"ಆಂಟಿಫ್ರಾಜೈಲ್ (ಸವಾಲನ್ನು ಅವಕಾಶವಾಗಿ ಮಾಡುವುದು) ಎಂದರೇನು ಎಂಬುದನ್ನು ಭಾರತವು ಜಗತ್ತಿಗೆ ತೋರಿಸಿದೆ"
"100 ವರ್ಷಗಳಲ್ಲಿಯೇ ಅತಿದೊಡ್ಡ ಬಿಕ್ಕಟ್ಟಿನ ಸಮಯದಲ್ಲಿ ಭಾರತ ತೋರಿಸಿದ ಸಾಮರ್ಥ್ಯವನ್ನು ಅಧ್ಯಯನ ಮಾಡುವ ಮೂಲಕ 100 ವರ್ಷಗಳ ನಂತರವೂ ಮಾನವತೆ ತನ್ನ ಬಗ್ಗೆ ಹೆಮ್ಮೆ ಪಡುತ್ತದೆ"
"2014 ರ ನಂತರ ಆಡಳಿತದ ಪ್ರತಿಯೊಂದು ಅಂಶವನ್ನು ಮರುಕಲ್ಪಿಸಲು, ಮರು-ಆವಿಷ್ಕರಿಸಲು ನಾವು ನಿರ್ಧರಿಸಿದ್ದೇವೆ"
"ಬಡವರನ್ನು ಸಬಲೀಕರಣಗೊಳಿಸಲು ಸರ್ಕಾರವು ಕಲ್ಯಾಣ ಕಾರ್ಯಕ್ರಮಗಳ ವಿತರಣೆಯನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ನಾವು ಮರುಕಲ್ಪಿಸಿದ್ದೇವೆ"
"ಬಡವರನ್ನು ಸಬಲೀಕರಣಗೊಳಿಸುವುದು ಮತ್ತು ಸಂಪೂರ್ಣ ಸಾಮರ್ಥ್ಯದೊಂದಿಗೆ ದೇಶದ ತ್ವರಿತ ಪ್ರಗತಿಗೆ ಕೊಡುಗೆ ನೀಡಲು ಅನುವು ಮಾಡಿಕೊಡುವುದು ಸರ್ಕಾರದ ಗಮನವಾಗಿದೆ"
"ನಮ್ಮ ಸರ್ಕಾರವು ಇಲ್ಲಿಯವರೆಗೆ ಡಿಬಿಟಿ ಮೂಲಕ ವಿವಿಧ ಯೋಜನೆಗಳ ಅಡಿಯಲ್ಲಿ 28 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾಯಿಸಿದೆ"
"ನಾವು ಮೂಲಸೌಕರ್ಯಗಳನ್ನು ಹಗೇವುಗಳಲ್ಲಿಟ್ಟು ನೋಡುವ ರೂಢಿಯನ್ನು ನಿಲ್ಲಿಸಿದ್ದೇವೆ ಮತ್ತು ಮೂಲಸೌಕರ್ಯ ನಿರ್ಮಾಣವನ್ನು ಒಂದು ದೊಡ್ಡ ಕಾರ್ಯತಂತ್ರವಾಗಿ ಮರುಕಲ್ಪಿಸಿದೇವೆ"
ಕಳೆದ 9 ವರ್ಷಗಳಲ್ಲಿ ಸುಮಾರು 3.5 ಲಕ್ಷ ಕಿಲೋಮೀಟರ್ ಗ್ರಾಮೀಣ ರಸ್ತೆಗಳು ಮತ್ತು 80 ಸಾವಿರ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ
"ಇಂದು ಭಾರತವು ಮೆಟ್ರೋ ಮಾರ್ಗದ ಉದ್ದದ ವಿಷಯದಲ್ಲಿ 5 ನೇ ಸ್ಥಾನದಲ್ಲಿದೆ ಮತ್ತು ಶೀಘ್ರದಲ್ಲೇ ಭಾರತವು 3 ನೇ ಸ್ಥಾನಕ್ಕೇರುತ್ತದೆ"
"ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲ್ಯಾನ್ ಮೂಲಸೌಕರ್ಯಗಳ ನಿರ್ಮಾಣಕ್ಕೆ ವೇಗವನ್ನು ನೀಡುವುದಲ್ಲದೆ, ಪ್ರದೇಶ ಅಭಿವೃದ್ಧಿ ಮತ್ತು ಜನರ ಅಭಿವೃದ್ಧಿಗೆ ಒತ್ತು ನೀಡುತ್ತಿದೆ"
"ದೇಶದಲ್ಲಿ ಇಂಟರ್ನೆಟ್ ಡೇಟಾದ ದರವು 25 ಪಟ್ಟು ಕಡಿಮೆಯಾಗಿದೆ, ಇದು ವಿಶ್ವದಲ್ಲೇ ಅಗ್ಗವಾಗಿದೆ"
"2014 ರ ನಂತರ, 'ಸರ್ಕಾರ-ಮೊದಲು' ಮನಸ್ಥಿತಿಯನ್ನು 'ಜನರಿಗೆ ಮೊದಲು' ವಿಧಾನವೆಂದು ಮರುಕಲ್ಪಿಸಲಾಯಿತು
"ಪಾವತಿಸಿದ ತೆರಿಗೆಯನ್ನು ಸಮರ್ಥವಾಗಿ ಖರ್ಚು ಮಾಡಲಾಗುತ್ತಿದೆ ಎಂದು ತಿಳಿದಾಗ ತೆರಿಗೆದಾರರು ಪ್ರೇರಿತರಾಗುತ್ತಾರೆ"
"ಜನರನ್ನು ನಂಬುವುದು ಪ್ರತಿಯೊಂದು ಕಾರ್ಯಕ್ರಮ ಮತ್ತು ನೀತಿಯಲ್ಲಿ ನಮ್ಮ ಮಂತ್ರವಾಗಿದೆ"
"ನೀವು ಭಾರತದ ಬೆಳವಣಿಗೆಯ ಪ್ರಯಾಣದೊಂದಿಗೆ ಸಹಯೋಗ ಹೊಂದಿದಾಗ, ಭಾರತವು ನಿಮಗೆ ಬೆಳವಣಿಗೆಯ ಖಾತರಿಯನ್ನು ನೀಡುತ್ತದೆ"

ಟೈಮ್ಸ್ ಗ್ರೂಪ್ ನ ಶ್ರೀ ಸಮೀರ್ ಜೈನ್ ಮತ್ತು ಶ್ರೀ ವಿನೀತ್ ಜೈನ್, ಜಾಗತಿಕ ವ್ಯಾಪಾರ ಶೃಂಗಶಭೆಯಲ್ಲಿ ಪಾಲ್ಗೊಂಡಿರುವ ಎಲ್ಲಾ ಕೈಗಾರಿಕಾ ವಲಯದ ಸ್ನೇಹಿತರೇ, ಸಿಇಒಗಳೇ, ಶಿಕ್ಷಣ ತಜ್ಞರೇ, ಮಾಧ್ಯಮ ಪ್ರತಿನಿಧಿಗಳೇ, ಇತರೆ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!

ನಾನು ವಿಷಯಕ್ಕೆ ಬರುವ ಮುನ್ನ ಶಿವಭಕ್ತಿ ಮತ್ತು ಲಕ್ಷ್ಮೀ ಆರಾಧನೆಯನ್ನು ಉಲ್ಲೇಖಿಸುತ್ತೇನೆ [ಸಮೀರ್ ಜೀ ಅವರು ಪ್ರಸ್ತಾಪಿಸಿದಂತೆ]. ನೀವು [ಸಮೀರ್ ಜೀ] ಆದಾಯ ತೆರಿಗೆ ಹೆಚ್ಚಿಸುವಂತೆ ಸಲಹೆ ಮಾಡಿದ್ದೀರಿ. ಆದರೆ ಈ ಜನರು [ಹಣಕಾಸು ಇಲಾಖೆಯಲ್ಲಿ] ನಂತರ ಏನು ಮಾಡುತ್ತಾರೆ ಎಂಬುದು ನನಗೆ ತಿಳಿದಿಲ್ಲ. ನಿಮ್ಮ ಮಾಹಿತಿಗಾಗಿ, ವಿಶೇಷವಾಗಿ ಮಹಿಳೆಯರಿಗಾಗಿ ಈ ವರ್ಷದ ಮುಂಗಡಪತ್ರದಲ್ಲಿ ಬಹಳ ಮುಖ್ಯವಾದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎರಡು ವರ್ಷಗಳ ಕಾಲ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇಟ್ಟರೆ ಅವರಿಗೆ ವಿಶೇಷವಾದ ಬಡ್ಡಿದರ ಖಚಿತವಾಗುತ್ತದೆ. ಇದು ಶ್ಲಾಘನೀಯ ಹೆಜ್ಜೆ ಎಂದು ನಾನು ಭಾವಿಸುತ್ತೇನೆ ಮತ್ತು ನೀವು ಇದನ್ನು ಇಷ್ಟಪಡುತ್ತೀರಿ. ಈಗ ಈ ಸುದ್ದಿಗೆ ಸೂಕ್ತ ಪ್ರಾತಿನಿಧ್ಯೆ ನೀಡುವುದು ನಿಮ್ಮ ಸಂಪಾದಕೀಯ ವಿಭಾಗದ ಮೇಲಿದೆ. ದೇಶ ಮತ್ತು ಜಗತ್ತಿನಾದ್ಯಂತ ಆಗಮಿಸಿರುವ ವ್ಯಾಪಾರ ವಲಯದ ನಾಯಕರನ್ನು ಸ್ವಾಗತಿಸುತ್ತೇನೆ ಮತ್ತು ಶುಭ ಕೋರುತ್ತೇನೆ. 

ಇದಕ್ಕೂ ಮುನ್ನ 2020 ರ ಮಾರ್ಚ್ 6 ರಂದು ಇಟಿ ಜಾಗತಿಕ ವ್ಯಾಪಾರ ಶೃಂಗಶಭೆಯಲ್ಲಿ ಭಾಗಿಯಾಗುವ ಅವಕಾಶ ತಮಗೆ ದೊರೆತಿತ್ತು. ಈ ಮೂರು ವರ್ಷಗಳು ಧೀರ್ಘ ಅವಧಿಯಲ್ಲ, ನಾವು ನಿರ್ದಿಷ್ಟವಾದ ಈ ಮೂರು ವರ್ಷಗಳನ್ನು ನೋಡುವುದಾದರೆ ಆಗ ಇಡೀ ಪ್ರಪಂಚ ಬಹಳ ದೂರ ಸಾಗಿದೆ ಎಂದು ಕಾಣುತ್ತದೆ.  ನಾವು ಕಳೆದ ಬಾರಿ ಭೇಟಿ ಮಾಡಿದಾಗ ಮುಖಗವಸು ದೈನಂದಿನ ಜೀವನದ ಭಾಗವಾಗಿರಲಿಲ್ಲ. ಲಸಿಕೆ ಎಂಬುದು ಮಕ್ಕಳು ಅಥವಾ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮಾತ್ರ ಎಂದು ಜನ ಆಲೋಚಿಸುತ್ತಿದ್ದರು. ಹಲವಾರು ಜನ ಬೇಸಿಗೆ ರಜೆಯಲ್ಲಿ ಅನೇಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಹಲವರು ಹೊಟೇಲ್ ಗಳನ್ನು ಸಹ ಮುಂಗಡ ಕಾಯ್ದಿರಿಸುತ್ತಾರೆ. ಆದರೆ 2020 ಇಟಿ ಶೃಂಗ ಸಭೆಯ ಐದು ದಿನಗಳ ನಂತರ ಡಬ್ಲ್ಯುಎಚ್ಒ ಕೋವಿಡ್ ಅನ್ನು ಸಾಂಕ್ರಾಮಿಕ ಎಂದು ಘೋಷಿಸಿತು ಮತ್ತು ಇದೇ ಸಮಯಕ್ಕೆ ಇಡೀ ಜಗತ್ತಿನಲ್ಲಿ ಬದಲಾವಣೆಯಾಯಿತು. ಈ ಮೂರು ವರ್ಷಗಳಲ್ಲಿ ಸಂಪೂರ್ಣ ಪ್ರಪಂಚ ಬದಲಾವಣೆ ಕಂಡಿತು. ಜಾಗತಿಕ ವ್ಯವಸ್ಥೆಯಲ್ಲಿಯೂ ಬದಲಾವಣೆಯಾಯಿತು ಮತ್ತು ಭಾರತವೂ ಸಹ ಬದಲಾಯಿತು. ಇತ್ತೀಚಿನ ದಿನಗಳಲ್ಲಿ “ವಿರೋಧಿ ದುರ್ಬಲವಾದ” ಎಂಬ ಆಸಕ್ತಿದಾಯಕ ಪರಿಕಲ್ಪನೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವುದನ್ನು ನಾವೆಲ್ಲರೂ ಕೇಳಿದ್ದೇವೆ. ವ್ಯಾಪಾರ ಜಗತ್ತಿನಲ್ಲಿ ನೀವು ಜಾಗತಿಕ ನಾಯಕರು. ನೀವು “ವಿರೋಧಿ ದುರ್ಬಲವಾದ” ಕುರಿತು ಚೆನ್ನಾಗಿ ತಿಳಿದಿದ್ದೀರಿ. ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುವುದು ಮಾತ್ರವಲ್ಲ, ಆ ಪರಿಸ್ಥಿತಿಗಳನ್ನು ಬಳಸಿಕೊಂಡು ಬಲಶಾಲಿಯಾಗುವ ವ್ಯವಸ್ಥೆ ಇದಾಗಿದೆ!

ನಾನು ಮೊದಲ ಬಾರಿಗೆ “ವಿರೋಧಿ ದುರ್ಬಲವಾದ” ಎಂಬ ಪರಿಕಲ್ಪನೆಯನ್ನು ಕೇಳಿದ್ದು, ಆಗ ನನ್ನ ಮನಸ್ಸಿಗೆ ಬಂದ ಮೊದಲ ವಿಷಯವೆಂದರೆ 140 ಕೋಟಿ ಭಾರತೀಯರ ಸಾಮೂಹಿಕ ಸಂಕಲ್ಪ. ಕಳೆದ ಮೂರು ವರ್ಷಗಳಲ್ಲಿ ಜಗತ್ತು ಕೊರೋನಾ, ಯುದ್ಧ ಮತ್ತು ನೈಸರ್ಗಿಕ ವಿಕೋಪದ ಸವಾಲುಗಳನ್ನು ಎದುರಿಸುತ್ತಿರುವಾಗ ಅದೇ ಸಮಯದಲ್ಲಿ ಭಾರತ ಮತ್ತು ಇಲ್ಲಿನ ಜನ ಅಭೂತಪೂರ್ವ ಶಕ್ತಿಯನ್ನು ಪ್ರದರ್ಶಿಸಿದರು. ವಿರೋಧಿ ದುರ್ಬಲವಾದ ಎಂದರೆ ಏನು ಎಂಬುದನ್ನು ಜಗತ್ತಿಗೆ ಭಾರತ ತೋರಿಸಿಕೊಟ್ಟಿದೆ. ಸ್ವಲ್ಪ ಯೋಚಿಸಿ. ಮೊದಲು ದುರ್ಬಲವಾದದ ಬಗ್ಗೆ ಮಾತನಾಡುತ್ತಿದ್ದಲ್ಲಿ, ಈಗ ಭಾರತವನ್ನು ದುರ್ಬಲ ವಿರೋಧಿ ಎಂದು ಗುರುತಿಸಲಾಗಿದೆ. ವಿಪತ್ತುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವುದು ಹೇಗೆ ಎಂಬುದನ್ನು ಭಾರತ ಜಗತ್ತಿಗೆ ಮನವರಿಕೆಯಾಗುವಂತೆ ತೋರಿಸಿದೆ.   

100 ವರ್ಷಗಳಲ್ಲೇ ಅತ್ಯಂತ ದೊಡ್ಡ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ತೋರಿಸಿದ ಸಾಮರ್ಥ್ಯವನ್ನು ಅಧ್ಯಯನ ಮಾಡುವ ಮೂಲಕ 100 ವರ್ಷಗಳ ನಂತರ ಮಾನವೀಯತೆಯ ಬಗ್ಗೆ ಭಾರತ ಹೆಮ್ಮೆಪಡುತ್ತದೆ. ಭಾರತ ಇಂದು 21 ನೇ ಶತಮಾನದ ಮೂರನೇ ದಶಕಕ್ಕೆ ಅಡಿಪಾಯ ಹಾಕಿದೆ ಮತ್ತು ತನ್ನ ಸಾಮರ್ಥ್ಯದಲ್ಲಿ ಈ ನಂಬಿಕೆಯೊಂದಿಗೆ 2023 ನೇ ವರ್ಷವನ್ನು ಪ್ರವೇಶಿಸಿದೆ.  ಭಾರತದ ಪ್ರತಿಧ್ವನಿ ಇಂದು ಇಟಿ ಜಾಗತಿಕ ಶೃಂಗ ಸಭೆಯಲ್ಲಿಯೂ ಕೇಳಿ ಬರುತ್ತಿದೆ. 

ಸ್ನೇಹಿತರೇ,

ಈ ವರ್ಷದ ಇಟಿ ಜಾಗತಿಕ ವ್ಯಾಪಾರ ಶೃಂಗಸಭೆಯ ವಿಷಯವೆಂದರೆ “ವ್ಯಾಪಾರದ ಮರುಕಲ್ಪನೆ, ಜಗತ್ತಿನ ಮರುಕಲ್ಪನೆಯಾಗಿದೆ”. ಅಂದಹಾಗೆ ‘ಮರುಕಲ್ಪನೆ’ ವಿಷಯ ಇತರರಿಗೆ ಮಾತ್ರವೇ ಎಂಬುದು ತಮಗೆ ತಿಳಿದಿಲ್ಲ. ಅವರು ಅದನ್ನು ಸಹ ಅನ್ವಯಿಸುತ್ತಾರೆಯೇ?, ನಮ್ಮ ದೇಶದಲ್ಲಿ ಅಭಿಪ್ರಾಯ ರೂಪಿಸುವ ಹೆಚ್ಚಿನವರು ಪ್ರತಿ ಆರು ತಿಂಗಳಿಗೊಮ್ಮೆ ಅದೇ ಮರು ಉತ್ಪನ್ನವನ್ನು ಮರು ಪ್ರಾರಂಭಿಸುವಲ್ಲಿ ನಿರತರಾಗುತ್ತಾರೆ.  ಕುತೂಹಲಕರವೆಂದರೆ ಮರು ಚಾಲನೆ ಸಂದರ್ಭದಲ್ಲಿ ಮರು ಚಿಂತನೆ ಮಾಡುವುದಿಲ್ಲ. ಇಲ್ಲಿ ಬಹಳ ಬುದ್ದಿವಂತರು ಕುಳಿತಿದ್ದೀರಿ. ಅದು ಏನೇ ಇರಲಿ, ಪ್ರಸಕ್ತ ಕಾಲದಲ್ಲಿ ಇದು ಬಹಳ ಪ್ರಸ್ತುತವಾದ ವಿಷಯವಾಗಿದೆ. ದೇಶ ನಮಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ ನಾವು ಮಾಡಿದ ಮೊದಲ ಕೆಲಸವೆಂದರೆ ಮರು ಕಲ್ಪನೆ. 2014 ರಲ್ಲಿ ಲಕ್ಷಾಂತರ ಕೋಟಿ ಹಗರಣಗಳಿಂದ ದೇಶದ ಪ್ರತಿಷ್ಠೆಗೆ ಧಕ್ಕೆಯಾಗಿತ್ತು. ಭ್ರಷ್ಟಾಚಾರದಿಂದಾಗಿ ಬಡವರು ಕೂಡ ತಮಗೆ ಸಿಗಬೇಕಾದ ಮೂಲಭೂತ ಅಗತ್ಯಗಳಿಗಾಗಿ ಹಾತೊರೆಯುತ್ತಿದ್ದರು. ಸ್ವಜನ ಪಕ್ಷಪಾತದ ಬಲಿಪೀಠದಲ್ಲಿ ಯುವ ಸಮೂಹದ ಆಕಾಂಕ್ಷೆಗಳು ಬಲಿಯಾಗುತ್ತಿತ್ತು. ನೀತಿಯಲ್ಲಿನ ಪಾರ್ಶ್ವವಾಯುವಿನಿಂದಾಗಿ ಮೂಲ ಸೌಕರ್ಯ ಯೋಜನೆಗಳು ವರ್ಷಗಳ ಕಾಲ ವಿಳಂಬವಾಯಿತು. ಇಂತಹ ಆಲೋಚನೆ ಮತ್ತು ಧೋರಣೆಯಿಂದಾಗಿ ದೇಶವನ್ನು ತ್ವರಿತವಾಗಿ ಮುನ್ನಡೆಸಲು ಕಷ್ಟವಾಗಿತ್ತು. ಆದ್ದರಿಂದ ನಾವು ಆಡಳಿತದ ಪ್ರತಿಯೊಂದು ಅಂಶವನ್ನು ಮರು ಕಲ್ಪನೆ ಮತ್ತು ಮರು ಆವಿಷ್ಕಾರ ಮಾಡಲು ತೀರ್ಮಾನಿಸಿದೆವು. ಬಡವರನ್ನು ಸಬಲೀಕರಣಗೊಳಿಸಲು ಸರ್ಕಾರ ಕಲ್ಯಾಣ ಸೌಲಭ್ಯಗಳನ್ನು ಹೇಗೆ ಸುಧಾರಿಸಬೇಕು ಎಂಬುದನ್ನು ನಾವು ಮರು ಕಲ್ಪಿಸಿಕೊಂಡಿದ್ದೇವೆ. ಹೆಚ್ಚಿನ ಸಮರ್ಥ ರೀತಿಯಲ್ಲಿ ಮೂಲ ಸೌಲಭ್ಯವನ್ನು ಹೇಗೆ ಸೃಜಿಸಬಹುದು ಎಂಬುದನ್ನು ನಾವು ಮರು ಕಲ್ಪನೆ ಮಾಡಿಕೊಂಡಿದ್ದೇವೆ. ದೇಶದ ಜನರೊಂದಿಗೆ ಯಾವ ರೀತಿಯ ಬಾಂಧವ್ಯ ಹೊಂದಬೇಕು ಎನ್ನುವುದನ್ನು ನಾವು ಮರು ಕಲ್ಪಿಸಿಕೊಂಡಿದ್ದೇವೆ. ಕಲ್ಯಾಣ ಸೌಲಭ್ಯಗಳ ವಿತರಣೆಗೆ ಸಂಬಂಧಿಸಿದಂತೆ ನಾನು ನಿಮಗೆ ಸ್ವಲ್ಪ ವಿವರವಾಗಿ ಹೇಳಲು ಬಯಸುತ್ತೇನೆ.   

ಬಡವರು ಈ ಮುನ್ನ ಬ್ಯಾಂಕ್ ಖಾತೆ ಹೊಂದುವುದು ಅಗತ್ಯವಿರಲಿಲ್ಲ, ಬಡವರು ಬ್ಯಾಂಕ್ ಗಳಿಂದ ಸಾಲ ಪಡೆಯುವುದು ಅಗತ್ಯವಿರಲಿಲ್ಲ, ಬಡವರು ಮನೆಗಳು ಮತ್ತು ಆಸ್ತಿಯ ಹಕ್ಕು ಹೊಂದುವಂತಿರಲಿಲ್ಲ. ಶೌಚಾಲಯ, ವಿದ್ಯುತ್ ಮತ್ತು ಶುದ್ಧ ಅಡುಗೆ ಇಂಧನ ಮತ್ತು ತ್ವರಿತ ಅಂತರ್ಜಾಲ ಸೌಲಭ್ಯ ಹೊಂದುವಂತಿರಲಿಲ್ಲ. ಈ ವಿಧಾನವನ್ನು ಬದಲಿಸುವುದು ಮತ್ತು ಮರು ಕಲ್ಪನೆ ಮಾಡುವುದು ಬಹಳ ಮುಖ್ಯವಾಗಿತ್ತು. ಕೆಲವು ಜನ ಬಡತವನ್ನು ತೊಡೆದುಹಾಕುವ ಬಗ್ಗೆ ಮಾತನಾಡುತ್ತಿದ್ದರು, ಆದರೆ ಬಡವರನ್ನು ಮೊದಲು ದೇಶಕ್ಕೆ ಹೊರೆ ಎಂದು ಪರಿಗಣಿಸಲಾಗಿತ್ತು ಎಂಬುದು ಸತ್ಯ. ಆದ್ದರಿಂದ ಅವರನ್ನು ಅವರ ಪಾಡಿಗೆ ಬಿಡಲಾಗಿತ್ತು. ಮತ್ತೊಂದೆಡೆ ನಮ್ಮ ಗಮನ ಬಡವರನ್ನು ಸಬಲೀಕರಣಗೊಳಿಸುವುದರ ಮೇಲೆ ಕೇಂದ್ರೀಕೃತವಾಗಿದೆ, ಇದರಿಂದಾಗಿ ಅವರು ಸಂಪೂರ್ಣ ಸಾಮರ್ಥ್ಯದೊಂದಿಗೆ ದೇಶದ ತ್ವರಿತ ಬೆಳವಣಿಗೆಗೆ ಕೊಡುಗೆ ನೀಡಬಹುದು. ನಿಮಗೆ ನೇರ ಸೌಲಭ್ಯ ವರ್ಗಾವಣೆ ಉದಾಹರಣೆಯಾಗಬಹುದು. ಸರ್ಕಾರದ ಯೋಜನೆಗಳಲ್ಲಿ ಭ್ರಷ್ಟಾಚಾರ, ಸೋರಿಕೆ ಮತ್ತು ಮಧ್ಯವರ್ತಿಗಳು ನಮ್ಮ ದೇಶದಲ್ಲಿ ಸಾಮಾನ್ಯವಾಗಿದ್ದು, ನಿಮಗೆ ತಿಳಿದಿರುವಂತೆ ಸಮಾಜ ಅದರೊಂದಿಗೆ ರಾಜೀ ಮಾಡಿಕೊಂಡಿದೆ. ಇದೇ ಕಾಲಕ್ಕೆ ಮುಂಗಡಪತ್ರದಲ್ಲಿ ಸರ್ಕಾರದ ವೆಚ್ಚ ಹೆಚ್ಚಾಗಿದ್ದು, ಇದೇ ಸಮಯದಲ್ಲಿ ಬಡತನ ಕೂಡ ಏರಿಕೆಯಾಗಿದೆ. ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರು ನಾಲ್ಕು ದಶಕಗಳ ಹಿಂದೆ ದೆಹಲಿಯಿಂದ ಕಲ್ಯಾಣ ಕಾರ್ಯಕ್ರಮಕ್ಕೆ ಒಂದು ರೂಪಾಯಿ ಕಳುಹಿಸಿದರೆ ಫಲಾನುಭವಿಗೆ ಕೇವಲ 15 ಪೈಸೆ ಮಾತ್ರ ತಲುಪುತ್ತದೆ ಎಂದು ಹೇಳಿದ್ದರು. ಆಗ ಯಾರ ಅಂಗೈಗೆ ತುಪ್ಪ ಹಚ್ಚಲಾಗುತ್ತಿತ್ತೋ ಗೊತ್ತಿಲ್ಲ. ನೇರ ಸೌಲಭ್ಯ ವರ್ಗಾವಣೆ – ಡಿಬಿಟಿ ಮೂಲಕ 28 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ಸರ್ಕಾರ ಕಲ್ಯಾಣ ಕಾರ್ಯಕ್ರಮಗಳಿಗೆ ವರ್ಗಾವಣೆ ಮಾಡಿದೆ. ರಾಜೀವ್ ಗಾಂಧಿ ಅವರ ಹೇಳಿಕೆಗಳನ್ನು ನಾನು ಸೇರಿಸುವುದಾದರೆ ಶೇ 85 ರಷ್ಟು ಅಂದರೆ ಇದರ ಒಟ್ಟು ಮೊತ್ತ 24 ಲಕ್ಷ ಕೋಟಿ ರೂಪಾಯಿ.  ಈ ಮೊತ್ತವನ್ನು ಕೆಲವು ಜನ ಲೂಟಿ ಮಾಡುತ್ತಿದ್ದರು ಮತ್ತು  ಈ ವಿಷಯವನ್ನು ಬದಿಗೆ ಸರಿಸಲಾಗುತ್ತಿತ್ತು. ವಾಸ್ತವವಾಗಿ ನಾಲ್ಕು ಲಕ್ಷ ಕೋಟಿ ರೂಪಾಯಿ ಮೊತ್ತ ನೈಜ ಫಲಾನುಭವಿಗಳಿಗೆ ತಲುಪುತ್ತಿತ್ತು. ಆದರೆ ನಾನು ಮರು ಕಲ್ಪನೆ ಮಾಡಿದೆ ಮತ್ತು ಡಿಬಿಟಿ ವ್ಯವಸ್ಥೆಗೆ ಆದ್ಯತೆ ನೀಡಿದೆ. ಇಂದು ದೆಹಲಿಯಿಂದ ಕಳುಹಿಸುವ ಸಂಪೂರ್ಣ ಒಂದು ರೂಪಾಯಿ ಬಡವರಿಗೆ ತಲುಪುತ್ತಿದೆ. ಇದನ್ನೇ ಮರು ಕಲ್ಪನೆ ಎನ್ನುತ್ತಾರೆ. 

ಸ್ನೇಹಿತರೇ,

ಪ್ರತಿಯೊಬ್ಬ ಭಾರತೀಯನಿಗೆ ಶೌಚಾಲಯದ ಸೌಲಭ್ಯ ದೊರೆಯುವ ದಿನದಂದು ದೇಶ ಅಭಿವೃದ್ಧಿಯ ಎತ್ತರದಲ್ಲಿರುತ್ತದೆ ಎಂದು ಒಮ್ಮೆ ನೆಹರು ಜೀ ಹೇಳಿದ್ದರು. ನಾನು ಪಂಡಿತ್ ನೆಹರು ಜೀ ಬಗ್ಗೆ ಮಾತನಾಡುತ್ತೇನೆ. ನೀವು ಕಲ್ಪಿಸಿಕೊಳ್ಳಿ ಅವರು ಹಲವಾರು ವರ್ಷಗಳ ಹಿಂದೆ ಹೇಳಿದ್ದರು. ಇದರರ್ಥ ನೆಹರು ಜೀ ಅವರಿಗೂ ಸಹ ಈ ಸಮಸ್ಯೆ ಗೊತ್ತಿತ್ತು. ಆದರೆ ಇದಕ್ಕೆ ಪರಿಹಾರ ದೊರಕಿಸಿಕೊಡಲು ಅವರು ಸನ್ನದ್ಧತೆ ತೋರಿರಲಿಲ್ಲ. ಇದರ ಫಲವಾಗಿ ಹೆಚ್ಚು ಕಾಲ ದೇಶ ಮೂಲ ಸೌಕರ್ಯಗಳಿಂದ ವಂಚಿತವಾಗಿತ್ತು. ಆದರೆ ನಾವು 2014 ರಲ್ಲಿ ದೇಶಕ್ಕೆ ಸೇವೆ ಸಲ್ಲಿಸಲು ಅವಕಾಶ ದೊರೆತಾಗ ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ವ್ಯವಸ್ಥೆ 40% ಕ್ಕೂ ಕಡಿಮೆ ಇತ್ತು.  ಅತಿ ಕಡಿಮೆ ಸಮಯದಲ್ಲಿ ನಾವು ಸ್ವಚ್ಛ ಭಾರತ ಅಭಿಯಾನ ಆರಂಭಿಸಿದೆವು ಮತ್ತು 10 ಕೋಟಿ ಶೌಚಾಲಯ ನಿರ್ಮಾಣ ಮಾಡಿದೆವು. ಇಂದು ದೇಶದ ಗ್ರಾಮೀಣ ಪ್ರದೇಶದಲ್ಲಿ ಶೇ 100 ರಷ್ಟು ನೈರ್ಮಲ್ಯವನ್ನು ಸಾಧಿಸಿದ್ದೇವೆ. 

ನಾನು ಇದೀಗ ಮಹತ್ವಾಕಾಂಕ್ಷೆ ಜಿಲ್ಲೆಗಳ ಕುರಿತು ಉದಾಹರಣೆ ನೀಡುತ್ತೇನೆ. ನಾನು ಮರು ಕಲ್ಪನೆ ವಿಷಯಕ್ಕೆ ಸೀಮಿತವಾಗಿರಲು ಬಯಸುತ್ತೇನೆ. 2014 ರ ಪರಿಸ್ಥಿತಿಯಲ್ಲಿ ದೇಶದಲ್ಲಿ 100 ಕ್ಕೂ ಹೆಚ್ಚು ಜಿಲ್ಲೆಗಳಿದ್ದು, ಅವುಗಳನ್ನು ಅತ್ಯಂತ ಹಿಂದುಳಿದವೆಂದು ಪರಿಗಣಿಸಲಾಗಿದೆ. ಬಡತನ, ಹಿಂದುಳಿದಿರುವಿಕೆ, ರಸ್ತೆಗಳಿರಲಿಲ್ಲ, ನೀರಿಲ್ಲ, ಶಾಲೆಗಳಿಲ್ಲ, ವಿದ್ಯುತ್ ಸೌಲಭ್ಯವಿಲ್ಲ, ಆಸ್ಪತ್ರೆಗಳಿಲ್ಲ, ಶಿಕ್ಷಣವಿಲ್ಲ ಮತ್ತು ಈ ಗುರುತಿಸಲಾದ ಜಿಲ್ಲೆಗಳಲ್ಲಿ ಉದ್ಯೋಗವಿರಲಿಲ್ಲ. ನಾವು ಈ ಹಿಂದುಳಿದಿರುವಿಕೆಯ ಕಲ್ಪನೆಯನ್ನು ಮರು ಕಲ್ಪನೆ ಮಾಡಿ ಈ ಜಿಲ್ಲೆಗಳನ್ನು ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನಾಗಿ ಮಾಡಿದೆವು. ಇದಕ್ಕೂ ಮುನ್ನ ಅಧಿಕಾರಿಗಳನ್ನು ಈ ಜಿಲ್ಲೆಗಳಿಗೆ ನಿಯೋಜಿಸುವುದು ಶಿಕ್ಷೆಯಾಗಿತ್ತು, ಇಂದು ಉತ್ತಮ ಮತ್ತು ಯುವ ಅಧಿಕಾರಿಗಳನ್ನು ಕರ್ತವ್ಯನಿರತರಾಗಿದ್ದಾರೆ. 

ಇಂದು ಕೇಂದ್ರ ಸರ್ಕಾರ, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು, ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾಡಳಿತ ಸೇರಿದಂತೆ ಎಲ್ಲರೂ ಈ ಜಿಲ್ಲೆಗಳ ಬದಲಾವಣೆಗಾಗಿ ಶ್ರದ್ಧೆಯಿಂದ ಕೆಲಸ ಮಾಡುತ್ತಿವೆ. ಇದರ ಫಲವಾಗಿ ನಾವು ಉತ್ತಮ ಫಲಿತಾಂಶ ಪಡೆಯುತ್ತಿದ್ದೇವೆ ಮತ್ತು ತಂತ್ರಜ್ಞಾನದ ವ್ಯಾಪಕ ಬಳಕೆಯ ಮೂಲಕ ನೈಜ ಸಮಯದ ಮೇಲ್ವಿಚಾರಣೆಯೂ ಸಹ ಸಾಧ್ಯವಾಗುತ್ತಿದೆ. ಉದಾಹರಣೆಗೆ ಉತ್ತರ ಪ್ರದೇಶದ ಮಹತ್ವಾಕಾಂಕ್ಷೆ ಜಿಲ್ಲೆ ಫತೇಪುರ್ ನಲ್ಲಿ ಸಾಂಸ್ಥಿಕ ಹೆರಿಗೆಗಳು ಈಗ ಶೇ 47 ರಿಂದ 91 ಕ್ಕೆ ಏರಿಕೆಯಾಗಿವೆ ಮತ್ತು ಇದರ ಪರಿಣಾಮ ತಾಯಿ ಮತ್ತು ಶಿಶು ಮರಣದಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ಮಧ್ಯಪ್ರದೇಶದ ಮಹತ್ವಾಕಾಂಕ್ಷೆ ಜಿಲ್ಲೆ ಬರ್ವಾನಿಯಲ್ಲಿ ಸಂಪೂರ್ಣ ರೋಗ ನಿರೋಧಕ ಮಕ್ಕಳ ಸಂಖ್ಯೆ ಶೇ 40 ರಿಂದ ಶೇ 90 ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದ ಮಹತ್ವಾಕಾಂಕ್ಷೆ ಜಿಲ್ಲೆ ವಾಸಿಂ ನಲ್ಲಿ ಕ್ಷಯ ರೋಗ ಚಿಕಿತ್ಸೆ ಶೇ 40 ರಿಂದ ಶೇ 90 ಕ್ಕೆ ಹೆಚ್ಚಳವಾಗಿದೆ. ಕರ್ನಾಟಕದ ಮಹತ್ವಾಕಾಂಕ್ಷೆ ಜಿಲ್ಲೆ ಯಾದಗಿರ್ ನ ಗ್ರಾಮ ಪಂಚಾಯತ್ ಗಳಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕ ಶೇ 20 ರಿಂದ ಶೇ 80 ಕ್ಕೆ ಹೆಚ್ಚಳಗೊಂಡಿದೆ. ಒಂದು ಕಾಲದಲ್ಲಿ ಹಿಂದುಳಿದ ಜಿಲ್ಲೆಗಳೆಂದು ಕರೆಯುವ ಮೂಲಕ ಅಸ್ಪೃಶ್ಯವಾಗಿದ್ದ ಈ ಮಹತ್ವಾಕಾಂಕ್ಷೆ ಜಿಲ್ಲೆಗಳು ಇದೀಗ ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗುತ್ತಿದ್ದು, ಇದು ಮರು ಕಲ್ಪನೆಯ ಫಲವಾಗಿದೆ.  

ಶುದ್ಧ ಕುಡಿಯುವ ನೀರಿನ ವಿಷಯದಲ್ಲಿ ನಾನು ಉದಾಹರಣೆ ನೀಡಲು ಬಯಸುತ್ತೇನೆ. ಸ್ವಾತಂತ್ರ್ಯ ಪಡೆದು ಏಳು ದಶಕಗಳು ತುಂಬಿದರೂ ಮೂರು ಕೋಟಿ ಗ್ರಾಮೀಣ ಮನೆಗಳು ಅಂದರೆ  30 ದಶಲಕ್ಷ ಮನೆಗಳಿಗೆ ಕೊಳಾಯಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು. ಇಂದು 160 ದಶಲಕ್ಷ ಮನೆಗಳು ಅಂದರೆ 16 ಕೋಟಿ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ. ಉದಾತ್ತ ಭರವಸೆಗಳನ್ನು ನೀಡುವುದಕ್ಕಿಂತ ನಾವು ಕೇವಲ 3.5 ವರ್ಷಗಳಲ್ಲಿ 80 ದಶಲಕ್ಷ ಅಂದರೆ 8 ಕೋಟಿ ಮನೆಗಳಿಗೆ ಹೊಸದಾಗಿ ಕೊಳಾಯಿ ಮೂಲಕ ನೀರು ಪೂರೈಕೆ ಮಾಡಿದ್ದೇವೆ. ಇದು ಮರು ಕಲ್ಪನೆಯ ಸಾಧನೆ.   

ಸ್ನೇಹಿತರೇ, 

ಭಾರತದ ಕ್ಷಿಪ್ರ ಬೆಳವಣಿಗೆಗೆ ಉತ್ತಮ ಮೂಲ ಸೌಕರ್ಯ ಅಗತ್ಯ ಎಂಬುದನ್ನು ಈ ಶೃಂಗ ಸಭೆಯಲ್ಲಿ ಉಪಸ್ಥಿತರಿರುವ ತಜ್ಞರು ಒಪ್ಪಿಕೊಳ್ಳುತ್ತಾರೆ. ಆದರೆ ಮೊದಲು ದೇಶದ ಪರಿಸ್ಥಿತಿ ಹೇಗಿತ್ತು?. ಅದು ಏಕೆ ಆ ರೀತಿ ಇತ್ತು?. ಈ ನಿಟ್ಟಿನಲ್ಲಿ ಎಕಾನಿಕ್ ಟೈಮ್ಸ್ ನಲ್ಲಿ ಹಲವಾರು ಸಂಪಾದಕೀಯಗಳು ಪ್ರಕಟವಾಗಿವೆ ಮತ್ತು ವಿವಿಧ ತಜ್ಞರು ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ. ಆ ಸಂಪಾದಕೀಯದ ಮುಖ್ಯಾಂಶವೆಂದರೆ ಮೂಲ ಸೌಕರ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ದೇಶದ ಅವಶ್ಯಕತೆಗಳೆಂದು ಪರಿಗಣಿಸಲಾಗಿಲ್ಲ ಮತ್ತು ರಾಜಕೀಯ ಮಹತ್ವಾಕಾಂಕ್ಷೆಗೆ ಆದ್ಯತೆ ನೀಡಲಾಗಿತ್ತು. ಇದರಿಂದಾಗಿ ಇಡೀ ದೇಶ ಬಲಿಪಶುವಾಗಿದೆ. ಎಲ್ಲೋ ಒಂದು ಕಡೆ ರಸ್ತೆಗಳನ್ನು ನಿರ್ಮಿಸಿದರೆ ಅದು ಮತಗಳನ್ನು ಪಡೆಯುತ್ತದೆಯೋ ಇಲ್ಲವೋ ಎಂದು ರಾಜಕೀಯ ಲಾಭವನ್ನು ಅಳೆಯಲಾಗುತ್ತದೆ. ರಾಜಕೀಯ ಲಾಭ ಮತ್ತು ನಷ್ಟದ ಹಿನ್ನೆಲೆಯಲ್ಲಿ ರೈಲುಗಳ ಮಾರ್ಗಗಳು ಮತ್ತು ನಿಲುಗಡೆಗಳನ್ನು ನಿರ್ಧಸಲಾಯಿತು. ಬೇರೆ ರೀತಿಯಲ್ಲಿ ಹೇಳುವುದಾದರೆ ಮೂಲ ಸೌಕರ್ಯದ ಸಾಮರ್ಥ್ಯವನ್ನು ನಿಜವಾದ ಅರ್ಥದಲ್ಲಿ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಈ ಸತ್ಯಗಳು ನಿಮಗೆ ಆಘಾತಕಾರಿ ಎಂದು ತೋರುತ್ತವೆ, ಆದರೆ ಇದು ನಿಜ. ಎಕನಾಮಿಕ್ ಟೈಮ್ಸ್ ನ ಪತ್ರಕರ್ತರು ಇಂತಹ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲದೇ ಇರಬಹದು. ದುರದೃಷ್ಟಕರವೆಂದರೆ ಅಣೆಕಟ್ಟೆಗಳನ್ನು ನಿರ್ಮಿಸಲಾಗಿತ್ತು, ಆದರೆ ಕಾಲುವೆಗಳ ಜಾಲವನ್ನು ನಿರ್ಮಿಸಿರಲಿಲ್ಲ. ಆರು ಅಂತಸ್ತಿನ ಕಟ್ಟಡದಲ್ಲಿ ಲಿಪ್ಟ್ ಗಳು ಮತ್ತು ಮೆಟ್ಟಿಲುಗಳು ಇಲ್ಲದೇ ಇರುವುದನ್ನು ನೀವು ಊಹಿಸಬಲ್ಲಿರಾ?. ಕಾಲುವೆಗಳಿಲ್ಲದ ಅಣೆಕಟ್ಟೆಗಳನ್ನು ನೀವು ಊಹಿಸಬಹುದೇ?. ಆದರೆ ಬಹುಶಃ ಆ ಸಮಯದಲ್ಲಿ ಅಂತಹ ಸಮಸ್ಯೆಗಳನ್ನು ವರದಿ ಮಾಡುವುದು ಸೂಕ್ತ ಎಂಬುದಾಗಿ ಎಕನಾಮಿಕ್ಸ್ ಟೈಮ್ಸ್ ಕಂಡುಕೊಂಡಿಲ್ಲದಿರಬಹುದು.  

ನಮ್ಮಲ್ಲಿ ಗಣಿಗಳಿದ್ದವು, ಆದರೆ ಖನಿಜ ಸಾಗಿಸಲು ಸಾರಿಗೆ ಸಂಪರ್ಕ ವ್ಯವಸ್ಥೆ ಇರಲಿಲ್ಲ. ನಮ್ಮಲ್ಲಿ ಬಂದರುಗಳಿತ್ತು, ಆದರೆ ರೈಲು ಮತ್ತು ರಸ್ತೆ ಸಂಪರ್ಕ ದೊಡ್ಡ ಸಮಸ್ಯೆಗಳಾಗಿತ್ತು. ನಮ್ಮಲ್ಲಿ ವಿದ್ಯುತ್ ಸ್ಥಾವರಗಳಿವೆ, ಆದರೆ ವಿದ್ಯುತ್ ಸಾಗಾಣೆ ಮಾರ್ಗಗಳು ಸಾಕಾಗುತ್ತಿಲ್ಲ ಮತ್ತು ಇವು ಕಳಪೆ ಸ್ಥಿತಿಯಲ್ಲಿದ್ದವು. 

ಸ್ನೇಹಿತರೇ, 

ಮೂಲ ಸೌಕರ್ಯ ನಿರ್ಮಾಣವನ್ನು ಒಂದು ದೊಡ್ಡ ಕಾರ್ಯತಂತ್ರದ ಭಾಗವಾಗಿ ಮರು ಕಲ್ಪನೆ ಮಾಡಿದ್ದೇವೆ. ಇಂದು ಭಾರತದಲ್ಲಿ ಹೆದ್ದಾರಿಗಳನ್ನು ಪ್ರತಿ ದಿನಕ್ಕೆ 38 ಕಿಲೋ ಮೀಟರ್ ವೇಗದಲ್ಲಿ ನಿರ್ಮಿಸಲಾಗುತ್ತಿದೆ ಮತ್ತು ಪ್ರತಿದಿನ 5 ಕಿಲೋಮೀಟರ್ ಗಿಂತ ಹೆಚ್ಚು ರೈಲು ಮಾರ್ಗಗಳನ್ನು ಸ್ಥಾಪಿಸಲಾಗುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ನಮ್ಮ ಬಂದರುಗಳ ಸಾಮರ್ಥ್ಯ 3000 ಎಂಟಿಪಿಎ ನಷ್ಟು ಏರಿಕೆಯಾಗಲಿದೆ. 2014 ರಲ್ಲಿ 74 ಬಂದರುಗಳು ಕಾರ್ಯಾಚರಣೆಯಲ್ಲಿತ್ತು, ಇದೀಗ 147 ಕ್ಕೆ ಏರಿಕೆಯಾಗಿದೆ. 9 ವರ್ಷಗಳಲ್ಲಿ 3.5 ಲಕ್ಷ ಕಿಲೋಮೀಟರ್ ಗ್ರಾಮೀಣ ರಸ್ತೆ ನಿರ್ಮಿಸಲಾಗಿದೆ. 80 ಸಾವಿರಕ್ಕೂ ಹೆಚ್ಚು ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ. ಈ ಎಲ್ಲಾ 9 ವರ್ಷಗಳ ಲೆಕ್ಕಪತ್ರವನ್ನು ನಿಮಗೆ ನೀಡುತ್ತಿದ್ದೇನೆ. ಇದನ್ನು ಇಲ್ಲಿ ಮತ್ತೆ ಒತ್ತಿ ಹೇಳಬೇಕಾಗಿದೆ. ಏಕೆಂದರೆ ಇಲ್ಲಿ ಅನೇಕ ಜನ ಇದನ್ನು ಅಳಿಸಿ ಹಾಕಿದ್ದಾರೆ. ಈ 9 ವರ್ಷಗಳಲ್ಲಿ ಮೂರು ಕೋಟಿ ಬಡ ಕುಟುಂಬಗಳಿಗೆ ಪಕ್ಕಾ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಮೂರು ಕೊಟಿ ದೊಡ್ಡ ಸಂಖ್ಯೆಯಾಗಿದ್ದು, ಹಲವು ದೇಶಗಳಲ್ಲಿ ಇಷ್ಟೊಂದು ಜನ ಸಂಖ್ಯೆ ಇಲ್ಲ ಎಂಬುದು ವಿಶೇಷ. 

ಸ್ನೇಹಿತರೇ,

1984 ರಲ್ಲಿ ಮೊದಲ ಬಾರಿಗೆ ಕೊಲ್ಕತ್ತಾದಲ್ಲಿ ಮೆಟ್ರೋ ರೈಲು ಆರಂಭವಾಯಿತು. ನಮ್ಮಲ್ಲಿ ತಂತ್ರಜ್ಞಾನ ಮತ್ತು ಪರಿಣಿತಿ ಇತ್ತು, ನಂತರದ ವರ್ಷಗಳಲ್ಲಿ ಏನಾಯಿತು. ಬಹುತೇಕ ನಗರಗಳು ಮೆಟ್ರೋ ಸೇವೆಯಿಂದ ವಂಚಿತವಾಗಿದ್ದವು. 2014 ರಲ್ಲಿ ನಮಗೆ ದೇಶ ಸೇವೆ ಸಲ್ಲಿಸಲು ಅವಕಾಶ ದೊರೆತಾಗ ಪ್ರತಿ ತಿಂಗಳು ಅರ್ದ ಕಿಲೋ ಮೀಟರ್ ಮೆಟ್ರೋ ರೈಲು ಮಾರ್ಗಗಳನ್ನು ನಿರ್ಮಿಸಲಾಗುತ್ತಿತ್ತು. 2014 ರಿಂದ ಈ ವರೆಗೆ ಪ್ರತಿ ತಿಂಗಳು ಸುಮಾರು ಆರು ಕಿಲೋಮೀಟರ್ ಗೆ ಈ ಪ್ರಮಾಣವನ್ನು ಏರಿಕೆ ಮಾಡಲಾಗಿದೆ. ಮೆಟ್ರೋ ರೈಲು ಮಾರ್ಗದ ಉದ್ದದಲ್ಲಿ ಭಾರತ ಜಗತ್ತಿನಲ್ಲಿ ಐದನೇ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಮುಂದಿನ ಕೆಲವು ತಿಂಗಳುಗಳಲ್ಲಿ ನಾವು ಮೂರನೇ ಸ್ಥಾನಕ್ಕೆ ಏರಲಿದ್ದೇವೆ.   

ಸ್ನೇಹಿತರೇ,

ಇಂದು ಪಿಎಂ ಗತಿಶಕ್ತಿ ರಾಷ್ಟ್ರೀಯ ಮೇರು ಯೋಜನೆಯಿಂದ ಮೂಲ ಸೌಕರ್ಯ ವೇಗ ಪಡೆದುಕೊಂಡಿದೆ ಮತ್ತು ವಿನೀತ್ ಜೀ ಹೇಳಿರುವಂತೆ ನಾವು ವೇಗ ಮತ್ತು ಶಕ್ತಿ ಎರಡನ್ನೂ ಸಂಯೋಜಿಸಿದ್ದೇವೆ. ಈ ಒಟ್ಟಾರೆ ಪರಿಕಲ್ಪನೆ ವೇಗವರ್ಧನೆಯಾಗಿದೆ ಮತ್ತು ನೀವು ಫಲಿತಾಂಶವನ್ನು ನೋಡಿದ್ದೀರಿ. ಇದು ಕೇವಲ ರೈಲ್ವೆ ಮತ್ತು ರಸ್ತೆಗಳನ್ನಷ್ಟೇ ನಿರ್ಮಿಸುತ್ತಿಲ್ಲ. ನಾವು ಆಲೋಚಿಸಬೇಕು ‘ಗತಿ’[ವೇಗ] ಮತ್ತು ‘ಶಕ್ತಿ’[ಶಕ್ತಿ] ಇದು ಪ್ರದೇಶದ ಅಭಿವೃದ್ಧಿ ಮತ್ತು ಅಲ್ಲಿನ ಜನರ ಅಭಿವೃದ್ಧಿಯ ಪರಿಕಲ್ಪನೆಯನ್ನು ಸಹ ಹೊಂದಿದೆ. ಗತಿ ಶಕ್ತಿ ವೇದಿಕೆಯಲ್ಲಿ ಲಭ್ಯವಿರುವ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿರುವವರಿಗೆ ಈ ಮಾಹಿತಿ ತುಂಬಾ ಆಸಕ್ತಿದಾಯಕವಾಗಿದೆ. ಇಂದು ನಮ್ಮ ಗತಿ ಶಕ್ತಿ ವೇದಿಕೆಯಲ್ಲಿ ಮೂಲ ಸೌಕರ್ಯ ಮಾರ್ಗ ರೂಪಿಸುವ ನಿಟ್ಟಿನಲ್ಲಿ 1600 ಕ್ಕೂ ಅಧಿಕ ದತ್ತಾಂಶ ಎಳೆಗಳ ವ್ಯವಸ್ಥೆಯನ್ನು ಹೊಂದಿದ್ದೇವೆ. ಯಾವುದೇ ಪ್ರಸ್ತಾಪದ ನಿರ್ಧಾರ ಕೃತಕ ಬುದ್ದಿಮತ್ತೆಯ 1600 ದತ್ತಾಂಶದ ಪರದೆಯ ನೆರವಿನಿಂದ ಸಾಗುತ್ತದೆ. ಆದರೆ ಇಂದು ನಮ್ಮ ಎಕ್ಸ್ ಪ್ರೆಸ್ ಹೆದ್ದಾರಿ ಅಥವಾ ಇತರೆ ಮೂಲ ಸೌಕರ್ಯ ವ್ಯವಸ್ಥೆಯ ಸಂಪರ್ಕದ ಮೂಲಕ ಅತ್ಯಂತ ಕಡಿಮೆ ಮತ್ತು ಹೆಚ್ಚು ಸಮರ್ಥ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಪ್ರಧಾನಮಂತ್ರಿ ಗತಿ ಶಕ್ತಿಯಿಂದ ಒಂದು ಪ್ರದೇಶ ಮತ್ತು ಜನರ ಅಭಿವೃದ್ಧಿ ಹೇಗೆ ನಡೆಯುತ್ತದೆ ಎಂಬುದಕ್ಕೆ ನಾನು ನಿಮಗೆ ಉದಾಹರಣೆ ನೀಡುತ್ತೇನೆ.  1600 ನಿಯತಾಂಕಗಳ ಮೂಲಕ ನಾವು ಜನಸಂಖ್ಯೆಯ ಸಾಂದ್ರತೆ ಮತ್ತು ಯಾವುದೇ ಪ್ರದೇಶದ ಶಾಲೆಗಳ ಲಭ್ಯತೆಗಳನ್ನು ನಕ್ಷೆ ಮಾಡಬಹುದಾಗಿದೆ. ಕೇವಲ ರಾಜಕೀಯ ಪರಿಗಣನೆಯ ಆಧಾರದ ಮೇಲೆ ಶಾಲೆಗಳನ್ನು ಮಂಜೂರು ಮಾಡುವುದಕ್ಕಿಂತ ನಾವು ಅಗತ್ಯವಿರುವಲ್ಲಿ ಶಾಲೆಗಳನ್ನು ನಿರ್ಮಿಸಬಹುದಾಗಿದೆ. ಮೊಬೈಲ್ ಟವರ್ ಗಳು ಎಲ್ಲಿ ಉಪಯುಕ್ತ ಎಂಬುದನ್ನು ಗತಿಶಕ್ತಿ ವೇದಿಕೆ ನಿರ್ಧರಿಸುತ್ತದೆ. ಇದು ನಾವು ಅಭಿವೃದ‍್ಧಿಪಡಿಸಿದ ವಿಶಿಷ್ಟ ವ್ಯವಸ್ಥೆಯಾಗಿದೆ.   

ಸ್ನೇಹಿತರೇ, 

ವಿಮಾನಯಾನ ವಲಯದಲ್ಲಿ ಮೂಲ ಸೌಕರ್ಯವನ್ನು ಹೇಗೆ ಮರು ಕಲ್ಪನೆ ಮಾಡಬಹುದು ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಇಲ್ಲಿರುವ ಕೆಲವೇ ಜನರು ಹಲವಾರು ವರ್ಷಗಳಿಂದ ಬೃಹತ್ ವಾಯು ಪ್ರದೇಶವನ್ನು ರಕ್ಷಣಾ ವಲಯದ ಕಾರಣದಿಂದ ನಿರ್ಬಂಧಿಸಲಾಗಿತ್ತು. ಪರಿಣಾಮವಾಗಿ ವಿಮಾನಗಳು ಭಾರತದ ಯಾವುದೇ ಸ್ಥಾನವನ್ನು ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದವು, ರಕ್ಷಣಾ ಇಲಾಖೆಯ ಉದ್ದೇಶಕ್ಕಾಗಿ ನಿರ್ಬಂಧಿಸಿದರೆ ವಾಯು ಪ್ರದೇಶದಲ್ಲಿ ಹಾರಲು ಸಾಧ್ಯವಿಲ್ಲ. ಆದ್ದರಿಂದ ವಿಮಾನಗಳು ದೀರ್ಘ ಮಾರ್ಗಗಳನ್ನು ತೆಗೆದುಕೊಳ್ಳಬೇಕಾಯಿತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಶಸ್ತ್ರಪಡೆಗಳೊಂದಿಗೆ ಸಮಸ್ಯೆ ಕುರಿತು ಚರ್ಚಿಸಿದ್ದೇವೆ. ಇಂದು ಇಂತಹ 128 ವಿಮಾನ ಮಾರ್ಗಗಳನ್ನು ನಾಗರಿಕ ಸಂಚಾರಕ್ಕಾಗಿ ತೆರೆಯಲಾಗಿದೆ. ಪರಿಣಾಮವಾಗಿ ವಿಮಾನದ ಮಾರ್ಗದ ಅವಧಿ ಕಡಿಮೆಯಾಗಿವೆ ಮತ್ತು ಇದು ಸಮಯ ಹಾಗೂ ಇಂಧನ ಉಳಿಸುತ್ತದೆ. ನಿಮ್ಮ ಜೊತೆ ನಾನು ಮತ್ತೊಂದು ಅಂಕಿ ಅಂಶವನ್ನು ಹಂಚಿಕೊಳ್ಳುತ್ತೇನೆ. ಒಂದು ತೀರ್ಮಾನದಿಂದ ಸುಮಾರು ಒಂದು ಲಕ್ಷ ಟನ್ ಸಿಒ2 ಹೊರ ಸೂಸುವುದನ್ನು ತಗ್ಗಿಸಲು ನೆರವಾಗಿದೆ. ಇದು ಮರು ಕಲ್ಪನೆಯ ಶಕ್ತಿಯಾಗಿದೆ. 

ಸ್ನೇಹಿತರೇ,

ಭಾರತ ಇಂದು ಜಗತ್ತಿನ ಮುಂದೆ ಭೌತಿಕ ಮತ್ತು ಸಾಮಾಜಿಕ ಮೂಲ ಸೌಕರ್ಯಗಳ ಅಭಿವೃದ‍್ದಿಯ ಹೊಸ ಮಾದರಿಯನ್ನು ಇರಿಸಿದೆ. ಇದರ ಸಂಯೋಜಿತ ಉದಾಹರಣೆ ಎಂದರೆ ನಮ್ಮ ಡಿಜಿಟಲ್ ಮೂಲ ಸೌಕರ್ಯ. ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ನಾವು ಆರು ಲಕ್ಷ ಕಿಲೋ ಮೀಟರ್ ಆಪ್ಟಿಕಲ್ ಫೈಬರ್ ಅಳವಡಿಸಿದ್ದೇವೆ. ಹಿಂದಿನ 9 ವರ್ಷಗಳಲ್ಲಿ ಹಲವು ಪಟ್ಟು ಮೊಬೈಲ್ ಉತ್ಪಾದನಾ ಘಟಕಗಳನ್ನು ಹೆಚ್ಚಿಸಿದ್ದೇವೆ. ಇದೇ ಅವಧಿಯಲ್ಲಿ ದೇಶದಲ್ಲಿ ಅಂತರ್ಜಾಲ ಡೇಟಾ 25 ಪಟ್ಟು ಹೆಚ್ಚಳವಾಗಿದೆ. ಇದು ವಿಶ್ವದಲ್ಲಿ ಅತ್ಯಂತ ಅಗ್ಗವಾಗಿದೆ ಮತ್ತು ಇದರ ಫಲತಾಂಶವೇನು? ಎಂಬುದನ್ನು ನೋಡುವುದಾದರೆ, ನಾನು ನನ್ನ ಸರ್ಕಾರ ರಚಿಸುವ ಮೊದಲು ಮೊಬೈಲ್ ಡೇಟಾ ಟ್ರಾಫಿಕ್ ನಲ್ಲಿ ಭಾರತದ ಕೊಡುಗೆ ಕೇವಲ ಶೇ 2 ರಷ್ಟಿತ್ತು. ಆದರೆ ಪಾಶ್ಚಿಮಾತ್ಯ ದೇಶಗಳ ಕೊಡುಗೆ ಆಗ ಶೇ 75 ರಷ್ಟಿತ್ತು. 2022 ರಲ್ಲಿ  ಭಾರತ ಮೊಬೈಲ್ ಡೇಟಾ ಟ್ರಾಫಿಕ್ ನಲ್ಲಿ ಶೇ 21 ರಷ್ಟು ಪಾಲು ಹೊಂದಿತ್ತು. ಆದರೆ ಉತ್ತರ ಅಮೆರಿಕಾ ಮತ್ತು ಐರೋಪ್ಯ ರಾಷ್ಟ್ರಗಳು ಜಾಗತಿಕ ಟ್ರಾಫಿಕ್ ನಲ್ಲಿ ಕೇವಲ ನಾಲ್ಕರಷ್ಟು ಪಾಲು ಹೊಂದಿವೆ.  ಇವತ್ತು ಜಗತ್ತಿನ ಒಟ್ಟು ಸಕಾಲದ ಡಿಜಿಟಲ್ ಪಾವತಿಯಲ್ಲಿ ಶೇ 40 ರಷ್ಟು ಪಾಲು ಭಾರತದ್ದಾಗಿದೆ. ಡಿಜಿಟಲ್ ಪಾವತಿ ಮಾಡುವಲ್ಲಿ ಭಾರತ ಜನರ ಸಾಮರ್ಥ್ಯವನ್ನು ಪ್ರಶ್ನಿಸುತ್ತಿದ್ದ ಆ ದೇಶಗಳ ಜನರಿಗೆ ಇದು ಉತ್ತರದಾಯಕವಾಗಿವೆ.  ಇತ್ತೀಚೆಗೆ ಒಬ್ಬ ವ್ಯಕ್ತಿ ಮದುವೆ ಸಮಾರಂಭದಲ್ಲಿ “ಧೋಲ್” ಆಡುತ್ತಿರುವ ವಿಡಿಯೋವನ್ನು ಯಾರೋ ತಮ್ಮೊಂದಿಗೆ ಹಂಚಿಕೊಂಡಿದ್ದರು. ಅದರ ಮೇಲೆ ಕ್ಯೂಆರ್ ಕೋಡ್ ಅನ್ನು ಮುದ್ರಿಸಲಾಗಿತ್ತು ಮತ್ತು ಅವರು ತಮ್ಮ ಮೊಬೈಲ್ ಫೋನ್ ಅನ್ನು ವರನ ತಲೆಯ ಮೇಲೆ ತಿರುಗಿಸುವ ಮೂಲಕ ಕ್ಯೂಆರ್ ಕೋಡ್ ಸಹಾಯದಿಂದ ಹಣ ನೀಡುತ್ತಿದ್ದರು. ಮರು ಕಲ್ಪನೆಯ ಈ ಯುಗದಲ್ಲಿ ಇಂತಹವರ ಚಿಂತನೆಯನ್ನು ಭಾರತದ ಜನ ತಿರಸ್ಕರಿಸಿದ್ದಾರೆ. ಸಂಸತ್ತಿನಲ್ಲಿ ಭಾಷಣ ಮಾಡುತ್ತಿದ್ದಾಗ ಬಡವರು ಡಿಜಿಟಲ್ ಪಾವತಿ ಮಾಡುವುದು ಹೇಗೆ ಎಂದು ಕೆಲವರು ಹೇಳುತ್ತಿದ್ದರು.  ನಮ್ಮ ದೇಶದ ಬಡವರ ಶಕ್ತಿಯ ಬಗ್ಗೆ ಅವರಿಗೆ ಎಂದಿಗೂ ಆಲೋಚನೆಯಿರಲಿಲ್ಲ, ಆದರೆ ತಮಗಿತ್ತು.  

ಸ್ನೇಹಿತರೇ,

ನಮ್ಮ ದೇಶದಲ್ಲಿ ಹೆಚ್ಚು ಕಾಲ ಆಡಳಿತ ನಡೆಸಿದವರು “ಮಾಯಿ – ಬಾಪ್ “ ಸಂಸ್ಕೃತಿಗೆ ಹೆಚ್ಚು ಆದ್ಯತೆ ನೀಡಿದರು. ಆದ್ಯತೆಯ ಚಿಕಿತ್ಸೆ ಮತ್ತು ಸ್ವಜನ ಪಕ್ಷಪಾತದೊಂದಿಗೆ ಇದನ್ನು ಗೊಂದಲಗೊಳಿಸಬೇಡಿ. ಇದು ಸಂಪೂರ್ಣ ಭಿನ್ನವಾದ ಸಂಸ್ಕೃತಿಯಾಗಿತ್ತು.  ತಮ್ಮ ದೇಶದ ನಾಗರಿಕರೊಂದಿಗೆ ಸರ್ಕಾರ ಮೇರು ವ್ಯಕ್ತಿತ್ವದೊಂದಿಗೆ ವರ್ತಿಸಿತು. ದೇಶದ ಪ್ರಜೆಗಳು ಏನೇ ಸಾಧನೆ ಮಾಡಿದರೂ ಅಂದಿನ ಸರ್ಕಾರ ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.  ಮತ್ತು ನಾಗರಿಕರು ಏನನ್ನೇ ಮಾಡಬೇಕಾದರೂ ಸರ್ಕಾರದ ಅನುಮತಿ ಪಡೆಯಬೇಕಾಗಿತ್ತು. ಇದರ ಫಲವಾಗಿ ಆಗಿನ ಕಾಲದಲ್ಲಿ ಸರ್ಕಾರ ಮತ್ತು ನಾಗರಿಕರ ನಡುವೆ ಪರಸ್ಪರ ಅಪನಂಬಿಕೆ ಮತ್ತು ಅನುಮಾನದ ವಾತಾವರಣವಿತ್ತು. ಹಿರಿಯ ಪತ್ರಕರ್ತರು ಇಲ್ಲಿದ್ದು, ಒಂದು ವಿಷಯವನ್ನು ಜ್ಞಾಪಿಸಲು ಬಯಸುತ್ತೇನೆ. ನಿಮಗೆ ನೆನಪಿರಬಹುದು ಒಂದು ಕಾಲದಲ್ಲಿ ಟಿವಿ ಮತ್ತು ರೆಡಿಯೋಗಾಗಿ ಪರವಾನಗಿ ಪಡೆಯುವ ಪರಿಸ್ಥಿತಿ ಇತ್ತು. ಇದೊಂದೇ ಅಲ್ಲ, ಪದೇ ಪದೇ ಚಾಲನಾ ಪರವಾನಿಗೆಯಂತೆ ನವೀಕರಣ ಮಾಡಬೇಕಾಗಿತ್ತು. ಇದು ಕೇಲವ ಒಂದು ವಲಯದಲ್ಲಿ ಮಾತ್ರ ಇರಲಿಲ್ಲ, ಬಹುತೇಕ ಎಲ್ಲಾ ವಲಯಗಳಲ್ಲೂ ಇತ್ತು. ನಿಮಗೆಲ್ಲಾ ಗೊತ್ತು, ಆಗ ವ್ಯಾಪಾರ ಮಾಡುವುದು ಎಷ್ಟು ಕಷ್ಟ ಇತ್ತು ಎಂದು ಮತ್ತು ಆಗ ಗುತ್ತಿಗೆಯನ್ನು ಜನ ಹೇಗೆ ಪಡೆಯುತ್ತಿದ್ದರು ಎಂಬುದು ಸಹ ಗೊತ್ತಿದೆ.  90 ರ ದಶಕದಲ್ಲಿ ಬಲವಂತದ ಕಾರಣದಿಂದ ಕೆಲವು ಹಳೆಯ ತಪ್ಪುಗಳನ್ನು ಸರಿಪಡಿಸಲಾಯಿತು ಮತ್ತು ಅದಕ್ಕೆ ಸುಧಾರಣೆಯ ಹೆಸರು ನೀಡಲಾಯಿತು. ಆದರೆ ‘ಮಾಯಿ-ಬಾಪ್’ ಸಂಸ್ಕೃತಿಯ ಹಳೆಯ ಸಂಸ್ಕೃತಿ ಸಂಪೂರ್ಣವಾಗಿ ಕೊನೆಗೊಂಡಿರಲಿಲ್ಲ. 2014 ರ ನಂತರ ಮರು ಕಲ್ಪನೆಯೊಂದಿಗೆ ಸರ್ಕಾರ ಮೊದಲು ಎನ್ನುವ ಮನಸ್ಥಿತಿಯನ್ನು ಅಳವಡಿಸಿಕೊಂಡಿತು. ನಾವು ನಾಗರಿಕರನ್ನು ನಂಬುವ ಸಿದ್ಧಾಂತದೊಂದಿಗೆ ಕೆಲಸ ಆರಂಭಿಸಿದೆವು. ಕಡಿಮೆ ಶ್ರೇಣಿಯ ಉದ್ಯೋಗಿಗಳಿಗಾಗಿ ಸಂದರ್ಶನದ ಸುತ್ತು ತೆಗೆದುಹಾಕುವುದು, ಸ್ವಯಂ ದೃಢೀಕರಕ್ಕೆ ಆದ್ಯತೆ, ಇದು ಅರ್ಹತೆಯ ಆಧಾರದ ಮೇಲೆ ಕೆಲಸವನ್ನು ನಿರ್ಧರಿಸುವ ಗಣಕಯಂತ್ರವಾಗಿದೆ. ಸಣ್ಣ ಆರ್ಥಿಕ ಅಪರಾಧಗಳು ಅಥವಾ ಜನ್ ವಿಶ್ವಾಸ್ ಮಸೂದೆ, ಆಧಾರವಿಲ್ಲದೇ ಮುಕ್ತ ಮುದ್ರಾ ಸಾಲ ಅಥವಾ ಸರ್ಕಾರವೇ ಎಂಎಸ್ಎಂಇಗಳಿಗೆ ಖಾತರಿ ನೀಡುವ, ಅಂತಹ ಪ್ರತಿಯೊಂದು ಕಾರ್ಯಕ್ರಮ ಮತ್ತು ನೀತಿಯಲ್ಲಿ ಜನರನ್ನು ನಂಬುವುದು ನಮ್ಮ ಮಂತ್ರವಾಗಿದೆ. ತೆರಿಗೆ ಸಂಗ್ರಹ ವ್ಯವಸ್ಥೆಯೂ ಕೂಡ ನಮ್ಮ ಮುಂದಿರುವ ಉದಾಹರಣೆಯಾಗಿದೆ. 

2013-14 ರಲ್ಲಿ ದೇಶದ ಒಟ್ಟು ತೆರಿಗೆ ಸಂಗ್ರಹ ಸುಮಾರು 11 ಲಕ್ಷ ಕೋಟಿ ರೂಪಾಯಿ, 2023-24 ನೇ ಸಾಲಿನಲ್ಲಿ 33 ಲಕ್ಷ ಕೋಟಿ ರೂಪಾಯಿ ಆದಾಯ ಸಂಗ್ರಹಣೆಯ ಅಂದಾಜು ಮಾಡಲಾಗಿದೆ. 9 ವರ್ಷಗಳಲ್ಲಿ ಆದಾಯ ಸಂಗ್ರಹದಲ್ಲಿ ಮೂರು ಪಟ್ಟು ಏರಿಕೆಯಾಗಿದೆ.  ಇದು ಸಾಧ್ಯವಾಗಿದ್ದು, ನಾವು ತೆರಿಗೆ ದರವನ್ನು ಕಡಿತಗೊಳಿಸಿದ್ದರಿಂದ. ನಾವು ಸಮೀರ್ ಜೀ ಅವರ ಸಲಹೆಯನ್ನು ಪರಿಗಣಿಸಲು ಇನ್ನೂ ಮನಸ್ಸು ಮಾಡಿಲ್ಲ. ಮತ್ತೊಂದೆಡೆ ನಾವು ತೆರಿಗೆ ದರಗಳನ್ನು ತಗ್ಗಿಸಿದ್ದೇವೆ. ನಾವು ಮೂರು ವಿಷಯಗಳತ್ತ ಕೇಂದ್ರೀಕರಿಸಿಕೊಂಡಿದ್ದೇವೆ. ಮೊದಲಿಗೆ ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಈಗ ಹೇಳಿ ತೆರಿಗೆದಾರರ ಸಂಖ್ಯೆ ಹೆಚ್ಚಾದರೆ ತೆರಿಗೆ ಮೊತ್ತವನ್ನು ಯಾರಿಗೆ ಜಮಾ ಮಾಡುತ್ತೀರಿ. ಸಹಜವಾಗಿಯೇ ತೆರಿಗೆ ಹಣ ಸರ್ಕಾರಕ್ಕೆ ಜಮೆಯಾಗಲಿದೆ. ಮತ್ತೊಂದೆಡೆ ಜನತೆ ತೆರಿಗೆಯನ್ನು ಹೆಚ್ಚು ಪ್ರಾಮಾಣಿಕತೆಯಿಂದ ಪಾವತಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇದರ ಶ್ರೇಯಸ್ಸು ಸರ್ಕಾರಕ್ಕೆ ಸಲ್ಲಬೇಕು.  ಹಾಗಾಗಿ ತೆರಿಗೆದಾರ ತಾನು ಪಾವತಿಸಿದ ತೆರಿಗೆ ಸಾರ್ವಜನಿಕ ಹಿತಾಸಕ್ತಿ, ಸಾರ್ವಜನಿಕ ಕಲ್ಯಾಣ, ದೇಶದ ಹಿತಕ್ಕೆ ಬಳಕೆ ಮಾಡಲಾಗುವುದು ಎಂದು ಭಾವಿಸಿದಾಗ ಆತ ಪ್ರಾಮಾಣಿಕವಾಗಿ ತೆರಿಗೆ ಪಾವತಿಸಲು ಮುಂದಾಗುತ್ತಾನೆ.  ತೆರಿಗೆ ಪಾವತಿಸುವಂತೆ ಆತನಿಗೆ ಪ್ರೇರೇಪಣೆ ನೀಡಿದಂತಾಗುತ್ತದೆ. ಈ ಬೆಳವಣಿಗೆಯನ್ನು ದೇಶ ಇಂದು ನೋಡುತ್ತಿದೆ. ಆದ್ದರಿಂದ ತೆರಿಗೆ ಪಾವತಿದಾರರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಮತ್ತು ತೆರಿಗೆದಾರರು ಸರ್ಕಾರಕ್ಕೆ ತೆರಿಗೆ ಪಾವತಿಸಲು ಮುಂದಾಗುತ್ತಾರೆ. ಇದು ಸರಳ, ಜನ ನಿಮ್ಮನ್ನು ನಂಬುತ್ತಾರೆ, ಸರ್ಕಾರ ಜನರನ್ನು ನಂಬುತ್ತದೆ. ಇದೇ ಕಾರಣದಿಂದ ದೇಶದ ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆಯಾಗಿದೆ. ಈ ನಂಬಿಕೆಯ ಕಾರಣದಿಂದಲೇ ತೆರಿಗೆ ಪಾವತಿಯನ್ನು ಸರಳೀಕರಣಗೊಳಿಸಲಾಗಿದೆ. ನಾವು ಮುಖರಹಿತ ಮೌಲ್ಯ ನಿಗದಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇವೆ. ಮತ್ತೊಂದು ಅಂಕಿ ಅಂಶ ನೀಡುತ್ತೇನೆ. ಈ ವರ್ಷ ಆದಾಯ ತೆರಿಗೆ ಇಲಾಖೆ 6.5 ಕೋಟಿ ರಿಟರ್ನ್ಸ್ ಗಳನ್ನು ಮಾಡಿದೆ. ಈ ಪೈಕಿ ಮೂರು ಕೋಟಿ ರಿಟರ್ನ್ಸ್ ಕೇವಲ 24 ಗಂಟೆಗಳಲ್ಲಿ ಆಗಿದೆ. ಉಳಿದ ರಿಟರ್ನ್ಸ್ ಕೆಲವೇ ದಿನಗಳಲ್ಲಿ ಆಗಿದೆ ಮತ್ತು ತೆರಿಗೆ ಪಾವತಿದಾರರಿಗೆ ರೀಫಂಡ್ ಕೂಡ ಮಾಡಲಾಗಿದೆ. ಇದಕ್ಕೂ ಮುನ್ನ ರೀಫಂಡ್ ಪ್ರಕ್ರಿಯೆ ಪೂರ್ಣಗೊಳಿಸಲು 90 ದಿನಗಳ ಸಮಯ ಹಿಡಿಯುತ್ತಿತ್ತು. ಜನರ ಹಣ ಸರ್ಕಾರದ ಬಳಿ 90 ದಿನಗಳ ವರೆಗೆ ಉಳಿಯುತ್ತಿತ್ತು. ಇಂದು ಕೇವಲ ಗಂಟೆಗಳಲ್ಲಿ ಇದು ಸಾಧ್ಯವಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಇದನ್ನು ಊಹೆ ಮಾಡಿಕೊಳ್ಳಲು ಕೂಡ ಆಗುತ್ತಿರಲಿಲ್ಲ. ಆದರೆ ಮರು ಕಲ್ಪನೆಯ ಕಾರಣದಿಂದ ಇಂದು ಇವೆಲ್ಲ ಸಾಧ್ಯವಾಗುತ್ತಿದೆ.  

ಸ್ನೇಹಿತರೇ,

ಇಂದು ಜಗತ್ತಿನ ಸಮೃದ್ಧತೆ, ಭಾರತದ ಸಮೃದ್ಧತೆಯಾಗಿದ್ದು, ಜಗತ್ತಿನ ಬೆಳವಣಿಗೆ ಭಾರತದ ಬೆಳವಣಿಗೆಯಾಗಿದೆ. ಭಾರತದ ಜಿ20 ವಿಷಯ ‘ಒಂದು ಜಗತ್ತು ಒಂದು ಕುಟುಂಬ ಒಂದು ಭವಿಷ್ಯ’ ಎಂಬುದಾಗಿದ್ದು, ಇದು ಜಗತ್ತಿನ ಹಲವು ಸಮಸ್ಯೆಗಳಿಗೆ ಪರಿಹಾರವಾಗಿದೆ. ಸಾಮಾನ್ಯ ಪರಿಹಾರಗಳು ಮತ್ತು ಪ್ರತಿಯೊಬ್ಬರ ಹಿತಾಸಕ್ತಿಯ ರಕ್ಷಣೆಗಾಗಿ ದ್ಯೇಯ ಹೊಂದಿದ್ದು, ಇದು ಜಗತ್ತನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯಲಿದೆ.  ಈ ದಶಕದಲ್ಲಿ ಮತ್ತು ಮುಂದಿನ 25 ವರ್ಷಗಳ ಭಾರತದ ಬಗ್ಗೆ ಹಿಂದೆಂದೂ ಇಲ್ಲದ ನಂಬಿಕೆ ಮೂಡಿದೆ. ಪ್ರತಿಯೊಬ್ಬರ ಪ್ರಯತ್ನದಿಂದ ಭಾರತ ತನ್ನ ಗುರಿಯನ್ನು ತ್ವರಿತವಾಗಿ ತಲುಪಲಿದೆ. ಹೀಗಾಗಿ ಸಾಧ್ಯವಾದಷ್ಟು ಭಾರತದ ಪಯಣದಲ್ಲಿ ಭಾಗಿಯಾಗುವಂತೆ ನಾನು ನಿಮಗೆಲ್ಲರಿಗೂ ಕರೆ ನೀಡುತ್ತೇನೆ. ನೀವು ಭಾರತದ ಅಭಿವೃದ್ಧಿಯ ಪಯಣದಲ್ಲಿ ಕೈ ಜೋಡಿಸಿದರೆ ಭಾರತ ನಿಮ್ಮ ಅಭಿವೃದ‍್ದಿಗೆ ಖಾತರಿ ಕೊಡುತ್ತದೆ. ಇದು ಇಂದಿನ ಭಾರತದ ಶಕ್ತಿಯಾಗಿದೆ. ಇಟಿ ನನ್ನನ್ನು ಈ ಸಮಾರಂಭಕ್ಕೆ ಆಹ್ವಾನಿಸಿದ ಕಾರಣಕ್ಕಾಗಿ ಧನ್ಯವಾದಗಳು. ನನಗೆ ಪತ್ರಿಕೆಯಲ್ಲಿ ಸ್ಥಾನ ಸಿಗದೇ ಇರಬಹುದು, ಆದರೆ ಈ ಜಾಗವನ್ನು ನಾನು ಇಲ್ಲಿ ಕೆಲವೊಮ್ಮೆ ಕಾಣುತ್ತೇನೆ.  ಮರು ಕಲ್ಪನೆ ಕುರಿತು ವಿನೀತ್ ಜೀ ಮತ್ತು ಸಮೀರ್ ಜೀ ಅವರು ಮಾತನಾಡಿರುವುದು ತಮಗೆ ಅಚ್ಚರಿ ತಂದಿದೆ. ಆದರೆ ಅವರು ಎಲ್ಲಾ ವಿಷಯಗಳನ್ನು ಪ್ರಸ್ತಾಪಿಸಿಲ್ಲ. ಬಹುಶಃ ಅವರ ಸಂಪಾದಕೀಯ ಮಂಡಳಿ ಇದನ್ನು ನಿರ್ಧರಿಸಬಹುದು ಮತ್ತು ಮಾಲೀಕರಿಗೆ ಇದನ್ನು ಹೇಳದೇಯೇ ಇರಬಹುದು. ಏಕೆಂದರೆ ಯಾವುದನ್ನು ಮುದ್ರಿಸಬೇಕು ಎಂಬುದನ್ನು ಮಾಲೀಕರು ನಿರ್ಧರಿಸುತ್ತಾರೆ. ಬಹುಶಃ ಈ ರೀತಿ ನಡೆಯಬಹುದು. ಈ ಮಿಶ್ರ ಭಾವನೆಗಳೊಂದಿಗೆ ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು.  

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s Biz Activity Surges To 3-month High In Nov: Report

Media Coverage

India’s Biz Activity Surges To 3-month High In Nov: Report
NM on the go

Nm on the go

Always be the first to hear from the PM. Get the App Now!
...
PM to participate in ‘Odisha Parba 2024’ on 24 November
November 24, 2024

Prime Minister Shri Narendra Modi will participate in the ‘Odisha Parba 2024’ programme on 24 November at around 5:30 PM at Jawaharlal Nehru Stadium, New Delhi. He will also address the gathering on the occasion.

Odisha Parba is a flagship event conducted by Odia Samaj, a trust in New Delhi. Through it, they have been engaged in providing valuable support towards preservation and promotion of Odia heritage. Continuing with the tradition, this year Odisha Parba is being organised from 22nd to 24th November. It will showcase the rich heritage of Odisha displaying colourful cultural forms and will exhibit the vibrant social, cultural and political ethos of the State. A National Seminar or Conclave led by prominent experts and distinguished professionals across various domains will also be conducted.