Quote"ಸ್ವಚ್ಛ ಭಾರತ ಅಭಿಯಾನ-ನಗರ 2.0'ರ ಗುರಿ ನಗರಗಳನ್ನು ಸಂಪೂರ್ಣವಾಗಿ ಕಸ ಮುಕ್ತಗೊಳಿಸುವುದಾಗಿದೆ"" ಅಮೃತ್ ಅಭಿಯಾನದ ಮುಂದಿನ ಹಂತದಲ್ಲಿ ದೇಶದ ಗುರಿ 'ಒಳಚರಂಡಿ ಮತ್ತು ಮಲತ್ಯಾಜ್ಯ(ಸೆಪ್ಟಿಕ್) ನಿರ್ವಹಣೆಯನ್ನು ಸುಧಾರಿಸುವುದು, ನಮ್ಮ ನಗರಗಳನ್ನು ಜಲ-ಸುರಕ್ಷಿತ ನಗರಗಳನ್ನಾಗಿ ಮಾಡುವುದು ಮತ್ತು ನಮ್ಮ ನದಿಗಳಲ್ಲಿ ಎಲ್ಲಿಯೂ ಒಳಚರಂಡಿ ನೀರು ಹರಿಯುವುದಿಲ್ಲ ಎಂಬುದನ್ನು ಖಾತ್ರಿಪಡಿಸುವುದು"
Quote"ಸ್ವಚ್ಛ ಭಾರತ ಅಭಿಯಾನ ಮತ್ತು ಅಮೃತ್ ಅಭಿಯಾನದ ಪಯಣದಲ್ಲೂ ಒಂದು ಮಹೋದ್ದೇಶವಿದೆ, ಗೌರವವಿದೆ, ಘನತೆ ಇದೆ, ಒಂದು ದೇಶದ ಮಹತ್ವಾಕಾಂಕ್ಷೆ ಇದೆ ಮತ್ತು ಮಾತೃಭೂಮಿಯ ಬಗ್ಗೆ ಎಣೆಯಿಲ್ಲದ ಪ್ರೀತಿಯೂ ಇದೆ"
Quoteಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಗರ ಅಭಿವೃದ್ಧಿಯು ಅಸಮಾನತೆಯನ್ನು ತೊಡೆದುಹಾಕಲು ಒಂದು ದೊಡ್ಡ ಸಾಧನವೆಂದು ನಂಬಿದ್ದರು...... ಸ್ವಚ್ಛ ಭಾರತ ಅಭಿಯಾನ ಮತ್ತು ಅಮೃತ್ ಅಭಿಯಾನದ ಮುಂದಿನ
Quoteಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಗರ ಅಭಿವೃದ್ಧಿಯು ಅಸಮಾನತೆಯನ್ನು ತೊಡೆದುಹಾಕಲು ಒಂದು ದೊಡ್ಡ ಸಾಧನವೆಂದು ನಂಬಿದ್ದರು...... ಸ್ವಚ್ಛ ಭಾರತ ಅಭಿಯಾನ ಮತ್ತು ಅಮೃತ್ ಅಭಿಯಾನದ ಮುಂದಿನ
Quoteಹಂತವು ಬಾಬಾ ಸಾಹೇಬ್ ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ"
Quote&"ಸ್ವಚ್ಛತೆ ಪ್ರತಿಯೊಬ್ಬರಿಗೂ, ಪ್ರತಿದಿನ, ಪ್ರತಿ ಹದಿನೈದು ದಿನಗಳಿಗೊಮ್ಮೆ, ಪ್ರತಿ ವರ್ಷ, ಪೀಳಿಗೆಯಿಂದ ಪೀಳಿಗೆಗೆ ಉತ್ತಮ ಅಭಿಯಾನವಾಗಿದೆ. ಸ್ವಚ್ಛತೆ ಒಂದು ಜೀವನಶೈಲಿ, ಸ್ವಚ್ಛತೆ ಜೀವನ ಮಂತ್ರ"

ನಮಸ್ಕಾರ್! ಈ ಕಾರ್ಯಕ್ರಮದಲ್ಲಿ ನನ್ನೊಂದಿಗೆ ಹಾಜರಿರುವ ನನ್ನ ಸಂಪುಟದ ಸಹೋದ್ಯೋಗಿಗಳಾಗಿರುವ ಶ್ರೀ ಹರ್ದೀಪ್ ಸಿಂಗ್ ಪುರಿ ಜೀ, ಶ್ರೀ ಗಜೇಂದ್ರ ಸಿಂಗ್ ಶೆಖಾವತ್ ಜೀ, ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಜೀ, ಶ್ರೀ ಕೌಶಲ್ ಕಿಶೋರ್ ಜೀ, ಶ್ರೀ ಬಿಶ್ವೇಶ್ವರ ಜೀ, ಎಲ್ಲಾ ರಾಜ್ಯಗಳ ಸಚಿವರೇ, ಮೇಯರ್ ಗಳೇ ಮತ್ತು ನಗರ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರೇ, ಮುನ್ಸಿಪಲ್ ಆಯುಕ್ತರೇ, ಸ್ವಚ್ಛ ಭಾರತ್ ಆಂದೋಲನದ ಮತ್ತು ಅಮೃತ್ ಯೋಜನೆಯ ಎಲ್ಲಾ ಸಹೋದ್ಯೋಗಿಗಳೇ, ಮಹಿಳೆಯರೇ ಮತ್ತು ಮಹನೀಯರೇ!

ಸ್ವಚ್ಛ ಭಾರತ್ ಅಭಿಯಾನದ ಮತ್ತು ಅಮೃತ್ ಅಭಿಯಾನದ ಮುಂದಿನ ಹಂತಕ್ಕಾಗಿ ನಾನು ದೇಶವನ್ನು ಅಭಿನಂದಿಸುತ್ತೇನೆ. 2014ರಲ್ಲಿ, ದೇಶದ ಜನತೆ ಭಾರತವನ್ನು ಬಯಲು ಶೌಚ ಮುಕ್ತವನ್ನಾಗಿ ಮಾಡುವ (ಒ.ಡಿ.ಎಫ್.) ಪ್ರತಿಜ್ಞೆ ಕೈಗೊಂಡರು. ಅವರು ಈ ಪ್ರತಿಜ್ಞೆಯನ್ನು 10 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡುವ ಮೂಲಕ ಈಡೇರಿಸಿದ್ದಾರೆ. ಈಗ ’ಸ್ವಚ್ಛ ಭಾರತ್ ಮಿಶನ್-ನಗರ 2.0’ ಕಸ ಮುಕ್ತ ನಗರಗಳನ್ನು ರೂಪಿಸಲಿದೆ. ಅಂದರೆ ನಗರ ಸಂಪೂರ್ಣ ಕಸ ಮುಕ್ತವಾಗಿರುತ್ತದೆ. ಅಮೃತ್ ಆಂದೋಲನವು ಈ ನಿಟ್ಟಿನಲ್ಲಿ ದೇಶವಾಸಿಗಳಿಗೆ ಬಹಳಷ್ಟು ಸಹಾಯ ಮಾಡಬಲ್ಲುದು. ನಾವು ಶೇಖಡಾ 100 ಸ್ವಚ್ಛ ನೀರು ಲಭ್ಯವಾಗುವಂತೆ ಮಾಡುವಲ್ಲಿ ಮುಂದಡಿ ಇಟ್ಟಿದ್ದೇವೆ. ಮತ್ತು ನಗರಗಳ ತ್ಯಾಜ್ಯವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದೇವೆ. ಅಮೃತ್ ಯೋಜನೆಯ ಮುಂದಿನ ಹಂತದಲ್ಲಿ ದೇಶವು ಕೊಳಚೆ ಮತ್ತು ಸೆಪ್ಟಿಕ್ ನಿರ್ವಹಣೆಯನ್ನು ಹೆಚ್ಚಿಸಿ ನಗರಗಳನ್ನು  ಜಲ ಭದ್ರಗೊಳಿಸಲಿದೆ. ಮತ್ತು ಯಾವುದೇ ಒಳಚರಂಡಿ ತ್ಯಾಜ್ಯ, ಕೊಳಚೆಯು  ನದಿಯನ್ನು ಸೇರದಂತೆ ಖಾತ್ರಿ ಮಾಡಲಿದೆ.

|

ಸ್ನೇಹಿತರೇ,

ಇಂದಿನವರೆಗೆ ಸ್ವಚ್ಛ ಭಾರತ್ ಅಭಿಯಾನ ಮತ್ತು ಅಮೃತ್ ಆಂದೋಲನದ ಪ್ರಯಾಣ ಪ್ರತೀ ದೇಶವಾಸಿಯನ್ನೂ ಹೆಮ್ಮೆಪಡುವಂತೆ ಮಾಡುತ್ತದೆ. ಅದಕ್ಕೊಂದು ಆಂದೋಲನದ ಸ್ವರೂಪವಿದೆ, ಘನತೆ ಇದೆ ಮತ್ತು ದೇಶದ ಮಹತ್ವಾಕಾಂಕ್ಷೆ ಅದರಲ್ಲಿ ಇದೆ ಹಾಗು ತಾಯ್ನಾಡಿನ ಬಗ್ಗೆ ಪ್ರೀತಿ ಇದೆ. ಸ್ವಚ್ಛ ಭಾರತ ಆಂದೋಲನದ ಸಾಧನೆಗಳು ತಮ್ಮ ಕರ್ತವ್ಯಗಳ ಬಗ್ಗೆ ಪ್ರತಿಯೊಬ್ಬ ಭಾರತೀಯರೂ ಹೊಂದಿರುವ ಸೂಕ್ಷ್ಮತ್ವವನ್ನು ಮತ್ತು ಎಚ್ಚರವನ್ನು ತೋರಿಸುತ್ತದೆ.  ಈ ಯಶಸ್ಸಿನ ಹಿಂದೆ ಪ್ರತಿಯೊಬ್ಬ ನಾಗರಿಕರ ಕೊಡುಗೆ, ಕಠಿಣ ದುಡಿಮೆ, ಮತ್ತು ಬೆವರು ಇದೆ. ಪ್ರತೀ ದಿನ ಕಸಬರಿಗೆ ಹಿಡಿದು ಕಸದ ರಸ್ತೆಗಳಲ್ಲಿ ಗುಡಿಸುವ ನಮ್ಮ ನೈರ್ಮಲ್ಯ ಕೆಲಸಗಾರರು ಮತ್ತು ನಮ್ಮ ಸಹೋದರರು ಹಾಗು ಸಹೋದರಿಯರು ನಿಜ ಅರ್ಥದಲ್ಲಿ ಈ ಆಂದೋಲನದ ಹೀರೋಗಳು. ಕೊರೊನಾ ಸಂಕಷ್ಟದ ಕಾಲದಲ್ಲಿ ದೇಶವು ಅವರ ಕೊಡುಗೆಯನ್ನು ನಿಕಟವಾಗಿ ನೋಡಿದೆ ಮತ್ತು ಅದರ ಅನುಭವವನ್ನೂ ಪಡೆದಿದೆ.

ಈ ಸಾಧನೆಗಳಿಗಾಗಿ ಪ್ರತಿಯೊಬ್ಬ ಭಾರತೀಯರನ್ನು ಅಭಿನಂದಿಸುತ್ತ, ನಾನು ’ಸ್ವಚ್ಛ ಭಾರತ್ ಆಂದೋಲನ-2.0 ಮತ್ತು ಅಮೃತ್ 2.0 ಯೋಜನೆಗಳಿಗಾಗಿ  ನನ್ನ ಶುಭಾಶಯಗಳನ್ನು ಹೇಳುತ್ತೇನೆ. ಸಂತೋಷದ ಸಂಗತಿ ಏನೆಂದರೆ ಗಾಂಧಿ ಜಯಂತಿಯ ಮುನ್ನಾ ದಿನ ಹೊಸ ಆರಂಭವೊಂದು ಇಂದು ಸಾಧ್ಯವಾಗುತ್ತಿದೆ. ಈ ಆಂದೋಲನವು ಪೂಜ್ಯ ಬಾಪು ಅವರ ಆದರ್ಶಗಳು ಮತ್ತು ಪ್ರೇರಣೆಯ ಫಲ. ಮತ್ತು ಅದು ಸಾಧನೆಯತ್ತ ಸಾಗುತ್ತಿದೆ. ಸ್ವಚ್ಛತೆಯು ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ನೀಡುವ ಅನುಕೂಲತೆಗಳನ್ನು ಕಲ್ಪಿಸಿಕೊಳ್ಳಿ. ಈ ಮೊದಲು ಶೌಚಾಲಯಗಳ ಲಭ್ಯತೆ ಇಲ್ಲದಿದ್ದುದರಿಂದ ಹಲವು ಮಹಿಳೆಯರು ಮನೆಯಿಂದ  ಹೊರಗೆ ಕೆಲಸಕ್ಕೆ ಹೋಗುತ್ತಿರಲಿಲ್ಲ. ಶಾಲೆಗಳಲ್ಲಿ ಶೌಚಾಲಯಗಳು ಲಭ್ಯ ಇಲ್ಲದಿದ್ದುದರಿಂದ ಹೆಣ್ಣು ಮಕ್ಕಳು ಶಾಲೆ ಬಿಡುತ್ತಿದ್ದರು. ಈಗ ಸಂಗತಿಗಳು ಬದಲಾಗುತ್ತಿವೆ. ಸ್ವಾತಂತ್ರ್ಯದ 75 ನೇ ವರ್ಷದಲ್ಲಿ, ದೇಶದ ಈ ಯಶಸ್ಸನ್ನು,  ಇಂದಿನ ಹೊಸ ನಿರ್ಧಾರಗಳನ್ನು ಪೂಜ್ಯ ಬಾಪು ಅವರ ಪಾದಕ್ಕೆ ಸಮರ್ಪಿಸುತ್ತೇನೆ.

ಸ್ನೇಹಿತರೇ,

ಬಾಬಾ ಸಾಹೇಬ್ ಅವರಿಗೆ ಅರ್ಪಿತವಾದ ಈ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಈ ಕಾರ್ಯಕ್ರಮ ಆಯೋಜನೆಯಾಗಿರುವುದು ನಮ್ಮ ಅದೃಷ್ಟ. ಬಾಬಾ ಸಾಹೇಬ್ ನಗರಾಭಿವೃದ್ಧಿಯು ಅಸಮಾನತೆ ನಿವಾರಣೆ ಮಾಡುವ ಪ್ರಮುಖ ಸಾಧನ ಎಂದು ನಂಬಿದ್ದರು. ಉತ್ತಮ ಬದುಕಿಗಾಗಿ ಹಲವು ಜನರು ಹಳ್ಳಿಗಳಿಂದ ನಗರಗಳಿಗೆ ವಲಸೆ ಬರುತ್ತಾರೆ. ಅವರಿಗೆ ಉದ್ಯೋಗ ದೊರೆತರೂ, ಅವರ ಜೀವನ ಮಟ್ಟ ಹಳ್ಳಿಗಳಲ್ಲಿ ಅವರ ಜೀವನ ಮಟ್ಟಕ್ಕೆ ಹೋಲಿಸಿದರೆ ಇನ್ನೂ ಆಕಾಂಕ್ಷೆಯ ಮಟ್ಟದಲ್ಲಿಯೇ ಇರುತ್ತದೆ. ಇದು ಅವರಿಗೆ ದುಪ್ಪಟ್ಟು ಸಂಕಷ್ಟದಂತೆ. ಅವರು ಮನೆಗಳಿಂದ ಬಹಳ ದೂರದಲ್ಲಿರುತ್ತಾರೆ ಮತ್ತು ಅವರು ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿರುತ್ತಾರೆ. ಬಾಬಾ ಸಾಹೇಬ್ ಅವರು ಈ ಪರಿಸ್ಥಿತಿಯನ್ನು ಬದಲಾಯಿಸುವುದಕ್ಕೆ ಮತ್ತು ಈ  ಅಸಮಾನತೆಯನ್ನು ಕೊನೆಗಾಣಿಸುವುದಕ್ಕೆ ಬಹಳ ಮಹತ್ವ ಕೊಟ್ಟಿದ್ದರು. ಸ್ವಚ್ಛ ಭಾರತ್ ಆಂದೋಲನದ ಮುಂದಿನ ಹಂತ ಮತ್ತು ಅಮೃತ್ ಆಂದೋಲನ ಬಾಬಾಸಾಹೇಬ್ ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ  ಒಂದು ಮಹತ್ವದ ಹೆಜ್ಜೆ.

ಸ್ನೇಹಿತರೇ,

ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ದೇಶವು “ಸಬ್ಕಾ ಪ್ರಯಾಸ್’ ಎಂಬ ಕರೆಯನ್ನು ’ಸಬ್ಕಾ ಸಾತ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್’ ಜೊತೆ ನೀಡಿದೆ. ’ಸಬ್ಕಾ ಪ್ರಯಾಸ್’ (ಪ್ರತಿಯೊಬ್ಬರ ಪ್ರಯತ್ನ) ಎಂಬ ಉತ್ಸಾಹ, ಸ್ಪೂರ್ತಿ ಸ್ವಚ್ಛತೆಗೆ ಬಹಳ ಮುಖ್ಯ. ನಿಮ್ಮಲ್ಲಿ ಅನೇಕರು ದೂರದ ಹಳ್ಳಿ ಪ್ರದೇಶಗಳಿಗೆ ಭೇಟಿ ನೀಡಿರಬಹುದು ಮತ್ತು ಬುಡಕಟ್ಟು ಜನರ ಸಾಂಪ್ರದಾಯಿಕ ಮನೆಗಳನ್ನು ನೋಡಿರಬಹುದು. ಬಹಳ ಕಡಿಮೆ ಸಂಪನ್ಮೂಲಗಳ ನಡುವೆಯೂ ಅವರ ಮನೆಗಳ ಅಲಂಕರಣ ಮತ್ತು ಸ್ವಚ್ಛತೆ ಬಹಳ ಆಕರ್ಷಣೀಯವಾಗಿರುತ್ತದೆ. ನೀವು ಈಶಾನ್ಯಕ್ಕೆ ಹೋಗಿ, ಹಿಮಾಚಲದ ಪರ್ವತಗಳಿಗೆ ಅಥವಾ ಉತ್ತರಾಖಂಡಕ್ಕೆ ಹೋಗಿ, ಅಲ್ಲಿ ಸ್ವಚ್ಛತೆಯಿಂದಾಗಿ ಅವರ ಮನೆಗಳಲ್ಲಿ ಹೊರಹೊಮ್ಮುವ ಧನಾತ್ಮಕ ಶಕ್ತಿಯನ್ನು ನೀವು ಅನುಭವಿಸುತ್ತೀರಿ. ಅವರೊಂದಿಗೆ ನೆಲೆನಿಂತು ನಾವು ಸ್ವಚ್ಛತೆ ಮತ್ತು ಸಂತೋಷದ ನಡುವಣ ಬಹಳ ಆಳವಾದ ಬಾಂಧವ್ಯವನ್ನು ಅರಿಯಬಹುದು.

ನಾನು ಗುಜರಾತಿನ ಮುಖ್ಯಮಂತ್ರಿಯಾದಾಗ ಮತ್ತು ಅಭಿವೃದ್ಧಿಗಾಗಿ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಅನ್ವೇಷಿಸುತ್ತಿದ್ದಾಗ ಬಹಳ ದೊಡ್ಡ ಗಮನ ನೀಡಿದ್ದು ಸ್ವಚ್ಛತೆಯತ್ತ ಮತ್ತು ಪ್ರತಿಯೊಬ್ಬರನ್ನೂ ಇದರ ಜೊತೆ ಜೋಡಿಸುವತ್ತ. ನಿರ್ಮಲ್ ಗುಜರಾತ್ ಆಂದೋಲನವು ಜನಾಂದೋಲನವಾದಾಗ, ಅದು ಬಹಳ ಉತ್ತಮ ಫಲಿತಾಂಶಗಳನ್ನು ನೀಡಿತು. ಇದು ಗುಜರಾತಿಗೆ ಹೊಸ ಗುರುತಿಸುವಿಕೆಯನ್ನು ನೀಡಿತು ಮಾತ್ರವಲ್ಲದೆ, ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರಕಿತು.

ಸಹೋದರರೇ ಮತ್ತು ಸಹೋದರಿಯರೇ,

ಜನಾಂದೋಲನದ ಈ ಉತ್ಸಾಹ, ಸ್ಪೂರ್ತಿ ಸ್ವಚ್ಛ ಭಾರತ್ ಆಂದೋಲನದ ಯಶಸ್ಸಿನ ಹಿಂದಿನ ಶಕ್ತಿ. ಈ ಮೊದಲು ನಗರಗಳ ರಸ್ತೆಗಳಲ್ಲಿ ಕಸ ಕಡ್ದಿ, ಕೊಳಕು ತುಂಬಿ ತುಳುಕುತ್ತಿತ್ತು. ಈಗ ಮನೆಗಳಿಂದ ಕಸ ಸಂಗ್ರಹಣೆಗೆ ಒತ್ತು ನೀಡಲಾಗುತ್ತಿರುವುದು ಮಾತ್ರವಲ್ಲ, ಈಗ ಜನರು ಹಸಿ ಕಸ ಮತ್ತು ಒಣ ಕಸಕ್ಕಾಗಿ ಪ್ರತ್ಯೇಕ ಕಸದ ಬುಟ್ಟಿಗಳನ್ನು ಇಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಮನೆಗಳನ್ನು ಬದಿಗಿಡಿ, ಹೊರಗೆ ಯಾವುದಾದರೂ ಕಸ ಕಂಡರೆ ಜನರು ಸ್ವಚ್ಛತಾ ಆಪ್ ಮೂಲಕ ವರದಿ ಮಾಡುತ್ತಿದ್ದಾರೆ ಮತ್ತು ಇತರ ಜನರೂ ಸ್ವಚ್ಛತೆ ಬಗ್ಗೆ ಜಾಗೃತರಾಗುವಂತೆ ಮಾಡುತ್ತಿದ್ದಾರೆ. ಸ್ವಚ್ಛತಾ ಆಂದೋಲನವನ್ನು ಬಲಪಡಿಸುವ ಉಪಕ್ರಮವನ್ನು ನಮ್ಮ ಈಗಿನ ತಲೆಮಾರು ಕೈಗೆತ್ತಿಕೊಂಡಿರುವುದಕ್ಕೆ ನನಗೆ ಬಹಳ ಸಂತೋಷವಿದೆ. ಚಾಕಲೇಟು, ಅಥವಾ ಟೋಫಿ ಸುತ್ತಿದ ಕಾಗದಗಳ ಚೂರುಗಳನ್ನು ಈಗ ಅಲ್ಲಿಯೇ ನೆಲದ ಮೇಲೆ ಬಿಸಾಡುವ ಪದ್ಧತಿ ಹೋಗಿದೆ, ಬದಲು ಅದನ್ನು ಕಿಸೆಯಲ್ಲಿಟ್ಟುಕೊಂಡು ಬಳಿಕ ವಿಲೇವಾರಿ ಮಾಡಲಾಗುತ್ತಿದೆ. ಈಗ ಸಣ್ಣ ಮಕ್ಕಳು ಕೂಡಾ ಹಿರಿಯರು ಕಸ ಹಾಕದಂತೆ ಮಧ್ಯಪ್ರವೇಶ ಮಾಡುತ್ತಿದ್ದಾರೆ ಹಾಗು ತಮ್ಮ ಅಜ್ಜಂದಿರಿಗೆ ಇದರ ಬಗ್ಗೆ ಹೇಳುತ್ತಿದ್ದಾರೆ, ಮನವಿ ಮಾಡುತ್ತಿದ್ದಾರೆ. ನಗರಗಳಲ್ಲಿಯ ಯುವಜನತೆ ವಿವಿಧ ರೀತಿಯಲ್ಲಿ ಸ್ವಚ್ಛತಾ ಆಂದೋಲನಕ್ಕೆ ಸಹಾಯ ಮಾಡುತ್ತಿದೆ. ಕೆಲವರು ಕಸದಿಂದ ಸಂಪತ್ತು ನಿರ್ಮಾಣ ಮಾಡುತ್ತಿದ್ದಾರೆ, ಇನ್ನು ಕೆಲವರು ಜಾಗೃತಿ ಮೂಡಿಸುವಲ್ಲಿ ನಿರತರಾಗಿದ್ದಾರೆ.

ಸ್ವಚ್ಛ ಭಾರತ್ ಶ್ರೇಯಾಂಕದಲ್ಲಿ ತಮ್ಮ ನಗರ ಮೊದಲ ಸಾಲಿನಲ್ಲಿರಬೇಕು ಎಂಬ ಸ್ಪರ್ಧೆ ಜನರಲ್ಲಿ ಉಂಟಾಗಿದೆ. ಮತ್ತು ಅದರಲ್ಲಿ ಹಿಂದುಳಿದರೆ ನಗರ ಯಾಕೆ ಹಿಂದುಳಿಯಿತು ಎಂಬ ಬಗೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ ಹಾಗು ನಾವು ಯಾಕಾಗಿ ಹಿಂದುಳಿದಿದ್ದೇವೆ ಎಂಬ ಬಗ್ಗೆ ಆತ್ಮವಿಮರ್ಶೆಗಳು ನಡೆಯತೊಡಗಿವೆ. ಶ್ರೇಯಾಂಕದಲ್ಲಿ ನಗರದ ಸಾಧನೆಯ ಬಗ್ಗೆ ಮಾಧ್ಯಮಗಳಲ್ಲೂ ಚರ್ಚೆ ನಡೆಯುತ್ತದೆ. ಒತ್ತಡ ಹೆಚ್ಚತೊಡಗಿದೆ. ಸ್ವಚ್ಛತಾ ಶ್ರೇಯಾಂಕದಲ್ಲಿ ತಮ್ಮ ನಗರ ಮುಂದಿರಬೇಕು, ಮತ್ತು ತಮ್ಮ ನಗರ ಕಸಕಡ್ಡಿಗಳ ಕೊಂಪೆಯಾಗಿರಬಾರದು ಎಂದು ಜನತೆ ಆಶಿಸುತ್ತಿರುವಂತಹ ಪರಿಸರ ಈಗ ನಿರ್ಮಾಣವಾಗಿದೆ. ಇಂದೋರಿನ ಸ್ನೇಹಿತರು, ಅಥವಾ ಟಿ.ವಿ.ಯನ್ನು ನೋಡುತ್ತಿರುವ ಸ್ನೇಹಿತರು ನನ್ನ ಜೊತೆ ಹೆಚ್ಚು ಸಹಮತ ಹೊಂದಿರಬಹುದು. ಇಂದು ಪ್ರತಿಯೊಬ್ಬರಿಗೂ ಗೊತ್ತಿದೆ;  ಸ್ವಚ್ಛತೆಯಲ್ಲಿ ಇಂದೋರ್ ಉನ್ನತ ಸ್ಥಾನದಲ್ಲಿದೆ!. ಇದು ಇಂದೋರಿನ ಜನತೆಯು  ಪರಸ್ಪರ ಹಂಚಿಕೊಂಡು ಮಾಡಿದ ಸಾಧನೆ. ನಾವು ಈಗ ಪ್ರತೀ ನಗರವನ್ನೂ ಇಂತಹ ಸಾಧನೆಯ ಜೊತೆ ಜೋಡಿಸಬೇಕು.

ಸ್ವಚ್ಛತೆಯ ಈ ದೊಡ್ಡ ಆಂದೋಲನದಲ್ಲಿ ತೊಡಗಿಕೊಳ್ಳುವಂತೆ ನಾನು ಪ್ರತೀ ರಾಜ್ಯ ಸರಕಾರಗಳು, ಸ್ಥಳೀಯ ಆಡಳಿತಗಳು ಮತ್ತು ನಗರಗಳ ಮೇಯರ್ ಗಳಿಗೆ ಮನವಿ ಮಾಡುತ್ತೇನೆ. ಕೊರೊನಾ ಕಾಲದಲ್ಲಿ ಕೆಲವು ಹಿಂಜರಿತಗಳಿರಬಹುದು, ಆದರೆ ಈಗ ನಾವು ಹೊಸ ಬಲದೊಂದಿಗೆ ಮುಂದುವರಿಯಬೇಕಾಗಿದೆ. ಸ್ವಚ್ಛತೆ ಎಂಬುದು ಕೆಲವೇ ಜನರ ಒಂದು ದಿನದ, ಒಂದು ಪಾಕ್ಷಿಕ, ಅಥವಾ ಒಂದು ವರ್ಷದ ಹೊಣೆಗಾರಿಕೆ ಮಾತ್ರವೇ ಅಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಸ್ವಚ್ಛತೆ ಎಂಬುದು ಪ್ರತಿಯೊಬ್ಬರ, ಪ್ರತೀ ದಿನದ, ಪ್ರತೀ ಪಾಕ್ಷಿಕದ, ಪ್ರತೀ ವರ್ಷದ, ತಲೆಮಾರುಗಳ ಬಳಿಕ ತಲೆಮಾರುಗಳ ಜವಾಬ್ದಾರಿ. ಸ್ವಚ್ಛತೆ ಒಂದು ಜೀವನ ಶೈಲಿ ಮತ್ತು ಸ್ವಚ್ಛತೆ ಜೀವನದ ಮಂತ್ರ.

ನಾವು ಬೆಳಿಗ್ಗೆ ಎದ್ದ ಕೂಡಲೇ ನಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುವ ಅಭ್ಯಾಸವನ್ನು ಮಾಡಿಕೊಂಡಿರುವಂತೆಯೇ, ನಾವು ಸ್ವಚ್ಛತೆಯನ್ನು ನಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು. ನಾನು ಬರೇ ವೈಯಕ್ತಿಕ ನೈರ್ಮಲ್ಯದ ಬಗ್ಗೆ ಮಾತ್ರ ಮಾತನಾಡುತ್ತಿರುವುದಲ್ಲ, ಸಾಮಾಜಿಕ ನೈರ್ಮಲ್ಯದ ಬಗ್ಗೆ ಕೂಡಾ ಮಾತನಾಡುತ್ತಿದ್ದೇನೆ. ರೈಲ್ವೇ ಬೋಗಿಗಳಲ್ಲಿ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ಸ್ವಚ್ಛತೆ ಬಹಳ ಕಷ್ಟವೇನಲ್ಲ. ಸರಕಾರದಿಂದ ಮಾಡಲಾಗುವ ಕೆಲವು ಪ್ರಯತ್ನಗಳು, ಜನತೆಯ ಸಹಕಾರದಿಂದಾಗಿ ಈಗ ರೈಲ್ವೇಯ ಇಮೇಜ್, ಪರಿಸ್ಥಿತಿ ಬದಲಾಗಿದೆ.

|

ಸ್ನೇಹಿತರೇ,

ನಮ್ಮ ಸರಕಾರವು ನಗರಗಳಲ್ಲಿ ವಾಸಿಸುವ ನಗರಗಳ ಬಡವರು ಮತ್ತು ಮಧ್ಯಮ ವರ್ಗದವರಿಗೆ ಜೀವಿಸಲು ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಲು ಮತ್ತು ಸ್ಥಿತಿಯನ್ನು ಸುಧಾರಿಸಲು ದಾಖಲೆ ಪ್ರಮಾಣದ ಹೂಡಿಕೆಯನ್ನು ಮಾಡುತ್ತಿದೆ. ನಾವು 2014ಕ್ಕಿಂತ ಮುಂಚಿನ ಏಳು ವರ್ಷಗಳ ಬಗ್ಗೆ ಮಾತನಾಡುವುದಾದರೆ ಆಗ ನಗರಾಭಿವೃದ್ಧಿ ಸಚಿವಾಲಯಕ್ಕೆ 1.25 ಲಕ್ಷ ಕೋ.ರೂ.ಗಳ ಬಜೆಟನ್ನು ಒದಗಿಸಲಾಗುತ್ತಿತ್ತು. ಆದರೆ ನಮ್ಮ ಸರಕಾರದ ಏಳು ವರ್ಷಗಳಲ್ಲ್ಲಿ ಸುಮಾರು 4 ಲಕ್ಷ ಕೋ.ರೂ.ಗಳ ಬಜೆಟನ್ನು ನಗರಾಭಿವೃದ್ಧಿ ಸಚಿವಾಲಯಕ್ಕೆ ಒದಗಿಸಲಾಗಿದೆ. ಈ ಮೊತ್ತವನ್ನು ನಗರಗಳ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಮತ್ತು ಹೊಸ ಒಳಚರಂಡಿ ಸಂಸ್ಕರಣಾ ಸ್ಥಾವರಗಳ ಮೇಲೆ ಹೂಡಿಕೆ ಮಾಡಲಾಗಿದೆ. ಈ ಹೂಡಿಕೆಯೊಂದಿಗೆ ಮನೆಗಳಿಗೆ ಸಂಬಂಧಿಸಿದ ಯೋಜನೆಗಳು, ಹೊಸ ಮೆಟ್ರೋ ಮಾರ್ಗಗಳು, ಮತ್ತು ಸ್ಮಾರ್ಟ್ ಸಿಟಿಗಳನ್ನು ನಗರ ಬಡವರಿಗಾಗಿ ಪೂರ್ಣಗೊಳಿಸಲಾಗಿದೆ. ನಾವು ನಮ್ಮ ಗುರಿಗಳನ್ನು ಮುಟ್ಟುತ್ತೇವೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ಸ್ವಚ್ಛ ಭಾರತ್ ಆಂದೋಲನ ಮತ್ತು ಅಮೃತ್ ಮಿಷನ್ನಿನ ವೇಗ ಮತ್ತು ಪ್ರಮಾಣಗಳು ಈ ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸಿವೆ.

ಇಂದು ಭಾರತವು ದೈನಿಕ ಒಂದು ಲಕ್ಷ ಟನ್ ತ್ಯಾಜ್ಯವನ್ನು ಸಂಸ್ಕರಿಸುತ್ತಿದೆ. 2014ರಲ್ಲಿ ದೇಶವು ಸ್ವಚ್ಛತಾ ಆಂದೋಲನ ಆರಂಭ ಮಾಡುವಾಗ ದೇಶದಲ್ಲಿ ಪ್ರತೀ ದಿನ ಉತ್ಪಾದನೆಯಾಗುತ್ತಿದ್ದ ತ್ಯಾಜ್ಯದಲ್ಲಿ ಬರೇ 20 ಶೇಖಡಾ ಮಾತ್ರ ಸಂಸ್ಕರಣೆಯಾಗುತ್ತಿತ್ತು. ಇಂದು ನಾವು ದೈನಿಕ 70 ಶೇಖಡಾದಷ್ಟು ತ್ಯಾಜ್ಯವನ್ನು ಸಂಕರಿಸುತ್ತಿದ್ದೇವೆ. 20 ಶೇಖಡಾದಿಂದ 70 ಶೇಖಡಾದವರೆಗೆ!. ಆದರೆ ನಾವೀಗ ಅದನ್ನು 100% ಮಾಡಬೇಕಾಗಿದೆ. ಇದು ತ್ಯಾಜ್ಯ ತೆಗೆದುಹಾಕುವ, ತೆರವು ಮಾಡುವ ಮೂಲಕ ಮಾತ್ರವೇ  ಸಾಧ್ಯವಾಗುವಂತಹದಲ್ಲ.  ಆದರೆ ಸಂಪತ್ತು ನಿರ್ಮಾಣದ ಮೂಲಕ ಇದು ಸಾಧ್ಯವಾಗಬಹುದು. ಇದನ್ನು ಖಾತ್ರಿ ಮಾಡಲು ದೇಶವು ಶೇಖಡಾ ನೂರರಷ್ಟು ತ್ಯಾಜ್ಯ ವಿಂಗಡಣೆಯ ಗುರಿಯನ್ನು ನಿಗದಿ ಮಾಡಬೇಕಿದೆ ಮತ್ತು ಪ್ರತೀ ನಗರಗಳಲ್ಲಿ ವಸ್ತುಗಳನ್ನು, ಸಾಮಗ್ರಿಗಳನ್ನು  ಹೊರತೆಗೆಯುವ ಆಧುನಿಕ  ಸೌಲಭ್ಯಗಳನ್ನು ಸ್ಥಾಪಿಸಬೇಕಾಗಿದೆ. ಈ ಸೌಲಭ್ಯಗಳ ಮೂಲಕ ತ್ಯಾಜ್ಯವನ್ನು ವಿಂಗಡಣೆ ಮಾಡಿ ಮರುಸಂಸ್ಕರಣೆ ಮಾಡಬಹುದಾದಂತಹ ವಸ್ತುಗಳನ್ನು ಮರುಬಳಕೆಗೆ ಸೂಕ್ತವಾಗಿ ಸಂಸ್ಕರಿಸಬಹುದಾಗಿದೆ. ಇದರ ಜೊತೆಗೆ ನಗರಗಳಲ್ಲಿ ಕಸದ, ತ್ಯಾಜ್ಯದ ರಾಶಿಗಳು ಸಂಸ್ಕರಣೆಗೊಂದು ಸಂಪೂರ್ಣವಾಗಿ ತೆರವಾಗಲಿವೆ.  ಹರ್ದೀಪ್ ಜೀ ನಾನು ಈ ಕಸದ ತ್ಯಾಜ್ಯದ ಬಹಳ ದೊಡ್ಡ ರಾಶಿಗಳನ್ನು ತೆರವು ಮಾಡುವ ಬಗ್ಗೆ ಮಾತನಾಡುವಾಗ ದಿಲ್ಲಿಯಲ್ಲಿಯೂ ಇಂತಹ ಪರ್ವತಗಳು ಹಲವು ವರ್ಷಗಳಿಂದ ಇವೆ ಮತ್ತು ಈ ಪರ್ವತಗಳು ತೆರವಿಗಾಗಿ ಕಾಯುತ್ತಿವೆ.

ಸ್ನೇಹಿತರೇ,

ಜಗತ್ತು ಈಗ ಹಸಿರು ಉದ್ಯೋಗಗಳ ಭವಿಷ್ಯದ ಬಗ್ಗೆ ಚರ್ಚಿಸುತ್ತಿದೆ. ಈ ಆಂದೋಲನವು ಭಾರತದಲ್ಲಿ ಹಲವು ಹಸಿರು ಉದ್ಯೋಗಗಳನ್ನು ಸೃಷ್ಟಿ ಮಾಡಲಿದೆ. ನಗರಗಳ ಅಭಿವೃದ್ಧಿಗೆ ಆಧುನಿಕ ತಂತ್ರಜ್ಞಾನದ ಬಳಕೆ ಸತತವಾಗಿ ಹೆಚ್ಚುತ್ತಿದೆ. ದೇಶವು ಇತ್ತೀಚೆಗೆ ಆಗಸ್ಟ್ ತಿಂಗಳಲ್ಲಿ ರಾಷ್ಟ್ರೀಯ ಮೋಟಾರು ವಾಹನಗಳ ಗುಜರಿ ನೀತಿಯನ್ನು ಜಾರಿಗೆ ತಂದಿದೆ. ಈ ಗುಜರಿ ನೀತಿ ವೃತ್ತಾಕಾರದ ಆರ್ಥಿಕತೆಗೆ ಇನ್ನಷ್ಟು ವೇಗವನ್ನು ತುಂಬಲಿದೆ. ಹಾಗು ತ್ಯಾಜ್ಯದಿಂದ ಸಂಪತ್ತು ಆಂದೋಲನಕ್ಕೂ ವೇಗ ತರಲಿದೆ. ನಗರಗಳಲ್ಲಿ ಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನೀತಿ ಪ್ರಮುಖವಾದಂತಹ ಪಾತ್ರವನ್ನು ವಹಿಸಲಿದೆ. ಮರುಬಳಕೆ ಮಾಡಿ, ಮರು ಸಂಸ್ಕರಿಸಿ ಮತ್ತು ಮರಳಿ ಪಡೆಯಿರಿ ಎಂಬುದು  ಇತರ ತತ್ವವಾಗಿದೆ. ತ್ಯಾಜ್ಯವನ್ನು ರಸ್ತೆಗಳ ನಿರ್ಮಾಣದಲ್ಲಿ ಬಳಕೆ ಮಾಡುವುದಕ್ಕಾಗಿ ಸರಕಾರ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಸರಕಾರಿ ಕಟ್ಟಡ ನಿರ್ಮಾಣದಲ್ಲಿ ವಸ್ತುಗಳ ಮರುಬಳಕೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ ಹಾಗು ಸರಕಾರಿ ವಸತಿ ಯೋಜನೆಗಳ ಮನೆಗಳ ನಿರ್ಮಾಣದಲ್ಲಿಯೂ ಇದನ್ನು ಉತ್ತೇಜಿಸಲಾಗುತ್ತಿದೆ.

ಸ್ನೇಹಿತರೇ,

ಸ್ವಚ್ಛ ಭಾರತ ಮತ್ತು ಸಮತೋಲಿತ ನಗರೀಕರಣಕ್ಕೆ ಹೊಸ ದಿಕ್ಕು ನೀಡುವಲ್ಲಿ ರಾಜ್ಯಗಳು ಬಹಳ ದೊಡ್ಡ ಪಾತ್ರವನ್ನು ವಹಿಸಿವೆ. ಈಗಷ್ಟೇ ನಾವು ಅನೇಕ ಮುಖ್ಯಮಂತ್ರಿಗಳ ಸಂದೇಶಗಳನ್ನು ಕೇಳಿದ್ದೇವೆ. ದೇಶದ ಪ್ರತೀ ರಾಜ್ಯ ಸರಕಾರಗಳಿಗೂ ನಾನು ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಎಲ್ಲಾ ರಾಜ್ಯಗಳೂ ನೀರು ಪೂರೈಕೆಯಿಂದ ಹಿಡಿದು ನೈರ್ಮಲ್ಯದವರೆಗೆ ನಗರಗಳ ಮೂಲ ಆವಶ್ಯಕತೆಯನ್ನು ಈಡೇರಿಸುವ ಪ್ರಯತ್ನಗಳನ್ನು ಮಾಡಿವೆ. ಅಮೃತ್ ಯೋಜನೆ ಅಡಿಯಲ್ಲಿ 80,000 ಕೋ. ರೂ.ಗಳ ಮೊತ್ತದ ಯೋಜನೆಗಳು ಪ್ರಗತಿಯಲ್ಲಿವೆ. ಇದರ ಜೊತೆಗೆ ನಗರಗಳಿಗೆ ಉತ್ತಮ ಭವಿಷ್ಯ, ಯುವಜನತೆಗೆ ಹೊಸ ಅವಕಾಶಗಳು ಲಭ್ಯವಾಗುತ್ತಿವೆ. ನಾವೀಗ ನೀರು ಸಂಪರ್ಕ ಮತ್ತು ಕೊಳಚೆ ಸಾಗಿಸುವ ತ್ಯಾಜ್ಯ ಕೊಳವೆಗಳ ಅಥವಾ ಒಳಚರಂಡಿಯ ಸೌಲಭ್ಯಗಳನ್ನು ನಗರಗಳ ಶೇಖಡಾ ನೂರರಷ್ಟು ಮನೆಗಳಿಗೆ ವಿಸ್ತರಿಸಬೇಕಾಗಿದೆ. ಕೊಳಚೆ ನೀರು ಶುದ್ದೀಕರಣ ಸೌಲಭ್ಯ ಹೆಚ್ಚಳದ ಮೂಲಕ ನಗರಗಳ ಜಲ ಸಂಪನ್ಮೂಲಗಳು ಸ್ವಚ್ಛವಾಗಲಿವೆ ಮತ್ತು ನಮ್ಮ ನದಿಗಳು ಕೂಡಾ ಸ್ವಚ್ಛವಾಗಲಿವೆ. ನಮ್ಮ ದೇಶದ ಯಾವುದೇ ನದಿಗಳಿಗೆ ಕೊಳಕು ನೀರು ಹರಿಯಲು ಬಿಡುವುದಿಲ್ಲ ಎಂಬ ದೃಢ ನಿರ್ಧಾರದೊಂದಿಗೆ ನಾವು ಮುನ್ನಡೆಯಬೇಕಾಗಿದೆ.

ಸ್ನೇಹಿತರೇ,

ಈ ಕಾರ್ಯಕ್ರಮದಲ್ಲಿ, ನಾನು ನಗರಗಳ ಬಹಳ ಪ್ರಮುಖವಾದಂತಹ ಒಂದು ಆಂದೋಲನದ ಬಗ್ಗೆ ಮಾತನಾಡಲು ಬಯಸುತ್ತೇನೆ. ಅದು ನಮ್ಮ ಬೀದಿ ಬದಿಯ ವ್ಯಾಪಾರಿಗಳು ಮತ್ತು ರಸ್ತೆಗಳಲ್ಲಿ ಮಾರಾಟ ಮಾಡುವವರ ಬಗ್ಗೆ. ಪ್ರಧಾನ ಮಂತ್ರಿ ಸ್ವ ನಿಧಿ ಯೋಜನಾವು ಇಂತಹ ಜನರಿಗೆ ಒಂದು ಆಶಾಕಿರಣವಾಗಿ ಬಂದಿದೆ. ಸ್ವಾತಂತ್ರ್ಯದ ಬಳಿಕದ ಹಲವಾರು ದಶಕಗಳಲ್ಲಿ ಅವರ ಬಗ್ಗೆ ಯಾರೂ ಕಾಳಜಿ ವಹಿಸಿರಲಿಲ್ಲ. ಅವರು ಯಾರಿಂದಲೋ ತರುತ್ತಿದ್ದ ಸಣ್ಣ ಮೊತ್ತದ ಸಾಲಕ್ಕೆ ಗರಿಷ್ಟ ಬಡ್ಡಿ ಪಾವತಿ ಮಾಡಬೇಕಾಗುತ್ತಿತ್ತು. ಅವರು ಸದಾ ಸಾಲದ ಹೊರೆಯಲ್ಲಿಯೇ ಇರುತ್ತಿದ್ದರು. ಇಡೀ ದಿನ ಕಠಿಣ ಪರಿಶ್ರಮ ಮಾಡಿ ಅವರು ಸಂಪಾದಿಸುತ್ತಿದ್ದ ಹಣ ಅವರ ಕುಟುಂಬಕ್ಕೆ ಹೋಗುವುದಕ್ಕೆ ಬದಲು ಸಾಲ ಕೊಟ್ಟವರ ಕೈಸೇರುತ್ತಿತ್ತು. ಯಾವುದೇ ದಾಖಲೆಗಳಿಲ್ಲದೆ ಅಥವಾ ವ್ಯವಹಾರದ ಇತಿಹಾಸ ಇಲ್ಲದೆ ಅವರಿಗೆ ಬ್ಯಾಂಕುಗಳಿಂದ ಸಾಲದ ಸಹಾಯ  ಪಡೆಯುವುದೂ ಅಸಾಧ್ಯವಾಗಿತ್ತು.

ಯಾವುದು ಅಸಾಧ್ಯ ಎಂದು ಭಾವಿಸಲಾಗಿತ್ತೋ ಅದನ್ನು ಪಿ.ಎಂ.ಸ್ವನಿಧಿ ಯೋಜನಾ ಸಾಧ್ಯ ಮಾಡಿದೆ. ಇಂದು 46 ಲಕ್ಷಕ್ಕೂ ಅಧಿಕ ಬೀದಿ ವ್ಯಾಪಾರಿಗಳು ಈ ಯೋಜನೆಯ ಪ್ರಯೋಜನ ಪಡೆಯಲು ಮುಂದೆ ಬಂದಿದ್ದಾರೆ. ಇದರಲ್ಲಿ 2500 ಕೋ.ರೂ.ಗಳನ್ನು 25 ಲಕ್ಷ ಜನರಿಗೆ ವಿತರಿಸಲಾಗಿದೆ. 2500 ಕೋ.ರೂ. ಬೀದಿ ಬದಿ ವ್ಯಾಪಾರಿಗಳ ಕಿಸೆಯನ್ನು ತಲುಪಿದೆ ಎನ್ನುವುದು ಸಣ್ಣ ಸಂಗತಿಯೇನಲ್ಲ. ಅವರೀಗ ಡಿಜಿಟಲ್ ವರ್ಗಾವಣೆ ಮೂಲಕ ವ್ಯವಹಾರ ಮಾಡುತ್ತಿದ್ದಾರೆ. ಮತ್ತು ಅವರು ಬ್ಯಾಂಕುಗಳಿಂದ ಪಡೆದ ಸಾಲವನ್ನು ಮರುಪಾವತಿ ಮಾಡುತ್ತಿದ್ದಾರೆ. ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದ ಬೀದಿ ಬದಿ ವ್ಯಾಪಾರಿಗಳಿಗೆ ಮತ್ತು ಬೀದಿ ವ್ಯಾಪಾರಿಗಳಿಗೆ ಬಡ್ಡಿಯಲ್ಲಿ ರಿಯಾಯತಿ ಲಭಿಸುತ್ತಿದೆ. ಬಹಳ ಸಣ್ಣ ಕಾಲಾವಧಿಯಲ್ಲಿ ಈ ಜನರು ಏಳು ಕೋಟಿಗೂ ಅಧಿಕ ವರ್ಗಾವಣೆಗಳನ್ನು ಮಾಡಿದ್ದಾರೆ. ಕೆಲವೊಮ್ಮೆ ನಮ್ಮ ದೇಶದಲ್ಲಿ ಅತ್ಯಂತ ಬುದ್ಧಿವಂತ ಜನರು ಈ ಬಡವರು ಡಿಜಿಟಲ್ ವರ್ಗಾವಣೆಯನ್ನು ಹೇಗೆ ಕಲಿಯಬಲ್ಲರು ಎಂದು ಪ್ರಶ್ನೆ ಮಾಡುತ್ತಾರೆ. ಈ ಜನರು ಅದನ್ನು ಕಲಿತು, 70 ಮಿಲಿಯನ್ ಡಿಜಿಟಲ್ ವರ್ಗಾವಣೆಗಳನ್ನು ಸಾಧಿಸಿದ್ದಾರೆ.

ಈ ಜನರು ಸಗಟು ವ್ಯಾಪಾರಸ್ಥರಿಂದ ಸರಕು ಖರೀದಿ ಮಾಡುವಾಗ ಮತ್ತು ತಮ್ಮ ಸರಕುಗಳನ್ನು ಗ್ರಾಹಕರಿಗೆ ಮಾರಾಟ ಮಾಡಿ ಹಣ ಪಡೆಯುವಾಗ ತಮ್ಮ ಮೊಬೈಲ್ ಫೋನುಗಳ ಮೂಲಕ ಡಿಜಿಟಲ್ ವರ್ಗಾವಣೆ ವ್ಯವಹಾರ ಮಾಡಲಾರಂಭಿಸಿದ್ದಾರೆ. ಇದರ ಬಹಳ ದೊಡ್ಡ ಪ್ರಯೋಜನ ಎಂದರೆ ಅವರ ವರ್ಗಾವಣೆ ವ್ಯವಹಾರದ ಬಗ್ಗೆ ಈಗ ಡಿಜಿಟಲ್ ಚರಿತ್ರೆ ಇರುತ್ತದೆ. ಮತ್ತು ಈ ಡಿಜಿಟಲ್ ಚರಿತ್ರೆಯಿಂದಾಗಿ ಬ್ಯಾಂಕುಗಳು ಅವರ ವ್ಯಾಪಾರ ವ್ಯವಹಾರದ ಮೌಲ್ಯವನ್ನು ತಿಳಿದುಕೊಳ್ಳಲು ಅವಕಾಶವಾಗುತ್ತದೆ ಹಾಗು ಅವರಿಗೆ ಮುಂದಿನ ಹಂತದ ಸಾಲವನ್ನು ನೀಡಲು ಬ್ಯಾಂಕುಗಳಿಗೆ ಸುಲಭವಾಗುತ್ತದೆ.

ಸ್ನೇಹಿತರೇ,

ಪಿ.ಎಂ. ಸ್ವನಿಧಿ ಯೋಜನೆ ಅಡಿಯಲ್ಲಿ ಬೀದಿ ವ್ಯಾಪಾರಿಗಳು ತಮ್ಮ ಮೊದಲ 10 ಸಾವಿರ ರೂಪಾಯಿಗಳ ಸಾಲವನ್ನು ಮರುಪಾವತಿ ಮಾಡಿದ ಬಳಿಕ 20 ಸಾವಿರ ರೂಪಾಯಿಗಳ ಎರಡನೆ ಸಾಲವನ್ನು ಪಡೆಯುತ್ತಾರೆ. ಅದೇ ರೀತಿ ಅವರು ಎರಡನೇ ಸಾಲವನ್ನು ಮರುಪಾವತಿ ಮಾಡಿದ ಬಳಿಕ 50,000 ರೂ.ಗಳ ಸಾಲ ಪಡೆಯುತ್ತಾರೆ. ಇಂದು ಹಲವಾರು ಬೀದಿ ಬದಿ ವ್ಯಾಪಾರಿಗಳು ಬ್ಯಾಂಕುಗಳಿಂದ ತಮ್ಮ ಮೂರನೆ ಸಾಲವನ್ನು ಪಡೆಯಲು ತಯಾರಾಗುತ್ತಿದ್ದಾರೆ. ನಾನು ಇಂತಹ ಪ್ರತಿಯೊಬ್ಬರನ್ನೂ ಬ್ಯಾಂಕುಗಳಿಗೆ ಬದಲಾಗಿ ಖಾಸಗಿ ಹಣಕಾಸು ಲೇವಾದೇವಿ ವ್ಯವಹಾರ ನಡೆಸುವವರಲ್ಲಿಗೆ ಹೋಗಿ ಹೆಚ್ಚು ಮೊತ್ತದ ಬಡ್ಡಿ ಪಾವತಿಸಿ ಸಾಲ ಪಡೆಯುವ ವಿಷ ವರ್ತುಲದಿಂದ ಮುಕ್ತ ಮಾಡುವ ಆಶಯವನ್ನು ಹೊಂದಿದ್ದೇನೆ. ನಾನು ಈ ಕಾರ್ಯಕ್ರಮದಲ್ಲಿ ನಗರಗಳ ಮೇಯರುಗಳಿಗೆ ಹೇಳಲು ಇಚ್ಛಿಸುತ್ತೇನೆ ಬಡಜನರಿಗೆ ನಿಜವಾದ ಸಹಾಯ ಮಾಡಲು ಮತ್ತು ಬಡವರಲ್ಲಿ ಬಡವರನ್ನು ಸಶಕ್ತರನ್ನಾಗಿಸಲು ಇರುವ ಅವಕಾಶ ಇದು. ಬಡವರನ್ನು ಬಡ್ಡಿಯ ವಿಷವರ್ತುಲದಿಂದ ಪಾರು ಮಾಡುವ ಕೆಲಸ ಇದು. ಈ ಭಾವನೆ ಇಲ್ಲದ ಯಾವುದೇ ಮೇಯರ್, ಕಾರ್ಪೋರೇಟರ್ ಅಥವಾ ಕೌನ್ಸಿಲರ್ ಈ ದೇಶದಲ್ಲಿ ಇರಲಾರರು ಮತ್ತು ಅವರು ಈ ಪಿ.ಎಂ. ಸ್ವನಿಧಿಯ ಯಶಸ್ಸಿಗೆ ಪ್ರಯತ್ನಿಸದೇ ಇರಲಾರರು.

ನೀವೆಲ್ಲರೂ ಒಗ್ಗೂಡಿ ಬಂದರೆ, ಆಗ ನಮ್ಮ ದೇಶದ ಈ ಬಡವರ ಅದೃಷ್ಟ, ಭವಿಷ್ಯ ಬದಲಾಗಬಲ್ಲದು. ಕೊರೊನಾ ಅವಧಿಯಲ್ಲಿ ನಾವು ನೋಡಿದ್ದೇವೆ. ಹಾಲು ಮಾರಾಟ ಮಾಡುವವರು, ತರಕಾರಿ ಮಾರುವವರು ಬಾರದಿದ್ದರೆ ಎಷ್ಟೊಂದು ತೊಂದರೆಯಾಗುತ್ತದೆ ಎಂಬುದು ನಮ್ಮ ಅರಿವಿಗೆ ಬಂದಿದೆ. ಕೊರೊನಾ ಅವಧಿಯಲ್ಲಿ ನಮ್ಮ ಬದುಕಿನಲ್ಲಿ ಬರುವ ಪ್ರತಿಯೊಬ್ಬ ವ್ಯಕ್ತಿಯ ಮೌಲ್ಯ ನಮ್ಮ ಅರಿವಿಗೆ ಬಂದಿದೆ. ಇದನ್ನು ನಾವು ಅರ್ಥೈಸಿಕೊಂಡಾಗ, ಅವರಿಗೆ ಡಿಜಿಟಲ್ ವರ್ಗಾವಣೆಗೆ ತರಬೇತಿ ನೀಡುವುದು ನಮ್ಮ ಜವಾಬ್ದಾರಿಯಲ್ಲವೇ. ಇಂತಹ ಸುಂದರ ಯೋಜನೆ ಅಲ್ಲಿದೆ, ಆತ ಬಡ್ಡಿಯಲ್ಲಿ ಪ್ರೋತ್ಸಾಧನ ಪಡೆಯುತ್ತಾರೆ ಮತ್ತು ಆತ ತನ್ನ ವ್ಯವಹಾರ ವಿಸ್ತರಿಸಲು ಹಣವನ್ನೂ ಪಡೆಯುತ್ತಾರೆ. ಅವರ ಬದುಕನ್ನು ಬದಲಾಯಿಸುವ ಕ್ರಮಗಳನ್ನು ಕೈಗೊಳ್ಳುವ ಸ್ನೇಹಿತರು ನಮಗೆ ನಗರಗಳಲ್ಲಿ ಇಲ್ಲವೇ ?.

ನಾನು ಹೇಳುತ್ತೇನೆ, ಖಂಡಿತವಾಗಿಯೂ ನಗರಗಳಲ್ಲಿ ಇದ್ದಾರೆ, ಈ ಯೋಜನೆ ಭಾರತ ಸರಕಾರದ್ದಾದರೂ ಅದು ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆ, ಆದರೆ ನೀವಿದನ್ನು ಮಾಡಿದರೆ, ನೀವು ಅವರ ಹೃದಯದಲ್ಲಿ ಸ್ಥಾನ ಪಡೆಯುತ್ತೀರಿ. ಆತ ನಗರದ ಮೇಯರಿಗೆ, ಕಾರ್ಪೋರೇಟರಿಗೆ ಮತ್ತು ಕೌನ್ಸಿಲರ್ ಗಳಿಗೆ ಹಾಗು ತನಗೆ ಯಾರೆಲ್ಲ ಸಹಾಯ ಮಾಡಿರುವರೋ ಅವರಿಗೆಲ್ಲ ಮೆಚ್ಚುಗೆಯ ಚಪ್ಪಾಳೆ ಹೊಡೆಯುತ್ತಾನೆ. ಬೀದಿ ಬದಿ ವ್ಯಾಪಾರಿಗಳು ಅವರ ಬದುಕನ್ನು ಘನತೆಯಿಂದ ನಡೆಸುವಂತಾಗಿ, ತಮ್ಮ ಮಕ್ಕಳ ಉತ್ತಮ  ಶಿಕ್ಷಣದ ಬಗ್ಗೆ ನಿರ್ಧಾರ ಕೈಗೊಳ್ಳುವಂತಹ ಸಾಮರ್ಥ್ಯ ಗಳಿಸಿಕೊಂಡು;  ನೀವು;  ದೇಶದ ಎಲ್ಲಾ ನಗರಗಳ  ಮೇಯರ್ ಗಳು, ಕಾರ್ಪೋರೇಟರ್ ಗಳು ಮತ್ತು ಕೌನ್ಸಿಲರ್ ಗಳು ಅವರ ಸಂತೋಷದ  ಚಪ್ಪಾಳೆಯನ್ನು ಪಡೆಯುವಂತಾಗಬೇಕು ಎಂಬುದು ನನ್ನ ಇಚ್ಛೆಯಾಗಿದೆ.

ಇದನ್ನು ಬಹಳ ಸುಲಭವಾಗಿ ಮಾಡಬಹುದು ಸ್ನೇಹಿತರೇ, ಆದರೆ ನಾವಿದಕ್ಕೆ ಕೊಡುಗೆ ನೀಡಬೇಕಾಗುತದೆ. ನಾನು ಎಲ್ಲಾ ಆಯುಕ್ತರಿಗೆ ಹೇಳಲು ಇಚ್ಛಿಸುತ್ತೇನೆ ಇದೊಂದು ಮಾನವತೆಯ ಕೆಲಸ. ಇದು ತಳಮಟ್ಟದಲ್ಲಿ ಆರ್ಥಿಕತೆಯನ್ನು ಸ್ಚಚ್ಛ ಮಾಡುವ ಕೆಲಸ ಕೂಡಾ. ಇದು ಅತ್ಮಗೌರವವನ್ನು ಎತ್ತರಿಸುವ ಕೆಲಸ. ದೇಶವು ನಿಮ್ಮನ್ನು ಇಂತಹ ಪ್ರತಿಷ್ಟಿತ ಸ್ಥಾನದಲ್ಲಿರಿಸಿದೆ. ಈ ಪಿ.ಎಂ.ಸ್ವನಿಧಿ ಯೋಜನೆಯನ್ನು ಪೂರ್ಣ ಹೃದಯದಿಂದ ಒಪ್ಪಿಕೊಂಡು ಕಾರ್ಯಗತ ಮಾಡಿ ಮತ್ತು ಇದಕ್ಕೆ ನಿಮ್ಮ ಬದ್ಧತೆಯನ್ನು ವ್ಯಕ್ತಪಡಿಸಿ. ಅತ್ಯಲ್ಪ ಕಾಲದಲ್ಲಿ ನೀವು ನೋಡುತ್ತೀರಿ- ಗ್ರಾಮಗಳಲ್ಲಿಯ ಪ್ರತಿಯೊಂದು ಕುಟುಂಬವೂ ತರಕಾರಿಗಳನ್ನು ಖರೀದಿ ಮಾಡಲು, ಹಾಲು ಅಥವಾ ಇತರ ಸಾಮಗ್ರಿಗಳನ್ನು ಖರೀದಿ ಮಾಡಲು ಡಿಜಿಟಲ್ ಪಾವತಿಗಳನ್ನು ಮಾಡುತ್ತದೆ. ಇದು ಬಹಳ ದೊಡ್ಡ ಕ್ರಾಂತಿಗೆ ನಾಂದಿ ಹಾಡುತ್ತದೆ. ಅವರ ಸಂಖ್ಯೆ ಬಹಳ ಸಣ್ಣದಿರಬಹುದು, ಆದರೆ ಅವರು ಏಳು ಕೋಟಿ ಡಿಜಿಟಲ್ ವರ್ಗಾವಣೆಗಳನ್ನು ಮಾಡಿದ್ದಾರೆ. ನೀವು ನಿಮ್ಮ ಸಹಾಯ ಹಸ್ತ ನೀಡಿದರೆ ನಮ್ಮ ಪ್ರಗತಿ ಕಲ್ಪನಾತೀತವಾಗಿರುತ್ತದೆ.

ಇಂದು ಈ ಕಾರ್ಯಕ್ರಮದಲ್ಲಿ ಹಾಜರಿರುವ ನಗರಾಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ಘಟಕಗಳಿಗೆ ನಾನು ವೈಯಕ್ತಿಕವಾಗಿ ಮನವಿ ಮಾಡುತ್ತೇನೆ, ನೀವು ಈ ಕೆಲಸದಲ್ಲಿ ಹಿಂದುಳಿಯಬೇಡಿ. ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನ ಈ ಕಟ್ಟಡದಿಂದ ಮಾತನಾಡುತ್ತಿರುವಾಗ ಬಡವರಿಗಾಗಿ ಏನಾದರೂ ಒಂದು ಮಾಡಬೇಕು ಎಂಬುದು ನಮ್ಮ ಜವಾಬ್ದಾರಿ.

ಸ್ನೇಹಿತರೇ,

ದೇಶದ ಎರಡು ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳು ಬಹಳ ದೊಡ್ಡ ಸಂಖ್ಯೆಯಲ್ಲಿ ಬ್ಯಾಂಕುಗಳಿಂದ ಸಾಲ ಪಡೆದಿರುವಂತಹ ಬೀದಿ ಬದಿ ವ್ಯಾಪಾರಸ್ಥರನ್ನು ಹೊಂದಿವೆ. ಡಿಜಿಟಲ್ ವರ್ಗಾವಣೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸ್ಪರ್ಧೆ ಮಾಡುವಂತೆ ಎಲ್ಲಾ ರಾಜ್ಯಗಳಿಗೂ ನಾನು ಮನವಿ ಮಾಡುತ್ತೇನೆ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ 50,000 ರೂಪಾಯಿಗಳ ಮೊತ್ತದ ಮೂರನೇ ಸಾಲವನ್ನು ಪಡೆದುಕೊಳ್ಳಲು ಅನುಕೂಲತೆಗಳನ್ನು ಮಾಡಿಕೊಳ್ಳುವಂತೆಯೂ ಮನವಿ ಮಾಡುತ್ತೇನೆ. ಈ ನಿಟ್ಟಿನಲ್ಲಿ ಸ್ಪರ್ಧೆ ಇರಬೇಕು ಮತ್ತು ರಾಜ್ಯಗಳು ಹಾಗು ನಗರಗಳಿಗೆ ಪ್ರತೀ ಮೂರು ಅಥವಾ ಆರು ತಿಂಗಳಿಗೆ ಪ್ರಶಸ್ತಿ ನೀಡುವ ವ್ಯವಸ್ಥೆ ಬೇಕು ಎಂಬುದು ನನ್ನ ಅಭಿಪ್ರಾಯ. ಬಡವರ ಕಲ್ಯಾಣ ಮತ್ತು ಸಶಕ್ತೀಕರಣದ ನಿಟ್ಟಿನಲ್ಲಿ ಆರೋಗ್ಯಪೂರ್ಣವಾದಂತಹ ಸ್ಪರ್ಧೆ ಇರಬೇಕು. ನಾವೆಲ್ಲರೂ, ಮೇಯರ್ ಗಳು, ಕಾರ್ಪೋರೇಟರ್ ಗಳು ಮತ್ತು ಕೌನ್ಸಿಲರ್ ಗಳು ಈ ಸ್ಪರ್ಧೆಯಲ್ಲಿ ಸೇರಿಕೊಳ್ಳೋಣ.

ಸ್ನೇಹಿತರೇ

ನಮ್ಮ ಧರ್ಮಗ್ರಂಥಗಳಲ್ಲಿ ಒಂದು ಹೇಳಿಕೆ ಇದೆ:

आस्ते भग आसीनः यः ऊर्ध्वः तिष्ठति तिष्ठतः।

शेते निपद्य मानस्य चराति चरतो भगः चरैवेति॥

ಇದರರ್ಥ ಕರ್ಮದ ನಿಮ್ಮ ಪ್ರಯಾಣದಲ್ಲಿ ಒಂದು ಕ್ಷಣ ಬಿಡುವು ತೆಗೆದುಕೊಂಡರೆ, ನಿಮ್ಮ ಯಶಸ್ಸು ಕೂಡಾ ನಿಂತು ಬಿಡುತ್ತದೆ. ನೀವು ನಿದ್ರೆ ಮಾಡಿದರೆ, ಯಶಸ್ಸು ಕೂಡಾ ನಿದ್ರೆ ಮಾಡುತ್ತದೆ. ನೀವು ಎದ್ದು ನಿಂತರೆ ನೀವು ಯಶಸ್ವಿಯಾಗುತ್ತೀರಿ. ನೀವು ಮುನ್ನಡೆದರೆ, ಯಶಸ್ಸು ಕೂಡಾ ನಿಮ್ಮನ್ನು ಅನುಸರಿಸುತ್ತದೆ. ಆದುದರಿಂದ ನಾವು ಸದಾ ಮುನ್ನಡೆಯುತ್ತಲೇ ಇರಬೇಕು. चरैवेति चरैवेति। चरैवेति चरैवेति। ಈ ಮಂತ್ರದೊಂದಿಗೆ ನಿಮ್ಮ ನಗರವನು ಈ ಎಲ್ಲಾ ಸಮಸ್ಯೆಗಳಿಂದ ಮುಕ್ತ ಮಾಡುವ ಉಪಕ್ರಮದಲ್ಲಿ ತೊಡಗಿಸಿಕೊಳ್ಳಿ. ನಾವು ಸ್ವಚ್ಛವಾದಂತಹ, ಸಮೃದ್ಧವಾದಂತಹ ಮತ್ತು ಜಗತ್ತಿಗೆ ಸುಸ್ಥಿರ ಬದುಕಿನತ್ತ ಮಾರ್ಗದರ್ಶನ ಮಾಡಬಲ್ಲಂತಹ ಭಾರತವನ್ನು ನಿರ್ಮಾಣ ಮಾಡಬೇಕಾಗಿದೆ.

ನಮ್ಮೆಲ್ಲರ ಪ್ರಯತ್ನಗಳಿಂದಾಗಿ ದೇಶವು ಈ ದೃಢ ನಿರ್ಧಾರಗಳನ್ನು ಕಾರ್ಯಗತ ಮಾಡುತ್ತದೆ ಎಂಬ ಬಗ್ಗೆ ನನಗೆ ಬಹಳ ವಿಶ್ವಾಸವಿದೆ.ಈ ಶುಭಾಶಯಗಳೊಂದಿಗೆ, ನಿಮಗೆಲ್ಲ ಬಹಳ ಧನ್ಯವಾದಗಳು! ಬಹಳ ಅಭಿನಂದನೆಗಳು!

  • krishangopal sharma Bjp January 26, 2025

    नमो नमो 🙏 जय भाजपा🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹
  • krishangopal sharma Bjp January 26, 2025

    नमो नमो 🙏 जय भाजपा🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌷🌹
  • krishangopal sharma Bjp January 26, 2025

    नमो नमो 🙏 जय भाजपा🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • krishangopal sharma Bjp January 26, 2025

    नमो नमो 🙏 जय भाजपा🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷
  • krishangopal sharma Bjp January 26, 2025

    नमो नमो 🙏 जय भाजपा🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • Rosni Soni April 11, 2024

    Sar aap sab ki help kar rahe hain na mere pass Rahane Ka Makan Hai Na to Mere bacche school ja rahe hain Mere bahan ki shaadi bhi Tay ho gai hai lekin Mere Ghar mein Ek bhi Paisa nahin hai please help MI mere husband ka kam bhi nahin Sahi chal raha hai vah majduri karte hain please Sar help mein please Sar help MI hath jodkar nivedan hai
  • MLA Devyani Pharande February 17, 2024

    नमो नमो नमो नमो
  • Mahendra singh Solanki Loksabha Sansad Dewas Shajapur mp December 09, 2023

    नमो नमो नमो नमो नमो नमो नमो नमो
  • Laxman singh Rana June 22, 2022

    नमो नमो 🇮🇳🌷🌹
  • Manda krishna BJP Telangana Mahabubabad District mahabubabad June 21, 2022

    🌹🙏🙏🏻🌹
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
India beats US, China, G7 & G20 nations to become one of the world’s most equal societies: Here’s what World Bank says

Media Coverage

India beats US, China, G7 & G20 nations to become one of the world’s most equal societies: Here’s what World Bank says
NM on the go

Nm on the go

Always be the first to hear from the PM. Get the App Now!
...
PM Modi’s remarks during the BRICS session: Peace and Security
July 06, 2025

Friends,

Global peace and security are not just ideals, rather they are the foundation of our shared interests and future. Progress of humanity is possible only in a peaceful and secure environment. BRICS has a very important role in fulfilling this objective. It is time for us to come together, unite our efforts, and collectively address the challenges we all face. We must move forward together.

Friends,

Terrorism is the most serious challenge facing humanity today. India recently endured a brutal and cowardly terrorist attack. The terrorist attack in Pahalgam on 22nd April was a direct assault on the soul, identity, and dignity of India. This attack was not just a blow to India but to the entire humanity. In this hour of grief and sorrow, I express my heartfelt gratitude to the friendly countries who stood with us and expressed support and condolences.

Condemning terrorism must be a matter of principle, and not just of convenience. If our response depends on where or against whom the attack occurred, it shall be a betrayal of humanity itself.

Friends,

There must be no hesitation in imposing sanctions on terrorists. The victims and supporters of terrorism cannot be treated equally. For the sake of personal or political gain, giving silent consent to terrorism or supporting terrorists or terrorism, should never be acceptable under any circumstances. There should be no difference between our words and actions when it comes to terrorism. If we cannot do this, then the question naturally arises whether we are serious about fighting terrorism or not?

Friends,

Today, from West Asia to Europe, the whole world is surrounded by disputes and tensions. The humanitarian situation in Gaza is a cause of grave concern. India firmly believes that no matter how difficult the circumstances, the path of peace is the only option for the good of humanity.

India is the land of Lord Buddha and Mahatma Gandhi. We have no place for war and violence. India supports every effort that takes the world away from division and conflict and leads us towards dialogue, cooperation, and coordination; and increases solidarity and trust. In this direction, we are committed to cooperation and partnership with all friendly countries. Thank you.

Friends,

In conclusion, I warmly invite all of you to India next year for the BRICS Summit, which will be held under India’s chairmanship.

Thank you very much.