PM urges IIT Guwahati to establish a Center for disaster management and risk reduction
NEP 2020 will establish India as a major global education destination: PM

ನಮಸ್ಕಾರ !

ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಜೀ, ಅಸ್ಸಾಂ ಮುಖ್ಯಮಂತ್ರಿ ಶ್ರೀ ಸರ್ಭಾನಂದ ಸೋನಾವಾಲ್ ಜೀ, ನನ್ನ ಸಹೋದ್ಯೋಗಿಯಾದ ರಾಜ್ಯ ಶಿಕ್ಷಣ ಸಚಿವರಾದ ಶ್ರೀ ಸಂಜಯ್ ಧೋತ್ರೇ ಜೀ, ಗವರ್ನರುಗಳ ಮಂಡಳಿಯ ಅಧ್ಯಕ್ಷರಾದ ಡಾ. ರಾಜೀವ್ ಮೋದಿ ಜೀ, ಸೆನೆಟ್ ಸದಸ್ಯರೇ, ಘಟಿಕೋತ್ಸವಕ್ಕೆ ಆಹ್ವಾನಿತರಾದ ಗಣ್ಯರೇ, ಉಪನ್ಯಾಸಕ ವರ್ಗದ ಸದಸ್ಯರೇ , ಸಿಬ್ಬಂದಿಗಳೇ ಮತ್ತು ನನ್ನ ಪ್ರೀತಿಯ ವಿದ್ಯಾರ್ಥಿಗಳೇ!

ಐಐಟಿಯ 22 ನೇ ಘಟಿಕೋತ್ಸವದಲ್ಲಿ ಇಂದು ನಾನು ನಿಮ್ಮೋದಿಗೆ ಇರುವುದಕ್ಕೆ ಸಂತೋಷಪಡುತ್ತೇನೆ. ಯಾವುದೇ ವಿದ್ಯಾರ್ಥಿಯ ಜೀವನದಲ್ಲಿ ಘಟಿಕೋತ್ಸವವು ಒಂದು ವಿಶೇಷ ದಿನವಾಗಿದ್ದರೂ , ಈ ಸಂದರ್ಭದಲ್ಲಿ ಈ ಘಟಿಕೋತ್ಸವದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳಿಗೆ ಅದೊಂದು ಭಿನ್ನ ಅನುಭವ. ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ , ಘಟಿಕೋತ್ಸವದ ವಿಧಾನವೂ ಬದಲಾಗಿದೆ. ಇದನ್ನು ಸಹಜ ಪರಿಸ್ಥಿತಿಯಲ್ಲಿ ಸಂಘಟಿಸಿದ್ದರೆ , ನಾನಿಂದು ವೈಯಕ್ತಿಕವಾಗಿ ನಿಮ್ಮೊಂದಿಗೆ ಇರುತ್ತಿದ್ದೆ. ಆದರೂ , ಇಂದು, ಈ ಸಂದರ್ಭವು ಅಷ್ಟೇ ಮುಖ್ಯ ಮತ್ತು ಅಷ್ಟೇ ಮೌಲ್ಯಯುತವಾದುದು. ನಾನು ನಿಮ್ಮೆಲ್ಲರನ್ನೂ , ನನ್ನ ಯುವ ಮಿತ್ರರನ್ನು ಅಭಿನಂದಿಸುತ್ತೇನೆ !. ನಿಮ್ಮ ಭವಿಷ್ಯತ್ತಿನ ಸಾಧನೆಗಾಗಿ ನಾನು ನಿಮ್ಮೆಲ್ಲರಿಗೂ ಶುಭವನ್ನು ಹಾರೈಸುತ್ತೇನೆ !.

ಸ್ನೇಹಿತರೇ

ಜ್ಞಾನವು ज्ञानम् विज्ञान सहितम् यत् ज्ञात्वा मोक्ष्यसे अशुभात्; ಎಂದು ಹೇಳಲಾಗುತ್ತದೆ. ಅಂದರೆ ಅರಿವು ವಿಜ್ಞಾನದ ಜೊತೆಗೂಡಿ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ತೊಂದರೆಗಳನ್ನೂ ತೊಡೆದು ಹಾಕುತ್ತದೆ. ಜನರಿಗಾಗಿ ಹೊಸತೇನನ್ನಾದರೂ ಮಾಡಬೇಕು ಎನ್ನುವ ಈ ಸ್ಪೂರ್ತಿ, ಈ ಶಕ್ತಿ, ಶತಮಾನ ಹಳೆಯ ಈ ಪ್ರಯಾಣದಲ್ಲಿ ನಮ್ಮ ದೇಶವನ್ನು ಚೇತನಶಾಲಿಯನ್ನಾಗಿರಿಸಿದೆ. ಐಐಟಿ ಯಂತಹ ನಮ್ಮ ಸಂಸ್ಥೆಗಳು ಈ ಚಿಂತನೆಯನ್ನು ಇಂದು ಮುಂದೆ ಕೊಂಡೊಯ್ಯುತ್ತಿವೆ. ಇಲ್ಲಿಗೆ ಬಂದ ನಂತರ ನೀವು ಎಷ್ಟು ಬದಲಾಗಿದ್ದೀರಿ , ನಿಮ್ಮ ಚಿಂತನಾ ಪ್ರಕ್ರಿಯೆ ಎಷ್ಟು ವಿಸ್ತಾರಗೊಂಡಿದೆ ಎಂಬುದು ನಿಮ್ಮ ಗಮನಕ್ಕೆ ಬಂದಿರಬಹುದು. ಗುವಾಹಟಿ ಐಐಟಿಯಲ್ಲಿ ನಿಮ್ಮ ಪ್ರಯಾಣವನ್ನು ಆರಂಭಿಸಿದಂದಿನಿಂದ ನೀವು ನಿಮ್ಮಲ್ಲಿ ಹೊಸ ವ್ಯಕ್ತಿತ್ವವನ್ನು ಕಂಡುಕೊಂಡಿರುತ್ತೀರಿ. ಇದು ಈ ಸಂಸ್ಥೆಗೆ ನಿಮ್ಮ ಪ್ರಾಧ್ಯಾಪಕರ ಅತ್ಯಮೂಲ್ಯ ಕೊಡುಗೆ .

ಸ್ನೇಹಿತರೇ,

ಇಂದಿನ ಯುವಕರು ಏನನ್ನು ಯೋಚಿಸುತ್ತಾರೆ ಎಂಬುದರ ಮೇಲೆ ರಾಷ್ಟ್ರದ ಭವಿಷ್ಯ ನಿಂತಿದೆ ಎಂಬುದನ್ನು ಸ್ಪಷ್ಟವಾಗಿ ಮತ್ತು ದೃಢವಾಗಿ ನಂಬಿದವನು ನಾನು. ನಿಮ್ಮ ಕನಸುಗಳು ಭಾರತದ ವಾಸ್ತವಿಕತೆಯನ್ನು ರೂಪಿಸುತ್ತವೆ.ಆದುದರಿಂದ ಭವಿಷ್ಯಕ್ಕೆ ತಯಾರಾಗಲು ಇದು ಸಕಾಲ. ಮತ್ತು ಇದು ಭವಿಷ್ಯತ್ತಿಗೆ ಹೊಂದಿಕೊಳ್ಳಲು ಸಕಾಲ. ಇಂದು ಆರ್ಥಿಕತೆ ಮತ್ತು ಸಮಾಜ ಬದಲಾಗುತ್ತಿರುವಾಗ , ಆಧುನಿಕತೆಯನ್ನು ತರುತ್ತಿರುವಾಗ , ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಭೂದೃಶ್ಯ ಹಲವು ಪ್ರಮುಖ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ. ಐಐಟಿ ಗುವಾಹಟಿಯು ಈಗಾಗಲೇ ಈ ಪ್ರಯತ್ನಗಳನ್ನು ಆರಂಭಿಸಿರುವುದು ನನಗೆ ಸಂತೋಷ ತಂದಿದೆ. ಐಐಟಿ ಗುವಾಹಟಿಯು ಇ–ಮೊಬಿಲಿಟಿ ಕುರಿತಂತೆ ಎರಡು ವರ್ಷದ ಸಂಶೋಧನಾ ಕಾರ್ಯಕ್ರಮವನ್ನು ಅಳವಡಿಸಿಕೊಂಡ ಮೊದಲ ಐಐಟಿ ಎಂದು ನನಗೆ ತಿಳಿಸಲಾಗಿದೆ. ಐಐಟಿ ಗುವಾಹಟಿಯು ಎಲ್ಲಾ ಬಿ.ಟೆಕ್ ಮಟ್ಟದ ಕಾರ್ಯಕ್ರಮಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಮ್ಮಿಳಿತಗೊಳಿಸಿಕೊಂಡ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದೆ ಎಂದೂ ನನಗೆ ತಿಳಿಸಲಾಗಿದೆ. ಈ ಅಂತರ –ಶಿಸ್ತೀಯ ಕಾರ್ಯಕ್ರಮಗಳು ನಮ್ಮ ಶಿಕ್ಷಣವನ್ನು ಸರ್ವಾಂಗೀಣವಾಗಿಸುತ್ತವೆ ಮತ್ತು ಭವಿಷ್ಯಾತ್ಮಕವಾಗಿಸುತ್ತವೆ ಎಂಬ ಬಗ್ಗೆ ನನಗೆ ದೃಢ ವಿಶ್ವಾಸವಿದೆ. ಸಂಸ್ಥೆಯೊಂದು ಇಂತಹ ಭವಿಷ್ಯವಾದೀ ಧೋರಣೆಯೊಂದಿಗೆ ಮುಂದಡಿ ಇಟ್ಟರೆ ಅದರ ಫಲಿತಾಂಶಗಳು ವರ್ತಮಾನದಲ್ಲಿಯೇ ಕಾಣಸಿಗುತ್ತವೆ.

ಐ.ಐ.ಟಿ. ಗುವಾಹಟಿಯು ಕೋವಿಡ್ –19 ಸಂಬಂಧಿತ ಕಿಟ್ ಗಳಾದ ವೈರಲ್ ಟ್ರಾನ್ಸ್ ಪೋರ್ಟ್ ಮೀಡಿಯಾ, ವೈರಲ್ ಆರ್.ಎನ್.ಎ. ಹೊರತೆಗೆಯುವ ಕಿಟ್ ಮತ್ತು ಆರ್.ಟಿ–ಪಿ.ಸಿ.ಆರ್. ಕಿಟ್ ಗಳನ್ನು ಈ ಜಾಗತಿಕ ಸಾಂಕ್ರಾಮಿಕದಲ್ಲಿ ತಯಾರಿಸುವ ಮೂಲಕ ಇದನ್ನು ಸಾಬೀತು ಮಾಡಿದೆ. ಇದರಿಂದ ನಾನು ಅರ್ಥ ಮಾಡಿ ಕೊಳ್ಳಬಲ್ಲೆ , ಈ ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ನಿಮಗೆ ಶೈಕ್ಷಣಿಕ ಅಧಿವೇಶನಗಳನ್ನು ನಡೆಸುವುದು ಎಷ್ಟೊಂದು ಕಷ್ಟದಾಯಕವಾಗಿತ್ತು ಎಂಬುದನ್ನು. ಜೊತೆಗೆ ನಿಮ್ಮ ಸಂಶೋಧನಾ ಕೆಲಸವೂ ಎಷ್ಟು ಕಠಿಣತಮವಾಗಿತ್ತು ಎಂಬುದೂ ನನ್ನ ಅರಿವಿಗೆ ಬಂದಿದೆ.

ಸ್ನೇಹಿತರೇ,

ಸ್ವಾವಲಂಭಿ ಭಾರತಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆಯ ಪ್ರಾಮುಖ್ಯತೆಯ ಬಗ್ಗೆ ನಾವು ಅರಿವು ಹೊಂದಿದ್ದೇವೆ. ಈ ಹಿಂದೆ , ನೀವು ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಬಹಳಷ್ಟನ್ನು ಓದಿರಬಹುದು ಮತ್ತು ಚರ್ಚಿಸಿರಬಹುದು. ರಾಷ್ಟ್ರೀಯ ಶಿಕ್ಷಣ ನೀತಿ ನಿಮ್ಮಂತಹ 21 ನೇ ಶತಮಾನದ ಯುವಜನರಿಗಾಗಿ ಇದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತವನ್ನು ಜಾಗತಿಕ ನಾಯಕನನ್ನಾಗಿ ಮಾಡುವ ಯುವಜನರಿಗಾಗಿ ಇದನ್ನು ರೂಪಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಶಿಕ್ಷಣ ನೀತಿಯಲ್ಲಿ ನಿಮ್ಮಂತಹ ವಿದ್ಯಾರ್ಥಿಗಳ ಆಶಯಗಳನ್ನು ಉನ್ನತ ಆದ್ಯತೆಯಲ್ಲಿ ಅಡಕಗೊಳಿಸಲಾಗಿದೆ.

ಸ್ನೇಹಿತರೇ,

ನಿಮ್ಮ ಶಿಕ್ಷಣದ ಪ್ರಯಾಣದಲ್ಲಿ ಶಿಕ್ಷಣ ಮತ್ತು ಪರೀಕ್ಷೆಗಳು ನಮ್ಮ ವಿದ್ಯಾರ್ಥಿಗಳಿಗೆ ಹೊರೆಯಾಗಬಾರದು, ವಿದ್ಯಾರ್ಥಿಗಳಿಗೆ ಅವರ ಅಚ್ಚು ಮೆಚ್ಚಿನ ವಿಷಯಗಳನ್ನು ಓದಲು ಹೆಚ್ಚಿನ ಸ್ವಾತಂತ್ರ್ಯ ದೊರೆಯಬೇಕು ಎಂಬ ಅಂಶವನ್ನು ಅರಿತುಕೊಂಡಿದ್ದೀರಿ ಎಂಬುದಾಗಿ ನಾನು ಭಾವಿಸುತ್ತೇನೆ. ಆದುದರಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬಹು ಶಿಸ್ತೀಯವನ್ನಾಗಿಸಲಾಗಿದೆ. ವಿಷಯಗಳ ಆಯ್ಕೆಗೆ ವಿಸ್ತಾರ ವ್ಯಾಪ್ತಿಯ ಅವಕಾಶಗಳನ್ನು ಒದಗಿಸಲಾಗಿದೆ. ಬಹು ಪ್ರವೇಶ ಮತ್ತು ನಿರ್ಗಮನ ಅವಕಾಶಗಳನ್ನು ಒದಗಿಸಲಾಗಿದೆ. ಮತ್ತು ಬಹಳ ಮುಖ್ಯವಾಗಿ ದೇಶದ ಹೊಸ ಶಿಕ್ಷಣ ನೀತಿ ಶಿಕ್ಷಣ ಮತ್ತು ತಂತ್ರಜ್ಞಾನವನ್ನು ಜೋಡಿಸಲಿದೆ ಮತ್ತು ತಂತ್ರಜ್ಞಾನವನ್ನು ನಮ್ಮ ವಿದ್ಯಾರ್ಥಿಗಳ ಚಿಂತನೆಯ ಸಮಗ್ರ ಭಾಗವಾಗಿಸಲಿದೆ. ಹಾಗೆಂದರೆ ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಮಾತ್ರ ಕಲಿಯುವುದಲ್ಲ ಅವರು ತಂತ್ರಜ್ಞಾನದ ಮೂಲಕ ಕಲಿಯುತ್ತಾರೆ. ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸುವುದಕ್ಕೆ ಹಾದಿಯನ್ನು ತೆರೆದಿದೆ ಮತ್ತು ಆನ್ ಲೈನ್ ಕಲಿಕೆ ಹೆಚ್ಚಲಿದೆ.

ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ವೇದಿಕೆಯನ್ನು ರಚಿಸಲಾಗುತ್ತದೆ, ಇದರಿಂದ ಬೋಧನೆಯಿಂದ ಮತ್ತು ಕಲಿಕೆಯಿಂದ ಹಿಡಿದು ಆಡಳಿತ ಹಾಗು ಮೌಲ್ಯಮಾಪನದವರೆಗೆ ತಂತ್ರಜ್ಞಾನದ ಪಾತ್ರ ಹೆಚ್ಚಲಿದೆ. ನಾವು ಯುವಜನತೆ ತಂತ್ರಜ್ಞಾನದಿಂದ ಕಲಿಯುವಂತಹ ಮತ್ತು ಕಲಿಕೆಗೆ ಹೊಸ ತಂತ್ರಜ್ಞಾನ ಶೋಧಿಸುವಂತಹ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಾಗುತ್ತಿದ್ದೇವೆ. ಐ.ಐ.ಟಿ. ಸ್ನೇಹಿತರಿಗೆ ಅಸಂಖ್ಯಾತ ಸಾಧ್ಯತೆಗಳಿವೆ. ಅವರು ಶಿಕ್ಷಣದ ಪ್ರಕ್ರಿಯೆಯನ್ನು ಕ್ರಾಂತಿಕಾರಕಗೊಳಿಸುವ ಹೊಸ ಸಾಫ್ಟ್ ವೇರ್ , ಹೊಸ ಸಾಧನ ಸಲಕರಣೆಗಳ ಬಗ್ಗೆ ಚಿಂತನೆ ಮಾಡಬೇಕು. ನಿಮ್ಮೆಲ್ಲರಿಗೂ ಇದೊಂದು ಅವಕಾಶ, ನಿಮ್ಮಲ್ಲಿರುವ ಉತ್ತಮವಾದುದನ್ನು ಹೊರತನ್ನಿ ಮತ್ತು ಅದನ್ನು ಬಳಸಿರಿ.

ಸ್ನೇಹಿತರೇ,

ರಾಷ್ಟ್ರೀಯ ಸಂಶೋಧನಾ ಪ್ರತಿಷ್ಟಾನ ಅಂದರೆ ಎನ್.ಆರ್.ಎಫ್. ನ್ನು ನಮ್ಮ ದೇಶದಲ್ಲಿ ಸಂಶೋಧನಾ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವುದಕ್ಕಾಗಿ ಎನ್.ಇ.ಪಿ. ಯಲ್ಲಿ ಪ್ರಸ್ತಾಪಿಸಲಾಗಿದೆ. ಎನ್.ಆರ್.ಎಫ್.ಸಂಶೋಧನಾ ನಿಧಿಗಳಿಗೆ ಸಂಬಂಧಿಸಿದ ಎಲ್ಲಾ ಏಜೆನ್ಸಿಗಳ ಜೊತೆ ಸಮನ್ವಯ ಸಾಧಿಸಲಿದೆ ಮತ್ತು ಎಲ್ಲಾ ಅಧ್ಯಯನ ಶಿಸ್ತುಗಳಿಗೆ ಹಣಕಾಸು ಒದಗಿಸಲಿದೆ. ವಿಜ್ಞಾನ ಇರಲಿ, ಮಾನವಿಕಗಳೇ ಇರಲಿ ಅದನ್ನು ನಿಭಾಯಿಸುತ್ತದೆ. ಪ್ರಾಯೋಗಿಕ ಅನುಷ್ಟಾನ ಉದ್ದೇಶದ ಸಾಮರ್ಥ್ಯಶೀಲ ಸಂಶೋಧನೆಯನ್ನು ಗುರುತಿಸಲಾಗುತ್ತದೆ ಮತ್ತು ಅನುಷ್ಟಾನಿಸಲಾಗುತ್ತದೆ. ಇದಕ್ಕಾಗಿ ಸರಕಾರಿ ಏಜೆನ್ಸಿಗಳು ಮತ್ತು ಕೈಗಾರಿಕೆಗಳ ಜೊತೆ ನಿಕಟ ಸಂಪರ್ಕ ಮತ್ತು ಸಮನ್ವಯವನ್ನು ಸಾಧಿಸಲಾಗುತ್ತದೆ. ಇಂದು ಸುಮಾರು 300 ಯುವ ವಿಜ್ಞಾನಿಗಳಿಗೆ ಈ ಘಟಿಕೋತ್ಸವದಲ್ಲಿ ಪಿ.ಎಚ್.ಡಿ. ಪ್ರಧಾನ ಮಾಡಲಾಗಿದೆ ಎಂಬುದನ್ನು ತಿಳಿಸಲು ಹರ್ಷಿತನಾಗಿದ್ದೇನೆ. ಮತ್ತು ಇದು ಅತ್ಯಂತ ಧನಾತ್ಮಕ ಟ್ರೆಂಡ್. ನೀವೆಲ್ಲರೂ ಇಲ್ಲಿಗೇ ಸ್ಥಗಿತಗೊಳ್ಳಲಾರಿರಿ, ಸಂಶೋಧನೆ ನಿಮ್ಮ ಅಭ್ಯಾಸವಾಗುತ್ತದೆ ಮತ್ತು ನಿಮ್ಮ ಚಿಂತನಾ ಪ್ರಕ್ರಿಯೆಯ ಭಾಗವಾಗುತ್ತದೆ ಎಂದು ನಾನು ನಂಬುತ್ತೇನೆ.

ಸ್ನೇಹಿತರೇ,

ನಮಗೆಲ್ಲಾ ಅರಿವಿದೆ – ಜ್ಞಾನಕ್ಕೆ ಮಿತಿ ಎಂಬುದು ಇಲ್ಲ ಎಂಬುದರ ಬಗ್ಗೆ. ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಶಿಕ್ಷಣ ವಲಯವನ್ನು ತೆರೆಯುವ ಬಗ್ಗೆ ಹೇಳುತ್ತದೆ. ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್ಸುಗಳನ್ನು ಇಲ್ಲಿ ಸ್ಥಾಪನೆಯಾಗುವಂತೆ ಖಾತ್ರಿಪಡಿಸುವುದು ಇದರ ಉದ್ದೇಶ, ಇಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಅವಕಾಶಗಳು ದೊರೆಯುತ್ತವೆ. ಅದೇ ರೀತಿ ಭಾರತ ಮತ್ತು ಜಾಗತಿಕ ಸಂಸ್ಥೆಗಳ ಜೊತೆ ಸಂಶೋಧನಾ ಸಹಯೋಗಗಳು ಮತ್ತು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳನ್ನು ಉತ್ತೇಜಿಸಲಾಗುತ್ತದೆ. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ನಮ್ಮ ವಿದ್ಯಾರ್ಥಿಗಳು ಪಡೆಯುವ ಕ್ರೆಡಿಟನ್ನು ನಮ್ಮ ದೇಶದ ಸಂಸ್ಥೆಗಳಲ್ಲೂ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಮತ್ತು ಅದೆಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತವನ್ನು ಜಾಗತಿಕ ಶಿಕ್ಷಣ ಕೇಂದ್ರವನ್ನಾಗಿ ರೂಪಿಸಲಿದೆ . ನಮ್ಮ ಉನ್ನತ ಸಾಧನೆಯ ಸಂಸ್ಥೆಗಳು ವಿದೇಶಗಳಲ್ಲಿ ಕ್ಯಾಂಪಸ್ ತೆರೆಯುವಂತೆ ಉತ್ತೇಜಿಸಲಾಗುವುದು. ಐ.ಐ.ಟಿ. ಗುವಾಹಟಿಯು ಗಡಿಯಾಚೆಗೆ ವಿಸ್ತರಣಾ ಚಿಂತನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಈಶಾನ್ಯದ ಈ ವಲಯ ಭಾರತದ ಪೂರ್ವದಲ್ಲಿ ಕಾರ್ಯಾಚರಿಸುವ ನೀತಿಯ ಕೇಂದ್ರವೂ ಆಗಿದೆ.

ಈ ವಲಯವು ಭಾರತದ ಸಂಪರ್ಕದ ಮಹಾದ್ವಾರ ಮತ್ತು ಆಗ್ನೇಯ ಏಷ್ಯಾ ಸಂಬಂಧಗಳಿಗೂ ಮುಖ್ಯದ್ವಾರ. ಈ ದೇಶಗಳ ಜೊತೆಗೆ ಭಾರತದ ಸಂಬಂಧಗಳು ಮುಖ್ಯವಾಗಿ ಸಾಂಸ್ಕೃತಿಕ , ವಾಣಿಜ್ಯಿಕ ಸಂಪರ್ಕಗಳು ಮತ್ತು ಸಾಮರ್ಥ್ಯಗಳು. ಈಗ ಶಿಕ್ಷಣವು ನಮ್ಮ ಬಾಂಧವ್ಯಗಳ ಇನ್ನೊಂದು ಮಾಧ್ಯಮವಾಗಲಿದೆ. ಐ.ಐ.ಟಿ. ಗುವಾಹಟಿ ಇದಕ್ಕೆ ಸಂಬಂಧಿಸಿ ಪ್ರಮುಖ ಕೇಂದ್ರವಾಗಬಲ್ಲದು. ಇದು ಈಶಾನ್ಯಕ್ಕೆ ಹೊಸ ಗುರುತಿಸುವಿಕೆ ನೀಡಬಲ್ಲದು ಮತ್ತು ಇಲ್ಲಿ ಹೊಸ ಅವಕಾಶಗಳನ್ನು ಒದಗಿಸಬಲ್ಲದು. ಇಂದು ರೈಲ್ವೇ, ಹೆದ್ದಾರಿಗಳು, ವಾಯು ಮಾರ್ಗಗಳು, ಮತ್ತು ಜಲಮಾರ್ಗಗಳಿಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಇಲ್ಲಿ ರೂಪಿಸಲಾಗುತ್ತಿದೆ, ಈಶಾನ್ಯದ ಅಭಿವೃದ್ಧಿಗೆ ವೇಗ ದೊರಕಿಸಿಕೊಡಲು ಇವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ಇಡೀ ಈಶಾನ್ಯ ವಲಯಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಐ.ಐ.ಟಿ. ಗುವಾಹಟಿ ಈ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ.

ಸ್ನೇಹಿತರೇ,

ಇಂದು ಈ ಘಟಿಕೋತ್ಸವದ ಬಳಿಕ ಕೆಲವು ವಿದ್ಯಾರ್ಥಿಗಳು ಇಲ್ಲಿ ಉಳಿಯುತ್ತಾರೆ, ಇನ್ನು ಕೆಲವರು ಹೊರಟು ಹೋಗುತ್ತಾರೆ.. ಐ.ಐ.ಟಿ. ಯ ಇತರ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ನನ್ನ ಮಾತುಗಳನ್ನು ಕೇಳುತ್ತಿದ್ದಾರೆ. ಈ ವಿಶೇಷ ದಿನದಂದು ನಾನು ನಿಮ್ಮನ್ನು ಕೋರುತ್ತೇನೆ ಮತ್ತು ಕೆಲವು ಸಲಹೆಗಳನ್ನು ನೀಡಲು ಇಚ್ಚಿಸುತ್ತೇನೆ. ಸ್ನೇಹಿತರೇ, ಈ ವಲಯವು ನಿಮ್ಮ ಬದುಕಿಗೆ ತನ್ನ ಕೊಡುಗೆಯನ್ನು ನೀಡಿದೆ. ಮತ್ತು ನೀವು ಈ ವಲಯವನ್ನು ನೋಡಿದ್ದೀರಿ, ತಿಳಿದುಕೊಂಡಿದ್ದೀರಿ ಮತ್ತು ಅನುಭವಿಸಿದ್ದೀರಿ. ನೀವು ಈ ವಲಯದ ಸವಾಲುಗಳ ಬಗ್ಗೆ ಚಿಂತಿಸಬೇಕು ಮತ್ತು ನಿಮ್ಮ ಸಂಶೋಧನೆ ಈ ವಲಯದ ಸಾಧ್ಯಾಸಾಧ್ಯತೆಗಳ ಜೊತೆ ಹೇಗೆ ಜೋಡಿಸಲ್ಪಡಬಹುದು ಎಂಬುದರ ಬಗ್ಗೆಯೂ ಆಲೋಚಿಸಬೇಕು. ಉದಾಹರಣೆಗೆ , ಸೌರ ವಿದ್ಯುತ್, ಪವನ ವಿದ್ಯುತ್ , ಬಯೋ ಮಾಸ್ ಮತ್ತು ಜಲ ವಿದ್ಯುತ್ ಗೆ ಇಲ್ಲಿ ವಿಪುಲ ಅವಕಾಶಗಳು ಇವೆ. ನಮ್ಮ ಯಾವುದಾದರೂ ಶೋಧನೆಗಳು ಇಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಬಲ್ಲವೇ ಅಥವಾ ಅಕ್ಕಿ, ಚಹಾ ಮತ್ತು ಬಿದಿರು ಸಂಪತ್ತನ್ನು ಇನ್ನಷ್ಟು ವೃದ್ಧಿಪಡಿಸಬಲ್ಲವೇ ?.

ಸ್ನೇಹಿತರೇ,

ಈ ವಲಯವು ಶ್ರೀಮಂತ ಜೀವ ವೈವಿಧ್ಯವನ್ನೂ, ವ್ಯಾಪಕವಾದ ಸಾಂಪ್ರದಾಯಿಕ ಜ್ಞಾನವನ್ನೂ ಮತ್ತು ಕೌಶಲ್ಯಗಳನ್ನು ಹೊಂದಿದೆ !. ಈ ಸಾಂಪ್ರದಾಯಿಕ ಕೌಶಲ್ಯಗಳು, ಜ್ಞಾನ ಮತ್ತು ವಿಜ್ಞಾನ ಹಾಗು ತಂತ್ರಜ್ಞಾನ ವರ್ಗಾವಣೆಯೂ ಸಾಂಪ್ರದಾಯಿಕ ಮಾರ್ಗಗಳ ಮೂಲಕ ನಡೆದಿದೆ. ಒಂದು ತಲೆಮಾರು ಇನ್ನೊಂದು ತಲೆಮಾರಿಗೆ ಜ್ಞಾನವನ್ನು ವರ್ಗಾಯಿಸಿದೆ ಮತ್ತು ಇದು ಹಾಗೆಯೇ ಮುಂದುವರೆದಿದೆ. ಆಧುನಿಕ ತಂತ್ರಜ್ಞಾನದ ಜೊತೆ ನಾವಿದನ್ನು ಆಲೋಚಿಸಬಲ್ಲೆವೇ ? . ನಾವು ಇದನ್ನು ಸಂಯೋಜಿಸಿಕೊಂಡು ಹೊಸ ತಂತ್ರಜ್ಞಾನವನ್ನು ರೂಪಿಸಬಲ್ಲೆವೇ ? . ನಾನು ನಂಬುತ್ತೇನೆ, ಆಧುನಿಕ ಮತ್ತು ವೈಜ್ಞಾನಿಕ ಪ್ರಕ್ರಿಯೆ ಮೂಲಕ ನಾವು ಸಾಂಸ್ಕೃತಿಕ ಜ್ಞಾನವನ್ನು, ಕೌಶಲ್ಯಗಳನ್ನು ಮತ್ತು ನಂಬಿಕೆಗಳನ್ನು ಶ್ರೀಮಂತ ಮತ್ತು ಅತ್ಯಾಧುನಿಕ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮಗಳಾಗಿ ಅಭಿವೃದ್ಧಿಪಡಿಸಬಹುದು ಎಂದು. ಐ.ಐ.ಟಿ. ಗುವಾಹಟಿ ಇದರಲ್ಲಿ ಮುಂಚೂಣಿ ಪಾತ್ರವನ್ನು ವಹಿಸಬೇಕು ಎಂದು ನಾನು ಸಲಹೆ ಮಾಡುತ್ತೇನೆ. ಮತ್ತು ಆ ಮೂಲಕ ಭಾರತೀಯ ಜ್ಞಾನ ವ್ಯವಸ್ಥೆಗಳ ಕೇಂದ್ರವನ್ನು ಸ್ಥಾಪಿಸಬೇಕು ಎಂದೂ ಆಶಿಸುತ್ತೇನೆ. ಈ ಮೂಲಕ, ನಾವು ಈಶಾನ್ಯಕ್ಕೆ, ದೇಶಕ್ಕೆ ಮತ್ತು ಜಗತ್ತಿಗೆ ದೊಡ್ಡ ಕೊಡುಗೆಯನ್ನು ನೀಡಬಹುದು ಮತ್ತು ಅದು ಭಾರೀ ಮೌಲ್ಯಯುತವಾದುದಾಗಿರುತ್ತದೆ.

ಸ್ನೇಹಿತರೇ,

ದೇಶದ ಅಸ್ಸಾಂ ಮತ್ತು ಈಶಾನ್ಯ ವಲಯವು ಅನೇಕಾನೇಕ ಸಾಧ್ಯತೆಗಳನ್ನು ಹೊಂದಿರುವ ಪ್ರದೇಶ. ಆದರೆ ಈ ವಲಯವು ಮಹಾಪೂರ, ಭೂಕಂಪಗಳು, ಭೂಕುಸಿತಗಳು, ಮತ್ತು ಅನೇಕ ಕೈಗಾರಿಕಾ ವಿಪತ್ತುಗಳಿಂದ ಬಾಧಿತವಾಗಿವೆ. ಈ ರಾಜ್ಯಗಳ ಶಕ್ತಿ ಮತ್ತು ಪ್ರಯತ್ನಗಳು ಈ ದುರಂತಗಳನ್ನು ನಿಭಾಯಿಸುವಲ್ಲಿ ವ್ಯಯವಾಗುತ್ತಿವೆ. ಈ ಸಮಸ್ಯೆಗಳನ್ನು ಸಮರ್ಪಕವಾಗಿ ಎದುರಿಸುವಲ್ಲಿ ಉನ್ನತ ಮಟ್ಟದ ತಾಂತ್ರಿಕ ಬೆಂಬಲ ಮತ್ತು ಮಧ್ಯಪ್ರವೇಶ ಅಗತ್ಯವಾಗಿದೆ. ನಾನು ಗುವಾಹಟಿ ಐ.ಐ.ಟಿ.ಗೆ ವಿಪತ್ತು ನಿರ್ವಹಣಾ ಮತ್ತು ಅಪಾಯ ಕಡಿಮೆ ಮಾಡುವ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಮನವಿ ಮಾಡುತ್ತೇನೆ. ಈ ಕೇಂದ್ರವು ಈ ವಲಯದ ವಿಪತ್ತುಗಳನ್ನು ನಿಭಾಯಿಸಲು ತಜ್ಞತೆಯನ್ನು ಒದಗಿಸುವುದಲ್ಲದೆ , ವಿಪತ್ತುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಬೇಕಿದೆ. ಐ.ಐ.ಟಿ. ಗುವಾಹಟಿ ಮತ್ತು ಎಲ್ಲ ಐ.ಐ.ಟಿ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಮುಂದುವರೆದು ಈ ನಿರ್ಧಾರವನ್ನು ಸಾಬೀತುಪಡಿಸುತ್ತಾರೆ ಎಂಬ ಬಗ್ಗೆ ನನಗೆ ದೃಢ ವಿಶ್ವಾಸವಿದೆ. ಸ್ನೇಹಿತರೇ ಸ್ಥಳೀಯ ವಿಷಯಗಳ ಬಗ್ಗೆ ಗಮನ ಕೊಡುವುದರ ಜೊತೆಗೆ ನಾವು ನಮ್ಮ ಕಣ್ಣುಗಳನ್ನು ಜಾಗತಿಕ ತಂತ್ರಜ್ಞಾನದ ದೊಡ್ದ ಕ್ಯಾನ್ವಾಸಿನ ಮೇಲೆ ಕೇಂದ್ರೀಕರಿಸಬೇಕಿದೆ. ಉದಾಹರಣೆಗೆ ನಾವು ನಮ್ಮ ಸಂಶೋಧನೆಯ ಮತ್ತು ತಂತ್ರಜ್ಞಾನದ ವಿಶೇಷ ಪ್ರಾವೀಣ್ಯತಾ ಕ್ಷೇತ್ರಗಳನ್ನು ಹುಡುಕಬಲ್ಲೆವೇ ?. ನಾವು ಅಂತಹ ಕ್ಷೇತ್ರಗಳನ್ನು ಗುರುತಿಸಿ ಅವುಗಳನ್ನು ದೇಶವು ಇನ್ನಷ್ಟು ಗಮನ ಕೇಂದ್ರೀಕರಿಸಬೇಕಾದ ವಿಷಯವನ್ನಾಗಿಸಬಲ್ಲೆವೇ ?

ಸ್ನೇಹಿತರೇ,

ನೀವು ವಿಶ್ವದಲ್ಲಿ ಎಲ್ಲಿಯೇ ಹೋಗಿ, ನೀವು ಹೆಮ್ಮೆಯ ಐ.ಐ.ಟಿ.ಯನ್ ಆಗಿರುತ್ತೀರಿ !. ಆದರೆ ನಾನು ನಿಮ್ಮಿಂದ ನಿರೀಕ್ಷೆ ಮಾಡುವುದು ನಿಮ್ಮ ಯಶಸ್ಸನ್ನು, ನಿಮ್ಮ ಸಂಶೋಧನಾ ಕೊಡುಗೆ ಐ.ಐ.ಟಿ. ಗುವಾಹಟಿಯು ನಿಮ್ಮನ್ನು ತನ್ನ ವಿದ್ಯಾರ್ಥಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಿರಬೇಕು. ನೀವು ಈ ಅವಕಾಶವನ್ನು, ಈ ಗುರು ದಕ್ಷಿಣೆಯನ್ನು ಐಐಟಿ ಗುವಾಹಟಿ ಮತ್ತು ನಿಮ್ಮ ಪ್ರಾಧ್ಯಾಪಕರಿಗೆ ನೀಡುತ್ತೀರಿ ಎಂದು ನಾನು ಭರವಸೆ ಹೊಂದಿದ್ದೇನೆ. ಇಡೀ ದೇಶ, 130 ಕೋಟಿ ದೇಶವಾಸಿಗಳು ನಿಮ್ಮಲ್ಲಿ ನಂಬಿಕೆ ಇಟ್ಟಿದ್ದಾರೆ. ನೀವು ಇದೇ ರೀತಿ ಯಶಸ್ಸನ್ನು ಪಡೆಯುತ್ತಲೇ ಮುಂದುವರಿಯಿರಿ ಮತ್ತು ಸ್ವಾವಲಂಬಿ ಭಾರತದ ಯಶಸ್ಸಿನ ನಾಯಕತ್ವ ವಹಿಸಿಕೊಳ್ಳಿ ಹಾಗು ನೀವು ಹಲವು ಹೊಸ ಎತ್ತರಗಳನ್ನೇರಲಿದ್ದೀರಿ. ನೀವು ಜೀವನದಲ್ಲಿ ಕಂಡಿರುವ ಕನಸುಗಳು, ಅವೆಲ್ಲವೂ ನಿರ್ಧಾರಗಳಾಗಿ ಬದಲಾಗಲಿ, ಈ ನಿರ್ಧಾರಗಳು ಕಠಿಣ ಪರಿಶ್ರಮದಿಂದ ನನಸಾಗಲಿ ಮತ್ತು ನೀವು ಬಹಳ ದೊಡ್ಡ ಯಶಸ್ಸುಗಳನ್ನು ಸಾಧಿಸುವಂತಾಗಲಿ.!. ಇಂತಹ ಹಲವಾರು ಹಾರೈಕೆಗಳೊಂದಿಗೆ , ನಾನು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ. ಬಹಳ ಮುಖ್ಯವಾಗಿ ಈ ಕೊರೊನಾ ಅವಧಿಯಲ್ಲಿ , ನೀವು ನಿಮ್ಮ ಬಗ್ಗೆ ಜಾಗ್ರತೆ ವಹಿಸಬೇಕು, ನಿಮ್ಮ ಕುಟುಂಬ , ನಿಮ್ಮ ಸುತ್ತಲಿನ ಜನರು ಮತ್ತು ನಿಮ್ಮ ಸ್ನೇಹಿತರುಗಳ ಬಗ್ಗೆಯೂ ಕಾಳಜಿ ವಹಿಸಬೇಕು. ಪ್ರತಿಯೊಬ್ಬರೂ ಆರೋಗ್ಯದಿಂದಿರಲು ಸಹಾಯ ಮಾಡಿ ಮತ್ತು ನೀವೂ ಆರೋಗ್ಯದಿಂದಿರಿ !.

ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು.

ಬಹಳ ಧನ್ಯವಾದಗಳು

ನಿಮ್ಮೆಲ್ಲರಿಗೂ ವಂದನೆಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Annual malaria cases at 2 mn in 2023, down 97% since 1947: Health ministry

Media Coverage

Annual malaria cases at 2 mn in 2023, down 97% since 1947: Health ministry
NM on the go

Nm on the go

Always be the first to hear from the PM. Get the App Now!
...
Prime Minister condoles passing away of former Prime Minister Dr. Manmohan Singh
December 26, 2024
India mourns the loss of one of its most distinguished leaders, Dr. Manmohan Singh Ji: PM
He served in various government positions as well, including as Finance Minister, leaving a strong imprint on our economic policy over the years: PM
As our Prime Minister, he made extensive efforts to improve people’s lives: PM

The Prime Minister, Shri Narendra Modi has condoled the passing away of former Prime Minister, Dr. Manmohan Singh. "India mourns the loss of one of its most distinguished leaders, Dr. Manmohan Singh Ji," Shri Modi stated. Prime Minister, Shri Narendra Modi remarked that Dr. Manmohan Singh rose from humble origins to become a respected economist. As our Prime Minister, Dr. Manmohan Singh made extensive efforts to improve people’s lives.

The Prime Minister posted on X:

India mourns the loss of one of its most distinguished leaders, Dr. Manmohan Singh Ji. Rising from humble origins, he rose to become a respected economist. He served in various government positions as well, including as Finance Minister, leaving a strong imprint on our economic policy over the years. His interventions in Parliament were also insightful. As our Prime Minister, he made extensive efforts to improve people’s lives.

“Dr. Manmohan Singh Ji and I interacted regularly when he was PM and I was the CM of Gujarat. We would have extensive deliberations on various subjects relating to governance. His wisdom and humility were always visible.

In this hour of grief, my thoughts are with the family of Dr. Manmohan Singh Ji, his friends and countless admirers. Om Shanti."