ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳು, ಸರ್ಬಾನಂದ ಸೋನೋವಾಲ್ ಜೀ, ಶಾಂತನು ಠಾಕೂರ್ ಜೀ, ತೂತ್ತುಕೋಡಿ ಬಂದರಿನ ಅಧಿಕಾರಿಗಳು ಮತ್ತು ಉದ್ಯೋಗಿಗಳು, ಇತರ ಗೌರವಾನ್ವಿತ ಅತಿಥಿಗಳು , ಸಹೋದರರು ಮತ್ತು ಸಹೋದರಿಯರೇ,
ಇಂದು ‘ವಿಕಸಿತ ಭಾರತ’ದ ಪ್ರಯಾಣದಲ್ಲಿ ಒಂದು ಮಹತ್ವದ ಮೈಲಿಗಲ್ಲು. ಈ ಹೊಸ ತುಟ್ಟಿಕೋರಿನ್ ಅಂತರಾಷ್ಟ್ರೀಯ ಕಂಟೇನರ್ ಟರ್ಮಿನಲ್ ಭಾರತದ ಸಮುದ್ರ ಮೂಲಸೌಕರ್ಯದ ಹೊಸ ನಕ್ಷತ್ರವಾಗಿದೆ. ಈ ಟರ್ಮಿನಲ್ ವಿ.ಓ.ಚಿದಂಬರನಾರ್ ಬಂದರಿನ ಸಾಮರ್ಥ್ಯವನ್ನು ವಿಸ್ತರಿಸುತ್ತದೆ. ಹದಿನಾಲ್ಕು ಮೀಟರ್ ಗಿಂತ ಹೆಚ್ಚಿನ ಆಳ ಮತ್ತು 300 ಮೀಟರ್ ಗಿಂತ ಉದ್ದವಾದ ಬರ್ತ್ನೊಂದಿಗೆ, ಈ ಹೊಸ ಟರ್ಮಿನಲ್ ಈ ಬಂದರಿನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ವಿ.ಓ.ಸಿ. ಬಂದರಿನಲ್ಲಿ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಭಾರತದ ವಿದೇಶಿ ವಿನಿಮಯವನ್ನು ಉಳಿಸುತ್ತದೆ. ನಿಮಗೆಲ್ಲರಿಗೂ ಮತ್ತು ತಮಿಳುನಾಡಿನ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
![](https://cdn.narendramodi.in/cmsuploads/0.06508600_1726483834_img.jpg)
ಎರಡು ವರ್ಷಗಳ ಹಿಂದೆ ವಿ.ಓ.ಸಿ. ಬಂದರಿಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಉದ್ಘಾಟಿಸುವ ಅವಕಾಶ ನನಗೆ ಸಿಕ್ಕಿತ್ತು. ಆ ಸಮಯದಲ್ಲಿ ಈ ಬಂದರಿನ ಸರಕು ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸಲು ಹಲವು ಕಾಮಗಾರಿಗಳನ್ನು ಆರಂಭಿಸಲಾಗಿತ್ತು. ಈ ಫೆಬ್ರವರಿಯಲ್ಲಿ ಟುಟಿಕೋರಿನ್ ಗೆ ಭೇಟಿ ನೀಡಿದಾಗ, ಇನ್ನೂ ಹಲವು ಬಂದರು ಸಂಬಂಧಿತ ಕೆಲಸಗಳೂ ಪ್ರಾರಂಭವಾಗಿದ್ದವು. ಈ ಕೆಲಸಗಳು ಇಂದು ವೇಗವಾಗಿ ನಡೆಯುತ್ತಿರುವುದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ. ಈ ಹೊಸ ಟರ್ಮಿನಲ್ ನಲ್ಲಿ 40% ಉದ್ಯೋಗಿಗಳು ಮಹಿಳೆಯರಾಗಿರುವುದು ನನಗೆ ಸಂತೋಷವಾಗಿದೆ. ಇದರರ್ಥ ಈ ಟರ್ಮಿನಲ್ ಸಮುದ್ರ ವಲಯದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯ ಸಂಕೇತವಾಗಿದೆ.
![](https://cdn.narendramodi.in/cmsuploads/0.70499400_1726483849_img-1.jpg)
ಸ್ನೇಹಿತರೇ,
ತಮಿಳುನಾಡಿನ ಕರಾವಳಿಗಳು ದೇಶದ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇಲ್ಲಿನ ಬಂದರು ಮೂಲಸೌಕರ್ಯವು ಮೂರು ಪ್ರಮುಖ ಬಂದರುಗಳು ಮತ್ತು ಹದಿನೇಳು ಪ್ರಮುಖವಲ್ಲದ ಬಂದರುಗಳನ್ನು ಒಳಗೊಂಡಿದೆ. ಈ ಸಾಮರ್ಥ್ಯದಿಂದಾಗಿ ತಮಿಳುನಾಡು ಈಗ ಕಡಲ ವ್ಯಾಪಾರ ಜಾಲದ ಮಹತ್ವದ ಕೇಂದ್ರವಾಗಿದೆ. ಬಂದರು-ನೇತೃತ್ವದ ಅಭಿವೃದ್ಧಿಯ ಧ್ಯೇಯವನ್ನು ಮತ್ತಷ್ಟು ವೇಗಗೊಳಿಸಲು, ನಾವು ಹೊರ ಬಂದರಿನ ಕಂಟೈನರ್ ಟರ್ಮಿನಲ್ ಅನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಇದರಲ್ಲಿ ಏಳು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಲಾಗುತ್ತಿದೆ. ನಾವು V.O.C ಯ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದೇವೆ. ಬಂದರು, ಅಂದರೆ V.O.C. ದೇಶದ ಕಡಲ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಬರೆಯಲು ಬಂದರು ಸಿದ್ಧವಾಗಿದೆ.
ಸ್ನೇಹಿತರೇ,
ಭಾರತದ ಸಮುದ್ರ ಮಿಷನ್ ಇಂದು ಕೇವಲ ಮೂಲಸೌಕರ್ಯ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿಲ್ಲ. ಭಾರತವು ಈಗ ಸುಸ್ಥಿರ ಮತ್ತು ಮುಂದಾಲೋಚನೆಯ ಅಭಿವೃದ್ಧಿಯ ಮಾರ್ಗವನ್ನು ಜಗತ್ತಿಗೆ ತೋರಿಸುತ್ತಿದೆ ಮತ್ತು ಇದು ನಮ್ಮ V.O.C ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಬಂದರು ಹಸಿರು ಹೈಡ್ರೋಜನ್ ಹಬ್ ಮತ್ತು ಕಡಲಾಚೆಯ ಗಾಳಿಗಾಗಿ ನೋಡಲ್ ಬಂದರು ಎಂದು ಗುರುತಿಸಲ್ಪಟ್ಟಿದೆ. ಪ್ರಪಂಚವು ಪ್ರಸ್ತುತ ಎದುರಿಸುತ್ತಿರುವ ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸುವಲ್ಲಿ ನಮ್ಮ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಿವೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ .
![](https://cdn.narendramodi.in/cmsuploads/0.93957500_1726493503_img-3.jpg)
ಸ್ನೇಹಿತರೇ,
ಭಾರತದ ಅಭಿವೃದ್ಧಿ ಪಯಣದಲ್ಲಿ ಹೊಸತನ ಮತ್ತು ಕೊಲಬ್ರೇಷನ್ ನಮ್ಮ ದೊಡ್ಡ ಶಕ್ತಿಯಾಗಿದೆ. ಇಂದು ಉದ್ಘಾಟನೆಗೊಂಡಿರುವ ಹೊಸ ಟರ್ಮಿನಲ್ ಕೂಡ ಈ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.. ಸಾಮೂಹಿಕ ಪ್ರಯತ್ನಗಳ ಮೂಲಕ ಉತ್ತಮ ಸಂಪರ್ಕ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ನಾವು ತೊಡಗಿಸಿಕೊಂಡಿದ್ದೇವೆ. ಇಂದು, ರಸ್ತೆ, ಹೆದ್ದಾರಿಗಳು, ಜಲಮಾರ್ಗಗಳು ಮತ್ತು ವಾಯುಮಾರ್ಗಗಳ ವಿಸ್ತರಣೆಯಿಂದಾಗಿ ದೇಶದ ಮೂಲೆ ಮೂಲೆಗಳಲ್ಲಿ ಸಂಪರ್ಕವು ಹೆಚ್ಚಾಗಿದೆ. ಇದರೊಂದಿಗೆ ಜಾಗತಿಕ ವ್ಯಾಪಾರದಲ್ಲಿ ಭಾರತ ತನ್ನ ಸ್ಥಾನವನ್ನು ಹೆಚ್ಚು ಬಲಪಡಿಸಿಕೊಂಡಿದೆ. ಇಂದು, ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವೂ ಪ್ರಮುಖ ಪಾಲುದಾರನಾಗುತ್ತಿದೆ. ಭಾರತದ ಈ ಬೆಳೆಯುತ್ತಿರುವ ಸಾಮರ್ಥ್ಯವೇ ನಮ್ಮ ಆರ್ಥಿಕ ಬೆಳವಣಿಗೆಯ ಅಡಿಪಾಯ.. ಈ ಸಾಮರ್ಥ್ಯವು ಭಾರತವನ್ನು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯನ್ನಾಗಿ ಮಾಡುತ್ತದೆ. ತಮಿಳುನಾಡು ಭಾರತದ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. VOC ಪೋರ್ಟ್ ನ ಹೊಸ ಟರ್ಮಿನಲ್ನಲ್ಲಿ ನಿಮ್ಮೆಲ್ಲರಿಗೂ ಮತ್ತೊಮ್ಮೆ ಅಭಿನಂದನೆಗಳು. ಧನ್ಯವಾದಗಳು.
ವನಕ್ಕಮ್.