Quote“ಉನ್ನತ ಬೆಳವಣಿಗೆಯ ವೇಗ ಕಾಯ್ದುಕೊಳ್ಳಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ”
Quote“ನಾವು ಹಲವು ಮೂಲಭೂತ ಸುಧಾರಣೆಗಳನ್ನು ತಂದಿದ್ದೇವೆ ಮತ್ತು ಎಂ.ಎಸ್.ಎಂ.ಇ ವಲಯವನ್ನು ಬಲಗೊಳಿಸಲು ಹೊಸ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಈ ಸುಧಾರಣೆಗಳ ಯಶಸ್ಸು ಅವುಗಳ ಹಣಕಾಸು ಬಲಪಡಿಸುವಿಕೆಯ ಮೇಲೆ ಅವಲಂಬಿತವಾಗಿದೆ”
Quote“ನಮ್ಮ ಹಣಕಾಸು ವಲಯ ಹೊಸ ಆರ್ಥಿಕತೆ ಮತ್ತು ಹೊಸ ಭವಿಷ್ಯದ ಕಲ್ಪನೆಗಳು ಮತ್ತು ಉಪಕ್ರಮಗಳ ಸುಸ್ಥಿರ ಅಪಾಯ ನಿರ್ವಹಣೆಯನ್ನು ಸಹ ಪರಿಗಣಿಸಬೇಕಾಗುತ್ತದೆ”
Quote“ಭಾರತದ ಮಹತ್ವಾಕಾಂಕ್ಷೆಗಳು ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿಯೊಂದಿಗೆ ಸಂಪರ್ಕ ಹೊಂದಿವೆ”
Quote“ಪರಿಸರ ಸ್ನೇಹಿ ಯೋಜನೆಗಳ ವೇಗವರ್ಧನೆ ಅಗತ್ಯ. ಹಸಿರು ಹಣಕಾಸು ಮತ್ತು ಅಂತಹ ಹೊಸ ಅಂಶಗಳ ಅಧ್ಯಯನ ಮತ್ತು ಅನುಷ್ಠಾನ ಇಂದಿನ ಅಗತ್ಯ”

ನಮಸ್ಕಾರಗಳು!

ಎಲ್ಲಾ ನನ್ನ ಸಂಪುಟ ಸಹೋದ್ಯೋಗಿಗಳೇ, ಆರ್ಥಿಕತೆ ಮತ್ತು ಹಣಕಾಸು ವಲಯದ ತಜ್ಞರೇ, ಪಾಲುದಾರರೇ, ಮಹಿಳೆಯರೇ ಮತ್ತು ಮಹನೀಯರೇ!

ಮೊದಲಿಗೆ ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಎಲ್ಲರಿಗೂ ನನ್ನ ಶುಭಾಶಯಗಳು. ನಾವಿಂದು ಬಜೆಟ್ ಕುರಿತು ಚರ್ಚೆ ನಡೆಸುತ್ತಿದ್ದೇವೆ. ಅತಿ ದೊಡ್ಡ ದೇಶ ಭಾರತ, ಇಲ್ಲಿನ ಹಣಕಾಸು ಸಚಿವೆ ಮಹಿಳೆ ಎನ್ನುವುದನ್ನು ಪ್ರಸ್ತಾಪಿಸಲು ಅತೀವ ಹೆಮ್ಮೆಯಾಗುತ್ತಿದ್ದು, ಈ ಬಾರಿ ಅವರು ಪ್ರಗತಿಪರ ಬಜೆಟ್ ಮಂಡಿಸಿದ್ದಾರೆ.    

ಸ್ನೇಹಿತರೇ,

100 ವರ್ಷಗಳಲ್ಲೇ ಅತಿದೊಡ್ಡ ಸಾಂಕ್ರಾಮಿಕದ ನಡುವೆ ಭಾರತದ ಆರ್ಥಿಕತೆ ಮತ್ತೊಮ್ಮೆ ವೇಗ ಪಡೆದುಕೊಳ್ಳುತ್ತಿದೆ. ಇದು ನಮ್ಮ ಆರ್ಥಿಕ ವಲಯದ ತೀರ್ಮಾನಗಳು ಮತ್ತು ನಮ್ಮ ಆರ್ಥಿಕತೆಯ ದೃಢವಾದ ಅಡಿಪಾಯದ ಪ್ರತಿಫಲವಾಗಿದೆ. ಈ ಬಜೆಟ್ ನಲ್ಲಿ ಸರ್ಕಾರ ಹಲವಾರು ಹೆಜ್ಜೆಗಳನ್ನು ಇರಿಸಿದ್ದು, ತ್ವರಿತ ಬೆಳವಣಿಗೆಯ ವೇಗ ಮುಂದುವರಿಯಲಿದೆ. ವಿದೇಶಿ ಹೂಡಿಕೆಯನ್ನು ಉತ್ತೇಜಿಸುವ, ಮೂಲಸೌಕರ್ಯ ವಲಯಕ್ಕೆ ತೆರಿಗೆಯನ್ನು ಕಡಿತಗೊಳಿಸುವ, ಎನ್.ಐ.ಐ.ಎಫ್, ಜಿ.ಐ.ಎಫ್.ಟಿ ಮತ್ತು ಹೊಸ ಎಫ್.ಡಿ.ಐ ಸಂಸ್ಥೆಗಳನ್ನು ರಚಿಸುವ ಮೂಲಕ ತ್ವರಿತ ಹಣಕಾಸು ಮತ್ತು ಆರ್ಥಿಕ ಬೆಳವಣಿಗೆಯನ್ನು ವೇಗವರ್ಧಿಸಲು ಪ್ರಯತ್ನಿಸುತ್ತಿದೆ. ಹಣಕಾಸು ವಲಯದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ವಿಸ್ತೃತವಾಗಿ ಬಳಕೆ ಮಾಡುವ ಬದ್ಧತೆಯೊಂದಿಗೆ ದೇಶವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುತ್ತಿದೆ. 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳು ಮತ್ತು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ [ಸಿಡಿಬಿಸಿಗಳು] ನಮ್ಮ ದೃಷ್ಟಿಯನ್ನು ಪ್ರತಿಬಿಂಬಿಸುತ್ತಿದೆ.      

ಸ್ನೇಹಿತರೇ

21ನೇ ಶತಮಾನದಲ್ಲಿ ಭಾರತದ ಅಭಿವೃದ್ಧಿಗೆ ವೇಗ ನೀಡಲು ನಮ್ಮ ಎಲ್ಲಾ ಆದ್ಯತಾ ವಲಯಗಳಲ್ಲಿ ನಾವು ಆರ್ಥಿಕ ಕಾರ್ಯಸಾಧ್ಯ ಮಾದರಿಗಳಿಗೆ ಒತ್ತು ನೀಡಬೇಕು. ಇಂದು ದೇಶದ ಮಹತ್ವಾಕಾಂಕ್ಷೆಗಳು, ದೇಶ ಯಾವ ಆಕಾಂಕ್ಷೆಗಳೊಂದಿಗೆ ಮುಂದುವರಿಯಲು ಬಯಸುತ್ತದೆ ಮತ್ತು ದೇಶದ ಆದ್ಯತೆಗಳಿಗೆ ಹಣಕಾಸು ಸಂಸ್ಥೆಗಳು ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯವಾಗಿದೆ. ಇಂದು ದೇಶ ಆತ್ಮ ನಿರ್ಭರ ಭಾರತ ಅಭಿಯಾನವನ್ನು ನಡೆಸುತ್ತಿದೆ. ಇಂದು ನಮ್ಮ ದೇಶ ಕೆಲವು ವಲಯಗಳಲ್ಲಿ ಇತರೆ ದೇಶಗಳ ಮೇಲೆ ಅವಲಂಬಿತವಾಗಿದ್ದು, ಇತರೆ ದೇಶಗಳಿಂದ ನಮ್ಮ ದೇಶದ ಅವಲಂಬನೆಯನ್ನು ಕಡಿಮೆ ಮಾಡಲು ಅಂತಹ ಯೋಜನೆಗಳಲ್ಲಿ ಹಣಕಾಸಿನ ವಿವಿಧ ಮಾದರಿಗಳ ಬಗ್ಗೆ ಬುದ್ದಿಮತ್ತೆಯನ್ನು ರೂಪಿಸುವ ಅಗತ್ಯವಿದೆ. ಇದಕ್ಕೆ ಉದಾಹರಣೆ ಎಂದರೆ ರಾಷ್ಟ್ರೀಯ ಪ್ರಮುಖ ಯೋಜನೆ ಪಿಎಂ ಗತಿಶಕ್ತಿ. ಇದಕ್ಕೆ ಸಂಬಂಧಿಸಿದ ಯೋಜನೆಗಳ ಯಶಸ್ಸಿನಲ್ಲಿ ನೀವು ಪ್ರಮುಖ ಪಾತ್ರ ಹೊಂದಬೇಕೆಂದು ನಾವು ಬಯಸುತ್ತೇವೆ. ದೇಶದ ಸಮತೋಲಿತ ಅಭಿವೃದ್ಧಿಯನ್ನು ರೂಪಿಸುವ ದಿಕ್ಕಿನಲ್ಲಿ ಭಾರತ ಸರ್ಕಾರ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದಂತಹ ಯೋಜನೆಗಳನ್ನು ಹೊರತಂದಿದೆ. ಸಂಬಂಧಪಟ್ಟ ರಾಜ್ಯಗಳಲ್ಲಿ ಸರಾಸರಿಗಿಂತ ಕಡಿಮೆ ಇರುವ 100 ಕ್ಕೂ ಹೆಚ್ಚು ಜಿಲ್ಲೆಗಳನ್ನು ದೇಶದಲ್ಲಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಇಂತಹ ಯೋಜನೆಗಳಿಗೆ ಹಣಕಾಸು ಸಂಸ್ಥೆಗಳು ಆದ್ಯತೆ ನೀಡಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. ಈ ಎಲ್ಲಾ ನಮ್ಮ ಮಹತ್ವಾಕಾಂಕ್ಷಿ ಜಿಲ್ಲೆಗಳು ಈಗಲೂ ಹಿಂದೆ ಉಳಿದಿವೆ. ಇದೇ ಕಾಲಕ್ಕೆ ನಾವು ಇವುಗಳನ್ನು ಮುಂದೆ ತರಬೇಕಿದ್ದು, ನಾವೀಗ ಪೂರ್ವ ಭಾರತವನ್ನು ನೋಡಿದರೆ ಅಲ್ಲಿ ನಾವು ಬಹಳಷ್ಟು ಆರ್ಥಿಕ ಚಟುವಟಿಕೆಗಳನ್ನು ಕಾಣುತ್ತೇವೆ. ಪೂರ್ವ ಭಾರತದಲ್ಲಿ ಎಲ್ಲಾ ರೀತಿಯ ನೈಸರ್ಗಿಕ ಸಂಪನ್ಮೂಲಗಳಿದ್ದು, ಆರ್ಥಿಕ ಬೆಳವಣಿಗೆ ದೃಷ್ಟಿಯಲ್ಲಿ ನೋಡಿದರೆ ಅಲ್ಲಿ ಪರಿಸ್ಥಿತಿ ಇನ್ನಷ್ಟು ಸುಧಾರಿಸಬೇಕಾಗಿದೆ ಮತ್ತು ಮೂಲಸೌಕರ್ಯ ವಲಯದಲ್ಲೂ ಸುಧಾರಣೆಯಾಗಬೇಕಾಗಿದೆ. ಇದೇ ಸಂದರ್ಭದಲ್ಲಿ ಸಂಪೂರ್ಣ ಈಶಾನ್ಯ ಭಾಗ ಮತ್ತು ಇದರ ಅಭಿವೃದ್ಧಿ ನಮ್ಮ ಆದ್ಯತೆಯಾಗಿದೆ. ಈ ಕ್ಷೇತ್ರಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ದಿಕ್ಕಿನಲ್ಲಿ ಯೋಚಿಸುವುದು ಸಹ ಅಗತ್ಯವಾಗಿದೆ. ಇಂದು ಭಾರತದ ಮಹತ್ವಾಕಾಂಕ್ಷೆ ಎಂ.ಎಸ್.ಎಂ.ಇ ವಲಯವನ್ನು ಬಲಗೊಳಿಸುವ ನಿಟ್ಟಿನಲ್ಲಿ ಸಂಪರ್ಕ ಹೊಂದಿದೆ. ಎಂ.ಎಸ್.ಎಂ.ಇ ಬಲವರ್ಧನೆಯಲ್ಲಿ ನಾವು ಹಲವಾರು ಮೂಲಭೂತ ಸುಧಾರಣೆಗಳನ್ನು ತಂದಿದ್ದೇವೆ ಮತ್ತು ಹೊಸ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಈ ಸುಧಾರಣೆಗಳ ಯಶಸ್ಸು ಅವುಗಳ ಹಣಕಾಸು ಬಲಪಡಿಸುವುದರ ಮೇಲೆ ಅವಲಂಬಿತವಾಗಿದೆ.   

|

ಸ್ನೇಹಿತರೇ,

ನಾವು ಆಧುನಿಕ 4.0 ಕೈಗಾರಿಕಾ ವಲಯದ ಕುರಿತು ಮಾತನಾಡಿದರೆ ನಾವು ಬಯಸಿದ ಫಲಿತಾಂಶ ಸಿಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಆದ್ದರಿಂದ ವಿಳಂಬ ತಪ್ಪಿಸಲು ಏನು ಮಾಡಬೇಕು?.  ಜಾಗತಿಕವಾಗಿ 4.0 ಕುರಿತು ಮಾತನಾಡುತ್ತಿದ್ದಂತೆ ಅದರ ಮುಖ್ಯ ಆಧಾರ ಸ್ತಂಭಗಳಾದ ಫಿನ್ ಟೆಕ್, ಅಗ್ರಿಟೆಕ್ ಮತ್ತು ಮೆಡಿಟೆಕ್ ಗೆ 4.0 ಕೌಶಲ್ಯವನ್ನು ಒದಗಿಸುವ ಅಗತ್ಯದ ಬಗ್ಗೆ ಚಿಂತಿಸಬೇಕಿದೆ. ಹೀಗಾಗಿ 4.0 ಕೌಶಲ್ಯ ಅಭಿವೃದ್ಧಿಗಾಗಿ ಈ ಪ್ರಮುಖ ಆಧಾರ ಸ್ತಂಭಗಳಿಗೆ ಹಣಕಾಸು ಸಂಸ್ಥೆಗಳು ಹೇಗೆ ಆದ್ಯತೆ ನೀಡಬಹುದು, 4.0 ತಂತ್ರಜ್ಞಾನದ ಹಿನ್ನೆಲೆಯಲ್ಲಿ ಹೇಗೆ ಹಣಕಾಸು ಸಂಸ್ಥೆಗಳು ಒತ್ತು ನೀಡಬಹುದು?. ಇಂತಹ ಅನೇಕ ಕ್ಷೇತ್ರಗಳಲ್ಲಿ ಹಣಕಾಸು ಸಂಸ್ಥೆಗಳ ಸಹಾಯದಿಂದ 4.0 ಕೈಗಾರಿಕಾ ವಲಯದಲ್ಲಿ ಭಾರತವನ್ನು ಹೇಗೆ ಹೊಸ ಎತ್ತರಕ್ಕೆ ಕೊಂಡೊಯ್ಯುಬಹುದು ಎಂಬ ಚಿಂತನೆ ಬೇಕಾಗಿದೆ. 

ಸ್ನೇಹಿತರೇ

ಒಬ್ಬ ಆಟಗಾರ ಒಲಿಂಪಿಕ್ಸ್ ನಲ್ಲಿ ಸ್ವರ್ಣಪದಕ ಗೆದ್ದರೆ ಆತ ಇಡೀ ದೇಶಕ್ಕೆ ಖ್ಯಾತಿ ತರುವುದನ್ನು ನೀವು ನೋಡಿದ್ದೀರಿ. ದೇಶದಲ್ಲೂ ದೊಡ್ಡಮಟ್ಟದ ವಿಶ್ವಾಸ ತುಂಬಿದಂತಾಗುತ್ತದೆ. ಒಬ್ಬ ಆಟಗಾರ ಪದಕ ತಂದರೆ ಇಡೀ ವಾತಾವರಣವೇ ಬದಲಾಗುತ್ತದೆ. ಅದೇ ಮನೋಭಾವನೆಯನ್ನು ನಾವು ದೇಶದ ಇತರೆ ಕ್ಷೇತ್ರಗಳಲ್ಲಿ ಯೋಚಿಸಲು ಮತ್ತು ಅನ್ವಯಿಸಲು ಸಾಧ್ಯವಿಲ್ಲವೇ?. ನಾವು ಈಗ ಅಂತಹ 8 ಅಥವಾ 10 ಕ್ಷೇತ್ರಗಳನ್ನು ಗುರುತಿಸಬಹುದು ಮತ್ತು ಆ ಕ್ಷೇತ್ರಗಳಲ್ಲಿ ಭಾರತ ಅಗ್ರ 3 ಸ್ಥಾನಗಳನ್ನು ಪಡೆದುಕೊಳ್ಳಲು ನಾವು ಶ್ರಮಿಸಬಹುದೇ?. ಹೌದು ಇದನ್ನು ಖಾಸಗಿ ವಲಯದ ಪಾಲ್ಗೊಳ್ಳುವಿಕೆಯಿಂದ ಸಾಧ್ಯವಾಗಿಸಬಹುದು. ಉದಾಹರಣೆಗೆ ನಿರ್ಮಾಣ ಕಂಪೆನಿಗಳಲ್ಲಿ ಜಗತ್ತಿನ 3 ಪ್ರಮುಖ ಸ್ಥಾನಗಳನ್ನು ಪಡೆಯಲು ನಮಗೆ ಸಾಧ್ಯವಿಲ್ಲವೇ. ಇದೇ ಪರಿಸ್ಥಿತಿಯಲ್ಲಿ ನವೋದ್ಯಮಗಳ ವಿಚಾರಕ್ಕೆ ಬಂದಾಗ ನಾವು ಮುಂದೆ ಸಾಗುತ್ತಿದ್ದೇವೆ. ಅವರ ಉತ್ಪನ್ನಗಳ ಗುಣಮಟ್ಟ, ಅವುಗಳ ಅನನ್ಯತೆ ಮತ್ತು ತಾಂತ್ರಿಕ ನೆಲೆಯಲ್ಲಿ ನಾವು ಅಗ್ರ 3 ರಲ್ಲಿ ಬರಬಹುದೇ?. ಇದೀಗ ನಾವು ಡ್ರೋನ್ ವಲಯ, ಬಾಹ್ಯಾಕಾಶ ವಲಯ, ಭೂ ವಿಶೇಷ ವಲಯವನ್ನು ಮುಕ್ತಗೊಳಿಸಿದ್ದೇವೆ. ಇವುಗಳು ಪ್ರಮುಖ ನೀತಿ ನಿರ್ಧಾರಗಳು. ಇವುಗಳು ಆಟದ ಗತಿಯನ್ನೆ ಬದಲಿಸುವ ಕ್ರಮಗಳು, ಭಾರತದ ಹೊಸ ತಲೆಮಾರಿನ ಜನತೆ ಬಾಹ್ಯಾಕಾಶ, ಡ್ರೋನ್ ವಲಯಕ್ಕೆ ಬರುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ನಾವು ಈ ವಲಯಗಳಲ್ಲಿ ಜಗತ್ತಿನ ಪ್ರಮುಖ ಮೂರು ಸ್ಥಾನಗಳಿಗೆ ಏರಲು ಸಾಧ್ಯವಿಲ್ಲವೇ?. ನಮ್ಮ ಎಲ್ಲಾ ಸಂಸ್ಥೆಗಳು ಇದಕ್ಕೆ ನೆರವು ನೀಡಲು ಸಾಧ್ಯವಿಲ್ಲವೇ?. ಆದರೆ ಇದೆಲ್ಲವೂ ಆಗಬೇಕಾದರೆ ಈ ಕ್ಷೇತ್ರಗಳಲ್ಲಿ ಈಗಾಗಲೇ ಮುಂದಿರುವ ಕಂಪೆನಿಗಳು, ಉದ್ಯಮಿಗಳು ಕ್ರಿಯಾಶೀಲವಾಗಿರಬೇಕಾಗುತ್ತದೆ. ಅವುಗಳಿಗೆ ನಮ್ಮ ಆರ್ಥಿಕ ವಲಯದಿಂದ ಎಲ್ಲಾ ಬೆಂಬಲ ಪಡೆಯುವುದು ಮುಖ್ಯವಾಗಿದೆ. ಈ ರೀತಿಯ ಅವಶ್ಯಕತೆಗಳನ್ನು ಪೂರೈಸಲು ಹಣಕಾಸು ಸಂಸ್ಥೆಗಳು ತಮ್ಮ ಸಾಮರ್ಥ್ಯವನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬ ಕುರಿತು ಪರಿಣತಿ ಹೊಂದಿರಬೇಕು. ಇಲ್ಲವಾದಲ್ಲಿ ಸಾಕಷ್ಟು ಗೊಂದಲಗಳು ನಿರ್ಮಾಣವಾಗುತ್ತವೆ. ನಮ್ಮ ಕಂಪೆನಿಗಳು ಮತ್ತು ನವೋದ್ಯಮಗಳು ಹೊಸಶೋಧ, ಹೊಸ ತಂತ್ರಜ್ಞಾನ, ಹೊಸ ಮಾರುಕಟ್ಟೆಯನ್ನು ಹುಡುಕುವ ಮತ್ತು ಹೊಸ ಆಲೋಚನೆಗಳೊಂದಿಗೆ ಮಾತ್ರ ಉದ್ಯಮಶೀಲತೆಯ ಕ್ರಮಗಳನ್ನು ವಿಸ್ತರಿಸಬಹುದು. ಹಾಗೆ ಮಾಡಲು ಅವರಿಗೆ ಹಣಕಾಸು ಒದಗಿಸುವರು ಭವಿಷ್ಯದ ಈ ಆಲೋಚನೆಗಳ ಬಗ್ಗೆ ಆಳವಾದ ತಿಳಿವಳಿಕೆ ಹೊಂದಿರಬೇಕು. ನಮ್ಮ ಹಣಕಾಸು ವಲಯ ಹೊಸ ಭವಿಷ್ಯದ ಆಲೋಚನೆಗಳು ಮತ್ತು ಉಪಕ್ರಮಗಳು, ನಾವೀನ್ಯತೆಯ ಹಣಕಾಸು ನೆರವು ಮತ್ತು ಸುಸ್ಥಿರ ಅಪಾಯ ನಿರ್ವಹಣೆಯಂತಹ ಕ್ರಮಗಳನ್ನು ಪರಿಗಣಿಸಬೇಕಾಗುತ್ತದೆ.

ಸ್ನೇಹಿತರೇ,

ಇಂದು ನಿಮಗೆಲ್ಲಾ ತಿಳಿದಿರುವಂತೆ ಭಾರತದ ಅಗತ್ಯಗಳನ್ನು ಪೂರೈಸಲು ಸ್ವಾವಲಂಬನೆಗೆ ಆದ್ಯತೆ ನೀಡಲಾಗಿದೆ ಮತ್ತು ನಾವು ಹೆಚ್ಚು ಹೆಚ್ಚು ರಫ್ತು ವಲಯದಲ್ಲಿ ಬೆಳವಣಿಗೆ ಸಾಧಿಸಬೇಕಾಗಿದೆ. ರಫ್ತುದಾರರಿಗೆ ವಿವಿಧ ರೀತಿಯಲ್ಲಿ ಹಣಕಾಸು ಅಗತ್ಯಗಳಿವೆ. ಈ ಬೇಡಿಕೆಗಳಿಗೆ ಅನುಗುಣವಾಗಿ ರಫ್ತುದಾರರಿಗೆ ಬೇಕಾಗಿರುವ ವಸ್ತುಗಳು ಮತ್ತು ಸೇವೆಗಳನ್ನು ನೀವು ಅಭಿವೃದ್ಧಿಪಡಿಸಬಹುದು?. ನೀವು ಇದಕ್ಕೆ ಆದ್ಯತೆ ನೀಡಿದರೆ ಅವರು ಬಲಿಷ್ಠರಾಗುತ್ತಾರೆ ಮತ್ತು ದೇಶದ ರಫ‍್ತು ವಲಯದ ಬಲವರ್ಧನೆಯಾಗಲಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಗೋಧಿಗೆ ಜಗತ್ತಿನಾದ್ಯಂತ ಬೇಡಿಕೆ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಹಣಕಾಸು ಸಂಸ್ಥೆಗಳು ಗೋಧಿ ರಫ್ತು ವಲಯದತ್ತ ಗಮನ ನೀಡಬಹುದಲ್ಲವೇ?.  ನಮ್ಮ ರಫ್ತು ಮತ್ತು ಆಮದು ಇಲಾಖೆ ಈ ನಿಟ್ಟಿನಲ್ಲಿ ಗಮನ ಕೊಡಬಹುದಲ್ಲವೇ?. ಬಂದರು ಕೈಗಾರಿಕಾ ವಲಯ ಕೂಡ ಇತ್ತ ಚಿತ್ತಹರಿಸಬಹುದು?. ನಮಗೆ ಈ ದಿಸೆಯಲ್ಲಿ ಸಮಗ್ರ ಪ್ರಯತ್ನದ ಅಗತ್ಯವಿದೆ.  ಆದ್ದರಿಂದ ನಮಗೆ ನಮ್ಮ ಗೋಧಿಯನ್ನು ಜಗತ್ತಿನಾದ್ಯಂತ ರವಾನಿಸಲು ಅವಕಾಶ ದೊರೆತಿದೆ. ಆರಂಭದಿಂದಲೇ ಉತ್ತಮ ಗುಣಮಟ್ಟ ಮತ್ತು ಉತ್ತಮ ಸೇವೆ ನೀಡಿದರೆ ಗಣನೀಯವಾಗಿ ನಾವು ಶಾಶ್ವತವಾಗಿ ಭವಿಷ್ಯ ಕಂಡುಕೊಳ್ಳಬಹುದು.

ಸ್ನೇಹಿತರೇ

ಗ್ರಾಮೀಣ ಆರ್ಥಿಕತೆಯು ಭಾರತ ಆರ್ಥಿಕತೆಯ ಪ್ರಮುಖ ನೆಲೆಯನ್ನು ರೂಪಿಸುತ್ತದೆ. ಅದನ್ನು ನಾವು ಅಲ್ಲಗಳೆಯುವಂತಿಲ್ಲ ಮತ್ತು ಗ್ರಾಮೀಣ ಆರ್ಥಿಕತೆ ವಿಶಾಲ ತಳಹದಿಯಲ್ಲಿದ್ದು, ಕ್ರಮೇಣ ಅದು ವಿಸ್ತಾರವಾಗುತ್ತದೆ. ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಇದು ಸಣ‍್ಣ ಪ್ರಯತ್ನಗಳನ್ನು ಬಯಸಲಿದ್ದು, ಸ್ವಸಹಾಯ ಗುಂಪುಗಳನ್ನು ಉತ್ತೇಜಿಸುವಂತಹ ಫಲಿತಾಂಶಗಳು ಬೇಕಾಗಿವೆ. ಸ್ವ-ಸಹಾಯ ಗುಂಪುಗಳಿಗೆ ನಾವು ಸಮಗ್ರ ನೆರವು ನೀಡಲು ಸಾಧ್ಯವಿಲ್ಲವೇ?, ಹಣಕಾಸು, ತಂತ್ರಜ್ಞಾನ ಮತ್ತು ಸಾಕಾರಾತ್ಮಕವಾಗಿ ಮಾರುಕಟ್ಟೆಯನ್ನು ಒದಗಿಸಲು ಸಾಧ್ಯವಿಲ್ಲವೇ?, ಉದಾಹರಣೆಗೆ ಕಿಸಾನ್ ಕ್ರಿಡಿಟ್ ಕಾರ್ಡ್ ಗಳು, ಗುರಿ ತಲುಪುವಂತೆ ನಾವು ಕೆಲಸ ಮಾಡಿದರೆ ಪ್ರತಿಯೊಬ್ಬ ರೈತ, ಮೀನುಗಾರ, ಜಾನುವಾರುಗಳನ್ನು ಸಾಕುವವರು ಕ್ರಿಡಿಟ್ ಕಾರ್ಡ್ ಗಳನ್ನು ಪಡೆಯಬಹುದು. ದೇಶದಲ್ಲಿಂದು ಸಹಸ್ರಾರು ರೈತ ಉತ್ಪನ್ನ ಒಕ್ಕೂಟಗಳನ್ನು ರಚಿಸಲಾಗಿದೆ ಮತ್ತು ಇವುಗಳಿಂದ ಹಲವಾರು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೆಲವು ರಾಜ್ಯಗಳಲ್ಲಿ ಸಾಕಾರಾತ್ಮಕ ಫಲಿತಾಂಶಗಳನ್ನು ನೋಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಹೇಗೆ ಕಾರ್ಯನಿರ್ವಹಿಸಬಹುದು? ಎಂಬುದರತ್ತ ಆಲೋಚಿಸಬೇಕು. ನಾವು ಕೃಷಿಯನ್ನೇ  ಪರಿಗಣಿಸೋಣ, ಜೇನುತುಪ್ಪದ ವಿಚಾರಕ್ಕೆ ಬಂದಲ್ಲಿ ಈ ಮುಂಚೆ ಭಾರತದಲ್ಲಿ ಯಾರೊಬ್ಬರೂ  ಈ ಬಗ್ಗೆ ಗಮನಹರಿಸಿರಲಿಲ್ಲ. ಆದರೆ ಈಗ ಜೇನುತುಪ್ಪದ ವಲಯದಲ್ಲಿ ಶ್ಲಾಘನೀಯ ಕೆಲಸವನ್ನು ಮಾಡುತ್ತಿದ್ದೇವೆ. ಆದಾಗ್ಯೂ ನಮಗೆ ಈಗ ಜಾಗತಿಕ ಮಾರುಕಟ್ಟೆ ಅಗತ್ಯವಿದೆ. ಆದ್ದರಿಂದ ಜಾಗತಿಕ ಮಾರುಕಟ್ಟೆ, ಬ್ರ್ಯಾಂಡಿಂಗ್, ಮಾರಾಟ ಕ್ರಮಗಳು ಮತ್ತು ಹಣಕಾಸಿನ ಸಹಾಯವನ್ನು ಪಡೆಯುವ ವಿಷಯಗಳಲ್ಲಿ ನಾವು ಹೇಗೆ ಕೆಲಸ ಮಾಡಬಹುದು, ಅದೇ ರೀತಿ ಇಂದು ದೇಶದ ಲಕ್ಷಾಂತರ ಹಳ್ಳಿಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ನಮ್ಮ ನೀತಿಗಳಲ್ಲಿ ಇಂತಹ ವಿಷಯಗಳಿಗೆ ಆದ್ಯತೆ ನೀಡಿದರೆ ದೇಶದ ಗ್ರಾಮೀಣ ಆರ್ಥಿಕತೆಗೆ ಪುಷ್ಟಿ ದೊರೆಯುತ್ತದೆ. ಇಂತಹ ಸೇವಾ ಕೇಂದ್ರಗಳಲ್ಲಿ ನಮ್ಮ ಹಳ್ಳಿಗಳು ಅತಿ ಹೆಚ್ಚು ಲಾಭ ಪಡೆಯಲಿವೆ. ಇಂದು ಹಳ್ಳಿಗಳ ಜತೆ ಯಾರೂ ಕೂಡ ರೈಲ್ವೆ ಮುಂಗಡ ಟಿಕೆಟ್ ಕಾಯ್ದಿರಿಸಲು ನಗರ ಪ್ರದೇಶಗಳಿಗೆ ತೆರಳುವುದಿಲ್ಲ. ಬದಲಿಗೆ ಅವರು ಸೇವಾ ಕೇಂದ್ರಗಳಿಗೆ ತೆರಳುತ್ತಾರೆ ಮತ್ತು ಮುಂಗಡ ಟಿಕೆಟ್ ಪಡೆಯುತ್ತಾರೆ. ಮತ್ತು ಇಂದು ನಾವು ಪ್ರತಿಯೊಂದು ಹಳ್ಳಿಗಳಲ್ಲಿ ಆಪ್ಟಿಕಲ್ ಪೈಬರ್ ಕೇಬಲ್  ಜಾಲದ ಮೂಲಕ ಬ್ರ್ಯಾಡ್ ಬ್ಯಾಂಡ್ ಸಂಪರ್ಕ ವ್ಯವಸ್ಥೆ ಹೊಂದಿದ್ದೇವೆ. ಸರ್ಕಾರ ಡಿಜಿಟಲ್ ಹೆದ್ದಾರಿ ರೂಪಿಸಿದೆ; ಇದನ್ನು ಸರಳ ಭಾಷೆಯಲ್ಲಿ ಹೇಳುವುದಾದರೆ ಇದನ್ನು ಡಿಜಿಟಲ್ ರಸ್ತೆ ಎಂದು ಕರೆಯಬಹುದು. ಏಕೆಂದರೆ ನಾವು ಹಳ್ಳಿಗಳಿಗೆ ಡಿಜಿಟಲ್ ವ್ಯವಸ್ಥೆಯನ್ನು ಕೊಂಡೊಯ್ದಿದ್ದೇವೆ.  ಹಾಗಾಗಿ ನಾವು ಡಿಜಿಟಲ್ ಕಟ್ಟಡಗಳನ್ನು ನಿರ್ಮಿಸುತ್ತಿದ್ದೇವೆ. ನಾವು ಡಿಜಿಟಲ್ ರಸ್ತೆಗಳನ್ನು ನಿರ್ಮಿಸಿ ನಾವು ದೊಡ್ಡ ಹೆದ್ದಾರಿಗಳ ಮೂಲಕ ಹಳ್ಳಿಗಳನ್ನು ತಲುಪಬೇಕಾಗಿದೆ. ಸಾಮಾನ್ಯ ಜನರ ಹಿತದೃಷ್ಟಿಯಿಂದ ನಾವು ಡಿಜಿಟಲ್  ರಸ್ತೆ ಅಭಿಯಾನವನ್ನು ಉತ್ತೇಜಿಸಬೇಕಾಗಿದೆ. ಪ್ರತಿಯೊಂದು ಮತ್ತು ಎಲ್ಲಾ ಹಳ್ಳಿಗಳಲ್ಲಿ ಹಣಕಾಸು ಒಳಗೊಳ್ಳುವಿಕೆಯ ಪ್ರತಿಯೊಂದು ಉತ್ಪನ್ನಗಳನ್ನು ಗ್ರಾಮಮಟ್ಟಕ್ಕೆ ಕೊಂಡೊಯ್ಯಬೇಕಾಗಿದೆ. ಆಹಾರ ಸಂಸ್ಕರಣೆ ಕೃಷಿಯೊಂದಿಗೆ ಸಹಭಾಗಿತ್ವ ಹೊಂದಿರುವ ವಲಯವಾಗಿದೆ. ಗೋದಾಮುಗಳು ಮತ್ತು ಕೃಷಿ ಸಾಗಣೆ ವಲಯ ಕೂಡ ಮಹತ್ವದ್ದು.  ಬಾರತದ ಮಹತ್ವಾಕಾಂಕ್ಷೆ ಸಾವಯವ ಕೃಷಿ, ನೈಸರ್ಗಿಕ ಕೃಷಿಯೊಂದಿಗೆ ಸಂಪರ್ಕ ಹೊಂದಿವೆ. ಈ ಕ್ಷೇತ್ರಗಳಿಗೆ ಪ್ರವೇಶಿಸುವವರಿಗೆ ಹೊಸದನ್ನು ಮಾಡಲು ನಮ್ಮ ಹಣಕಾಸು ಸಂಸ್ಥೆಗಳು ಹೇಗೆ ಸಹಾಯ ಮಾಡಬಹುದು ಎಂಬ  ಕುರಿತು ಯೋಚಿಸುವುದು ಬಹಳ ಮುಖ್ಯವಾಗಿದೆ.

ಸ್ನೇಹಿತರೇ.

ಇತ್ತೀಚೆಗೆ ಆರ್ಥಿಕ ವಲಯದಲ್ಲಿ ಸಾಕಷ್ಟು ಕೆಲಸಗಳಾಗಿವೆ. ಆರೋಗ್ಯ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಮೊತ್ತವನ್ನು ವಿನಿಯೋಗಿಸುತ್ತಿದೆ. ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಸವಾಲುಗಳಿಂದ ಹೊರಬರಲು ಹೆಚ್ಚು ಮತ್ತು ಅತಿ ಹೆಚ್ಚು ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಬರಬೇಕಾಗಿದೆ. ನಮ್ಮ ಹಣಕಾಸು ಸಂಸ್ಥೆಗಳು, ಬ್ಯಾಂಕ್ ಗಳು ಈ ವಲಯದ ವ್ಯವಹಾರ ಯೋಜನೆಗೆ ಆದ್ಯತೆ ನೀಡಲಿವೆ?.

?

|

ಸ್ನೇಹಿತರೇ,

ಜಾಗತಿಕ ತಾಪಮಾನ ಇಂದಿನ ಕಾಲಘಟ್ಟದಲ್ಲಿ ಪ್ರಮುಖ ವಿಷಯವಾಗಿದೆ ಮತ್ತು ಭಾರತ ನಿವ್ವಳ ಶೂನ್ಯ ಗುರಿ ಸಾಧಿಸಲು 2070ಕ್ಕೆ ಗುರಿ ನಿಗದಿಪಡಿಸಿದೆ. ದೇಶದಲ್ಲಿ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಲಾಗಿದೆ. ಈ ಕೆಲಸಗಳನ್ನು ತ್ವರಿತಗೊಳಿಸಲು ಪರಿಸರ ಸ್ನೇಹಿ ಯೋಜನೆಗಳ ಅನುಷ್ಠಾನವನ್ನು ತೀವ್ರಗೊಳಿಸುವ ಅನಿವಾರ್ಯತೆ ಇದೆ. ಇಂತಹ ಯೋಜನೆಗಳ ಅನುಷ್ಠಾನ, ಅಧ್ಯಯನ ಮತ್ತು ಹಸಿರು ಹಣಕಾಸು ಒದಗಿಸುವುದು ಈ ಅವಧಿಯ ಅಗತ್ಯವಾಗಿದೆ. ಉದಾಹರಣೆಗೆ ಭಾರತ ಸೌರ ವಿದ್ಯುತ್ ವಲಯದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತಿದೆ. ಭಾರತ ವಿಪತ್ತು ಪ್ರತಿರೋಧ ಮೂಲ ಸೌಕರ್ಯವನ್ನು ಸಾಕಷ್ಟು ಮಟ್ಟಿಗೆ ಅಭಿವೃದ್ಧಿಪಡಿಸಿಕೊಂಡಿದೆ. ದೇಶದ ವಸತಿ ಕ್ಷೇತ್ರದ 6 ಲೈಟ್ ಹೌಸ್ ಯೋಜನೆಯ ಮಾದರಿಯಲ್ಲೂ ಸಹ ವಿಪತ್ತು ನಿರೋಧಕ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಈ ವಲಯಗಳಲ್ಲಿ ಅಗತ್ಯವಾದ ಕೆಲಸ ಮಾಡಲು ನಿಮ್ಮ ಬೆಂಬಲ ಬೇಕಾಗಿದೆ. ಲೈಟ್ ಹೌಸ್ ಮಾದರಿ ಯೋಜನೆಯಂತಹ ವಲಯದಲ್ಲಿ ಜನತೆ ಕೆಲಸ ಮಾಡಿದರೆ ಹಣಕಾಸು ನೆರವು ದೊರೆಯಲಿದೆ. ಅವರು ಈ ಮಾದರಿಯನ್ನು ಪುನರಾವರ್ತಿಸುತ್ತಾರೆ ಮತ್ತು ಸಣ್ಣ ನಗರಗಳಿಗೂ ಇವುಗಳನ್ನು ಕೊಂಡೊಯ್ಯುತ್ತಾರೆ.  ನಮ್ಮ ತಂತ್ರಜ್ಞಾನ ವ್ಯಾಪಕವಾಗಿ ತನ್ನ ವಿಸ್ತರಣೆಯನ್ನು ಆರಂಭಿಸಿದೆ; ಇದರಿಂದ ಕೆಲಸದ ವೇಗ ಹೆಚ್ಚಲಿದೆ ಮತ್ತು ಇಂತಹ ವಲಯದಲ್ಲಿ ಬೆಂಬಲ ಅತ್ಯಂತ ಅಗತ್ಯ ಎಂದು ನಂಬಿದ್ದೇನೆ.

ಸ್ನೇಹಿತರೇ

ನಿವೆಲ್ಲರೂ ಈ ವಿಷಯದ ಬಗ್ಗೆ ಗಂಭೀರವಾಗಿ ಚರ್ಚಿಸುತ್ತೀರಿ ಮತ್ತು ಈ ವೆಬಿನಾರ್ ನಿಂದ ನಾವು ಕ್ರಮಬದ್ಧ ಪರಿಹಾರಗಳನ್ನು ಪಡೆಯುತ್ತೀರಿ ಎಂಬ ಖಾತ್ರಿ ತಮಗಿದೆ. ಇಲ್ಲಿ ನಾವು ಇಂದು ದೊಡ್ಡ ದೃಷ್ಟಿಕೋನಗಳು ಅಥವಾ 2023ರ ಬಜೆಟ್ ನೊಂದಿಗೆ ಬರಬೇಕಾಗಿಲ್ಲ. ಬದಲಾಗಿ 2022 ರಿಂದ 2023ರ ವರೆಗೆ ಬಜೆಟ್ ಅನ್ನು ಹೇಗೆ ಕಾರ್ಯಗತಗೊಳಿಸಬಹುದು ಎನ್ನುವ ಕುರಿತು ಚರ್ಚಿಸಬೇಕಾಗಿದೆ. ಆದಷ್ಟು ಬೇಗ ಹೇಗೆ ಜಾರಿಗೊಳಿಸಬೇಕು?. ಇದರ ಪ್ರತಿಫಲ ಹೇಗಿರಬೇಕು? ಮತ್ತು ಸರ್ಕಾರ ನಿಮ್ಮ ದೈನಂದಿನ ಅನುಭವದಿಂದ ಲಾಭ ಪಡೆಯಬೇಕಿದ್ದರೆ ತಿಂಗಳುಗಳ ಕಾಲ ಕಡತಗಳು ಅಲ್ಲಲ್ಲಿ ಸಿಲುಕಿಕೊಳ್ಳಬಾರದು ಅಥವಾ ಕೋಮಾ ಸ್ಥಿತಿಗೆ ತಲುಪಬಾರದು, ನಿರ್ಧಾರಗಳಲ್ಲಿ ವಿಳಂಬವಾಗಬಾರದು. ನಾವು ಇದನ್ನು ಮೊದಲೇ ಚರ್ಚಿಸಿದರೆ ಅನುಕೂಲವಾಗಲಿದೆ. ನಾವೀಗ ಹೊಸ ಕ್ರಮಗಳನ್ನು ಕೈಗೊಂಡಿದ್ದೇವೆ. ನಾವು ಈಗ “ಸಬ್ಕಾ ಪ್ರಯಾಸ್” ಅಥವಾ ಪ್ರತಿಯೊಬ್ಬರ ಪ್ರಯತ್ನದ ಬಗ್ಗೆ ಮಾತನಾಡುತ್ತಿದ್ದು, ಇದು ಪ್ರತಿಯೊಬ್ಬರ ಪ್ರಯತ್ನಕ್ಕೆ ಉದಾಹರಣೆಯಾಗಿದೆ. ಬಜೆಟ್ ಗೂ ಮುನ್ನ ಚರ್ಚಿಸಿದ್ದೇವೆ ಮತ್ತು ಬಜೆಟ್ ಮಂಡನೆ ನಂತರವೂ ಚರ್ಚಿಸುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸುಗಮ ಅನುಷ್ಠಾನ ಕುರಿತು ಚರ್ಚೆ ಮಾಡುತ್ತಿದ್ದೇವೆ. ಹಣಕಾಸು ಜಗತ್ತಿನಲ್ಲಿ ಈ ರೀತಿಯ ಪ್ರಜಾತಂತ್ರದ ಪ್ರಯತ್ನಗಳಿವೆ. ಎಲ್ಲಾ ಪಾಲುದಾರರು ಮತ್ತು ಬಜೆಟ್ ನ ಭವಿಷ್ಯ ಕುರಿತು ನಾವು ಎಲ್ಲರ ಜತೆ ಕೆಲಸ ಮಾಡುತ್ತಿದ್ದು, ಇದರ ಶಕ್ತಿ ಹೆಚ್ಚು ಪ್ರಶಂಸನೀಯವಾಗಿದೆ. ಆದರೆ ನಾನು ಹೊಗಳಿಕೆಯಲ್ಲಿ ನಿಲ್ಲಲು ಬಯಸುವುದಿಲ್ಲ. ನಮಗೆ ನಿಮ್ಮ ಸಹಾಯ ಬೇಕು. ಹೀಗಾಗಿ ನಿಮ್ಮ ಪೂರ್ವಭಾವಿ ಪಾತ್ರದ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಏಪ್ರಿಲ್ 1 ರ ಒಳಗಾಗಿ ಬಜೆಟ್ ಕಾರ್ಯಕ್ರಮಗಳ ಕುರಿತು ಅಗತ್ಯ ನೀತಿಗಳನ್ನು ರೂಪಿಸಬೇಕು ಎಂದು ಮನವಿ ಮಾಡುತ್ತೇನೆ. ನೀವು ಮಾರುಕಟ್ಟೆಯನ್ನು ಎಷ್ಟು ಬೇಗ ಪ್ರವೇಶಿಸುತ್ತೀರೋ ಅಷ್ಟೂ ಜನ ನಿಮ್ಮ ರಾಜ್ಯಕ್ಕೆ ಬರುತ್ತಾರೆ. ನಿಮ್ಮ ರಾಜ್ಯಕ್ಕೆ ಲಾಭವಾಗುತ್ತದೆ. ಈ ಬಜೆಟ್ ನಿಂದ ಯಾವ ರಾಜ್ಯ ಗರಿಷ್ಠ ಲಾಭ ಪಡೆಯಲಿದೆ ಎನ್ನುವ ಕುರಿತು ರಾಜ್ಯಗಳ ನಡುವೆ ಸ್ಪರ್ಧೆ ಇರಬೇಕು.   ಯಾವ ರಾಜ್ಯ ಪ್ರಗತಿಪರ ನೀತಿಗಳನ್ನು ಜಾರಿಗೆ ತಂದಲ್ಲಿ ಎಲ್ಲಾ ಹಣಕಾಸು ಸಂಸ್ಥೆಗಳು ಅಲ್ಲಿನ ರಾಜ್ಯದ ಜನರಿಗೆ ಅನುಕೂಲ ಮಾಡಿಕೊಡಲು ಮುಂದಾಗುತ್ತವೆ. ದೊಡ್ಡ ಪ್ರಗತಿಪರ ಪರಿಸರ ವ್ಯವಸ್ಥೆಯನ್ನು ನಾವೀಗ ಆರಂಭಿಸೋಣ. ಹೊಸದಾದ ಕ್ರಮಗಳನ್ನು ನಾವು ಆರಂಭಿಸಲು ಪ್ರಯತ್ನ ಮಾಡೋಣ. ಅನುಭವಿಗಳಾದ ನಿಮಗೆ ಪ್ರತಿದಿನದ ಸವಾಲುಗಳು ಗೊತ್ತಿರುತ್ತವೆ, ಈ ಸಮಸ್ಯೆಗಳಿಗೆ ಪರಿಹಾರವೂ ತಿಳಿದಿರುತ್ತದೆ. ನಾವೀಗ ಇಲ್ಲಿಗೆ ಪರಿಹಾರದೊಂದಿಗೆ ಬಂದಿದ್ದೇವೆ. ಹಾಗಾಗಿ ಇದು ಬಜೆಟ್ ನಂತರದ ಚರ್ಚೆಗಿಂತ ಬಜೆಟ್ ಮೇಲಿನ ಚರ್ಚೆಯಾಗಿದೆ. ಈ ಚರ್ಚೆ ಇದರ ಅನುಷ್ಠಾನಕ್ಕಾಗಿ. ನಾನು ನಂಬಿದ್ದೇನೆ ನಿಮ್ಮ ಕೊಡುಗೆ ಅತ್ಯಂತ ಉಪಯುಕ್ತವಾಗಿದೆ ಎಂಬ ಖಾತ್ರಿ ನನಗಿದೆ. ತುಂಬಾ ಧನ್ಯವಾದಗಳು!

  • krishangopal sharma Bjp January 17, 2025

    नमो नमो 🙏 जय भाजपा 🙏🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • krishangopal sharma Bjp January 17, 2025

    नमो नमो 🙏 जय भाजपा 🙏🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷
  • krishangopal sharma Bjp January 17, 2025

    नमो नमो 🙏 जय भाजपा 🙏🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌷
  • रीना चौरसिया September 11, 2024

    namo namo
  • रीना चौरसिया September 11, 2024

    sita ram
  • रीना चौरसिया September 11, 2024

    namo
  • Reena chaurasia September 07, 2024

    ram
  • JBL SRIVASTAVA July 04, 2024

    नमो नमो
  • Hitesh Deshmukh July 04, 2024

    Jay ho
  • Vijay Kant Chaturvedi June 15, 2024

    jai ho
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Centre approves direct procurement of chana, mustard and lentil at MSP

Media Coverage

Centre approves direct procurement of chana, mustard and lentil at MSP
NM on the go

Nm on the go

Always be the first to hear from the PM. Get the App Now!
...
PM speaks with HM King Philippe of Belgium
March 27, 2025

The Prime Minister Shri Narendra Modi spoke with HM King Philippe of Belgium today. Shri Modi appreciated the recent Belgian Economic Mission to India led by HRH Princess Astrid. Both leaders discussed deepening the strong bilateral ties, boosting trade & investment, and advancing collaboration in innovation & sustainability.

In a post on X, he said:

“It was a pleasure to speak with HM King Philippe of Belgium. Appreciated the recent Belgian Economic Mission to India led by HRH Princess Astrid. We discussed deepening our strong bilateral ties, boosting trade & investment, and advancing collaboration in innovation & sustainability.

@MonarchieBe”