“ಮೇರೆ ಸಪ್ನೊ ಕಾ ಭಾರತ್“ ಮತ್ತು “ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅಸಮಾನ್ಯ ನಾಯಕರು” ಕುರಿತ ಆಯ್ದ ಪ್ರಬಂಧಗಳ ಅನಾವರಣ
ಎಂಎಸ್ ಎಂ ಇ ತಂತ್ರಜ್ಞಾನ ಕೇಂದ್ರ ಮತ್ತು ಬಯಲು ರಂಗಮಂದಿರದೊಂದಿಗೆ ಸಭಾಂಗಣವಿರುವ ಪುರುಂತಲೈವರ್ ಕಾಮರಾಜರ್ ಮಣಿಮಂಟಪ ಉದ್ಘಾಟನೆ
“ಭಾರತದ ಜನಸಂಖ್ಯೆ ಹರೆಯದ್ದಾಗಿದೆ ಮತ್ತು ಭಾರತದ ಮನಸ್ಸು ಕೂಡ ಯುವತ್ವದಿಂದ ಕೂಡಿದೆ. ಭಾರತದ ಸಾಮರ್ಥ್ಯದಲ್ಲಿ ಮತ್ತು ಅದರ ಕನಸುಗಳಲ್ಲಿ ಯುವಕರಿದ್ದಾರೆ. ಭಾರತವು ತನ್ನ ಆಲೋಚನೆ ಮತ್ತು ಅದರ ಪ್ರಜ್ಞೆಯಲ್ಲೂ ಹೊಸತನದಿಂದ ಕೂಡಿದೆ”
“ಭಾರತವು ತನ್ನ ಯುವಶಕ್ತಿಯನ್ನು ಜನಸಂಖ್ಯೆಯ ಲಾಭಾಂಶ ಮತ್ತು ಅಭಿವೃದ್ಧಿಯ ಚಾಲನಾಶಕ್ತಿ ಎಂದು ಪರಿಗಣಿಸುತ್ತದೆ”
“ಭಾರತದ ಯುವಕರು ಕಠಿಣ ಪರಿಶ್ರಮ ಸಾಮರ್ಥ್ಯವನ್ನು ಹೊಂದಿದ್ದಾರೆ ಮತ್ತು ಭವಿಷ್ಯದ ಬಗ್ಗೆ ಸ್ಪಷ್ಟತೆ ಹೊಂದಿದ್ದಾರೆ. ಹಾಗಾಗಿಯೇ ಭಾರತ ಇಂದು ಏನು ಹೇಳುತ್ತದೆಯೋ ಜಗತ್ತು ಅದನ್ನು ನಾಳಿನ ಧ್ವನಿಯೆಂದು ಪರಿಗಣಿಸುತ್ತದೆ”
“ನಮ್ಮ ಯುವಕರು ಸಾಮರ್ಥ್ಯವು ಹಳೆಯ ಏಕಾತನತೆಯಿಂದ ಹೊರೆಯಾಗುವುದಿಲ್ಲ. ಈ ಯುವಕರು ಹೊಸ ಸವಾಲುಗಳಿಗೆ ಅನುಗುಣವಾಗಿ ತನ್ನನ್ನು ಮತ್ತು ಸಮಾಜವನ್ನು ವಿಕಸನಗೊಳಿಸಬಹುದು”
“ಇಂದಿನ ಯುವಕರು ‘ಮಾಡಬಹುದು(ಕೆನ್ ಡೂ)‘ ಮನೋಭಾವ ಹೊಂದಿದ್ದು, ಅದೇ ಪ್ರತಿ ಪೀಳಿಗೆಯ ಸ್ಪೂರ್ತಿಗೆ ಮೂಲವಾಗಿದೆ”
“ಭಾರತೀಯ ಯುವಕರು ಜಾಗತಿಕ ಸಮೃದ್ಧಿಯ ಸಂಹಿತೆ ಬರೆಯುತ್ತಿದ್ದಾರೆ”
“ನವ ಭಾರತದ ಮಂತ್ರ- ಸ್ಪರ್ಧಿಸಿ ಮತ್ತು ಗೆಲ್ಲಿ, ತೊಡಗಿಸಿಕೊಳ್ಳಿ ಮತ್ತು ಗೆಲ್ಲಿ, ಒಗ್ಗೂಡಿ ಮತ್ತು ಯುದ್ಧದಲ್ಲಿ ಗೆಲುವು ಸಾಧಿಸಿ”
ಸೂಕ್ತ ಮನ್ನಣೆ ಸಿಗದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಸಂಶೋಧನೆ ಮಾಡಲು ಮತ್ತು ಅವರ ಬಗ್ಗೆ ಬರೆಯಲು ಪ್ರಧಾನಿ ಕರೆ

ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಜಿ, ಮುಖ್ಯಮಂತ್ರಿ ಎನ್ ರಂಗಸಾಮಿ ಜಿ, ನನ್ನ ಸಂಪುಟದ ಸಹೋದ್ಯೋಗಿಗಳಾದ ಶ್ರೀ ನಾರಾಯಣ ರಾಣೆ ಜಿ, ಶ್ರೀ ಅನುರಾಗ್ ಠಾಕೂರ್ ಜಿ, ಶ್ರೀ ನಿಸಿತ್ ಪ್ರಮಾಣಿಕ್ ಜಿ, ಶ್ರೀ ಭಾನು ಪ್ರತಾಪ್ ಸಿಂಗ್ ವರ್ಮಾ ಜಿ, ಪುದುಚೇರಿ ಸರ್ಕಾರದ ಹಿರಿಯ ಸಚಿವರು, ಸಂಸದರು, ಸಚಿವರು, ದೇಶದ ಇತರ ರಾಜ್ಯಗಳ ಶಾಸಕರು ಮತ್ತು ನನ್ನ ಯುವ ಸ್ನೇಹಿತರೇ! ವಣಕ್ಕಂ! ನಿಮಗೆಲ್ಲರಿಗೂ ರಾಷ್ಟ್ರೀಯ ಯುವ ದಿನದ ಅನೇಕ  ಶುಭಾಶಯಗಳು!

ಭಾರತಮಾತೆಯ ಮಹಾನ್ ಪುತ್ರ ಸ್ವಾಮಿ ವಿವೇಕಾನಂದರ ಜನ್ಮದಿನದಂದು ನಾನು ಅವರಿಗೆ ಶಿರಭಾಗಿ ನಮಸ್ಕರಿಸುತ್ತೇನೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ, ಅವರ ಜಯಂತಿಯು ಇನ್ನಷ್ಟು ಸ್ಫೂರ್ತಿದಾಯಕವಾಗಿದೆ.  ಈ ವರ್ಷ ಎರಡು ಕಾರಣಗಳಿಗಾಗಿ ಹೆಚ್ಚು ವಿಶೇಷವಾಗಿದೆ. ನಾವು ಈ ವರ್ಷ ಶ್ರೀ ಅರಬಿಂದೋ ಅವರ 150 ನೇ ಜನ್ಮದಿನವನ್ನು ಆಚರಿಸುತ್ತಿದ್ದೇವೆ ಮತ್ತು ಈ ವರ್ಷವು ಮಹಾನ್ ಕವಿ ಸುಬ್ರಹ್ಮಣ್ಯ ಭಾರತಿ ಅವರ 100 ನೇ ಪುಣ್ಯತಿಥಿಯು ಆಗಿದೆ.  ಈ ಇಬ್ಬರೂ ಋಷಿಗಳು ಪುದುಚೇರಿಯೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದಾರೆ. ಇಬ್ಬರೂ ಅವರವರ ಸಾಹಿತ್ಯ ಮತ್ತು ಆಧ್ಯಾತ್ಮಿಕ ಪಯಣದಲ್ಲಿ ಪಾಲುದಾರರು. ಆದ್ದರಿಂದ, ಪುದುಚೇರಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವ ಉತ್ಸವವು ಭಾರತಮಾತೆಯ ಈ ಮಹಾನ್ ಪುತ್ರರಿಗೆ ಸಮರ್ಪಿತವಾಗಿದೆ. ಸ್ನೇಹಿತರೇ, ಇಂದು ಪುದುಚೇರಿಯಲ್ಲಿ ಎಮ್‌ಎಸ್‌ಎಮ್‌ಇ ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟಿಸಲಾಗಿದೆ. ಆತ್ಮನಿರ್ಭರ ಭಾರತವನ್ನು ರಚಿಸುವಲ್ಲಿ ಎಸ್‌ಎಮ್‌ಇ ವಲಯದ ಪಾತ್ರ ಬಹಳ ಮುಖ್ಯವಾಗಿದೆ. ಇಂದು ಜಗತ್ತನ್ನು ಬದಲಾಯಿಸುತ್ತಿರುವ ತಂತ್ರಜ್ಞಾನವನ್ನು ನಮ್ಮ ಎಮ್ಎಸ್‌ಎಮ್‌ಇಗಳು ಬಳಸಿಕೊಳ್ಳುವುದು ಅತ್ಯಗತ್ಯ. ಅದಕ್ಕಾಗಿಯೇ ಇಂದು ದೇಶದಲ್ಲಿ ಟೆಕ್ನಾಲಜಿ ಸೆಂಟರ್ ಸಿಸ್ಟಮ್ಸ್ ಕಾರ್ಯಕ್ರಮದ ಬೃಹತ್ ಅಭಿಯಾನವನ್ನು ನಡೆಸಲಾಗುತ್ತಿದೆ. ಪುದುಚೇರಿಯಲ್ಲಿರುವ ಎಸ್‌ಎಮ್‌ಇ ತಂತ್ರಜ್ಞಾನ ಕೇಂದ್ರವು ಆ ದಿಸೆಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

ಸ್ನೇಹಿತರೇ,

ಇಂದು ಪುದುಚೇರಿಯ ಯುವಕರಿಗೆ ಮತ್ತೊಂದು ಉಡುಗೊರೆ ಸಿಗುತ್ತಿದೆ - ಮಣಿಮಂಡಪಂ ಸಭಾಂಗಣ, ವಿವಿಧೋದ್ದೇಶ ಬಳಕೆಗಾಗಿ, ಕಾಮರಾಜ್ ಹೆಸರಿನಲ್ಲಿ. ಈ ಸಭಾಂಗಣವು ಕಾಮರಾಜ್‌ಜಿಯವರ ಕೊಡುಗೆಯನ್ನು ನಮಗೆ ನೆನಪಿಸುವುದಲ್ಲದೆ, ನಮ್ಮ ಯುವಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ.

ಸ್ನೇಹಿತರೇ,

ಇಂದು ಜಗತ್ತು ಭಾರತವನ್ನು ಭರವಸೆ ಮತ್ತು ವಿಶ್ವಾಸದಿಂದ ನೋಡುತ್ತಿದೆ ಏಕೆಂದರೆ ಭಾರತದ ಜನತೆ ಕ್ರಿಯೆ ಮತ್ತು ಆಲೋಚನಾ ಪ್ರಕ್ರಿಯೆಯಲ್ಲಿ ಯುವಚೈತನ್ಯವನ್ನು ಹೊಂದಿದೆ. ಭಾರತವು ತನ್ನ ಸಾಮರ್ಥ್ಯ ಮತ್ತು ಕನಸುಗಳ ವಿಷಯದಲ್ಲಿ ನವಯೌವ್ವನವಾಗಿದೆ   . ಭಾರತವು ತನ್ನ ಆಲೋಚನೆಗಳು ಮತ್ತು ಪ್ರಜ್ಞೆಯ ವಿಷಯದಲ್ಲಿ ನವಯೌವ್ವನದಿಂದಿದೆ.  ಭಾರತವು ನವಯೌವ್ವನ ದೇಶ  ಏಕೆಂದರೆ ಭಾರತದ ದೃಷ್ಟಿ ಯಾವಾಗಲೂ ಆಧುನಿಕತೆಯನ್ನು ಒಪ್ಪಿಕೊಂಡಿದೆ; ಭಾರತದ ತತ್ವಶಾಸ್ತ್ರವು ಬದಲಾವಣೆಯನ್ನು ಸ್ವೀಕರಿಸಿದೆ. ಭಾರತವು ತನ್ನ ಪ್ರಾಚೀನ ಸ್ವರೂಪದಲ್ಲಿಯೂ ಆಧುನಿಕತೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ನಮ್ಮ ಸಾವಿರಾರು ವರ್ಷಗಳ ಹಿಂದಿನ ವೇದಗಳು ಹೇಳಿವೆ-

"ಅಪಿ ಯಥಾ, ಯುವಾನೋ ಮತ್ಸಥಾ, ನೋ ವಿಶ್ವಂ ಜಗತ್, ಅಭಿಪಿತ್ವೇ ಮನೀಷಾ,॥

ಅಂದರೆ, ಜಗತ್ತಿಗೆ ಶಾಂತಿ ಹಾಗೂ ಭದ್ರತೆ ಎರಡನ್ನೂ ತಿಳಿಸುವುದು ಯುವಕರು. ನಮ್ಮ ಭಾರತಕ್ಕೆ, ನಮ್ಮ ರಾಷ್ಟ್ರಕ್ಕೆ ಶಾಂತಿ, ಸಂತೋಷ ಮತ್ತು ಭದ್ರತೆಗೆ ಖಂಡಿತವಾಗಿಯೂ ದಾರಿ ಮಾಡಿಕೊಡುವುದು ಯುವಜನತೆ. ಆದುದರಿಂದಲೇ ಭಾರತದಲ್ಲಿ ಯೋಗದ ಪಯಣ ವೈಯುಕ್ತಿಕ ಮಟ್ಟದಿಂದ ಜಗತ್ತಿಗೆ ಆಗಿರಲಿ, ಕ್ರಾಂತಿಯಾಗಲಿ ಅಥವಾ ವಿಕಾಸವಾಗಲಿ, ಸೇವೆಯ ಮಾರ್ಗವಾಗಲಿ ಅಥವಾ ಸಮರ್ಪಣೆಯಾಗಲಿ, ಪರಿವರ್ತನೆಯಾಗಲಿ ಅಥವಾ ಶೌರ್ಯದ ವಿಷಯವಾಗಲಿ. ಸಹಕಾರ ಅಥವಾ ಸುಧಾರಣೆಗಳ ಮಾರ್ಗವಾಗಿದೆ, ಅದು ಬೇರುಗಳಿಗೆ ಸಂಪರ್ಕ ಕಲ್ಪಿಸುವ ಅಥವಾ ಪ್ರಪಂಚದಾದ್ಯಂತ ವಿಸ್ತರಿಸುವ ಬಗ್ಗೆ, ನಮ್ಮ ದೇಶದ ಯುವಜನರಿಂದ ಹಾದುಹೋಗದ ಒಂದೇ ಒಂದು ಮಾರ್ಗವಿಲ್ಲ. ಯುವಕರು ಸಕ್ರಿಯವಾಗಿ ಭಾಗವಹಿಸದ ಒಂದೇ ಒಂದು ಕ್ಷೇತ್ರವಿಲ್ಲ. ಭಾರತದ ಪ್ರಜ್ಞೆ ಇಬ್ಭಾಗವಾದಾಗ, ಶಂಕರರಂತಹ ಯುವಕ, ಆದಿ ಶಂಕರಾಚಾರ್ಯರಾಗಿ ಹೊರಹೊಮ್ಮಿ, ಏಕತೆಯ ಎಳೆಯಿಂದ ದೇಶವನ್ನು ಒಟ್ಟುಗೂಡಿಸಿದರು. ಭಾರತವು ಅನ್ಯಾಯ ಮತ್ತು ದೌರ್ಜನ್ಯದ ವಿರುದ್ಧ ಹೋರಾಡಬೇಕಾದಾಗ, ಗುರು ಗೋಬಿಂದ್ ಸಿಂಗ್ ಜಿ ಅವರ ಪುತ್ರರ ತ್ಯಾಗವು ಮಾರ್ಗವನ್ನು ತೋರಿಸುತ್ತದೆ. ಭಾರತಕ್ಕೆ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಯ ಅಗತ್ಯವಿದ್ದಾಗ, ಸರ್ದಾರ್ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮತ್ತು ನೇತಾಜಿ ಸುಭಾಸ್ ಅವರಂತಹ ಅಸಂಖ್ಯಾತ ಯುವಕರು ದೇಶಕ್ಕಾಗಿ ಎಲ್ಲವನ್ನೂ ತ್ಯಜಿಸಿದರು. ಭಾರತಕ್ಕೆ ಆಧ್ಯಾತ್ಮಿಕತೆ ಮತ್ತು ಸೃಜನಶೀಲತೆಯ ಶಕ್ತಿಯ ಅಗತ್ಯವಿರುವಾಗ, ಶ್ರೀ ಅರಬಿಂದೋ ಮತ್ತು ಸುಬ್ರಮಣ್ಯ ಭಾರತಿಯಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಯೋಚಿಸುತ್ತಾರೆ. ಮತ್ತು, ಭಾರತವು ತನ್ನ ಕಳೆದುಹೋದ ಸ್ವಾಭಿಮಾನವನ್ನು ಮರಳಿ ಪಡೆಯಲು, ಜಗತ್ತಿನಲ್ಲಿ ತನ್ನ ವೈಭವವನ್ನು ಮರುಸ್ಥಾಪಿಸಲು ತೀವ್ರವಾಗಿ ಬಯಸಿದಾಗ, ಸ್ವಾಮಿ ವಿವೇಕಾನಂದರಂತಹ ಯುವಕರು ಭಾರತದಲ್ಲಿ ಗಳಿಸಿದ ಜ್ಞಾನದ ಮೂಲಕ ಮತ್ತು ಅವರ ಶಾಶ್ವತ ಕರೆಯ ಮೂಲಕ ಜಗತ್ತನ್ನು ಜಾಗೃತಗೊಳಿಸಿದರು.

ಸ್ನೇಹಿತರೇ,

ಇಂದು ಭಾರತವು ಎರಡು ಅನಂತ ಶಕ್ತಿಗಳನ್ನು ಹೊಂದಿದೆ ಎಂದು ಜಗತ್ತು ಗುರುತಿಸಿದೆ - ಒಂದು Demography - ಜನಸಂಖ್ಯೆ ಮತ್ತು ಇನ್ನೊಂದು Democracy - ಪ್ರಜಾಪ್ರಭುತ್ವ. ಒಂದು ದೇಶವು ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿದೆ, ಅದರ ಸಾಮರ್ಥ್ಯವು ಹೆಚ್ಚಾಗುತ್ತದೆ; ಅದರ ಸಾಧ್ಯತೆಗಳನ್ನು ವಿಶಾಲವೆಂದು ಪರಿಗಣಿಸಲಾಗುತ್ತದೆ. ಆದರೆ ಭಾರತದ ಯುವಕರು 'ಜನಸಂಖ್ಯಾ ಲಾಭಾಂಶ'ದ ಜೊತೆಗೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಸಹ ಹೊಂದಿದ್ದಾರೆ. ಅವರ 'ಪ್ರಜಾಪ್ರಭುತ್ವದ ಲಾಭಾಂಶ' ಸರಳವಾಗಿ ಸಾಟಿಯಿಲ್ಲ. ಭಾರತವು ತನ್ನ ಯುವಕರನ್ನು 'ಜನಸಂಖ್ಯಾ ಲಾಭಾಂಶ' ಹಾಗೂ 'ಅಭಿವೃದ್ಧಿ ಚಾಲಕ'ರು ಎಂದು ಪರಿಗಣಿಸುತ್ತದೆ. ಇಂದು ಭಾರತದ ಯುವಕರು ನಮ್ಮ ಅಭಿವೃದ್ಧಿ ಮತ್ತು ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳನ್ನು ಮುನ್ನಡೆಸುತ್ತಿದ್ದಾರೆ. ನೀವು ನೋಡಿ, ಭಾರತದ ಯುವಕರು ತಂತ್ರಜ್ಞಾನದ ಮೋಡಿ ಮತ್ತು ಪ್ರಜಾಪ್ರಭುತ್ವದ ಅರಿವನ್ನು ಹೊಂದಿದ್ದಾರೆ. ಇಂದು, ಭಾರತದ ಯುವಕರು ದುಡಿಮೆಯಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯ ಮತ್ತು ಭವಿಷ್ಯದ ಸ್ಪಷ್ಟ ದೃಷ್ಟಿ ಎರಡನ್ನೂ ಹೊಂದಿದ್ದಾರೆ. ಆದ್ದರಿಂದಲೇ ಭಾರತ ಇಂದು ಹೇಳುವುದನ್ನು ಜಗತ್ತು ನಾಳೆಯ ಕರೆ ಎಂದು ಪರಿಗಣಿಸುತ್ತದೆ. ಭಾರತದ ಕನಸುಗಳು ಮತ್ತು ನಿರ್ಣಯಗಳು ಭಾರತದ ಜೊತೆಗೆ ಪ್ರಪಂಚದ ಭವಿಷ್ಯವನ್ನು ಪ್ರತಿಬಿಂಬಿಸುತ್ತವೆ. ಪ್ರಪಂಚದ ಮತ್ತು ಭಾರತದ ಭವಿಷ್ಯವನ್ನು ನಿರ್ಮಿಸುವ ಈ ಜವಾಬ್ದಾರಿ ಮತ್ತು ಅವಕಾಶ ನಿಮ್ಮಂತಹ ದೇಶದ ಕೋಟ್ಯಂತರ ಯುವಕರಿಗೆ ವಹಿಸಲಾಗಿದೆ. 2022 ರ ವರ್ಷವು ನಿಮಗೆ, ಭಾರತದ ಯುವ ಪೀಳಿಗೆಗೆ ಬಹಳ ಮುಖ್ಯವಾಗಿದೆ. ಇಂದು ನಾವು 25 ನೇ ರಾಷ್ಟ್ರೀಯ ಯುವ ಉತ್ಸವವನ್ನು ಆಚರಿಸುತ್ತಿದ್ದೇವೆ. ಈ ವರ್ಷ ನೇತಾಜಿ ಸುಭಾಷ್ ಬಾಬು ಅವರ 125 ನೇ ಜನ್ಮ ವಾರ್ಷಿಕೋತ್ಸವವನ್ನು ಗುರುತಿಸಲಾಗಿದೆ. ಮತ್ತು 25ವರ್ಷಗಳ ನಂತರ ದೇಶವು 100 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತದೆ. ಅಂದರೆ, 25 ರ ಈ ಕಾಕತಾಳೀಯವು ಖಂಡಿತವಾಗಿಯೂ ಭಾರತದ ಭವ್ಯವಾದ, ದೈವಿಕ ಚಿತ್ರವನ್ನು ಚಿತ್ರಿಸಲಿದೆ. ಸ್ವಾತಂತ್ರ್ಯ ಬಂದಾಗ ಅಲ್ಲಿದ್ದ ಯುವ ಪೀಳಿಗೆ ಎರಡು ಯೋಚನೆ ಮಾಡದೆ ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದರು. ಆದರೆ ಇಂದಿನ ಯುವಕರು ದೇಶಕ್ಕಾಗಿ ಬದುಕಬೇಕು ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಬೇಕು. ಮಹರ್ಷಿ ಶ್ರೀ ಅರಬಿಂದೋ ಅವರು ಹೇಳಿದರು: "ಧೈರ್ಯ, ಪ್ರಾಮಾಣಿಕ, ಶುದ್ಧ ಹೃದಯದ, ಧೈರ್ಯಶಾಲಿ ಮತ್ತು ಮಹತ್ವಾಕಾಂಕ್ಷಿ ಯುವಕರು ಭವಿಷ್ಯದ ರಾಷ್ಟ್ರವನ್ನು ನಿರ್ಮಿಸುವ ಏಕೈಕ ಅಡಿಪಾಯ" ಎಂದು. ಅವರ ಮಾತುಗಳು 21ನೇ ಶತಮಾನದ ಭಾರತದ ಯುವಕರಿಗೆ ಜೀವನದ ಮಂತ್ರವಿದ್ದಂತೆ. ಇಂದು, ನಾವು ಒಂದು ರಾಷ್ಟ್ರವಾಗಿ, ವಿಶ್ವದ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿ, ಒಂದು ಹೊಸ್ತಿಲಲ್ಲಿದ್ದೇವೆ. ಇದು ಭಾರತಕ್ಕೆ ಹೊಸ ಕನಸುಗಳು ಮತ್ತು ಹೊಸ ನಿರ್ಣಯಗಳ ಹೊಸ್ತಿಲು. ಅಂತಹ ಪರಿಸ್ಥಿತಿಯಲ್ಲಿ, ಭಾರತದ ಯುವ ಶಕ್ತಿಯು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ.

ಸ್ನೇಹಿತರೇ,

ಶ್ರೀ ಅರಬಿಂದೋ ಹೇಳುತ್ತಿದ್ದರು-  ಯುವಕರು, ಅವರು ಹೊಸ ಪ್ರಪಂಚದ ನಿರ್ಮಾತೃಗಳಾಗಿರಬೇಕು. ಕ್ರಾಂತಿ ಮತ್ತು ವಿಕಸನದ ಸುತ್ತ ಅವರು ಇಟ್ಟಿರುವ ತತ್ವವು ಯುವಕರ ನಿಜವಾದ ಗುರುತಾಗಿದೆ. ಈ ಎರಡು ಗುಣಗಳು ಸಹ  ರಾಷ್ಟ್ರದ ದೊಡ್ಡ ಶಕ್ತಿಯಾಗಿವೆ. ಯುವಕರಿಗೆ ಆ ಸಾಮರ್ಥ್ಯವಿದೆ, ಹಳೆಯ ರೀತಿಯ ಹೊರೆಯನ್ನು ಅವರು ಹೊರುವುದಿಲ್ಲ, ಅವುಗಳನ್ನು ಹೇಗೆ ಅಲುಗಾಡಿಸಬೇಕು ಎಂದು ಅವರಿಗೆ ತಿಳಿದಿದೆ.  ಈ ಯುವಕರು ಹೊಸ ಸವಾಲುಗಳು ಮತ್ತು ಹೊಸ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮನ್ನು ಮತ್ತು ಸಮಾಜವನ್ನು ವಿಕಸನಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಮತ್ತು ಹೊಸ ವಿಷಯಗಳನ್ನು ರಚಿಸಬಹುದು. ಮತ್ತು ಇಂದು ನಾವು ಇದನ್ನು ದೇಶದಲ್ಲಿ ನೋಡುತ್ತಿದ್ದೇವೆ. ಈಗ ಭಾರತದ ಯುವಕರು ವಿಕಾಸದತ್ತ ಹೆಚ್ಚು ಗಮನಹರಿಸುತ್ತಿದ್ದಾರೆ. ಇಂದು ಅಡ್ಡಿಯೂ ಇದೆ, ಆದರೆ ಈ ಅಡ್ಡಿಯು ಅಭಿವೃದ್ಧಿಗಾಗಿ ಇದೆ. ಇಂದು ಭಾರತದ ಯುವಕರು ಹೊಸತನವನ್ನು ಕಂಡುಕೊಳ್ಳುತ್ತಿದ್ದಾರೆ ಮತ್ತು ಸಮಸ್ಯೆಗಳನ್ನು ಪರಿಹರಿಸಲು ಒಂದಾಗುತ್ತಿದ್ದಾರೆ. ಸ್ನೇಹಿತರೇ, ಇಂದಿನ ಯುವಕರು "ಮಾಡಬಹುದು" ಎಂಬ ಮನೋಭಾವವನ್ನು ಹೊಂದಿದ್ದಾರೆ, ಇದು ಪ್ರತಿ ಪೀಳಿಗೆಗೆ ಸ್ಫೂರ್ತಿಯ ಮೂಲವಾಗಿದೆ. ಇಂದು ಭಾರತವು ಡಿಜಿಟಲ್ ಪಾವತಿಯ ವಿಷಯದಲ್ಲಿ ವಿಶ್ವದಲ್ಲಿಯೇ ಮುಂದೆ ಇರುವುದು ಭಾರತದ ಯುವಕರ ಶಕ್ತಿಯಾಗಿದೆ. ಇಂದು ಭಾರತದ ಯುವಕರು ಜಾಗತಿಕ ಸಮೃದ್ಧಿಯ ಸಂಹಿತೆಯನ್ನು ಬರೆಯುತ್ತಿದ್ದಾರೆ. ಪ್ರಪಂಚದಾದ್ಯಂತದ ಯುನಿಕಾರ್ನ್ ಪರಿಸರ ವ್ಯವಸ್ಥೆಯಲ್ಲಿ ಭಾರತೀಯ ಯುವಕರು ಪರಿಗಣಿಸಬೇಕಾದ ಶಕ್ತಿಯಾಗಿದ್ದಾರೆ. ಭಾರತವು ಇಂದು 50 ಸಾವಿರಕ್ಕೂ ಹೆಚ್ಚು ನವೋದ್ಯಮಗಳ ಪ್ರಬಲ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಈ ಪೈಕಿ ಕಳೆದ 6-7 ತಿಂಗಳಲ್ಲಿ ಕೊರೊನಾ ಸವಾಲುಗಳ ನಡುವೆ 10 ಸಾವಿರಕ್ಕೂ ಹೆಚ್ಚು ನವೋದ್ಯಮಗಳು ರೂಪುಗೊಂಡಿವೆ. ಇದು ಭಾರತದ ಯುವಕರ ಶಕ್ತಿಯಾಗಿದ್ದು, ಇದರ ಆಧಾರದ ಮೇಲೆ ನಮ್ಮ ದೇಶವು ಸ್ಟಾರ್ಟ್-ಅಪ್‌ಗಳ ಸುವರ್ಣ ಯುಗವನ್ನು ಪ್ರವೇಶಿಸುತ್ತಿದೆ.

ಸ್ನೇಹಿತರೇ,

ಇದು ನವಭಾರತದ ಮಂತ್ರ - 'ಸ್ಪರ್ಧಿಸು ಮತ್ತು ಜಯಿಸು'. ಅಂದರೆ ಭಾಗವಹಿಸುವುದು ಮತ್ತು  ಗೆಲ್ಲುವುದು.  ತೊಡಗಿಸಿಕೊಳ್ಳಿ ಮತ್ತು ಯುದ್ಧವನ್ನು ಗೆಲ್ಲಿರಿ.  ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಇಷ್ಟೊಂದು ಬೃಹತ್ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದು ಇದೇ ಮೊದಲು. ನಾವು ಒಲಿಂಪಿಕ್ಸ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದೇವೆ, ಏಕೆಂದರೆ ಗೆಲುವಿನ ದೃಢತೆ ನಮ್ಮ ಯುವಕರಲ್ಲಿ ತುಂಬಿತ್ತು. ನಮ್ಮ ಕೋವಿಡ್ ಲಸಿಕೆ ಕಾರ್ಯಕ್ರಮದ ಯಶಸ್ಸಿನಲ್ಲಿ ಯುವಕರ ಪಾತ್ರವು ಸಂಪೂರ್ಣವಾಗಿ ವಿಭಿನ್ನ ಮಟ್ಟದಲ್ಲಿ ಸಾಕ್ಷಿಯಾಗಿದೆ. 15 ರಿಂದ 18 ವರ್ಷ ವಯಸ್ಸಿನ ಯುವಕರು ಹೇಗೆ ಹೆಚ್ಚು ಲಸಿಕೆಯನ್ನು ಪಡೆಯುತ್ತಿದ್ದಾರೆ ಎನ್ನುವುದನ್ನು ನಾವು ನೋಡಬಹುದು. ಇಷ್ಟು ಕಡಿಮೆ ಅವಧಿಯಲ್ಲಿ 2 ಕೋಟಿಗೂ ಹೆಚ್ಚು ಹದಿಹರೆಯದವರಿಗೆ ಲಸಿಕೆ ಹಾಕಲಾಗಿದೆ. ಇಂದಿನ ಹದಿಹರೆಯದವರಲ್ಲಿ ಕರ್ತವ್ಯದ ಬಗೆಗಿನ ಶ್ರದ್ಧೆಯನ್ನು ನಾನು ನೋಡಿದಾಗ, ದೇಶದ ಉಜ್ವಲ ಭವಿಷ್ಯದಲ್ಲಿ ನನ್ನ ನಂಬಿಕೆ ಮತ್ತಷ್ಟು ಬಲಗೊಳ್ಳುತ್ತದೆ. 15 ಮತ್ತು 18 ವರ್ಷಗಳ ನಡುವಿನ ನಮ್ಮ ಹದಿಹರೆಯದವರು ಹೊಂದಿರುವ ಜವಾಬ್ದಾರಿಯ ಪ್ರಜ್ಞೆ ಇದು; ಮತ್ತು ಇದು ಕೊರೊನಾ ಅವಧಿಯ ಉದ್ದಕ್ಕೂ ಭಾರತದ ಯುವಜನರಲ್ಲಿ ಕಾಣಲಾಗಿದೆ.

ಸ್ನೇಹಿತರೇ,

ಯುವಕರ ಈ ಶಕ್ತಿಗೆ ಬೇಕಾದ ಜಾಗ ಸಿಗಬೇಕು, ಸರ್ಕಾರದಿಂದ ಕನಿಷ್ಠ ಹಸ್ತಕ್ಷೇಪ ಆಗಬೇಕು ಎಂದು ಸರ್ಕಾರ ಪ್ರಯತ್ನಿಸುತ್ತಿದೆ. ಅವರ ಕೌಶಲ್ಯವನ್ನು ಹೆಚ್ಚಿಸಲು ಸರ್ಕಾರವು ಅವರಿಗೆ ಸರಿಯಾದ ಪರಿಸರ ಮತ್ತು ಸರಿಯಾದ ಸಂಪನ್ಮೂಲಗಳನ್ನು ನೀಡಲು ಪ್ರಯತ್ನಿಸುತ್ತಿದೆ. ಡಿಜಿಟಲ್ ಇಂಡಿಯಾದ ಮೂಲಕ ಸರ್ಕಾರಿ ಪ್ರಕ್ರಿಯೆಗಳನ್ನು ಸರಳೀಕರಿಸುವುದು ಮತ್ತು ಸಾವಿರಾರು ಅನುಸರಣೆಗಳ ಹೊರೆಯಿಂದ ಮುಕ್ತಗೊಳಿಸುವುದು ಈ ಭಾವನೆಯನ್ನು ಬಲಪಡಿಸುತ್ತದೆ. ಮುದ್ರಾ, ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾದಂತಹ ಅಭಿಯಾನಗಳಿಂದ ಯುವಕರಿಗೆ ಸಾಕಷ್ಟು ನೆರವು ಸಿಗುತ್ತಿದೆ. ಸ್ಕಿಲ್ ಇಂಡಿಯಾ, ಅಟಲ್ ಇನ್ನೋವೇಶನ್ ಮಿಷನ್ ಮತ್ತು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗಳು ಯುವಕರ ಸಾಮರ್ಥ್ಯವನ್ನು ಹೆಚ್ಚಿಸುವ ಇತರ ಕೆಲವು ಪ್ರಯತ್ನಗಳಾಗಿವೆ.

ಸ್ನೇಹಿತರೇ,

ಪುತ್ರರು ಮತ್ತು ಪುತ್ರಿಯರು ಸಮಾನರು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಈ ಮನಸ್ಥಿತಿಯೊಂದಿಗೆ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 21 ವರ್ಷಕ್ಕೆ ಏರಿಸಲು ಸರ್ಕಾರ ನಿರ್ಧರಿಸಿದೆ. ಹೆಣ್ಣುಮಕ್ಕಳೂ ತಮ್ಮ ವೃತ್ತಿಜೀವನವನ್ನು ನಿರ್ಮಿಸಲು ಸಾಕಷ್ಟು ಸಮಯವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಇದು ಬಹಳ ಮಹತ್ವದ ಹೆಜ್ಜೆಯಾಗಿದೆ.

ಸ್ನೇಹಿತರೇ,

'ಸ್ವಾತಂತ್ರ್ಯದ ಅಮೃತ ಕಾಲ'ದ ಈ ಅವಧಿಯಲ್ಲಿ, ನಮ್ಮ ರಾಷ್ಟ್ರೀಯ ಸಂಕಲ್ಪಗಳ ಸಾಧನೆಯನ್ನು ಇಂದಿನ ನಮ್ಮ ಕ್ರಿಯೆಗಳಿಂದ ನಿರ್ಧರಿಸಲಾಗುತ್ತದೆ. ಈ ಕ್ರಮಗಳು ಪ್ರತಿಯೊಂದು ಹಂತದಲ್ಲೂ, ಪ್ರತಿಯೊಂದು ವಲಯಕ್ಕೂ ಬಹಳ ಮುಖ್ಯ. ಸ್ಥಳೀಯರಿಗೆ ಧ್ವನಿಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ನಾವು ಕೆಲಸ ಮಾಡಬಹುದೇ? ಶಾಪಿಂಗ್ ಮಾಡುವಾಗ, ನಿಮ್ಮ ಆಯ್ಕೆಯು ಭಾರತೀಯ ಕಾರ್ಮಿಕ ಮತ್ತು ಭಾರತೀಯ ಮಣ್ಣಿನ ಘಮಲನ್ನು ಹೊರಹಾಕಬೇಕು ಎಂಬುದನ್ನು ಮರೆಯಬೇಡಿ. ಯಾವಾಗಲೂ ಒಂದೇ ಪ್ರಮಾಣದಲ್ಲಿ ವಸ್ತುಗಳನ್ನು ತೂಗುವ ಮೂಲಕ ನಿಮ್ಮ ಖರೀದಿಯ ಆಯ್ಕೆಯನ್ನು ಮಾಡಲು ಪ್ರಯತ್ನಿಸಿ. ನೋಡಿ, ಅದು ನನ್ನ ದೇಶದ ಕೂಲಿಕಾರನ ಬೆವರಿನ ಪರಿಮಳವನ್ನು ಹೊರಸೂಸುತ್ತದೆಯೋ; ಶ್ರೀ ಅರಬಿಂದೋ ಮತ್ತು ಸ್ವಾಮಿ ವಿವೇಕಾನಂದರಂತಹ ಮಹಾನ್ ವ್ಯಕ್ತಿಗಳಿಂದ 'ತಾಯಿ' ಎಂದು ಪರಿಗಣಿಸಲ್ಪಟ್ಟ ಆ ದೇಶದ ಮಣ್ಣಿನ ಪರಿಮಳವನ್ನು ಅದು ಹೊರಹಾಕುತ್ತದೆಯೇ ಎಂದು. ನಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರವು ಸ್ವಾವಲಂಬನೆಯಲ್ಲಿದೆ, ನಮ್ಮ ದೇಶದಲ್ಲಿ ತಯಾರಿಸಿದ ವಸ್ತುಗಳನ್ನು ಖರೀದಿಸುವಲ್ಲಿ – ವೋಕಲ್‌ ಫಾರ್‌ ಲೋಕಲ್‌. ಇದರಿಂದ ಉದ್ಯೋಗವೂ ಸೃಷ್ಟಿಯಾಗಲಿದೆ. ಆರ್ಥಿಕತೆಯು ಕೂಡ ವೇಗವಾಗಿ ಬೆಳೆಯಲಿದೆ. ಇದರಿಂದ ದೇಶದ ಕಡು ಬಡವರಿಗೂ ಸರಿಯಾದ ಗೌರವ ಸಿಗುತ್ತದೆ. ಆದುದರಿಂದ ನಮ್ಮ ದೇಶದ ಯುವಕರು ‘ವೋಕಲ್ ಫಾರ್ ಲೋಕಲ್ʼ ಅನ್ನು ತಮ್ಮ ಜೀವನದ ಮಂತ್ರವನ್ನಾಗಿಸಿಕೊಳ್ಳಬೇಕು. ಹಾಗಾದಾಗ ಸ್ವಾತಂತ್ರ್ಯದ 100 ವರ್ಷಗಳು ಎಷ್ಟು ಭವ್ಯವಾದ, ದೈವಿಕವಾಗಿರುವುದನ್ನು ನೀವು ಊಹಿಸಬಹುದು! ಇದು ಕೌಶಲ್ಯ ಮತ್ತು ಸಾಮರ್ಥ್ಯಗಳಿಂದ ತುಂಬಿರುತ್ತದೆ. ಸಂಕಲ್ಪಗಳು ನೆರವೇರುವ ಕ್ಷಣಗಳಿರುತ್ತವೆ.

ಸ್ನೇಹಿತರೇ

ನಾನು ಪ್ರತಿ ಬಾರಿಯೂ ಒಂದು ವಿಷಯದ ಬಗ್ಗೆ ಮಾತನಾಡುತ್ತೇನೆ. ನಾನು ಅದನ್ನು ಮತ್ತೊಮ್ಮೆ ಹೇಳಲು ಬಯಸುತ್ತೇನೆ. ನಾನು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ ಏಕೆಂದರೆ ನೀವು ಈ ಪ್ರದೇಶದಲ್ಲಿ ನಾಯಕತ್ವವನ್ನು ಕೈಗೊಂಡಿದ್ದೀರಿ ಮತ್ತು ಅದು ಸ್ವಚ್ಛತೆ ಮತ್ತು ನೈರ್ಮಲ್ಯ. ಸ್ವಚ್ಛತೆಯನ್ನು ಜೀವನಶೈಲಿಯ ಭಾಗವಾಗಿಸುವಲ್ಲಿ ನಿಮ್ಮಂತಹ ಎಲ್ಲಾ ಯುವಕರ ಕೊಡುಗೆ ಮುಖ್ಯವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಇಂತಹ ಅನೇಕ ಹೋರಾಟಗಾರರಿದ್ದಾರೆ, ಅವರ ಕೊಡುಗೆಗೆ ಅರ್ಹವಾದ ಮನ್ನಣೆ ಸಿಗಲಿಲ್ಲ. ಅವರು ತ್ಯಾಗ ಮಾಡಿದರು, ಕಠಿಣ ತಪಸ್ಸು ಮಾಡಿದರು, ಆದರೆ ಇನ್ನೂ ಅವರಿಗೆ ಮನ್ನಣೆ ಸಿಗಲಿಲ್ಲ. ನಮ್ಮ ಯುವಕರು ಅಂತಹ ವ್ಯಕ್ತಿಗಳ ಬಗ್ಗೆ ಹೆಚ್ಚು ಹೆಚ್ಚು ಬರೆಯುತ್ತಾರೆ, ಅವರು ಹೆಚ್ಚು ಸಂಶೋಧನೆ ಮಾಡುತ್ತಾರೆ ಮತ್ತು ಅಂತಹವರನ್ನು ಇತಿಹಾಸದ ಪುಟಗಳಿಂದ ಕಂಡುಕೊಂಡರೆ, ದೇಶದ ಮುಂದಿನ ಪೀಳಿಗೆಯಲ್ಲಿ ಉತ್ತಮ ಜಾಗೃತಿ ಇರುತ್ತದೆ. ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸವು ಬಲಿಷ್ಠವಾಗಿರುತ್ತದೆ, ಹೆಚ್ಚು ಶಕ್ತಿಯುತವಾಗಿರುತ್ತದೆ ಮತ್ತು ಹೆಚ್ಚು ಸ್ಫೂರ್ತಿದಾಯಕವಾಗಿರುತ್ತದೆ.

ಸ್ನೇಹಿತರೇ,

ಪುದುಚೇರಿಯು 'ಏಕ್ ಭಾರತ್ ಶ್ರೇಷ್ಠ ಭಾರತ'ಕ್ಕೆ ಒಂದು ಸುಂದರ ಉದಾಹರಣೆಯಾಗಿದೆ. ವಿವಿಧ ಪ್ರದೇಶಗಳಿಂದ ಬರುವ ವಿವಿಧ ತೊರೆಗಳು ಈ ಸ್ಥಳಕ್ಕೆ ಏಕೀಕೃತ ಗುರುತನ್ನು ನೀಡುತ್ತವೆ. ಇಲ್ಲಿ ನಡೆಯುವ ಸಂವಾದವು ʼಏಕ್ ಭಾರತ್ ಶ್ರೇಷ್ಠ ಭಾರತ್ʼ ನ ಸ್ಫೂರ್ತಿಯನ್ನು ಮತ್ತಷ್ಟು ಬಲಪಡಿಸುತ್ತದೆ. ನಿಮ್ಮ ಸಮಾಲೋಚನೆಗಳಿಂದ ಹೊರಹೊಮ್ಮುವ ಕೆಲವು ಹೊಸ ತೀರ್ಮಾನಗಳು ಮತ್ತು ನೀವು ಕಲಿಯುವ ಹೊಸ ವಿಷಯಗಳು ಮುಂಬರುವ ವರ್ಷಗಳಲ್ಲಿ ರಾಷ್ಟ್ರದ ಸೇವೆಗೆ ಸ್ಫೂರ್ತಿಯಾಗುತ್ತವೆ. ರಾಷ್ಟ್ರೀಯ ಯುವಜನೋತ್ಸವದಲ್ಲಿ ನನಗೆ ಸಂಪೂರ್ಣ ನಂಬಿಕೆಯಿದೆ ಮತ್ತು ಇದು ನಮ್ಮ ಆಕಾಂಕ್ಷೆಗಳನ್ನು ಸಾಧಿಸುವ ಹಾದಿಯನ್ನು ಸುಗಮಗೊಳಿಸುತ್ತದೆ.

ಸ್ನೇಹಿತರೇ,

ಇದು ಹಬ್ಬಗಳ ಕಾಲವೂ ಹೌದು. ಭಾರತದ ಮೂಲೆ ಮೂಲೆಯಲ್ಲಿ ಲೆಕ್ಕವಿಲ್ಲದಷ್ಟು ಹಬ್ಬಗಳು ನಡೆಯುತ್ತಿವೆ. ಮಕರ ಸಂಕ್ರಾಂತಿ, ಲೋಹ್ರಿ, ಪೊಂಗಲ್, ಉತ್ತರಾಯಣ ಮತ್ತು ಬಿಹುವನ್ನು ವಿವಿಧ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ. ನಿಮ್ಮೆಲ್ಲರಿಗೂ ಈ ಹಬ್ಬಗಳ ಮುಂಚಿತವಾಗಿ ಶುಭಾಶಯಗಳು. ಕೊರೊನಾದಿಂದಾಗಿ ನಾವು ಸಂಪೂರ್ಣ ಎಚ್ಚರಿಕೆಯಿಂದ ಮತ್ತು ಜಾಗರೂಕತೆಯಿಂದ ಹಬ್ಬವನ್ನು ಆಚರಿಸಬೇಕಾಗಿದೆ. ಸಂತೋಷವಾಗಿರಿ, ಆರೋಗ್ಯವಾಗಿರಿ. ಹೃತ್ಪೂರ್ವಕ ಅಭಿನಂದನೆಗಳು! ಧನ್ಯವಾದ !

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
PM Modi congratulates hockey team for winning Women's Asian Champions Trophy
November 21, 2024

The Prime Minister Shri Narendra Modi today congratulated the Indian Hockey team on winning the Women's Asian Champions Trophy.

Shri Modi said that their win will motivate upcoming athletes.

The Prime Minister posted on X:

"A phenomenal accomplishment!

Congratulations to our hockey team on winning the Women's Asian Champions Trophy. They played exceptionally well through the tournament. Their success will motivate many upcoming athletes."