Quote"ಡಬಲ್ ಇಂಜಿನ್ ಸರ್ಕಾರವು ಬುಡಕಟ್ಟು ಸಮುದಾಯಗಳು ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದೆ"
Quote"ಪ್ರಗತಿಯ ಪಯಣದಲ್ಲಿ ನಮ್ಮ ತಾಯಂದಿರು ಮತ್ತು ಹೆಣ್ಣು ಮಕ್ಕಳು ಹಿಂದೆ ಉಳಿಯುವುದಿಲ್ಲ ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು"
Quote"ಲೋಕೋಮೋಟಿವ್ ತಯಾರಿಕೆಯಿಂದಾಗಿ, ದಾಹೋದ್ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಕೊಡುಗೆ ನೀಡುತ್ತದೆ"

 

ಭಾರತ್‌ ಮಾತಾ ಕಿ - ಜೈ, ಭಾರತ್‌ ಮಾತಾ ಕಿ - ಜೈ

 

ಮೊದಲನೆಯದಾಗಿ, ನಾನು ದಾಹೋದ್‌ನ ಜನರ ಕ್ಷ ಮೆಯಾಚಿಸಲು ಬಯಸುತ್ತೇನೆ. ಆರಂಭದಲ್ಲಿ, ನಾನು ಸ್ವಲ್ಪ ಸಮಯದವರೆಗೆ ಹಿಂದಿಯಲ್ಲಿ ಮಾತನಾಡುತ್ತೇನೆ ಮತ್ತು ಅದರ ನಂತರ ನಾನು ನನ್ನ ಮಾತೃಭಾಷೆಯಲ್ಲಿಮಾತನಾಡುತ್ತೇನೆ.

ಮೃದು ಭಾಷಿ ಮತ್ತು ಜನಪ್ರಿಯ ಗುಜರಾತ್‌ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್‌, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಮತ್ತು ದೇಶದ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್‌ ಜೀ , ಮಂತ್ರಿಮಂಡಲದ ನನ್ನ ಸಹೋದ್ಯೋಗಿ ದರ್ಶನಬೆನ್‌ ಜರ್ದೋಶ್‌, ಸಂಸತ್ತಿನಲ್ಲಿನನ್ನ ಹಿರಿಯ ಸಹೋದ್ಯೋಗಿ ಮತ್ತು ಗುಜರಾತ್‌ ಪ್ರದೇಶ ಭಾರತೀಯ ಜನತಾ ಪಕ್ಷ ದ ಅಧ್ಯಕ್ಷ  ಶ್ರೀ ಸಿ.ಆರ್‌. ಪಾಟೀಲ್‌, ಗುಜರಾತ್‌ ಸರ್ಕಾರದ ಮಂತ್ರಿಗಳು. ಸಂಸದರು, ಶಾಸಕರು ಮತ್ತು ನನ್ನ ಪ್ರೀತಿಯ ಬುಡಕಟ್ಟು ಸಹೋದರ ಸಹೋದರಿಯರು ಹೆಚ್ಚಿನ ಸಂಖ್ಯೆಯಲ್ಲಿಇಲ್ಲಿಗೆ ಬಂದಿದ್ದಾರೆ.

 

ಇಂದು, ಬುಡಕಟ್ಟು ಪ್ರದೇಶಗಳ ಲಕ್ಷಾಂತರ ಸಹೋದರಿಯರು ಮತ್ತು ಸಹೋದರರು ನಮ್ಮನ್ನು ಆಶೀರ್ವದಿಸಲು ಇಲ್ಲಿಉಪಸ್ಥಿತರಿದ್ದಾರೆ. ನಾವು ವಾಸಿಸುವ ಸ್ಥಳ ಮತ್ತು ಪರಿಸರವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ನನ್ನ ಸಾರ್ವಜನಿಕ ಜೀವನದ ಆರಂಭಿಕ ಅವಧಿಯಲ್ಲಿ, ನನ್ನ ಕಾರ್ಯಾಚರಣೆಯ ಪ್ರದೇಶವು ಪೂರ್ವ ಗುಜರಾತ್‌ನ ಉರ್ಮ ಹಳ್ಳಿಯಿಂದ ಅಂಬಾಜಿಯವರೆಗಿನ ಇಡೀ ಬುಡಕಟ್ಟು ಪ್ರದೇಶವಾಗಿತ್ತು. ಬುಡಕಟ್ಟು ಸಮುದಾಯದಲ್ಲಿಉಳಿಯುವುದು, ಅವರೊಂದಿಗೆ ಜೀವನವನ್ನು ಕಳೆಯುವುದು ಮತ್ತು ಅವರನ್ನು ಅರ್ಥಮಾಡಿಕೊಳ್ಳುವುದು ನನ್ನ ಆರಂಭಿಕ ವರ್ಷಗಳ ಜೀವನದ ಒಂದು ಭಾಗವೇ ಆಗಿತ್ತು. ಈ ಬುಡಕಟ್ಟು ತಾಯಂದಿರು, ಸಹೋದರಿಯರು ಮತ್ತು ಸಹೋದರರು ನನಗೆ ಮಾರ್ಗದರ್ಶನ ನೀಡಿದರು, ನನಗೆ ಬಹಳಷ್ಟು ಕಲಿಸಿದರು, ಮತ್ತು ಇಂದು ನಾನು ನಿಮಗಾಗಿ ಏನನ್ನಾದರೂ ಮಾಡಲು ಪ್ರೇರೇಪಿಸಲ್ಪಟ್ಟಿದ್ದೇನೆ.

 

ಬುಡಕಟ್ಟು ಸಮುದಾಯದ ಜೀವನವನ್ನು ನಾನು ಬಹಳ ಸಮೀಪದಿಂದ ನೋಡಿದ್ದೇನೆ. ಮತ್ತು ಇಂದು ನಾನು ನನ್ನ ಬುಡಕಟ್ಟು ಸಹೋದರ ಸಹೋದರಿಯರ ಜೀವನವು ನೀರಿನಂತೆ ಪರಿಶುದ್ಧವಾಗಿದೆ ಮತ್ತು ಗುಜರಾತ್‌, ಮಧ್ಯಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್‌ ಅಥವಾ ಭಾರತದ ಯಾವುದೇ ಬುಡಕಟ್ಟು ಪ್ರದೇಶವಾಗಿರಲಿ ಮೊಗ್ಗುಗಳಂತೆ ಮೃದುವಾಗಿದೆ ಎಂದು ಗೌರವಪೂರ್ವಕವಾಗಿ ಹೇಳಬಲ್ಲೆ. ಈ ಪ್ರದೇಶದ ದಾಹೋದ್‌ನ ಅನೇಕ ಕುಟುಂಬಗಳೊಂದಿಗೆ ನಾನು ಬಹಳ ಸಮಯ ಕಳೆದಿದ್ದೇನೆ. ಇಂದು, ನಿಮ್ಮೆಲ್ಲರನ್ನೂ ಭೇಟಿಯಾಗುವ ಸೌಭಾಗ್ಯ ನನಗೆ ಲಭಿಸಿದೆ.

ಸಹೋದರ ಸಹೋದರಿಯರೇ,

ಈ ಕಾರಣಕ್ಕಾಗಿಯೇ ಗುಜರಾತ್‌ ಮತ್ತು ಭಾರತದ ಡಬಲ್‌ ಇಂಜಿನ್‌ ಸರ್ಕಾರ ದೇಶಾದ್ಯಂತದ ಬುಡಕಟ್ಟು ಸಮಾಜದ ಸಮಸ್ಯೆಗಳನ್ನು, ವಿಶೇಷವಾಗಿ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಮಸ್ಯೆಗಳನ್ನು ಸೇವಾ ಮನೋಭಾವದಿಂದ ಸುಧಾರಿಸಲು ಬದ್ಧವಾಗಿದೆ.

ಸಹೋದರ ಸಹೋದರಿಯರೇ,

ಈ ಪ್ರಯತ್ನಗಳ ಭಾಗವಾಗಿ, ದಾಹೋದ್‌ ಮತ್ತು ಪಂಚಮಾರ್ಗ್‌ ಅಭಿವೃದ್ಧಿಗಾಗಿ 22,000 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳನ್ನು ಇಂದು ಉದ್ಘಾಟಿಸಲಾಗಿದೆ ಅಥವಾ ಶಂಕುಸ್ಥಾಪನೆ ಮಾಡಲಾಗಿದೆ. ಇಂದು ಉದ್ಘಾಟನೆಗೊಂಡ ಯೋಜನೆಗಳಲ್ಲಿಒಂದು ಕುಡಿಯುವ ನೀರಿನ ಯೋಜನೆ ಮತ್ತು ದಾಹೋದ್‌ಅನ್ನು ಸ್ಮಾರ್ಟ್‌ ಸಿಟಿಯನ್ನಾಗಿಸಲು ಹಲವಾರು ಯೋಜನೆಗಳಿವೆ. ದಾಹೋದ್‌ನ ನೂರಾರು ಹಳ್ಳಿಗಳ ತಾಯಂದಿರು ಮತ್ತು ಸಹೋದರಿಯರ ಜೀವನವು ಈ ಕುಡಿಯುವ ನೀರಿನ ಯೋಜನೆಯಿಂದ ತುಂಬಾ ಆರಾಮದಾಯಕವಾಗಿರಲಿದೆ.

ಸ್ನೇಹಿತರೇ,

ಈ ಇಡೀ ಪ್ರದೇಶದ ಆಕಾಂಕ್ಷೆಗೆ ಸಂಬಂಧಿಸಿದ ಮತ್ತೊಂದು ಪ್ರಮುಖ ಉಪಕ್ರಮ ಇಂದು ಪ್ರಾರಂಭವಾಗಿದೆ. ದಾಹೋದ್‌ ಈಗ ಮೇಕ್‌ ಇನ್‌ ಇಂಡಿಯಾದ ದೊಡ್ಡ ಕೇಂದ್ರವಾಗಲಿದೆ. ಗುಲಾಮಗಿರಿಯ ಅವಧಿಯಲ್ಲಿಉಗಿ ಲೋಕೋಮೋಟಿವ್‌ಗಾಗಿ ಇಲ್ಲಿಸ್ಥಾಪಿಸಲಾದ ಕಾರ್ಯಾಗಾರ ಈಗ ಮೇಕ್‌ ಇನ್‌ ಇಂಡಿಯಾ ಅಭಿಯಾನಕ್ಕೆ ಉತ್ತೇಜನ ನೀಡಲಿದೆ. ಈಗ ದಾಹೋದ್‌ನ ಪರೇಲ್‌ನಲ್ಲಿ20,000 ಕೋಟಿ ರೂಪಾಯಿಗಳ ಕಾರ್ಖಾನೆಯನ್ನು ಸ್ಥಾಪಿಸಲಾಗುವುದು.

ನಾನು ದಾಹೋದ್‌ಗೆ ಭೇಟಿ ನೀಡಿದಾಗಲೆಲ್ಲಾ ಸಂಜೆ ಪಾರೆಲ್‌ನ ಸೇವಕರ ಸಮುಚ್ಚಯಕ್ಕೆ ಭೇಟಿ ನೀಡುತ್ತಿದ್ದೆ ಮತ್ತು ಸಣ್ಣ ಬೆಟ್ಟಗಳ ಮಧ್ಯದಲ್ಲಿಸಿಲುಕಿರುವ ಪರೇಲ್‌ನ ಆ ಪ್ರದೇಶವನ್ನು ನಾನು ಪ್ರೀತಿಸುತ್ತಿದ್ದೆ. ಅಲ್ಲಿಪ್ರಕೃತಿಯೊಂದಿಗೆ ಸಮಯ ಕಳೆಯಲು ನನಗೆ ಅವಕಾಶ ಸಿಗುತ್ತಿತ್ತು. ಆದರೆ ಪರೇಲ್‌ ಮತ್ತು ಇಡೀ ರೈಲ್ವೆ ವಲಯವು ಕ್ರಮೇಣ ನಿರ್ಜೀವವಾಗುತ್ತಿರುವುದನ್ನು ನೋಡಿ ನನಗೆ ನೋವಾಯಿತು. ಆದರೆ ಪ್ರಧಾನ ಮಂತ್ರಿಯಾದ ನಂತರ, ನಾನು ಅದನ್ನು ಮತ್ತೊಮ್ಮೆ ಜೀವಂತ ಮತ್ತು ವೈಭವಯುತವಾಗಿ ಮಾಡುತ್ತೇನೆ ಎಂದು ಕನಸು ಕಂಡೆ. ಇಂದು ಇಡೀ ಬುಡಕಟ್ಟು ಪ್ರದೇಶಗಳಲ್ಲಿ20,000 ಕೋಟಿ ರೂಪಾಯಿಗಳ ಬೃಹತ್‌ ಹೂಡಿಕೆ ಮತ್ತು ಸಾವಿರಾರು ಯುವಕರಿಗೆ ಉದ್ಯೋಗ ಸೃಷ್ಟಿಯೊಂದಿಗೆ ನನ್ನ ಕನಸು ನನಸಾಗುತ್ತಿದೆ.

 

ಇಂದು ಭಾರತೀಯ ರೈಲ್ವೆಯು ತ್ವರಿತ ವಿದ್ಯುದ್ದೀಕರಣದೊಂದಿಗೆ ಆಧುನಿಕವಾಗುತ್ತಿದೆ. ಗೂಡ್ಸ್‌ ರೈಲುಗಳಿಗಾಗಿ ಪ್ರತ್ಯೇಕ ಮೀಸಲಾದ ಸರಕು ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸರಕು ರೈಲುಗಳು ವೇಗವಾಗಿ ಚಲಿಸಲು ಮತ್ತು ಸರಕುಗಳ ತ್ವರಿತ ಮತ್ತು ಕೈಗೆಟುಕುವ ಸಾರಿಗೆಗಾಗಿ ದೇಶದಲ್ಲಿಲೋಕೋಮೋಟಿವ್‌ಗಳನ್ನು ತಯಾರಿಸುವುದು ಬಹಳ ಮುಖ್ಯ. ವಿದೇಶಗಳಲ್ಲಿಎಲೆಕ್ಟ್ರಿಕ್‌ ಲೋಕೋಮೋಟಿವ್‌ಗಳಿಗೆ ತ್ವರಿತ ಬೇಡಿಕೆ ಇದೆ. ಈ ಬೇಡಿಕೆಯನ್ನು ಪೂರೈಸುವಲ್ಲಿದಾಹೋದ್‌ ದೊಡ್ಡ ಪಾತ್ರವನ್ನು ವಹಿಸುತ್ತದೆ. ದಾಹೋದ್‌ನ ಯುವಕರು ವಿದೇಶಕ್ಕೆ ಭೇಟಿ ನೀಡಿದಾಗಲೆಲ್ಲಾ, ದಾಹೋದ್‌ ನಿರ್ಮಿತ ಲೋಕೋಮೋಟಿವ್‌ಗಳು ಅಲ್ಲಿಓಡುತ್ತಿರುವುದನ್ನು ಅವರು ನೋಡುತ್ತಿದ್ದರು ಮತ್ತು ಅವರು ಅಪಾರ ಸಂತೋಷಪಡುತ್ತಿದ್ದರು.

ಭಾರತವು ಈಗ 9,000 ಅಶ್ವಶಕ್ತಿಯ ಶಕ್ತಿಶಾಲಿ ಲೋಕೋಮೋಟಿವ್‌ಗಳನ್ನು ತಯಾರಿಸುವ ವಿಶ್ವದ ಕೆಲವೇ ದೇಶಗಳಲ್ಲಿಒಂದಾಗಿದೆ. ಈ ಹೊಸ ಕಾರ್ಖಾನೆಯಿಂದ ಸಾವಿರಾರು ಯುವಕರು ಉದ್ಯೋಗವನ್ನು ಪಡೆಯುತ್ತಾರೆ ಮತ್ತು ಹೊಸ ವ್ಯವಹಾರದ ಸಾಧ್ಯತೆಗಳು ಹತ್ತಿರದಲ್ಲಿಬೆಳೆಯುತ್ತವೆ. ಹೊಸ ದಾಹೋದ್‌ ರೂಪುಗೊಳ್ಳಲಿದೆ. ಕೆಲವೊಮ್ಮೆ ನಮ್ಮ ದಾಹೋದ್‌ ಕಠಿಣ ಪರಿಶ್ರಮದ ಮೂಲಕ ಬರೋಡಾವನ್ನು ಮೀರಿಸಲಿದೆ ಎಂದು ತೋರುತ್ತದೆ.

 

ನಾನು ನನ್ನ ಜೀವನದ ಅನೇಕ ದಶಕಗಳನ್ನು ದಾಹೋದ್‌ನಲ್ಲಿಕಳೆದಿದ್ದೇನೆ. ಆದರೆ ಇಂದು ನಿಮ್ಮ ಉತ್ಸಾಹಕ್ಕೆ ಸಾಟಿಯಿಲ್ಲ. ಒಂದು ಕಾಲದಲ್ಲಿನಾನು ಇಲ್ಲಿಅನೇಕ ಕಾರ್ಯಕ್ರಮಗಳಲ್ಲಿಭಾಗವಹಿಸಲು ಸ್ಕೂಟರ್‌ ಅಥವಾ ಬಸ್ಸಿನಲ್ಲಿಬರುತ್ತಿದ್ದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆದರೆ ನಾನು ಮುಖ್ಯಮಂತ್ರಿಯಾಗಿದ್ದಾಗ ಇಷ್ಟು ದೊಡ್ಡ ಕಾರ್ಯಕ್ರಮ ನಡೆಯಲಿಲ್ಲ. ಇಂದು, ಗುಜರಾತ್‌ನ ಜನಪ್ರಿಯ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್‌ ಅವರು ಈ ಹಿಂದೆ ಎಂದೂ ನೋಡಿರದ ಇಂತಹ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದು ನನಗೆ ಹೆಮ್ಮೆ ಎನಿಸುತ್ತಿದೆ. ನನ್ನ ಮುಂದೆ ಜನರ ದೊಡ್ಡ ಸಾಗರ! ಭೂಪೇಂದ್ರಭಾಯಿ, ಸಿ.ಆರ್‌. ಪಾಟೀಲ್‌ ಮತ್ತು ಅವರ ಇಡೀ ತಂಡವನ್ನು ನಾನು ತುಂಬಾ ಅಭಿನಂದಿಸುತ್ತೇನೆ.

 

ಸಹೋದರ ಸಹೋದರಿಯರೇ,

ಒಂದು ವಿಷಯವು ಮುಖ್ಯವಾಗಿದೆ, ಮತ್ತು ಅದು ನಮ್ಮ ತಾಯಂದಿರು ಮತ್ತು ಸಹೋದರಿಯರನ್ನು ಪ್ರಗತಿಯ ಈ ಹಾದಿಯಲ್ಲಿಹಿಂದೆ ಬಿಡಬಾರದು. ಅವರು ಈ ಪ್ರಗತಿಯಲ್ಲಿಮುಂದುವರಿಯಬೇಕು. ಆದ್ದರಿಂದ, ಪ್ರಗತಿಯಲ್ಲಿರುವ ತಾಯಂದಿರು ಮತ್ತು ಸಹೋದರಿಯರ ಕಲ್ಯಾಣ ಮತ್ತು ಭಾಗವಹಿಸುವಿಕೆ ಯಾವಾಗಲೂ ನನ್ನ ಯೋಜನೆಗಳ ತಿರುಳಾಗಿ ಉಳಿಯುತ್ತದೆ. ನೀರಿನ ಸಮಸ್ಯೆ ಇದ್ದರೆ ಆಗ ತಾಯಂದಿರು ಮತ್ತು ಸಹೋದರಿಯರು ಗರಿಷ್ಠ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ನಲ್ಲಿನೀರನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ನಾನು ನಿರ್ಧರಿಸಿದ್ದೇನೆ. ಶೀಘ್ರದಲ್ಲೇ, ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದದಿಂದಾಗಿ ನಾನು ಈ ಸಂಕಲ್ಪವನ್ನು ಈಡೇರಿಸಲಿದ್ದೇನೆ. ನಿಮ್ಮ ಮನೆಗಳಿಗೆ ನೀರು ಒದಗಿಸುವ ಅವಕಾಶವನ್ನು ನಾನು ಪಡೆಯಲಿದ್ದೇನೆ. ಕಳೆದ ಎರಡೂವರೆ ವರ್ಷಗಳಲ್ಲಿಆರು ಕೋಟಿಗೂ ಹೆಚ್ಚು ಕುಟುಂಬಗಳಿಗೆ ಕೊಳವೆ ಮಾರ್ಗದ ಮೂಲಕ ನೀರು ಒದಗಿಸುವಲ್ಲಿನಾವು ಯಶಸ್ವಿಯಾಗಿದ್ದೇವೆ. ಗುಜರಾತ್‌ನಲ್ಲೂನಾವು ಐದು ಲಕ್ಷ  ಬುಡಕಟ್ಟು ಕುಟುಂಬಗಳಿಗೆ ನಲ್ಲಿನೀರನ್ನು ಖಚಿತಪಡಿಸಿದ್ದೇವೆ ಮತ್ತು ಇದು ಭವಿಷ್ಯದಲ್ಲಿಇನ್ನಷ್ಟು ವೇಗವನ್ನು ಪಡೆದುಕೊಳ್ಳಲಿದೆ.

 

ಸಹೋದರ ಸಹೋದರಿಯರೇ,

ಕೊರೊನಾದ ಬಿಕ್ಕಟ್ಟು ಇನ್ನೂ ಮುಗಿದಿಲ್ಲಮತ್ತು ಈಗ ಯುದ್ಧದ ವರದಿಗಳಿವೆ. ಈಗ ಕೊರೊನಾ ನಡುವೆ ಹೊಸ ಸಮಸ್ಯೆ ಎದುರಾಗಿದೆ. ಇದೆಲ್ಲದರ ಹೊರತಾಗಿಯೂ ದೇಶವು ತೊಂದರೆಗಳು ಮತ್ತು ಅನಿಶ್ಚಿತತೆಯ ನಡುವೆ ತಾಳ್ಮೆಯಿಂದ ಮುಂದುವರಿಯುತ್ತಿದೆ. ಸಂಕಷ್ಟದ ಸಮಯದಲ್ಲೂಸರ್ಕಾರ ಬಡವರನ್ನು ಮರೆತ್ತಿಲ್ಲ. ಸಮಾಜದ ಕಟ್ಟಕಡೆಯ ಅಂಚಿನಲ್ಲಿರುವ ಬಡವರು, ಬುಡಕಟ್ಟು ಜನರು, ದಲಿತರು, ಹಿಂದುಳಿದ ಸಮುದಾಯದ ಕಲ್ಯಾಣ  ನನ್ನ ಪ್ರಮುಖ ಕಾಳಜಿಯಾಗಿತ್ತು. ಕೆಲಸಕ್ಕಾಗಿ ನಗರಗಳಿಗೆ ಹೋಗುವ ದಾಹೋದ್‌ನ ಜನರು ಎಲ್ಲವನ್ನೂ ಮುಚ್ಚಿದಾಗ ಮನೆಗೆ ಮರಳುತ್ತಿದ್ದಂತೆ ಬಡವರ ಒಲೆ ಉರಿಯುತ್ತಲೇ ಇರುವುದನ್ನು ಖಚಿತಪಡಿಸಿಕೊಳ್ಳಲು ನಾನು ಎಚ್ಚೆತ್ತುಕೊಂಡೆ. ಕಳೆದ ಎರಡು ವರ್ಷಗಳಲ್ಲಿ80 ಕೋಟಿ ಕುಟುಂಬಗಳಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವ ಮೂಲಕ ನಾವು ವಿಶ್ವದಾಖಲೆಯನ್ನು ನಿರ್ಮಿಸಿದ್ದೇವೆ.

 

ನನ್ನ ಬಡ ಬುಡಕಟ್ಟು ಕುಟುಂಬಗಳು ಪಕ್ಕಾ ಮನೆ, ಶೌಚಾಲಯ, ವಿದ್ಯುತ್‌, ನೀರು, ಅನಿಲ ಸಂಪರ್ಕವನ್ನು ಹೊಂದಿರಬೇಕು ಮತ್ತು ಅವರ ಹಳ್ಳಿಗಳ ಬಳಿ ಸ್ವಾಸ್ಥ್ಯ ಕೇಂದ್ರ, ಆಸ್ಪತ್ರೆ ಮತ್ತು 108 (ಡಯಲ್‌) ಸೌಲಭ್ಯಗಳನ್ನು ಹೊಂದಿರಬೇಕು ಎಂದು ನಾವು ಕನಸು ಕಂಡಿದ್ದೇವೆ. ಬಡ ಮಕ್ಕಳಿಗೆ ಉತ್ತಮ ಶಾಲೆಯ ಸೌಲಭ್ಯಗಳು ಇರಬೇಕು ಮತ್ತು ಹಳ್ಳಿಗಳಲ್ಲಿಉತ್ತಮ ರಸ್ತೆಗಳು ಇರಬೇಕು. ಗುಜರಾತ್‌ನ ಹಳ್ಳಿಗಳಲ್ಲಿಈ ಎಲ್ಲಾ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿನಾವು ಮುಂದೆ ಸಾಗುತ್ತಿದ್ದೇವೆ.

 

ಕೇಂದ್ರ ಮತ್ತು ಗುಜರಾತ್‌ ಸರ್ಕಾರಗಳ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಕುಳಿತು ಇಲ್ಲಿಗೆ ಬರುವ ಮೊದಲು ಅವರ ಅನುಭವಗಳನ್ನು ಆಲಿಸಿದಾಗ ನನಗೆ ತುಂಬಾ ಸಂತಸವಾಯಿತು. ಐದು ಅಥವಾ 7ನೇ ತರಗತಿಯವರೆಗೆ ಓದದ ನನ್ನ ತಾಯಂದಿರು ಮತ್ತು ಸಹೋದರಿಯರು ಸಾವಯವ ಕೃಷಿಯನ್ನು ಆಶ್ರಯಿಸುವ ಮೂಲಕ ಭೂಮಿ ತಾಯಿಯನ್ನು ರಾಸಾಯನಿಕಗಳಿಂದ ಮುಕ್ತವಾಗಿಡಲು ನಿರ್ಧರಿಸಿದ್ದಾರೆ ಮತ್ತು ಅವರ ತರಕಾರಿಗಳನ್ನು ಅಹಮದಾಬಾದ್‌ನ ಮಾರುಕಟ್ಟೆಗಳಲ್ಲಿದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು. ಬುಡಕಟ್ಟು ಹಳ್ಳಿಗಳ ತಾಯಂದಿರು ಮತ್ತು ಸಹೋದರಿಯರು ನನ್ನೊಂದಿಗೆ ಮಾತನಾಡುತ್ತಿದ್ದಾಗ ಅವರ ಕಣ್ಣುಗಳಲ್ಲಿನ ಹೊಳಪನ್ನು ನಾನು ನೋಡಿದೆ. ನನಗೆ ನೆನಪಿದೆ. ಒಂದು ಕಾಲದಲ್ಲಿದಾಹೋದ್‌ನಲ್ಲಿಹೂವು ಕೃಷಿಯು ವೇಗವನ್ನು ಪಡೆದುಕೊಂಡಿತ್ತು ಮತ್ತು ದಾಹೋದ್‌ನ ಹೂವುಗಳನ್ನು ಮುಂಬೈನ ದೇವತೆಗಳಿಗೆ ಅರ್ಪಿಸಲಾಗುತ್ತಿತ್ತು. ಈಗ ನಮ್ಮ ರೈತರು ಸಾವಯವ ಕೃಷಿಯತ್ತ ಮುಖ ಮಾಡಿದ್ದಾರೆ. ಬುಡಕಟ್ಟು ಸಹೋದರರು ಅಂತಹ ದೊಡ್ಡ ಬದಲಾವಣೆಯನ್ನು ತಂದಾಗ, ಪ್ರತಿಯೊಬ್ಬರೂ ಅವರನ್ನು ಅನುಸರಿಸಬೇಕು ಎಂದು ನೀವು ಅರ್ಥಮಾಡಿಕೊಳ್ಳಬೇಕು.

 

ಇಂದು ನನಗೆ ದಿವ್ಯಾಂಗ ದಂಪತಿಗಳನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು ಮತ್ತು ಅವರು ಸರ್ಕಾರದ ಆರ್ಥಿಕ ಸಹಾಯದಿಂದ ಸಾಮಾನ್ಯ ಸೇವಾ ಕೇಂದ್ರವನ್ನು ಪ್ರಾರಂಭಿಸಿದ್ದು ನನಗೆ ಆಶ್ಚರ್ಯವನ್ನುಂಟುಮಾಡಿತು. ಸರ್ಕಾರ ತನಗೆ ಸಾಕಷ್ಟು ಸಹಾಯ ಮಾಡಿದೆ ಎಂದು ಅವರು ನನಗೆ ಹೇಳಿದರು. ಆದರೆ ಅವರು ಈಗ ಸೇವೆಗಳಿಗಾಗಿ ಯಾವುದೇ ದಿವ್ಯಾಂಗ ವ್ಯಕ್ತಿಯಿಂದ ಒಂದು ಪೈಸೆಯನ್ನೂ ಪಡೆಯದಿರಲು ನಿರ್ಧರಿಸಿದ್ದಾರೆ. ಈ ಕುಟುಂಬಕ್ಕೆ ನಾನು ನಮಸ್ಕರಿಸುತ್ತೇನೆ. ಬುಡಕಟ್ಟು ಕುಟುಂಬಗಳ ಪಾಲನೆಯನ್ನು ನೋಡಿ ಮತ್ತು ನಾವು ಅವರಿಂದ ಸಾಕಷ್ಟು ಕಲಿಯಬಹುದು. ಬುಡಕಟ್ಟು ಕುಟುಂಬಗಳ ಕಲ್ಯಾಣಕ್ಕಾಗಿ ವನಬಂಧು ಕಲ್ಯಾಣ ಯೋಜನೆಯನ್ನು ಪ್ರಾರಂಭಿಸಲಾಯಿತು. ದಕ್ಷಿಣ ಗುಜರಾತ್‌ ದೀರ್ಘಕಾಲದವರೆಗೆ ಕುಡುಗೋಲು ಕೋಶ ರೋಗದಿಂದ ಬಳಲುತ್ತಿತ್ತು. ಅನೇಕ ಸರ್ಕಾರಗಳು ಬಂದವು. ಆದರೆ ನಾವು ಅದನ್ನು ನಿಭಾಯಿಸಲು ನಿರ್ಧರಿಸಿದ್ದೇವೆ ಮತ್ತು ಇಂದು ಈ ನಿಟ್ಟಿನಲ್ಲಿಕೆಲಸವು ದೊಡ್ಡ ಪ್ರಮಾಣದಲ್ಲಿಪ್ರಗತಿಯಲ್ಲಿದೆ. ವಿಜ್ಞಾನ ಖಂಡಿತವಾಗಿಯೂ ನಮಗೆ ಸಹಾಯ ಮಾಡುತ್ತದೆ ಮತ್ತು ಅನೇಕ ವೈಜ್ಞಾನಿಕ ಆವಿಷ್ಕಾರಗಳು ನಡೆಯುತ್ತಿವೆ ಎಂದು ಬುಡಕಟ್ಟು ಕುಟುಂಬಗಳಿಗೆ ನಾನು ಭರವಸೆ ನೀಡಲು ಬಯಸುತ್ತೇನೆ. ನನ್ನ ಬುಡಕಟ್ಟು ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಹಲವಾರು ವರ್ಷಗಳಿಂದ ಸಹಿಸಿಕೊಂಡು ಬರಬೇಕಾಗಿದ್ದ ಕುಡುಗೋಲು ಕೋಶ ರೋಗದ ಈ ಸಮಸ್ಯೆಯನ್ನು ಪರಿಹರಿಸಲು ನಾವು ಶ್ರಮಿಸುತ್ತಿದ್ದೇವೆ.

 

ಸಹೋದರ ಸಹೋದರಿಯರೇ,

 

ಭಾರತ ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭದಲ್ಲಿಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಆದರೆ ಈ ದೇಶದ ದುರದೃಷ್ಟವೆಂದರೆ ಏಳು ದಶಕಗಳ ನಂತರವೂ ಸ್ವಾತಂತ್ರ್ಯದ ಮೂಲ ಹೋರಾಟಗಾರರಾಗಿದ್ದವರ ಮೇಲೆ ಇತಿಹಾಸವು ಕುರುಡಾಗಿ ನೋಡಿದೆ. ಅವರು ತಮ್ಮ ನ್ಯಾಯಯುತ ಬಾಕಿಗಳನ್ನು ಪಡೆಯಲಿಲ್ಲ. ನಾನು ಗುಜರಾತ್‌ನಲ್ಲಿದ್ದಾಗ ಈ ನಿಟ್ಟಿನಲ್ಲಿಉಪಕ್ರಮ ಕೈಗೊಂಡಿದ್ದೆ. ನಮ್ಮ ಬುಡಕಟ್ಟು ಯುವಕ ಭಗವಾನ್‌ ಬಿರ್ಸಾ ಮುಂಡಾ ಅವರು ಕೇವಲ 20-22 ವರ್ಷ ವಯಸ್ಸಿನವರಾಗಿದ್ದಾಗ 1857 ರ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿಬ್ರಿಟಿಷರಿಗೆ ಜೀವನವನ್ನು ಕಷ್ಟಕರಗೊಳಿಸಿದ್ದರು. ಜನರು ಅವನನ್ನು ಮರೆತರು. ಆದರೆ ನಾವು ಜಾರ್ಖಂಡ್‌ನಲ್ಲಿಭಗವಾನ್‌ ಬಿರ್ಸಾ ಮುಂಡಾ ಅವರ ಭವ್ಯವಾದ ವಸ್ತು ಸಂಗ್ರಹಾಲಯವನ್ನು ನಿರ್ಮಿಸಿದ್ದೇವೆ.

 

ದಾಹೋದ್‌ನ ಸಹೋದರ ಸಹೋದರಿಯರಿಗೆ, ವಿಶೇಷವಾಗಿ ಶೈಕ್ಷ ಣಿಕ ಲೋಕದ ಜನರಿಗೆ ನಾನು ಒಂದು ವಿನಂತಿಯನ್ನು ಮಾಡಬೇಕಾಗಿದೆ. ವಿವಿಧ ಜಿಲ್ಲೆಗಳಲ್ಲಿಆಗಸ್ಟ್‌ 15, ಜನವರಿ 26 ಮತ್ತು ಮೇ 1 ರಂದು ಆಚರಿಸುವ ಬಗ್ಗೆ ನಿಮಗೆ ತಿಳಿದಿರಬಹುದು. ಒಮ್ಮೆ ದಾಹೋದ್‌ ನ ಬುಡಕಟ್ಟು ಸಮುದಾಯದ ತ್ಯಾಗದ ನೆನಪಿಗಾಗಿ ದಾಹೋದ್‌ನಲ್ಲಿಒಂದು ಉತ್ಸವವಿತ್ತು. ನಮ್ಮ ಬುಡಕಟ್ಟು ಸಮುದಾಯವು 22 ದಿನಗಳ ಕಾಲ ಯುದ್ಧವನ್ನು ನಡೆಸಿತು ಮತ್ತು ಮಂಘರ್‌ನ ಪರ್ವತ ಪ್ರದೇಶದಲ್ಲಿಬ್ರಿಟಿಷರನ್ನು ಬೆವರು ಹರಿಸುವಂತೆ ಮಾಡಿತ್ತು. ಮತ್ತು ನಾವು ಗೋವಿಂದ ಗುರುಗಳನ್ನು ಮರೆಯಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಗೋವಿಂದ ಗುರುಗಳ ತ್ಯಾಗದ ಸ್ಮರಣಾರ್ಥ ಮಂಘರ್‌ನಲ್ಲಿಅವರ ಸ್ಮಾರಕವನ್ನು ನಿರ್ಮಿಸಲಾಗಿದೆ.

 

ಅದು ದೇವಘಢ್‌ ಬಾರಿಯಾ, ಲಿಮ್ಖೇಡಾ, ಲಿಂಬ್ಡಿ, ದಾಹೋದ್‌, ಸಂತರಾಂಪುರ, ಜಲೋಡ್‌ ಆಗಿರಲಿ, 1857 ರ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿಬುಡಕಟ್ಟು ಸಮುದಾಯವು ಬಾಣಗಳನ್ನು ಬಾಣಗಳನ್ನು ಹಿಡಿದು ಬ್ರಿಟಿಷರ ವಿರುದ್ಧ ಯುದ್ಧಭೂಮಿಗೆ ಇಳಿಯದಿರುವ ಪ್ರದೇಶಗಳಿಲ್ಲ. ಇದು ಇತಿಹಾಸದಲ್ಲಿಇದೆ. ಅವರಲ್ಲಿಅನೇಕರನ್ನು ಗಲ್ಲಿಗೇರಿಸಲಾಯಿತು. ಜಲಿಯನ್‌ ವಾಲಾಬಾಗ್‌ನಲ್ಲಿನಡೆದಂತೆ ಬ್ರಿಟಿಷರು ಈ ಬುಡಕಟ್ಟು ಪ್ರದೇಶದಲ್ಲಿಇದೇ ರೀತಿಯ ಹತ್ಯಾಕಾಂಡವನ್ನು ಮಾಡಲಾಯಿತು. ಆದರೆ ಇತಿಹಾಸ ಎಲ್ಲವನ್ನೂ ಮರೆತಿದೆ. ಆದ್ದರಿಂದ, 75 ವರ್ಷಗಳ ಸ್ವಾತಂತ್ರ್ಯದ ಸಂದರ್ಭದಲ್ಲಿಬುಡಕಟ್ಟು ಸಮುದಾಯದಿಂದ ಪೂಜ್ಯನೀಯರಾದ ಗೋವಿಂದ ಗುರು ಅವರ ತ್ಯಾಗ ಸೇರಿದಂತೆ ಹಾಡುಗಳನ್ನು ಬರೆಯಲು ಮತ್ತು ಘಟನೆಗಳನ್ನು ಪುನರುಜ್ಜೀವನಗೊಳಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ನಾನು ದಾಹೋದ್‌ನ ಶಾಲೆಗಳು ಮತ್ತು ಶಿಕ್ಷ ಕರನ್ನು ವಿನಂತಿಸುತ್ತೇನೆ. ಈ ಭವಿಷ್ಯದ ಪೀಳಿಗೆಯನ್ನು ಅವರು ತಿಳಿದುಕೊಳ್ಳಬೇಕು ಮತ್ತು ಅವರಿಂದ ಸೂಧಿರ್ತಿ ಪಡೆಯಬೇಕು.

 

ಸಹೋದರ ಸಹೋದರಿಯರೇ,

ನಮ್ಮ ಬುಡಕಟ್ಟು ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ವೈದ್ಯರು ಮತ್ತು ದಾದಿಯರಾಗ ಬೇಕು ಎಂದು ನಾನು ಯಾವಾಗಲೂ ಕನಸು ಕಂಡಿದ್ದೆ. ನಾನು ಗುಜರಾತಿನ ಮುಖ್ಯಮಂತ್ರಿಯಾದಾಗ ಅಂಬಾಜಿಯಿಂದ ಉರ್ಮ ಗಾಂವ್‌ ವರೆಗೆ ಈ ಪ್ರದೇಶದಲ್ಲಿಶಾಲೆಗಳು ಇದ್ದವು. ಆದರೆ ವಿಜ್ಞಾನ ಶಾಲೆಗಳು ಮತ್ತು ಕಾಲೇಜುಗಳು ಇರಲಿಲ್ಲ. ವಿಜ್ಞಾನ ಶಾಲೆಗಳು ಮತ್ತು ಕಾಲೇಜುಗಳ ಅನುಪಸ್ಥಿತಿಯಲ್ಲಿನನ್ನ ಬುಡಕಟ್ಟು ಮಗ ಅಥವಾ ಮಗಳು ಎಂಜಿನಿಯರ್‌ ಅಥವಾ ವೈದ್ಯರಾಗಲು ಹೇಗೆ ಸಾಧ್ಯ? ಆದ್ದರಿಂದ, ನಾನು ವಿಜ್ಞಾನ ಶಾಲೆಗಳೊಂದಿಗೆ ಪ್ರಾರಂಭಿಸಿದೆ ಮತ್ತು ಬುಡಕಟ್ಟು ಪ್ರದೇಶಗಳ ಪ್ರತಿ ತಾಲೂಕಿನಲ್ಲಿಒಂದು ವಿಜ್ಞಾನ ಶಾಲೆಯನ್ನು ನಿರ್ಮಿಸಲು ನಿರ್ಧರಿಸಿದೆ. ಇಂದು ವೈದ್ಯಕೀಯ ಕಾಲೇಜುಗಳು, ಡಿಪ್ಲೊಮಾ ಎಂಜಿನಿಯರಿಂಗ್‌ ಕಾಲೇಜುಗಳು, ನರ್ಸಿಂಗ್‌ ಕಾಲೇಜುಗಳು ಬುಡಕಟ್ಟು ಜಿಲ್ಲೆಗಳಲ್ಲಿನಡೆಯುತ್ತಿವೆ ಮತ್ತು ನನ್ನ ಬುಡಕಟ್ಟು ಗಂಡು ಮಕ್ಕಳು ಮತ್ತು ಹೆಣ್ಣುಮಕ್ಕಳು ವೈದ್ಯರಾಗಲು ಸಿದ್ಧರಾಗಿದ್ದಾರೆ ಎಂದು ನನಗೆ ಸಂತೋಷವಾಗಿದೆ. ಇಲ್ಲಿಂದ ಮಕ್ಕಳು ಭಾರತ ಸರ್ಕಾರದ ವಿವಿಧ ಯೋಜನೆಗಳ ಮೂಲಕ ವಿದೇಶಕ್ಕೆ ಅಧ್ಯಯನ ಮಾಡಲು ಹೋಗಿದ್ದಾರೆ. ಸಹೋದರ ಸಹೋದರಿಯರೇ, ನಾವು ಪ್ರಗತಿಯ ದಿಕ್ಕನ್ನು ಒದಗಿಸಿದ್ದೇವೆ ಮತ್ತು ನಾವು ಆ ಹಾದಿಯಲ್ಲಿನಡೆಯುತ್ತಿದ್ದೇವೆ. ಇಂದು ನಾವು ದೇಶಾದ್ಯಂತ 750 ಏಕಲವ್ಯ ಮಾದರಿ ಶಾಲೆಗಳನ್ನು ಸ್ಥಾಪಿಸಲು ಕೆಲಸ ಮಾಡುತ್ತಿದ್ದೇವೆ, ಅಂದರೆ, ಪ್ರತಿ ಜಿಲ್ಲೆಯಲ್ಲೂಕನಿಷ್ಠ ಒಂದು ಏಕಲವ್ಯ ಮಾದರಿ ಶಾಲೆಯನ್ನು ಸ್ಥಾಪಿಸಲು ನಾವು ಕೆಲಸ ಮಾಡುತ್ತಿದ್ದೇವೆ. ನಮ್ಮ ಬುಡಕಟ್ಟು ಸಮುದಾಯದ ಮಕ್ಕಳು ಏಕಲವ್ಯ ಶಾಲೆಗಳಲ್ಲಿಆಧುನಿಕ ಶಿಕ್ಷ ಣವನ್ನು ಪಡೆಯುವುದನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ.

 

ಸ್ವಾತಂತ್ರ್ಯದ ನಂತರ ಕೇವಲ 18 ಬುಡಕಟ್ಟು ಸಂಶೋಧನಾ ಸಂಸ್ಥೆಗಳು ಇದ್ದವು. ಏಳು ದಶಕಗಳಲ್ಲಿಕೇವಲ 18 ಮಾತ್ರ. ನನ್ನ ಬುಡಕಟ್ಟು ಸಹೋದರ ಸಹೋದರಿಯರನ್ನು ಆಶೀರ್ವದಿಸಿ, ತಾವು ಏಳು ವರ್ಷಗಳಲ್ಲಿಇನ್ನೂ ಒಂಬತ್ತನ್ನು ನಿರ್ಮಿಸಿದೆ. ಪ್ರಗತಿಯನ್ನು ಹೇಗೆ ಸಾಧಿಸಲಾಗುತ್ತದೆ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ. ನಾವು ಪ್ರಗತಿಯ ಬಗ್ಗೆ ಚಿಂತಿತರಾಗಿದ್ದೇವೆ ಮತ್ತು ಅದಕ್ಕಾಗಿಯೇ ನಾನು ಮತ್ತೊಂದು ಉಪಕ್ರಮವನ್ನು ಮಾಡಿದ್ದೇನೆ. ನಾನು ಜನರ ನಡುವೆ ಹೋಗುತ್ತಿದ್ದಾಗ ನಾನು ಸಣ್ಣ ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದೆ ಎಂದು ನನಗೆ ನೆನಪಿದೆ. (ಡಯಲ್‌) 108 (ತುರ್ತು ಸೇವೆಗಳಿಗೆ ಉಚಿತ ದೂರವಾಣಿ ಸಂಖ್ಯೆ) ಸೌಲಭ್ಯವಿತ್ತು. ನಾನು ದಾಹೋದ್‌ಗೆ ಬಂದಾಗ ಮತ್ತು ಕೆಲವು ಸಹೋದರಿಯರನ್ನು ಭೇಟಿಯಾದಾಗ, ನಾನು ಅವರ ಮನೆಗಳಿಗೆ ಭೇಟಿ ನೀಡುತ್ತಿದ್ದೆ ಮತ್ತು ಅವರೊಂದಿಗೆ ಊಟವನ್ನೂ ಮಾಡುತ್ತಿದ್ದೆ. ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು 108 ಕ್ಕೆ ಡಯಲ್‌ ಮಾಡಿದ ನಂತರ ತುರ್ತುಸ್ಥಿತಿಗಾಗಿ ಆಸ್ಪತ್ರೆಗೆ ಸಾಗಿಸುವ ಹೊತ್ತಿಗೆ, ದೇಹದಲ್ಲಿಹರಡುವ ವಿಷದಿಂದಾಗಿ ಅವನು ಸಾಯುತ್ತಾನೆ ಎಂದು ಅವರು ನನಗೆ ಹೇಳಿದರು. ಈ ಹಾವು ಕಡಿತದ ಸಮಸ್ಯೆಯು ದಕ್ಷಿಣ ಗುಜರಾತ್‌, ಮಧ್ಯ ಗುಜರಾತ್‌ ಮತ್ತು ಉತ್ತರ ಗುಜರಾತ್‌ನಲ್ಲಿಅಸ್ತಿತ್ವದಲ್ಲಿತ್ತು. ನಂತರ ನಾನು ಹಾವುಗಳಿಂದ ಕಚ್ಚಲ್ಪಟ್ಟ ಜನರನ್ನು ಉಳಿಸಲು ತಕ್ಷ ಣದ ಚುಚ್ಚುಮದ್ದುಗಳನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಿದೆ ಮತ್ತು ಇಂದು ಈ ಸೌಲಭ್ಯವು 108ಕ್ಕೆ ಲಭ್ಯವಿದೆ.

 

ಪಶುಸಂಗೋಪನೆ... ಇಂದು ಪಂಚಮಹಲ್‌ನ ಡೇರಿಯು ಗುಂಯ್‌ ಗುಡುತ್ತಿದೆ ಮತ್ತು ತನ್ನದೇ ಆದ ಹೆಸರಿನಿಂದ ಗುರುತಿಸಿಕೊಂಡದೆ. ಇಲ್ಲದಿದ್ದರೆ, ಅದರ ಬಗ್ಗೆ ಮೊದಲು ಯಾರಿಗೂ ತಿಳಿದಿರಲಿಲ್ಲ. ಗುಜರಾತ್‌ ಅಭಿವೃದ್ಧಿಯ ಎಲ್ಲಕ್ಷೇತ್ರಗಳಲ್ಲೂಪ್ರಗತಿ ಸಾಧಿಸಿದೆ. ಸಖಿ ಮಂಡಲವು ಬಹುತೇಕ ಪ್ರತಿಯೊಂದು ಹಳ್ಳಿಯಲ್ಲೂನಡೆಯುತ್ತಿದೆ ಮತ್ತು ಸಹೋದರಿಯರೇ ಸ್ವತಃ ಸಖಿ ಮಂಡಲವನ್ನು ಮುನ್ನಡೆಸುತ್ತಿದ್ದಾರೆ ಎಂದು ನನಗೆ ಸಂತೋಷವಾಗಿದೆ. ನೂರಾರು ಮತ್ತು ಸಾವಿರಾರು ಬುಡಕಟ್ಟು ಕುಟುಂಬಗಳು ಇದರ ಪ್ರಯೋಜನವನ್ನು ಪಡೆಯುತ್ತಿವೆ. ಆರ್ಥಿಕ ಪ್ರಗತಿ, ಆಧುನಿಕ ಕೃಷಿ, ಪ್ರತಿ ಮನೆಯಲ್ಲೂನಲ್ಲಿನೀರು, ಮನೆಗಳು, ವಿದ್ಯುತ್‌, ಶೌಚಾಲಯಗಳು ಮತ್ತು ವಿದ್ಯಾರ್ಥಿಗಳಿಗೆ ಶಾಲೆಗಳು ಸೇರಿದಂತೆ ನಾವು ಸರ್ವತೋಮುಖ ಅಭಿವೃದ್ಧಿಯನ್ನು ಖಾತ್ರಿಪಡಿಸುತ್ತಿದ್ದೇವೆ. ಇಂದು ನಾನು ದಾಹೋದ್‌ ಜಿಲ್ಲೆಯಲ್ಲಿಭಾಷಣ ಮಾಡುತ್ತಿರುವಾಗ ಮತ್ತು ಉಮರ್ಗಾಮ್‌ನಿಂದ ಅಂಬಾಜಿಯವರೆಗಿನ ನನ್ನ ಎಲ್ಲಾ ಬುಡಕಟ್ಟು ನಾಯಕರು ವೇದಿಕೆಯ ಮೇಲೆ ಕುಳಿತಾಗ, ನನಗೆ ಒಂದು ಆಸೆ ಇದೆ ಮತ್ತು ನೀವು ಈ ಆಸೆಯನ್ನು ಈಡೇರಿಸಬಹುದು. ನೀವು ಅದನ್ನು ಪೂರೈಸುವಿರಾ? ನಿಮ್ಮ ಕೈಯನ್ನು ಮೇಲಕ್ಕೆತ್ತಿ ಮತ್ತು ನೀವು ಅದನ್ನು ಮಾಡುತ್ತೀರಿ ಎಂದು ನನಗೆ ಭರವಸೆ ನೀಡಿ. ಈ ಕ್ಯಾಮೆರಾ ಎಲ್ಲವನ್ನೂ ದಾಖಲಉ ಮಾಡುತ್ತಿದೆ ಮತ್ತು ನಾನು ಅದನ್ನು ನಂತರ ಪರಿಶೀಲಿಸುತ್ತೇನೆ.

 ನೀವು ನನ್ನನ್ನು ಎಂದಿಗೂ ನಿರಾಶೆಪಡಿಸಿಲ್ಲ. ಪ್ರತಿಯೊಬ್ಬ ಬುಡಕಟ್ಟು ಸಹೋದರ ಕೂಡ ತಾನು ಏನನ್ನಾದರೂ ಮಾಡುತ್ತೇನೆ ಎಂದು ಹೇಳುತ್ತಾನೆ ಮತ್ತು ಅವನು ಅದನ್ನು ಮಾಡುತ್ತಾನೆ ಎಂದು ನನಗೆ ತಿಳಿದಿದೆ. ನಾವು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವ ಈ ಸಮಯದಲ್ಲಿ, ನಾವು ಪ್ರತಿ ಬುಡಕಟ್ಟು ಜಿಲ್ಲೆಯಲ್ಲೂ75 ಕೊಳಗಳನ್ನು ನಿರ್ಮಿಸಬಹುದಲ್ಲವೇ? ನೀವು ಈ ಪ್ರತಿಜ್ಞೆಯನ್ನು ತೆಗೆದುಕೊಂಡರೆ ಅಂಬಾಜಿಯಿಂದ ಉಮರ್ಗಾಮ್‌ ವರೆಗಿನ ವ್ಯಾಪ್ತಿಯು ನೀರಿನಿಂದ ಸಮೃದ್ಧವಾಗಿರುತ್ತದೆ. ಸ್ವಾತಂತ್ರ್ಯದ ಈ ಅಮೃತ ಮಹೋತ್ಸವದ ಸಮಯದಲ್ಲಿನಾವು ಜಲ ಉತ್ಸವಗಳನ್ನು ಆಯೋಜಿಸೋಣ ಮತ್ತು ಕೊಳಗಳನ್ನು ಸೃಷ್ಟಿಸೋಣ. ಸ್ವಾತಂತ್ರ್ಯದ 75 ನೇ ವರ್ಷ ಮತ್ತು ಸ್ವಾತಂತ್ರ್ಯದ 100ನೇ ವರ್ಷದ ನಡುವಿನ 25 ವರ್ಷಗಳ ಈ ಸದ್ಗುಣದ ಅವಧಿಯು ಬಹಳ ಮುಖ್ಯವಾಗಿದೆ.

ಇಂದಿನ 18-20 ವರ್ಷದ ಯುವಕರು ದೇಶವನ್ನು ಮುನ್ನಡೆಸುತ್ತಿರುವಾಗ ದೇಶವು ಅಂತಹ ಎತ್ತರದಲ್ಲಿರಬೇಕು. ನನ್ನ ಬುಡಕಟ್ಟು ಸಹೋದರ ಸಹೋದರಿಯರು ಮತ್ತು ಗುಜರಾತ್‌ ಈ ಕೆಲಸದಲ್ಲಿಹಿಂದೆ ಬೀಳುವುದಿಲ್ಲಎಂಬ ಸಂಪೂರ್ಣ ನಂಬಿಕೆ ನನಗಿದೆ. ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿಬಂದಿದ್ದೀರಿ. ನನ್ನನ್ನು ಆಶೀರ್ವದಿಸಿದ್ದೀರಿ ಮತ್ತು ನನಗೆ ಸಾಕಷ್ಟು ಗೌರವವನ್ನು ನೀಡಿದ್ದೀರಿ. ನಾನು ನಿಮ್ಮಲ್ಲಿಒಬ್ಬನಾಗಿದ್ದೇನೆ ಮತ್ತು ನಿಮ್ಮ ನಡುವೆ ಬೆಳೆದಿದ್ದೇನೆ. ನಿಮ್ಮಿಂದ ಬಹಳಷ್ಟು ಕಲಿಯುವ ಮೂಲಕ ನಾನು ಜೀವನದಲ್ಲಿಚಲಿಸಿದ್ದೇನೆ. ನಾನು ನಿಮಗೆ ಋುಣಿಯಾಗಿದ್ದೇನೆ ಮತ್ತು ಆದ್ದರಿಂದ, ನಿಮ್ಮ ಸಾಲಗಳನ್ನು ಮರುಪಾವತಿಸುವ ಅವಕಾಶವನ್ನು ನಾನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಮತ್ತೊಮ್ಮೆ, ನಾನು ಬುಡಕಟ್ಟು ಸಮಾಜದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವಪೂರ್ವಕ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ ಮತ್ತು ಅವರಿಗೆ ತಲೆಬಾಗುತ್ತೇನೆ. ಭವಿಷ್ಯದ ಪೀಳಿಗೆಯು ದೇಶವನ್ನು ಮುಂದೆ ಕೊಂಡೊಯ್ಯಲಿ ಎಂದು ನಾನು ಬಯಸುತ್ತೇನೆ.

 

ನನ್ನೊಂದಿಗೆ ಹೇಳಿ

 

ಭಾರತ್‌ ಮಾತಾ ಕಿ - ಜೈ

 

ಭಾರತ್‌ ಮಾತಾ ಕಿ - ಜೈ

 

ಭಾರತ್‌ ಮಾತಾ ಕಿ- ಜೈ

 

ತುಂಬಾ ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s Economy Offers Big Opportunities In Times Of Global Slowdown: BlackBerry CEO

Media Coverage

India’s Economy Offers Big Opportunities In Times Of Global Slowdown: BlackBerry CEO
NM on the go

Nm on the go

Always be the first to hear from the PM. Get the App Now!
...
PM chairs 46th PRAGATI Interaction
April 30, 2025
QuotePM reviews eight significant projects worth over Rs 90,000 crore
QuotePM directs that all Ministries and Departments should ensure that identification of beneficiaries is done strictly through biometrics-based Aadhaar authentication or verification
QuoteRing Road should be integrated as a key component of broader urban planning efforts that aligns with city’s growth trajectory: PM
QuotePM reviews Jal Marg Vikas Project and directs that efforts should be made to establish a strong community connect along the stretches for boosting cruise tourism
QuotePM reiterates the importance of leveraging tools such as PM Gati Shakti and other integrated platforms to enable holistic and forward-looking planning

Prime Minister Shri Narendra Modi earlier today chaired a meeting of the 46th edition of PRAGATI, an ICT-based multi-modal platform for Pro-Active Governance and Timely Implementation, involving Centre and State governments.

In the meeting, eight significant projects were reviewed, which included three Road Projects, two projects each of Railways and Port, Shipping & Waterways. The combined cost of these projects, spread across different States/UTs, is around Rs 90,000 crore.

While reviewing grievance redressal related to Pradhan Mantri Matru Vandana Yojana (PMMVY), Prime Minister directed that all Ministries and Departments should ensure that the identification of beneficiaries is done strictly through biometrics-based Aadhaar authentication or verification. Prime Minister also directed to explore the potential for integrating additional programmes into the Pradhan Mantri Matru Vandana Yojana, specifically those aimed at promoting child care, improving health and hygiene practices, ensuring cleanliness, and addressing other related aspects that contribute to the overall well-being of the mother and newly born child.

During the review of infrastructure project concerning the development of a Ring Road, Prime Minister emphasized that the development of Ring Road should be integrated as a key component of broader urban planning efforts. The development must be approached holistically, ensuring that it aligns with and supports the city’s growth trajectory over the next 25 to 30 years. Prime Minister also directed that various planning models be studied, with particular focus on those that promote self-sustainability, especially in the context of long-term viability and efficient management of the Ring Road. He also urged to explore the possibility of integrating a Circular Rail Network within the city's transport infrastructure as a complementary and sustainable alternative for public transportation.

During the review of the Jal Marg Vikas Project, Prime Minister said that efforts should be made to establish a strong community connect along the stretches for boosting cruise tourism. It will foster a vibrant local ecosystem by creating opportunities for business development, particularly for artisans and entrepreneurs associated with the 'One District One Product' (ODOP) initiative and other local crafts. The approach is intended to not only enhance community engagement but also stimulate economic activity and livelihood generation in the regions adjoining the waterway. Prime Minister stressed that such inland waterways should be drivers for tourism also.

During the interaction, Prime Minister reiterated the importance of leveraging tools such as PM GatiShakti and other integrated platforms to enable holistic and forward-looking planning. He emphasized that the use of such tools is crucial for achieving synergy across sectors and ensuring efficient infrastructure development.

Prime Minister further directed all stakeholders to ensure that their respective databases are regularly updated and accurately maintained, as reliable and current data is essential for informed decision-making and effective planning.

Up to the 46th edition of PRAGATI meetings, 370 projects having a total cost of around Rs 20 lakh crore have been reviewed.