QuoteClimate change must be fought not in silos but in an integrated, comprehensive and holistic way: PM
QuoteIndia has adopted low-carbon and climate-resilient development practices: PM Modi
QuoteSmoke free kitchens have been provided to over 80 million households through our Ujjwala Scheme: PM Modi

ಘನತೆವೆತ್ತವರೇ

ಗೌರವಾನ್ವಿತರೇ,

ಜಾಗತಿಕ ಸಾಂಕ್ರಾಮಿಕದ ಪರಿಣಾಮದಿಂದ ಇಂದು ನಾವು ನಮ್ಮ ಜನರನ್ನು ಮತ್ತು ಆರ್ಥಿಕತೆಯನ್ನು ರಕ್ಷಿಸುವತ್ತ ಹೆಚ್ಚಿನ ಗಮನಹರಿಸಬೇಕಿದೆ. ಅಷ್ಟೇ ಸಮಾನವಾದ ಆದ್ಯತೆಯನ್ನು ನಾವು ಹವಾಮಾನ ವೈಪರೀತ್ಯದ ವಿರುದ್ಧದ ಹೋರಾಟಕ್ಕೂ ನೀಡಬೇಕಾಗಿದೆ. ಹವಾಮಾನ ವೈಪರೀತ್ಯ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸಲಾಗದು, ನಾವು ಸಮಗ್ರ, ಸಂಘಟಿತ ಮತ್ತು ಒಗ್ಗಟ್ಟಿನಿಂದ ಹೋರಾಡಬೇಕಿದೆ. ಪರಿಸರದೊಂದಿಗೆ ಸೌಹಾರ್ದತೆಯಿಂದ ಬಾಳ್ವೆ ನಡೆಸುವ ನಮ್ಮ ಸಾಂಪ್ರದಾಯಿಕ ಪುರಾಣ ಕತೆಗಳಿಂದ ಸ್ಪೂರ್ತಿ ಪಡೆದಿದ್ದೇವೆ ಮತ್ತು ಭಾರತ, ಕಡಿಮೆ ಇಂಗಾಲ ಮತ್ತು ಹವಾಮಾನ ಸ್ಥಿತಿ ಸ್ಥಾಪಕ ಅಭಿವೃದ್ಧಿಯ ಪದ್ಧತಿಗಳು ನಮ್ಮ ಸರ್ಕಾರ ಬದ್ಧತೆಯನ್ನು ಹೊಂದಿದೆ.

ಭಾರತ ಕೇವಲ ಪ್ಯಾರಿಸ್ ಒಪ್ಪಂದ ಗುರಿಗಳನ್ನಷ್ಟೇ ಪಾಲಿಸುತ್ತಿಲ್ಲ, ಅದನ್ನೂ ಮೀರಿ ಕೆಲಸ ಮಾಡುತ್ತಿದೆ ಎಂಬ ಅಂಶವನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಭಾರತ ಹಲವು ವಲಯಗಳಲ್ಲಿ ಸಮಗ್ರ ಕ್ರಮಗಳನ್ನು ಕೈಗೊಂಡಿದೆ. ನಾವು ಎಲ್ ಇಡಿ ಬಲ್ಬ್ ಗಳನ್ನು ಜನಪ್ರಿಯಗೊಳಿಸಿದ್ದೇವೆ. ಇದರಿಂದ ಪ್ರತಿವರ್ಷ 38 ಮಿಲಿಯನ್ ಟನ್ ಕಾರ್ಬನ್ ಡೈ ಅಕ್ಸೈಡ್ ( ಇಂಗಾಲ) ಹೊರಹೊಗುಳುವುದು ತಪ್ಪಿದೆ. ಉಜ್ವಲ ಯೋಜನೆಯ ಮೂಲಕ ಸುಮಾರು 80 ಲಕ್ಷ ಕುಟುಂಬಗಳಿಗೆ ಹೊಗೆ ರಹಿತ ಅಡುಗೆಕೋಣೆಗಳನ್ನು ಒದಗಿಸಲಾಗಿದೆ. ಇದು ಜಾಗತಿಕವಾಗಿ ಅತಿದೊಡ್ಡ ಶುದ್ಧ ಇಂಧನ ಒದಗಿಸುವ ಕ್ರಮವಾಗಿದೆ.

ಬಿಡಿ ಪ್ಲಾಸ್ಟಿಕ್ ಬಳಕೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ನಮ್ಮ ಅರಣ್ಯ ವ್ಯಾಪ್ತಿ ವಿಸ್ತಾರಗೊಳ್ಳುತ್ತಿದೆ. ಹುಲಿ ಮತ್ತು ಸಿಂಹಗಳ ಸಂತತಿ ಸಂಖ್ಯೆ ಹೆಚ್ಚಾಗುತ್ತಿದೆ. 2030ರ ವೇಳೆಗೆ ನಾವು 26 ಮಿಲಿಯನ್ ಹೆಕ್ಟೇರ್ ಫಲವತ್ತತೆ ಕಳೆದುಕೊಂಡು ಭೂಮಿಯನ್ನು ಮತ್ತೆ ಫಲವತ್ತಾಗಿ ಮಾಡುವ ಗುರಿ ಹೊಂದಿದ್ದೇವೆ; ನಾವು ಆರ್ಥಿಕ ಚಲಾವಣೆಯನ್ನು ಉತ್ತೇಜಿಸುತ್ತಿದ್ದೇವೆ; ಭಾರತ ಮುಂದಿನ ಪೀಳಿಗೆಯ ಮೂಲಸೌಕರ್ಯವನ್ನು ಅಂದರೆ ಮೆಟ್ರೊ ಜಾಲ, ಜಲಮಾರ್ಗ ಮತ್ತು ಇತರ ವಿಧಾನಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇವು ಸೂಕ್ತ ಮತ್ತು ಪರಿಣಾಮಕಾರಿ ಅಷ್ಟೇ ಅಲ್ಲದೆ, ಹೆಚ್ಚುವರಿಯಾಗಿ ಶುದ್ಧ ಪರಿಸರ ಕಾಯ್ದುಕೊಳ್ಳಲು ನೆರವಾಗಲಿವೆ. ನಾವು ನಿರ್ದಿಷ್ಟ ಗುರಿ 2022ಕ್ಕೆ ಮುನ್ನವೇ 175 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಗುರಿಯನ್ನು ಸಾಧಿಸಲಿದ್ದೇವೆ. ನಾವು ಇದೀಗ, ಇನ್ನೊಂದು ಮಹತ್ವದ ಹೆಜ್ಜೆ ಮುಂದಿಟ್ಟು 2030ರ ವೇಳೆಗೆ 450 ಗಿಗಾ ವ್ಯಾಟ್ ಉತ್ಪಾದಿಸುವ ಗುರಿ ಹೊಂದಿದ್ದೇವೆ.  

ಘನತೆವೆತ್ತವರೇ,

ಗೌರವಾನ್ವಿತರೇ

ಅಂತಾರಾಷ್ಟ್ರೀಯ ಸೌರ ಮೈತ್ರಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, 88 ದೇಶಗಳು ಸಹಿ ಹಾಕಿವೆ. ಬಿಲಿಯನ್ ಡಾಲರ್ ನಷ್ಟು ನಿಧಿ ಸಂಗ್ರಹ ಮತ್ತು ಸಾವಿರಾರು ಭಾಗಿದಾರರನ್ನು ಹೊಂದುವ ಗುರಿ ಇದೆ ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಐಎಸ್ ಎ ಇಂಗಾಲದ ಪ್ರಮಾಣ ಇಳಿಸಲು ನೆರವು ನೀಡುತ್ತಿದೆ. ಮತ್ತೊಂದು ಉದಾಹರಣೆ ಎಂದರೆ, ವಿಪ್ಪತ್ತು ನಿರ್ವಹಣೆಯಲ್ಲಿ ಮೂಲಸೌಕರ್ಯ ಸ್ಥಿತಿಸ್ಥಾಪಕತ್ವ ಮೈತ್ರಿಕೂಟ ಸ್ಥಾಪನೆ.

ಜಿ-20ರಾಷ್ಟ್ರಗಳ ಗುಂಪಿನ 9 ದೇಶಗಳು ಸೇರಿದಂತೆ 18 ದೇಶಗಳು ಮತ್ತು 4 ಅಂತಾರಾಷ್ಟ್ರೀಯ ಸಂಸ್ಥೆಗಳು ಈಗಾಗಲೇ ಮೈತ್ರಿಕೂಟವನ್ನು ಸೇರಿವೆ. ಗಂಭೀರ ಮೂಲಸೌಕರ್ಯದ ಸ್ಥಿತಿ ಸ್ಥಾಪಕತ್ವದ ನಿಟ್ಟಿನಲ್ಲಿ ಸಿಡಿಆರ್ ಐ ಕಾರ್ಯೋನ್ಮುಖವಾಗಿದೆ. ನೈಸರ್ಗಿಕ ವಿಪತ್ತುಗಳ ವೇಳೆ ಆಗುವ ಮೂಲಸೌಕರ್ಯ ಹಾನಿಗೆ, ನೀಡಬೇಕಾದಷ್ಟು ಪ್ರಾಮುಖ್ಯತೆಯನ್ನು ನೀಡುತ್ತಿಲ್ಲ. ಬಡ ರಾಷ್ಟ್ರಗಳು ಇದರಿಂದ ತೀವ್ರ ಹಾನಿಗೆ ಒಳಗಾಗುತ್ತಿವೆ. ಆದ್ಧರಿಂದ ಈ ಮೈತ್ರಿ ಅತ್ಯಂತ ಪ್ರಮುಖವಾದುದಾಗಿದೆ.

ಘನತೆವೆತ್ತವರೇ,

ಗೌರವಾನ್ವಿತರೇ

ಹೊಸ ಮತ್ತು ಸುಸ್ಥಿರ ತಂತ್ರಜ್ಞಾನಗಳಲ್ಲಿ ಆವಿಷ್ಕಾರ ಮತ್ತು ಸಂಶೋಧನೆಯನ್ನು ಮತ್ತಷ್ಟು ಹೆಚ್ಚಿಸಲು ಇದು ಸಕಾಲ.ನಾವು ಸಹಕಾರ ಮತ್ತು ಸಹಭಾಗಿತ್ವದ ಸ್ಪೂರ್ತಿಯೊಂದಿಗೆ ಆ ಕೆಲಸ ಮಾಡಬೇಕಿದೆ. ತಂತ್ರಜ್ಞಾನದ ಹೆಚ್ಚಿನ ನೆರವಿನಿಂದ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಇಡೀ ವಿಶ್ವ ಅತ್ಯಂತ ತ್ವರಿತವಾಗಿ ಪ್ರಗತಿ ಸಾಧಿಸಬಹುದಾಗಿದೆ.

ಘನತೆವೆತ್ತವರೇ,

ಗೌರವಾನ್ವಿತರೇ

ಮನುಕುಲದ ಅಭ್ಯುದಯವಾಗಬೇಕಾದರೆ, ಪ್ರತಿಯೊಬ್ಬ ವ್ಯಕ್ತಿಯೂ ಸಹ ಏಳಿಗೆ ಹೊಂದಬೇಕು. ಕಾರ್ಮಿಕರನ್ನು ಕೇವಲ ಉತ್ಪಾದನೆಗೆ ಮಾತ್ರ ಸೀಮಿತಗೊಳಿಸದೆ, ಪ್ರತಿಯೊಬ್ಬ ಕಾರ್ಮಿಕರ ಮನುಷ್ಯತ್ವದ ಘನತೆಗೆ ಒತ್ತು ನೀಡಬೇಕು. ನಮ್ಮ ಭೂ ಗ್ರಹವನ್ನು ಸಂರಕ್ಷಿಸಲು ನಾವು ಅಂತಹ ಮನೋಭಾವವನ್ನು ಹೊಂದುವುದು ಅತ್ಯಂತ ಹೆಚ್ಚು ಖಾತ್ರಿಯಾಗಿದೆ.

ಧನ್ಯವಾದಗಳು

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
How PM Modi Helped Make BIMSTEC A Vibrant Regional Forum

Media Coverage

How PM Modi Helped Make BIMSTEC A Vibrant Regional Forum
NM on the go

Nm on the go

Always be the first to hear from the PM. Get the App Now!
...
Prime Minister meets PM of Bhutan
April 04, 2025

The Prime Minister Shri Narendra Modi met the Prime Minister of Bhutan, H.E. Mr. Tshering Tobgay on the sidelines of the 6th BIMSTEC summit in Bangkok, Thailand today.

In a post on X, he stated:

“Had a great conversation with my good friend, PM Tobgay. India’s friendship with Bhutan is robust. We are cooperating extensively in several sectors.