ನಮಸ್ಕಾರ!
ಈ ಪ್ರಮುಖ ವೆಬಿನಾರ್‌ನಲ್ಲಿ ಭಾರತದಾದ್ಯಂತ ನಿಮ್ಮ ಅಗಾಧ ಉಪಸ್ಥಿತಿಯು ಇದರ ಮಹತ್ವವನ್ನು ಹೇಳುತ್ತಿದೆ. ನಿಮ್ಮೆಲ್ಲರನ್ನೂ ನಾನು ಸಂಪೂರ್ಣ ಹೃದಯದಿಂದ ಸ್ವಾಗತಿಸುತ್ತೇನೆ. ಬಜೆಟ್ ಅನುಷ್ಠಾನದ ಬಗ್ಗೆ ಈ ಬಾರಿ ಒಂದು ಆಲೋಚನೆ ಮನಸ್ಸಿಗೆ ಬಂದಿದೆ ಎನ್ನುವುದು ನಿಮಗೆ ತಿಳಿದಿದೆ ಮತ್ತು ನಾವು ಹೊಸ ಪ್ರಯೋಗವನ್ನು ಮಾಡುತ್ತಿದ್ದೇವೆ ಮತ್ತು ಈ ಪ್ರಯೋಗವು ಯಶಸ್ವಿಯಾದರೆ, ಭವಿಷ್ಯದಲ್ಲಿಯೂ ಇದು ಹೆಚ್ಚು ಪ್ರಯೋಜನಕಾರಿಯಾಗಲಿದೆ. ಇಲ್ಲಿಯವರೆಗೆ, ಅಂತಹ ಅನೇಕ ವೆವಿನಾರುಗಳನ್ನು ಆಯೋಜಿಸಲಾಗಿದೆ. ದೇಶದ ಸಾವಿರಾರು ಗಣ್ಯರೊಂದಿಗೆ ಬಜೆಟ್ ಬಗ್ಗೆ ಮಾತನಾಡಲು ನನಗೆ ಅವಕಾಶ ಸಿಕ್ಕಿದೆ.
ವೆಬಿನಾರ್‌ಗಳು ದಿನವಿಡೀ ಮುಂದುವರೆದವು ಮತ್ತು ಬಜೆಟ್ ಪ್ರಸ್ತಾಪಗಳ ಅನುಷ್ಠಾನಕ್ಕೆ ಉತ್ತಮವಾದ ಮಾರ್ಗಸೂಚಿಯ ಬಗ್ಗೆ ನಿಮ್ಮೆಲ್ಲರಿಂದ ಉತ್ತಮ ಸಲಹೆಗಳು ಬಂದಿವೆ. ನೀವು ಇನ್ನೂ ಎರಡು ಹೆಜ್ಜೆ ಮುಂದೆ ಹೋಗುವ ಮನಸ್ಥಿತಿಯಲ್ಲಿದ್ದೀರಿ ಮತ್ತು ಅದು ಸರ್ಕಾರದ ನಡೆಗಿಂತಲೂ ವೇಗವಾಗಿ ಕಾಣುತ್ತದೆ. ಇದು ನನಗೆ ಸ್ವತಃ ಸಂತೋಷಕರ ಸುದ್ದಿಯಾಗಿದೆ ಮತ್ತು ದೇಶದ ಬಜೆಟ್ ಮತ್ತು ನೀತಿ ನಿರೂಪಣೆ ಕೇವಲ ಸರ್ಕಾರದ ಪ್ರಕ್ರಿಯೆಯಾಗಿ ಉಳಿಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ಈ ಸಂವಾದದಲ್ಲಿ ಇಂದು ಪ್ರಯತ್ನಿಸುತ್ತೇವೆ ಎಂದು ನನಗೆ ಖಾತ್ರಿಯಿದೆ. ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಪಾಲುದಾರರ ಪರಿಣಾಮಕಾರಿ ಭಾಗವಹಿಸುವಿಕೆ ಇರಬೇಕು. ಈಗ ನಡೆಯುತ್ತಿರುವ ಸರಣಿಯ ಭಾಗವಾಗಿ, ಉತ್ಪಾದನಾ ಕ್ಷೇತ್ರಕ್ಕೆ ಅಂದರೆ ಮೇಕ್ ಇನ್ ಇಂಡಿಯಾಗೆ ಉತ್ತೇಜನವನ್ನು ನೀಡುವ ಸಲುವಾಗಿ ಎಲ್ಲಾ ಪ್ರಮುಖ ಸಹೋದ್ಯೋಗಿಗಳೊಂದಿಗೆ ಈ ಸಂವಾದವನ್ನು ಇಂದು ನಡೆಸಲಾಗುತ್ತಿದೆ. ನಾನು ನಿಮಗೆ ಹೇಳಿದಂತೆ ಕಳೆದ ವಾರಗಳಲ್ಲಿ ವಿವಿಧ ಕ್ಷೇತ್ರಗಳ ಜನರೊಂದಿಗೆ ಬಹಳ ಫಲಪ್ರದ ಸಂಭಾಷಣೆ ನಡೆದಿತ್ತು ಮತ್ತು ಬಹಳ ಮುಖ್ಯವಾದ ನವೀನ ಸಲಹೆಗಳು ಬಂದಿವೆ. ಇಂದಿನ ವೆಬಿನಾರ್‌ನಲ್ಲಿನ ಗಮನವು ಉತ್ಪಾದನಾ ಸಂಬಂಧಿತ ಉತ್ತೇಜನಳೊಂದಿಗೆ (ಪಿ.ಎಲ್.ಐ) ಪ್ರತ್ಯೇಕವಾಗಿ ಸಂಬಂಧ ಹೊಂದಿದೆ.
ಸ್ನೇಹಿತರೇ,
ಕಳೆದ 6-7 ವರ್ಷಗಳಲ್ಲಿ, ಮೇಕ್ ಇನ್ ಇಂಡಿಯಾವನ್ನು ವಿವಿಧ ಹಂತಗಳಲ್ಲಿ ಪ್ರೋತ್ಸಾಹಿಸಲು ಹಲವಾರು ಯಶಸ್ವಿ ಪ್ರಯತ್ನಗಳನ್ನು ಮಾಡಲಾಗಿದೆ. ನಿಮ್ಮೆಲ್ಲರ ಕೊಡುಗೆಯು ಶ್ಲಾಘನೀಯವಾಗಿದೆ. ಈ ಪ್ರಯತ್ನಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು, ನಮ್ಮ ವೇಗ ಮತ್ತು ಪ್ರಮಾಣವನ್ನು ಹೆಚ್ಚಿಸಲು ಈಗ ನಾವು ಇನ್ನೂ ಹಲವಾರು ದೊಡ್ಡ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಮತ್ತು ಕೊರೊನಾದ ಕಳೆದ ಒಂದು ವರ್ಷದ ಅನುಭವದ ನಂತರ, ಇದು ಕೇವಲ ಭಾರತಕ್ಕೆ ಒಂದು ಅವಕಾಶವಲ್ಲ ಎಂದು ನನಗೆ ಮನವರಿಕೆಯಾಗಿದೆ. ಇದು ಭಾರತ ಮತ್ತು ಜಗತ್ತಿಗೆ ಒಂದು ಜವಾಬ್ದಾರಿಯಾಗಿದೆ. ಆದ್ದರಿಂದ, ನಾವು ಈ ದಿಕ್ಕಿನಲ್ಲಿ ಬಹಳ ವೇಗವಾಗಿ ಸಾಗಬೇಕಾಗಿದೆ. ಉತ್ಪಾದನೆಯು ಆರ್ಥಿಕತೆಯ ಪ್ರತಿಯೊಂದು ವಿಭಾಗವನ್ನು ಹೇಗೆ ಪರಿವರ್ತಿಸುತ್ತದೆ, ಅದು ಹೇಗೆ ಪ್ರಭಾವವನ್ನು ಉಂಟುಮಾಡುತ್ತದೆ, ಪರಿಸರ ವ್ಯವಸ್ಥೆಯನ್ನು ಹೇಗೆ ರಚಿಸುತ್ತದೆ ಎಂಬುದು ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ದೇಶಗಳು ತಮ್ಮ ಅಭಿವೃದ್ಧಿಯನ್ನು ಚುರುಕುಗೊಳಿಸಿದ ಉದಾಹರಣೆಗಳನ್ನು ನಾವು ಪ್ರಪಂಚದಾದ್ಯಂತ ಕಾಣುತ್ತೇವೆ. ಹೆಚ್ಚುತ್ತಿರುವ ಉತ್ಪಾದನಾ ಸಾಮರ್ಥ್ಯಗಳು ದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ.
ಭಾರತ ಕೂಡ ಈಗ ಅದೇ ವಿಧಾನದಿಂದ ಅತ್ಯಂತ ವೇಗವಾಗಿ ಕೆಲಸ ಮಾಡಲು ಬಯಸಿದೆ ಮತ್ತು ಮುಂದುವರಿಯಲು ಬಯಸಿದೆ. ಉತ್ಪಾದನೆಯನ್ನು ಉತ್ತೇಜಿಸಲು ನಮ್ಮ ಸರ್ಕಾರ ಈ ವಲಯದಲ್ಲಿ ನಿರಂತರವಾಗಿ ಸುಧಾರಣೆಗಳನ್ನು ಮಾಡುತ್ತಿದೆ. ನಮ್ಮ ನೀತಿ ಮತ್ತು ಕಾರ್ಯತಂತ್ರವು ಎಲ್ಲ ರೀತಿಯಲ್ಲೂ ಸ್ಪಷ್ಟವಾಗಿದೆ. ನಮ್ಮ ಆಲೋಚನೆ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಮತ್ತು ನಾವು ಶೂನ್ಯ ಪರಿಣಾಮ, ಶೂನ್ಯ ದೋಷವನ್ನು ನಿರೀಕ್ಷಿಸುತ್ತೇವೆ. ಭಾರತದಲ್ಲಿ ಉತ್ಪಾದನೆಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು ನಾವು ಶ್ರಮಿಸಬೇಕು. ಒಟ್ಟಾಗಿ ನಾವು ನಮ್ಮ ಉತ್ಪನ್ನಗಳ ಗುರುತು, ಉತ್ಪಾದನಾ ವೆಚ್ಚ, ಉತ್ಪನ್ನಗಳ ಗುಣಮಟ್ಟ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ದಕ್ಷತೆಯನ್ನು ರಚಿಸಲು ಕೆಲಸ ಮಾಡಬೇಕು. ಮತ್ತು ನಮ್ಮ ಉತ್ಪನ್ನಗಳು ಬಳಕೆದಾರ ಸ್ನೇಹಿಯಾಗಿರಬೇಕು; ತಂತ್ರಜ್ಞಾನವು ಅತ್ಯಂತ ಆಧುನಿಕ, ಕೈಗೆಟುಕುವ ಮತ್ತು ದೀರ್ಘಕಾಲೀನವಾಗಿರಬೇಕು. ನಾವು ಹೆಚ್ಚು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ರಮುಖ ಸಾಮರ್ಥ್ಯ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಆಕರ್ಷಿಸಬೇಕಾಗಿದೆ. ಮತ್ತು, ಉದ್ಯಮದಲ್ಲಿ ನಿಮ್ಮೆಲ್ಲರ ಸಕ್ರಿಯ ಭಾಗವಹಿಸುವಿಕೆ ಕೂಡ ಅಷ್ಟೇ ಅಗತ್ಯವಾಗಿರುತ್ತದೆ. ನಿಮ್ಮೆಲ್ಲರನ್ನೂ ಒಟ್ಟುಗೂಡಿಸಿ ಸರ್ಕಾರ ಇದನ್ನು ಗಮನದಲ್ಲಿ ಇಟ್ಟುಕೊಂಡು ಮುಂದುವರಿಯಲು ಪ್ರಯತ್ನಿಸುತ್ತಿದೆ. ವ್ಯವಹಾರವನ್ನು ಸುಲಭಗೊಳಿಸುವುದು, ಅನುಸರಣೆ ಹೊರೆ ಕಡಿಮೆ ಮಾಡುವುದು, ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ಮಲ್ಟಿಮೋಡಲ್ ಮೂಲಸೌಕರ್ಯಗಳನ್ನು ನಿರ್ಮಿಸುವುದು ಅಥವಾ ಜಿಲ್ಲಾ ಮಟ್ಟದಲ್ಲಿ ಎಕ್ಸಪೋರ್ಟ್ ಹಬ್‌ಗಳನ್ನು ನಿರ್ಮಿಸುವುದು ಇವೆಲ್ಲಾ ಹಂತದಲ್ಲೂ ಕೆಲಸ ಮಾಡಲಾಗುತ್ತಿದೆ.
ಎಲ್ಲದರಲ್ಲೂ ಸರ್ಕಾರದ ಮಧ್ಯಸ್ಥಿಕೆಯು ಪರಿಹಾರಗಳಿಗಿಂತ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ನಮ್ಮ ಸರ್ಕಾರ ನಂಬುತ್ತದೆ. ಆದ್ದರಿಂದ, ನಮ್ಮ Self-Regulation, Self-Attesting, Self-Certification, ಅಂದರೆ ದೇಶದ ನಾಗರಿಕರನ್ನು ಅವಲಂಬಿಸಿ ಮುಂದುವರಿಯುವುದು. ಈ ವರ್ಷ 6,000ಕ್ಕೂ ಹೆಚ್ಚು ಕೇಂದ್ರ ಮತ್ತು ರಾಜ್ಯ ಮಟ್ಟದ ಹೊಂದಾಣಿಕೆಗಳನ್ನು ಕಡಿಮೆ ಮಾಡಲು ನಾವು ಯೋಜಿಸಿದ್ದೇವೆ. ಈ ನಿಟ್ಟಿನಲ್ಲಿ ನಿಮ್ಮ ಅಭಿಪ್ರಾಯಗಳು ಮತ್ತು ಸಲಹೆಗಳು ಬಹಳ ಮುಖ್ಯ. ವೆಬಿನಾರಿನಲ್ಲಿ ನಿಮಗೆ ಹೆಚ್ಚು ಸಮಯ ಸಿಗದಿರಬಹುದು, ಆದರೆ ನೀವು ನನಗೆ ಲಿಖಿತರೂಪದಲ್ಲಿ ಕಳುಹಿಸಬಹುದು. ನಾವು ಅದನ್ನು ಗಂಭೀರವಾಗಿ ಪರಿಗಣಿಸಲಿದ್ದೇವೆ ಏಕೆಂದರೆ complianceನ ಹೊರೆ ಕನಿಷ್ಠ ಪ್ರಮಾಣದಲ್ಲಿ ಇರಬೇಕು. ಈಗ ತಂತ್ರಜ್ಞಾನವಿದೆ ಆದ್ದರಿಂದ ನಾವು ಮತ್ತೆ ಮತ್ತೆ ಫಾರ್ಮ್‌ಗಳನ್ನು ಭರ್ತಿ ಮಾಡುವುದನ್ನು ತೊಡೆದುಹಾಕಬೇಕು. ಅಂತೆಯೇ, ಸ್ಥಳೀಯ ಮಟ್ಟದಲ್ಲಿ ರಫ್ತನ್ನು ಉತ್ತೇಜಿಸಲು ರಫ್ತುದಾರರು ಮತ್ತು ಉತ್ಪಾದಕರಿಗೆ ಜಾಗತಿಕ ವೇದಿಕೆಯನ್ನು ಒದಗಿಸಲು ಸರ್ಕಾರ ಇಂದು ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ರಫ್ತು ವ್ಯವಹಾರಗಳಲ್ಲಿ ಎಂಎಸ್‌ಎಂಇಗಳು, ರೈತರು ಮತ್ತು ಸಣ್ಣ ಕರಕುಶಲ ಕುಶಲಕರ್ಮಿಗಳಿಗೆ ಸಹಾಯ ಮಾಡುತ್ತದೆ.
ಸ್ನೇಹಿತರೇ,
ಉತ್ಪಾದನೆ ಮತ್ತು ರಫ್ತುಗಳನ್ನು ವಿಸ್ತರಿಸುವುದು ಉತ್ಪಾದನಾ ಸಂಬಂಧಿತ ಉತ್ತೇಜಕ ಯೋಜನೆ, ಪಿ.ಎಲ್. ಇನ ಹಿಂದಿನ ನಮ್ಮ ನಂಬಿಕೆಯಾಗಿದೆ. ಈ ವೆಬಿನಾರಿನಲ್ಲಿನ ಯೋಜನೆಗಳಿಗೆ ನಾವು ದೃಢವಾದ ಆಕಾರವನ್ನು ನೀಡಿದರೆ ಬಜೆಟ್‌ನ ಹಿಂದಿನ ತತ್ತ್ವವು ಪರಿಣಾಮಕಾರಿಯಾಗಿದೆ ಎಂದು ಸಾಬೀತುಪಡಿಸಬಹುದು, ಇದರಿಂದಾಗಿ ವಿಶ್ವದಾದ್ಯಂತದ ಉತ್ಪಾದನಾ ಕಂಪನಿಗಳು ಭಾರತವನ್ನು ತಮ್ಮ ಮೂಲವನ್ನಾಗಿ ಮಾಡಿಕೊಳ್ಳುತ್ತವೆ ಮತ್ತು ನಮ್ಮ ದೇಶೀಯ ಕೈಗಾರಿಕೆಗಳು ಮತ್ತು ಎಂಎಸ್‌ಎಂಇಗಳ ಸಂಖ್ಯೆ ಮತ್ತು ಸಾಮರ್ಥ್ಯದಲ್ಲಿ ಬೆಳವಣಿಗೆ ಕಂಡುಬರುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಭಾರತೀಯ ಕೈಗಾರಿಕೆಗಳ ರಫ್ತಿನ ಈ ಯೋಜನೆಯು ಪ್ರಮುಖ ಸಾಮರ್ಥ್ಯಗಳಲ್ಲಿ ಜಾಗತಿಕ ಉಪಸ್ಥಿತಿಯ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ನಾವು ರಫ್ತು ಮಾಡುವ ಪರಿಸ್ಥಿತಿಯನ್ನು ಸೀಮಿತ ಜಾಗದಲ್ಲಿ, ಸೀಮಿತ ದೇಶಗಳಲ್ಲಿ, ದೇಶದ ಸೀಮಿತ ಮೂಲೆಗಳಿಂದ ಸೀಮಿತ ವಸ್ತುಗಳಲ್ಲಿ ಬದಲಾಯಿಸಬೇಕಾಗಿದೆ. ಏಕೆ ಪ್ರತಿ ಜಿಲ್ಲೆಯು ಭಾರತದ ರಫ್ತುದಾರರಾಗಬಾರದು? ಪ್ರತಿಯೊಂದು ದೇಶವು ಭಾರತದಿಂದ ಮತ್ತು ದೇಶದ ಪ್ರತಿಯೊಂದು ಮೂಲೆಯಿಂದ ಏಕೆ ಆಮದು ಮಾಡಬಾರದು? ರಫ್ತುಗಾಗಿ ಎಲ್ಲಾ ರೀತಿಯ ಉತ್ಪನ್ನಗಳು ಏಕೆ ಇರಬಾರದು? ಹಿಂದಿನ ಮತ್ತು ಅಸ್ತಿತ್ವದಲ್ಲಿರುವ ಯೋಜನೆಗಳ ನಡುವಿನ ಸ್ಪಷ್ಟ ವ್ಯತ್ಯಾಸವನ್ನು ನೀವು ಗಮನಿಸಿರಬಹುದು. ಮೊದಲಿನ, ಕೈಗಾರಿಕಾ ಪ್ರೋತ್ಸಾಹಗಳು ಓಪನ್ ಎಂಡ್ ಇನ್ಪುಟ್ ಆಧಾರಿತ ಸಬ್ಸಿಡಿಯನ್ನು ಒದಗಿಸುತ್ತಿದ್ದವು. ಈಗ ಇದನ್ನು ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ಕಾರ್ಯಕ್ಷಮತೆಯ ಆಧಾರಿತಗೊಳಿಸಲಾಗಿದೆ. ಈ ಯೋಜನೆಯ ವ್ಯಾಪ್ತಿಯಲ್ಲಿ 13 ವಲಯಗಳನ್ನು ಮೊದಲ ಬಾರಿಗೆ ತರುವುದು ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಸ್ನೇಹಿತರೇ,
ಈ ಯೋಜನೆಯನ್ನು ಉದ್ದೇಶಿಸಿರುವ ಪಿಎಲ್ಐ ವಲಯಕ್ಕೆ ಅದು ಲಾಭವನ್ನು ನೀಡುವುದು ಮಾತ್ರವಲ್ಲ, ಆ ವಲಯಕ್ಕೆ ಸಂಬಂಧಿಸಿದ ಸಂಪೂರ್ಣ ಪರಿಸರ ವ್ಯವಸ್ಥೆಗೆ ಇದು ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಆಟೋ ಮತ್ತು ಫಾರ್ಮಾ ಕ್ಷೇತ್ರಗಳಲ್ಲಿ ಪಿಎಲ್ಐನೊಂದಿಗೆ, ವಾಹನ ಭಾಗಗಳು, ವೈದ್ಯಕೀಯ ಉಪಕರಣಗಳು ಮತ್ತು ಔಷಧಿಗಳ ಕಚ್ಚಾ ವಸ್ತುಗಳ ಮೇಲೆ ವಿದೇಶಿ ಅವಲಂಬನೆ ಬಹಳ ಕಡಿಮೆಯಾಗುತ್ತದೆ. ಸುಧಾರಿತ ಸೆಲ್ ಬ್ಯಾಟರಿಗಳು, ಸೌರ ಪಿವಿ ಮಾಡ್ಯೂಲ್‌ಗಳು ಮತ್ತು ವಿಶೇಷ ಉಕ್ಕಿನ ಮೂಲಕ ದೇಶದ ಇಂಧನ ಕ್ಷೇತ್ರವನ್ನು ಆಧುನೀಕರಿಸಲಾಗುವುದು. ನಮ್ಮದೇ ಕಚ್ಚಾ ವಸ್ತು, ಶ್ರಮ, ಕೌಶಲ ಮತ್ತು ಪ್ರತಿಭೆಯಿಂದ ನಾವು ಮೇಲಕ್ಕೇರಬಹುದು. ಅಂತೆಯೇ, ಜವಳಿ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಿಗೆ ಪಿಎಲ್ಐ ನಮ್ಮ ಇಡೀ ಕೃಷಿ ಕ್ಷೇತ್ರಕ್ಕೆ ಪ್ರಯೋಜನವನ್ನು ನೀಡುತ್ತದೆ. ಇದು ನಮ್ಮ ರೈತರು, ದನಗಾಹಿಗಳು, ಮೀನುಗಾರರು, ಅಂದರೆ ಇಡೀ ಗ್ರಾಮೀಣ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಭಾರತದ ಪ್ರಸ್ತಾವನೆಯ ಮೇರೆಗೆ ವಿಶ್ವಸಂಸ್ಥೆಯು 2023 ಅನ್ನು ಅಂತರರಾಷ್ಟ್ರೀಯ ಮಿಲ್ಲೆಟ್‌ಗಳ (ಸಿರಿಧಾನ್ಯಗಳ) ವರ್ಷವೆಂದು ಘೋಷಿಸಿರುವುದನ್ನು ನೀವು ನಿನ್ನೆ ನೋಡಿರಬೇಕು. 70 ಕ್ಕೂ ಹೆಚ್ಚು ದೇಶಗಳು ಭಾರತದ ಪ್ರಸ್ತಾಪವನ್ನು ಬೆಂಬಲಿಸಿ ಬಂದವು. ತದನಂತರ, ಯು.ಎನ್. ಜನರಲ್ ಅಸೆಂಬ್ಲಿಯಲ್ಲಿ ಈ ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಇದು ದೇಶಕ್ಕೆ ಅದ್ಭುತವಾದ ವಿಷಯ. ನೀರಾವರಿ ಸೌಲಭ್ಯಗಳು ವಿರಳವಾಗಿರುವ ಸಿರಿಧಾನ್ಯಗಳನ್ನು ಬೆಳೆಯುವ ನಮ್ಮ ರೈತರಿಗೆ ಮತ್ತು ವಿಶೇಷವಾಗಿ ಸಣ್ಣ ರೈತರಿಗೆ ಇದು ಒಂದು ಉತ್ತಮ ಅವಕಾಶವಾಗಿದೆ. 2023 ಕ್ಕೆ ಅನುಮೋದನೆ ಪಡೆದ ಯು.ಎನ್ ಮೂಲಕ ವಿಶ್ವದ ಈ ಸಿರಿಧಾನ್ಯದ ಮಹತ್ವವನ್ನು ನಾವು ಪ್ರಸ್ತಾಪಿಸಿದ್ದೇವೆ. ನಮ್ಮ ರೈತರು ಈ ಸಿರಿಧಾನ್ಯವನ್ನು ನೀರಾವರಿ ಸೌಲಭ್ಯಗಳು ಲಭ್ಯವಿಲ್ಲದ ಕಠಿಣ ಭೂಪ್ರದೇಶದಲ್ಲಿ ಬೆಳೆಯುತ್ತಾರೆ. ಪೌಷ್ಟಿಕಾಂಶ ದ ಮೌಲ್ಯದಿಂದಾಗಿ ಭಾರತೀಯ ರೈತರಿಗೆ ವಿವಿಧ ಬಗೆಯ ರಾಗಿಗಳನ್ನು ಅಭಿವೃದ್ಧಿಪಡಿಸಲು ಮತ್ತು ಅದನ್ನು ಜಗತ್ತಿನಲ್ಲಿ ಕೈಗೆಟುಕುವಂತೆ ಮಾಡಲು ಇಂದು ಉತ್ತಮ ಅವಕಾಶವಿದೆ. ನಾವು ಜಗತ್ತಿನಲ್ಲಿ ಯೋಗದ ಪ್ರಚಾರ ಮಾಡಿದಂತೆ, ನಾವೆಲ್ಲರೂ, ವಿಶೇಷವಾಗಿ ಕೃಷಿ ಸಂಸ್ಕರಣೆಯಲ್ಲಿ ತೊಡಗಿರುವವರು ರಾಗಿಗಳನ್ನು, ಅಂದರೆ ಒರಟಾದ ಏಕದಳಗಳ ಪ್ರಚಾರವನ್ನು ಮಾಡಬಹುದು.
2023ರಲ್ಲಿ ನಮಗೆ ಇನ್ನೂ ಸಮಯವಿದೆ, ನಾವು ಸಂಪೂರ್ಣ ಸಿದ್ಧತೆಯೊಂದಿಗೆ ವಿಶ್ವಾದ್ಯಂತ ಅಭಿಯಾನವನ್ನು ಪ್ರಾರಂಭಿಸಬಹುದು. ಕೊರೊನಾದಿಂದ ಜನರನ್ನು ರಕ್ಷಿಸಲು ಮೇಡ್ ಇನ್ ಇಂಡಿಯಾ ಲಸಿಕೆಗಳು ಇದ್ದಂತೆಯೇ, ಪೌಷ್ಟಿಕಾಂಶ ದ ಮೌಲ್ಯದಿಂದ ತುಂಬಿರುವ ಭಾರತದಲ್ಲಿ ಉತಾದನೆಯಾಗುವ ಒರಟಾದ ಧಾನ್ಯಗಳು ಜನರನ್ನು ರೋಗದಿಂದ ರಕ್ಷಿಸಲು ಬಹಳ ಉಪಯುಕ್ತವಾಗುತ್ತವೆ. ಒರಟಾದ ಸಿರಿಧಾನ್ಯಗಳ ಪೌಷ್ಟಿಕಾಂಶ ದ ಸಾಮರ್ಥ್ಯವನ್ನು ನಾವೆಲ್ಲರೂ ತಿಳಿದಿದ್ದೇವೆ. ಒರಟಾದ ಧಾನ್ಯಗಳು ಅಡುಗೆಮನೆಯಲ್ಲಿ ಮೊದಲು ಪ್ರಮುಖವಾಗಿ ಕಾಣುವ ಕಾಲವಿತ್ತು. ಈಗ ಅದೇ ಪ್ರವೃತ್ತಿ ಮರಳುತ್ತಿದೆ. ಭಾರತದ ಉಪಕ್ರಮವನ್ನು ಅನುಸರಿಸಿ ಯುಎನ್ 2023 ಅನ್ನು ಯುಎನ್ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದ ನಂತರ ದೇಶ ಮತ್ತು ವಿದೇಶಗಳಲ್ಲಿ ಸಿರಿಧಾನ್ಯಗಳ ಬೇಡಿಕೆ ಶೀಘ್ರವಾಗಿ ಹೆಚ್ಚಾಗಲಿದೆ. ಇದು ನಮ್ಮ ರೈತರಿಗೆ, ವಿಶೇಷವಾಗಿ ದೇಶದ ಸಣ್ಣ ರೈತರಿಗೆ ಬಹಳ ಪ್ರಯೋಜನವನ್ನು ನೀಡುತ್ತದೆ. ಆದ್ದರಿಂದ, ಕೃಷಿ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ತೊಡಗಿರುವ ಜನರು ಈ ಅವಕಾಶದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕೆಂದು ನಾನು ಕೋರುತ್ತೇನೆ. ವೆವಿನಾರಿನಲ್ಲಿನ ನಿಮ್ಮ ಸಲಹೆಗಳನ್ನು ಅನುಸರಿಸಿ ಸಣ್ಣ ಕಾರ್ಯಪಡೆಯೊಂದನ್ನು ರಚಿಸಬೇಕು, ಅದು ಸಾರ್ವಜನಿಕ ಖಾಸಗಿ ಸಹಭಾಗಿತ್ವಕ್ಕೆ ಒಂದು ಮಾದರಿಯನ್ನು ಅಭಿವೃದ್ಧಿಪಡಿಸಬೇಕು, ಅದು ಈ ಮಿಲ್ಲೆಟ್ಸ್ ಮಿಷನ್ ಅನ್ನು ಜಗತ್ತಿಗೆ ಕೊಂಡೊಯ್ಯುತ್ತದೆ. ಪ್ರಪಂಚದ ವಿವಿಧ ದೇಶಗಳ ರುಚಿಗೆ ಅನುಕೂಲಕರ ಮತ್ತು ಆರೋಗ್ಯಕ್ಕೆ ಬಹಳ ಪೌಷ್ಟಿಕವಾಗಿರುವ ಎಲ್ಲಾ ಪ್ರಭೇದಗಳನ್ನು ನಾವು ರಚಿಸಬಹುದು ಎಂದು ಇವುಗಳನ್ನು ಮುಂದೆ ಕೊಂಡೊಯ್ಯಬಹುದು.
ಸ್ನೇಹಿತರೇ,
ಈ ವರ್ಷದ ಬಜೆಟ್‌ನಲ್ಲಿ ಪಿಎಲ್‌ಐ ಯೋಜನೆಗೆ ಸಂಬಂಧಿಸಿದ ಯೋಜನೆಗಳಿಗಾಗಿ 2 ಲಕ್ಷ ಕೋಟಿ ರೂ. ಉತ್ಪಾದನೆಯ ಸರಾಸರಿ 5 ಶೇಕಡಾವನ್ನು ಪ್ರೋತ್ಸಾಹಕವಾಗಿ ನೀಡಲಾಗುತ್ತದೆ. ಅಂದರೆ, ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಸುಮಾರು 520 ಬಿಲಿಯನ್ ಡಾಲರ್ ಮೌಲ್ಯದ ಉತ್ಪಾದನೆಯನ್ನು ಪಿಎಲ್ಐ ಯೋಜನೆಯ ಮೂಲಕ ಮಾತ್ರ ಅಂದಾಜಿಸಲಾಗಿದೆ. ಪಿಎಲ್ಐ ಯೋಜಿಸಲಾಗಿರುವ ಕ್ಷೇತ್ರಗಳಲ್ಲಿನ ಕಾರ್ಯಪಡೆಯು ಬಹುತೇಕ ದ್ವಿಗುಣಗೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. ಪಿಎಲ್ಐ ಯೋಜನೆಯು ಉದ್ಯೋಗ ಸೃಷ್ಟಿಯಲ್ಲಿ ಭಾರಿ ಪರಿಣಾಮ ಬೀರಲಿದೆ. ಉತ್ಪಾದನೆ ಮತ್ತು ರಫ್ತಿನ ಲಾಭದ ಹೊರತಾಗಿ, ಆದಾಯದ ಏರಿಕೆಯ ನಂತರ ಬೇಡಿಕೆಯ ಹೆಚ್ಚಳದಿಂದಾಗಿ ಉದ್ಯಮವು ಸಹ ಲಾಭವನ್ನು ಪಡೆಯುತ್ತದೆ, ಅಂದರೆ ಲಾಭವನ್ನು ದ್ವಿಗುಣಗೊಳಿಸುತ್ತದೆ.
ಸ್ನೇಹಿತರೇ,
ಪಿಎಲ್ಐಗೆ ಸಂಬಂಧಿಸಿದ ಪ್ರಕಟಣೆಗಳನ್ನು ತ್ವರಿತವಾಗಿ ಜಾರಿಗೊಳಿಸಲಾಗುತ್ತಿದೆ. ಐಟಿ ಯಂತ್ರಾಂಶ ಮತ್ತು ಟೆಲಿಕಾಂ ಉಪಕರಣಗಳ ತಯಾರಿಕೆಗೆ ಸಂಬಂಧಿಸಿದ ಎರಡು ಪಿಎಲ್ಐ ಯೋಜನೆಗಳಿಗೆ ಕ್ಯಾಬಿನೆಟ್ ಈಗಾಗಲೇ ಅನುಮೋದನೆ ನೀಡಿದೆ. ಈ ಕ್ಷೇತ್ರಗಳಿಗೆ ಸಂಬಂಧಿಸಿದ ಸಹೋದ್ಯೋಗಿಗಳು ಇಲ್ಲಿಯವರೆಗೆ ತಮ್ಮ ಮೌಲ್ಯಮಾಪನವನ್ನು ಮಾಡಿರಬೇಕು ಎಂದು ನನಗೆ ಖಾತ್ರಿಯಿದೆ. ಐಟಿ ಯಂತ್ರಾಂಶದ ಉತ್ಪಾದನೆಯು ಮುಂದಿನ ನಾಲ್ಕು ವರ್ಷಗಳಲ್ಲಿ ಸುಮಾರು ರೂ. 3.25 ಟ್ರಿಲಿಯನ್ ಆಗುವುದು. ಐಟಿ ಯಂತ್ರಾಂಶದಲ್ಲಿ ದೇಶೀಯ ಮೌಲ್ಯವರ್ಧನೆಯು ಐದು ವರ್ಷಗಳಲ್ಲಿ ಅಸ್ತಿತ್ವದಲ್ಲಿರುವ ಶೇಕಡ 5-10 ಕ್ಕಿಂತ ಶೇಕಡ 20-25 ಕ್ಕೆ ಹೆಚ್ಚಾಗುತ್ತದೆ. ಅಂತೆಯೇ, ಟೆಲಿಕಾಂ ಉಪಕರಣಗಳ ತಯಾರಕರು ಮುಂದಿನ ಐದು ವರ್ಷಗಳಲ್ಲಿ ಸುಮಾರು 2.5 ಲಕ್ಷ ಕೋಟಿ ರೂಪಾಯಿಗಳ ಹೆಚ್ಚಳವನ್ನು ಕಾಣಲಿದೆ. ನಾವು ಸುಮಾರು ರೂ. 2 ಲಕ್ಷ ಕೋಟಿ ಮೌಲ್ಯದ ಟೆಲಿಕಾಂ ಉಪಕರಣಗಳನ್ನು ರಫ್ತು ಮಾಡುವ ಸ್ಥಿತಿಯಲ್ಲಿರುತ್ತೇವೆ. ಔಷಧಿ ವಲಯದಲ್ಲೂ, ಪಿಎಲ್ಐ ಅಡಿಯಲ್ಲಿ ಲಕ್ಷ ಕೋಟಿ ರೂಪಾಯಿಗಳ ಮೌಲ್ಯದ ಹೂಡಿಕೆಯ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ನಾವು ದೊಡ್ಡ ಗುರಿಗಳೊಂದಿಗೆ ಮುಂದುವರಿಯಬಹುದು. ಔಷಧ ಉತ್ಪನ್ನಗಳ ಮಾರಾಟವು ಸುಮಾರು ರೂ. 3 ಲಕ್ಷ ಕೋಟಿ ಮತ್ತು ರಫ್ತು ಸುಮಾರು ರೂ. 2 ಲಕ್ಷ ಕೋಟಿಯಷ್ಟು ಹೆಚ್ಚಾಗಬಹುದು.
ಸ್ನೇಹಿತರೇ,
ಭಾರತದಿಂದ ಲಕ್ಷಾಂತರ ಪ್ರಮಾಣದ ಲಸಿಕೆಗಳನ್ನು ಹೊತ್ತುಕೊಂಡು ಇಂದು ವಿಶ್ವದಾದ್ಯಂತ ಸಾಗುತ್ತಿರುವ ವಿಮಾನವು ಖಾಲಿಯಾಗಿ ಹಿಂದಿರುಗುತ್ತಿಲ್ಲ. ಆ ದೇಶಗಳ ಜನರ ವಿಶ್ವಾಸ, ಅನ್ಯೋನ್ಯ, ವಾತ್ಸಲ್ಯ, ಅನಾರೋಗ್ಯದಿಂದ ಬಳಲುತ್ತಿರುವ ವೃದ್ಧರ ಆಶೀರ್ವಾದ ಮತ್ತು ಭಾರತದ ಬಗ್ಗೆ ಭಾವನಾತ್ಮಕ ಬಾಂಧವ್ಯದೊಂದಿಗೆ ಅವರು ಹಿಂದಿರುಗುತ್ತಿದ್ದಾರೆ. ಮತ್ತು ಬಿಕ್ಕಟ್ಟಿನ ಅವಧಿಯಲ್ಲಿ ಸೃಷ್ಟಿಯಾದ ವಿಶ್ವಾಸವು ಕೇವಲ ಪ್ರಭಾವವನ್ನು ಸೃಷ್ಟಿಸುವುದಿಲ್ಲ, ಅದು ಶಾಶ್ವತ, ಅಮರ ಮತ್ತು ಸ್ಫೂರ್ತಿದಾಯಕವಾಗಿದೆ. ಭಾರತ ಇಂದು ಮಾನವ ಜನಾಂಗಕ್ಕೆ ನಮ್ರತೆಯಿಂದ ಸೇವೆ ಸಲ್ಲಿಸುತ್ತಿರುವ ರೀತಿ, ನಾವು ಅದನ್ನು ಯಾವುದೇ ಅಹಂಕಾರದಿಂದ ಮಾಡುತ್ತಿಲ್ಲ, ಆದರೆ ನಾವು ಅದನ್ನು ಕರ್ತವ್ಯದ ರೀತಿಯಲ್ಲಿ ಮಾಡುತ್ತಿದ್ದೇವೆ. ಸೇವೆಯೇ ಸರ್ವೋಚ್ಚ ಕರ್ತವ್ಯ ಎನ್ನುವುದು ನಮ್ಮ ಸಂಸ್ಕೃತಿ. ಇದರೊಂದಿಗೆ, ಭಾರತವು ಪ್ರಪಂಚದಾದ್ಯಂತ ಬಹಳ ದೊಡ್ಡ ಬ್ರಾಂಡ್ ಆಗಿ ಮಾರ್ಪಟ್ಟಿದೆ. ಭಾರತದ ವಿಶ್ವಾಸಾರ್ಹತೆ ಮತ್ತು ಗುರುತು ನಿರಂತರವಾಗಿ ಹೊಸ ಎತ್ತರವನ್ನು ತಲುಪುತ್ತಿದೆ. ಮತ್ತು ಈ ನಂಬಿಕೆ ಲಸಿಕೆಗಳು ಮತ್ತು ಔಷಧ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿಲ್ಲ. ಒಂದು ದೇಶವು ಬ್ರಾಂಡ್ ಆದಾಗ, ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯ ಗೌರವ ಮತ್ತು ಬಾಂಧವ್ಯವು ಎಲ್ಲದರ ಕಡೆಯಿಂದಲೂ ಹೆಚ್ಚಾಗುತ್ತದೆ ಮತ್ತು ಮೊದಲ ಆಯ್ಕೆಯಾಗುತ್ತದೆ.
ನಮ್ಮ ಔಷಧಿಗಳು, ವೈದ್ಯಕೀಯ ವೃತ್ತಿಪರರು ಮತ್ತು ವೈದ್ಯಕೀಯ ಸಲಕರಣೆಗಳ ಬಗೆಗಿನ ವಿಶ್ವಾಸವೂ ಇಂದು ಹೆಚ್ಚಾಗಿದೆ. ಈ ನಂಬಿಕೆಯನ್ನು ಗೌರವಿಸುವ ಸಲುವಾಗಿ, ನಮ್ಮ ದೀರ್ಘಕಾಲೀನ ಕಾರ್ಯತಂತ್ರಕ್ಕೆ ಸಂಬಂಧಿಸಿದಂತೆ ಔಷಧ ಕ್ಷೇತ್ರವು ಇಂದಿನಿಂದ ಕೆಲಸ ಮಾಡಲು ಪ್ರಾರಂಭಿಸಬೇಕು ಮತ್ತು ಅವಕಾಶಗಳ ಲಾಭವನ್ನು ಪಡೆದುಕೊಳ್ಳಬೇಕು. ಮತ್ತು ಸ್ನೇಹಿತರೇ, ಈ ಅವಕಾಶವನ್ನು ನಾವು ಈ ನಂಬಿಕೆಯನ್ನು ಬಿಡಬಾರದು ಮತ್ತು ಇತರ ಕ್ಷೇತ್ರಗಳಲ್ಲೂ ಮುಂದುವರಿಯಲು ಯೋಜಿಸಬೇಕು. ಆದ್ದರಿಂದ, ಈ ಸಕಾರಾತ್ಮಕ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ವಲಯವೂ ಕಾರ್ಯತಂತ್ರ ರೂಪಿಸಲು ಪ್ರಾರಂಭಿಸಬೇಕು. ಇದು ಕಳೆದುಕೊಳ್ಳುವ ಸಮಯವಲ್ಲ; ದೇಶಕ್ಕೆ ಮತ್ತು ನಿಮ್ಮ ಕಂಪನಿಗೆ ಇರುವ ಅವಕಾಶಗಳನ್ನು ಪಡೆದುಕೊಳ್ಳುವ ಸಮಯ ಇದು. ಮತ್ತು, ಸ್ನೇಹಿತರೇ, ನಾನು ಹೇಳುತ್ತಿರುವ ಈ ಕೆಲಸಗಳನ್ನು ಮಾಡುವುದು ಕಷ್ಟವೇನಲ್ಲ. ಪಿಎಲ್ಐ ಯೋಜನೆಯ ಯಶಸ್ಸಿನ ಕಥೆ ಸಹ ಅವರನ್ನು ಬೆಂಬಲಿಸುತ್ತದೆ ಮತ್ತು ಹೌದು, ಅದು ಸಾಧ್ಯ. ಅಂತಹ ಒಂದು ಯಶಸ್ಸಿನ ಕಥೆ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯ. ಕಳೆದ ವರ್ಷ, ನಾವು ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ಸ್ ಘಟಕಗಳನ್ನು ತಯಾರಿಸಲು ಪಿಎಲ್ಐ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಸಾಂಕ್ರಾಮಿಕ ಬಿಕ್ಕಟ್ಟಿನ ಸಮಯದಲ್ಲಿ, ಈ ವಲಯವು ಕಳೆದ ವರ್ಷ ರೂ.35,000 ಕೋಟಿಯಷ್ಟು ಉತ್ಪಾದನೆಯನ್ನು ಮಾಡಿತ್ತು. ಅಲ್ಲದೆ, ಸುಮಾರು ಕೊರೊನಾದ ಅವಧಿಯಲ್ಲಿ ಈ ವಲಯವು 1300 ಕೋಟಿ ರೂಪಾಯಿಗಳ ಬಂಡವಾಳವನ್ನು ಕಂಡಿತ್ತು. ಇದು ಈ ವಲಯದಲ್ಲಿ ಸಾವಿರಾರು ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ.
ಸ್ನೇಹಿತರೇ,
ಪಿಎಲ್ಐ ಯೋಜನೆಯು ದೇಶದ ಎಂಎಸ್ಎಂಇ ಪರಿಸರ ವ್ಯವಸ್ಥೆಯ ಮೇಲೆ ಒಂದಕ್ಕೊಂದು ಪರಿಣಾಮವನ್ನು ಬೀರಲಿದೆ. ನಾನು ಇದನ್ನು ಏಕೆ ಹೇಳುತ್ತಿದ್ದೇನೆಂದರೆ, ಪ್ರತಿಯೊಂದು ವಲಯದಲ್ಲೂ ನಿರ್ಮಿಸಲಾಗುವ ಮುಖ್ಯ ಘಟಕಗಳಿಗೆ ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ಹೊಸ ಸರಬರಾಜುದಾರರ ಅಗತ್ಯವಿರುತ್ತದೆ. ಈ ಹೆಚ್ಚಿನ ಪೂರಕ ಘಟಕಗಳನ್ನು ಎಂಎಸ್‌ಎಂಇ ವಲಯದಲ್ಲಿ ನಿರ್ಮಿಸಲಾಗುವುದು. ಅಂತಹ ಅವಕಾಶಗಳಿಗಾಗಿ ಎಂಎಸ್‌ಎಂಇಗಳನ್ನು ಸಿದ್ಧಪಡಿಸುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಹೂಡಿಕೆ ಮಿತಿಯನ್ನು ಹೆಚ್ಚಿಸುವ ಮತ್ತು ಎಂಎಸ್‌ಎಂಇಗಳ ವ್ಯಾಖ್ಯಾನದಲ್ಲಿ ಬದಲಾವಣೆಯ ನಿರ್ಧಾರಗಳಿಂದ ಎಂಎಸ್‌ಎಂಇ ವಲಯವು ಸಾಕಷ್ಟು ಲಾಭವನ್ನು ಪಡೆಯುತ್ತಿದೆ. ಇಂದು, ನಾವು ಇಲ್ಲಿ ಕುಳಿತಾಗ, ನಿಮ್ಮ ಪೂರ್ವಭಾವಿ ಭಾಗವಹಿಸುವಿಕೆಯನ್ನು ಸಹ ನಾವು ನಿರೀಕ್ಷಿಸುತ್ತೇವೆ. ನೀವು ಪಿಎಲ್ಐಗೆ ಸೇರಲು ಯಾವುದೇ ತೊಂದರೆ ಅನುಭವಿಸುತ್ತಿದ್ದರೆ, ಯಾವುದೇ ಸುಧಾರಣೆಗೆ ಅವಕಾಶವಿದ್ದರೆ, ನೀವು ಚರ್ಚಿಸಬೇಕು ಮತ್ತು ಅದನ್ನು ನನಗೆ ತಿಳಿಸಬೇಕು.
ಸ್ನೇಹಿತರೇ,
ಕಷ್ಟದ ಸಮಯದಲ್ಲಿ ಸಾಮೂಹಿಕ ಪ್ರಯತ್ನದಿಂದ ನಾವು ದೊಡ್ಡ ಗುರಿಗಳನ್ನು ಸಾಧಿಸಬಹುದು ಎನ್ನುವುದನ್ನು ನಾವು ತೋರಿಸಿದ್ದೇವೆ. ಸಹಯೋಗದ ಈ ವಿಧಾನವು ಆತ್ಮನಿರ್ಭಾರ ಭಾರತವನ್ನು ಸೃಷ್ಟಿಸುತ್ತದೆ. ಈಗ ಉದ್ಯಮದ ಎಲ್ಲ ಸದಸ್ಯರು ಹೊಸ ಅವಕಾಶಗಳನ್ನು ಬಳಸಿಕೊಳ್ಳಬೇಕಾಗಿದೆ. ಉದ್ಯಮವು ಈಗ ದೇಶ ಮತ್ತು ಜಗತ್ತಿಗೆ ಉತ್ತಮ ಗುಣಮಟ್ಟದ ಸರಕುಗಳನ್ನು ತಯಾರಿಸುವತ್ತ ಗಮನ ಹರಿಸಬೇಕಾಗಿದೆ. ಉದ್ಯಮವು ವೇಗವಾಗಿ ಚಲಿಸುವ ಮತ್ತು ವೇಗವಾಗಿ ಬದಲಾಗುತ್ತಿರುವ ಪ್ರಪಂಚದ ಅಗತ್ಯಗಳಿಗೆ ಅನುಗುಣವಾಗಿ ಹೊಸತನವನ್ನು ಮಾಡಬೇಕಾಗುತ್ತದೆ ಮತ್ತು ಆರ್ & ಡಿ ಯಲ್ಲಿ ತನ್ನ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ. ಭಾರತದ ಉದ್ಯಮವು ಮಾನವಸಂಪನ್ಮೂಲ ಕೌಶಲಗಳನ್ನು ನವೀಕರಿಸಬೇಕು ಮತ್ತು ಹೊಸ ತಂತ್ರಜ್ಞಾನವನ್ನು ಜಾಗತಿಕವಾಗಿ ಸಮರ್ಥವಾಗಿ ಬಳಸಿಕೊಳ್ಳಬೇಕಾಗುತ್ತದೆ. ಇಂದಿನ ಸಂಭಾಷಣೆಯು ನಿಮ್ಮ ಆಲೋಚನೆಗಳು ಮತ್ತು ಸಲಹೆಗಳೊಂದಿಗೆ 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್' ಗೆ ದಾರಿ ಮಾಡಿಕೊಡುತ್ತದೆ ಮತ್ತು ಹೊಸ ಶಕ್ತಿ, ಆವೇಗ ಮತ್ತು ಸಾಮರ್ಥ್ಯವನ್ನು ನೀಡುತ್ತದೆ ಎಂದು ನನಗೆ ಖಾತ್ರಿಯಿದೆ.
ಸುಧಾರಣೆಗಳ ಕುರಿತು ನಿಮ್ಮ ಸಲಹೆಗಳು ಏನೇ ಇರಲಿ, ನೀವು ಎದುರಿಸುತ್ತಿರುವ ಯಾವುದೇ ಸಮಸ್ಯೆಗಳನ್ನು ನನಗೆ ತಿಳಿಸಲು ನಾನು ಮತ್ತೆ ನಿಮ್ಮನ್ನು ಒತ್ತಾಯಿಸುತ್ತೇನೆ. ಸರ್ಕಾರವು ಪ್ರತಿ ಸಲಹೆಗೆ ಸಿದ್ಧವಾಗಿದೆ ಮತ್ತು ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸುತ್ತದೆ. ಸರ್ಕಾರದ ಪ್ರೋತ್ಸಾಹ ಏನೇ ಇರಲಿ ನಾನು ಇನ್ನೊಂದು ವಿಷಯ ಹೇಳುತ್ತೇನೆ; ನಿಮ್ಮ ಸರಕುಗಳು ಇತರ ದೇಶಗಳಿಗಿಂತ ಅಗ್ಗವಾಗಿದ್ದರೆ ಅವುಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ನೀವು ಕೆಲವೊಮ್ಮೆ ಭಾವಿಸುತ್ತೀರಿ. ನೀವು ಸರಿಯಾಗಿರಬಹುದು, ಆದರೆ ಹೆಚ್ಚಿನ ಆದ್ಯತೆಯ ಅಂಶ ಗುಣಮಟ್ಟವಾಗಿದೆ. ಸ್ಪರ್ಧೆಯಲ್ಲಿ ಗುಣಮಟ್ಟ ಇರುವ ಉತ್ಪನ್ನಕ್ಕೆ ಎರಡು ರೂಪಾಯಿಗಳನ್ನು ಹೆಚ್ಚು ನೀಡಲು ಜಗತ್ತು ಸಿದ್ಧವಾಗಿದೆ. ಇಂದು, ಭಾರತವು ಒಂದು ಬ್ರಾಂಡ್ ಆಗಿ ಮಾರ್ಪಟ್ಟಿದೆ. ಈಗ ನೀವು ನಿಮ್ಮ ಉತ್ಪನ್ನದ ಗುರುತನ್ನು ರಚಿಸಬೇಕಾಗಿದೆ. ನೀವು ಹೆಚ್ಚೇನು ಕಷ್ಟಪಟ್ಟು ಕೆಲಸ ಮಾಡಬೇಕಾಗಿಲ್ಲ. ನೀವು ಕೆಲಸ ಮಾಡಬೇಕಾದರೆ ಅದು ಉತ್ಪಾದನೆಯ ಗುಣಮಟ್ಟದ ಮೇಲೆ ಮಾಡಬೇಕಾಗುತ್ತದೆ. ಪಿಎಲ್ಐನ ಅರ್ಹತೆಯು ಪಿಎಲ್ಐ ಅಡಿಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಪಡೆಯುವುದು ಅಲ್ಲ, ಆದರೆ ಉತ್ಪಾದನೆಯ ಗುಣಮಟ್ಟಕ್ಕೆ ಒತ್ತು ನೀಡುವುದರಲ್ಲಿ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ಈಗಿನ ಚರ್ಚೆಯಲ್ಲಿ ನಾವು ಈ ಅಂಶವನ್ನು ಕೇಂದ್ರೀಕರಿಸಿದರೆ, ಬಹಳಷ್ಟು ಉಪಯೋಗವಾಗುತ್ತದೆ.
ನೀವು ದಿನವಿಡೀ ಇಲ್ಲಿ ಕುಳಿತುಕೊಳ್ಳುವುದರಿಂದ ನಾಮನು ನಿಮ್ಮ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಈ ಕಾರ್ಯಕ್ಕೆ ಹಾಜರಾಗಿದ್ದಕ್ಕಾಗಿ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಧನ್ಯವಾದಗಳು!
ಸೂಚನೆ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.