ಕೋವಿನ್ ವೇದಿಕೆಯನ್ನು ಓಪನ್ ಸೋರ್ಸ್ ಮಾಡಲಾಗಿದೆ, ಇದು ಯಾವುದೇ ಅಥವಾ ಎಲ್ಲ ರಾಷ್ಟ್ರಗಳಿಗೆ ಲಭ್ಯ: ಪ್ರಧಾನಮಂತ್ರಿ
ಸುಮಾರು 200 ದಶಲಕ್ಷ ಬಳಕೆದಾರರೊಂದಿಗೆ 'ಆರೋಗ್ಯ ಸೇತು' ಆಪ್ ಅಭಿವೃದ್ಧಿಪಡಿಸುವವರಿಗೆ ಸಿದ್ಧ ಲಭ್ಯ ಪ್ಯಾಕೇಜ್ ಆಗಿದೆ : ಪ್ರಧಾನಮಂತ್ರಿ
ನೂರು ವರ್ಷದಲ್ಲಿ ಈ ಸಾಂಕ್ರಾಮಿಕಕ್ಕೆ ಸಮನಾದ್ದು ಮತ್ತೊಂದಿಲ್ಲ ಮತ್ತು ಯಾವುದೇ ರಾಷ್ಟ್ರ, ಅದು ಶಕ್ತಿಶಾಲಿಯಾಗಿದ್ದರೂ ಅದು ಪ್ರತ್ಯೇಕವಾಗಿ ಈ ಸವಾಲನ್ನು ಪರಿಹರಿಸಲು ಸಾಧ್ಯವಿಲ್ಲ:ಪ್ರಧಾನಮಂತ್ರಿ
ನಾವೆಲ್ಲರೂ ಒಟ್ಟಾಗಿ ಶ್ರಮಿಸಿ, ಒಟ್ಟಾಗಿ ಮುಂದೆ ಸಾಗಬೇಕು: ಪ್ರಧಾನಮಂತ್ರಿ
ಭಾರತ ಲಸಿಕೆ ಕಾರ್ಯತಂತ್ರ ರೂಪಿಸುವಾಗ ಸಂಪೂರ್ಣ ಡಿಜಿಟಲ್ ದೃಷ್ಟಿಕೋನವನ್ನು ಅಳವಡಿಸಿಕೊಂಡಿದೆ: ಪ್ರಧಾನಮಂತ್ರಿ
ಸುರಕ್ಷಿತ ಮತ್ತು ವಿಶ್ವಾಸಾರ್ಹ ಪುರಾವೆ ಜನರಿಗೆ ಯಾವಾಗ, ಎಲ್ಲಿ ಮತ್ತು ಯಾರಿಂದ ಲಸಿಕೆ ಪಡೆಯಲಾಗಿದೆ ಎಂಬುದನ್ನು ಸಾಬೀತು ಮಾಡಲು ನೆರವಾಗುತ್ತದೆ: ಪ್ರಧಾನಮಂತ್ರಿ
ಡಿಜಿಟಲ್ ದೃಷ್ಟಿಕೋನ ಲಸಿಕೆಯ ಬಳಕೆ ಪತ್ತೆ ಮಾಡಿ, ವ್ಯರ್ಥವಾಗುವುದನ್ನು ತಗ್ಗಿಸುತ್ತದೆ: ಪ್ರಧಾನಮಂತ್ರಿ
'ಒಂದು ಭೂಮಿ, ಒಂದು ಆರೋಗ್ಯ' ಎಂಬ ನಿಲುವಿನಿಂದಾಗಿ ಮಾನವಕುಲ ಖಂಡಿತಾ ಈ ಸಾಂಕ್ರಾಮಿಕದಿಂದ ಹೊರಬರುತ್ತದೆ: ಪ್ರಧಾನಮಂತ್ರಿ

ಗಣ್ಯ ಸಚಿವರೇ, ಹಿರಿಯ ಅಧಿಕಾರಿಗಳೇ, ಆರೋಗ್ಯ ವೃತ್ತಿಪರರೇ ಮತ್ತು ಜಗತ್ತಿನಾದ್ಯಂತದ ಸ್ನೇಹಿತರೇ

ನಮಸ್ಕಾರ!

ಕೊವಿನ್ ಜಾಗತಿಕ ಸಮಾವೇಶದಲ್ಲಿ ವಿವಿಧ ರಾಷ್ಟ್ರಗಳ ತಜ್ಞರು ಬಹುಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ನನಗೆ ಸಂತೋಷ ತಂದಿದೆ. ಎಲ್ಲಕ್ಕಿಂತ ಮೊದಲು ನಾನು ಈ ಜಾಗತಿಕ ಸಾಂಕ್ರಾಮಿಕದಲ್ಲಿ ಎಲ್ಲಾ ದೇಶಗಳಲ್ಲಿ ಜೀವ ಕಳೆದುಕೊಂಡವರಿಗೆ ನನ್ನ ಸಂತಾಪಗಳನ್ನು ಸಲ್ಲಿಸುತ್ತೇನೆ. ಕಳೆದ ನೂರು ವರ್ಷಗಳಲ್ಲಿ ಈ ಜಾಗತಿಕ ಸಾಂಕ್ರಾಮಿಕದಂತಹ ಘಟನೆ ಸಂಭವಿಸಿರಲಿಲ್ಲ. ಇಂತಹ ಸವಾಲನ್ನು ಯಾವುದೇ ದೇಶವೂ ಏಕಾಂಗಿಯಾಗಿ ಪರಿಹರಿಸಲು, ನಿಭಾಯಿಸಲು ಅದು ಎಷ್ಟೇ ಶಕ್ತಿಶಾಲಿ ರಾಷ್ಟ್ರವಾದರೂ ಸಾಧ್ಯವಿಲ್ಲ  ಎಂಬುದನ್ನು ಅನುಭವ ನಮಗೆ ತೋರಿಸಿಕೊಟ್ಟಿದೆ. ಕೋವಿಡ್ -19 ರ ಅತ್ಯಂತ ದೊಡ್ಡ ಪಾಠವೆಂದರೆ ಮಾನವತೆ ಮತ್ತು ಮಾನವ ಕಾರಣಕ್ಕೆ ನಾವು ಒಗ್ಗೂಡಿ ಕೆಲಸ ಮಾಡಬೇಕು ಮತ್ತು ಒಗ್ಗೂಡಿ ಮುನ್ನಡೆಯಬೇಕು ಎಂಬುದು. ನಾವು ಪರಸ್ಪರರಿಂದ ಕಲಿಯಬೇಕು ಮತ್ತು ಉತ್ತಮ ಪದ್ಧತಿಗಳ ಬಗ್ಗೆ ಪರಸ್ಪರ ಮಾರ್ಗದರ್ಶನ ಮಾಡಬೇಕು. ಜಾಗತಿಕ ಸಾಂಕ್ರಾಮಿಕ ಆರಂಭವಾದಂದಿನಿಂದ ಭಾರತವು ತನ್ನ ಎಲ್ಲಾ ಅನುಭವ, ತಜ್ಞತೆ ಮತ್ತು ಸಂಪನ್ಮೂಲಗಳನ್ನು ಈ ಯುದ್ಧದಲ್ಲಿ ಜಾಗತಿಕ ಸಮುದಾಯದ ಜೊತೆ ಹಂಚಿಕೊಳ್ಳಲು ಬದ್ಧವಾಗಿದೆ. ನಮ್ಮೆಲ್ಲ ಮಿತಿಗಳ ನಡುವೆಯೂ ನಾವು ಜಗತ್ತಿಗೆ ಸಾಧ್ಯ ಇರುವ ಎಲ್ಲವನ್ನೂ ಹಂಚಿಕೊಳ್ಳಲು ಪ್ರಯತ್ನಿಸಿದ್ದೇವೆ. ಮತ್ತು ನಾವು ಜಾಗತಿಕ ಪದ್ಧತಿಗಳಿಂದ ಕಲಿಯಲು ಕಾತರದಿಂದಿದ್ದೇವೆ.

ಸ್ನೇಹಿತರೇ,

ಕೋವಿಡ್ -19 ವಿರುದ್ಧದ ನಮ್ಮ ಹೋರಾಟದಲ್ಲಿ ತಂತ್ರಜ್ಞಾನ ಸಮಗ್ರ ಭಾಗ. ಅದೃಷ್ಟವಶಾತ್, ಸಾಫ್ಟ್ ವೇರ್ ಕ್ಷೇತ್ರ ಸಂಪನ್ಮೂಲಗಳ ಕೊರತೆ ಇಲ್ಲದ ಕ್ಷೇತ್ರಗಳಲ್ಲೊಂದು. ಅದರಿಂದಾಗಿ ನಾವು ನಮ್ಮ ಕೋವಿಡ್ ಪತ್ತೆ ಮತ್ತು ನಿಗಾ ಆಪ್ ನ್ನು ಅದು ತಾಂತ್ರಿಕವಾಗಿ ಅನುಷ್ಠಾನ ಯೋಗ್ಯ ಎಂದಾದ ಕೂಡಲೇ ಮುಕ್ತ ಮೂಲವನ್ನಾಗಿ ಮಾಡಿದೆವು. ಸುಮಾರು 200 ಮಿಲಿಯನ್ ಬಳಕೆದಾರರೊಂದಿಗೆ ಈ “ಆರೋಗ್ಯ ಸೇತು” ಆಪ್ ಅಭಿವೃದ್ಧಿ ಮಾಡುವವರಿಗೆ ತಕ್ಷಣವೇ ಲಭ್ಯವಾಗುವ ಪ್ಯಾಕೇಜ್ ಆಗಿದೆ. ಭಾರತದಲ್ಲಿ ಬಳಕೆಯಾಗುತ್ತಿರುವುದರಿಂದ, ವೇಗ ಮತ್ತು ಪ್ರಮಾಣಕ್ಕೆ ಸಂಬಂಧಿಸಿ ಅದು ನೈಜ ಜಗತ್ತಿನಲ್ಲಿ ಪರೀಕ್ಷಿಸಲ್ಪಟ್ಟಿರುವ ಬಗ್ಗೆ ನಿಮಗೆ ಖಾತ್ರಿ ಇರಬಹುದು.

ಸ್ನೇಹಿತರೇ,

ಮಾನವ ಕುಲಕ್ಕೆ ಜಾಗತಿಕ ಸಾಂಕ್ರಾಮಿಕದಿಂದ ಯಶಸ್ವಿಯಾಗಿ ಪಾರಾಗಲು ಲಸಿಕೆ ನೀಡುವಿಕೆ ಒಂದು ಅತ್ಯುತ್ತಮ ಭರವಸೆ. ಮತ್ತು ಆರಂಭದಿಂದಲೂ ಭಾರತದಲ್ಲಿರುವ ನಾವು ನಮ್ಮ ಲಸಿಕಾ ಅಭಿಯಾನದ ಕಾರ್ಯತಂತ್ರವನ್ನು ಯೋಜಿಸುವಾಗ ಸಂಪೂರ್ಣವಾಗಿ ಡಿಜಿಟಲ್ ಧೋರಣೆಯನ್ನು ಅನುಸರಿಸಲು ನಿರ್ಧರಿಸಿದ್ದೆವು. ಇಂದಿನ ಜಾಗತೀಕರಣದ ವಿಶ್ವದಲ್ಲಿ, ಜಾಗತಿಕ ಕೋರೋನೋತ್ತರ ಜಗತ್ತು ಸಹಜತೆಗೆ ಮರಳಬೇಕಾದರೆ ಇಂತಹ  ಡಿಜಿಟಲ್ ವಿಧಾನ  ಬಹಳ ಅವಶ್ಯಕ. ಎಲ್ಲಕ್ಕಿಂತ ಮುಖ್ಯ ಜನರು ತಾವು ಲಸಿಕಾ ಕಾರ್ಯಕ್ರಮಕ್ಕೆ ಒಳಪಟ್ಟಿರುವುದನ್ನು ಸಾಬೀತು ಮಾಡಲು ಸಮರ್ಥರಿರಬೇಕಾಗುತ್ತದೆ. ಇಂತಹ ಸಾಕ್ಷ್ಯಾಧಾರ ಸುರಕ್ಷಿತವಾಗಿರಬೇಕು, ಭದ್ರವಾಗಿರಬೇಕು ಮತ್ತು ನಂಬಿಕೆಗೆ ಅರ್ಹವಾಗಿರಬೇಕು. ಜನರು ಕೂಡಾ ತಾವು ಯಾವಾಗ, ಎಲ್ಲಿ ಮತ್ತು ಯಾರಿಂದ ಲಸಿಕೆ ಪಡೆದಿದ್ದೇವೆ ಎಂಬ ಬಗ್ಗೆ ದಾಖಲೆ ಇಟ್ಟುಕೊಳ್ಳುವಂತಾಗಬೇಕು. ಲಸಿಕೆಯ ಪ್ರತೀ ಡೋಸ್ ಎಷ್ಟೊಂದು ಅಮೂಲ್ಯ ಎಂಬುದರ ಅರಿವಿನ ಜೊತೆ ಸರಕಾರಗಳು ಪ್ರತೀ ಡೋಸಿನ ಪತ್ತೆಯೊಂದಿಗೆ ಪೋಲಾಗುವ (ವ್ಯರ್ಥವಾಗುವ) ಪ್ರಮಾಣವನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸುವ ಬಗ್ಗೆಯೂ ಕಳವಳ ಹೊಂದಿದ್ದವು. ಇದೆಲ್ಲವೂ ಆರಂಭದಿಂದ ಕೊನೆಯವರೆಗೆ  ಡಿಜಿಟಲ್ ವಿಧಾನ  ಇಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ.

ಸ್ನೇಹಿತರೇ,

ಭಾರತದ ನಾಗರಿಕತೆಯು ಇಡೀ ವಿಶ್ವವನ್ನು ಕುಟುಂಬ ಎಂದು ಭಾವಿಸುತ್ತದೆ.  ಜಾಗತಿಕ ಸಾಂಕ್ರಾಮಿಕವು ಈ ತತ್ವಶಾಸ್ತ್ರದ ಮೂಲಭೂತ ಸತ್ಯವನ್ನು ಜನತೆ ಅರಿಯುವಂತೆ ಮಾಡಿತು. ಅದರಿಂದಾಗಿ ನಮ್ಮ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕಾಗಿ ಅಭಿವೃದ್ಧಿ ಪಡಿಸಲಾಗಿರುವ ತಾಂತ್ರಿಕ ವೇದಿಕೆಯನ್ನು -ನಾವು ಕೊವಿನ್ ಎಂದು ಕರೆಯುವ ವೇದಿಕೆಯನ್ನು ಮುಕ್ತ ಮೂಲವಾಗಿ ತಯಾರು ಮಾಡಲಾಯಿತು. ಶೀಘ್ರವೇ ಇದು ಯಾವುದೇ ದೇಶಕ್ಕೆ  ಮತ್ತು ಎಲ್ಲಾ ದೇಶಗಳಿಗೂ ಲಭ್ಯವಾಗುತ್ತದೆ. ಇಂದಿನ ಸಮಾವೇಶ ಈ ವೇದಿಕೆಯನ್ನು ನಿಮ್ಮೆಲ್ಲರಿಗೂ ಪರಿಚಯಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ. ಈ ವೇದಿಕೆಯ ಮೂಲಕ ಭಾರತವು 350 ಮಿಲಿಯನ್ ಡೋಸ್ ಗಳಷ್ಟು ಕೋವಿಡ್ ಲಸಿಕೆಗಳನ್ನು ನೀಡಿದೆ. ಕೆಲವು ದಿನಗಳ  ಹಿಂದೆ ನಾವು ಒಂದು ದಿನದಲ್ಲಿ ಸುಮಾರು 9 ಮಿಲಿಯನ್ ಜನರನ್ನು ಲಸಿಕಾ ಕಾರ್ಯಕ್ರಮಕ್ಕೆ ಒಳಪಡಿಸಿದ್ದೆವು. ಅವರು ಯಾವುದನ್ನೇ ಆದರೂ ಸಾಬೀತು ಮಾಡಲು ದುರ್ಬಲವಾದಂತಹ ಪೇಪರಿನ ತುಂಡನ್ನು ಕೊಂಡೊಯ್ಯಬೇಕಾಗಿಲ್ಲ. ಅದು ಡಿಜಿಟಲ್ ಮಾದರಿಯಲ್ಲಿ ಲಭ್ಯವಾಗುತ್ತದೆ. ಮತ್ತು ಇನ್ನೂ ಮಹತ್ವದ್ದೆಂದರೆ ಎಂದರೆ ಈ ಸಾಫ್ಟ್ ವೇರನ್ನು ಯಾವುದೇ ದೇಶ  ಸ್ಥಳೀಯ ಆವಶ್ಯಕತೆಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳಬಹುದು. ಇಂದಿನ ಸಮಾವೇಶದಲ್ಲಿ ನೀವು ತಾಂತ್ರಿಕ ವಿವರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವಿರಿ. ನೀವು ಆರಂಭಿಸಲು ಉತ್ಸುಕರಾಗಿರುವಿರಿ ಎಂಬ ಬಗ್ಗೆ ನನಗೆ ಖಾತ್ರಿ ಇದೆ. 

ಮತ್ತು ನಾನು ನಿಮ್ಮನ್ನು ಇನ್ನಷ್ಟು ಕಾಯುವಂತೆ ಮಾಡಲು ಇಚ್ಛಿಸುವುದಿಲ್ಲ. ಆದುದರಿಂದ ನಾನು ಇಂದು ಬಹಳ ಫಲಪ್ರದ ಚರ್ಚೆ ನಡೆಯಲಿ ಎಂಬ ಆಶಯದೊಂದಿಗೆ ನಿಮಗೆಲ್ಲಾ ಶುಭವನ್ನು ಹಾರೈಸುತ್ತಾ ಮಾತುಗಳನ್ನು ಮುಕ್ತಾಯ ಮಾಡುತ್ತೇನೆ. ’ಒಂದು ಭೂಮಿ, ಒಂದು ಆರೋಗ್ಯ” ಎಂಬ ನಿಲುವಿನ ಮಾರ್ಗದರ್ಶನದಲ್ಲಿ ಮಾನವತೆಯು ಈ ಜಾಗತಿಕ ಸಾಂಕ್ರಾಮಿಕವನ್ನು ನಿವಾರಿಸಿಕೊಂಡು,  ಖಚಿತವಾಗಿ ಮುನ್ನಡೆಯಲಿದೆ.

ವಂದನೆಗಳು

ಬಹಳ ಬಹಳ ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
‘Make in India’ is working, says DP World Chairman

Media Coverage

‘Make in India’ is working, says DP World Chairman
NM on the go

Nm on the go

Always be the first to hear from the PM. Get the App Now!
...
PM Modi condoles loss of lives due to stampede at New Delhi Railway Station
February 16, 2025

The Prime Minister, Shri Narendra Modi has condoled the loss of lives due to stampede at New Delhi Railway Station. Shri Modi also wished a speedy recovery for the injured.

In a X post, the Prime Minister said;

“Distressed by the stampede at New Delhi Railway Station. My thoughts are with all those who have lost their loved ones. I pray that the injured have a speedy recovery. The authorities are assisting all those who have been affected by this stampede.”