PM launches the UN International Year of Cooperatives 2025
PM launches a commemorative postal stamp, symbolising India’s commitment to the cooperative movement
For India, Co-operatives are the basis of culture, a way of life: PM Modi
Co-operatives in India have travelled from idea to movement, from movement to revolution and from revolution to empowerment: PM Modi
We are following the mantra of prosperity through cooperation: PM Modi
India sees a huge role of co-operatives in its future growth: PM Modi
The role of Women in the co-operative sector is huge: PM Modi
India believes that co-operatives can give new energy to global cooperation: PM Modi

ಭೂತಾನ್ ಪ್ರಧಾನಿ ಮತ್ತು ನನ್ನ ಕಿರಿಯ ಸಹೋದರ, ಫಿಜಿಯ ಉಪ ಪ್ರಧಾನಿ, ಭಾರತದ ಸಹಕಾರ ಸಚಿವ ಅಮಿತ್ ಶಾ, ಅಂತರರಾಷ್ಟ್ರೀಯ ಸಹಕಾರಿ ಒಕ್ಕೂಟದ ಅಧ್ಯಕ್ಷರು, ವಿಶ್ವಸಂಸ್ಥೆಯ ಪ್ರತಿನಿಧಿಗಳು, ಪ್ರಪಂಚದಾದ್ಯಂತ ಇಲ್ಲಿಗೆ ಆಗಮಿಸಿರುವ ಸಹಕಾರ ಲೋಕದ ಎಲ್ಲಾ ಸದಸ್ಯರೇ, ಮಹಿಳೆಯರೇ ಮತ್ತು ಮಹನೀಯರೇ, 

ನಾನು ಇಂದು ನಿಮ್ಮಲ್ಲರನ್ನು ಸ್ವಾಗತಿಸುತ್ತಿದ್ದೇನೆ, ಅದನ್ನು ನಾನು ಒಬ್ಬಂಟಿಗನಾಗಿ ಮಾಡುತ್ತಿಲ್ಲ, ವಾಸ್ತವವಾಗಿ, ನಾನು ಒಬ್ಬನೇ ಇದನ್ನು ಮಾಡಲು ಸಾಧ್ಯವಿಲ್ಲ. ಭಾರತದ ಲಕ್ಷಾಂತರ ರೈತರು, ಲಕ್ಷಾಂತರ ಜಾನುವಾರು ಸಾಕಣೆದಾರರು, ಭಾರತದ ಮೀನುಗಾರರು, 8 ಲಕ್ಷಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳು, ಸ್ವಸಹಾಯ ಗುಂಪುಗಳಿಗೆ ಸಂಬಂಧಿಸಿದ 10 ಕೋಟಿ ಮಹಿಳೆಯರು ಮತ್ತು ಸಹಕಾರಿಗಳನ್ನು ತಂತ್ರಜ್ಞಾನದೊಂದಿಗೆ ಸಂಪರ್ಕಿಸುತ್ತಿರುವ ಭಾರತದ ಯುವಕರ ಪರವಾಗಿ ನಾನು ನಿಮ್ಮನ್ನು ಭಾರತಕ್ಕೆ ಸ್ವಾಗತಿಸುತ್ತೇನೆ. 

ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸಹಕಾರಿ ಒಕ್ಕೂಟದ ಜಾಗತಿಕ ಸಮ್ಮೇಳನವನ್ನು ಭಾರತದಲ್ಲಿ ನಡೆಸಲಾಗುತ್ತಿದೆ. ಪ್ರಸ್ತುತ, ನಾವು ಭಾರತದಲ್ಲಿ ಸಹಕಾರಿ ಆಂದೋಲನಕ್ಕೆ ಹೊಸ ಆಯಾಮವನ್ನು ನೀಡುತ್ತಿದ್ದೇವೆ. ಈ ಸಮ್ಮೇಳನದ ಮೂಲಕ, ನಾವು ಭಾರತದ ಭವಿಷ್ಯದ ಸಹಕಾರಿ ಪ್ರಯಾಣಕ್ಕೆ ಅಗತ್ಯವಾದ ಒಳನೋಟಗಳನ್ನು ಪಡೆಯುತ್ತೇವೆ ಮತ್ತು ಅದೇ ಸಮಯದಲ್ಲಿ, ಭಾರತದ ಅನುಭವಗಳು ಜಾಗತಿಕ ಸಹಕಾರಿ ಚಳವಳಿಯನ್ನು 21 ನೇ ಶತಮಾನಕ್ಕೆ ಹೊಸ ಸಾಧನಗಳು ಮತ್ತು ಹೊಸ ಚೈತನ್ಯವನ್ನು ಒದಗಿಸುತ್ತವೆ ಎಂದು ನನಗೆ ವಿಶ್ವಾಸವಿದೆ. 2025 ಅನ್ನು ಅಂತಾರಾಷ್ಟ್ರೀಯ ಸಹಕಾರಿ ವರ್ಷವೆಂದು ಘೋಷಿಸಿದ್ದಕ್ಕಾಗಿ ನಾನು ವಿಶ್ವಸಂಸ್ಥೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. 

 

ಸ್ನೇಹಿತರೇ, 

ಸಹಕಾರ ಸಂಘಗಳು ಜಗತ್ತಿಗೆ ಮಾದರಿಯಾಗಿವೆ, ಆದರೆ ಭಾರತಕ್ಕೆ, ಅವು ನಮ್ಮ ಸಂಸ್ಕೃತಿಯ ಬುನಾದಿ ಮತ್ತು ಜೀವನ ರೀತಿಯಾಗಿವೆ. ನಮ್ಮ ವೇದಗಳು ಹೇಳುತ್ತವೆ, "ನಾವೆಲ್ಲ ಒಟ್ಟಾಗಿ ಹೋಗೋಣ, ಸಾಮರಸ್ಯದಿಂದ ಮಾತನಾಡೋಣ. " ನಮ್ಮ ಉಪನಿಷತ್ತುಗಳು ಹೇಳುತ್ತವೆ, "ಎಲ್ಲರೂ ಸಂತೋಷವಾಗಿ ಇರಲಿ." ನಮ್ಮ ಪ್ರಾರ್ಥನೆಗಳಲ್ಲೂ ಜೊತೆಯಾಗಿ ಬಾಳುವ ಭಾವನೆ ಪ್ರಮುಖವಾಗಿದೆ. 'ಸಂಘ' (ಒಕ್ಕೂಟ) ಮತ್ತು 'ಸಹ' (ಸಹಕಾರ) ಭಾರತೀಯ ಜೀವನದ ಮೂಲಭೂತ ಅಂಶಗಳಾಗಿವೆ. ಇದೇ ನಮ್ಮ ಕುಟುಂಬ ವ್ಯವಸ್ಥೆಯ ಆಧಾರವೂ ಆಗಿದೆ. ಮತ್ತು ಖಂಡಿತವಾಗಿ ಈ ಭಾವನೆಯೇ ಸಹಕಾರ ಸಂಘಗಳ ಮೂಲಾಧಾರ. ಭಾರತೀಯ ಸಂಸ್ಕೃತಿಯು ಈ ಸಹಕಾರದ ಭಾವನೆಯಿಂದ ಅಭಿವೃದ್ಧಿ ಹೊಂದಿದೆ.

ಸ್ನೇಹಿತರೇ, 

ನಮ್ಮ ಸ್ವಾತಂತ್ರ್ಯ ಚಳುವಳಿಯು ಸಹಕಾರಿ ಸಂಘಗಳಿಂದಲೂ ಸ್ಫೂರ್ತಿ ಪಡೆದಿದೆ. ಅವರು ಆರ್ಥಿಕ ಸಬಲೀಕರಣಕ್ಕೆ ಕೊಡುಗೆ ನೀಡಿರುವುದು ಮಾತ್ರವಲ್ಲದೆ ಸ್ವಾತಂತ್ರ್ಯ ಹೋರಾಟಗಾರರಿಗೆ ಸಾಮೂಹಿಕ ವೇದಿಕೆಯನ್ನೂ ಒದಗಿಸಿದರು. ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ (ಗ್ರಾಮ ಸ್ವ-ಆಡಳಿತ) ಪರಿಕಲ್ಪನೆಯು ಸಮುದಾಯದ ಭಾಗವಹಿಸುವಿಕೆಗೆ ಹೊಸ ಶಕ್ತಿಯನ್ನು ತುಂಬಿತು. ಅವರು ಸಹಕಾರಿ ಸಂಘಗಳ ಮೂಲಕ ಖಾದಿ ಮತ್ತು ಗ್ರಾಮೋದ್ಯೋಗಗಳಂತಹ ಕ್ಷೇತ್ರಗಳಲ್ಲಿ ಹೊಸ ಚಳವಳಿಯನ್ನು ಪ್ರಾರಂಭಿಸಿದರು. ಇಂದು, ನಮ್ಮ ಸಹಕಾರಿ ಸಂಘಗಳ ಬೆಂಬಲದೊಂದಿಗೆ ಖಾದಿ ಮತ್ತು ಗ್ರಾಮೋದ್ಯೋಗಗಳು ಕೆಲವು ದೊಡ್ಡ ಬ್ರಾಂಡ್ ಗಳನ್ನು ಕೂಡ ಮೀರಿಸಿವೆ. ಇದೇ ಅವಧಿಯಲ್ಲಿ, ಸರ್ದಾರ್ ಪಟೇಲ್ ಅವರು ರೈತರನ್ನು ಒಗ್ಗೂಡಿಸಿದರು ಮತ್ತು ಹಾಲು ಸಹಕಾರಿ ಸಂಘಗಳ ಮೂಲಕ ಸ್ವಾತಂತ್ರ್ಯ ಚಳವಳಿಗೆ ಹೊಸ ದಿಕ್ಕನ್ನು ನೀಡಿದರು. ಸ್ವಾತಂತ್ರ್ಯ ಕ್ರಾಂತಿಯಿಂದ ಹುಟ್ಟಿದ ಅಮುಲ್ ಇಂದು ಅಗ್ರ ಜಾಗತಿಕ ಆಹಾರ ಬ್ರಾಂಡ್ ಗಳಲ್ಲಿ ಒಂದಾಗಿದೆ. ಭಾರತದಲ್ಲಿ ಸಹಕಾರ ಸಂಘಗಳು ಆಲೋಚನೆಗಳಿಂದ ಚಳುವಳಿಗಳವರೆಗೆ, ಚಳುವಳಿಗಳಿಂದ ಕ್ರಾಂತಿಗಳವರೆಗೆ ಮತ್ತು ಕ್ರಾಂತಿಗಳಿಂದ ಸಬಲೀಕರಣದವರೆಗೆ ಪ್ರಯಾಣಿಸಿವೆ ಎಂದು ನಾವು ಹೇಳಬಹುದು. 

 

ಸ್ನೇಹಿತರೇ, 

ಇಂದು, ನಾವು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಸರ್ಕಾರ ಮತ್ತು ಸಹಕಾರಿ ಸಂಸ್ಥೆಗಳ ಶಕ್ತಿಯನ್ನು ಸಂಯೋಜಿಸುತ್ತಿದ್ದೇವೆ. ನಾವು 'ಸಹಕಾರ್ ಸೇ ಸಮೃದ್ಧಿ "ಮಂತ್ರವನ್ನು ಅನುಸರಿಸುತ್ತಿದ್ದೇವೆ. (prosperity through cooperation). ಭಾರತವು ಇಂದು 8 ಲಕ್ಷಕ್ಕೂ ಹೆಚ್ಚು ಸಹಕಾರಿ ಸಂಘಗಳನ್ನು ಹೊಂದಿದೆ, ಅಂದರೆ ವಿಶ್ವದ ಪ್ರತಿ ನಾಲ್ಕು ಸಹಕಾರಿ ಸಂಘಗಳಲ್ಲಿ ಒಂದು ಭಾರತದಲ್ಲಿ ಇದೆ. ಈ ಸಹಕಾರಿ ಸಂಘಗಳು ಸಂಖ್ಯೆಯಲ್ಲಿ ಮಾತ್ರವಲ್ಲದೆ ವ್ಯಾಪ್ತಿಯಲ್ಲಿಯೂ ವಿಶಾಲವಾಗಿವೆ ಮತ್ತು ವೈವಿಧ್ಯಮಯವಾಗಿವೆ. ಗ್ರಾಮೀಣ ಭಾರತದ ಸುಮಾರು 98% ನಷ್ಟು ಭಾಗವು ಸಹಕಾರಿ ಸಂಘಗಳ ವ್ಯಾಪ್ತಿಗೆ ಬರುತ್ತದೆ. ಸರಿಸುಮಾರು 300 ದಶಲಕ್ಷ ಜನರು-ವಿಶ್ವದ ಪ್ರತಿ ಐವರಲ್ಲಿ ಒಬ್ಬರು ಮತ್ತು ಪ್ರತಿ ಐದು ಭಾರತೀಯರಲ್ಲಿ ಒಬ್ಬರು-ಸಹಕಾರಿ ವಲಯದೊಂದಿಗೆ ಸಂಬಂಧ ಹೊಂದಿದ್ದಾರೆ. ಸಕ್ಕರೆ, ರಸಗೊಬ್ಬರ, ಮೀನುಗಾರಿಕೆ ಮತ್ತು ಹಾಲು ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ಸಹಕಾರಿ ಸಂಸ್ಥೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ.

ದಶಕಗಳಲ್ಲಿ, ನಗರ ಸಹಕಾರಿ ಬ್ಯಾಂಕಿಂಗ್ ಮತ್ತು ವಸತಿ ಸಹಕಾರಿ ಸಂಘಗಳಲ್ಲಿ ಭಾರತವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಇಂದು, ಭಾರತದಲ್ಲಿ ಸುಮಾರು 2,00,000 ವಸತಿ ಸಹಕಾರಿ ಸಂಘಗಳಿವೆ. ಇತ್ತೀಚಿನ ವರ್ಷಗಳಲ್ಲಿ, ನಾವು ಸುಧಾರಣೆಗಳ ಮೂಲಕ ಸಹಕಾರಿ ಬ್ಯಾಂಕಿಂಗ್ ವಲಯವನ್ನು ಬಲಪಡಿಸಿದ್ದೇವೆ. ಇಂದು, ದೇಶಾದ್ಯಂತ ಸಹಕಾರಿ ಬ್ಯಾಂಕುಗಳು 12 ಲಕ್ಷ ಕೋಟಿ ರೂಪಾಯಿಗಳ ಠೇವಣಿಗಳನ್ನು ಹೊಂದಿವೆ. (12 trillion rupees). ಈ ಬ್ಯಾಂಕ್ ಗಳಲ್ಲಿ ಮತ್ತಷ್ಟು ಬಲವರ್ಧನೆ ಮತ್ತು ವಿಶ್ವಾಸವನ್ನು ಬೆಳೆಸಲು, ನಮ್ಮ ಸರ್ಕಾರವು ಹಲವಾರು ಸುಧಾರಣೆಗಳನ್ನು ತಂದಿದೆ. ಈ ಮೊದಲು, ಈ ಬ್ಯಾಂಕ್‌ ಗಳು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ ಬಿ ಐ) ವ್ಯಾಪ್ತಿಯಿಂದ ಹೊರಗಿದ್ದವು ಆದರೆ ಈಗ ಅವುಗಳನ್ನು ಆರ್‌ ಬಿ ಐ ವ್ಯಾಪ್ತಿಗೆ ತರಲಾಗಿದೆ. ನಾವು ಈ ಬ್ಯಾಂಕ್ ಗಳಲ್ಲಿನ ಠೇವಣಿಗಳ ಮೇಲಿನ ವಿಮಾ ರಕ್ಷಣೆಯನ್ನು ಪ್ರತಿ ಠೇವಣಿದಾರರಿಗೆ 5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದ್ದೇವೆ. ಸಹಕಾರಿ ಬ್ಯಾಂಕುಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಅನ್ನು ವಿಸ್ತರಿಸಲಾಗಿದೆ. ಈ ಪ್ರಯತ್ನಗಳು ಭಾರತದ ಸಹಕಾರಿ ಬ್ಯಾಂಕುಗಳನ್ನು ಹಿಂದೆಂದಿಗಿಂತಲೂ ಹೆಚ್ಚು ಸ್ಪರ್ಧಾತ್ಮಕ ಮತ್ತು ಪಾರದರ್ಶಕವಾಗಿಸಿವೆ.

ಸ್ನೇಹಿತರೇ, 

ಭಾರತವು ತನ್ನ ಭವಿಷ್ಯದ ಬೆಳವಣಿಗೆಯಲ್ಲಿ ಸಹಕಾರಿ ಸಂಘಗಳಿಗೆ ಮಹತ್ವದ ಪಾತ್ರವನ್ನು ಕಲ್ಪಿಸುತ್ತದೆ. ಆದ್ದರಿಂದ, ಇತ್ತೀಚಿನ ವರ್ಷಗಳಲ್ಲಿ, ನಾವು ಇಡೀ ಸಹಕಾರಿ ಪರಿಸರ ವ್ಯವಸ್ಥೆಯನ್ನು ಪರಿವರ್ತಿಸಲು ಕೆಲಸ ಮಾಡಿದ್ದೇವೆ. ಭಾರತವು ಈ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳನ್ನು ಕೈಗೊಂಡಿದೆ. ಸಹಕಾರಿ ಸಂಘಗಳನ್ನು ವಿವಿಧೋದ್ದೇಶಗಳನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಇದನ್ನು ಸಾಧಿಸಲು, ಭಾರತ ಸರ್ಕಾರವು ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಸ್ಥಾಪಿಸಿದೆ. ಈ ಸಂಘಗಳನ್ನು ವಿವಿಧೋದ್ದೇಶಗಳನ್ನಾಗಿ ಮಾಡಲು ಹೊಸ ಮಾದರಿ ಉಪವಿಧಿಗಳನ್ನು ಪರಿಚಯಿಸಲಾಗಿದೆ. ನಾವು ಐಟಿ-ಶಕ್ತಗೊಂಡ (IT-enabled) ಪರಿಸರ ವ್ಯವಸ್ಥೆಯೊಂದಿಗೆ ಸಮಗ್ರ ಸಹಕಾರಿ ಸಂಘಗಳನ್ನು ಹೊಂದಿದ್ದೇವೆ ಮತ್ತು ಅವುಗಳನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಹಕಾರಿ ಬ್ಯಾಂಕಿಂಗ್ ಸಂಸ್ಥೆಗಳೊಂದಿಗೆ ಸಂಪರ್ಕಿಸಿದ್ದೇವೆ. ಇಂದು, ಈ ಸಂಘಗಳು ಭಾರತದಲ್ಲಿ ರೈತರಿಗಾಗಿ ಸ್ಥಳೀಯ ಪರಿಹಾರ ಕೇಂದ್ರಗಳನ್ನು ನಡೆಸುತ್ತಿವೆ. ಈ ಸಹಕಾರಿ ಸಂಘಗಳು ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟ ಮಳಿಗೆಗಳನ್ನು ನಿರ್ವಹಿಸುತ್ತಿವೆ, ಅನೇಕ ಹಳ್ಳಿಗಳಲ್ಲಿ ನೀರಿನ ವ್ಯವಸ್ಥೆಗಳನ್ನು ನಿರ್ವಹಿಸುತ್ತಿವೆ ಮತ್ತು ಸೌರ ಫಲಕಗಳನ್ನು ಸ್ಥಾಪಿಸುತ್ತಿವೆ. ತ್ಯಾಜ್ಯದಿಂದ ಇಂಧನ ಉಪಕ್ರಮದ ಅಡಿಯಲ್ಲಿ, ಈ ಸಹಕಾರಿ ಸಂಘಗಳು ಗೋಬರ್ಧನ್ ಯೋಜನೆಗೆ ಕೊಡುಗೆ ನೀಡುತ್ತಿವೆ. ಇದಲ್ಲದೆ, ಸಹಕಾರಿ ಸಂಘಗಳು ಈಗ ಗ್ರಾಮಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳಾಗಿ ಡಿಜಿಟಲ್ ಸೇವೆಗಳನ್ನು ಒದಗಿಸುತ್ತಿವೆ. ಈ ಸಹಕಾರಿ ಸಂಘಗಳನ್ನು ಬಲಪಡಿಸುವುದು ನಮ್ಮ ಪ್ರಯತ್ನವಾಗಿದೆ. ಇದರಿಂದಾಗಿ ಅದರ ಸದಸ್ಯರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. 

 

ಸ್ನೇಹಿತರೇ, 

ನಾವು ಈಗ 2 ಲಕ್ಷ ಹಳ್ಳಿಗಳಲ್ಲಿ ಬಹು ಉದ್ದೇಶದ ಸಹಕಾರಿ ಸಂಘಗಳನ್ನು ರಚಿಸುತ್ತಿದ್ದೇವೆ, ಅಲ್ಲಿ ಪ್ರಸ್ತುತ ಅಂತಹ ಸಂಸ್ಥೆಗಳಿಲ್ಲ. ನಾವು ಉತ್ಪಾದನೆ ಮತ್ತು ಸೇವಾ ವಲಯಗಳೆರಡರಲ್ಲೂ ಸಹಕಾರಿ ಸಂಘಗಳನ್ನು ವಿಸ್ತರಿಸುತ್ತಿದ್ದೇವೆ. ಸಹಕಾರ ವಲಯದಲ್ಲಿ ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹಣಾ ಯೋಜನೆಯಲ್ಲಿ ಭಾರತ ಕಾರ್ಯನಿರ್ವಹಿಸುತ್ತಿದೆ. ಈ ಸಹಕಾರಿ ಸಂಘಗಳು ದೇಶಾದ್ಯಂತ ರೈತರು ತಮ್ಮ ಬೆಳೆಗಳನ್ನು ಶೇಖರಿಸಿಡಲು ಗೋದಾಮುಗಳನ್ನು ನಿರ್ಮಿಸುವ ಯೋಜನೆಯನ್ನು ಕಾರ್ಯಗತಗೊಳಿಸುತ್ತಿವೆ. ಈ ಉಪಕ್ರಮವು ವಿಶೇಷವಾಗಿ ಸಣ್ಣ ರೈತರಿಗೆ ಪ್ರಯೋಜನವನ್ನು ನೀಡುತ್ತದೆ. 

ಸ್ನೇಹಿತರೇ, 

ನಾವು ನಮ್ಮ ಸಣ್ಣ ರೈತರನ್ನು ರೈತ ಉತ್ಪಾದಕ ಸಂಸ್ಥೆಗಳಾಗಿ ಸಂಘಟಿಸುತ್ತಿದ್ದೇವೆ. (FPOs). ಸಣ್ಣ ರೈತರ ಈ FPOಗಳಿಗೆ ಸರ್ಕಾರವು ಅಗತ್ಯವಾದ ಆರ್ಥಿಕ ಬೆಂಬಲವನ್ನು ಒದಗಿಸುತ್ತಿದೆ ಮತ್ತು ಈ ಸುಮಾರು 9,000 ಎಫ್ಪಿಒಗಳು ಈಗಾಗಲೇ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ನಮ್ಮ ಕೃಷಿ ಸಹಕಾರ ಸಂಘಗಳಿಗೆ ಬಲವಾದ ಪೂರೈಕೆ ಮತ್ತು ಮೌಲ್ಯ ಸರಪಳಿಯನ್ನು ಸ್ಥಾಪಿಸುವುದು, ಕೃಷಿ ಕ್ಷೇತ್ರಗಳನ್ನು ಅಡಿಗೆಮನೆಗಳು ಮತ್ತು ಮಾರುಕಟ್ಟೆಗಳಿಗೆ ಸಂಪರ್ಕಿಸುವುದು ನಮ್ಮ ಗುರಿಯಾಗಿದೆ. ಇದನ್ನು ಸಾಧಿಸಲು, ನಾವು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದೇವೆ. ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ನಂತಹ ವೇದಿಕೆಗಳ ಮೂಲಕ ನಾವು ಸಹಕಾರಿ ಸಂಸ್ಥೆಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೊಸ ಮಾಧ್ಯಮವನ್ನು ನೀಡುತ್ತಿದ್ದೇವೆ. ಈ ವೇದಿಕೆಯು ಸಹಕಾರಿ ಸಂಸ್ಥೆಗಳಿಗೆ ಕನಿಷ್ಠ ವೆಚ್ಚದಲ್ಲಿ ನೇರವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ತಲುಪಿಸಲು ಅನುವು ಮಾಡಿಕೊಡುತ್ತದೆ. ಸರ್ಕಾರವು ರಚಿಸಿದ ಡಿಜಿಟಲ್ ಸರ್ಕಾರಿ ಇ-ಮಾರುಕಟ್ಟೆ (GeM) ವೇದಿಕೆಯು ಸಹಕಾರಿ ಸಂಘಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಸ್ನೇಹಿತರೇ, 

ಈ ಶತಮಾನದಲ್ಲಿ, ಮಹಿಳೆಯರ ಭಾಗವಹಿಸುವಿಕೆಯು ಜಾಗತಿಕ ಬೆಳವಣಿಗೆಯಲ್ಲಿ ಪ್ರಮುಖ ಅಂಶವಾಗಲಿದೆ. ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವ ಸಮಾಜಗಳು ವೇಗವಾಗಿ ಬೆಳೆಯುತ್ತವೆ. ಭಾರತವು ಪ್ರಸ್ತುತ ಮಹಿಳಾ ನೇತೃತ್ವದ ಅಭಿವೃದ್ಧಿಯ ಯುಗಕ್ಕೆ ಸಾಕ್ಷಿಯಾಗಿದೆ ಮತ್ತು ನಾವು ಇದರ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದೇವೆ. ಸಹಕಾರಿ ಕ್ಷೇತ್ರದಲ್ಲಿ, ಮಹಿಳೆಯರು ಮಹತ್ವದ ಪಾತ್ರವನ್ನು ವಹಿಸುತ್ತಾರೆ, ಈ ವಲಯವು 60% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಹಲವಾರು ಮಹಿಳಾ ನೇತೃತ್ವದ ಸಹಕಾರಿ ಸಂಘಗಳು ಈ ವಲಯದಲ್ಲಿ ಬಲದ ಮೂಲವಾಗಿವೆ.

 

ಸ್ನೇಹಿತರೇ, 

ಸಹಕಾರಿ ನಿರ್ವಹಣೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ನಮ್ಮ ಪ್ರಯತ್ನವಾಗಿದೆ. ಈ ನಿಟ್ಟಿನಲ್ಲಿ, ನಾವು ಬಹು-ರಾಜ್ಯ ಸಹಕಾರಿ ಸಂಘಗಳ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದೇವೆ. ಬಹು-ರಾಜ್ಯ ಸಹಕಾರಿ ಸಂಘಗಳ ಮಂಡಳಿಗಳಲ್ಲಿ ಮಹಿಳಾ ನಿರ್ದೇಶಕರನ್ನು ಹೊಂದಿರುವುದು ಈಗ ಕಡ್ಡಾಯವಾಗಿದೆ. ಇದಲ್ಲದೆ, ಸಮಾಜಗಳನ್ನು ಹೆಚ್ಚು ಒಳಗೊಳ್ಳುವಂತಾಗಿಸಲು, ವಂಚಿತ ವರ್ಗಗಳಿಗೆ ಮೀಸಲಾತಿಯನ್ನು ಪರಿಚಯಿಸಲಾಗಿದೆ. 

ಸ್ನೇಹಿತರೇ, 

ಭಾರತದಲ್ಲಿ ಸ್ವ-ಸಹಾಯ ಗುಂಪು(SHG)ಗಳ ದೊಡ್ಡ ಚಳವಳಿಯ ಬಗ್ಗೆಯೂ ನೀವು ಕೇಳಿರಬಹುದು. ಇದು ಮಹಿಳೆಯರ ಭಾಗವಹಿಸುವಿಕೆಯ ಮೂಲಕ ಮಹಿಳಾ ಸಬಲೀಕರಣದ ಮಹತ್ವದ ಉಪಕ್ರಮವಾಗಿದೆ. ಇಂದು, ಭಾರತದಲ್ಲಿ 10 ಕೋಟಿ ಅಥವಾ 10 ಕೋಟಿ ಮಹಿಳೆಯರು ಸ್ವ-ಸಹಾಯ ಗುಂಪುಗಳ ಸದಸ್ಯರಾಗಿದ್ದಾರೆ. ಕಳೆದ ದಶಕದಲ್ಲಿ, ಈ ಸ್ವಸಹಾಯ ಗುಂಪುಗಳು ಸರ್ಕಾರದಿಂದ ಕಡಿಮೆ ಬಡ್ಡಿದರದಲ್ಲಿ 9 ಲಕ್ಷ ಕೋಟಿ ರೂಪಾಯಿಗಳ (9 ಟ್ರಿಲಿಯನ್ ರೂಪಾಯಿಗಳು) ಸಾಲವನ್ನು ಪಡೆದಿವೆ. ಈ ಸ್ವಸಹಾಯ ಗುಂಪುಗಳು ಹಳ್ಳಿಗಳಲ್ಲಿ ಗಣನೀಯ ಪ್ರಮಾಣದ ಸಂಪತ್ತನ್ನು ಸೃಷ್ಟಿಸಿವೆ. ಇದು ಅನೇಕ ದೇಶಗಳು ಅನುಕರಿಸಬಹುದಾದ ಮಹಿಳಾ ಸಬಲೀಕರಣದ ಮಾದರಿಯನ್ನು ಸೃಷ್ಟಿಸುತ್ತದೆ. 

ಸ್ನೇಹಿತರೇ,

ಭಾರತದಲ್ಲಿ ಸ್ವಸಹಾಯ ಗುಂಪುಗಳ ರೂಪದಲ್ಲಿ ದೊಡ್ಡ ಆಂದೋಲನದ ಬಗ್ಗೆ ನೀವು ಕೇಳಿರಬೇಕು  ಇದು ಮಹಿಳಾ ಭಾಗವಹಿಸುವಿಕೆಯಿಂದ ಮಹಿಳಾ ಸಬಲೀಕರಣದವರೆಗಿನ ದೊಡ್ಡ ಆಂದೋಲನವಾಗಿದೆ. ಇಂದು ಭಾರತದ 10 ಕೋಟಿ ಅಂದರೆ 100 ಮಿಲಿಯನ್ ಮಹಿಳೆಯರು ಸ್ವಸಹಾಯ ಗುಂಪುಗಳಲ್ಲಿ ಸದಸ್ಯರಾಗಿದ್ದಾರೆ. ಕಳೆದ ದಶಕದಲ್ಲಿ, ಈ ಸ್ವಸಹಾಯ ಗುಂಪುಗಳು ಸರ್ಕಾರದಿಂದ ಕಡಿಮೆ ಬಡ್ಡಿದರದಲ್ಲಿ 9 ಲಕ್ಷ ಕೋಟಿ ರೂಪಾಯಿಗಳ (9 ಟ್ರಿಲಿಯನ್ ರೂಪಾಯಿಗಳು) ಸಾಲವನ್ನು ಪಡೆದಿವೆ. ಈ ಸ್ವಸಹಾಯ ಗುಂಪುಗಳು ಹಳ್ಳಿಗಳಲ್ಲಿ ಗಣನೀಯ ಪ್ರಮಾಣದ ಸಂಪತ್ತನ್ನು ಸೃಷ್ಟಿಸಿವೆ. ಇದು ಅನೇಕ ದೇಶಗಳು ಅನುಕರಿಸಬಹುದಾದ ಮಹಿಳಾ ಸಬಲೀಕರಣದ ಮಾದರಿಯನ್ನು ಸೃಷ್ಟಿಸಿದೆ. 

 

ಸ್ನೇಹಿತರೇ, 

21ನೇ ಶತಮಾನವು ಜಾಗತಿಕ ಸಹಕಾರಿ ಚಳವಳಿಯ ದಿಕ್ಕನ್ನು ಒಟ್ಟಾಗಿ ನಿರ್ಧರಿಸುವ ಸಮಯವಾಗಿದೆ. ಸಹಕಾರಿ ಹಣಕಾಸು ವ್ಯವಸ್ಥೆಯನ್ನು ಸರಳ ಮತ್ತು ಹೆಚ್ಚು ಪಾರದರ್ಶಕವಾಗಿಸುವ ಸಹಕಾರಿ ಹಣಕಾಸು ಮಾದರಿಯ ಬಗ್ಗೆ ನಾವು ಯೋಚಿಸಬೇಕು. ಸಣ್ಣ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಸಹಕಾರಿ ಸಂಘಗಳನ್ನು ಬೆಂಬಲಿಸಲು ಆರ್ಥಿಕ ಸಂಪನ್ಮೂಲಗಳನ್ನು ಒಟ್ಟುಗೂಡಿಸುವುದು ಬಹಳ ಮುಖ್ಯವಾಗಿದೆ. ಹಂಚಿಕೆಯ ಹಣಕಾಸು ವೇದಿಕೆಗಳು ದೊಡ್ಡ ಯೋಜನೆಗಳಿಗೆ ಧನಸಹಾಯ ಮಾಡಬಹುದು ಮತ್ತು ಸಹಕಾರಿ ಸಂಸ್ಥೆಗಳಿಗೆ ಸಾಲಗಳನ್ನು ಒದಗಿಸಬಹುದು. ನಮ್ಮ ಸಹಕಾರಿ ಸಂಘಗಳು ಸಂಗ್ರಹಣೆ, ಉತ್ಪಾದನೆ ಮತ್ತು ವಿತರಣೆಯಲ್ಲಿ ಭಾಗವಹಿಸುವ ಮೂಲಕ ಪೂರೈಕೆ ಸರಪಳಿಗಳನ್ನು ಸುಧಾರಿಸಲು ಕೊಡುಗೆ ನೀಡಬಹುದು. 

ಸ್ನೇಹಿತರೇ, 

ಇಂದು ಇನ್ನೊಂದು ವಿಷಯದ ಬಗ್ಗೆ ಚಿಂತನ ಮಂಥನದ ಅಗತ್ಯವಿದೆ, ವಿಶ್ವಾದ್ಯಂತ ಸಹಕಾರಿಗಳಿಗೆ ಹಣಕಾಸು ಒದಗಿಸಲು ನಾವು ದೊಡ್ಡ ಜಾಗತಿಕ ಹಣಕಾಸು ಸಂಸ್ಥೆಗಳನ್ನು ಸ್ಥಾಪಿಸಬಹುದೇ? ಅಂತಾರಾಷ್ಟ್ರೀಯ ಸಹಕಾರ ಒಕ್ಕೂಟ (ICA) ತನ್ನ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ. ಆದರೆ ಭವಿಷ್ಯದಲ್ಲಿ ಇದು ಮುಂದೆ ಹೋಗಬೇಕಾಗಿದೆ. ಪ್ರಸ್ತುತ ಜಾಗತಿಕ ಪರಿಸ್ಥಿತಿಗಳು ಸಹಕಾರಿ ಚಳವಳಿಗೆ ಗಮನಾರ್ಹ ಅವಕಾಶವನ್ನು ಒದಗಿಸುತ್ತವೆ. ನಾವು ಸಹಕಾರಿ ಸಂಸ್ಥೆಗಳನ್ನು ಜಾಗತಿಕವಾಗಿ ಸಮಗ್ರತೆ ಮತ್ತು ಪರಸ್ಪರ ಗೌರವದ ಧ್ವಜಧಾರಿಗಳನ್ನಾಗಿ ಮಾಡಬೇಕಾಗಿದೆ. ಇದನ್ನು ಸಾಧಿಸಲು, ನಾವು ನಮ್ಮ ನೀತಿಗಳನ್ನು ಹೊಸತನದಿಂದ ರೂಪಿಸಬೇಕು ಮತ್ತು ಕಾರ್ಯತಂತ್ರ ರೂಪಿಸಬೇಕು. ಸಹಕಾರಿ ಸಂಸ್ಥೆಗಳು ಹವಾಮಾನ-ಸ್ಥಿತಿಸ್ಥಾಪಕವಾಗಲು ವೃತ್ತಾಕಾರದ ಆರ್ಥಿಕತೆಯ ತತ್ವಗಳನ್ನು ಸಹ ಅಳವಡಿಸಿಕೊಳ್ಳಬೇಕು. ಹೆಚ್ಚುವರಿಯಾಗಿ, ಸಹಕಾರಿ ಸಂಸ್ಥೆಗಳೊಳಗೆ ನವೋದ್ಯಮಗಳನ್ನು ಉತ್ತೇಜಿಸುವ ಮಾರ್ಗಗಳನ್ನು ನಾವು ಅನ್ವೇಷಿಸಬೇಕು. ಈ ಬಗ್ಗೆಯೂ ಚರ್ಚೆಯ ಅಗತ್ಯವಿದೆ. 

ಸ್ನೇಹಿತರೇ, 

ಸಹಕಾರಿ ಸಂಸ್ಥೆಗಳು ಜಾಗತಿಕ ಸಹಕಾರಕ್ಕೆ ಹೊಸ ಶಕ್ತಿಯನ್ನು ತರಬಹುದು ಎಂದು ಭಾರತ ನಂಬುತ್ತದೆ. ಸಹಕಾರಿ ಸಂಸ್ಥೆಗಳು ವಿಶೇಷವಾಗಿ ಗ್ಲೋಬಲ್ ಸೌತ್ ನಲ್ಲಿರುವ ದೇಶಗಳಿಗೆ ಅಗತ್ಯವಿರುವ ಅಭಿವೃದ್ಧಿಯನ್ನು ಸಾಧಿಸಲು ಸಹಾಯ ಮಾಡಬಹುದು. ಆದ್ದರಿಂದ , ಇಂದು ನಾವು ಸಹಕಾರಿಗಳ ಅಂತರಾಷ್ಟ್ರೀಯ ಸಹಕಾರಕ್ಕಾಗಿ ಹೊಸ  ಆವಿಷ್ಕರಿಸಬೇಕು ಮತ್ತು ರಚಿಸಬೇಕು. ಆ ದೃಷ್ಟಿಕೋನವನ್ನು ಸಾಧಿಸುವಲ್ಲಿ ಈ ಸಮ್ಮೇಳನವು ಮಹತ್ವದ ಪಾತ್ರವನ್ನು ವಹಿಸುತ್ತಿದೆ ಎಂದು ನಾನು ನೋಡುತ್ತೇನೆ. 

 

ಸ್ನೇಹಿತರೇ, 

ಭಾರತವು ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ನಮ್ಮ ಗುರಿ ಕೇವಲ ಹೆಚ್ಚಿನ ಜಿಡಿಪಿ ಬೆಳವಣಿಗೆ ಮಾತ್ರವಲ್ಲ, ಅದರ ಪ್ರಯೋಜನಗಳು ಅತ್ಯಂತ ಬಡವರಿಗೆ ತಲುಪುವುದನ್ನು ಖಾತ್ರಿಪಡಿಸುವುದು. ಮಾನವ ಕೇಂದ್ರಿತ ದೃಷ್ಟಿಕೋನದಿಂದ ಬೆಳವಣಿಗೆಯನ್ನು ನೋಡುವುದು ಜಗತ್ತಿಗೆ ಅಷ್ಟೇ ಮುಖ್ಯವಾಗಿದೆ. ಭಾರತವು ಯಾವಾಗಲೂ ದೇಶದೊಳಗೆ ಅಥವಾ ಜಾಗತಿಕವಾಗಿ ಮಾನವೀಯತೆಗೆ ಆದ್ಯತೆ ನೀಡಿದೆ. ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ನಾವು ಸಂಪನ್ಮೂಲ-ವಂಚಿತ ದೇಶಗಳನ್ನು ಬೆಂಬಲಿಸಿದಾಗ ಇದನ್ನು ಪ್ರದರ್ಶಿಸಲಾಯಿತು. ಈ ದೇಶಗಳಲ್ಲಿ ಹಲವು ಭಾರತದೊಂದಿಗೆ ಜಾಗತಿಕ ದಕ್ಷಿಣಕ್ಕೆ ಸೇರಿದ್ದವು, ಅವರೊಂದಿಗೆ ಭಾರತವು ಔಷಧಿಗಳು ಮತ್ತು ಲಸಿಕೆಗಳನ್ನು ಹಂಚಿಕೊಂಡಿದೆ. ಆ ಸಂದರ್ಭದ ಆರ್ಥಿಕತೆಯ ಲಾಭವನ್ನು ನಾವು ಪಡೆದುಕೊಳ್ಳಬೇಕು ಎಂದು ಹೇಳಿದರು. ಆದರೆ ಮಾನವೀಯತೆಯ ಭಾವನೆ ಹೇಳಿತು...ಇಲ್ಲ...ಆ ದಾರಿ ಸರಿಯಲ್ಲ. ಸೇವೆಯೊಂದೇ ಮಾರ್ಗವಾಗಬೇಕು. ಮತ್ತು ನಾವು ಮಾನವೀಯತೆಯ ಮಾರ್ಗವನ್ನು ಆರಿಸಿದ್ದೇವೆ, ಲಾಭವಲ್ಲ.

ಸ್ನೇಹಿತರೇ, 

ಸಹಕಾರಿ ಸಂಘಗಳ ಪ್ರಾಮುಖ್ಯತೆಯು ಅವುಗಳ ರಚನೆ ಅಥವಾ ಕಾನೂನು ಚೌಕಟ್ಟಿನಲ್ಲಿ ಮಾತ್ರವಲ್ಲ. ಈ ಅಂಶಗಳು ಸಂಸ್ಥೆಗಳನ್ನು ನಿರ್ಮಿಸಬಹುದು ಮತ್ತು ಬೆಳವಣಿಗೆ ಮತ್ತು ವಿಸ್ತರಣೆಗೆ ಅನುಕೂಲ ಮಾಡಿಕೊಡಬಹುದು, ಆದರೆ ಸಹಕಾರಿಗಳ ನಿಜವಾದ ಮೂಲತತ್ವವು ಅವುಗಳ ಚೈತನ್ಯವಾಗಿದೆ. ಈ ಸಹಕಾರಿ ಮನೋಭಾವವು ಈ ಚಳವಳಿಯ ಜೀವನಾಡಿಯಾಗಿದ್ದು, ಸಹಕಾರದ ಸಂಸ್ಕೃತಿಯಲ್ಲಿ ಬೇರೂರಿದೆ. ಸಹಕಾರಿ ಸಂಘಗಳ ಯಶಸ್ಸು ಅವುಗಳ ಸಂಖ್ಯೆಯಲ್ಲಿ ಅಲ್ಲ, ಅದರ ಸದಸ್ಯರ ನೈತಿಕ ಬೆಳವಣಿಗೆಯಲ್ಲಿ ಅಡಗಿದೆ ಎಂದು ಮಹಾತ್ಮ ಗಾಂಧಿ ನಂಬಿದ್ದರು. ನೈತಿಕತೆಯೊಂದಿಗೆ, ನಿರ್ಧಾರಗಳು ಯಾವಾಗಲೂ ಮಾನವೀಯತೆಯ ಹಿತಾಸಕ್ತಿಗಳೊಂದಿಗೆ ಹೊಂದಿಕೆಯಾಗುತ್ತವೆ. ಅಂತಾರಾಷ್ಟ್ರೀಯ ಸಹಕಾರಿ ವರ್ಷದಲ್ಲಿ ನಾವು ಈ ಮನೋಭಾವವನ್ನು ಬಲಪಡಿಸುವುದನ್ನು ಮುಂದುವರಿಸುತ್ತೇವೆ ಎಂಬ ವಿಶ್ವಾಸ ನನಗಿದೆ. ಮತ್ತೊಮ್ಮೆ, ನಾನು ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ ಮತ್ತು ನನ್ನ ಶುಭಾಶಯಗಳನ್ನು ಕೋರುತ್ತೇನೆ. ಮುಂದಿನ ಐದು ದಿನಗಳಲ್ಲಿ, ಈ ಶೃಂಗಸಭೆಯು ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಿದೆ ಮತ್ತು ಇದರ ಫಲಿತಾಂಶವು ಸಮಾಜದ ಪ್ರತಿಯೊಂದು ವರ್ಗವನ್ನು ಮತ್ತು ಪ್ರತಿ ರಾಷ್ಟ್ರವನ್ನು ಸಬಲೀಕರಣಗೊಳಿಸುತ್ತದೆ ಮತ್ತು ಸಹಕಾರಿ ಮನೋಭಾವದಿಂದ ಮುನ್ನಡೆಸುತ್ತದೆ ಎಂಬ ವಿಶ್ವಾಸ ನನಗಿದೆ. ಈ ನಂಬಿಕೆಯೊಂದಿಗೆ, ನಾನು ನಿಮಗೆ ಶುಭ ಹಾರೈಸುತ್ತೇನೆ. 

ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Annual malaria cases at 2 mn in 2023, down 97% since 1947: Health ministry

Media Coverage

Annual malaria cases at 2 mn in 2023, down 97% since 1947: Health ministry
NM on the go

Nm on the go

Always be the first to hear from the PM. Get the App Now!
...
Prime Minister condoles passing away of former Prime Minister Dr. Manmohan Singh
December 26, 2024
India mourns the loss of one of its most distinguished leaders, Dr. Manmohan Singh Ji: PM
He served in various government positions as well, including as Finance Minister, leaving a strong imprint on our economic policy over the years: PM
As our Prime Minister, he made extensive efforts to improve people’s lives: PM

The Prime Minister, Shri Narendra Modi has condoled the passing away of former Prime Minister, Dr. Manmohan Singh. "India mourns the loss of one of its most distinguished leaders, Dr. Manmohan Singh Ji," Shri Modi stated. Prime Minister, Shri Narendra Modi remarked that Dr. Manmohan Singh rose from humble origins to become a respected economist. As our Prime Minister, Dr. Manmohan Singh made extensive efforts to improve people’s lives.

The Prime Minister posted on X:

India mourns the loss of one of its most distinguished leaders, Dr. Manmohan Singh Ji. Rising from humble origins, he rose to become a respected economist. He served in various government positions as well, including as Finance Minister, leaving a strong imprint on our economic policy over the years. His interventions in Parliament were also insightful. As our Prime Minister, he made extensive efforts to improve people’s lives.

“Dr. Manmohan Singh Ji and I interacted regularly when he was PM and I was the CM of Gujarat. We would have extensive deliberations on various subjects relating to governance. His wisdom and humility were always visible.

In this hour of grief, my thoughts are with the family of Dr. Manmohan Singh Ji, his friends and countless admirers. Om Shanti."