QuoteInaugurates 10 Government Medical Colleges in Maharashtra
QuoteLays foundation stone for upgradation of Dr Babasaheb Ambedkar International Airport, Nagpur
QuoteLays foundation stone for New Integrated Terminal Building at Shirdi Airport
QuoteInaugurates Indian Institute of Skills Mumbai and Vidya Samiksha Kendra, Maharashtra
QuoteLaunch of projects in Maharashtra will enhance infrastructure, boost connectivity and empower the youth: PM

ನಮಸ್ಕಾರ!

ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರೇ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೇ, ಕೇಂದ್ರ ಸಚಿವ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳೇ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವಿಸ್ ಅವರೇ, ಶ್ರೀ ಅಜಿತ್ ಪವಾರ್ ಅವರೇ, ಇತರ ಎಲ್ಲ ಗಣ್ಯರೇ ಮತ್ತು ಮಹಾರಾಷ್ಟ್ರದ ನನ್ನ ಪ್ರಿಯ ಸಹೋದರ ಸಹೋದರಿಯರೇ...

ಮಹಾರಾಷ್ಟ್ರದಲ್ಲಿರುವ ಎಲ್ಲಾ ಶಿವಪ್ರೇಮಿ ಸಹೋದರ ಸಹೋದರಿಯರಿಗೆ ಶುಭಾಶಯಗಳು

ಕಳೆದ ವಾರವೇ, ನಾನು ಥಾಣೆ ಮತ್ತು ಮುಂಬೈಗೆ ಭೇಟಿ ನೀಡಿದ್ದೆ, ಅಲ್ಲಿ ಮೆಟ್ರೋ ಲೈನ್ ಯೋಜನೆ ಸೇರಿದಂತೆ 30,000 ಕೋಟಿ ರೂಪಾಯಿಗಳ ಯೋಜನೆಗಳನ್ನು ಉದ್ಘಾಟಿಸುವ ಅವಕಾಶ ನನಗೆ ದೊರೆತಿತ್ತು. ಅದಕ್ಕೂ ಮೊದಲು, ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಲಾಗಿತ್ತು. ಹಲವಾರು ನಗರಗಳಲ್ಲಿ ಮೆಟ್ರೋ ವಿಸ್ತರಣೆಯಾಗುತ್ತಿದೆ. ಕೆಲವು ವಿಮಾನ ನಿಲ್ದಾಣಗಳನ್ನು ಉನ್ನತೀಕರಿಸಲಾಗುತ್ತಿದೆ, ಮತ್ತು ರಸ್ತೆ ಹಾಗೂ ಹೆದ್ದಾರಿ ಯೋಜನೆಗಳು ವೇಗವಾಗಿ ಪ್ರಗತಿ ಹೊಂದುತ್ತಿವೆ. ಮೂಲಸೌಕರ್ಯ, ಸೌರ ಶಕ್ತಿ, ಮತ್ತು ಜವಳಿ ಉದ್ಯಾನಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಆರಂಭಿಸಲಾಗಿದೆ. ರೈತರು ಮತ್ತು ಪಶುಪಾಲಕರ ಹಿತದೃಷ್ಟಿಯಿಂದ ಹೊಸ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶದ ಅತಿದೊಡ್ಡ ಕಂಟೈನರ್ ಬಂದರಾದ ವಾಧವಾನ್ ಬಂದರಿನ ಅಡಿಪಾಯವನ್ನು ಮಹಾರಾಷ್ಟ್ರದಲ್ಲಿ ಹಾಕಲಾಗಿದೆ.

ಮಹಾರಾಷ್ಟ್ರದ ಇತಿಹಾಸದಲ್ಲಿ ಎಂದೂ ವಿವಿಧ ಕ್ಷೇತ್ರಗಳಲ್ಲಿ ಇಷ್ಟು ವೇಗವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಯಾಗಿರಲಿಲ್ಲ. ಹೌದು, ಕಾಂಗ್ರೆಸ್ ಆಳ್ವಿಕೆಯ ಸಮಯದಲ್ಲಿ ಭ್ರಷ್ಟಾಚಾರವು ಅದೇ ವೇಗ ಮತ್ತು ಪ್ರಮಾಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ನಡೆದಿತ್ತು ಎಂಬುದು ಬೇರೆ ವಿಷಯ.

ಇಂದು ಮಹಾರಾಷ್ಟ್ರಕ್ಕೆ 10 ವೈದ್ಯಕೀಯ ಕಾಲೇಜುಗಳ ಉಡುಗೊರೆ ಸಿಗುತ್ತಿದೆ . ನಾಗ್ಪುರ ವಿಮಾನ ನಿಲ್ದಾಣದ ಆಧುನೀಕರಣ ಮತ್ತು ವಿಸ್ತರಣೆ ಮತ್ತು ಶಿರಡಿ ವಿಮಾನ ನಿಲ್ದಾಣಕ್ಕೆ ಹೊಸ ಟರ್ಮಿನಲ್ ಕಟ್ಟಡದ ನಿರ್ಮಾಣಕ್ಕಾಗಿ ಎರಡು ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ಮಾಡಲಾಯಿತು. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗಾಗಿ ನಾನು ಮಹಾರಾಷ್ಟ್ರದ ಜನರನ್ನು ಅಭಿನಂದಿಸುತ್ತೇನೆ. ಕಳೆದ ವಾರವಷ್ಟೇ ನಾನು ಥಾಣೆ ಮತ್ತು ಮುಂಬೈಗೆ ಹೋಗಿದ್ದೆ. ಅಲ್ಲಿ ಮೆಟ್ರೋ ಲೈನ್ ಯೋಜನೆ ಸೇರಿದಂತೆ 30,000 ಕೋಟಿ ರೂಪಾಯಿಗಳ ಯೋಜನೆಗಳನ್ನು ಉದ್ಘಾಟಿಸುವ ಅವಕಾಶ ನನಗೆ ದೊರೆತಿತ್ತು. ಅದಕ್ಕೂ ಮೊದಲು, ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಲಾಗಿತ್ತು. ಹಲವಾರು ನಗರಗಳಲ್ಲಿ ಮೆಟ್ರೋ ವಿಸ್ತರಣೆಯಾಗುತ್ತಿದೆ. ಕೆಲವು ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು , ಇನ್ನು ಕೆಲವೆಡೆ ರಸ್ತೆ ಮತ್ತು ಹೆದ್ದಾರಿ ಸಂಬಂಧಿತ ಯೋಜನೆಗಳು ತ್ವರಿತಗತಿಯಲ್ಲಿ ಸಾಗುತ್ತಿವೆ. ಮೂಲಸೌರ್ಯ , ಸೌರಶಕ್ತಿ , ಜವಳಿ ಪಾರ್ಕ್ಗೆ ಸಂಬಂಧಿಸಿದ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ರೈತರು ಮತ್ತು ಕುರಿಗಾರರ ಹಿತದೃಷ್ಟಿಯಿಂದ ಹೊಸ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶದ ಅತಿದೊಡ್ಡ ಕಂಟೈನರ್ ಬಂದರು ವಾಧವನ್ ಬಂದರಿಗೆ ಮಹಾರಾಷ್ಟ್ರದಲ್ಲಿ ಶಂಕುಸ್ಥಾಪನೆ ಮಾಡಲಾಗಿದೆ. ಮಹಾರಾಷ್ಟ್ರದ ಇತಿಹಾಸದಲ್ಲಿ ಇಷ್ಟು ವೇಗದಲ್ಲಿ , ಇಷ್ಟು ದೊಡ್ಡ ಪ್ರಮಾಣದಲ್ಲಿ , ವಿವಿಧ ಪ್ರದೇಶಗಳಲ್ಲಿ ಅಭಿವೃದ್ಧಿ ಆಗಿರಲಿಲ್ಲ .  ಹೌದು, ಕಾಂಗ್ರೆಸ್ ಆಳ್ವಿಕೆಯ ಸಮಯದಲ್ಲಿ ಭ್ರಷ್ಟಾಚಾರವು ಅದೇ ವೇಗ ಮತ್ತು ಪ್ರಮಾಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ನಡೆದಿತ್ತು ಎಂಬುದು ಬೇರೆ ವಿಷಯ.

 

|

ಸಹೋದರ ಸಹೋದರಿಯರೇ,

ಕೆಲವು ದಿನಗಳ ಹಿಂದೆ, ನಾವು ಮರಾಠಿ ಭಾಷೆಗೆ 'ಶಾಸ್ತ್ರೀಯ ಭಾಷೆ'ಯ ಸ್ಥಾನಮಾನವನ್ನು ನೀಡಿದೆವು. ಒಂದು ಭಾಷೆ ತನ್ನ ವೈಭವವನ್ನು ಪಡೆದಾಗ, ಪದಗಳಷ್ಟೇ ಅಲ್ಲ, ಇಡೀ ಪೀಳಿಗೆಗೆ ಹೊಸ ಪದಗಳು ಸಿಗುತ್ತವೆ. ಕೋಟ್ಯಂತರ ಮರಾಠಿ ಜನರ ದಶಕಗಳ ಹಿಂದಿನ ಕನಸು ನನಸಾಗಿದೆ. ಮಹಾರಾಷ್ಟ್ರದ ಎಲ್ಲೆಡೆಯ ಜನರು ಇದನ್ನು ಆಚರಿಸಿದ್ದಾರೆ, ಮತ್ತು ಇಂದು ನಾನು ಮಹಾರಾಷ್ಟ್ರದ ಗ್ರಾಮಗಳಿಂದ ಸಂತೋಷದ ಸಂದೇಶಗಳನ್ನು ಸ್ವೀಕರಿಸುತ್ತಿದ್ದೇನೆ. ಈ ಸಂದೇಶಗಳಲ್ಲಿ, ಜನರು ಮರಾಠಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿದ್ದಕ್ಕಾಗಿ ನನಗೆ ಧನ್ಯವಾದ ಹೇಳುತ್ತಿದ್ದಾರೆ. ಆದರೆ, ನಾನು ಇದನ್ನು ಒಬ್ಬಂಟಿಗನಾಗಿ ಮಾಡಲಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ; ಇದು ನಿಮ್ಮ ಆಶೀರ್ವಾದದಿಂದ ಸಾಧ್ಯವಾಯಿತು.ಮಹಾರಾಷ್ಟ್ರದಲ್ಲಿ ಪ್ರತಿಯೊಂದು ಅಭಿವೃದ್ಧಿ ಪ್ರಯತ್ನವೂ ಛತ್ರಪತಿ ಶಿವಾಜಿ ಮಹಾರಾಜ್, ಬಾಬಾಸಾಹೇಬ್ ಅಂಬೇಡ್ಕರ್, ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರಂತಹ ಮಹಾನ್ ವ್ಯಕ್ತಿಗಳ ಆಶೀರ್ವಾದದಿಂದ ಸಾಕಾರಗೊಳ್ಳುತ್ತಿದೆ.

ಸ್ನೇಹಿತರೇ,

ನಿನ್ನೆಯಷ್ಟೇ, ಹರಿಯಾಣ ಮತ್ತು ಜಮ್ಮು & ಕಾಶ್ಮೀರದಿಂದ ಚುನಾವಣಾ ಫಲಿತಾಂಶಗಳು ಬಂದವು. ಹರಿಯಾಣ ದೇಶಕ್ಕೆ ಮನಸ್ಥಿತಿ ಏನೆಂದು ತೋರಿಸಿದೆ! ಎರಡು ಅವಧಿಗಳನ್ನು ಪೂರ್ಣಗೊಳಿಸಿದ ನಂತರ ಮೂರನೇ ಬಾರಿಗೆ ಸತತವಾಗಿ ಗೆಲ್ಲುವುದು ಐತಿಹಾಸಿಕ. ಕಾಂಗ್ರೆಸ್‌ನ ಇಡೀ ಪರಿಸರ ವ್ಯವಸ್ಥೆ, ಇಡೀ ನಗರ ನಕ್ಸಲರ ಗುಂಪು ಸಾರ್ವಜನಿಕರನ್ನು ದಾರಿ ತಪ್ಪಿಸುವಲ್ಲಿ ನಿರತವಾಗಿತ್ತು. ಆದರೆ ಕಾಂಗ್ರೆಸ್‌ನ ಎಲ್ಲ ಸಂಚುಗಳು ನಾಶವಾದವು. ಅವರು ದಲಿತರ ನಡುವೆ ಸುಳ್ಳುಗಳನ್ನು ಹರಡಲು ಪ್ರಯತ್ನಿಸಿದರು, ಆದರೆ ದಲಿತ ಸಮಾಜವು ಅವರ ಅಪಾಯಕಾರಿ ಉದ್ದೇಶಗಳನ್ನು ಗ್ರಹಿಸಿತು. ದಲಿತರು ತಮ್ಮ ಮೀಸಲಾತಿಯನ್ನು ಕಿತ್ತು ತನ್ನ ಮತಬ್ಯಾಂಕ್‌ನಲ್ಲಿ ಹಂಚಲು ಕಾಂಗ್ರೆಸ್ ಬಯಸಿದೆ ಎಂದು ಅರಿತುಕೊಂಡರು. ಇಂದು ಹರಿಯಾಣದ ದಲಿತ ವರ್ಗ ಬಿಜೆಪಿಗೆ ದಾಖಲೆಯ ಬೆಂಬಲ ನೀಡಿದೆ. ಹರಿಯಾಣದ ಹಿಂದುಳಿದ ವರ್ಗಗಳು ಬಿಜೆಪಿಯ ಅಭಿವೃದ್ಧಿ ಕಾರ್ಯವನ್ನು ಗುರುತಿಸಿ ಅದರೊಂದಿಗೆ ನಿಂತಿವೆ. ಕಾಂಗ್ರೆಸ್ ರೈತರನ್ನು ಪ್ರಚೋದಿಸಲು ಪ್ರಯತ್ನಿಸಿತು, ಆದರೆ ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಯಾರು ನೀಡಿದ್ದಾರೆ ಎಂದು ರೈತರಿಗೆ ತಿಳಿದಿದೆ. ಹರಿಯಾಣದ ರೈತರು ಬಿಜೆಪಿಯ ಕಲ್ಯಾಣ ಯೋಜನೆಗಳಿಂದ ಸಂತುಷ್ಟರಾಗಿದ್ದಾರೆ. ಕಾಂಗ್ರೆಸ್ ಯುವಕರನ್ನು ಗುರಿಯಾಗಿಸಿಕೊಂಡು, ವಿವಿಧ ರೀತಿಯಲ್ಲಿ ಅವರನ್ನು ದಾರಿತಪ್ಪಿಸಲು ಪ್ರಯತ್ನಿಸಿತು. ಆದರೆ, ಹರಿಯಾಣದ ಯುವಕರು, ಮಹಿಳೆಯರು ಮತ್ತು ಹೆಣ್ಣುಮಕ್ಕಳು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿಯನ್ನು ನಂಬುತ್ತಾರೆ. ಕಾಂಗ್ರೆಸ್ ಎಲ್ಲಾ ತಂತ್ರಗಳನ್ನೂ ಬಳಸಿತು. ಆದರೆ ಹರಿಯಾಣದ ಜನರು ತಾವು ಇನ್ನು ಮುಂದೆ ಕಾಂಗ್ರೆಸ್ ಮತ್ತು ನಗರ ನಕ್ಸಲ್ ಸಂಚುಗಳಿಗೆ ಬಲಿಯಾಗುವುದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

ಸ್ನೇಹಿತರೇ,

ಕಾಂಗ್ರೆಸ್ ಯಾವಾಗಲೂ 'ಒಡೆದು ಆಳಿರಿ" ಸೂತ್ರದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಕಾಂಗ್ರೆಸ್ ಬೇಜವಾಬ್ದಾರಿ ಪಕ್ಷ ಎನ್ನುವುದನ್ನು ಮತ್ತೆ ಮತ್ತೆ ಸಾಬೀತು ಮಾಡಿದೆ. ಅದು ದೇಶವನ್ನು ವಿಭಜಿಸಲು ಹೊಸ ನಿರೂಪಣೆಗಳನ್ನು ಸೃಷ್ಟಿಸುವುದನ್ನು ಮುಂದುವರಿಸಿದೆ. ಮತದಾರರನ್ನು ದಾರಿ ತಪ್ಪಿಸುವುದನ್ನು ಕಾಂಗ್ರೆಸ್ ಎಂದಿಗೂ ನಿಲ್ಲಿಸುವುದಿಲ್ಲ. ಅವರ ಸೂತ್ರ ಸ್ಪಷ್ಟವಾಗಿದೆ: ಮುಸ್ಲಿಮರನ್ನು ಭಯದಲ್ಲಿಡಿ, ಅವರನ್ನು ಮತ ಬ್ಯಾಂಕ್ ಆಗಿ ಪರಿವರ್ತಿಸಿ, ಮತ್ತು ಆ ಮತ ಬ್ಯಾಂಕ್ ಅನ್ನು ಬಲಪಡಿಸುವುದು. ಯಾವುದೇ ಕಾಂಗ್ರೆಸ್ ನಾಯಕ ಎಂದೂ ಮುಸ್ಲಿಮರ ನಡುವಿನ ಜಾತಿ ವಿಭಜನೆಗಳ ಬಗ್ಗೆ ಮಾತನಾಡಿಲ್ಲ. ಮುಸ್ಲಿಂ ಜಾತಿಗಳ ವಿಷಯ ಬಂದ ಕೂಡಲೇ, ಕಾಂಗ್ರೆಸ್ ನಾಯಕರು ಬಾಯಿ ಮುಚ್ಚಿಕೊಳ್ಳುತ್ತಾರೆ. ಹಿಂದೂ ಸಮಾಜದ ಬಗ್ಗೆ ಚರ್ಚೆ ಬಂದ ಕೂಡಲೇ, ಕಾಂಗ್ರೆಸ್ ತಕ್ಷಣವೇ ಜಾತಿಯನ್ನು ಪ್ರಸ್ತಾಪಿಸುತ್ತದೆ. ಒಂದು ಜಾತಿಯ ಹಿಂದೂಗಳನ್ನು ಇನ್ನೊಂದು ಜಾತಿಯ ವಿರುದ್ಧ ಎತ್ತಿಕಟ್ಟುವುದು ಕಾಂಗ್ರೆಸ್ ನೀತಿ. ಹಿಂದೂಗಳು ಹೆಚ್ಚು ವಿಭಜಿತರಾದಷ್ಟೂ, ತಮಗೆ ಹೆಚ್ಚು ಲಾಭ ಎಂದು ಅವರಿಗೆ ತಿಳಿದಿದೆ. ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ಹಿಂದೂ ಸಮಾಜವನ್ನು ಪ್ರಕ್ಷುಬ್ಧ ಸ್ಥಿತಿಯಲ್ಲಿಡಲು ಬಯಸುತ್ತದೆ. ಭಾರತದಲ್ಲಿ ಎಲ್ಲಿ ಚುನಾವಣೆಗಳು ನಡೆಯುತ್ತವೆಯೋ ಅಲ್ಲಿ ಈ ಸೂತ್ರವನ್ನು ಅನ್ವಯಿಸಲಾಗುತ್ತದೆ. ಕಾಂಗ್ರೆಸ್ ತನ್ನ ಮತ ಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳಲು ಸಮಾಜದಲ್ಲಿ ವಿಷವನ್ನು ಹರಡಲು ಸಾಧ್ಯವಿರುವ ಎಲ್ಲ ವಿಧಾನಗಳನ್ನು ಬಳಸುತ್ತದೆ. ಕಾಂಗ್ರೆಸ್ ಸಂಪೂರ್ಣವಾಗಿ ಕೋಮು ಮತ್ತು ಜಾತಿ ಆಧಾರಿತ ರಾಜಕೀಯದಲ್ಲಿ ತೊಡಗಿದೆ. ಚುನಾವಣಾ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಹಿಂದೂ ಸಮಾಜವನ್ನು ವಿಭಜಿಸುವುದು ಕಾಂಗ್ರೆಸ್ ರಾಜಕೀಯದ ಅಡಿಪಾಯವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ 'ಸರ್ವ ಜನ ಹಿತಾಯ, ಸರ್ವ ಜನ ಸುಖಾಯ' (ಎಲ್ಲರ ಕಲ್ಯಾಣ) ಎಂಬ ಭಾವನೆಯನ್ನು, ಹಾಗೂ ಸನಾತನ ಸಂಪ್ರದಾಯವನ್ನು ಹತ್ತಿಕ್ಕುತ್ತಿದೆ. ಹಲವು ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಈಗ ಅಧಿಕಾರಕ್ಕೆ ಮರಳಲು ಹಾತಾಷೆಯಿಂದ ಪ್ರತಿದಿನ ದ್ವೇಷದ ರಾಜಕೀಯದಲ್ಲಿ ತೊಡಗಿದೆ. ಕಾಂಗ್ರೆಸ್ ನ ಹಿರಿಯ ನಾಯಕರು ಸಹ ತಮ್ಮ ಪಕ್ಷದ ಸ್ಥಿತಿಯ ಬಗ್ಗೆ ಅಸಹಾಯಕರಾಗಿದ್ದಾರೆ ಮತ್ತು ನಿರಾಶೆಗೊಂಡಿದ್ದಾರೆ. ಕಾಂಗ್ರೆಸ್ ದ್ವೇಷದ ಅತಿದೊಡ್ಡ ಕಾರ್ಖಾನೆಯಾಗುವ ಅಂಚಿನಲ್ಲಿದೆ. ಸ್ವಾತಂತ್ರ್ಯದ ನಂತರ ತಕ್ಷಣವೇ ಮಹಾತ್ಮ ಗಾಂಧಿ ಇದನ್ನು ಅರಿತುಕೊಂಡರು, ಅದಕ್ಕಾಗಿಯೇ ಕಾಂಗ್ರೆಸ್ ವಿಸರ್ಜನೆಯಾಗಬೇಕೆಂದು ಅವರು ಹೇಳಿದರು. ಕಾಂಗ್ರೆಸ್ ವಿಸರ್ಜನೆಯಾಗಿಲ್ಲ, ಆದರೆ ಇಂದು ಅದು ದೇಶವನ್ನು ನಾಶಮಾಡಲು ಹೊರಟಿದೆ. ಆದ್ದರಿಂದ, ನಾವು ಎಚ್ಚರಿಕೆಯಿಂದ ಮತ್ತು ಜಾಗರೂಕತೆಯಿಂದ ಇರಬೇಕು.

ಸ್ನೇಹಿತರೇ, 

ಮಹಾರಾಷ್ಟ್ರದ ಜನರು ಸಮಾಜವನ್ನು ವಿಭಜಿಸುವ ಪ್ರತಿಯೊಂದು ಪ್ರಯತ್ನವನ್ನೂ ವಿಫಲಗೊಳಿಸುತ್ತಾರೆ ಎಂದು ನಾನು ದೃಢವಾಗಿ ನಂಬುತ್ತೇನೆ. ರಾಷ್ಟ್ರೀಯ ಅಭಿವೃದ್ಧಿಯನ್ನು ತಮ್ಮ ಮೊದಲ ಆದ್ಯತೆಯಾಗಿ ಇಟ್ಟುಕೊಂಡು, ಮಹಾರಾಷ್ಟ್ರದ ಜನರು ಒಗ್ಗೂಡಿ ಬಿಜೆಪಿ ಮತ್ತು ಮಹಾಯುತಿ ಮೈತ್ರಿಕೂಟಕ್ಕೆ ಮತ ಹಾಕಬೇಕು. 

ಹರಿಯಾಣದಲ್ಲಿ ಬಿಜೆಪಿ ಗೆದ್ದ ನಂತರ, ಈಗ ನಾವು ಮಹಾರಾಷ್ಟ್ರದಲ್ಲಿ ಇನ್ನೂ ದೊಡ್ಡ ಗೆಲುವು ಸಾಧಿಸಬೇಕಾಗಿದೆ.

 

|

ಸ್ನೇಹಿತರೇ,

ಕಳೆದ 10 ವರ್ಷಗಳಲ್ಲಿ, ನಾವು ದೇಶದ ಅಭಿವೃದ್ಧಿಗೆ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸುವ ಬೃಹತ್ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಇಂದು, ನಾವು ಕೇವಲ ಕಟ್ಟಡಗಳನ್ನು ನಿರ್ಮಿಸುತ್ತಿಲ್ಲ; ನಾವು ಆರೋಗ್ಯಕರ ಮತ್ತು ಸಮೃದ್ಧ ಮಹಾರಾಷ್ಟ್ರಕ್ಕೆ ಅಡಿಪಾಯ ಹಾಕುತ್ತಿದ್ದೇವೆ. ಏಕಕಾಲದಲ್ಲಿ 10 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಉದ್ಘಾಟನೆಯು ಕೇವಲ ಹೊಸ ಸಂಸ್ಥೆಗಳನ್ನು ಸ್ಥಾಪಿಸುವುದಷ್ಟೇ ಅಲ್ಲ, ಲಕ್ಷಾಂತರ ಜನರ ಜೀವನವನ್ನು ಸುಧಾರಿಸುವ 'ಮಹಾ ಯಜ್ಞ' ವಾಗಿದೆ. ಥಾಣೆ-ಅಂಬರ್ನಾಥ್, ಮುಂಬೈ, ನಾಸಿಕ್, ಜಲ್ನಾ, ಬುಲ್ಧಾನ, ಹಿಂಗೋಲಿ, ವಾಶಿಮ್, ಅಮರಾವತಿ, ಭಂಡಾರಾ ಮತ್ತು ಗಡ್ಚಿರೋಲಿಯಲ್ಲಿರುವ ಈ ವೈದ್ಯಕೀಯ ಕಾಲೇಜುಗಳು ಈ ಜಿಲ್ಲೆಗಳು ಮತ್ತು ಹತ್ತಿರದ ಪ್ರದೇಶಗಳಲ್ಲಿ ಲಕ್ಷಾಂತರ ಕುಟುಂಬಗಳಿಗೆ ಸೇವೆ ಸಲ್ಲಿಸುತ್ತವೆ. ಇದರ ಪರಿಣಾಮವಾಗಿ ಮಹಾರಾಷ್ಟ್ರದಲ್ಲಿ 900 ಹೊಸ ವೈದ್ಯಕೀಯ ಸೀಟುಗಳು ಸೇರ್ಪಡೆಯಾಗುತ್ತಿವೆ. ಈಗ ಮಹಾರಾಷ್ಟ್ರದಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆ ಸರಿಸುಮಾರು 6,000 ತಲುಪಲಿದೆ. ಈ ವರ್ಷ ಕೆಂಪು ಕೋಟೆಯಿಂದ ವೈದ್ಯಕೀಯ ಕ್ಷೇತ್ರದಲ್ಲಿ 75,000 ಹೊಸ ಸೀಟುಗಳನ್ನು ಸೇರಿಸಲು ರಾಷ್ಟ್ರವು ಪ್ರತಿಜ್ಞೆ ಮಾಡಿದೆ. ಇಂದಿನ ಕಾರ್ಯಕ್ರಮವೂ ಆ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

ಸ್ನೇಹಿತರೇ, 

ನಾವು ವೈದ್ಯಕೀಯ ಶಿಕ್ಷಣವನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡಿದ್ದೇವೆ. ಇದು ಮಹಾರಾಷ್ಟ್ರದ ಯುವಕರಿಗೆ ಹೊಸ ಅವಕಾಶಗಳ ಬಾಗಿಲು ತೆರೆದಿದೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಹೆಚ್ಚು ಹೆಚ್ಚು ಮಕ್ಕಳು ವೈದ್ಯರಾಗುವುದು ಮತ್ತು ಅವರ ಕನಸುಗಳನ್ನು ನನಸಾಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಒಂದು ಕಾಲದಲ್ಲಿ, ಅಂತಹ ಅಧ್ಯಯನಗಳಿಗೆ ಮಾತೃಭಾಷೆಯಲ್ಲಿ ಪಠ್ಯಪುಸ್ತಕಗಳ ಕೊರತೆಯು ಒಂದು ದೊಡ್ಡ ಸವಾಲಾಗಿತ್ತು. ಮಹಾರಾಷ್ಟ್ರದ ಯುವಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಈ ಅಸಮಾನತೆಯನ್ನು ಸಹ ತೆಗೆದುಹಾಕಿದೆವು. ಈಗ, ಮಹಾರಾಷ್ಟ್ರದ ನಮ್ಮ ಯುವಕರು ಮರಾಠಿ ಭಾಷೆಯಲ್ಲಿ ವೈದ್ಯಕೀಯವನ್ನು ಅಧ್ಯಯನ ಮಾಡಬಹುದು. ಮರಾಠಿಯಲ್ಲಿ ಅಧ್ಯಯನ ಮಾಡುವ ಮೂಲಕ, ಅವರು ವೈದ್ಯರಾಗಬೇಕೆಂಬ ತಮ್ಮ ಕನಸನ್ನು ಈಡೇರಿಸಲು ಸಾಧ್ಯವಾಗುತ್ತದೆ.

ಸ್ನೇಹಿತರೇ,

ಜೀವನವನ್ನು ಸುಲಭಗೊಳಿಸುವ ನಮ್ಮ ಪ್ರಯತ್ನಗಳು ಬಡತನದ ವಿರುದ್ಧ ಹೋರಾಡುವ ಉತ್ತಮ ಸಾಧನವಾಗಿದೆ. ಕಾಂಗ್ರೆಸ್‌ ನಂತಹ ಪಕ್ಷಗಳು ಬಡತನವನ್ನು ತಮ್ಮ ರಾಜಕೀಯಕ್ಕೆ ಇಂಧನವಾಗಿ ಬಳಸಿಕೊಂಡಿವೆ. ಅದಕ್ಕಾಗಿಯೇ ಅವರು ಬಡವರನ್ನು ಬಡತನದಲ್ಲಿ ಇಟ್ಟುಕೊಂಡಿದ್ದರು. ಆದರೆ ಕಳೆದ ದಶಕದಲ್ಲಿ ನಮ್ಮ ಸರ್ಕಾರ 25 ಕೋಟಿ ಜನರನ್ನು ಬಡತನದಿಂದ ಹೊರತಂದಿದೆ. ದೇಶದಲ್ಲಿ ಆರೋಗ್ಯ ಸೇವೆಗಳ ಪರಿವರ್ತನೆಯು ಇದಕ್ಕೆ ಪ್ರಮುಖ ಅಂಶವಾಗಿದೆ. ಇಂದು, ಪ್ರತಿಯೊಬ್ಬ ಬಡ ವ್ಯಕ್ತಿಯ ಬಳಿ ಉಚಿತ ಚಿಕಿತ್ಸೆಗಾಗಿ ಆಯುಷ್ಮಾನ್ ಕಾರ್ಡ್ ಇದೆ. ಈಗ, 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರು ಉಚಿತ ಆರೋಗ್ಯ ಸೇವೆಯನ್ನು ಪಡೆಯುತ್ತಿದ್ದಾರೆ. ಜನೌಷಧಿ ಕೇಂದ್ರಗಳಲ್ಲಿ ಅತ್ಯವಶ್ಯಕ ಔಷಧಿಗಳು ಬಹಳ ಕಡಿಮೆ ಬೆಲೆಗೆ ಲಭ್ಯವಿವೆ. ಹೃದಯ ರೋಗಿಗಳಿಗೆ ಸ್ಟೆಂಟ್ಗಳು 80-85% ಅಗ್ಗವಾಗಿವೆ. ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಾದ ಔಷಧಿಗಳ ಬೆಲೆಯನ್ನು ಸಹ ನಾವು ಕಡಿಮೆ ಮಾಡಿದ್ದೇವೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳ ಸಂಖ್ಯೆ ಹೆಚ್ಚಾದ ಕಾರಣ ಚಿಕಿತ್ಸೆಯೂ ಅಗ್ಗವಾಗಿದೆ. ಇಂದು, ಮೋದಿ ಸರ್ಕಾರವು ಬಡ ದೇಶದ ಬಡವರಿಗೆ ಸಾಮಾಜಿಕ ಭದ್ರತೆಯ ಬಲವಾದ ಗುರಾಣಿಯನ್ನು ನೀಡಿದೆ.

ಸ್ನೇಹಿತರೇ, 

ಒಂದು ದೇಶದ ಯುವಕರು ಆತ್ಮವಿಶ್ವಾಸದಿಂದ ತುಂಬಿದಾಗ ಮಾತ್ರ ಜಗತ್ತು ಆ ದೇಶವನ್ನು ನಂಬುತ್ತದೆ. ಇಂದು, ಭಾರತದ ಯುವಕರ ಆತ್ಮವಿಶ್ವಾಸವು ದೇಶದ ಉಜ್ವಲ ಭವಿಷ್ಯದ ಹೊಸ ಕಥೆಯನ್ನು ಹೇಳುತ್ತಿದೆ. ಪ್ರಮುಖ ರಾಷ್ಟ್ರಗಳು ಈಗ ಭಾರತವನ್ನು ಮಾನವ ಸಂಪನ್ಮೂಲಗಳ ಒಂದು ಮುಖ್ಯ ಕೇಂದ್ರವಾಗಿ ನೋಡುತ್ತಿವೆ. ನಮ್ಮ ಯುವಕರಿಗೆ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಿಂದ ಹಿಡಿದು ಸಾಫ್ಟ್ ವೇರ್ ವರೆಗೆ, ಜಗತ್ತಿನಾದ್ಯಂತ ಎಲ್ಲಾ ಕ್ಷೇತ್ರಗಳಲ್ಲೂ ಅಪಾರ ಅವಕಾಶಗಳಿವೆ. ಆದ್ದರಿಂದಲೇ ನಾವು ನಮ್ಮ ಯುವಕರನ್ನು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಕೌಶಲ್ಯಯುತರನ್ನಾಗಿ ಮಾಡುತ್ತಿದ್ದೇವೆ. ಇಂದು, ನಾವು ಮಹಾರಾಷ್ಟ್ರದಲ್ಲಿ ವಿದ್ಯಾ ಸಮೀಕ್ಷಾ ಕೇಂದ್ರದಂತಹ ಯೋಜನೆಗಳನ್ನು ಆರಂಭಿಸುತ್ತಿದ್ದೇವೆ. ನಾವು ಇಂದು ಮುಂಬೈನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ ಅನ್ನು ಉದ್ಘಾಟಿಸಿದ್ದೇವೆ. ಇಲ್ಲಿ, ಯುವಕರು ಭವಿಷ್ಯ ಆಧಾರಿತ ತರಬೇತಿಯನ್ನು ಪಡೆಯುತ್ತಾರೆ. ಅವರ ಪ್ರತಿಭೆಯನ್ನು ಮಾರುಕಟ್ಟೆಯ ಬೇಡಿಕೆಗಳಿಗೆ ಅನುಗುಣವಾಗಿ ಬೆಳೆಸಲಾಗುತ್ತದೆ. ನಮ್ಮ ಸರ್ಕಾರವು ಯುವಕರಿಗೆ ಸಂಬಳ ಸಹಿತ ಇಂಟರ್ನ್ ಶಿಪ್ ನೀಡಲು ಕೂಡ ಆರಂಭಿಸಿದೆ. ಭಾರತದ ಇತಿಹಾಸದಲ್ಲಿ ಇಂತಹ ಉಪಕ್ರಮವನ್ನು ಕೈಗೊಂಡಿರುವುದು ಇದೇ ಮೊದಲ ಬಾರಿ. ಈಗ, ಯುವಕರು ಇಂಟರ್ನ್ ಶಿಪ್ ಭತ್ಯೆಯಾಗಿ 5,000 ರೂಪಾಯಿಗಳನ್ನು ಪಡೆಯುತ್ತಾರೆ. ಈ ಯೋಜನೆಯನ್ನು ಬೆಂಬಲಿಸಲು ಮತ್ತು ಯುವಕರಿಗೆ ಇಂಟರ್ನ್ ಶಿಪ್ ನೀಡಲು ಸಾವಿರಾರು ಕಂಪನಿಗಳು ನೋಂದಾಯಿಸಿಕೊಳ್ಳುತ್ತಿರುವುದು ನನಗೆ ಸಂತೋಷವನ್ನುಂಟುಮಾಡಿದೆ. ಈ ಪ್ರಯತ್ನವು ಯುವಕರ ಬುನಾದಿಯನ್ನು ಬಲಪಡಿಸುತ್ತದೆ, ಅವರಿಗೆ ಹೊಸ ಅನುಭವಗಳನ್ನು ನೀಡುತ್ತದೆ, ಮತ್ತು ಹೊಸ ಅವಕಾಶಗಳ ಬಾಗಿಲುಗಳನ್ನು ತೆರೆಯುತ್ತದೆ.

ಸಹೋದರ ಸಹೋದರಿಯರೇ, 

ಭಾರತ ತನ್ನ ಯುವಜನತೆಗಾಗಿ ಮಾಡುತ್ತಿರುವ ಪ್ರಯತ್ನಗಳು ನಿರಂತರವಾಗಿ ಫಲಿತಾಂಶಗಳನ್ನು ನೀಡುತ್ತಿವೆ. ಇಂದು, ನಮ್ಮ ಶಿಕ್ಷಣ ಸಂಸ್ಥೆಗಳು ವಿಶ್ವದ ಅಗ್ರ ಸಂಸ್ಥೆಗಳೊಂದಿಗೆ ನಿಂತಿವೆ. ನಿನ್ನೆ, ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕಗಳನ್ನು ಘೋಷಿಸಲಾಯಿತು. ಈ ಶ್ರೇಯಾಂಕದ ಪ್ರಕಾರ, ಭಾರತದ ಯುವಕರ ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಗುಣಮಟ್ಟವು ಸುಧಾರಿಸುತ್ತಿದೆ.

ಸ್ನೇಹಿತರೇ, 

ಇಂದು ಇಡೀ ವಿಶ್ವದ ಕಣ್ಣು ಭಾರತದತ್ತ ನೆಟ್ಟಿದೆ. ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಈಗ ಜಾಗತಿಕ ಆರ್ಥಿಕತೆಯ ಭವಿಷ್ಯವು ಭಾರತದೊಂದಿಗೆ ಸಂಬಂಧ ಹೊಂದಿದೆ! ಭಾರತದ ಈ ಆರ್ಥಿಕ ಪ್ರಗತಿಯು ಹೊಸ ಅವಕಾಶಗಳನ್ನು ತರುತ್ತಿದೆ. ದಶಕಗಳಿಂದ ಕಾಂಗ್ರೆಸ್ ನಿರ್ಲಕ್ಷಿಸಿದ್ದ ಪ್ರದೇಶಗಳು ಈಗ ಅಪಾರ ಅವಕಾಶಗಳ ಮೂಲಗಳಾಗುತ್ತಿವೆ. ಪ್ರವಾಸೋದ್ಯಮದ ಉದಾಹರಣೆಯಾಗಿ , ಮಹಾರಾಷ್ಟ್ರವು ಎಂತಹ ಅಮೂಲ್ಯ ಪರಂಪರೆಯನ್ನು ಹೊಂದಿದೆ! ಇದು ಸುಂದರ ನೈಸರ್ಗಿಕ ತಾಣಗಳನ್ನು ಮತ್ತು ಆಧ್ಯಾತ್ಮಿಕ ಕೇಂದ್ರಗಳನ್ನು ಹೊಂದಿದೆ. ಈ ತಾಣಗಳ ಸುತ್ತ ಬಹುಕೋಟಿ ಡಾಲರ್ಗಳ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಬಹುದಿತ್ತು. ಆದರೆ ಈ ಅವಕಾಶಗಳನ್ನು ಬಳಸಿಕೊಳ್ಳಬೇಕಾಗಿದ್ದಂತೆ ಬಳಸಿಕೊಳ್ಳಲಿಲ್ಲ. ಕಾಂಗ್ರೆಸ್ಗೆ 'ವಿಕಾಸ' (ಅಭಿವೃದ್ಧಿ) ಅಥವಾ 'ವಿರಾಸತ್' (ಪರಂಪರೆ) ಬಗ್ಗೆ ಯಾವುದೇ ಆಸಕ್ತಿ ಇರಲಿಲ್ಲ. ನಮ್ಮ ಸರ್ಕಾರದಲ್ಲಿ ಅಭಿವೃದ್ಧಿ ಮತ್ತು ಪರಂಪರೆಯ ಸಂರಕ್ಷಣೆ ಎರಡೂ ಇವೆ. ನಾವು ನಮ್ಮ ಸಮೃದ್ಧ ಇತಿಹಾಸದಿಂದ ಸ್ಫೂರ್ತಿ ಪಡೆಯುತ್ತಾ ಉಜ್ವಲ ಭವಿಷ್ಯವನ್ನು ನಿರ್ಮಿಸುತ್ತಿದ್ದೇವೆ. ಆದ್ದರಿಂದಲೇ ಇಂದು ನಾವು ಶಿರಡಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡದ ಅಡಿಪಾಯ ಹಾಕಿದ್ದೇವೆ, ನಾಗಪುರ ವಿಮಾನ ನಿಲ್ದಾಣವನ್ನು ಆಧುನೀಕರಣಗೊಳಿಸಿದ್ದೇವೆ, ಮತ್ತು ಮಹಾರಾಷ್ಟ್ರದಾದ್ಯಂತ ಅನೇಕ ಇತರ ನಿರಂತರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಶಿರಡಿ ವಿಮಾನ ನಿಲ್ದಾಣದಲ್ಲಿನ ಹೊಸ ಟರ್ಮಿನಲ್ ಸಾಯಿಬಾಬಾ ಭಕ್ತರಿಗೆ ದೊಡ್ಡ ಅನುಕೂಲವನ್ನು ತರಲಿದೆ. ದೇಶದ ಎಲ್ಲೆಡೆಯಿಂದ ಮತ್ತು ವಿದೇಶಗಳಿಂದ ದೊಡ್ಡ ಸಂಖ್ಯೆಯ ಭಕ್ತರು ಭೇಟಿ ನೀಡಲು ಸಾಧ್ಯವಾಗಲಿದೆ. ಕೆಲ ದಿನಗಳ ಹಿಂದೆ ಮೇಲ್ದರ್ಜೆಗೇರಿದ ಸೊಲ್ಲಾಪುರ ವಿಮಾನ ನಿಲ್ದಾಣವನ್ನೂ ಉದ್ಘಾಟಿಸಿದ್ದೆ. ಭಕ್ತರು ಒಂದು ಸ್ಥಳಕ್ಕೆ ಭೇಟಿ ನೀಡಿದಾಗ, ಅವರು ಖಂಡಿತವಾಗಿಯೂ ಶನಿ ಶಿಂಗಣಾಪುರ, ತುಳಜಾ ಭವಾನಿ, ಮತ್ತು ಕೈಲಾಸ ದೇವಾಲಯದಂತಹ ಹತ್ತಿರದ ಸ್ಥಳಗಳಿಗೂ ಭೇಟಿ ನೀಡುತ್ತಾರೆ. ಇದು ಮಹಾರಾಷ್ಟ್ರದ ಪ್ರವಾಸೋದ್ಯಮ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ.

ಸ್ನೇಹಿತರೇ, 

ನಮ್ಮ ಸರ್ಕಾರದ ಪ್ರತಿಯೊಂದು ನಿರ್ಧಾರ ಮತ್ತು ನೀತಿಯು ಕೇವಲ ಒಂದೇ ಗುರಿಗೆ ಸಮರ್ಪಿತವಾಗಿದೆ - 'ವಿಕಸಿತ ಭಾರತ'! ಮತ್ತು ಇದಕ್ಕಾಗಿ, ನಮ್ಮ ದೃಷ್ಟಿಕೋನವು ಬಡವರು, ರೈತರು, ಯುವಕರು ಮತ್ತು ಮಹಿಳೆಯರ ಕಲ್ಯಾಣವಾಗಿದೆ. ಆದ್ದರಿಂದ, ಪ್ರತಿಯೊಂದು ಅಭಿವೃದ್ಧಿ ಯೋಜನೆಯು ಹಳ್ಳಿಗಳು, ಬಡವರು, ಕಾರ್ಮಿಕರು ಮತ್ತು ರೈತರಿಗೆ ಸಮರ್ಪಿತವಾಗಿದೆ. ಶಿರಡಿ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಕಾರ್ಗೋ ಕಾಂಪ್ಲೆಕ್ಸ್  ನಿರ್ಮಿಸಲಾಗುತ್ತಿದ್ದು, ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಸಂಕೀರ್ಣದ ಮೂಲಕ ವಿವಿಧ ಕೃಷಿ ಉತ್ಪನ್ನಗಳನ್ನು ದೇಶದ ಇತರ ಭಾಗಗಳಿಗೆ ಮತ್ತು ವಿದೇಶಗಳಿಗೆ ರವಾನಿಸಲಾಗುತ್ತದೆ. ಶಿರಡಿ, ಲಾಸಲ್ಗಾಂವ್, ಅಹಿಲ್ಯಾನಗರ ಮತ್ತು ನಾಸಿಕ್ನ ರೈತರು ಇದರಿಂದ ಲಾಭ ಪಡೆಯುತ್ತಾರೆ. ಈ ರೈತರು ತಮ್ಮ ಉತ್ಪನ್ನಗಳಾದ ಈರುಳ್ಳಿ, ದ್ರಾಕ್ಷಿ, ನುಗ್ಗೆಕಾಯಿ, ಪೇರಲೆ ಮತ್ತು ದಾಳಿಂಬೆಗಳನ್ನು ಸುಲಭವಾಗಿ ದೊಡ್ಡ ಮಾರುಕಟ್ಟೆಗಳಿಗೆ ತೆಗೆದುಕೊಂಡು ಹೋಗಬಹುದು.

ಸಹೋದರ ಸಹೋದರಿಯರೇ,

ನಮ್ಮ ಸರ್ಕಾರವು ರೈತರ ಹಿತದೃಷ್ಟಿಯಿಂದ ನಿರಂತರವಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನಾವು ಬಾಸ್ಮತಿ ಅಕ್ಕಿಯ ಮೇಲಿನ ಕನಿಷ್ಠ ರಫ್ತು ಬೆಲೆಯನ್ನು ತೆಗೆದುಹಾಕಿದ್ದೇವೆ. ಬಾಸ್ಮತಿಯೇತರ ಅಕ್ಕಿ ರಫ್ತಿನ ಮೇಲಿನ ನಿಷೇಧವನ್ನೂ ತೆರವುಗೊಳಿಸಲಾಗಿದೆ. ಅರೆಬೇಯಿಸಿದ ಅಕ್ಕಿಯ ರಫ್ತು ಶುಲ್ಕವನ್ನು ಅರ್ಧಕ್ಕೆ ಇಳಿಸಲಾಗಿದೆ. ಮಹಾರಾಷ್ಟ್ರದ ರೈತರ ಲಾಭವನ್ನು ಹೆಚ್ಚಿಸಲು, ನಾವು ಈರುಳ್ಳಿಯ ರಫ್ತು ತೆರಿಗೆಯನ್ನೂ ಅರ್ಧಕ್ಕೆ ಇಳಿಸಿದ್ದೇವೆ. ಖಾದ್ಯ ತೈಲಗಳ ಆಮದಿನ ಮೇಲೆ 20% ತೆರಿಗೆ ವಿಧಿಸಲು ನಾವು ನಿರ್ಧರಿಸಿದ್ದೇವೆ. ಸಂಸ್ಕರಿಸಿದ ಸೋಯಾಬೀನ್, ಸೂರ್ಯಕಾಂತಿ ಮತ್ತು ತಾಳೆ ಎಣ್ಣೆಗಳ ಮೇಲಿನ ಸುಂಕವನ್ನು ನಾವು ಗಣನೀಯವಾಗಿ ಹೆಚ್ಚಿಸಿದ್ದೇವೆ. ಇದರಿಂದ ಯಾರಿಗೆ ಲಾಭವಾಗುತ್ತದೆ? ಇದು ನಮ್ಮ ದೇಶದ ರೈತರಿಗೆ ಲಾಭದಾಯಕವಾಗಿರುತ್ತದೆ. ಅವರು ಸಾಸಿವೆ, ಸೋಯಾಬೀನ್ ಮತ್ತು ಸೂರ್ಯಕಾಂತಿ ಬೆಳೆಗಳಿಗೆ ಉತ್ತಮ ಬೆಲೆ ಪಡೆಯುತ್ತಾರೆ. ಜವಳಿ ಉದ್ಯಮಕ್ಕೆ ಸರ್ಕಾರ ನೀಡುತ್ತಿರುವ ಬೆಂಬಲವು ಮಹಾರಾಷ್ಟ್ರದ ಹತ್ತಿ ಬೆಳೆಗಾರರಿಗೂ ಹೆಚ್ಚಿನ ಪ್ರಯೋಜನವನ್ನು ನೀಡುತ್ತಿದೆ.

ಸ್ನೇಹಿತರೇ, 

ನೀವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ವಿಷಯವೆಂದರೆ, ಮಹಾ-ಅಘಾಡಿಯು ಅಧಿಕಾರ ಪಡೆಯಲು ಮಹಾರಾಷ್ಟ್ರವನ್ನು ದುರ್ಬಲಗೊಳಿಸಲು ಬಯಸುತ್ತದೆ, ಆದರೆ ಮಹಾಯುತಿಯ ಸಂಕಲ್ಪವು ಮಹಾರಾಷ್ಟ್ರವನ್ನು ಬಲಿಷ್ಠಗೊಳಿಸುವುದಾಗಿದೆ. ಇಂದು ಮಹಾರಾಷ್ಟ್ರವು ಮತ್ತೆ ದೇಶದ ಪ್ರಗತಿಯನ್ನು ಮುನ್ನಡೆಸಲು ಮುಂದೆ ಸಾಗುತ್ತಿರುವುದನ್ನು ನೋಡಿ ನಾನು ಸಂತೋಷಪಡುತ್ತೇನೆ. ಈ ಎಲ್ಲಾ ಅಭಿವೃದ್ಧಿ ಉಪಕ್ರಮಗಳಿಗಾಗಿ ಮಹಾರಾಷ್ಟ್ರದ ಜನರಿಗೆ ನಾನು ಮತ್ತೊಮ್ಮೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. 

ಧನ್ಯವಾದಗಳು!

 

  • Jitendra Kumar April 13, 2025

    🙏🇮🇳❤️❤️
  • Ratnesh Pandey April 10, 2025

    जय हिन्द 🇮🇳
  • Jitender Kumar BJP Haryana State Gurgaon MP and President March 01, 2025

    Nearest Police station
  • Jitender Kumar BJP Haryana State Gurgaon MP and President March 01, 2025

    BJP Haryana
  • Jitender Kumar BJP Haryana State Gurgaon MP and President March 01, 2025

    PM India
  • Jitender Kumar BJP Haryana State Gurgaon MP and President March 01, 2025

    BJP
  • krishangopal sharma Bjp February 23, 2025

    मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹🙏🌹🙏🌷🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • krishangopal sharma Bjp February 23, 2025

    मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹🙏🌹🙏🌷🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷
  • krishangopal sharma Bjp February 23, 2025

    मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹🙏🌹🙏🌷🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • krishangopal sharma Bjp February 23, 2025

    मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹मोदी 🌹🙏🌹🙏🌷🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🙏🌷🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
'We control our skies': How govt fortified India’s Air Defence and offensive capabilities

Media Coverage

'We control our skies': How govt fortified India’s Air Defence and offensive capabilities
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 9 ಮೇ 2025
May 09, 2025

India’s Strength and Confidence Continues to Grow Unabated with PM Modi at the Helm