QuotePeople engaged in pisciculture will benefit largely from Pradhan Mantri Matsya Sampada Yojana: PM
QuoteIt is our aim that in the next 3-4 years we double our production and give fisheries sector a boost: PM Modi
QuotePMMSY will pave the path for a renewed White revolution (dairy sector) and Sweet revolution (apiculture sector), says PM

ಎಲ್ಲರಿಗೂ ನಮಸ್ಕಾರ,

ಮೀನುಗಾರಿಕೆ, ಡೈರಿ, ಪಶುಸಂಗೋಪನೆ ಮತ್ತು ಕೃಷಿಯಲ್ಲಿನ ಅಧ್ಯಯನಗಳು ಮತ್ತು ಸಂಶೋಧನೆಗಳಿಗೆ ಸಂಬಂಧಿಸಿದ ನೂರಾರು ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ದೇಶಕ್ಕಾಗಿ, ಬಿಹಾರಕ್ಕಾಗಿ, ಹಳ್ಳಿಗಳ ಜೀವನವನ್ನು ಸುಧಾರಿಸಲು ಮತ್ತು ವ್ಯವಸ್ಥೆಯನ್ನು ಬಲಪಡಿಸಲು ಚಾಲನೆ ನೀಡಲಾಗಿದೆ.  ಈ ಸಂದರ್ಭದಲ್ಲಿ ನಾನು ಬಿಹಾರದ ಎಲ್ಲ ಸಹೋದರ ಸಹೋದರಿಯರನ್ನು ಅಭಿನಂದಿಸುತ್ತೇನೆ.

ಬಿಹಾರದ ರಾಜ್ಯಪಾಲ ಫಾಗು ಚೌಹಾಣ್ ಅವರೇ, ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಅವರೇ, ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳೇ, ಶ್ರೀ ಗಿರಿರಾಜ್ ಸಿಂಗ್ ಅವರೇ, ಕೈಲಾಶ್ ಚೌಧರಿ ಅವರೇ, ಪ್ರತಾಪ್ ಚಂದ್ರ ಸಾರಂಗಿ ಅವರೇ, ಸಂಜೀವ್ ಬಲ್ಯಾನ್ ಅವರೇ, ಬಿಹಾರದ ಉಪಮುಖ್ಯಮಂತ್ರಿ ಸುಶಿಲ್ ಭಾಯ್ ಅವರೇ,  ಬಿಹಾರ ವಿಧಾನಸಭಾ ಸ್ಪೀಕರ್ ಶ್ರೀ ವಿಜಯ್ ಚೌಧರಿ ಅವರೇ, ಬಿಹಾರ ಸಂಪುಟದ ಸದಸ್ಯರೇ, ಸಂಸದರೇ, ಶಾಸಕರೇ ಮತ್ತು ನನ್ನ ಆತ್ಮೀಯ ಸ್ನೇಹಿತರೇ,

ಸ್ನೇಹಿತರೇ, ಈ ಎಲ್ಲಾ ಯೋಜನೆಗಳಿಗೆ ಇಂದು ಚಾಲನೆ ನೀಡುತ್ತಿರುವ  ಹಿಂದಿನ ಆಲೋಚನೆಯೆಂದರೆ, ನಮ್ಮ ಹಳ್ಳಿಗಳು 21 ನೇ ಶತಮಾನದ ಸ್ವಾವಲಂಬಿ ಭಾರತದ ಶಕ್ತಿಯಾಗಿ ಮಾರ್ಪಟ್ಟಿವೆ. ಈ ಶತಮಾನದಲ್ಲಿ ನಮ್ಮ ಹಳ್ಳಿಗಳನ್ನು ನೀಲಿ ಕ್ರಾಂತಿ ಅಂದರೆ, ಮೀನುಗಾರಿಕೆಗೆ ಸಂಬಂಧಿಸಿದ ಕೆಲಸ; ಬಿಳಿ ಕ್ರಾಂತಿ, ಅಂದರೆ, ಡೈರಿಗೆ ಸಂಬಂಧಿಸಿದ ಕೆಲಸ; ಮತ್ತು ಸಿಹಿ ಕ್ರಾಂತಿ, ಅಂದರೆ, ಜೇನು ಉತ್ಪಾದನೆಗೆ ಸಂಬಂಧಿಸಿದ ಕೆಲಸಗಳ ಮೂಲಕ ಮತ್ತಷ್ಟು ಶ್ರೀಮಂತಗೊಳಿಸುವುದು ಮತ್ತು ಸಬಲೀಕರಣಗೊಳಿಸುವುದು ಇದರ ಉದ್ದೇಶ. ಈ ಗುರಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ರೂಪಿಸಲಾಗಿದೆ.

ಇಂದು, ಈ ಯೋಜನೆಯನ್ನು ದೇಶದ 21 ರಾಜ್ಯಗಳಲ್ಲಿ ಪ್ರಾರಂಭಿಸಲಾಗುತ್ತಿದೆ. ಇದರ ಅಡಿಯಲ್ಲಿ ಮುಂದಿನ 4-5 ವರ್ಷಗಳಲ್ಲಿ 20,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು. ಈ ಪೈಕಿ 1700 ಕೋಟಿ ರೂ.ಗಳ ಯೋಜನೆಗಳನ್ನು ಇಂದು ಪ್ರಾರಂಭಿಸಲಾಗುತ್ತಿದೆ. ಈ ಯೋಜನೆಯಡಿ ಪಾಟ್ನಾ, ಪೂರ್ನಿಯಾ, ಸೀತಮಾರಿ, ಮಾಧೇಪುರ, ಕಿಶನ್‌ಗಂಜ್ ಮತ್ತು ಸಮಸ್ತಿಪುರಗಳಲ್ಲಿ ಅನೇಕ ಸೌಲಭ್ಯಗಳನ್ನು ಉದ್ಘಾಟಿಸಲಾಗಿದೆ. ಈ ಯೋಜನೆಯು ಮೀನುಗಾಗರಿಗೆ ಹೊಸ ಮೂಲಸೌಕರ್ಯಗಳು, ಆಧುನಿಕ ಉಪಕರಣಗಳು ಮತ್ತು ಹೊಸ ಮಾರುಕಟ್ಟೆಗಳನ್ನು ಒದಗಿಸುತ್ತದೆ, ಜೊತೆಗೆ ಕೃಷಿ ಮತ್ತು ಇತರ ವಿಧಾನಗಳ ಮೂಲಕ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ.

ಸ್ನೇಹಿತರೇ, ದೇಶದ ಪ್ರತಿಯೊಂದು ಭಾಗದಲ್ಲೂ, ವಿಶೇಷವಾಗಿ ಸಮುದ್ರ ಮತ್ತು ನದಿ ತಟದಲ್ಲಿರುವ ಪ್ರದೇಶಗಳಲ್ಲಿ ಮೀನುಗಳ ವ್ಯಾಪಾರವನ್ನು ಗಮನದಲ್ಲಿಟ್ಟುಕೊಂಡು, ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ಇಂತಹ ಪ್ರಮುಖ ಯೋಜನೆಯನ್ನು ರೂಪಿಸಲಾಗಿದೆ. ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೆ ಮಾಡಿರುವ ಹೂಡಿಕೆಗಿಂತ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಹಲವಾರು ಪಟ್ಟು ಹೆಚ್ಚು ಹೂಡಿಕೆ ಮಾಡಲಾಗುತ್ತಿದೆ. ಗಿರಿರಾಜ್ ಜಿ ಅವರು ಅಂಕಿ ಅಂಶಗಳನ್ನು  ಪ್ರಸ್ತುತಪಡಿಸುವಾಗ ಅನೇಕರಿಗೆ ಆಶ್ಚರ್ಯವಾಗಿರಬೇಕು. ಆದರೆ ನೀವು ವಾಸ್ತವವನ್ನು ತಿಳಿದುಕೊಂಡಾಗ, ಈ ಸರ್ಕಾರವು ಎಷ್ಟು ಕ್ಷೇತ್ರಗಳಲ್ಲಿ ಜನರ ಕಲ್ಯಾಣಕ್ಕಾಗಿ ಬೃಹತ್ ಯೋಜನೆಗಳನ್ನು ರೂಪಿಸುತ್ತಿದೆ ಎಂಬುದು ಗೊತ್ತಾಗುತ್ತದೆ.

ದೇಶದಲ್ಲಿ ಮೀನುಗಾರಿಕೆಗೆ ಸಂಬಂಧಿಸಿದಂತೆ ಈಗ ಪ್ರತ್ಯೇಕ ಸಚಿವಾಲಯವನ್ನು ರಚಿಸಲಾಗಿದೆ. ಇದರಿಂದ ನಮ್ಮ ಮೀನುಗಾರರು ಮತ್ತು ವ್ಯಾಪಾರ ಸಹವರ್ತಿಗಳಿಗೆ ಅನುಕೂಲವಾಗುತ್ತಿದೆ. ಮುಂಬರುವ 3-4 ವರ್ಷಗಳಲ್ಲಿ ಮೀನು ರಫ್ತು ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ. ಇದು ಮೀನುಗಾರಿಕೆ ಕ್ಷೇತ್ರದಲ್ಲಿಯೇ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಮುಂಬರುವ 3-4 ವರ್ಷಗಳಲ್ಲಿ ಮೀನಿನ ರಫ್ತು ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ. ಈ ವಲಯದ ನನ್ನ ಸ್ನೇಹಿತರೊಂದಿಗೆ ಸಂವಾದ ನಡೆಸಿದ ನಂತರ, ನನ್ನ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಯಿತು  ರಾಜ್ಯಗಳು ತೋರಿಸುತ್ತಿರುವ ವಿಶ್ವಾಸವನ್ನು ನೋಡಿದಾಗ, ಸಹೋದರರಾದ ಬ್ರಜೇಶ್ ಮತ್ತು ಜ್ಯೋತಿ ಮಂದನ್ ಮತ್ತು ಮೋನಿಕಾ ಅವರೊಂದಿಗೆ ಮಾತನಾಡಿದಾಗ, ಅಲ್ಲಿ ವಿಶ್ವಾಸದ ಪ್ರತಿಬಿಂಬ ಕಾಣಿಸಿತು.

|

ಸ್ನೇಹಿತರೇ, ಬಹುತೇಕ ಮೀನು ಸಾಕಾಣಿಕೆಯು ಸ್ವಚ್ಛ ನೀರಿನ ಲಭ್ಯತೆಯ ಮೇಲೆ ಅವಲಂಬಿತವಾಗಿದೆ. ಇದಕ್ಕೆ ಮಿಷನ್ ಕ್ಲೀನ್ ಗಂಗಾ ಮತ್ತಷ್ಟು ಸಹಾಯ ಮಾಡುತ್ತದೆ. ಗಂಗಾ ನದಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನದಿಗಳಲ್ಲಿ ಸಾಗಣೆಗಾಗಿ ಕೈಗೆತ್ತಿಕೊಳ್ಳುವ ಕೆಲಸದಿಂದ ಮೀನುಗಾರಿಕಾ ವಲಯವೂ ಪ್ರಯೋಜನ ಪಡೆಯಲಿದೆ. ಈ ವರ್ಷ ಆಗಸ್ಟ್ 15 ರಂದು ಘೋಷಿಸಲಾದ ಮಿಷನ್ ಡಾಲ್ಫಿನ್ ಮೀನುಗಾರಿಕೆ ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತದೆ. ನಮ್ಮ ನಿತೀಶ್ ಬಾಬು ಅವರು ಈ ಮಿಷನ್ ಬಗ್ಗೆ ಬಹಳ ಉತ್ಸಾಹಭರಿತರಾಗಿದ್ದಾರೆಂದು ನನಗೆ ತಿಳಿದಿದೆ. ಆದ್ದರಿಂದ, ಗಂಗೆಯಲ್ಲಿ ಡಾಲ್ಫಿನ್‌ಗಳ ಸಂಖ್ಯೆ ಹೆಚ್ಚಾದಾಗ, ಅದು ಗಂಗಾ ಕರಾವಳಿಯ ಜನರಿಗೆ ಪ್ರಯೋಜನವನ್ನು ನೀಡುತ್ತದೆ, ಅಷ್ಟೇ ಅಲ್ಲ ಪ್ರತಿಯೊಬ್ಬರಿಗೂ ಪ್ರಯೋಜನವಾಗುತ್ತದೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ.

ಸ್ನೇಹಿತರೇ, ನಿತೀಶ್ ಜಿ ಅವರ ನಾಯಕತ್ವದಲ್ಲಿ, ಪ್ರತಿ ಮನೆಗೂ ಸುರಕ್ಷಿತ ಕುಡಿಯುವ ನೀರು ಸರಬರಾಜು ಮಾಡುವ  ಶ್ಲಾಘನೀಯ ಕಾರ್ಯ ನಡೆದಿದೆ. 4-5 ವರ್ಷಗಳ ಹಿಂದೆ ಬಿಹಾರದಲ್ಲಿ ಕೇವಲ ಶೇ.2 ರಷ್ಟು ಮನೆಗಳಿಗೆ ಮಾತ್ರ ನೀರು ಸರಬರಾಜು ಇತ್ತು. ಈಗ ಬಿಹಾರದಲ್ಲಿ ಶೇ.70ಕ್ಕೂ ಹೆಚ್ಚು ಕುಟುಂಬಗಳು ಶುದ್ಧ ಕುಡಿಯುವ ನೀರಿನ ಪೂರೈಕೆಯ ಸಂಪರ್ಕ ಹೊಂದಿವೆ. ಬಿಹಾರ ಸರ್ಕಾರದ ಕೆಲಸಗಳಿಂದಾಗಿ  ಈಗ ಭಾರತ ಸರ್ಕಾರದ ಜಲ ಜೀವನ್ ಮಿಷನ್‌ಗೆ ಹೆಚ್ಚಿನ ಬೆಂಬಲ ದೊರೆತಿದೆ ಕೊರೊನಾದ ಈ ಸಮಯದಲ್ಲಿಯೂ ಸಹ, ಬಿಹಾರದ ಸುಮಾರು 60 ಲಕ್ಷ ಮನೆಗಳಿಗೆ ನಲ್ಲಿಯ ಮೂಲಕ ನೀರು ಬರುವಂತೆ ನೋಡಿಕೊಳ್ಳಲಾಗಿದೆ. ಇದು ನಿಜಕ್ಕೂ ದೊಡ್ಡ ಸಾಧನೆಯಾಗಿದೆ. ಕೊರೊನಾ ನಡುವೆಯೂ ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ಹಾಲು ಯಾವುದೇ ಕೊರತೆಯಿಲ್ಲದೆ ಮಾರುಕಟ್ಟೆಗಳಿಗೆ ಹಾಗೂ ಡೈರಿಗಳಿಗೆ ಬರುತ್ತಿರುವುದು ನಮ್ಮ ಹಳ್ಳಿಗಳ ಶಕ್ತಿಯಾಗಿದೆ.

ಸ್ನೇಹಿತರೇ, ಈ ಮಧ್ಯೆ, ಧಾನ್ಯಗಳು, ಹಣ್ಣು ಮತ್ತು ಹಾಲು ಉತ್ಪಾದನೆಯಲ್ಲಿ ಉತ್ತಮ ಇಳುವರಿ ಬಂದಿದೆ. ಇದು ಮಾತ್ರವಲ್ಲ, ಸರ್ಕಾರಗಳು ಮತ್ತು ಡೈರಿ ಉದ್ಯಮವೂ ಈ ಕಠಿಣ ಪರಿಸ್ಥಿತಿಯ ನಡುವೆಯೂ ದಾಖಲೆಯ ಖರೀದಿಗಳನ್ನು ಮಾಡಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಮೂಲಕ 10 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆಯಾಗಿದೆ. ಇದರಲ್ಲಿ ನಮ್ಮ ಬಿಹಾರದ 75 ಲಕ್ಷ ರೈತರು ಸೇರಿದ್ದಾರೆ. ಸ್ನೇಹಿತರೇ, ಈ ಯೋಜನೆ ಪ್ರಾರಂಭವಾದಾಗಿನಿಂದ ಸುಮಾರು 6,000 ಕೋಟಿ ರೂಪಾಯಿಗಳನ್ನು ಬಿಹಾರದ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಈ ಕ್ರಮಗಳಿಂದಾಗಿ ಈ ಜಾಗತಿಕ ಸಾಂಕ್ರಾಮಿಕ ರೋಗದ ಪರಿಣಾಮ ಹಳ್ಳಿಗಳ ಮೇಲೆ ಕಡಿಮೆ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಬಿಹಾರವು ಕೊರೊನಾದ ಜೊತೆಗೆ ಪ್ರವಾಹವನ್ನೂ ಕೂಡ ಧೈರ್ಯದಿಂದ ಎದುರಿಸಿದೆ ಎಂಬುದು ಪ್ರಶಂಸನೀಯವಾದುದು.

ಸ್ನೇಹಿತರೇ, ಕೊರೊನಾದ ಹೊರತಾಗಿ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಬಿಹಾರ ಮತ್ತು ಹತ್ತಿರದ ಪ್ರದೇಶಗಳಲ್ಲಿನ ಪರಿಸ್ಥಿತಿಯ ಬಗ್ಗೆ ನಮಗೆ ತುಂಬಾ ತಿಳಿದಿದೆ. ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರಯತ್ನಿಸುತ್ತಿವೆ. ಉಚಿತ ಪಡಿತರ ಯೋಜನೆ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನ್ ಪ್ರಯೋಜನಗಳು ಬಿಹಾರದಲ್ಲಿ ಅಗತ್ಯವಿರುವ ಪ್ರತಿಯೊಬ್ಬರಿಗೂ ಮತ್ತು ಹೊರ ರಾಜ್ಯಗಳಿಂದ ಹಿಂದಿರುಗಿರುವ ಪ್ರತಿ ವಲಸೆ ಕುಟುಂಬವನ್ನು ತಲುಪಿವೆ. ಉಚಿತ ಪಡಿತರ ಯೋಜನೆಯನ್ನು ದೀಪಾವಳಿ ಮತ್ತು ಛಾತ್ ಪೂಜೆಯವರೆಗೆ ವಿಸ್ತರಿಸಲಾಗಿದೆ.

ಸ್ನೇಹಿತರೇ, ಕೊರೊನಾ ಬಿಕ್ಕಟ್ಟಿನಿಂದಾಗಿ ನಗರಗಳಿಂದ ಮರಳಿರುವ ಅನೇಕ ಕಾರ್ಮಿಕರು ಪಶುಸಂಗೋಪನೆ ಕಡೆಗೆ ಮುಖ ಮಾಡಿದ್ದಾರೆ. ಅವರಿಗೆ ಕೇಂದ್ರ ಸರ್ಕಾರ ಮತ್ತು ಬಿಹಾರ ಸರ್ಕಾರದ ಅನೇಕ ಯೋಜನೆಗಳಿಂದ ಬೆಂಬಲ ಸಿಗುತ್ತಿದೆ. ರೈತರು ಮತ್ತು ಜಾನುವಾರು ಸಾಕಣೆದಾರರಿಗೆ ಹೆಚ್ಚಿನ ಆದಾಯ ದೊರೆಯುವಂತೆ ಮಾಡಲು ಹೊಸ ಉತ್ಪನ್ನಗಳ ತಯಾರಿಕೆ, ಹೊಸ ಆವಿಷ್ಕಾರಗಳಿಂದ ದೇಶದ ಡೈರಿ ಕ್ಷೇತ್ರವನ್ನು ವಿಸ್ತರಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದರೊಂದಿಗೆ, ದೇಶದ ಜಾನುವಾರುಗಳ ಗುಣಮಟ್ಟವನ್ನು ಸುಧಾರಿಸುವುದು, ಅವುಗಳ ಸ್ವಚ್ಛತೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಪೌಷ್ಠಿಕ ಆಹಾರದ ಲಭ್ಯತೆಯ ಬಗ್ಗೆ ಗಮನ ಕೇಂದ್ರೀಕರಿಸಲಾಗುವುದು.

ಈ ಗುರಿಯೊಂದಿಗೆ, 50 ಕೋಟಿಗೂ ಹೆಚ್ಚು ಜಾನುವಾರುಗಳಿಗೆ ಕಾಲು ಮತ್ತು ಬಾಯಿ ರೋಗ ಮತ್ತು ಬ್ರೂಸೆಲೋಸಿಸ್ ನಿಂದ ರಕ್ಷಣೆ ನೀಡಲು ಉಚಿತ ಲಸಿಕಾ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಜಾನುವಾರುಗಳಿಗೆ ಉತ್ತಮ ಮೇವು ಒದಗಿಸಲು ವಿವಿಧ ಯೋಜನೆಗಳ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಉತ್ತಮ ದೇಶೀ ತಳಿಗಳನ್ನು ಅಭಿವೃದ್ಧಿಪಡಿಸಲು ಮಿಷನ್ ಗೋಕುಲ್ ನಡೆಯುತ್ತಿದೆ. ವರ್ಷದ ಹಿಂದೆ ದೇಶಾದ್ಯಂತ ಕೃತಕ ಗರ್ಭಧಾರಣೆಯ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು, ಇಂದಿಗೆ ಮೊದಲ ಹಂತ ಪೂರ್ಣಗೊಂಡಿದೆ.

ಗುಣಮಟ್ಟದ ದೇಶೀ ತಳಿಗಳ ಅಭಿವೃದ್ಧಿಗೆ ಬಿಹಾರ ಈಗ ಪ್ರಮುಖ ಕೇಂದ್ರವಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಇಂದು ಪೂರ್ನಿಯಾ, ಪಾಟ್ನಾ ಮತ್ತು ಬಾರೌನಿಗಳಲ್ಲಿ ನಿರ್ಮಿಸಲಾದ ಆಧುನಿಕ ಸೌಲಭ್ಯಗಳಿಂದಾಗಿ ಬಿಹಾರ ಡೈರಿ ಕ್ಷೇತ್ರದಲ್ಲಿ ಬಲಗೊಳ್ಳಲಿದೆ. ಪೂರ್ನಿಯಾದಲ್ಲಿ ನಿರ್ಮಿಸಲಾಗಿರುವ ಕೇಂದ್ರವು ಭಾರತದ ಅತಿದೊಡ್ಡ ಕೇಂದ್ರಗಳಲ್ಲಿ ಒಂದಾಗಿದೆ. ಇದು ಬಿಹಾರಕ್ಕೆ ಮಾತ್ರವಲ್ಲದೆ ಪೂರ್ವ ಭಾರತದ ಬಹುತೇಕ ಭಾಗಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಈ ಕೇಂದ್ರವು ಬಿಹಾರದ ದೇಶೀ ತಳಿಗಳಾದ ‘ಬಚೌರ್‘ ಮತ್ತು ‘ರೆಡ್ ಪೂರ್ನಿಯಾ‘ಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಮತ್ತಷ್ಟು ಉತ್ತೇಜನ ನೀಡುತ್ತದೆ.

ಸ್ನೇಹಿತರೇ,

ಸಾಮಾನ್ಯವಾಗಿ ಒಂದು ಹಸು ಒಂದು ವರ್ಷದಲ್ಲಿ ಒಂದು ಕರುವಿಗೆ ಜನ್ಮ ನೀಡುತ್ತದೆ. ಆದರೆ ಐವಿಎಫ್ ತಂತ್ರಜ್ಞಾನದ ಸಹಾಯದಿಂದ, ಒಂದು ವರ್ಷದಲ್ಲಿ ಅನೇಕ ಕರುಗಳನ್ನು ಪಡೆಯಲು ಸಾಧ್ಯವಿದೆ ಎಂದು ಪ್ರಧಾನಿ ಹೇಳಿದರು. ಈ ತಂತ್ರಜ್ಞಾನವನ್ನು ಪ್ರತಿ ಹಳ್ಳಿಗೂ ತಲುಪಿಸುವುದು ನಮ್ಮ ಗುರಿಯಾಗಿದೆ.

|

ಸ್ನೇಹಿತರೇ,

ಜಾನುವಾರುಗಳ ಉತ್ತಮ ತಳಿಯ ಜೊತೆಗೆ, ಅವುಗಳ ಆರೈಕೆಯ ಬಗ್ಗೆ ಸರಿಯಾದ ವೈಜ್ಞಾನಿಕ ಮಾಹಿತಿಯೂ ಅಷ್ಟೇ ಮುಖ್ಯವಾಗಿದೆ. ಇಂದು ಆರಂಭಿಸಲಾದ ಇ–ಗೋಪಾಲ ಅಪ್ಲಿಕೇಶನ್ ಆನ್‌ಲೈನ್ ಡಿಜಿಟಲ್ ಮಾಧ್ಯಮವಾಗಿದ್ದು, ಉತ್ತಮ ಗುಣಮಟ್ಟದ ಜಾನುವಾರುಗಳನ್ನು ಆಯ್ಕೆ ಮಾಡಲು ಮತ್ತು ಮಧ್ಯವರ್ತಿಗಳಿಂದ ಮುಕ್ತಿ ಪಡೆಯಲು ರೈತರಿಗೆ ಸಹಾಯ ಮಾಡುತ್ತದೆ. ಈ ಅಪ್ಲಿಕೇಶನ್ ಜಾನುವಾರುಗಳ ಆರೈಕೆಗೆ ಸಂಬಂಧಿಸಿದಂತೆ ಉತ್ಪಾದಕತೆಯಿಂದ ಹಿಡಿದು ಅದರ ಆರೋಗ್ಯ ಮತ್ತು ಆಹಾರಕ್ರಮದವರೆಗೆ ಎಲ್ಲಾ ಮಾಹಿತಿಯನ್ನು ನೀಡುತ್ತದೆ. ಈ ಕೆಲಸ ಪೂರ್ಣಗೊಂಡಾಗ, ಇ–ಗೋಪಾಲ ಅಪ್ಲಿಕೇಶನ್‌ನಲ್ಲಿ ಪ್ರಾಣಿ ಆಧಾರ್ ಸಂಖ್ಯೆಯನ್ನು ಸೇರಿಸುವುದರಿಂದ ಆ ಪ್ರಾಣಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸುಲಭವಾಗಿ ನೀಡಲಾಗುತ್ತದೆ. ಇದು ಜಾನುವಾರು ಮಾಲೀಕರಿಗೆ ಅವುಗಳ ಖರೀದಿ ಮತ್ತು ಮಾರಾಟವನ್ನು ಸುಲಭವಾಗಿಸುತ್ತದೆ.

ಸ್ನೇಹಿತರೇ, ಕೃಷಿ, ಪಶುಸಂಗೋಪನೆ ಮತ್ತು ಮೀನುಗಾರಿಕೆಯಂತಹ ಕ್ಷೇತ್ರಗಳ ತ್ವರಿತ ಅಭಿವೃದ್ಧಿಗೆ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಮತ್ತು ಹಳ್ಳಿಗಳಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ಸೃಷ್ಟಿಸುವುದು ಬಹಳ ಅವಶ್ಯಕವಾಗಿದೆ. ವಾಸ್ತವವಾಗಿ, ಬಿಹಾರವು ಕೃಷಿಗೆ ಸಂಬಂಧಿಸಿದ ಶಿಕ್ಷಣ ಮತ್ತು ಸಂಶೋಧನೆಗೆ ಪ್ರಮುಖ ಕೇಂದ್ರವಾಗಿದೆ. ದೆಹಲಿಯಲ್ಲಿ, ನಾವು ಪೂಸಾ (ಇನ್ಸ್ಟಿಟ್ಯೂಟ್) ಬಗ್ಗೆ ಕೇಳುತ್ತಲೇ ಇರುತ್ತೇವೆ. ನಿಜವಾದ ಪೂಸಾ ದೆಹಲಿಯಲ್ಲಿಲ್ಲ, ಅದು ಬಿಹಾರದ ಸಮಸ್ತಿಪುರದಲ್ಲಿದೆ ಎಂದು ಅನೇಕ ಜನರಿಗೆ ಗೊತ್ತಿಲ್ಲ. ದೆಹಲಿಯಲ್ಲಿರುವ ಪೂಸಾ ಒಂದು ರೀತಿಯಲ್ಲಿ ಅದರ ಅವಳಿ ಸಹೋದರ.

ವಸಾಹತುಶಾಹಿ ಆಳ್ವಿಕೆಯ ಕಾಲದಲ್ಲಿಯೇ ಸಮಸ್ತಿಪುರದ ಪೂಸಾದಲ್ಲಿ ರಾಷ್ಟ್ರಮಟ್ಟದ ಕೃಷಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಯಿತು. ಡಾ.ರಾಜೇಂದ್ರ ಪ್ರಸಾದ್ ಮತ್ತು ಜನನಾಯಕ ಕರ್ಪೂರಿ ಠಾಕೂರ್ ಅವರಂತಹ ದೂರದೃಷ್ಟಿಯ ನಾಯಕರು ಸ್ವಾತಂತ್ರ್ಯಾನಂತರ ಈ ಸಂಪ್ರದಾಯವನ್ನು ಮುಂದುವರಿಸಿದರು. ಈ ಪ್ರಯತ್ನಗಳಿಂದ ಸ್ಫೂರ್ತಿ ಪಡೆದು 2016 ರಲ್ಲಿ ಡಾ.ರಾಜೇಂದ್ರ ಪ್ರಸಾದ್ ಕೃಷಿ ವಿಶ್ವವಿದ್ಯಾಲಯವನ್ನು ಕೇಂದ್ರೀಯ ವಿಶ್ವವಿದ್ಯಾಲಯವೆಂದು ಘೋಷಿಸಲಾಗಿದೆ. ಇದರ ನಂತರ, ವಿಶ್ವವಿದ್ಯಾನಿಲಯದಲ್ಲಿ ಮತ್ತು ಅದಕ್ಕೆ ಸಂಬಂಧಿಸಿದ ಕಾಲೇಜುಗಳಲ್ಲಿ ಕೋರ್ಸ್‌ಗಳನ್ನು ವ್ಯಾಪಕವಾಗಿ ವಿಸ್ತರಿಸಲಾಯಿತು. ಕೃಷಿ–ವ್ಯವಹಾರ ಮತ್ತು ಗ್ರಾಮೀಣ ನಿರ್ವಹಣೆಯ ಶಾಲೆಯ ಹೊಸ ಕಟ್ಟಡವನ್ನು ಉದ್ಘಾಟಿಸಲಾಗಿದೆ. ಇದಲ್ಲದೆ, ಹೊಸ ಹಾಸ್ಟೆಲ್‌ಗಳು, ಕ್ರೀಡಾಂಗಣಗಳು ಮತ್ತು ಅತಿಥಿ ಗೃಹಗಳನ್ನು ಸಹ ನಿರ್ಮಿಸಲಾಗಿದೆ.

ಕೃಷಿ ಕ್ಷೇತ್ರದ ಆಧುನಿಕ ಅಗತ್ಯಗಳನ್ನು ಗಮನಿಸಿ ದೇಶದಲ್ಲಿ 3 ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ, 5-6 ವರ್ಷಗಳ ಹಿಂದೆ ಕೇವಲ ಒಂದು ವಿಶ್ವವಿದ್ಯಾಲಯ ಇತ್ತು. ಬಿಹಾರದಲ್ಲಿ ಪ್ರತಿವರ್ಷ ಬರುವ ಪ್ರವಾಹದಿಂದ ಕೃಷಿಯನ್ನು ರಕ್ಷಿಸಲು ಮಹಾತ್ಮ ಗಾಂಧಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಯಿತು. ಅಂತೆಯೇ, ಮೋತಿಪುರದಲ್ಲಿ ಮೀನುಗಳ ಪ್ರಾದೇಶಿಕ ಸಂಶೋಧನೆ ಮತ್ತು ತರಬೇತಿ ಕೇಂದ್ರ, ಮೋತಿಹರಿಯಲ್ಲಿ ಪಶುಸಂಗೋಪನೆ ಮತ್ತು ಡೈರಿ ಅಭಿವೃದ್ಧಿ ಕೇಂದ್ರ ಮತ್ತು ಅಂತಹ ಅನೇಕ ಸಂಸ್ಥೆಗಳನ್ನು ಕೃಷಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಬೆಸೆಯಲು ಪ್ರಾರಂಭಿಸಲಾಗಿದೆ.

|

ಹಳ್ಳಿಗಳಿಗೆ ಹತ್ತಿರದಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳು ಮತ್ತು ಸಂಶೋಧನಾ ಕೇಂದ್ರಗಳ ಸಮೂಹಗಳನ್ನು ಸ್ಥಾಪಿಸಬೇಕು ಮತ್ತು ಅದರೊಂದಿಗೆ ನಾವು ಜೈ ಕಿಸಾನ್, ಜೈ ವಿಜ್ಞಾನ್ ಮತ್ತು ಜೈ ಅನುಸಂಧಾನ್ ಧ್ಯೇಯವಾಕ್ಯವನ್ನು ಸಾಧಿಸಬಹುದು. ಈ ಮೂರೂ ಶಕ್ತಿಗಳು ಒಗ್ಗಟ್ಟಿನಿಂದ ಕೆಲಸ ಮಾಡಿದರೆ, ದೇಶದ ಗ್ರಾಮೀಣ ಜೀವನವು ದೊಡ್ಡ ಬದಲಾವಣೆಗಳನ್ನು ಕಾಣುತ್ತದೆ. ಬಿಹಾರದಲ್ಲಿ ಇದಕ್ಕೆ ಸಾಕಷ್ಟು ಸಾಮರ್ಥ್ಯವಿದೆ. ಇಲ್ಲಿರುವ ಅನೇಕ ಹಣ್ಣುಗಳು, ಅದು ಲಿಚಿ, ಜರ್ದಲು ಮಾವು, ಆಮ್ಲಾ, ಮಖಾನಾ (ಕಮಲದ ಬೀಜಗಳು) ಅಥವಾ ಮಧುಬನಿ ವರ್ಣಚಿತ್ರಗಳು ಆಗಿರಲಿ, ಹಲವಾರು ಉತ್ಪನ್ನಗಳು ಬಿಹಾರದ ಪ್ರತಿ ಜಿಲ್ಲೆಯಲ್ಲೂ ಇವೆ. ಈ ಸ್ಥಳೀಯ ಉತ್ಪನ್ನಗಳಿಗೆ ನಾವು ಹೆಚ್ಚು ಆದ್ಯತೆ ನೀಡಬೇಕು. ಸ್ಥಳೀಯರಿಗೆ ನಾವು ಎಷ್ಟು ಆದ್ಯತೆ ನೀಡುತ್ತೇವೆಯೋ ಅಷ್ಟು ಬಿಹಾರ ಸ್ವಾವಲಂಬಿಯಾಗುತ್ತದೆ.  ದೇಶವು ಹೆಚ್ಚು ಸ್ವಾವಲಂಬಿಯಾಗುತ್ತದೆ.

ಸ್ನೇಹಿತರೇ,

ಬಿಹಾರದ ಯುವಕರು, ವಿಶೇಷವಾಗಿ ನಮ್ಮ ಸಹೋದರಿಯರು ಈಗಾಗಲೇ ಇದಕ್ಕೆ ಪ್ರಶಂಸನೀಯ ಕೊಡುಗೆ ನೀಡುತ್ತಿದ್ದಾರೆ ಎಂದು ನನಗೆ ಸಂತೋಷವಾಗಿದೆ. ಅದು ಶ್ರೀವಿಧಿ ಭತ್ತದ ಕೃಷಿಯಾಗಲಿ, ಅಥವಾ ಗುತ್ತಿಗೆ ಭೂಮಿಯಲ್ಲಿ ತರಕಾರಿಗಳನ್ನು ಬೆಳೆಯುವುದಾಗಲಿ, ಅಥವಾ ಅಜೋಲ್ಲಾ ಸೇರಿದಂತೆ ಇತರ ಸಾವಯವ ಗೊಬ್ಬರಗಳ ಬಳಕೆಯಾಗಲಿ, ಅಥವಾ ಕೃಷಿ ಯಂತ್ರೋಪಕರಣಗಳಿಗೆ ಸಂಬಂಧಿಸಿದ ನೇಮಕ ಕೇಂದ್ರವಾಗಲಿ, ಬಿಹಾರದ ಸ್ತ್ರೀ ಶಕ್ತಿಯು ಸ್ವಾವಲಂಬಿ ಭಾರತ ಅಭಿಯಾನದಲ್ಲಿ ಮುಂಚೂಣಿಯಲ್ಲಿದೆ. ಪೂರ್ನಿಯಾ ಜಿಲ್ಲೆಯ ಮೆಕ್ಕೆಜೋಳದ ವ್ಯಾಪಾರಕ್ಕೆ ಸಂಬಂಧಿಸಿದ “ಅರಣ್ಯಕ್ ಎಫ್‌ಪಿಒ” ಮತ್ತು ಕೋಸಿ ಪ್ರದೇಶದ ಮಹಿಳಾ ಡೈರಿ ರೈತರ “ಕೌಶಿಕಿ ಹಾಲು ಉತ್ಪಾದಕ ಕಂಪನಿ” ಮುಂತಾದ ಅನೇಕ ಗುಂಪುಗಳು ಶ್ಲಾಘನೀಯ ಕೆಲಸಗಳನ್ನು ಮಾಡುತ್ತಿವೆ. ಈಗ, ನಮ್ಮ ಉತ್ಸಾಹಭರಿತ ಯುವಕರು ಮತ್ತು ಸಹೋದರಿಯರಿಗಾಗಿ, ಕೇಂದ್ರ ಸರ್ಕಾರವು ವಿಶೇಷ ನಿಧಿಯನ್ನು ಸಹ ರಚಿಸಿದೆ. 1 ಲಕ್ಷ ಕೋಟಿ ರೂ.ಗಳ ಈ ಮೂಲಸೌಕರ್ಯ ನಿಧಿಯು ಅಂತಹ ಎಫ್‌ಪಿಒ–ಕೃಷಿ ಉತ್ಪಾದಕರ ಗುಂಪುಗಳು, ಸಹಕಾರಿ ಗುಂಪುಗಳು, ಗ್ರಾಮ ಸಂಗ್ರಹಣೆ, ಕೋಲ್ಡ್ ಸ್ಟೋರೇಜ್ ಮತ್ತು ಇತರ ಸೌಲಭ್ಯಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಅಷ್ಟೇ ಅಲ್ಲ, ನಮ್ಮ ಸಹೋದರಿಯರ ಸ್ವ–ಸಹಾಯ ಗುಂಪುಗಳಿಗೆ ಸಹ ಈಗ ಸಾಕಷ್ಟು ಸಹಾಯ ನೀಡಲಾಗುತ್ತಿದೆ. 2013-14ಕ್ಕೆ ಹೋಲಿಸಿದರೆ ಈಗ ಬಿಹಾರದಲ್ಲಿ ಸ್ವಸಹಾಯ ಗುಂಪುಗಳಿಗೆ ಸಾಲ 32 ಪಟ್ಟು ಹೆಚ್ಚಾಗಿದೆ. ನಮ್ಮ ಸಹೋದರಿಯರ ಸಾಮರ್ಥ್ಯ ಮತ್ತು ಉದ್ಯಮಶೀಲತೆಯ ಬಗ್ಗೆ ದೇಶ ಮತ್ತು ಬ್ಯಾಂಕುಗಳು ಎಷ್ಟು ನಂಬಿಕೆ ಇಟ್ಟಿವೆ ಎಂಬುದನ್ನು ಇದು ತೋರಿಸುತ್ತದೆ.

ಸ್ನೇಹಿತರೇ,

ನಾವು ಬಿಹಾರ ಮತ್ತು ಹಳ್ಳಿಗಳನ್ನು ಸ್ವಾವಲಂಬಿ ಭಾರತದ ಪ್ರಮುಖ ಕೇಂದ್ರವನ್ನಾಗಿ ಮಾಡಲು ನಿರಂತರ ಪ್ರಯತ್ನಗಳನ್ನು ಮಾಡಲಿದ್ದೇವೆ. ಈ ಪ್ರಯತ್ನಗಳಲ್ಲಿ ಬಿಹಾರದ ಕಷ್ಟಪಟ್ಟು ದುಡಿಯುವ ಸ್ನೇಹಿತರ ಪಾತ್ರ ಬಹಳ ದೊಡ್ಡದಾಗಿದೆ ಮತ್ತು ದೇಶವು ನಿಮ್ಮಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಿದೆ. ಬಿಹಾರದ ಜನರು ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆಯಿಂದಾಗಿ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಗುರುತಿಸಲ್ಪಟ್ಟಿದ್ದಾರೆ. ಸ್ವಾವಲಂಬಿ ಬಿಹಾರದ ಕನಸನ್ನು ಈಡೇರಿಸಲು ಬಿಹಾರದ ಜನರು ಅದೇ ರೀತಿಯಲ್ಲಿ ಕೆಲಸ ಮಾಡುತ್ತಾರೆಂದು ನಾನು ಖಚಿತವಾಗಿ ಹೇಳುತ್ತೇನೆ. ಅನೇಕ ಅಭಿವೃದ್ಧಿ ಯೋಜನೆಗಳ ಆರಂಭದ ಈ ಸಮಯದಲ್ಲಿ  ನಾನು ಮತ್ತೊಮ್ಮೆ ನಿಮ್ಮನ್ನು ಅಭಿನಂದಿಸುತ್ತೇನೆ, ಹಾಗೆಯೇ, ಮತ್ತೊಮ್ಮೆ ನನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ. ನಿಮ್ಮಿಂದ ನಾನು ಕೆಲವನ್ನು ನಿರೀಕ್ಷಿಸುತ್ತೇನೆ. ಮುಖಗವಸುಗಳನ್ನು ಧರಿಸಿ ಮತ್ತು ಎರಡು ಗಜಗಳಷ್ಟು ಅಂತರವನ್ನು ಕಾಯ್ದುಕೊಳ್ಳಿ. ಸುರಕ್ಷಿತವಾಗಿರಿ, ಆರೋಗ್ಯವಾಗಿರಿ.

ನಿಮ್ಮ ಮನೆಯಲ್ಲಿರುವ ಹಿರಿಯರ ಬಗ್ಗೆ ಕಾಳಜಿ ವಹಿಸಿ, ಅದು ಬಹಳ ಮುಖ್ಯ. ಕೊರೊನಾವನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಲಸಿಕೆ ಬರುವವರೆಗೂ, ಈ ಸಾಮಾಜಿಕ ಲಸಿಕೆಯೇ ಕೊರೊನಾದಿಂದ ತಪ್ಪಿಸಿಕೊಳ್ಳಲು ಇರುವ ಏಕೈಕ ಮತ್ತು ಉತ್ತಮ ಮಾರ್ಗವಾಗಿದೆ. ಆದ್ದರಿಂದ, ಎರಡು ಗಜಗಳಷ್ಟು ಅಂತರವನ್ನು ಕಾಪಾಡಿಕೊಳ್ಳುವುದು, ಮುಖಗವಸು ಬಳಸುವುದು, ಎಲ್ಲೆಂದರಲ್ಲಿ ಉಗುಳದಿರುವುದು, ಹಿರಿಯರ ಬಗ್ಗೆ ಕಾಳಜಿ ವಹಿಸುವುದು ಇತ್ಯಾದಿಗಳನ್ನು ನಾನು ಜನರಿಗೆ ನೆನಪಿಸುತ್ತಲೇ ಇರುತ್ತೇನೆ. ನಿಮ್ಮನ್ನು ಮತ್ತೊಮ್ಮೆ.ಭೇಟಿಯಾಗಲು ಈ ಅವಕಾಶವನ್ನು ನೀಡಿದ ರಾಜ್ಯ ಸರ್ಕಾರ, ಗಿರಿರಾಜ್ ಜಿ ಮತ್ತು ಎಲ್ಲರಿಗೂ ಧನ್ಯವಾದಗಳು.

ತುಂಬು ಧನ್ಯವಾದಗಳು !!!

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
PM Modi urges states to unite as ‘Team India’ for growth and development by 2047

Media Coverage

PM Modi urges states to unite as ‘Team India’ for growth and development by 2047
NM on the go

Nm on the go

Always be the first to hear from the PM. Get the App Now!
...
PM to visit Gujarat on 26th and 27th May
May 25, 2025
QuotePM to lay the foundation stone and inaugurate multiple development projects worth around Rs 24,000 crore in Dahod
QuotePM to lay the foundation stone and inaugurate development projects worth over Rs 53,400 crore at Bhuj
QuotePM to participate in the celebrations of 20 years of Gujarat Urban Growth Story

Prime Minister Shri Narendra Modi will visit Gujarat on 26th and 27th May. He will travel to Dahod and at around 11:15 AM, he will dedicate to the nation a Locomotive manufacturing plant and also flag off an Electric Locomotive. Thereafter he will lay the foundation stone and inaugurate multiple development projects worth around Rs 24,000 crore in Dahod. He will also address a public function.

Prime Minister will travel to Bhuj and at around 4 PM, he will lay the foundation stone and inaugurate multiple development projects worth over Rs 53,400 crore at Bhuj. He will also address a public function.

Further, Prime Minister will travel to Gandhinagar and on 27th May, at around 11 AM, he will participate in the celebrations of 20 years of Gujarat Urban Growth Story and launch Urban Development Year 2025. He will also address the gathering on the occasion.

In line with his commitment to enhancing connectivity and building world-class travel infrastructure, Prime Minister will inaugurate the Locomotive Manufacturing plant of the Indian Railways in Dahod. This plant will produce electric locomotives of 9000 HP for domestic purposes and for export. He will also flag off the first electric locomotive manufactured from the plant. The locomotives will help in increasing freight loading capacity of Indian Railways. These locomotives will be equipped with regenerative braking systems, and are being designed to reduce energy consumption, which contributes to environmental sustainability.

Thereafter, the Prime Minister will lay the foundation stone and inaugurate multiple development projects worth over Rs 24,000 crore in Dahod. The projects include rail projects and various projects of the Government of Gujarat. He will flag off Vande Bharat Express between Veraval and Ahmedabad & Express train between Valsad and Dahod stations. Prime Minister will also inaugurate the gauge converted Katosan- Kalol section and flag off a freight train on it.

Prime Minister will lay the foundation stone and inaugurate multiple development projects worth over Rs 53,400 crore at Bhuj. The projects from the power sector include transmission projects for evacuating renewable power generated in the Khavda Renewable Energy Park, transmission network expansion, Ultra super critical thermal power plant unit at Tapi, among others. It also includes projects of the Kandla port and multiple road, water and solar projects of the Government of Gujarat, among others.

Urban Development Year 2005 in Gujarat was a flagship initiative launched by the then Chief Minister Shri Narendra Modi with the aim of transforming Gujarat’s urban landscape through planned infrastructure, better governance, and improved quality of life for urban residents. Marking 20 years of the Urban Development Year 2005, Prime Minister will launch the Urban Development Year 2025, Gujarat’s urban development plan and State Clean Air Programme in Gandhinagar. He will also inaugurate and lay the foundation stone for multiple projects related to urban development, health and water supply. He will also dedicate more than 22,000 dwelling units under PMAY. He will also release funds of Rs 3,300 crore to urban local bodies in Gujarat under the Swarnim Jayanti Mukhyamantri Shaheri Vikas Yojana.