"ಕೇವಲ 6 ವರ್ಷಗಳಲ್ಲಿ ಕೃಷಿ ಬಜೆಟ್ ಅನ್ನು ಹಲವು ಪಟ್ಟು ಹೆಚ್ಚಿಸಲಾಗಿದೆ. ಕಳೆದ 7 ವರ್ಷಗಳಲ್ಲಿ ರೈತರ ಕೃಷಿ ಸಾಲ ಪೂರೈಕೆಯೂ ಎರಡೂವರೆ ಪಟ್ಟು ಹೆಚ್ಚಾಗಿದೆ" ಎಂದು ಹೇಳಿದರು
"2023 ಅನ್ನು ʻಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷʼವೆಂದು ಗುರುತಿಸಿರುವುದರಿಂದ, ಕಾರ್ಪೊರೇಟ್ ಜಗತ್ತು ಭಾರತೀಯ ಸಿರಿಧಾನ್ಯಗಳನ್ನು ಬ್ರಾಂಡಿಂಗ್ ಮಾಡಲು ಮತ್ತು ಉತ್ತೇಜಿಸಲು ಮುಂದೆ ಬರಬೇಕು"
"ಕೃತಕ ಬುದ್ಧಿಮತ್ತೆಯು 21 ನೇ ಶತಮಾನದಲ್ಲಿ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಪ್ರವೃತ್ತಿಯನ್ನು ಸಂಪೂರ್ಣವಾಗಿ ಬದಲಾಯಿಸಲಿದೆ"
"ಕಳೆದ 3-4 ವರ್ಷಗಳಲ್ಲಿ, ದೇಶದಲ್ಲಿ 700 ಕ್ಕೂ ಹೆಚ್ಚು ಕೃಷಿ ನವೋದ್ಯಮಗಳನ್ನು ಸ್ಥಾಪಿಸಲಾಗಿದೆ"
"ಸಹಕಾರಿ ಸಂಘಗಳಿಗೆ ಸಂಬಂಧಿಸಿದ ಹೊಸ ಸಚಿವಾಲಯವನ್ನು ಸರ್ಕಾರ ರಚಿಸಿದೆ. ಸಹಕಾರಿ ಸಂಘಗಳನ್ನು ಯಶಸ್ವಿ ವ್ಯಾಪಾರ ಉದ್ಯಮವನ್ನಾಗಿ ಪರಿವರ್ತಿಸುವುದು ಹೇಗೆ ಎಂಬುದು ನಿಮ್ಮ ಗುರಿಯಾಗಿರಬೇಕು"

ನಮಸ್ಕಾರ!

ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿ ಮಿತ್ರರೆ, ರಾಜ್ಯ ಸರ್ಕಾರಗಳ ಪ್ರತಿನಿಧಿಗಳೇ, ಕೈಗಾರಿಕಾ ಮತ್ತು ಶಿಕ್ಷಣ ಕ್ಷೇತ್ರದ ಸಹೋದ್ಯೋಗಿಗಳೇ, ನನ್ನೆಲ್ಲಾ ರೈತ ಸಹೋದರ, ಸಹೋದರಿಯರೇ, ಕೃಷಿ ವಿಜ್ಞಾನ ಕೇಂದ್ರಗಳ ಸಹೋದ್ಯೋಗಿಗಳೆ, ಇಲ್ಲಿ ಉಪಸ್ಥಿತರಿರುವ ಎಲ್ಲಾ ಗಣ್ಯರೆ,

3 ವರ್ಷಗಳ ಹಿಂದೆ ಇದೇ ದಿನ “ಪಿಎಂ ಕಿಸಾನ್ ಸಮ್ಮಾನ್ ನಿಧಿ”ಯನ್ನು ಆರಂಭಿಸಿರುವುದು ಆಹ್ಲಾದಕರ ಮತ್ತು ಸಂತೋಷದ ಕಾಕತಾಳೀಯ ದಿನವಾಗಿದೆ. ಇಂದು ಈ ಯೋಜನೆಯು ದೇಶದ ಸಣ್ಣ ರೈತರಿಗೆ ಬಹುದೊಡ್ಡ ಬೆಂಬಲವಾಗಿ ಹೊರಹೊಮ್ಮಿದೆ. ಈ ಯೋಜನೆಯಡಿ ದೇಶದ 11 ಕೋಟಿ ರೈತರಿಗೆ ಸುಮಾರು 1.45 ಲಕ್ಷ ಕೋಟಿ ರೂಪಾಯಿ ನೆರವು ನೀಡಲಾಗಿದೆ. ಈ ಯೋಜನೆಯಲ್ಲಿ ನಾವು ಬುದ್ಧಿವಂತಿಕೆಯನ್ನು ಬಳಸಬಹುದು, ಅನುಭವಿಸಬಹುದು. 10-12 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಕೇವಲ ಒಂದು ಕ್ಲಿಕ್‌ನಲ್ಲಿ ನೇರ ಹಣ ವರ್ಗಾವಣೆ ಯಾವುದೇ ಒಬ್ಬ ಭಾರತೀಯನಿಗೆ ಹೆಮ್ಮೆಯ ವಿಷಯವಾಗಿದೆ.

ಸ್ನೇಹಿತರೆ,

ಕಳೆದ 7 ವರ್ಷಗಳಲ್ಲಿ, ನಾವು ಬಿತ್ತನೆ ಬೀಜಗಳನ್ನು ಒದಗಿಸಲು ಮತ್ತು ಮಾರುಕಟ್ಟೆಯನ್ನು ಖಾತ್ರಿಪಡಿಸಿಕೊಳ್ಳಲು ಸಂಬಂಧಿಸಿದ ಅನೇಕ ಹೊಸ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದ್ದೇವೆ ಮತ್ತು ಹಳೆಯ ವ್ಯವಸ್ಥೆಗಳಿಗೆ ಸುಧಾರಣೆ ತಂದಿದ್ದೇವೆ. 6 ವರ್ಷಗಳಲ್ಲಿ ಕೃಷಿ ಬಜೆಟ್ ಹಲವು ಪಟ್ಟು ಹೆಚ್ಚಾಗಿದೆ. ಕಳೆದ 7 ವರ್ಷಗಳಲ್ಲಿ ರೈತರ ಕೃಷಿ ಸಾಲವನ್ನು ಎರಡೂವರೆ ಪಟ್ಟು ಹೆಚ್ಚಿಸಲಾಗಿದೆ. ಕೊರೊನಾ ಸಂಕಷ್ಟ ಸಂದರ್ಭದಲ್ಲೂ ವಿಶೇಷ ಅಭಿಯಾನ ನಡೆಸುವ ಮೂಲಕ 3 ಕೋಟಿ ಸಣ್ಣ ರೈತರಿಗೆ ಕೆಸಿಸಿ ಸೌಲಭ್ಯ ಕಲ್ಪಿಸಿದ್ದೇವೆ. ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ರೈತರಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಬೆಳೆಯುತ್ತಿರುವ ಸೂಕ್ಷ್ಮ ಅಥವಾ ಸಣ್ಣ ನೀರಾವರಿ ಜಾಲದಿಂದ ಸಣ್ಣ ರೈತರೂ ಲಾಭ ಪಡೆಯುತ್ತಿದ್ದಾರೆ.

ಸ್ನೇಹಿತರು,

ಈ ಎಲ್ಲಾ ಪ್ರಯತ್ನಗಳ ಫಲವಾಗಿ, ರೈತರು ಪ್ರತಿ ವರ್ಷ ದಾಖಲೆ ಪ್ರಮಾಣದಲ್ಲಿ ಕೃಷಿ ಉತ್ಪಾದನೆ ಹೆಚ್ಚಿಸುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ, ಕೃಷಿ ಉತ್ಪನ್ನಗಳ ಸಂಗ್ರಹಣೆಯಲ್ಲಿ ಹೊಸ ದಾಖಲೆ ಮಾಡಲಾಗುತ್ತಿದೆ. ಸಾವಯವ ಕೃಷಿ ಉತ್ತೇಜನದಿಂದಾಗಿ ಈಗ ಸಾವಯವ ಉತ್ಪನ್ನಗಳ ಮಾರುಕಟ್ಟೆ 11,000 ಕೋಟಿ ರೂ.ಗೆ ಏರಿಕೆ ಕಂಡಿದೆ. ಇದರ ರಫ್ತು ಕೂಡ 6 ವರ್ಷಗಳಲ್ಲಿ 2,000 ಕೋಟಿ ರೂ.ನಿಂದ 7,000 ಕೋಟಿ ರೂ.ಗೆ ಹೆಚ್ಚಿದೆ.

ಸ್ನೇಹಿತರೆ,

ಈ ವರ್ಷದ ಕೃಷಿ ಬಜೆಟ್ ಹಿಂದಿನ ವರ್ಷಗಳ ಪ್ರಯತ್ನಗಳನ್ನು ಮುಂದುವರಿಸಿದೆ ಮತ್ತು ಅವುಗಳ ಪ್ರಮಾಣವನ್ನು ಹೆಚ್ಚಿಸಿದೆ. ಕೃಷಿ ಕ್ಷೇತ್ರವನ್ನು ಆಧುನೀಕರಿಸಲು ಈ ವರ್ಷದ ಬಜೆಟ್‌ನಲ್ಲಿ 7 ಪ್ರಮುಖ ಮಾರ್ಗಗಳನ್ನು ಸೂಚಿಸಲಾಗಿದೆ.

ಮೊದಲನೆಯದು – ಗಂಗಾ ನದಿಯ ಎರಡೂ ದಡಗಳಲ್ಲಿ 5 ಕಿಮೀ ವ್ಯಾಪ್ತಿಯೊಳಗೆ ಅಭಿಯಾನದ ಮಾದರಿ(ಮಿಷನ್ ಮೋಡ್‌)ಯಲ್ಲಿ ನೈಸರ್ಗಿಕ ಕೃಷಿ ಉತ್ತೇಜಿಸುವುದು ಸರ್ಕಾರದ ಗುರಿಯಾಗಿದೆ. ಗಿಡಮೂಲಿಕೆ ಔಷಧಿ ಮತ್ತು ಹಣ್ಣು ಮತ್ತು ಹೂವುಗಳ ಕೃಷಿಗೆ ಒತ್ತು ನೀಡಲಾಗುತ್ತಿದೆ.

ಎರಡನೆಯದು - ರೈತರಿಗೆ ಕೃಷಿ ಮತ್ತು ತೋಟಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಒದಗಿಸಲಾಗುವುದು.

ಮೂರನೆಯದು - ಖಾದ್ಯ ತೈಲದ ಆಮದು ಕಡಿಮೆ ಮಾಡಲು, ಈ ವರ್ಷದ ಬಜೆಟ್‌ನಲ್ಲಿ ಮಿಷನ್ ಆಯಿಲ್ ಪಾಮ್ (ತಾಳೆಎಣ್ಣೆ ಉತ್ಪಾದನೆ) ಮತ್ತು ಎಣ್ಣೆಕಾಳುಗಳ ಉತ್ಪಾದನೆ ಬಲಪಡಿಸಲು ವಿಶೇಷ ಒತ್ತು ನೀಡಲಾಗಿದೆ.

ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಡಿ ಕೃಷಿ ಉತ್ಪನ್ನಗಳ ಸಾಗಣೆಗೆ ಹೊಸ ಸಾಗಣೆ ವ್ಯವಸ್ಥೆಗಳನ್ನು ಒದಗಿಸುವುದು ನಾಲ್ಕನೇ ಗುರಿಯಾಗಿದೆ.

ಬಜೆಟ್‌ನಲ್ಲಿ ನೀಡಿರುವ ಐದನೇ ಪರಿಹಾರವೆಂದರೆ, ಕೃಷಿ ತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ಸಂಘಟಿಸಲಾಗುವುದು ಮತ್ತು ತ್ಯಾಜ್ಯದಿಂದ ಇಂಧನ ಉತ್ಪಾದನೆಯಂತಹ ಕ್ರಮಗಳ ಮೂಲಕ ರೈತರ ಆದಾಯವನ್ನು ಹೆಚ್ಚಿಸಲಾಗುವುದು.

ಆರನೇ ಪರಿಹಾರವೆಂದರೆ, ದೇಶದ 1.5 ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳು ಸಾಮಾನ್ಯ ಬ್ಯಾಂಕ್‌ಗಳ ಸೌಲಭ್ಯಗಳನ್ನು ಪಡೆಯುತ್ತವೆ. ಇದರಿಂದ ರೈತರು ಯಾವುದೇ ಸಮಸ್ಯೆ ಎದುರಿಸಬೇಕಿಲ್ಲ.

ಮತ್ತು ಏಳನೆಯದಾಗಿ, ಕೃಷಿ ಸಂಶೋಧನೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಪಠ್ಯಕ್ರಮದಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಇಂದಿನ ಆಧುನಿಕ ಕಾಲಕ್ಕೆ ಅನುಗುಣವಾಗಿ ಬದಲಾಗಲಿದೆ.

ಸ್ನೇಹಿತರೆ,

ಇದೀಗ ಜಗತ್ತಿನಲ್ಲಿ ಆರೋಗ್ಯದ ಅರಿವು ಮತ್ತು ಕಾಳಜಿ ಹೆಚ್ಚುತ್ತಿದೆ. ಪರಿಸರ ಸ್ನೇಹಿ ಜೀವನಶೈಲಿಯ ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಹೆಚ್ಚು ಹೆಚ್ಚು ಜನರು ಅದರತ್ತ ಆಕರ್ಷಿತರಾಗುತ್ತಿದ್ದಾರೆ. ಅಂದರೆ ಅದರ ಮಾರುಕಟ್ಟೆಯೂ ಬೆಳೆಯುತ್ತಿದೆ. ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿಯ ಸಹಾಯದಿಂದ ನಾವು ಮಾರುಕಟ್ಟೆಯನ್ನು ಹಿಡಿಯಲು, ವ್ಯಾಪಕಗೊಳಿಸಲು ಪ್ರಯತ್ನಿಸಬಹುದು. ನಮ್ಮ ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳು ನೈಸರ್ಗಿಕ ಕೃಷಿಯ ಲಾಭವನ್ನು ಜನಸಾಮಾನ್ಯರಿಗೆ ಕೊಂಡೊಯ್ಯಲು ಸಂಪೂರ್ಣ ಶಕ್ತಿಯೊಂದಿಗೆ ಸಜ್ಜುಗೊಳಿಸಬೇಕಾಗಿದೆ. ನಮ್ಮ ಪ್ರತಿಯೊಂದು ಕೆವಿಕೆಗಳು ಒಂದು ಗ್ರಾಮವನ್ನು ದತ್ತು ಪಡೆಯಬಹುದು. ನಮ್ಮ ಪ್ರತಿಯೊಂದು ಕೃಷಿ ವಿಶ್ವವಿದ್ಯಾಲಯಗಳು ಮುಂದಿನ ವರ್ಷದೊಳಗೆ 100 ಅಥವಾ 500 ರೈತರನ್ನು ನೈಸರ್ಗಿಕ ಕೃಷಿಯತ್ತ ಪರಿಚಯಿಸುವ ಗುರಿ ಹೊಂದಬಹುದು.

ಸ್ನೇಹಿತರೆ,

ಇತ್ತೀಚಿನ ದಿನಗಳಲ್ಲಿ, ನಮ್ಮ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಕುಟುಂಬಗಳಲ್ಲಿ ಮತ್ತೊಂದು ಪ್ರವೃತ್ತಿ ಗೋಚರಿಸುತ್ತಿದೆ. ಅನೇಕ ಹೊಸ ವಿಷಯಗಳು ಅವರ ಡೈನಿಂಗ್ ಟೇಬಲ್ ಅನ್ನು ತಲುಪಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಅನೇಕ ಪ್ರೋಟೀನ್ ಮತ್ತು ಕ್ಯಾಲ್ಸಿಯಂಯುಕ್ತ ಆಹಾರ ಉತ್ಪನ್ನಗಳು ಈಗ ಅವರ ಡೈನಿಂಗ್ ಟೇಬಲ್‌ ಮೇಲಿರುತ್ತವೆ. ಅಂತಹ ಅನೇಕ ಉತ್ಪನ್ನಗಳು ವಿದೇಶದಿಂದ ಬರುತ್ತಿವೆ. ಅವು ಭಾರತೀಯ ಅಭಿರುಚಿಗೆ ಅನುಗುಣವಾಗಿಲ್ಲ. ವಾಸ್ತವವೆಂದರೆ, ನಮ್ಮ ರೈತರೇ ಉತ್ಪಾದಿಸುವ ಈ ಎಲ್ಲಾ ಉತ್ಪನ್ನಗಳು ಇಲ್ಲಿ ಲಭ್ಯವಿದ್ದರೂ, ನಾವು ಅವುಗಳನ್ನು ಸಮರ್ಪಕ ರೀತಿಯಲ್ಲಿ ಪ್ರಸ್ತುತಪಡಿಸಲು ಮತ್ತು ಮಾರುಕಟ್ಟೆ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ನಾವು ಅದರಲ್ಲಿಯೂ ‘ಲೋಕಲ್ ಫಾರ್ ವೋಕಲ್’ಗೆ ಆದ್ಯತೆ ನೀಡಲು ಪ್ರಯತ್ನಿಸಬೇಕು.

ಇಂತಹ ಉತ್ಪನ್ನಗಳು ಭಾರತೀಯ ಆಹಾರ ಮತ್ತು ಬೆಳೆಗಳಲ್ಲಿ ಹೇರಳವಾಗಿ ಕಂಡುಬರುತ್ತಿವೆ. ಅದು ನಮ್ಮ ರುಚಿಗೆ ಅನುಗುಣವಾಗಿವೆ. ಸಮಸ್ಯೆಯೆಂದರೆ ನಮಗೆ ಇಲ್ಲಿ ಅಷ್ಟು ಅರಿವು ಇಲ್ಲ, ಅನೇಕರಿಗೆ ಅದರ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ನಾವು ಭಾರತೀಯ ಆಹಾರವನ್ನು ಪ್ರಚಾರ ಮಾಡಲು ಮತ್ತು ಪ್ರಚಾರ ಮಾಡುವತ್ತ ಗಮನ ಹರಿಸಬೇಕಾಗಿದೆ.

ಕೊರೊನಾ ಸಂಕಷ್ಟ ಕಾಲದಲ್ಲಿ ಸಾಂಬಾರು ಪದಾರ್ಥಗಳು ಮತ್ತು ಅರಿಶಿನದೆಡೆಗಿನ ಆಕರ್ಷಣೆ ಸಾಕಷ್ಟು ಬೆಳೆದಿರುವುದನ್ನು ನಾವು ನೋಡುತ್ತಿದ್ದೇವೆ. 2023 ಅಂತಾರಾಷ್ಟ್ರೀಯ ರಾಗಿ ವರ್ಷ. ನಮ್ಮ ಕಾರ್ಪೊರೇಟ್ ಜಗತ್ತು ಭಾರತದ ರಾಗಿಯನ್ನು ಬ್ರ್ಯಾಂಡಿಂಗ್ ಮತ್ತು ಪ್ರಚಾರ ಮಾಡಲು ಮುಂದೆ ಬರಬೇಕು. ವಿದೇಶದಲ್ಲಿರುವ ನಮ್ಮ ರಾಯಭಾರ ಮತ್ತು ದೂತವಾಸ ಕಚೇರಿಗಳು(ಮಿಷನ್‌ಗಳು) ಆಯಾ ದೇಶಗಳಲ್ಲಿ ವಿಚಾರಸಂಕಿರಣಗಳನ್ನು ಆಯೋಜಿಸಬೇಕು. ಅಲ್ಲಿನ ಜನರಿಗೆ ಮತ್ತು ಆಮದುದಾರರಿಗೆ ನಮ್ಮ ರಾಗಿ ಮತ್ತು ಸಿರಿ ಧಾನ್ಯಗಳ ಪ್ರಾಮುಖ್ಯತೆ ಮತ್ತು ಇವು ಎಷ್ಟು ರುಚಿಕರ, ಆರೋಗ್ಯಕ ಎಂಬುದನ್ನು ವಿವರಿಸಬೇಕು. ನಾವು ರಾಗಿ ಮತ್ತು ಸಿರಿಧಾನ್ಯಗಳ ಉತ್ತೇಜನಕ್ಕೆ ಸಂಬಂಧಿಸಿದಂತೆ ಆಮದುದಾರರು ಮತ್ತು ರಫ್ತುದಾರರೊಂದಿಗೆ ವಿಚಾರಸಂಕಿರಣಗಳು ಮತ್ತು ವೆಬ್‌ನಾರ್‌ಗಳನ್ನು ಆಯೋಜಿಸಬಹುದು. ಭಾರತದಲ್ಲಿ ರಾಗಿಗಳ ಹೆಚ್ಚಿನ ಪೌಷ್ಟಿಕಾಂಶ ಮೌಲ್ಯವನ್ನು ನಾವು ಒತ್ತಿಹೇಳಬಹುದು.

 

ಸ್ನೇಹಿತರೆ,

ನಮ್ಮ ಸರ್ಕಾರವು ಮಣ್ಣಿನ ಆರೋಗ್ಯ ಕಾರ್ಡ್‌ಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದನ್ನು ನೀವು ಗಮನಿಸಿರಬೇಕು. ದೇಶದ ಕೋಟ್ಯಂತರ ರೈತರಿಗೆ ಸರ್ಕಾರ ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ನೀಡಿದೆ. ಒಂದು ಕಾಲದಲ್ಲಿ ಪ್ಯಾಥೋಲಜಿ ಪ್ರಯೋಗಾಲಯ ಇಲ್ಲದಿದ್ದಾಗ ಯಾರೂ ಪ್ಯಾಥೋಲಜಿ ಪರೀಕ್ಷೆಗಳನ್ನು ಮಾಡುತ್ತಿರಲಿಲ್ಲ, ಆದರೆ ಈಗ ಯಾವುದೇ ಕಾಯಿಲೆಯಿದ್ದರೆ, ಮೊದಲು ಪೆಥಾಲಜಿ ಪರೀಕ್ಷೆಗಳನ್ನು ಮಾಡಲಾಗುತ್ತದೆ ನಮ್ಮ ನವೋದ್ಯಮಗಳು ಮತ್ತು ಖಾಸಗಿ ಹೂಡಿಕೆದಾರರು ನಮ್ಮ ರೈತರಿಗೆ ಖಾಸಗಿ ರೋಗಶಾಸ್ತ್ರ ಪ್ರಯೋಗಾಲಯಗಳಲ್ಲಿ ಮಾಡಿದಂತೆ ಮಣ್ಣಿನ ಮಾದರಿಗಳನ್ನು ಪರೀಕ್ಷಿಸಲು ಮಾರ್ಗದರ್ಶನ ನೀಡಬಹುದೇ? ಮಣ್ಣಿನ ಆರೋಗ್ಯದ ಬಗ್ಗೆ ನಿರಂತರ ಪರೀಕ್ಷೆ ನಡೆಸಬೇಕು. ನಾವು ನಮ್ಮ ರೈತರಲ್ಲಿ ಈ ಅಭ್ಯಾಸವನ್ನು ಬೆಳೆಸಿದರೆ, ಸಣ್ಣ ರೈತರೂ ಖಂಡಿತವಾಗಿಯೂ ಪ್ರತಿ ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಅಂತಹ ಮಣ್ಣು ಪರೀಕ್ಷಾ ಪ್ರಯೋಗಾಲಯಗಳ ಸಂಪೂರ್ಣ ಜಾಲವನ್ನು ರಚಿಸಬಹುದು. ಹೊಸ ಉಪಕರಣಗಳನ್ನು ಅಭಿವೃದ್ಧಿಪಡಿಸಬಹುದು. ಈ ಕ್ಷೇತ್ರದ ವ್ಯಾಪ್ತಿ ಬಹುದೊಡ್ಡದಿದೆ. ಈ ನಿಟ್ಟಿನಲ್ಲಿ ನವೋದ್ಯಮಗಳು ಮುಂದೆ ಬರಬೇಕು ಎಂದು ನಾನು ಭಾವಿಸುತ್ತೇನೆ.

ರೈತರಲ್ಲಿ ಈ ಜಾಗೃತಿ ಹೆಚ್ಚಿಸಬೇಕು. ಆಗ ಅವರು ಒಂದು ಅಥವಾ ಎರಡು ವರ್ಷಗಳಿಗೊಮ್ಮೆ ತಮ್ಮ ಹೊಲಗಳ ಮಣ್ಣನ್ನು ಪರೀಕ್ಷಿಸಬೇಕು. ವಿವಿಧ ಬೆಳೆಗಳಿಗೆ ಕೀಟನಾಶಕ ಮತ್ತು ರಸಗೊಬ್ಬರಗಳ ಬಳಕೆಯ ಬಗ್ಗೆ ವೈಜ್ಞಾನಿಕ ಜ್ಞಾನವನ್ನು ಅವರು ಪಡೆಯುತ್ತಾರೆ. ನಮ್ಮ ಯುವ ವಿಜ್ಞಾನಿಗಳು ನ್ಯಾನೊ ಗೊಬ್ಬರವನ್ನು ಅಭಿವೃದ್ಧಿಪಡಿಸಿದ್ದಾರೆ ಎಂಬುದು ನಿಮಗೆ ತಿಳಿದಿರಬೇಕು. ಇದು ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ(ಗೇಮ್ ಚೇಂಜರ್) ಕಾರಣವಾಗಲಿದೆ. ನಮ್ಮ ಕಾರ್ಪೊರೇಟ್ ಜಗತ್ತು ಸಹ ಈ ಕ್ಷೇತ್ರದಲ್ಲಿಯೂ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ.

ಸ್ನೇಹಿತರೆ,

ಸೂಕ್ಷ್ಮ(ಸಣ್ಣ) ನೀರಾವರಿಯು ಕೃಷಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಮತ್ತು ಹೆಚ್ಚಿನ ಇಳುವರಿ ತರುವ ಉತ್ತಮ ಸಾಧನವಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ, ಇದು ಪರಿಸರ ಸಂರಕ್ಷಣೆಯ ಸೇವೆಯಾಗಿದೆ. ಇಂದು ಮನುಕುಲದ ಪಾಲಿಗೆ ನೀರಿನ ಉಳಿತಾಯವೂ ಪ್ರಮುಖ ಜವಾಬ್ದಾರಿಯಾಗಿದೆ. “ಪ್ರತಿ ಹನಿಯಿಂದ ಅಧಿಕ ಬೆಳೆ” (ಪರ್ ಡ್ರಾಪ್ ಮೋರ್ ಕ್ರಾಪ್)ಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ಇದು ಇಂದಿನ ಅಗತ್ಯವೂ ಆಗಿದೆ. ಈ ಕ್ಷೇತ್ರದಲ್ಲಿ ವ್ಯಾಪಾರ ಜಗತ್ತಿಗೆ ಸಾಕಷ್ಟು ಅವಕಾಶ ಮತ್ತು ಸಾಮರ್ಥ್ಯವಿದೆ. ಕೆನ್-ಬೇಟ್ವಾ ಸಂಪರ್ಕ ಯೋಜನೆಯ ಪರಿಣಾಮವಾಗಿ ಬುಂದೇಲ್‌ಖಂಡ್ ನಲ್ಲಿ ಆಗುವ ಬದಲಾವಣೆಗಳು ಈಗ ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ದೇಶದಲ್ಲಿ ದಶಕಗಳಿಂದ ನನೆಗುದಿಗೆ ಬಿದ್ದಿರುವ ಕೃಷಿ ನೀರಾವರಿ ಯೋಜನೆಗಳನ್ನೂ ತ್ವರಿತವಾಗಿ ಪೂರ್ಣಗೊಳಿಸಬೇಕು.

ಸ್ನೇಹಿತರೆ,

ಮುಂದಿನ 3-4 ವರ್ಷಗಳಲ್ಲಿ ಖಾದ್ಯ ತೈಲ ಉತ್ಪಾದನೆಯನ್ನು ಸುಮಾರು 50% ಹೆಚ್ಚಿಸುವ ಗುರಿಯನ್ನು ನಾವು ಸಾಧಿಸಬೇಕಾಗಿದೆ. ಖಾದ್ಯ ತೈಲದ ರಾಷ್ಟ್ರೀಯ ಮಿಷನ್ ಅಡಿ, ತಾಳೆ ಎಣ್ಣೆ ಕೃಷಿಯನ್ನು ವಿಸ್ತರಿಸಲು ನಮ್ಮಲ್ಲಿ ಸಾಕಷ್ಟು ಸಾಮರ್ಥ್ಯವಿದೆ. ಎಣ್ಣೆಕಾಳುಗಳ ಕ್ಷೇತ್ರದಲ್ಲೂ ನಾವು ದೊಡ್ಡ ಪ್ರಮಾಣದಲ್ಲಿ ಮುಂದುವರಿಯಬೇಕಾಗಿದೆ.

ನಮ್ಮ ಕೃಷಿ ಹೂಡಿಕೆದಾರರು ಬೆಳೆ ಮಾದರಿಗಳಿಗೆ ಬೆಳೆ ವೈವಿಧ್ಯೀಕರಣ ಉತ್ತೇಜಿಸಲು ಮುಂದೆ ಬರಬೇಕು. ಆಮದುದಾರರಿಗೆ ಭಾರತದಲ್ಲಿ ಯಾವ ರೀತಿಯ ಯಂತ್ರಗಳು ಬೇಕು ಎಂದು ತಿಳಿದಿದೆ. ಇಲ್ಲಿ ಏನು ಉಪಯುಕ್ತ ಎಂಬುದು ಅವರಿಗೆ ಗೊತ್ತಿದೆ. ಅದೇ ರೀತಿ ಇಲ್ಲಿಯೂ ಬೆಳೆಗಳ ಬಗ್ಗೆ ಮಾಹಿತಿ ಇರಬೇಕು. ದೇಶದಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುವ ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳ ಉದಾಹರಣೆಯನ್ನು ತೆಗೆದುಕೊಳ್ಳಿ. ಈ ನಿಟ್ಟಿನಲ್ಲಿ ನಮ್ಮ ಕಾರ್ಪೊರೇಟ್ ಜಗತ್ತು ಮುಂದೆ ಬರಬೇಕು. ಇದು ನಿಮಗೆ ಖಚಿತವಾದ ಮಾರುಕಟ್ಟೆಯಂತಿದೆ. ಅದರ ಆಮದುಗಳ ಅಗತ್ಯವೇನು? ನಿಮ್ಮ ಖರೀದಿ ಅಗತ್ಯಗಳ ಬಗ್ಗೆ ನೀವು ರೈತರಿಗೆ ಮುಂಚಿತವಾಗಿ ಹೇಳಬಹುದು. ಈಗ ವಿಮೆಯ ವ್ಯವಸ್ಥೆ ಜಾರಿಯಲ್ಲಿರುವುದರಿಂದ ವಿಮೆಯಿಂದಲೂ ಭದ್ರತೆ ಸಿಗುತ್ತಿದೆ. ಭಾರತದ ಆಹಾರ ಅವಶ್ಯಕತೆಗಳ ಬಗ್ಗೆ ಅಧ್ಯಯನ ನಡೆಯಬೇಕು. ಭಾರತದಲ್ಲಿ ಅಗತ್ಯವಿರುವ ಆಹಾರ ವಸ್ತುಗಳನ್ನು ಉತ್ಪಾದಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.

ಸ್ನೇಹಿತರೆ,

ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು 21ನೇ ಶತಮಾನದಲ್ಲಿ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ವ್ಯಾಪಾರವನ್ನು ಸಂಪೂರ್ಣವಾಗಿ ಬದಲಾಯಿಸಲಿದೆ. ದೇಶದ ಕೃಷಿಯಲ್ಲಿ ಕಿಸಾನ್ ಡ್ರೋನ್‌ಗಳ ಹೆಚ್ಚಿನ ಬಳಕೆಯು ಈ ಬದಲಾವಣೆಯ ಭಾಗವಾಗಿದೆ. ನಾವು ಕೃಷಿ ನವೋದ್ಯಮಗಳನ್ನು ಉತ್ತೇಜಿಸಿದಾಗ ಮಾತ್ರ ಡ್ರೋನ್ ತಂತ್ರಜ್ಞಾನವು ಒಂದು ಪ್ರಮಾಣದಲ್ಲಿ ಲಭ್ಯವಾಗಲು ಸಾಧ್ಯವಾಗಲಿದೆ. ಕಳೆದ 3-4 ವರ್ಷಗಳಲ್ಲಿ ದೇಶದಲ್ಲಿ 700ಕ್ಕೂ ಹೆಚ್ಚು ಕೃಷಿ ನವೋದ್ಯಮಗಳನ್ನು ಸ್ಥಾಪಿಸಲಾಗಿದೆ.

ಸ್ನೇಹಿತರೆ,

ಕಳೆದ 7 ವರ್ಷಗಳಲ್ಲಿ ಕೊಯ್ಲೋತ್ತರ ನಿರ್ವಹಣೆಯಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ. ಸಂಸ್ಕರಿತ ಆಹಾರದ ವ್ಯಾಪ್ತಿಯನ್ನು ವಿಸ್ತರಿಸುವುದು ಕೇಂದ್ರ ಸರ್ಕಾರದ ನಿರಂತರ ಪ್ರಯತ್ನವಾಗಿದ್ದು, ನಮ್ಮ ಗುಣಮಟ್ಟವು ಅಂತಾರಾಷ್ಟ್ರೀಯ ಗುಣಮಟ್ಟದ್ದಾಗಿರಬೇಕು. ಈ ನಿಟ್ಟಿನಲ್ಲಿ ಕಿಸಾನ್ ಸಂಪದ ಯೋಜನೆಯೊಂದಿಗೆ ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆ(ಪಿಎಲ್‌ಐ) ಮಹತ್ವದ್ದಾಗಿದೆ. ಮೌಲ್ಯ ಸರಪಳಿಯೂ ಅದರಲ್ಲಿ ದೊಡ್ಡ ಪಾತ್ರ ಹೊಂದಿದೆ. ಆದ್ದರಿಂದ, ಒಂದು ಲಕ್ಷ ಕೋಟಿ ರೂಪಾಯಿ ಮೊತ್ತದ ವಿಶೇಷ ಕೃಷಿ ಮೂಲಸೌಕರ್ಯ ನಿಧಿ ಸ್ಥಾಪಿಸಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಭಾರತವು ಸಂಯುಕ್ತ ಅರಬ್ ಎಮಿರೇಟ್ಸ್, ಕೊಲ್ಲಿ ರಾಷ್ಟ್ರಗಳು ಮತ್ತು ಅಬುಧಾಬಿಯೊಂದಿಗೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ. ಆಹಾರ ಸಂಸ್ಕರಣೆಯಲ್ಲಿ ಸಹಕಾರವನ್ನು ಹೆಚ್ಚಿಸಲು ಈ ಒಪ್ಪಂದಗಳಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಮಾಡಲಾಗಿದೆ.

ಸ್ನೇಹಿತರೆ,

‘ಪರಾಲಿ’ ಅಥವಾ ಕೃಷಿ ಅವಶೇಷಗಳ ನಿರ್ವಹಣೆಯೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ, ಈ ವರ್ಷದ ಬಜೆಟ್‌ನಲ್ಲಿ ಹೊಸ ಕ್ರಮಗಳನ್ನು ಪ್ರಕಟಿಸಲಾಗಿದೆ. ಇದು ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜತೆಗೆ, ರೈತರ ಆದಾಯವನ್ನು ಸಹ ಹೆಚ್ಚಿಸಲಿದೆ. ವಿಜ್ಞಾನಿಗಳು ಮತ್ತು ತಂತ್ರಜ್ಞಾನ ಅವಲಂಬಿತ ಜನರು ಕೃಷಿ ತ್ರೇತ್ರದ ಯಾವುದೇ ತ್ಯಾಜ್ಯವನ್ನು ಹೊರಹಾಕಬಾರದು. ಪ್ರತಿ ತ್ಯಾಜ್ಯವನ್ನು ಕೃಷಿ ಬಳಕೆಗೆ ಅತ್ಯುತ್ತಮವಾಗಿ ಪರಿವರ್ತಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ನಾವು ಎಚ್ಚರಿಕೆಯಿಂದ ಯೋಚಿಸಬೇಕು ಮತ್ತು ಹೊಸ ವಿಷಯಗಳನ್ನು ಪರಿಚಯಿಸಬೇಕು.

ಹೊಲಗದ್ದೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ನಾವು ಪ್ರಸ್ತಾಪಿಸುವ ಪರಿಹಾರಗಳನ್ನು ಸ್ವೀಕರಿಸಲು ರೈತರಿಗೆ ಸುಲಭವಾಗುತ್ತದೆ, ಅದನ್ನು ವ್ಯಾಪಕವಾಗಿ ಚರ್ಚಿಸಬೇಕು. ಕೊಯ್ಲಿನ ನಂತರದ ತ್ಯಾಜ್ಯ ನಮ್ಮ ರೈತರಿಗೆ ದೊಡ್ಡ ಸವಾಲಾಗಿದೆ. ಒಮ್ಮೆ ನಾವು ತ್ಯಾಜ್ಯವನ್ನು ಅತ್ಯುತ್ತಮವಾಗಿ ಪರಿವರ್ತಿಸಿದ ನಂತರ ರೈತರೂ ನಮ್ಮ ಸಕ್ರಿಯ ಪಾಲುದಾರರಾಗುತ್ತಾರೆ. ಆದ್ದರಿಂದ, ಸಾಗಣೆ ಮತ್ತು ಶೇಖರಣಾ ವ್ಯವಸ್ಥೆಗಳನ್ನು ವಿಸ್ತರಿಸುವುದು ಮತ್ತು ಉತ್ತೇಜಿಸುವುದು ಬಹಳ ಮುಖ್ಯ.

ಈ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಕೆಲಸ ಮಾಡುತ್ತಿದೆ. ಆದರೆ ನಮ್ಮ ಖಾಸಗಿ ವಲಯವೂ ಈ ಕ್ಷೇತ್ರದಲ್ಲಿ ತನ್ನ ಕೊಡುಗೆಯನ್ನು ಹೆಚ್ಚಿಸಬೇಕು. ಆದ್ಯತೆಯ ಸಾಲ ನೀಡುವಿಕೆ, ಗುರಿಗಳನ್ನು ನಿಗದಿಪಡಿಸುವುದು ಮತ್ತು ಅವುಗಳ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ವಲಯ ಮುಂದೆ ಬರುವಂತೆ ನಾನು ವಿನಂತಿಸುತ್ತೇನೆ. ಬ್ಯಾಂಕ್‌ಗಳು ಹಣ ನೀಡಿದರೆ, ಸಣ್ಣ ಪ್ರಮಾಣದ ಖಾಸಗಿ ಉದ್ಯಮಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರಕ್ಕೆ ಬರುತ್ತಾರೆ. ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಖಾಸಗಿ ಸಂಸ್ಥೆಗಳಿಗೆ ಆದ್ಯತೆ ನೀಡುವಂತೆ ನಾನು ಕೇಳುತ್ತೇನೆ.

ಸ್ನೇಹಿತರೆ,

ಕೃಷಿಯಲ್ಲಿ ಆವಿಷ್ಕಾರ(ನಾವೀನ್ಯತೆ) ಮತ್ತು ಪ್ಯಾಕೇಜಿಂಗ್ ಗಮನ ಹರಿಸಬೇಕಾದ 2 ಪ್ರಮುಖ ಕ್ಷೇತ್ರಗಳಾಗಿವೆ. ಇಂದು ಜಗತ್ತಿನಲ್ಲಿ ಗ್ರಾಹಕೀಕರಣ ಹೆಚ್ಚುತ್ತಿದೆ, ಆದ್ದರಿಂದ ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ನಮ್ಮ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಕೃಷಿ ನವೋದ್ಯಮಗಳು ಹಣ್ಣಿನ ಪ್ಯಾಕೇಜಿಂಗ್‌ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು. ಕೃಷಿ ತ್ಯಾಜ್ಯದಿಂದ ಹೇಗೆ ಅತ್ಯುತ್ತಮ ಪ್ಯಾಕೇಜಿಂಗ್ ಮಾಡಬಹುದು ಎಂಬುದರ ಬಗ್ಗೆಯೂ ಅವರು ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ರೈತರಿಗೆ ಸಹಾಯ ಮಾಡಿ ಯೋಜನೆ ರೂಪಿಸಬೇಕು.

ಆಹಾರ ಸಂಸ್ಕರಣೆ ಮತ್ತು ಎಥೆನಾಲ್‌ನಲ್ಲಿ ಹೂಡಿಕೆ ಮಾಡಲು ಭಾರತವು ಅಪಾರ ಸಾಮರ್ಥ್ಯ ಹೊಂದಿದೆ. ಸರ್ಕಾರವು 20% ಎಥೆನಾಲ್ ಮಿಶ್ರಣದ ಗುರಿ ಹೊಂದಿದೆ ಮತ್ತು ಅದಕ್ಕೆ ಖಚಿತವಾದ ಮಾರುಕಟ್ಟೆ ಇದೆ. 2014ರ ಮೊದಲು, 1-2% ಎಥೆನಾಲ್ ಮಿಶ್ರಣ ಮಾಡಲಾಗುತ್ತಿತ್ತು. ಈಗ ಅದು ಸುಮಾರು 8%ಗೆ ಏರಿಕೆಯಾಗಿದೆ. ಎಥೆನಾಲ್ ಮಿಶ್ರಣ ಹೆಚ್ಚಿಸಲು ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ನಮ್ಮ ಉದ್ಯಮ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಮುಂದೆ ಬರಬೇಕು.

ನೈಸರ್ಗಿಕವಾಗಿ ತಯಾರಿಸುವ ಹಣ್ಣಿನ ರಸ ಅಥವಾ ಪಾನೀಯಗಳ ಮಾರುಕಟ್ಟೆ ನಮಗೆ ಮತ್ತೊಂದು ಸಮಸ್ಯೆಯಾಗಿದೆ. ಹಾಗಾಗಿ, ನಾವು ಅವುಗಳ ಪ್ಯಾಕೇಜಿಂಗ್ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ಈ ನಿಟ್ಟಿನಲ್ಲಿ ನಾವು ಪ್ಯಾಕೇಜಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡುವ ಅವಶ್ಯಕತೆಯಿದೆ. ಹಣ್ಣಿನ ಪಾನೀಯ ಉತ್ಪನ್ನಗಳು ದೀರ್ಘಾವಧಿವರೆಗೆ ಕಾಪಾಡುವುದು ಅಗತ್ಯವಿದೆ. ಏಕೆಂದರೆ ನಾವು ವಿವಿಧ ಹಣ್ಣುಗಳನ್ನು ಉತ್ಪಾದಿಸುತ್ತೇವೆ, ನೈಸರ್ಗಿಕ ಪಾನೀಯಗಳನ್ನು ತಯಾರಿಸುತ್ತೇವೆ. ಹಾಗಾಗಿ, ಇತರೆ ದೇಶಗಳನ್ನು ನಕಲು ಮಾಡುವ ಬದಲು, ನಾವು ಸ್ಥಳೀಯ ನೈಸರ್ಗಿಕ ಪಾನೀಯಗಳನ್ನು ಮತ್ತು ಜನಪ್ರಿಯಗೊಳಿಸಬೇಕು.

ಸ್ನೇಹಿತರೆ

ಸಹಕಾರಿ ಕ್ಷೇತ್ರದ ಸಶಕ್ತೀಕರಣ ಮುಂದಿರುವ ಇನ್ನೊಂದು ಸವಾಲು. ಭಾರತದ ಸಹಕಾರಿ ಕ್ಷೇತ್ರವು ಅತ್ಯಂತ ಪುರಾತನ ಮತ್ತು ರೋಮಾಂಚಕವಾಗಿದೆ. ಸಕ್ಕರೆ ಕಾರ್ಖಾನೆಗಳು, ರಸಗೊಬ್ಬರ ಕಾರ್ಖಾನೆಗಳು, ಡೇರಿಗಳು, ಸಾಲ ವ್ಯವಸ್ಥೆ ಮತ್ತು ಆಹಾರ ಧಾನ್ಯಗಳ ಖರೀದಿಯಲ್ಲಿ ಸಹಕಾರಿ ಕ್ಷೇತ್ರದ ಭಾಗವಹಿಸುವಿಕೆ ದೊಡ್ಡದಾಗಿದೆ. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಹೊಸ ಸಚಿವಾಲಯ ರಚಿಸಿದ್ದು, ರೈತರಿಗೆ ಸಾಧ್ಯವಾದಷ್ಟು ಸಹಾಯ ಮಾಡುವುದೇ ಇದರ ಹಿಂದಿನ ಪ್ರಮುಖ ಕಾರಣವಾಗಿದೆ. ನಮ್ಮ ಸಹಕಾರಿ ಕ್ಷೇತ್ರವು ರೋಮಾಂಚಕ ವ್ಯಾಪಾರ ವ್ಯವಸ್ಥೆಯನ್ನು ರೂಪಿಸಲು ಸಾಕಷ್ಟು ಅವಕಾಶಗಳನ್ನು ಹೊಂದಿದೆ. ಸಹಕಾರಿಗಳನ್ನು ಯಶಸ್ವಿ ವ್ಯಾಪಾರ ಉದ್ಯಮಗಳಾಗಿ ಪರಿವರ್ತಿಸುವ ಗುರಿಯನ್ನು ನೀವು ಹೊಂದಿರಬೇಕು.

ಸ್ನೇಹಿತರೆ,

ನಮ್ಮ ಸಣ್ಣ ಹಣಕಾಸು ಸಂಸ್ಥೆಗಳು ಮುಂದೆ ಬರಲು, ಕೃಷಿ ನವೋದ್ಯಮಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್‌ಪಿಒ) ಗರಿಷ್ಠ ಹಣಕಾಸಿನ ನೆರವು ನೀಡಲು ನಾನು ವಿನಂತಿಸುತ್ತೇನೆ. ನಮ್ಮ ದೇಶದಲ್ಲಿ ಸಣ್ಣ ರೈತರ ಕೃಷಿ ವೆಚ್ಚ ಕಡಿಮೆ ಮಾಡುವಲ್ಲಿ ನೀವು ದೊಡ್ಡ ಪಾತ್ರ ವಹಿಸಬಹುದು. ಉದಾಹರಣೆಗೆ, ನಮ್ಮ ಸಣ್ಣ ರೈತರು ಕೃಷಿಯಲ್ಲಿ ಬಳಸುವ ಆಧುನಿಕ ಉಪಕರಣಗಳನ್ನು ಖರೀದಿಸಲು ಸಾಧ್ಯವಿಲ್ಲ. ಸಣ್ಣ ರೈತರು ಅಂತಹ ಉಪಕರಣಗಳನ್ನು ಎಲ್ಲಿಂದ ಖರೀದಿಸುತ್ತಾರೆ? ಕೃಷಿ ಕೂಲಿಕಾರರೂ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಕೃಷಿ ಉಪಕರಣಗಳ ಹಂಚಿಕೆ ಅಥವಾ ವಿನಿಮಯ(ಪೂಲಿಂಗ್) ಮಾಡುವ ಹೊಸ ವಿಧಾನದ ಬಗ್ಗೆ ನಾವು ಯೋಚಿಸಬಹುದೇ?

ಈ ನಿಟ್ಟಿನಲ್ಲಿ ನಮ್ಮ ಕಾರ್ಪೊರೇಟ್ ಜಗತ್ತು ಮುಂದೆ ಬಂದು, ಅಂತಹ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬೇಕು. ಇದು ಕೃಷಿ ಉಪಕರಣಗಳ ಬಾಡಿಗೆಗೆ ಅನುಕೂಲವಾಗುತ್ತದೆ. ನಮ್ಮ ಸರ್ಕಾರ ರೈತರನ್ನು ಶಕ್ತಿ ದಾನಿಗಳ ಜೊತೆಗೆ ಅನ್ನದಾತರನ್ನಾಗಿ ಮಾಡಲು ದೊಡ್ಡ ಅಭಿಯಾನ ನಡೆಸುತ್ತಿದೆ. ದೇಶಾದ್ಯಂತ ರೈತರಿಗೆ ಸೋಲಾರ್ ಪಂಪ್‌ಗಳನ್ನು ವಿತರಿಸಲಾಗುತ್ತಿದೆ. ನಮ್ಮ ರೈತರು ತಮ್ಮ ಹೊಲಗಳಿಂದ ಗರಿಷ್ಠ ಸೌರ ವಿದ್ಯುತ್ ಉತ್ಪಾದಿಸಲು ನಾವು ಪ್ರಯತ್ನಗಳನ್ನು ಹೆಚ್ಚಿಸಬೇಕಾಗಿದೆ.

ಅಂತೆಯೇ, ಇದು 'ಮೇಧ್ ಪರ್ ಪೇಢ್', ಕೃಷಿ ಭೂಮಿಯ ಬದುಗಳಲ್ಲಿ ಮರಗಳನ್ನು ಬೆಳೆಸುವುದಾಗಿದೆ. ಇಂದು ನಾವು ಮರವನ್ನು ಆಮದು ಮಾಡಿಕೊಳ್ಳುತ್ತೇವೆ. ನಾವು ನಮ್ಮ ರೈತರಿಗೆ ವೈಜ್ಞಾನಿಕ ರೀತಿಯಲ್ಲಿ ಮರ ಬೆಳೆಸಲು ಉತ್ತೇಜನ ನೀಡಿದರೆ, ಅದು 10-20 ವರ್ಷಗಳ ನಂತರ ಅವರಿಗೆ ಹೊಸ ಆದಾಯದ ಮೂಲವಾಗುತ್ತದೆ. ಅದಕ್ಕೆ ಬೇಕಾದ ಕಾಯಿದೆಗಳ ಮಾರ್ಪಾಟುಗಳನ್ನು ಸರ್ಕಾರ ಮಾಡಲಿದೆ.

 

ಸ್ನೇಹಿತರೆ,

ರೈತರ ಆದಾಯ ಹೆಚ್ಚಿಸುವುದು, ಕೃಷಿ ವೆಚ್ಚ ತಗ್ಗಿಸುವುದು, ರೈತರಿಗೆ ಬಿತ್ತನೆಯಿಂದ ಮಾರುಕಟ್ಟೆವರೆಗೆ ಆಧುನಿಕ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ನಿಮ್ಮ ಸಲಹೆಗಳು ನಮ್ಮ ರೈತರ ಕನಸುಗಳನ್ನು ನನಸಾಗಿಸುವ ಸರ್ಕಾರದ ಪ್ರಯತ್ನಗಳಿಗೆ ಬಲ ನೀಡುತ್ತವೆ ಎಂಬುದು ನನಗೆ ಖಾತ್ರಿಯಿದೆ. ಇಂದು ನಾವು ಮುಂದಿನ ಪೀಳಿಗೆಯ ಕೃಷಿಯನ್ನು ಚರ್ಚಿಸಲು ಬಯಸುತ್ತೇವೆ, ಸಾಂಪ್ರದಾಯಿಕ (ಹಳೆಯ) ವಿಧಾನಗಳಿಂದ ಹೊರಬರಲು ಬಯಸುತ್ತೇವೆ. ಬಜೆಟ್‌ನಲ್ಲಿ ಮಾಡಲಾದ ಪ್ರಸ್ತಾವನೆಗಳ ಬೆಳಕಿನಲ್ಲಿ ನಾವು ಹೇಗೆ ಉತ್ತಮವಾಗಿ ಮಾಡಬಹುದು ಎಂಬುದನ್ನು ವಿಚಾರಸಂಕಿರಣದಲ್ಲಿ ಚರ್ಚಿಸಬೇಕು.

ಹೊಸ ಬಜೆಟ್ ಜಾರಿಯಾಗುವ ಏಪ್ರಿಲ್ 1ರಿಂದಲೇ ನಾವೆಲ್ಲಾ ಕೆಲಸ ಆರಂಭಿಸಬೇಕು. ನಮಗೆ ಇನ್ನೂ ಮಾರ್ಚ್ ತಿಂಗಳು ಇದೆ. ಬಜೆಟ್ ಅನ್ನು ಈಗಾಗಲೇ ಸಂಸತ್ತಿನ ಮುಂದೆ ಇಡಲಾಗಿದೆ. ಯಾವುದೇ ಸಮಯ ವ್ಯರ್ಥ ಮಾಡದೆ, ಜೂನ್-ಜುಲೈನಲ್ಲಿ ರೈತರು ಹೊಸ ವರ್ಷದ ಕೃಷಿಯನ್ನು ಪ್ರಾರಂಭಿಸಲು ನಾವು ಮಾರ್ಚ್‌ನಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಬೇಕು. ನಮ್ಮ ಕಾರ್ಪೊರೇಟ್ ಮತ್ತು ಹಣಕಾಸು ಕ್ಷೇತ್ರ, ನವೋದ್ಯಮಗಳು ಮತ್ತು ತಂತ್ರಜ್ಞಾನ ರಂಗ ಮುಂದೆ ಬರಬೇಕು. ಭಾರತವು ಕೃಷಿ ಪ್ರಧಾನ ದೇಶವಾಗಿದೆ. ಆದ್ದರಿಂದ ನಾವು ಏನನ್ನೂ ಆಮದು ಮಾಡಿಕೊಳ್ಳಬಾರದು ಮತ್ತು ದೇಶದ ಅಗತ್ಯಗಳಿಗೆ ಅನುಗುಣವಾಗಿ ಎಲ್ಲವನ್ನೂ ಇಲ್ಲೇ ಉತ್ಪಾದಿಸಬೇಕು ಮತ್ತು ಅಭಿವೃದ್ಧಿಪಡಿಸಬೇಕು.

 

ನಾವು ನಮ್ಮ ರೈತರು, ಕೃಷಿ ವಿಶ್ವವಿದ್ಯಾಲಯಗಳು ಮತ್ತು ನಮ್ಮ ಕೃಷಿ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ತರಲು ಸಾಧ್ಯವಾದರೆ, ಬಜೆಟ್ ನಿಜವಾದ ಅರ್ಥದಲ್ಲಿ ಕೃಷಿ ಮತ್ತು ಗ್ರಾಮೀಣ ಜೀವನದಲ ಬದಲಾವಣೆಗೆ ಉತ್ತಮ ಸಾಧನವಾಗಬಲ್ಲದು ಮತ್ತು ಕೇವಲ ಅಂಕಿಅಂಶಗಳ ಆಟವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ, ಈ ವಿಚಾರಸಂಕಿರಣ, ವೆಬಿನಾರ್ ಕ್ರಿಯಾಶೀಲ ಅಂಶಗಳೊಂದಿಗೆ ಹೆಚ್ಚು ಉತ್ಪಾದಕವಾಗಿಸುವಂತೆ ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ. ಆಗ ಮಾತ್ರ ನಾವು ಇಚ್ಛಿತ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ನೀವು ಎಲ್ಲಾ ಇಲಾಖೆಗಳಿಗೆ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ, ಇಚ್ಛಿತ ವಿಷಯಗಳನ್ನು ಕಾರ್ಯಗತಗೊಳಿಸಲು ಸುಗಮ ಮಾರ್ಗ ಕಂಡುಕೊಳ್ಳಲಾಗುತ್ತದೆ ಮತ್ತು ನಾವು ಈ ನಿಟ್ಟಿನಲ್ಲಿ ತ್ವರಿತವಾಗಿ ಒಟ್ಟಾಗಿ ಮುಂದುವರಿಯುತ್ತೇವೆ ಎಂಬುದು ನನಗೆ ಖಾತ್ರಿಯಿದೆ

ನಾನು ಮತ್ತೊಮ್ಮೆ ಎಲ್ಲರಿಗೂ ತುಂಬಾ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮಗೆ ಶುಭ ಹಾರೈಸುತ್ತೇನೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
PM Modi visits the Indian Arrival Monument
November 21, 2024

Prime Minister visited the Indian Arrival monument at Monument Gardens in Georgetown today. He was accompanied by PM of Guyana Brig (Retd) Mark Phillips. An ensemble of Tassa Drums welcomed Prime Minister as he paid floral tribute at the Arrival Monument. Paying homage at the monument, Prime Minister recalled the struggle and sacrifices of Indian diaspora and their pivotal contribution to preserving and promoting Indian culture and tradition in Guyana. He planted a Bel Patra sapling at the monument.

The monument is a replica of the first ship which arrived in Guyana in 1838 bringing indentured migrants from India. It was gifted by India to the people of Guyana in 1991.