ನಮಸ್ಕಾರ!
ನನ್ನ ಸಂಪುಟದ ಸಹೋದ್ಯೋಗಿಗಳೇ, ರಾಷ್ಟ್ರದ ಶಿಕ್ಷಣ ಸಚಿವರಾದ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರೇ, ಶ್ರೀ ಸಂಜಯ್ ಧೋತ್ರೆ ಅವರೇ, ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ರಚನಾ ಸಮಿತಿ ಅಧ್ಯಕ್ಷರಾದ ಡಾ. ಕಸ್ತೂರಿ ರಂಗನ್ ಅವರೇ, ಅವರ ತಂಡದ ಗೌರವಾನ್ವಿತ ಸದಸ್ಯರೇ, ವಿದ್ವಾಂಸರೇ, ಪ್ರಾಂಶುಪಾಲರೇ, ಶಿಕ್ಷಕರೇ, ಎಲ್ಲ ರಾಜ್ಯಗಳಿಂದ ಈ ವಿಶೇಷ ಸಮಾವೇಶದಲ್ಲಿ ಭಾಗಿಯಾಗಿರುವ ಮಾನ್ಯರೇ ಮತ್ತು ಮಹಿಳೆಯರೇ, ಇಂದು ನಾವೆಲ್ಲರೂ ನಮ್ಮ ದೇಶದ ಭವಿಷ್ಯ ನಿರ್ಮಾಣಕ್ಕೆ ಬುನಾದಿ ಹಾಕುವ ಕ್ಷಣದಲ್ಲಿ ಭಾಗಿಯಾಗಿದ್ದೇವೆ. ಹೊಸ ಯುಗದ ಬೀಜಗಳನ್ನು ಬಿತ್ತಿದ ಕ್ಷಣ ಇದು. ರಾಷ್ಟ್ರೀಯ ಶಿಕ್ಷಣ ನೀತಿ 21 ನೇ ಶತಮಾನದ ಭಾರತಕ್ಕೆ ಹೊಸ ದಿಶೆ ನೀಡಲಿದೆ.
ಸ್ನೇಹಿತರೆ, ಕಳೆದ ಮೂರು ದಶಕಗಳಲ್ಲಿ ವಿಶ್ವದ ಎಲ್ಲ ರಂಗವೂ ಬದಲಾಗಿದೆ. ಪ್ರತಿಯೊಂದು ವ್ಯವಸ್ಥೆಯೂ ಬದಲಾಗಿದೆ. ಈ ಮೂರು ದಶಕಗಳಲ್ಲಿ ನಮ್ಮ ಬದುಕಿನಲ್ಲಿ ಯಾವುದೇ ಅಂಶ ಹಾಗೆ ಉಳಿದಿಲ್ಲ. ಆದರೆ, ಭವಿಷ್ಯದ ಕಡೆಗೆ ಸಮಾಜ ಸಾಗುತ್ತಿರುವ ಹಾದಿಯಾದರೂ, ನಮ್ಮ ಶಿಕ್ಷಣ ವ್ಯವಸ್ಥೆ, ಅದೇ ಹಳೆ ವಿಧಾನದಲ್ಲೇ ನಡೆಯುತ್ತಿದೆ. ಇದು ಹಳೆಯ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಲು ಅತ್ಯಾವಶ್ಯಕವಾಗಿದೆ, ಇದು ಹಾನಿಗೊಳಗಾಗಿರುವ ಕಪ್ಪುಹಲಗೆಯನ್ನು ಬದಲಾಯಿಸಲು ಅತ್ಯಾವಶ್ಯಕವಾಗಿದೆ. ಪ್ರತಿ ಶಾಲೆಯಲ್ಲೂ ಪಿನ್-ಅಪ್ ಬೋರ್ಡ್ ಇರುತ್ತದೆ. ನೀವು ಅಗತ್ಯವಿರುವ ಎಲ್ಲಾ ಪತ್ರಗಳು, ಅಗತ್ಯವಾದ ಶಾಲಾ ಆದೇಶಗಳು, ಮಕ್ಕಳ ವರ್ಣಚಿತ್ರಗಳು ಇತ್ಯಾದಿಗಳನ್ನು ಪಿನ್ ಅಪ್ ಮಾಡಿ. ಸ್ವಲ್ಪ ಸಮಯದ ನಂತರ ಬೋರ್ಡ್ ತುಂಬುತ್ತದೆ. ಹೊಸ ವರ್ಗದ ಹೊಸ ಮಕ್ಕಳ ಹೊಸ ವರ್ಣಚಿತ್ರಗಳನ್ನು ಆ ಪಿನ್-ಅಪ್ ಬೋರ್ಡ್‌ನಲ್ಲಿ ಹಾಕಲು ನೀವು ಬದಲಾವಣೆಗಳನ್ನು ಮಾಡಬೇಕು.
ರಾಷ್ಟ್ರೀಯ ಶಿಕ್ಷಣ ನೀತಿ ನವ ಭಾರತದ ಹೊಸ ಅಗತ್ಯಗಳನ್ನು ಮತ್ತು ಹೊಸ ಆಶೋತ್ತರಗಳನ್ನು ಪೂರೈಸುವ ಶಕ್ತಿಶಾಲಿ ಸಾಧನವಾಗಿದೆ. ಇದು ಕಳೆದ ನಾಲ್ಕುವರ್ಷಗಳ ಪರಿಶ್ರಮದ ಫಲವಾಗಿದೆ. ಎಲ್ಲ ವರ್ಗದ ಜನರು, ಎಲ್ಲ ಭಾಷೆಯ ಮತ್ತು ವಿಭಾಗದ ಜನರು ಇದರ ಮೇಲೆ ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಆದರೆ ಇದು ಪೂರ್ಣವಾಗಿಲ್ಲ. ವಾಸ್ತವವಾಗಿ ನಿಜವಾದ ಕೆಲಸ ಈಗಷ್ಟೇ ಆರಂಭವಾಗಿದೆ. ನಾವೀಗ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಮರ್ಥವಾಗಿ ಜಾರಿ ಮಾಡಬೇಕಾಗಿದೆ. ನಾವೆಲ್ಲರೂ ಇದನ್ನು ಒಗ್ಗೂಡಿ ಮಾಡಬೇಕು. ನಿಮ್ಮಲ್ಲಿ ಬಹಳ ಜನರಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಟವಾದ ಬಳಿಕ ಹಲವು ಪ್ರಶ್ನೆಗಳು ಮೂಡಿವೆ ಎಂಬುದು ನನಗೆ ತಿಳಿದಿದೆ. ಏನಿದು ಶಿಕ್ಷಣ ನೀತಿ? ಇದು ಹೇಗೆ ಭಿನ್ನವಾಗಿದೆ? ಇದು ಶಾಲಾ ಮತ್ತು ಕಾಲೇಜಿನಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರುತ್ತದೆ? ಈ ಶಿಕ್ಷಣ ನೀತಿಯಲ್ಲಿ ಶಿಕ್ಷಕರಿಗೆ ಇರುವುದಾದರೂ ಏನು? ವಿದ್ಯಾರ್ಥಿಗಳಿಗೆ ಇರುವುದೇನು? ಅದಕ್ಕಿಂತ ಮುಖ್ಯವಾಗಿ ಇದರ ಯಶಸ್ವೀ ಅನುಷ್ಠಆನಕ್ಕೆ ಏನೆಲ್ಲಾ ಮಾಡಬೇಕು ಮತ್ತು ಹೇಗೆ ಮಾಡಬೇಕು? ಈ ಪ್ರಶ್ನೆಗಳು ನ್ಯಾಯಸಮ್ಮತ ಮತ್ತು ಅವಶ್ಯಕ. ಆದ್ದರಿಂದ, ನಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಇಲ್ಲಿ ಒಟ್ಟುಗೂಡಿದ್ದೇವೆ ಇದರಿಂದ ನಾವು ಅದನ್ನು ಚರ್ಚಿಸಬಹುದು ಮತ್ತು ಮುಂದೆ ಸಾಗಬಹುದು. ನಿನ್ನೆ, ನೀವೆಲ್ಲರೂ ಈ ವಿಷಯಗಳ ಬಗ್ಗೆ ಬಹಳ ವಿಸ್ತಾರವಾಗಿ ಗಂಟೆಗಟ್ಟಲೆ ಚರ್ಚಿಸಿದ್ದೀರಿ ಎಂದು ನನಗೆ ತಿಳಿಸಲಾಗಿದೆ.
ಶಿಕ್ಷಕರು ತಮಗೆ ತಕ್ಕಂತೆ ಕಲಿಕಾ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಳ್ಳಬೇಕು, ಮಕ್ಕಳು ತಮ್ಮದೇ ಆದ ಆಟಿಕೆಗಳ ವಸ್ತು ಸಂಗ್ರಹಾಲಯಗಳನ್ನು ರಚಿಸಿಕೊಳ್ಳಬೇಕು, ಪೋಷಕರೊಂದಿಗೆ ಸಂಪರ್ಕ ಸಾಧಿಸಲು ಶಾಲೆಯಲ್ಲಿ ಸಮುದಾಯ ಗ್ರಂಥಾಲಯ ಇರಬೇಕು, ಸಚಿತ್ರವಾದ ಬಹುಭಾಷಾ ನಿಘಂಟು ಇರಬೇಕು ಮತ್ತು ಶಾಲೆಗಳಲ್ಲಿ ಅಡುಗೆ ಕೈತೋಟಗಳು ಇರಬೇಕು. ಅಂತಹ ಅನೇಕ ವಿಷಯಗಳನ್ನು ಚರ್ಚಿಸಲಾಗಿದೆ ಮತ್ತು ಹೊಸ ಆಲೋಚನೆಗಳನ್ನು ನೀಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಈ ಅಭಿಯಾನದಲ್ಲಿ ನಮ್ಮ ಪ್ರಾಂಶುಪಾಲರು ಮತ್ತು ಶಿಕ್ಷಕರು ಉತ್ಸಾಹದಿಂದ ಭಾಗವಹಿಸುತ್ತಿರುವುದು ನನಗೆ ಸಂತೋಷವಾಗಿದೆ.
ಕೆಲವು ದಿನಗಳ ಹಿಂದೆ, ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕಾಗಿ ಮೈಗೌ ಪೋರ್ಟಲ್ ನಲ್ಲಿ ದೇಶದಾದ್ಯಂತದ ಶಿಕ್ಷಕರಿಂದ ಶಿಕ್ಷಣ ಸಚಿವಾಲಯ ಸಲಹೆಗಳನ್ನು ಕೋರಿತ್ತು. 15 ಲಕ್ಷಕ್ಕೂ ಅಧಿಕ ಸಲಹೆಗಳು ಒಂದು ವಾರದಲ್ಲಿ ಸ್ವೀಕಾರವಾಗಿದ್ದವು. ಈ ಸಲಹೆಗಳು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹೆಚ್ಚು ಸಮರ್ಥವಾಗಿ ಅನುಷ್ಠಾನ ಮಾಡಲು ನೆರವಾಗಲಿವೆ. ಶಿಕ್ಷಣ ಸಚಿವಾಲಯವು ಈ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಸ್ನೇಹಿತರೇ, ಯಾವುದೇ ದೇಶದ ತ್ವರಿತ ಅಭಿವೃದ್ಧಿಯಲ್ಲಿ ಯುವ ಪೀಳಿಗೆ ಮತ್ತು ಯುವ ಶಕ್ತಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಆದರೆ ಆ ಯುವ ಪೀಳಿಗೆಯ ಅಡಿಪಾಯ ಬಾಲ್ಯದಿಂದಲೇ ಪ್ರಾರಂಭವಾಗುತ್ತದೆ. ಭವಿಷ್ಯದ ಜೀವನವು ಹೆಚ್ಚಾಗಿ ಬಾಲ್ಯದ ಮೇಲೆ ಅವಲಂಬಿತವಾಗಿರುತ್ತದೆ. ಮಕ್ಕಳ ಶಿಕ್ಷಣ, ಅವರು ಕಲಿಯುವ ಪರಿಸರ, ಭವಿಷ್ಯದಲ್ಲಿ ಅವರು ವ್ಯಕ್ತಿಯಾಗುವುದು ಹೇಗೆ, ಅವರ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ಹೆಚ್ಚಿನ ಪ್ರಮಾಣದಲ್ಲಿ ನಿರ್ಧರಿಸುತ್ತದೆ. ಹೀಗಾಗಿ, ರಾಷ್ಟ್ರೀಯ ಶಿಕ್ಷಣ ನೀತಿ, ಮಕ್ಕಳ ಶಿಕ್ಷಣದ ಮೇಲೆ ಹೆಚ್ಚಿನ ಒತ್ತು ನೀಡಿದೆ. ಪೂರ್ವ ಪ್ರಾಥಮಿಕದ ಅವಧಿಯಲ್ಲಿ, ಮನೆಯ ಆರಾಮವಾದ ವಾತಾವರಣದಿಂದ ಮತ್ತು ತನ್ನ ಪಾಲಕರ ಆರೈಕೆಯಿಂದ ಮಗು ಮೊದಲಿಗೆ ಹೊರಬರುತ್ತದೆ.
ಮಕ್ಕಳು ತಮ್ಮ ಇಂದ್ರಿಯಗಳನ್ನು, ಅವರ ಕೌಶಲ್ಯಗಳನ್ನು ಹೆಚ್ಚು ಉತ್ತಮ ರೀತಿಯಲ್ಲಿ ಅರಿತುಕೊಳ್ಳಲು ಪ್ರಾರಂಭಿಸಿದಾಗ ಇದು ಮೊದಲ ಹಂತವಾಗಿರುತ್ತದೆ. ಮಕ್ಕಳಿಗೆ ಮೋಜಿನ ಕಲಿಕೆ, ತಮಾಷೆಯ ಕಲಿಕೆ, ಚಟುವಟಿಕೆ ಆಧಾರಿತ ಕಲಿಕೆ ಮತ್ತು ಆವಿಷ್ಕಾರ ಆಧಾರಿತ ಕಲಿಕೆಯ ವಾತಾವರಣವನ್ನು ಒದಗಿಸಬಲ್ಲ ಶಾಲೆಗಳು ಮತ್ತು ಶಿಕ್ಷಕರು ಇದಕ್ಕೆ ಅಗತ್ಯವಿದೆ.
ಕೊರೊನಾ ಸಂದರ್ಭದಲ್ಲಿ ಇವೆಲ್ಲವೂ ಹೇಗೆ ಸಾಧ್ಯ ಎಂದು ನೀವು ಯೋಚಿಸುತ್ತಿರಬಹುದು? ಇಲ್ಲಿ ಕಲ್ಪನೆಗಿಂತಲೂ ವಿಧಾನ ಹೆಚ್ಚು. ಯಾವುದೇ ಸಂದರ್ಭದಲ್ಲಿ, ಕರೋನಾದಿಂದ ಉಂಟಾದಂಥ ಪರಿಸ್ಥಿತಿಗಳು ಸದಾ ಹಾಗೇ ಇರುವುದಿಲ್ಲ. ಮಕ್ಕಳು ತರಗತಿಗಳಲ್ಲಿ ಪ್ರಗತಿ ಸಾಧಿಸುತ್ತಿದ್ದಂತೆ, ಅವರು ಇನ್ನಷ್ಟು ಕಲಿಯುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು; ಮಕ್ಕಳ ಮನಸ್ಸು, ಅವರ ಮೆದುಳು ವೈಜ್ಞಾನಿಕವಾಗಿ ಮತ್ತು ತಾರ್ಕಿಕವಾಗಿ ಯೋಚಿಸಲು ಪ್ರಾರಂಭಿಸಬೇಕು. ಅವರು ಗಣಿತದ ಚಿಂತನೆ ಮತ್ತು ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಗಣಿತ ಚಿಂತನೆ ಅಂದರೆ, ಮಕ್ಕಳು ಕೇವಲ ಗಣಿತದ ಸಮಸ್ಯೆಗಳನ್ನು ಬಿಡಿಸುವುದು ಎಂದರ್ಥವಲ್ಲ. ಈ ರೀತಿಯ ಭೋದನೆ ಅವರಿಗೆ ಮಾಡಬೇಕು. ಪ್ರತಿಯೊಂದು ವಿಷಯವನ್ನೂ, ಜೀವನದ ಅಂಶಗಳನ್ನು ಗಣಿತ ಮತ್ತು ತಾರ್ಕಿಕವಾಗಿ ಅರ್ಥಮಾಡಿಕೊಳ್ಳುವುದು ಈ ವಿಧಾನವಾಗಿರಬೇಕು, ಇದರಿಂದ ಮೆದುಳು ವಿಭಿನ್ನ ದೃಷ್ಟಿಕೋನಗಳಲ್ಲಿ ವಿಶ್ಲೇಷಿಸಬಹುದು. ಈ ವಿಧಾನ, ಮನಸ್ಸು ಮತ್ತು ಮೆದುಳಿನ ಬೆಳವಣಿಗೆ ಬಹಳ ಮುಖ್ಯ, ಮತ್ತು ಆದ್ದರಿಂದ, ರಾಷ್ಟ್ರೀಯ ಶಿಕ್ಷಣ ನೀತಿಯು ಅದರ ವಿಧಾನಗಳಿಗೆ ಹೆಚ್ಚಿನ ಗಮನವನ್ನು ನೀಡಿದೆ. ನಿಮ್ಮಲ್ಲಿ ಅನೇಕರು, ಅನೇಕ ಪ್ರಾಂಶುಪಾಲರು, ನಾವು ಇದನ್ನು ಈಗಾಗಲೇ ನಮ್ಮ ಶಾಲೆಯಲ್ಲಿ ಮಾಡುತ್ತೇವೆ ಎಂದು ಯೋಚಿಸುತ್ತಿರಬಹುದು. ಆದರೆ ಅದು ಆಗದಿರುವ ಅನೇಕ ಶಾಲೆಗಳು ಇನ್ನೂ ಇವೆ. ಸಾಮಾನ್ಯ ಗ್ರಹಿಕೆ ಹೊಂದಲು ಸಹ ಇದು ಅವಶ್ಯಕವಾಗಿದೆ. ನಾನು ಇಂದು ನಿಮ್ಮೊಂದಿಗೆ ತುಂಬಾ ಸವಿಸ್ತಾರವಾಗಿ ಮತ್ತು ನಿಖರವಾಗಿ ಮಾತನಾಡಲು ಇದು ಒಂದು ಪ್ರಮುಖ ಕಾರಣವಾಗಿದೆ.
ಸ್ನೇಹಿತರೆ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ, ಹಿಂದಿನ 10+2 ವ್ಯವಸ್ಥೆಯನ್ನು ಬದಲಾವಣೆ ಮಾಡಿ 5+3+3+4 ವ್ಯವಸ್ಥೆಯನ್ನು ಬಹಳ ಎಚ್ಚರಿಕೆಯಿಂದ ಪರಿಚಯಿಸಲಾಗಿದೆ. ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣವನ್ನು ಅದರಲ್ಲಿ ಒಂದು ಅಡಿಪಾಯವೆಂಬಂತೆ ಸೇರಿಸಲಾಗಿದೆ. ಇಂದು, ಪ್ರಾಥಮಿಕ ಶಾಲಾ ಪೂರ್ವ ಆಡುತ್ತಾ ಕಲಿಯುವ ಶಿಕ್ಷಣವು ನಗರಗಳಲ್ಲಿನ ಖಾಸಗಿ ಶಾಲೆಗಳಿಗೆ ಮಾತ್ರ ಸೀಮಿತವಾಗಿದೆ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ. ಅದು ಈಗ ಗ್ರಾಮಗಳು, ಬಡವರ ಮನೆಗಳು, ಶ್ರೀಮಂತರು, ಗ್ರಾಮಗಳು, ನಗರಗಳನ್ನು ತಲುಪಲಿದೆ. ಇದು ಎಲ್ಲೆಡೆ ಮಕ್ಕಳಿಗೆ ಲಭ್ಯವಿರುತ್ತದೆ. ಮೂಲಭೂತ ಶಿಕ್ಷಣದ ಮೇಲಿನ ಗಮನ ಈ ನೀತಿಯಲ್ಲಿ ಅತ್ಯಂತ ಮಹತ್ವದ ಅಂಶವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ, ಅಡಿಪಾಯದೋಪಾದಿಯ ಸಾಕ್ಷರತೆ ಮತ್ತು ಗಣಿತಜ್ಞಾನ ಅಭಿವೃದ್ಧಿಯನ್ನು ರಾಷ್ಟ್ರೀಯ ಕಾರ್ಯಾಚರಣೆಯಾಗಿ ತೆಗೆದುಕೊಳ್ಳಲಾಗುವುದು. ಪ್ರಾಥಮಿಕ ಭಾಷೆಯ ಜ್ಞಾನ, ಸಂಖ್ಯೆಗಳ ಜ್ಞಾನ, ಮಕ್ಕಳಲ್ಲಿ ಸಾಮಾನ್ಯ ಲೇಖನಗಳನ್ನು ಓದುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯದ ಬೆಳವಣಿಗೆ, ಇದು ಬಹಳ ಅವಶ್ಯಕ. ಮಗು ಭವಿಷ್ಯದಲ್ಲಿ ಓದುವುದನ್ನು ಕಲಿಯುವ ಮೊದಲು, ಅದು ಆರಂಭದಲ್ಲಿ ಓದಲು ಕಲಿಯುವುದು ಬಹಳ ಮುಖ್ಯ. ಕಲಿಯಲು ಓದುವುದರಿಂದ ಓದಲು ಕಲಿಯುವ ಈ ಅಭಿವೃದ್ಧಿ ಪ್ರಯಾಣವು ಅಡಿಪಾಯದೋಪಾದಿಯ ಸಾಕ್ಷರತೆ ಮತ್ತು ಗಣಿತಜ್ಞತೆಯ ಮೂಲಕ ಪೂರ್ಣಗೊಳ್ಳುತ್ತದೆ.
ಸ್ನೇಹಿತರೆ, ಮೂರನೇ ತರಗತಿಯಲ್ಲಿ ಉತ್ತೀರ್ಣವಾದಾಗ ಮಗು ಒಂದು ನಿಮಿಷದಲ್ಲಿ 30 ರಿಂದ 35 ಪದಗಳನ್ನು ಸುಲಭವಾಗಿ ಓದಬಲ್ಲದು ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ನೀವು ಇದನ್ನು ಮೌಖಿಕ ಓದಿನ ನಿರರ್ಗಳತೆ (ಓರಲ್ ರೀಡಿಂಗ್ ಫ್ಲೂಯೆನ್ಸಿ) ಎಂದು ಕರೆಯುತ್ತೀರಿ. ನಾವು ಮಗುವನ್ನು ರೂಪಿಸಲು ಮತ್ತು ಕಲಿಸಲು ಮತ್ತು ಅದನ್ನು ಈ ಮಟ್ಟಕ್ಕೆ ತರಲು ಸಾಧ್ಯವಾದರೆ, ವಿದ್ಯಾರ್ಥಿಯು ಭವಿಷ್ಯದಲ್ಲಿ ಉಳಿದ ಎಲ್ಲ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕಾಗಿ ನಾನು ನಿಮಗೆ ಒಂದು ಸಲಹೆಯನ್ನು ನೀಡುತ್ತೇನೆ. ಇಲ್ಲಿರುವ ಈ ಸಣ್ಣ ಮಕ್ಕಳು..ಅವರು ತಮ್ಮ 25-30 ಸ್ನೇಹಿತರನ್ನು ಸಹ ತರಗತಿಯಲ್ಲಿ ಹೊಂದಿರುತ್ತಾರೆ. ಅವರಿಗೆ ತಿಳಿದಿರುವ ಅವನ ಸ್ನೇಹಿತರ ಹೆಸರನ್ನು ಉಚ್ಚರಿಸಲು ನೀವು ಅವನಿಗೆ ಹೇಳುತ್ತೀರಿ. ನಂತರ ನೀವು ಅವನಿಗೆ ಸಾಧ್ಯವಾದಷ್ಟು ಬೇಗ ಹೆಸರುಗಳನ್ನು ಉಚ್ಚರಿಸಲು ಹೇಳಿ. ನಂತರ ನೀವು ಅವರಿಗೆ ಬೇಗನೆ ಹೆಸರಿಸಲು ಹೇಳಿ ಮತ್ತು ಅವರು ಎದ್ದು ನಿಲ್ಲುವಂತೆ ಮಾಡಿ. ಆಗ ಅವನಲ್ಲಿ ಎಷ್ಟು ರೀತಿಯ ಪ್ರತಿಭೆಗಳು ಬೆಳೆಯಲು ಪ್ರಾರಂಭಿಸುತ್ತವೆ ಮತ್ತು ಅದು ಅವನ ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ನೀವು ನೋಡುತ್ತೀರಿ. . ನಂತರ, ಅವನ ಸ್ನೇಹಿತರ ಹೆಸರನ್ನು ಬರೆಯಲು ಅವನನ್ನು ಕೇಳಬಹುದು… ನಂತರ ನೀವು ಯಾರ ಹೆಸರನ್ನು ಹೇಳಲು ಬಯಸುತ್ತೀರಿ ಎಂದು ಕೇಳಿ… ಅವರ .ಛಾಯಾಚಿತ್ರಗಳನ್ನು ತೋರಿಸುವ ಮೂಲಕ ಹೆಸರುಗಳನ್ನು ಬರೆಯಲು ಅವರನ್ನು ಕೇಳಬಹುದು. ಅವನ ಸ್ನೇಹಿತರನ್ನು ಗುರುತಿಸುವ ಮೂಲಕ ಕಲಿಯಲು… ಇದನ್ನು ಕಲಿಕೆಯ ಪ್ರಕ್ರಿಯೆ ಎಂದು ಕರೆಯಲಾಗುತ್ತದೆ. ಇದು ಉನ್ನತ ತರಗತಿಗಳ ವಿದ್ಯಾರ್ಥಿಗಳ ಮೇಲೆ ಮತ್ತು ಶಿಕ್ಷಕರ ಮೇಲೂ ಹೊರೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಮಕ್ಕಳು ಎಣಿಕೆ, ಸೇರ್ಪಡೆ, ವ್ಯವಕಲನ, ಗುಣಾಕಾರ, ಭಾಗಾಕಾರದಂತಹ ಮೂಲ ಗಣಿತವನ್ನು ಬಹಳ ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಬೋಧನೆ ಪುಸ್ತಕಗಳು ಮತ್ತು ತರಗತಿಗಳ ನಾಲ್ಕು ಗೋಡೆಗಳಿಂದ ಹೊರಬಂದು ನೈಜ ಜಗತ್ತಿನೊಂದಿಗೆ, ನಮ್ಮ ಜೀವನದೊಂದಿಗೆ, ಸುತ್ತಮುತ್ತಲಿನೊಂದಿಗೆ ಸಂಪರ್ಕ ಹೊಂದಿದಾಗ ಮಾತ್ರ ಇದೆಲ್ಲವೂ ಸಾಧ್ಯವಾಗುತ್ತದೆ.
ನೌಜ ಜಗತ್ತಿನಲ್ಲಿ ಸುತ್ತಲ ಪ್ರದೇಶದಿಂದ ಮಗು ಹೇಗೆ ಕಲಿಯಬಹುದು ಎಂಬುದಕ್ಕೆ ಈಶ್ವರ ಚಂದ್ರ ವಿದ್ಯಾಸಾಗರರ ಒಂದು ಘಟನೆ ಉದಾರಣೆಯಾಗಿದೆ. ಈಶ್ವರ ಚಂದ್ರ ವಿದ್ಯಾಸಾಗರ್ ಅವರಿಗೆ 8 ವರ್ಷ ಆಗುವ ತನಕ ಅವರಿಗೆ ಇಂಗ್ಲಿಷ್ ಕಲಿಸಲಾಗಿರಲಿಲ್ಲ. ಅವರು ತಮ್ಮ ತಂದೆಯೊಂದಿಗೆ ಒಮ್ಮೆ ಕೋಲ್ಕತ್ತಾ (ಆಗ ಕಲ್ಕತ್ತಾ)ಗೆ ಹೊರಟಿದ್ದಾಗ ಅವರು ಇಂಗ್ಲಿಷ್ ನ ಮೈಲಿಗಲ್ಲು ನೋಡಿದರು. ಅವರು ತಮ್ಮ ತಂದೆಗೆ ಅದರ ಮೇಲೆ ಏನು ಬರೆದಿದೆ ಎಂದು ಕೇಳಿದರು. ಆಗ ಅವರ ತಂದೆ ಅದು ಇಂಗ್ಲಿಷ್ ನಲ್ಲಿದ್ದು, ಕೋಲ್ಕತ್ತಾ ಎಷ್ಟು ದೂರ ಎಂದು ತಿಳಿಸುತ್ತದೆ ಎಂದರು. ಈ ಪ್ರಶ್ನೆಗಳು ಈಶ್ವರ ಚಂದ್ರ ವಿದ್ಯಾಸಾಗರ್ ಅವರ ಮನದಲ್ಲಿ ಕುತೂಹಲದಿಂದ ಮತ್ತಷ್ಟು ಹೆಚ್ಚಾಗುತ್ತಿದ್ದವು. ಅವರು ತಂದೆಗೆ ಪದೇ ಪದೇ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರ ತಂದೆ ಮೈಲಿಗಲ್ಲುಗಳ ಮೇಲಿನ ಎಣಿಕೆ ತಿಳಿಸುತ್ತಿದ್ದರು. ಕೋಲ್ಕತ್ತಾ ತಲುಪುವ ಹೊತ್ತಿಗೆ ಅವರು ಇಂಗ್ಲಿಷ್ ಅಂಕಿಗಳನ್ನು ಎಣಿಸುವುದನ್ನು ಕಲಿತಿದ್ದರು. 1,2,3,4…7,8,9,10 … ಇದು ಕುತೂಹಲದ ಕಲಿಕೆ, ಕಲಿಕೆಯ ಶಕ್ತಿ ಮತ್ತು ಕೌತುಕದ ಮೂಲಕ ಬೋಧನೆ.
ಸ್ನೇಹಿತರೆ, ಶಿಕ್ಷಣವು ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ಸಂಪರ್ಕ ಹೊಂದಿದಾಗ, ಅದು ವಿದ್ಯಾರ್ಥಿಯ ಸಂಪೂರ್ಣ ಜೀವನ ಮತ್ತು ಇಡೀ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಜಪಾನ್ ನನ್ನೇ ನೋಡಿ. ಶಿನ್ರಿನ್-ಯೋಕು ಅಲ್ಲಿ ಪ್ರಚಲಿತವಾಗಿದೆ. ಶಿನ್ರಿನ್ ಎಂದರೆ ಅರಣ್ಯ ಮತ್ತು ಯೋಕು ಎಂದರೆ ಸ್ನಾನ ಮಾಡುವುದು, ಅಂದರೆ ಕಾಡಿನ ಸ್ನಾನ. ಅಲ್ಲಿ ವಿದ್ಯಾರ್ಥಿಗಳನ್ನು ಕಾಡುಗಳಿಗೆ ಕರೆದೊಯ್ಯಲಾಗುತ್ತದೆ, ಅಲ್ಲಿ ಅನೇಕ ಮರಗಳು ಮತ್ತು ಸಸ್ಯಗಳಿರುತ್ತವೆ, ಅಥವಾ ಮಕ್ಕಳು ಪ್ರಕೃತಿಯನ್ನು ನೈಸರ್ಗಿಕವಾಗಿ ಅನುಭವಿಸುವ ಸ್ಥಳಗಳಿಗೆ ಕರೆದೊಯ್ಯುತ್ತಾರೆ, ಇದರಿಂದ ಅವರು ಮರಗಳು, ಸಸ್ಯಗಳು ಮತ್ತು ಹೂವುಗಳ ಬಗ್ಗೆ ಕೇಳಲು, ನೋಡಲು, ಸ್ಪರ್ಶಿಸಲು, ರುಚಿ ಮತ್ತು ವಾಸನೆಯನ್ನು ತಿಳಿಯಬಹುದು. ಇದು ಮಕ್ಕಳನ್ನು ಪ್ರಕೃತಿ ಮತ್ತು ಪರಿಸರದೊಂದಿಗೆ ಸಂಪರ್ಕಿಸುವುದಷ್ಟೇ ಅಲ್ಲದೆ, ಅವರ ಬೆಳವಣಿಗೆಯನ್ನು ಸಮಗ್ರ ರೀತಿಯಲ್ಲಿ ಉತ್ತೇಜಿಸುತ್ತದೆ. ಮಕ್ಕಳು ಅದನ್ನು ಆನಂದಿಸುತ್ತಾರೆ ಮತ್ತು ಏಕಕಾಲದಲ್ಲಿ ಅನೇಕ ವಿಷಯಗಳನ್ನು ಕಲಿಯುತ್ತಾರೆ. ನನಗೆ ನೆನಪಿದೆ, ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ನಾವು ಒಂದು ಕಾರ್ಯಕ್ರಮವನ್ನು ನಡೆಸುತ್ತಿದ್ದೆವು. ಎಲ್ಲಾ ಶಾಲೆಗಳಿಗೆ ತಮ್ಮ ವಿದ್ಯಾರ್ಥಿಗಳಿಗೆ ಹಳ್ಳಿಯ ಅತ್ಯಂತ ಹಳೆಯ ಮರವನ್ನು ಗುರುತಿಸುವಂತೆ ತಿಳಿಸಿ ಎಂದು ಹೇಳಿದೆವು. ಹೀಗಾಗಿ ಅವರು ಎಲ್ಲೆಡೆ ಓಡಾಡಿ, ತಮ್ಮ ಗ್ರಾಮದ ಬಳಿ ಇರುವ ಮರಗಳೆಲ್ಲವನ್ನೂ ನೋಡಿದರು, ತಮ್ಮ ಗುರುಗಳನ್ನು ಕೇಳಿದರು. ಆಗ ಅತ್ಯಂತ ಹಳೆಯ ಮರದ ಬಗ್ಗೆ ಒಮ್ಮತ ಮೂಡಿತು. ನಂತರ, ವಿದ್ಯಾರ್ಥಿಗಳು ಶಾಲೆಗೆ ಮರಳಿದ ಬಳಿಕ ಮರದ ಮಹತ್ವದ ಬಗ್ಗೆ ಕವನ, ಪ್ರಬಂಧ ಬರೆದರು. ಅತ್ಯಂತ ಪುರಾತನ ವೃಕ್ಷದ ಹುಡುಕಾಟದಲ್ಲಿ ಅವರು ಹಲವು ಮರಗಳನ್ನು ನೋಡಿದರು, ಅವರು ಹಲವು ವಿಷಯ ತಿಳಿದುಕೊಂಡರು. ಈ ಪ್ರಯೋಗ ಅತ್ಯಂತ ಯಶಸ್ವಿಯಾಗಿತ್ತು. ಒಂದು ಕಡೆ ಮಕ್ಕಳಿಗೆ ಪರಿಸರದ ಬಗ್ಗೆ ಮಾಹಿತಿ ಸಿಕ್ಕಿತು, ಜೊತೆಗೆ ಅವರ ಹಳ್ಳಿಯ ಬಗ್ಗೆ ಸಾಕಷ್ಟು ಮಾಹಿತಿ ಪಡೆಯಲು ಅವಕಾಶ ದೊರಕಿತು.
ನಾವು ಇಂಥ ಸುಲಭ ಮತ್ತು ಹೊಸ ರೂಢಿಗಳನ್ನು ಉತ್ತೇಜಿಸಬೇಕು. ನಮ್ಮ ಅನುಭವಗಳು ಹೊಸ ಯುಗದ ಕಲಿಕೆಗೆ ಮಾರ್ಗದರ್ಶಿ ಸೂತ್ರಗಳಾಗಬೇಕು. – ತೊಡಗಿಸಿಕೊಳ್ಳಿ, ಅನ್ವೇಷಿಸಿ, ಅನುಭವ ಪಡೆಯಿರಿ, ಅಭಿವ್ಯಕ್ತಿ ಮಾಡಿ ಮತ್ತು ಔನ್ನತ್ಯ ಗಳಿಸಿ ಎಂಬುದಾಗಬೇಕು. ಅಂದರೆ, ವಿದ್ಯಾರ್ಥಿಗಳು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಚಟುವಟಿಕೆಗಳು, ಘಟನೆಗಳು ಮತ್ತು ಯೋಜನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅವರು ಅದಕ್ಕೆ ತಕ್ಕಂತೆ ಅನ್ವೇಷಿಸಬೇಕು. ಈ ಚಟುವಟಿಕೆಗಳು, ಘಟನೆಗಳು ಮತ್ತು ಯೋಜನೆಗಳನ್ನು ಅವರು ತಮ್ಮ ಸ್ವಂತ ಅನುಭವದಿಂದ ಮತ್ತು ವಿಭಿನ್ನ ದೃಷ್ಟಿಕೋನಗಳಿಂದ ಕಲಿಯಬೇಕು. ಅದು ಅವರ ವೈಯಕ್ತಿಕ ಅನುಭವ ಮತ್ತು ಸಂಘಟಿತ ಅನುಭವವೂ ಆಗಿರಬಹುದು. ನಂತರ ಮಕ್ಕಳು ತಮ್ಮನ್ನು ಬಹಳ ರಚನಾತ್ಮಕವಾಗಿ ಅಭಿವ್ಯಕ್ತಪಡಿಸಲು ಕಲಿಯಬೇಕು. ಈ ಎಲ್ಲ ಸಂಗತಿಗಳನ್ನು ಒಟ್ಟುಗೂಡಿಸಿದಾಗ ಇದು ಔನ್ನತ್ಯದ ಉತ್ತಮ ಮಾರ್ಗವಾಗುತ್ತದೆ. ಉದಾಹರಣೆಗೆ, ನಾವು ಮಕ್ಕಳನ್ನು ಬೆಟ್ಟಗಳು, ಐತಿಹಾಸಿಕ ಸ್ಥಳಗಳು, ಹೊಲಗಳು ಮತ್ತು ಸುರಕ್ಷಿತ ಉತ್ಪಾದನಾ ಘಟಕಗಳಿಗೆ ಕರೆದೊಯ್ಯಬಹುದು.
ಈಗ ನೋಡಿ, ನೀವು ತರಗತಿಯಲ್ಲಿ ರೈಲ್ವೆ ಎಂಜಿನ್ ಬಗ್ಗೆ ಬೋಧಿಸುತ್ತಿರುವಾಗ, ವಿದ್ಯಾರ್ಥಿಗಳನ್ನು ಹಳ್ಳಿಯ ಹತ್ತಿರದ ರೈಲ್ವೆ ನಿಲ್ದಾಣಕ್ಕೆ ಕರೆದೊಯ್ಯಲು ಪ್ರಯತ್ನಿಸಿ, ಎಂಜಿನ್ ಹೇಗೆ ಕಾಣುತ್ತದೆ ಎಂಬುದನ್ನು ಮಕ್ಕಳಿಗೆ ತೋರಿಸಿ; ಕೆಲವೊಮ್ಮೆ ಅವರನ್ನು ಬಸ್ ನಿಲ್ದಾಣಕ್ಕೂ ಕರೆದೊಯ್ಯಿರಿ. ಅದು ಹೇಗೆ ಎಂದು ಅವರಿಗೆ ತೋರಿಸಿ. ಅವರು ಗಮನಿಸುವುದರ ಮೂಲಕ ಕಲಿಯಲು ಪ್ರಾರಂಭಿಸುತ್ತಾರೆ. ನನಗೆ ಗೊತ್ತು, ಅನೇಕ ಪ್ರಾಂಶುಪಾಲರು ಮತ್ತು ಶಿಕ್ಷಕರು ತಮ್ಮ ಶಾಲೆಗಳಲ್ಲಿ ಅಥವಾ ಕಾಲೇಜುಗಳಲ್ಲಿ ಅದೇ ರೀತಿ ಮಾಡಲಾಗುತ್ತಿದೆ ಎಂದು ಯೋಚಿಸುತ್ತಿರಬಹುದು. ಹಲವು ಶಿಕ್ಷಕರು ನಾವಿನ್ಯಪೂರ್ಣವಾಗಿದ್ದಾರೆ, ಅವರು ತಮ್ಮ ಎಲ್ಲ ಪ್ರಯತ್ನವನ್ನೂ ಹಾಕುತ್ತಾರೆ. ಇದು ಎಲ್ಲಾ ಕಡೆ ಆಗುತ್ತಿಲ್ಲ. ಹೀಗಾಗಿಯೇ ಹಲವು ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನದಿಂದ ವಂಚಿತರಾಗಿದ್ದಾರೆ. ನಾವು ಹೆಚ್ಚು ಹೆಚ್ಚು ಇಂಥ ಉತ್ತಮ ರೂಢಿಗಳನ್ನು ಪಸರಿಸಿದಾಗ, ನಮ್ಮ ಇತರ ಶಿಕ್ಷಕರಿಗೂ ಕಲಿಯಲು ಅವಕಾಶ ಆಗುತ್ತದೆ. ಶಿಕ್ಷಕರು ಹೆಚ್ಚಿನ ಅನುಭವಗಳನ್ನು ಹಂಚಿಕೊಂಡರೆ, ವಿದ್ಯಾರ್ಥಿಗಳಿಗೂ ಇದರಿಂದ ಹೆಚ್ಚಿನ ಪ್ರಯೋಜನವಾಗುತ್ತದೆ.
ಸ್ನೇಹಿತರೆ,ದೇಶದ ಪ್ರತಿಯೊಂದು ವಲಯದಲ್ಲೂ ಕೆಲವೊಂದು ವಿಶೇಷ ಇದ್ದೇ ಇರುತ್ತದೆ. ಪ್ರತಿಯೊಂದು ವಲಯದಲ್ಲೂ ತನ್ನದೇ ಆದ ಜನಪ್ರಿಯ ಸಾಂಪ್ರದಾಯಿಕ ಕಲೆ, ಕರಕುಶಲ ಮತ್ತು ಉತ್ಪನ್ನ ಇರುತ್ತದೆ. ಉದಾಹರಣೆಗೆ ಬಿಹಾರದ ಬಾಗಲ್ಪುರದ ಸೀರೆಗಳು; ಬಾಗಲ್ಪುರದ ರೇಷ್ಮೆ ದೇಶದಾದ್ಯಂತ ಜನಪ್ರಿಯ. ವಿದ್ಯಾರ್ಥಿಗಳು ಈ ಮಗ್ಗಗಳಿಗೆ, ಕೈಮಗ್ಗಗಳಿಗೆ ಭೇಟಿ ನೀಡಬೇಕು ಮತ್ತು ಹೇಗೆ ಈ ವಸ್ತ್ರಗಳನ್ನು ಮಾಡಲಾಗುತ್ತದೆ ಎಂಬುದನ್ನು ಗಮನಿಸಬೇಕು. ಅಲ್ಲಿ ಮಾಡಲಾಗುತ್ತಿರುವ ಕೆಲಸದ ಬಗ್ಗೆ ಪ್ರಶ್ನೆ ಕೇಳಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು. ಅಲ್ಲಿ ಅವರು ಏನು ಉತ್ತರ ಪಡೆಯುತ್ತಾರೋ ಅದುವೇ ಕಲಿಕೆ. ಮಗು ನಿರ್ದಿಷ್ಟವಾಗಿ ಕೇಳಿದಾಗ ಅಂದರೆ- ನೀವು ದಾರವನ್ನು ಎಲ್ಲಿಂದ ತರುತ್ತೀರಿ? ದಾರ ಆ ಬಣ್ಣವನ್ನು ಹೇಗೆ ಪಡೆದುಕೊಂಡಿತು? ಸೀರೆಯ ಮೇಲಿನ ಹೊಳಪು ಎಲ್ಲಿಂದ ಬರುತ್ತದೆ? ಮಗು ಸ್ವಂತವಾಗಿ ಕೇಳಲು ಪ್ರಾರಂಭಿಸುತ್ತದೆ. ನೀವು ನೋಡಿ, ಅವರು ಬಹಳಷ್ಟು ಕಲಿಯುತ್ತಾರೆ.
ಅಂಥ ಕೌಶಲ್ಯ ಇರುವವರನ್ನು ಕೂಡ ಶಾಲೆಗಳಿಗೆ ಕರೆಸಬೇಕು. ಅಲ್ಲಿ ಒಂದು ವಸ್ತುಪ್ರದರ್ಶನ ಅಥವಾ ಕಾರ್ಯಾಗಾರ ಏರ್ಪಡಿಸಬೇಕು. ಗ್ರಾಮದಲ್ಲಿ ಮಡಿಕೆ ಮಾಡುವವರಿದ್ದರೆ ಅವರನ್ನು ಒಂದು ದಿನ ಶಾಲೆಗೆ ಕರೆಸಬೇಕು; ಮಕ್ಕಳಿಗೆ ಪ್ರಶ್ನೆ ಕೇಳಲು ಬಿಡಬೇಕು. ಆಗ ನೋಡಿ ಮಕ್ಕಳು ಹೇಗೆ ಆರಾಮವಾಗಿ ಕಲಿಯುತ್ತಾರೆ ಎಂದು. ವಿದ್ಯಾರ್ಥಿಗಳಲ್ಲಿ ಕುತೂಹಲ ಬೆಳೆದರೆ, ಮಾಹಿತಿಯೂ ಹೆಚ್ಚಾಗುತ್ತದೆ, ಅದು ಕಲಿಕೆಯ ಉತ್ಸಾಹವನ್ನೂ ಹೆಚ್ಚಿಸುತ್ತದೆ. ಹಲವು ವೃತ್ತಿಗಳಿಗೆ ಆಳವಾದ ಕೌಶಲ ಅಗತ್ಯವಿರುತ್ತದೆ, ಆದರೆ ನಾವು ಅದಕ್ಕೆ ಮಹತ್ವ ನೀಡುತ್ತಿಲ್ಲ. ಕೆಲವೊಮ್ಮೆ ಅದನ್ನು ಕಡೆಗಣಿಸುತ್ತೇವೆ. ಮಕ್ಕಳು ಅವುಗಳನ್ನು ನೋಡಿದರೆ, ಆಗ ಅವರಲ್ಲಿ ಒಂದು ಭಾವನಾತ್ಮಕ ಬಾಂಧವ್ಯ ಮೂಡುತ್ತದೆ. ಅವರು ಅವರ ಕೌಶಲಗಳನ್ನು ಅರಿಯುತ್ತಾರೆ, ಅವರು ಅವರಿಗೆ ಗೌರವ ನೀಡಲೂ ಆರಂಭಿಸುತ್ತಾರೆ.
ಬಹುಶಃ ಆ ಮಕ್ಕಳಲ್ಲಿ ಅನೇಕರು ಅಂತಹ ಕೈಗಾರಿಕೆಗಳಿಗೆ ಸೇರಲು ಬೆಳೆಯುತ್ತಾರೆ, ಬಹುಶಃ ಅವರು ದೊಡ್ಡ ಕೈಗಾರಿಕೋದ್ಯಮಿಗಳಾಗುತ್ತಾರೆ. ಮಕ್ಕಳನ್ನು ಸಂವೇದನಾಶೀಲಗೊಳಿಸಿದಾಗ ಮಾತ್ರ ಅದು ಆಗುತ್ತದೆ… ಈಗ ಮಕ್ಕಳು ಆಟೋರಿಕ್ಷಾದಲ್ಲಿ ಶಾಲೆಗೆ ಬರುತ್ತಾರೆ. ನೀವು ಎಂದಾದರೂ ಮಕ್ಕಳನ್ನು ಕೇಳಿದ್ದೀರಾ- ಪ್ರತಿದಿನ ಅವರನ್ನು ಕರೆತರುವ ಆ ಆಟೋರಿಕ್ಷಾ ಚಾಲಕನ ಹೆಸರೇನು? ಆತನ ಮನೆ ಎಲ್ಲಿದೆ? ಮಗು ಎಂದಾದರೂ ಆತನ ಹುಟ್ಟುಹಬ್ಬ ಆಚರಿಸಿದೆಯೇ? ಎಂದಾದರೂ ಆತ ಮನೆಗೆ ಹೋಗಿದೆಯೆ? ಆಟೋರಿಕ್ಷಾ ಚಾಲಕ ಅವನ ಪಾಲಕರನ್ನು ಭೇಟಿ ಮಾಡಿದ್ದಾನಾ? ಹೀಗೆ ಮಕ್ಕಳಿಗೆ ತಮ್ಮ ಆಟೋ ಚಾಲಕನಿಗೆ 10 ಪ್ರಶ್ನೆ ಕೇಳಲು ಸೂಚಿಸಿ. ನಂತರ ಮಗು ಶಾಲೆಯಲ್ಲಿ ಆಟೋ ಚಾಲಕನ ಬಗ್ಗೆ ಶಾಲೆಯಲ್ಲಿ ಆ ವಿವರ ನೀಡಲಿ. ಈ ಪ್ರಯೋಗ ಮಕ್ಕಳಿಗೆ ಆಟೋರಿಕ್ಷಾ ಚಾಲಕರ ಬಗ್ಗೆ ಸಂವೇದನೆ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಇಲ್ಲದಿದ್ದಲ್ಲಿ, ಮಕ್ಕಳಿಗೆ ಆಟೋರಿಕ್ಷಾ ಚಾಲಕರ ಬಗ್ಗೆ ಏನೂ ತಿಳಿದಿರುವುದೇ ಇಲ್ಲ. ಅವರು ತಮ್ಮ ತಂದೆ ಹಣ ಕೊಡುತ್ತಾರೆ, ಆಟೋ ಚಾಲಕ ನಮ್ಮನ್ನು ಕರೆದುಕೊಂಡು ಹೋಗುತ್ತಾನೆ ಎಂದಷ್ಟೇ ತಿಳಿದಿರುತ್ತಾರೆ. ಆಟೋರಿಕ್ಷಾ ಚಾಲಕನು ತನ್ನ ಜೀವನವನ್ನು ರೂಪಿಸುತ್ತಿದ್ದಾನೆ ಎಂದು ಅವನಿಗೆ ಎಂದಿಗೂ ಅನ್ನಿಸುವುದೇ ಇಲ್ಲ. ಆಟೋ ರಿಕ್ಷಾ ಚಾಲಕ ಅವನ ಜೀವನವನ್ನು ರೂಪಿಸಲು ಏನಾದರೂ ಕೊಡುಗೆ ನೀಡುತ್ತಿದ್ದರೆ, ಆ ಭಾವನೆ ಬೆಳೆಯಬೇಕು.
ಅದೇ ರೀತಿ, ಯಾರಾದರೂ ಎಂಜಿನಿಯರಿಂಗ್ ನಂತಹ ಮತ್ತೊಂದು ವೃತ್ತಿಯನ್ನು ಆರಿಸಿದರೆ, ಅಂತಹ ವೃತ್ತಿಗಳನ್ನು ಸುಧಾರಿಸಲು ನಾವೀನ್ಯತೆಗಳನ್ನು ಹುಡುಕುವುದು ಅವರ ಮನಸ್ಸಿನ ಹಿಂಭಾಗದಲ್ಲಿ ಉಳಿಯುತ್ತದೆ. ಅಂತೆಯೇ, ಮಕ್ಕಳನ್ನು ಕಲಿಕೆಯ ಭಾಗವಾಗಿ ಆಸ್ಪತ್ರೆಗಳು, ಅಗ್ನಿಶಾಮಕ ಕೇಂದ್ರಗಳು ಅಥವಾ ಇನ್ನಾವುದೇ ಸ್ಥಳಕ್ಕೆ ಕರೆದೊಯ್ಯಬೇಕು. ಮಕ್ಕಳನ್ನು ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ಯಬೇಕು, ಬೇರೆ ಬೇರೆ ಸ್ಥಳಗಳನ್ನು ತೋರಿಸಬೇಕು. ಅವರು ವೈದ್ಯರ ವೈವಿಧ್ಯತೆಯ ಬಗ್ಗೆ ತಿಳಿದುಕೊಳ್ಳುತ್ತಾರೆ… ದಂತವೈದ್ಯರು ಯಾರು? ಕಣ್ಣಿನ ಆಸ್ಪತ್ರೆ ಹೇಗಿರುತ್ತದೆ? ಅವರು ಉಪಕರಣಗಳನ್ನು ನೋಡುತ್ತಾರೆ … ಕಣ್ಣುಗಳನ್ನು ಪರೀಕ್ಷಿಸಲು ಯಾವ ಯಂತ್ರವನ್ನು ಬಳಸಲಾಗುತ್ತದೆ. ಎಂಬಿತ್ಯಾದಿ ಕುತೂಹಲ ಮೂಡಿಸಿಕೊಳ್ಳುತ್ತಾನೆ, ಅವನು ಕಲಿಯುತ್ತಾನೆ.
ಸ್ನೇಹಿತರೆ,, ಪಠ್ಯಕ್ರಮವನ್ನು ಕಡಿಮೆ ಮಾಡಲು ಮತ್ತು ಮೂಲಭೂತ ವಿಷಯಗಳತ್ತ ಗಮನ ಹರಿಸುವ ರೀತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಸಂಪೂರ್ಣ ಅನುಭವದ ಆಧಾರದ ಮೇಲೆ ಕಲಿಕೆಯನ್ನು ಸಮಗ್ರ, ಅಂತರಶಿಸ್ತೀಯ, ವಿನೋದಮಯವಾಗಿಸಲು ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟನ್ನು ಅಭಿವೃದ್ಧಿಪಡಿಸಲಾಗುವುದು. 2022 ರಲ್ಲಿ, ನಾವು 75 ವರ್ಷಗಳ ಸ್ವಾತಂತ್ರ್ಯೋತ್ಸವವನ್ನು ಆಚರಿಸುವಾಗ, ನಮ್ಮ ವಿದ್ಯಾರ್ಥಿಗಳು ಈ ಹೊಸ ಪಠ್ಯಕ್ರಮದೊಂದಿಗೆ ಹೊಸ ಭವಿಷ್ಯದತ್ತ ಸಾಗಬೇಕು ಎಂದು ನಿರ್ಧರಿಸಲಾಗಿದೆ. ಇದು ಮುನ್ನೋಟ ಹೊಂದಿದೆ, ಭವಿಷ್ಯದ ಸಿದ್ಧತೆ ಮತ್ತು ವೈಜ್ಞಾನಿಕ ಆಧಾರಿತ ಪಠ್ಯಕ್ರಮವೂ ಆಗಿರುತ್ತದೆ. ಒಂದಕ್ಕಾಗಿ ಪ್ರತಿಯೊಬ್ಬರಿಂದಲೂ ಸಲಹೆಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ಎಲ್ಲರ ಶಿಫಾರಸುಗಳು ಮತ್ತು ಆಧುನಿಕ ಶಿಕ್ಷಣ ವ್ಯವಸ್ಥೆಗಳನ್ನು ಅದರಲ್ಲಿ ಸೇರಿಸಲಾಗುವುದು
ಸ್ನೇಹಿತರೆ, ನಮ್ಮ ಮುಂದಿನ ಭವಿಷ್ಯ ಇಂದಿನ ಜಗತ್ತಿಗಿಂತಲೂ ತುಂಬಾ ಭಿನ್ನಾಗಿರುತ್ತದೆ. ನಾವು ಈಗಲೇ ಅದರ ಅನುಭವ ಪಡೆಯುತ್ತಿದ್ದೇವೆ. ಅಂಥ ಸನ್ನಿವೇಶದಲ್ಲಿ ನಾವು ನಮ್ಮ ವಿದ್ಯಾರ್ಥಿಗಳನ್ನು 21ನೇ ಶತಮಾನದ ಕೌಶಲಗಳಿಗೆ ಅಣಿಗೊಳಿಸಬೇಕು. ಈ 21ನೇ ಶತಮಾನದ ಕೌಶಲಗಳು ಏನು? ಅವುಗಳೆಂದರೆ – ವಿಮರ್ಶಾತ್ಮಕ ಚಿಂತನೆ-ಸೃಜನಶೀಲತೆ-ಸಹಯೋಗ-ಕುತೂಹಲ ಮತ್ತು ಸಂವಹನ. ನಮ್ಮ ವಿದ್ಯಾರ್ಥಿಗಳು ಸುಸ್ಥಿರ ಭವಿಷ್ಯ, ಸುಸ್ಥಿರ ವಿಜ್ಞಾನವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಆ ದಿಕ್ಕಿನಲ್ಲಿ ಯೋಚಿಸಬೇಕು. ಇದು ಸಮಯದ ಅವಶ್ಯಕತೆ! ಇದು ಅತೀ ಮುಖ್ಯವಾದುದು. ಆದ್ದರಿಂದ, ವಿದ್ಯಾರ್ಥಿಗಳು ಜೀವನದ ಆರಂಭದಲ್ಲಿ ಕೋಡಿಂಗ್ ಕಲಿಯಬೇಕು, ಕೃತಕ ಬುದ್ಧಿಮತ್ತೆ,, ಇಂಟರ್ನೆಟ್ ಆಫ್ ಥಿಂಗ್ಸ್, ಕ್ಲೌಡ್ ಕಂಪ್ಯೂಟಿಂಗ್, ದತ್ತಾಂಶ ವಿಜ್ಞಾನ ಮತ್ತು ರೊಬೊಟಿಕ್ಸ್ ಅನ್ನು ಅರ್ಥಮಾಡಿಕೊಳ್ಳಬೇಕು. ಇವೆಲ್ಲವನ್ನೂ ನಾವು ಖಚಿತಪಡಿಸಿಕೊಳ್ಳಬೇಕು.
ಸ್ನೇಹಿತರೇ, ಹಿಂದಿನ ಶಿಕ್ಷಣ ನೀತಿಯು ನಮ್ಮ ವಿದ್ಯಾರ್ಥಿಗಳಿಗೆ ಆಯ್ಕೆಗಳನ್ನು ನಿರ್ಬಂಧಿಸಿದೆ. ಉದಾಹರಣೆಗೆ, ವಿಜ್ಞಾನವನ್ನು ಆರಿಸಿಕೊಂಡ ವಿದ್ಯಾರ್ಥಿಗೆ ಕಲೆ ಅಥವಾ ವಾಣಿಜ್ಯ ಅಧ್ಯಯನ ಮಾಡಲು ಸಾಧ್ಯವಾಗಲಿಲ್ಲ. ಕಲೆ- ವಾಣಿಜ್ಯ ಪಡೆದವರು, ವಿಜ್ಞಾನದಲ್ಲಿ ಕಳಪೆ ಜ್ಞಾನ ಇರುವ ಕಾರಣ ಅವರು ಇತಿಹಾಸ, ಭೂಗೋಳ, ಲೆಕ್ಕಶಾಸ್ತ್ರ ಆರಿಸಿಕೊಂಡಿದ್ದಾರೆ ಎಂದು ಭಾವಿಸಲಾಗಿದೆ. ಆದರೆ ವಾಸ್ತವದಲ್ಲಿ, ಕೇವಲ ಒಂದು ಕ್ಷೇತ್ರದ ಜ್ಞಾನದಿಂದ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವೇ? ವಾಸ್ತವದಲ್ಲಿ ಎಲ್ಲಾ ವಿಷಯಗಳು ಪರಸ್ಪರ ಸಂಬಂಧಿಸಿದ್ದಾಗಿವೆ. ಪ್ರತಿಯೊಂದು ಕಲಿಕೆಯು ಪರಸ್ಪರ ಸಂಪರ್ಕಿತವೇ. ವಿದ್ಯಾರ್ಥಿಗಳು ಒಂದು ವಿಷಯವನ್ನು ಆರಿಸಿಕೊಳ್ಳುತ್ತಾರೆ, ಆದರೆ ನಂತರ ಅವರು ಬೇರೆ ಯಾವುದಾದರೂ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದಾಗಿತ್ತು ಭಾವಿಸುತ್ತಾರೆ. ಆದರೆ ಪ್ರಸ್ತುತ ವ್ಯವಸ್ಥೆಯು ಬದಲಾವಣೆಗೆ ಅಥವಾ ಹೊಸ ಸಾಧ್ಯತೆಗಳೊಂದಿಗೆ ಸಂಪರ್ಕ ಸಾಧಿಸಲು ಅವಕಾಶವನ್ನು ಒದಗಿಸುವುದಿಲ್ಲ. ಇದು ಅನೇಕ ವಿದ್ಯಾರ್ಥಿಗಳು ಅರ್ಧದಲ್ಲಿ ವಿದ್ಯಭ್ಯಾಸ ಕೈಬಿಡಲು ಒಂದು ಪ್ರಮುಖ ಕಾರಣವಾಗಿದೆ. ಆದ್ದರಿಂದ, ರಾಷ್ಟ್ರೀಯ ಶಿಕ್ಷಣ ನೀತಿಯೊಂದಿಗೆ ವಿದ್ಯಾರ್ಥಿಗಳಿಗೆ ಯಾವುದೇ ವಿಷಯವನ್ನು ಆಯ್ಕೆ ಮಾಡಲು ಸ್ವಾತಂತ್ರ್ಯ ನೀಡಲಾಗುತ್ತದೆ. ನಾನು ಇದನ್ನು ಪ್ರಮುಖ ಸುಧಾರಣೆಯಾಗಿ ನೋಡುತ್ತೇನೆ. ಈಗ ನಮ್ಮ ಯುವಕರು ವಿಜ್ಞಾನ, ಮಾನವೀಯತೆ ಅಥವಾ ವಾಣಿಜ್ಯದ ಯಾವುದೇ ಒಂದು ಆವರಣಕ್ಕೆ ಹೊಂದಿಕೊಳ್ಳಬೇಕಾಗಿಲ್ಲ. ದೇಶದ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಅವರ ಪ್ರತಿಭೆ ಈಗ ಎಲ್ಲ ಅವಕಾಶಗಳನ್ನು ಪಡೆಯಲಿದೆ.
ಸ್ನೇಹಿತರೆ,
ರಾಷ್ಟ್ರೀಯ ಶಿಕ್ಷಣ ನೀತಿಯು ಮತ್ತೊಂದು ಮಹತ್ವದ ಸಮಸ್ಯೆಯನ್ನು ಪರಿಹರಿಸುತ್ತದೆ. ಇಲ್ಲಿ ಹಲವು ಜ್ಞಾನವಂತ ಮತ್ತು ಅನುಭವಿ ವ್ಯಕ್ತಿಗಳು ಇದ್ದೀರಿ., ನಮ್ಮ ದೇಶದಲ್ಲಿ ಕಲಿಕೆ ಚಾಲಿತ ಶಿಕ್ಷಣಕ್ಕಿಂತ ಅಂಕ ಮತ್ತು ಅಂಕಪಟ್ಟಿ ಚಾಲಿತ ಶಿಕ್ಷಣ ಪ್ರಾಬಲ್ಯ ಸಾಧಿಸಿದೆ ಎಂದು ನಿಮಗೆ ಅನಿಸಿರಬಹುದು. ಮಕ್ಕಳು ಆಡುತ್ತಲೇ, ಕುಟುಂಬದೊಂದಿಗೆ ಮಾತನಾಡುತ್ತಲೇ ಅಥವಾ ನಿಮ್ಮೊಂದಿಗೆ ಹೊರಗೆ ಹೋದಾಗಲೇ ಕಲಿಯಬಹುದು. ಪಾಲಕರು ಮಕ್ಕಳನ್ನು ಪದೇ ಪದೇ ಕೇಳುವುದಿಲ್ಲ ನೀವು ಏನು ಕಲಿತಿದ್ದೀರಿ ಎಂದು. ಅವರೂ ನಿಮ್ಮನ್ನು ಅಂಕದ ಬಗ್ಗೆಯೇ ಕಳುತ್ತಾರೆ. ನೀನು ಪರೀಕ್ಷೆಯಲ್ಲಿ ಎಷ್ಟು ಅಂಕ ಪಡೆದೆ? ಒಂದು ಪರೀಕ್ಷೆ ಅಥವಾ ಅಂಕಪಟ್ಟಿ ಮಗುವಿನ ಕಲಿಕೆಯ ಮತ್ತು ಮಾನಸಿಕ ಬೆಳವಣಿಗೆಯ ಮಾನದಂಡವೇ? ಇಂದು, ಅಂಕಪಟ್ಟಿ ಮಾನಸಿಕ ಒತ್ತಡದ ಅಂಕಪಟ್ಟಿಯಾಗಿದೆ ಮತ್ತು ಕುಟುಂಬದ ಪ್ರತಿಷ್ಠೆಯ ಅಂಕಪಟ್ಟಿಯಾಗಿದೆ. ಶಿಕ್ಷಣದಿಂದ ಈ ಒತ್ತಡವನ್ನು ತೆಗೆದುಹಾಕುವುದು ನೂತನ ಶಿಕ್ಷಣ ನೀತಿಯ ಮುಖ್ಯ ಉದ್ದೇಶವಾಗಿದೆ.
ಪರೀಕ್ಷೆಯು ಎಂತಹುದ್ದಾಗಿರಬೇಕು ಅಂದರೆ, ಅದು ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡವನ್ನು ಬೀರಬಾರದು. ಮತ್ತು ಪ್ರಯತ್ನವು ವಿದ್ಯಾರ್ಥಿಗಳನ್ನು ಕೇವಲ ಒಂದು ಪರೀಕ್ಷೆಯ ಮೂಲಕ ಮೌಲ್ಯಮಾಪನ ಮಾಡುವುದಾಗಿರದೆ, ವಿವಿಧ ಅಂಶಗಳಿಂದ ಅಂದರೆ ಸ್ವಯಂ ಮೌಲ್ಯಮಾಪನ ಮತ್ತು ಪೀರ್ ಟು ಪೀರ್ ಮೌಲ್ಯಮಾಪನದೊಂದಿಗೆ ಬೆಳವಣಿಗೆಯ ವಿವಿಧ ಅಂಶಗಳನ್ನು ಮೌಲ್ಯಮಾಪನ ಮಾಡುವಂತಿರಬೇಕು. ಹೀಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಅಂಕಪಟ್ಟಿಯ ಬದಲಾಗಿ, ಸಮಗ್ರ ಶೈಕ್ಷಣಿಕ ಕಾರ್ಡ್ ನೀಡಲುದ್ದೇಶಿಸಿದ್ದು, ಇದು ಅನನ್ಯ ಸಾಮರ್ಥ್ಯ, ನಡೆವಳಿಕೆ, ಪ್ರತಿಭೆ, ಕೌಶಲ, ದಕ್ಷತೆ, ವಿದ್ಯಾರ್ಥಿಯ ಸಾಧ್ಯತೆ ಮೊದಲಾದ ವಿವರಗಳನ್ನೊಳಗೊಂಡಿರುತ್ತದೆ. ಹೊಸ ರಾಷ್ಟ್ರೀಯ ಮೌಲ್ಯಮಾಪನ ಕೇಂದ್ರ “ಪ್ರಕಾಶ”.ವನ್ನು ಸಹ ಮೌಲ್ಯಮಾಪನ ವ್ಯವಸ್ಥೆಯನ್ನು ಸಮಗ್ರ ಸುಧಾರಣೆ ಮಾಡಲು ಸ್ಥಾಪಿಸಲಾಗುತ್ತಿದೆ.
ಸ್ನೇಹಿತರೆ, ರಾಷ್ಟ್ರೀಯ ಶಿಕ್ಷಣ ನೀತಿ ಪರಿಚಯಿಸಿದಾಗಿನಿಂದ ಭಾಷಾ ಮಾಧ್ಯಮ/ಮಕ್ಕಳ ಬೋಧನೆ? ಏನೆಲ್ಲಾ ಬದಲಾವಣೆ ಮಾಡಲಾಗಿದೆ? ಎಂಬ ಬಗ್ಗೆ ಬಲವಾದ ಚರ್ಚೆ ನಡೆಯುತ್ತಿದೆ. ಇಲ್ಲಿ ನಾವು ವೈಜ್ಞಾನಿಕವಾಗಿ ಅರ್ಥ ಮಾಡಿಕೊಳ್ಳಬೇಕಾಗಿರುವುದು, ಭಾಷಾ ಶಿಕ್ಷಣದ ಮಾಧ್ಯಮವಾಗಿದೆ, ಭಾಷೆಯೇ ಎಲ್ಲ ಶಿಕ್ಷಣವಲ್ಲ ಎಂಬುದನ್ನು. ಕೆಲವರು ಈ ವ್ಯತ್ಯಾಸವನ್ನು ಮರೆತುಬಿಡುತ್ತಾರೆ. ಯಾವುದೇ ಭಾಷೆ ಇರಲಿ, ಮಗು ಸುಲಭವಾಗಿ ಕಲಿಯಬಹುದಾಗಿದೆಯೋ. ಅದೇ ಭಾಷೆ ಕಲಿಕೆಯ ಭಾಷೆಯಾಗಿರಬೇಕು. ನಾವು ಮಕ್ಕಳಿಗೆ ಕಲಿಸುವಾಗ ನಾವು ಹೇಳುತ್ತಿರುವುದನ್ನು ಅದು ಅರ್ಥ ಮಾಡಿಕೊಳ್ಳುತ್ತದೆಯೇ?ಅದನ್ನು ಮಗು ಎಷ್ಟು ಸುಲಭವಾಗಿ ಮತ್ತು ಸರಳವಾಗಿ ಗ್ರಹಿಸುತ್ತದೆ? ಮಗುವಿನ ಸಂಪೂರ್ಣ ಶಕ್ತಿ ವಿಷಯ ಅರ್ಥ ಮಾಡಿಕೊಳ್ಳುವ ಬದಲು ಭಾಷೆಯನ್ನು ಅರ್ಥಮಾಡಿಕೊಳ್ಳುವುದರಲ್ಲೇ ವಿನಿಯೋಗವಾಗುತ್ತಿದೆಯೇ? ಇದನ್ನು ಗಮನದಲ್ಲಿಟ್ಟುಕೊಂಡು, ಆರಂಭಿಕ ಶಿಕ್ಷಣವು ಇತರ ಬಹುತೇಕ ದೇಶಗಳಂತೆ ಮಾತೃಭಾಷೆಯಲ್ಲಿರಬೇಕು ಎಂದು ಪ್ರಸ್ತಾಪಿಸಲಾಗಿದೆ
2018 ರ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಮೌಲ್ಯಮಾಪನ –ಪಿಐಎಸ್.ಎ.ಯ ಅಗ್ರ ಶ್ರೇಯಾಂಕದಲ್ಲಿರುವ ಎಸ್ಟೋನಿಯಾ, ಐರ್ಲೆಂಡ್, ಫಿನ್ಲ್ಯಾಂಡ್, ಜಪಾನ್, ದಕ್ಷಿಣ ಕೊರಿಯಾದಂತ ದೇಶಗಳು ತಮ್ಮ ತಮ್ಮ ಮಾತೃಭಾಷೆಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ನೀಡುತ್ತಿವೆ ಎಂಬುದು ನಿಮ್ಮಲ್ಲಿ ಅನೇಕರಿಗೆ ತಿಳಿದಿರುತ್ತದೆ. ಮಕ್ಕಳು ಮನೆಯಲ್ಲಿ ಕೇಳುವ ಭಾಷೆಯಲ್ಲಿ ಕಲಿಕೆ ವೇಗವಾಗಿ ಆಗುವುದು ಸಹಜ. ಇಲ್ಲದಿದ್ದರೆ ಮಕ್ಕಳು ಬೇರೆ ಭಾಷೆಯಲ್ಲಿ ಏನನ್ನಾದರೂ ಕೇಳಿದಾಗ, ಅವರು ಅದನ್ನು ಮೊದಲು ತಮ್ಮ ಭಾಷೆಯಲ್ಲಿ ಭಾಷಾಂತರಿಸಿಕೊಳ್ಳುತ್ತಾರೆ ಮತ್ತು ನಂತರ ಅದನ್ನು ಅರ್ಥಮಾಡಿಕೊಳ್ಳುತ್ತಾರೆ. ಇದು ಮಗುವಿನ ಮನಸ್ಸಿನಲ್ಲಿ ದೊಡ್ಡ ಗೊಂದಲವನ್ನು ಉಂಟುಮಾಡುತ್ತದೆ, ಇದು ತುಂಬಾ ಒತ್ತಡವನ್ನುಂಟು ಉಂಟು ಮಾಡುತ್ತದೆ. ಇದು ಮತ್ತೂ ಒಂದು ಅಂಶವನ್ನು ಒಳಗೊಂಡಿದೆ. ನಮ್ಮ ದೇಶದಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಶಾಲೆಯಲ್ಲಿ ಬೋಧನಾ ಮಾಧ್ಯಮವು ಮಾತೃಭಾಷೆಯ ಹೊರತಾಗಿದ್ದಾಗ, ಹೆಚ್ಚಿನ ಪೋಷಕರು ಮಕ್ಕಳ ಶಿಕ್ಷಣದೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಮಕ್ಕಳಿಗೆ ಕಲಿಯುವುದು ಸುಲಭದ ಪ್ರಕ್ರಿಯೆಯಲ್ಲ. ಬದಲಾಗಿ ಶಿಕ್ಷಣವು ಶಾಲೆಯ ಕರ್ತವ್ಯವಾಗುತ್ತದೆ. ಪೋಷಕರು ಮತ್ತು ಶಾಲೆಯ ನಡುವೆ ಒಂದು ರೇಖೆಯನ್ನು ಎಳೆದಂತಾಗುತ್ತದೆ.
ಹೀಗಾಗಿ, ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ, ಎಷ್ಟು ಸಾಧ್ಯವೋ ಅಷ್ಟು ಐದನೇ ತರಗತಿಯವರೆಗೆ ಸ್ಥಳೀಯ ಭಾಷೆ, ಮಾತೃಭಾಷೆಯ ಶಿಕ್ಷಣ ಮಾಧ್ಯಮಕ್ಕೆ ಒತ್ತು ನೀಡಲಾಗಿದೆ. ಕೆಲವು ಜನರು ಇದರ ಬಗ್ಗೆ ಗೊಂದಲದಲ್ಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯನ್ನು ಹೊರತುಪಡಿಸಿ ಬೇರೆ ಭಾಷೆಗಳನ್ನು ಕಲಿಯಲು ಅಥವಾ ಕಲಿಸಲು ಯಾವುದೇ ನಿರ್ಬಂಧವಿರುವುದಿಲ್ಲ. ಮಕ್ಕಳು ಇಂಗ್ಲಿಷ್ ಜೊತೆಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸಹಾಯಕವಾಗುವ ಎಲ್ಲಾ ವಿದೇಶಿ ಭಾಷೆಗಳನ್ನು ಓದಲು ಮತ್ತು ಕಲಿಯಲು ಸಾಧ್ಯವಾದರೆ ಒಳ್ಳೆಯದು. ಆದರೆ ಅದೇ ಸಮಯದಲ್ಲಿ, ಎಲ್ಲಾ ಭಾರತೀಯ ಭಾಷೆಗಳನ್ನೂ ಉತ್ತೇಜಿಸಬೇಕು, ಇದರಿಂದ ನಮ್ಮ ಯುವಕರು ದೇಶದ ವಿವಿಧ ರಾಜ್ಯಗಳ ಭಾಷೆ ಮತ್ತು ಅವರ ಸಂಸ್ಕೃತಿಯನ್ನು ಅರಿತುಕೊಳ್ಳಬಹುದು. ಪ್ರತಿಯೊಂದು ಪ್ರದೇಶವು ಪರಸ್ಪರ ಬಲವಾದ ಸಂಬಂಧವನ್ನು ಹೊಂದಿರುತ್ತದೆ.
ಸ್ನೇಹಿತರೆ,
ನೀವೆಲ್ಲರೂ ದೇಶದ ಬೋಧಕರಾಗಿದ್ದೀರಿ, ರಾಷ್ಟ್ರೀಯ ಶಿಕ್ಷಣ ನೀತಿಯ ಪಯಣದಲ್ಲಿ ಮುಂಚೂಣಿಯಲ್ಲಿದ್ದೀರಿ. ಅದು ಹೊಸ ರೀತಿಯಲ್ಲಿ ಕಲಿಸುವುದಿರಲಿ, ಅಥವಾ 'ಪ್ರಕಾಶ್' ಮೂಲಕ ಹೊಸ ಪರೀಕ್ಷೆಯಾಗಲಿ, ಶಿಕ್ಷಕರು ಈ ಹೊಸ ಪ್ರಯಾಣದಲ್ಲಿ ವಿದ್ಯಾರ್ಥಿಗಳನ್ನು ಮುನ್ನಡೆಸಬೇಕಾಗುತ್ತದೆ. ಏಕೆಂದರೆ, ವಿಮಾನವು ಎಷ್ಟೇ ಮುಂದುವರಿದಿದ್ದರೂ ಅದನ್ನು ಪೈಲಟ್ ತಾನೇ ಹಾರಿಸುತ್ತಾನೆ. ಆದ್ದರಿಂದ, ಎಲ್ಲಾ ಶಿಕ್ಷಕರು ಸಹ ಬಹಳಷ್ಟು ಹೊಸ ವಿಷಯಗಳನ್ನು ಕಲಿಯಬೇಕಾಗುತ್ತದೆ, ಜೊತೆಗೆ ಬಹಳಷ್ಟು ಹಳೆಯ ವಿಷಯಗಳನ್ನು ಮರೆಯಬೇಕಾಗುತ್ತದೆ. 2022 ರಲ್ಲಿ ಸ್ವಾತಂತ್ರ್ಯದ 75 ವರ್ಷಗಳು ಪೂರ್ಣಗೊಂಡಾಗ, ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯೂ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಓದವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಈ ರಾಷ್ಟ್ರೀಯ ಕಾರ್ಯಾಚರಣೆಯಲ್ಲಿ ಎಲ್ಲಾ ಶಿಕ್ಷಕರು, ಆಡಳಿತಗಾರರು, ಸ್ವಯಂಸೇವಾ ಸಂಸ್ಥೆಗಳು ಮತ್ತು ಪೋಷಕರು ಸಹಕಾರ ನೀಡುವಂತೆ ಕೋರುತ್ತೇನೆ. ಎಲ್ಲ ಶಿಕ್ಷಕರ ಬೆಂಬಲದಿಂದ, ದೇಶ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುತ್ತದೆ ಎಂಬ ವಿಶ್ವಾಸ ನನಗಿದೆ.
ನನ್ನ ಭಾಷಣ ಪರಿಸಮಾಪ್ತಿಗೊಳಿಸುವ ಮುನ್ನ, ನಾನು ಶಿಕ್ಷಕರ ಮೂಲಕ ಮನವಿ ಮಾಡಲು ಬಯಸುತ್ತೇನೆ, ಕರೋನ ಕಾಲದಲ್ಲಿ, ನೀವು ಅನುಸರಿಸಬೇಕಾದ ನಿಯಮಗಳ ಬಗ್ಗೆ ಇತರರಿಗೆ ಸಹ ಪದೇ ಪದೇ ಹೇಳುತ್ತೀರಿ – ಅದು ವ್ಯಕ್ತಿಗತ ಅಂತರವಿರಲಿ, ಮಾಸ್ಕ್ ಅಥವಾ ಮುಖ ಕವಚ ಧರಿಸುವುದಿರಲಿ, ವೃದ್ಧರು ಮತ್ತು ಕುಟುಂಬವನ್ನು ನೋಡಿಕೊಳ್ಳುವುದಾಗಿರಲಿ, ಅಥವಾ ಸ್ವಚ್ಛತೆ ಕಾಪಾಡುವುದಾಗಿರಲಿ. ಸಾಂಕ್ರಾಮಿಕ ರೋಗದ ವಿರುದ್ಧ ನಾವೆಲ್ಲರೂ ಒಗ್ಗೂಡಿ ಈ ಯುದ್ಧದ ಮುಂದಾಳತ್ವ ವಹಿಸಬೇಕಾಗಿದೆ. ಮತ್ತು ಶಿಕ್ಷಕರು ಅದನ್ನು ಬಹಳ ಸುಲಭವಾಗಿ ಮಾಡಬಹುದು. ಅವರು ಈ ಸಂದೇಶಗಳನ್ನು ಪ್ರತಿ ಮನೆಯವರಿಗೂ ಸುಲಭವಾಗಿ ತಲುಪಿಸಬಹುದು. ಮತ್ತು ಒಬ್ಬ ಶಿಕ್ಷಕ ಮಾತನಾಡುವಾಗ, ವಿದ್ಯಾರ್ಥಿಯು ಹೆಚ್ಚಿನ ಆತ್ಮವಿಶ್ವಾಸದಿಂದ ಆಲಿಸುತ್ತಾನೆ. ನೀವು ಹೋಗಿ ಒಬ್ಬ ವಿದ್ಯಾರ್ಥಿಗೆ ಪ್ರಧಾನಮಂತ್ರಿ ಇದನ್ನು ಹೇಳಿದ್ದಾರೆ ಎಂದು ಹೇಳಿದರೆ, ಅವರು ಖಂಡಿತವಾಗಿಯೂ ಹೇಳಿಕೆಯನ್ನು ಪ್ರಶ್ನಿಸುತ್ತಾರೆ ಆದರೆ ಶಿಕ್ಷಕರು ಇದನ್ನು ಹೇಳಿದ್ದಾರೆ ಎಂದು ನೀವು ಹೇಳಿದರೆ, ವಿದ್ಯಾರ್ಥಿಯು ಅದನ್ನು ಎಂದಿಗೂ ಪ್ರಶ್ನಿಸುವುದಿಲ್ಲ ಎಂದು ನಾನು ಖಂಡಿತವಾಗಿಯೂ ವಿಶ್ವಾಸದಿಂದ ಹೇಳಬಲ್ಲೆ. ಅವನು ತನ್ನ ಶಿಕ್ಷಕನ ಮಾತನ್ನು ಪಸರಿಸುತ್ತಾನೆ. ಈ ನಂಬಿಕೆ, ಈ ನಂಬಿಕೆಯನ್ನು ಮಗುವಿನ ಮನಸ್ಸಿನಲ್ಲಿ ಕೆತ್ತಲಾಗಿದೆ. ಇದು ನಿಮ್ಮ ದೊಡ್ಡ ಶಕ್ತಿ ಮತ್ತು ಬಲ. ಮತ್ತು ಈ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ತಲೆಮಾರುಗಳು ಅತ್ಯಂತ ಶ್ರಮವಹಿಸಿ ಅದನ್ನು ಆನುವಂಶಿಕವಾಗಿ ಪಡೆದಿವೆ. ಮತ್ತು ನೀವು ಏನನ್ನಾದರೂ ಆನುವಂಶಿಕವಾಗಿ ಪಡೆದಾಗ, ನಿಮ್ಮ ಜವಾಬ್ದಾರಿಯೂ ಸಹ ಅಗಾಧವಾಗಿ ಹೆಚ್ಚಾಗುತ್ತದೆ.
ನನ್ನ ದೇಶದ ಶಿಕ್ಷಕರು ಭಾರತದ ಉಜ್ವಲ ಭವಿಷ್ಯಕ್ಕಾಗಿ ಇದನ್ನು ಒಂದು ಧ್ಯೇಯವಾಗಿ ಮುಂದಕ್ಕೆ ಕೊಂಡೊಯ್ಯುತ್ತಾರೆ ಮತ್ತು ಅದನ್ನು ಶ್ರದ್ಧೆಯಿಂದ ಮಾಡುತ್ತಾರೆ ಎಂಬ ಖಾತ್ರಿ ನನಗಿದೆ. ದೇಶದ ಪ್ರತಿಯೊಂದು ಮಗು ನಿಮ್ಮ ಶಿಕ್ಷಣವನ್ನು ಸ್ವೀಕರಿಸಲು, ನಿಮ್ಮ ಆದರ್ಶಗಳನ್ನು ಪಾಲಿಸಲು ಮತ್ತು ನಿಮ್ಮ ಉದ್ದೇಶಗಳನ್ನು ಪ್ರತಿಬಿಂಬಿಸಲು ಸಿದ್ಧವಾಗಿದೆ. ಅವನು ಹಗಲು ರಾತ್ರಿ ಶ್ರಮಿಸಲು ಸಿದ್ಧ. ಶಿಕ್ಷಕರು ಅದನ್ನು ಹೇಳಿದ ನಂತರ, ಅವರು ಎಲ್ಲವನ್ನೂ ಸ್ವೀಕರಿಸಲು ಸಿದ್ಧರಾಗಿರುತ್ತಾರೆ. ನನ್ನ ಪ್ರಕಾರ ಪೋಷಕರು, ಶಿಕ್ಷಕರು ಮತ್ತು ಸರ್ಕಾರಿ ಸಂಸ್ಥೆಗಳು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಸೆಪ್ಟೆಂಬರ್ 5 ರಿಂದ, ಎಲ್ಲಾ ವರ್ಗದ ಜನರು, ಈ ಜ್ಞಾನದ ಉತ್ಸವವನ್ನು ಮುಂದುವರೆಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ನನಗೆ ಖಾತ್ರಿಯಾಗಿದೆ. ಈ ಪ್ರಯತ್ನವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.. ನಿಗದಿತ ಸಮಯಕ್ಕಿಂತ ಮೊದಲೇ ಉತ್ತಮ ಫಲಿತಾಂಶಗಳನ್ನು ತರುತ್ತದೆ. ಸಾಮೂಹಿಕ ಕರ್ತವ್ಯದ ಮನೋಭಾವದಿಂದಾಗಿ ಇದನ್ನು ಸಾಧಿಸಲಾಗುತ್ತದೆ.
ಈ ನಂಬಿಕೆಯೊಂದಿಗೆ, ಮತ್ತೊಮ್ಮೆ, ತುಂಬಾ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮಗೆ ಶುಭ ಹಾರೈಸುತ್ತೇನೆ. ಮತ್ತು ನಾನು ಯಾವಾಗಲೂ ಶಿಕ್ಷಕರಿಗೆ ನಮಸ್ಕರಿಸುತ್ತೇನೆ. ಇಂದು, ವರ್ಚುವಲ್ ಮಾಧ್ಯಮದ ಮೂಲಕ ನಿಮ್ಮೆಲ್ಲರಿಗೂ ನಮಸ್ಕರಿಸುವ ಮೂಲಕ, ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ.
ತುಂಬಾ ತುಂಬಾ ಧನ್ಯವಾದಗಳು!!!