Launches new Complaint Management System portal of CVC
“For a developed India, trust and credibility are critical”
“Earlier governments not only lost people’s confidence but they also failed to trust people”
“We have been trying to change the system of scarcity and pressure for the last 8 years. The government is trying to fill the gap between supply and demand”
“Technology, service saturation and Aatmnirbharta are three key ways of tackling corruption”
“For a developed India, we have to develop such an administrative ecosystem with zero tolerance on corruption”
“Devise a way of ranking departments on the basis of pending corruption cases and publish the related reports on a monthly or quarterly basis”
“No corrupt person should get political-social support”
“Many times the corrupt people are glorified in spite of being jailed even after being proven to be corrupt. This situation is not good for Indian society”
“Institutions acting against the corrupt and corruption like the CVC have no need to be defensive”
“When you take action with conviction, the whole nation stands with you”

ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳಾದ ಡಾ. ಜಿತೇಂದ್ರ ಸಿಂಗ್ ಅವರೆ, ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ.ಮಿಶ್ರಾ, ಕ್ಯಾಬಿನೆಟ್ ಕಾರ್ಯದರ್ಶಿ ಶ್ರೀ. ರಾಜೀವ್ ಗೌಬಾ, ಕೇಂದ್ರ ಜಾಗೃತಿ ಆಯುಕ್ತರು ಶ್ರೀ.ಸುರೇಶ್ ಪಟೇಲ್, ಇತರ ಎಲ್ಲ ಆಯುಕ್ತರು, ಮಹಿಳೆಯರೇ ಮತ್ತು ಮಹನೀಯರೇ! 

ಈ ಜಾಗೃತಿ ಸಪ್ತಾಹವು ಸರ್ದಾರ್ ಸಾಹಿಬ್ ಅವರ ಜಯಂತಿಯ ದಿನದಿಂದ ಪ್ರಾರಂಭವಾಗಿದೆ. ಸರ್ದಾರ್ ಸಾಹೇಬರ ಇಡೀ ಜೀವನವು ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಈ ಮೌಲ್ಯಗಳಿಂದ ಪ್ರೇರಿತವಾದ ಸಾರ್ವಜನಿಕ ಸೇವೆಯ ನಿರ್ಮಾಣಕ್ಕೆ ಮುಡಿಪಾಗಿತ್ತು. ಮತ್ತು ಈ ಎಲ್ಲ ರೀತಿಯ ಬದ್ಧತೆಯೊಂದಿಗೆ, ನೀವು ಜಾಗರೂಕತೆಯ ಬಗ್ಗೆ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದ್ದೀರಿ. ಈ ಬಾರಿ ನೀವೆಲ್ಲರೂ ಜಾಗೃತಿ ಸಪ್ತಾಹವನ್ನು 'ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಭ್ರಷ್ಟಾಚಾರ ಮುಕ್ತ ಭಾರತ' ಎಂಬ ಸಂಕಲ್ಪದೊಂದಿಗೆ ಆಚರಿಸುತ್ತಿದ್ದೀರಿ. ಈ ಸಂಕಲ್ಪ ಪ್ರಸ್ತುತ ಕಾಲದ ಬೇಡಿಕೆಯಾಗಿದೆ, ಇದು ಸೂಕ್ತವೂ ಆಗಿದೆ ಮತ್ತು ದೇಶವಾಸಿಗಳಿಗೆ ಅಷ್ಟೇ ಮುಖ್ಯವಾಗಿದೆ.

ಸ್ನೇಹಿತರೆ,

ಅಭಿವೃದ್ಧಿ ಹೊಂದಿದ ಭಾರತಕ್ಕೆ, ನಂಬಿಕೆ ಮತ್ತು ವಿಶ್ವಾಸಾರ್ಹತೆ ಎರಡೂ ಬಹಳ ಮುಖ್ಯ. ಸರ್ಕಾರದ ಮೇಲೆ ವೃದ್ಧಿಸುತ್ತಿರುವ ಸಾರ್ವಜನಿಕರ ವಿಶ್ವಾಸ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹಿಂದಿನ ಸರ್ಕಾರಗಳು ಜನರ ನಂಬಿಕೆಯನ್ನು ಕಳೆದುಕೊಂಡಿದ್ದಲ್ಲದೆ, ಜನರು ಅವರನ್ನು ನಂಬುವಂತೆ ಮಾಡುವಲ್ಲಿಯೂ ವಿಫಲವಾದದ್ದು ನಮಗೆ ಕಷ್ಟಕರವಾಗಿತ್ತು. ಸುದೀರ್ಘ ಕಾಲದ ಗುಲಾಮಗಿರಿಯಿಂದ ನಮಗೆ ದೊರೆತ ಭ್ರಷ್ಟಾಚಾರ, ಶೋಷಣೆ, ಸಂಪನ್ಮೂಲಗಳ ನಿಯಂತ್ರಣದ ಪರಂಪರೆ ದುರದೃಷ್ಟವಶಾತ್ ಸ್ವಾತಂತ್ರ್ಯ ನಂತರ ಅದು ಮತ್ತಷ್ಟು ಉಲ್ಬಣಿಸಿತು ಮತ್ತು ಅದರ ಪರಿಣಾಮ ಸ್ವರೂಪವಾಗಿ ದೇಶದ ನಾಲ್ಕು ತಲೆಮಾರುಗಳು ಅದರಿಂದ ಸಾಕಷ್ಟು ನಷ್ಟವನ್ನು ಅನುಭವಿಸಿವೆ.

ಆದರೆ ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ದಶಕಗಳಿಂದ ನಡೆದುಕೊಂಡು ಬಂದಿರುವ ಈ ಪದ್ಧತಿಯನ್ನು ಸಂಪೂರ್ಣವಾಗಿ ಬದಲಾಯಿಸಬೇಕಾಗಿದೆ. ಈ ಬಾರಿ ಆಗಸ್ಟ್ 15 ರಂದು ನಾನು ಕೆಂಪುಕೋಟೆಯ ವರಣದಲ್ಲಿ ನಾನು ಮಾಡಿದ ಭಾಷಣದಲ್ಲಿ ಕಳೆದ ಎಂಟು ವರ್ಷಗಳ ಶ್ರಮ ಮತ್ತು ಉಪಕ್ರಮಗಳ ಜೊತೆಗೆ ಈಗ ಭ್ರಷ್ಟಾಚಾರದ ವಿರುದ್ಧ ನಿರ್ಣಾಯಕ ಹೋರಾಟದ ಸಮಯ ಬಂದಿದೆ ಎಂದು ಹೇಳಿದ್ದೆ. ಈ ಸಂದೇಶದವನ್ನು ಅರ್ಥಮಾಡಿಕೊಂಡರೆ, ಈ ಹಾದಿಯಲ್ಲಿ ನಡೆಯುವಾಗ, ನಾವು ಅಭಿವೃದ್ಧಿ ಹೊಂದಿದ ಭಾರತದ ಕಡೆಗೆ ವೇಗವಾಗಿ ಚಲಿಸಲು ಸಾಧ್ಯವಾಗುತ್ತದೆ.

ಸ್ನೇಹಿತರೆ,

ನಮ್ಮ ದೇಶದಲ್ಲಿ ಭ್ರಷ್ಟಾಚಾರ ಹರಡಲು ಮತ್ತು ದೇಶವಾಸಿಗಳನ್ನು ಮುಂದೆ ಹೋಗದಂತೆ ತಡೆಯಲು ಎರಡು ಪ್ರಮುಖ ಕಾರಣಗಳಿವೆ - ಒಂದು - ಸೌಲಭ್ಯಗಳ ಕೊರತೆ ಮತ್ತು ಎರಡನೆಯದು - ಸರ್ಕಾರದ ಅನಗತ್ಯ ಮೂಗು ತೂರಿಸುವಿಕೆ. ದೀರ್ಘಕಾಲದವರೆಗೆ, ನಾವು ಸೌಲಭ್ಯಗಳು ಮತ್ತು ಅವಕಾಶಗಳಿಲ್ಲದಂತೆ ಇರಿಸಲ್ಪಟ್ಟಿದ್ದೇವೆ. ಅಂತರವು ಬೆಳೆಯಲು  ಅವಕಾಶ ಮಾಡಿಕೊಡಲಾಗಿದೆ. ಇದು ಬೇರೆಯವರಿಗಿಂತ ಮೊದಲು ಯಾವುದೇ ಪ್ರಯೋಜನವನ್ನು ಪಡೆದುಕೊಳ್ಳಬೇಕೆನ್ನುವ ಅನಾರೋಗ್ಯಕರ ಸ್ಪರ್ಧೆಗೆ ಮುನ್ನುಡಿ ಬರೆಯಿತು. ಈ ಸ್ಪರ್ಧೆಯು ಭ್ರಷ್ಟಾಚಾರದ ಪರಿಸರ ವ್ಯವಸ್ಥೆಯನ್ನು ರಚಿಸಲು ಅನುಕೂಲ ವಾತಾವರಣ ಕಲ್ಪಿಸಿತು. ಪಡಿತರ ಅಂಗಡಿಯಲ್ಲಿ ಸರದಿ, ಗ್ಯಾಸ್ ಕನೆಕ್ಷನ್ ನಿಂದ ಸಿಲಿಂಡರ್ ತುಂಬುವವರೆಗೆ, ಬಿಲ್ ಕಟ್ಟುವುದು, ಅಡ್ಮಿಷನ್ ತೆಗೆದುಕೊಳ್ಳುವುದು, ಲೈಸೆನ್ಸ್ ತೆಗೆದುಕೊಳ್ಳುವುದು, ಯಾವುದೇ ಅನುಮತಿ ತೆಗೆದುಕೊಳ್ಳುವುದು ಹೀಗೆ ಎಲ್ಲೆಡೆಗಳಲ್ಲಿ ಸರತಿ ಸಾಲುಗಳು. ಸರದಿ ಸಾಲು ಉದ್ದವಾದಷ್ಟೂ ಭ್ರಷ್ಟಾಚಾರದ ಅಷ್ಟೇ ವೃದ್ಧಿಸುತ್ತದೆ. ಮತ್ತು ಈ ರೀತಿಯ ಭ್ರಷ್ಟಾಚಾರದ ದೊಡ್ಡ ನಷ್ಟವನ್ನು ಯಾರಾದರೂ ಭರಿಸಬೇಕು ಎಂದಾದಲ್ಲಿ, ಅದು ದೇಶದ ಬಡವರು ಮತ್ತು ದೇಶದ ಮಧ್ಯಮ ವರ್ಗದವರು ಮಾತ್ರ.

ದೇಶದ ಬಡವರು ಮತ್ತು ಮಧ್ಯಮ ವರ್ಗದವರು ಈ ಸಂಪನ್ಮೂಲಗಳನ್ನು ಕ್ರೋಡೀಕರಿಸುವಲ್ಲಿ ತಮ್ಮ ಶಕ್ತಿಯನ್ನು ವ್ಯಯಿಸಿದರೆ, ದೇಶ ಹೇಗೆ ಪ್ರಗತಿಯಾಗುತ್ತದೆ? ಅದಕ್ಕಾಗಿಯೇ ಕಳೆದ 8 ವರ್ಷಗಳಿಂದ ಕೊರತೆ ಮತ್ತು ಒತ್ತಡದಿಂದ ಸೃಷ್ಟಿಯಾದ ವ್ಯವಸ್ಥೆಯನ್ನು ಬದಲಾಯಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವನ್ನು ತುಂಬಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ನಾವು ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. 

ಮೂರು ಮುಖ್ಯ ಅಂಶಗಳತ್ತ ನಾನು ಗಮನ ಸೆಳೆಯಬಯಸುತ್ತೇನೆ. ಆಧುನಿಕ ತಂತ್ರಜ್ಞಾನದ ಬಳಕೆ, ಎರಡನೆಯದು ಮೂಲ ಸೌಕರ್ಯಗಳ ಸಂತೃಪ್ತಿಯ ಗುರಿ ಮತ್ತು ಸ್ವಾವಲಂಬನೆ. ಈಗ ಅದೇ ಪಡಿತರ ಉದಾಹರಣೆ ತೆಗೆದುಕೊಳ್ಳಿ. ಕಳೆದ 8 ವರ್ಷಗಳಲ್ಲಿ, ನಾವು ತಂತ್ರಜ್ಞಾನದೊಂದಿಗೆ PDS ಅನ್ನು ಸಂಯೋಜಿಸಿದ್ದೇವೆ ಮತ್ತು ಕೋಟಿಗಟ್ಟಲೆ ನಕಲಿ ಫಲಾನುಭವಿಗಳನ್ನು ವ್ಯವಸ್ಥೆಯಿಂದ ಕಿತ್ತೊಗೆದಿದ್ದೇವೆ. 

ಅದೇ ರೀತಿ ಡಿಬಿಟಿ ಮೂಲಕ ಸರ್ಕಾರ ನೀಡುವ ಸವಲತ್ತುಗಳನ್ನು ಈಗ ನೇರವಾಗಿ ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ. ಈ ಒಂದೇ ಕ್ರಮದಿಂದ ಇದುವರೆಗೆ 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣ ದುರುಪಯೋಗವಾಗದಂತೆ ಉಳಿತಾಯವಾಗಿದೆ. ನಗದು ಆಧಾರಿತ ಆರ್ಥಿಕತೆಯಲ್ಲಿ ಲಂಚ, ಕಪ್ಪುಹಣ ಪತ್ತೆ ಹಚ್ಚುವುದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ತಿಳಿದಿದೆ. 

ಈಗ ಡಿಜಿಟಲ್ ವ್ಯವಸ್ಥೆಯನ್ನು ಪರಿಚಯಿಸಿರುವುದರಿಂದ ವಹಿವಾಟಿನ ಸಂಪೂರ್ಣ ವಿವರಗಳು ಸುಲಭವಾಗಿ ಲಭ್ಯವಾಗುತ್ತಿವೆ. ಸರ್ಕಾರಿ ಇ-ಮಾರುಕಟ್ಟೆ ಸ್ಥಳ – (ಜಿಇಎಂ) ನಂತಹ ವ್ಯವಸ್ಥೆಯಿಂದ ಸರ್ಕಾರಿ ಸಂಗ್ರಹಣೆಯಲ್ಲಿ ಎಷ್ಟು ಪಾರದರ್ಶಕತೆ ಬಂದಿದೆ ಎಂಬುದನ್ನು ಈ ಪೋರ್ಟಲ್ ನ ಭಾಗವಾದಂತಹ ಜನರು ಅರಿತಿದ್ದಾರೆ ಮತ್ತು ಅದರ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. 

ಸ್ನೇಹಿತರೆ,

ಯಾವುದೇ ಸರ್ಕಾರಿ ಯೋಜನೆ ಪ್ರತಿಯೊಬ್ಬ ಅರ್ಹ ಫಲಾನುಭವಿಗಳನ್ನು ತಲುಪುವುದು, ಗುರಿಗಳನ್ನು ಸಂಪೂರ್ಣ ಸಾಧಿಸುವುದು ಸಮಾಜದಲ್ಲಿನ ತಾರತಮ್ಯವನ್ನು ತೊಡೆದುಹಾಕುತ್ತದೆ ಮತ್ತು ಭ್ರಷ್ಟಾಚಾರದ ವ್ಯಾಪ್ತಿಯನ್ನು ಸಹ ಕಿತ್ತೊಗೆಯುತ್ತದೆ. ಸರ್ಕಾರ ಮತ್ತು ಸರ್ಕಾರದ ನಾನಾ ಇಲಾಖೆಗಳು ತಾವಾಗಿಯೇ ಮುಂದೆ ಬಂದು ಪ್ರತಿಯೊಬ್ಬ ಅರ್ಹರನ್ನು ಹುಡುಕಿದಾಗ, ಮಧ್ಯವರ್ತಿಗಳ ಪಾತ್ರ ಕೊನೆಗೊಳ್ಳುತ್ತದೆ. ಆದ್ದರಿಂದ, ನಮ್ಮ ಸರ್ಕಾರವು ಪ್ರತಿ ಯೋಜನೆಯಲ್ಲಿ ಸ್ಯಾಚುರೇಶನ್ ತತ್ವವನ್ನು ಅಳವಡಿಸಿಕೊಂಡಿದೆ. ಪ್ರತಿ ಮನೆಗೆ ನೀರು, ಬಡವರಿಗೆ ಪಕ್ಕಾ ಸೂರು, ಬಡವರಿಗೆ ವಿದ್ಯುತ್ ಸಂಪರ್ಕ ಮತ್ತು ಗ್ಯಾಸ್ ಸಂಪರ್ಕ ಹೀಗೆ ಈ ಯೋಜನೆಗಳು ಸರ್ಕಾರದ ಈ ಧೋರಣೆಯನ್ನು ತೋರಿಸುತ್ತವೆ. 

ಸ್ನೇಹಿತರೆ,

ವಿದೇಶಗಳ ಮೇಲೆ ಅತಿಯಾದ ಅವಲಂಬನೆಯೂ ಭ್ರಷ್ಟಾಚಾರಕ್ಕೆ ಪ್ರಮುಖ ಕಾರಣವಾಗಿದೆ. ದಶಕಗಳವರೆಗೆ ನಮ್ಮ ರಕ್ಷಣಾ ಕ್ಷೇತ್ರವನ್ನು ವಿದೇಶಗಳ ಮೇಲೆ ಹೇಗೆ ಅವಲಂಬಿತಗೊಳಿಸಲಾಗಿತ್ತು ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಪರಿಣಾಮ ಅದೆಷ್ಟೋ ಹಗರಣಗಳು ನಡೆದಿವೆ. ಇಂದು ರಕ್ಷಣಾ ವಲಯದಲ್ಲಿ ಸ್ವಾವಲಂಬನೆಗೆ ಒತ್ತು ನೀಡುವುದರೊಂದಿಗೆ ಈ ಹಗರಣಗಳ ವ್ಯಾಪ್ತಿ ಕೂಡ ಕೊನೆಗೊಂಡಿದೆ. ರೈಫಲ್‌ಗಳಿಂದ ಫೈಟರ್ ಜೆಟ್‌ಗಳು ಮತ್ತು ಸಾರಿಗೆ ವಿಮಾನಗಳವರೆಗೆ ಇಂದು ಭಾರತವು ಸ್ವತಃ ತಾನೇ ತಯಾರಿಸಿಕೊಳ್ಳುವತ್ತ ಸಾಗುತ್ತಿದೆ. ನಮ್ಮ  ವಿದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ರಕ್ಷಣೆ ಮಾತ್ರವಲ್ಲ, ಇತರ ಅಗತ್ಯಗಳಿಗಾಗಿಯೂ ಸ್ವಾವಲಂಬನೆಗೆ ಒತ್ತು ನೀಡಲಾಗುತ್ತಿದೆ. 

ಸ್ನೇಹಿತರೆ,

ಸಿವಿಸಿ - ಕೇಂದ್ರೀಯ ಜಾಗೃತಾ ಆಯೋಗ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಬ್ಬರ ಪ್ರಯತ್ನಗಳನ್ನು ಪ್ರೋತ್ಸಾಹಿಸುವಂತಹ ಒಂದು ಸಂಸ್ಥೆಯಾಗಿದೆ. ಕಳೆದ ಬಾರಿ ಪ್ರಿವೆಂಟಿವ್ ವಿಜಿಲೆನ್ಸ್ ನತ್ತ ಗಮನ ಹರಿಸಿ ಎಂದು ನಾನು ನಿಮ್ಮೆಲ್ಲರನ್ನು ಒತ್ತಾಯಿಸಿದ್ದೆ. ಈ ನಿಟ್ಟಿನಲ್ಲಿ ನೀವು ಹಲವಾರು ಕ್ರಮಗಳನ್ನು ಕೈಗೊಂಡಿದ್ದೀರಿ ಎಂದು ನನಗೆ ತಿಳಿದುಬಂದಿದೆ. ಇದಕ್ಕಾಗಿ ಮಾಡಿದ 3 ತಿಂಗಳ ಅಭಿಯಾನವೂ ಶ್ಲಾಘನೀಯವಾಗಿದೆ, ನಾನು ನಿಮ್ಮನ್ನು ಮತ್ತು ನಿಮ್ಮ ಇಡೀ ತಂಡವನ್ನು ಅಭಿನಂದಿಸುತ್ತೇನೆ. ಪಾರದರ್ಶಕತೆಯನ್ನು ಖಚಿತಪಡಿಸಲು ನೀವು ಪರಿಶೀಲನೆ ಮತ್ತು ತಪಾಸಣೆಯ ಸಾಂಪ್ರದಾಯಿಕ ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದೀರಿ. ಆದರೆ ಇದನ್ನು ಮತ್ತಷ್ಟು ಆಧುನಿಕ ಹಾಗೂ ತಂತ್ರಜ್ಞಾನ ಆಧಾರಿತವಾಗಿಸಲು ನೀವು ಪ್ರಯತ್ನಿಸಬೇಕು

ಸ್ನೇಹಿತರೆ,

ಎಲ್ಲ ಇಲಾಖೆಗಳೂ ಭ್ರಷ್ಟಾಚಾರದ ವಿರುದ್ಧ ಸರ್ಕಾರದಂತೆಯೇ ಇಚ್ಛಾಶಕ್ತಿಯನ್ನು ತೋರಬೇಕಿದೆ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ, ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿರುವ ಆಡಳಿತಾತ್ಮಕ ಪರಿಸರ ವ್ಯವಸ್ಥೆಯನ್ನು ನಾವು ಅಭಿವೃದ್ಧಿಪಡಿಸಬೇಕಾಗಿದೆ. ಇಂದು ಸರ್ಕಾರದ ನೀತಿಯಲ್ಲಿ, ಸರ್ಕಾರದ ಇಚ್ಛೆಯಲ್ಲಿ, ಸರ್ಕಾರದ ನಿರ್ಧಾರಗಳಲ್ಲಿ, ನೀವು ಅದನ್ನು ಎಲ್ಲೆಡೆ ನೋಡಬಹುದಾಗಿದೆ. ಆದರೆ ಈ ಭಾವನೆ ನಮ್ಮ ಆಡಳಿತ ವ್ಯವಸ್ಥೆಯ ಡಿಎನ್‌ಎಯಲ್ಲಿಯೂ ಗಟ್ಟಿಯಾಗಿ ಮೈಗೂಡಬೇಕಿದೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಅಪರಾಧ ಅಥವಾ ಇಲಾಖಾವಾರು ಕ್ರಮಗಳು ವರ್ಷಗಟ್ಟಲೆ ನಡೆಯುತ್ತವೆ ಎಂಬ ಭಾವನೆ ಇದೆ. ಮಿಷನ್ ಮೋಡ್‌ನಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಶಿಸ್ತಿನ ಪ್ರಕ್ರಿಯೆಗಳನ್ನು ನಾವು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬಹುದೇ? ಏಕೆಂದರೆ ಆ ನೇತಾಡುವ ಕತ್ತಿ ಅವನಿಗೂ ತೊಂದರೆ ಕೊಡುತ್ತದೆ. ಅವನು ಅಮಾಯಕನಾಗಿದ್ದರೆ, ತಾನು ಜೀವನವನ್ನು ಪ್ರಾಮಾಣಿಕವಾಗಿ ಬದುಕಿದ್ದರೂ ಇಲಾಖೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮತ್ತು ಈ ಚಕ್ರವ್ಯೂಹದಲ್ಲಿ ಸಿಲುಕಿದೆ ಎಂದು ತನ್ನ ಉಳಿದ ಜೀವನದುದ್ದಕ್ಕೂ ಬಹಳ ದುಃಖವನ್ನು ಅನುಭವಿಸುತ್ತಾನೆ. ತಪ್ಪು ಮಾಡಿದವನು ಶಿಕ್ಷೆ ಅನುಭವಿಸುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ ಆದರೆ ತಪ್ಪು ಮಾಡದವನಿಗೆ ಈ ತೂಗುಕತ್ತಿಯಿಂದಾಗಿ ಜೀವನ ಬಲು ಭಾರವೆನಿಸುತ್ತದೆ. ನಿಮ್ಮ ಸ್ವಂತ ಒಡನಾಡಿಗಳನ್ನು ದೀರ್ಘಕಾಲ ಹೀಗೆ ಕಾಯಿಸುವುದರಿಂದ ಏನು ಪ್ರಯೋಜನ?

ಇಂತಹ ಆರೋಪಗಳು ಎಷ್ಟು ಬೇಗ ನಿರ್ಧಾರವಾದರೆ ಆಡಳಿತ ವ್ಯವಸ್ಥೆಯಲ್ಲಿ ಅಷ್ಟು ಪಾರದರ್ಶಕತೆ ಹೆಚ್ಚುತ್ತದೆ, ಅದರ ಕಾರ್ಯಕ್ಷಮತೆಯೂ ವೃದ್ಧಿಸುತ್ತದೆ. ಕ್ರಿಮಿನಲ್ ಪ್ರಕರಣಗಳಲ್ಲಿ, ತ್ವರಿತ ಕ್ರಮ, ನಿರಂತರ ಮೇಲ್ವಿಚಾರಣೆಯ ಅಗತ್ಯವೂ ಇದೆ. ಬಾಕಿ ಇರುವ ಭ್ರಷ್ಟಾಚಾರ ಪ್ರಕರಣಗಳ ಆಧಾರದ ಮೇಲೆ ಇಲಾಖೆಗಳಿಗೆ ಶ್ರೇಯಾಂಕ ನೀಡುವುದು ಮಾಡಬಹುದಾದ ಇನ್ನೊಂದು ಉಪಕ್ರಮವಾಗಿದೆ. ಸ್ವಚ್ಛತೆಗೆ ಪೈಪೋಟಿ ನಡೆಸುವಂತೆ ಇದರಲ್ಲೂ ಸ್ಪರ್ಧೆ ಇರಬೇಕು. ಇದರಲ್ಲಿ ಯಾವ ಇಲಾಖೆ ಅಸಡ್ಡೆ ತೋರಿದೆ, ಏನು ಕಾರಣ ಎಂದು ತಿಳಿದುಕೊಳ್ಳುವ, ಅಲ್ಲದೆ ಬೇರೆ ಯಾವ ಇಲಾಖೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮುನ್ನಡೆಯುತ್ತಿದೆ ಪ್ರಾಮಾಣಿಕ ಕ್ರಮ ಕೈಗೊಳ್ಳುತ್ತಿದೆ ಅದನ್ನು ಅರಿಯುವ ಪ್ರಯತ್ನವಾಗಬೇಕು. ಸಂಬಂಧಿತ ವರದಿಗಳ ಮಾಸಿಕ ಅಥವಾ ತ್ರೈಮಾಸಿಕ ಪ್ರಕಟಣೆಯು ಭ್ರಷ್ಟಾಚಾರದ ವಿರುದ್ಧದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ವಿವಿಧ ಇಲಾಖೆಗಳನ್ನು ಪ್ರೇರೇಪಿಸುತ್ತದೆ. 

ತಂತ್ರಜ್ಞಾನದ ಮೂಲಕ ನಾವು ಇನ್ನೊಂದು ಕೆಲಸವನ್ನು ಮಾಡಬಹುದು. ವಿಜಿಲೆನ್ಸ್ ಕ್ಲಿಯರೆನ್ಸ್ ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂದು ಸಾಮಾನ್ಯವಾಗಿ ಕಂಡುಬರುತ್ತದೆ. ತಂತ್ರಜ್ಞಾನದ ಸಹಾಯದಿಂದ ಈ ಪ್ರಕ್ರಿಯೆಯನ್ನು ಸುಗಮಗೊಳಿಸಬಹುದು. ನಿಮ್ಮ ಮುಂದೆ ನಾನು ಪ್ರಸ್ತಾಪಿಸ ಬಯಸುವ ಇನ್ನೊಂದು ವಿಷಯವೆಂದರೆ ಸಾರ್ವಜನಿಕ ಕುಂದುಕೊರತೆ ದತ್ತಾಂಶ. ಸರ್ಕಾರದ ವಿವಿಧ ಇಲಾಖೆಗಳಿಗೆ ಜನಸಾಮಾನ್ಯರು ದೂರುಗಳನ್ನು ಕಳುಹಿಸುತ್ತಾರೆ, ಅವುಗಳ ವಿಲೇವಾರಿ ವ್ಯವಸ್ಥೆಯೂ ಜಾರಿಯಲ್ಲಿದೆ.

ಆದರೆ ಸಾರ್ವಜನಿಕ ಕುಂದುಕೊರತೆಗಳ ದತ್ತಾಂಶವನ್ನು ನಾವು ಲೆಕ್ಕಪರಿಶೋಧನೆ ಮಾಡಿದರೆ, ಗರಿಷ್ಠ ಸಂಖ್ಯೆಯ ದೂರುಗಳು ಬರುತ್ತಿರುವ ನಿರ್ದಿಷ್ಟ ಇಲಾಖೆ ಇದೆ ಎಂದು ಕಂಡುಹಿಡಿಯಬಹುದು. ಪ್ರಕ್ರಿಯೆ ವಿಳಂಬಗೊಳಿಸುವ ಯಾವುದೇ ಒಬ್ಬ ನಿರ್ದಿಷ್ಟ ವ್ಯಕ್ತಿ ಇದ್ದಾನೆಯೇ ಅಥವಾ ನಮ್ಮ ರೂಢಿಯಲ್ಲಿರುವ ಕಾರ್ಯ ವಿಧಾನಗಳಲ್ಲಿ ಏನಾದರೂ ದೋಷವಿದೆಯೇ ಮತ್ತು ಅದು ಸಮಸ್ಯೆಗಳನ್ನು ಉಂಟುಮಾಡುತ್ತಿದೆಯೇ ಎಂದು ನೋಡಬೇಕು. ಹೀಗೆ ಮಾಡುವುದರಿಂದ ಆ ಇಲಾಖೆಯಲ್ಲಿನ ಭ್ರಷ್ಟಾಚಾರದ ಬುಡಕ್ಕೆ ಸುಲಭವಾಗಿ ಬರಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ಈ ದೂರುಗಳನ್ನು ಪ್ರತ್ಯೇಕವಾಗಿ ನೋಡಬಾರದು. ಈ ಸಮಸ್ಯೆಗಳನ್ನು ಸಂಪೂರ್ಣವಾಗಿ ವಿಶ್ಲೇಷಿಸಬೇಕು. ಇದರಿಂದ ಸರ್ಕಾರ ಮತ್ತು ಆಡಳಿತ ಇಲಾಖೆಗಳ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸವೂ ಹೆಚ್ಚುತ್ತದೆ.

ಸ್ನೇಹಿತರೆ, 

ಭ್ರಷ್ಟಾಚಾರದ ಮೇಲೆ ನಿಗಾ ಇಡಲು ಸಮಾಜದ ಮತ್ತು ಸಾಮಾನ್ಯ ನಾಗರಿಕರ ಗರಿಷ್ಠ ಭಾಗವಹಿಸುವಿಕೆಯನ್ನು ನಾವು ಹೇಗೆ ಪ್ರೋತ್ಸಾಹಿಸಬಹುದು ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕಿದೆ. ಆದ್ದರಿಂದ, ಭ್ರಷ್ಟರು ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಅವರನ್ನು ಯಾವುದೇ ಪರಿಸ್ಥಿತಿಯಲ್ಲಿ ಸಹಿಸದಂತೆ ನೋಡಿಕೊಳ್ಳುವುದು ನಿಮ್ಮಂತಹ ಸಂಸ್ಥೆಗಳ ಜವಾಬ್ದಾರಿಯಾಗಿದೆ.
ಯಾವುದೇ ಭ್ರಷ್ಟರು ರಾಜಕೀಯ-ಸಾಮಾಜಿಕ ಆಶ್ರಯ ಪಡೆಯಲಾಗದಂತಹ ವಾತಾವರಣವನ್ನು ನಿರ್ಮಿಸುವುದು ಮತ್ತು ಅಂಥವರು ಕಟಕಟೆಯಲ್ಲಿ ನಿಲ್ಲುವಂತೆ ಮಾಡುವುದು ಕೂಡಾ ಅಷ್ಟೇ ಅಗತ್ಯವಾಗಿದೆ. ಜೈಲು ಶಿಕ್ಷೆಗೆ ಒಳಗಾದ ನಂತರವೂ, ಭ್ರಷ್ಟಾಚಾರ ಸಾಬೀತಾದ ನಂತರವೂ ಅನೇಕ ಬಾರಿ ಭ್ರಷ್ಟರನ್ನು ವೈಭವೀಕರಿಸುವುದನ್ನು ನಾವು ನೋಡಿದ್ದೇವೆ. ಅಂತಹ ಪ್ರಾಮಾಣಿಕತೆಯ ಮುಖವಾಡಗಳನ್ನು ಧರಿಸುವ ಬಹಳಷ್ಟು ಜನರೊಂದಿಗೆ ಛಾಯಾಚಿತ್ರಗಳನ್ನು ತೆಗೆಸಿಕೊಳ್ಳಲು ಜನತೆ ನಾಚಿಕೆಪಡುವುದಿಲ್ಲ..

 ಈ ಪರಿಸ್ಥಿತಿ ಭಾರತೀಯ ಸಮಾಜಕ್ಕೆ ಒಳ್ಳೆಯದಲ್ಲ. ಇಂದಿಗೂ ತಪ್ಪಿತಸ್ಥರೆಂದು ಸಾಬೀತಾದ ಕೆಲವರು ಭ್ರಷ್ಟಾಚಾರಿಗಳಪರ ವಾದ ಮಂಡಿಸುವಂಥ ಮತ್ತು ಅವರನ್ನು ಗೌರವಿಸುವಂಥ ಜನರಿದ್ದಾರೆ. ಇದನ್ನು ನಾವು ದೇಶದಲ್ಲಿ ಎಂದಿಗೂ ಕೇಳಿಲ್ಲ. ಅಂತಹವರಿಗೆ, ಅಂತಹ ಶಕ್ತಿಗಳಿಗೆ ಸಮಾಜದಿಂದ ಅವರ ಕರ್ತವ್ಯದ ಅರಿವು ಮೂಡಿಸುವುದು ಬಹಳ ಅವಶ್ಯಕ. ಈ ನಿಟ್ಟಿನಲ್ಲಿ ನಿಮ್ಮ ಇಲಾಖೆ ಕೈಗೊಂಡಿರುವ ದೃಢವಾದ ಕ್ರಮವೂ ಬಹು ದೊಡ್ಡ ಪಾತ್ರವನ್ನು ಹೊಂದಿದೆ. 

ಸ್ನೇಹಿತರೆ, 

ಇಂದು ನಾನು ನಿಮ್ಮ ನಡುವೆ ಮಧ್ಯೆಯೇ ಇರುವೆ, ನಿಮ್ಮೊಂದಿಗೆ ಕೆಲವು ವಿಚಾರಗಳನ್ನು ಚರ್ಚಿಸಬೇಕೆಂದು ನನಗನ್ನಿಸುತ್ತದೆ. CVC ಯಂತಹ ಭ್ರಷ್ಟಾಚಾರ ಮತ್ತು ಭ್ರಷ್ಟರ ವಿರುದ್ಧ ಕೆಲಸ ಮಾಡುತ್ತಿರುವ ಎಲ್ಲಾ ಸಂಸ್ಥೆಗಳು ಕ್ರಮ ಕೈಗೊಳ್ಳುವುದಕ್ಕೆ ರಕ್ಷಣಾತ್ಮಕವಾಗಿರಬೇಕಾದ ಅಗತ್ಯವಿಲ್ಲ ದು ಹೇಳಲು ನಾನು ಬಯಸುತ್ತೇನೆ. ದೇಶದ ಶ್ರೇಯೋಭಿವೃದ್ಧಿಗಾಗಿ ದುಡಿದರೆ ತಪ್ಪಿತಸ್ಥ ಭಾವದಲ್ಲಿ ಬದುಕುವ ಅಗತ್ಯವಿಲ್ಲ. ನಾವು ರಾಜಕೀಯ ಅಜೆಂಡಾವನ್ನು ಅನುಸರಿಸಬೇಕಾಗಿಲ್ಲ.

ದೇಶದ ಜನಸಾಮಾನ್ಯರು ಎದುರಿಸುತ್ತಿರುವ ಕುಂದು ಕೊರತೆಗಳನ್ನು ನಿವಾರಿಸುವುದು ನಮ್ಮ ಕೆಲಸ, ಮತ್ತು ಪಟ್ಟಭದ್ರ ಹಿತಾಸಕ್ತಿ ಹೊಂದಿರುವವರು ಕೂಗುತ್ತಾರೆ, ಅವರು ಇಂಥ ಸಂಸ್ಥೆಗಳ ಕತ್ತು ಹಿಸುಕಲು ಪ್ರಯತ್ನಿಸುತ್ತಾರೆ. ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸಮರ್ಪಣಾ ಮನೋಭಾವದ ಜನರ ಅಪಮಾನ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಇದೆಲ್ಲಾ ಆಗುತ್ತೆ, ನಾನು ಸುದೀರ್ಘ ಕಾಲದಿಂದ ಇದೆಲ್ಲ ಸಹಿಸಿದ್ದೇನೆ. ಸ್ನೇಹಿತರೇ, ಸರ್ಕಾರದ ಮುಖ್ಯಸ್ಥನಾಗಿ ಸುದೀರ್ಘ ಕಾಲ ಕೆಲಸ ಮಾಡುವ ಅವಕಾಶ ನನಗೆ ಲಭಿಸಿದೆ. ನಾನು ಬಹಳಷ್ಟು ನಿಂದನೆ ಮತ್ತು  ಬಹಳಷ್ಟು ಆರೋಪಗಳಿಗೆ ಗುರಿಯಾಗಿದ್ದೇನೆ. ಈಗ ನನಗೆ ಇನ್ನೇನೂ ಉಳಿದಿಲ್ಲ. 
ಆದರೆ ಜನತೆ ದೇವಸ್ವರೂಪ, ಅವರು ಸತ್ಯವನ್ನೇ ಪರೀಕ್ಷಿಸುತ್ತಾರೆ ಸತ್ಯವನ್ನು ತಿಳಿಯುತ್ತಾರೆ ಮತ್ತು ಸಂದರ್ಭ ಒದಗಿ ಬಂದಾಗ ಸತ್ಯದ ಪರವಾಗಿ ನಿಲ್ಲುತ್ತಾರೆ. ನನ್ನ ಅನುಭವದಿಂದ ನಿಮಗೆ ಈ ಮಾತು ಹೇಳುತ್ತಿದ್ದೇನೆ. ಸ್ನೇಹಿತರೆ,   ಪ್ರಾಮಾಣಿಕತೆಯಿಂದ ಕರ್ತವ್ಯ ನಿಭಾಯಿಸಿ. ದೇವರು ನಿಮ್ಮೊಂದಿಗಿರುತ್ತಾನೆ, ಜನತೆ ನಿಮ್ಮೊಂದಿಗಿರುತ್ತಾರೆ ಎಂಬುದನ್ನು ನೀವೇ ಸಾಕ್ಷೀಕರಿಸುತ್ತೀರಿ. ತಮ್ಮ ಸ್ವಂತದ ಲಾಭಕ್ಕಾಗಿ ಕೆಲವರು ಕೂಗುತ್ತಲೇ ಇರುತ್ತಾರೆ. ಅವರ ಕಾಲುಗಳು ಹೂಳಿನಲ್ಲಿ ಹೂತು ಹೋಗಿರುತ್ತವೆ. 

ಅದಕ್ಕಾಗಿಯೇ ದೇಶಕ್ಕಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವಾಗ, ಪ್ರಾಮಾಣಿಕತೆಯ ಹಾದಿಯಲ್ಲಿ ನಡೆಯುವಾಗ ಇಂಥ ವಿವಾದಗಳು ಎದುರಾದಲ್ಲಿ ರಕ್ಷಣಾತ್ಮಕವಾಗುವ ಅಗತ್ಯವಿಲ್ಲ ಎಂದು ನಾನು ಮತ್ತೆ ಮತ್ತೆ ಹೇಳುತ್ತೇನೆ.
ಅಪರಾಧಿಗಳ ವಿರುದ್ಧ ನೀವು ಕ್ರಮ ಕೈಗೊಳ್ಳಬೇಕಾದ ಸ್ಥಿತಿ ನಿಮ್ಮ ಜೀವನದಲ್ಲಿ ಬಂದಾಗ  ಸಮಾಜ ನಿಮ್ಮ ಬೆಂಬಲಕ್ಕೆ ನಿಲ್ಲುತ್ತದೆ ಎಂಬುದಕ್ಕೆ ನೀವೆಲ್ಲರೂ ಸಾಕ್ಷಿ. ಭ್ರಷ್ಟಾಚಾರ ಮುಕ್ತ ದೇಶ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜವನ್ನು ನಿರ್ಮಿಸಲು, ಸಿವಿಸಿಯಂತಹ ಸಂಸ್ಥೆಗಳು ನಿರಂತರವಾಗಿ ಕಾವಲಿರುವುದು ಅವಶ್ಯಕವಾಗಿದೆ. ಆದರೆ ನೀವು ನಿಮ್ಮ ವ್ಯವಸ್ಥೆಗಳನ್ನು ಸಹ ಸೂಕ್ತ ರೀತಿಯಲ್ಲಿ ಇಟ್ಟುಕೊಳ್ಳಬೇಕು, ಏಕೆಂದರೆ ನೀವು ಏಕಾಂಗಿಯಾಗಿ ಏನನ್ನೂ ಸಾಧಿಸಲಾಗುವುದಿಲ್ಲ. ನಾಲ್ಕು-ಆರು ಜನರು ಕಚೇರಿಯಲ್ಲಿ ಕುಳಿತು ಏನನ್ನು ಮಾಡಬಹುದು? ಕೆಲವೊಮ್ಮೆ ಅವರು ಸಂಯೋಜಿತವಾಗಿರದಿದ್ದರೆ ಇಡೀ ವ್ಯವಸ್ಥೆಯೇ ಕುಸಿದು ಹೋಗುತ್ತದೆ ಮತ್ತು ಅದೇ ಧಾಟಿಯಲ್ಲಿ ಮುಂದುವರಿಯುತ್ತದೆ. 

ಸ್ನೇಹಿತರೆ, 

ನಿಮ್ಮ ಜವಾಬ್ದಾರಿ ಮಹತ್ತರವಾದುದು. ನಿಮ್ಮ ಸವಾಲುಗಳು ಬದಲಾಗುತ್ತಲೂ ಇರುತ್ತವೆ. ಆದ್ದರಿಂದ ನಿಮ್ಮ ಪದ್ಧತಿಯಲ್ಲಿಯೂ ನಿರಂತರ ಕ್ರಿಯಾಶೀಲತೆ ಅವಶ್ಯಕವಾಗಿದೆ. ಈ ‘ಅಮೃತ ಕಾಲ’ದಲ್ಲಿ ನೀವು ಪಾರದರ್ಶಕ ಮತ್ತು ಸ್ಪರ್ಧಾತ್ಮಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದನ್ನು ಮುಂದುವರಿಸುತ್ತೀರಿ ಎಂದು ನನಗೆ ನಂಬಿಕೆಯಿದೆ. 
ಇಂದು ಕೆಲವು ಶಾಲಾ ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆಸಿರುವುದು ತುಂಬಾ ಒಳ್ಳೆಯದು. ಪ್ರಬಂಧ ಸ್ಪರ್ಧೆಯಲ್ಲಿ ಎಲ್ಲರೂ ಭಾಗವಹಿಸಿದ್ದರು. ಭಾಷಣ ಸ್ಪರ್ಧೆಯ ಸಂಪ್ರದಾಯವನ್ನೂ ಬೆಳೆಸಿಕೊಳ್ಳಬಹುದಾಗಿದೆ. ಆದರೆ ಒಂದು ವಿಷಯ ನನ್ನ ಗಮನ ಸೆಳೆಯಿತು, ನೀವೂ ಗಮನಿಸಿರಬೇಕು. ಕೇವಲ 20 ಪ್ರತಿಶತ ಬಾಲಕರು ಮಾತ್ರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ ಅದೇ ಸಮಯದಲ್ಲಿ 80 ಪ್ರತಿಶತ ಹೆಣ್ಣು ಮಕ್ಕಳು ಪ್ರಶಸ್ತಿ ಗೆದ್ದಿದ್ದಾರೆ. ಅಂದರೆ ಐದರಲ್ಲಿ ನಾಲ್ವರು ಹೆಣ್ಣುಮಕ್ಕಳಿದ್ದಾರೆ.   ಈ ಹೆಣ್ಣುಮಕ್ಕಳ ಹೃದಯ ಮತ್ತು ಮನಸ್ಸಿನಲ್ಲಿ ನೆಲೆಗೊಂಡಂತಹ ಭ್ರಷ್ಟಾಚಾರದ ವಿರುದ್ಧದ ಅದೇ ಗುಣ ಪುರುಷರಲ್ಲಿಯೂ ಜಾಗೃತಗೊಳ್ಳಬೇಕು. ಆಗ ಮಾತ್ರ ಉಜ್ವಲ ಭವಿಷ್ಯದ ಮಾರ್ಗ ಸೃಷ್ಟಿಯಾಗುತ್ತದೆ. 
ಆದರೆ ಮಕ್ಕಳ ಮನಸ್ಸಿನಲ್ಲಿ ಭ್ರಷ್ಟಾಚಾರದ ವಿರುದ್ಧ ರೋಷ ಹುಟ್ಟುವಂತೆ ಮಾಡುವ ದೃಷ್ಟಿಯಿಂದ ನಿಮ್ಮ ಈ ನಿರೋಧಕ ಅಭಿಯಾನ ಉತ್ತಮವಾಗಿದೆ. ಕೊಳಕಿನ ವಿರುದ್ಧ ರೋಷ ಹುಟ್ಟದ ಹೊರತು, ಸ್ವಚ್ಛತೆಯ ಮಹತ್ವ ಅರ್ಥವಾಗುವುದಿಲ್ಲ. ಭ್ರಷ್ಟಾಚಾರವನ್ನು ಕಡೆಗಣಿಸಿ ಅಂದಾಜಿಸಬೇಡಿ, ಅದು ಇಡೀ ವ್ಯವಸ್ಥೆಯನ್ನು ಹಾಳುಮಾಡುತ್ತದೆ. ನನಗೆ ಅದರ ಅರಿವಿದೆ ಆದ್ದರಿಂದಲೇ ಇದನ್ನು ಮತ್ತೆ ಮತ್ತೆ ಹೇಳುತ್ತಲೇ ಇರುತ್ತೇನೆ. ಇದರ ಬಗ್ಗೆ ನಾವು ನಿರಂತರವಾಗಿ  ಎಚ್ಚರದಿಂದಿರಬೇಕು.
ಕೆಲವರು ಕಾನೂನು ಪರಿಧಿ ಯಿಂದ ಹೊರಗುಳಿದು ಭ್ರಷ್ಟಾಚಾರದ ವ್ಯವಸ್ಥೆಯಲ್ಲಿ ಮುಂದುವರಿಯಲು ತಮ್ಮ ಪ್ರಭಾವವನ್ನು ಬಳಸುತ್ತಾರೆ. ಅಂಥವರು ಕಾನೂನು ಪಾಲನೆ ಮಾಡದಿರುವುದರಿಂದ ಏನೂ ತೊಂದರೆಯಾಗುವುದಿಲ್ಲ ಎಂಬ ಸಲಹೆಯನ್ನು ಸಹ ನೀಡುತ್ತಾರೆ.  ಆದರೆ ಈಗ ಅದರ ವ್ಯಾಪ್ತಿ ಹೆಚ್ಚುತ್ತಿದೆ. ಇಂದಲ್ಲದಿದ್ದರೆ ನಾಳೆ, ಒಂದಲ್ಲ ಒಂದು ಹಂತದಲ್ಲಿ ಸಮಸ್ಯೆ ಬಂದೆರಗುವುದು ಖಚಿತ. ಮತ್ತು ಅದರಿಂದ ಹೊರಬರುವುದು ಕಷ್ಟಸಾಧ್ಯ. ತಂತ್ರಜ್ಞಾನವು ಒಂದಲ್ಲ ಒಂದು ಪುರಾವೆಯನ್ನು ಕಂಡು ಹಿಡಿಯುತ್ತದೆ. ತಂತ್ರಜ್ಞಾನದ ಶಕ್ತಿಯನ್ನು ಹೆಚ್ಚೆಚ್ಚು ಬಳಸಿದಷ್ಟು ಸಮರ್ಥವಾಗಿ ವ್ಯವಸ್ಥೆಯನ್ನು ಬದಲಾಯಿಸಬಹುದು. ಬನ್ನಿ ಪ್ರಯತ್ನಿಸೋಣ. 

ನಿಮ್ಮೆಲ್ಲರಿಗೂ ಶುಭ ಹಾರೈಸುತ್ತೇನೆ.

ಧನ್ಯವಾದಗಳು ಸೋದರರೆ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
Text of PM Modi's address at the Parliament of Guyana
November 21, 2024

Hon’ble Speaker, मंज़ूर नादिर जी,
Hon’ble Prime Minister,मार्क एंथनी फिलिप्स जी,
Hon’ble, वाइस प्रेसिडेंट भरत जगदेव जी,
Hon’ble Leader of the Opposition,
Hon’ble Ministers,
Members of the Parliament,
Hon’ble The चांसलर ऑफ द ज्यूडिशियरी,
अन्य महानुभाव,
देवियों और सज्जनों,

गयाना की इस ऐतिहासिक पार्लियामेंट में, आप सभी ने मुझे अपने बीच आने के लिए निमंत्रित किया, मैं आपका बहुत-बहुत आभारी हूं। कल ही गयाना ने मुझे अपना सर्वोच्च सम्मान दिया है। मैं इस सम्मान के लिए भी आप सभी का, गयाना के हर नागरिक का हृदय से आभार व्यक्त करता हूं। गयाना का हर नागरिक मेरे लिए ‘स्टार बाई’ है। यहां के सभी नागरिकों को धन्यवाद! ये सम्मान मैं भारत के प्रत्येक नागरिक को समर्पित करता हूं।

साथियों,

भारत और गयाना का नाता बहुत गहरा है। ये रिश्ता, मिट्टी का है, पसीने का है,परिश्रम का है करीब 180 साल पहले, किसी भारतीय का पहली बार गयाना की धरती पर कदम पड़ा था। उसके बाद दुख में,सुख में,कोई भी परिस्थिति हो, भारत और गयाना का रिश्ता, आत्मीयता से भरा रहा है। India Arrival Monument इसी आत्मीय जुड़ाव का प्रतीक है। अब से कुछ देर बाद, मैं वहां जाने वाला हूं,

साथियों,

आज मैं भारत के प्रधानमंत्री के रूप में आपके बीच हूं, लेकिन 24 साल पहले एक जिज्ञासु के रूप में मुझे इस खूबसूरत देश में आने का अवसर मिला था। आमतौर पर लोग ऐसे देशों में जाना पसंद करते हैं, जहां तामझाम हो, चकाचौंध हो। लेकिन मुझे गयाना की विरासत को, यहां के इतिहास को जानना था,समझना था, आज भी गयाना में कई लोग मिल जाएंगे, जिन्हें मुझसे हुई मुलाकातें याद होंगीं, मेरी तब की यात्रा से बहुत सी यादें जुड़ी हुई हैं, यहां क्रिकेट का पैशन, यहां का गीत-संगीत, और जो बात मैं कभी नहीं भूल सकता, वो है चटनी, चटनी भारत की हो या फिर गयाना की, वाकई कमाल की होती है,

साथियों,

बहुत कम ऐसा होता है, जब आप किसी दूसरे देश में जाएं,और वहां का इतिहास आपको अपने देश के इतिहास जैसा लगे,पिछले दो-ढाई सौ साल में भारत और गयाना ने एक जैसी गुलामी देखी, एक जैसा संघर्ष देखा, दोनों ही देशों में गुलामी से मुक्ति की एक जैसी ही छटपटाहट भी थी, आजादी की लड़ाई में यहां भी,औऱ वहां भी, कितने ही लोगों ने अपना जीवन समर्पित कर दिया, यहां गांधी जी के करीबी सी एफ एंड्रूज हों, ईस्ट इंडियन एसोसिएशन के अध्यक्ष जंग बहादुर सिंह हों, सभी ने गुलामी से मुक्ति की ये लड़ाई मिलकर लड़ी,आजादी पाई। औऱ आज हम दोनों ही देश,दुनिया में डेमोक्रेसी को मज़बूत कर रहे हैं। इसलिए आज गयाना की संसद में, मैं आप सभी का,140 करोड़ भारतवासियों की तरफ से अभिनंदन करता हूं, मैं गयाना संसद के हर प्रतिनिधि को बधाई देता हूं। गयाना में डेमोक्रेसी को मजबूत करने के लिए आपका हर प्रयास, दुनिया के विकास को मजबूत कर रहा है।

साथियों,

डेमोक्रेसी को मजबूत बनाने के प्रयासों के बीच, हमें आज वैश्विक परिस्थितियों पर भी लगातार नजर ऱखनी है। जब भारत और गयाना आजाद हुए थे, तो दुनिया के सामने अलग तरह की चुनौतियां थीं। आज 21वीं सदी की दुनिया के सामने, अलग तरह की चुनौतियां हैं।
दूसरे विश्व युद्ध के बाद बनी व्यवस्थाएं और संस्थाएं,ध्वस्त हो रही हैं, कोरोना के बाद जहां एक नए वर्ल्ड ऑर्डर की तरफ बढ़ना था, दुनिया दूसरी ही चीजों में उलझ गई, इन परिस्थितियों में,आज विश्व के सामने, आगे बढ़ने का सबसे मजबूत मंत्र है-"Democracy First- Humanity First” "Democracy First की भावना हमें सिखाती है कि सबको साथ लेकर चलो,सबको साथ लेकर सबके विकास में सहभागी बनो। Humanity First” की भावना हमारे निर्णयों की दिशा तय करती है, जब हम Humanity First को अपने निर्णयों का आधार बनाते हैं, तो नतीजे भी मानवता का हित करने वाले होते हैं।

साथियों,

हमारी डेमोक्रेटिक वैल्यूज इतनी मजबूत हैं कि विकास के रास्ते पर चलते हुए हर उतार-चढ़ाव में हमारा संबल बनती हैं। एक इंक्लूसिव सोसायटी के निर्माण में डेमोक्रेसी से बड़ा कोई माध्यम नहीं। नागरिकों का कोई भी मत-पंथ हो, उसका कोई भी बैकग्राउंड हो, डेमोक्रेसी हर नागरिक को उसके अधिकारों की रक्षा की,उसके उज्जवल भविष्य की गारंटी देती है। और हम दोनों देशों ने मिलकर दिखाया है कि डेमोक्रेसी सिर्फ एक कानून नहीं है,सिर्फ एक व्यवस्था नहीं है, हमने दिखाया है कि डेमोक्रेसी हमारे DNA में है, हमारे विजन में है, हमारे आचार-व्यवहार में है।

साथियों,

हमारी ह्यूमन सेंट्रिक अप्रोच,हमें सिखाती है कि हर देश,हर देश के नागरिक उतने ही अहम हैं, इसलिए, जब विश्व को एकजुट करने की बात आई, तब भारत ने अपनी G-20 प्रेसीडेंसी के दौरान One Earth, One Family, One Future का मंत्र दिया। जब कोरोना का संकट आया, पूरी मानवता के सामने चुनौती आई, तब भारत ने One Earth, One Health का संदेश दिया। जब क्लाइमेट से जुड़े challenges में हर देश के प्रयासों को जोड़ना था, तब भारत ने वन वर्ल्ड, वन सन, वन ग्रिड का विजन रखा, जब दुनिया को प्राकृतिक आपदाओं से बचाने के लिए सामूहिक प्रयास जरूरी हुए, तब भारत ने CDRI यानि कोएलिशन फॉर डिज़ास्टर रज़ीलिएंट इंफ्रास्ट्रक्चर का initiative लिया। जब दुनिया में pro-planet people का एक बड़ा नेटवर्क तैयार करना था, तब भारत ने मिशन LiFE जैसा एक global movement शुरु किया,

साथियों,

"Democracy First- Humanity First” की इसी भावना पर चलते हुए, आज भारत विश्वबंधु के रूप में विश्व के प्रति अपना कर्तव्य निभा रहा है। दुनिया के किसी भी देश में कोई भी संकट हो, हमारा ईमानदार प्रयास होता है कि हम फर्स्ट रिस्पॉन्डर बनकर वहां पहुंचे। आपने कोरोना का वो दौर देखा है, जब हर देश अपने-अपने बचाव में ही जुटा था। तब भारत ने दुनिया के डेढ़ सौ से अधिक देशों के साथ दवाएं और वैक्सीन्स शेयर कीं। मुझे संतोष है कि भारत, उस मुश्किल दौर में गयाना की जनता को भी मदद पहुंचा सका। दुनिया में जहां-जहां युद्ध की स्थिति आई,भारत राहत और बचाव के लिए आगे आया। श्रीलंका हो, मालदीव हो, जिन भी देशों में संकट आया, भारत ने आगे बढ़कर बिना स्वार्थ के मदद की, नेपाल से लेकर तुर्की और सीरिया तक, जहां-जहां भूकंप आए, भारत सबसे पहले पहुंचा है। यही तो हमारे संस्कार हैं, हम कभी भी स्वार्थ के साथ आगे नहीं बढ़े, हम कभी भी विस्तारवाद की भावना से आगे नहीं बढ़े। हम Resources पर कब्जे की, Resources को हड़पने की भावना से हमेशा दूर रहे हैं। मैं मानता हूं,स्पेस हो,Sea हो, ये यूनीवर्सल कन्फ्लिक्ट के नहीं बल्कि यूनिवर्सल को-ऑपरेशन के विषय होने चाहिए। दुनिया के लिए भी ये समय,Conflict का नहीं है, ये समय, Conflict पैदा करने वाली Conditions को पहचानने और उनको दूर करने का है। आज टेरेरिज्म, ड्रग्स, सायबर क्राइम, ऐसी कितनी ही चुनौतियां हैं, जिनसे मुकाबला करके ही हम अपनी आने वाली पीढ़ियों का भविष्य संवार पाएंगे। और ये तभी संभव है, जब हम Democracy First- Humanity First को सेंटर स्टेज देंगे।

साथियों,

भारत ने हमेशा principles के आधार पर, trust और transparency के आधार पर ही अपनी बात की है। एक भी देश, एक भी रीजन पीछे रह गया, तो हमारे global goals कभी हासिल नहीं हो पाएंगे। तभी भारत कहता है – Every Nation Matters ! इसलिए भारत, आयलैंड नेशन्स को Small Island Nations नहीं बल्कि Large ओशिन कंट्रीज़ मानता है। इसी भाव के तहत हमने इंडियन ओशन से जुड़े आयलैंड देशों के लिए सागर Platform बनाया। हमने पैसिफिक ओशन के देशों को जोड़ने के लिए भी विशेष फोरम बनाया है। इसी नेक नीयत से भारत ने जी-20 की प्रेसिडेंसी के दौरान अफ्रीकन यूनियन को जी-20 में शामिल कराकर अपना कर्तव्य निभाया।

साथियों,

आज भारत, हर तरह से वैश्विक विकास के पक्ष में खड़ा है,शांति के पक्ष में खड़ा है, इसी भावना के साथ आज भारत, ग्लोबल साउथ की भी आवाज बना है। भारत का मत है कि ग्लोबल साउथ ने अतीत में बहुत कुछ भुगता है। हमने अतीत में अपने स्वभाव औऱ संस्कारों के मुताबिक प्रकृति को सुरक्षित रखते हुए प्रगति की। लेकिन कई देशों ने Environment को नुकसान पहुंचाते हुए अपना विकास किया। आज क्लाइमेट चेंज की सबसे बड़ी कीमत, ग्लोबल साउथ के देशों को चुकानी पड़ रही है। इस असंतुलन से दुनिया को निकालना बहुत आवश्यक है।

साथियों,

भारत हो, गयाना हो, हमारी भी विकास की आकांक्षाएं हैं, हमारे सामने अपने लोगों के लिए बेहतर जीवन देने के सपने हैं। इसके लिए ग्लोबल साउथ की एकजुट आवाज़ बहुत ज़रूरी है। ये समय ग्लोबल साउथ के देशों की Awakening का समय है। ये समय हमें एक Opportunity दे रहा है कि हम एक साथ मिलकर एक नया ग्लोबल ऑर्डर बनाएं। और मैं इसमें गयाना की,आप सभी जनप्रतिनिधियों की भी बड़ी भूमिका देख रहा हूं।

साथियों,

यहां अनेक women members मौजूद हैं। दुनिया के फ्यूचर को, फ्यूचर ग्रोथ को, प्रभावित करने वाला एक बहुत बड़ा फैक्टर दुनिया की आधी आबादी है। बीती सदियों में महिलाओं को Global growth में कंट्रीब्यूट करने का पूरा मौका नहीं मिल पाया। इसके कई कारण रहे हैं। ये किसी एक देश की नहीं,सिर्फ ग्लोबल साउथ की नहीं,बल्कि ये पूरी दुनिया की कहानी है।
लेकिन 21st सेंचुरी में, global prosperity सुनिश्चित करने में महिलाओं की बहुत बड़ी भूमिका होने वाली है। इसलिए, अपनी G-20 प्रेसीडेंसी के दौरान, भारत ने Women Led Development को एक बड़ा एजेंडा बनाया था।

साथियों,

भारत में हमने हर सेक्टर में, हर स्तर पर, लीडरशिप की भूमिका देने का एक बड़ा अभियान चलाया है। भारत में हर सेक्टर में आज महिलाएं आगे आ रही हैं। पूरी दुनिया में जितने पायलट्स हैं, उनमें से सिर्फ 5 परसेंट महिलाएं हैं। जबकि भारत में जितने पायलट्स हैं, उनमें से 15 परसेंट महिलाएं हैं। भारत में बड़ी संख्या में फाइटर पायलट्स महिलाएं हैं। दुनिया के विकसित देशों में भी साइंस, टेक्नॉलॉजी, इंजीनियरिंग, मैथ्स यानि STEM graduates में 30-35 परसेंट ही women हैं। भारत में ये संख्या फोर्टी परसेंट से भी ऊपर पहुंच चुकी है। आज भारत के बड़े-बड़े स्पेस मिशन की कमान महिला वैज्ञानिक संभाल रही हैं। आपको ये जानकर भी खुशी होगी कि भारत ने अपनी पार्लियामेंट में महिलाओं को रिजर्वेशन देने का भी कानून पास किया है। आज भारत में डेमोक्रेटिक गवर्नेंस के अलग-अलग लेवल्स पर महिलाओं का प्रतिनिधित्व है। हमारे यहां लोकल लेवल पर पंचायती राज है, लोकल बॉड़ीज़ हैं। हमारे पंचायती राज सिस्टम में 14 लाख से ज्यादा यानि One point four five मिलियन Elected Representatives, महिलाएं हैं। आप कल्पना कर सकते हैं, गयाना की कुल आबादी से भी करीब-करीब दोगुनी आबादी में हमारे यहां महिलाएं लोकल गवर्नेंट को री-प्रजेंट कर रही हैं।

साथियों,

गयाना Latin America के विशाल महाद्वीप का Gateway है। आप भारत और इस विशाल महाद्वीप के बीच अवसरों और संभावनाओं का एक ब्रिज बन सकते हैं। हम एक साथ मिलकर, भारत और Caricom की Partnership को और बेहतर बना सकते हैं। कल ही गयाना में India-Caricom Summit का आयोजन हुआ है। हमने अपनी साझेदारी के हर पहलू को और मजबूत करने का फैसला लिया है।

साथियों,

गयाना के विकास के लिए भी भारत हर संभव सहयोग दे रहा है। यहां के इंफ्रास्ट्रक्चर में निवेश हो, यहां की कैपेसिटी बिल्डिंग में निवेश हो भारत और गयाना मिलकर काम कर रहे हैं। भारत द्वारा दी गई ferry हो, एयरक्राफ्ट हों, ये आज गयाना के बहुत काम आ रहे हैं। रीन्युएबल एनर्जी के सेक्टर में, सोलर पावर के क्षेत्र में भी भारत बड़ी मदद कर रहा है। आपने t-20 क्रिकेट वर्ल्ड कप का शानदार आयोजन किया है। भारत को खुशी है कि स्टेडियम के निर्माण में हम भी सहयोग दे पाए।

साथियों,

डवलपमेंट से जुड़ी हमारी ये पार्टनरशिप अब नए दौर में प्रवेश कर रही है। भारत की Energy डिमांड तेज़ी से बढ़ रही हैं, और भारत अपने Sources को Diversify भी कर रहा है। इसमें गयाना को हम एक महत्वपूर्ण Energy Source के रूप में देख रहे हैं। हमारे Businesses, गयाना में और अधिक Invest करें, इसके लिए भी हम निरंतर प्रयास कर रहे हैं।

साथियों,

आप सभी ये भी जानते हैं, भारत के पास एक बहुत बड़ी Youth Capital है। भारत में Quality Education और Skill Development Ecosystem है। भारत को, गयाना के ज्यादा से ज्यादा Students को Host करने में खुशी होगी। मैं आज गयाना की संसद के माध्यम से,गयाना के युवाओं को, भारतीय इनोवेटर्स और वैज्ञानिकों के साथ मिलकर काम करने के लिए भी आमंत्रित करता हूँ। Collaborate Globally And Act Locally, हम अपने युवाओं को इसके लिए Inspire कर सकते हैं। हम Creative Collaboration के जरिए Global Challenges के Solutions ढूंढ सकते हैं।

साथियों,

गयाना के महान सपूत श्री छेदी जगन ने कहा था, हमें अतीत से सबक लेते हुए अपना वर्तमान सुधारना होगा और भविष्य की मजबूत नींव तैयार करनी होगी। हम दोनों देशों का साझा अतीत, हमारे सबक,हमारा वर्तमान, हमें जरूर उज्जवल भविष्य की तरफ ले जाएंगे। इन्हीं शब्दों के साथ मैं अपनी बात समाप्त करता हूं, मैं आप सभी को भारत आने के लिए भी निमंत्रित करूंगा, मुझे गयाना के ज्यादा से ज्यादा जनप्रतिनिधियों का भारत में स्वागत करते हुए खुशी होगी। मैं एक बार फिर गयाना की संसद का, आप सभी जनप्रतिनिधियों का, बहुत-बहुत आभार, बहुत बहुत धन्यवाद।