Quoteಓಖಾ ಮುಖ್ಯ ಭೂಭಾಗ ಮತ್ತು ಬೇತ್ ದ್ವಾರಕಾವನ್ನು ಸಂಪರ್ಕಿಸುವ ಸುದರ್ಶನ ಸೇತು ಉದ್ಘಾಟನೆ ಮಾಡಿದರು
Quoteವಾಡಿನಾರ್ ಮತ್ತು ರಾಜ್‌ಕೋಟ್-ಓಖಾದಲ್ಲಿ ಪೈಪ್ ಲೈನ್ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು
Quoteರಾಜ್‌ಕೋಟ್-ಜೇತಲ್ಸರ್‌-ಸೋಮನಾಥ್ ಮತ್ತು ಜೇತಲ್ಸರ್‌-ವನ್ಸ್‌ಜಾಲಿಯಾ ರೈಲು ವಿದ್ಯುದ್ದೀಕರಣ ಯೋಜನೆಗಳನ್ನು ಸಮರ್ಪಿಸಿದರು
Quoteರಾಷ್ಟ್ರೀಯ ಹೆದ್ದಾರಿ 927ರ ಧೋರಾಜಿ-ಜಮಕಂದೋರ್ನಾ-ಕಲವಾಡ್ ವಿಭಾಗದ ಅಗಲೀಕರಣಕ್ಕೆ ಶಂಕುಸ್ಥಾಪನೆ
Quoteಜಾಮ್‌ನಗರದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದರು
Quoteಸಿಕ್ಕಾ ಉಷ್ಣ ವಿದ್ಯುತ್ ಸ್ಥಾವರದಲ್ಲಿ ʻಫ್ಲೂ ಗ್ಯಾಸ್ ಡಿಸಲ್ಫರೈಸೇಶನ್ʼ(ಎಫ್‌ಜಿಡಿ) ಸಿಸ್ಟಮ್ ಸ್ಥಾಪನೆಗೆ ಶಂಕುಸ್ಥಾಪನೆ ನೆವೇರಿಸಿದರು
Quote"ಕೇಂದ್ರ ಮತ್ತು ಗುಜರಾತ್‌ನಲ್ಲಿ ಡಬಲ್ ಇಂಜಿನ್ ಸರ್ಕಾರಗಳು ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಿವೆ"
Quote"ಇತ್ತೀಚೆಗೆ, ಅನೇಕ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವ ಸುಯೋಗ ನನಗೆ ಸಿಕ್ಕಿದೆ. ನಾನು ಇಂದು ದ್ವಾರಕಾ ಧಾಮದಲ್ಲಿ ಅದೇ ದೈವತ್ವದ ಅನುಭವಕ್ಕೆ ಸಾಕ್ಷಿಯಾಗಿದ್ದೇನೆ"
Quote"ಮುಳುಗಡೆಯಾಗಿರುವ ದ್ವಾರಕಾ ನಗರದ ಆಳಕ್ಕೆ ನಾನು ಇಳಿಯುತ್ತಿದ್ದಂತೆ, ದೈವತ್ವದ ಭವ್ಯತೆಯ ಪ್ರಜ್ಞೆ ನನ್ನನ್ನು ಆವರಿಸಿತು"
Quote"ಸುದರ್ಶನ ಸೇತುವಿನ ವಿಚಾರದಲ್ಲಿ – ಏನು ಕನಸು ಕಂಡಿದ್ದೆವೋ ಅದಕ್ಕೆ ಅಡಿಪಾಯ ಹಾಕಲಾಗಿತ್ತು, ಇಂದು ಅದು ಈಡೇರಿದೆ"
Quote"ಆಧುನಿಕ ಸಂಪರ್ಕವು ಸಮೃದ್ಧ ಮತ್ತು ಬಲವಾದ ರಾಷ್ಟ್ರವನ್ನು ನಿರ್ಮಿಸುವ ಮಾರ್ಗವಾಗಿದೆ"
Quote'ವಿಕಾಸವೂ ಇರಲಿ, ಪರಂಪರೆಯೂ ಇರಲಿʼ(ವಿಕಾಸ್ ಭಿ ವಿರಾಸತ್ ಭಿ) ಮಂತ್ರದೊಂದಿಗೆ ಧಾರ್ಮಿಕ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ
Quote"ಹೊಸ ಆಕರ್ಷಣೆಗಳು ಮತ್ತು ಸಂಪರ್ಕದೊಂದಿಗೆ, ಗುಜರಾತ್ ಪ್ರವಾಸೋದ್ಯಮದ ಕೇಂದ್ರವಾಗುತ್ತಿದೆ"
Quote"ಸಂಕಲ್ಪದ ಮೂಲಕ ಸಾಧನೆಗೆ ಸೌರಾಷ್ಟ್ರದ ಭೂಮಿಯು ದೊಡ್ಡ ಉದಾಹರಣೆಯಾಗಿದೆ"

ದ್ವಾರಕಾಧೀಶ್ ಕಿ - ಜೈ!

ದ್ವಾರಕಾಧೀಶ್ ಕಿ - ಜೈ!

ದ್ವಾರಕಾಧೀಶ್ ಕಿ - ಜೈ!

ವೇದಿಕೆಯಲ್ಲಿ ಉಪಸ್ಥಿತರಿರುವ ಗುಜರಾತ್ ನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಮತ್ತು ಗುಜರಾತ್ ರಾಜ್ಯ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಶ್ರೀ ಸಿ.ಆರ್. ಪಾಟೀಲ್, ಇತರ ಗೌರವಾನ್ವಿತ ಗಣ್ಯರು ಮತ್ತು ಗುಜರಾತ್ ನ ನನ್ನ ಸಹೋದರ ಸಹೋದರಿಯರೇ,

ಮೊದಲನೆಯದಾಗಿ, ನನ್ನನ್ನು ಸ್ವಾಗತಿಸಿದ ನನ್ನ ಅಹಿರ್ ಸಹೋದರಿಯರಿಗೆ ನಾನು ನನ್ನ ಗೌರವವನ್ನು ಸಲ್ಲಿಸುತ್ತೇನೆ ಮತ್ತು ಅವರಿಗೆ ನನ್ನ ಪ್ರೀತಿಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಆಗಿತ್ತು. ಸುಮಾರು 37,000 ಅಹಿರ್ ಸಹೋದರಿಯರು ದ್ವಾರಕಾದಲ್ಲಿ ಗರ್ಬಾ ನೃತ್ಯವನ್ನು ನಡೆಸುತ್ತಿದ್ದರು ಮತ್ತು ಜನರು ನನಗೆ ಹೆಮ್ಮೆಯಿಂದ ಹೇಳುತ್ತಿದ್ದರು, "ಸರ್, ದ್ವಾರಕಾದಲ್ಲಿ ಸುಮಾರು 37,000 ಅಹಿರ್ ಸಹೋದರಿಯರು ಇದ್ದರು!" ನಾನು ಹೇಳಿದೆ, “ನೀವು ಗರ್ಬಾವನ್ನು ನೋಡಿದ್ದೀರಿ, ಆದರೆ ಅದರಲ್ಲಿ ಇನ್ನೊಂದು ವಿಶೇಷ ಅಂಶವಿದೆ; ಆ 37,000 ಅಹಿರ್ ಸಹೋದರಿಯರು ಗರ್ಬಾವನ್ನು ನಡೆಸುತ್ತಿದ್ದಾಗ, ಅವರು ತಮ್ಮ ದೇಹದಲ್ಲಿ ಕನಿಷ್ಠ 25,000 ಕಿಲೋಗ್ರಾಂಗಳಷ್ಟು ಚಿನ್ನವನ್ನು ಹೊಂದಿದ್ದರು. ಇದು ನಾನು ಹೇಳುತ್ತಿರುವ ಸಂಪ್ರದಾಯದ ಸಾಮಾನ್ಯ ಸರಾಸರಿ ಸಂಖ್ಯೆ. ಗರ್ಬಾ ಸಮಯದಲ್ಲಿ ಅವರು ತಮ್ಮ ದೇಹದ ಮೇಲೆ ಸುಮಾರು 25,000 ಕಿಲೋಗ್ರಾಂಗಳಷ್ಟು ಚಿನ್ನವನ್ನು ಧರಿಸಿದ್ದರು ಎಂದು ತಿಳಿದಾಗ, ಜನರು ಆಶ್ಚರ್ಯಚಕಿತರಾದರು. ನನ್ನನ್ನು ಸ್ವಾಗತಿಸಿ ಆಶೀರ್ವದಿಸಿದ ಎಲ್ಲಾ ತಾಯ್ತನದ ಸ್ವರೂಪ ವ್ಯಕ್ತಿಗಳಿಗೆ ನಾನು ತಲೆಬಾಗಿ ನಮಸ್ಕರಿಸುತ್ತೇನೆ ಮತ್ತು ಎಲ್ಲಾ ಅಹಿರ್ ಸಹೋದರಿಯರಿಗೆ ನನ್ನ ಗೌರವಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

 

|

ಶ್ರೀ ಕೃಷ್ಣನ ಭೂಮಿಯಾದ ದ್ವಾರಕಾಧಾಮಕ್ಕೆ ಗೌರವಪೂರ್ವಕವಾಗಿ ನಮಸ್ಕರಿಸುತ್ತೇನೆ. ಶ್ರೀಕೃಷ್ಣನು ದೇವಭೂಮಿ ದ್ವಾರಕಾದಲ್ಲಿ ದ್ವಾರಕಾಧೀಶನಾಗಿ ನೆಲೆಸಿದ್ದಾನೆ. ಇಲ್ಲಿ ಏನೇ ಆಗಲಿ ದ್ವಾರಕಾಧೀಶನ ಇಚ್ಛೆ. ಬೆಳಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವ ಭಾಗ್ಯ ಲಭಿಸಿತು. ದ್ವಾರಕಾ ಚಾರ್ ಧಾಮ್ ಮತ್ತು ಸಪ್ತ ಪುರಿ ಎರಡರ ಭಾಗವಾಗಿದೆ ಎಂದು ಹೇಳಲಾಗುತ್ತದೆ. ಆದಿ ಶಂಕರಾಚಾರ್ಯರು ಇಲ್ಲಿನ ನಾಲ್ಕು ಪೀಠಗಳಲ್ಲಿ ಒಂದಾದ ಶಾರದ ಪೀಠವನ್ನು ಸ್ಥಾಪಿಸಿದರು. ಇಲ್ಲಿ ನಾಗೇಶ್ವರ ಜ್ಯೋತಿರ್ಲಿಂಗ, ರುಕ್ಮಣಿ ದೇವಿಯ ದೇವಸ್ಥಾನ ಮತ್ತು ಇತರ ನಂಬಿಕೆಯ ಕೇಂದ್ರಗಳಿವೆ. ಇತ್ತೀಚೆಗೆ, ನನ್ನ 'ದೇಶ್ ಕಾಜ್' (ರಾಷ್ಟ್ರೀಯ ಕರ್ತವ್ಯಗಳು) ನಡುವೆ, ನಾನು ದೇಶಾದ್ಯಂತ ವಿವಿಧ ಪವಿತ್ರ ಸ್ಥಳಗಳಿಗೆ 'ದೇವ್ ಕಾಜ್' (ತೀರ್ಥಯಾತ್ರೆಗಳು) ಕೈಗೊಳ್ಳಲು ಅದೃಷ್ಟಶಾಲಿಯಾಗಿದ್ದೇನೆ. ಇಂದು, ನಾನು ಇಲ್ಲಿ ದ್ವಾರಕಾ ಧಾಮದಲ್ಲಿ ಆ ದಿವ್ಯ ಪ್ರಭೆಯನ್ನು ಅನುಭವಿಸುತ್ತಿದ್ದೇನೆ. ಇಂದು ಬೆಳಿಗ್ಗೆ, ನನಗೆ ಮತ್ತೊಂದು ಅನುಭವವಾಯಿತು, ಅದು ನನ್ನೊಂದಿಗೆ ಜೀವನಕ್ಕಾಗಿ ಉಳಿಯುತ್ತದೆ. ಸಮುದ್ರದ ಆಳಕ್ಕೆ ಧುಮುಕಲು ಮತ್ತು ಪ್ರಾಚೀನ ದ್ವಾರಕೆಯನ್ನು ವೀಕ್ಷಿಸಲು ನನಗೆ ಅವಕಾಶ ಸಿಕ್ಕಿತು. ಪುರಾತತ್ತ್ವಜ್ಞರು ಸಮುದ್ರದಲ್ಲಿ ಮುಳುಗಿರುವ ದ್ವಾರಕೆಯ ಬಗ್ಗೆ ಸಾಕಷ್ಟು ಬರೆದಿದ್ದಾರೆ. ನಮ್ಮ ಗ್ರಂಥಗಳು ದ್ವಾರಕೆಯನ್ನು ವ್ಯಾಪಕವಾಗಿ ಉಲ್ಲೇಖಿಸುತ್ತವೆ –

भविष्यति पुरी रम्या सुद्वारा प्रार्ग्य-तोरणा।
चयाट्टालक केयूरा पृथिव्याम् ककुदोपमा॥
(ಭವಿಷ್ಯತಿ ಪುರಿ ರಮ್ಯಾ ಸುದ್ವಾರಾ ಪ್ರಾಗ್ಯೃ-ತೋರಣ.
ಚಯಟ್ಟಾಲಕ ಕೇಯೂರ ಪೃಥಿವ್ಯಾಮ್ ಕಕುದೋಪಮಾ॥)

ಬೇರೆ ರೀತಿಯಲ್ಲಿ ಹೇಳುವುದಾದರೆ, ಸುಂದರವಾದ ದ್ವಾರಗಳು ಮತ್ತು ಎತ್ತರದ ಕಟ್ಟಡಗಳನ್ನು ಹೊಂದಿರುವ ಈ ನಗರವು ಭೂಮಿಯ ಮೇಲಿನ ಶಿಖರದಂತೆ ಇದ್ದಿರಬೇಕು. ಈ ದ್ವಾರಕಾ ನಗರವನ್ನು ಸ್ವತಃ ವಿಶ್ವಕರ್ಮನು ನಿರ್ಮಿಸಿದನು ಎಂದು ಹೇಳಲಾಗುತ್ತದೆ. ದ್ವಾರಕಾ ನಗರವು ಅದರ ಸಂಘಟನೆ ಮತ್ತು ಅಭಿವೃದ್ಧಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ಇಂದು, ನಾನು ಆಳವಾದ ಸಮುದ್ರದ ತಟದಲ್ಲಿ ದ್ವಾರಕಾ ಜಿಯನ್ನು ವೀಕ್ಷಿಸುತ್ತಿರುವಾಗ, ಆ ಪ್ರಾಚೀನ ವೈಭವವನ್ನು, ಆ ದಿವ್ಯವಾದ ಸೆಳವು ನನ್ನೊಳಗೆ ಆಳವಾಗಿ ಅನುಭವಿಸುತ್ತಿದ್ದೆ. ನಾನು ಭಗವಾನ್ ಶ್ರೀ ಕೃಷ್ಣ, ದ್ವಾರಕಾಧೀಶನಿಗೆ ನನ್ನ ನಮನಗಳನ್ನು ಸಲ್ಲಿಸಿದೆ. ನಾನು ಶ್ರೀಕೃಷ್ಣನನ್ನು ಸ್ಮರಿಸುವಾಗ,  ಅಲ್ಲಿ ಅರ್ಪಿಸಲು ನವಿಲು ಗರಿಯನ್ನು ಸಹ ನನ್ನೊಂದಿಗೆ ಕೊಂಡೊಯ್ಯುತ್ತಿದ್ದೆ ಎಂದುಕೊಂಡು ಬಹಳ ಆನಂದವಾಯಿತು. ಅನೇಕ ವರ್ಷಗಳಿಂದ ನನಗೆ ಬಹಳ ಕುತೂಹಲವಿತ್ತು ನಾನು ಪುರಾತತ್ತ್ವ ಶಾಸ್ತ್ರಜ್ಞರಿಂದ ಐತಿಹಾಸಿಕ ಮಾಹಿತಿ ಕೇಳಿ ಕಲಿತಾಗ, ಎಂದಾದರೂ ಸಮುದ್ರದೊಳಗೆ ಹೋಗಿ ಆ ದ್ವಾರಕಾ ನಗರದ ಅವಶೇಷಗಳನ್ನು ಪೂಜ್ಯಭಾವದಿಂದ ಸೇವೆ ಸಲ್ಲಿಸುವ ಆಸೆ ನನಗಿತ್ತು. ನನ್ನ ಆ ಆಸೆ ಬಹಳ ವರ್ಷಗಳ ನಂತರ ಇಂದು ಈಡೇರಿದೆ. ನಾನು ಸಮುದ್ರದಾಳದಲ್ಲಿ ಮುಳುಗಿದ್ದೇನೆ ಮತ್ತು ನನ್ನ ಮನಸ್ಸು ಭಾವನೆಗಳಿಂದ ತುಂಬಿದೆ. ದಶಕಗಳ ಕಾಲ ಆ ಕನಸನ್ನು ಪೋಷಿಸಿ ಅಂತಿಮವಾಗಿ ಆ ಪವಿತ್ರ ಭೂಮಿಯನ್ನು ಮುಟ್ಟಿದ ನಂತರ ನಾನು ಈಗ ಎಷ್ಟು ಆಳವಾದ ಸಂತೋಷವನ್ನು ಅನುಭವಿಸುತ್ತಿದ್ದೇನೆ ಎಂದು ಒಮ್ಮೆ ಊಹಿಸಿಕೊಳ್ಳಿ..

 

|

ಸ್ನೇಹಿತರೇ,

21ನೇ ಶತಮಾನದ ಭರತದ ವೈಭವದ ದರ್ಶನವೂ ನನ್ನ ಕಣ್ಣುಗಳಲ್ಲಿ ಸುತ್ತುತ್ತಿತ್ತು ಮತ್ತು ನಾನು ಬಹಳ ಕಾಲ ಸಮುದ್ರದ ಆಳದಲ್ಲಿ ನೀರಿನ ಒಳಗಿದ್ದೆ. ಮತ್ತು ಇಂದು ತಡವಾಗಿ ಇಲ್ಲಿಗೆ ಬರಲು ಕಾರಣವೆಂದರೆ ನಾನು ಸ್ವಲ್ಪ ಸಮಯದವರೆಗೆ ನೀರಿನ ಅಡಿಯಲ್ಲಿಯೇ ಇದ್ದೆ. ಸಾಗರದ ದ್ವಾರಕೆಯ ದರ್ಶನದ ಮೂಲಕ ನಾನು ‘ವಿಕಸಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ಸಂಕಲ್ಪವನ್ನು ಕಂಡೆ, ‘ವಿಕಸಿತ ಭಾರತ’ ಸಂಕಲ್ಪ ಬಲಪಡಿಸಿದ್ದೇನೆ.

ಸ್ನೇಹಿತರೇ,

ಇಂದು ಸುದರ್ಶನ ಸೇತು ಉದ್ಘಾಟನೆ ಮಾಡುವ ಭಾಗ್ಯ ನನ್ನದಾಗಿದೆ. ಆರು ವರ್ಷಗಳ ಹಿಂದೆ ಈ ಸೇತುವೆಯ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಈ ಸೇತುವೆಯು ಓಖಾವನ್ನು ಬೇಂಟ್ ದ್ವಾರಕಾ ದ್ವೀಪಕ್ಕೆ ಸಂಪರ್ಕಿಸುತ್ತದೆ. ಇದು ದ್ವಾರಕಾಧೀಶನ ಭೇಟಿಯನ್ನು ಸುಲಭಗೊಳಿಸುವುದು ಮಾತ್ರವಲ್ಲದೆ ಈ ಸ್ಥಳದ ದೈವಿಕ ಸೌಂದರ್ಯವನ್ನು ಹೆಚ್ಚಿಸುತ್ತದೆ. ನಾನು ಈ ಕನಸನ್ನು ಕಲ್ಪಿಸಿಕೊಂಡೆ, ಅದರ ಅಡಿಪಾಯವನ್ನು ಹಾಕಿದೆ ಮತ್ತು ಅದನ್ನು ಇಂದು ಸಾಕಾರಗೊಳಿಸಿದೆ - ಇದು ದೇವರನ್ನು ಸಾಕಾರಗೊಳಿಸುವ ಜನರ ಸೇವಕ ಮೋದಿಯ ಭರವಸೆ. ಸುದರ್ಶನ ಸೇತು ಕೇವಲ ಜನರ ಅನುಕೂಲಕ್ಕಾಗಿ ಅಲ್ಲ; ಇದು ಎಂಜಿನಿಯರಿಂಗ್ ನ ಅದ್ಭುತವೂ ಆಗಿದೆ. ಮತ್ತು ಸ್ಟ್ರಕ್ಚರಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಸುದರ್ಶನ ಸೇತುವನ್ನು ಅಧ್ಯಯನ ಮಾಡಬೇಕೆಂದು ನಾನು ಬಯಸುತ್ತೇನೆ. ಭಾರತದಲ್ಲಿ ಇದುವರೆಗಿನ ನಿರ್ಮಿಸಿದ ಅತಿ ಉದ್ದದ ಕೇಬಲ್ ಆಧಾರಿತ ಸೇತುವೆ ಇದಾಗಿದೆ. ಈ ಆಧುನಿಕ ಮತ್ತು ಭವ್ಯವಾದ ಸೇತುವೆಗಾಗಿ ನಾನು ದೇಶದ ಎಲ್ಲಾ ನಾಗರಿಕರನ್ನು ಅಭಿನಂದಿಸುತ್ತೇನೆ.

ಇಂದು ಇಂತಹ ಮಹತ್ವದ ಕೆಲಸ ನಡೆಯುತ್ತಿರುವಾಗ ಹಳೆಯ ನೆನಪೊಂದು ಮರು ನೆನಪಾಗುತ್ತಿದೆ. ರಷ್ಯಾದಲ್ಲಿ ಅಸ್ಟ್ರಾಖಾನ್ ಎಂಬ ಹೆಸರಿನ ರಾಜ್ಯವಿದೆ ಮತ್ತು ಗುಜರಾತ್ ಅಸ್ಟ್ರಾಖಾನ್ ಜೊತೆಗೆ ಸಹೋದರ-ರಾಜ್ಯ ಸಂಬಂಧವನ್ನು ಹೊಂದಿದೆ. ನಾನು (ಗುಜರಾತ್ ನ) ಮುಖ್ಯಮಂತ್ರಿಯಾಗಿದ್ದಾಗ ಅವರು ನನ್ನನ್ನು ರಷ್ಯಾದ ಅಸ್ಟ್ರಾಖಾನ್ ರಾಜ್ಯಕ್ಕೆ ಆಹ್ವಾನಿಸಿದರು. ಮತ್ತು ನಾನು ಅಲ್ಲಿಗೆ ಹೋದಾಗ, ಅತ್ಯುತ್ತಮ ಮಾರುಕಟ್ಟೆ, ದೊಡ್ಡ ಮಾಲ್ ಗೆ ಓಖಾ ಹೆಸರಿಡಲಾಗಿದೆ ಎಂದು ಕಂಡು ನನಗೆ ಆಶ್ಚರ್ಯವಾಯಿತು. ಎಲ್ಲವನ್ನೂ ಓಖಾ ಎಂದು ಹೆಸರಿಸಲಾಯಿತು. ನಾನು ಕೇಳಿದೆ, "ಅದಕ್ಕೆ ಓಖಾ ಎಂದು ಏಕೆ ಹೆಸರಿಸಲಾಗಿದೆ?" ಆದ್ದರಿಂದ ಶತಮಾನಗಳ ಹಿಂದೆ, ಜನರು ವ್ಯಾಪಾರಕ್ಕಾಗಿ ಇಲ್ಲಿಂದ ಹೋಗುತ್ತಿದ್ದರು, ಮತ್ತು ಏನು ಇಲ್ಲಿಂದ ಯಾವತ್ತೂ ಏನನ್ನೂ ಕಳುಹಿಸಿದ್ದರೂ ಅಲ್ಲಿನ ಜನತೆಯ ಪಾಲಿಗದು ಅತ್ಯುತ್ತಮ ಗುಣಮಟ್ಟವೆಂದು ಪರಿಗಣಿಸಲಾಗಿದೆಯಂತೆ. ಅದಕ್ಕಾಗಿಯೇ ಶತಮಾನಗಳ ನಂತರವೂ, ಅಂಗಡಿಗಳು ಮತ್ತು ಮಾಲ್ ಗಳಿಗೆ ಓಖಾ ಹೆಸರಿಟ್ಟಾಗ, ಜನರು ಅಲ್ಲಿ ಉತ್ತಮ ಗುಣಮಟ್ಟದ ವಸ್ತುಗಳನ್ನು ಕಾಣಬಹುದು ಎಂದು ನಂಬುತ್ತಾರೆ. ಶತಮಾನಗಳ ಹಿಂದೆ ಓಖಾ ನೀಡಿದ ಗೌರವವು ಸುದರ್ಶನ ಸೇತು ನಿರ್ಮಾಣದ ನಂತರ ಮತ್ತೊಮ್ಮೆ ವಿಶ್ವ ಭೂಪಟದಲ್ಲಿ ಮಿನುಗಲಿದೆ ಮತ್ತು ಓಖಾದ ಹೆಸರು ಮತ್ತಷ್ಟು ಮಿನುಗಲಿದೆ.

 

|

ಸ್ನೇಹಿತರೇ,

ಇಂದು ಸುದರ್ಶನ ಸೇತುವನ್ನು ನೋಡುತ್ತಿದ್ದಂತೆ ಹಲವು ಹಳೆಯ ನೆನಪುಗಳು ಮರುಕಳಿಸುತ್ತಿವೆ. ಮೊದಲು ದ್ವಾರಕಾ ಮತ್ತು ಬೇಂಟ್ ದ್ವಾರಕಾದ ಜನರು ಫೆರಿ ಬೋಟ್‌ಗಳನ್ನು ಸಾರಿಗೆಗಾಗಿ ಅವಲಂಬಿಸಬೇಕಾಗಿತ್ತು. ಅವರು ಮೊದಲು ಸಮುದ್ರದ ಮೂಲಕ ಮತ್ತು ನಂತರ ರಸ್ತೆಯ ಮೂಲಕ ಬಹಳ ದೂರ ಪ್ರಯಾಣಿಸಬೇಕಾಗಿತ್ತು. ಪ್ರಯಾಣಿಕರು ತೊಂದರೆಗಳನ್ನು ಎದುರಿಸಿದರು, ಮತ್ತು ಕೆಲವೊಮ್ಮೆ, ಸಮುದ್ರದ ಎತ್ತರದ ಅಲೆಗಳ ಕಾರಣದಿಂದಾಗಿ ದೋಣಿ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಇದರಿಂದ ಭಕ್ತರಿಗೆ ಸಾಕಷ್ಟು ತೊಂದರೆಯಾಯಿತು. ನಾನು ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿಯ ಸಹಚರರು ನನ್ನನ್ನು ಭೇಟಿ ಮಾಡಿ ಸೇತುವೆಯ ಅಗತ್ಯದ ಬಗ್ಗೆ ಮಾತನಾಡುತ್ತಿದ್ದರು. ಮತ್ತು ನಮ್ಮ ಶಿವ-ಶಿವ್, ನಮ್ಮ ಬಾಬುಬಾ, ಈ ಕೆಲಸವನ್ನು ನನ್ನಿಂದ ಮಾಡಿಸಬೇಕು ಎಂಬ ಅಜೆಂಡಾವನ್ನು ಹೊಂದಿದ್ದರು ಎಂದು ಹೇಳುತ್ತಿದ್ದರು. ಇಂದು, ಬಾಬುಬಾ ಅತ್ಯಂತ ಸಂತೋಷವಾಗಿರುವುದನ್ನು ನಾನು ನೋಡುತ್ತೇನೆ.

ಸ್ನೇಹಿತರೇ,

ಆಗ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಮುಂದೆ ನಾನು ಈ ವಿಷಯವನ್ನು ಪದೇ ಪದೇ ಪ್ರಸ್ತಾಪಿಸುತ್ತಿದ್ದೆ, ಆದರೆ ಅವರು ಈ ಬಗ್ಗೆ ಗಮನ ಹರಿಸಲಿಲ್ಲ. ಈ ಸುದರ್ಶನ ಸೇತುವಿನ ನಿರ್ಮಾಣವನ್ನು ಶ್ರೀ ಕೃಷ್ಣನು ನನ್ನ ಹಣೆಬರಹದಲ್ಲಿ ಬರೆದಿದ್ದಾನೆ. ದೇವರ ಆಜ್ಞೆಯನ್ನು ಪಾಲಿಸುವ ಮೂಲಕ ಈ ಜವಾಬ್ದಾರಿಯನ್ನು ನಿಭಾಯಿಸಲು ನನಗೆ ಸಂತೋಷವಾಗಿದೆ. ಈ ಸೇತುವೆಯ ನಿರ್ಮಾಣದಿಂದ ದೇಶಾದ್ಯಂತ ಬರುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಸೇತುವೆಯ ಮತ್ತೊಂದು ವಿಶೇಷವೆಂದರೆ ಅದರ ಅದ್ಭುತವಾದ ದೀಪಗಳು, ಸೇತುವೆಯ ಮೇಲೆ ಅಳವಡಿಸಲಾದ ಸೌರ ಫಲಕಗಳಿಂದ ಶಕ್ತಿಯನ್ನು ಪಡೆಯಲಾಗುತ್ತದೆ. ಸುದರ್ಶನ ಸೇತುವಿನಲ್ಲಿ ಹನ್ನೆರಡು ಪ್ರವಾಸಿ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ. ಇಂದು ಈ ಗ್ಯಾಲರಿಗಳಿಗೂ ಭೇಟಿ ನೀಡಿದ್ದೇನೆ. ಅದ್ಭುತ ಮತ್ತು ಸುಂದರವಾಗಿ ರಚಿಸಲಾಗಿದೆ. ಈ ಗ್ಯಾಲರಿಗಳ ಮೂಲಕ ಜನರು ಮಿತಿಯಿಲ್ಲದ ಗಾತ್ರದಲ್ಲಿ ನೀಲಿ ಸಮುದ್ರವನ್ನು ಸನಿಹದಿಂದ ವೀಕ್ಷಿಸಲು ಸಾಧ್ಯವಾಗುತ್ತದೆ.

ಸ್ನೇಹಿತರೇ,

ಇಂದಿನ ಈ ಶುಭ ಸಂದರ್ಭದಲ್ಲಿ, ದ್ವಾರಕೆಯ ಪುಣ್ಯಭೂಮಿಯ ಜನರನ್ನು ನಾನು ಸಹ ಶ್ಲಾಘಿಸಲು ಬಯಸುತ್ತೇನೆ. ಅವರು ಇಲ್ಲಿ ಆರಂಭಿಸಿರುವ ಸ್ವಚ್ಛತಾ ಕಾರ್ಯಗಳು ಮತ್ತು ದ್ವಾರಕಾದಲ್ಲಿ ನಡೆಯುತ್ತಿರುವ ಅಗಾಧವಾದ ಸ್ವಚ್ಛತಾ ಕಾರ್ಯಗಳ ಬಗ್ಗೆ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ನನಗೆ ಕಳುಹಿಸುತ್ತಿದ್ದ ವಿಡಿಯೊಗಳು ಗಮನಾರ್ಹವಾಗಿವೆ. ನೀವೆಲ್ಲರೂ ಸಂತೋಷವಾಗಿದ್ದೀರಾ? ಈಗ ಎಲ್ಲವೂ ಸ್ವಚ್ಛವಾಗಿ ಕಾಣುತ್ತಿರುವುದರಿಂದ ಸ್ವಚ್ಛತೆಯ ಪ್ರಯತ್ನಗಳಿಂದ ನೀವೆಲ್ಲರೂ ಸಂತಸಗೊಂಡಿದ್ದೀರಾ? ಆದರೆ ಈಗ ನಿಮ್ಮ ಜವಾಬ್ದಾರಿ ಏನು? ನಾನು ಮತ್ತೆ ಸ್ವಚ್ಛಗೊಳಿಸಲು ಹಿಂತಿರುಗಬೇಕೇ? ನೀವೆಲ್ಲರೂ ಅದನ್ನು ಸದಾ ಸ್ವಚ್ಛವಾಗಿಡಲು ಹೊಂದಿರುವ ಮನಸ್ಸನ್ನು ಖಚಿತಪಡಿಸಿಕೊಳ್ಳುತ್ತೀರಾ? ನಿಮ್ಮ ಕೈಗಳನ್ನು ಮೇಲಕ್ಕೆತ್ತಿ, "ಈಗ ಹೇಳಿ,  ಇನ್ನುಮುಂದೆ ನಾವು ದ್ವಾರಕಾವನ್ನು ಕೊಳಕು ಮಾಡಲು ಬಿಡುವುದಿಲ್ಲ" ಎಂದು ಹೇಳಿ. ನೋಡಿ, ಇಲ್ಲಿಗೆ ವಿದೇಶದಿಂದ ಜನ ಬರುತ್ತಾರೆ…. ಅನೇಕ ಭಕ್ತರು ಆಗಮಿಸುತ್ತಾರೆ…. ಅವರು ಶುಚಿತ್ವವನ್ನು ನೋಡಿದಾಗ, ಅವರ ಹೃದಯದ ಅರ್ಧದಷ್ಟು ನಿಮ್ಮಿಂದ ಈ ಶುಚಿತ್ವದಿಂದಲೇ  ಗೆಲ್ಲುವುದು ಸಾಧ್ಯ.

ಸ್ನೇಹಿತರೇ,

ನವಭಾರತದ ಅಭಿವೃದ್ಧಿಯ ಬಗ್ಗೆ ನಾನು ನಾಗರಿಕರಿಗೆ ಭರವಸೆ ನೀಡಿದಾಗ, ಪ್ರತಿದಿನ ನನ್ನ ಮೇಲೆ ನಿಂದನೆಗಳನ್ನು ಮಾಡಲು ಇಷ್ಟಪಡುವ ಈ ವಿರೋಧ ಪಕ್ಷದ ಸದಸ್ಯರು ಅದನ್ನು ಅಣಕಿಸುತ್ತಿದ್ದರು. ಇಂದು, ಜನರು ತಮ್ಮ ಸ್ವಂತ ಕಣ್ಣುಗಳಿಂದ ಹೊಸ ಭಾರತದ ಹೊರಹೊಮ್ಮುವಿಕೆಯನ್ನು ವೀಕ್ಷಿಸುತ್ತಿದ್ದಾರೆ. ದೇಶವನ್ನು ದೀರ್ಘಕಾಲ ಆಳಿದವರಿಗೆ ಇಚ್ಛಾಶಕ್ತಿಯ ಕೊರತೆಯಿತ್ತು; ಸಾಮಾನ್ಯ ಜನರಿಗೆ ಅನುಕೂಲ ಕಲ್ಪಿಸುವ ಅವರ ಉದ್ದೇಶ ಮತ್ತು ಸಮರ್ಪಣೆ ದೋಷಪೂರಿತವಾಗಿತ್ತು. ಕಾಂಗ್ರೆಸ್ ಪಕ್ಷದ ಸಂಪೂರ್ಣ ಶಕ್ತಿಯು ಒಂದು ಕುಟುಂಬವನ್ನು ಉತ್ತೇಜಿಸುವುದರ ಮೇಲೆ ಕೇಂದ್ರೀಕೃತವಾಗಿತ್ತು; ಎಲ್ಲವನ್ನೂ ಒಂದೇ ಕುಟುಂಬಕ್ಕಾಗಿ ಮಾಡಬೇಕಾದರೆ, ರಾಷ್ಟ್ರವನ್ನು ಕಟ್ಟುವ ಆಲೋಚನೆ ಹೇಗೆ ಬರುತ್ತದೆ? 5 ವರ್ಷಗಳ ಕಾಲ ಸರ್ಕಾರವನ್ನು ಹೇಗೆ ನಡೆಸಬೇಕು ಮತ್ತು ಹಗರಣಗಳನ್ನು ಹೇಗೆ ಹತ್ತಿಕ್ಕಬೇಕು ಎಂಬುದಕ್ಕೆ ಅವರ ಸಂಪೂರ್ಣ ಅಧಿಕಾರವನ್ನು ಹೂಡಲಾಯಿತು. ಅದಕ್ಕಾಗಿಯೇ 2014 ರ ಹಿಂದಿನ 10 ವರ್ಷಗಳಲ್ಲಿ, ಭಾರತವು ಕೇವಲ 11 ನೇ ಅತಿದೊಡ್ಡ ಆರ್ಥಿಕತೆಯಾಗಲು ಸಾಧ್ಯವಾಯಿತು. ಆರ್ಥಿಕತೆಯು ತುಂಬಾ ಚಿಕ್ಕದಾಗಿದ್ದಾಗ, ಅಂತಹ ವಿಶಾಲವಾದ ದೇಶದ ಅಂತಹ ಭವ್ಯವಾದ ಕನಸುಗಳನ್ನು ಈಡೇರಿಸುವ ಸಾಮರ್ಥ್ಯ ಇರಲಿಲ್ಲ. ಮೂಲಸೌಕರ್ಯಕ್ಕೆ ಸ್ವಲ್ಪ ಬಜೆಟ್‌ ಮೀಸಲಿಟ್ಟರೂ ಅವರು ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ. ದೇಶದಲ್ಲಿ ಟೆಲಿಕಾಂ ಮೂಲಸೌಕರ್ಯವನ್ನು ಹೆಚ್ಚಿಸುವ ಸಮಯ ಬಂದಾಗ, ಕಾಂಗ್ರೆಸ್ 2ಜಿ ಹಗರಣವನ್ನು ಮಾಡಿತು. ದೇಶದಲ್ಲಿ ಕ್ರೀಡಾ ಮೂಲಸೌಕರ್ಯಗಳನ್ನು ಆಧುನೀಕರಿಸುವ ಅವಕಾಶ ಬಂದಾಗ, ಕಾಂಗ್ರೆಸ್ ಕಾಮನ್‌ವೆಲ್ತ್ ಹಗರಣವನ್ನು ಮಾಡಿತು. ದೇಶದಲ್ಲಿ ರಕ್ಷಣಾ ಮೂಲಸೌಕರ್ಯವನ್ನು ಬಲಪಡಿಸುವ ಸಮಯ ಬಂದಾಗ, ಕಾಂಗ್ರೆಸ್ ಹೆಲಿಕಾಪ್ಟರ್ ಮತ್ತು ಜಲಾಂತರ್ಗಾಮಿ ಹಗರಣಗಳನ್ನು ಮಾಡಿತು. ದೇಶದ ಪ್ರತಿಯೊಂದು ಅವಶ್ಯಕತೆಯಲ್ಲೂ ಕಾಂಗ್ರೆಸ್ ನಂಬಿಕೆ ದ್ರೋಹ ಮಾಡಿತು.

ಸ್ನೇಹಿತರೇ,

2014ರಲ್ಲಿ ನಿಮ್ಮೆಲ್ಲರ ಆಶೀರ್ವಾದದೊಂದಿಗೆ ನನ್ನನ್ನು ದೆಹಲಿಗೆ ಕಳುಹಿಸಿದಾಗ ದೇಶವನ್ನು ಲೂಟಿ ಮಾಡಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದೆ. ಕಾಂಗ್ರೆಸ್ ಕಾಲದಲ್ಲಿ ನಡೆಯುತ್ತಿದ್ದ ಸಾವಿರಾರು ಕೋಟಿ ಹಗರಣಗಳು ಈಗ ನಿಂತಿವೆ. ಕಳೆದ 10 ವರ್ಷಗಳಲ್ಲಿ, ನಾವು ದೇಶವನ್ನು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡಿದ್ದೇವೆ ಮತ್ತು ಇದರ ಫಲಿತಾಂಶವು ದೇಶದಾದ್ಯಂತ ನೀವು ವೀಕ್ಷಿಸುತ್ತಿರುವ ಭವ್ಯವಾದ, ಮನೋಹರವಾದ ಮತ್ತು ದೈವಿಕ ನಿರ್ಮಾಣ ಕಾರ್ಯವಾಗಿದೆ. ಒಂದೆಡೆ, ನಮ್ಮ ದೈವಿಕ ಯಾತ್ರಾ ಸ್ಥಳಗಳು ಆಧುನಿಕ ಅವತಾರದಲ್ಲಿ ಬರುತ್ತಿವೆ, ಮತ್ತೊಂದೆಡೆ, ಬೃಹತ್ ಯೋಜನೆಗಳಿಂದ ಭಾರತದ ಹೊಸ ಚಿತ್ರಣ ಹೊರಹೊಮ್ಮುತ್ತಿದೆ. ಇಂದು, ನೀವು ಗುಜರಾತ್ ನ ಅತಿ ಉದ್ದದ ಕೇಬಲ್ ಆಧಾರಿತ ಸೇತುವೆಯನ್ನು ವೀಕ್ಷಿಸುತ್ತಿದ್ದೀರಿ. ಕೆಲವೇ ದಿನಗಳ ಹಿಂದೆ ಮುಂಬೈನಲ್ಲಿ ದೇಶದ ಅತಿ ಉದ್ದದ ಸಮುದ್ರ ಸೇತುವೆ ನಿರ್ಮಾಣವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚೆನಾಬ್ ನದಿಗೆ ನಿರ್ಮಿಸಲಾದ ಭವ್ಯವಾದ ಸೇತುವೆ ಈಗ ಪ್ರಪಂಚದಾದ್ಯಂತ ಚರ್ಚೆಯಾಗಿದೆ. ತಮಿಳುನಾಡಿನಲ್ಲಿ ದೇಶದ ಮೊದಲ ಲಂಬವಾದ ಲಿಫ್ಟ್ ಸೇತುವೆಯಾದ ಹೊಸ ಪಂಬನ್ ಸೇತುವೆಯ ಕೆಲಸವು ವೇಗವಾಗಿ ಪ್ರಗತಿಯಲ್ಲಿದೆ. ಅಸ್ಸಾಂನಲ್ಲಿ ಭಾರತದ ಅತಿ ಉದ್ದದ ನದಿ ಸೇತುವೆಯನ್ನು ಸೇರಿದಂತೆ  ಕಳೆದ 10 ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಲವಾರು ಬೃಹತ್  ಸೇತುವೆಗಳನ್ನು ನಿರ್ಮಿಸಲಾಗಿದೆ.

 

|

ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಲವಾರು ಬೃಹತ್  ಸೇತುವೆಗಳನ್ನು ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣದಲ್ಲಿ ನಿರ್ಮಾಣಕ್ಕಾಗಿ ಹರಾಜು ನಡೆಯುತ್ತಿದೆ. ಈ ಆಧುನಿಕ ಸಂಪರ್ಕವು ಸಮರ್ಥ ಮತ್ತು ಬಲಿಷ್ಠ ರಾಷ್ಟ್ರವನ್ನು ನಿರ್ಮಿಸುವ ಮಾರ್ಗವಾಗಿದೆ.

ಸ್ನೇಹಿತರೇ,

ಸಂಪರ್ಕವು ಸುಧಾರಿಸಿದಾಗ, ಅದರ ನೇರ ಪರಿಣಾಮವು ದೇಶದ ಪ್ರವಾಸೋದ್ಯಮದ ಮೇಲೆ ಕಂಡುಬರುತ್ತದೆ. ಗುಜರಾತ್ ನಲ್ಲಿ ಹೆಚ್ಚುತ್ತಿರುವ ಸಂಪರ್ಕವು ರಾಜ್ಯವನ್ನು ಪ್ರಮುಖ ಪ್ರವಾಸಿ ಕೇಂದ್ರವಾಗಿ ಪರಿವರ್ತಿಸುತ್ತಿದೆ. ಇಂದು ಗುಜರಾತ್ 22 ಅಭಯಾರಣ್ಯಗಳನ್ನು ಮತ್ತು 4 ರಾಷ್ಟ್ರೀಯ ಉದ್ಯಾನವನಗಳನ್ನು ಹೊಂದಿದೆ. ಸಾವಿರಾರು ವರ್ಷಗಳ ಹಳೆಯ ಬಂದರು ನಗರ ಲೋಥಾಲ್ ಪ್ರಪಂಚದಾದ್ಯಂತ ಚರ್ಚೆಯಾಗುತ್ತಿದೆ. ಇಂದು, ಅಹಮದಾಬಾದ್ ನಗರ, ರಾಣಿ ಕಿ ವಾವ್, ಚಂಪನೇರ್ ಮತ್ತು ಧೋಲಾವಿರಾ ವಿಶ್ವ ಪರಂಪರೆಯ ತಾಣಗಳಾಗಿ ಮಾರ್ಪಟ್ಟಿವೆ. ದ್ವಾರಕಾದಲ್ಲಿರುವ ಶಿವರಾಜಪುರ ಬೀಚ್ ನೀಲಿ ಧ್ವಜವನ್ನು ಹೊಂದಿದೆ. ಅಹಮದಾಬಾದ್ ವಿಶ್ವ ಪರಂಪರೆಯ ನಗರವಾಗಿದೆ. ಏಷ್ಯಾದ ಅತಿ ಉದ್ದದ ರೋಪ್ ವೇ ನಮ್ಮ ಗಿರ್ನಾರ್ ಪರ್ವತದಲ್ಲಿದೆ. ಏಷ್ಯಾಟಿಕ್ ಸಿಂಹಗಳು ನಮ್ಮ ಗಿರ್ ಕಾಡುಗಳಲ್ಲಿ ಕಂಡುಬರುತ್ತವೆ. ವಿಶ್ವದ ಅತಿ ಎತ್ತರದ ಪ್ರತಿಮೆ, ಸರ್ದಾರ್ ಸಾಹಬ್ ಅವರ ಏಕತೆಯ ಪ್ರತಿಮೆ ಗುಜರಾತ್‌ನ ಏಕತಾ ನಗರದಲ್ಲಿದೆ. ರನ್ನ ಉತ್ಸವದ ಸಮಯದಲ್ಲಿ, ಪ್ರಪಂಚದಾದ್ಯಂತದ ಪ್ರವಾಸಿಗರ ಜಾತ್ರೆ ಇರುತ್ತದೆ. ಕಚ್ ನಲ್ಲಿರುವ ಧೋರ್ಡೊ ಗ್ರಾಮವು ವಿಶ್ವದ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮಗಳಲ್ಲಿ ಒಂದಾಗಿದೆ. ಪಾಕಿಸ್ತಾನದ ಗಡಿ ಪ್ರದೇಶ ನಾಡ ಬೆಟ್ ಈಗ ದೇಶಭಕ್ತಿ ಮತ್ತು ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗುತ್ತಿದೆ. ‘ವಿಕಾಸ್’ (ಅಭಿವೃದ್ಧಿ) ಮತ್ತು ‘ವಿರಾಸತ್’ (ಪರಂಪರೆ) ಮಂತ್ರವನ್ನು ಅನುಸರಿಸುವ ಮೂಲಕ ಗುಜರಾತ್ ನಲ್ಲಿ ನಂಬಿಕೆಯ ಸ್ಥಳಗಳನ್ನು ಸುಂದರಗೊಳಿಸಲಾಗುತ್ತಿದೆ. ದ್ವಾರಕಾ, ಸೋಮನಾಥ, ಪಾವಗಡ, ಮೊಧೇರಾ, ಅಂಬಾಜಿ ಮುಂತಾದ ಎಲ್ಲಾ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅಂಬಾಜಿಯಲ್ಲಿ 52 ಶಕ್ತಿ ಪೀಠಗಳ ದರ್ಶನವನ್ನು ಒಂದೇ ಕಡೆ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ.

ಇಂದು ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರ ಮೊದಲ ಆಯ್ಕೆ ಗುಜರಾತ್ ಆಗುತ್ತಿದೆ. 2022 ರಲ್ಲಿ ಭಾರತಕ್ಕೆ ಬಂದ 85 ಲಕ್ಷಕ್ಕೂ ಹೆಚ್ಚು ಪ್ರವಾಸಿಗರಲ್ಲಿ ಪ್ರತಿ ಐದನೇ ಪ್ರವಾಸಿಗರು ಗುಜರಾತ್‌ಗೆ ಬಂದಿದ್ದಾರೆ. ಕಳೆದ ವರ್ಷ ಆಗಸ್ಟ್ ವೇಳೆಗೆ ಸುಮಾರು 1.5 ದಶಲಕ್ಷ ಪ್ರವಾಸಿಗರು ಗುಜರಾತ್ ಗೆ ಬಂದಿದ್ದರು. ಕೇಂದ್ರ ಸರ್ಕಾರ ವಿದೇಶಿ ಪ್ರವಾಸಿಗರಿಗೆ ನೀಡುವ ಇ-ವೀಸಾ ಸೌಲಭ್ಯದಿಂದ ಗುಜರಾತ್ ಗೂ ಲಾಭವಾಗಿದೆ. ಪ್ರವಾಸಿಗರ ಸಂಖ್ಯೆಯಲ್ಲಿನ ಈ ಹೆಚ್ಚಳವು ಗುಜರಾತ್ ನಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ.

 

|

ಸ್ನೇಹಿತರೇ,

ನಾನು ಸೌರಾಷ್ಟ್ರಕ್ಕೆ ಬಂದಾಗಲೆಲ್ಲಾ ಇಲ್ಲಿಂದ ಹೊಸ ಶಕ್ತಿಯೊಂದಿಗೆ ಹಿಂತಿರುಗುತ್ತೇನೆ. ಸೌರಾಷ್ಟ್ರದ ಭೂಮಿ ‘ಸಂಕಲ್ಪ’ (ಸಂಕಲ್ಪ) ದಿಂದ ‘ಸಿದ್ಧಿ’ (ಯಶಸ್ಸು) ವರೆಗೆ ಉತ್ತಮ ಸ್ಫೂರ್ತಿಯಾಗಿದೆ. ಇಂದು, ಸೌರಾಷ್ಟ್ರದ ಅಭಿವೃದ್ಧಿಯನ್ನು ನೋಡಿದರೆ, ಹಿಂದೆ ಇಲ್ಲಿ ಜೀವನವು ಎಷ್ಟು ಕಷ್ಟಕರವಾಗಿತ್ತು ಎಂದು ಯಾರಿಗೂ ತಿಳಿದಿರುವುದಿಲ್ಲ. ಸೌರಾಷ್ಟ್ರದ ಪ್ರತಿ ಕುಟುಂಬ, ಪ್ರತಿ ರೈತ, ಪ್ರತಿ ಹನಿ ನೀರಿಗಾಗಿ ಹಾತೊರೆಯುತ್ತಿದ್ದ ಆ ದಿನಗಳನ್ನು ನಾವು ನೋಡಿದ್ದೇವೆ. ಇಲ್ಲಿಂದ ಜನ ದೂರ ದೂರ ನಡೆದುಕೊಂಡು ವಲಸೆ ಹೋಗುತ್ತಿದ್ದರು. ವರ್ಷವಿಡೀ ಹರಿಯುವ ನದಿಗಳ ನೀರನ್ನು ಅಲ್ಲಿಂದ ಸೌರಾಷ್ಟ್ರ, ಕಛ್ ಗೆ ತರುತ್ತೇವೆ ಎಂದು ಹೇಳಿದಾಗ ಕಾಂಗ್ರೆಸ್ ನವರು ಗೇಲಿ ಮಾಡುತ್ತಿದ್ದರು. ಅವರಿಗೆ ತಮಾಷೆ ವಿಷಯವಾಗಿತ್ತು. ಆದರೆ ಇಂದು ಸೌನಿ ಎಂಬುದು ಸೌರಾಷ್ಟ್ರದ ಭವಿಷ್ಯವನ್ನೇ ಬದಲಿಸಿದ ಯೋಜನೆಯಾಗಿದೆ. ಈ ಯೋಜನೆಯಡಿ, 1300 ಕಿಲೋಮೀಟರ್‌ಗಿಂತ ಹೆಚ್ಚು ಪೈಪ್‌ಲೈನ್‌ಗಳನ್ನು ಹಾಕಲಾಗಿದೆ ಮತ್ತು ಈ ಪೈಪ್‌ಲೈನ್‌ಗಳು ಚಿಕ್ಕದಾಗಿರುವುದಿಲ್ಲ, ಪೈಪ್‌ನೊಳಗೆ ಮಾರುತಿ ಕಾರು ಓಡಬಹುದು. ಇದರಿಂದ ಸೌರಾಷ್ಟ್ರದ ನೂರಾರು ಹಳ್ಳಿಗಳಿಗೆ ನೀರಾವರಿ ಮತ್ತು ಕುಡಿಯುವ ನೀರು ತಲುಪಿದೆ. ಈಗ ಸೌರಾಷ್ಟ್ರದ ರೈತರು, ಪಶುಪಾಲಕರು ಮತ್ತು ಮೀನುಗಾರರು ಸಮೃದ್ಧರಾಗುತ್ತಿದ್ದಾರೆ. ಮುಂದಿನ ಕೆಲವು ವರ್ಷಗಳಲ್ಲಿ ಇಡೀ ಸೌರಾಷ್ಟ್ರ ಮತ್ತು ಗುಜರಾತ್ ಯಶಸ್ಸಿನ ಹೊಸ ಎತ್ತರವನ್ನು ತಲುಪುತ್ತದೆ ಎಂದು ನಾನು ನಂಬುತ್ತೇನೆ. ದ್ವಾರಕಾಧೀಶರ ಆಶೀರ್ವಾದ ನಮ್ಮ ಮೇಲಿದೆ. ನಾವು ಒಟ್ಟಾಗಿ ಸೌರಾಷ್ಟ್ರ ಮತ್ತು ಗುಜರಾತ್ ಅನ್ನು ಅಭಿವೃದ್ಧಿಪಡಿಸುತ್ತೇವೆ ಮತ್ತು ಗುಜರಾತ್ ಅಭಿವೃದ್ಧಿಗೊಂಡಾಗ ಭಾರತವು ಅಭಿವೃದ್ಧಿ ಹೊಂದುತ್ತದೆ.

ಮತ್ತೊಮ್ಮೆ, ಈ ಭವ್ಯವಾದ ಸೇತುವೆಗಾಗಿ ನಾನು ನಿಮ್ಮೆಲ್ಲರನ್ನು ನನ್ನ ಹೃದಯದ ಕೆಳಗಿನಿಂದ ಅಭಿನಂದಿಸುತ್ತೇನೆ. ಮತ್ತು ಈಗ ನಾನು ನನ್ನ ದ್ವಾರಕಾ ನಿವಾಸಿಗಳಿಗೆ ಮನವಿ ಮಾಡುತ್ತೇನೆ, ಪ್ರಪಂಚದಾದ್ಯಂತ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಹೇಗೆ ಆಕರ್ಷಿಸುವುದು ಎಂಬುದನ್ನು ಗಮನದಲ್ಲಿಟ್ಟುಕೊಂಡು , ದಯವಿಟ್ಟು ಅನಿಟ್ಟಿನಲ್ಲಿ ಈಗಲೇ ಮನಸ್ಸು ಮಾಡಿ. ಅವರು ಬಂದ ನಂತರ ಇಲ್ಲೇ ಇರಬೇಕೆಂದು ಅನಿಸಬೇಕು. ನಾನು ನಿಮ್ಮ ಭಾವನೆಯನ್ನು ಗೌರವಿಸುತ್ತೇನೆ. ನನ್ನೊಂದಿಗೆ ಹೇಳಿರಿ:

ದ್ವಾರಕಾಧೀಶ್ ಕಿ - ಜೈ!
ದ್ವಾರಕಾಧೀಶ್ ಕಿ - ಜೈ!
ದ್ವಾರಕಾಧೀಶ್ ಕಿ - ಜೈ!
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!

ತುಂಬ ಧನ್ಯವಾದಗಳು.

  • कृष्ण सिंह राजपुरोहित भाजपा विधान सभा गुड़ामा लानी November 21, 2024

    Jai shree Ram
  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम 🚩 वन्दे मातरम् जय भाजपा विजय भाजपा
  • Devendra Kunwar October 08, 2024

    BJP
  • दिग्विजय सिंह राना September 20, 2024

    हर हर महादेव
  • krishangopal sharma Bjp July 10, 2024

    नमो नमो 🙏 जय भाजपा 🙏
  • krishangopal sharma Bjp July 10, 2024

    नमो नमो 🙏 जय भाजपा 🙏
  • krishangopal sharma Bjp July 10, 2024

    नमो नमो 🙏 जय भाजपा 🙏
  • JBL SRIVASTAVA May 27, 2024

    मोदी जी 400 पार
  • Pradhuman Singh Tomar April 26, 2024

    417
  • Pradhuman Singh Tomar April 26, 2024

    BJP
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s Average Electricity Supply Rises: 22.6 Hours In Rural Areas, 23.4 Hours in Urban Areas

Media Coverage

India’s Average Electricity Supply Rises: 22.6 Hours In Rural Areas, 23.4 Hours in Urban Areas
NM on the go

Nm on the go

Always be the first to hear from the PM. Get the App Now!
...
PM pays tributes to revered Shri Kushabhau Thackeray in Bhopal
February 23, 2025

Prime Minister Shri Narendra Modi paid tributes to the statue of revered Shri Kushabhau Thackeray in Bhopal today.

In a post on X, he wrote:

“भोपाल में श्रद्धेय कुशाभाऊ ठाकरे जी की प्रतिमा पर श्रद्धा-सुमन अर्पित किए। उनका जीवन देशभर के भाजपा कार्यकर्ताओं को प्रेरित करता रहा है। सार्वजनिक जीवन में भी उनका योगदान सदैव स्मरणीय रहेगा।”