇವಿಡ್ ಬೆಕ್‌ಹ್ಯಾಮ್. ಅವರು ಅಂಡಮಾನ್ ಮತ್ತು ನಿಕೋಬಾರ್‌ನವರು ಮತ್ತು ಅವರು ಸೈಕ್ಲಿಂಗ್‌ನಲ್ಲಿದ್ದಾರೆ.

ಡೇವಿಡ್: ನಮಸ್ತೆ, ಸರ್.

ಪ್ರಧಾನಿ: ನಮಸ್ತೆ, ಡೇವಿಡ್. ನೀವು ಹೇಗಿದ್ದೀರಿ?

ಡೇವಿಡ್: ನಾನು ಚೆನ್ನಾಗಿದ್ದೇನೆ ಸರ್.

ಪ್ರಧಾನಿ: ಡೇವಿಡ್, ನಿಮ್ಮ ಹೆಸರು ಬಹಳ ಪ್ರಸಿದ್ಧ ಫುಟ್ಬಾಲ್ ಆಟಗಾರರದ್ದಾಗಿದೆ. ಆದರೆ ನೀವು ಸೈಕ್ಲಿಂಗ್ ಮಾಡುತ್ತೀರಿ. ಫುಟ್ಬಾಲ್ ಆಡಲು ಜನರು ನಿಮಗೆ ಸಲಹೆ ನೀಡುತ್ತಾರೆಯೇ? ನೀವು ವೃತ್ತಿಪರವಾಗಿ ಫುಟ್ಬಾಲ್ ಆಡಬೇಕೆಂದು ಅನ್ನಿಸಿದೆಯೇ ಅಥವಾ ಸೈಕ್ಲಿಂಗ್ ನಿಮ್ಮ ಮೊದಲ ಆಯ್ಕೆಯಾಗಿದೆ ಎಂದು ಎಂದಾದರೂ ಯೋಚಿಸಿದ್ದೀರಾ?

ಡೇವಿಡ್: ನಾನು ವೃತ್ತಿಪರವಾಗಿ ಫುಟ್ಬಾಲ್ ಆಡಲು ಆಸಕ್ತಿ ಹೊಂದಿದ್ದೆ. ಆದರೆ ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ನಮಗೆ ಫುಟ್‌ಬಾಲಿಗೆ ಅವಕಾಶ ಇರಲಿಲ್ಲ. ಹಾಗಾಗಿ ಫುಟ್ಬಾಲ್ ಕಡೆ ಹೋಗಲು ಸಾಧ್ಯವಾಗಲಿಲ್ಲ.

ಪ್ರಧಾನಿ: ಡೇವಿಡ್ ಜೀ, ನಿಮ್ಮ ತಂಡದಲ್ಲಿ ಪ್ರಸಿದ್ಧ ಫುಟ್ಬಾಲ್ ಆಟಗಾರನ ಹೆಸರನ್ನು ಹೊಂದಿರುವ ಇನ್ನೊಬ್ಬ ಆಟಗಾರರಿದ್ದಾರೆ ಎಂದು ನನಗೆ ಹೇಳಲಾಗಿದೆ. ನೀವಿಬ್ಬರೂ ಬಿಡುವಿನ ವೇಳೆಯಲ್ಲಿ ಫುಟ್ಬಾಲ್ ಆಡುತ್ತೀರಾ?

ಡೇವಿಡ್: ನಾವು ಫುಟ್ಬಾಲ್ ಆಡುವುದಿಲ್ಲ ಏಕೆಂದರೆ ನಾವು ಟ್ರ್ಯಾಕ್ ಸೈಕ್ಲಿಂಗ್ನಲ್ಲಿ ನಮ್ಮ ತರಬೇತಿಯ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ. ನಾವು ಪೂರ್ಣ ಸಮಯ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದೇವೆ.

ಪ್ರಧಾನಿ: ಡೇವಿಡ್ ಜೀ, ನಿಮ್ಮ ಜೀವನದಲ್ಲಿ ನೀವು ಅನೇಕ ಕಷ್ಟಗಳನ್ನು ಎದುರಿಸಿದ್ದೀರಿ ಆದರೆ ನೀವು ಎಂದಿಗೂ ಸೈಕ್ಲಿಂಗನ್ನು ಬಿಡಲಿಲ್ಲ ಮತ್ತು ಅದಕ್ಕೆ ಸಾಕಷ್ಟು ಪ್ರೇರಣೆಯ ಅಗತ್ಯವಿದೆ. ನಿಮ್ಮನ್ನು ಪ್ರೇರೇಪಿಸಿಕೊಳ್ಳುವುದು ಸ್ವತಃ ಒಂದು ಅದ್ಭುತವಾಗಿದೆ, ನೀವು ಅದನ್ನು ಹೇಗೆ ಮಾಡುತ್ತೀರಿ?

ಡೇವಿಡ್: ನಾನು ಮುಂದೆ ಬರಬೇಕು,  ಪದಕಗಳನ್ನು ಗೆಲ್ಲಬೇಕು ಎಂದು ನನ್ನ ಕುಟುಂಬ ಸದಸ್ಯರು ಪ್ರೇರೇಪಿಸುತ್ತಾರೆ.  ನಾನು ಭಾರತದ ಹೊರಗೆ ಆಡುವ ಮೂಲಕ ಪದಕ ತಂದರೆ ಅಂಡಮಾನ್‌ನಲ್ಲಿ ಅದು ದೊಡ್ಡ ಗೌರವವಾಗುವುದು.

ಪ್ರಧಾನಿ: ಡೇವಿಡ್ ಜೀ, ನೀವು ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನೂ ಗೆದ್ದಿದ್ದೀರಿ. ಖೇಲೋ ಇಂಡಿಯಾ ಗೇಮ್ಸ್ ನಿಮಗೆ ಹೇಗೆ ಸಹಾಯ ಮಾಡಿತು? ಈ ಗೆಲುವು ನಿಮ್ಮ ಸಂಕಲ್ಪವನ್ನು ಹೇಗೆ ಬಲಪಡಿಸಿತು?

ಡೇವಿಡ್: ನಾನು ನನ್ನ ರಾಷ್ಟ್ರೀಯ ದಾಖಲೆಯನ್ನು ಎರಡು ಬಾರಿ ಮುರಿದಾಗ ಅದು ಮೊದಲ ಬಾರಿಗೆ. ‘ಮನ್ ಕಿ ಬಾತ್’ಸಂಚಿಕೆಯಲ್ಲಿ ನೀವು ನನ್ನ ಬಗ್ಗೆ ಪ್ರಸ್ತಾಪಿಸಿದಾಗ ನನಗೆ ತುಂಬಾ ಸಂತೋಷವಾಯಿತು. ನನಗೆ ಪ್ರೇರಣೆ ಅನಿಸಿತು. ನಾನು ನಿಕೋಬಾರ್ ಮತ್ತು ಅಂಡಮಾನ್‌ನ ಆಟಗಾರ ಮತ್ತು ನಾನು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ. ನನ್ನ ಅಂಡಮಾನ್ ತಂಡವು ನಾನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಆಟಗಳಿಂದ ಪದವಿ ಪಡೆದಿದ್ದೇನೆ ಎಂದು ಹೆಮ್ಮೆಪಡುತ್ತದೆ.

ಪ್ರಧಾನಿ: ಡೇವಿಡ್ ನೋಡಿ, ನೀವು ಅಂಡಮಾನ್-ನಿಕೋಬಾರ್ ಅನ್ನು ನೆನಪಿಸಿದಿರಿ ಮತ್ತು ನೀವು ದೇಶದ ಅತ್ಯಂತ ಸುಂದರವಾದ ಸ್ಥಳದಿಂದ ಬಂದಿದ್ದೀರಿ ಎಂದು ನಾನು ಹೇಳುತ್ತೇನೆ. ನಿಕೋಬಾರ್‌ಗೆ ಅಪ್ಪಳಿಸಿದ ಸುನಾಮಿಯಲ್ಲಿ ನಿಮ್ಮ ತಂದೆಯನ್ನು ಕಳೆದುಕೊಂಡಾಗ ನಿಮಗೆ ಒಂದು ಅಥವಾ ಒಂದೂವರೆ ವರ್ಷ ವಯಸ್ಸಿರಬಹುದು. ಹತ್ತು ವರ್ಷದ ನಂತರ ನೀವು ನಿಮ್ಮ ತಾಯಿಯನ್ನು ಕಳೆದುಕೊಂಡಿದ್ದೀರಿ. ನಾನು 2018 ರಲ್ಲಿ ನಿಕೋಬಾರ್‌ಗೆ ಹೋದಾಗ ನಾವು ಕಳೆದುಕೊಂಡ ಎಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸಲು ನಾನು ಸುನಾಮಿ ಸ್ಮಾರಕಕ್ಕೆ ಭೇಟಿ ನೀಡಿರುವುದು ನೆನಪಿದೆ. ಅನೇಕ ಕಷ್ಟಗಳ ನಡುವೆಯೂ ನಿಮ್ಮನ್ನು ಪ್ರೋತ್ಸಾಹಿಸಿದ ನಿಮ್ಮ ಕುಟುಂಬಕ್ಕೆ ನಾನು ನಮಸ್ಕರಿಸುತ್ತೇನೆ. ದೇಶದ ಪ್ರತಿಯೊಬ್ಬ ಪ್ರಜೆಯ ಆಶೀರ್ವಾದ ನಿಮ್ಮೊಂದಿಗಿದೆ. ನಿಮಗೆ ಅನೇಕ ಶುಭಾಶಯಗಳು!

ಡೇವಿಡ್: ಧನ್ಯವಾದಗಳು ಸರ್.

ಸ್ನೇಹಿತರೇ,

ಮೊದಲೇ ಹೇಳಿದಂತೆ ನಿಮ್ಮನ್ನು ಭೇಟಿಯಾಗಿ ಎಲ್ಲರನ್ನೂ ಖುದ್ದಾಗಿ ಮಾತನಾಡಿಸಿದ್ದರೆ ಚೆನ್ನಾಗಿತ್ತು. ಆದರೆ ನಾನು ಹೇಳಿದಂತೆ, ನಿಮ್ಮಲ್ಲಿ ಅನೇಕರು ಪ್ರಪಂಚದ ವಿವಿಧ ದೇಶಗಳಲ್ಲಿ ತರಬೇತಿ ಪಡೆಯುತ್ತಿರುವಿರಿ ಮತ್ತು ನಡೆಯುತ್ತಿರುವ ಸಂಸತ್ತಿನ ಅಧಿವೇಶನದಿಂದಾಗಿ ನಾನು ತುಂಬಾ ಕಾರ್ಯನಿರತವಾಗಿದ್ದೇನೆ ಮತ್ತು ಆದ್ದರಿಂದ ಈ ಬಾರಿ ನಿಮ್ಮನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಆದರೆ, ನೀವು ಹಿಂತಿರುಗಿದಾಗ ನಾವು ಖಂಡಿತವಾಗಿಯೂ ನಿಮ್ಮ ವಿಜಯವನ್ನು ಒಟ್ಟಿಗೆ ಆಚರಿಸುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇಡೀ ದೇಶ ನೀರಜ್ ಚೋಪ್ರಾ ಅವರ ಮೇಲೆ ಕೂಡಾ ಕಣ್ಣಿಟ್ಟಿದೆ.

ಸ್ನೇಹಿತರೇ,

ಭಾರತೀಯ ಕ್ರೀಡಾ ಇತಿಹಾಸದಲ್ಲಿ ಇದು ಅತ್ಯಂತ ಮಹತ್ವದ ಅವಧಿಯಾಗಿದೆ. ಇಂದು ನಿಮ್ಮಂತಹ ಆಟಗಾರರ ಉತ್ಸಾಹ ಹೆಚ್ಚಾಗಿದೆ, ನಿಮ್ಮ ತರಬೇತಿಯೂ ಉತ್ತಮವಾಗುತ್ತಿದೆ ಮತ್ತು ಕ್ರೀಡೆಯತ್ತ ದೇಶದ ವಾತಾವರಣವೂ ಅದ್ಭುತವಾಗಿದೆ. ನೀವು ಹೊಸ ಎತ್ತರಗಳನ್ನು ಏರುತ್ತಿದ್ದೀರಿ ಮತ್ತು ಹೊಸ ದಾಖಲೆಗಳನ್ನು ರಚಿಸುತ್ತಿದ್ದೀರಿ. ನಿಮ್ಮಲ್ಲಿ ಹಲವರು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಸತತವಾಗಿ ಶ್ಲಾಘನೀಯ ಪ್ರದರ್ಶನ ನೀಡುತ್ತಿದ್ದಾರೆ. ಇಡೀ ದೇಶವು ಇಂದು ಈ ಅಭೂತಪೂರ್ವ ವಿಶ್ವಾಸವನ್ನು ಅನುಭವಿಸುತ್ತಿದೆ. ಮತ್ತು ಸ್ನೇಹಿತರೇ, ಈ ಬಾರಿ ನಮ್ಮ ಕಾಮನ್‌ವೆಲ್ತ್ ತಂಡವು ಹಲವು ವಿಧಗಳಲ್ಲಿ ಬಹಳ ವಿಶೇಷವಾಗಿದೆ. ಅನುಭವ ಮತ್ತು ಹೊಸ ಶಕ್ತಿ ಎರಡರ ಅದ್ಭುತ ಸಂಯೋಜನೆಯನ್ನು ನಾವು ಹೊಂದಿದ್ದೇವೆ. ಈ ತಂಡದಲ್ಲಿ 14 ವರ್ಷದ ಅನ್ಹತ್, 16 ವರ್ಷದ ಸಂಜನಾ ಸುಶೀಲ್ ಜೋಶಿ, ಶೆಫಾಲಿ ಮತ್ತು ಬೇಬಿ ಸಹನಾ ಇದ್ದಾರೆ. 17-18 ವರ್ಷದ ಈ ಮಕ್ಕಳು ನಮ್ಮ ದೇಶಕ್ಕೆ ಹೆಮ್ಮೆ ತರಲಿದ್ದಾರೆ. ನೀವು ಕ್ರೀಡೆಯಲ್ಲಿ ಮಾತ್ರವಲ್ಲದೆ ಜಾಗತಿಕ ವೇದಿಕೆಯಲ್ಲಿ ನವ ಭಾರತವನ್ನು ಪ್ರತಿನಿಧಿಸುತ್ತಿದ್ದೀರಿ. ಭಾರತದ ಮೂಲೆ ಮೂಲೆಯೂ ಕ್ರೀಡಾ ಪ್ರತಿಭೆಗಳಿಂದ ತುಂಬಿದೆ ಎನ್ನುವುದನ್ನು ನಿಮ್ಮಂತಹ ಯುವ ಆಟಗಾರರು ಸಾಬೀತುಪಡಿಸುತ್ತಿದ್ದಾರೆ.

ಸ್ನೇಹಿತರೇ,

ಸ್ಫೂರ್ತಿ ಮತ್ತು ಪ್ರೋತ್ಸಾಹಕ್ಕಾಗಿ ನೀವು ಹೊರಗೆ ನೋಡಬೇಕಾಗಿಲ್ಲ. ಮನ್‌ಪ್ರೀತ್‌ನಂತಹ ನಿಮ್ಮ ಸಹ ಆಟಗಾರರನ್ನು ನೀವು ನೋಡಿದಾಗ, ನಿಮ್ಮ ಉತ್ಸಾಹವು ಅನೇಕ ಪಟ್ಟು ಹೆಚ್ಚಾಗುತ್ತದೆ. ಅವರ ಕಾಲಿನ ಮೂಳೆ ಮುರಿತವು ರನ್ನರ್‌ ಬದಲಾಗಿ ಶಾಟ್‌ಪುಟ್‌ನಲ್ಲಿ ಹೊಸ ಪಾತ್ರಕ್ಕೆ ಬದಲಾಯಿಸುವಂತೆ ಮಾಡಿತು ಮತ್ತು ಆ ಕ್ರೀಡೆಯಲ್ಲಿ ಅವರು ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿದ್ದಾರೆ. ಆಟಗಾರರು ಯಾವುದೇ ಸವಾಲಿಗೆ ಮಣಿಯದೆ, ಯಾವಾಗಲೂ ಚಲನೆಯಲ್ಲಿರುತ್ತಾನೆ ಮತ್ತು ತನ್ನ ಗುರಿಗಾಗಿ ಸಮರ್ಪಿತನಾಗಿರುತ್ತಾನೆ. ಆದ್ದರಿಂದ, ಮೊದಲ ಬಾರಿಗೆ ಅಂತರಾಷ್ಟ್ರೀಯ ರಂಗಕ್ಕೆ ಬರುತ್ತಿರುವವರಿಗೆ ನಾನು ಹೇಳುತ್ತೇನೆ, ನೆಲ ಬದಲಾಗಿದೆ, ವಾತಾವರಣವೂ ಬದಲಾಗಿದೆ, ಆದರೆ ನಿಮ್ಮ ಸ್ವಭಾವ ಬದಲಾಗಿಲ್ಲ, ನಿಮ್ಮ ಪರಿಶ್ರಮ ಬದಲಾಗಿಲ್ಲ. ತ್ರಿವರ್ಣ ಧ್ವಜ ಹಾರುವುದನ್ನು ನೋಡುವುದು ಮತ್ತು ರಾಷ್ಟ್ರಗೀತೆ ನುಡಿಸುವುದನ್ನು ಕೇಳುವುದು ಗುರಿಯಾಗಿದೆ. ಆದ್ದರಿಂದ, ನೀವು ಒತ್ತಡವನ್ನು ತೆಗೆದುಕೊಳ್ಳಬೇಕಾಗಿಲ್ಲ ಮತ್ತು ಉತ್ತಮ ಪ್ರದರ್ಶನದೊಂದಿಗೆ ನೀವು ಪ್ರಭಾವವನ್ನು ಬೀರಬೇಕಾಗುತ್ತದೆ. ದೇಶವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಸಮಯದಲ್ಲಿ ನೀವು ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಹೋಗುತ್ತಿದ್ದೀರಿ. ಈ ಸಂದರ್ಭದಲ್ಲಿ, ನಿಮ್ಮ ಅತ್ಯುತ್ತಮ ಪ್ರದರ್ಶನದ ರೂಪದಲ್ಲಿ ನೀವು ದೇಶಕ್ಕೆ ಉಡುಗೊರೆಯನ್ನು ನೀಡುತ್ತೀರಿ. ಈ ಗುರಿಯೊಂದಿಗೆ, ನೀವು ಮೈದಾನಕ್ಕೆ ಬಂದಾಗ ನಿಮ್ಮ ಎದುರಾಳಿ ಯಾರು ಎನ್ನುವುದು ಮುಖ್ಯವಾಗುವುದಿಲ್ಲ.

ಸ್ನೇಹಿತರೇ,

ನೀವೆಲ್ಲರೂ ವಿಶ್ವದ ಅತ್ಯುತ್ತಮ ಸೌಲಭ್ಯಗಳೊಂದಿಗೆ ಉತ್ತಮ ತರಬೇತಿ ಪಡೆದಿದ್ದೀರಿ. ಆ ತರಬೇತಿ ಮತ್ತು ನಿಮ್ಮ ಇಚ್ಛಾಶಕ್ತಿಯನ್ನು ಮೈಗೂಡಿಸಿಕೊಳ್ಳುವ ಸಮಯ ಇದು. ನೀವು ಇಲ್ಲಿಯವರೆಗೆ ಸಾಧಿಸಿರುವುದು ಖಂಡಿತವಾಗಿಯೂ ಸ್ಫೂರ್ತಿದಾಯಕವಾಗಿದೆ. ಆದರೆ ಈಗ ನೀವು ಹೊಸ ದಾಖಲೆಗಳತ್ತ ಹೊಸದಾಗಿ ದೃಷ್ಟಿ ಹರಿಸಬೇಕಾಗಿದೆ. ನೀವು ನಿಮ್ಮ ಅತ್ಯುತ್ತಮ ಪ್ರದರ್ಶನ ನೀಡುತ್ತೀರಿ; ಇದನ್ನು ದೇಶವಾಸಿಗಳು ನಿಮ್ಮಿಂದ ನಿರೀಕ್ಷಿಸುತ್ತಾರೆ. ನೀವು ದೇಶದವರಿಂದ ಶುಭಾಶಯಗಳು ಮತ್ತು ಆಶೀರ್ವಾದಗಳನ್ನು ಹೊಂದಿದ್ದೀರಿ. ಮತ್ತು ನಾನು ನಿಮಗೆ ಶುಭ ಹಾರೈಸುತ್ತೇನೆ! ತುಂಬಾ ಧನ್ಯವಾದಗಳು ಮತ್ತು ನೀವು ವಿಜಯಶಾಲಿಯಾದಾಗ, ಇಲ್ಲಿಗೆ ಬರಲು ನಾನು ನಿಮ್ಮನ್ನು ಆಹ್ವಾನಿಸುತ್ತೇನೆ. ನಿಮಗೆ ಶುಭ ಹಾರೈಕೆಗಳು! ಧನ್ಯವಾದಗಳು!

  • दिग्विजय सिंह राना September 20, 2024

    हर हर महादेव
  • JBL SRIVASTAVA June 02, 2024

    मोदी जी 400 पार
  • MLA Devyani Pharande February 17, 2024

    जय हो
  • Vaishali Tangsale February 14, 2024

    🙏🏻🙏🏻🙏🏻🙏🏻
  • ज्योती चंद्रकांत मारकडे February 12, 2024

    जय हो
  • Bharat mathagi ki Jai vanthay matharam jai shree ram Jay BJP Jai Hind September 16, 2022


  • Anil Nama sudra September 08, 2022

    anil
  • Chowkidar Margang Tapo August 25, 2022

    vande, mataram, Jai Mata Di
  • G.shankar Srivastav August 08, 2022

    नमस्ते
  • johargazi August 04, 2022

    Johar Johar Arshad Ghazi main khud hun mera photo bhi chhoda hai Mera Gmail bhi chhoda hai lekin mera ID banakar UN log chori karke Aisa bolata sidha dhandha kar raha hai jo bhi hai vah ladka bhi Kolkata ka aaega usko pakado jaldi aur uska aadami jitna aadami milkar kam Karta hai India ka paper bhi bhejta hai kisi Ko chhodane ka nahin aur inquiry karne ka main pura detail de dega
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves $2.7 billion outlay to locally make electronics components

Media Coverage

Cabinet approves $2.7 billion outlay to locally make electronics components
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಮಾರ್ಚ್ 2025
March 29, 2025

Citizens Appreciate Promises Kept: PM Modi’s Blueprint for Progress