In the coming years, Bihar will be among those states of the country, where every house will have piped water supply: PM Modi
Urbanization has become a reality today: PM Modi
Cities should be such that everyone, especially our youth, get new and limitless possibilities to move forward: PM Modi

ಬಿಹಾರದ ರಾಜ್ಯಪಾಲರಾದ ಶ್ರೀ ಪಗು ಚೌವ್ಹಾಣ್ , ಬಿಹಾರದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್, ನನ್ನ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಹರದೀಪ್ ಸಿಂಗ್ ಪುರಿ, ಶ್ರೀ ರವಿಶಂಕರ್ ಪ್ರಸಾದ್, ಕೇಂದ್ರ ಮತ್ತು ರಾಜ್ಯ ಸಚಿವ ಸಂಪುಟದ ಎಲ್ಲ ಸದಸ್ಯರೇ, ಎಲ್ಲ ಸಂಸದರು, ಶಾಸಕರು ಮತ್ತು ನನ್ನ ನೆಚ್ಚಿನ ಮಿತ್ರರೇ

ಮಿತ್ರರೇ

ಇಂದು ಉದ್ಘಾಟಿಸಲಾದ ನಾಲ್ಕು ಯೋಜನೆಗಳಲ್ಲಿ ಪಾಟ್ನಾ ನಗರದ ಬ್ಯೂರ್ ಮತ್ತು ಕರಮ್-ಲೀಚಕ್‌ನಲ್ಲಿನ ತ್ಯಾಜ್ಯನೀರು ಸಂಸ್ಕರಣಾ ಘಟಕಗಳು ಮತ್ತು 'ಅಮೃತ್' ಯೋಜನೆಯಡಿ ಸಿವಾನ್ ಮತ್ತು ಛಾಪ್ರಾದಲ್ಲಿ ನೀರು-ಸಂಬಂಧಿತ ಯೋಜನೆಗಳು ಸೇರಿವೆ. ಅಲ್ಲದೆ, ಮುಂಗೇರ್ ಮತ್ತು ಜಮಾಲ್‌ಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ನೀರು ಸರಬರಾಜು ಯೋಜನೆಗಳಿಗೆ ಮತ್ತು ನಮಾಮಿ ಗಂಗೆ ಅಡಿಯಲ್ಲಿ ಮುಜಾಫರ್ಪುರದ ನದಿ ತಟದ ಅಭಿವೃದ್ಧಿ ಯೋಜನೆಗಳಿಗೆ  ಶಿಲಾನ್ಯಾಸ ನೆರವೇರಿಸಲಾಯಿತು. ಈ ಹೊಸ ಸೌಕರ್ಯಗಳಿಗಾಗಿ ನಾನು ಎಲ್ಲರನ್ನೂ ಅಭಿನಂದಿಸುತ್ತೇನೆ ಮತ್ತು ನಗರಗಳಲ್ಲಿ ವಾಸಿಸುತ್ತಿರುವ ಮಧ್ಯಮ ವರ್ಗ ಹಾಗೂ ಬಡವರ ಜೀವನ ಇನ್ನಷ್ಟು ಸುಲಭವಾಗುತ್ತದೆ ಎಂಬ ಭರವಸೆ ನನಗಿದೆ.

ಮಿತ್ರರೇ,

ಇಂದಿನ ಕಾರ್ಯಕ್ರಮ ವಿಶೇಷ ದಿನದಂದು ಆಯೋಜಿಸಲಾಗಿದೆ. ಇಂದು ನಾವು ಎಂಜಿನಿಯರ್ ಗಳ ದಿನವನ್ನು ಆಚರಿಸುತ್ತಿದ್ದೇವೆ. ಈ ದಿನ ದೇಶದ ಶ್ರೇಷ್ಠ ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ಜನ್ಮ ದಿನವಾಗಿದೆ.ಈ ದಿನವನ್ನು ಅವರ ಸ್ಮರಣೆಗಾಗಿ ಮೀಸಲಿಡಲಾಗಿದೆ. ನಮ್ಮ ಭಾರತೀಯ ಎಂಜಿನಿಯರ್ ಗಳು, ರಾಷ್ಟ್ರ ಮತ್ತು ವಿಶ್ವದ ಪ್ರಗತಿಗೆ ಅಪ್ರತಿಮ ಕೊಡುಗೆಯನ್ನು ನೀಡಿದ್ದಾರೆ. ಅದು ಕೆಲಸದ ಬಗೆಗಿನ ಬದ್ಧತೆಯಾಗಿರಬಹುದು ಅಥವಾ ದೂರದೃಷ್ಟಿ, ಪ್ರತ್ಯೇಕ ಆಸ್ಮಿತೆಯಾಗಿರಬಹುದು, ಇವೆಲ್ಲಾದರಿಂದ ಜಗತ್ತಿನ ಶ್ರೇಷ್ಠ ಎಂಜಿನಿಯರ್ ಗಳನ್ನು ನೀಡಿದೆ. ನಮ್ಮ ಎಂಜಿನಿಯರ್ ಗಳು ದೇಶದ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ ಮತ್ತು ನಮ್ಮ 130 ಕೋಟಿ ಜನರ ಜೀವನವನ್ನು ಸುಧಾರಿಸುತ್ತಿರುವುದಕ್ಕೆ ನಮಗೆ ಹೆಮ್ಮೆ ಇದೆ. ಇದೇ ವೇಳೆ, ಎಲ್ಲ ಎಂಜಿನಿಯರ್ ಗಳಿಗೆ ಹಾಗೂ ಅವರ ಸಕಾರಾತ್ಮಕ ಶಕ್ತಿಗೆ ನನ್ನ ನಮನಗಳು. ಬಿಹಾರ ಕೂಡ ರಾಷ್ಟ್ರ ನಿರ್ಮಾಣದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಬಿಹಾರ ಲಕ್ಷಾಂತರ ಎಂಜಿನಿಯರ್ ಗಳನ್ನು ಸೃಷ್ಟಿಸಿದೆ, ಅವರು ದೇಶವನ್ನು ಅಭಿವೃದ್ಧಿಯಲ್ಲಿ ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಬಿಹಾರ ನೆಲವೇ ಆವಿಷ್ಕಾರ ಮತ್ತು ಸಂಶೋಧನೆ ಜೊತೆಗೆ ಬೆಸೆದುಕೊಂಡಿದೆ. ಬಿಹಾರದ ಮಕ್ಕಳು ಪ್ರತಿವರ್ಷ ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಸಂಸ್ಥೆಗಳನ್ನು ಸೇರುತ್ತಿದ್ದಾರೆ ಮತ್ತು ಪ್ರಕಾಶಿಸುತ್ತಿದ್ದಾರೆ. ಇಂದು ಬಿಹಾರದ ಎಂಜಿನಿಯರ್ ಗಳು ಕಾರ್ಯಾರಂಭ ಮಾಡಿದ್ದ ಯೋಜನೆಗಳ ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದಾರೆ. ನಾನು ಬಿಹಾರದ ಎಲ್ಲ ಎಂಜಿನಿಯರ್ ಗಳನ್ನು ಈ ಎಂಜಿನಿಯರ್ ಗಳ ದಿನದಂದು ಅಭಿನಂದಿಸುತ್ತೇನೆ.

ಮಿತ್ರರೇ, 

ಬಿಹಾರವು ಐತಿಹಾಸಿಕ ನಗರಗಳ ತವರೂರು. ಸಾವಿರಾರು ವರ್ಷಗಳ ಶ್ರೀಮಂತ ಪರಂಪರೆಯನ್ನು ಈ ನಗರಗಳು ಹೊಂದಿದೆ. ಆಧುನಿಕ ಭಾರತದಲ್ಲಿ ಗಂಗಾ ಕಣಿವೆಯ ಸುತ್ತ ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯವಾಗಿ ಏಳಿಗೆ ಹೊಂದಿದ ಹಲವು ನಗರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ ದೀರ್ಘಕಾಲದ ಗುಲಾಮಗಿರಿತನ, ಅದರ ವೈಭವಕ್ಕೆ ಭಾರಿ ನಷ್ಟವನ್ನುಂಟು ಮಾಡಿದೆ. ಸ್ವಾತಂತ್ರ್ಯಾನಂತರ ದೇಶಕಗಳ ಕಾಲ, ಬಿಹಾರವನ್ನು ದೊಡ್ಡ ಹಾಗೂ ದೂರದೃಷ್ಟಿ ಹೊಂದಿದ್ದ ನಾಯಕರು ಆಳಿದರು ಮತ್ತು ವಸಾಹತುಶಾಹಿ ಯುಗದಲ್ಲಿ ಆಗಿದ್ದ ವಿನಾಶವನ್ನು ತೊಡೆದುಹಾಕಲು ಗಂಭೀರ ಪ್ರಯತ್ನ ನಡೆಸಿದರು. ಆದರೆ ಆನಂತರ ಬಿಹಾರದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಬದಲು ಅಥವಾ ರಾಜ್ಯದ ಜನತೆಗೆ ಆಧುನಿಕ ಸೌಕರ್ಯಗಳನ್ನು ನೀಡುವ ಬದಲು, ಅವರ ಆದ್ಯತೆಗಳು ಮತ್ತು ಬದ್ಧತೆಗಳು ಬೇರೆಯೇ ಆಗಿದ್ದವು. ಅದರ ಪರಿಣಾಮ, ರಾಜ್ಯದಲ್ಲಿ ಆಡಳಿತದ ಬಗೆಗಿನ ಗಮನ ಬೇರೆಡೆಗೆ ಸರಿಯಿತು. ಹಾಗಾಗಿ ಬಿಹಾರದ ಗ್ರಾಮಗಳು ಇನ್ನಷ್ಟು ಅವನತಿ ಹೊಂದಿದವು ಮತ್ತು ನಗರಗಳಲ್ಲಿ ಒಮ್ಮೆ ಏಳಿಗೆಯ ಸಂಕೇತವಾಗಿದ್ದ ಮೂಲಸೌಕರ್ಯವನ್ನು ಹೆಚ್ಚಾಗುತ್ತಿರುವ ಜನಸಂಖ್ಯೆ ಮತ್ತು ಬದಲಾಗುತ್ತಿರುವ ಕಾಲಘಟಕ್ಕೆ ಅನುಗುಣವಾಗಿ ಮೇಲ್ದರ್ಜೆಗೇರಿಸಲಿಲ್ಲ. ರಸ್ತೆ, ಮಾರ್ಗ, ಕುಡಿಯುವ ನೀರು, ಒಳಚರಂಡಿ ಮತ್ತು ಮೂಲ ವಿಚಾರಗಳನ್ನು ಒಂದೋ ನಿರ್ಲಕ್ಷಿಸಲಾಯಿತು ಅಥವಾ ಅದಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ಹಗರಣಗಳಾದವು.

ಮಿತ್ರರೇ,

ಆಡಳಿತದ ಮೇಲೆ ಸ್ವಾರ್ಥ ಉದ್ದೇಶಗಳು ಕೆಲಸ ಮಾಡುತ್ತವೆ ಮತ್ತು ಮತ ಬ್ಯಾಂಕ್ ರಾಜಕಾರಣದಿಂದಾಗಿ ವ್ಯವಸ್ಥೆ ಹಾಳಾಗುತ್ತದೆ, ಅದರಿಂದ ಸಮಾಜದಲ್ಲಿನ ಶೋಷಿತ, ತುಳಿತಕ್ಕೆ ಒಳಗಾದ ಮತ್ತು ದೌರ್ಜನ್ಯಕ್ಕೆ ಒಳಗಾದವರು ಹೆಚ್ಚಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಬಿಹಾರದ ಜನತೆ ದಶಕಗಳ ಕಾಲ ಅಂತಹ ನೋವನ್ನು ಅನುಭವಿಸಿದ್ದಾರೆ ಮೂಲ ಅಗತ್ಯತೆಗಳಾದ ನೀರು ಮತ್ತು ಒಳಚರಂಡಿ ಲಭ್ಯವಾಗದೇ ಇದ್ದರೆ, ಆಗ ನಮ್ಮ ತಾಯಂದಿರು ಮತ್ತು ಸಹೋದರಿಯರು ತೊಂದರೆ ಅನುಭವಿಸುತ್ತಾರೆ, ಬಡವರು ಮತ್ತು ದಲಿತರು ತೊಂದರೆಗೆ ಒಳಗಾಗುತ್ತಾರೆ ಹಾಗೂ ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರು ಸಂಕಷ್ಟು ಅನುಭವಿಸುತ್ತಾರೆ. ಒತ್ತಾಯಕ್ಕೆ ಕಟ್ಟುಬಿದ್ದು ಮಲಿನವಾದ ನೀರನ್ನು ಕುಡಿದರೆ ಅಂತಹವರು ಅಗ್ಗಾಗ್ಗೆ ಕಾಯಿಲೆ ಬೀಳುತ್ತಾರೆ. ಅಂತಹ ಸನ್ನಿವೇಶದಲ್ಲಿ ದುಡಿಯುವ ಬಹುತೇಕ ಹಣ ಚಿಕಿತ್ಸೆಗೆ ವ್ಯಯವಾಗುತ್ತದೆ. ಕೆಲವೊಮ್ಮೆ ಕಲವು ವರ್ಷಗಳ ಕಾಲ ಕುಟುಂಬಗಳು ಸಾಲದಲ್ಲಿಯೇ ಕೈತೊಳೆಯಬೇಕಾಗುತ್ತದೆ. ಅಂತಹ ಸನ್ನಿವೇಶಗಳಲ್ಲಿ, ಬಿಹಾರದ ಬಹುದೊಡ್ಡ ಸಂಖ್ಯೆಯ ಜನರು, ಸಾಲ, ರೋಗಗಳು, ಅಸಹಾಯಕತೆ ಮತ್ತು ಅನಕ್ಷರತೆ ಅವರ ಹಣೆಬರಹವೆಂದುಕೊಳ್ಳುತ್ತಾರೆ. ಒಂದು ರೀತಿಯಲ್ಲಿ, ಸರಕಾರದ ತಪ್ಪು ಆದ್ಯತೆಗಳಿಂದಾಗಿ, ಸಮಾಜದ ಬಹುದೊಡ್ಡ ಸಂಖ್ಯೆಯ ಜನರ ವಿಶ್ವಾಸಕ್ಕೆ ಘಾಸಿಯಾಗುತ್ತದೆ. ಬಡವರಿಗೆ ಇದಕ್ಕಿಂತ ಕೆಟ್ಟ ಅನುಭವವಾಗಬೇಕೆ?

ಮಿತ್ರರೇ, 

ನಿತೀಶ್ ಜಿ, ಸುಶೀಲ್ ಜಿ ಮತ್ತು ಅವರ ತಂಡ ಕಳೆದ ಒಂದೂವರೆ ದಶಕದಿಂದ ಸಮಾಜದ ದುರ್ಬಲ ವರ್ಗದವರಲ್ಲಿ ವಿಶ್ವಾಸವನ್ನು ಮರಳಿ ಮೂಡಿಸಲು ಪ್ರಯತ್ನ ನಡೆಸಿದ್ದಾರೆ. ವಿಶೇಷವಾಗಿ, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ ಮತ್ತು ಪಂಚಾಯತ್ ರಾಜ್ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಸಮಾಜದ ದುರ್ಬಲ ಮತ್ತು ಶೋಷಿತ ವರ್ಗದವರಿಗೆ ಹೆಚ್ಚಿನ ಪ್ರಾತಿನಿಧ್ಯ ದೊರಕಿಸಿಕೊಡಲು ಪ್ರಯತ್ನಿಸಲಾಗುತ್ತಿದ್ದು, ಅದು ವಿಶ್ವಾಸವೃದ್ಧಿಗೆ ಸ್ವಲ್ಪಮಟ್ಟಿಗೆ ಸಹಕಾರಿಯಾಗಿದೆ. 2014ರಿಂದೀಚೆಗೆ ಮೂಲಸೌಕರ್ಯಕ್ಕೆ ಸಂಬಂಧಿಸಿದ ಬಹುತೇಕ ಯೋಜನೆಗಳ ಸಂಪೂರ್ಣ ನಿಯಂತ್ರಣವನ್ನು ಗ್ರಾಮ ಪಂಚಾಯ್ತಿಗಳಿಗೆ ಅಥವಾ ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗಿದೆ. ಇದೀಗ ಯೋಜನೆಯಿಂದ ಅನುಷ್ಠಾನದವರೆಗೆ ಮತ್ತು ಯೋಜನೆಗಳ ನಿರ್ವಹಣೆವರೆಗೆ ಎಲ್ಲ ಕೆಲಸವನ್ನು ಸ್ಥಳೀಯ ಅಗತ್ಯತೆಗಳಿಗೆ ತಕ್ಕಂತೆ ಸ್ಥಳೀಯ ಸಂಸ್ಥೆಗಳೇ ಮಾಡಿಕೊಳ್ಳುತ್ತಿವೆ. ಇದೇ ಕಾರಣಕ್ಕೆ ಮತ್ತು ಕೇಂದ್ರ ಮತ್ತು ಬಿಹಾರ ಸರ್ಕಾರಗಳ ಜಂಟಿ ಪ್ರಯತ್ನಗಳಿಂದಾಗಿ ಬಿಹಾರದ ನಗರಗಳಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಸೇರಿ ಮೂಲಸೌಕರ್ಯಗಳು ನಿರಂತರವಾಗಿ ಅಭಿವೃದ್ಧಿಯಾಗುತ್ತಿವೆ. ಅಮೃತ್ ಮಿಷನ್ ಅಡಿ ಮತ್ತು ರಾಜ್ಯ ಸರ್ಕಾರದ ಯೋಜನೆಗಳಡಿ, ಕಳೆದ 4-5 ವರ್ಷಗಳಲ್ಲಿ ಬಿಹಾರದ ನಗರ ಪ್ರದೇಶಗಳಲ್ಲಿ ನೀರು ಮತ್ತಿತರ ಸೌಕರ್ಯಗಳ ಮೂಲಕ ಲಕ್ಷಾಂತರ ಕುಟುಂಬಗಳಿಗೆ ನೆರವು ನೀಡಲಾಗಿದೆ. ಮುಂದಿನ ವರ್ಷಗಳಲ್ಲಿ, ಪ್ರತಿಯೊಂದು ಮನೆಗಳಿಗೆ ಕೊಳವೆ ನೀರಿನ ಸಂಪರ್ಕ ಹೊಂದಿರುವ ಇತರೆ ನಗರಗಳ ಸಾಲಿಗೆ ಸೇರ್ಪಡೆಯಾಗಲಿದೆ. ಇದು ಬಿಹಾರದ ಅತಿದೊಡ್ಡ ಸಾಧನೆಯಾಗಲಿದೆ ಮತ್ತು ಇದು ಬಿಹಾರದ ಹೆಮ್ಮೆಯ ವಿಚಾರವಾಗಲಿದೆ.

ಬಿಹಾರದ ಜನರು ಕೊರೊನಾ ಬಿಕ್ಕಟ್ಟಿನ ನಡುವೆಯೂ ಈ ಬೃಹತ್ ಗುರಿ ಸಾಧನೆಗೆ ನಿರಂತರವಾಗಿ ಕೆಲಸ ಮಾಡಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ ಬಿಹಾರದ ಗ್ರಾಮೀಣ ಪ್ರದೇಶಗಳಲ್ಲಿ 57 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗಿದೆ.  ಅದರಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ರೋಜ್ಗಾರ್ ಅಭಿಯಾನವೂ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಿಹಾರಕ್ಕೆ ವಾಪಸ್ಸಾದ ನನ್ನ ಸಾವಿರಾರು ಮಿತ್ರರು ಇದನ್ನು ಸಾಧಿಸಿ ತೋರಿಸಿದ್ದಾರೆ. ಜಲಜೀವನ್ ಮಿಷನ್ ಅಡಿಯಲ್ಲಿ ತ್ವರಿತವಾಗಿ ಅನುಷ್ಠಾನಗೊಳಿಸಿರುವುದನ್ನು ನಾನು ಬಿಹಾರದ ಈ ಪರಿಶ್ರಮಿ ಮಿತ್ರರಿಗೆ ಸಮರ್ಪಿಸುತ್ತೇನೆ. ಕಳೆದ ಒಂದು ವರ್ಷದಲ್ಲಿ, ಜಲ ಜೀವನ್ ಮಿಷನ್ ಅಡಿ ದೇಶಾದ್ಯಂತ ಸುಮಾರು 2ಕೋಟಿಗೂ ಅಧಿಕ ನೀರಿನ ಸಂಪರ್ಕಗಳನ್ನು ನೀಡಲಾಗಿದೆ. ಇಂದು, ದೇಶದಲ್ಲಿ ಪ್ರತಿದಿನ 1ಲಕ್ಷಕ್ಕೂ ಅಧಿಕ ಮನೆಗಳಿಗೆ ಕೊಳೆವೆ ನೀರು ಸಂಪರ್ಕವನ್ನು ಒದಗಿಸಲಾಗುತ್ತಿದೆ. ಶುದ್ಧ ನೀರು ಕೇವಲ ಬಡವರ ಜೀವನವನ್ನು ಸುಧಾರಿಸುವುದಲ್ಲದೆ, ಹಲವು ಗಂಭೀರ ಕಾಯಿಲೆಗಳಿಂದ ಅವರನ್ನು ರಕ್ಷಿಸಲಿದೆ.

ಮಿತ್ರರೇ,

ಬಿಹಾರದ ನಗರ ಪ್ರದೇಶಗಳಲ್ಲಿನ ಲಕ್ಷಾಂತರ ಜನತೆಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸುವ ಕೆಲಸ ಕ್ಷಿಪ್ರಗತಿಯಲ್ಲಿ ಸಾಗಿದೆ. ಬಿಹಾರ ರಾಜ್ಯದಾದ್ಯಂತ ಅಮೃತ್ ಯೋಜನೆಯಡಿ ಸುಮಾರು 12ಲಕ್ಷ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದೆ. ಅದರಲ್ಲಿ, ಈಗಾಗಲೇ 6 ಲಕ್ಷ ಮಂದಿಗೆ ಸೌಕರ್ಯ ತಲುಪಿದೆ, ಇತರೆ ಕುಟುಂಬಗಳಿಗೂ ಸದ್ಯದಲ್ಲೇ ಶುದ್ಧ ನೀರು ತಲುಪಲಿದೆ. ಅದೇ ಸಂಕಲ್ಪದೊಂದಿಗೆ ಇಂದು ಹಲವು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ.
ಮಿತ್ರರೇ,

ನಗರೀಕರಣ ಇಂದಿನ ವಾಸ್ತವವಾಗಿದೆ. ಇಂದು ಜಗತ್ತಿನಾದ್ಯಂತ ನಗರ ಪ್ರದೇಶಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಜಾಗತಿಕ ಬದಲಾವಣೆಗೆ ಭಾರತವೂ ಹೊರತಾಗಿಲ್ಲ. ಆದರೆ ಹಲವು ದಶಕಗಳ ಹಿಂದೆ ನಾವು ಒಂದು ನಿರ್ದಿಷ್ಠ ಮನೋಭಾವವನ್ನು ಹೊಂದಿದ್ದೆವು, ನಾವು ನಗರೀಕರಣವೆಂದರೆ ಸಮಸ್ಯೆ ಎಂದುಕೊಂಡಿದ್ದೆವು ಮತ್ತು ಅದರಿಂದಲೇ ಅಡ್ಡಿಯಾಗುತ್ತದೆ ಎಂದು ಭಾವಿಸಿದ್ದೆವು. ಆದರೆ ನಾನು ನಂಬುತ್ತೇನೆ, ಅದು ಸತ್ಯವಲ್ಲ ಎಂದು. ಬಾಬ ಸಾಹೇಬ್ ಅಂಬೇಡ್ಕರ್ ಇದನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದರು ಮತ್ತು ಅವರು ನಗರೀಕರಣಕ್ಕೆ ಹೆಚ್ಚಿನ ಬೆಂಬಲವನ್ನು ನೀಡಿದ್ದರು. ಅವರು ನಗರೀಕರಣವೆಂದರೆ ಸಮಸ್ಯೆ ಎಂದು ಭಾವಿಸಿರಲಿಲ್ಲ. ಅವರು ಬಡವರಲ್ಲಿ ಅತಿ ಕಡುಬಡವರಿಗೂ ಸಹ ಅವಕಾಶಗಳು ಸಿಗುತ್ತವೆ, ಅವರ ಜೀವನ ಉತ್ತಮಗೊಳಿಸುವ ನಿಟ್ಟಿನಲ್ಲಿ ಸಾಗುತ್ತದೆ ಎಂದು ನಗರಗಳ ಕಲ್ಪನೆಯನ್ನು ಊಹಿಸಿಕೊಂಡಿದ್ದರು.  ಇಂದು ನಮ್ಮ ನಗರಗಳ ಏಳಿಗೆಗೆ, ಅವುಗಳ ಭದ್ರತೆಗೆ, ಬಲಿಷ್ಠ ಸಮಾಜ ನಿರ್ಮಾಣಕ್ಕೆ ಮತ್ತು ಆಧುನಿಕ ಮೂಲಸೌಕರ್ಯ ಒದಗಿಸುವುದಕ್ಕೆ ಎಲ್ಲ ಸಾಧ್ಯತೆಗಳಿವೆ. ಅಂದರೆ ನಗರಗಳಲ್ಲಿ ಪ್ರತಿಯೊಬ್ಬರಿಗೂ ವಿಶೇಷವಾಗಿ ನಮ್ಮ ಯುವಕರಿಗೆ ಹೊಸ ಮತ್ತು ಮಿತಿಯಿಯಲ್ಲದ ಅವಕಾಶಗಳೊಂದಿಗೆ ಮುಂದುವರಿಯಬೇಉ ಎಂದು ಬಯಸಲಾಗುತ್ತಿದೆ. ನಗರಗಳಲ್ಲಿ ಪ್ರತಿಯೊಂದು ಕುಟುಂಬವೂ ಸಹ ಸಂತೋಷ ಮತ್ತು ಸಂಮೃದ್ಧಿಯಿಂದ ಬಾಳ್ವೆ ನಡೆಸುವಂತಾಗಬೇಕು ಎಂದು ಬಯಸಲಾಗುತ್ತಿದೆ. ನಗರಗಳಲ್ಲಿ ಪ್ರತಿಯೊಬ್ಬರೂ, ಬಂಡವರು, ದಲಿತರು, ಹಿಂದುಳಿದವರು ಮತ್ತು ಮಹಿಳೆಯರೂ ಎಲ್ಲರೂ ಗೌರವಯುತವಾಗಿ ಬಾಳ್ವೆ ನಡೆಸುವಂತಾಗಬೇಕು, ಅಲ್ಲಿ ಸುರಕ್ಷತೆಯಿರಬೇಕು ಮತ್ತು ಕಾನೂನು ಪಾಲನೆಯಾಬೇಕು, ಸಮಾಜದ ಎಲ್ಲ ವರ್ಗಗಳು ಒಂದಾಗಿ ಬಾಳಬೇಕು ಮತ್ತು ನಗರಗಳಲ್ಲಿ ಆಧುನಿಕ ಸೌಕರ್ಯಗಳ ಜೊತೆಗೆ ಆತ್ಯಾಧುನಿಕ ಮೂಲಸೌಕರ್ಯಗಳೂ ಸಹ ಒಳಗೊಂಡಿರಬೇಕೆಂದು ನಿರೀಕ್ಷಿಸಲಾಗುತ್ತಿದೆ. ಈ ಸುಲಭದ ಜೀವನದ ನಡೆಸುವಂತಾಗಬೇಕು ಎಂಬುದು. ಇದು ದೇಶದ ಕನಸೂ ಸಹ ಮತ್ತು ದೇಶ ಆ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ.

ಮತ್ತೆ ಮಿತ್ರರೇ

ನಾವು ಇಂದು ದೇಶದಲ್ಲಿ ಹೊಸ ನಗರೀಕರಣಕ್ಕೆ ಸಾಕ್ಷಿಯಾಗಿದ್ದೇವೆ. ಈ ಮೊದಲು ಪ್ರಮುಖವಾಗಿಲ್ಲದ ನಗರಗಳು ಇದೀಗ ಅವುಗಳ ಇರುವಿಕೆಯನ್ನು ತೋರಿಸುತ್ತಿವೆ.  ಈ ನಗರಗಳಲ್ಲಿನ ನಮ್ಮ ಯುವಕರು, ಅಗ್ರ ಖಾಸಗಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಓದಿದವರಲ್ಲ, ಅವರು ಶ್ರೀಮಂತ ಕುಟುಂಬಗಳಿಗೆ ಸೇರಿದವರಲ್ಲ, ಆದರೆ ಯಶಸ್ಸಿನ ಹೊಸ ಆಯಾಮಗಳೊಂದಿಗೆ ಇಂದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕೆಳೆದ ಕೆಲವು ವರ್ಷಗಳವರೆಗೆ, ನಗರೀಕರಣವೆಂದರೆ ಕೆಲವು ದೊಡ್ಡ ನಗರಗಳನ್ನು ಆಕರ್ಷಣೀಯಗೊಳಿಸುವುದು ಅಥವಾ ಕೆಲವು ನಗರಗಳ ಕೆಲವು ಪ್ರದೇಶಗಳನ್ನು ಅಭಿವೃದ್ಧಿಗೊಳಿಸುವುದು ಎಂದಾಗಿತ್ತು. ಆದರೆ ಇದೀಗ ಆಂತಹ ಆಲೋಚನೆ ಮತ್ತು ವಿಧಾನ ಕೂಡ ಬದಲಾಗಿದೆ. ಮತ್ತು ಬಿಹಾರದ ಜನರು ಭಾರತದ ನವ ನಗರೀಕರಣಕ್ಕೆ ತಮ್ಮ ಸಂಪೂರ್ಣ ಕೊಡುಗೆಯನ್ನು ನೀಡುತ್ತಿದ್ದಾರೆ.

ಮಿತ್ರರೇ,

ಸ್ವಾವಲಂಬಿ ಬಿಹಾರ ಮತ್ತು ಸ್ವಾಲವಂಬಿ ಭಾರತ ನಿರ್ಮಾಣಕ್ಕೆ ಒತ್ತು ನೀಡಲು ದೇಶದ ಸಣ್ಣ ನಗರಗಳನ್ನು ಸಜ್ಜುಗೊಳಿಸುವುದು ಅತ್ಯಗತ್ಯವಾಗಿದ್ದು, ಅವುಗಳ ಸದ್ಯದ ಅಗತ್ಯತೆಗೆ ತಕ್ಕಂತೆ ಹಾಗೂ ಭವಿಷ್ಯದ ಅಗತ್ಯತೆಗಳನ್ನು ಪೂರೈಸಬೇಕಾಗಿದೆ. ಈ ಆಲೋಚನೆಯಿಂದ, ಅಮೃತ್ ಮಿಷನ್ ಅಡಿ ಬಿಹಾರದ ಹಲವು ನಗರಗಳಲ್ಲಿ ಅಗತ್ಯ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಒತ್ತು ನೀಡಲಾಗಿದೆ. ಆ ಮೂಲಕ ಜೀವನ ನಡೆಸಲು ಅಗತ್ಯವಾದ ಮತ್ತು ವ್ಯಾಪಾರಕ್ಕೆ ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ. ಅಮೃತ್ ಮಿಷನ್ ಅಡಿ, ನಗರಗಳಿಗೆ ಕೇವಲ ನೀರು ಮತ್ತು ಒಳಚರಂಡಿ ಮಾತ್ರವಲ್ಲದೆ, ಹಸಿರು ವಲಯಗಳ ನಿರ್ಮಾಣ, ಪಾರ್ಕ್ ಗಳು, ಬೀದಿ ದೀಪಗಳಿಗೆ ಎಲ್ ಇಡಿ ಅಳವಡಿಕೆ ಮತ್ತಿತರ ಅಭಿವೃದ್ಧಿ ಕ್ರಮಗಳನ್ನೂ ಸಹ ಕೈಗೊಳ್ಳಲಾಗುತ್ತಿದೆ. ಈ ಮಿಷನ್ ಅಡಿಯಲ್ಲಿ ಬಿಹಾರದ ನಗರ ಪ್ರದೇಶಗಳಲ್ಲಿ ಉತ್ತಮ ಒಳಚರಂಡಿ ವ್ಯವಸ್ಥೆಯ ಸಂಪರ್ಕವನ್ನೂ ಸಹ ಲಕ್ಷಾಂತರ ಜನರಿಗೆ ಒದಗಿಸಲಾಗುತ್ತಿದೆ.

ಬಹುತೇಕ ಈ ಆಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿರುವುದು ಬಡವರು ಮತ್ತು ಕಡು ಬಡ ಕುಟುಂಬಗಳು ವಾಸ ಮಾಡುತ್ತಿರುವ ವಸತಿ ಪ್ರದೇಶಗಳಲ್ಲಿ. ಬಿಹಾರದಲ್ಲಿ 100 ಮುನಿಸಿಪಲ್ ಪ್ರದೇಶಗಳಲ್ಲಿ ಸುಮಾರು 45 ಲಕ್ಷ ಎಲ್ ಇಡಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಸಹಜವಾಗಿಯೇ, ಸಣ್ಣ ನಗರಗಳಿಗೆ ಬೀದಿ ದೀಪಗಳು ಅಳವಡಿಸುವುದರಿಂದ ಕೋಟ್ಯಾಂತರ ಮೌಲ್ಯದ ವಿದ್ಯುತ್ ಉಳಿತಾಯವಾಗಲಿದೆ ಮತ್ತು ಜನರ ಜೀವನ ಇನ್ನಷ್ಟು ಸುಗಮವಾಗಲಿದೆ.  

ಮಿತ್ರರೇ, ಬಿಹಾರದ ಜನರು ಮತ್ತು ಬಿಹಾರದ ನಗರವಾಸಿಗಳು ಗಂಗಾನದಿಯೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದ್ದಾರೆ.

ರಾಜ್ಯದ 20 ದೊಡ್ಡ ಮತ್ತು ಪ್ರಮುಖ ನಗರಗಳು ಗಂಗಾನದಿ ತಟದಲ್ಲಿ ಸ್ಥಾಪನೆಯಾಗಿವೆ.

ಗಂಗಾ ನದಿಯ ಸ್ವಚ್ಛತೆ ಅಥವಾ ಗಂಗಾ ನದಿಯ ಶುದ್ಧೀಕರಣ ಈ ನಗರಗಳ ಕೋಟ್ಯಂತರ ಜನರ ಜೀವನದ ಮೇಲೆ ನೇರ ಪರಿಣಾಮ ಬೀರಲಿದೆ. ಗಂಗಾ ನದಿ ಶುದ್ಧೀಕರಣವನ್ನು ಗಮನದಲ್ಲಿರಿಸಿಕೊಂಡು ಬಿಹಾರಕ್ಕೆ ಸುಮಾರು 6ಸಾವಿರ ಕೋಟಿಗೂ ಅಧಿಕ ಮೊತ್ತದ 50ಕ್ಕೂ ಅಧಿಕ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಗಂಗಾ ನದಿಯ ದಡದಲ್ಲಿರುವ ಎಲ್ಲ ನಗರಗಳ, ತ್ಯಾಜ್ಯ ನೀರು ನೇರವಾಗಿ ಗಂಗಾ ನದಿ ಸೇರದಂತೆ ಮಾಡುವುದಕ್ಕೆ ಸರ್ಕಾರ ಗಂಭೀರ ಪ್ರಯತ್ನಗಳನ್ನು ನಡೆಸಿದೆ. ಅದೇ ಉದ್ದೇಶಕ್ಕಾಗಿ ಹಲವು ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದೆ. ಪಾಟ್ನಾ ನಗರದ ಬ್ಯೂರ್ ಮತ್ತು ಕರಮ್-ಲೀಚಕ್‌ನಲ್ಲಿನ ತ್ಯಾಜ್ಯನೀರು ಸಂಸ್ಕರಣಾ ಘಟಕ ಯೋಜನೆಗಳಿಂದ ಆ ಭಾಗದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ. ಅಲ್ಲದೆ, ಗಂಗಾ ನದಿಯ ತಟದಲ್ಲಿರುವ ಗ್ರಾಮಗಳನ್ನು ‘ಗಂಗಾ ಗ್ರಾಮ’ಗಳೆಂದು ಅಭಿವೃದ್ಧಿಪಡಿಸಲಾಗುವುದು. ಈ ಗ್ರಾಮಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿದ ನಂತರ ಇದೀಗ ತ್ಯಾಜ್ಯ ನಿರ್ವಹಣೆ ಮತ್ತು ಸಾವಯವ ಕೃಷಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ.

ಮಿತ್ರರೇ,

ಗಂಗಾ ನದಿಯ ತಟದಲ್ಲಿರುವ ಗ್ರಾಮಗಳು ಮತ್ತು ನಗರಗಳು ಧಾರ್ಮಿಕ ಮತ್ತು ಆಧ್ಯಾತ್ಮಿಕಕ್ಕೆ ಸಂಬಂಧಿಸಿದ ಪ್ರಮುಖ ಪ್ರವಾಸಿ ಕೇಂದ್ರಗಳಾಗಿವೆ. ಗಂಗಾ ನದಿಯನ್ನು “ನಿರ್ಮಲ’ ಗೊಳಿಸಲು ಅಭಿಯಾನ ಪ್ರಗತಿಯಲ್ಲಿದ್ದು, ಅದರಲ್ಲಿ ಪ್ರವಾಸೋದ್ಯಮದ ಆಧುನಿಕ ಆಯಾಮಗಳನ್ನು ಸೇರಿಸಲಾಗುವುದು. ನಮಾಮಿ ಗಂಗೆ ಮಿಷನ್ ಅಡಿಯಲ್ಲಿ, ಬಿಹಾರ ಸೇರಿದಂತೆ ಇಡೀ ದೇಶದಲ್ಲಿ 180 ಘಾಟ್ ಗಳನ್ನು ನಿರ್ಮಾಣ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಅದರಲ್ಲಿ, 130 ಘಾಟ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಅಲ್ಲದೆ, 40ಕ್ಕೂ ಅಧಿಕ ಮೋಕ್ಷ ಧಾಮಗಳ ನಿರ್ಮಾಣ ಕೆಲಸ ಕೂಡ ಪೂರ್ಣಗೊಂಡಿದೆ. ದೇಶದಲ್ಲಿ ಗಂಗಾ ನದಿಯ ತಟದಲ್ಲಿ ಆಧುನಿಕ ಸೌಕರ್ಯಗಳನ್ನು ಕಲ್ಪಿಸುವ ಯೋಜನೆಯೂ ಹಲವು ಕಡೆ ಪ್ರಗತಿಯಲ್ಲಿದೆ. ಪಾಟ್ನಾದಲ್ಲಿ ನದಿ ತಟದಲ್ಲಿನ ಯೋಜನೆ ಪೂರ್ಣಗೊಂಡಿದೆ, ಮುಜಫರ್ ಪುರ್ ದಲ್ಲಿ ನದಿ ತಟದಲ್ಲಿ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.

ಮುಜಫರ್ ಪುರದಲ್ಲಿ ಆಖಾರ ಘಾಟ್, ಸೀಧಿ ಘಾಟ್ ಮತ್ತು ಚಂದ್ವಾರಾ ಘಾಟ್ ಗಳನ್ನು ಅಭಿವೃದ್ಧಿಪಡಿಸಲಾಗುವುದು. ಅವು ಇಲ್ಲಿನ ಪ್ರಮುಖ ಪ್ರವಾಸೋದ್ಯಮ ಕೇಂದ್ರಗಳಾಗಲಿವೆ. ಒಂದೂವರೆ ದಶಕದ ಹಿಂದೆ ಬಿಹಾರದಲ್ಲಿ ಇಷ್ಟು ವೇಗವಾಗಿ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳುತ್ತವೆ ಎಂಬುದು ಯಾರೊಬ್ಬರೂ ಊಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಆದರೆ ನಿತೀಶ್ ಜಿ ಮತ್ತು ಕೇಂದ್ರ ಸರ್ಕಾರಗಳ ಪ್ರಯತ್ನಗಳಿಂದ ಇಂದು ಅದು ಸಾಬೀತಾಗಿದೆ. ಈ ಪ್ರಯತ್ನಗಳಿಂದ ಬಿಹಾರದ ಜನರು, ವಿಶೇಷವಾಗಿ ಮಹಿಳೆಯರು ಪವಿತ್ರ ಮಾತೆ ಛಾತ್ ಪೂಜೆ ವೇಳೆ  ಅನುಭವಿಸಿದ್ದ ಸಮಸ್ಯೆಗಳು ತಗ್ಗಲಿವೆ ಎಂಬ ಭರವಸೆ ನನಗಿದೆ. ಮಲಿನಗೊಂಡ ನೀರಿನಿಂದ ಬಿಹಾರದ ನಗರ ಮತ್ತು ಗ್ರಾಮಾಂತರ ಪ್ರದೇಶಗಳನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಮುಂದುವರಿಯಲಿವೆ.
ಮಿತ್ರರೇ,

ಇತ್ತೀಚೆಗೆ ಕೇಂದ್ರ ಸರ್ಕಾರ ಡಾಲ್ಫಿನ್ ಯೋಜನೆಯ ಬಗ್ಗೆ ಪ್ರಕಟಣೆ ಮಾಡಿರುವುದನ್ನು ನೀವು ಕೇಳಿರಬಹುದು. ಗಂಗಾ ನದಿಯ ಡಾಲ್ಫಿನ್ ಗಳಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ. ಗಂಗಾ ನದಿಯನ್ನು ಸಂರಕ್ಷಿಸಲು ಗಂಗಾ ನದಿಯಲ್ಲಿನ ಡಾಲ್ಫಿನ್ ಗಳನ್ನು ಉಳಿಸುವುದು ಕೂಡ ಅತ್ಯವಶ್ಯಕವಾಗಿದೆ. ಡಾಲ್ಫಿನ್ ಗಳು ಪಾಟ್ನಾದಿಂದ ಭಾಗಲ್ ಪುರದವರೆಗೆ ಇಡೀ ಗಂಗಾ ನದಿಯ ಪಾತ್ರದಲ್ಲಿವೆ. ಆದ್ದರಿಂದ “ಪ್ರಾಜೆಕ್ಟ್ ಡಾಲ್ಫಿನ್’’ ನಿಂದ ಬಿಹಾರಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ. ಇದರಿಂದ ಅಲ್ಲಿ ಪ್ರವಾಸೋದ್ಯಮದ ಜೊತೆಗೆ ಜೀವ ವೈವಿಧ್ಯತೆಗೂ ಉತ್ತೇಜನ ದೊರಕಲಿದೆ.

ಮಿತ್ರರೇ,

ಕೊರೊನಾ ಸಾಂಕ್ರಾಮಿಕದ ಸವಾಲಿನ ನಡುವೆಯೂ ಬಿಹಾರದಲ್ಲಿನ ಈ ಅಭಿವೃದ್ಧಿ ಮತ್ತು  ಉತ್ತಮ ಆಡಳಿತದ ಅಭಿಯಾನ ನಿರಂತರವಾಗಿ ಮುಂದುವರಿಯಲಿದೆ. ನಾವು ಸಂಪೂರ್ಣ ಶಕ್ತಿ ಮತ್ತು ಸಾಮರ್ಥ್ಯದೊಂದಿಗೆ ಮುನ್ನಡೆಯುತ್ತೇವೆ. ಅದೇ ವೇಳೆ, ಬಿಹಾರದ ಪ್ರತಿಯೊಬ್ಬ ಪ್ರಜೆ ಮತ್ತು ದೇಶವಾಸಿಗಳು ಸೋಂಕು ನಿಯಂತ್ರಿಸುವ ತಮ್ಮ ಸಂಕಲ್ಪವನ್ನು ಮರೆಯಬಾರದು. ಮಾಸ್ಕ್, ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಅತ್ಯಂತ ಪರಿಣಾಮಕಾರಿ ಅಸ್ತ್ರಗಳು. ನಮ್ಮ ವಿಜ್ಞಾನಿಗಳು ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಕರ್ತವ್ಯದಲ್ಲಿದ್ದಾರೆ. ಆದರೆ ನಾವು ಔಷಧ ದೊರಕುವವರೆಗೆ ಮೈಮರೆಯಬಾರದು.
ಈ ಮನವಿಯೊಂದಿಗೆ ನಾನು ಮತ್ತೊಮ್ಮೆ ಈ ಎಲ್ಲ ಅಭಿವೃದ್ಧಿ ಕಾರ್ಯಗಳಿಗಾಗಿ ಶುಭಾಶಯಗಳನ್ನು ಕೋರಲು ಬಯಸುತ್ತೇನೆ.

 ಧನ್ಯವಾದಗಳು

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi