ನಮಸ್ಕಾರ!
ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾದ ಶ್ರೀ ಹರ್ ದೀಪ್ ಸಿಂಗ್ ಪುರಿ ಜಿ, ತ್ರಿಪುರ ಮುಖ್ಯಮಂತ್ರಿಗಳಾದ ಬಿಪ್ಲಬ್ ಕುಮಾರ್ ದೇಬ್ ಜಿ, ಜಾರ್ಖಂಡ್ ಮುಖ್ಯಮಂತ್ರಿಗಳಾದ ಭಾಯ್ ಹೇಮಂತ್ ಸೊರೆನ್ ಜಿ, ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಜಿ, ಮಧ್ಯಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀಶಿವರಾಜ್ ಸಿಂಗ್ ಚೌಹಾಣ್ ಜಿ, ಶ್ರೀ ವಿಜಯ್ ರೂಪಾನಿ ಜಿ, ತಮಿಳುನಾಡು ಮುಖ್ಯಮಂತ್ರಿ ತಿರು ಇ.ಕೆ. ಪಳನಿಸ್ವಾಮಿ ಜಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ವೈ.ಎಸ್. ಜಗನ್ಮೋಹನ್ ರೆಡ್ಡಿಜಿ , ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಗೌರವಾನ್ವಿತ ರಾಜ್ಯಪಾಲರು, ಇತರ ಗಣ್ಯರೇ, ಸಹೋದರರೇ ಮತ್ತು ಸಹೋದರಿಯರೇ. ನಿಮ್ಮೆಲ್ಲರಿಗೂ ಮತ್ತು ಎಲ್ಲಾ ದೇಶವಾಸಿಗಳಿಗೆ 2021 ರ ಶುಭಾಶಯಗಳು.
ಇಂದು ಹೊಸ ನಿರ್ಣಯಗಳನ್ನು ಹೊಸ ಚೈತನ್ಯದೊಂದಿಗೆ ವೇಗವಾಗಿ ಅರಿತುಕೊಳ್ಳುವ ಶುಭ ಉದ್ಘಾಟನೆಯಾಗಿದೆ . ಇಂದು, ದೇಶವು ಬಡ ಮತ್ತು ಮಧ್ಯಮ ವರ್ಗದವರಿಗೆ ಮನೆಗಳನ್ನು ನಿರ್ಮಿಸುವ ಹೊಸ ತಂತ್ರಜ್ಞಾನವನ್ನು ಪಡೆಯಲಿದೆ. ತಾಂತ್ರಿಕ ಪರಿಭಾಷೆಯಲ್ಲಿ, ನೀವು ಇದನ್ನು ಲೈಟ್ ಹೌಸ್ ಯೋಜನೆ ಎಂದು ಕರೆಯುತ್ತೀರಿ. ಈ ಆರು ಯೋಜನೆಗಳು ನಿಜವಾಗಿಯೂ ದೀಪದ ಗೋಪುರಗಳಂತೆ ಎಂದು ನಾನು ನಂಬುತ್ತೇನೆ. ಈ ಆರು ಲೈಟ್ ಹೌಸ್ ಯೋಜನೆಗಳು ದೇಶದ ವಸತಿ ನಿರ್ಮಾಣಕ್ಕೆ ಹೊಸ ನಿರ್ದೇಶನ ನೀಡುತ್ತವೆ. ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ಮತ್ತು ದೇಶದ ಪ್ರತಿಯೊಂದು ಪ್ರದೇಶಗಳ ರಾಜ್ಯಗಳು ಒಟ್ಟಿಗೆ ಸೇರುವುದು ನಮ್ಮ ಸಹಕಾರಿ ಒಕ್ಕೂಟದ ಪ್ರಜ್ಞೆಯನ್ನು ಮತ್ತಷ್ಟು ಬಲಪಡಿಸುತ್ತಿದೆ.
ಸ್ನೇಹಿತರೇ,
ಈ ಲೈಟ್ ಹೌಸ್ ಯೋಜನೆಗಳು ಈಗ ದೇಶದ ಕೆಲಸದ ರೀತಿಗಳಿಗೆ ಒಂದು ಉತ್ತಮ ಉದಾಹರಣೆಯಾಗಿದೆ. ಇದರ ಹಿಂದಿನ ದೊಡ್ಡ ಉದ್ದೇಶವನ್ನೂ ನಾವು ಅರ್ಥಮಾಡಿಕೊಳ್ಳಬೇಕು. ಒಂದು ಕಾಲದಲ್ಲಿ, ವಸತಿ ಯೋಜನೆಗಳು ಕೇಂದ್ರ ಸರ್ಕಾರಗಳ ಆದ್ಯತೆಯಾಗಿ ಇರಲಿಲ್ಲ. ಮನೆ ನಿರ್ಮಾಣದಂತಹ ಸೂಕ್ಷ್ಮ ವ್ಯತ್ಯಾಸಗಳು ಮತ್ತು ಗುಣಮಟ್ಟವನ್ನು ಸರ್ಕಾರಗಳು ಮುಂದುವರಿಸಲಿಲ್ಲ. ಆದರೆ ಕೆಲಸದ ವಿಸ್ತರಣೆಯಲ್ಲಿ ಈ ಬದಲಾವಣೆಗಳನ್ನು ಮಾಡದಿದ್ದರೆ ಎಷ್ಟು ಕಷ್ಟವಾಗುತ್ತಿತ್ತು ಎನ್ನುವುದು ನಮಗೆ ತಿಳಿದಿದೆ. ಇಂದು, ದೇಶವು ವಿಭಿನ್ನ ಮಾರ್ಗವನ್ನು ಆರಿಸಿದೆ ಮತ್ತು ವಿಭಿನ್ನ ಮಾರ್ಗವನ್ನು ಅಳವಡಿಸಿಕೊಂಡಿದೆ.
ಸ್ನೇಹಿತರೇ,
ಯಾವುದೇ ಕಾರ್ಯವಿಧಾನದ ಬದಲಾವಣೆಗಳಿಲ್ಲದೆ ಪ್ರಸ್ತುತ ಚಾಲನೆಯಲ್ಲಿರುವ ಅನೇಕ ವಿಷಯಗಳನ್ನು ನಾವು ಹೊಂದಿದ್ದೇವೆ. ವಸತಿ ವಿಷಯವೂ ಇದೇ ರೀತಿ ಆಗಿತ್ತು. ಅದನ್ನು ಬದಲಾಯಿಸಲು ನಾವು ನಿರ್ಧರಿಸಿದ್ದೇವೆ. ನಮ್ಮ ದೇಶವು ಉತ್ತಮ ತಂತ್ರಜ್ಞಾನವನ್ನು ಏಕೆ ಪಡೆಯಬಾರದು? ನಮ್ಮಲ್ಲಿರುವ ಬಡವರಿಗೆ ಏಕೆ ದೀರ್ಘಕಾಲ ಬಾಳುವ ಉತ್ತಮ ಮನೆಗಳು ಸಿಗಬಾರದು? ಮನೆಗಳನ್ನು ತ್ವರಿತವಾಗಿ ಏಕೆ ನಿರ್ಮಿಸಲು ಸಾಧ್ಯವಿಲ್ಲ? ಸರ್ಕಾರಿ ಸಚಿವಾಲಯಗಳು ದೊಡ್ಡದಾಗಿ ಮತ್ತು ನಿಧಾನಗತಿಯ ರಚನೆಗಳನ್ನು ಹೊಂದಿರಬಾರದು, ಆದರೆ ಚುರುಕಾಗಿರಬೇಕು ಮತ್ತು ಸ್ಟಾರ್ಟ್ ಅಪ್‌ಗಳಂತೆ ಹೊಂದಿಕೊಳ್ಳಬೇಕು. ಅದಕ್ಕಾಗಿಯೇ, ನಾವು ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್ ಅನ್ನು ಆಯೋಜಿಸಿದೆವು ಮತ್ತು ಪ್ರಪಂಚದಾದ್ಯಂತದ ಪ್ರಮುಖ ಕಂಪನಿಗಳನ್ನು ಭಾರತಕ್ಕೆ ಆಹ್ವಾನಿಸಿದೆವು. ಈ ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತದ 50 ಕ್ಕೂ ಹೆಚ್ಚು ನವೀನ ನಿರ್ಮಾಣ ತಂತ್ರಜ್ಞಾನಗಳು ಭಾಗವಹಿಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ಈ ಜಾಗತಿಕ ಸವಾಲಿನೊಂದಿಗೆ, ಹೊಸ ತಂತ್ರಜ್ಞಾನದೊಂದಿಗೆ ಹೊಸತನವನ್ನು ಮತ್ತು ರೂಪುಗೊಳ್ಳುವ ಅವಕಾಶವನ್ನು ನಾವು ಪಡೆದುಕೊಂಡಿದ್ದೇವೆ. ಅದೇ ಕಾರ್ಯದ ಮುಂದಿನ ಹಂತದಲ್ಲಿ, ಆರು ಲೈಟ್ ಹೌಸ್ ಯೋಜನೆಗಳನ್ನು ಇಂದಿನಿಂದ ವಿವಿಧ ತಾಣಗಳಲ್ಲಿ ಪ್ರಾರಂಭಿಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಮತ್ತು ನವೀನ ಪ್ರಕ್ರಿಯೆಗಳ ಮೂಲಕ ಈ ಲೈಟ್ ಹೌಸ್ ಯೋಜನೆಗಳನ್ನು ನಿರ್ಮಿಸಲಾಗುವುದು. ಇದು ನಿರ್ಮಾಣ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಬಡವರಿಗೆ ಸದೃಢವಾದ, ಕೈಗೆಟುಕುವ ಮತ್ತು ಆರಾಮದಾಯಕವಾದ ಮನೆಗಳನ್ನು ಸಿದ್ಧಪಡಿಸುತ್ತದೆ. ತಜ್ಞರಿಗೇನೋ ಇದರ ಬಗ್ಗೆ ತಿಳಿದಿದೆ, ಆದರೆ ದೇಶವಾಸಿಗಳು ಸಹ ಇದರ ಬಗ್ಗೆ ತಿಳಿದುಕೊಳ್ಳಬೇಕು. ಏಕೆಂದರೆ ಇಂದು ಈ ತಂತ್ರಜ್ಞಾನವನ್ನು ಒಂದು ನಗರದಲ್ಲಿ ಬಳಸಲಾಗುತ್ತಿದೆ ಮತ್ತು ಭವಿಷ್ಯದಲ್ಲಿ ದೇಶಾದ್ಯಂತ ಇದನ್ನು ವಿಸ್ತರಿಸಬಹುದು.
ಸ್ನೇಹಿತರೇ,
ಇಂದೋರ್ ನಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳಲ್ಲಿ ಇಟ್ಟಿಗೆ ಮತ್ತು ಗಾರೆ ಗೋಡೆಗಳು ಇರುವುದಿಲ್ಲ, ಆದರೆ ಮೊದಲೇ ತಯಾರಿಸಿದ ಸ್ಯಾಂಡ್‌ವಿಚ್ ಪ್ಯಾನಲ್ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಸುರಂಗಗಳನ್ನು ಬಳಸುವ ಏಕಶಿಲೆಯ ಕಾಂಕ್ರೀಟ್ ನಿರ್ಮಾಣ ತಂತ್ರಜ್ಞಾನವನ್ನು ರಾಜ್‌ಕೋಟ್‌ನಲ್ಲಿ ಬಳಸಲಾಗುತ್ತದೆ. ಈ ಫ್ರೆಂಚ್ ತಂತ್ರಜ್ಞಾನವು ನಮಗೆ ವೇಗವನ್ನು ನೀಡುತ್ತದೆ ಮತ್ತು ವಿಪತ್ತುಗಳನ್ನು ತಡೆದುಕೊಳ್ಳುವ ಮನೆಗಳನ್ನು ಹೆಚ್ಚು ಸಮರ್ಥಗೊಳಿಸುತ್ತದೆ. ಚೆನ್ನೈನಲ್ಲಿನ ಮನೆಗಳನ್ನು ಅಮೇರಿಕಾ ಮತ್ತು ಫಿನ್ಲೆಂಡ್ ದೇಶದ ಪ್ರಿಕಾಸ್ಟ್ ಕಾಂಕ್ರೀಟ್ ತಂತ್ರಜ್ಞಾನದ ಮೂಲಕ ನಿರ್ಮಿಸಲಾಗುವುದು, ಇದು ಮನೆಗಳನ್ನು ವೇಗವಾಗಿ ಮತ್ತು ಅಗ್ಗವಾಗಿ ನಿರ್ಮಿಸಲು ಸಹಾಯ ಮಾಡುತ್ತದೆ. ರಾಂಚಿಯಲ್ಲಿನ ಮನೆಗಳನ್ನು ಜರ್ಮನಿಯ 3 ಡಿ ನಿರ್ಮಾಣ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗುವುದು. ಪ್ರತಿಯೊಂದು ಕೋಣೆಯನ್ನು ಪ್ರತ್ಯೇಕವಾಗಿ ನಿರ್ಮಿಸಲಾಗುತ್ತದೆ ಮತ್ತು ನಂತರ ಸಂಪೂರ್ಣ ರಚನೆಯನ್ನು ಲೆಗೊ ಬ್ಲಾಕ್ ಆಟಿಕೆಗಳಂತೆ ಸೇರಿಸಲಾಗುತ್ತದೆ. ಅಗರ್ತಲಾದಲ್ಲಿ, ನ್ಯೂಜಿಲೆಂಡ್‌ನ ಸ್ಟೀಲ್ ಫ್ರೇಮ್‌ಗಳ ತಂತ್ರಜ್ಞಾನವನ್ನು ಬಳಸಿಕೊಂಡು ಮನೆಗಳನ್ನು ನಿರ್ಮಿಸಲಾಗುತ್ತಿದೆ. ಭೂಕಂಪಗಳ ಅಪಾಯ ಹೆಚ್ಚಿರುವಲ್ಲಿ ಅಂತಹ ಮನೆಗಳನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಲಕ್ನೋದಲ್ಲಿ, ಕೆನಡಾದ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ, ಇದಕ್ಕೆ ಪ್ಲ್ಯಾಸ್ಟರ್ ಮತ್ತು ಪೇಂಟ್ ಅಗತ್ಯವಿರುವುದಿಲ್ಲ ಆದರೆ ಮೊದಲೇ ನಿರ್ಮಿಸಿದ ಗೋಡೆಗಳನ್ನು ಬಳಸಲಾಗುತ್ತದೆ. ಇದು ಮನೆಗಳನ್ನು ವೇಗವಾಗಿ ನಿರ್ಮಿಸಲು ಸಹಾಯ ಮಾಡುತ್ತದೆ. ಪ್ರತಿ ಸ್ಥಳದಲ್ಲಿ 12 ತಿಂಗಳಲ್ಲಿ ಒಂದು ಸಾವಿರ ಮನೆಗಳನ್ನು ನಿರ್ಮಿಸಲಾಗುವುದು. ವರ್ಷದಲ್ಲಿ ಒಂದು ಸಾವಿರ ಮನೆಗಳು. ಅಂದರೆ ಪ್ರತಿದಿನ ಸರಾಸರಿ ಎರಡೂವರೆ ಮನೆಗಳನ್ನು ನಿರ್ಮಿಸಲಾಗುವುದು. ಒಂದು ತಿಂಗಳಲ್ಲಿ ಸುಮಾರು 90ರಿಂದ 100 ಮನೆಗಳನ್ನು ನಿರ್ಮಿಸಲಾಗುವುದು ಮತ್ತು ಒಂದು ವರ್ಷದಲ್ಲಿ ಒಂದು ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಇದೆ. ಮುಂದಿನ ಜನವರಿ 26 ರ ಮೊದಲು ಈ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಲು ಉದ್ದೇಶಿಸಲಾಗಿದೆ.
ಸ್ನೇಹಿತರೇ,
ಒಂದು ರೀತಿಯಲ್ಲಿ, ಈ ಯೋಜನೆಗಳು incubation centreಗಳು ಅಂದರೆ ರೂಪುಗೊಳ್ಳುವ ಕೇಂದ್ರಗಳಾಗಿರುತ್ತವೆ ಮತ್ತು ನಮ್ಮ ಯೋಜಕರು, ವಾಸ್ತುಶಿಲ್ಪಿಗಳು, ಎಂಜಿನಿಯರ್‌ಗಳು ಮತ್ತು ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನವನ್ನು ಕಲಿಯಲು ಮತ್ತು ಪ್ರಯೋಗಿಸಲು ಸಾಧ್ಯವಾಗುತ್ತದೆ. ಈ ಕ್ಷೇತ್ರದಲ್ಲಿ ಭಾಗಿಯಾಗಿರುವ ಪ್ರಾಧ್ಯಾಪಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು 10-15 ಜನರ ತಂಡಗಳನ್ನು ರಚಿಸಬೇಕು ಮತ್ತು ಅವರು ಈ ಆರು ತಾಣಗಳಿಗೆ ಒಂದು ವಾರ ಹೋಗಿ ಅದನ್ನು ಕೂಲಂಕಷವಾಗಿ ಅಧ್ಯಯನ ಮಾಡಬೇಕು ಎಂದು ನಾನು ಅಂತಹ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ದೇಶದಾದ್ಯಂತದ ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳನ್ನು ಕೋರುತ್ತೇನೆ. ಅಲ್ಲಿನ ಸರ್ಕಾರಗಳು ಸಹ ಅವರಿಗೆ ಸಹಾಯ ಮಾಡಬೇಕು. ದೇಶಾದ್ಯಂತದ ನಮ್ಮ ವಿಶ್ವವಿದ್ಯಾಲಯಗಳ ಜನರು ಒಂದು ರೀತಿಯಲ್ಲಿ ಇನ್ಕ್ಯುಬೇಟರ್ ಆಗಿರುವ ಈ ಪ್ರಾಯೋಗಿಕ ಯೋಜನೆಗಳಿಗೆ ಭೇಟಿ ನೀಡಬೇಕು ಮತ್ತು ಅವುಗಳ ತಂತ್ರಜ್ಞಾನದ ಬಗ್ಗೆ ಅಧ್ಯಯನ ಮಾಡಬೇಕು. ಯಾವುದೇ ತಂತ್ರಜ್ಞಾನದ ಬಗ್ಗೆ ಅಧ್ಯಯನ ಮಾಡದೇ ಕುರುಡಾಗಿ ಅಳವಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ದೇಶದ ಅವಶ್ಯಕತೆಗಳು ಮತ್ತು ಸಂಪನ್ಮೂಲಗಳಿಗೆ ಅನುಗುಣವಾಗಿ ತಂತ್ರಜ್ಞಾನವನ್ನು ಬದಲಾಯಿಸಬಹುದೇ ಎಂದು ನಾವು ಅಧ್ಯಯನ ಮಾಡಬೇಕು ಮತ್ತು ನೋಡಬೇಕು. ನಾವು ಅದರ ಚಟುವಟಿಕೆಯನ್ನು ಬದಲಾಯಿಸಬಹುದೇ? ನಾವು ಅದರ ಕಾರ್ಯಕ್ಷಮತೆಯ ಮಟ್ಟವನ್ನು ಬದಲಾಯಿಸಬಹುದೇ? ನಮ್ಮ ದೇಶದ ಯುವಕರು ಖಂಡಿತವಾಗಿಯೂ ಮೌಲ್ಯ ಮತ್ತು ಕೆಲವು ನವೀನತೆಯನ್ನು ಸೇರಿಸುತ್ತಾರೆ ಮತ್ತು ನಂತರ ದೇಶವು ಹೊಸ ದಿಕ್ಕಿನಲ್ಲಿ ವೇಗವಾಗಿ ಚಲಿಸುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಅದೇ ಸಮಯದಲ್ಲಿ, ಮನೆಗಳನ್ನು ನಿರ್ಮಿಸುವಲ್ಲಿ ತೊಡಗಿರುವ ಜನರ ಹೊಸ ತಂತ್ರಜ್ಞಾನ ಸಂಬಂಧಿತ ಕೌಶಲ್ಯಗಳನ್ನು ನವೀಕರಿಸಲು ಪ್ರಮಾಣಪತ್ರ ಕೋರ್ಸ್ ಅನ್ನು ಸಹ ಪರಿಚಯಿಸಲಾಗುತ್ತಿದೆ. ಇದು ಸವಾಲಿನ ಕೆಲಸ. ನಾವು ಏಕಕಾಲದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಪ್ರಾರಂಭಿಸಿದ್ದೇವೆ. ನೀವು ಆನ್ ಲೈನಿನಲ್ಲಿ ಓದಬಹುದು, ಈ ಹೊಸ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಬಹುದು. ನೀವು ಈಗ ಪರೀಕ್ಷೆಗೆ ಹಾಜರಾಗುವ ಮೂಲಕ ಪ್ರಮಾಣಪತ್ರವನ್ನು ಪಡೆಯಬಹುದು. ಮನೆ ನಿರ್ಮಾಣದಲ್ಲಿ ದೇಶವಾಸಿಗಳು ವಿಶ್ವದ ಅತ್ಯುತ್ತಮ ತಂತ್ರಜ್ಞಾನ ಮತ್ತು ವಸ್ತುಗಳನ್ನು ಪಡೆಯಲು ಸಾಧ್ಯವಾಗುವಂತೆ ಇದನ್ನು ಮಾಡಲಾಗುತ್ತಿದೆ.
ಸ್ನೇಹಿತರೇ,
ಆಧುನಿಕ ವಸತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಸ್ಟಾರ್ಟ್ಅಪ್‌ಗಳನ್ನು ಉತ್ತೇಜಿಸಲು ಆಶಾ-ಇಂಡಿಯಾ ಕಾರ್ಯಕ್ರಮವನ್ನು ದೇಶದಲ್ಲಿ ನಡೆಸಲಾಗುತ್ತಿದೆ. ಈ ಮೂಲಕ 21 ನೇ ಶತಮಾನದ ಮನೆಗಳ ನಿರ್ಮಾಣಕ್ಕೆ ಹೊಸ ಮತ್ತು ಒಳ್ಳೆ ತಂತ್ರಜ್ಞಾನವನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು. ಈ ಅಭಿಯಾನದ ಅಡಿಯಲ್ಲಿ ಐದು ಅತ್ಯುತ್ತಮ ತಂತ್ರಗಳನ್ನು ಸಹ ಆಯ್ಕೆ ಮಾಡಲಾಗಿದೆ. ಅತ್ಯುತ್ತಮ ನಿರ್ಮಾಣ ತಂತ್ರಜ್ಞಾನವನ್ನು ಆಧರಿಸಿದ ನವರಿತಿ - ಪುಸ್ತಕ ಮತ್ತು ಆನ್‌ಲೈನ್ ಪ್ರಮಾಣಪತ್ರ ಕೋರ್ಸ್ ಅನ್ನು ಬಿಡುಗಡೆ ಮಾಡಲು ನನಗೆ ಅವಕಾಶ ಸಿಕ್ಕಿತ್ತು. ಇದರಲ್ಲಿ ಭಾಗಿಯಾಗಿರುವ ಎಲ್ಲ ಸಹೋದ್ಯೋಗಿಗಳನ್ನು ನಾನು ಅಭಿನಂದಿಸುತ್ತೇನೆ.
ಸ್ನೇಹಿತರೇ,
ನಗರದಲ್ಲಿ ವಾಸಿಸುವ ಬಡವರ ಅಥವಾ ಮಧ್ಯಮ ವರ್ಗದ ಜನರ ದೊಡ್ಡ ಕನಸು ಏನು ಹೇಳಿ? ಪ್ರತಿಯೊಬ್ಬರಿಗೂ ಸ್ವಂತ ಮನೆ ಹೊಂದುವ ಕನಸು ಇದೆ. ಯಾರನ್ನಾದರೂ ಕೇಳಿ ಮತ್ತು ಮನೆ ನಿರ್ಮಿಸಲು ಅವನ ಮನಸ್ಸಿನಲ್ಲಿದೆ. ಮಕ್ಕಳ ಜೀವನವು ಚೆನ್ನಾಗಿ ಇರುತ್ತದೆ ಅವರ ಸಂತೋಷ, ದುಃಖ ಮತ್ತು ಮಕ್ಕಳ ಪಾಲನೆಗೆ ಮನೆಯೊಡನೆ ಒಂದು ನಂಟು ಇರುತ್ತದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಏನೂ ಇಲ್ಲದಿದ್ದರೆ, ಕನಿಷ್ಠ ಮನೆಯಾದರೂ ಇರುತ್ತದೆ ಎನ್ನುವ ಭರವಸೆ ಇರುತ್ತದೆ. ಆದರೆ ಕಳೆದ ವರ್ಷಗಳಲ್ಲಿ, ಜನರು ತಮ್ಮ ಸ್ವಂತ ಮನೆಯ ಮೇಲಿನ ನಂಬಿಕೆಯನ್ನು ಕಳೆದುಕೊಂಡರು. ತಾನು ಜೀವಮಾನದ ದುಡಿಮೆಯೊಂದಿಗೆ ಬಂದ ಹಣವನ್ನು ಠೇವಣಿ ಹಣವನ್ನು ಹೂಡಿದರೂ ಮನೆ ಸಿಗುತ್ತದೆ ಎನ್ನುವ ವಿಶ್ವಾಸವಿರಲಿಲ್ಲ. ಮನೆ ಕೇವಲ ಕಾಗದದ ಮೇಲೆ ಇತ್ತು. ಕಾರಣವೇನೆಂದರೆ ಬೆಲೆಗಳು ಬಹಳ ಹೆಚ್ಚಾಗಿದ್ದವು! ಕಳೆದುಕೊಂಡ ಮತ್ತೊಂದು ನಂಬಿಕೆ ಎಂದರೆ ಕಾನೂನು ನಮ್ಮನ್ನು ಬೆಂಬಲಿಸುತ್ತದೆಯೋ ಇಲ್ಲವೋ ಎನ್ನುವುದು. ಬಿಲ್ಡರ್‌ನೊಂದಿಗೆ ಯಾವುದೇ ಜಗಳವಾದರೆ, ತೊಂದರೆ ಉಂಟಾದರೆ, ಎನ್ನುವುದೂ ಇದು ಕಳವಳಕಾರಿ ಸಂಗತಿಯಾಗಿದೆ. ವಸತಿ ವಲಯದ ಪರಿಸ್ಥಿತಿ ಹೀಗಿತ್ತು, ಯಾವುದೇ ತೊಂದರೆಯಾದರೆ, ಕಾನೂನು ತನ್ನೊಂದಿಗೆ ನಿಲ್ಲುತ್ತದೆ ಎಂದು ಸಾಮಾನ್ಯ ಜನರಿಗೆ ಖಚಿತವಾಗಿ ತಿಳಿದಿರಲಿಲ್ಲ.
ಸ್ನೇಹಿತರೇ,
ಹೇಗಾದರೂ, ಅಂತಹ ಅಡೆತಡೆಗಳನ್ನು ಹೋರಾಡುವ ಮೂಲಕ ಅವರು ಮುಂದುವರಿಯಲು ಬಯಸಿದ್ದರು; ಬ್ಯಾಂಕಿನ ಹೆಚ್ಚಿನ ಬಡ್ಡಿ ಮತ್ತು ಸಾಲ ಪಡೆಯುವಲ್ಲಿನ ಸಮಸ್ಯೆಗಳಿಂದಾಗಿ ಅವರ ಕನಸು ಮತ್ತೆ ಕುಸಿಯತೊಡಗಿದವು. ಇಂದು, ಕಳೆದ ಆರು ವರ್ಷಗಳಲ್ಲಿ ದೇಶದಲ್ಲಿ ಕೈಗೊಂಡಿರುವ ಕ್ರಮಗಳು ಒಬ್ಬ ಸಾಮಾನ್ಯ ಮನುಷ್ಯನ, ಅದರಲ್ಲೂ ಕಷ್ಟಪಟ್ಟು ದುಡಿಯುವ ಮಧ್ಯಮ ವರ್ಗದ ಕುಟುಂಬದ ವಿಶ್ವಾಸವನ್ನು ಪುನಃಸ್ಥಾಪಿಸಿವೆ, ಅವರು ತನ್ನ ಸ್ವಂತ ಮನೆಯನ್ನು ಸಹ ಹೊಂದಬಹುದು. ಅವನು ತನ್ನ ಮನೆಯ ನ್ಯಾಯವಾದ ಮಾಲೀಕನಾಗಬಹುದು. ಈಗ ದೇಶದ ಗಮನವು ಬಡ ಮತ್ತು ಮಧ್ಯಮ ವರ್ಗದವರ ಅಗತ್ಯತೆಗಳ ಮೇಲೆ ಇದೆ. ಈಗ ನಗರದಲ್ಲಿ ವಾಸಿಸುವ ಜನರ ಭಾವನೆಗಳಿಗೆ ಆದ್ಯತೆ ನೀಡಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಗರಗಳಲ್ಲಿ ಲಕ್ಷಾಂತರ ಮನೆಗಳನ್ನು ಬಹಳ ಕಡಿಮೆ ಅವಧಿಯಲ್ಲಿ ಮಾಡಲಾಗಿದೆ. ಲಕ್ಷಾಂತರ ಮನೆಗಳ ನಿರ್ಮಾಣ ಕಾರ್ಯವೂ ಸಹ ಮುಂದುವರೆದಿದೆ.
ಸ್ನೇಹಿತರೇ,
ಪಿಎಂ ಆವಾಸ್ ಯೋಜನೆಯಡಿ ನಿರ್ಮಿಸಲಾದ ಲಕ್ಷಾಂತರ ಮನೆಗಳನ್ನು ನಾವು ನೋಡಿದರೆ, ನಾವೀನ್ಯತೆ ಮತ್ತು ಅನುಷ್ಠಾನ ಎರಡರಲ್ಲೂ ಗಮನ ನೀಡಲಾಗಿದೆ. ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಮತ್ತು ಮನೆಯ ಮಾಲೀಕರ ನಿರೀಕ್ಷೆಗೆ ಅನುಗುಣವಾಗಿ ಕಟ್ಟಡ ಸಾಮಗ್ರಿಗಳ ಬಳಕೆಯಲ್ಲಿನ ಹೊಸತನವನ್ನು ನೋಡಬಹುದು. ಹಲವಾರು ಇತರ ಯೋಜನೆಗಳನ್ನು ಪ್ಯಾಕೇಜ್ ಆಗಿ ಮನೆಗೆ ಸೇರಿಸಲಾಗಿದೆ. ಮನೆಗಳನ್ನು ಪಡೆಯುತ್ತಿರುವ ಬಡವರಿಗೆ ನೀರು, ವಿದ್ಯುತ್ ಮತ್ತು ಅಡುಗೆ ಅನಿಲದಂತಹ ಹಲವಾರು ಅಗತ್ಯ ಸೌಲಭ್ಯಗಳನ್ನು ಖಾತ್ರಿಪಡಿಸಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲ, ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿ ಮನೆಯನ್ನೂ ಜಿಯೋ-ಟ್ಯಾಗ್ ಮಾಡಲಾಗುತ್ತಿದೆ. ಜಿಯೋ-ಟ್ಯಾಗಿಂಗ್‌ನಿಂದಾಗಿ ಎಲ್ಲವನ್ನೂ ಟ್ರ್ಯಾಕ್ ಮಾಡಬಹುದು. ತಂತ್ರಜ್ಞಾನವನ್ನು ಸಹ ಸಂಪೂರ್ಣವಾಗಿ ಬಳಸಿಕೊಳ್ಳಲಾಗುತ್ತಿದೆ. ಮನೆ ನಿರ್ಮಾಣದ ಪ್ರತಿಯೊಂದು ಹಂತದ ಚಿತ್ರಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಮನೆ ನಿರ್ಮಿಸಲು ಸರ್ಕಾರದ ಸಹಾಯವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಕಳುಹಿಸಲಾಗುತ್ತದೆ. ಮತ್ತು ಈ ವಿಷಯದಲ್ಲಿ ರಾಜ್ಯಗಳಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ ಏಕೆಂದರೆ ರಾಜ್ಯಗಳೂ ಸಹ ಸಕ್ರಿಯವಾಗಿ ತೊಡಗಿಕೊಂಡಿವೆ. ಇಂದು, ಇದಕ್ಕಾಗಿ ಅನೇಕ ರಾಜ್ಯಗಳನ್ನು ಗೌರವಿಸುವ ಭಾಗ್ಯವನ್ನು ನಾನು ಪಡೆದಿದ್ದೇನೆ. ಗಮನಾರ್ಹವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಎಲ್ಲ ರಾಜ್ಯಗಳನ್ನು ನಾನು ವಿಶೇಷವಾಗಿ ಅಭಿನಂದಿಸುತ್ತೇನೆ.
ಸ್ನೇಹಿತರೇ,
ಸರ್ಕಾರದ ಪ್ರಯತ್ನದಿಂದಾಗಿ ನಗರಗಳಲ್ಲಿ ವಾಸಿಸುವ ಮಧ್ಯಮ ವರ್ಗದವರಿಗೆ ಒಂದು ದೊಡ್ಡ ಅನುಕೂಲವಾಗಿದೆ. ಮಧ್ಯಮ ವರ್ಗದವರಿಗೆ ತಮ್ಮ ಮೊದಲ ಮನೆಗೆ ನಿಗದಿತ ಮೊತ್ತದ ಮನೆಕೆಲಸದ ಮೇಲಿನ ಬಡ್ಡಿಗೆ ರಿಯಾಯಿತಿ ನೀಡಲಾಗುತ್ತಿದೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿಯೂ, ಸರ್ಕಾರವು ಗೃಹ ಸಾಲಗಳಿಗೆ ಬಡ್ಡಿ ವಿಧಿಸುವುದನ್ನು ಮೂಂದೂಡುವ ವಿಶೇಷ ಯೋಜನೆಯನ್ನು ಪ್ರಾರಂಭಿಸಿತು. ವರ್ಷಗಳ ಕಾಲ ಅಪೂರ್ಣವಾಗಿ ಇದ್ದ ಮಧ್ಯಮ ವರ್ಗದ ಸಹೋದ್ಯೋಗಿಗಳ ಮನೆಗಳಿಗಾಗಿ 25,000 ಕೋಟಿ ರೂಪಾಯಿಗಳ ವಿಶೇಷ ನಿಧಿಯನ್ನು ಸ್ಥಾಪಿಸಲಾಯಿತು.
ಸ್ನೇಹಿತರೇ,
ಈ ಎಲ್ಲಾ ನಿರ್ಧಾರಗಳೊಂದಿಗೆ, ಜನರು ಈಗ ರೇರಾದಂತಹ ಕಾನೂನುಗಳ ಶಕ್ತಿಯನ್ನು ಸಹ ಹೊಂದಿದ್ದಾರೆ. ರೇರಾ ತಾವು ಹಣವನ್ನು ಹಾಕಿರುವ ಯೋಜನೆಗಳು ಪೂರ್ಣಗೊಳ್ಳುತ್ತದೆ ಮತ್ತು ಯಾವುದೇ ವಿಳಂಬವಾಗುವುದಿಲ್ಲ ಎನ್ನುವ ಜನರ ಮೇಲಿನ ನಂಬಿಕೆಯನ್ನು ಪುನಃಸ್ಥಾಪಿಸಿದೆ. ಇಂದು, ದೇಶದಲ್ಲಿ ಸುಮಾರು 60,000 ರಿಯಲ್ ಎಸ್ಟೇಟ್ ಯೋಜನೆಗಳನ್ನು ರೇರಾ ಅಡಿಯಲ್ಲಿ ನೋಂದಾಯಿಸಲಾಗಿದೆ. ಈ ಕಾನೂನಿನಡಿಯಲ್ಲಿ ಸಾವಿರಾರು ದೂರುಗಳನ್ನು ವಿಲೇವಾರಿ ಮಾಡಲಾಗಿದೆ, ಅಂದರೆ, ಸಾವಿರಾರು ಕುಟುಂಬಗಳು ತಮ್ಮ ಮನೆಗಳು ಯಶಸ್ವಿಯಾಗಿ ದೊರಕಲು ಸಹಾಯಕವಾಗಿದೆ.
ಸ್ನೇಹಿತರೇ,
ಎಲ್ಲರಿಗೂ ವಸತಿ ಎಂಬ ಈ ಗುರಿಯನ್ನು ಸಾಧಿಸಲು ಮಾಡಲಾಗುತ್ತಿರುವ ಸರ್ವತೋಮುಖ ಕಾರ್ಯವು ಕೋಟ್ಯಂತರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತಿದೆ. ಈ ಮನೆಗಳು ಬಡವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿವೆ. ಈ ಮನೆಗಳು ದೇಶದ ಯುವಕರ ಸಾಮರ್ಥ್ಯವನ್ನು ಹೆಚ್ಚಿಸುತ್ತಿವೆ. ಈ ಮನೆಗಳ ಕೀಲಿಗಳೊಂದಿಗೆ ಅನೇಕ ಬಾಗಿಲುಗಳು ಒಟ್ಟಿಗೆ ತೆರೆದುಕೊಳ್ಳುತ್ತಿವೆ. ಯಾರಾದರೂ ಮನೆಯ ಕೀಲಿಯನ್ನು ಪಡೆದಾಗ, ಅದು ಕೇವಲ ಬಾಗಿಲು ಅಥವಾ ನಾಲ್ಕು ಗೋಡೆಗಳಿಗೆ ಸೀಮಿತವಾಗಿಲ್ಲ. ಮನೆಯ ಕೀಲಿಯು ಕೈಯಲ್ಲಿ ಬಂದಾಗ, ಅದು ಘನತೆಯ ಜೀವನ ಮತ್ತು ಸುರಕ್ಷಿತ ಭವಿಷ್ಯಕ್ಕಾಗಿ ಬಾಗಿಲು ತೆರೆಯುತ್ತದೆ. ಆಸ್ತಿ ಹಕ್ಕುಗಳು ಉಳಿತಾಯ ಮತ್ತು ಒಬ್ಬರ ಜೀವನದ ಬೆಳವಣಿಗೆಯ ಬಾಗಿಲು ತೆರೆಯುತ್ತದೆ. ಇದು ಸಮಾಜದಲ್ಲಿ ಮತ್ತು ಭ್ರಾತೃತ್ವದಲ್ಲಿ 5-25 ಜನರಲ್ಲಿ ಹೊಸ ಗುರುತಿಗೆ ಬಾಗಿಲು ತೆರೆಯುತ್ತದೆ. ಗೌರವದ ಪ್ರಜ್ಞೆಯನ್ನು ಪುನಃಸ್ಥಾಪಿಸಲಾಗುತ್ತದೆ. ಆತ್ಮವಿಶ್ವಾಸ ಬೆಳೆಯುತ್ತದೆ. ಈ ಕೀಲಿಗಳು ಜನರ ಅಭಿವೃದ್ಧಿ ಮತ್ತು ಪ್ರಗತಿಯ ಬಾಗಿಲುಗಳನ್ನು ತೆರೆಯುತ್ತಿವೆ. ಅಷ್ಟೇ ಅಲ್ಲ, ಅದು ಕೇವಲ ಬಾಗಿಲಿನ ಕೀಲಿಯಾಗಿರಬಹುದು, ಆದರೆ ಅದು ಮನಸ್ಸಿನ ಬೀಗಗಳನ್ನು ತೆರೆಯುತ್ತದೆ ಮತ್ತು ಅವನು ಹೊಸ ಕನಸುಗಳನ್ನು ಪಾಲಿಸಲು ಪ್ರಾರಂಭಿಸುತ್ತಾನೆ, ಹೊಸ ಸಂಕಲ್ಪದೊಂದಿಗೆ ಮುಂದೆ ಸಾಗುತ್ತಾನೆ ಮತ್ತು ಜೀವನದಲ್ಲಿ ಏನಾದರೂ ಮಾಡುವ ಕನಸುಗಳನ್ನು ಹೆಣೆಯುತ್ತಾನೆ. ಈ ಕೀಲಿಯು ಅಂತಹ ಶಕ್ತಿಯನ್ನು ಹೊಂದಿದೆ.
ಸ್ನೇಹಿತರೇ,
ಕಳೆದ ವರ್ಷ ನಡೆದ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಮತ್ತೊಂದು ಪ್ರಮುಖ ಹೆಜ್ಜೆ ಇಡಲಾಗಿದೆ. ಇದು ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣ ಯೋಜನೆ. ಈ ಯೋಜನೆಯ ಗುರಿ ನಮ್ಮ ಕಾರ್ಮಿಕ ಸಹೋದ್ಯೋಗಿಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅಥವಾ ಹಳ್ಳಿಯಿಂದ ನಗರಕ್ಕೆ ಕೆಲಸಕ್ಕಾಗಿ ಬರುತ್ತಾರೆ. ಕೊರೊನಾ ಸಾಂಕ್ರಾಮಿಕಕ್ಕೆ ಮುಂಚಿತವಾಗಿ, ಇತರ ರಾಜ್ಯಗಳಿಂದ ಬಂದ ಕೆಲವು ಸ್ಥಳಗಳಲ್ಲಿ ಜನರ ಬಗ್ಗೆ ಕೀಳಾಗಿ ಮಾತನಾಡುವುದನ್ನು ನಾವು ನೋಡಿದ್ದೇವೆ. ಆದರೆ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲಾ ಕಾರ್ಮಿಕರು ಹಿಂತಿರುಗಿದಾಗ, ಉಳಿದವರು ಅವರಿಲ್ಲದೆ ಬದುಕುವುದು ಎಷ್ಟು ಕಷ್ಟ, ವ್ಯವಹಾರ ನಡೆಸುವುದು ಎಷ್ಟು ಕಷ್ಟ, ಉದ್ಯಮವನ್ನು ನಡೆಸುವುದು ಎಷ್ಟು ಕಷ್ಟ ಎಂದು ಮನಗಂಡು ಕೆಲಸಕ್ಕೆ ಮರಳಲು ಕೈ ಮುಗಿದು ವಿನಂತಿಸಲು ಪ್ರಾರಂಭಿಸಿದರು. ಕರೊನಾ ಬಿಕ್ಕಟ್ಟು ಗುರುತಿಸದ ಕಾರ್ಮಿಕರ ಸಾಮರ್ಥ್ಯವನ್ನು ಗೌರವಿಸುವಂತೆ ಮಾಡಿತು, ನಮ್ಮ ಕಾರ್ಮಿಕ ಬಂದುಗಳು ನಗರಗಳಲ್ಲಿ ಕೈಗೆಟುಕುವ ಬಾಡಿಗೆಗೆ ಮನೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ನಾವು ನೋಡಿದ್ದೇವೆ. ಪರಿಣಾಮವಾಗಿ, ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಸಣ್ಣ ಕೋಣೆಗಳಲ್ಲಿ ವಾಸಿಸಬೇಕಾಗುತ್ತದೆ. ಈ ಸ್ಥಳಗಳಲ್ಲಿ ನೀರು, ವಿದ್ಯುತ್, ಶೌಚಾಲಯದಿಂದ ಹಿಡಿದು ಅಶುದ್ಧತೆಯವರೆಗೆ ಅನೇಕ ಸಮಸ್ಯೆಗಳಿವೆ. ತಮ್ಮ ಶ್ರಮವನ್ನು ರಾಷ್ಟ್ರದ ಸೇವೆಯಲ್ಲಿ ತೊಡಗಿಸಿಕೊಂಡ ಈ ಸಹಚರರು ಘನತೆಯಿಂದ ಬದುಕುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಚಿಂತನೆಯೊಂದಿಗೆ, ಕೈಗಾರಿಕೆಗಳು ಮತ್ತು ಇತರ ಹೂಡಿಕೆದಾರರೊಂದಿಗೆ ಸಹಭಾಗಿತ್ವದಲ್ಲಿ ಕೈಗೆಟುಕುವ ಬಾಡಿಗೆ ಮನೆಗಳನ್ನು ನಿರ್ಮಿಸಲು ಸರ್ಕಾರ ಒತ್ತು ನೀಡುತ್ತಿದೆ. ಅವರು ಕೆಲಸ ಮಾಡುವ ಪ್ರದೇಶದಲ್ಲಿ ಈ ಮನೆಗಳನ್ನು ನಿರ್ಮಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ.
ಸ್ನೇಹಿತರೇ,
ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಉತ್ತೇಜಿಸಲು ಅನೇಕ ನಿರ್ಧಾರಗಳನ್ನು ಏಕಕಾಲದಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಮನೆ ಖರೀದಿದಾರರನ್ನು ಉತ್ತೇಜಿಸಲು ಮನೆಗಳ ಮೇಲಿನ ತೆರಿಗೆಯನ್ನು ಸಹ ಗಣನೀಯವಾಗಿ ಕಡಿಮೆ ಮಾಡಲಾಗುತ್ತಿದೆ. ಈ ಹಿಂದೆ ಶೇಕಡಾ 8 ರಂತೆ ವಿಧಿಸಲಾಗಿದ್ದ ಅಗ್ಗದ ಮನೆಗಳ ಮೇಲಿನ ತೆರಿಗೆ ಈಗ ಕೇವಲ ಶೇಕಡಾ 1 ಆಗಿದೆ. ಅಂತೆಯೇ, ಈಗ ಪ್ರಮಾಣಿತ ಮನೆಗಳ ಮೇಲೆ ಶೇ 12 ರಷ್ಟು ತೆರಿಗೆ ವಿಧಿಸುವಾಗ ಕೇವಲ ಶೇಕಡಾ 5 ಜಿಎಸ್‌ಟಿ ಮಾತ್ರ ವಿಧಿಸಲಾಗುತ್ತಿದೆ. ಈ ವಲಯದ ಮೂಲಸೌಕರ್ಯಗಳನ್ನು ಸರ್ಕಾರವು ಮಾನ್ಯತೆ ನೀಡಿದೆ, ಇದರಿಂದಾಗಿ ಅಗ್ಗದ ದರದಲ್ಲಿ ಸಾಲ ಪಡೆಯಬಹುದು.
ಸ್ನೇಹಿತರೇ,
ಕಳೆದ ವರ್ಷಗಳಲ್ಲಿ ಮಾಡಿದ ಸುಧಾರಣೆಗಳು ನಿರ್ಮಾಣ ಪರವಾನಗಿಯಲ್ಲಿ ನಮ್ಮ ಶ್ರೇಯಾಂಕವು ಕಳೆದ ಮೂರು ವರ್ಷಗಳಲ್ಲಿ 185 ರ ಗರಿಷ್ಠ ಮಟ್ಟದಿಂದ 27 ಕ್ಕೆ ಇಳಿದಿದೆ ಎಂದು ಖಚಿತಪಡಿಸಿದೆ. ನಿರ್ಮಾಣ ಸಂಬಂಧಿತ ಅನುಮತಿಗಳಿಗಾಗಿ ಆನ್‌ಲೈನ್ ವ್ಯವಸ್ಥೆಯನ್ನು 2,000 ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಲಾಗಿದೆ. ಈಗ, ಈ ಹೊಸ ವರ್ಷದಲ್ಲಿ ದೇಶದ ಎಲ್ಲ ನಗರಗಳಲ್ಲಿ ಇದನ್ನು ಕಾರ್ಯಗತಗೊಳಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ.
ಸ್ನೇಹಿತರೇ,
ಮೂಲಸೌಕರ್ಯ ಮತ್ತು ನಿರ್ಮಾಣದ ಮೇಲಿನ ಹೂಡಿಕೆ, ಮತ್ತು ವಿಶೇಷವಾಗಿ ವಸತಿ ವಲಯದ ಮೇಲಿನ ಖರ್ಚು ಆರ್ಥಿಕತೆಯಲ್ಲಿ ಬಲವರ್ಥಕವಾಗಿ ಕಾರ್ಯನಿರ್ವಹಿಸುತ್ತದೆ. ಇಷ್ಟು ದೊಡ್ಡ ಪ್ರಮಾಣದ ಉಕ್ಕು, ಸಿಮೆಂಟ್ ಮತ್ತು ನಿರ್ಮಾಣ ಸಾಮಗ್ರಿಗಳ ಬಳಕೆಯು ಇಡೀ ವಲಯವನ್ನು ಚುರುಕುಗೊಳಿಸುತ್ತದೆ. ಇದು ಬೇಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ದೇಶದ ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಬಲಪಡಿಸಲು ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಎಲ್ಲರಿಗೂ ವಸತಿ ಎಂಬ ಕನಸು ಖಂಡಿತವಾಗಿಯೂ ಈಡೇರುತ್ತದೆ ಎಂದು ನನಗೆ ಖಾತ್ರಿಯಿದೆ. ಕಳೆದ ವರ್ಷಗಳಲ್ಲಿ ಹಳ್ಳಿಗಳಲ್ಲಿ ಎರಡು ಕೋಟಿ ಮನೆಗಳನ್ನು ಸಹ ನಿರ್ಮಿಸಲಾಗಿದೆ. ಈ ವರ್ಷ, ನಾವು ಹಳ್ಳಿಗಳಲ್ಲಿ ನಿರ್ಮಿಸುತ್ತಿರುವ ಮನೆಗಳ ಕೆಲಸವನ್ನು ಇನ್ನಷ್ಟು ವೇಗಗೊಳಿಸಬೇಕಾಗಿದೆ. ನಗರಗಳಲ್ಲಿ ಈ ಹೊಸ ತಂತ್ರಜ್ಞಾನದ ವಿಸ್ತರಣೆಯು ಮನೆಗಳ ನಿರ್ಮಾಣ ಮತ್ತು ವಿತರಣೆಯನ್ನು ವೇಗಗೊಳಿಸುತ್ತದೆ. ನಮ್ಮ ದೇಶವು ಚುರುಕಾದ ವೇಗದಲ್ಲಿ ಚಲಿಸುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಲು, ನಾವೆಲ್ಲರೂ ಒಟ್ಟಾಗಿ ವೇಗವಾಗಿ ಸಾಗಬೇಕು. ನಾವು ನಮ್ಮ ಗುರಿಯನ್ನು ಕೈ ಬಿಡಬೇಕಾಗಿಲ್ಲ ಮತ್ತು ಸಾಗುತ್ತಲೇ ಇರಬೇಕು ಮತ್ತು ವೇಗವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಈ ನಿರ್ಣಯದೊಂದಿಗೆ, ಈ ಆರು ದೀಪಸ್ತಂಭಗಳು ನಮ್ಮ ಹೊಸ ಪೀಳಿಗೆಗೆ ಮತ್ತು ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗಲಿ ಎನ್ನುವುದು ನನ್ನ ಹಾರೈಕೆ.
ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಇಂತಹ ಪ್ರಮುಖ ಯೋಜನೆಗಳನ್ನು ಅಧ್ಯಯನ ಮಾಡಬೇಕೆಂದು ನಾನು ಬಯಸುತ್ತೇನೆ. ನೀವು ಭೇಟಿ ನೀಡಿ ಅದು ಹೇಗೆ ನಡೆಯುತ್ತಿದೆ ಎನ್ನುವುದನ್ನು ನೋಡಬೇಕು. ತಂತ್ರಜ್ಞಾನವನ್ನು ಹೇಗೆ ಬಳಸಲಾಗುತ್ತದೆ. ಹೇಗೆ ಅಕೌಂಟಿಂಗ್ ಮಾಡಲಾಗುತ್ತದೆ. ತನ್ನಲ್ಲೇ ಇದೇ ಒಂದು ಶಿಕ್ಷಣದ ಒಂದು ದೊಡ್ಡ ವ್ಯಾಪ್ತಿಯಾಗಲಿದೆ, ಆದ್ದರಿಂದ, ದೇಶದ ಎಲ್ಲ ಯುವ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ಈ ಲೈಟ್‌ಹೌಸ್‌ಗಳಿಂದ ಎಷ್ಟು ಸಾಧ್ಯವೋ ಅಷ್ಟು ಬೆಳಕನ್ನು ಪಡೆಯಲು ಮತ್ತು ಅವರ ಪಾಲನ್ನು ಕೊಡುಗೆಯಾಗಿ ನೀಡಲು ನಾನು ಆಹ್ವಾನಿಸುತ್ತೇನೆ. ನಿಮ್ಮೆಲ್ಲರಿಗೂ ಈ ಹೊಸ ವರ್ಷದ ಶುಭಾಶಯಗಳು! ಈ ಆರು ದೀಪಸ್ತಂಭಗಳಿಗೆ ಶುಭಾಶಯಗಳು !
ಅನೇಕ ಧನ್ಯವಾದಗಳು!