“ಭಾರತದಲ್ಲಿ ಏಕೆ ಹೂಡಿಕೆ ಮಾಡಬೇಕು” ಎಂಬುದರಿಂದ “ಭಾರತದಲ್ಲಿ ಏಕಾಗಿ ಹೂಡಿಕೆ ಮಾಡಬಾರದು” ಎಂಬಲ್ಲಿಗೆ ಒಂದೇ ವರ್ಷದಲ್ಲಿ ಪ್ರಶ್ನೆ ಬದಲಾಗಿದೆ
“ತನ್ನ ಸಾಮರ್ಥ್ಯದೊಂದಿಗೆ ತಮ್ಮ ಕನಸುಗಳನ್ನು ಜೋಡಿಸುವವರನ್ನು ಭಾರತ ನಿರಾಶೆಗೊಳಿಸುವುದಿಲ್ಲ”
“ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ಲಾಭಾಂಶ ಭಾರತದಲ್ಲಿನ ವ್ಯವಹಾರಗಳನ್ನು ದ್ವಿಗುಣಗೊಳಿಸುತ್ತದೆ”
“ಅದು ಆರೋಗ್ಯ, ಕೃಷಿ ಅಥವಾ ಸಾಗಾಣೆ ವ್ಯವಸ್ಥೆಯಾಗಿರಬಹುದು, ಭಾರತ ಚತುರ ತಂತ್ರಜ್ಞಾನದ ಬಳಕೆಯ ದೃಷ್ಟಿಯಲ್ಲಿ ಕೆಲಸ ನಿರ್ವಹಿಸುತ್ತದೆ”
“ಜಗತ್ತಿಗೆ ನಂಬಲರ್ಹವಾದ ಪೂರೈಕೆ ಸರಪಳಿ ಅಗತ್ಯವಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವಕ್ಕಿಂತ ಯಾರು ವಿಶ್ವಾಸಾರ್ಹ ಪಾಲುದಾರರಾಗಬಹುದು”
“ಸೆಮಿಕಂಡಕ್ಟರ್ ವಲಯದಲ್ಲಿ ಹೂಡಿಕೆಗೆ ಭಾರತ ಅತ್ಯುತ್ತಮ ನಿರ್ವಹಣಾ ವ್ಯವಸ್ಥೆಯನ್ನು ಒಳಗೊಂಡಿದೆ”
“ಭಾರತ ಜಾಗತಿಕ ಜವಾಬ್ದಾರಿತನವನ್ನು ಅರ್ಥಮಾಡಿಕೊಂಡಿದೆ ಮತ್ತು ಸ್ನೇಹಪರ ರಾಷ್ಟ್ರಗಳೊಂದಿಗೆ ಸಮಗ್ರ ನೀಲನಕ್ಷೆಯೊಂದಿಗೆ ಕಾರ್ಯನಿರ್ವಹಿಸಲಿದೆ”

ಜನಪ್ರಿಯ ಗುಜರಾತ್‌ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್‌, ನನ್ನ ಸಂಪುಟ ಸಹೋದ್ಯೋಗಿಗಳೇ, ಅಶ್ವಿನಿ ವೈಷ್ಣವ್‌ ಜೀ, ರಾಜೀವ್‌ ಚಂದ್ರಶೇಕರ್‌ ಜೀ, ಕೈಗಾರಿಕಾ ವಲಯದ ನನ್ನ ಸ್ನೇಹಿತರಾದ ಸಂಜಯ್‌ ಮೆಹ್ರೋತ್ರಾ ಜೀ, ಶ್ರೀ ಯಂಗ್‌ ಲಿಯು, ಅಜಿತ್‌ ಮನೋಚಾ ಜೀ, ಅನಿಲ್‌ ಅಗರ್ವಾಲ್‌ ಜೀ, ಅನಿರುದ್ಧ್‌ ದೇವಗನ್‌ ಜೀ, ‍ರೀ ಮಾರ್ಕ್‌ ಪೇಪರ್‌ ಮಾಸ್ಟರ್‌, ಪ್ರಭು ರಾಜಾ ಜೀ, ಇತರೆ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ..

ಈ ಸಮ್ಮೇಳನದಲ್ಲಿ ನನ್ನ ಕುಟುಂಬದ ಸದಸ್ಯರ ಮುಖ ನೋಡುತ್ತಿದ್ದೇನೆ. ಹಲವಾರು ಮಂದಿಯನ್ನು ಮೊದಲ ಬಾರಿಗೆ ವೀಕ್ಷಿಸುತ್ತಿದ್ದೇನೆ. ಇದು ಅಗತ್ಯವಿರುವ ತಂತ್ರಾಂಶವನ್ನು ಮೇಲ್ದರ್ಜೆಗೇರಿಸುವ ಕಾರ್ಯಕ್ರಮ. ಕೈಗಾರಿಕೆಗಳು, ತಜ್ಞರೊಂದಿಗಿನ ಸಂಬಂಧ ಹೆಚ್ಚಿಸುವ ಮತ್ತು ಸೆಮಿಕಾನ್ ಇಂಡಿಯಾ ಮೂಲಕ ನೀತಿ ನಿರೂಪಕರು ಉನ್ನತೀಕರಣಗೊಳ್ಳಲಿರುವ ಸಭೆ. ಸೆಮಿಕಾನ್‌ ಇಂಡಿಯಾಗೆ ಭಾರತ ಮತ್ತು ವಿದೇಶಗಳಿಂದ ಹಲವಾರು ಕಂಪೆನಿಗಳು ಆಗಮಿಸಿವೆ. ನಮ್ಮೊಂದಿಗೆ ನಮ್ಮ ನವೋದ್ಯಮಗಳು ಸಹ ಕೈ ಜೋಡಿಸಿವೆ. ನನ್ನ ಹೃದಯಾಂತರಾಳದಿಂದ ಸೆಮಿಕಾನ್‌ ಇಂಡಿಯಾಗೆ ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ. ಮತ್ತು ನಾನು ಈ ಕ್ಷೇತ್ರದಲ್ಲಿ ಮಾಡಿದ ಪ್ರಗತಿಯನ್ನು ಪ್ರತಿಬಿಂಬಿಸುವ ಮತ್ತು ಹೊಸ ಜನರ ಸಂಘಟನೆ, ಹೊಸ ಉತ್ಸಾಹದಿಂದ ಹೊಸ ಕಂಪೆನಿಗಳನ್ನು ನಾನು ನೋಡಿದೆ. ನಾನು ಅಲ್ಲಿ ಕಡಿಮೆ ಸಮಯ ಕಳೆದಿದ್ದರೂ ನನಗೆ ಅಚ್ಚರಿಯ ಅನುಭವವಾಯಿತು. ಇನ್ನೂ ಕೆಲ ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನವನ್ನು ಪ್ರತಿಯೊಬ್ಬರೂ, ವಿಶೇಷವಾಗಿ ಗುಜರಾತ್‌ ನ ಯುವ ಸಮೂಹ ನೋಡಬೇಕೆಂದು ಒತ್ತಾಯಿಸುತ್ತೇನೆ. ಜಗತ್ತಿನಲ್ಲಿ ಸೃಜನೆಯಾಗಿರುವ ಹೊಸ ತಂತ್ರಜ್ಞಾನದ ಶಕ್ತಿಯ ಬಗ್ಗೆ ಅರ್ಥಮಾಡಿಕೊಳ್ಳಬೇಕು ಮತ್ತು ಕಲಿಯಬೇಕಾಗಿದೆ.

ಸ್ನೇಹಿತರೇ,
ಕಳೆದ ವರ್ಷ ಸೆಮಿಕಾನ್ ನ ಮೊದಲ ಆವೃತ್ತಿಯಲ್ಲಿ ನಾವೆಲ್ಲರೂ ಭಾಗವಹಿಸಿದ್ದನ್ನು ಪ್ರಧಾನಮಂತ್ರಿಯವರು ಸ್ಮರಿಸಿಕೊಂಡರು. ಆ ಸಂದರ್ಭದಲ್ಲಿ ಭಾರತದ ಸೆಮಿಕಂಡಕ್ಟರ್ ವಲಯದಲ್ಲಿ ಭಾರತದಲ್ಲಿ ಏಕೆ ಹೂಡಿಕೆ ಮಾಡಬೇಕು ಎಂಬ ಬಗ್ಗೆ ಚರ್ಚೆಯಾಗಿತ್ತು. ಜನತೆ ಕೇಳುತ್ತಿದ್ದರು “ಏಕೆ ಹೂಡಿಕೆ?”. ನಾವೀಗ ಒಂದು ವರ್ಷದ ನಂತರ ಭೇಟಿ ಮಾಡುತ್ತಿದ್ದೇವೆ ಮತ್ತು ಪ್ರಶ್ನೆಗಳು ಬದಲಾಗಿವೆ. ಜನತೆ ಕೇಳುತ್ತಿದ್ದಾರೆ “ಏಕೆ ಹೂಡಿಕೆ ಮಾಡಬಾರದು?” ಮತ್ತು ಎಂದು ತಮ್ಮ ಪ್ರಶ್ನೆಯನ್ನು  ಬದಲಿಸಿದ್ದಾರೆ. ಆದರ ದಿಕ್ಕು ಕೂಡ ಬದಲಾಗಿದೆ. ಮತ್ತು ನೀವೆಲ್ಲರೂ ಮತ್ತು ನಿಮ್ಮ ಪ್ರಯತ್ನಗಳಿಂದ ನಿರ್ದೇಶನವೂ ಬದಲಾವಣೆಗೊಂಡಿದೆ. ಆದ್ದರಿಂದ ಈ ವಿಶ್ವಾಸವನ್ನು ತೋರಿಸಲು ಮತ್ತು ಈ ಉಪಕ್ರಮವನ್ನು ತೆಗೆದುಕೊಂಡಿದ್ದಕ್ಕಾಗಿ ನಾನು ಇಲ್ಲಿರುವ ಎಲ್ಲಾ ಕಂಪೆನಿಗಳನ್ನು ಅಭಿನಂದಿಸುತ್ತೇನೆ. ಭಾರತದ ಈ ನಿರೀಕ್ಷೆಯೊಂದಿಗೆ ನಿಮ್ಮ ಭವಿಷ್ಯವೂ ಸಹ ಇದರೊಂದಿಗೆ ಬೆಸೆದುಕೊಂಡಿದೆ. ಮತ್ತು ಭಾರತ ಯಾರೊಬ್ಬರನ್ನೂ ನಿರಾಶೆಗೊಳಿಸುವುದಿಲ್ಲ. ನಿಮಗಾಗಿ ೨೧ ನೇ ಶತಮಾನದಲ್ಲಿ ಅವಕಾಶಗಳಿವೆ. ಭಾರತದ ಪ್ರಜಾತಂತ್ರ, ಭಾರತದ ಭೌಗೋಳಿಕ ಪರಿಸ್ಥಿತಿ, ಇಲ್ಲಿ ಪಡೆದ ಲಾಭಾಂಶ ನಿಮ್ಮ ವ್ಯಾಪಾರವನ್ನು ದ್ವಿಗುಣಗೊಳಿಸುತ್ತದೆ ಮತ್ತು ಮೂರು ಪಟ್ಟು ಹೆಚ್ಚಿಸುತ್ತದೆ.   

 

ಸ್ನೇಹಿತರೇ,

ಮೂರೇ ಅವರ ಕಾನೂನಿನ ಬಗ್ಗೆ ನಿಮ್ಮ ಕೈಗಾರಿಕಾ ವಲಯದಲ್ಲಿ ಹೆಚ್ಚು ಮಾತನಾಡುತ್ತಾರೆ. ಆದರೆ ಈ ಕುರಿತು ತಮ್ಮ ಬಳಿ ವಿವರಗಳಿಲ್ಲ, ಆದರೆ ಈ ಕುರಿತಾದ ಬೆಳವಣಿಗೆ ಅದರ ನಡುವೆ ಇದೆ  ಎಂಬುದು ನಮಗೆ ತಿಳಿದಿದೆ. ನಮಗೆ ಇಲ್ಲಿ ಒಂದು ಮಾತಿದೆ - ʼದಿನ್‌ ದುನಿ ರಾತ್‌ ಚೌಗುಣಿ ತರಾಕ್ಕಿ ಕರ್ನʼ. ಅಂದರೆ ಇದರ ಅರ್ಥ ಪುಟಿದು ಪ್ರಗತಿಯಲ್ಲಿದೆ ಎಂದು. ಮತ್ತು ಇದು ಕೆಲವು ರೀತಿಯಲ್ಲಿ ಒಂದೇ ಮಾದರಿಯಲ್ಲಿದೆ. ಇಂದು ನಾವು ಡಿಜಿಟಲ್‌, ವಿದ್ಯುನ್ಮಾನ ಉತ್ಪಾದನಾ ವಲಯದಲ್ಲಿ ನಾವು ʼಪುಟಿದೇಳುವ ಪ್ರಗತಿʼಗೆ ಸಾಕ್ಷಿಯಾಗುತ್ತಿದ್ದೇವೆ. ಕೆಲವು ವರ್ಷಗಳ ಹಿಂದೆ ಭಾರತ ಈ ವಲಯದಲ್ಲಿ ಉದಯೋನ್ಮುಖ ಆಟಗಾರನಾಗಿತ್ತು. ಇಂದು ನಮ್ಮ ಜಾಗತಿಕ ವಿದ್ಯುನ್ಮಾನ ಉಪಕರಣಗಳ ಉತ್ಪಾದನೆ ಹಲವು ಪಟ್ಟು ಏರಿಕೆಯಾಗಿದೆ. 2014 ರಲ್ಲಿ ವಿದ್ಯುನ್ಮಾನ ಉತ್ಪಾದನಾ ವಲಯದಲ್ಲಿ 30 ಶತಕೋಟಿ ಡಾಲರ್ ನಷ್ಟಿದ್ದ ವಹಿವಾಟು, ಇಂದು 100 ಶತಕೋಟಿ ಡಾಲರ್ ದಾಟಿದೆ. ಕಳೆದ 2 ವರ್ಷಗಳಲ್ಲಿ ವಿದ್ಯುನ್ಮಾನ ಮತ್ತು ಮೊಬೈಲ್ ಸಾಧನಗಳ ವಲಯದಲ್ಲಿ ರಫ್ತು ಪ್ರಮಾಣ ದ್ವಿಗುಣಗೊಂಡಿದೆ. ಒಂದು ಕಾಲದಲ್ಲಿ ಮೊಬೈಲ್‌ ಗಳನ್ನು ದೇಶ ಆಮದು ಮಾಡಿಕೊಳ್ಳುತ್ತಿತ್ತು. ಇಂದು ಜಗತ್ತಿನ ಅತ್ಯುತ್ತಮ ಮೊಬೈಲ್‌ ಗಳನ್ನು ಉತ್ಪಾದಿಸುತ್ತಿದೆ ಮತ್ತು ರಫ್ತು ಮಾಡುತ್ತಿದೆ.

ಸ್ನೇಹಿತರೇ,

ಇನ್ನೂ ಕೆಲವು ವಲಯಗಳಲ್ಲಿ ಮೂರೇ ಅವರ ಕಾನೂನಿನ ಅಂದಾಜುಗಳನ್ನು ಮೀರಿ ಬೆಳವಣಿಗೆ ಕಂಡಿದೆ. 2014ಕ್ಕೂ ಹಿಂದೆ ಭಾರತದಲ್ಲಿ ಕೇವಲ ಎರಡು ಮೊಬೈಲ್ ಉತ್ಪಾದನಾ ಘಟಕಗಳಿದ್ದವು. ಇಂದು ಈ ಸಂಖ್ಯೆ 200 ಕ್ಕಿಂತ ಹೆಚ್ಚಿದೆ.  ಬ್ರ್ಯಾಡ್ ಬ್ಯಾಂಡ್ ಬಳಸುವರ ಸಂಖ್ಯೆ 6 ಕೋಟಿಯಿಂದ 80 ಕೋಟಿಗೆ ಹೆಚ್ಚಳವಾಗಿದೆ. ೨೦೧೪ ರಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ೨೫ ದಶಲಕ್ಷ ಅಂದರೆ 25 ಕೋಟಿ ಇತ್ತು, ಇಂದು ೮೫೦ ದಶಲಕ್ಷ ಅಂದರೆ 85 ಕೋಟಿಗೂ ಹೆಚ್ಚಿದೆ. ಈ ಸಂಖ್ಯೆ ಭಾರತದ ಪ್ರಗತಿಯ ಮಹತ್ವವನ್ನಷ್ಟೇ ಪ್ರತಿಬಿಂಬಿಸುವುದಿಲ್ಲ, ಬದಲಿಗೆ ವ್ಯಾಪಾರ ಬೆಳವಣಿಗೆಯ ಸೂಚ್ಯಂಕವನ್ನು ಸಹ ಪ್ರತಿಫಲಿಸುತ್ತದೆ. ಸೆಮಿಕಾನ್ ಉದ್ಯಮದಲ್ಲಿ ಭಾರತ ಪುಟಿದೇಳುವ ಪ್ರಗತಿ ಸಾಧಿಸಿದ್ದು, ಈ ನಿಟ್ಟಿನಲ್ಲಿ ಪ್ರಮುಖ ಸಾಧನೆಯ ಪಾತ್ರ ನಿರ್ವಹಿಸುತ್ತಿದೆ.

 

ಸ್ನೇಹಿತರೇ,
“ಜಗತ್ತು ಇಂದು ನಾಲ್ಕನೇ ಅಂದರೆ 4.0 ಕೈಗಾರಿಕಾ ಕ್ರಾಂತಿಗೆ ಸಾಕ್ಷಿಯಾಗಿದೆ”. ಜಗತ್ತಿನ ಯಾವುದೇ ಕೈಗಾರಿಕಾ ಕ್ರಾಂತಿಗೆ ಆ ನಿರ್ದಿಷ್ಟ ವಲಯದ ಜನರ ನಿರೀಕ್ಷೆಗಳೇ ಆಧಾರ. ಹಿಂದಿನ ಕೈಗಾರಿಕಾ ಕ್ರಾಂತಿ ಮತ್ತು ಅಮೆರಿಕದ ಕನಸು ಒಂದೇ ಸಂಬಂಧವನ್ನು ಹೊಂದಿವೆ”. ಇಂದು ಭಾರತೀಯರ ನಿರೀಕ್ಷೆಗಳು ಅಭಿವೃದ್ಧಿ ಆಧಾರಿತವಾಗಿದ್ದು, ಇದರ ಹಿಂದೆ ಚಾಲನಾ ಶಕ್ತಿಯಿದೆ. ದೇಶದಲ್ಲಿ ನವ ಮಧ್ಯಮವರ್ಗ ಹೊರ ಹೊಮ್ಮುತ್ತಿದ್ದು, ಇದರಿಂದ ಬಡತನ ಅತ್ಯಂತ ವೇಗವಾಗಿ ಕಡಿಮೆಯಾಗುತ್ತಿದೆ. ಭಾರತದ ಜನ ತಂತ್ರಜ್ಞಾನ ಸ್ನೇಹಿಯಷ್ಟೇ ಅಲ್ಲದೇ ತಂತ್ರಜ್ಞಾನವನ್ನು ತ್ವರಿತಾಗಿ ಅಳವಡಿಸಿಕೊಳ್ಳುತ್ತಿದ್ದಾರೆ. ತಂತ್ರಜ್ಞಾನ ಸ್ನೇಹಿ ಪರಿಸರ ಮತ್ತು ತಂತ್ರಜ್ಞಾನವನ್ನು ಅಡಕಗೊಳಿಸಿಕೊಳ್ಳಲು ಇಂದು ಸುಲಭದರದ ಇಂಟರ್ನೆಟ್, ಗುಣಮಟ್ಟದ ಡಿಜಿಟಲ್ ಮೂಲ ಸೌಕರ್ಯ, ಪ್ರತಿಯೊಂದು ಹಳ್ಳಿಗಳಿಗೆ ಮತ್ತು ತಡೆರಹಿತ ವಿದ್ಯುತ್ ಪೂರೈಕೆಯಿಂದಾಗಿ ಡಿಜಿಟಲ್ ಉತ್ಪನ್ನಗಳ ಬಳಕೆ ಹಲವು ಪಟ್ಟು ಹೆಚ್ಚಾಗುತ್ತಿದೆ. ಅದು ಆರೋಗ್ಯ, ಕೃಷಿ ಅಥವಾ ಸಾಗಾಣೆ ವ್ಯವಸ್ಥೆಯೇ ಆಗಿರಬಹುದು, ಭಾರತ ಚತುರ ತಂತ್ರಜ್ಞಾನ ಬಳಕೆಯ ದೃಷ್ಟಿಕೋನದತ್ತ ಕಾರ್ಯನಿರ್ವಹಿಸುತ್ತಿದೆ. ನಾವು ಅತಿದೊಡ್ಡ ಜನಸಂಖ್ಯೆ ಹೊಂದಿದ್ದು, ಹಲವಾರು ಮಂದಿ ಮೂಲ ಗೃಹೋಪಯೋಗಿ ವಸ್ತುಗಳನ್ನು ಬಳಸಿಲ್ಲ. ಆದರೆ ಇಂದು ಅಂತರ್‌ ಸಂಪರ್ಕಿತ ಚತುರ ಸಾಧನಗಳನ್ನು ನೇರವಾಗಿ ಬಳಕೆ ಮಾಡುತ್ತಿದ್ದಾರೆ. ಇದೇ ರೀತಿ ನಿರ್ದಿಷ್ಟ ವಲಯದ ವಿದ್ಯಾರ್ಥಿಗಳು ಹಿಂದೆ ಬೈಸಿಕಲ್ ಬಳಸುತ್ತಿರಲಿಲ್ಲ, ಆದರೆ ಇಂದು ಸ್ಮಾರ್ಟ್ ಎಲೆಕ್ಟ್ರಿಕ್ ಬೈಕ್ ಗಳನ್ನು ಉಪಯೋಗಿಸುತ್ತಿದ್ದಾರೆ. ನವ ಮಧ್ಯಮ ವರ್ಗ ಭಾರತದಲ್ಲಿ ಬೆಳವಣಿಗೆಯಾಗುತ್ತಿದ್ದು, ಇವರು ಭಾರತದ ನಿರೀಕ್ಷೆಗಳ ಶಕ್ತಿ ಕೇಂದ್ರವಾಗಿದ್ದಾರೆ. ಚಿಪ್ ತಯಾರಿಕೆ ಉದ್ಯಮ ಅವಕಾಶಗಳಿಂದ ತುಂಬಿದ ಮಾರುಕಟ್ಟೆಯಾಗಿದ್ದು, ಇದಕ್ಕಾಗಿ ಪೂರ್ಣ ಪ್ರಮಾಣದ ಪರಿಸರ ಸ್ನೇಹಿ ಮಾರುಕಟ್ಟೆಯನ್ನು ರೂಪಿಸಬೇಕಾಗಿದೆ. ಇದನ್ನು ಇತರರಿಗಿಂತ ಮೊದಲು ಪ್ರಾರಂಭಿಸಿದರೆ ಹೆಚ್ಚಿನ ಪ್ರಯೋಜನ ಪಡೆಯಬಹುದು. ಮತ್ತು ನಾನು ನಂಬುತ್ತೇನೆ ಈ ದಿಕ್ಕಿನಲ್ಲಿ ಚಲಿಸುವವನು ಮೊದಲು ಮುನ್ನಡೆಯ ಪ್ರಯೋಜನ ಪಡೆಯಲಿದ್ದಾನೆ.  

ಸ್ನೇಹಿತರೇ,

ಸಾಂಕ್ರಾಮಿಕ ಮತ್ತು ರಷ್ಯಾ – ಉಕ್ರೇನ್ ಯುದ್ಧದ ಅಡ್ಡ ಪರಿಣಾಮಗಳಿಂದ ನಾವು ಹೊರ ಬರುತ್ತಿದ್ದೇವೆ. ಸೆಮಿಕಂಡಕ್ಟರ್‌ ಕೇವಲ ನಮ್ಮ ಅಗತ್ಯತೆಯಲ್ಲ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಜಗತ್ತಿಗೆ ನಂಬಿಕಸ್ಥ, ವಿಶ್ವಾಸಾರ್ಹ ಪೂರೈಕೆ ವ್ಯವಸ್ಥೆ ಅಗತ್ಯವಾಗಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವಕ್ಕಿಂತ ಯಾರು ವಿಶ್ವಾಸಾರ್ಹ ಪಾಲುದಾರರಾಗಬಹುದು?. ಭಾರತದ ಮೇಲೆ ವಿಶ್ವದ ನಂಬಿಕೆ ಬಲವಾಗಿ ಬೆಳೆಯುತ್ತಿರುವುದಕ್ಕೆ ತಮಗೆ ಖುಷಿಯಾಗಿದೆ. ಮತ್ತು ಯಾಕೆ ಈ ನಂಬಿಕೆ?. ಇಂದು ಹೂಡಿಕೆದಾರರು ಭಾರತವನ್ನು ನಂಬುತ್ತಿದ್ದು, ಇದಕ್ಕೆ ಸ್ಥಿರ, ಜವಾಬ್ದಾರಿಯುತ ಮತ್ತು ಸುಧಾರಣೆ ಆಧಾರಿತ ಸರ್ಕಾರ ಕಾರಣ. ಭಾರತದ ಬಗ್ಗೆ ಕೈಗಾರಿಕಾ ವಲಯಕ್ಕೆ ವಿಶ್ವಾಸವಿದ್ದು, ಇದಕ್ಕೆ ಕಾರಣ ಪ್ರತಿಯೊಂದು ವಲಯದಲ್ಲಿ ಮೂಲ ಸೌಕರ್ಯದಲ್ಲಿ ಬೆಳವಣಿಗೆಯಾಗುತ್ತಿದೆ. ಇಲ್ಲಿ ತಂತ್ರಜ್ಞಾನ ಬೆಳೆಯುತ್ತಿರುವುದರಿಂದ ತಾಂತ್ರಿಕ ಕ್ಷೇತ್ರ ಭಾರತದ ಬಗ್ಗೆ ವಿಶ್ವಾಸ ಹೊಂದಿದೆ. ಸೆಮಿಕಂಡಕ್ಟರ್ ಉದ್ಯಮ ಭಾರತವನ್ನು ನಂಬಲು ಕಾರಣ, ನಮ್ಮಲ್ಲಿ ಬೃಹತ್ ಪ್ರತಿಭೆಗಳಿವೆ. ಕೌಶಲ್ಯಯುತ ತಂತ್ರಜ್ಞರು ಮತ್ತು ವಿನ್ಯಾಸಕಾರರು ನಮ್ಮ ಶಕ್ತಿ. ಜಗತ್ತಿನ ಅತ್ಯಂತ ಉಜ್ವಲ ಮತ್ತು ಏಕೀಕೃತ ಮಾರುಕಟ್ಟೆ ವ್ಯವಸ್ಥೆಯನ್ನು ಭಾರತ ಹೊಂದಿದ್ದು, ಜನತೆ ನಮ್ಮನ್ನು ನಂಬುತ್ತಾರೆ. ನಾವು ಭಾರತದಲ್ಲೇ ತಯಾರಿಸುವ ಬಗ್ಗೆ ಮಾತನಾಡಿದರೆ, ಭಾರತಕ್ಕಾಗಿಯೂ,  ಪ್ರಪಂಚಕ್ಕಾಗಿಯೂ ತಯಾರಿಸೋಣ ಎಂಬುದನ್ನು ಸಹ ಈ ಉದ್ದೇಶ ಒಳಗೊಂಡಿರುತ್ತದೆ.

 

ಸ್ನೇಹಿತರೇ,
ಜಾಗತಿಕ ಜವಾಬ್ದಾರಿತನವನ್ನು ಭಾರತ ಅರ್ಥಮಾಡಿಕೊಂಡಿದೆ ಮತ್ತು ಸ್ನೇಹಪರ ರಾಷ್ಟ್ರಗಳೊಂದಿಗೆ ಸಮಗ್ರ ನೀಲನಕ್ಷೆಯೊಂದಿಗೆ ಕಾರ್ಯನಿರ್ವಹಿಸಲಿದೆ. ಅದಕ್ಕಾಗಿಯೇ ಭಾರತ ಉಜ್ವಲ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಇತ್ತೀಚೆಗೆ ಕ್ವಾಂಟಮ್ ಮಿಷನ್ ಗೆ ಅನುಮೋದನೆ ನೀಡಲಾಗಿದೆ. ಹಾಲಿ ಸಂಸತ್ತಿನ ಅಧಿವೇಶನದಲ್ಲಿ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಮಸೂದೆಯನ್ನು ಮಂಡಿಸಲಾಗಿದೆ. ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ರಚಿಸಲು ಎಂಜಿನಿಯರಿಂಗ್ ಪಠ್ಯ ಕ್ರಮವನ್ನು ಪರಿಷ್ಕರಿಸಲಾಗುತ್ತಿದೆ. ಭಾರತದಲ್ಲಿ ಅಂತಹ 300 ಕ್ಕೂ ಕಾಲೇಜುಗಳನ್ನು ಗುರುತಿಸಲಾಗಿದ್ದು, ಅಲ್ಲಿ ಸೆಮಿಕಂಡಕ್ಟರ್ ಕೋರ್ಸ್ ಗಳು ಲಭ್ಯವಿದೆ. ಚಿಪ್ಸ್ ನಿಂದ ನವೋದ್ಯಮ ಕಾರ್ಯಕ್ರಮ ಇಂಜಿನಿಯರ್ ಗಳಿಗೆ ಅನುಕೂಲವಾಗಲಿದೆ.  ಮುಂದಿನ 5 ವರ್ಷಗಳಲ್ಲಿ ಅಂದಾಜು ಒಂದು ಲಕ್ಷಕ್ಕೂ ಅಧಿಕ ವಿನ್ಯಾಸ ಇಂಜಿನಿಯರ್ ಗಳನ್ನು ದೇಶದಲ್ಲಿ ತಯಾರು ಮಾಡಲಾಗುತ್ತದೆ. ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯಿಂದಾಗಿ ಸೆಮಿಕಂಡಕ್ಟರ್ ವಲಯ ಬಲಗೊಳ್ಳಲಿದೆ. ಸೆಮಿಕಾನ್‌ ಇಂಡಿಯಾದಲ್ಲಿ ನೀವೆಲ್ಲಾ ಭಾಗವಹಿಸಿರುವುದರಿಂದ ಮತ್ತು ಈ ಎಲ್ಲಾ ಆಯಾಮಗಳಿಂದ ನಿಮ್ಮ ವಿಶ್ವಾಸಕ್ಕೆ ಪುಷ್ಟಿ ದೊರೆಯುತ್ತಿದೆ ಎಂದರು.

ಸ್ನೇಹಿತರೇ,

ಕಂಡಕ್ಟರ್ಸ್‌ ಮತ್ತು ಇನ್ಸಲ್ಟರ್ಸ್‌ ನಡುವಿನ ವ್ಯತ್ಯಾಸದ ಬಗ್ಗೆ ನಿಮಗೆಲ್ಲಾ ತಿಳಿದಿದೆ. ಅನಲಾಗ್ ಕಂಡಕ್ಟರ್ ಮತ್ತು ಇನ್ಸುಲೇಟರ್ ಗಳು ಶಕ್ತಿಯ ವಾಹಕಗಳ ಮೂಲಕ ಹಾದು ಹೋಗುತ್ತವೆಯೇ ಹೊರತು ಇನ್ಸುಲೇಟರ್ ಗಳ ಮೂಲಕವಲ್ಲ. ಸೆಮಿಕಂಡಕ್ಟರ್ ಉದ್ಯಮಕ್ಕೆ ಉತ್ತಮ ಶಕ್ತಿವಾಹಕವಾಗಲು ಭಾರತ ಪ್ರತಿಯೊಂದು ಹಂತದಲ್ಲಿ ನೆರವಾಗುತ್ತಿದೆ. ಈ ವಲಯದಲ್ಲಿ ವಿದ್ಯುತ್ ಚ್ಛಕ್ತಿಯು ನಿರ್ಣಾಯಕವಾಗಿವೆ. ಕಳೆದೊಂದು ದಶಕದಲ್ಲಿ ಸೌರ ವಿದ್ಯುತ್ ಸ್ಥಾಪನಾ ಪ್ರಮಾಣ 20 ಪಟ್ಟು ಹೆಚ್ಚಾಗಿದೆ ಮತ್ತು ಈ ದಶಕದ ಅಂತ್ಯದ ವೇಳೆಗೆ 500 ಗಿಗಾವ್ಯಾಟ್ ಇಂಧನ ಸಾಮರ್ಥ್ಯ ಸ್ಥಾಪಿಸುವ ಗುರಿ ಹೊಂದಲಾಗಿದೆ. ಸೌರ ವಲಯದ ಪಿವಿ ಮಾದರಿಗಳು, ಹಸಿರು ಜಲ ಜನಕ ಮತ್ತು ವಿದ್ಯುದ್ವಿಭಜಕಗಳ ಕ್ಷೇತ್ರಗಳ ಉತ್ಪಾದನೆಯಲ್ಲಿ  ಕೈಗೊಂಡಿರುವ ಪ್ರಮುಖ ಹೆಜ್ಜೆಗಳನ್ನು ಇಡಲಾಗಿದೆ. ಭಾರತದಲ್ಲಿನ ನೀತಿ, ಸುಧಾರಣೆಗಳಿಂದಾಗಿ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ. ಹೊಸ ಉತ್ಪಾದನಾ ಘಟಕಗಳಿಗೆ ಹಲವಾರು ರೀತಿಯ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಇಂದು ಭಾರತದಲ್ಲಿ ಕಡಿಮೆ ಸಾಂಸ್ಥಿಕ ತೆರಿಗೆ ಇದ್ದು, ಮುಖರಹಿತ, ತಡೆರಹಿತ ತೆರಿಗೆ ಪದ್ಧತಿ ಇದ್ದು, ಅರಾಜಕತೆಯ ಕಾನೂನುಗಳನ್ನು ತೊಡೆದುಹಾಕಲಾಗಿದೆ. ವ್ಯಾಪಾರ ವಲಯದ ಸುಗಮತೆಯನ್ನು ಹೆಚ್ಚಿಸಲು ಸೆಮಿಕಂಡಕ್ಟರ್ ವಲಯಕ್ಕೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದೆ. ಈ  ನಿರ್ಧಾರಗಳು ಮತ್ತು ನೀತಿಗಳು ಭಾರತದ ಸೆಮಿಕಂಡಕ್ಟರ್ ಉದ್ಯಮಕ್ಕೆ ಕೆಂಪು ರತ್ನಗಂಬಳಿ ಹಾಸುವಂತಾಗಿದೆ. ಭಾರತ ಸುಧಾರಣೆಯ ಹಾದಿಯಲ್ಲಿ ಸಾಗಿದ್ದು, ಹೊಸ ಅವಕಾಶಗಳು ಸೃಷ್ಟಿಯಾಗಿವೆ. ಸೆಮಿಕಂಡಕ್ಟರ್ ವಲಯದ ಹೂಡಿಕೆಗೆ ಅತ್ಯುತ್ತಮ ನಿರ್ವಹಣೆ ಮಾಡಲಾಗುತ್ತಿದೆ.

 

ಸ್ನೇಹಿತರೇ,

ಈ ನಿರ್ಧಾರಗಳು ಮತ್ತು ನೀತಿಗಳು ಭಾರತ ಸಾಗುತ್ತಿರುವ ಹಾದಿಯನ್ನು ಬಿಂಬಿಸುತ್ತವೆ. ಜಾಗತಿಕ ಪೂರೈಕೆ ಸರಪಳಿ, ಕಚ್ಚಾ ವಸ್ತುಗಳು, ಕೌಶಲ್ಯಯುತ ಮಾನವ ಸಂಪನ್ಮೂಲ, ಯಂತ್ರೋಪಕರಣಗಳ ಅಗತ್ಯಗಳನ್ನು ಭಾರತ ಅರ್ಥಮಾಡಿಕೊಂಡಿದೆ. ಹೀಗಾಗಿಯೇ ನಾವು ನಿಮ್ಮೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ. ಖಾಸಗಿ ವಲಯದೊಂದಿಗೆ ನಾವು ನಿಕಟವಾಗಿ ಕೆಲಸ ಮಾಡಿ ಹೊಸ ಎತ್ತರಕ್ಕೆ ಏರಿದ್ದೇವೆ. ಅದು ಬಾಹ್ಯಾಕಾಶ ವಲಯವಿರಲಿ ಅಥವಾ ಭೌಗೋಳಿಕ ವಲಯವೇ ಇರಬಹುದು,  ನಾವು ಎಲ್ಲೆಡೆ ಅತ್ಯುತ್ತಮ ಫಲಿತಾಂಶವನ್ನೇ ಪಡೆದಿದ್ದೇವೆ. ಕಳೆದ ವರ್ಷದ ಸೆಮಿಕಂಡಕ್ಟರ್‌ ಸಮಾವೇಶದ ಬಗ್ಗೆ ನಿಮಗೆ ನೆನಪಿರಬಹುದು, ಸರ್ಕಾರ ಸೆಮಿಕಂಡಕ್ಟರ್‌ ವಲಯದಿಂದ ಸಲಹೆಗಳನ್ನು ಆಹ್ವಾನಿಸಿತ್ತು. ಈ ಸಲಹೆಗಳ ಆಧಾರದ ಮೇಲೆ ಸರ್ಕಾರ ಹಲವಾರು ನಿರ್ಧಾರಗಳನ್ನು ಕೈಗೊಂಡಿದೆ.  ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಇದೀಗ ತಂತ್ರಜ್ಞಾನ ಸಂಸ್ಥೆಗಳಿಗೆ ಶೇ 50 ರಷ್ಟು ಆರ್ಥಿಕ ನೆರವು ನೀಡಲಾಗುತ್ತಿದೆ. ನಾವು ಭಾರತದ ಸೆಮಿಕಂಡಕ್ಟರ್ ವಲಯದ ಪ್ರಗತಿಗಾಗಿ ನಿರಂತರವಾಗಿ ನೀತಿ ಸುಧಾರಣೆಗಳನ್ನು ತರುತ್ತಿದ್ದೇವೆ.

 

ಸ್ನೇಹಿತರೇ,

ಭಾರತದ ಜಿ-20 ಅಧ್ಯಕ್ಷತೆಯು “ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ” ವಿಷಯವನ್ನು ಹೊಂದಿದೆ. ಇದೇ ಮಾದರಿಯಲ್ಲಿ ಸೆಮಿಕಂಡಕ್ಟರ್ ವಲಯದಲ್ಲಿ ಪ್ರಮುಖ ಉತ್ಪಾದನಾ ತಾಣವನ್ನಾಗಿ ಮಾಡಲಾಗುತ್ತಿದೆ. ಭಾರತದ ಕೌಶಲ್ಯ, ಭಾರತದಲ್ಲಿನ ಸಾಮರ್ಥ್ಯ ಮತ್ತು ಭಾರತದಲ್ಲಿನ ಸಮರ್ಥತೆಯು ಜಗತ್ತಿನ ಪ್ರತಿಯೊಬ್ಬರಿಗೂ ಅನುಕೂಲವಾಗಬೇಕು ಎಂದು ಬಯಸುತ್ತದೆ. ಜಗತ್ತಿಗೆ ಉತ್ತಮವಾದದ್ದನ್ನು ಮಾಡಲು ಮತ್ತು ಉತ್ತಮ ಜಗತ್ತಿಗಾಗಿ ಭಾರತದ ಸಾಮರ್ಥ್ಯಕ್ಕೆ ಪುಷ್ಟಿ ನೀಡಲಾಗಿದೆ. ನಿಮ್ಮ ಪಾಲ್ಗೊಳ್ಳುವಿಕೆ, ನಿಮ್ಮ ಸಲಹೆಗಳು ಮತ್ತು ನಿಮ್ಮ ಆಲೋಚನೆಗಳಿಗೆ ಅತೀವ ಸ್ವಾಗತವಿದೆ. ಪ್ರತಿಯೊಂದು ಹಂತದಲ್ಲಿ ಭಾರತ ಸರ್ಕಾರ ನಿಮ್ಮ ಜೊತೆ ನಿಲ್ಲುತ್ತದೆ. ಸೆಮಿಕಾನ್‌ ಶೃಂಗಸಭೆಯಲ್ಲಿ ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ ಮತ್ತು ಇದೊಂದು ಅವಕಾಶವಾಗಿದೆ. ಕೆಂಪುಕೋಟೆ ಮೇಲಿನ ಭಾಷಣದಲ್ಲಿ ಹೇಳಿದ್ದೇ, ಇದು ಸಮಯ ಮತ್ತು ಇದು ನಿಜವಾದ ಸುಸಮಯ, ಇದು ಕೇವಲ ಭಾರತಕ್ಕಾಗಿ ಮಾತ್ರವಲ್ಲ, ಜಗತ್ತಿಗಾಗಿ. ಪ್ರತಿಯೊಬ್ಬರಿಗೂ ನನ್ನ ಶುಭ ಹಾರೈಕೆಗಳು, ಧನ್ಯವಾದಗಳು.

ಹಕ್ಕು ನಿರಾಕರಣ; ಇದು ಪ್ರಧಾನಿ ಭಾಷಣದ ಅಂದಾಜು ಅನುವಾದ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಿದ್ದರು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ನವೆಂಬರ್ 2024
November 21, 2024

PM Modi's International Accolades: A Reflection of India's Growing Influence on the World Stage