Quoteಕಳೆದ 10 ವರ್ಷಗಳಲ್ಲಿ, ಬನಾರಸ್ ಅಭಿವೃದ್ಧಿಯು ಹೊಸ ವೇಗವನ್ನು ಪಡೆದುಕೊಂಡಿದೆ: ಪ್ರಧಾನಮಂತ್ರಿ
Quoteಮಹಾತ್ಮ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ತಮ್ಮ ಜೀವನದುದ್ದಕ್ಕೂ ಮಹಿಳಾ ಸಬಲೀಕರಣ, ಅವರ ಆತ್ಮ ವಿಶ್ವಾಸ ಮತ್ತು ಸಮಾಜ ಕಲ್ಯಾಣಕ್ಕಾಗಿ ಶ್ರಮಿಸಿದರು: ಪ್ರಧಾನಮಂತ್ರಿ
Quoteಬನಾಸ್ ಡೈರಿ ಕಾಶಿಯಲ್ಲಿ ಸಾವಿರಾರು ಕುಟುಂಬಗಳ ಚಿತ್ರಣ ಮತ್ತು ಹಣೆಬರಹ ಎರಡನ್ನೂ ಬದಲಾಯಿಸಿದೆ: ಪ್ರಧಾನಮಂತ್ರಿ
Quoteಕಾಶಿ ಈಗ ಉತ್ತಮ ಆರೋಗ್ಯದ ರಾಜಧಾನಿಯಾಗುತ್ತಿದೆ: ಪ್ರಧಾನಮಂತ್ರಿ
Quoteಇಂದು, ಕಾಶಿಗೆ ಭೇಟಿ ನೀಡುವವರು ಅದರ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಹೊಗಳುತ್ತಾರೆ: ಪ್ರಧಾನಮಂತ್ರಿ
Quoteಭಾರತ ಇಂದು ಅಭಿವೃದ್ಧಿ ಮತ್ತು ಪರಂಪರೆ ಎರಡನ್ನೂ ಒಟ್ಟಿಗೆ ಮುನ್ನಡೆಸುತ್ತಿದೆ, ನಮ್ಮ ಕಾಶಿ ಇದಕ್ಕೆ ಅತ್ಯುತ್ತಮ ಮಾದರಿಯಾಗುತ್ತಿದೆ: ಪ್ರಧಾನಮಂತ್ರಿ
Quoteಉತ್ತರ ಪ್ರದೇಶ ಇನ್ನು ಮುಂದೆ ಕೇವಲ ಸಾಧ್ಯತೆಗಳ ಭೂಮಿಯಾಗಿರುವುದಿಲ್ಲ, ಬದಲಿಗೆ ಸಾಮರ್ಥ್ಯ ಮತ್ತು ಸಾಧನೆಗಳ ನೆಲವಾಗಿರುತ್ತದೆ: ಪ್ರಧಾನಮಂತ್ರಿ

ನಮಃ ಪಾರ್ವತಿ ಪತಾಯೇ, ಹರ-ಹರ ಮಹಾದೇವ!

ವೇದಿಕೆಯಲ್ಲಿ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌; ಮುಖ್ಯಮಂತ್ರಿ, ಗೌರವಾನ್ವಿತ ಶ್ರೀ ಯೋಗಿ ಆದಿತ್ಯನಾಥ್‌; ಉಪ ಮುಖ್ಯಮಂತ್ರಿಗಳಾದ ಕೇಶವ್‌ ಪ್ರಸಾದ್‌ ಮೌರ್ಯ ಮತ್ತು ಬ್ರಜೇಶ್‌ ಪಾಠಕ್‌; ಹಾಜರಿದ್ದ ಗೌರವಾನ್ವಿತ ಮಂತ್ರಿಗಳು; ಇತರ ಸಾರ್ವಜನಿಕ ಪ್ರತಿನಿಧಿಗಳು; ಬನಾಸ್‌ ಡೈರಿಯ ಅಧ್ಯಕ್ಷ  ಶಂಕರ್‌ ಭಾಯ್‌ ಚೌಧರಿ; ಮತ್ತು ತಮ್ಮ ಆಶೀರ್ವಾದವನ್ನು ಅರ್ಪಿಸಲು ಇಷ್ಟು ದೊಡ್ಡ ಸಂಖ್ಯೆಯಲ್ಲಿಇಲ್ಲಿ ನೆರೆದಿರುವ ನನ್ನ ಪ್ರೀತಿಯ ಕುಟುಂಬ ಸದಸ್ಯರೆಲ್ಲರೂ- ನಮ್ಮ ಕಾಶಿ ಕುಟುಂಬದ ಪ್ರೀತಿಯ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಈ ಸಂದರ್ಭದಲ್ಲಿ ನಾನು ವಿನಮ್ರತೆಯಿಂದ ನಿಮ್ಮ ಆಶೀರ್ವಾದವನ್ನು ಕೋರುತ್ತೇನೆ. ಈ ಅಗಾಧ ಪ್ರೀತಿಗೆ ನಾನು ನಿಜವಾಗಿಯೂ ಋುಣಿಯಾಗಿದ್ದೇನೆ. ಕಾಶಿ ನನ್ನದು, ನಾನು ಕಾಶಿಗೆ ಸೇರಿದವನು.

ಸ್ನೇಹಿತರೇ,

ನಾಳೆ ಹನುಮಾನ್‌ ಜನ್ಮೋತ್ಸವದ ಪವಿತ್ರ ಸಂದರ್ಭವನ್ನು ಸೂಚಿಸುತ್ತದೆ ಮತ್ತು ಇಂದು ಸಂಕತ್‌ ಮೋಚನ್‌ ಮಹಾರಾಜ್‌ಗೆ ಹೆಸರುವಾಸಿಯಾದ ಪವಿತ್ರ ನಗರವಾದ ಕಾಶಿಯಲ್ಲಿ ನಿಮ್ಮೆಲ್ಲರನ್ನೂ ಭೇಟಿ ಮಾಡುವ ಅವಕಾಶ ನನಗೆ ದೊರೆತಿದೆ. ಹನುಮಾನ್‌ ಜನ್ಮೋತ್ಸವದ ಮುನ್ನಾದಿನದಂದು, ಕಾಶಿಯ ಜನರು ಅಭಿವೃದ್ಧಿಯ ಉತ್ಸಾಹವನ್ನು ಆಚರಿಸಲು ಇಲ್ಲಿಸೇರಿದ್ದಾರೆ.

 

|

ಸ್ನೇಹಿತರೇ,

ಕಳೆದ ಹತ್ತು ವರ್ಷಗಳಲ್ಲಿ, ಬನಾರಸ್‌ನ ಅಭಿವೃದ್ಧಿಯು ಗಮನಾರ್ಹ ವೇಗವರ್ಧನೆಗೆ ಸಾಕ್ಷಿಯಾಗಿದೆ. ಕಾಶಿ ತನ್ನ ಶ್ರಿಮಂತ ಪರಂಪರೆಯನ್ನು ಉಳಿಸಿಕೊಂಡು ಆಧುನಿಕತೆಯನ್ನು ಸೊಗಸಾಗಿ ಸ್ವೀಕರಿಸಿದೆ, ಉಜ್ವಲ ಭವಿಷ್ಯದತ್ತ ಆತ್ಮವಿಶ್ವಾಸದ ದಾಪುಗಾಲು ಇಟ್ಟಿದೆ. ಇಂದು, ಕಾಶಿ ಪ್ರಾಚೀನತೆಯ ಸಂಕೇತವಾಗಿ ಮಾತ್ರವಲ್ಲದೆ, ಪ್ರಗತಿಯ ದೀಪವಾಗಿಯೂ ನಿಂತಿದೆ. ಇದು ಈಗ ಪೂರ್ವಾಂಚಲದ ಆರ್ಥಿಕ ನಕ್ಷೆಯಲ್ಲಿ ಪ್ರಮುಖ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಒಂದು ಕಾಲದಲ್ಲಿಭಗವಾನ್‌ ಮಹಾದೇವರಿಂದ ಮಾರ್ಗದರ್ಶನ ಪಡೆದ ಕಾಶಿಯೇ ಇಂದು ಇಡೀ ಪೂರ್ವಾಂಚಲ ಪ್ರದೇಶದ ಅಭಿವೃದ್ಧಿಯ ರಥವನ್ನು ಮುನ್ನಡೆಸುತ್ತಿದೆ!

ಸ್ನೇಹಿತರೇ,

ಸ್ವಲ್ಪ ಸಮಯದ ಹಿಂದೆ, ಕಾಶಿ ಮತ್ತು ಪೂರ್ವಾಂಚಲದ ವಿವಿಧ ಭಾಗಗಳಿಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಉದ್ಘಾಟಿಸಲಾಯಿತು ಅಥವಾ ಅವುಗಳ ಅಡಿಪಾಯ ಹಾಕಲಾಯಿತು. ಇವುಗಳಲ್ಲಿಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹಲವಾರು ಮೂಲಸೌಕರ್ಯ ಯೋಜನೆಗಳು, ಪ್ರತಿ ಹಳ್ಳಿ ಮತ್ತು ಮನೆಗೆ ನಲ್ಲಿನೀರನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳುವ ಅಭಿಯಾನ, ಶೈಕ್ಷ ಣಿಕ, ಆರೋಗ್ಯ ಮತ್ತು ಕ್ರೀಡಾ ಸೌಲಭ್ಯಗಳ ವಿಸ್ತರಣೆ ಮತ್ತು ಪ್ರತಿ ಪ್ರದೇಶ, ಪ್ರತಿ ಕುಟುಂಬ ಮತ್ತು ಪ್ರತಿಯೊಬ್ಬ ಯುವಕರಿಗೆ ಸೌಲಭ್ಯಗಳನ್ನು ಸುಧಾರಿಸುವ ದೃಢ ಬದ್ಧತೆ ಸೇರಿವೆ. ಈ ಪ್ರತಿಯೊಂದು ಉಪಕ್ರಮಗಳು ಮತ್ತು ಯೋಜನೆಗಳು ಪೂರ್ವಾಂಚಲವನ್ನು ಅಭಿವೃದ್ಧಿ ಹೊಂದಿದ ಪ್ರದೇಶವಾಗಿ ಪರಿವರ್ತಿಸುವ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲುಗಳಾಗಿ ಕಾರ್ಯನಿರ್ವಹಿಸುತ್ತವೆ. ಕಾಶಿಯ ಪ್ರತಿಯೊಬ್ಬ ವ್ಯಕ್ತಿಯೂ ಈ ಪ್ರಯತ್ನಗಳಿಂದ ಅಪಾರ ಪ್ರಯೋಜನ ಪಡೆಯುತ್ತಾನೆ. ಈ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ಬನಾರಸ್‌ ಮತ್ತು ಪೂರ್ವಾಂಚಲದ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಇಂದು ಸಾಮಾಜಿಕ ಜಾಗೃತಿಯ ಪೂಜ್ಯ ಐಕಾನ್‌ ಮಹಾತ್ಮ ಜ್ಯೋತಿಬಾ ಫುಲೆ ಅವರ ಜನ್ಮದಿನವೂ ಆಗಿದೆ. ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ತಮ್ಮ ಇಡೀ ಜೀವನವನ್ನು ಮಹಿಳೆಯರ ಕಲ್ಯಾಣ, ಅವರ ಸಬಲೀಕರಣ ಮತ್ತು ಸಾಮಾಜಿಕ ಉನ್ನತಿಗಾಗಿ ಮುಡಿಪಾಗಿಟ್ಟರು. ಇಂದು, ನಾವು ಅವರ ಪರಂಪರೆಯನ್ನು - ಅವರ ದೃಷ್ಟಿಕೋನ, ಅವರ ಧ್ಯೇಯ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಅವರ ಆಂದೋಲನವನ್ನು - ಹೊಸ ಹುರುಪು ಮತ್ತು ಉದ್ದೇಶದೊಂದಿಗೆ ಮುಂದುವರಿಸುತ್ತಿದ್ದೇವೆ.

 

|

ಸ್ನೇಹಿತರೇ,

ನಾನು ಇಂದು ಮತ್ತೊಂದು ಅಂಶವನ್ನು ಬಿಂಬಿಸಲು ಬಯಸುತ್ತೇನೆ. ಮಹಾತ್ಮಾ ಫುಲೆಯಂತಹ ಮಹಾನ್‌ ವ್ಯಕ್ತಿಗಳಿಂದ ಪ್ರೇರಿತರಾಗಿ, ರಾಷ್ಟ್ರದ ಸೇವೆಯಲ್ಲಿನಮ್ಮ ಮಾರ್ಗದರ್ಶಿ ತತ್ವವೆಂದರೆ ಸಬ್ಕಾ ಸಾಥ್‌, ಸಬ್ಕಾ ವಿಕಾಸ್‌. ಈ ಅಂತರ್ಗತ ಮನೋಭಾವದೊಂದಿಗೆ ನಾವು ರಾಷ್ಟ್ರಕ್ಕಾಗಿ ಕೆಲಸ ಮಾಡುತ್ತೇವೆ. ಇದಕ್ಕೆ ವ್ಯತಿರಿಕ್ತವಾಗಿ, ಕೇವಲ ಅಧಿಕಾರಕ್ಕಾಗಿ ರಾಜಕೀಯ ಆಟಗಳಲ್ಲಿ ತೊಡಗುವವರು ವಿಭಿನ್ನ ಮಂತ್ರಕ್ಕೆ ಬದ್ಧರಾಗಿರುತ್ತಾರೆ: ಪರಿವಾರ್‌ ಕಾ ಸಾಥ್‌, ಪರಿವಾರ್‌ ಕಾ ವಿಕಾಸ್‌. ಇಂದು, ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ನ ನಿಜವಾದ ಸಾರವನ್ನು ಸಾಕಾರಗೊಳಿಸಿದ್ದಕ್ಕಾಗಿ ಪೂರ್ವಾಂಚಲದ ಜಾನುವಾರು ಸಾಕಣೆ ಕುಟುಂಬಗಳನ್ನು, ವಿಶೇಷವಾಗಿ ನಮ್ಮ ಶ್ರಮಜೀವಿ ಸಹೋದರಿಯರನ್ನು ನಾನು ವಿಶೇಷವಾಗಿ ಅಭಿನಂದಿಸಲು ಬಯಸುತ್ತೇನೆ. ಈ ಮಹಿಳೆಯರು ತಮ್ಮ ಮೇಲೆ ನಂಬಿಕೆ ಇಟ್ಟಾಗ, ಆ ನಂಬಿಕೆಯು ಇತಿಹಾಸದ ರಚನೆಗೆ ಕಾರಣವಾಗಬಹುದು ಎಂದು ಸಾಬೀತುಪಡಿಸಿದ್ದಾರೆ. ಅವರು ಈಗ ಇಡೀ ಪೂರ್ವಾಂಚಲಕ್ಕೆ ಸ್ಫೂರ್ತಿದಾಯಕ ಉದಾಹರಣೆಯಾಗಿದ್ದಾರೆ. ಸ್ವಲ್ಪ ಸಮಯದ ಹಿಂದೆ, ಉತ್ತರ ಪ್ರದೇಶದ ಬನಾಸ್‌ ಡೈರಿ ಸ್ಥಾವರಕ್ಕೆ ಸಂಬಂಧಿಸಿದ ಎಲ್ಲಾ ಜಾನುವಾರು ಸಾಕಣೆ ಪಾಲುದಾರರಿಗೆ ಬೋನಸ್‌ ಪಾವತಿಗಳನ್ನು ವಿತರಿಸಲಾಯಿತು. ಬನಾರಸ್‌ ಮತ್ತು ಬೋನಸ್‌ - ಇದು ಕೇವಲ ಉಡುಗೊರೆಯಲ್ಲ; ಇದು ನಿಮ್ಮ ಸಮರ್ಪಣೆಗೆ ಸರಿಯಾದ ಪ್ರತಿಫಲವಾಗಿದೆ. 100 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಈ ಬೋನಸ್‌ ನಿಮ್ಮ ಕಠಿಣ ಪರಿಶ್ರಮ ಮತ್ತು ಅಚಲ ಬದ್ಧತೆಗೆ ಗೌರವವಾಗಿದೆ.

ಸ್ನೇಹಿತರೇ,

ಬನಾಸ್‌ ಡೈರಿ ಕಾಶಿಯ ಸಾವಿರಾರು ಕುಟುಂಬಗಳ ಚಿತ್ರಣ ಮತ್ತು ಹಣೆಬರಹ ಎರಡನ್ನೂ ಪರಿವರ್ತಿಸಿದೆ. ಈ ಡೈರಿ ನಿಮ್ಮ ಕಠಿಣ ಪರಿಶ್ರಮವನ್ನು ಅರ್ಹ ಪ್ರತಿಫಲಗಳಾಗಿ ಪರಿವರ್ತಿಸಿದೆ ಮತ್ತು ನಿಮ್ಮ ಆಕಾಂಕ್ಷೆಗಳಿಗೆ ರೆಕ್ಕೆಗಳನ್ನು ನೀಡಿದೆ. ವಿಶೇಷವಾಗಿ ಹೃದಯಸ್ಪರ್ಶಿ ಸಂಗತಿಯೆಂದರೆ, ಈ ಪ್ರಯತ್ನಗಳ ಮೂಲಕ, ಪೂರ್ವಾಂಚಲದ ಅನೇಕ ಮಹಿಳೆಯರು ಈಗ ಲಕ್ಷಾಧಿಪತಿ ದೀದಿಗಳಾಗಿದ್ದಾರೆ. ಒಂದು ಕಾಲದಲ್ಲಿಬದುಕುಳಿಯುವ ಬಗ್ಗೆ ಆತಂಕವಿತ್ತು, ಇಂದು ಸಮೃದ್ಧಿಯತ್ತ ಸ್ಥಿರವಾದ ನಡಿಗೆ ಇದೆ. ಈ ಪ್ರಗತಿಯು ಬನಾರಸ್‌ ಮತ್ತು ಉತ್ತರ ಪ್ರದೇಶದಲ್ಲಿಮಾತ್ರವಲ್ಲ, ಇಡೀ ದೇಶದಾದ್ಯಂತ ಗೋಚರಿಸುತ್ತದೆ. ಇಂದು, ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಿಸುವ ರಾಷ್ಟ್ರವಾಗಿ ನಿಂತಿದೆ. ಕಳೆದ ಹತ್ತು ವರ್ಷಗಳಲ್ಲಿ, ಹಾಲಿನ ಉತ್ಪಾದನೆಯು ಸರಿಸುಮಾರು ಶೇ.65ರಷ್ಟು ಹೆಚ್ಚಾಗಿದೆ- ಇದು ಎರಡು ಪಟ್ಟು ಹೆಚ್ಚಾಗಿದೆ. ಈ ಸಾಧನೆಯು ನಿಮ್ಮಂತಹ ಕೋಟ್ಯಂತರ ರೈತರಿಗೆ ಸೇರಿದ್ದು- ಪಶುಸಂಗೋಪನೆಯಲ್ಲಿತೊಡಗಿರುವ ನನ್ನ ಸಹೋದರ ಸಹೋದರಿಯರು. ಮತ್ತು ಅಂತಹ ಯಶಸ್ಸು ರಾತ್ರೋರಾತ್ರಿ ಬಂದಿಲ್ಲ. ಕಳೆದ ಹತ್ತು ವರ್ಷಗಳಿಂದ, ನಾವು ನಮ್ಮ ದೇಶದ ಹೈನುಗಾರಿಕೆ ಕ್ಷೇತ್ರವನ್ನು ಮಿಷನ್‌ ಚಾಲಿತ ರೀತಿಯಲ್ಲಿ ಮುನ್ನಡೆಸುತ್ತಿದ್ದೇವೆ.

ನಾವು ಜಾನುವಾರು ಸಾಕಣೆದಾರರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸೌಲಭ್ಯವನ್ನು ತಂದಿದ್ದೇವೆ, ಅವರ ಸಾಲದ ಮಿತಿಯನ್ನು ಹೆಚ್ಚಿಸಿದ್ದೇವೆ ಮತ್ತು ಸಬ್ಸಿಡಿಗಳನ್ನು ವ್ಯವಸ್ಥೆ ಮಾಡಿದ್ದೇವೆ. ಆದಾಗ್ಯೂ, ಅತ್ಯಂತ ಮಹತ್ವದ ಪ್ರಯತ್ನವೆಂದರೆ ನಮ್ಮ ಪ್ರಾಣಿಗಳ ಬಗ್ಗೆ ಸಹಾನುಭೂತಿ. ಜಾನುವಾರುಗಳನ್ನು ಕಾಲು ಬಾಯಿ ರೋಗದಿಂದ ರಕ್ಷಿಸಲು ಉಚಿತ ಲಸಿಕೆ ಕಾರ್ಯಕ್ರಮವನ್ನು ಪರಿಚಯಿಸಲಾಗಿದೆ. ಪ್ರತಿಯೊಬ್ಬರೂ ಉಚಿತ ಕೋವಿಡ್‌ ಲಸಿಕೆಯನ್ನು ನೆನಪಿಸಿಕೊಳ್ಳುತ್ತಿದ್ದರೆ, ಇದು ಸಬ್ಕಾ ಸಾಥ್‌, ಸಬ್ಕಾ ವಿಕಾಸ್‌ ಮಂತ್ರದ ಅಡಿಯಲ್ಲಿ, ನಮ್ಮ ಪ್ರಾಣಿಗಳಿಗೆ ಉಚಿತ ಲಸಿಕೆಗಳನ್ನು ಸಹ ಖಾತ್ರಿಪಡಿಸುವ ಸರ್ಕಾರವಾಗಿದೆ.

ಹಾಲಿನ ಸಂಘಟಿತ ಸಂಗ್ರಹವನ್ನು ಸುಗಮಗೊಳಿಸಲು ದೇಶಾದ್ಯಂತ 20,000ಕ್ಕೂ ಹೆಚ್ಚು ಸಹಕಾರಿ ಸಂಘಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಈ ಸಂಘಗಳಿಗೆ ಲಕ್ಷಾಂತರ ಹೊಸ ಸದಸ್ಯರನ್ನು ಸೇರಿಸಲಾಗಿದೆ. ಹೈನುಗಾರಿಕೆಗೆ ಸಂಬಂಧಿಸಿದವರನ್ನು ಒಗ್ಗೂಡಿಸುವುದು ಮತ್ತು ಅದನ್ನು ಬೆಳವಣಿಗೆಯತ್ತ ಕೊಂಡೊಯ್ಯುವುದು ಈ ಪ್ರಯತ್ನವಾಗಿದೆ. ದೇಶೀಯ ಹಸು ತಳಿಗಳನ್ನು ಉತ್ತೇಜಿಸಲಾಗುತ್ತಿದ್ದು, ಅವುಗಳ ಗುಣಮಟ್ಟವನ್ನು ಸುಧಾರಿಸುವತ್ತ ಗಮನ ಹರಿಸಲಾಗಿದೆ. ವೈಜ್ಞಾನಿಕ ಸಂತಾನೋತ್ಪತ್ತಿ ಪದ್ಧತಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಈ ಪ್ರಯತ್ನಗಳನ್ನು ಬೆಂಬಲಿಸಲು ರಾಷ್ಟ್ರೀಯ ಗೋಕುಲ್‌ ಮಿಷನ್‌ ಪ್ರಸ್ತುತ ನಡೆಯುತ್ತಿದೆ.

ಈ ಎಲ್ಲಾ ಉಪಕ್ರಮಗಳ ಅಡಿಪಾಯವೆಂದರೆ ನಮ್ಮ ಜಾನುವಾರು ಸಾಕಣೆ ಸಹೋದರ ಸಹೋದರಿಯರು ಅಭಿವೃದ್ಧಿಯ ಹೊಸ ಮಾರ್ಗವನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುವುದು- ಭರವಸೆಯ ಮಾರುಕಟ್ಟೆಗಳು ಮತ್ತು ಅವಕಾಶಗಳೊಂದಿಗೆ ಸಂಪರ್ಕ ಸಾಧಿಸುವುದು. ಇಂದು, ಬನಾಸ್‌ ಡೈರಿಯ ಕಾಶಿ ಸಂಕೀರ್ಣವು ಪೂರ್ವಾಂಚಲದಾದ್ಯಂತ ಈ ದೃಷ್ಟಿಕೋನವನ್ನು ಮುನ್ನಡೆಸುತ್ತಿದೆ. ಬನಾಸ್‌ ಡೈರಿ ಈ ಪ್ರದೇಶದಲ್ಲಿಗಿರ್‌ ಹಸುಗಳನ್ನು ಸಹ ವಿತರಿಸಿದೆ ಮತ್ತು ಅವುಗಳ ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಿದೆ ಎಂದು ನನಗೆ ತಿಳಿಸಲಾಗಿದೆ. ಇದಲ್ಲದೆ, ಬನಾಸ್‌ ಡೈರಿ ಬನಾರಸ್‌ನಲ್ಲಿ ಜಾನುವಾರುಗಳಿಗೆ ಮೇವಿನ ವ್ಯವಸ್ಥೆಯನ್ನು ಪರಿಚಯಿಸಿದೆ. ಪ್ರಸ್ತುತ, ಈ ಡೈರಿ ಪೂರ್ವಾಂಚಲದ ಸುಮಾರು ಒಂದು ಲಕ್ಷ  ರೈತರಿಂದ ಹಾಲನ್ನು ಸಂಗ್ರಹಿಸುತ್ತದೆ, ಆ ಮೂಲಕ ರೈತ ಸಮುದಾಯವನ್ನು ಸಬಲೀಕರಣಗೊಳಿಸುತ್ತದೆ.

 

|

ಸ್ನೇಹಿತರೇ,

ಸ್ವಲ್ಪ ಸಮಯದ ಹಿಂದೆ, ಇಲ್ಲಿನ ಹಲವಾರು ಹಿರಿಯ ಸ್ನೇಹಿತರಿಗೆ ಆಯುಷ್ಮಾನ್‌ ವೇ ವಂದನಾ ಕಾರ್ಡ್‌ಗಳನ್ನು ವಿತರಿಸುವ ಗೌರವ ನನಗೆ ಸಿಕ್ಕಿತು. ಅವರ ಮುಖದಲ್ಲಿನಾನು ಕಂಡ ಸಂತೃಪ್ತಿಯೇ ನನಗೆ ಈ ಯೋಜನೆಯ ಅತ್ಯಂತ ದೊಡ್ಡ ಯಶಸ್ಸು. ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದಂತೆ ನಮ್ಮ ಹಿರಿಯರು ಎದುರಿಸುತ್ತಿರುವ ಕಾಳಜಿಯನ್ನು ನಾವೆಲ್ಲರೂ ಅರ್ಥಮಾಡಿಕೊಂಡಿದ್ದೇವೆ. ಒಂದು ದಶಕದ ಹಿಂದೆ ಆರೋಗ್ಯ ರಕ್ಷಣೆಯ ವಿಷಯದಲ್ಲಿಈ ಪ್ರದೇಶ ಮತ್ತು ವಾಸ್ತವವಾಗಿ ಪೂರ್ವಾಂಚಲವು ಎದುರಿಸಿದ ಸವಾಲುಗಳ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ಇಂದು ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ನನ್ನ ಕಾಶಿ ವೇಗವಾಗಿ ಆರೋಗ್ಯ ರಾಜಧಾನಿಯಾಗುತ್ತಿದೆ. ಒಂದು ಕಾಲದಲ್ಲಿದೆಹಲಿ ಮತ್ತು ಮುಂಬೈಗೆ ಸೀಮಿತವಾಗಿದ್ದ ಪ್ರಮುಖ ಆಸ್ಪತ್ರೆಗಳು ಈಗ ನಿಮ್ಮ ಮನೆಗಳ ಬಳಿ ಲಭ್ಯವಿವೆ. ಅಗತ್ಯ ಸೇವೆಗಳು ಮತ್ತು ಸೌಲಭ್ಯಗಳು ಜನರನ್ನು ತಲುಪಿದಾಗ ನಿಜವಾದ ಅಭಿವೃದ್ಧಿ ಹೇಗಿರುತ್ತದೆ.

ಸ್ನೇಹಿತರೇ,

ಕಳೆದ ಹತ್ತು ವರ್ಷಗಳಲ್ಲಿ, ನಾವು ಆಸ್ಪತ್ರೆಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ - ನಾವು ರೋಗಿಯ ಘನತೆಯನ್ನು ಹೆಚ್ಚಿಸಿದ್ದೇವೆ. ಆಯುಷ್ಮಾನ್‌ ಭಾರತ್‌ ಯೋಜನೆ ನನ್ನ ಬಡ ಸಹೋದರ ಸಹೋದರಿಯರಿಗೆ ಆಶೀರ್ವಾದಕ್ಕಿಂತ ಕಡಿಮೆಯಿಲ್ಲ. ಈ ಯೋಜನೆಯು ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವುದಕ್ಕಿಂತ ಹೆಚ್ಚಿನದನ್ನು ಮಾಡುತ್ತದೆ - ಇದು ಆರೈಕೆಯ ಜತೆಗೆ ಆತ್ಮವಿಶ್ವಾಸವನ್ನು ತುಂಬುತ್ತದೆ. ಉತ್ತರ ಪ್ರದೇಶದಾದ್ಯಂತ ಲಕ್ಷಾಂತರ ಜನರು ಮತ್ತು ವಾರಣಾಸಿಯಲ್ಲಿ ಮಾತ್ರ ಸಾವಿರಾರು ಜನರು ಇದರಿಂದ ಪ್ರಯೋಜನ ಪಡೆದಿದ್ದಾರೆ. ಪ್ರತಿಯೊಂದು ಕಾರ್ಯವಿಧಾನ, ಪ್ರತಿಯೊಂದು ಶಸಚಿಕಿತ್ಸೆ, ಪರಿಹಾರದ ಪ್ರತಿಯೊಂದು ನಿದರ್ಶನವು ವ್ಯಕ್ತಿಯ ಜೀವನದಲ್ಲಿ ಹೊಸ ಆರಂಭವನ್ನು ಗುರುತಿಸಿದೆ. ಆಯುಷ್ಮಾನ್‌ ಯೋಜನೆಯು ಉತ್ತರ ಪ್ರದೇಶವೊಂದರಲ್ಲೇ ಲಕ್ಷಾಂತರ ಕುಟುಂಬಗಳಿಗೆ ಕೋಟಿ ರೂಪಾಯಿಗಳನ್ನು ಉಳಿಸಿದೆ - ಏಕೆಂದರೆ ಸರ್ಕಾರ ಘೋಷಿಸಿದೆ: ನಿಮ್ಮ ಆರೋಗ್ಯ ರಕ್ಷಣೆ ಈಗ ನಮ್ಮ ಜವಾಬ್ದಾರಿಯಾಗಿದೆ.

ಮತ್ತು ಸ್ನೇಹಿತರೇ,

ನೀವು ನಮಗೆ ಮೂರನೇ ಅವಧಿಗೆ ಆಶೀರ್ವದಿಸಿದಾಗ, ನಾವು ಸಹ ನಿಮ್ಮ ಪ್ರೀತಿಯ ವಿನಮ್ರ ಸೇವಕರಾಗಿ ನಮ್ಮ ಕರ್ತವ್ಯವನ್ನು ಗೌರವಿಸಿದ್ದೇವೆ ಮತ್ತು ಏನನ್ನಾದರೂ ಹಿಂತಿರುಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ. ಹಿರಿಯ ನಾಗರಿಕರ ಚಿಕಿತ್ಸೆ ಉಚಿತವಾಗಿರುತ್ತದೆ ಎಂಬುದು ನನ್ನ ಖಾತರಿಯಾಗಿತ್ತು. ಆ ಬದ್ಧತೆಯ ಫಲವೇ ಆಯುಷ್ಮಾನ್‌ ವಯ ವಂದನಾ ಯೋಜನೆ. ಈ ಯೋಜನೆಯು ವಯಸ್ಸಾದವರಿಗೆ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಮಾತ್ರವಲ್ಲ; ಇದು ಅವರ ಘನತೆಯನ್ನು ಪುನಃಸ್ಥಾಪಿಸುವ ಬಗ್ಗೆ. ಈಗ, ಪ್ರತಿ ಕುಟುಂಬದಲ್ಲಿ70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು, ಆದಾಯವನ್ನು ಲೆಕ್ಕಿಸದೆ, ಉಚಿತ ಚಿಕಿತ್ಸೆಗೆ ಅರ್ಹರಾಗಿದ್ದಾರೆ. ವಾರಣಾಸಿ ಒಂದರಲ್ಲೇ ಅತಿ ಹೆಚ್ಚು ಅಂದರೆ ಸುಮಾರು 50,000 ವಯ ವಂದನಾ ಕಾರ್ಡ್‌ಗಳನ್ನು ವೃದ್ಧರಿಗೆ ವಿತರಿಸಲಾಗಿದೆ. ಇದು ಕೇವಲ ಅಂಕಿಅಂಶವಲ್ಲ; ಇದು ಜನರ ಸೇವಕನ ಪ್ರಾಮಾಣಿಕ ಸೇವೆಯ ಕಾರ್ಯವಾಗಿದೆ. ಈಗ ವೈದ್ಯಕೀಯ ಆರೈಕೆ ಪಡೆಯಲು ಭೂಮಿಯನ್ನು ಮಾರಾಟ ಮಾಡುವ ಅಗತ್ಯವಿಲ್ಲ! ಚಿಕಿತ್ಸೆಗಾಗಿ ಇನ್ನು ಮುಂದೆ ಸಾಲ ತೆಗೆದುಕೊಳ್ಳಬೇಕಾಗಿಲ್ಲ! ಚಿಕಿತ್ಸೆಯನ್ನು ಹುಡುಕಿಕೊಂಡು ಮನೆ ಮನೆಗೆ ಹೋಗುವ ಅಸಹಾಯಕತೆ ಇನ್ನು ಮುಂದೆ ಇಲ್ಲ. ವೈದ್ಯಕೀಯ ವೆಚ್ಚಗಳ ಬಗ್ಗೆ ಚಿಂತಿಸಬೇಡಿ- ಆಯುಷ್ಮಾನ್‌ ಕಾರ್ಡ್‌ ಮೂಲಕ ಸರ್ಕಾರವು ಈಗ ನಿಮ್ಮ ಚಿಕಿತ್ಸೆಯ ವೆಚ್ಚವನ್ನು ಭರಿಸುತ್ತದೆ!

 

|

ಸ್ನೇಹಿತರೇ,

ಇಂದು, ಕಾಶಿ ಮೂಲಕ ಹಾದುಹೋಗುವ ಯಾರಾದರೂ ಅದರ ಮೂಲಸೌಕರ್ಯ ಮತ್ತು ಸೌಲಭ್ಯಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಪ್ರತಿದಿನ ಲಕ್ಷಾಂತರ ಜನರು ಬನಾರಸ್‌ಗೆ ಭೇಟಿ ನೀಡುತ್ತಾರೆ. ಅವರು ಬಾಬಾ ವಿಶ್ವನಾಥನ ಆಶೀರ್ವಾದ ಪಡೆಯಲು ಮತ್ತು ಗಂಗಾ ಮಾತೆಯ ಪವಿತ್ರ ನೀರಿನಲ್ಲಿಸ್ನಾನ ಮಾಡಲು ಬರುತ್ತಾರೆ. ಪ್ರತಿಯೊಬ್ಬ ಸಂದರ್ಶಕನು ಬನಾರಸ್‌ ಎಷ್ಟು ಬದಲಾಗಿದೆ ಎಂದು ಹೇಳುತ್ತಾನೆ.

ಸ್ವಲ್ಪ ಊಹಿಸಿಕೊಳ್ಳಿ- ಕಾಶಿಯ ರಸ್ತೆಗಳು, ರೈಲ್ವೆ ಮತ್ತು ವಿಮಾನ ನಿಲ್ದಾಣಗಳ ಸ್ಥಿತಿ ಹತ್ತು ವರ್ಷಗಳ ಹಿಂದೆ ಇದ್ದಂತೆಯೇ ಇದ್ದಿದ್ದರೆ, ಇಂದು ನಗರದ ಸ್ಥಿತಿ ಏನಾಗುತ್ತಿತ್ತು? ಹಿಂದೆ, ಸಣ್ಣ ಹಬ್ಬಗಳು ಸಹ ಸಂಚಾರ ದಟ್ಟಣೆಗೆ ಕಾರಣವಾಗುತ್ತಿದ್ದವು. ಉದಾಹರಣೆಗೆ ಚುರ್ನಾನಿಂದ ಶಿವಪುರಕ್ಕೆ ಪ್ರಯಾಣಿಸುತ್ತಿದ್ದ ಯಾರೋ ಒಬ್ಬರು ಬನಾರಸ್‌ನ ಸುತ್ತಲೂ ಸುತ್ತಬೇಕಾಗಿತ್ತು. ಅವರು ಅಂತ್ಯವಿಲ್ಲದ ಜಾಮ್‌ಗಳಲ್ಲಿಸಿಲುಕಿಕೊಂಡಿದ್ದರು. ಧೂಳು ಮತ್ತು ಶಾಖದಲ್ಲಿಉಸಿರುಗಟ್ಟಿಸುತ್ತಿದ್ದರು. ಇಂದು, ಫುಲ್ವಾರಿಯಾ ಫ್ಲೈಓವರ್‌ಅನ್ನು ನಿರ್ಮಿಸಲಾಗಿದೆ. ಮಾರ್ಗವು ಈಗ ಚಿಕ್ಕದಾಗಿದೆ, ಸಮಯವನ್ನು ಉಳಿಸಲಾಗಿದೆ ಮತ್ತು ಜೀವನವು ಹೆಚ್ಚು ಆರಾಮದಾಯಕವಾಗಿದೆ! ಅಂತೆಯೇ, ಜೌನ್ಪುರ ಮತ್ತು ಗಾಜಿಪುರದ ಗ್ರಾಮೀಣ ಭಾಗಗಳ ನಿವಾಸಿಗಳು ಒಮ್ಮೆ ಪ್ರಯಾಣಿಸಲು ವಾರಣಾಸಿ ನಗರದ ಮೂಲಕ ಹಾದುಹೋಗಬೇಕಾಗಿತ್ತು. ಬಲ್ಲಿಯಾ, ಮೌ ಮತ್ತು ಗಾಜಿಪುರ ಜಿಲ್ಲೆಗಳ ಜನರು ವಿಮಾನ ನಿಲ್ದಾಣವನ್ನು ತಲುಪಲು ನಗರದ ಹೃದಯಭಾಗವನ್ನು ದಾಟಬೇಕಾಗಿತ್ತು. ಈಗ, ರಿಂಗ್‌ ರಸ್ತೆಗೆ ಧನ್ಯವಾದಗಳು, ಜನರು ಕೆಲವೇ ನಿಮಿಷಗಳಲ್ಲಿಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸಬಹುದು.

ಸ್ನೇಹಿತರೇ,

ಈ ಹಿಂದೆ, ಗಾಜಿಪುರಕ್ಕೆ ಪ್ರಯಾಣಿಸಲು ಹಲವಾರು ಗಂಟೆಗಳ ಸಮಯ ತೆಗೆದುಕೊಳ್ಳುತ್ತಿತ್ತು. ಈಗ, ಗಾಜಿಪುರ, ಜೌನ್ಪುರ, ಮಿರ್ಜಾಪುರ ಮತ್ತು ಅಜಂಗಢದಂತಹ ನಗರಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಗಮನಾರ್ಹವಾಗಿ ಅಗಲಗೊಳಿಸಲಾಗಿದೆ. ಒಂದು ಕಾಲದಲ್ಲಿ ಟ್ರಾಫಿಕ್‌ ಜಾಮ್‌ ಇದ್ದಲ್ಲಿ, ಇಂದು ನಾವು ಅಭಿವೃದ್ಧಿಯ ವೇಗವನ್ನು ನೋಡುತ್ತಿದ್ದೇವೆ! ಕಳೆದ ದಶಕದಲ್ಲಿ, ವಾರಣಾಸಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಂಪರ್ಕವನ್ನು ಹೆಚ್ಚಿಸಲು ಸುಮಾರು 45,000 ಕೋಟಿ ರೂ. ಈ ಹಣವನ್ನು ಕೇವಲ ಕಾಂಕ್ರೀಟ್‌ ಗಾಗಿ ಖರ್ಚು ಮಾಡಲಾಗಿಲ್ಲ- ಅದು ಟ್ರಸ್ಟ್‌ ಆಗಿ ರೂಪಾಂತರಗೊಂಡಿದೆ. ಇಂದು, ಕಾಶಿಯ ಇಡೀ ಪ್ರದೇಶ ಮತ್ತು ಅದರ ನೆರೆಯ ಜಿಲ್ಲೆಗಳು ಈ ಹೂಡಿಕೆಯ ಲಾಭವನ್ನು ಪಡೆಯುತ್ತಿವೆ.

 

|

ಸ್ನೇಹಿತರೇ,

ಕಾಶಿಯ ಮೂಲಸೌಕರ್ಯದಲ್ಲಿನ ಈ ಹೂಡಿಕೆ ಇಂದಿಗೂ ಮುಂದುವರೆದಿದೆ. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ನಮ್ಮ ಲಾಲ್‌ ಬಹದ್ದೂರ್‌ ಶಾಸ್ತ್ರಿ ವಿಮಾನ ನಿಲ್ದಾಣದ ವಿಸ್ತರಣಾ ಕಾರ್ಯವು ವೇಗವಾಗಿ ಪ್ರಗತಿಯಲ್ಲಿದೆ. ವಿಮಾನ ನಿಲ್ದಾಣ ಬೆಳೆದಂತೆ, ಅದಕ್ಕೆ ಸಂಪರ್ಕಿಸುವ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಅಷ್ಟೇ ಮುಖ್ಯ. ಆದ್ದರಿಂದ, ವಿಮಾನ ನಿಲ್ದಾಣದ ಬಳಿ ಈಗ ಆರು ಪಥದ ಭೂಗತ ಸುರಂಗವನ್ನು ನಿರ್ಮಿಸಲಾಗುವುದು. ಇಂದು, ಭದೋಹಿ, ಗಾಜಿಪುರ ಮತ್ತು ಜೌನ್ಪುರಕ್ಕೆ ಸಂಬಂಧಿಸಿದ ರಸ್ತೆ ಯೋಜನೆಗಳ ಕೆಲಸವೂ ಪ್ರಾರಂಭವಾಗಿದೆ. ಭಿಖಾರಿಪುರ ಮತ್ತು ಮಂಡುವಾಡಿಹ್‌ನಲ್ಲಿ ಫ್ಲೈಓವರ್‌ಗಳ ಬೇಡಿಕೆ ಬಹಳ ಹಿಂದಿನಿಂದಲೂ ಇತ್ತು. ಈ ಬೇಡಿಕೆ ಈಗ ಈಡೇರುತ್ತಿದೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ. ಬನಾರಸ್‌ ನಗರವನ್ನು ಸಾರನಾಥದೊಂದಿಗೆ ಸಂಪರ್ಕಿಸಲು ಹೊಸ ಸೇತುವೆಯನ್ನು ಸಹ ನಿರ್ಮಿಸಲಾಗುವುದು. ಇದು ವಿಮಾನ ನಿಲ್ದಾಣ ಅಥವಾ ಇತರ ಜಿಲ್ಲೆಗಳಿಂದ ಸಾರನಾಥವನ್ನು ತಲುಪಲು ನಗರದ ಮೂಲಕ ಹಾದುಹೋಗುವ ಅಗತ್ಯವನ್ನು ನಿವಾರಿಸುತ್ತದೆ.

ಸ್ನೇಹಿತರೇ,

ಮುಂಬರುವ ತಿಂಗಳುಗಳಲ್ಲಿ, ಈ ಯೋಜನೆಗಳು ಪೂರ್ಣಗೊಂಡ ನಂತರ, ಬನಾರಸ್‌ನಲ್ಲಿ ಪ್ರಯಾಣವು ಗಮನಾರ್ಹವಾಗಿ ಸುಲಭವಾಗಲಿದೆ. ಪ್ರಯಾಣದ ಸಮಯ ಕಡಿಮೆಯಾಗುತ್ತದೆ ಮತ್ತು ವಾಣಿಜ್ಯ ಚಟುವಟಿಕೆ ಹೆಚ್ಚಾಗುತ್ತದೆ. ಇದಲ್ಲದೆ, ಜೀವನೋಪಾಯ ಅಥವಾ ವೈದ್ಯಕೀಯ ಚಿಕಿತ್ಸೆಗಾಗಿ ಬನಾರಸ್‌ಗೆ ಬರುವವರು ಹೆಚ್ಚಿನ ಅನುಕೂಲವನ್ನು ಅನುಭವಿಸುತ್ತಾರೆ. ನಗರದ ರೋಪ್‌ ವೇಯ ಪ್ರಯೋಗವೂ ಕಾಶಿಯಲ್ಲಿ ಪ್ರಾರಂಭವಾಗಿದೆ. ಬನಾರಸ್‌ ಈಗ ಅಂತಹ ಸೌಲಭ್ಯವನ್ನು ನೀಡಲು ವಿಶ್ವದ ಆಯ್ದ ಕೆಲವು ನಗರಗಳೊಂದಿಗೆ ಸೇರಲು ಸಜ್ಜಾಗಿದೆ.

 

|

ಸ್ನೇಹಿತರೇ,

ವಾರಣಾಸಿಯಲ್ಲಿ ಕೈಗೊಳ್ಳಲಾದ ಯಾವುದೇ ಅಭಿವೃದ್ಧಿ ಅಥವಾ ಮೂಲಸೌಕರ್ಯ ಯೋಜನೆಯು ಪೂರ್ವಾಂಚಲದ ಎಲ್ಲಾ ಯುವಕರಿಗೆ ಪ್ರಯೋಜನವನ್ನು ನೀಡುತ್ತದೆ. ಕಾಶಿಯ ಯುವಜನರು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ನಿರಂತರ ಅವಕಾಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡುತ್ತದೆ. ನಾವು ಈಗ 2036ರಲ್ಲಿ ಭಾರತದಲ್ಲಿ ಒಲಿಂಪಿಕ್ಸ್‌ ಆತಿಥ್ಯ ವಹಿಸುವ ಗುರಿಯತ್ತ ಕೆಲಸ ಮಾಡುತ್ತಿದ್ದೇವೆ. ಆದರೆ ಒಲಿಂಪಿಕ್‌ ಪದಕಗಳನ್ನು ಮನೆಗೆ ತರಲು, ಕಾಶಿಯ ಯುವಕರು ಈಗಲೇ ತಮ್ಮ ಸಿದ್ಧತೆಗಳನ್ನು ಪ್ರಾರಂಭಿಸಬೇಕು. ಅದಕ್ಕಾಗಿಯೇ ಇಂದು ಬನಾರಸ್‌ನಲ್ಲಿ ಹೊಸ ಕ್ರೀಡಾಂಗಣಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ನಮ್ಮ ಯುವ ಪ್ರತಿಭೆಗಳಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಸ್ಥಾಪಿಸಲಾಗುತ್ತಿದೆ. ಹೊಸ ಕ್ರೀಡಾ ಸಂಕೀರ್ಣವನ್ನು ಉದ್ಘಾಟಿಸಲಾಗಿದ್ದು, ವಾರಣಾಸಿಯ ನೂರಾರು ಕ್ರೀಡಾಪಟುಗಳು ಪ್ರಸ್ತುತ ತರಬೇತಿ ಪಡೆಯುತ್ತಿದ್ದಾರೆ. ಸಂಸದ್‌ ಖೇಲ್ಕುಡ್‌ ಪ್ರತಿಯೋಗಿತದಲ್ಲಿ ಭಾಗವಹಿಸುವವರಿಗೆ ಇದೇ ಮೈದಾನದಲ್ಲಿತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವೂ ಸಿಕ್ಕಿದೆ.

ಸ್ನೇಹಿತರೇ,

ಇಂದು, ಭಾರತವು ಅಭಿವೃದ್ಧಿ ಮತ್ತು ಪರಂಪರೆ ಎರಡನ್ನೂ ಜೊತೆಯಾಗಿ ಮುನ್ನಡೆಸುತ್ತಿದೆ. ಕಾಶಿ ಈ ಸಮತೋಲನದ ಅತ್ಯುತ್ತಮ ಉದಾಹರಣೆಯಾಗಿ ಹೊರಹೊಮ್ಮುತ್ತಿದೆ. ಇಲ್ಲಿ, ಪವಿತ್ರ ಗಂಗಾ ಹರಿಯುತ್ತದೆ, ಮತ್ತು ಅದರೊಂದಿಗೆ ಭಾರತೀಯ ಪ್ರಜ್ಞೆಯ ಹೊಳೆ ಹರಿಯುತ್ತದೆ. ಭಾರತದ ಆತ್ಮವು ಅದರ ವೈವಿಧ್ಯತೆಯಲ್ಲಿನೆಲೆಸಿದೆ ಮತ್ತು ಕಾಶಿ ಆ ಚೈತನ್ಯದ ಅತ್ಯಂತ ಸ್ಪಷ್ಟ ಪ್ರತಿಬಿಂಬವಾಗಿದೆ. ಕಾಶಿಯ ಪ್ರತಿಯೊಂದು ನೆರೆಹೊರೆಯೂ ವಿಶಿಷ್ಟ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಮತ್ತು ಪ್ರತಿ ಬೀದಿಯು ಭಾರತದ ವಿಭಿನ್ನ ಬಣ್ಣವನ್ನು ಬಹಿರಂಗಪಡಿಸುತ್ತದೆ. ಕಾಶಿ-ತಮಿಳು ಸಂಗಮಂನಂತಹ ಉಪಕ್ರಮಗಳು ಈ ಏಕತೆಯ ಬಂಧಗಳನ್ನು ಬಲಪಡಿಸುತ್ತಿವೆ ಎಂದು ನನಗೆ ಸಂತೋಷವಾಗಿದೆ. ಈಗ, ಏಕ್ತಾ ಮಾಲ್‌ಅನ್ನು ಸಹ ಇಲ್ಲಿಸ್ಥಾಪಿಸಲು ಸಜ್ಜಾಗಿದೆ. ಈ ಏಕತಾ ಮಾಲ್‌ ಭಾರತದ ವೈವಿಧ್ಯತೆಯನ್ನು ಆಚರಿಸುತ್ತದೆ, ದೇಶಾದ್ಯಂತದ ವಿವಿಧ ಜಿಲ್ಲೆಗಳ ಉತ್ಪನ್ನಗಳನ್ನು ಒಂದೇ ಸೂರಿನಡಿ ಪ್ರದರ್ಶಿಸುತ್ತದೆ.

 

|

ಸ್ನೇಹಿತರೇ,

ಇತ್ತೀಚಿನ ವರ್ಷಗಳಲ್ಲಿ, ಉತ್ತರ ಪ್ರದೇಶವು ತನ್ನ ಆರ್ಥಿಕ ಭೂದೃಶ್ಯ ಮತ್ತು ದೃಷ್ಟಿಕೋನವನ್ನು ಬದಲಾಯಿಸಿದೆ. ಉತ್ತರ ಪ್ರದೇಶ ಇನ್ನು ಮುಂದೆ ಕೇವಲ ಸಾಮರ್ಥ್ಯ‌ದ ಭೂಮಿಯಾಗಿ ಉಳಿದಿಲ್ಲ; ಇದು ಈಗ ಸಂಕಲ್ಪ, ಶಕ್ತಿ ಮತ್ತು ಸಾಧನೆಯ ಭೂಮಿಯಾಗುತ್ತಿದೆ. ಇಂದು, ‘ಮೇಡ್‌ ಇನ್‌ ಇಂಡಿಯಾ’ ಎಂಬ ನುಡಿಗಟ್ಟು ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತದೆ. ಭಾರತೀಯ ನಿರ್ಮಿತ ಸರಕುಗಳು ಈಗ ಅಂತಾರಾಷ್ಟ್ರೀಯ ಬ್ರಾಂಡ್‌ಗಳಾಗಿ ಹೊರಹೊಮ್ಮುತ್ತಿವೆ. ಅನೇಕ ಸ್ಥಳೀಯ ಉತ್ಪನ್ನಗಳು ಭೌಗೋಳಿಕ ಸೂಚಕ (ಜಿಐ) ಟ್ಯಾಗ್‌ ಪಡೆದಿವೆ. ಜಿಐ ಟ್ಯಾಗ್‌ ಕೇವಲ ಲೇಬಲ್‌ ಅಲ್ಲ; ಇದು ಒಂದು ಪ್ರದೇಶದ ವಿಶಿಷ್ಟ ಗುರುತಿನ ಪ್ರಮಾಣಪತ್ರವಾಗಿದೆ. ಒಂದು ನಿರ್ದಿಷ್ಟ ಉತ್ಪನ್ನವು ಒಂದು ನಿರ್ದಿಷ್ಟ ಭೂಮಿಯಲ್ಲಿಬೇರೂರಿದೆ ಎಂದು ಇದು ಸೂಚಿಸುತ್ತದೆ. ಜಿಐ ಟ್ಯಾಗ್‌ ಎಲ್ಲಿಗೆ ಪ್ರಯಾಣಿಸುತ್ತದೆಯೋ, ಅದು ಡಾಗತಿಕ ಮಾರುಕಟ್ಟೆಗಳಿಗೆ ಹೆಬ್ಬಾಗಿಲನ್ನು ತೆರೆಯುತ್ತದೆ.

ಸ್ನೇಹಿತರೇ,

ಇಂದು, ಜಿಐ ಟ್ಯಾಗಿಂಗ್‌ನಲ್ಲಿಉತ್ತರ ಪ್ರದೇಶವು ರಾಷ್ಟ್ರವನ್ನು ಮುನ್ನಡೆಸುತ್ತಿದೆ! ಇದು ನಮ್ಮ ಕಲೆ, ನಮ್ಮ ಉತ್ಪನ್ನಗಳು ಮತ್ತು ನಮ್ಮ ಕರಕುಶಲತೆಗೆ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಮನ್ನಣೆಯನ್ನು ಪ್ರತಿಬಿಂಬಿಸುತ್ತದೆ. ವಾರಣಾಸಿ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳ 30 ಕ್ಕೂ ಹೆಚ್ಚು ಉತ್ಪನ್ನಗಳಿಗೆ ಈಗ ಜಿಐ ಟ್ಯಾಗ್‌ ನೀಡಲಾಗಿದೆ. ವಾರಣಾಸಿಯ ತಬಲಾ ಮತ್ತು ಶೆಹನಾಯಿಯಿಂದ ಹಿಡಿದು ಅದರ ಗೋಡೆಯ ವರ್ಣಚಿತ್ರಗಳು, ಥಂಡೈ, ಕೆಂಪು ತುಂಬಿದ ಮೆಣಸಿನಕಾಯಿಗಳು (ಲಾಲ್‌ ಭರ್ವಾ ಮಿರ್ಚ್‌ನ), ಕೆಂಪು ಪೇಡಾ ಮತ್ತು ತ್ರಿವರ್ಣ ಬರ್ಫಿ - ಪ್ರತಿಯೊಬ್ಬರಿಗೂ ಈಗ ಜಿಐ ಟ್ಯಾಗ್‌ ಮೂಲಕ ಹೊಸ ಗುರುತಿನ ಪಾಸ್‌ಪೋರ್ಟ್‌ ನೀಡಲಾಗಿದೆ. ಜೌನ್ಪುರದ ಇಮಾರ್ತಿ, ಮಥುರಾದ ಸಂಝಿ ಕಲೆ, ಬುಂದೇಲ್‌ಖಂಡ್‌ನ ಕಾಥಿಯಾ ಗೋಧಿ, ಪಿಲಿಭಿತ್ನ ಕೊಳಲುಗಳು, ಪ್ರಯಾಗ್‌ರಾಜ್‌ನ ಮುಂಜ್‌ ಕ್ರಾಫ್ಟ್‌, ಬರೇಲಿಯ ಜರ್ದೋಜಿ, ಚಿತ್ರಕೂಟದ ಮರಕುಶಲ ಮತ್ತು ಲಖಿಂಪುರ್‌ ಖೇರಿಯ ಥರು ಜರ್ದೋಜಿ ಮುಂತಾದ ರಾಜ್ಯದಾದ್ಯಂತದ ಹಲವಾರು ಉತ್ಪನ್ನಗಳಿಗೆ ಜಿಐ ಟ್ಯಾಗ್‌ಗಳನ್ನು ನೀಡಲಾಗಿದೆ. ಉತ್ತರ ಪ್ರದೇಶದ ಮಣ್ಣಿನ ಪರಿಮಳವು ಇನ್ನು ಮುಂದೆ ಗಾಳಿಯಲ್ಲಿಮಾತ್ರ ಉಳಿಯುವುದಿಲ್ಲ- ಅದು ಈಗ ಗಡಿಗಳನ್ನು ದಾಟುತ್ತದೆ ಎಂದು ಇದು ಸೂಚಿಸುತ್ತದೆ.

ಸ್ನೇಹಿತರೇ,

ಕಾಶಿಯನ್ನು ಸಂರಕ್ಷಿಸುವವನು ಭಾರತದ ಆತ್ಮವನ್ನೇ ಕಾಪಾಡುತ್ತಾನೆ. ನಾವು ಕಾಶಿಯನ್ನು ಸಬಲೀಕರಣಗೊಳಿಸುವುದನ್ನು ಮುಂದುವರಿಸಬೇಕು. ನಾವು ಕಾಶಿಯನ್ನು ಸುಂದರವಾಗಿ, ರೋಮಾಂಚಕವಾಗಿ ಮತ್ತು ಕನಸಿನಂತೆ ಇಡಬೇಕು. ನಾವು ಕಾಶಿಯ ಪ್ರಾಚೀನ ಚೈತನ್ಯವನ್ನು ಅದರ ಆಧುನಿಕ ರೂಪದೊಂದಿಗೆ ಒಗ್ಗೂಡಿಸುತ್ತಲೇ ಇರಬೇಕು. ಈ ಸಂಕಲ್ಪದೊಂದಿಗೆ, ನಿಮ್ಮ ಕೈಗಳನ್ನು ಮೇಲಕ್ಕೆತ್ತಿ ಮತ್ತು ಮತ್ತೊಮ್ಮೆ ಹೇಳಲು ನನ್ನೊಂದಿಗೆ ಸೇರಿಕೊಳ್ಳಿ:

ನಮಃ ಪಾರ್ವತಿ ಪತಾಯೇ, ಹರ ಹರ ಮಹಾದೇವ.

ತುಂಬ ಧನ್ಯವಾದಗಳು.

 

  • MUKESH KUMAR SHARMA May 06, 2025

    नमो नमो
  • Dalbir Chopra EX Jila Vistark BJP May 04, 2025

    जय हो
  • Rahul Naik May 03, 2025

    🙏🏻🙏🏻🙏🏻🙏🏻🙏🏻🙏🏻
  • Kukho10 May 03, 2025

    PM MODI DESERVE THE BESTEST LEADER IN INDIA!
  • Akhani Dharmendra maneklal May 02, 2025

    B j p Akhani Dharmendra maneklal gujrat patan shankheswra modi shaheb mate mrvathi drtoa nathi hu
  • Akhani Dharmendra maneklal May 02, 2025

    B J P AKHANI DHARMENDRA MANEKLAL GUJRAT PATAN SHANKHESWRA MODI SHAHEB MATE MRVATHI DRTOA NATHI HU
  • Akhani Dharmendra maneklal May 02, 2025

    B J P AKHANI DHARMENDRA MANEKLAL GUJRAT PATAN SHANKHESWRA GUJRAT SE MANE APOR MENT APO AE SE HU AVISH
  • Akhani Dharmendra maneklal May 02, 2025

    b j p Akhani Dharmendra maneklal gujrat patan shankheswra modi shaheb mate mrvathi drtoa nathi
  • Akhani Dharmendra maneklal May 02, 2025

    b j p Akhani Dharmendra maneklal gujrat patan shankheswra modi shaheb mate modia shaheb mate modia
  • Akhani Dharmendra maneklal May 02, 2025

    B J P AKHANI DHARMENDRA MANEKLAL GUJRAT PATAN SHANKHESWRA MODI SHAHEB MATE HU MRVATHI DRTOA NATHI
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Why ‘Operation Sindoor’ Surpasses Nomenclature And Establishes Trust

Media Coverage

Why ‘Operation Sindoor’ Surpasses Nomenclature And Establishes Trust
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 9 ಮೇ 2025
May 09, 2025

India’s Strength and Confidence Continues to Grow Unabated with PM Modi at the Helm