ಸಾರ್ವಜನಿಕ ಆರೋಗ್ಯ ವಲಯದಲ್ಲಿ ನಾವೀನ್ಯತಾ ಶಕ್ತಿ ಸಮರ್ಪಕವಾಗಿ ಬಳಸಿಕೊಂಡ ಭಾರತ ಸರ್ಕಾರ ಮತ್ತು ಪ್ರಧಾನಮಂತ್ರಿಗಳ ಕಾರ್ಯ ಶ್ಲಾಘಿಸಿದ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರು
“ನಿಮ್ಮ ನಾಯಕತ್ವದಿಂದಾಗಿ ಸಾಂಪ್ರದಾಯಿಕ ಔಷಧಗಳ ಬಳಕೆಯಲ್ಲಿ ಗಣನೀಯ ಬದಲಾವಣೆಯಾಗುತ್ತಿದೆ” – ಪ್ರಧಾನಮಂತ್ರಿ ಅವರಿಗೆ ಮಹಾ ನಿರ್ದೇಶಕರ ಹೇಳಿಕೆ
ಡಾ. ತೆದ್ರೊಸ್ ಗೆಬ್ರಿಯಾಸಿಸ್ ಅವರಿಗೆ ‘ತುಳಸಿ ಭಾಯ್’ ಗುಜರಾತಿ ಹೆಸರು ನೀಡಿದ ಪ್ರಧಾನಮಂತ್ರಿ
“ಆಯುಷ್ ವಲಯದಲ್ಲಿ ಬಂಡವಾಳ ಹೂಡಿಕೆ ಮತ್ತು ನಾವೀನ್ಯತೆಯ ಅಪರಿಮಿತ ಸಾಧ್ಯತೆಗಳು”
“ಆಯುಷ್ ವಲಯ 2014ರಲ್ಲಿ 3 ಬಿಲಿಯನ್ ಡಾಲರ್ ಗಿಂತ ಕಡಿಮೆ ಇತ್ತು, ಈಗ 18 ಬಿಲಿಯನ್ ಡಾಲರ್ ಗೂ ಅಧಿಕ ಹೆಚ್ಚಳ”
“ಭಾರತ ಗಿಡಮೂಲಿಕೆ ಸಸ್ಯಗಳ ನಿಧಿಯಾಗಿದ್ದು, ಒಂದು ರೀತಿಯಲ್ಲಿ ಅದು ನಮ್ಮ “ಹಸಿರು ಹೊನ್ನು”
“ಕಳೆದ ಕೆಲವು ವರ್ಷಗಳಿಂದೀಚೆಗೆ ನಾನಾ ದೇಶಗಳೊಂದಿಗೆ 50ಕ್ಕೂ ಅಧಿಕ ಒಡಂಬಡಿಕೆಗಳಿಗೆ ಸಹಿ. ನಮ್ಮ ಆಯುಷ್ ತಜ್ಞರಿಂದ ಭಾರತೀಯ ಮಾನಕ ಬ್ಯೋರೋ ಸಹಭಾಗಿತ್ವದಲ್ಲಿ ಐಎಸ್ಒ ಮಾನದಂಡಗಳ ಅಭಿವೃದ್ಧಿ. ಇದರಿಂದ 150ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಯುಷ್ ನ ಭಾರೀ ರಫ್ತು ಮಾರುಕಟ್ಟೆ ತೆರೆದುಕೊಳ್ಳಲಿದೆ’’
“ಎಫ್ಎಸ್ಎಸ್ಎಐನ ‘ಆಯುಷ್ ಆಹಾರ್’ ಗಿಡಮೂಲಿಕೆ ಪೌಷ್ಟಿಕಾಂಶ ಪೂರಕ ಉತ್ಪಾದಕರಿಗೆ ಹೆಚ್ಚಿನ ಪ್ರಮಾಣದಲ್ಲಿ ನೆರವು”
“ವಿಶೇಷ ಆಯುಷ್ ಗುರುತು ಜಗತ್ತಿನಾದ್ಯಂತ ಜನರಿಗೆ ಗುಣಮಟ್ಟದ ಆಯುಷ್ ಉತ್ಪನ್ನಗಳ ವಿಶ್ವಾಸಾರ್ಹತೆ ಮೂಡಿಸುತ್ತದೆ’’
“ದೇಶಾದ್ಯಂತ ಆಯುಷ್ ಉತ್ಪನ್ನಗಳ ಉತ್ಪಾದನೆ, ಸಂಶೋಧನೆ ಮತ್ತು ಉತ್ತೇಜನಕ್ಕೆ ಸರ್ಕಾರದಿಂದ ಆಯುಷ್ ಪಾರ್ಕ್ ಗಳ ಜಾಲ ಅಭಿವೃದ್ಧಿ”
“ಭಾರತಕ್ಕೆ ಆಯುಷ್ ಥೆರಪಿಗೆ ಆಗಮಿಸುವ ಜನರಿಗೆ ಭಾರತದಿಂದ ವಿಶೇಷ ಆಯುಷ್ ವೀಸಾ ಕ್ಯಾಟಗರಿ ಆರಂಭಿಸಲಾಗುವುದು’’
“ಆಯುರ್ವೇದ ಸಮೃದ್ಧಿಯ ಹಿಂದಿನ ಮುಖ್ಯ ಕಾರಣ ಮುಕ್ತ ಮೂಲ ಮಾದರಿಯಾಗಿದೆ’’
“ಅಮೃತ ಕಾಲದ ಮುಂದಿನ 25 ವರ್ಷ ಸಾಂಪ್ರದಾಯಿಕ ಔಷಧಗಳಿಗೆ ಸುವರ್ಣ ಯುಗವಾಗಲಿದೆ”

ನಮಸ್ತೆ!

ನೀವೆಲ್ಲರೂ ಹೇಗಿದ್ದೀರಿ?

ಮಾರಿಷಸ್ ನ ಗೌರವಾನ್ವಿತ ಪ್ರಧಾನ ಮಂತ್ರಿ ಪ್ರವಿಂದ್ ಜಗನ್ನಾಥ್ ಜೀ, ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೋಸ್, ಗುಜರಾತ್ ನ ಹುರುಪಿನ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್, ನನ್ನ ಸಂಪುಟ ಸಹೋದ್ಯೋಗಿಗಳಾದ ಸರ್ಬಾನಂದ ಸೋನೊವಾಲ್ ಜೀ, ಮನ್ಸುಖ್ ಭಾಯಿ ಮಾಂಡವಿಯಾ ಜೀ, ಮಹೇಂದ್ರ ಭಾಯಿ ಮುಂಜಾಪಾರಾ ಜೀ, ದೇಶ ಮತ್ತು ವಿದೇಶಗಳ ಎಲ್ಲಾ ರಾಜತಾಂತ್ರಿಕರು, ವಿಜ್ಞಾನಿಗಳು, ಉದ್ಯಮಿಗಳು ಮತ್ತು ತಜ್ಞರು, ಮಹಿಳೆಯರು ಮತ್ತು ಮಹನೀಯರೇ! ಜಾಗತಿಕ ಆಯುಷ್ ಹೂಡಿಕೆ ಮತ್ತು ಆವಿಷ್ಕಾರ ಶೃಂಗಸಭೆಗೆ ನಾನು ನಿಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ವಿವಿಧ ವಲಯಗಳಲ್ಲಿ ಹೂಡಿಕೆಗಾಗಿ ಹೂಡಿಕೆ ಶೃಂಗಸಭೆಗಳನ್ನು ನಡೆಸಿರುವುದನ್ನು ನಾವು ಆಗಾಗ್ಗೆ ನೋಡಿದ್ದೇವೆ ಮತ್ತು ವಿಶೇಷವಾಗಿ ಗುಜರಾತ್ ಈ ಸಂಪ್ರದಾಯವನ್ನು ದೊಡ್ಡ ಪ್ರಮಾಣದಲ್ಲಿ ಮುಂದುವರಿಸಿದೆ. ಆದರೆ ಇದೇ ಮೊದಲ ಬಾರಿಗೆ, ಆಯುಷ್ ವಲಯಕ್ಕಾಗಿಯೇ ಇಂತಹ ಹೂಡಿಕೆ ಶೃಂಗಸಭೆಯನ್ನು ಪ್ರತ್ಯೇಕವಾಗಿ ನಡೆಸಲಾಗುತ್ತಿದೆ.

 ಸ್ನೇಹಿತರೇ ,

 ಇಡೀ ಜಗತ್ತು ಕೊರೋನಾದ ಹಿಡಿತದಲ್ಲಿದ್ದ ಸಮಯದಲ್ಲಿ ಇಂತಹ ಹೂಡಿಕೆ ಶೃಂಗಸಭೆಯ ಕಲ್ಪನೆ ನನಗೆ ಹೊಳೆಯಿತು. ಆ ಸಮಯದಲ್ಲಿ, ಆಯುರ್ವೇದ ಔಷಧಿಗಳು, ಆಯುಷ್ ಕಷಾಯ ಮತ್ತು ಅಂತಹ ಅನೇಕ ಉತ್ಪನ್ನಗಳು ಜನರಿಗೆ ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತಿದ್ದವು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಪರಿಣಾಮವಾಗಿ, ಕೊರೊನಾ ಅವಧಿಯಲ್ಲಿ, ಭಾರತದಿಂದ ಅರಿಶಿನದ ರಫ್ತು ಅನೇಕ ಪಟ್ಟು ಹೆಚ್ಚಾಗಿದೆ. ಇದು ಅದರ ಪರಿಣಾಮಕಾರಿತ್ವಕ್ಕೆ ಪುರಾವೆಯಾಗಿದೆ. ಈ ಅವಧಿಯಲ್ಲಿ ಆಧುನಿಕ ಔಷಧ ಕಂಪನಿಗಳು ಮತ್ತು ಲಸಿಕೆ ತಯಾರಕರು ಸರಿಯಾದ ಸಮಯದಲ್ಲಿ ಹೂಡಿಕೆಯನ್ನು ಸ್ವೀಕರಿಸಿದಾಗ ಪ್ರಶಂಸನೀಯ ಕೆಲಸವನ್ನು ಮಾಡಬಹುದು ಎಂದು ನಾವು ನೋಡಿದ್ದೇವೆ. ಇಷ್ಟು ಬೇಗ ನಾವು ಕೊರೊನಾ ವಿರುದ್ಧ 'ಮೇಡ್ ಇನ್ ಇಂಡಿಯಾ' ಲಸಿಕೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎಂದು ಯಾರು ಊಹಿಸಿರಬಹುದು? ಆವಿಷ್ಕಾರ ಮತ್ತು ಹೂಡಿಕೆಯು ಯಾವುದೇ ವಲಯದ ಸಾಮರ್ಥ್ಯವನ್ನು ಅನೇಕ ಪಟ್ಟು ಹೆಚ್ಚಿಸುತ್ತದೆ. ಈಗ ಆಯುಷ್ ವಲಯದಲ್ಲಿ ಹೂಡಿಕೆಯನ್ನು ಸಾಧ್ಯವಾದಷ್ಟು ಹೆಚ್ಚಿಸುವ ಸಮಯ ಬಂದಿದೆ. ಇಂದಿನ ಸಂದರ್ಭ, ಈ ಶೃಂಗಸಭೆಯು ಒಂದು ಉತ್ತಮ ಆರಂಭವಾಗಿದೆ.

ಸ್ನೇಹಿತರೇ ,

ಆಯುಷ್ ಕ್ಷೇತ್ರದಲ್ಲಿ ಹೂಡಿಕೆ ಮತ್ತು ನಾವೀನ್ಯತೆಯ ಸಾಧ್ಯತೆಗಳು ಅಪರಿಮಿತವಾಗಿವೆ. ಆಯುಷ್ ಔಷಧಿಗಳು, ಪೂರಕಗಳು ಮತ್ತು ಸೌಂದರ್ಯವರ್ಧಕಗಳ ಉತ್ಪಾದನೆಯಲ್ಲಿ ನಾವು ಈಗಾಗಲೇ ಅಭೂತಪೂರ್ವ ಬೆಳವಣಿಗೆಯನ್ನು ನೋಡುತ್ತಿದ್ದೇವೆ. 2014ಕ್ಕಿಂತ ಮೊದಲು ಆಯುಷ್ ವಲಯವು 3  ಶತಕೋಟಿ ಡಾಲರ್ ಗಿಂತ ಕಡಿಮೆ ಮೌಲ್ಯದ್ದಾಗಿದ್ದರೂ ಇಂದು ಅದು 18 ಶತಕೋಟಿ ಡಾಲರ್ ಗಿಂತ ಹೆಚ್ಚಾಗಿದೆ ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ. ವಿಶ್ವದಾದ್ಯಂತ ಆಯುಷ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಮುಂಬರುವ ವರ್ಷಗಳಲ್ಲಿ ಈ ಬೆಳವಣಿಗೆಯು ಮತ್ತಷ್ಟು ಹೆಚ್ಚಾಗಲಿದೆ. ಪೌಷ್ಟಿಕಾಂಶ ಪೂರಕಗಳು, ಔಷಧಿಗಳ ಪೂರೈಕೆ ಸರಪಳಿ ನಿರ್ವಹಣೆ,  ಆಯುಷ್ ಆಧಾರಿತ ರೋಗನಿರ್ಣಯ ಸಾಧನಗಳು, ಅಥವಾ ಟೆಲಿಮೆಡಿಸಿನ್ ಆಗಿರಲಿ, ಎಲ್ಲೆಡೆ ಹೂಡಿಕೆ ಮತ್ತು ಆವಿಷ್ಕಾರಗಳಿಗೆ ಹೊಸ ಅವಕಾಶಗಳಿವೆ.

ಸ್ನೇಹಿತರೇ,

ಸಾಂಪ್ರದಾಯಿಕ ಔಷಧಗಳ ಕ್ಷೇತ್ರದಲ್ಲಿ ನವೋದ್ಯಮ ಸಂಸ್ಕೃತಿಯನ್ನು ಉತ್ತೇಜಿಸಲು ಆಯುಷ್ ಸಚಿವಾಲಯ ಹಲವಾರು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಕೆಲವು ದಿನಗಳ ಹಿಂದೆ ಅಖಿಲ ಭಾರತ ಆಯುರ್ವೇದ ಸಂಸ್ಥೆ ಅಭಿವೃದ್ಧಿಪಡಿಸಿದ ಇನ್ಕ್ಯುಬೇಶನ್ ಕೇಂದ್ರವನ್ನು ಉದ್ಘಾಟಿಸಲಾಯಿತು. ಆಯೋಜಿಸಲಾದ ಮತ್ತು ಅತ್ಯಂತ ಪ್ರೋತ್ಸಾಹದಾಯಕವಾದ ನವೋದ್ಯಮ ಸವಾಲಿನ ಬಗ್ಗೆ ಯುವಕರಲ್ಲಿ ಹೆಚ್ಚಿನ ಉತ್ಸಾಹ ಕಂಡುಬಂದಿದೆ. ನನ್ನ ಯುವ ಸ್ನೇಹಿತರೇ, ಭಾರತದ ನವೋದ್ಯಮದ ಸುವರ್ಣಯುಗ ಪ್ರಾರಂಭವಾಗಿದೆ ಎಂದು ನಿಮಗೆ ಹೆಚ್ಚು ತಿಳಿದಿದೆ. ಒಂದು ರೀತಿಯಲ್ಲಿ, ಇದು ಭಾರತದಲ್ಲಿ ಯುನಿಕಾರ್ನ್ ಗಳ ಯುಗವಾಗಿದೆ. 2022ರ ವರ್ಷ ಆರಂಭವಾಗಿ ಇನ್ನೂ 4 ತಿಂಗಳು ಕಳೆದಿಲ್ಲ. ಆದರೆ ಈ ವರ್ಷ ಇಲ್ಲಿಯವರೆಗೆ ಭಾರತದಿಂದ 14 ನವೋದ್ಯಮಗಳು ಯುನಿಕಾರ್ನ್ ಕ್ಲಬ್ ಗೆ ಸೇರ್ಪಡೆಯಾಗಿವೆ. ನಮ್ಮ ಆಯುಷ್ ಆಧಾರಿತ ನವೋದ್ಯಮಗಳಿಂದ ಯುನಿಕಾರ್ನ್ ಗಳು ಸಹ ಶೀಘ್ರದಲ್ಲೇ ಹೊರಹೊಮ್ಮುತ್ತವೆ ಎಂದು ನನಗೆ ಖಾತ್ರಿಯಿದೆ.

ಸ್ನೇಹಿತರೇ,

 ಭಾರತ ಗಿಡಮೂಲಿಕೆ ಸಸ್ಯಗಳ ನಿಧಿಯಾಗಿದೆ ಮತ್ತು ಹಿಮಾಲಯವು ಇದಕ್ಕೆ ಹೆಸರುವಾಸಿಯಾಗಿದೆ. ಇದು ಒಂದು ರೀತಿಯಲ್ಲಿ ನಮ್ಮ 'ಗ್ರೀನ್ ಗೋಲ್ಡ್ ' ಆಗಿದೆ. ಇಲ್ಲೊಂದು ಮಾತು ಇದೆ - ಅಮಂತ್ರ ಅಕ್ಷರಂ ನಾಸ್ತಿ, ನಾಸ್ತಿ ಮೂಲ ಅನುಷಧಮ್  ಅಂದರೆ, ಮಂತ್ರವು ಪ್ರಾರಂಭವಾಗದ ಒಂದೇ ಒಂದು ಅಕ್ಷರವೂ ಇಲ್ಲ; ಔಷಧಿಯನ್ನು ತಯಾರಿಸಲು ಸಾಧ್ಯವಾಗದ ಯಾವುದೇ ಬೇರು ಅಥವಾ ಗಿಡ ಮೂಲಿಕೆಯೂ ಇಲ್ಲ. ಈ ನೈಸರ್ಗಿಕ ಸಂಪತ್ತನ್ನು ಮನುಕುಲದ ಹಿತದೃಷ್ಟಿಯಿಂದ ಬಳಸಿಕೊಳ್ಳಲು, ನಮ್ಮ ಸರ್ಕಾರವು ಗಿಡಮೂಲಿಕೆ ಮತ್ತು ಔಷಧೀಯ ಸಸ್ಯಗಳ ಉತ್ಪಾದನೆಯನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದೆ.

ಸ್ನೇಹಿತರೇ,

ಗಿಡಮೂಲಿಕೆಗಳು ಮತ್ತು ಔಷಧೀಯ ಸಸ್ಯಗಳ ಉತ್ಪಾದನೆಯು ರೈತರ ಆದಾಯ ಮತ್ತು ಜೀವನೋಪಾಯವನ್ನು ಹೆಚ್ಚಿಸುವ ಉತ್ತಮ ಮಾರ್ಗವಾಗಿದೆ. ಇದರ ಮೂಲಕ ಉದ್ಯೋಗ ಸೃಷ್ಟಿಗೆ ಸಾಕಷ್ಟು ಅವಕಾಶಗಳಿವೆ. ಆದರೆ, ಅಂತಹ ಸಸ್ಯಗಳು ಮತ್ತು ಉತ್ಪನ್ನಗಳ ಮಾರುಕಟ್ಟೆಯು ತುಂಬಾ ಸೀಮಿತವಾಗಿದೆ ಮತ್ತು ವಿಶೇಷವಾಗಿದೆ ಎಂದು ನಾವು ನೋಡಿದ್ದೇವೆ. ಔಷಧೀಯ ಸಸ್ಯಗಳ ಉತ್ಪಾದನೆಯಲ್ಲಿ ತೊಡಗಿರುವ ರೈತರು ಮಾರುಕಟ್ಟೆಯೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸುವ ಸೌಲಭ್ಯವನ್ನು ಪಡೆಯುವುದು ನಿರ್ಣಾಯಕವಾಗಿದೆ. ಇದನ್ನು ಸಾಧಿಸಲು ಆಯುಷ್ ಇ-ಮಾರುಕಟ್ಟೆ ಸ್ಥಳದ ಆಧುನೀಕರಣ ಮತ್ತು ವಿಸ್ತರಣೆಗೆ ಸರ್ಕಾರ ತ್ವರಿತ ಗತಿಯಲ್ಲಿ ಕೆಲಸ ಮಾಡುತ್ತಿದೆ. ಈ ಪೋರ್ಟಲ್ ಮೂಲಕ, ಗಿಡಮೂಲಿಕೆಗಳು ಮತ್ತು ಔಷಧೀಯ ಸಸ್ಯಗಳ ಕೃಷಿಯಲ್ಲಿ ತೊಡಗಿರುವ ರೈತರನ್ನು ಆಯುಷ್ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳೊಂದಿಗೆ ಸಂಪರ್ಕಿಸಲಾಗುವುದು.

ಸ್ನೇಹಿತರೇ,

ಆಯುಷ್ ಉತ್ಪನ್ನಗಳ ರಫ್ತು ಉತ್ತೇಜಿಸಲು ಕಳೆದ ವರ್ಷಗಳಲ್ಲಿ ಅಭೂತಪೂರ್ವ ಪ್ರಯತ್ನಗಳನ್ನು ಸಹ ಮಾಡಲಾಗಿದೆ. ಆಯುಷ್ ಔಷಧಗಳನ್ನು ಇತರ ರಾಷ್ಟ್ರಗಳ ಜತೆ ಪರಸ್ಪರ ಗುರುತಿಸಲು ಒತ್ತು ನೀಡಲಾಗಿದೆ. ಇದಕ್ಕಾಗಿ ನಾವು ಕಳೆದ ಕೆಲವು ವರ್ಷಗಳಲ್ಲಿ ವಿವಿಧ ರಾಷ್ಟ್ರಗಳೊಂದಿಗೆ 50ಕ್ಕೂ ಹೆಚ್ಚು ತಿಳುವಳಿಕಾ ಒಡಂಬಡಿಕೆಗಳಿಗೆ ಸಹಿ ಹಾಕಿದ್ದೇವೆ. ನಮ್ಮ ಆಯುಷ್ ತಜ್ಞರು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಸಹಯೋಗದೊಂದಿಗೆ ಐಎಸ್ಒ ಮಾನದಂಡಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಇದು 150ಕ್ಕೂ ಹೆಚ್ಚು ದೇಶಗಳಲ್ಲಿ ಆಯುಷ್ ಗೆ ಬೃಹತ್ ರಫ್ತು ಮಾರುಕಟ್ಟೆಯನ್ನು ತೆರೆಯುತ್ತದೆ. ಅಂತೆಯೇ, ಎಫ್ಎಸ್ಎಸ್ಎಐ ಕಳೆದ ವಾರ ತನ್ನ ನಿಬಂಧನೆಗಳಲ್ಲಿ ಹೊಸ ವರ್ಗ 'ಆಯುಷ್ ಆಹಾರ್' ಅನ್ನು ಘೋಷಿಸಿದೆ. ಇದು ಗಿಡಮೂಲಿಕೆ ಪೌಷ್ಠಿಕಾಂಶ ಪೂರಕಗಳ ಉತ್ಪನ್ನಗಳನ್ನು ಹೆಚ್ಚು ಸುಲಭಗೊಳಿಸುತ್ತದೆ. ನಾನು ನಿಮಗೆ ಇನ್ನೂ ಒಂದು ಮಾಹಿತಿಯನ್ನು ನೀಡಲು ಬಯಸುತ್ತೇನೆ. ಭಾರತವು ವಿಶೇಷ ಆಯುಷ್ ಗುರುತನ್ನು ಸಹ ಅಭಿವೃದ್ಧಿಪಡಿಸಲಿದೆ. ಇದು ಜಾಗತಿಕ ಗುರುತನ್ನು ಸಹ ಹೊಂದಿರುತ್ತದೆ. ಭಾರತದಲ್ಲಿ ತಯಾರಾದ ಅತ್ಯುನ್ನತ ಗುಣಮಟ್ಟದ ಆಯುಷ್ ಉತ್ಪನ್ನಗಳು ಈ ಗುರುತನ್ನು ಹೊಂದಿರುತ್ತವೆ. ಈ ಆಯುಷ್ ಮಾರ್ಕ್ ಅನ್ನು ಆಧುನಿಕ ತಂತ್ರಜ್ಞಾನದ ನಿಬಂಧನೆಗಳೊಂದಿಗೆ ಸಜ್ಜುಗೊಳಿಸಲಾಗುವುದು. ಇದು ವಿಶ್ವದಾದ್ಯಂತದ ಜನರಿಗೆ ಆಯುಷ್ ಉತ್ಪನ್ನಗಳಲ್ಲಿ ಗುಣಮಟ್ಟದ ವಿಶ್ವಾಸವನ್ನು ನೀಡುತ್ತದೆ. ಇತ್ತೀಚೆಗೆ ರಚಿಸಲಾದ ಆಯುಷ್ ರಫ್ತು ಉತ್ತೇಜನ ಮಂಡಳಿಯು ರಫ್ತುಗಳನ್ನು ಪ್ರೋತ್ಸಾಹಿಸುತ್ತದೆ ಮತ್ತು ವಿದೇಶಿ ಮಾರುಕಟ್ಟೆಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.

ಸ್ನೇಹಿತರೇ,

ಇಂದು ನಾನು ನಿಮ್ಮ ಮುಂದೆ ಮತ್ತೊಂದು ಘೋಷಣೆ ಮಾಡಲಿದ್ದೇನೆ. ದೇಶಾದ್ಯಂತ ಆಯುಷ್ ಉತ್ಪನ್ನಗಳ ಉತ್ತೇಜನಕ್ಕಾಗಿ, ಸಂಶೋಧನೆ ಮತ್ತು ಉತ್ಪಾದನೆಯನ್ನು ಉತ್ತೇಜಿಸಲು ನಮ್ಮ ಸರ್ಕಾರ ಆಯುಷ್ ಪಾರ್ಕ್ ಗಳ ಜಾಲವನ್ನು ಅಭಿವೃದ್ಧಿಪಡಿಸಲಿದೆ. ಈ ಆಯುಷ್ ಪಾರ್ಕ್ ಗಳು ದೇಶದಲ್ಲಿ ಆಯುಷ್ ಉತ್ಪಾದನೆಗೆ ಹೊಸ ದಿಕ್ಕನ್ನು ನೀಡುತ್ತವೆ.

ಸ್ನೇಹಿತರೇ,

ಇಂದು ಭಾರತ ವಿಶ್ವದ ಹಲವಾರು ದೇಶಗಳಿಗೆ ವೈದ್ಯಕೀಯ ಪ್ರವಾಸೋದ್ಯಮದ ದೃಷ್ಟಿಯಿಂದ ಬಹಳ ಆಕರ್ಷಕ ತಾಣವಾಗಿ ಮಾರ್ಪಟ್ಟಿದೆ ಎಂಬುದನ್ನು ನಾವು ನೋಡಿದ್ದೇವೆ. ಇದನ್ನು ಗಮನದಲ್ಲಿಟ್ಟುಕೊಂಡು, ವೈದ್ಯಕೀಯ ಪ್ರವಾಸೋದ್ಯಮದ ಈ ಕ್ಷೇತ್ರದಲ್ಲಿ ಸಾಕಷ್ಟು ಹೂಡಿಕೆ ಸಾಮರ್ಥ್ಯವಿದೆ. ಕೇರಳದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಸಾಂಪ್ರದಾಯಿಕ ಔಷಧವು ಹೇಗೆ ಸಹಾಯ ಮಾಡಿದೆ ಎಂಬುದನ್ನು ನಾವು ನೋಡಿದ್ದೇವೆ. ಈ ಶಕ್ತಿ ಇಡೀ ಭಾರತದಲ್ಲಿ, ಭಾರತದ ಮೂಲೆ ಮೂಲೆಯಲ್ಲಿದೆ. 'ಹೀಲ್ ಇನ್ ಇಂಡಿಯಾ' ಈ ದಶಕದ ಅತಿದೊಡ್ಡ ಬ್ರಾಂಡ್ ಆಗಬಹುದು. ಆಯುರ್ವೇದ, ಯುನಾನಿ, ಸಿದ್ಧ ಇತ್ಯಾದಿಗಳನ್ನು ಆಧರಿಸಿದ ಸ್ವಾಸ್ಥ್ಯ ಕೇಂದ್ರಗಳು ಬಹಳ ಜನಪ್ರಿಯವಾಗಿವೆ. ದೇಶದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆಧುನಿಕ ಸಂಪರ್ಕ ಮೂಲಸೌಕರ್ಯವು ಇದನ್ನು ಮತ್ತಷ್ಟು ಸುಗಮಗೊಳಿಸುತ್ತದೆ. ನಾನು ಮೊದಲೇ ಹೇಳಿದಂತೆ, ಇಂದು ಭಾರತವು ವೈದ್ಯಕೀಯ ಪ್ರವಾಸೋದ್ಯಮಕ್ಕೆ ಆಕರ್ಷಕ ತಾಣವಾಗುತ್ತಿದೆ. ಆದ್ದರಿಂದ ಆಯುಷ್ ಚಿಕಿತ್ಸೆಯ ಲಾಭವನ್ನು ಪಡೆಯಲು ವಿದೇಶಿ ಪ್ರಜೆಗಳು ಭಾರತಕ್ಕೆ ಬರಲು ಬಯಸುತ್ತಿರುವುದರಿಂದ, ಸರ್ಕಾರ ಮತ್ತೊಂದು ಉಪಕ್ರಮವನ್ನು ತೆಗೆದುಕೊಳ್ಳುತ್ತಿದೆ. ಶೀಘ್ರದಲ್ಲೇ, ಭಾರತವು ವಿಶೇಷ ಆಯುಷ್ ವೀಸಾ ವರ್ಗವನ್ನು ಪರಿಚಯಿಸಲಿದೆ. ಇದು ಆಯುಷ್ ಚಿಕಿತ್ಸೆಗಾಗಿ ಜನರು ಭಾರತಕ್ಕೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

ಸ್ನೇಹಿತರೇ,

ನಾವು ಆಯುರ್ವೇದದ ಬಗ್ಗೆ ಮಾತನಾಡುತ್ತಿರುವಾಗ, ಇಂದು, ನಾನು ನಿಮಗೆ ಮತ್ತೊಂದು ಬಹಳ ಮುಖ್ಯವಾದ ಮಾಹಿತಿಯನ್ನು ನೀಡಲು ಬಯಸುತ್ತೇನೆ. ನನ್ನ ಸ್ನೇಹಿತ ಮತ್ತು ಕೀನ್ಯಾದ ಮಾಜಿ ಅಧ್ಯಕ್ಷ ರೈಲಾ ಒಡಿಂಗಾ ಮತ್ತು ಅವರ ಮಗಳು ರೋಸ್ಮರಿ ಅವರ ಬಗ್ಗೆಯೂ ನಾನು ಪ್ರಸ್ತಾಪಿಸಲು ಬಯಸುತ್ತೇನೆ. ರೋಸ್ಮರಿ, ನೀವು ಇಲ್ಲಿದ್ದೀರಾ? ಹೌದು, ಅವಳು ಅಲ್ಲಿದ್ದಾಳೆ. ರೋಸ್ ಮೇರಿ, ಗುಜರಾತ್ ಗೆ ಸ್ವಾಗತ. ರೋಸ್ಮರಿ ಬಗ್ಗೆ ಒಂದು ಆಸಕ್ತಿದಾಯಕ ಘಟನೆ ಇದೆ. ನಾನು ಖಂಡಿತವಾಗಿಯೂ ನಿಮಗೆ ಹೇಳಲು ಬಯಸುತ್ತೇನೆ. ಕೆಲವು ದಿನಗಳ ಹಿಂದೆ, ಅವರ ತಂದೆ, ನನ್ನ ಉತ್ತಮ ಸ್ನೇಹಿತ ಒಡಿಂಗಾ ಅವರು ನನ್ನನ್ನು ಭೇಟಿಯಾಗಲು ದೆಹಲಿಗೆ ಬಂದಿದ್ದರು. ಅದು ಭಾನುವಾರವಾಗಿತ್ತು ಮತ್ತು ನಾವು ಬಹಳ ಸಮಯದ ನಂತರ ಭೇಟಿಯಾಗುತ್ತಿರುವುದರಿಂದ ನಾವು ಒಟ್ಟಿಗೆ ಕೆಲವು ಉತ್ತಮ ಸಮಯವನ್ನು ಕಳೆಯಲು ನಿರ್ಧರಿಸಿದೆವು. ಆಗ ಅವರು ರೋಸ್ಮೆರಿಯ ಜೀವನದಲ್ಲಿನ ನೋವಿನ ದುರಂತದ ಬಗ್ಗೆ ನನಗೆ ಹೇಳಿದರು. ಅವರು ಅತ್ಯಂತ ಭಾವುಕರಾಗಿದ್ದರು. ರೋಸ್ಮೆರಿಗೆ ಅವಳ ಕಣ್ಣಿನಲ್ಲಿ ಏನೋ ಸಮಸ್ಯೆ ಇದೆ ಎಂದು ಅವರು ತಮಗೆ ಹೇಳಿದರು. ಆಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು; ಇದು ಬಹುಶಃ ಮೆದುಳಿನ ಗೆಡ್ಡೆಯಾಗಿರಬಹುದು. ಮತ್ತು ರೋಸ್ಮೆರಿ ಆ ಶಸ್ತ್ರಚಿಕಿತ್ಸೆಯಲ್ಲಿ ತನ್ನ ಕಣ್ಣುಗಳನ್ನು ಕಳೆದುಕೊಂಡಳು. ಅವಳಿಗೆ ನೋಡಲು ಸಾಧ್ಯವಾಗಲಿಲ್ಲ. ಕೇವಲ ಊಹಿಸಿಕೊಳ್ಳಿ! ಜೀವನದ ಈ ಹಂತದಲ್ಲಿ ಯಾರಾದರೂ ದೃಷ್ಟಿಯನ್ನು ಕಳೆದುಕೊಂಡರೆ, ಒಬ್ಬ ವ್ಯಕ್ತಿಯು ಎಷ್ಟು ದುಃಖಿತನಾಗುತ್ತಾನೆ ಮತ್ತು ನಿರಾಶೆಗೊಳ್ಳುತ್ತಾನೆ. ಮತ್ತು ಒಬ್ಬ ತಂದೆಯಾಗಿ, ನನ್ನ ಸ್ನೇಹಿತ ಒಡಿಂಗಾ ಜೀ ಪ್ರಪಂಚದ ಪ್ರತಿಯೊಂದು ಭಾಗಕ್ಕೂ ಹೋದರು. ಅವರು ಕೀನ್ಯಾದ ಅತ್ಯಂತ ಹಿರಿಯ ನಾಯಕರಾಗಿದ್ದರು, ಆದ್ದರಿಂದ ಪ್ರಪಂಚದ ಯಾವುದೇ ಸ್ಥಳವನ್ನು ತಲುಪುವುದು ಅವರಿಗೆ ಕಷ್ಟದ ಕೆಲಸವಾಗಿರಲಿಲ್ಲ. ರೋಸ್ಮರಿಯನ್ನು ನಡೆಸಿಕೊಳ್ಳದ ವಿಶ್ವದ ಯಾವುದೇ ಪ್ರಮುಖ ದೇಶವಿಲ್ಲ. ಆದರೆ ರೋಸ್ಮೆರಿಗೆ ಬೆಳಕನ್ನು ನೋಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಅವರು ಭಾರತದಲ್ಲಿ ಯಶಸ್ಸನ್ನು ಪಡೆದರು ಮತ್ತು ಅದೂ ಆಯುರ್ವೇದ ಚಿಕಿತ್ಸೆಯ ನಂತರ. ರೋಸ್ ಮೇರಿಗೆ ಆಯುರ್ವೇದ ಚಿಕಿತ್ಸೆಯನ್ನು ನೀಡಲಾಯಿತು ಮತ್ತು ಅವಳು ತನ್ನ ದೃಷ್ಟಿಯನ್ನು ಮರಳಿ ಪಡೆದಳು. ಅವಳು ಮತ್ತೊಮ್ಮೆ ನೋಡಬಲ್ಲಳು. ಮೊದಲ ಬಾರಿಗೆ ತನ್ನ ಮಕ್ಕಳನ್ನು ಮತ್ತೆ ನೋಡಿದಾಗ, ಆ ಕ್ಷಣಗಳು ಅವಳ ಜೀವನದ ಸುವರ್ಣ ಕ್ಷಣಗಳು ಎಂದು ಒಡಿಂಗಾ ಜೀ ತಮಗೆ ಹೇಳಿದರು. ರೋಸ್ ಮೇರಿ ಕೂಡ ಇಂದು ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದು ನನಗೆ ಸಂತೋಷವಾಗಿದೆ. ಆಕೆಯ ತಂಗಿಯೂ ಇಲ್ಲೇ ಇದ್ದಾಳೆ. ಆಕೆಯ ಸಹೋದರಿ ಈಗ ಸಾಂಪ್ರದಾಯಿಕ ಔಷಧಿಯ ಬಗ್ಗೆ ಕಲಿಸುತ್ತಿದ್ದಾಳೆ ಮತ್ತು ನಾಳೆ ಆಕೆ ತನ್ನ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾಳೆ.

ಸ್ನೇಹಿತರೆ,

21 ನೇ ಶತಮಾನದ ಭಾರತ ತನ್ನ ಅನುಭವಗಳು ಮತ್ತು ಜ್ಞಾನವನ್ನು ವಿಶ್ವದೊಂದಿಗೆ ಹಂಚಿಕೊಳ್ಳುವ ಮೂಲಕ ಮುನ್ನಡೆಯಲು ಬಯಸುತ್ತದೆ. ನಮ್ಮ ಪರಂಪರೆ ಇಡೀ ಮನುಕುಲಕ್ಕೆ ಒಂದು ಪರಂಪರೆಯಿದ್ದಂತೆ. ನಾವು 'ವಸುಧೈವ ಕುಟುಂಬಕಂ' ಅನ್ನು ನಂಬುವ ಜನರು. ನಾವು ಪ್ರಪಂಚದ ನೋವನ್ನು ಕಡಿಮೆ ಮಾಡಲು ನಿರ್ಧರಿಸಿದ ಜನರು. 'ಸರ್ವೇ ಸಂತು ನಿರಾಮಯ' ಎಂಬುದು ನಮ್ಮ ಜೀವನದ ಮಂತ್ರ. ನಮ್ಮ ಆಯುರ್ವೇದ ನಮ್ಮ ಸಾವಿರಾರು ವರ್ಷಗಳ ಹಿಂದಿನ ಸಂಪ್ರದಾಯ ಮತ್ತು ತಪಸ್ಸಿನ ಸಂಕೇತವಾಗಿದೆ. ಲಕ್ಷ್ಮಣ ಜಿ ಗಾಯಗೊಂಡಾಗ, ಹನುಮಾನ್ ಜಿ ಅಲ್ಲಿಂದ ಗಿಡಮೂಲಿಕೆಗಳನ್ನು ತರಲು ಹಿಮಾಲಯಕ್ಕೆ ಹೋಗಿದ್ದರು ಎಂದು ನಾವು ರಾಮಾಯಣದ ಮೂಲಕ ಕೇಳುತ್ತಿದ್ದೇವೆ. ಸ್ವಾವಲಂಬಿ ಭಾರತವು ಆ ಕಾಲದಲ್ಲೂ ಅಸ್ತಿತ್ವದಲ್ಲಿತ್ತು. ಆಯುರ್ವೇದದ ಬೆಳವಣಿಗೆಯ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದು ಅದರ ಮುಕ್ತ ಮೂಲ ಮಾದರಿಯಾಗಿದೆ. ಇಂದು ಡಿಜಿಟಲ್ ಜಗತ್ತಿನಲ್ಲಿ ಓಪನ್ ಸೋರ್ಸ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ ಮತ್ತು ಇದು ತಮ್ಮ ಆವಿಷ್ಕಾರ ಎಂದು ಕೆಲವರು ನಂಬುತ್ತಾರೆ. ಈ ಮುಕ್ತ ಆಕರದ ಸಂಪ್ರದಾಯ ಸಾವಿರಾರು ವರ್ಷಗಳಿಂದ ಈ ಮಣ್ಣಿನಲ್ಲಿ ಅಸ್ತಿತ್ವದಲ್ಲಿದೆ ಮತ್ತು ಆಯುರ್ವೇದವು ಆ ಮುಕ್ತ ಮೂಲ ಸಂಪ್ರದಾಯದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಗೊಂಡಿದೆ ಎಂದು ಅವರಿಗೆ ತಿಳಿದಿಲ್ಲ.

ವಿವಿಧ ಅವಧಿಗಳಲ್ಲಿ, ವಿಭಿನ್ನ ಜನರು ಅದಕ್ಕೆ ತಮ್ಮ ಜ್ಞಾನವನ್ನು ಸೇರಿಸುತ್ತಲೇ ಇದ್ದರು. ಅಂದರೆ, ಒಂದು ರೀತಿಯಲ್ಲಿ, ಆಯುರ್ವೇದವನ್ನು ಅಭಿವೃದ್ಧಿಪಡಿಸುವ ಆಂದೋಲನವು ಸಾವಿರಾರು ವರ್ಷಗಳಿಂದ ನಡೆಯುತ್ತಿದೆ. ಕಾಲಾನಂತರದಲ್ಲಿ ಹೊಸ ವಿಷಯಗಳನ್ನು ಸೇರಿಸಲಾಗಿದೆ. ಯಾವುದೇ ನಿಷೇಧವಿಲ್ಲ. ಹೊಸ ಆಲೋಚನೆಗಳು ಯಾವಾಗಲೂ ಸ್ವಾಗತಾರ್ಹ. ಕಾಲ ಕಳೆದಂತೆ, ವಿವಿಧ ವಿದ್ವಾಂಸರ ಅನುಭವ ಮತ್ತು ಅವರ ಸಂಶೋಧನೆಯು ಆಯುರ್ವೇದವನ್ನು ಮತ್ತಷ್ಟು ಬಲಪಡಿಸಿತು. ಇಂದಿನ ಕಾಲದಲ್ಲಿಯೂ ಸಹ, ನಾವು ನಮ್ಮ ಪೂರ್ವಜರಿಂದ ಕಲಿಯುವಾಗ ಈ ಬೌದ್ಧಿಕ ಮುಕ್ತತೆಯ ಮನೋಭಾವದಿಂದ ಕೆಲಸ ಮಾಡಬೇಕು. ಸಾಂಪ್ರದಾಯಿಕ ಔಷಧಗಳಿಗೆ ಸಂಬಂಧಿಸಿದ ಜ್ಞಾನದ ಅಭಿವೃದ್ಧಿ ಮತ್ತು ವಿಸ್ತರಣೆಯು ನಾವು ಅವುಗಳನ್ನು ವೈಜ್ಞಾನಿಕ ಮನೋಭಾವದಿಂದ ನೋಡಿದಾಗ, ದೇಶ, ಸಮಯ ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಅವುಗಳನ್ನು ರೂಪಿಸಿದಾಗ ಮಾತ್ರ ಸಾಧ್ಯ.

ಸ್ನೇಹಿತರೇ,

ಸಾಂಪ್ರದಾಯಿಕ ಔಷಧಕ್ಕಾಗಿ ಡಬ್ಲ್ಯುಎಚ್ ನ ಜಾಗತಿಕ ಕೇಂದ್ರವನ್ನು ನಿನ್ನೆ ಜಾಮ್ ನಗರದಲ್ಲಿ ಉದ್ಘಾಟಿಸಲಾಯಿತು. ಅದೇನೆಂದರೆ, ಗುಜರಾತಿನ ಮಣ್ಣಿನಲ್ಲಿ ಜಾಮ್ ನಗರದಲ್ಲಿ ಸಾಂಪ್ರದಾಯಿಕ ಔಷಧಕ್ಕಾಗಿ ಜಾಗತಿಕ ಕೇಂದ್ರವನ್ನು ಸ್ಥಾಪಿಸಿರುವುದರಿಂದ ಪ್ರತಿಯೊಬ್ಬ ಭಾರತೀಯನಿಗೂ, ಪ್ರತಿಯೊಬ್ಬ ಗುಜರಾತಿಗೂ ಇದು ಹೆಮ್ಮೆಯ ವಿಷಯ. ಮತ್ತು ಇಂದು ನಾವು 1 ನೇ ಆಯುಷ್ ಆವಿಷ್ಕಾರ ಮತ್ತು ಹೂಡಿಕೆ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದೇವೆ. ಇದು ಶುಭಾರಂಭ. ಭಾರತವು ತನ್ನ ಸ್ವಾತಂತ್ರ್ಯದ 75 ನೇ ವರ್ಷದ ಹಬ್ಬವನ್ನು ಅಂದರೆ ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಮುಂದಿನ 25 ವರ್ಷಗಳ ನಮ್ಮ 'ಅಮೃತ್ ಕಾಲ್' ವಿಶ್ವದ ಮೂಲೆಮೂಲೆಗಳಲ್ಲಿಯೂ ಸಾಂಪ್ರದಾಯಿಕ ವೈದ್ಯಶಾಸ್ತ್ರದ ಸುವರ್ಣ ಯುಗವಾಗಲಿದೆ ಎಂದು ನನಗೆ ಖಾತ್ರಿಯಿದೆ. ಇಂದು, ಒಂದು ರೀತಿಯಲ್ಲಿ, ಸಾಂಪ್ರದಾಯಿಕ ಔಷಧದ ಹೊಸ ಯುಗವು ಪ್ರಪಂಚದಾದ್ಯಂತ ಪ್ರಾರಂಭವಾಗಿದೆ. ಇಂದಿನ ಜಾಗತಿಕ ಆಯುಷ್ ಹೂಡಿಕೆ ಮತ್ತು ಆವಿಷ್ಕಾರ ಶೃಂಗಸಭೆಯು ಆಯುಷ್ ಕ್ಷೇತ್ರದಲ್ಲಿ ಹೂಡಿಕೆ, ವ್ಯಾಪಾರ ಮತ್ತು ನಾವಿನ್ಯತೆಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎಂದು ನನಗೆ ಖಾತ್ರಿಯಿದೆ. ಇಂದು ಇಲ್ಲಿಗೆ ಬಂದಿರುವ ವಿದೇಶಗಳ ಅತಿಥಿಗಳು ಮತ್ತು ಭಾರತದ ಇತರ

ಭಾಗಗಳಿಂದ ಮೊದಲ ಬಾರಿಗೆ ಬಂದವರು ಈ ಮಹಾತ್ಮಾ ಮಂದಿರದಲ್ಲಿ ಸಮಯ ತೆಗೆದುಕೊಂಡು ದಂಡಿ ಕುಟೀರಕ್ಕೆ ಭೇಟಿ ನೀಡುವಂತೆ ನಾನು ಖಂಡಿತವಾಗಿಯೂ ವಿನಂತಿಸುತ್ತೇನೆ. ಮಹಾತ್ಮಾ ಗಾಂಧಿಯವರು ಸಾಂಪ್ರದಾಯಿಕ ಔಷಧಗಳ ಪ್ರವರ್ತಕರಾಗಿದ್ದಾರೆ. ಈ 'ಆಜಾದಿ ಕಾ ಅಮೃತ್ ಕಾಲ್'ನಲ್ಲಿ ಮಹಾತ್ಮಾ ಗಾಂಧಿಯವರನ್ನು ನಿಕಟವಾಗಿ ತಿಳಿದುಕೊಳ್ಳಲು ಪ್ರಯತ್ನಿಸಿ. ಈ ಅವಕಾಶವನ್ನು ಕೈ ಬಿಡಬೇಡಿ. ಇಂದು ನಾನು ಮತ್ತೊಂದು ಸಂತೋಷದ ಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಮ್ಮ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್ ಅವರು ನನ್ನ ಉತ್ತಮ ಸ್ನೇಹಿತರಾಗಿದ್ದರು ಮತ್ತು ನಾವು ಭೇಟಿಯಾದಾಗಲೆಲ್ಲಾ ಅವರು ಒಂದು ಮಾತನ್ನು ಹೇಳುತ್ತಿದ್ದರು - "ಮೋದಿ ಜೀ, ನಾನು ಏನೇ ಆಗಿರಲಿ, ನಾನು ಬಾಲ್ಯದಿಂದಲೂ ಕಲಿತದ್ದನ್ನು ಭಾರತೀಯ ಶಿಕ್ಷಕರು ನನಗೆ ಕಲಿಸಿದ್ದು, ಭಾರತೀಯ ಶಿಕ್ಷಕರು ನನ್ನ ಜೀವನದ ಪ್ರತಿಯೊಂದು ನಿರ್ಣಾಯಕ ಹಂತದಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಭಾರತದೊಂದಿಗೆ ಸಂಬಂಧ ಹೊಂದಲು ನಾನು ತುಂಬಾ ಹೆಮ್ಮೆಪಡುತ್ತೇನೆ ". ಇಂದು ಬೆಳಗ್ಗೆ ಅವರು ತಮ್ಮನ್ನು ಭೇಟಿಯಾದಾಗ, ಅವರು ತಮಗೆ ಹೇಳಿದರು - " ನೋಡಿ, ನಾನು ಸಂಪೂರ್ಣ ಗುಜರಾತಿಯಾಗಿದ್ದೇನೆ ". ಆದ್ದರಿಂದ ಅವರಿಗೆ ಗುಜರಾತಿ ಹೆಸರನ್ನು ನೀಡುವಂತೆ ಅವರು ನನ್ನನ್ನು ಕೇಳಿದರು.ವೇದಿಕೆ ಮೇಲೆಯೂ ಸಹ, ಹೆಸರನ್ನು ನಿರ್ಧರಿಸಲಾಗಿದೆಯೇ ಅಥವಾ ಇಲ್ಲವೇ ಎಂದು ಅವರು ನನಗೆ ನೆನಪಿಸುತ್ತಿದ್ದರು. ಆದ್ದರಿಂದ ಇಂದು, ಮಹಾತ್ಮಾ ಗಾಂಧಿಯವರ ಈ ಪವಿತ್ರ ಭೂಮಿಯಲ್ಲಿ, ನಾನು ನನ್ನ ಆತ್ಮೀಯ ಸ್ನೇಹಿತ 'ತುಳಸಿಭಾಯ್' ಅನ್ನು ಗುಜರಾತಿ ಎಂದು ಹೆಸರಿಸುತ್ತೇನೆ. ತುಳಸಿಯು ಇಂದಿನ ಪೀಳಿಗೆಯು ಮರೆಯುತ್ತಿರುವ ಸಸ್ಯವಾಗಿದೆ. ಆದರೆ, ತಲೆಮಾರುಗಳಿಂದ ಸಾಂಪ್ರದಾಯಿಕವಾಗಿ ಪೂಜಿಸಲ್ಪಡುತ್ತದೆ. ಇದನ್ನು ಭಾರತದ ಪ್ರತಿಯೊಂದು ಮನೆಯ ಮುಂದೆ ಇರಿಸಲಾಗುತ್ತದೆ. ತುಳಸಿಯು ಭಾರತದ ಆಧ್ಯಾತ್ಮಿಕ ಪರಂಪರೆಯ ಪ್ರಮುಖ ಭಾಗವಾಗಿರುವ ಸಸ್ಯವಾಗಿದೆ. ಆದ್ದರಿಂದ, ಈ ಆಯುರ್ವೇದ ಶೃಂಗದಲ್ಲಿ, ದೀಪಾವಳಿಯ ನಂತರ ನಮ್ಮ ದೇಶದಲ್ಲಿ ತುಳಸಿಯ ವಿವಾಹ ಸಮಾರಂಭವನ್ನು ಆಚರಿಸುವ ಒಂದು ಹಬ್ಬವಿದೆ ಎಂದು ತಿಳಿದು ನಿಮಗೆ ಸಂತೋಷವಾಗುತ್ತದೆ. ಅಂದರೆ, ಈ ತುಳಸಿ ಆಯುರ್ವೇದಕ್ಕೆ ಸಂಬಂಧಿಸಿದೆ ಮತ್ತು ಇದು ಗುಜರಾತಿ ಹೆಸರಾಗಿರುವುದರಿಂದ, 'ಭಾಯ್' ಅನ್ನು ಸೇರಿಸುವುದು ಅನಿವಾರ್ಯವಾಗುತ್ತದೆ. ಗುಜರಾತ್ ನೊಂದಿಗೆ ನಿಮ್ಮ ಬಾಂಧವ್ಯವು ತುಂಬಾ ಗಾಢವಾಗಿದೆ ಮತ್ತು ನೀವು ಪ್ರತಿ ಬಾರಿಯೂ ಗುಜರಾತಿ ಪದಗಳನ್ನು ಮಾತನಾಡಲು ಪ್ರಯತ್ನಿಸುತ್ತಿದ್ದೀರಿ. ನಿಮಗೆ ಕಲಿಸಿದ ಗುರುಗಳ ಬಗ್ಗೆ ನೀವು ನಿರಂತರವಾಗಿ ನಿಮ್ಮ ಗೌರವವನ್ನು ವ್ಯಕ್ತಪಡಿಸುತ್ತಿದ್ದೀರಿ. ಈ ಮಹಾತ್ಮಾ ಮಂದಿರದ ಪವಿತ್ರ ಭೂಮಿಯಿಂದ ನಿಮ್ಮನ್ನು 'ತುಳಸಿಭಾಯಿ' ಎಂದು ಕರೆಯಲು ನನಗೆ ನಿಜವಾಗಿಯೂ ತುಂಬಾ ಸಂತೋಷವಾಗಿದೆ. ಈ ಮಹತ್ವದ ಸಂದರ್ಭದಲ್ಲಿ ನಮ್ಮೊಂದಿಗೆ ಕೈಜೋಡಿಸಿದ ಇಬ್ಬರೂ ಗಣ್ಯರಿಗೆ ನಾನು ಮತ್ತೊಮ್ಮೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ತುಂಬಾ ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India's export performance in several key product categories showing notable success

Media Coverage

India's export performance in several key product categories showing notable success
NM on the go

Nm on the go

Always be the first to hear from the PM. Get the App Now!
...
Prime Minister greets valiant personnel of the Indian Navy on the Navy Day
December 04, 2024

Greeting the valiant personnel of the Indian Navy on the Navy Day, the Prime Minister, Shri Narendra Modi hailed them for their commitment which ensures the safety, security and prosperity of our nation.

Shri Modi in a post on X wrote:

“On Navy Day, we salute the valiant personnel of the Indian Navy who protect our seas with unmatched courage and dedication. Their commitment ensures the safety, security and prosperity of our nation. We also take great pride in India’s rich maritime history.”