For ages, conservation of wildlife and habitats has been a part of the cultural ethos of India, which encourages compassion and co-existence: PM Modi
India is one of the few countries whose actions are compliant with the Paris Agreement goal of keeping rise in temperature to below 2 degree Celsius: PM

ನನ್ನ ಆತ್ಮೀಯ ಸ್ನೇಹಿತರೇ !

ಮಹಾತ್ಮ ಗಾಂಧಿಯವರ ಭೂಮಿಯಾದ ಗಾಂಧಿನಗರದಲ್ಲಿ ವಲಸೆ ಪ್ರಭೇದಗಳ ಸಮಾವೇಶದ  13 ನೇ ಆಡಳಿತ  ಮಂಡಳಿಯ ಸಮ್ಮೇಳನಕ್ಕೆ ನಿಮ್ಮೆಲ್ಲರನ್ನು ಸ್ವಾಗತಿಸಲು ನನಗೆ ಸಂತೋಷವಾಗುತ್ತಿದೆ.

ಭಾರತವು ವಿಶ್ವದ ಅತ್ಯಂತ ವೈವಿಧ್ಯಮಯ ದೇಶಗಳಲ್ಲಿ ಒಂದಾಗಿದೆ. ವಿಶ್ವದ 2.4% ಭೂಪ್ರದೇಶ ಹೊಂದಿರುವ ಭಾರತ ದೇಶವು,  ನಮಗೆ ಈವರೆಗೆ ತಿಳಿದಿರುವ ಜಾಗತಿಕ ಜೀವವೈವಿಧ್ಯತೆಯ ಸುಮಾರು 8% ನಷ್ಟು ಕೊಡುಗೆಯನ್ನು  ನೀಡುತ್ತಿದೆ. ಭಾರತವು ವೈವಿಧ್ಯಮಯ ಪರಿಸರ ಆವಾಸಸ್ಥಾನಗಳನ್ನು ಹೊಂದಿದೆ  ಮತ್ತು ನಾಲ್ಕು ಜೀವವೈವಿಧ್ಯವಾದ  ಮುಖ್ಯ ಸ್ಥಳಗಳನ್ನು ಹೊಂದಿದೆ.  ಅವುಗಳೆಂದರೆ – ಪೂರ್ವ ಹಿಮಾಲಯ, ಪಶ್ಚಿಮ ಘಟ್ಟಗಳು, ಇಂಡೋ-ಮ್ಯಾನ್ಮಾರ್ ಭೂಪ್ರದೇಶ  ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು.  ಇದಲ್ಲದೆ, ಭಾರತವು ಜಗತ್ತಿನಾದ್ಯಂತ ಸುಮಾರು 500 ಜಾತಿಯ ವಲಸೆ ಪಕ್ಷಿಗಳಿಗೆ ನೆಲೆಯಾಗಿದೆ.

ಮಹನೀಯರೆ ಮತ್ತು ಮಹಿಳೆಯರೆ,

ಅನಾದಿ ಕಾಲದಿಂದಲೂ, ವನ್ಯಜೀವಿಗಳು ಮತ್ತು ಅವುಗಳ ಆವಾಸಸ್ಥಾನಗಳ ಸಂರಕ್ಷಣೆಯು ಭಾರತದ ಸಾಂಸ್ಕೃತಿಕ ನೀತಿಯ ಒಂದು ಭಾಗವಾಗಿದೆ,   ಇದು ಸಹಾನುಭೂತಿ ಮತ್ತು ಸಹಬಾಳ್ವೆಯನ್ನು ಪ್ರೋತ್ಸಾಹಿಸುತ್ತದೆ.  ನಮ್ಮ ವೇದಗಳು ಪ್ರಾಣಿಗಳ ರಕ್ಷಣೆಯ ಬಗ್ಗೆ ಹೇಳುತ್ತವೆ.  ಅಶೋಕ ಚಕ್ರವರ್ತಿ ಕಾಡುಗಳ ನಾಶ ಮತ್ತು ಪ್ರಾಣಿಗಳನ್ನು ಕೊಲ್ಲುವುದನ್ನು ನಿಷೇಧಿಸಲು ಹೆಚ್ಚಿನ ಒತ್ತು ನೀಡಿದ್ದರು. ಗಾಂಧೀಜಿ ಯವರಿಂದ ಪ್ರೇರಿತರಾಗಿ, ಅಹಿಂಸಾ ನೀತಿ ಮತ್ತು ಪ್ರಾಣಿ ಮತ್ತು ಪ್ರಕೃತಿಯ ಸಂರಕ್ಷಣೆಯ ನೀತಿಗಳನ್ನು ಭಾರತದ ಸಂವಿಧಾನದಲ್ಲಿ ಸೂಕ್ತವಾಗಿ ಪ್ರತಿಪಾದಿಸಲಾಗಿದೆ.  ಇದು ಹಲವಾರು ಕಾನೂನುಗಳು ಮತ್ತು ಶಾಸನಗಳಲ್ಲಿ ವ್ಯಕ್ತವಾಗಿದೆ.

ಅನೇಕ ವರ್ಷಗಳ ನಿರಂತರ ಪ್ರಯತ್ನವು  ಉತ್ತಮ ಫಲಿತಾಂಶಕ್ಕೆ  ಕಾರಣವಾಗಿವೆ.  ಸಂರಕ್ಷಿತ ಪ್ರದೇಶಗಳ ಸಂಖ್ಯೆ 2014 ರಲ್ಲಿ 745 ರಿಂದ 2019 ರಲ್ಲಿ 870 ಕ್ಕೆ ಏರಿದೆ, ಇದು ಸುಮಾರು ಒಂದು ಲಕ್ಷ ಎಪ್ಪತ್ತು ಸಾವಿರ ಚದರ ಕಿ.ಮೀ. ನಷ್ಟು ಪ್ರದೇಶವನ್ನು ಒಳಗೊಂಡಿದೆ.

ಭಾರತದ ಅರಣ್ಯ ಪ್ರದೇಶವು ಗಮನಾರ್ಹವಾಗಿ ಹೆಚ್ಚಾಗಿದೆ.  ಪ್ರಸ್ತುತ ಮೌಲ್ಯಮಾಪನದ ಪ್ರಕಾರ ಒಟ್ಟು ಅರಣ್ಯ ಪ್ರದೇಶ ವ್ಯಾಪ್ತಿಯು ದೇಶದ ಭೌಗೋಳಿಕ ಪ್ರದೇಶದ 21.67% ರಷ್ಟು ಇದೆ ಎಂದು ಸೂಚಿಸುತ್ತದೆ.

ಸಂರಕ್ಷಣೆ, ಸುಸ್ಥಿರ ಜೀವನಶೈಲಿ ಮತ್ತು ಹಸಿರು ಅಭಿವೃದ್ಧಿ ಮಾದರಿಯ ಮೌಲ್ಯಗಳ ಆಧಾರದ ಮೇಲೆ ಹವಾಮಾನ ಸಂರಕ್ಷಣಾ ಕ್ರಮಕ್ಕೆ ಭಾರತ ಮುಂದಾಗಿದೆ.  ನಮ್ಮ ಉಪಕ್ರಮಗಳ ವ್ಯಾಪ್ತಿಯಲ್ಲಿ ಮಹತ್ವಾಕಾಂಕ್ಷೆಯ 450 ಮೆಗಾವ್ಯಾಟ್  ನವೀಕರಿಸಬಹುದಾದ ಶಕ್ತಿಯ ಯೋಜನೆಯ ಗುರಿ, ವಿದ್ಯುತ್ ವಾಹನಗಳಿಗೆ ಪ್ರೋತ್ಸಾಹ, ಸ್ಮಾರ್ಟ್ ನಗರಗಳು, ನೀರಿನ ಸಂರಕ್ಷಣೆ ಇತ್ಯಾದಿಗಳು ಸೇರಿವೆ.

ಅಂತರರಾಷ್ಟ್ರೀಯ ಸೌರ ಒಕ್ಕೂಟ,  ವಿಪತ್ತು ಪುನರ್ ಚೇತರಿಕೆ ಮೂಲಸೌಕರ್ಯ ಕುರಿತ ಅಂತಾರಾಷ್ಟ್ರೀಯ ಒಕ್ಕೂಟ  ಮತ್ತು ಸ್ವೀಡನ್‌ನೊಂದಿಗಿನ ಕೈಗಾರಿಕೆಗಳ ಪರಿವರ್ತನೆಯ ನಾಯಕತ್ವ, ಇವುಗಳಿಗೆ ವ್ಯಾಪಕ ಶ್ರೇಣಿಯ ದೇಶಗಳ ಭಾಗವಹಿಸುವಿಕೆಯನ್ನು ಕಾಣಬಹುದಾಗಿದೆ.  ತಾಪಮಾನವು 2 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುವ ಪ್ಯಾರಿಸ್ ಒಪ್ಪಂದದ ಗುರಿಯೊಂದಿಗೆ ಅನುಸರಿಸುವ ಕೆಲವು ದೇಶಗಳಲ್ಲಿ ಭಾರತವೂ ಒಂದು.

ಸ್ನೇಹಿತರೇ,

ವಿಶೇಷ ಗಮನಕೊಟ್ಟ ಪ್ರಭೇದಗಳ  ಸಂರಕ್ಷಣಾ ಯೋಜನೆಗಳು / ಕಾರ್ಯಕ್ರಮಗಳನ್ನು ಭಾರತ ಪ್ರಾರಂಭಿಸಿದೆ.  ಇವು ಉತ್ತಮ ಫಲಿತಾಂಶಗಳನ್ನು ತೋರಿಸಿವೆ.  ಹುಲಿ ಮೀಸಲು ಪ್ರದೇಶಗಳ ಸಂಖ್ಯೆಯು ಅದರ ರಚನೆಯ ವರ್ಷದಿಂದ 9 ರಿಂದ ಪ್ರಸ್ತುತ 50 ಕ್ಕೆ ಏರಿದೆ.  ಈಗ ಭಾರತವು ಸುಮಾರು 2970 ಹುಲಿಗಳನ್ನು  ಹೊಂದಿದೆ.  2022 ರಕ್ಕಿಂತ ಎರಡು ವರ್ಷಗಳ ಮೊದಲೇ ಭಾರತವು ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಸಾಧಿಸಿದೆ.  ಈ ಸಮಾವೇಶಕ್ಕೆ ಬಂದಿರುವ ಹುಲಿಗಳಿರುವ ದೇಶದವರಿಗೆ ಮತ್ತು ಇತರರಿಗೆ   ತಮ್ಮ ತಮ್ಮ ಕಾರ್ಯವೈಖರಿಗಳನ್ನು ಹಂಚಿಕೊಳ್ಳುವ ಮೂಲಕ ಹುಲಿ ಸಂರಕ್ಷಣೆಯನ್ನು ಬಲಪಡಿಸಲು ಒಗ್ಗೂಡಬೇಕೆಂದು ನಾನು ಕರೆ ನೀಡುತ್ತೇನೆ..

ಜಾಗತಿಕ ಏಷ್ಯಾದ ಆನೆಗಳ ಸಂಖ್ಯೆಯ 60% ಕ್ಕಿಂತ ಹೆಚ್ಚಿನ ಭಾಗವನ್ನು ಭಾರತವು ಹೊಂದಿದೆ.   30  ಆನೆಗಳ ಮೀಸಲು ಪ್ರದೇಶಗಳನ್ನು ನಮ್ಮ ರಾಜ್ಯಗಳು ಗುರುತಿಸಿವೆ.  ಏಷ್ಯನ್ ಆನೆಗಳ ಸಂರಕ್ಷಣೆಗಾಗಿ ಭಾರತವು ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಮಾನದಂಡಗಳನ್ನು ನಿಗದಿಪಡಿಸಿದೆ.

ಹಿಮಾಲಯದ ಮೇಲಿನ ಹಿಮ ಚಿರತೆ ಮತ್ತು ಅದರ ಆವಾಸಸ್ಥಾನವನ್ನು ರಕ್ಷಿಸಲು ನಾವು ಹಿಮ ಚಿರತೆ ಯೋಜನೆಯನ್ನು ಪ್ರಾರಂಭಿಸಿದ್ದೇವೆ.  ಭಾರತವು ಇತ್ತೀಚೆಗೆ 12 ದೇಶಗಳ ಜಾಗತಿಕ ಹಿಮ ಚಿರತೆ ಪರಿಸರ ವ್ಯವಸ್ಥೆ ಕಾರ್ಯಕ್ರಮದ (ಜಿಎಸ್‌ಎಲ್‌ಇಪಿ) ಸಲಹಾ ಸಮಿತಿಯನ್ನು ಆಯೋಜಿಸಿತ್ತು,  ಇದರ ಪರಿಣಾಮವಾಗಿ ನವದೆಹಲಿಯ ಘೋಷಣೆಯು ದೇಶದ ನಿರ್ದಿಷ್ಟ ಚೌಕಟ್ಟಿನ ಅಭಿವೃದ್ಧಿ ಮತ್ತು ಹಿಮ ಚಿರತೆಯ ಸಂರಕ್ಷಣೆಗಾಗಿ ದೇಶಗಳ ನಡುವಿನ ಸಹಕಾರವನ್ನು ರೂಪಿಸಲು ಉದ್ದೇಶಿಸಿದೆ. ಜನರ ಭಾಗವಹಿಸುವಿಕೆಯೊಂದಿಗೆ ಪರ್ವತ ಪರಿಸರ ವಿಜ್ಞಾನದ ಸಂರಕ್ಷಣೆ ಸೇರಿದಂತೆ ಹಸಿರು ಆರ್ಥಿಕತೆಯನ್ನು ಉತ್ತೇಜಿಸುವಲ್ಲಿ ಭಾರತವು ಮಹತ್ವದ ಪಾತ್ರವನ್ನು ವಹಿಸುತ್ತದೆ  ಎನ್ನುವುದನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತದೆ.

ಸ್ನೇಹಿತರೇ,

ಗುಜರಾತ್‌ ನ ಗಿರ್ ಅರಣ್ಯ ಪ್ರದೇಶವು ಏಷ್ಯಾಟಿಕ್ ಸಿಂಹದ ಏಕೈಕ ವಾಸಸ್ಥಾನವಾಗಿದೆ ಮತ್ತು ದೇಶದ ಹೆಮ್ಮೆಯ ನೆಲೆಯಾಗಿದೆ.  ಏಷ್ಯಾಟಿಕ್ ಸಿಂಹವನ್ನು ರಕ್ಷಿಸಲು ನಾವು 2019 ರ ಜನವರಿಯಿಂದ ಏಷ್ಯಾಟಿಕ್ ಸಿಂಹ ಸಂರಕ್ಷಣಾ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಇಂದು, ಏಷ್ಯಾಟಿಕ್ ಸಿಂಹಗಳ ಸಂಖ್ಯೆಯು 523 ರಷ್ಟಿದೆ ಎಂದು ಹೇಳಿಕೊಳ್ಳಲು ನನಗೆ ಸಂತೋಷವಾಗುತ್ತಿದೆ.

ಭಾರತದಲ್ಲಿ, ಒಂದು ಕೊಂಬಿನ ಖಡ್ಗಮೃಗವು ಅಸ್ಸಾಂ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಮೂರು ರಾಜ್ಯಗಳಲ್ಲಿ ಕಂಡುಬರುತ್ತದೆ.  ಭಾರತ ಸರ್ಕಾರವು 2019 ರಲ್ಲಿ “ಭಾರತೀಯ ಏಕ-ಕೊಂಬಿನ ಖಡ್ಗಮೃಗದ ರಾಷ್ಟ್ರೀಯ ಸಂರಕ್ಷಣಾ ಕಾರ್ಯತಂತ್ರ” ವನ್ನು ಪ್ರಾರಂಭಿಸಿತು.

ಗ್ರೇಟ್ ಇಂಡಿಯನ್ ಬಸ್ಟರ್ಡ್,  ಅಳಿವಿನಂಚಿನಲ್ಲಿರುವ ಹಕ್ಕಿ ಕೂಡ ನಮ್ಮ ಸಂರಕ್ಷಣಾ ಪ್ರಯತ್ನಗಳ ಕೇಂದ್ರಬಿಂದುವಾಗಿದೆ.  ಕ್ಯಾಪ್ಟಿವ್ ಬ್ರೀಡಿಂಗ್ ಕಾರ್ಯಕ್ರಮದ ಭಾಗವಾಗಿ, ಕಾಡಿನಲ್ಲಿ  9 ಮೊಟ್ಟೆಗಳಿಂದ ಯಶಸ್ವಿಯಾಗಿ ಮರಿ ಮಾಡಲಾಗಿದೆ .  ಅಬುಧಾಬಿಯ ಹೌಬರಾ ಸಂರಕ್ಷಣಾ ಕೇಂದ್ರದ ಅಂತರರಾಷ್ಟ್ರೀಯ ನಿಧಿಯ ತಾಂತ್ರಿಕ ನೆರವಿನೊಂದಿಗೆ ಭಾರತೀಯ ವಿಜ್ಞಾನಿಗಳು ಮತ್ತು ಅರಣ್ಯ ಇಲಾಖೆ ಇದನ್ನು ಸಾಧಿಸಿದೆ.

ಆದ್ದರಿಂದ ನಾವು ಗ್ರೇಟ್ ಇಂಡಿಯನ್ ಬಸ್ಟರ್ಡ್‌ಗೆ ಗೌರವ ಸೂಚಕವಾಗಿ ‘ಜಿಬಿ – ದಿ ಗ್ರೇಟ್‍,  ಜಿ ಐಬಿಐ- ದಿ ಗ್ರೇಟ್ ’ ಮ್ಯಾಸ್ಕಾಟ್ ಅನ್ನು ರೂಪಿಸಿದ್ದೇವೆ.

ಸ್ನೇಹಿತರೇ,

ಗಾಂಧಿನಗರದಲ್ಲಿ ವಲಸೆ ವಲಸೆ ಪ್ರಭೇದಗಳ ಸಮಾವೇಶದ  13 ನೇ ಆಡಳಿತ  ಮಂಡಳಿಯ ಸಮ್ಮೇಳನವನ್ನು ಆಯೋಜಿಸಿರುವುದು  ಭಾರತಕ್ಕೆ ಹೆಮ್ಮೆಯಾಗಿದೆ .

ನೀವು ಗಮನಿಸಿರಬಹುದು, ಸಿ.ಎಂ.ಎಸ್  ಸಿಓಪಿ  13 ಲಾಂಛನವು  ದಕ್ಷಿಣ ಭಾರತದ ಸಾಂಪ್ರದಾಯಿಕ ‘ಕೋಲಂ’ ನಿಂದ ಸ್ಫೂರ್ತಿ ಪಡೆದಿದೆ,  ಇದು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಸಂದರ್ಭದಲ್ಲಿ ಬಹಳ ಮಹತ್ವವನ್ನು ಹೊಂದಿದೆ.

ಸ್ನೇಹಿತರೇ,

ನಾವು ಸಾಂಪ್ರದಾಯಿಕವಾಗಿ “ಅತಿಥಿ ದೇವೋ ಭವ” ಎಂಬ ಮಂತ್ರವನ್ನು ಅಭ್ಯಾಸ ಮಾಡುತ್ತಿರುತ್ತೇವೆ , ಇದು ಸಿ.ಎಂ.ಎಸ್  ಸಿಓಪಿ  13 ರ ಘೋಷಣೆ / ಥೀಮ್‌ನಲ್ಲಿ ಪ್ರತಿಬಿಂಬಿಸಲಾಗಿದೆ .  ವಲಸೆ ಪ್ರಭೇದದ ಹಕ್ಕಿಗಳು ಈ ಪ್ರಪಂಚವನ್ನು ಜೋಡಿಸುತ್ತವೆ ಮತ್ತು ಅವುಗಳನ್ನು ಒಟ್ಟಿಗೆ ನಾವು ಮನೆಗೆ ಸ್ವಾಗತಿಸುತ್ತೇವೆ ”.  ಈ ಹಕ್ಕಿಗಳು ಯಾವುದೇ ಪಾಸ್‌ಪೋರ್ಟ್‌ಗಳು ಅಥವಾ ವೀಸಾಗಳಿಲ್ಲದೆ ದೇಶಗಳ ನಡುವೆ ಚಲಿಸುತ್ತವೆ, ಅವುಗಳು ಶಾಂತಿ ಮತ್ತು ಸಮೃದ್ಧಿಯ ಸಂದೇಶವಾಹಕಗಳು ಮತ್ತು ಅವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಮಹನೀಯರೆ ಮತ್ತು ಮಹಿಳೆಯರೆ,

ಮುಂಬರುವ ಮೂರು ವರ್ಷಗಳ ಕಾಲ ಭಾರತ ಈ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಲಿದೆ. ಅಧ್ಯಕ್ಷತೆಯ ಅವಧಿಯಲ್ಲಿ, ಭಾರತವು ಈ ಕೆಳಗಿನ ಕ್ಷೇತ್ರಗಳಲ್ಲಿ ನಿರ್ದೇಶನ ಮಾಡುವುದು :

ಭಾರತವು ವಲಸೆ ಹಕ್ಕಿಗಳಿಗೆ ಮಧ್ಯ ಏಷ್ಯಾದ ಹಾರಾಟ ಮಾರ್ಗದ ಒಂದು ಭಾಗವಾಗಿದೆ.  ಮಧ್ಯ ಏಷ್ಯಾದ ಹಾರಾಟ ಮಾರ್ಗದ ಮತ್ತು ಅವುಗಳ ಆವಾಸಸ್ಥಾನಗಳ ಉದ್ದಕ್ಕೂ ಪಕ್ಷಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಭಾರತವು ‘ಮಧ್ಯ ಏಷ್ಯಾದ ಹಾರಾಟ ಮಾರ್ಗದ ವಲಸೆ ಹಕ್ಕಿಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ’ ಯನ್ನು ಸಿದ್ಧಪಡಿಸಿದೆ.   ಈ ನಿಟ್ಟಿನಲ್ಲಿ ಇತರ ದೇಶಗಳಿಗೆ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲು  ಸಹಾಯ ಮಾಡಲು ಭಾರತಕ್ಕೆ  ಸಂತೋಷವಾಗುತ್ತದೆ.  ಎಲ್ಲಾ ಮಧ್ಯ ಏಷ್ಯಾದ ಹಾರಾಟ ಮಾರ್ಗದ ಶ್ರೇಣಿಯಲ್ಲಿ ಇರುವ ದೇಶಗಳ ಸಕ್ರಿಯ ಸಹಕಾರದೊಂದಿಗೆ ವಲಸೆ ಹಕ್ಕಿಗಳ ಸಂರಕ್ಷಣೆಯನ್ನು ಹೊಸ ದೃಷ್ಟಾಂತಕ್ಕೆ ಕೊಂಡೊಯ್ಯಲು ನಾವು ಉತ್ಸುಕರಾಗಿದ್ದೇವೆ. ಸಾಮಾನ್ಯ ವೇದಿಕೆಯನ್ನು ರಚಿಸುವ ಮೂಲಕ ಸಂಶೋಧನೆ, ಅಧ್ಯಯನಗಳು, ಮೌಲ್ಯಮಾಪನಗಳು, ಸಾಮರ್ಥ್ಯ ಅಭಿವೃದ್ಧಿ ಮತ್ತು ಸಂರಕ್ಷಣಾ ಉಪಕ್ರಮಗಳನ್ನು ಕೈಗೊಳ್ಳಲು ಸಾಂಸ್ಥಿಕ ಕಾರ್ಯವಿಧಾನವನ್ನು ಸ್ಥಾಪಿಸಲು ನಾವು ಬಯಸುತ್ತೇವೆ.

ಸ್ನೇಹಿತರೇ, ಭಾರತವು ಸುಮಾರು 7500 ಕಿ.ಮೀ ಕರಾವಳಿಯನ್ನು ಹೊಂದಿದೆ ಮತ್ತು ಭಾರತೀಯ ಸಮುದ್ರವು  ಅಸಂಖ್ಯಾತ ಪ್ರಭೇದ ಗಳನ್ನು ಹೊಂದಿ, ಜೀವವೈವಿಧ್ಯತೆಯಿಂದ ಸಮೃದ್ಧವಾಗಿದೆ, ಆಸಿಯಾನ್ ಮತ್ತು ಪೂರ್ವ ಏಷ್ಯಾ ಶೃಂಗಸಭೆ ದೇಶಗಳೊಂದಿಗಿನ ಒಡನಾಟವನ್ನು ಬಲಪಡಿಸಲು ಭಾರತ ಪ್ರಸ್ತಾಪಿಸಿದೆ. ಇದು ಇಂಡೋ ಪೆಸಿಫಿಕ್ ಓಷನ್ ಇನಿಶಿಯೇಟಿವ್ (ಐಪಿಒಐ) ಯೊಂದಿಗೆ ಬೆರೆಯುತ್ತದೆ, ಇದರಲ್ಲಿ ಭಾರತವು ಮುಂದಾಳತ್ವ ವಹಿಸಲಿದೆ.  2020 ರ ವೇಳೆಗೆ ಭಾರತವು ತನ್ನ ಸಾಗರ ಆಮೆ ನೀತಿ (ಮರೈನ್ ಟರ್ಟಲ್ ಪಾಲಿಸಿ) ಮತ್ತು ಸಾಗರ ಸ್ಟ್ರಾಂಡಿಂಗ್ ನಿರ್ವಹಣಾ ನೀತಿಯನ್ನು ಪ್ರಾರಂಭಿಸಲಿದೆ. ಇದು ಮೈಕ್ರೋ ಪ್ಲಾಸ್ಟಿಕ್‌ನಿಂದ ಉಂಟಾಗುವ ಮಾಲಿನ್ಯದ ಕಡೆಗೂ ಕೂಡ ಗಮನ ಹರಿಸುತ್ತದೆ.  ಏಕ ಬಳಕೆಯ ಪ್ಲಾಸ್ಟಿಕ್‌ಗಳು ಪರಿಸರ ಸಂರಕ್ಷಣೆಗೆ ಸವಾಲಾಗಿವೆ ಮತ್ತು ಭಾರತದಲ್ಲಿ ನಾವು ಅದರ ಬಳಕೆಯನ್ನು ಕಡಿಮೆ ಮಾಡಲು ಮಿಷನ್ ಮೋಡ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ.

ಸ್ನೇಹಿತರೇ,

ಭಾರತದ ಹಲವಾರು ಸಂರಕ್ಷಿತ ಪ್ರದೇಶಗಳು ನೆರೆಯ ರಾಷ್ಟ್ರಗಳ ಸಂರಕ್ಷಿತ ಪ್ರದೇಶಗಳೊಂದಿಗೆ ಸಾಮಾನ್ಯ ಗಡಿಗಳನ್ನು ಹಂಚಿಕೊಳ್ಳುತ್ತವೆ. ‘ಟ್ರಾನ್ಸ್ ಬೌಂಡರಿ ಪ್ರೊಟೆಕ್ಟಡ್ ಏರಿಯಾಸ್’ ಗಳನ್ನು ಸ್ಥಾಪಿಸುವ ಮೂಲಕ ವನ್ಯಜೀವಿಗಳ ಸಂರಕ್ಷಣೆಯಲ್ಲಿನ ಸಹಕಾರವು ಅತ್ಯಂತ ಸಕಾರಾತ್ಮಕ ಫಲಿತಾಂಶಗಳಿಗೆ ಕಾರಣವಾಗುತ್ತದೆ.

ಸ್ನೇಹಿತರೇ,

ಸುಸ್ಥಿರ ಅಭಿವೃದ್ಧಿಯ ಹಾದಿಯನ್ನು ನನ್ನ ಸರ್ಕಾರವು ದೃಢವಾಗಿ ನಂಬುತ್ತದೆ.  ಪರಿಸರಕ್ಕೆ ಹಾನಿಯಾಗದಂತೆ ಅಭಿವೃದ್ಧಿಯಾಗುವುದನ್ನು ನಾವು ಖಚಿತಪಡಿಸುತ್ತಿದ್ದೇವೆ.  ಪರಿಸರಾತ್ಮಕವಾಗಿ  ದುರ್ಬಲವಾಗಿರುವ ಪ್ರದೇಶಗಳಲ್ಲಿ ಅಭಿವೃದ್ಧಿಗೆ ತಕ್ಕಂತೆ ನಾವು  ಮೂಲಸೌಕರ್ಯ ನೀತಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದೇವೆ.

ಭವಿಷ್ಯದ ಪೀಳಿಗೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ಜನರನ್ನು ಪ್ರಮುಖ ಪಾಲುದಾರರನ್ನಾಗಿ ಮಾಡಲಾಗುತ್ತಿದೆ.  ನನ್ನ ಸರ್ಕಾರ “ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್” ಎಂಬ ಘೋಷಣೆಯೊಂದಿಗೆ ಮುಂದೆ ಸಾಗುತ್ತಿದೆ. ದೇಶದ ಅರಣ್ಯ ಪ್ರದೇಶದ ಸಮೀಪದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರನ್ನು ಈಗ ಜಂಟಿ ಅರಣ್ಯ ನಿರ್ವಹಣಾ ಸಮಿತಿಗಳು ಮತ್ತು ಪರಿಸರ ಅಭಿವೃದ್ಧಿ ಸಮಿತಿಗಳ ರೂಪದಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗೆ ಸಂಬಂಧಿಸಿದಂತೆ ಸಂಯೋಜಿಸಲಾಗಿದೆ.

ಸ್ನೇಹಿತರೇ,

ಈ ಸಮ್ಮೇಳನವು ಪ್ರಭೇದಗಳು ಮತ್ತು ಆವಾಸಸ್ಥಾನ ಸಂರಕ್ಷಣೆಯ ಕ್ಷೇತ್ರದಲ್ಲಿ ಅನುಭವಗಳ ಹಂಚಿಕೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಅತ್ಯುತ್ತಮವಾದ ವೇದಿಕೆಯನ್ನು ಒದಗಿಸುತ್ತದೆ ಎಂದು ನನಗೆ ನಂಬಿಕೆಯಿದೆ.  ಭಾರತದ ಆತಿಥ್ಯ ಮತ್ತು ಶ್ರೀಮಂತ ವೈವಿಧ್ಯತೆಯನ್ನು ಅನುಭವಿಸಲು ನಿಮಗೆ ಸಮಯ ಸಿಗುತ್ತದೆ ಎಂದೂ ನಾನು ಭಾವಿಸುತ್ತೇನೆ.

 

ಧನ್ಯವಾದಗಳು.

ಬಹಳ ಧನ್ಯವಾದಗಳು. 

 
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Mutual fund industry on a high, asset surges Rs 17 trillion in 2024

Media Coverage

Mutual fund industry on a high, asset surges Rs 17 trillion in 2024
NM on the go

Nm on the go

Always be the first to hear from the PM. Get the App Now!
...
Chief Minister of Andhra Pradesh meets Prime Minister
December 25, 2024

Chief Minister of Andhra Pradesh, Shri N Chandrababu Naidu met Prime Minister, Shri Narendra Modi today in New Delhi.

The Prime Minister's Office posted on X:

"Chief Minister of Andhra Pradesh, Shri @ncbn, met Prime Minister @narendramodi

@AndhraPradeshCM"