Quoteબજેટ રોજગારદક્ષતા અને ઉદ્યોગસાહસિકતાની ક્ષમતાઓ સાથે શિક્ષણને જોડવાના પ્રયાસો વધારશેઃ પ્રધાનમંત્રી

ನಮಸ್ಕಾರ!!

ಶಿಕ್ಷಣ, ಕೌಶಲ, ಸಂಶೋಧನೆ ಮತ್ತು ಅಂತಹ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದ ಎಲ್ಲಾ ಗಣ್ಯರಿಗೆ ಶುಭಾಶಯಗಳು.

ದೇಶವು ತನ್ನ ವೈಯಕ್ತಿಕ, ಬೌದ್ಧಿಕ, ಕೈಗಾರಿಕಾ ಮನೋಧರ್ಮ ಮತ್ತು ಪ್ರತಿಭೆಗೆ ನಿರ್ದೇಶನ ನೀಡುವ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಪರಿವರ್ತಿಸುವ ನಿಟ್ಟಿನಲ್ಲಿ ವೇಗವಾಗಿ ಸಾಗುತ್ತಿರುವ ಈ ಸಮಯದಲ್ಲಿ ಈ ಜ್ಞಾನಪೂರ್ಣ ಸಮಾವೇಶ ಇಂದು ನಡೆಯುತ್ತಿದೆ. ಇದಕ್ಕೆ ಮತ್ತಷ್ಟು ಪ್ರಚೋದನೆಯನ್ನು ನೀಡುವ ಸಲುವಾಗಿ ನಿಮ್ಮೆಲ್ಲರಿಂದಲೂ ಬಜೆಟ್‌ ಪೂರ್ವದಲ್ಲಿ ಸಲಹೆಗಳನ್ನು ಕೋರಲಾಗಿತ್ತು. ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ದೇಶದ ಲಕ್ಷಾಂತರ ಜನರೊಂದಿಗೆ ಸಂವಹನ ನಡೆಸುವ ಭಾಗ್ಯ ನಮ್ಮದಾಗಿತ್ತು, ಮತ್ತು ಈಗ ಅದರ ಅನುಷ್ಠಾನಕ್ಕಾಗಿ ನಾವೆಲ್ಲರೂ ಒಟ್ಟಾಗಿ ಸಾಗಬೇಕಾಗಿದೆ.

ಸ್ನೇಹಿತರೆ,

ದೇಶದ ಯುವಜನರಲ್ಲಿನ ವಿಶ್ವಾಸ ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಅತ್ಯಗತ್ಯವಾಗಿದೆ. ಯುವಜನರಲ್ಲಿ ಶಿಕ್ಷಣ, ಜ್ಞಾನ ಮತ್ತು ಕೌಶಲದ ಬಗ್ಗೆ ಸಂಪೂರ್ಣ ವಿಶ್ವಾಸವಿದ್ದಾಗ ಮಾತ್ರ ಆತ್ಮವಿಶ್ವಾಸ ಮೂಡುತ್ತದೆ. ಯಾವಾಗ ವ್ಯಕ್ತಿಗೆ ತನ್ನ ಶಿಕ್ಷಣ ತನಗೆ ಉದ್ಯೋಗ ಮಾಡಲು ಅವಕಾಶ ನೀಡುತ್ತಿದೆ ಮತ್ತು ಅಗತ್ಯ ಕೌಶಲ ನೀಡುತ್ತಿದೆ ಎಂಬ ಅರಿವು ಮೂಡುತ್ತದೆಯೋ ಆಗ ವಿಶ್ವಾಸ ಬರುತ್ತದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಈ ಮನೋಧರ್ಮದೊಂದಿಗೆ ರೂಪುಗೊಳ್ಳುತ್ತದೆ. ನಾವು ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರತಿಯೊಂದು ಒದಗಣೆಗಳನ್ನೂ ಪದವಿಪೂರ್ವ ಮಟ್ಟದಿಂದ ಪಿಎಚ್.ಡಿ.ವರೆಗೆ ಶೀಘ್ರ ಅನುಷ್ಠಾನ ಮಾಡಲು ಶ್ರಮಿಸಬೇಕಾಗಿದೆ. ಕೊರೊನಾದಿಂದಾಗಿ ತಗ್ಗಿರುವ ವೇಗವನ್ನು, ಹೆಚ್ಚಿಸುವ ಮತ್ತು ಮುಂದೆ ತೆಗೆದುಕೊಂಡು ಹೋಗುವ ಕಾರ್ಯ ಆಗಬೇಕಿದೆ.

ಈ ವರ್ಷದ ಬಜೆಟ್ ಸಹ ಈ ನಿಟ್ಟಿನಲ್ಲಿ ತುಂಬಾ ಸಹಕಾರಿಯಾಗಿದೆ. ಈ ವರ್ಷ ಆರೋಗ್ಯದ ನಂತರ ಎರಡನೇ ಅತಿದೊಡ್ಡ ಗಮನವನ್ನು ಶಿಕ್ಷಣ, ಕೌಶಲ, ಸಂಶೋಧನೆ ಮತ್ತು ಅನುಶೋಧನೆಗೆ ನೀಡಲಾಗಿದೆ. ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳ ನಡುವೆ ಉತ್ತಮ ಹೊಂದಾಣಿಕೆ ಇಂದು ದೇಶದ ಅತ್ಯಂತ ದೊಡ್ಡ ಅಗತ್ಯವಾಗಿದೆ. ಈ ನಿಟ್ಟನಲ್ಲಿ ಬೃಹತ್ ಸಂಯೋಜಿತ ಅನುದಾನ (ಗ್ಲೂ ಗ್ರಾಂಟ್) ನೀಡಲಾಗಿದ್ದು, ಇದರಡಿ 9 ನಗರಗಳಲ್ಲಿ ಅಗತ್ಯ ವ್ಯವಸ್ಥೆಯನ್ನು ರೂಪಿಸಬಹುದಾಗಿದೆ.

ಸ್ನೇಹಿತರೇ,

ಈ ಬಾರಿಯ ಬಜೆಟ್ ನಲ್ಲಿ ಅಪ್ರೆಂಟಿಷಿಪ್, ಕೌಶಲಾಭಿವೃದ್ಧಿ ಮತ್ತು ಕೌಶಲ್ಯ ಮೇಲ್ದರ್ಜೀಕರಣಕ್ಕೆ ಅಭೂತಪೂರ್ವ ಒತ್ತು ನೀಡಲಾಗಿದೆ. ಈ ಬಜೆಟ್ ನಲ್ಲಿನ ಎಲ್ಲ ಒದಗಣೆಗಳೂ ದೇಶದ ಉನ್ನತ ಶಿಕ್ಷಣದ ದೃಷ್ಟಿಕೋನಕ್ಕೆ ದೊಡ್ಡ ಬದಲಾವಣೆ ತರುವುದಕ್ಕೆ ಕಾರಣವಾಗುತ್ತವೆ. ವರ್ಷಗಳಲ್ಲಿ ಶಿಕ್ಷಣವನ್ನು ಉದ್ಯೋಗ ಮತ್ತು ಉದ್ಯಮಶೀಲತಾ ಸಾಮರ್ಥ್ಯಗಳೊಂದಿಗೆ ಸಂಪರ್ಕಿಸಲು ಮಾಡಿದ ಪ್ರಯತ್ನಗಳನ್ನು ಬಜೆಟ್ ಮತ್ತಷ್ಟು ವಿಸ್ತರಿಸಲಿದೆ.

ಈ ಪ್ರಯೋಗಗಳ ಫಲವಾಗಿಯೇ ಭಾರತವು ಇಂದು ವೈಜ್ಞಾನಿಕ ಪ್ರಕಟಣೆಗಳ ವಿಷಯದಲ್ಲಿ ಅಗ್ರ ಮೂರು ದೇಶಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ಪಿಎಚ್‌.ಡಿಗಳ ಸಂಖ್ಯೆ ಮತ್ತು ಪ್ರಾರಂಭಿಕ ಪರಿಸರ ವ್ಯವಸ್ಥೆಯ ದೃಷ್ಟಿಯಿಂದ ನಾವು ವಿಶ್ವದ ಅಗ್ರ ಮೂರು ರಾಷ್ಟ್ರಗಳಲ್ಲಿದ್ದೇವೆ.

ಭಾರತವು ಜಾಗತಿಕ ಅನುಶೋಧನೆ ಸೂಚ್ಯಂಕದಲ್ಲಿ ವಿಶ್ವದ 50 ಅಗ್ರ ನಾವಿನ್ಯಪೂರ್ಣ ರಾಷ್ಟ್ರಗಳ ಪಟ್ಟಿಯಲ್ಲಿದ್ದು, ಅದನ್ನು ನಿರಂತರವಾಗಿ ಉತ್ತಮಪಡಿಸಿಕೊಳ್ಳುತ್ತಿದೆ. ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಅನುಶೋಧನೆಯ ಸುಸ್ಥಿರ ಉತ್ತೇಜನದೊಂದಿಗೆ, ನಮ್ಮ ವಿದ್ಯಾರ್ಥಗಳಿಗೆ ಮತ್ತು ಯುವ ವಿಜ್ಞಾನಿಗಳಿಗೆ ಹೊಸ ಅವಕಾಶಗಳು ಹೆಚ್ಚಾಗುತ್ತಿವೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಣ್ಣುಮಕ್ಕಳ ಪಾಲ್ಗೊಳ್ಳುವಿಕೆ ವೃದ್ಧಿಸುತ್ತಿರುವುದು ತೃಪ್ತಿದಾಯಕ ಮತ್ತು ಉತ್ತಮ ವಿಷಯವಾಗಿದೆ.

ಸ್ನೇಹಿತರೆ,

ಇದೇ ಮೊದಲ ಬಾರಿಗೆ ದೇಶದ ಶಾಲೆಗಳಲ್ಲಿನ ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳಿಂದ ಉನ್ನತ ಶಿಕ್ಷಣ ಸಂಸ್ಥೆಗಳ ಅಟಲ್ ಇನ್‌ಕ್ಯುಬೇಷನ್ ಕೇಂದ್ರಗಳವರೆಗೆ ಹೆಚ್ಚಿನ ಗಮನ ಹರಿಸಲಾಗಿದೆ. ನವೋದ್ಯಮಗಳಿಗಾಗಿ ಹ್ಯಾಕಥಾನ್ ಗಳ ಹೊಸ ಸಂಪ್ರದಾಯವು ದೇಶದ ಯುವಜನರು ಮತ್ತು ಕೈಗಾರಿಕೆಗಳೆರಡಕ್ಕೂ ಪ್ರಮುಖ ಶಕ್ತಿಯಾಗಿ ಬದಲಾಗುತ್ತಿದೆ. 3500ಕ್ಕೂ ಹೆಚ್ಚು ನವೋದ್ಯಮಗಳನ್ನು ಅನುಶೋಧನೆ ಮತ್ತು ಅಭಿವೃದ್ಧಿಯ ರಾಷ್ಟ್ರೀಯ ಉಪಕ್ರಮದ ಮೂಲಕ ರಾಷ್ಟ್ರೀಯ ಅನುಶೋಧನೆಯನ್ನು ಪೋಷಿಸಲಾಗುತ್ತಿದೆ.

ಅದೇ ರೀತಿ, ರಾಷ್ಟ್ರೀಯ ಸೂಪರ್‌ ಕಂಪ್ಯೂಟಿಂಗ್ ಅಭಿಯಾನದಡಿಯಲ್ಲಿ ಪುಣೆಯ ಐಐಟಿ ಬಿ.ಎಚ್‌.ಯು, ಐಐಟಿ-ಖರಗ್ಪುರ ಮತ್ತು ಐ.ಐ.ಎಸ್.ಇ.ಆರ್.ನಲ್ಲಿ ಪರಮ ಶಿವೆ, ಪರಮ ಶಕ್ತಿ ಮತ್ತು ಪರಮ ಬ್ರಹ್ಮ ಎಂಬ ಮೂರು ಸೂಪರ್‌ ಕಂಪ್ಯೂಟರ್‌ ಗಳನ್ನು ಸ್ಥಾಪಿಸಲಾಗಿದೆ. ಈ ವರ್ಷ ದೇಶದ ಒಂದು ಡಜನ್‌ ಗೂ ಹೆಚ್ಚು ಸಂಸ್ಥೆಗಳಲ್ಲಿ ಇಂತಹ ಸೂಪರ್‌ ಕಂಪ್ಯೂಟರ್‌ ಗಳನ್ನು ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ. ಐಐಟಿ ಖರಗ್ಪುರ, ಐಐಟಿ ದೆಹಲಿ ಮತ್ತು ಬಿ.ಎಚ್‌.ಯು.ನಲ್ಲಿ ಮೂರು ಅತ್ಯಾಧುನಿಕ ವಿಶ್ಲೇಷಣಾತ್ಮಕ ಮತ್ತು ತಾಂತ್ರಿಕ ಸಹಾಯ ಸಂಸ್ಥೆಗಳು (ಎಸ್.ಎ.ಟಿ.ಎಚ್.ಐಗಳು) ಸೇವೆ ಸಲ್ಲಿಸುತ್ತಿವೆ.

ಈ ಎಲ್ಲ ವಿಚಾರಗಳನ್ನು ಇಂದು ಪ್ರಸ್ತಾಪಿಸುವುದು ಮಹತ್ವದ್ದಾಗಿದೆ, ಏಕೆಂದರೆ ಇದು ಸರ್ಕಾರದ ನಿಲುವು ಮತ್ತು ದೃಷ್ಟಿಕೋನವನ್ನು ಬಿಂಬಿಸುತ್ತದೆ. 21ನೇ ಶತಮಾನದಲ್ಲಿ ಭಾರತದಲ್ಲಿ ನಾವು, 19ನೇ ಶತಮಾನದ ನಿಲುವುಗಳನ್ನು ಹಿಂದಿಕ್ಕಿ, ಮುಂದೆ ಸಾಗಬೇಕು

ಸ್ನೇಹಿತರೆ,

ನಮ್ಮ ದೇಶದಲ್ಲಿ ಹೀಗೆ ಹೇಳಲಾಗುತ್ತದೆ: व्यये कृते वर्धते एव नित्यं विद्याधनं सर्वधन प्रधानम् ॥ ಅಂದರೆ, ಜ್ಞಾನವೇ ಸಂಪತ್ತು, ಇದು ಹಂಚಿಕೊಳ್ಳುವುದರಿಂದ ಬೆಳೆಯುತ್ತದೆ ಮತ್ತು ಇದು ಒಬ್ಬರಿಗೆ ಸೀಮಿತವಾಗಿ ಉಳಿಯುವುದಿಲ್ಲ. ಹೀಗಾಗಿ, ಜ್ಞಾನ ಮತ್ತು ಅದರ ಪ್ರಸಾರ ಮಹತ್ವವಾದ್ದು. ಜ್ಞಾನ ಮತ್ತು ಸಂಶೋಧನೆಯನ್ನು ಸೀಮಿತಗೊಳಿಸುವುದು ದೇಶದ ಸಾಮರ್ಥ್ಯಕ್ಕೆ ಮಾಡಿದ ದೊಡ್ಡ ಅನ್ಯಾಯವಾಗುತ್ತದೆ. ಈ ಗುರಿಯೊಂದಿಗೆ, ಬಾಹ್ಯಾಕಾಶ, ಅಣು ಇಂಧನ, ಡಿಆರ್.ಡಿ.ಓ, ಕೃಷಿ ಇತ್ಯಾದಿ ಹಲವು ಕ್ಷೇತ್ರಗಳ ಬಾಗಿಲನ್ನು ಪ್ರತಿಭಾವಂತ ಯುವಜನರಿಗಾಗಿ ತೆರೆಯಲಾಗಿದೆ.

ಇತ್ತೀಚೆಗೆ ಮತ್ತೆರೆಡು ಕ್ರಮಗಳನ್ನು ಕೈಗೊಳ್ಳಲಾಗಿದೆ, ಇದು ಅನುಶೋಧನೆ, ಸಂಶೋಧನೆ ಮತ್ತು ಅಭಿವೃದ್ಧಿಯ ಪರಿಸರ ವ್ಯವಸ್ಥೆಗೆ ದೊಡ್ಡ ಪ್ರಯೋಜನ ನೀಡುತ್ತದೆ. ಇದೇ ಮೊದಲ ಬಾರಿಗೆ, ಹವಾಮಾನಶಾಸ್ತ್ರಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಮಾನದಂಡಗಳನ್ನು ಪೂರೈಸುವ ಭಾರತೀಯ ಪರಿಹಾರಗಳನ್ನು ದೇಶವು ಪಡೆದುಕೊಂಡಿದೆ ಮತ್ತು ವ್ಯವಸ್ಥೆಯನ್ನು ನಿಯಮಿತವಾಗಿ ಬಲಪಡಿಸಲಾಗುತ್ತಿದೆ. ಇದು ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ನಮ್ಮ ಉತ್ಪನ್ನಗಳ ಜಾಗತಿಕ ಸಾಮರ್ಥ್ಯವನ್ನು ಹೆಚ್ಚು ಸುಧಾರಿಸುತ್ತದೆ.

ಇದರ ಜೊತೆಗೆ, ಭೂ ಪ್ರಾದೇಶಿಕ ದತ್ತಾಂಶ ಕ್ಷೇತ್ರದಲ್ಲಿ ಇತ್ತೀಚೆಗೆ ಪ್ರಮುಖ ಸುಧಾರಣೆಯನ್ನು ಕೈಗೊಳ್ಳಲಾಗಿದೆ. ಈಗ ಬಾಹ್ಯಾಕಾಶ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಸಂಬಂಧಿತ ದತ್ತಾಂಶ ದೇಶದ ಯುವಜನರಿಗೆ, ಯುವ ಉದ್ದಿಮೆದಾರರು ಮತ್ತು ನವೋದ್ಯಮಗಳಿಗೆ ಮುಕ್ತವಾಗಿದೆ. ಈ ಸುಧಾರಣೆಗಳನ್ನು ಬಳಸಿ, ಗರಿಷ್ಠ ಪ್ರಯೋಜನ ಪಡೆಯುವಂತೆ ಸಹೋದ್ಯೋಗಿಗಳಿಗೆ ಆಗ್ರಹಿಸುತ್ತೇನೆ.

|

ಸ್ನೇಹಿತರೆ,

ಈ ಎಲ್ಲ ಅವಕಾಶಗಳು ಮತ್ತು ಸುಧಾರಣೆಗಳು ನಿಮ್ಮೆಲ್ಲರ ಪಾಲ್ಗೊಳ್ಳುವಿಕೆಯಿಂದ ಮಾತ್ರವೇ ಪೂರ್ಣಗೊಳ್ಳುತ್ತವೆ. ಸಹಕಾರಿ ವಿಧಾನದ ಮೂಲಕ ಉನ್ನತ ಶಿಕ್ಷಣ ಕ್ಷೇತ್ರವನ್ನು ಹೇಗೆ ಮುಂದೆ ಸಾಗಿಸುವುದು ಎಂಬುದರ ಕುರಿತು ಇಂದಿನ ಚರ್ಚೆಯಲ್ಲಿ ಸರ್ಕಾರ, ಶಿಕ್ಷಣ ತಜ್ಞರು, ತಜ್ಞರು ಮತ್ತು ಉದ್ಯಮದ ಸಲಹೆಗಳು ಬಹಳ ಮೌಲ್ಯಯುತವಾಗುತ್ತವೆ. ಮುಂದಿನ ಕೆಲವು ಗಂಟೆಗಳಲ್ಲಿ ಇದರೊಂದಿಗೆ ಸಂಬಂಧಿಸಿದ ಆರು ವಿಷಯಗಳನ್ನು ಇಲ್ಲಿ ವಿವರವಾಗಿ ಚರ್ಚಿಸಲಾಗುವುದು ಎಂದು ನನಗೆ ಹೇಳಲಾಗಿದೆ.

ಇಲ್ಲಿಂದ ಹೊರಹೊಮ್ಮುವ ಸಲಹೆಗಳು ಮತ್ತು ಪರಿಹಾರಗಳ ಬಗ್ಗೆ ದೇಶ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ. ನೀತಿಯಲ್ಲಿ ಅಥವಾ ಬಜೆಟ್‌ ನಲ್ಲಿ ಬದಲಾವಣೆ ಇರಬೇಕು ಎಂದು ಚರ್ಚಿಸಲು ಸಮಯ ವ್ಯರ್ಥ ಮಾಡದಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಮುಂದಿನ 365 ದಿನಗಳವರೆಗೆ ಏಪ್ರಿಲ್ 1 ರಿಂದ ಅನುಷ್ಠಾನದಲ್ಲಿ ಸಣ್ಣಪುಟ್ಟ ಅಡೆತಡೆಗಳನ್ನು ತೊಡೆದುಹಾಕಲು ಹೊಸ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ, ಅವು ದೇಶಾದ್ಯಂತ ಹೇಗೆ ತಲುಪಬಹುದು, ಕೊನೆಯ ವ್ಯಕ್ತಿಗೆ ನಾವು ಈಗ ಮಾರ್ಗಸೂಚಿಯತ್ತ ಗಮನ ಹರಿಸಬೇಕಾಗಿದೆ. ಏಪ್ರಿಲ್ 1 ರಿಂದ ಬಜೆಟ್ ಒದಗಣೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಮ್ಮಲ್ಲಿರುವಷ್ಟು ಸಮಯವನ್ನು ಬಳಸಲು ನಾವು ಉದ್ದೇಶಿಸಿದ್ದೇವೆ.

ನೀವೆಲ್ಲರೂ ವಿವಿಧ ಕ್ಷೇತ್ರಗಳಲ್ಲಿ ಅನುಭವಹೊಂದಿರುವರಾಗಿದ್ದೀರಿ ಎಂಬುದು ನನಗೆ ತಿಳಿದಿದೆ. ನಿಮ್ಮ ಚಿಂತನೆಗಳು, ನಿಮ್ಮ ಅನುಭವ ಮತ್ತು ಕೆಲವು ಜವಾಬ್ದಾರಿಯನ್ನು ಹಂಚಿಕೊಳ್ಳುವ ನಿಮ್ಮ ಸಿದ್ಧತೆ ಖಂಡಿತವಾಗಿಯೂ ಅಪೇಕ್ಷಿತ ಫಲಿತಾಂಶ ನೀಡುತ್ತದೆ. ನಾನು ನಿಮ್ಮೆಲ್ಲರಿಗೂ ಈ ವೆಬಿನಾರ್ ಗಾಗಿ, ನೀಮ್ಮ ಚಿಂತನೆ ಮತ್ತು ಸ್ಪಷ್ಟ ಮಾರ್ಗ ನಕ್ಷೆಗಾಗಿ ಶುಭಕೋರುತ್ತೇನೆ. 

ತುಂಬಾ ಧನ್ಯವಾದಗಳು!

ಘೋಷಣೆಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
How GeM has transformed India’s public procurement

Media Coverage

How GeM has transformed India’s public procurement
NM on the go

Nm on the go

Always be the first to hear from the PM. Get the App Now!
...
Prime Minister condoles loss of lives due to fire tragedy in Solapur, Maharashtra
May 18, 2025
QuoteAnnounces ex-gratia from PMNRF

The Prime Minister, Shri Narendra Modi has expressed deep grief over the loss of lives due to fire tragedy in Solapur, Maharashtra. Shri Modi also wished speedy recovery for those injured in the accident.

The Prime Minister announced an ex-gratia from PMNRF of Rs. 2 lakh to the next of kin of each deceased and Rs. 50,000 for those injured.

The Prime Minister’s Office posted on X;

"Pained by the loss of lives due to a fire tragedy in Solapur, Maharashtra. Condolences to those who have lost their loved ones. May the injured recover soon.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM" @narendramodi

"महाराष्ट्रात सोलापूर इथे आग लागून झालेल्या दुर्घटनेतील जीवितहानीमुळे तीव्र दु:ख झाले. आपले प्रियजन गमावलेल्या कुटुंबांप्रति माझ्या सहवेदना. जखमी झालेले लवकर बरे होवोत ही प्रार्थना. पंतप्रधान राष्ट्रीय मदत निधीमधून (PMNRF) प्रत्येक मृतांच्या वारसाला 2 लाख रुपयांची मदत दिली जाईल. जखमींना 50,000 रुपये दिले जातील : पंतप्रधान" @narendramodi