16 ಅಟಲ್ ಅವಾಸಿಯಾ ವಿದ್ಯಾಲಯಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ
"ಕಾಶಿ ಸಂಸದ್ ಸಾಂಸ್ಕೃತಿಕ ಮಹೋತ್ಸವದಂತಹ ಪ್ರಯತ್ನಗಳು ಈ ಪ್ರಾಚೀನ ನಗರದ ಸಾಂಸ್ಕೃತಿಕ ಕಂಪನ್ನು ಬಲಪಡಿಸುತ್ತವೆ"
ಮಹಾದೇವನ ಆಶೀರ್ವಾದದಿಂದ, ಕಾಶಿಯು ಅಭಿವೃದ್ಧಿಯ ಅಭೂತಪೂರ್ವ ಆಯಾಮಗಳನ್ನು ಕಾಣುತ್ತಿದೆ.
"ಕಾಶಿ ಮತ್ತು ಸಂಸ್ಕೃತಿ ಒಂದೇ ಶಕ್ತಿಯ ಎರಡು ಹೆಸರುಗಳು"
“ಕಾಶಿಯ ಮೂಲೆ ಮೂಲೆಯಲ್ಲಿ ಸಂಗೀತ ಹರಿಯುತ್ತಿದೆ, ಅಷ್ಟಕ್ಕೂ ಇದು ನಟರಾಜನ ನಗರ”
“2014 ರಲ್ಲಿ ನಾನು ಇಲ್ಲಿಗೆ ಬಂದಾಗ, ಕಾಶಿಯ ಅಭಿವೃದ್ಧಿ ಮತ್ತು ಪರಂಪರೆಯ ಬಗ್ಗೆ ನಾನು ಕಂಡ ಕನಸು ಈಗ ನಿಧಾನವಾಗಿ ನನಸಾಗುತ್ತಿದೆ”
"ವಾರಾಣಸಿಯು ತನ್ನ ಎಲ್ಲರನ್ನೊ ಒಳಗೊಳ್ಳುವ ಮನೋಭಾವದಿಂದಾಗಿ ಶತಮಾನಗಳಿಂದ ಕಲಿಕೆಯ ಕೇಂದ್ರವಾಗಿದೆ”
"ಕಾಶಿಯಲ್ಲಿ ಪ್ರವಾಸಿ ಮಾರ್ಗದರ್ಶಿಗಳ ಸಂಸ್ಕೃತಿಯು ಪ್ರವರ್ಧಮಾನಕ್ಕೆ ಬರಬೇಕೆಂದು ನಾನು ಬಯಸುತ್ತೇನೆ ಮತ್ತು ಕಾಶಿಯ ಪ್ರವಾಸಿ ಮಾರ್ಗದರ್ಶಿಗಳು ವಿಶ್ವದಲ್ಲೇ ಅತ್ಯಂತ ಗೌರವಾನ್ವಿತರಾಗಬೇಕೆಂದು ನಾನು ಆಶಿಸುತ್ತೇನೆ"

ಹರ ಹರ ಮಹಾದೇವ!

ಉತ್ತರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜೀ, ವೇದಿಕೆಯಲ್ಲಿರುವ ಎಲ್ಲ ಗೌರವಾನ್ವಿತ ಅತಿಥಿಗಳು, ಕಾಶಿ ಸಂಸದ್ ಸಾಂಸ್ಕೃತಿಕ ಮಹೋತ್ಸವದಲ್ಲಿ ಭಾಗವಹಿಸಿದ್ದವರು ಮತ್ತು ರುದ್ರಾಕ್ಷಿ ಕೇಂದ್ರದಲ್ಲಿ ಉಪಸ್ಥಿತರಿರುವ ಕಾಶಿಯ ನನ್ನ ಪ್ರೀತಿಯ ಸಹ ನಿವಾಸಿಗಳೇ!

ಭಗವಾನ್ ಶಿವನ ಆಶೀರ್ವಾದದಿಂದ, ಕಾಶಿಯ ಖ್ಯಾತಿ ಇಂದು ಹೊಸ ಎತ್ತರವನ್ನು ತಲುಪುತ್ತಿದೆ. ಜಿ 20 ಶೃಂಗಸಭೆಯ ಮೂಲಕ ಭಾರತವು ವಿಶ್ವ ವೇದಿಕೆಯಲ್ಲಿ ತನ್ನ ಧ್ವಜವನ್ನು ಎತ್ತರಕ್ಕೆ ಏರಿಸಿದೆ, ಆದರೆ ಕಾಶಿ ಬಗ್ಗೆ ಚರ್ಚೆ ವಿಶೇಷವಾಗಿದೆ. ಕಾಶಿಯ ಸೇವೆ, ಪರಿಮಳ, ಸಂಸ್ಕೃತಿ ಮತ್ತು ಸಂಗೀತ... ಜಿ 20 ಗೆ ಅತಿಥಿಯಾಗಿ ಕಾಶಿಗೆ ಬಂದ ಪ್ರತಿಯೊಬ್ಬರೂ ಅದನ್ನು ತಮ್ಮ ನೆನಪುಗಳಲ್ಲಿ ತಮ್ಮೊಂದಿಗೆ ತೆಗೆದುಕೊಂಡು ಹೋದರು. ಭಗವಾನ್ ಶಿವನ ಆಶೀರ್ವಾದದಿಂದಾಗಿ ಜಿ 20 ಯ ನಂಬಲಾಗದ ಯಶಸ್ಸು ಸಾಧ್ಯವಾಗಿದೆ ಎಂದು ನಾನು ನಂಬುತ್ತೇನೆ.

ಸ್ನೇಹಿತರೇ,

ಬಾಬಾ ಅವರ ಅನುಗ್ರಹದಿಂದಾಗಿ ಕಾಶಿ ಈಗ ಅಭೂತಪೂರ್ವ ಅಭಿವೃದ್ಧಿಯ ಆಯಾಮಗಳಿಗೆ ಸಾಕ್ಷಿಯಾಗಿದೆ. ನಿಮಗೂ ಅನಿಸುತ್ತಿದೆಯೋ ಇಲ್ಲವೋ? ನೀವು ಮಾತನಾಡಿದರೆ ಮಾತ್ರ ನನಗೆ ತಿಳಿಯುತ್ತದೆ. ನಾನು ಹೇಳುತ್ತಿರುವುದು ನಿಜವೆಂದು ನೀವು ಭಾವಿಸುತ್ತೀರಾ? ನೀವು ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದ್ದೀರಾ? ಕಾಶಿ ಹೊಳೆಯುತ್ತಿದೆಯೇ? ಕಾಶಿಯ ಕೀರ್ತಿ ವಿಶ್ವಾದ್ಯಂತ ಹರಡುತ್ತಿದೆಯೇ?

ಸ್ನೇಹಿತರೇ,

ಇಂದು ನಾನು ಬನಾರಸ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ಉದ್ಘಾಟಿಸಿದ್ದೇನೆ ಮತ್ತು ಉತ್ತರ ಪ್ರದೇಶದಲ್ಲಿ 16 ಅಟಲ್ ಆವಾಸಿಯಾ ವಿದ್ಯಾಲಯಗಳನ್ನು ಉದ್ಘಾಟಿಸುವ ಅವಕಾಶ ನನಗೆ ದೊರೆತಿದೆ. ಈ ಎಲ್ಲ ಸಾಧನೆಗಳಿಗಾಗಿ ನಾನು ಕಾಶಿಯ ಜನರನ್ನು ಅಭಿನಂದಿಸುತ್ತೇನೆ. ನಾನು ಉತ್ತರ ಪ್ರದೇಶದ ಜನರನ್ನು ಮತ್ತು ನನ್ನ ಕಾರ್ಮಿಕ ಕುಟುಂಬಗಳನ್ನು ಅಭಿನಂದಿಸುತ್ತೇನೆ.

ನನ್ನ ಕುಟುಂಬ ಸದಸ್ಯರೇ,

2014ರಲ್ಲಿ ನಾನು ಇಲ್ಲಿಂದ ಸಂಸದನಾದಾಗ ಕಾಶಿ ಬಗ್ಗೆ ದೂರದೃಷ್ಟಿ ಹೊಂದಿದ್ದೆ. ಇಂದು ಅಭಿವೃದ್ಧಿ ಮತ್ತು ಪರಂಪರೆಯ ಕನಸು ಕ್ರಮೇಣ ನನಸಾಗುತ್ತಿದೆ. ದೆಹಲಿಯ ಜಂಜಾಟದ ನಡುವೆಯೂ, ನಾನು ನಿಮ್ಮ ಕಾಶಿ ಸಂಸದ್ ಸಾಂಸ್ಕೃತಿಕ ಮಹೋತ್ಸವದ ಬೆಳವಣಿಗೆಗಳನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದೆ, ಮತ್ತು ನಾನು ತಡರಾತ್ರಿ ಬಂದಾಗಲೂ, ಏನಾಗುತ್ತಿದೆ ಎಂದು ನೋಡಲು ವೀಡಿಯೊಗಳನ್ನು ವೀಕ್ಷಿಸಲು ನಾನು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತಿದ್ದೆ. ನಾನು ನಿಮ್ಮ ಪ್ರಸ್ತುತಿಗಳನ್ನು ನೋಡಿದೆ. ಅದು ತುಂಬಾ ಪ್ರಭಾವಶಾಲಿಯಾಗಿದೆ - ಅದ್ಭುತ ಸಂಗೀತ, ಅದ್ಭುತ ಪ್ರದರ್ಶನಗಳು! ಸಂಸತ್ ಸದಸ್ಯನಾಗಿ, ಕಾಶಿ ಸಂಸದ್ ಸಾಂಸ್ಕೃತಿಕ ಮಹೋತ್ಸವದ ಮೂಲಕ ಈ ನೆಲದ ಅನೇಕ ಪ್ರತಿಭೆಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವ ಅವಕಾಶ ನನಗೆ ದೊರೆತಿದೆ ಎಂದು ನನಗೆ ಹೆಮ್ಮೆ ಇದೆ. ಮತ್ತು ಈ ಕಾರ್ಯಕ್ರಮವು ಈಗ ಕೇವಲ ಒಂದು ವರ್ಷದಿಂದ ನಡೆಯುತ್ತಿದೆ, ಆದರೆ ಇನ್ನೂ, ಸುಮಾರು 40,000 ಜನರು, ಕಲಾವಿದರು ಮತ್ತು ಲಕ್ಷಾಂತರ ಪ್ರೇಕ್ಷಕರು ಇದನ್ನು ವೈಯಕ್ತಿಕವಾಗಿ ಆನಂದಿಸಲು ಬಂದರು. ಬನಾರಸ್ ಜನರ ಪ್ರಯತ್ನದಿಂದ ಮುಂಬರುವ ವರ್ಷಗಳಲ್ಲಿ ಈ ಸಾಂಸ್ಕೃತಿಕ ಉತ್ಸವವು ಕಾಶಿಯ ವಿಶಿಷ್ಟ ಗುರುತಾಗಲಿದೆ ಎಂದು ನಾನು ನಂಬುತ್ತೇನೆ. ಅದರ ಜನಪ್ರಿಯತೆ ಎಷ್ಟು ಹೆಚ್ಚಾಗಲಿದೆಯೆಂದರೆ, ಪ್ರತಿಯೊಬ್ಬರೂ ತಾವು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇವೆ, ಅದರಲ್ಲಿ ಬಹುಮಾನವನ್ನು ಪಡೆದಿದ್ದೇವೆ ಎಂದು ಬರೆಯುತ್ತಾರೆ. ಮತ್ತು ಜಗತ್ತು ಸಹ ಕೇಳುತ್ತದೆ, "ಓಹ್, ನೀವು ಅದರಲ್ಲಿ ಅಗ್ರಸ್ಥಾನದಲ್ಲಿದ್ದಿರಿ? ಬನ್ನಿ,

ನಿಮಗೆ ಸಂದರ್ಶನದ ಅಗತ್ಯವಿಲ್ಲ; ನೀವು ಈಗಾಗಲೇ ನೇಮಕಗೊಂಡಿದ್ದೀರಿ." ಅದು ಸಂಭವಿಸಲಿದೆ. ಶೀಘ್ರದಲ್ಲೇ, ಕಾಶಿ ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಲಿದೆ.

ನನ್ನ ಕುಟುಂಬ ಸದಸ್ಯರೇ,

ಕಾಶಿ ಮತ್ತು ಅದರ ಸಂಸ್ಕೃತಿ ಒಂದೇ ವಿಷಯಕ್ಕೆ ಎರಡು ಹೆಸರುಗಳು, ಒಂದೇ ಶಕ್ತಿಗೆ ಎರಡು ಹೆಸರುಗಳು. ನೀವು ಅವರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಮತ್ತು ಕಾಶಿ ದೇಶದ ಸಾಂಸ್ಕೃತಿಕ ರಾಜಧಾನಿ ಎಂಬ ಹೆಮ್ಮೆಯನ್ನು ಗಳಿಸಿದೆ. ಕಾಶಿಯ ಪ್ರತಿಯೊಂದು ಗಲ್ಲಿಯಲ್ಲೂ ಹಾಡುಗಳು ಪ್ರತಿಧ್ವನಿಸುತ್ತವೆ. ಇದು ನೈಸರ್ಗಿಕವಾಗಿದೆ ಏಕೆಂದರೆ ಇದು ಭಗವಾನ್ ನಟರಾಜನ ನಗರವಾಗಿದೆ, ಮತ್ತು ಎಲ್ಲಾ ನೃತ್ಯ ಪ್ರಕಾರಗಳು ನಟರಾಜನ ತಾಂಡವದಿಂದ ಹುಟ್ಟಿಕೊಂಡಿವೆ. ಎಲ್ಲಾ ಸಂಗೀತ ಸ್ವರಗಳು ಶಿವನ 'ದಮಾರು' ನಿಂದ ಹುಟ್ಟುತ್ತವೆ. ಎಲ್ಲಾ ಕಲಾ ಪ್ರಕಾರಗಳು ಬಾಬಾ ಅವರ ಚಿಂತನೆಗಳಿಂದ ಹುಟ್ಟಿಕೊಂಡಿವೆ. ಈ ಕಲೆಗಳು ಮತ್ತು ರೂಪಗಳನ್ನು ಮಹಾನ್ ಋಷಿಗಳು ಮತ್ತು ಇತರ ಪ್ರಾಚೀನ ವಿದ್ವಾಂಸರು ಸಂಘಟಿಸಿದರು ಮತ್ತು ಅಭಿವೃದ್ಧಿಪಡಿಸಿದರು. ಕಾಶಿ ಎಂದರೆ "ಏಳು ಬಾರಿ ಮತ್ತು ಒಂಬತ್ತು ಹಬ್ಬಗಳು ". ಆದ್ದರಿಂದ, ಸಂಗೀತ ಮತ್ತು ನೃತ್ಯವಿಲ್ಲದೆ ಯಾವುದೇ ಹಬ್ಬವು ಪೂರ್ಣಗೊಳ್ಳುವುದಿಲ್ಲ. ಅದು ಮನೆಯ ಕೂಟವಾಗಿರಲಿ ಅಥವಾ ಬುಧ್ವಾ ಮಂಗಲ್ ಆಗಿರಲಿ, ಅದು ಭಾರತ್ ಮಿಲಾಪ್ ಆಗಿರಲಿ ಅಥವಾ ನಾಗ್ ನಾಥಯ್ಯ ಆಗಿರಲಿ, ಅದು ಸಂಕತ್ ಮೋಚನ್ ಅವರ ಸಂಗೀತ ಆಚರಣೆಯಾಗಿರಲಿ ಅಥವಾ ದೇವ್ ದೀಪಾವಳಿಯಾಗಿರಲಿ, ಇಲ್ಲಿ ಎಲ್ಲವೂ ಮಧುರ ಗೀತೆಗಳಲ್ಲಿ ಮುಳುಗಿದೆ.

ಸ್ನೇಹಿತರೇ,

ಕಾಶಿಯಲ್ಲಿ, ಶಾಸ್ತ್ರೀಯ ಸಂಗೀತದ ಸಂಪ್ರದಾಯದಷ್ಟೇ ವೈಭವಯುತವಾಗಿದೆ, ಇಲ್ಲಿನ ಜಾನಪದ ಸಂಗೀತವು ಅಷ್ಟೇ ಅಸಾಧಾರಣವಾಗಿದೆ. ಇಲ್ಲಿ, ನೀವು ತಬಲಾ, ಶೆಹನಾಯಿ ಮತ್ತು ಸಿತಾರ್ ಅನ್ನು ಸಹ ಕಾಣಬಹುದು. ಇಲ್ಲಿ, ಸಾರಂಗಿಯ ರಾಗಗಳು ಪ್ರತಿಧ್ವನಿಸುತ್ತವೆ ಮತ್ತು ವಿನಾವನ್ನು ನುಡಿಸಲಾಗುತ್ತದೆ. ಕಾಶಿ ಖಯಾಲ್, ತುಮ್ರಿ, ದಾದ್ರಾ, ಚೈತಿ ಮತ್ತು ಕಜ್ರಿಯಂತಹ ವಿವಿಧ ರೂಪಗಳನ್ನು ಶತಮಾನಗಳಿಂದ ಸಂರಕ್ಷಿಸಿದೆ. ತಲೆಮಾರುಗಳು ಮತ್ತು ಗುರು-ಶಿಷ್ಯ ಸಂಪ್ರದಾಯಗಳ ಮೂಲಕ, ಕುಟುಂಬಗಳು ಭಾರತದ ಈ ಸಿಹಿ ಆತ್ಮವನ್ನು ಜೀವಂತವಾಗಿರಿಸಿವೆ. ಇದರಲ್ಲಿ ಬನಾರಸ್ ನ ತೆಲಿಯಾ, ಪಿಯಾರಿ ಮತ್ತು ರಾಮಾಪುರ-ಕಬೀರ್ ಚೌರಾ ಮೊಹಲ್ಲಾಗಳ ಸಂಗೀತಗಾರರು ಸೇರಿದ್ದಾರೆ. ಈ ಪರಂಪರೆಯು ಸ್ವತಃ ಎಷ್ಟು ಶ್ರೀಮಂತವಾಗಿದೆ! ಬನಾರಸ್ ವಿಶ್ವದ ಮೇಲೆ ತಮ್ಮ ಛಾಪು ಮೂಡಿಸಿದ ಅನೇಕ ಕಲಾವಿದರನ್ನು ನೀಡಿದೆ. ನಾನು ಅವರೆಲ್ಲರ ಹೆಸರುಗಳನ್ನು ಉಲ್ಲೇಖಿಸಲು ಪ್ರಾರಂಭಿಸಿದರೆ, ಅದು ದಿನಗಳನ್ನು ತೆಗೆದುಕೊಳ್ಳಬಹುದು. ಜಾಗತಿಕವಾಗಿ ಪ್ರಸಿದ್ಧವಾದ ಅನೇಕ ಹೆಸರುಗಳು ನಮ್ಮ ಮುಂದೆಯೇ ಇವೆ. ಬನಾರಸ್ ನ ಇಂತಹ ಅನೇಕ ಸಾಂಸ್ಕೃತಿಕ ಗುರುಗಳನ್ನು ಭೇಟಿ ಮಾಡುವ ಮತ್ತು ಅವರೊಂದಿಗೆ ಸಮಯ ಕಳೆಯುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ.

ಸ್ನೇಹಿತರೇ,

ಇಂದು, ಕಾಶಿ ಸಂಸದ್ ಖೇಲ್ ಪ್ರತಿಯೋಗಿತಾ ಪೋರ್ಟಲ್ ಅನ್ನು ಇಲ್ಲಿ ಪ್ರಾರಂಭಿಸಲಾಗಿದೆ. ಅದು ಸಂಸದ್ ಖೇಲ್ ಪ್ರತಿಯೋಗಿತಾ ಅಥವಾ ಸಂಸದ್ ಸಾಂಸ್ಕೃತಿಕ ಮಹೋತ್ಸವವಾಗಿರಲಿ ಇದು ಕಾಶಿಯಲ್ಲಿ ಹೊಸ ಸಂಪ್ರದಾಯಗಳ ಪ್ರಾರಂಭವಾಗಿದೆ. ಈಗ ನಾವು ಕಾಶಿ ಸಂಸದ್ ಜ್ಞಾನ ಪ್ರತಿಯೋಗಿತವನ್ನೂ ಆಯೋಜಿಸಲಿದ್ದೇವೆ. ಕಾಶಿಯ ಇತಿಹಾಸ, ಅದರ ಶ್ರೀಮಂತ ಪರಂಪರೆ, ಅದರ ಹಬ್ಬಗಳು ಮತ್ತು ಅದರ ಪಾಕಪದ್ಧತಿಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ. ಬನಾರಸ್ ನ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಹಂತಗಳಲ್ಲಿ ಸಂಸದ್ ಜ್ಞಾನ ಪ್ರತಿಯೋಗಿತಾ ನಡೆಯಲಿದೆ.

ಸ್ನೇಹಿತರೇ,

ಕಾಶಿಯ ಜನರು ಕಾಶಿಯ ಬಗ್ಗೆ ಹೆಚ್ಚು ತಿಳಿದಿದ್ದಾರೆ. ಇಲ್ಲಿನ ಪ್ರತಿಯೊಬ್ಬ ವ್ಯಕ್ತಿ, ಪ್ರತಿ ಕುಟುಂಬ, ನಿಜವಾದ ಅರ್ಥದಲ್ಲಿ, ಕಾಶಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಆದರೆ ಅದೇ ಸಮಯದಲ್ಲಿ, ಪ್ರತಿಯೊಬ್ಬರೂ ಕಾಶಿಯ ಬಗ್ಗೆ ತಮ್ಮ ಜ್ಞಾನವನ್ನು ಪರಿಣಾಮಕಾರಿಯಾಗಿ ಸಂವಹನ ಮಾಡುವುದು ಅತ್ಯಗತ್ಯ. ಅದಕ್ಕಾಗಿಯೇ ಬಹುಶಃ ದೇಶದಲ್ಲಿ ಮೊದಲ ಬಾರಿಗೆ, ಇಲ್ಲಿ ಏನನ್ನಾದರೂ ಪ್ರಾರಂಭಿಸುವ ಬಯಕೆ ನನ್ನ ಹೃದಯದಲ್ಲಿದೆ. ಈಗ, ಎಲ್ಲರೂ ಸೇರುತ್ತಾರೆಯೇ? ನಾನು ಏನು ಹೇಳಲಿದ್ದೇನೆಂದು ನಿಮಗೆ ತಿಳಿದಿಲ್ಲದಿರಬಹುದು, ಆದರೆ ನೀವು ಈಗಾಗಲೇ ಅದಕ್ಕೆ ಹೌದು ಎಂದು ಹೇಳಿದ್ದೀರಿ. ನೀವು ನೋಡಿ, ಯಾವುದೇ ಪ್ರವಾಸಿ ಸ್ಥಳ, ಯಾವುದೇ ಯಾತ್ರಾ ಸ್ಥಳಕ್ಕೆ ಇಂದು ಅತ್ಯುತ್ತಮ ಮಾರ್ಗದರ್ಶಕರು ಬೇಕಾಗುತ್ತಾರೆ. ಮಾರ್ಗದರ್ಶಿಯು ಜ್ಞಾನಯುತವಾಗಿರಬೇಕು, ಮಾಹಿತಿಯ ವಿಷಯದಲ್ಲಿ ಪರಿಪೂರ್ಣವಾಗಿರಬೇಕು, ಅಸ್ಪಷ್ಟವಾಗಬಾರದು. ಒಬ್ಬರು ಕಾಶಿಗೆ 200 ವರ್ಷ ಹಳೆಯದು ಎಂದು ಹೇಳಿದರೆ, ಇನ್ನೊಬ್ಬರು ಇದು 250 ವರ್ಷ ಹಳೆಯದು ಎಂದು ಹೇಳುತ್ತಾರೆ, ಇನ್ನೊಬ್ಬರು ಇದು 300 ವರ್ಷ ಹಳೆಯದು ಎಂದು ಹೇಳುತ್ತಾರೆ, ಆದರೆ ಅದು ವಾಸ್ತವವಾಗಿ 240 ವರ್ಷ. ಈ ಶಕ್ತಿ ಕಾಶಿಯಲ್ಲಿ ಇರಬೇಕು. ಮತ್ತು ಇತ್ತೀಚಿನ ದಿನಗಳಲ್ಲಿ, ಪ್ರವಾಸಿ ಮಾರ್ಗದರ್ಶಿಯಾಗಿರುವುದು ಸಹ ಉದ್ಯೋಗದ ಮಹತ್ವದ ಮೂಲವಾಗುತ್ತಿದೆ, ಏಕೆಂದರೆ ಇಲ್ಲಿಗೆ ಬರುವ ಪ್ರವಾಸಿಗರು ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತಾರೆ, ಮತ್ತು ಅವರು ಪ್ರವಾಸಿ ಮಾರ್ಗದರ್ಶಿಗೆ ಪಾವತಿಸಲು ಬಯಸುತ್ತಾರೆ. ಆದ್ದರಿಂದ, ಅದಕ್ಕಾಗಿಯೇ ನನಗೆ ಆಸೆ ಇದೆ ಮತ್ತು ನಾನು ಅದನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದೇನೆ. ನಾವು ಈಗ ಕಾಶಿ ಸಾನ್ಸದ್ ಪ್ರವಾಸಿ ಮಾರ್ಗದರ್ಶಿ ಸ್ಪರ್ಧೆಯನ್ನು ಆಯೋಜಿಸುತ್ತೇವೆ. ನೀವು ಮಾರ್ಗದರ್ಶಕರಾಗುತ್ತೀರಿ, ಜನರಿಗೆ ವಿಷಯಗಳನ್ನು ವಿವರಿಸುತ್ತೀರಿ ಮತ್ತು ಪ್ರತಿಫಲಗಳನ್ನು ಗಳಿಸುತ್ತೀರಿ. ಈ ರೀತಿಯಾಗಿ, ಈ ನಗರದಲ್ಲಿ ಮಾರ್ಗದರ್ಶಕರ ಸಂಸ್ಕೃತಿ ಬೆಳೆಯುತ್ತಿದೆ ಎಂದು ಜನರು ತಿಳಿದುಕೊಳ್ಳುತ್ತಾರೆ. ನಾನು ಈ ಕೆಲಸವನ್ನು ಮಾಡಲು ಬಯಸುತ್ತೇನೆ ಏಕೆಂದರೆ ನನ್ನ ಕಾಶಿಯ ಹೆಸರು ವಿಶ್ವಾದ್ಯಂತ ಪ್ರತಿಧ್ವನಿಸಬೇಕೆಂದು ನಾನು ಬಯಸುತ್ತೇನೆ. ಪ್ರಪಂಚದ ಯಾವುದೇ ಭಾಗದಲ್ಲಿ ಯಾರಾದರೂ ಮಾರ್ಗದರ್ಶಕರ ಬಗ್ಗೆ ಮಾತನಾಡಿದರೆ, ಕಾಶಿಯ ಮಾರ್ಗದರ್ಶಕರ ಹೆಸರನ್ನು ಅತ್ಯಂತ ಗೌರವದಿಂದ ತೆಗೆದುಕೊಳ್ಳಬೇಕು ಎಂದು ನಾನು ಬಯಸುತ್ತೇನೆ. ಕಾಶಿಯ ಎಲ್ಲಾ ನಿವಾಸಿಗಳು ಈಗಿನಿಂದಲೇ ತಯಾರಿ ಪ್ರಾರಂಭಿಸಿ ಮತ್ತು ಈ ಉಪಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ನಾನು ಮನವಿ ಮಾಡುತ್ತೇನೆ.

ನನ್ನ ಕುಟುಂಬ ಸದಸ್ಯರು, ಯಬನಾರಸ್ ಶತಮಾನಗಳಿಂದ ಶಿಕ್ಷಣದ ಕೇಂದ್ರವಾಗಿದೆ. ಬನಾರಸ್ ನ ಶೈಕ್ಷಣಿಕ ಯಶಸ್ಸಿನ ಅತ್ಯಂತ ಮಹತ್ವದ ಅಡಿಪಾಯವೆಂದರೆ ಅದರ ಎಲ್ಲವನ್ನೂ ಒಳಗೊಳ್ಳುವ ಸ್ವಭಾವ. ದೇಶದ ಮತ್ತು ಪ್ರಪಂಚದ ಎಲ್ಲಾ ಮೂಲೆಗಳಿಂದ ಜನರು ತಮ್ಮ ಅಧ್ಯಯನಕ್ಕಾಗಿ ಇಲ್ಲಿಗೆ ಬರುತ್ತಾರೆ. ಇಂದಿಗೂ, ಅನೇಕ ದೇಶಗಳ ಜನರು ಸಂಸ್ಕೃತವನ್ನು ಕಲಿಯಲು ಮತ್ತು ಜ್ಞಾನವನ್ನು ಪಡೆಯಲು ಇಲ್ಲಿಗೆ ಬರುತ್ತಾರೆ. ಇಂದು, ಈ ಭಾವನೆಯನ್ನು ಗಮನದಲ್ಲಿಟ್ಟುಕೊಂಡು, ನಾವು ಇಲ್ಲಿ ಅಟಲ್ ಅವಸಿಯಾ (ವಸತಿ) ವಿದ್ಯಾಲಯಗಳನ್ನು ಉದ್ಘಾಟಿಸಿದ್ದೇವೆ. ಈ ಅಟಲ್ ಆವಾಸಿಯಾ ವಿದ್ಯಾಲಯಗಳ ಉದ್ಘಾಟನೆಗೆ ಸುಮಾರು 1100 ಕೋಟಿ ರೂಪಾಯಿಗಳ ವೆಚ್ಚವಾಗಿತ್ತು. ಈ ಶಾಲೆಗಳು ನಮ್ಮ ಸಮಾಜದ ದುರ್ಬಲ ವರ್ಗವಾದ ನಮ್ಮ ಕಾರ್ಮಿಕರ ಪುತ್ರರು ಮತ್ತು ಪುತ್ರಿಯರಿಗೆ ಮೀಸಲಾಗಿವೆ. ಈ ಉಪಕ್ರಮದ ಮೂಲಕ, ಅವರು ಉತ್ತಮ ಶಿಕ್ಷಣ, ಮೌಲ್ಯಗಳು ಮತ್ತು ಆಧುನಿಕ ಶಿಕ್ಷಣವನ್ನು ಪಡೆಯುತ್ತಾರೆ. ಕೋವಿಡ್ -19 ನಿಂದ ಪ್ರಾಣ ಕಳೆದುಕೊಂಡವರ ಮಕ್ಕಳಿಗೆ ಈ ಅಟಲ್ ಆವಾಸಿಯಾ ವಿದ್ಯಾಲಯಗಳಲ್ಲಿ ಉಚಿತ ಶಿಕ್ಷಣವನ್ನು ನೀಡಲಾಗುವುದು. ಈ ಶಾಲೆಗಳಲ್ಲಿ ನಿಯಮಿತ ಪಠ್ಯಕ್ರಮದ ಜೊತೆಗೆ ಸಂಗೀತ, ಕಲೆ, ಕರಕುಶಲ, ಕಂಪ್ಯೂಟರ್ ಮತ್ತು ಕ್ರೀಡೆಗಳಿಗೆ ಶಿಕ್ಷಕರು ಸಹ ಇರುತ್ತಾರೆ ಎಂದು ನನಗೆ ತಿಳಿಸಲಾಗಿದೆ. ಇದರರ್ಥ ದೀನದಲಿತ ಮಕ್ಕಳು ಸಹ ಈಗ ಗುಣಮಟ್ಟದ ಮತ್ತು ಸಮಗ್ರ ಶಿಕ್ಷಣದ ಕನಸುಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ. ಮತ್ತು ಅದೇ ರೀತಿ, ನಾವು ಬುಡಕಟ್ಟು ಸಮುದಾಯದ ಮಕ್ಕಳಿಗಾಗಿ ಏಕಲವ್ಯ ಆವಾಸಿಯಾ ಶಾಲೆಗಳನ್ನು ನಿರ್ಮಿಸಿದ್ದೇವೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ, ನಾವು ಶಿಕ್ಷಣ ವ್ಯವಸ್ಥೆಯ ಹಳೆಯ ಚಿಂತನೆಯನ್ನು ಸಹ ಬದಲಾಯಿಸಿದ್ದೇವೆ. ಈಗ ನಮ್ಮ ಶಾಲೆಗಳು ಆಧುನಿಕವಾಗುತ್ತಿವೆ. ತರಗತಿಗಳು ಚುರುಕಾಗುತ್ತಿವೆ. ದೇಶದ ಸಾವಿರಾರು ಶಾಲೆಗಳನ್ನು ಆಧುನೀಕರಿಸಲು ಸರ್ಕಾರ ಪಿಎಂ-ಶ್ರೀ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನದ ಅಡಿಯಲ್ಲಿ, ದೇಶದ ಸಾವಿರಾರು ಶಾಲೆಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸಲಾಗುತ್ತಿದೆ.

ಸ್ನೇಹಿತರೇ,

ಸಂಸದನಾಗಿ, ಕಾಶಿಯಲ್ಲಿ ಪ್ರಾರಂಭಿಸಲಾಗುತ್ತಿರುವ ಎಲ್ಲಾ ಹೊಸ ಉಪಕ್ರಮಗಳಲ್ಲಿ ನಾನು ಸಂಪೂರ್ಣ ಬೆಂಬಲವನ್ನು ಪಡೆಯುತ್ತಿದ್ದೇನೆ. ಈ ಅಟಲ್ ಆವಾಸಿಯಾ ವಿದ್ಯಾಲಯಗಳು ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಮೀಸಲಾಗಿವೆ, ಅವರ ಪೋಷಕರು ಜೀವನೋಪಾಯಕ್ಕಾಗಿ ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ತೆರಳುವುದರಿಂದ ಅವರ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಅವರ ಮಕ್ಕಳ ಯೋಗಕ್ಷೇಮಕ್ಕಾಗಿ ಬಜೆಟ್ ಅನ್ನು ಮೀಸಲಿಡಲಾಗಿದೆ. ನೋಡಿ, ತಕ್ಷಣದ ರಾಜಕೀಯ ಲಾಭವನ್ನು ಪಡೆಯುವ ಯಾವುದೇ ಉದ್ದೇಶವಿಲ್ಲದವರು, ಸ್ವಾರ್ಥ ಉದ್ದೇಶಗಳಿಲ್ಲದವರು, ಅವರು ಹೇಗೆ ಕೆಲಸ ಮಾಡುತ್ತಾರೆ. ಯಾವಾಗಲೂ ಚುನಾವಣೆಗಳಲ್ಲಿ ಮುಳುಗಿರುವವರು ಮತ್ತು ಯಾವುದೇ ರೀತಿಯಲ್ಲಿ ಮತಗಳನ್ನು ಗಳಿಸುವ ಆಟವನ್ನು ಆಡುವವರು ಈ ಹಣವನ್ನು ವ್ಯರ್ಥ ಮಾಡುತ್ತಾರೆ. ಈ ನಿಟ್ಟಿನಲ್ಲಿ ನೀವು ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಿದರೆ ನಿಮಗೆ ತಿಳಿಯುತ್ತದೆ. ಈ ನಿಧಿಗಳು ಎಲ್ಲಾ ರಾಜ್ಯಗಳ ಬಳಿ ಇವೆ, ಮತ್ತು ಕೇಂದ್ರ ಸರ್ಕಾರವು ಅವುಗಳಿಗೆ ಸಂಪೂರ್ಣ ಸ್ವಾಯತ್ತತೆಯನ್ನು ನೀಡಿದೆ. ಆದರೆ ಹೆಚ್ಚಿನ ರಾಜ್ಯಗಳು ಮತಗಳನ್ನು ಪಡೆಯಲು ಈ ಹಣವನ್ನು ಬಳಸುತ್ತಿವೆ. ನಾನು ಈ ಬಗ್ಗೆ ಯೋಗಿ ಜಿ ಅವರೊಂದಿಗೆ ಬಹಳ ಹಿಂದೆಯೇ ಚರ್ಚಿಸಿದ್ದೆ. ಅವರ ಕುಟುಂಬಗಳು ಇನ್ನು ಮುಂದೆ ಕಾರ್ಮಿಕರಾಗಿ ಕೆಲಸ ಮಾಡಬೇಕಾಗಿಲ್ಲ ಎಂದು ಈ ಮಕ್ಕಳನ್ನು ಸಿದ್ಧಪಡಿಸಲಾಗುವುದು ಎಂದು ಅವರು ನಿರ್ಧರಿಸಿದ್ದರು. ನಾನು ಅಟಲ್ ಆವಾಸಿಯಾ ವಿದ್ಯಾಲಯಗಳ ಕೆಲವು ಮಕ್ಕಳನ್ನು ಭೇಟಿಯಾದೆ, ಅವರು ಕಾರ್ಮಿಕ ಕುಟುಂಬಗಳಿಂದ ಬಂದವರು, ಅವರು ಹಿಂದೆಂದೂ ಪಕ್ಕಾ ಮನೆಯನ್ನು ನೋಡಿರಲಿಲ್ಲ. ಆದರೆ ಇಷ್ಟು ಕಡಿಮೆ ಸಮಯದಲ್ಲಿ ಅವರಲ್ಲಿನ ಆತ್ಮವಿಶ್ವಾಸವನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಾನು ಅವರ ಶಿಕ್ಷಕರನ್ನು ಅಭಿನಂದಿಸಲು ಬಯಸುತ್ತೇನೆ. ಅವರು ಎಷ್ಟು ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದರು ಮತ್ತು ಅವರು ಪ್ರಧಾನಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರೀತಿ, ಪ್ರಶ್ನೆಗಳನ್ನು ಕೇಳುತ್ತಿದ್ದ ರೀತಿ, ಈ ಮಕ್ಕಳಲ್ಲಿನ ಕಿಡಿ ಮತ್ತು ಸಾಮರ್ಥ್ಯವನ್ನು ನಾನು ನೋಡಲು ಸಾಧ್ಯವಾಯಿತು. 10 ವರ್ಷಗಳಲ್ಲಿ ಈ ಶಾಲೆಗಳ ಮೂಲಕ ಉತ್ತರ ಪ್ರದೇಶ ಮತ್ತು ಕಾಶಿಯ ಪರಿವರ್ತನೆ ಮತ್ತು ಪ್ರಗತಿಯನ್ನು ನೀವು ನೋಡುತ್ತೀರಿ ಎಂದು ನಾನು ದೃಢವಾಗಿ ನಂಬುತ್ತೇನೆ.

ಕಾಶಿಯ ನನ್ನ ಪ್ರೀತಿಯ ನಿವಾಸಿಗಳೇ,

ನೀವು ಈ ರೀತಿಯಲ್ಲಿ ನನ್ನನ್ನು ಆಶೀರ್ವದಿಸುವುದನ್ನು ಮುಂದುವರಿಯಲಿ! ಈ ಭಾವನೆಯೊಂದಿಗೆ, ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು!

ಹರ ಹರ ಮಹಾದೇವ!

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.