"ಭಾರತದಲ್ಲಿ, ಪ್ರಕೃತಿ ಮತ್ತು ಅದರ ಮಾರ್ಗಗಳುನಿರಂತರ ಕಲಿಕೆಯ ಮೂಲಗಳಾಗಿವೆ"
ಹವಾಮಾನ ಉಪಕ್ರಮವು 'ಅಂತ್ಯೋದಯ'ವನ್ನು ಅನುಸರಿಸಬೇಕು, ಅಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆ ಮತ್ತು ಅಭಿವೃದ್ಧಿಯನ್ನು ಖಾತರಿಪಡಿಸಬೇಕು"
ಭಾರತವು 2070ರ ವೇಳೆಗೆ 'ನಿವ್ವಳ ಶೂನ್ಯ' ಹೊರಸೂಸುವಿಕೆ ಸಾಧಿಸುವ ಗುರಿಯನ್ನು ಹೊಂದಿದೆ"
ಹುಲಿ ಯೋಜನೆಯ ಪರಿಣಾಮವಾಗಿ ವಿಶ್ವದ 70 ಪ್ರತಿಶತದಷ್ಟು ಹುಲಿಗಳು ಇಂದು ಭಾರತದಲ್ಲಿವೆ
"ʻಮಿಷನ್ ಲೈಫ್‌ʼ ಒಂದು ಜಾಗತಿಕ ಜನಾಂದೋಲನವಾಗಿ ಪರಿಸರವನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ವೈಯಕ್ತಿಕ ಮತ್ತು ಸಾಮೂಹಿಕ ಪ್ರಯತ್ನಗಳನ್ನು ಪ್ರೇರೇಪಿಸುತ್ತದೆ"
ಪ್ರಕೃತಿ ಮಾತೆಯು 'ವಸುದೈವ ಕುಟುಂಬಕಂ' - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯಕ್ಕೆ ಆದ್ಯತೆ ನೀಡುತ್ತದೆ"
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಚೆನ್ನೈನಲ್ಲಿ ನಡೆದ `ಜಿ-20 ಪರಿಸರ ಮತ್ತು ಹವಾಮಾನ ಸಚಿವರ ಸಭೆʼಯನ್ನು ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದರು.

ಗೌರವಾನ್ವಿತ ಮಹನೀಯರೇ,

ಮಹಳೆಯರೇ ಮತ್ತು ಸಜ್ಜನರೇ,

ನಮಸ್ಕಾರ!

ವನಕ್ಕಂ!

ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಶ್ರೀಮಂತ ನಗರವಾದ ಚೆನ್ನೈಗೆ ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ! ಮಾಮಲ್ಲಪುರಂನ ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನು ಸಂದರ್ಶಿಸಲು ನಿಮಗೆ ಸ್ವಲ್ಪ ಸಮಯ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ. ಸ್ಪೂರ್ತಿದಾಯಕ ಕಲ್ಲಿನ ಕೆತ್ತನೆಗಳು ಮತ್ತು ಉತ್ತಮ ಸೌಂದರ್ಯದೊಂದಿಗೆ, ಇದೊಂದು  "ಭೇಟಿ ನೀಡಲೇಬೇಕಾದ" ತಾಣವಾಗಿದೆ.

ಸ್ನೇಹಿತರೇ,

ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಬರೆದ ತಿರುಕುರಲ್ ಗ್ರಂಥದಿಂದ ನಾನು ಪ್ರಾರಂಭಿಸುತ್ತೇನೆ. ಮಹಾನ್ ಸಂತ ತಿರುವಳ್ಳುವರ್ ಹೇಳುತ್ತಾರೆ: "ನೆಡುಂಕಡಲುಂ ತನ್ನೀರ್ ಮೈ ಕುಂಡರಂ ತಡಿಂತೆಡಿಲಿ ತಾನ್ ನಲ್ಗ ತಾಗಿ ವಿಡಿನ್(“नेडुंकडलुम तन्नीर मै कुंडृम तडिन्तेडिली तान नल्गा तागि विडिन )". ಅದರ ಅರ್ಥ, "ಸಾಗರದ ನೀರನ್ನು ಮೇಲಕ್ಕೆತ್ತಿದ ಮೋಡವು ಅದನ್ನು ಮಳೆಯ ರೂಪದಲ್ಲಿ ಹಿಂತಿರುಗಿಸದಿದ್ದರೆ ಸಾಗರಗಳು ಸಹ ಕುಗ್ಗುತ್ತವೆ". ಭಾರತದಲ್ಲಿ, ಪ್ರಕೃತಿ ಮತ್ತು ಅದರ ಮಾರ್ಗಗಳು ಕಲಿಕೆಯ ನಿರಂತರ ಮೂಲಗಳಾಗಿವೆ. ಇವು ಹಲವಾರು ಗ್ರಂಥಗಳಲ್ಲಿ ಹಾಗೂ ಮೌಖಿಕ ಸಂಪ್ರದಾಯಗಳಲ್ಲಿ ಕಂಡುಬರುತ್ತವೆ. ನಾವು ಕಲಿತಿದ್ದೇವೆ, ಪಿಬಂತಿ ನದ್ಯ: ಸ್ವಯಂ ನಾಮ:, ಸ್ವಯಂ ನ ಖಾದಂತಿ ಫಲಾನಿ ವೃಕ್ಷ:. ನಾದಂತಿ ಸಸ್ಯಂ ಖಲು ವಾರಿವಾಹ:, ಪರೋಪಕಾರಾಯ ಸತಾಂ ವಿಭೂತಯ: ।। (पिबन्ति नद्य: स्वयमेव नाम्भ:, स्वयं न खादन्ति फलानि वृक्षा:। नादन्ति सस्यं खलु वारिवाहा:, परोपकाराय सतां विभूतय:।। )

ಅದರ ಅರ್ಥವೇನೆಂದರೆ, “ನದಿಗಳು ತಮ್ಮ ನೀರನ್ನು ಕುಡಿಯುವುದಿಲ್ಲ ಅಥವಾ ಮರಗಳು ತಮ್ಮ ಹಣ್ಣುಗಳನ್ನು ತಿನ್ನುವುದಿಲ್ಲ. ಮೋಡಗಳು ತಮ್ಮ ನೀರಿನಿಂದ ಉತ್ಪತ್ತಿಯಾಗುವ ಧಾನ್ಯಗಳನ್ನು ಸಹ ಸೇವಿಸುವುದಿಲ್ಲ. ಪ್ರಕೃತಿ ನಮಗೆ ಒದಗಿಸುತ್ತದೆ. ನಾವು ಪ್ರಕೃತಿಯನ್ನು ಸಹ ಒದಗಿಸಬೇಕು. ಭೂಮಿ ತಾಯಿಯನ್ನು ರಕ್ಷಿಸುವುದು ಮತ್ತು ನೋಡಿಕೊಳ್ಳುವುದು ನಮ್ಮ ಮೂಲಭೂತ ಜವಾಬ್ದಾರಿಯಾಗಿದೆ. ಇಂದು, ಇದು "ಹವಾಮಾನ ಕ್ರಿಯೆ" ಯ ಹೊಸ ಆಕಾರವನ್ನು ಪಡೆದುಕೊಂಡಿದೆ, ಏಕೆಂದರೆ ಈ ಕರ್ತವ್ಯವನ್ನು ಬಹಳ ಸಮಯದವರೆಗೆ ಅನೇಕರು ನಿರ್ಲಕ್ಷಿಸಿದ್ದಾರೆ. ಭಾರತದ ಸಾಂಪ್ರದಾಯಿಕ ಜ್ಞಾನದ ಆಧಾರದ ಮೇಲೆ, ಹವಾಮಾನ ಕ್ರಿಯೆಯು "ಅಂತ್ಯೋದಯ"ವನ್ನು ಅನುಸರಿಸಬೇಕು ಎಂದು ನಾನು ಹೇಳುತ್ತೇನೆ. ಅಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಉಗಮ ಮತ್ತು ಅಭಿವೃದ್ಧಿಯನ್ನು ನಾವು ಖಚಿತಪಡಿಸಿಕೊಳ್ಳಬೇಕು. ಜಾಗತಿಕ ದಕ್ಷಿಣದ ದೇಶಗಳು ವಿಶೇಷವಾಗಿ ಹವಾಮಾನ ಬದಲಾವಣೆ ಮತ್ತು ಪರಿಸರ ಸಮಸ್ಯೆಗಳಿಂದ ಪ್ರಭಾವಿತವಾಗಿವೆ. "ವಿಶ್ವಸಂಸ್ಥೆಯ ಹವಾಮಾನ ಸಮಾವೇಶ" ಮತ್ತು "ಪ್ಯಾರಿಸ್ ಒಪ್ಪಂದ" ಅಡಿಯಲ್ಲಿ ನಮಗೆ ಬದ್ಧತೆಗಳ ಮೇಲೆ ವರ್ಧಿತ ಕ್ರಮದ ಅಗತ್ಯವಿದೆ. ಹವಾಮಾನ ಸ್ನೇಹಿ ರೀತಿಯಲ್ಲಿ ತನ್ನ ಅಭಿವೃದ್ಧಿಯ ಆಕಾಂಕ್ಷೆಗಳನ್ನು ಪೂರೈಸಲು ಜಾಗತಿಕವಾಗಿ ಭೂಗೋಲದ ದಕ್ಷಿಣಭಾಗಕ್ಕೆ ಸಹಾಯ ಮಾಡುವಲ್ಲಿ ಇದು ನಿರ್ಣಾಯಕವಾಗಿರುತ್ತದೆ.  

ಸ್ನೇಹಿತರೇ,

ಭಾರತವು ತನ್ನ ಮಹತ್ವಾಕಾಂಕ್ಷೆಯ "ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳ" ಮೂಲಕ ಸಕಾರಾತ್ಮಕ ದಾರಿಯನ್ನು ಮುನ್ನಡೆಸಿದೆ ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ. ಭಾರತವು ತನ್ನ ಸ್ಥಾಪಿತ ವಿದ್ಯುತ್ ಸಾಮರ್ಥ್ಯವನ್ನು ಪಳೆಯುಳಿಕೆ ರಹಿತ ಇಂಧನ ಮೂಲಗಳಿಂದ ಸಾಧಿಸಿದೆ, 2030 ರ ಗುರಿಗಿಂತ ಒಂಬತ್ತು ವರ್ಷಗಳ ಮುಂಚಿತವಾಗಿ ಭಾರತ ಇದನ್ನು ಸಾಧಿಸಿದೆ. ನಮ್ಮ ನವೀಕರಿಸಿದ ಇಂಧನ ಬಳಕೆಯ ಗುರಿಗಳ ಮೂಲಕ ನಾವು ಮಾನದಂಡವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿ ಹೊಂದಿಸಿದ್ದೇವೆ. ಇಂದು, ಸ್ಥಾಪಿಸಲಾದ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ವಿಷಯದಲ್ಲಿ ಭಾರತವು ವಿಶ್ವದ ಅಗ್ರ 5 ರಾಷ್ಟ್ರಗಳಲ್ಲಿ ಒಂದಾಗಿದೆ. ನಾವು 2070 ರ ವೇಳೆಗೆ "ನಿವ್ವಳ ಶೂನ್ಯ" ವನ್ನು ಸಾಧಿಸುವ ಗುರಿಯನ್ನು ಹೊಂದಿದ್ದೇವೆ. ನಾವು ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್, ಸಿ.ಡಿ.ಆರ್.ಐ. ಮತ್ತು "ಉದ್ಯಮ ಪರಿವರ್ತನೆಗಾಗಿ ನಾಯಕತ್ವ ಗುಂಪು" ಸೇರಿದಂತೆ ಮೈತ್ರಿಗಳ ಮೂಲಕ ನಮ್ಮ ಪಾಲುದಾರರೊಂದಿಗೆ ಸಹಯೋಗವನ್ನು ಮುಂದುವರಿಸುತ್ತೇವೆ.

ಸ್ನೇಹಿತರೇ,

ಭಾರತವು ಬೃಹತ್ ವೈವಿಧ್ಯಮಯ ದೇಶವಾಗಿದೆ. ಜೀವವೈವಿಧ್ಯ ಸಂರಕ್ಷಣೆ, ರಕ್ಷಣೆ, ಮರುಸ್ಥಾಪನೆ ಮತ್ತು ಪುಷ್ಟೀಕರಣದ ಮೇಲೆ ಕ್ರಮ ಕೈಗೊಳ್ಳುವಲ್ಲಿ ನಾವು ಸತತವಾಗಿ ಮುಂಚೂಣಿಯಲ್ಲಿದ್ದೇವೆ. "ಗಾಂಧಿನಗರ ಅನುಷ್ಠಾನದ ಮಾರ್ಗಸೂಚಿ ಮತ್ತು ವೇದಿಕೆ" ಯ ಮೂಲಕ, ಕಾಡಿನ ಬೆಂಕಿ ಮತ್ತು ಗಣಿಗಾರಿಕೆಯಿಂದ ಪ್ರಭಾವಿತವಾಗಿರುವ ಆದ್ಯತೆಯ ಭೂದೃಶ್ಯಗಳಲ್ಲಿ ನೀವು ಮರುಸ್ಥಾಪನೆಯನ್ನು ಗುರುತಿಸುತ್ತಿದ್ದೀರಿ ಎಂದು ನನಗೆ ಸಂತೋಷವಾಗಿದೆ. ನಮ್ಮ ಗ್ರಹದ ಏಳು ದೊಡ್ಡ ಬೆಕ್ಕುಗಳ ಸಂರಕ್ಷಣೆಗಾಗಿ ಭಾರತವು ಇತ್ತೀಚೆಗೆ "ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲೈಯನ್ಸ್" ಅನ್ನು ಪ್ರಾರಂಭಿಸಿದೆ. ಇದು ಪ್ರವರ್ತಕ ಸಂರಕ್ಷಣಾ ಉಪಕ್ರಮವಾದ ಪ್ರಾಜೆಕ್ಟ್ ಟೈಗರ್ನಿಂದ ನಮ್ಮ ಕಲಿಕೆಯನ್ನು ಆಧರಿಸಿದೆ. ಪ್ರಾಜೆಕ್ಟ್ ಟೈಗರ್ನ ಪರಿಣಾಮವಾಗಿ, ಇಂದು ವಿಶ್ವದ 70% ಹುಲಿಗಳು ಭಾರತದಲ್ಲಿ ಜೀವಿಸುತ್ತಿರುವುದು ಜಾಗತಿಕ ವಿಶೇಷವಾಗಿ ಕಂಡುಬರುತ್ತವೆ. ನಾವು ಪ್ರಾಜೆಕ್ಟ್ ಲಯನ್ ಮತ್ತು ಪ್ರಾಜೆಕ್ಟ್ ಡಾಲ್ಫಿನ್ ಯೋಜನೆಯಲ್ಲಿಯೂ ಕೆಲಸ ಮಾಡುತ್ತಿದ್ದೇವೆ.

ಸ್ನೇಹಿತರೇ,

ಭಾರತದ ಉಪಕ್ರಮಗಳು ಜನರ ಭಾಗವಹಿಸುವಿಕೆಯಿಂದ ಚಾಲಿತವಾಗಿವೆ. "ಮಿಷನ್ ಅಮೃತ್ ಸರೋವರ" ಒಂದು ವಿಶಿಷ್ಟವಾದ ಜಲ ಸಂರಕ್ಷಣೆಯ ಉಪಕ್ರಮವಾಗಿದೆ. ಈ ಮಿಷನ್ ಅಡಿಯಲ್ಲಿ, ಕೇವಲ ಒಂದು ವರ್ಷದಲ್ಲಿ ಅರವತ್ಮೂರು ಸಾವಿರಕ್ಕೂ ಹೆಚ್ಚು ಜಲಮೂಲಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮಿಷನ್ ಸಂಪೂರ್ಣವಾಗಿ ಸಮುದಾಯದ ಭಾಗವಹಿಸುವಿಕೆಯ ಮೂಲಕ ಕಾರ್ಯಗತಗೊಳ್ಳುತ್ತದೆ ಮತ್ತು ತಂತ್ರಜ್ಞಾನದ ಸಹಾಯದಿಂದ. ನಮ್ಮ "ಕ್ಯಾಚ್ ದಿ ರೈನ್" ಅಭಿಯಾನವು ಅತ್ಯುತ್ತಮ ಫಲಿತಾಂಶಗಳನ್ನು ತೋರಿಸಿದೆ. ಮಳೆ ನೀರನ್ನು ಸಂರಕ್ಷಿಸಲು, ಈ ಅಭಿಯಾನದ ಮೂಲಕ ಇನ್ನೂರ ಎಂಬತ್ತು ಸಾವಿರಕ್ಕೂ ಹೆಚ್ಚು ಮಳೆ ನೀರು ಕೊಯ್ಲು ರಚನೆ ವ್ಯವಸ್ಥೆಗಳನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ, ಸುಮಾರು ಇನ್ನೂರ ಐವತ್ತು ಸಾವಿರ ಮರುಬಳಕೆ ಮತ್ತು ರೀಚಾರ್ಜ್ ರಚನೆಗಳನ್ನು ಸಹ ನಿರ್ಮಿಸಲಾಗಿದೆ. ಇದೆಲ್ಲವನ್ನೂ ಜನರ ಸಹಭಾಗಿತ್ವದ ಮೂಲಕ ಸಾಧಿಸಲಾಗಿದೆ ಮತ್ತು ಸ್ಥಳೀಯ ಮಣ್ಣು ಮತ್ತು ನೀರಿನ ಪರಿಸ್ಥಿತಿಗಳ ಮೇಲೆ ಕೇಂದ್ರೀಕರಿಸಿದೆ. ಗಂಗಾ ನದಿಯನ್ನು ಸ್ವಚ್ಛಗೊಳಿಸಲು ನಾವು "ನಮಾಮಿ ಗಂಗಾ ಮಿಷನ್" ನಲ್ಲಿ ಸಮುದಾಯದ ಸಹಭಾಗಿತ್ವವನ್ನು ಪರಿಣಾಮಕಾರಿಯಾಗಿ ಬಳಸಿದ್ದೇವೆ. ಇದು ನದಿಯ ಹಲವು ಭಾಗಗಳಲ್ಲಿ ಗಂಗಾನದಿಯ ಡಾಲ್ಫಿನ್ ಮತ್ತೆ ಕಾಣಿಸಿಕೊಳ್ಳುವಲ್ಲಿ ಪ್ರಮುಖ ಸಾಧನೆಗೆ ಕಾರಣವಾಗಿದೆ. ಜೌಗು ಪ್ರದೇಶ ಸಂರಕ್ಷಣೆಯಲ್ಲಿ ನಮ್ಮ ಪ್ರಯತ್ನವೂ ಫಲ ನೀಡಿದೆ. ಎಪ್ಪತ್ತೈದು ತೇವ(ಜೌಗು) ಪ್ರದೇಶಗಳನ್ನು ಹರಿವ ನೀರಿನ ಕೃಷಿ ಪ್ರದೇಶ(ರಾಮ್ಸರ್ ಸೈಟ್)ಗಳಾಗಿ ಗೊತ್ತುಪಡಿಸಿದ ಭಾರತವು ಏಷ್ಯಾದಲ್ಲಿ ರಾಮ್ಸಾರ್ ಸೈಟ್ಗಳ ಅತಿದೊಡ್ಡ ಜಾಲವನ್ನು ಹೊಂದಿದೆ.

ಸ್ನೇಹಿತರೇ,

ನಮ್ಮ ಸಾಗರಗಳು ಜಗತ್ತಿನಾದ್ಯಂತ ಮೂರು ಶತಕೋಟಿ ಜನರ ಜೀವನೋಪಾಯವನ್ನು ಬೆಂಬಲಿಸುತ್ತವೆ. ಅವು ನಿರ್ಣಾಯಕ ಆರ್ಥಿಕ ಸಂಪನ್ಮೂಲವಾಗಿದೆ, ವಿಶೇಷವಾಗಿ "ಸಣ್ಣ ದ್ವೀಪ ರಾಜ್ಯಗಳಿಗೆ", ನಾನು ಅವರನ್ನು "ದೊಡ್ಡ ಸಾಗರ ದೇಶಗಳು" ಎಂದು ಕರೆಯಲು ಬಯಸುತ್ತೇನೆ. ಅವು ವ್ಯಾಪಕವಾದ ಜೀವವೈವಿಧ್ಯಕ್ಕೂ ನೆಲೆಯಾಗಿದೆ. ಆದ್ದರಿಂದ, ಸಾಗರ ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆ ಮತ್ತು ನಿರ್ವಹಣೆಯು ಪ್ರಮುಖ ಪ್ರಾಮುಖ್ಯತೆಯನ್ನು ಹೊಂದಿದೆ. "ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ನೀಲಿ ಮತ್ತು ಸಾಗರ-ಆಧಾರಿತ ಆರ್ಥಿಕತೆಗಾಗಿ ಜಿ20 ಉನ್ನತ ಮಟ್ಟದ ತತ್ವಗಳನ್ನು" ಅಳವಡಿಸಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ. ಈ ಸಂದರ್ಭದಲ್ಲಿ, ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸಲು ಪರಿಣಾಮಕಾರಿ ಅಂತರರಾಷ್ಟ್ರೀಯ ಕಾನೂನುಬದ್ಧ ಸಾಧನಕ್ಕಾಗಿ ರಚನಾತ್ಮಕವಾಗಿ ಕೆಲಸ ಮಾಡಲು ನಾನು ಜಿ20 ಸದಸ್ಯ ದೇಶದ ನಾಯಕರಿಗೆ ಕರೆ ನೀಡುತ್ತೇನೆ.

ಸ್ನೇಹಿತರೇ,

ಕಳೆದ ವರ್ಷ, ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಯವರ ಜೊತೆಗೆ, ನಾನು “ಮಿಷನ್ ಲೈಫ್” ಅನ್ನು ಪ್ರಾರಂಭಿಸಿದೆ - ಪರಿಸರಕ್ಕಾಗಿ ಜೀವನಶೈಲಿ. “ಮಿಷನ್ ಲೈಫ್”, ಜಾಗತಿಕ ಸಾಮೂಹಿಕ ಆಂದೋಲನವಾಗಿ, ಪರಿಸರವನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ವೈಯಕ್ತಿಕ ಮತ್ತು ಸಾಮೂಹಿಕ ಕ್ರಿಯೆಯನ್ನು ತಳ್ಳುತ್ತದೆ. ಭಾರತದಲ್ಲಿ, ಯಾವುದೇ ವ್ಯಕ್ತಿ, ಕಂಪನಿ ಅಥವಾ ಸ್ಥಳೀಯ ಸಂಸ್ಥೆಯಿಂದ ಆಗುತ್ತಿರವ ಪರಿಸರ ಸ್ನೇಹಿ ಕ್ರಮಗಳು ಈಗ ಸದಾ ಗಮನಕ್ಕೆ ಬರದೆ ಇರುವುದಿಲ್ಲ. ಇತ್ತೀಚೆಗೆ ಘೋಷಿಸಲಾದ "ಗ್ರೀನ್ ಕ್ರೆಡಿಟ್ ಪ್ರೋಗ್ರಾಂ" ಅಡಿಯಲ್ಲಿ ಹಸಿರು ಕ್ರೆಡಿಟ್ಗಳನ್ನು ಗಳಿಸಬಹುದು. ಇದರರ್ಥ ಮರ ನೆಡುವಿಕೆ, ನೀರಿನ ಸಂರಕ್ಷಣೆ ಮತ್ತು ಸುಸ್ಥಿರ ಕೃಷಿಯಂತಹ ಚಟುವಟಿಕೆಗಳು ವ್ಯಕ್ತಿಗಳು, ಸ್ಥಳೀಯ ಸಂಸ್ಥೆಗಳು ಮತ್ತು ಇತರರಿಗೆ ಈಗ ಆದಾಯವನ್ನು ಕೂಡಾ ಗಳಿಸಿಕೊಡಬಹುದು.

ಸ್ನೇಹಿತರೇ,

ನಾನು ತೀರ್ಮಾನಿಸಿದಂತೆ, ತಾಯಿ ಪ್ರಕೃತಿಯ ಕಡೆಗೆ ನಮ್ಮ ಕರ್ತವ್ಯಗಳನ್ನು ನಾವು ಮರೆಯಬಾರದು ಎಂದು ನಾನು ಪುನರುಚ್ಚರಿಸುತ್ತೇನೆ. ತಾಯಿಯ ಸ್ವಭಾವವು ವಿಘಟಿತ ವಿಧಾನವನ್ನು ಬೆಂಬಲಿಸುವುದಿಲ್ಲ. ಅವಳು "ವಸುಧೈವ ಕುಟುಂಬಕಂ" - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯವನ್ನು ಆದ್ಯತೆ ನೀಡುತ್ತಾಳೆ. ನಿಮ್ಮೆಲ್ಲರಿಗೂ ಉತ್ತಮ ಉತ್ಪಾದಕ ಮತ್ತು ಯಶಸ್ವಿ ಸಭೆಯನ್ನು ನಾನು ಬಯಸುತ್ತೇನೆ. ಧನ್ಯವಾದಗಳು.

ನಮಸ್ಕಾರ!

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi