Quote“ನಳಂದ ಭಾರತದ ಶೈಕ್ಷಣಿಕ ಪರಂಪರೆ ಮತ್ತು ಉಜ್ವಲ ಸಾಂಸ್ಕೃತಿಕ ವಿನಿಯಮದ ಸಂಕೇತ”
Quote“ನಳಂದಾ ಕೇವಲ ಹೆಸರಲ್ಲ, ನಳಂದಾ ಒಂದು ಅಸ್ಮಿತೆ, ಒಂದು ಗೌರವ, ಒಂದು ಮೌಲ್ಯ, ಒಂದು ಮಂತ್ರ, ಒಂದು ಹೆಮ್ಮೆ ಮತ್ತು ಒಂದು ಸಾಹಸ”
Quote“ಈ ಪುನಶ್ಚೇತನ ಭಾರತದ ಸುವರ್ಣ ಯುಗವನ್ನು ಆರಂಭಿಸಲಿದೆ”
Quote“ನಳಂದಾ ಭಾರತದ ಪುರಾತನ ಪುನರುಜ್ಜೀವನವನ್ನಷ್ಟೇ ಮಾಡುತ್ತಿಲ್ಲ. ಪ್ರಪಂಚದ ಅನೇಕ ದೇಶಗಳು ಮತ್ತು ಏಷ್ಯಾದ ಪರಂಪರೆಯೊಂದಿಗೆ ಇದು ಸಂಬಂಧ ಹೊಂದಿದೆ”
Quote“ಭಾರತವು ಶತಮಾನಗಳಿಂದ ಮಾದರಿಯಾಗಿ ಸುಸ್ಥಿರತೆಯನ್ನು ಪ್ರದರ್ಶಿಸಿದೆ ಮತ್ತು ಬದುಕಿದೆ. ನಾವು ಪ್ರಗತಿ ಮತ್ತು ಪರಿಸರದೊಂದಿಗೆ ಒಟ್ಟಾಗಿ ಮುನ್ನಡೆಯುತ್ತೇವೆ"
Quote“ಭಾರತ ಜಗತ್ತಿಗೆ ಶಿಕ್ಷಣ ಮತ್ತು ಜ್ಞಾನದ ಕೇಂದ್ರವಾಗಬೇಕು ಎಂಬುದು ತಮ್ಮ ಧ್ಯೇಯ. ಭಾರತ ಮತ್ತೊಮ್ಮೆ ವಿಶ್ವದ ಪ್ರಮುಖ ಜ್ಞಾನ ಕೇಂದ್ರವಾಗಿ ಗುರುತಿಸಲ್ಪಡಬೇಕು ಎಂಬುದು ತಮ್ಮ ಗುರಿಯಾಗಿದೆ”
Quote“ನಳಂದಾ ಜಗತಿಕ ಕಾರಣಗಳಿಗಾಗಿ ಪ್ರಮುಖ ಕೇಂದ್ರವಾಗಬೇಕು ಎಂಬುದು ತಮ್ಮ ನಂಬಿಕೆಯಾಗಿದೆ”
Quoteಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಗಿಡ ನೆಟ್ಟು ನೀರೆರದರು.

ಬಿಹಾರದ ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೇಕರ್ ಜಿ, ಈ ರಾಜ್ಯಕ್ಕಾಗಿ ಪರಿಶ್ರಮ ಪಡುವ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜಿ, ನಮ್ಮ ವಿದೇಶಾಂಗ ಸಚಿವ, ಶ್ರೀ ಎಸ್. ಜೈಶಂಕರ್ ಜಿ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಪಬಿತ್ರಾ ಜಿ, ವಿವಿಧ ದೇಶಗಳ ಗಣ್ಯರು ಮತ್ತು ರಾಯಭಾರಿಗಳೆ, ನಳಂದ ವಿಶ್ವವಿದ್ಯಾಲಯದ ಉಪ -ಕುಲಪತಿಗಳು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಮತ್ತು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ನನ್ನ ಎಲ್ಲಾ ಸ್ನೇಹಿತರೆ!

ನಾನು 3ನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ 10 ದಿನಗಳಲ್ಲಿ ನಳಂದಾಗೆ ಭೇಟಿ ನೀಡುವ ಅವಕಾಶ ಸಿಕ್ಕಿದೆ. ಇದು ನಿಜಕ್ಕೂ ನನ್ನ ಅದೃಷ್ಟ. ನಾನು ಇದನ್ನು ಭಾರತದ ಅಭಿವೃದ್ಧಿ ಪಯಣಕ್ಕೆ ಶುಭ ಸಂಕೇತವಾಗಿ ನೋಡುತ್ತೇನೆ. ನಳಂದ ಎಂಬುದು ಕೇವಲ ಹೆಸರಲ್ಲ. ನಳಂದ ಒಂದು ಗುರುತು, ಗೌರವ. ನಳಂದವು ಒಂದು ಮೌಲ್ಯ, ಒಂದು ಮಂತ್ರ, ಒಂದು ಹೆಮ್ಮೆ, ಒಂದು ಸಾಹಸಗಾಥೆ. ಪುಸ್ತಕಗಳು ಜ್ವಾಲೆಯಲ್ಲಿ ಸುಟ್ಟುಹೋದರೂ ಜ್ವಾಲೆಯು ಜ್ಞಾನವನ್ನು ನಂದಿಸಲಾರದು ಎಂಬ ಸತ್ಯದ ಕಟು ಘೋಷಣೆಯೇ ನಳಂದ. ನಳಂದದ ವಿನಾಶವು ಭಾರತವನ್ನು ಕತ್ತಲೆಯಿಂದ ತುಂಬಿತು. ಈಗ, ಅದರ ಮರುಸ್ಥಾಪನೆಯು ಭಾರತದ ಸುವರ್ಣ ಯುಗದ ಆರಂಭವನ್ನು ಗುರುತಿಸಲಿದೆ.

ಸ್ನೇಹಿತರೆ,

ಅದರ ಪುರಾತನ ಅವಶೇಷಗಳ ಬಳಿಯಿರುವ ನಳಂದಾದ ಪುನರುಜ್ಜೀವನ, ಈ ಹೊಸ ಕ್ಯಾಂಪಸ್, ಭಾರತದ ಸಾಮರ್ಥ್ಯಗಳನ್ನು ಜಗತ್ತಿಗೆ ಪರಿಚಯಿಸುತ್ತದೆ. ಬಲವಾದ ಮಾನವೀಯ ಮೌಲ್ಯಗಳ ಮೇಲೆ ನಿರ್ಮಿಸಲಾದ ರಾಷ್ಟ್ರಗಳು ಇತಿಹಾಸವನ್ನು ಪುನರುಜ್ಜೀವನಗೊಳಿಸುವುದು ಮತ್ತು ಉತ್ತಮ ಭವಿಷ್ಯಕ್ಕಾಗಿ ಅಡಿಪಾಯ ಹಾಕುವುದು ಹೇಗೆ ಎಂದು ನಳಂದಾ ಪ್ರದರ್ಶಿಸಲಿದೆ. ಸ್ನೇಹಿತರೆ, ನಳಂದವು ಕೇವಲ ಭಾರತದ ಗತಕಾಲದ ಪುನರುಜ್ಜೀವನವಲ್ಲ. ಇದು ಪ್ರಪಂಚದ ಅನೇಕ ದೇಶಗಳ, ವಿಶೇಷವಾಗಿ ಏಷ್ಯಾದ ಪರಂಪರೆಯೊಂದಿಗೆ ನಿಕಟ ಸಂಪರ್ಕ ಹೊಂದಿದೆ. ವಿಶ್ವವಿದ್ಯಾಲಯದ ಆವರಣ ಉದ್ಘಾಟನಾ ಸಮಾರಂಭದಲ್ಲಿ ಹಲವು ದೇಶಗಳ ಗಣ್ಯರು ಉಪಸ್ಥಿತಿಯು ಅಭೂತಪೂರ್ವವಾಗಿದೆ. ನಳಂದ ವಿಶ್ವವಿದ್ಯಾಲಯದ ಮರುರ್ನಿರ್ಮಾಣದಲ್ಲಿ ನಮ್ಮ ಪಾಲುದಾರ ರಾಷ್ಟ್ರಗಳೂ ಭಾಗವಹಿಸಿವೆ. ಈ ಸಂದರ್ಭದಲ್ಲಿ, ನಾನು ಭಾರತದ ಎಲ್ಲಾ ಮಿತ್ರ ದೇಶಗಳಿಗೆ ಮತ್ತು ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ನಾನು ಬಿಹಾರದ ಜನತೆಗೂ ಅಭಿನಂದನೆ ಸಲ್ಲಿಸುತ್ತೇನೆ. ಬಿಹಾರವು ತನ್ನ ಹೆಮ್ಮೆಯನ್ನು ಮರಳಿ ಪಡೆಯಲು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವ ರೀತಿಯಲ್ಲಿ, ಈ ನಳಂದಾ ಕ್ಯಾಂಪಸ್ ಆ ಪ್ರಯಾಣದ ಸ್ಫೂರ್ತಿಯಾಗಿದೆ.

 

|

ಸ್ನೇಹಿತರೆ,

ನಳಂದಾ ಒಂದು ಕಾಲದಲ್ಲಿ ಭಾರತದ ಸಂಪ್ರದಾಯ ಮತ್ತು ಗುರುತಿನ ರೋಮಾಂಚಕ ತಾಣವಾಗಿತ್ತು ಎಂದು ನಮಗೆಲ್ಲರಿಗೂ ತಿಳಿದಿದೆ. ನಳಂದ ಎಂದರೆ 'ನ ಅಲ್ಲಮ ದದಾತಿ ಇತಿ 'ನಾಳಂದ' ಅಂದರೆ, ಅಡೆತಡೆಯಿಲ್ಲದ ಶಿಕ್ಷಣ ಮತ್ತು ಜ್ಞಾನದ ಹರಿವು ಸ್ಥಳವಾಗಿದೆ. ಇದು ಶಿಕ್ಷಣದ ಬಗ್ಗೆ ಭಾರತದ ದೃಷ್ಟಿಕೋನವಾಗಿದೆ. ಶಿಕ್ಷಣವು ಎಲ್ಲೆಗಳನ್ನು ಮೀರಿದೆ ಮತ್ತು ಲಾಭ ಮತ್ತು ನಷ್ಟದ ದೃಷ್ಟಿಕೋನವನ್ನು ಮೀರಿದೆ. ಶಿಕ್ಷಣವೇ ನಮ್ಮನ್ನು ರೂಪಿಸುತ್ತದೆ, ಕಲ್ಪನೆಗಳನ್ನು ನೀಡುತ್ತದೆ ಮತ್ತು ಅವುಗಳನ್ನು ರೂಪಿಸುತ್ತದೆ. ಪ್ರಾಚೀನ ನಳಂದಾದಲ್ಲಿ, ಮಕ್ಕಳನ್ನು ಅವರ ಗುರುತು ಅಥವಾ ರಾಷ್ಟ್ರೀಯತೆಯ ಆಧಾರದ ಮೇಲೆ ಸೇರಿಸುತ್ತಿರಲಿಲ್ಲ. ಪ್ರತಿ ದೇಶ ಮತ್ತು ಪ್ರತಿ ವರ್ಗದ ಯುವಕರು ಇಲ್ಲಿಗೆ ಬರುತ್ತಿದ್ದರು. ನಳಂದ ವಿಶ್ವವಿದ್ಯಾಲಯದ ಈ ಹೊಸ ಕ್ಯಾಂಪಸ್‌ನಲ್ಲಿ ನಾವು ಆ ಪ್ರಾಚೀನ ವ್ಯವಸ್ಥೆಯನ್ನು ಆಧುನಿಕ ರೂಪದಲ್ಲಿ ಬಲಪಡಿಸಬೇಕು. ವಿಶ್ವಾದ್ಯಂತದ ಅನೇಕ ದೇಶಗಳ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. 20ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ನಳಂದಾದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದು 'ವಸುಧೈವ ಕುಟುಂಬಕಂ' (ಜಗತ್ತೇ ಒಂದು ಕುಟುಂಬ) ಚೇತನದ ಸುಂದರ ಸಂಕೇತವಾಗಿದೆ.

ಸ್ನೇಹಿತರೆ,

ಮುಂದಿನ ದಿನಗಳಲ್ಲಿ ನಳಂದಾ ವಿಶ್ವವಿದ್ಯಾಲಯವು ಮತ್ತೊಮ್ಮೆ ನಮ್ಮ ಸಾಂಸ್ಕೃತಿಕ ವಿನಿಮಯದ ಪ್ರಮುಖ ಕೇಂದ್ರವಾಗಲಿದೆ ಎಂದು ನಾನು ನಂಬುತ್ತೇನೆ. ಭಾರತ ಮತ್ತು ಆಗ್ನೇಯ ಏಷ್ಯಾದ ದೇಶಗಳ ಕಲಾಕೃತಿಗಳ ದಾಖಲೀಕರಣದ ಮೇಲೆ ಇಲ್ಲಿ ಗಮನಾರ್ಹವಾದ ಕೆಲಸ ಮಾಡಲಾಗುತ್ತಿದೆ. ಇಲ್ಲಿ ಸಾಮಾನ್ಯ ದಾಖಲೀಕರಣ ಸಂಪನ್ಮೂಲ ಕೇಂದ್ರವನ್ನು ಸಹ ಸ್ಥಾಪಿಸಲಾಗಿದೆ. ನಳಂದ ವಿಶ್ವವಿದ್ಯಾಲಯವು ಆಸಿಯಾನ್-ಇಂಡಿಯಾ ವಿಶ್ವವಿದ್ಯಾಲಯ ಜಾಲವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇಷ್ಟು ಕಡಿಮೆ ಸಮಯದಲ್ಲಿ, ಅನೇಕ ಪ್ರಮುಖ ಜಾಗತಿಕ ಸಂಸ್ಥೆಗಳು ಇಲ್ಲಿ ಒಂದಾಗಿವೆ. 21ನೇ ಶತಮಾನವನ್ನು ಏಷ್ಯಾದ ಶತಮಾನ ಎಂದು ಕರೆಯುವ ಸಮಯದಲ್ಲಿ, ಈ ಸಾಮೂಹಿಕ ಪ್ರಯತ್ನಗಳು ನಮ್ಮ ಹಂಚಿಕೆಯ ಪ್ರಗತಿಗೆ ಹೊಸ ಶಕ್ತಿ ನೀಡುತ್ತದೆ.

ಸ್ನೇಹಿತರೆ,

ಭಾರತದಲ್ಲಿ ಶಿಕ್ಷಣವನ್ನು ಮಾನವತೆಗೆ ಕೊಡುಗೆ ನೀಡುವ ಪ್ರಧಾನ ಸಾಧನವೆಂದು ಪರಿಗಣಿಸಲಾಗಿದೆ. ನಾವು ಕಲಿಯುತ್ತೇವೆ, ಇದರಿಂದ ನಾವು ನಮ್ಮ ಜ್ಞಾನವನ್ನು ಮಾನವತೆಯ ಸುಧಾರಣೆಗಾಗಿ ಬಳಸಬಹುದು. ನೋಡಿ, ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನ. ಇಂದು ಭಾರತದಲ್ಲಿ ನೂರಾರು ಭಂಗಿಯ ಯೋಗಗಳಿವೆ. ನಮ್ಮ ಋಷಿಮುನಿಗಳು ಅದರ ಬಗ್ಗೆ ವ್ಯಾಪಕ ಸಂಶೋಧನೆ ಮಾಡಿದ್ದಾರೆ! ಆದಾಗ್ಯೂ, ಯೋಗದ ಬಗ್ಗೆ ಯಾರೂ ಪ್ರತ್ಯೇಕತೆಯನ್ನು ಹೇಳಲಿಲ್ಲ. ಇಂದು ಇಡೀ ವಿಶ್ವವೇ ಯೋಗವನ್ನು ಅಪ್ಪಿಕೊಳ್ಳುತ್ತಿದ್ದು, ಯೋಗ ದಿನವು ಜಾಗತಿಕ ಆಚರಣೆಯಾಗಿ ಮಾರ್ಪಟ್ಟಿದೆ. ನಾವು ನಮ್ಮ ಆಯುರ್ವೇದವನ್ನು ಇಡೀ ವಿಶ್ವದೊಂದಿಗೆ ಹಂಚಿಕೊಂಡಿದ್ದೇವೆ. ಇಂದು ಆಯುರ್ವೇದವನ್ನು ಆರೋಗ್ಯಕರ ಜೀವನಶೈಲಿಯ ಮೂಲವಾಗಿ ನೋಡಲಾಗುತ್ತಿದೆ. ಸುಸ್ಥಿರ ಜೀವನಶೈಲಿ ಮತ್ತು ಸುಸ್ಥಿರ ಅಭಿವೃದ್ಧಿಯ ಮತ್ತೊಂದು ಉದಾಹರಣೆ ನಮ್ಮ ಮುಂದಿದೆ. ಶತಮಾನಗಳಿಂದ, ಭಾರತವು ಸುಸ್ಥಿರತೆಯನ್ನು ಮಾದರಿಯಾಗಿ ಬದುಕಿದೆ. ಪರಿಸರವನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಾ ಮುನ್ನಡೆದಿದ್ದೇವೆ. ಆ ಅನುಭವಗಳ ಆಧಾರದ ಮೇಲೆ ಭಾರತವು ಮಿಷನ್ ಲೈಫ್‌ನಂತಹ ಮಾನವೀಯ ದೃಷ್ಟಿಯನ್ನು ಜಗತ್ತಿಗೆ ನೀಡಿದೆ. ಇಂದು ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ ನಂತಹ ವೇದಿಕೆಗಳು ಸುರಕ್ಷಿತ ಭವಿಷ್ಯದ ಭರವಸೆಯಾಗುತ್ತಿವೆ. ಈ ನಳಂದ ವಿಶ್ವವಿದ್ಯಾಲಯ ಕ್ಯಾಂಪಸ್ ಕೂಡ ಈ ಮನೋಭಾವವನ್ನು ಮುನ್ನಡೆಸುತ್ತದೆ. ನೆಟ್ ಝೀರೋ ಎನರ್ಜಿ, ನೆಟ್ ಝೀರೋ ಎಮಿಷನ್ಸ್, ನೆಟ್ ಝೀರೋ ವಾಟರ್ ಮತ್ತು ನೆಟ್ ಝೀರೋ ವೇಸ್ಟ್ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತ ದೇಶದ ಮೊದಲ ಕ್ಯಾಂಪಸ್ ಇದಾಗಿದೆ. "ಅಪ್ಪೋ ದೀಪೋ ಭವ"(ನಿಮಗೆ ನೀವೇ ಬೆಳಕಾಗಿರಿ) ಎಂಬ ಮಂತ್ರ ಅನುಸರಿಸಿ, ಈ ಕ್ಯಾಂಪಸ್ ಇಡೀ ಮಾನವತೆಗೆ ಹೊಸ ಮಾರ್ಗ ತೋರಿಸುತ್ತದೆ.

 

|

ಸ್ನೇಹಿತರೆ,

ಶಿಕ್ಷಣ ಅಭಿವೃದ್ಧಿಯಾದಾಗ ಆರ್ಥಿಕತೆ ಮತ್ತು ಸಂಸ್ಕೃತಿಯ ಮೂಲ ಬೇರುಗಳು ಬಲಗೊಳ್ಳುತ್ತವೆ. ನಾವು ಅಭಿವೃದ್ಧಿ ಹೊಂದಿದ ದೇಶಗಳನ್ನು ನೋಡಿದರೆ, ಶಿಕ್ಷಣದ ನಾಯಕರಾದಾಗಲೇ ಅವರು ಆರ್ಥಿಕ ಮತ್ತು ಸಾಂಸ್ಕೃತಿಕ ನಾಯಕರಾದರು. ಇಂದು ವಿಶ್ವಾದ್ಯಂತದ ವಿದ್ಯಾರ್ಥಿಗಳು ಮತ್ತು ಪ್ರಕಾಶಮಾನವಾದ ಮನಸ್ಸುಗಳು ಅಧ್ಯಯನ ಮಾಡಲು ಆ ದೇಶಗಳಿಗೆ ಹೋಗಲು ಬಯಸುತ್ತಾರೆ. ಒಮ್ಮೆ ನಮ್ಮದೇ ನಳಂದ ಮತ್ತು ವಿಕ್ರಮಶಿಲೆಯ ಪರಿಸ್ಥಿತಿ ಹೀಗಿತ್ತು. ಆದುದರಿಂದ ಭಾರತ ಶಿಕ್ಷಣದಲ್ಲಿ ಮುಂದಿರುವಾಗ ಅದರ ಆರ್ಥಿಕ ಶಕ್ತಿಯೂ ಹೊಸ ಎತ್ತರವನ್ನು ತಲುಪಿದ್ದು ಕಾಕತಾಳೀಯವೇನಲ್ಲ. ಇದು ಯಾವುದೇ ರಾಷ್ಟ್ರದ ಅಭಿವೃದ್ಧಿಗೆ ಮೂಲ ಮಾರ್ಗಸೂಚಿಯಾಗಿದೆ. ಇದಕ್ಕಾಗಿಯೇ ಭಾರತವು 2047ರ ವೇಳೆಗೆ ಅಭಿವೃದ್ಧಿ ಹೊಂದುವ ಗುರಿಯೊಂದಿಗೆ ಕೆಲಸ ಮಾಡುತ್ತಿದೆ. ಈ ಉದ್ದೇಶಕ್ಕಾಗಿ ತನ್ನ ಶಿಕ್ಷಣ ಕ್ಷೇತ್ರವನ್ನು ಪರಿವರ್ತಿಸುತ್ತಿದೆ. ಭಾರತವು ಜಗತ್ತಿಗೆ ಶಿಕ್ಷಣ ಮತ್ತು ಜ್ಞಾನದ ಕೇಂದ್ರವಾಗಬೇಕೆಂಬುದು ನನ್ನ ಧ್ಯೇಯ. ಭಾರತವು ಮತ್ತೊಮ್ಮೆ ಜಾಗತಿಕವಾಗಿ ಅತ್ಯಂತ ಪ್ರಮುಖವಾದ ಜ್ಞಾನ ಕೇಂದ್ರವಾಗಿ ಗುರುತಿಸಲ್ಪಡಬೇಕು ಎಂಬುದು ನನ್ನ ಧ್ಯೇಯವಾಗಿದೆ. ಇದಕ್ಕಾಗಿ ಭಾರತ ತನ್ನ ವಿದ್ಯಾರ್ಥಿಗಳನ್ನು ಚಿಕ್ಕ ವಯಸ್ಸಿನಿಂದಲೇ ಹೊಸತನದ ಮನೋಭಾವದೊಂದಿಗೆ ಸಂಪರ್ಕಿಸುತ್ತಿದೆ. ಇಂದು ಅಟಲ್ ಟಿಂಕರಿಂಗ್ ಲ್ಯಾಬ್‌ಗಳಲ್ಲಿ ಇತ್ತೀಚಿನ ತಂತ್ರಜ್ಞಾನಕ್ಕೆ ಒಡ್ಡಿಕೊಳ್ಳುವುದರಿಂದ, ಒಂದು ಕೋಟಿಗೂ ಹೆಚ್ಚು ಮಕ್ಕಳು ಪ್ರಯೋಜನ ಪಡೆಯುತ್ತಿದ್ದಾರೆ. ಮತ್ತೊಂದೆಡೆ, ಚಂದ್ರಯಾನ ಮತ್ತು ಗಗನ ಯಾನದಂತಹ ಮಿಷನ್‌ಗಳು ವಿದ್ಯಾರ್ಥಿಗಳ ವಿಜ್ಞಾನದ ಆಸಕ್ತಿ ಹೆಚ್ಚಿಸುತ್ತಿವೆ. ಭಾರತ ಒಂದು ದಶಕದ ಹಿಂದೆ ನಾವೀನ್ಯತೆ ಉತ್ತೇಜಿಸಲು ಸ್ಟಾರ್ಟಪ್ ಇಂಡಿಯಾ ಮಿಷನ್ ಪ್ರಾರಂಭಿಸಿತು. ಆ ಸಮಯದಲ್ಲಿ, ಆಗ ದೇಶದಲ್ಲಿ ಕೆಲವೇ 100 ಸ್ಟಾರ್ಟಪ್ ಗಳಿದ್ದವು. ಆದರೆ ಇಂದು ಭಾರತದಲ್ಲಿ 130,000ಕ್ಕೂ ಹೆಚ್ಚು ಸ್ಟಾರ್ಟಪ್‌ಗಳಿವೆ. ಹಿಂದಿನದಕ್ಕೆ ಹೋಲಿಸಿದರೆ, ಭಾರತ ಈಗ ದಾಖಲೆ ಪ್ರಮಾಣದ ಪೇಟೆಂಟ್‌ಗಳನ್ನು ಸಲ್ಲಿಸುತ್ತಿದೆ ಮತ್ತು ಸಂಶೋಧನಾ ಪ್ರಬಂಧಗಳು ಪ್ರಕಟಗೊಳ್ಳುತ್ತಿವೆ. ನಮ್ಮ ಗಮನವು ಯುವ ನವೋದ್ಯಮಿಗಳಿಗೆ ಸಂಶೋಧನೆ ಮತ್ತು ನಾವೀನ್ಯತೆಗೆ ಸಾಧ್ಯವಾದಷ್ಟು ಹೆಚ್ಚಿನ ಅವಕಾಶಗಳನ್ನು ನೀಡುತ್ತಿದೆ. ಇದಕ್ಕಾಗಿ 1 ಲಕ್ಷ ಕೋಟಿ ರೂಪಾಯಿ ಸಂಶೋಧನಾ ನಿಧಿ ಸ್ಥಾಪಿಸುವುದಾಗಿ ಸರ್ಕಾರ ಘೋಷಿಸಿದೆ.

ಸ್ನೇಹಿತರೆ,

ಭಾರತವು ವಿಶ್ವದ ಅತ್ಯಂತ ಸಮಗ್ರ ಮತ್ತು ಸಂಪೂರ್ಣ ಕೌಶಲ್ಯ ವ್ಯವಸ್ಥೆಯನ್ನು ಹೊಂದಲು ಮತ್ತು ವಿಶ್ವದ ಅತ್ಯಾಧುನಿಕ ಸಂಶೋಧನಾ-ಆಧಾರಿತ ಉನ್ನತ ಶಿಕ್ಷಣ ವ್ಯವಸ್ಥೆ ಹೊಂದುವುದು ನಮ್ಮ ಪ್ರಯತ್ನವಾಗಿದೆ. ಈ ಪ್ರಯತ್ನಗಳ ಫಲಿತಾಂಶವೂ ಗೋಚರಿಸುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ, ಭಾರತೀಯ ವಿಶ್ವವಿದ್ಯಾಲಯಗಳು ಜಾಗತಿಕ ಶ್ರೇಯಾಂಕದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿವೆ. 10 ವರ್ಷಗಳ ಹಿಂದೆ ಭಾರತದಿಂದ ಕೇವಲ 9 ಶಿಕ್ಷಣ ಸಂಸ್ಥೆಗಳು ಕ್ಯುಎಸ್ ಶ್ರೇಯಾಂಕದಲ್ಲಿ ಇದ್ದವು. ಇಂದು ಈ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ಕೆಲವು ದಿನಗಳ ಹಿಂದೆ ಟೈಮ್ಸ್ ಹೈಯರ್ ಎಜುಕೇಶನ್ ಇಂಪ್ಯಾಕ್ಟ್ ರಾಂಕಿಂಗ್ ಕೂಡ ಬಿಡುಗಡೆಯಾಗಿದೆ. ಕೆಲವು ವರ್ಷಗಳ ಹಿಂದೆ ಈ ಶ್ರೇಯಾಂಕದಲ್ಲಿ ಭಾರತದಿಂದ ಕೇವಲ 13 ಸಂಸ್ಥೆಗಳು ಮಾತ್ರ ಇದ್ದವು. ಈಗ, ಭಾರತದಿಂದ ಸುಮಾರು 100 ಶಿಕ್ಷಣ ಸಂಸ್ಥೆಗಳನ್ನು ಈ ಜಾಗತಿಕ ಪ್ರಭಾವದ ಶ್ರೇಯಾಂಕದಲ್ಲಿ ಸೇರಿವೆ. ಕಳೆದ 10 ವರ್ಷಗಳಲ್ಲಿ, ಭಾರತದಲ್ಲಿ ಪ್ರತಿ ವಾರ ಸರಾಸರಿ ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ಭಾರತದಲ್ಲಿ ಪ್ರತಿದಿನ ಹೊಸ ಐಟಿಐ(ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್) ಸ್ಥಾಪಿಸಲಾಗಿದೆ. ಪ್ರತಿ 3ನೇ ದಿನ, ಅಟಲ್ ಟಿಂಕರಿಂಗ್ ಲ್ಯಾಬ್ ತೆರೆಯಲಾಗುತ್ತಿದೆ. ಭಾರತದಲ್ಲಿ ಪ್ರತಿದಿನ 2 ಹೊಸ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಇಂದು ದೇಶದಲ್ಲಿ 23 ಐಐಟಿಗಳಿವೆ. 10 ವರ್ಷಗಳ ಹಿಂದೆ 13 ಐಐಎಂಗಳಿದ್ದವು; ಇಂದು ಈ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. 10 ವರ್ಷಗಳ ಹಿಂದೆ ಹೋಲಿಸಿದರೆ, ಈಗ ಸುಮಾರು 3 ಪಟ್ಟು ಹೆಚ್ಚು ಏಮ್ಸ್(AIIMS) ಇವೆ, ಅಂದರೆ, ಅದು 22ಕ್ಕೆ ಏರಿಕೆ ಕಂಡಿದೆ. 10 ವರ್ಷಗಳಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಸುಮಾರು ದ್ವಿಗುಣಗೊಂಡಿದೆ. ಇಂದು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಗಳು ನಡೆಯುತ್ತಿವೆ. ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಯುವಕರ ಕನಸುಗಳನ್ನು ವಿಸ್ತರಿಸಿದೆ. ಭಾರತೀಯ ವಿಶ್ವವಿದ್ಯಾಲಯಗಳು ಸಹ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಸಹಯೋಗ ಪ್ರಾರಂಭಿಸಿವೆ. ಹೆಚ್ಚುವರಿಯಾಗಿ, ಡೀಕಿನ್ ಮತ್ತು ವೊಲೊಂಗೊಂಗ್‌ನಂತಹ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳು ಭಾರತದನಲ್ಲಿ ತಮ್ಮ ಕ್ಯಾಂಪಸ್‌ಗಳನ್ನು ತೆರೆಯುತ್ತಿವೆ. ಈ ಎಲ್ಲಾ ಪ್ರಯತ್ನಗಳು ದೇಶದಲ್ಲೇ ಉನ್ನತ ಶಿಕ್ಷಣಕ್ಕಾಗಿ ಭಾರತೀಯ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಲಭ್ಯವಾಗುವಂತೆ ಮಾಡುತ್ತಿವೆ. ಇದರಿಂದ ನಮ್ಮ ಮಧ್ಯಮ ವರ್ಗದವರಿಗೂ ಹಣ ಉಳಿತಾಯವಾಗುತ್ತಿದೆ.

 

|

ಸ್ನೇಹಿತರೆ,

ಇಂದು ನಮ್ಮ ಪ್ರಮುಖ ಸಂಸ್ಥೆಗಳು ವಿದೇಶಗಳಲ್ಲಿ ಕ್ಯಾಂಪಸ್‌ಗಳನ್ನು ತೆರೆಯುತ್ತಿವೆ. ಈ ವರ್ಷ ಐಐಟಿ ದೆಹಲಿಯು ಅಬುಧಾಬಿಯಲ್ಲಿ ಕ್ಯಾಂಪಸ್ ತೆರೆದಿದೆ. ಐಐಟಿ ಮದ್ರಾಸ್ ತಾಂಜಾನಿಯಾದಲ್ಲಿಯೂ ಕ್ಯಾಂಪಸ್ ಆರಂಭಿಸಿದೆ. ಇದು ಭಾರತೀಯ ಶಿಕ್ಷಣ ಸಂಸ್ಥೆಗಳು ಜಾಗತಿಕವಾಗುತ್ತಿರುವ ಆರಂಭವಷ್ಟೇ. ನಳಂದಾ ವಿಶ್ವವಿದ್ಯಾಲಯದಂತಹ ಸಂಸ್ಥೆಗಳು ಪ್ರಪಂಚದ ಮೂಲೆ ಮೂಲೆಯನ್ನು ತಲುಪಬೇಕಾಗಿದೆ.

ಸ್ನೇಹಿತರೆ,

ಇಂದು ಇಡೀ ವಿಶ್ವದ ಗಮನ ಭಾರತ ಮತ್ತು ಅದರ ಯುವಜನತೆಯ ಮೇಲಿದೆ. ಜಗತ್ತು ಬುದ್ಧನ ಭೂಮಿಯೊಂದಿಗೆ, ಪ್ರಜಾಪ್ರಭುತ್ವದ ತಾಯಿಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯಲು ಬಯಸುತ್ತಿದೆ. ನೋಡಿ, ಭಾರತವು "ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ" ಎಂದು ಹೇಳಿದಾಗ, ಜಗತ್ತು ಅದರೊಂದಿಗೆ ನಿಂತಿದೆ. ಭಾರತವು "ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್" ಎಂದು ಹೇಳಿದಾಗ, ಜಗತ್ತು ಅದನ್ನು ಭವಿಷ್ಯದ ದಿಕ್ಕು ಎಂದು ನೋಡುತ್ತಿದೆ. ಭಾರತವು "ಒಂದು ಭೂಮಿ, ಒಂದು ಆರೋಗ್ಯ" ಎಂದು ಹೇಳಿದಾಗ, ಜಗತ್ತು ಅದನ್ನು ಗೌರವಿಸುತ್ತಿದೆ ಮತ್ತು ಸ್ವೀಕರಿಸುತ್ತಿದೆ. ನಳಂದಾ ಭೂಮಿ ಈ ಜಾಗತಿಕ ಭ್ರಾತೃತ್ವದ ಮನೋಭಾವಕ್ಕೆ ಹೊಸ ಆಯಾಮ ನೀಡಬಲ್ಲದು. ಹಾಗಾಗಿ ನಳಂದದ ವಿದ್ಯಾರ್ಥಿಗಳ ಜವಾಬ್ದಾರಿ ಇನ್ನೂ ಹೆಚ್ಚಿದೆ. ನೀವು ಭಾರತ ಮತ್ತು ಇಡೀ ಪ್ರಪಂಚದ ಭವಿಷ್ಯವಾಗಿದ್ದೀರಿ. ಅಮೃತ ಕಾಲದ ಈ 25 ವರ್ಷಗಳು ಭಾರತದ ಯುವಕರಿಗೆ ಬಹಳ ಮಹತ್ವದ್ದಾಗಿದೆ. ನಳಂದ ವಿಶ್ವವಿದ್ಯಾಲಯದ ಪ್ರತಿಯೊಬ್ಬ ವಿದ್ಯಾರ್ಥಿಗೂ ಈ 25 ವರ್ಷಗಳು ಅಷ್ಟೇ ಮುಖ್ಯ. ಇಲ್ಲಿಂದ ಎಲ್ಲಿಗೆ ಹೋದರೂ ನಿಮ್ಮ ವಿಶ್ವವಿದ್ಯಾಲಯದ ಮಾನವೀಯ ಮೌಲ್ಯಗಳು ಎದ್ದು ಕಾಣಬೇಕು. ನಿಮ್ಮ ಲೋಗೊದ ಸಂದೇಶವನ್ನು ಯಾವಾಗಲೂ ನೆನಪಿನಲ್ಲಿಡಿ. ನೀವು ಅದನ್ನು ನಳಂದಾ ಮಾರ್ಗ ಎಂದು ಕರೆಯುತ್ತೀರಿ, ಸರಿ? ವ್ಯಕ್ತಿಗಳ ನಡುವಿನ ಸಾಮರಸ್ಯ ಮತ್ತು ವ್ಯಕ್ತಿಗಳು ಮತ್ತು ಪ್ರಕೃತಿಯ ನಡುವಿನ ಸಾಮರಸ್ಯವು ನಿಮ್ಮ ಲೋಗೊದ ಆಧಾರಸ್ತಂಭವಾಗಿದೆ. ನಿಮ್ಮ ಶಿಕ್ಷಕರಿಂದ ಕಲಿಯಿರಿ, ಆದರೆ ಪರಸ್ಪರ ಕಲಿಯಲು ಪ್ರಯತ್ನಿಸಿ. ಕುತೂಹಲದಿಂದಿರಿ, ಧೈರ್ಯದಿಂದಿರಿ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ದಯೆಯಿಂದಿರಿ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ನಿಮ್ಮ ಜ್ಞಾನವನ್ನು ಬಳಸಿ. ನಿಮ್ಮ ಜ್ಞಾನದಿಂದ ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಿ. ನಳಂದದ ಹೆಮ್ಮೆ, ನಮ್ಮ ಭಾರತದ ಹೆಮ್ಮೆ, ನಿಮ್ಮ ಯಶಸ್ಸಿನಿಂದ ನಿರ್ಧರಿಸಲ್ಪಡುತ್ತದೆ. ನಿಮ್ಮ ಜ್ಞಾನವು ಎಲ್ಲಾ ಮಾನವತೆಗೆ ಮಾರ್ಗದರ್ಶನ ನೀಡುತ್ತದೆ ಎಂದು ನಾನು ನಂಬುತ್ತೇನೆ. ಭವಿಷ್ಯದಲ್ಲಿ ನಮ್ಮ ಯುವಕರು ಜಗತ್ತನ್ನು ಮುನ್ನಡೆಸುತ್ತಾರೆ ಎಂದು ನಾನು ನಂಬುತ್ತೇನೆ. ನಳಂದಾ ಜಾಗತಿಕ ಉದ್ದೇಶಕ್ಕಾಗಿ ಪ್ರಮುಖ ಕೇಂದ್ರವಾಗಲಿದೆ ಎಂದು ನಾನು ನಂಬುತ್ತೇನೆ.

ಈ ಭರವಸೆಯೊಂದಿಗೆ, ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಸರ್ಕಾರದಿಂದ ಸಂಪೂರ್ಣ ಬೆಂಬಲಕ್ಕಾಗಿ ನಿತೀಶ್ ನೀಡಿರುವ ಕರೆಯನ್ನು ನಾನು ಸ್ವಾಗತಿಸುತ್ತೇನೆ. ಈ ಚಿಂತನಾ ಪಯಣಕ್ಕೆ ಸಾಧ್ಯವಾದಷ್ಟು ಶಕ್ತಿನ್ನು ಒದಗಿಸುವಲ್ಲಿ ಭಾರತ ಸರ್ಕಾರವೂ ಎಂದಿಗೂ ಹಿಂದುಳಿಯುವುದಿಲ್ಲ. ಈ ಉತ್ಸಾಹದಿಂದ ನಾನು ನಿಮಗೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

 

|

ಧನ್ಯವಾದಗಳು!

 

  • Jitendra Kumar April 14, 2025

    🙏🇮🇳❤️
  • Shubhendra Singh Gaur March 23, 2025

    जय श्री राम ।
  • Shubhendra Singh Gaur March 23, 2025

    जय श्री राम
  • Dheeraj Thakur January 29, 2025

    जय श्री राम।
  • Dheeraj Thakur January 29, 2025

    जय श्री राम
  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम 🚩 वन्दे मातरम् जय भाजपा विजय भाजपा
  • Siva Prakasam October 30, 2024

    🙏🙏🙏🙏🙏🙏🙏🙏🙏🙏💐💐💐💐💐
  • Amrita Singh September 26, 2024

    हर हर महादेव
  • दिग्विजय सिंह राना September 18, 2024

    हर हर महादेव
  • ओम प्रकाश सैनी September 14, 2024

    rr
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
New trade data shows significant widening of India's exports basket

Media Coverage

New trade data shows significant widening of India's exports basket
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಮೇ 2025
May 17, 2025

India Continues to Surge Ahead with PM Modi’s Vision of an Aatmanirbhar Bharat