ಕೇಂದ್ರದ ಸ್ಥಾಪನೆಗೆ ನೀಡಿದ ಬೆಂಬಲಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಿದ ಡಬ್ಲ್ಯುಎಚ್‌ಒ ಮಹಾನಿರ್ದೇಶಕರು
ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರದ ಸ್ಥಾಪನೆಗಾಗಿ ಭಾರತಕ್ಕೆ ಧನ್ಯವಾದ ಅರ್ಪಿಸಿದ ವಿಶ್ವ ನಾಯಕರು
" ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರವು ಈ ಕ್ಷೇತ್ರದಲ್ಲಿ ಭಾರತದ ಕೊಡುಗೆ ಮತ್ತು ಸಾಮರ್ಥ್ಯಕ್ಕೆ ದೊರೆತ ಮನ್ನಣೆಯಾಗಿದೆ"
"ಭಾರತವು ಈ ಪಾಲುದಾರಿಕೆಯನ್ನು ಇಡೀ ಮನುಕುಲದ ಸೇವೆಗಾಗಿ ಒಂದು ದೊಡ್ಡ ಜವಾಬ್ದಾರಿಯಾಗಿ ಸ್ವೀಕರಿಸುತ್ತದೆ"
" ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರದ ಸ್ಥಾಪನೆಯಿಂದಾಗಿ ಸ್ವಾಸ್ಥ್ಯ ಕ್ಷೇತ್ರಕ್ಕೆ ಜಾಮ್‌ನಗರದ ಕೊಡುಗೆಗಳು ಜಾಗತಿಕ ಮನ್ನಣೆ ಪಡೆಯುತ್ತವೆ"
"ಒಂದು ಗ್ರಹ ನಮ್ಮ ಆರೋಗ್ಯ" ಎಂಬ ಘೋಷಣೆಯನ್ನು ನೀಡುವ ಮೂಲಕ ಡಬ್ಲ್ಯುಎಚ್‌ಒ 'ಒಂದು ಭೂಮಿ, ಒಂದು ಆರೋಗ್ಯ' ಎಂಬ ಭಾರತದ ದೃಷ್ಟಿಕೋನವನ್ನು ಉತ್ತೇಜಿಸಿದೆ"
“ಭಾರತದ ಸಾಂಪ್ರದಾಯಿಕ ಔಷಧ ವ್ಯವಸ್ಥೆಯು ಚಿಕಿತ್ಸೆಗೆ ಸೀಮಿತವಾಗಿಲ್ಲ. ಇದು ಸಮಗ್ರ ಜೀವನ ವಿಜ್ಞಾನವಾಗಿದೆ"

ನಮಸ್ಕಾರ!!

ಮಾರಿಷಸ್‌ ಪ್ರಧಾನಮಂತ್ರಿ ಶ್ರೀ ಪ್ರವಿಂದ್‌ ಕುಮಾರ್‌ ಜುಗ್ನಾತ್‌ ಜೀ, ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೋಸ್‌, ಗುಜರಾತ್‌ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್‌, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಸರ್ಬಾನಂದ ಸೋನೊವಾಲ್‌ ಜೀ, ಡಾ. ಮನ್ಸುಖ್‌ ಮಾಂಡವಿಯಾ ಜೀ, ಶ್ರೀ ಮುಂಜಪಾರ ಮಹೇಂದ್ರಭಾಯಿ, ಇಲ್ಲಿಉಪಸ್ಥಿತರಿರುವ ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ! ಇಂದು, ನಾವೆಲ್ಲರೂ ಪ್ರಪಂಚದಾದ್ಯಂತ ಆರೋಗ್ಯ ಮತ್ತು ಸ್ಥಾಸ್ಥ್ಯಕ್ಕಾಗಿ ಒಂದು ಭವ್ಯವಾದ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೋಸ್‌ ಅವರಿಗೆ ನಾನು ಆಭಾರಿಯಾಗಿದ್ದೇನೆ. ಡಾ. ಟೆಡ್ರೋಸ್‌ ಅವರು ಭಾರತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಕ್ಕಾಗಿ ಪ್ರತಿಯೊಬ್ಬ ಭಾರತೀಯನ ಪರವಾಗಿ ನಾನು ಅವರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ವಿಶೇಷವಾಗಿ ಅವರು ಗುಜರಾತಿ, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳ ಸಂಗಮವನ್ನು ಮಾಡಿದ ಮತ್ತು ಪ್ರತಿಯೊಬ್ಬ ಭಾರತೀಯನ ಹೃದಯವನ್ನು ಸ್ಪರ್ಶಿಸಿದ ರೀತಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಡಾ. ಟೆಡ್ರೋಸ್‌ ಅವರೊಂದಿಗಿನ ನನ್ನ ಸಂಬಂಧ ಬಹಳ ಹಳೆಯದು ಮತ್ತು ನಾವು ಭೇಟಿಯಾದಾಗಲೆಲ್ಲಾ ಅವರು ಯಾವಾಗಲೂ ಭಾರತದ ಗುರುಗಳು ತಮಗೆ ಕಲಿಸಿದ ವಿಧಾನದ ಬಗ್ಗೆ ಬಹಳ ಹೆಮ್ಮೆ ಮತ್ತು ಸಂತೋಷದಿಂದ ಉಲ್ಲೇಖಿಸುತ್ತಾರೆ. ಅವರು ತಮ್ಮ ಭಾವನೆಗಳನ್ನು ತುಂಬಾ ಸಂತೋಷದಿಂದ ವ್ಯಕ್ತಪಡಿಸುತ್ತಾರೆ. ಮತ್ತು ಅವರು ಭಾರತದ ಬಗ್ಗೆ ಹೊಂದಿರುವ ಪ್ರೀತಿಯು ಇಂದು ಒಂದು ಸಂಸ್ಥೆಯ ರೂಪದಲ್ಲಿವ್ಯಕ್ತವಾಗುತ್ತಿದೆ. ಅವರು ನನಗೆ ಹೇಳಿದರು - ‘‘ಇದು ನನ್ನ ಮಗು ಮತ್ತು ನಾನು ಅದನ್ನು ನಿಮಗೆ ನೀಡುತ್ತಿದ್ದೇನೆ; ಈಗ ಅದನ್ನು ಪೋಷಿಸುವುದು ನಿಮ್ಮ ಜವಾಬ್ದಾರಿಯಾಗಿದೆ,’’ ನೀವು ಭಾರತಕ್ಕೆ ಈ ಜವಾಬ್ದಾರಿಯನ್ನು ಯಾವ ವಿಶ್ವಾಸದಿಂದ ನೀಡಿದ್ದೀರಿ ಮತ್ತು ನಮ್ಮ ಮುಖ್ಯಮಂತ್ರಿ ಭೂಪೇಂದ್ರ ಭಾಯಿ ಪಟೇಲರು ಈ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತು ತಂದಿರುವ ಉತ್ಸಾಹದಿಂದ, ನಾವು ಖಂಡಿತವಾಗಿಯೂ ನಿಮ್ಮ ನಿರೀಕ್ಷೆಗಳನ್ನು ಪೂರೈಸುತ್ತೇವೆ ಎಂದು ನನಗೆ ಖಾತ್ರಿಯಿದೆ ಎಂದು ನಾನು ಡಾ. ಟೆಡ್ರೋಸ್‌ ಅವರಿಗೆ ಭರವಸೆ ನೀಡುತ್ತೇನೆ. ನನ್ನ ಪ್ರೀತಿಯ ಗೆಳೆಯ ಮತ್ತು ಮಾರಿಷಸ್‌ ಪ್ರಧಾನಮಂತ್ರಿ ಶ್ರೀ ಜುಗ್ನಾತ್‌ ಜೀ ಅವರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಸುಮಾರು ಮೂರು ದಶಕಗಳಿಂದ ನಾನು ಅವರ ಕುಟುಂಬದೊಂದಿಗೆ ಸಂಬಂಧವನ್ನು ಹೊಂದಿದ್ದೇನೆ. ನಾನು ಮಾರಿಷಸ್‌ ಗೆ ಹೋದಾಗಲೆಲ್ಲಾ, ನಾನು ಅವರ ಮನೆಗೆ ಭೇಟಿ ನೀಡುತ್ತಿದ್ದೆ, ಅವರ ತಂದೆಯನ್ನು ಭೇಟಿಯಾಗುತ್ತಿದ್ದೆ. ಸುಮಾರು ಮೂರು ದಶಕಗಳಷ್ಟು ಹಳೆಯದಾದ ಅವರ ಕುಟುಂಬದೊಂದಿಗೆ ನನಗೆ ಬಹಳ ನಿಕಟ ಸಂಬಂಧವಿದೆ ಮತ್ತು ಇಂದು ನನ್ನ ಆಹ್ವಾನದ ಮೇರೆಗೆ ಅವರು ನನ್ನ ತವರು ರಾಜ್ಯ ಗುಜರಾತ್‌ಗೆ ಬಂದಿರುವುದು ನನಗೆ ಸಂತೋಷವಾಗಿದೆ. ಅವರು ಕೂಡ ಗುಜರಾತ್‌ ಮತ್ತು ಗುಜರಾತಿ ಭಾಷೆಯೊಂದಿಗೆ ಸಂಪರ್ಕ ಸಾಧಿಸುವ ಮೂಲಕ ನಮ್ಮೆಲ್ಲರ ಹೃದಯವನ್ನು ಗೆದ್ದಿದ್ದಾರೆ. ನಾವು ಬಾಂಗ್ಲಾದೇಶದ ಪ್ರಧಾನಿ, ಭೂತಾನ್‌ ಪ್ರಧಾನಿ ಮತ್ತು ನೇಪಾಳದ ಪ್ರಧಾನಿ ಅಭಿಪ್ರಾಯಗಳನ್ನು ಕೇಳಿದ್ದೇವೆ. ಸಾಂಪ್ರದಾಯಿಕ ಔಷಧಕ್ಕಾಗಿ  ಡಬ್ಲ್ಯುಎಚ್‌ಒನ ಜಾಗತಿಕ ಕೇಂದ್ರಕ್ಕೆ ಪ್ರತಿಯೊಬ್ಬರೂ ಶುಭ ಕೋರಿದ್ದಾರೆ. ಅವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ.

ಸುಮಾರು ಮೂರು ದಶಕಗಳಿಂದ ನಾನು ಅವರ ಕುಟುಂಬದೊಂದಿಗೆ ಸಂಬಂಧವನ್ನು ಹೊಂದಿದ್ದೇನೆ. ನಾನು ಮಾರಿಷಸ್‌ ಗೆ ಹೋದಾಗಲೆಲ್ಲಾ, ನಾನು ಅವರ ಮನೆಗೆ ಭೇಟಿ ನೀಡುತ್ತಿದ್ದೆ, ಅವರ ತಂದೆಯನ್ನು ಭೇಟಿಯಾಗುತ್ತಿದ್ದೆ. ಸುಮಾರು ಮೂರು ದಶಕಗಳಷ್ಟು ಹಳೆಯದಾದ ಅವರ ಕುಟುಂಬದೊಂದಿಗೆ ನನಗೆ ಬಹಳ ನಿಕಟ ಸಂಬಂಧವಿದೆ ಮತ್ತು ಇಂದು ನನ್ನ ಆಹ್ವಾನದ ಮೇರೆಗೆ ಅವರು ನನ್ನ ತವರು ರಾಜ್ಯ ಗುಜರಾತ್‌ಗೆ ಬಂದಿರುವುದು ನನಗೆ ಸಂತೋಷವಾಗಿದೆ. ಅವರು ಕೂಡ ಗುಜರಾತ್‌ ಮತ್ತು ಗುಜರಾತಿ ಭಾಷೆಯೊಂದಿಗೆ ಸಂಪರ್ಕ ಸಾಧಿಸುವ ಮೂಲಕ ನಮ್ಮೆಲ್ಲರ ಹೃದಯವನ್ನು ಗೆದ್ದಿದ್ದಾರೆ. ನಾವು ಬಾಂಗ್ಲಾದೇಶದ ಪ್ರಧಾನಿ, ಭೂತಾನ್‌ ಪ್ರಧಾನಿ ಮತ್ತು ನೇಪಾಳದ ಪ್ರಧಾನಿ ಅಭಿಪ್ರಾಯಗಳನ್ನು ಕೇಳಿದ್ದೇವೆ. ಸಾಂಪ್ರದಾಯಿಕ ಔಷಧಕ್ಕಾಗಿ  ಡಬ್ಲ್ಯುಎಚ್‌ಒನ ಜಾಗತಿಕ ಕೇಂದ್ರಕ್ಕೆ ಪ್ರತಿಯೊಬ್ಬರೂ ಶುಭ ಕೋರಿದ್ದಾರೆ. ಅವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ.

ಸ್ನೇಹಿತರೇ,
 ಈ ಸಾಂಪ್ರದಾಯಿಕ ಔಷಧ ಕೇಂದ್ರದ ರೂಪದಲ್ಲಿಡಬ್ಲ್ಯುಎಚ್‌ಒ ಭಾರತದೊಂದಿಗೆ ಹೊಸ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಇದು ಸಾಂಪ್ರದಾಯಿಕ ಔಷಧ ಕ್ಷೇತ್ರದಲ್ಲಿಭಾರತದ ಕೊಡುಗೆ ಮತ್ತು ಭಾರತದ ಸಾಮರ್ಥ್ಯ‌ ಎರಡನ್ನೂ ಗುರುತಿಸುತ್ತದೆ. ಇಡೀ ಮನುಕುಲಕ್ಕೆ ಸೇವೆ ಸಲ್ಲಿಸಲು ಭಾರತವು ಈ ಪಾಲುದಾರಿಕೆಯನ್ನು ದೊಡ್ಡ ಜವಾಬ್ದಾರಿಯಾಗಿ ತೆಗೆದುಕೊಳ್ಳುತ್ತಿದೆ. ಈ ಕೇಂದ್ರವು ವಿಶ್ವದಾದ್ಯಂತ ಹರಡಿರುವ ಸಾಂಪ್ರದಾಯಿಕ ಔಷಧದ ಸಹಯೋಗದೊಂದಿಗೆ, ವಿಶ್ವದಾದ್ಯಂತದ ಜನರಿಗೆ ಉತ್ತಮ ವೈದ್ಯಕೀಯ ಪರಿಹಾರಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಜಾಮ್‌ನಗರದ ಭೂಮಿಯಲ್ಲಿಡಾ. ಟೆಡ್ರೋಸ್‌ ಮತ್ತು ಪ್ರವಿಂದ್‌ ಜೀ ಅವರ ಉಪಸ್ಥಿತಿಯಲ್ಲಿ, ಇದು ಕೇವಲ ಕಟ್ಟಡ ಅಥವಾ ಸಂಸ್ಥೆಗೆ ಶಂಕುಸ್ಥಾಪನೆ ಸಮಾರಂಭವಲ್ಲಎಂದು ನಾನು ಹೇಳಬಯಸುತ್ತೇನೆ. ಪ್ರಕೃತಿ ಚಿಕಿತ್ಸೆ ಮತ್ತು ಸಾಂಪ್ರದಾಯಿಕ ಔಷಧಗಳಲ್ಲಿನಂಬಿಕೆ ಹೊಂದಿರುವ ವಿಶ್ವದಾದ್ಯಂತದ ಎಲ್ಲರಿಗೂ ನಾನು ಇಂದು ಹೇಳಬಯಸುವುದೇನೆಂದರೆ, ಭಾರತವು ‘ಆಜಾದಿ ಕಾ ಅಮೃತ್‌ ಮಹೋತ್ಸವ’ವನ್ನು ಆಚರಿಸುತ್ತಿರುವುದರಿಂದ, ಈ ಅವಧಿಯಲ್ಲಿಶಂಕುಸ್ಥಾಪನೆ ನೆರವೇರಿಸಲಾದ ಅಡಿಪಾಯವು ವಿಶ್ವದಾದ್ಯಂತ ಮುಂಬರುವ 25 ವರ್ಷಗಳ ಸಾಂಪ್ರದಾಯಿಕ ಔಷಧಗಳ ಯುಗವನ್ನು ಪ್ರಾರಂಭಿಸಿದೆ.

ಮುಂಬರುವ 25 ವರ್ಷಗಳಲ್ಲಿಸಮಗ್ರ ಆರೋಗ್ಯ ರಕ್ಷ ಣೆಯ ಬಗ್ಗೆ ಹೆಚ್ಚುತ್ತಿರುವ ಆಸಕ್ತಿಯಿಂದಾಗಿ, ದೇಶವು ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುತ್ತಿರುವಾಗ, ಸಾಂಪ್ರದಾಯಿಕ ಔಷಧಿಗಳು ಪ್ರಪಂಚದಾದ್ಯಂತದ ಪ್ರತಿಯೊಂದು ಕುಟುಂಬಕ್ಕೆ ಅತ್ಯಂತ ಮಹತ್ವದ ಕೇಂದ್ರವಾಗುತ್ತವೆ ಎಂದು ನಾನು ಕಣ್ಣಮುಂದೆ ನೋಡಬಲ್ಲೆ. ಮತ್ತು ಇಂದು ಅದಕ್ಕಾಗಿ ಅಡಿಪಾಯ ಹಾಕಲಾಗುತ್ತಿದೆ. ಮತ್ತು ಆಯುರ್ವೇದದಲ್ಲಿ, ಅಮೃತ ಕಳಶಕ್ಕೆ ಹೆಚ್ಚಿನ ಮಹತ್ವವಿದೆ; ಮತ್ತು ಈ ಕಾರ್ಯಕ್ರಮವು ಅಮೃತ್‌ ಕಾಲ್‌ ನಲ್ಲಿಪ್ರಾರಂಭವಾಗುತ್ತಿದೆ. ಆದ್ದರಿಂದ ನಾನು ಹೊಸ ನಂಬಿಕೆಯೊಂದಿಗೆ ಕೆಲವು ದೂರಗಾಮಿ ಪರಿಣಾಮಗಳನ್ನು ಊಹಿಸಬಲ್ಲೆ. ವೈಯಕ್ತಿಕವಾಗಿ, ನಮ್ಮ ಜಾಮ್‌ ನಗರದಲ್ಲಿಈ ಜಾಗತಿಕ ಕೇಂದ್ರವನ್ನು ಸ್ಥಾಪಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಜಾಮ್‌ನಗರವು ಆಯುರ್ವೇದದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ. ಐದು ದಶಕಗಳ ಹಿಂದೆ, ವಿಶ್ವದ ಮೊದಲ ಆಯುರ್ವೇದ ವಿಶ್ವವಿದ್ಯಾಲಯವನ್ನು ಜಾಮ್‌ನಗರದಲ್ಲಿಸ್ಥಾಪಿಸಲಾಯಿತು. ಇಲ್ಲಿನಾವು ಅತ್ಯುತ್ತಮ ಆಯುರ್ವೇದ ಸಂಸ್ಥೆಯೊಂದನ್ನು ಹೊಂದಿದ್ದೇವೆ.  ಈಗ ವಿಶ್ವ ಆರೋಗ್ಯ ಸಂಸ್ಥೆಯ ಈ ಜಾಗತಿಕ ಕೇಂದ್ರವು ಜಾಗತಿಕ ಮಟ್ಟದಲ್ಲಿಸ್ವಾಸ್ಥ್ಯ ಕ್ಷೇತ್ರದಲ್ಲಿಜಾಮ್‌ನಗರದ ಅಸ್ಮಿತೆಗೆ ಹೊಸ ಎತ್ತರವನ್ನು ನೀಡುತ್ತದೆ. ರೋಗ ಮುಕ್ತವಾಗಿ ಉಳಿಯುವುದು ಜೀವನದ ಪ್ರಯಾಣದ ಪ್ರಮುಖ ಭಾಗವಾಗಬಹುದು. ಆದರೆ ಯೋಗಕ್ಷೇಮವು ಅಂತಿಮ ಗುರಿಯಾಗಿರಬೇಕು.

ಸ್ನೇಹಿತರೇ, 
ಕೋವಿಡ್‌ ಸಾಂಕ್ರಾಮಿಕ ರೋಗದ ಸಮಯದಲ್ಲಿನಮ್ಮ ಜೀವನದಲ್ಲಿಸ್ವಾಸ್ಥ್ಯದ ಮಹತ್ವವನ್ನು ನಾವು ಅರಿತುಕೊಂಡಿದ್ದೇವೆ. ಅದಕ್ಕಾಗಿಯೇ ಜಗತ್ತು ಇಂದು ಆರೋಗ್ಯ ರಕ್ಷ ಣೆಯ ವಿತರಣೆಯ ಹೊಸ ಆಯಾಮವನ್ನು ಶೋಧಿಸುತ್ತಿದೆ. ಈ ವರ್ಷದ ಧ್ಯೇಯವಾಕ್ಯವನ್ನು ‘ನಮ್ಮ ಗ್ರಹ, ನಮ್ಮ ಆರೋಗ್ಯ’ ಎಂದು ಆಯ್ಕೆ ಮಾಡುವ ಮೂಲಕ ಡಬ್ಲ್ಯುಎಚ್‌ಒ ಭಾರತದ ’ಒಂದು ಭೂಮಿ, ಒಂದು ಆರೋಗ್ಯ’ದ ಈ ದೃಷ್ಟಿಕೋನವನ್ನು ಮುಂದಕ್ಕೆ ಕೊಂಡೊಯ್ದಿದೆ ಎಂದು ನನಗೆ ಸಂತೋಷವಾಗಿದೆ.


ಸ್ನೇಹಿತರೇ,
ಇದನ್ನು ಸಾವಿರಾರು ವರ್ಷಗಳ ಹಿಂದೆ ರಚಿತವಾದ ಅಥರ್ವಣವೇದದಲ್ಲಿಹೇಳಲಾಗಿದೆ - ರೀಮ್ರದ್‌: ಷತ್ತ್ಶದ. ಅಂದರೆ, 100 ವರ್ಷಗಳ ಕಾಲ ಬದುಕಿ! ನಮ್ಮ ಸಂಪ್ರದಾಯದಲ್ಲಿಒಬ್ಬರು, 100 ವರ್ಷಗಳ ಕಾಲ ಬದುಕಬೇಕು ಎಂದು ಬಯಸುವುದು ತುಂಬಾ ಸಾಮಾನ್ಯವಾಗಿದೆ. ಏಕೆಂದರೆ ಆ ದಿನಗಳಲ್ಲಿ100ನೇ ವಯಸ್ಸನ್ನು ತಲುಪುವುದು ದೊಡ್ಡ ವಿಷಯವಾಗಿರಲಿಲ್ಲ. ಮತ್ತು ನಮ್ಮ ಸಾಂಪ್ರದಾಯಿಕ ವೈದ್ಯಕೀಯ ಅಭ್ಯಾಸಗಳು ಪ್ರಮುಖ ಪಾತ್ರ ವಹಿಸಿವೆ. ಭಾರತದ ಸಾಂಪ್ರದಾಯಿಕ ಔಷಧವು ಕೇವಲ ಚಿಕಿತ್ಸೆಗೆ ಮಾತ್ರ ಸೀಮಿತವಾಗಿಲ್ಲ. ಇದು ಜೀವನದ ಸಮಗ್ರ ವಿಜ್ಞಾನವಾಗಿದೆ. ಆಯುರ್ವೇದದಲ್ಲಿಚಿಕಿತ್ಸೆ ಮತ್ತು ಚಿಕಿತ್ಸೆ ಹೊರತಾಗಿ, ಸಾಮಾಜಿಕ ಆರೋಗ್ಯ, ಮಾನಸಿಕ ಆರೋಗ್ಯ, ಸಂತೋಷ, ಪರಿಸರ ಆರೋಗ್ಯ, ಸಹಾನುಭೂತಿ, ಸಂವೇದನಾಶೀಲತೆ ಮತ್ತು ಉತ್ಪಾದಕತೆ ಸಹ ಈ ‘ಅಮೃತ ಕಳಶ’ದಲ್ಲಿಸೇರಿಸಲ್ಪಟ್ಟಿದೆ ಎಂದು ಅನೇಕರಿಗೆ ಸಲಹೆ ನೀಡಲಾಗುತ್ತದೆ. ಅದಕ್ಕಾಗಿಯೇ ಆಯುರ್ವೇದವನ್ನು ಜೀವನದ ಜ್ಞಾನವೆಂದು ಪರಿಗಣಿಸಲಾಗಿದೆ. ಮತ್ತು ಆಯುರ್ವೇದವನ್ನು ಐದನೇ ವೇದ ಎಂದೂ ಕರೆಯಲಾಗುತ್ತದೆ ಮತ್ತು ನಾಲ್ಕು ವೇದಗಳಂತೆ ಅದೇ ಪ್ರಾಮುಖ್ಯತೆಯನ್ನು ಹೊಂದಿದೆ.

ಸ್ನೇಹಿತರೇ, 
ಇಂದು, ಆಧುನಿಕ ಪ್ರಪಂಚದ ಜೀವನ ಶೈಲಿಗೆ ಸಂಬಂಧಿಸಿದ ಹೊಸ ರೋಗಗಳನ್ನು ನಿವಾರಿಸಲು ನಮ್ಮ ಸಾಂಪ್ರದಾಯಿಕ ಜ್ಞಾನವು ನಿರ್ಣಾಯಕವಾಗಿದೆ. ಉದಾಹರಣೆಗೆ, ಉತ್ತಮ ಆರೋಗ್ಯವು ಸಮತುಲಿತ ಆಹಾರಕ್ಕೆ ನೇರವಾಗಿ ಸಂಬಂಧಿಸಿದೆ. ನಮ್ಮ ಪೂರ್ವಜರು ಯಾವುದೇ ರೋಗಕ್ಕೆ ಅರ್ಧದಷ್ಟು ಪರಿಹಾರ ಸಮತುಲಿತ ಆಹಾರದಲ್ಲಿಇರುತ್ತದೆ ಎಂದು ನಂಬಿದ್ದರು. ನಮ್ಮ ಸಾಂಪ್ರದಾಯಿಕ  ಅಭ್ಯಾಸಗಳು ಪ್ರತಿ ಕಾರ್ಯಕ್ರಮದಲ್ಲಿ ಏನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಹಾಗು ಈ ಮಾಹಿತಿಯ ಆಧಾರವು ನೂರಾರು ವರ್ಷಗಳ ಅನುಭವದ ಸಂಕಲನವಾಗಿದೆ. ಉದಾಹರಣೆಗೆ, ನಮ್ಮ ಹಿರಿಯರು ಸಿರಿಧಾನ್ಯಗಳು ಅಥವಾ ಒರಟು ಧಾನ್ಯಗಳ ಬಳಕೆಗೆ ಹೆಚ್ಚು ಒತ್ತು ನೀಡುತ್ತಿದ್ದ ಕಾಲವಿತ್ತು. ಕಾಲಾನಂತರದಲ್ಲಿ, ಅದರ ಬಳಕೆ ಕಡಿಮೆಯಾಗುತ್ತಿರುವುದನ್ನು ನಾವು ನೋಡಿದ್ದೇವೆ. ಆದಾಗ್ಯೂ, ಇಂದು ಸಿರಿಧಾನ್ಯಗಳ ಬೇಡಿಕೆ ಹೆಚ್ಚಾಗುತ್ತಿರುವುದನ್ನು ನಾವು ಮತ್ತೊಮ್ಮೆ ನೋಡುತ್ತಿದ್ದೇವೆ. ರಾಗಿ ಬಳಕೆಯನ್ನು ಉತ್ತೇಜಿಸುವ ಭಾರತದ ಪ್ರಸ್ತಾವವನ್ನು ವಿಶ್ವಸಂಸ್ಥೆಯು ಒಪ್ಪಿಕೊಂಡಿರುವುದಕ್ಕೆ ನನಗೆ ಸಂತೋಷವಾಗಿದೆ. 2023 ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸುವುದು ಮಾನವೀಯತೆಗೆ ಬಹಳ ಪ್ರಯೋಜನಕಾರಿ ಹೆಜ್ಜೆಯಾಗಿದೆ.
ಘನತೆವೆತ್ತರೇ,
 ಕೆಲವು ಸಮಯದ ಹಿಂದೆ ಭಾರತದಲ್ಲಿ ಪ್ರಾರಂಭವಾದ ‘ರಾಷ್ಟ್ರೀಯ ಪೌಷ್ಟಿಕಾಂಶ ಅಭಿಯಾನ’ದಲ್ಲಿನಮ್ಮ ಪ್ರಾಚೀನ ಮತ್ತು ಸಾಂಪ್ರದಾಯಿಕ ಬೋಧನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗಿದೆ. ಕೋವಿಡ್‌ -19 ಸಾಂಕ್ರಾಮಿಕ ರೋಗದ ಸಮಯದಲ್ಲಿ ನಾವು ಆಯುಷ್‌ ವ್ಯವಸ್ಥೆಯನ್ನು ವ್ಯಾಪಕವಾಗಿ ಬಳಸಿದ್ದೇವೆ. ಆಯುರ್ವೇದ ಆಧಾರಿತ ಕಷಾಯವು ಆಯುಷ್‌ ಕಾಡ ಎಂಬ ಹೆಸರಿನೊಂದಿಗೆ ಬಹಳ ಜನಪ್ರಿಯವಾಯಿತು. ಆಯುರ್ವೇದ, ಸಿದ್ಧ, ಯುನಾನಿ ಸೂತ್ರೀಕರಣಗಳಿಗೆ ಜಾಗತಿಕವಾಗಿ ಸಾಕಷ್ಟು ಬೇಡಿಕೆ ಇದೆ. ಇಂದು ವಿಶ್ವದ ಅನೇಕ ದೇಶಗಳು ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಾಂಪ್ರದಾಯಿಕ ವ್ಯವಸ್ಥೆಗಳ ಬಳಕೆಗೆ ಒತ್ತು ನೀಡಲಾಗುತ್ತಿದೆ.

ಸ್ನೇಹಿತರೇ, 
ಆಯುರ್ವೇದ ಮತ್ತು ಸಮಗ್ರ ವೈದ್ಯಕೀಯ ಕ್ಷೇತ್ರದಲ್ಲಿನ ತನ್ನ ಅನುಭವಗಳನ್ನು ವಿಶ್ವದೊಂದಿಗೆ ಹಂಚಿಕೊಳ್ಳುವುದು ತನ್ನ ಜವಾಬ್ದಾರಿ ಎಂದು ಭಾರತ ಪರಿಗಣಿಸುತ್ತದೆ. ಮಧುಮೇಹ, ಬೊಜ್ಜು ಮತ್ತು ಖಿನ್ನತೆಯಂತಹ ಅನೇಕ ರೋಗಗಳ ವಿರುದ್ಧ ಹೋರಾಡಲು ಭಾರತದ ಯೋಗ ಸಂಪ್ರದಾಯವು ಜಗತ್ತಿಗೆ ಸಾಕಷ್ಟು ಸಹಾಯ ಮಾಡುತ್ತಿದೆ. ಅಂತಾರಾಷ್ಟ್ರೀಯ ಯೋಗ ದಿನದ ಮೂಲಕ ಯೋಗ ಜನಪ್ರಿಯವಾಗುತ್ತಿದೆ, ಮತ್ತು ಪ್ರಪಂಚದಾದ್ಯಂತ ಜನರಿಗೆ ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಸು-ದೇಹ- ಯೋಗದ ಸಮತೋಲನವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಯೋಗದ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಈ ಹೊಸ ಸಂಸ್ಥೆ ಪ್ರಮುಖ ಪಾತ್ರ ವಹಿಸುವುದು ಅತ್ಯಗತ್ಯವಾಗಿದೆ.


ಘನತೆವೆತ್ತರೇ,
ಇಂದು ಈ ಸಂದರ್ಭದಲ್ಲಿ, ನಾನು ಈ ಜಾಗತಿಕ ಕೇಂದ್ರಕ್ಕೆ ಐದು ಗುರಿಗಳನ್ನು ನಿಗದಿಪಡಿಸಲು ಬಯಸುತ್ತೇನೆ. ಡೇಟಾಬೇಸ್‌ ಅನ್ನು ರಚಿಸುವ ತಂತ್ರಜ್ಞಾನವನ್ನು ಸಾಂಪ್ರದಾಯಿಕ ಜ್ಞಾನವನ್ನು ಸಂಗ್ರಹಿಸುವುದಕ್ಕೆ ಬಳಸುವುದು ಮೊದಲ ಗುರಿಯಾಗಿದೆ. ಸಾಂಪ್ರದಾಯಿಕವಾಗಿ ವಿವಿಧ ದೇಶಗಳಲ್ಲಿ ವಿಭಿನ್ನ ಸಂಪ್ರದಾಯಗಳಿವೆ. ಈ ಸಂಪ್ರದಾಯಗಳನ್ನು ಕ್ರೋಡೀಕರಿಸಿ ಈ ಕೇಂದ್ರದಲ್ಲಿ ಒಂದು ಜಾಗತಿಕ ಭಂಡಾರವನ್ನು ರಚಿಸಬೇಕು. ಈ ಸಂಪ್ರದಾಯಗಳ ಮೂಲಗಳನ್ನು ಅಧ್ಯಯನ ಮಾಡಿದ ನಂತರ ಮತ್ತು ಮೂಲ ಅಭ್ಯಾಸಗಳೊಂದಿಗೆ ಸಂವಹನ ನಡೆಸಿದ ನಂತರ ಈ ಸಂಕಲನವನ್ನು ಸಹ ಮಾಡಬಹುದು. ವಿವಿಧ ದೇಶಗಳ ಸಾಂಪ್ರದಾಯಿಕ ಔಷಧಿಗಳ ಪ್ರಮುಖ ಜ್ಞಾನವು ಮುಂದಿನ ಪೀಳಿಗೆಗೆ ಪ್ರಯೋಜನವನ್ನು ನೀಡಲು ಮುಂದುವರಿಸಲು ಇದನ್ನು ಮಾಡುವುದು ಅತ್ಯಗತ್ಯವಾಗಿದೆ.

ಸ್ನೇಹಿತರೇ,
ಜಿಸಿಟಿಎಂ ಸಾಂಪ್ರದಾಯಿಕ ಔಷಧಿಗಳ ಪರೀಕ್ಷೆ ಮತ್ತು ಪ್ರಮಾಣೀಕರಣಕ್ಕಾಗಿ ಅಂತಾರಾಷ್ಟ್ರೀಯ ಮಾನದಂಡಗಳನ್ನು ಸಹ ರಚಿಸಬೇಕು. ಇದು ನಿಮ್ಮ ಸಂಸ್ಥೆಯ ಇನ್ನೊಂದು ಗುರಿಯಾಗಿರಬಹುದು. ಇದು ಈ ಔಷಧಿಗಳ ಮೇಲೆ ಪ್ರತಿ ದೇಶದ ಜನರ ನಂಬಿಕೆಯನ್ನು ಹೆಚ್ಚಿಸುತ್ತದೆ. ಭಾರತದ ಹಲವಾರು ಸಾಂಪ್ರದಾಯಿಕ ಔಷಧಿಗಳು ವಿದೇಶಿಯರಿಂದಲೂ ಬಹಳ ಪರಿಣಾಮಕಾರಿ ಎಂದು ನಾವು ನೋಡಿದ್ದೇವೆ. ಆದರೆ ಜಾಗತಿಕ ಮಾನದಂಡಗಳ ಕೊರತೆಯಿಂದಾಗಿ, ಅದರ ನಿಯಮಿತ ವ್ಯವಹಾರವು ಸೀಮಿತವಾಗಿದೆ. ಹಾಗಾಗಿ ಈ ಔಷಧಿಗಳ ಲಭ್ಯತೆಯೂ ಕಡಿಮೆ. ಇತರ ಹಲವು ದೇಶಗಳು ಸಹ ಇದೇ ರೀತಿಯ ಸವಾಲುಗಳನ್ನು ಎದುರಿಸುತ್ತಿವೆ ಎಂದು ನಾನು ನಂಬುತ್ತೇನೆ. ಇದರ ಪರಿಹಾರಕ್ಕೆ ಈ ಜಾಗತಿಕ ಕೇಂದ್ರವೂ ಕೆಲಸ ಮಾಡಬೇಕು. ಡಬ್ಲ್ಯುಎಚ್‌ಒ ಇತ್ತೀಚೆಗೆ ಆಯುರ್ವೇದ, ಪಂಚಕರ್ಮ ಮತ್ತು ಯುನಾನಿಗಾಗಿ ಮಾನದಂಡದ ಪ್ರಮಾಣವನ್ನು ಸಿದ್ಧಪಡಿಸಿದೆ. ಇದನ್ನು ಕೂಡ ವಿಸ್ತರಿಸಬೇಕಾಗಿದೆ.


ಸ್ನೇಹಿತರೇ,
ಜಿಸಿಟಿಎಂ ಸಹ ವೇದಿಕೆಯನ್ನು ರಚಿಸಬೇಕು, ಅಲ್ಲಿವಿಶ್ವದ ಸಾಂಪ್ರದಾಯಿಕ ಔಷಧ ಪದ್ಧತಿಗಳ ತಜ್ಞರು ಒಟ್ಟಾಗಿ ಬಂದು ತಮ್ಮ ಅನುಭವಗಳನ್ನು ಹಂಚಿಕೊಳ್ಳಬಹುದು. ಈ ಜಾಗತಿಕ ಕೇಂದ್ರವು ಇದನ್ನು ತನ್ನ ಮೂರನೇ ಗುರಿಯಾಗಿ ಹೊಂದಿಸಬಹುದು. ಈ ಸಂಸ್ಥೆಯು ವಾರ್ಷಿಕ ಕಾರ್ಯವನ್ನು ಅಥವಾ ವಾರ್ಷಿಕ ಸಾಂಪ್ರದಾಯಿಕ ಔಷಧ ಉತ್ಸವವನ್ನು ನಡೆಸಬಹುದೇ? ಇದರಲ್ಲಿಪ್ರಪಂಚದಾದ್ಯಂತ ಗರಿಷ್ಠ ಸಂಖ್ಯೆಯ ದೇಶಗಳ ತಜ್ಞರು ತಮ್ಮ ವಿಧಾನಗಳನ್ನು ಆಲೋಚಿಸಬಹುದು, ಉದ್ದೇಶಪೂರ್ವಕವಾಗಿ ಮತ್ತು ಹಂಚಿಕೊಳ್ಳಬಹುದು?

ಸ್ನೇಹಿತರೇ,
ಈ ಕೇಂದ್ರದ ನಾಲ್ಕನೇ ಗುರಿ, ಸಂಶೋಧನೆಯಲ್ಲಿಹೂಡಿಕೆ ಮಾಡುವುದು ಎಂದು ನಾನು ನಂಬುತ್ತೇನೆ. ಜಿಸಿಟಿಎಂ ಸಾಂಪ್ರದಾಯಿಕ ಔಷಧಿಗಳಲ್ಲಿಸಂಶೋಧನೆಗಾಗಿ ಹಣವನ್ನು ಸಜ್ಜುಗೊಳಿಸಬೇಕು. ಆಧುನಿಕ ಔಷಧ ಕಂಪನಿಗಳಿಗೆ ಸಂಶೋಧನಾ ಕ್ಷೇತ್ರದಲ್ಲಿಶತಕೋಟಿ ಡಾಲರ್‌ಗಳನ್ನು ಬಳಸುವುದನ್ನು ನಾವು ನೋಡುತ್ತೇವೆ. ಸಾಂಪ್ರದಾಯಿಕ ಔಷಧಿಗಳಲ್ಲಿಸಂಶೋಧನೆಗಾಗಿ ನಾವು ಇದೇ ರೀತಿಯ ಸಂಪನ್ಮೂಲಗಳನ್ನು ಸಂಗ್ರಹಿಸಬೇಕು. ಐದನೇ ಗುರಿಯು ಚಿಕಿತ್ಸೆಯ ನಿಯಮವಳಿಗಳಿಗೆ ಸಂಬಂಧಿಸಿದೆ. ಆಧುನಿಕ ಮತ್ತು ಸಾಂಪ್ರದಾಯಿಕ ಔಷಧಿಗಳೆರಡರಿಂದಲೂ ರೋಗಿಯು ಪ್ರಯೋಜನ ಪಡೆಯುವ ಕೆಲವು ನಿರ್ದಿಷ್ಟ ರೋಗಗಳಿಗೆ ಸಮಗ್ರ ಚಿಕಿತ್ಸಾ ನಿಯಮಗಳನನು ಜಿಸಿಟಿಎಂ ಅಭಿವೃದ್ಧಿಪಡಿಸಬಹುದೇ? ನಿಮ್ಮ ಆರೋಗ್ಯ ವ್ಯವಸ್ಥೆಗಳಲ್ಲಿಈ ಪ್ರಾಚೀನ ವಿಭಾಗಗಳ ಪರಿಣಾಮಕಾರಿ ಏಕೀಕರಣವು ಹಲವಾರು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.



ಸ್ನೇಹಿತರೇ,
ನಾವು ಭಾರತೀಯರು ‘ವಸುಧೈವ ಕುಟುಂಬಕಂ’ ಮತ್ತು ‘ಸರ್ವೇ ಸಂತು ನಿರಾಮಯಃ’ ಎಂದು ನಂಬುವ ಮತ್ತು ಈ ಮನೋಭಾವದಿಂದ ಬದುಕುವ ಜನರು. ‘ಇಡೀ ಜಗತ್ತು ಒಂದೇ ಕುಟುಂಬ ಮತ್ತು ಈ ಕುಟುಂಬವು ಯಾವಾಗಲೂ ಆರೋಗ್ಯವಾಗಿರಲಿ’ - ಇದು ನಮ್ಮ ತತ್ವವಾಗಿದೆ. ಇಂದು ಭಾರತದ ಈ ಸಂಪ್ರದಾಯವು ಡಬ್ಲ್ಯುಎಚ್‌ಒ-ಜಿಸಿಟಿಎಂ ಸ್ಥಾಪನೆಯೊಂದಿಗೆ ಪುಷ್ಟೀಕರಿಸುತ್ತಿದೆ. ಈ ಡಬ್ಲ್ಟುಎಚ್‌ಒ ಕೇಂದ್ರವು ಪ್ರಪಂಚದಾದ್ಯಂತದ ಜನರ ಆರೋಗ್ಯವನ್ನು ಸುಧಾರಿಸುತ್ತದೆ ಎಂಬ ಆಶಯದೊಂದಿಗೆ ನಾನು ಮುಕ್ತಾಯಗೊಳಿಸುತ್ತೇನೆ. ಮತ್ತು ಈಗ, ಈ ಸಮಾರಂಭಕ್ಕೆ ವೈಭವವನ್ನು ನೀಡಿದ್ದಕ್ಕಾಗಿ ಮತ್ತು ಕಾರ್ಯಕ್ರಮವನ್ನು ಹೆಚ್ಚು ಪ್ರಸ್ತುತವಾಗಿಸಿದ್ದಕ್ಕಾಗಿ ಇಬ್ಬರೂ ಅತಿಥಿಗಳಿಗೆ ತಮ್ಮ ಸಮಯವನ್ನು ಉಳಿಸಿದ್ದಕ್ಕಾಗಿ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. 
ನಮಸ್ಕಾರ!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Indian economy ends 2024 with strong growth as PMI hits 60.7 in December

Media Coverage

Indian economy ends 2024 with strong growth as PMI hits 60.7 in December
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಡಿಸೆಂಬರ್ 2024
December 17, 2024

Unstoppable Progress: India Continues to Grow Across Diverse Sectors with the Modi Government