“ಭಾರತದ ಕನಸುಗಳನ್ನು ನನಸು ಮಾಡಲು ಭಾರತದ ಕಾರ್ಮಿಕ ಶಕ್ತಿಯದ್ದು ಬಹುದೊಡ್ಡ ಪಾತ್ರವಿದೆ ಮತ್ತು ಅಮೃತ ಕಾಲದ ನಿರೀಕ್ಷೆಗಳಂತೆ ರಾಷ್ಟ್ರಕಟ್ಟಬೇಕಿದೆ”
ಭಾರತವನ್ನು ಮತ್ತೊಮ್ಮೆ ಅತ್ಯಂತ ತ್ವರಿತವಾಗಿ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಿದ ಕೀರ್ತಿ ನಮ್ಮ ಕಾರ್ಮಿಕರಿಗೆ ಸಲ್ಲುತ್ತದೆ”
“ಕಳೆದ ಎಂಟು ವರ್ಷಗಳಲ್ಲಿ ಗುಲಾಮಗಿರಿ ಮನಸ್ಥಿತಿ ಮತ್ತು ಗುಲಾಮಗಿರಿ ಕಾಲದ ಕಾನೂನುಗಳನ್ನು ತೆಗೆದುಹಾಕಲು ಸರ್ಕಾರ ಹಲವಾರು ಉಪ ಕ್ರಮಗಳನ್ನು ತೆಗೆದುಕೊಂಡಿದೆ”
“2047 ರ ಅಮೃತ ಕಾಲದ ದೃಷ್ಟಿಕೋನವನ್ನು ಕಾರ್ಮಿಕ ಸಚಿವಾಲಯ ಸಿದ್ಧಪಡಿಸುತ್ತಿದೆ”
“ಭವಿಷ್ಯದಲ್ಲಿ ಹೊಂದಿಕೊಳ್ಳುವಂತಹ ಕೆಲಸದ ಸ್ಥಳಗಳು, ಮನೆಯಿಂದಲೇ ಕೆಲಸ ಮಾಡುವ ಪರಿಸರ ವ್ಯವಸ್ಥೆ ಮತ್ತು ಹೊಂದಿಕೆಯಾಗುವಂತೆ ಕೆಲಸದ ಅವಧಿ ಅಗತ್ಯವಾಗಿದೆ”
“ಮಹಿಳಾ ಕಾರ್ಮಿಕ ಶಕ್ತಿ ಪಾಲ್ಗೊಳ್ಳುವಿಕೆಗಾಗಿ ಹೊಂದಿಕೊಳ್ಳುವಂತಹ ಕೆಲಸದ ಸ್ಥಳಗಳನ್ನು ಅವಕಾಶವನ್ನಾಗಿ ಬಳಸಿಕೊಳ್ಳಬಹುದಾಗಿದೆ”
“ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ‘ಸೆಸ್’ನ ಸಂಪೂರ್ಣ ಬಳಕೆ ಅಗತ್ಯ. ರಾಜ್ಯಗಳು 38,000 ಕೋಟಿ ರೂಪಾಯಿ ಹಣವನ್ನು ಬಳಸಿಕೊಂಡಿಲ್ಲ”

ನಮಸ್ಕಾರ!

ಚಂಡೀಗಢದ ಆಡಳಿತಾಧಿಕಾರಿ ಶ್ರೀ ಬನ್ವಾರಿ ಲಾಲ್ ಪುರೋಹಿತ್ ಜಿ, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾದ ಶ್ರೀ ಭೂಪೇಂದರ್ ಯಾದವ್ ಜಿ ಮತ್ತು ಶ್ರೀ ರಾಮೇಶ್ವರ ತೇಲಿ ಜಿ, ಎಲ್ಲಾ ರಾಜ್ಯಗಳ ಗೌರವಾನ್ವಿತ ಕಾರ್ಮಿಕ ಮಂತ್ರಿಗಳು, ಕಾರ್ಮಿಕ ಕಾರ್ಯದರ್ಶಿಗಳು, ಇತರ ಗಣ್ಯರು, ಮಹಿಳೆಯರೇ ಮತ್ತು ಮಹನೀಯರೆ! ಮೊದಲನೆಯದಾಗಿ, ನಾನು ಭಗವಾನ್ ತಿರುಪತಿ ಬಾಲಾಜಿಯ ಪಾದಗಳಿಗೆ ನಮಸ್ಕರಿಸಲು ಬಯಸುತ್ತೇನೆ. ನೀವೆಲ್ಲರೂ ಇರುವ ಪವಿತ್ರ ಸ್ಥಳವು ಭಾರತದ ಶ್ರಮ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಈ ಸಮ್ಮೇಳನದಿಂದ ಹೊರಹೊಮ್ಮುವ ವಿಚಾರಗಳು ದೇಶದ ಕಾರ್ಮಿಕ ಶಕ್ತಿಯನ್ನು ಬಲಪಡಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರನ್ನು ಮತ್ತು ವಿಶೇಷವಾಗಿ ಕಾರ್ಮಿಕ ಸಚಿವಾಲಯವನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಆಗಸ್ಟ್ 15 ರಂದು ದೇಶವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿತು ಮತ್ತು ಸ್ವಾತಂತ್ರ್ಯದ 'ಅಮೃತ ಕಾಲ'ವನ್ನು ಪ್ರವೇಶಿಸಿತು. ‘ಅಮೃತ ಕಾಲ’ದಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಮ್ಮ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸುವಲ್ಲಿ ಭಾರತದ ಕಾರ್ಮಿಕ ಬಲವು ದೊಡ್ಡ ಪಾತ್ರವನ್ನು ಹೊಂದಿದೆ. ಈ ಚಿಂತನೆಯೊಂದಿಗೆ ದೇಶವು ಸಂಘಟಿತ ಮತ್ತು ಅಸಂಘಟಿತ ವಲಯದ ಕೋಟ್ಯಂತರ ಕಾರ್ಮಿಕರಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ.

ಪ್ರಧಾನ ಮಂತ್ರಿ ಶ್ರಮ-ಯೋಗಿ ಮಾನ್‌ಧನ್ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಗಳಂತಹ ವಿವಿಧ ಉಪಕ್ರಮಗಳು ಕಾರ್ಮಿಕರಿಗೆ ಒಂದು ರೀತಿಯ ಭದ್ರತೆಯನ್ನು ನೀಡಿವೆ. ಇಂತಹ ಯೋಜನೆಗಳಿಂದಾಗಿ ಅಸಂಘಟಿತ ವಲಯದ ಕಾರ್ಮಿಕರ ಶ್ರಮವನ್ನು ದೇಶ ಸಮಾನವಾಗಿ ಗೌರವಿಸುತ್ತದೆ ಎಂಬ ನಂಬಿಕೆ ಇದೆ. ಕೇಂದ್ರ ಮತ್ತು ರಾಜ್ಯಗಳ ಅಂತಹ ಎಲ್ಲಾ ಉಪಕ್ರಮಗಳನ್ನು ನಾವು ಅತ್ಯಂತ ಸೂಕ್ಷ್ಮತೆಯಿಂದ ಜೋಡಿಸಬೇಕು, ಇದರಿಂದ ಕಾರ್ಮಿಕರು ಅವುಗಳಿಂದ ಗರಿಷ್ಠ ಪ್ರಯೋಜನವನ್ನು ಪಡೆಯಬಹುದು.

ಸ್ನೇಹಿತರೇ,

ಕೊರೊನಾ  ಅವಧಿಯಲ್ಲಿಯೂ ನಮ್ಮ ಆರ್ಥಿಕತೆಯ ಮೇಲೆ ದೇಶದ ಈ ಪ್ರಯತ್ನಗಳ ಪ್ರಭಾವಕ್ಕೆ ನಾವು ಸಾಕ್ಷಿಯಾಗಿದ್ದೇವೆ. 'ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್' ಲಕ್ಷಾಂತರ ಸಣ್ಣ ಕೈಗಾರಿಕೆಗಳಿಗೆ ಸಹಾಯ ಮಾಡಿದೆ. ಒಂದು ಅಧ್ಯಯನದ ಪ್ರಕಾರ, ಈ ಯೋಜನೆಯು ಸುಮಾರು 1.5 ಕೋಟಿ ಜನರ ಉದ್ಯೋಗಗಳನ್ನು ಉಳಿಸಿದೆ. ಇಪಿಎಫ್‌ಒ ಸಹ ಕೊರೊನಾ ಅವಧಿಯಲ್ಲಿ ಉದ್ಯೋಗಿಗಳಿಗೆ ಸಾಕಷ್ಟು ಸಹಾಯ ಮಾಡಿತು ಏಕೆಂದರೆ ಅವರಿಗೆ ಮುಂಗಡವಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ನೀಡಲಾಯಿತು. ಮತ್ತು ಸ್ನೇಹಿತರೇ, ದೇಶವು ತನ್ನ ಕಾರ್ಮಿಕರನ್ನು ಅವರ ಅಗತ್ಯವಿರುವ ಸಮಯದಲ್ಲಿ ಬೆಂಬಲಿಸಿದಂತೆಯೇ, ಕಾರ್ಮಿಕರು ಈ ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳಲು ತಮ್ಮ ಸಂಪೂರ್ಣ ಶಕ್ತಿಯನ್ನು ಬಳಸುವುದನ್ನು ನಾವು ಇಂದು ನೋಡುತ್ತಿದ್ದೇವೆ. ಇಂದು ಭಾರತವು ಮತ್ತೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಮತ್ತು ನಮ್ಮ ಕಾರ್ಮಿಕರಿಗೆ ಹೆಚ್ಚಿನ ಶ್ರೇಯ ಸಲ್ಲುತ್ತದೆ.

ಸ್ನೇಹಿತರೇ,

ದೇಶದ ಪ್ರತಿಯೊಬ್ಬ ಕಾರ್ಮಿಕರನ್ನು ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ತರುವ ಕೆಲಸವನ್ನು ಹೇಗೆ ಮಾಡಲಾಗುತ್ತಿದೆ ಎನ್ನುವುದಕ್ಕೆ 'ಇ-ಶ್ರಮ್ ಪೋರ್ಟಲ್' ಉದಾಹರಣೆಯಾಗಿದೆ. ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಆಧಾರ್‌ಗೆ ಲಿಂಕ್ ಮಾಡಿದ ರಾಷ್ಟ್ರೀಯ ದತ್ತಾಂಶವನ್ನು  ರಚಿಸಲು ಈ ಪೋರ್ಟಲ್ ಅನ್ನು ಕಳೆದ ವರ್ಷ ಪ್ರಾರಂಭಿಸಲಾಯಿತು. ಕೇವಲ ಒಂದು ವರ್ಷದಲ್ಲಿ, 400 ವಲಯಗಳನ್ನು ವ್ಯಾಪಿಸಿರುವ ಸುಮಾರು 28 ಕೋಟಿ ಕಾರ್ಮಿಕರು ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ನನಗೆ ಸಂತೋಷವಾಗಿದೆ. ಇದು ವಿಶೇಷವಾಗಿ ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ಗೃಹ ಕಾರ್ಮಿಕರಿಗೆ ಅನುಕೂಲವಾಗಿದೆ. ಈಗ ಈ ಜನರು ಯೂನಿವರ್ಸಲ್ ಅಕೌಂಟ್ ನಂಬರ್‌ನಂತಹ ಸೌಲಭ್ಯಗಳ ಲಾಭವನ್ನೂ ಪಡೆಯುತ್ತಿದ್ದಾರೆ. ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು 'ಇ-ಶ್ರಮ್ ಪೋರ್ಟಲ್' ಅನ್ನು ರಾಷ್ಟ್ರೀಯ ವೃತ್ತಿ ಸೇವೆ, ಅಸೀಮ್ ಪೋರ್ಟಲ್ ಮತ್ತು ಉದ್ಯಮ್ ಪೋರ್ಟಲ್‌ನೊಂದಿಗೆ  ಜೋಡಿಸಲಾಗುತ್ತಿದೆ.

ರಾಜ್ಯ ಪೋರ್ಟಲ್‌ಗಳನ್ನು ರಾಷ್ಟ್ರೀಯ ಪೋರ್ಟಲ್‌ಗಳೊಂದಿಗೆ ಸಂಯೋಜಿಸಲು ಈ ಸಮ್ಮೇಳನದಲ್ಲಿ ಹಾಜರಿದ್ದ ಎಲ್ಲರನ್ನು ನಾನು ವಿನಂತಿಸುತ್ತೇನೆ. ಇದು ದೇಶದ ಎಲ್ಲಾ ಕಾರ್ಮಿಕರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ ಮತ್ತು ಎಲ್ಲಾ ರಾಜ್ಯಗಳು ದೇಶದ ಕಾರ್ಮಿಕ ಬಲದ ಪರಿಣಾಮಕಾರಿ ಪ್ರಯೋಜನಗಳನ್ನು ಪಡೆಯುತ್ತವೆ.

ಸ್ನೇಹಿತರೇ,

ಬ್ರಿಟಿಷರ ಆಳ್ವಿಕೆಯಿಂದಲೂ ನಮ್ಮ ದೇಶದಲ್ಲಿ ಹಲವಾರು ಕಾರ್ಮಿಕ ಕಾನೂನುಗಳು ಅಸ್ತಿತ್ವದಲ್ಲಿವೆ ಎಂದು ನಿಮಗೆ ತಿಳಿದಿದೆ. ಕಳೆದ ಎಂಟು ವರ್ಷಗಳಲ್ಲಿ, ಗುಲಾಮ ಮನಸ್ಥಿತಿಯನ್ನು ಪ್ರತಿಬಿಂಬಿಸುವ ಗುಲಾಮಗಿರಿಯ ಅವಧಿಯ ಕಾನೂನುಗಳನ್ನು ರದ್ದುಗೊಳಿಸಲು ನಾವು ಉಪಕ್ರಮವನ್ನು ತೆಗೆದುಕೊಂಡಿದ್ದೇವೆ. ದೇಶವು ಈಗ ಅಂತಹ ಕಾರ್ಮಿಕ ಕಾನೂನುಗಳನ್ನು ಬದಲಾಯಿಸುತ್ತಿದೆ, ಸುಧಾರಿಸುತ್ತಿದೆ ಮತ್ತು ಸರಳೀಕರಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಸರಳ ಕಾರ್ಮಿಕ ಸಂಹಿತೆಗಳಾಗಿ ಪರಿವರ್ತಿಸಲಾಗಿದೆ. ಇದರೊಂದಿಗೆ, ನಮ್ಮ ಕಾರ್ಮಿಕ ಸಹೋದರರು ಮತ್ತು ಸಹೋದರಿಯರು ಕನಿಷ್ಠ ವೇತನ, ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ಭದ್ರತೆಯಂತಹ ವಿಷಯಗಳಲ್ಲಿ ಮತ್ತಷ್ಟು ಸಬಲರಾಗುತ್ತಾರೆ. ಹೊಸ ಕಾರ್ಮಿಕ ಸಂಹಿತೆಗಳಲ್ಲಿ ಅಂತರ-ರಾಜ್ಯ ವಲಸೆ ಕಾರ್ಮಿಕರ ವ್ಯಾಖ್ಯಾನವನ್ನು ಸಹ ಸರಳಗೊಳಿಸಲಾಗಿದೆ. ನಮ್ಮ ವಲಸೆ ಕಾರ್ಮಿಕ ಸಹೋದರರು ಮತ್ತು ಸಹೋದರಿಯರು 'ಒಂದು ರಾಷ್ಟ್ರ, ಒಂದು ಪಡಿತರ ಚೀಟಿ' ಯೋಜನೆಯಿಂದ ಸಾಕಷ್ಟು ಪ್ರಯೋಜನ ಪಡೆದಿದ್ದಾರೆ.

ಸ್ನೇಹಿತರೇ,

ನಾವು ಇನ್ನೂ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು. ಜಗತ್ತು ವೇಗವಾಗಿ ಬದಲಾಗುತ್ತಿದೆ. ನಾವು ಬೇಗನೆ ಸಿದ್ಧರಾಗದಿದ್ದರೆ, ನಂತರ ಹಿಂದೆ ಬೀಳುವ ಅಪಾಯವಿದೆ. ಮೊದಲ, ಎರಡನೇ ಮತ್ತು ಮೂರನೇ ಕೈಗಾರಿಕಾ ಕ್ರಾಂತಿಗಳ ಲಾಭ ಪಡೆಯುವಲ್ಲಿ ಭಾರತ ಹಿಂದೆ ಉಳಿದಿತ್ತು. ಈಗ ಭಾರತವು ನಾಲ್ಕನೇ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ಅವುಗಳನ್ನು ತ್ವರಿತವಾಗಿ ಜಾರಿಗೆ ತರಬೇಕು. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಕೆಲಸದ ಸ್ವರೂಪವೂ ಬದಲಾಗುತ್ತಿರುವುದನ್ನು ನೀವು ಕಾಣಬಹುದು.

ಇಂದು ಪ್ರಪಂಚವು ಡಿಜಿಟಲ್ ಯುಗವನ್ನು ಪ್ರವೇಶಿಸುತ್ತಿದೆ ಮತ್ತು ಇಡೀ ಜಾಗತಿಕ ಪರಿಸರವು ವೇಗವಾಗಿ ಬದಲಾಗುತ್ತಿದೆ. ಇಂದು ನಾವು ಗಿಗ್ ಮತ್ತು ಪ್ಲಾಟ್‌ಫಾರ್ಮ್ ಆರ್ಥಿಕತೆಯ ರೂಪದಲ್ಲಿ ಉದ್ಯೋಗದ ಹೊಸ ಆಯಾಮವನ್ನು ನೋಡುತ್ತಿದ್ದೇವೆ. ಆನ್‌ಲೈನ್ ಶಾಪಿಂಗ್, ಆನ್‌ಲೈನ್ ಆರೋಗ್ಯ ಸೇವೆಗಳು, ಆನ್‌ಲೈನ್ ಟ್ಯಾಕ್ಸಿ ಮತ್ತು ಆಹಾರ ವಿತರಣೆಯಾಗಿರಲಿ, ಅದು ಇಂದು ನಗರ ಜೀವನದ ಒಂದು ಭಾಗವಾಗಿದೆ. ಲಕ್ಷಾಂತರ ಯುವಕರು ಈ ಸೇವೆಗಳನ್ನು ಮತ್ತು ಈ ಹೊಸ ಮಾರುಕಟ್ಟೆಯನ್ನು ಚಾಲನೆ ಮಾಡುತ್ತಿದ್ದಾರೆ. ಈ ಹೊಸ ಸಾಧ್ಯತೆಗಳಿಗಾಗಿ ನಮ್ಮ ಸರಿಯಾದ ನೀತಿಗಳು ಮತ್ತು ಪ್ರಯತ್ನಗಳು ಭಾರತವನ್ನು ಈ ಕ್ಷೇತ್ರದಲ್ಲಿ ಜಾಗತಿಕ ನಾಯಕನನ್ನಾಗಿ ಮಾಡಲು ಸಹಾಯ ಮಾಡುತ್ತದೆ.

ಸ್ನೇಹಿತರೇ,

ದೇಶದ ಕಾರ್ಮಿಕ ಸಚಿವಾಲಯವು ‘ಅಮೃತ ಕಾಲ’ದಲ್ಲಿ 2047ರ ದೃಷ್ಟಿಯನ್ನು ಸಿದ್ಧಪಡಿಸುತ್ತಿದೆ. ಭವಿಷ್ಯಕ್ಕೆ ಹೊಂದಿಕೊಳ್ಳುವ ಕೆಲಸದ ಸ್ಥಳಗಳು, ಮನೆಯಿಂದ ಕೆಲಸ ಮಾಡುವ ಪರಿಸರ ವ್ಯವಸ್ಥೆ ಮತ್ತು ಹೊಂದಿಕೊಳ್ಳುವ ಕೆಲಸದ ಸಮಯದ ಅಗತ್ಯವಿದೆ. ನಾವು ಹೊಂದಿಕೊಳ್ಳುವ ಕೆಲಸದ ಸ್ಥಳಗಳಂತಹ ವ್ಯವಸ್ಥೆಗಳನ್ನು ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಗೆ ಅವಕಾಶಗಳಾಗಿ ಬಳಸಬಹುದು.

ಈ ವರ್ಷ ಆಗಸ್ಟ್ 15 ರಂದು ಕೆಂಪು ಕೋಟೆಯಿಂದ ರಾಷ್ಟ್ರದ ಮಹಿಳಾ ಶಕ್ತಿಯ ಸಂಪೂರ್ಣ ಭಾಗವಹಿಸುವಿಕೆಗೆ ನಾನು ಕರೆ ನೀಡಿದ್ದೇನೆ. ಮಹಿಳಾ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಭಾರತವು ತನ್ನ ಗುರಿಗಳನ್ನು ವೇಗವಾಗಿ ಸಾಧಿಸಬಹುದು. ದೇಶದಲ್ಲಿ ಹೊಸದಾಗಿ ಉದಯೋನ್ಮುಖ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಏನು ಮಾಡಬಹುದು ಎಂಬ ದಿಕ್ಕಿನಲ್ಲಿಯೂ ಯೋಚಿಸಬೇಕಿದೆ.

ಸ್ನೇಹಿತರೇ,

21 ನೇ ಶತಮಾನದಲ್ಲಿ ಭಾರತದ ಯಶಸ್ಸು ನಮ್ಮ ಜನಸಂಖ್ಯಾ ಲಾಭಾಂಶವನ್ನು ನಾವು ಎಷ್ಟು ಚೆನ್ನಾಗಿ ಬಳಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಉತ್ತಮ ಗುಣಮಟ್ಟದ ನುರಿತ ಉದ್ಯೋಗಿಗಳನ್ನು ರಚಿಸುವ ಮೂಲಕ ನಾವು ಜಾಗತಿಕ ಅವಕಾಶಗಳ ಲಾಭವನ್ನು ಪಡೆಯಬಹುದು. ಭಾರತವು ಪ್ರಪಂಚದ ಅನೇಕ ದೇಶಗಳೊಂದಿಗೆ ವಲಸೆ ಮತ್ತು ಚಲನಶೀಲ ಪಾಲುದಾರಿಕೆ ಒಪ್ಪಂದಗಳಿಗೆ ಸಹಿ ಹಾಕುತ್ತಿದೆ. ನಾವು ನಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕು ಮತ್ತು ಪರಸ್ಪರ ಕಲಿಯಬೇಕು ಇದರಿಂದ ದೇಶದ ಎಲ್ಲಾ ರಾಜ್ಯಗಳು ಈ ಅವಕಾಶಗಳನ್ನು ಬಳಸಿಕೊಳ್ಳಬಹುದು.

ಸ್ನೇಹಿತರೇ,

ಇಂದು, ಇಂತಹ ಮಹತ್ವದ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗೂಡಿದಾಗ ನಾನು ಎಲ್ಲಾ ರಾಜ್ಯಗಳಿಗೆ ಮತ್ತು ನಿಮ್ಮೆಲ್ಲರಿಗೂ ಒಂದು ವಿನಂತಿಯನ್ನು ಮಾಡಲು ಬಯಸುತ್ತೇನೆ. ನಮ್ಮ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ನಮ್ಮ  ಕಾರ್ಮಿಕಬಲದ ಅವಿಭಾಜ್ಯ ಅಂಗವೆಂದು ನಿಮಗೆ ತಿಳಿದಿದೆ. ಅವರಿಗಾಗಿಯೇ ಸೃಷ್ಟಿಯಾಗಿರುವ ‘ಸೆಸ್ ’ ಅನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕಿದೆ.

ಈ ಸೆಸ್‌ನ ಸುಮಾರು 38,000 ಕೋಟಿ ರೂ.ಗಳನ್ನು ರಾಜ್ಯಗಳು ಇನ್ನೂ ಬಳಸಿಕೊಂಡಿಲ್ಲ ಎಂದು ನನಗೆ ತಿಳಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಇಎಸ್‌ಐಸಿ  ಹೆಚ್ಚು ಹೆಚ್ಚು ಕಾರ್ಮಿಕರಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದರ ಬಗ್ಗೆಯೂ ನಾವು ಗಮನ ಹರಿಸಬೇಕಾಗಿದೆ.

ದೇಶದ ನಿಜವಾದ ಸಾಮರ್ಥ್ಯವನ್ನು ಹೊರತರುವಲ್ಲಿ ನಮ್ಮ ಸಾಮೂಹಿಕ ಪ್ರಯತ್ನಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ನನಗೆ ಖಾತ್ರಿಯಿದೆ. ಈ ನಂಬಿಕೆಯೊಂದಿಗೆ, ನಿಮ್ಮೆಲ್ಲರಿಗೂ ಅನೇಕ ಧನ್ಯವಾದಗಳು! ಎರಡು ದಿನಗಳ ಸಮ್ಮೇಳನದಲ್ಲಿ ನೀವು ಹೊಸ ನಿರ್ಣಯಗಳು ಮತ್ತು ವಿಶ್ವಾಸದೊಂದಿಗೆ ದೇಶದ ಕಾರ್ಮಿಕ ಬಲದ ಸಾಮರ್ಥ್ಯವನ್ನು ಅತ್ಯುತ್ತಮವಾಗಿಸಲು ಸಾಧ್ಯವಾಗುತ್ತದೆ ಎಂದು ನನಗೆ ಖಾತ್ರಿಯಿದೆ.

ಬಹಳ ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
In a first, micro insurance premium in life segment tops Rs 10k cr in FY24

Media Coverage

In a first, micro insurance premium in life segment tops Rs 10k cr in FY24
NM on the go

Nm on the go

Always be the first to hear from the PM. Get the App Now!
...
Chief Minister of Andhra Pradesh meets Prime Minister
December 25, 2024

Chief Minister of Andhra Pradesh, Shri N Chandrababu Naidu met Prime Minister, Shri Narendra Modi today in New Delhi.

The Prime Minister's Office posted on X:

"Chief Minister of Andhra Pradesh, Shri @ncbn, met Prime Minister @narendramodi

@AndhraPradeshCM"