Quoteʻಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪ್ರಶಸ್ತಿʼ ಪುರಸ್ಕೃತರನ್ನು ಸತ್ಕರಿಸಿದರು
Quote"ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪಗಳ ನಂತರ, ಭಾರತದ ವಿಪತ್ತು ನಿರ್ವಹಣಾ ಪ್ರಯತ್ನಗಳ ಪಾತ್ರವನ್ನು ಜಗತ್ತು ಗುರುತಿಸಿದೆ ಮತ್ತು ಶ್ಲಾಘಿಸಿದೆ"
Quote"ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲವನ್ನು ಭಾರತ ವಿಸ್ತರಿಸಿದ ರೀತಿಯಿಂದ ದೇಶಕ್ಕೆ ಉತ್ತಮ ಸೇವೆ ದೊರೆತಿದೆ"
Quote"ನಾವು ಸ್ಥಳೀಯ ಮಟ್ಟದಲ್ಲಿ ವಸತಿ ಅಥವಾ ನಗರ ಯೋಜನೆಯ ಮಾದರಿಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಈ ಕ್ಷೇತ್ರಗಳಲ್ಲಿ ಸುಧಾರಿತ ತಂತ್ರಜ್ಞಾನದ ಬಳಕೆಯನ್ನು ನಾವು ಪ್ರೋತ್ಸಾಹಿಸಬೇಕಾಗಿದೆ.
Quote"ವಿಪತ್ತು ನಿರ್ವಹಣೆಯನ್ನು ಬಲಪಡಿಸುವ ಎರಡು ಪ್ರಮುಖ ಅಂಶಗಳೆಂದರೆ ಗುರುತಿಸುವಿಕೆ ಮತ್ತು ಸುಧಾರಣೆ"
Quote"ಸ್ಥಳೀಯ ಭಾಗವಹಿಸುವಿಕೆಯ ಮೂಲಕ ಸ್ಥಳೀಯ ನಿರ್ಮಾಣಗಳಲ್ಲಿ ಸುದೃಢತೆ ಮಂತ್ರವನ್ನು ಅನುಸರಿಸುವ ಮೂಲಕ ಮಾತ್ರ ನೀವು ಯಶಸ್ಸನ್ನು ಪಡೆಯಬಲ್ಲಿರಿ"
Quote"ಮನೆಗಳ ವಯಸ್ಸು, ಒಳಚರಂಡಿ, ನಮ್ಮ ವಿದ್ಯುತ್ ಮತ್ತು ನೀರಿನ ಮೂಲಸೌಕರ್ಯಗಳ ಸುದೃಢತೆ ಅಂಶಗಳ ಬಗ್ಗೆ ಜ್ಞಾನವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ"
Quote"ಆಂಬ್ಯುಲೆನ್ಸ್ ಜಾಲವನ್ನು ಭವಿಷ್ಯ ಸನ್ನದ್ಧಗೊಳಿಸಲು ʻಕೃತಕ ಬುದ್ಧಿಮತ್ತೆʼ(ಎಐ), 5ಜಿ ಮತ್ತು ʻಇಂಟರ್ನೆಟ್ ಆಫ್ ಥಿಂಗ್ಸ್ʼ(ಐಒಟಿ) ಬಳಕೆಯನ್ನು ಅನ್ವೇಷಿಸಿ"
Quote"ಸಂಪ್ರದಾಯ ಮತ್ತು ತಂತ್ರಜ್ಞಾನವು ನಮ್ಮ ಶಕ್ತಿಯಾಗಿದೆ, ಮತ್ತು ಈ ಶಕ್ತಿಯೊಂದಿಗೆ, ನಾವು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ವಿಪತ್ತು ಸುದೃಢತೆಗೆ ಸಂಬಂಧಿಸಿದ ಅತ್ಯುತ್ತಮ ಮಾದರಿಯನ್ನು ಸಿದ್ಧಪಡಿಸಬಹುದು"

ಮೊದಲನೆಯದಾಗಿ, ವಿಪತ್ತು ಪುನಶ್ಚೇತನ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರನ್ನು ನಾನು ಅಭಿನಂದಿಸುತ್ತೇನೆ, ಏಕೆಂದರೆ ಇದು ಅನೇಕ ಬಾರಿ ನಿಮ್ಮ ಸ್ವಂತ ಜೀವವನ್ನು ಪಣಕ್ಕಿಟ್ಟು ಸಂತ್ರಸ್ತರ ಜೀವಗಳನ್ನು ಉಳಿಸುವ ಅದ್ಭುತ ಕೆಲಸವನ್ನು ಮಾಡುತ್ತದೆ. ಇತ್ತೀಚೆಗೆ, ಟರ್ಕಿ ಮತ್ತು ಸಿರಿಯಾದಲ್ಲಿ ಭಾರತೀಯ ತಂಡದ ಪ್ರಯತ್ನವನ್ನು ಇಡೀ ಜಗತ್ತು ಮೆಚ್ಚಿದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ಭಾರತವು ತನ್ನ ಮಾನವ ಸಂಪನ್ಮೂಲ, ಪರಿಹಾರ ಮತ್ತು ಪಾರುಗಾಣಿಕೆಗೆ ಸಂಬಂಧಿಸಿದ ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವ ರೀತಿಯು ದೇಶದಲ್ಲಿ ವಿವಿಧ ರೀತಿಯ ವಿಪತ್ತುಗಳ ಸಮಯದಲ್ಲಿ ಅನೇಕ ಜನರ ಜೀವಗಳನ್ನು ಉಳಿಸಲು ಸಹಾಯ ಮಾಡಿದೆ. ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ವ್ಯವಸ್ಥೆಯನ್ನು ಬಲಪಡಿಸಬೇಕು ಮತ್ತು ಪ್ರೋತ್ಸಾಹಿಸಬೇಕು.  ದೇಶಾದ್ಯಂತ ಆರೋಗ್ಯಕರ ಸ್ಪರ್ಧೆಯ ವಾತಾವರಣ ಸೃಷ್ಟಿಸಬೇಕು. ಹಾಗಾಗಿ ಈ ಮಹತ್ತರ ಕಾರ್ಯಕ್ಕೆ ವಿಶೇಷ ಪ್ರಶಸ್ತಿಯನ್ನೂ ಘೋಷಿಸಲಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪುರಸ್ಕಾರವನ್ನು ಇಂದು ಇಲ್ಲಿ 2 ಸಂಸ್ಥೆಗಳಿಗೆ ನೀಡಲಾಗಿದೆ. ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಚಂಡಮಾರುತಗಳು ಮತ್ತು ಸುನಾಮಿಯಂತಹ ವಿವಿಧ ವಿಪತ್ತುಗಳ ಸಮಯದಲ್ಲಿ ಅತ್ಯುತ್ತಮವಾದ ಕೆಲಸ ಮಾಡುತ್ತಿದೆ. ಅದೇ ರೀತಿ, ಮಿಜೋರಾಂನ ಲುಂಗ್ಲೈ ಅಗ್ನಿಶಾಮಕ ಠಾಣೆಯು ಕಾಡ್ಗಿಚ್ಚು ನಂದಿಸಲು, ಇಡೀ ಪ್ರದೇಶವನ್ನು ಉಳಿಸಲು ಮತ್ತು ಬೆಂಕಿ ಹರಡುವುದನ್ನು ತಡೆಯಲು ಅವಿರತವಾಗಿ ಶ್ರಮಿಸಿತು. ಈ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಸ್ನೇಹಿತರನ್ನು ನಾನು ವಿಶೇಷವಾಗಿ ಅಭಿನಂದಿಸುತ್ತೇನೆ.

ಸ್ನೇಹಿತರೆ,

ಈ ಅಧಿವೇಶನದ ಘೋಷವಾಕ್ಯ ಅಥವಾ ವಿಷಯವು - "ಬದಲಾಗುತ್ತಿರುವ ಹವಾಮಾನದಲ್ಲಿ ಸ್ಥಳೀಯ ಪುನಶ್ಚೇತನ (ರೆಸಿಲಿಯನ್ಸ್) ನಿರ್ಮಿಸುವುದು". ಈ ವಿಷಯದೊಂದಿಗೆ ಭಾರತಕ್ಕೆ ಬಾಂಧವ್ಯವಿದ್ದು ಒಂದು ರೀತಿಯಲ್ಲಿ ಸಾಕಷ್ಟು ಹಳೆಯದಾಗಿದೆ. ಏಕೆಂದರೆ ಇದು ನಮ್ಮ ಪ್ರಾಚೀನ ಸಂಪ್ರದಾಯಗಳ ಅವಿಭಾಜ್ಯ ಅಂಗವಾಗಿದೆ. ಇಂದಿಗೂ ನಾವು ನಮ್ಮ ಬಾವಿಗಳು, ಮೆಟ್ಟಿಲು ಬಾವಿಗಳು, ಜಲಾಶಯಗಳು, ಸ್ಥಳೀಯ ವಾಸ್ತುಶಿಲ್ಪ ಅಥವಾ ಪ್ರಾಚೀನ ನಗರಗಳನ್ನು ನೋಡಿದಾಗ, ಈ ಅಂಶ ಸ್ಪಷ್ಟವಾಗಿ ಗೋಚರಿಸುತ್ತದೆ. ಭಾರತದಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ವ್ಯವಸ್ಥೆಯು ಯಾವಾಗಲೂ ಸ್ಥಳೀಯವಾಗಿದೆ, ಪರಿಹಾರಗಳು ಸಹ ಸ್ಥಳೀಯವಾಗಿವೆ,  ತಂತ್ರಜ್ಞಾನವೂ ಸ್ಥಳೀಯವಾಗಿದೆ. ಈಗ ಕಛ್ ಜನರು ವಾಸಿಸುವ ಮನೆಗಳನ್ನು ಭುಂಗಾ ಎಂದು ಕರೆಯಲಾಗುತ್ತದೆ. ಇವು ಮಣ್ಣಿನ ಮನೆಗಳು. ಈ ಶತಮಾನದ ಆರಂಭದಲ್ಲಿ ಸಂಭವಿಸಿದ ಭಾರಿ ಭೂಕಂಪದ ಕೇಂದ್ರ ಬಿಂದು ಕಚ್ ಎಂಬುದು ನಮಗೆ ತಿಳಿದಿದೆ. ಆದರೆ ಈ ಭುಂಗಾ ಮನೆಗಳ ಮೇಲೆ ಭೂಕಂಪನದ ಪ್ರಭಾವ ಇರಲಿಲ್ಲ. ಬಹುಶಃ ಒಂದು ಅಥವಾ ಎರಡು ಸ್ಥಳಗಳಲ್ಲಿ ಸಣ್ಣ ಹಾನಿ ಸಂಭವಿಸಿದೆ, ಆದರೆ ಅಷ್ಟೇ ನಿಸ್ಸಂಶಯವಾಗಿ, ಅದರಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ಪಾಠಗಳಿವೆ. ಹೊಸ ತಂತ್ರಜ್ಞಾನದ ಪ್ರಕಾರ ನಾವು ಸ್ಥಳೀಯ ಮಟ್ಟದಲ್ಲಿ ವಸತಿ ಅಥವಾ ನಗರ ಯೋಜನೆಗಳ ಮಾದರಿಗಳನ್ನು ವಿಕಸನಗೊಳಿಸಬಹುದಲ್ಲವೇ? ಅದು ಸ್ಥಳೀಯ ನಿರ್ಮಾಣ ಸಾಮಗ್ರಿಯಾಗಲಿ ಅಥವಾ ನಿರ್ಮಾಣ ತಂತ್ರಜ್ಞಾನವಾಗಲಿ, ಇಂದಿನ ತಂತ್ರಜ್ಞಾನದೊಂದಿಗೆ ಪುಷ್ಟೀಕರಿಸುವುದು ಇಂದಿನ ಅಗತ್ಯವಾಗಿದೆ. ನಾವು ಭವಿಷ್ಯದ ತಂತ್ರಜ್ಞಾನವನ್ನು ಸ್ಥಳೀಯ ಪುನಶ್ಚೇತನದ ಉದಾಹರಣೆಗಳೊಂದಿಗೆ ಸಂಪರ್ಕ ಸಲ್ಪಿಸಿದಾಗ ಮಾತ್ರ ನಾವು ವಿಪತ್ತು ನಿರ್ವಹಣೆಯಲ್ಲಿ ಪುನಶ್ಚೇತನದ ದಿಕ್ಕಿನಲ್ಲಿ ಉತ್ತಮಗೊಳ್ಳಲು ಸಾಧ್ಯವಾಗುತ್ತದೆ.

|

ಸ್ನೇಹಿತರೆ,

ಹಿಂದಿನ ಜೀವನಶೈಲಿ ಅತ್ಯಂತ ಸರಳವಾಗಿದ್ದು, ಅತಿವೃಷ್ಟಿ, ಅನಾವೃಷ್ಟಿಯಂತಹ ಅನಾಹುತಗಳನ್ನು ಹೇಗೆ ಎದುರಿಸಬೇಕೆಂಬ ಅನುಭವ ನಮಗೆ ಕಲಿಸಿತ್ತು. ಆದ್ದರಿಂದಲೇ ಸಹಜವಾಗಿಯೇ ಸರ್ಕಾರಗಳು ನಮ್ಮ ವಿಪತ್ತು ಪರಿಹಾರವನ್ನು ಕೃಷಿ ಇಲಾಖೆಯೊಂದಿಗೆ ಜೋಡಿಸಿವೆ. ಭೂಕಂಪದಂತಹ ಗಂಭೀರ ವಿಪತ್ತುಗಳು ಉಂಟಾದಾಗಲೂ, ಅಂತಹ ವಿಪತ್ತುಗಳನ್ನು ಸ್ಥಳೀಯ ಸಂಪನ್ಮೂಲಗಳಿಂದ ಮಾತ್ರ ನಿಭಾಯಿಸಲಾಯಿತು. ಈಗ ಜಗತ್ತು ಚಿಕ್ಕದಾಗುತ್ತಿದೆ. ಪರಸ್ಪರರ ಅನುಭವಗಳಿಂದ ಕಲಿಯುವ ಮೂಲಕ ನಿರ್ಮಾಣ ತಂತ್ರಗಳಲ್ಲಿಯೂ ಹೊಸ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಆದರೆ ಅದೇ ಸಮಯದಲ್ಲಿ, ವಿಪತ್ತುಗಳು ಸಹ ಏಕಾಏಕಿ ಹೆಚ್ಚುತ್ತಿದೆ. ಹಿಂದಿನ ದಿನಗಳಲ್ಲಿ, ಒಬ್ಬನೇ ವೈದ್ಯರಾಜ್ (ವೈದ್ಯರು) ಇಡೀ ಗ್ರಾಮದಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡುತ್ತಿದ್ದರು ಮತ್ತು ಇಡೀ ಗ್ರಾಮವು ಆರೋಗ್ಯವಾಗಿರುತ್ತಿತ್ತು. ಈಗ ಒಂದೊಂದು ರೋಗಕ್ಕೂ ಬೇರೆ ಬೇರೆ ವೈದ್ಯರಿದ್ದಾರೆ. ಅದೇ ರೀತಿ ವಿಪತ್ತಿಗೂ ಕ್ರಿಯಾಶೀಲ ವ್ಯವಸ್ಥೆ ರೂಪಿಸಬೇಕು. ಉದಾಹರಣೆಗೆ, ಪ್ರವಾಹದ ಮಟ್ಟ ಏನೆಂದು ಕಳೆದ 100 ವರ್ಷಗಳ ದುರಂತದ ಅಧ್ಯಯನದಿಂದ ಗುರುತಿಸಬಹುದು, ಅದರ ಪ್ರಕಾರ ನಿರ್ಮಾಣ ಕಾರ್ಯ ಕೈಗೊಳ್ಳಬಹುದು. ಕಾಲಾನಂತರದಲ್ಲಿ, ಈ ನಿಯತಾಂಕಗಳನ್ನು ಸಹ ಪರಿಶೀಲಿಸಬೇಕು, ಅದು ಸಾಮಗ್ರಿಗಳು ಅಥವಾ ವ್ಯವಸ್ಥೆಗಳೇ ಇರಬಹುದು.

ಸ್ನೇಹಿತರೆ,

ವಿಪತ್ತು ನಿರ್ವಹಣೆಯನ್ನು ಬಲಪಡಿಸಲು ಗುರುತಿಸುವಿಕೆ ಮತ್ತು ಸುಧಾರಣೆ ಬಹಳ ಮುಖ್ಯ. ಗುರುತಿಸುವಿಕೆ ಎಂದರೆ ವಿಪತ್ತಿನ ಸಾಧ್ಯತೆ ಎಲ್ಲಿದೆ ಮತ್ತು ಭವಿಷ್ಯದಲ್ಲಿ ಅದು ಹೇಗೆ ಸಂಭವಿಸಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳುವುದು? ಸುಧಾರಣೆ ಎಂದರೆ ದುರಂತದ ಸಾಧ್ಯತೆಯನ್ನು ಕಡಿಮೆ ಮಾಡುವ ಇಂತಹ ವ್ಯವಸ್ಥೆಯನ್ನು ನಾವು ಅಭಿವೃದ್ಧಿಪಡಿಸಬೇಕು. ದುರಂತದ ಅಪಾಯವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ವ್ಯವಸ್ಥೆಯನ್ನು ಸುಧಾರಿಸುವುದು, ಸಾಧ್ಯವಾದಷ್ಟು ಬೇಗ ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವುದು ಮತ್ತು ಇದಕ್ಕಾಗಿ ಶಾರ್ಟ್‌ಕಟ್ ವಿಧಾನದ ಬದಲಿಗೆ ದೀರ್ಘಾವಧಿಯ ಚಿಂತನೆಯ ಅಗತ್ಯವಿದೆ. ಈಗ ನಾವು ಚಂಡಮಾರುತಗಳ ಬಗ್ಗೆ ಮಾತನಾಡುವುದಾದರೆ, ಚಂಡಮಾರುತ ಅಪ್ಪಳಿಸಿದ ಭಾರತದ ಪರಿಸ್ಥಿತಿಯನ್ನು ನೋಡಿದರೆ, ದೇಶದಲ್ಲಿ ಲಕ್ಷಾಂತರ ಜನರು ಅಕಾಲಿಕವಾಗಿ ಸಾಯುವ ಸಮಯವಿತ್ತು. ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಇದು ಅನೇಕ ಬಾರಿ ನಡೆಯುವುದನ್ನು ನಾವು ನೋಡಿದ್ದೇವೆ. ಆದರೆ ಕಾಲ ಬದಲಾಗಿದೆ, ತಂತ್ರಗಳು ಬದಲಾಗಿವೆ; ಸಿದ್ಧತೆಗಳು ಸುಧಾರಿಸಿವೆ ಮತ್ತು ಚಂಡಮಾರುತಗಳನ್ನು ಎದುರಿಸುವ ಭಾರತದ ಸಾಮರ್ಥ್ಯವನ್ನು ಸಹ ಹೆಚ್ಚಿಸಲಾಗಿದೆ. ಈಗ ಚಂಡಮಾರುತ ಅಪ್ಪಳಿಸಿದಾಗ ಕನಿಷ್ಠ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗುತ್ತದೆ. ನೈಸರ್ಗಿಕ ವಿಕೋಪಗಳನ್ನು ತಡೆಯಲು ಸಾಧ್ಯವಿಲ್ಲ ನಿಜ, ಆದರೆ ಆ ವಿಪತ್ತಿನಿಂದ ಆಗುವ ಹಾನಿಯನ್ನು ಕಡಿಮೆ ಮಾಡಲು ನಾವು ಖಂಡಿತವಾಗಿಯೂ ವ್ಯವಸ್ಥೆ ಮಾಡಬಹುದು. ಆದ್ದರಿಂದ, ನಾವು ಸ್ಪಂದನಾತ್ಮಕವಾಗಿರುವುದಕ್ಕಿಂತ ಪೂರ್ವಭಾವಿಯಾಗಿರಬೇಕಾದ್ದು ಅವಶ್ಯಕ.

ಸ್ನೇಹಿತರೆ,

ಪೂರ್ವಭಾವಿಯಾಗಿ ನಮ್ಮ ದೇಶದಲ್ಲಿ ಈ ಹಿಂದೆ ಯಾವ ಪರಿಸ್ಥಿತಿ ಇತ್ತು ಮತ್ತು ಈಗ ಪರಿಸ್ಥಿತಿ ಏನೆಂಬುದನ್ನು ನಾನು ಉಲ್ಲೇಖಿಸಲು ಬಯಸುತ್ತೇನೆ. ಭಾರತದಲ್ಲಿ ಸ್ವಾತಂತ್ರ್ಯ ಬಂದು 5 ದಶಕ ಕಳೆದರೂ ಅರ್ಧ ಶತಮಾನ ಕಳೆದರೂ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ಕಾನೂನು ಇರಲಿಲ್ಲ. 2001ರಲ್ಲಿ ಕಚ್ ಭೂಕಂಪದ ನಂತರ, ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಗುಜರಾತ್. ಈ ಕಾಯಿದೆಯ ಆಧಾರದ ಮೇಲೆ 2005ರಲ್ಲಿ ಕೇಂದ್ರ ಸರ್ಕಾರ ವಿಪತ್ತು ನಿರ್ವಹಣಾ ಕಾಯ್ದೆಯನ್ನೂ ಜಾರಿಗೆ ತಂದಿತು. ಇದಾದ ನಂತರವೇ ಭಾರತದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಚನೆಯಾಯಿತು.

|

ಸ್ನೇಹಿತರೆ,

ನಮ್ಮ ಸ್ಥಳೀಯ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಾವು ವಿಪತ್ತು ನಿರ್ವಹಣಾ ಆಡಳಿತವನ್ನು ಬಲಪಡಿಸಬೇಕಾಗಿದೆ. ಅನಾಹುತ ಸಂಭವಿಸಿದಾಗ ಮಾತ್ರ ನಗರ ಸ್ಥಳೀಯ ಸಂಸ್ಥೆಗಳು ಸ್ಪಂದಿಸಿದರೆ ಸಾಲದು. ನಾವು ಯೋಜನೆಯನ್ನು ಸಾಂಸ್ಥಿಕಗೊಳಿಸಬೇಕು. ನಾವು ಸ್ಥಳೀಯ ಯೋಜನೆಯನ್ನು ಪರಿಶೀಲಿಸಬೇಕು. ವಿಪತ್ತು ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡಗಳ ನಿರ್ಮಾಣ ಮತ್ತು ಹೊಸ ಮೂಲಸೌಕರ್ಯ ಯೋಜನೆಗಳಿಗೆ ನಾವು ಹೊಸ ಮಾರ್ಗಸೂಚಿಗಳನ್ನು ರೂಪಿಸಬೇಕಾಗಿದೆ. ಒಂದು ರೀತಿಯಲ್ಲಿ, ಸಂಪೂರ್ಣ ವ್ಯವಸ್ಥೆಯ ಕೂಲಂಕಷ ಪರೀಕ್ಷೆಯ ಅಗತ್ಯವಿದೆ. ಇದಕ್ಕಾಗಿ ನಾವು 2 ಹಂತಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಮೊದಲನೆಯದಾಗಿ, ಇಲ್ಲಿನ ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ತಜ್ಞರು ಸಾರ್ವಜನಿಕ ಸಹಭಾಗಿತ್ವಕ್ಕೆ ಗರಿಷ್ಠ ಗಮನ ನೀಡಬೇಕು. ಸ್ಥಳೀಯ ಭಾಗವಹಿಸುವಿಕೆಯೊಂದಿಗೆ ಭಾರತವು ಹೇಗೆ ಪ್ರಮುಖ ಗುರಿಗಳನ್ನು ಸಾಧಿಸುತ್ತಿದೆ ಎಂಬುದನ್ನು ನಾವೆಲ್ಲರೂ ನೋಡಬಹುದು. ಆದ್ದರಿಂದ, ವಿಪತ್ತು ನಿರ್ವಹಣೆಗೆ ಬಂದಾಗ, ಸಾರ್ವಜನಿಕ ಸಹಭಾಗಿತ್ವವಿಲ್ಲದೆ ಅದು ಸಾಧ್ಯವಿಲ್ಲ. 'ಸ್ಥಳೀಯ ಸಹಭಾಗಿತ್ವದಿಂದ ಸ್ಥಳೀಯ ಪುನಶ್ಚೇತನ' ಎಂಬ ಮಂತ್ರ ಅನುಸರಿಸುವ ಮೂಲಕ ಮಾತ್ರ ನೀವು ಯಶಸ್ಸನ್ನು ಸಾಧಿಸಬಹುದು. ಭೂಕಂಪ, ಚಂಡಮಾರುತ, ಬೆಂಕಿ ಮತ್ತು ಇತರ ವಿಪತ್ತುಗಳಿಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ನಾಗರಿಕರಿಗೆ ಅರಿವು ಮೂಡಿಸಲು ಇದು ನಿರಂತರ ಪ್ರಕ್ರಿಯೆಯಾಗಿರಬೇಕು. ಸರಿಯಾದ ನಿಯಮಗಳು, ಕಾಯಿದೆಗಳು ಮತ್ತು ಕರ್ತವ್ಯಗಳಿಗೆ ಸಂಬಂಧಿಸಿದ ಈ ಎಲ್ಲ ವಿಷಯಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುವುದು ಅವಶ್ಯಕ. ನಮ್ಮ ಯುವ ಸ್ನೇಹಿತರು, ಯುವ ಮಂಡಲ, ಸಖಿ ಮಂಡಲ ಮತ್ತು ಇತರ ಗುಂಪುಗಳಿಗೆ ಗ್ರಾಮ, ನೆರೆಹೊರೆ ಮತ್ತು ಸ್ಥಳೀಯ ಮಟ್ಟದಲ್ಲಿ ನಾವು ಪರಿಹಾರ ಮತ್ತು ರಕ್ಷಣಾ ತರಬೇತಿಯನ್ನು ನೀಡಬೇಕಾಗಿದೆ. ಡೇಟಾ ಬ್ಯಾಂಕ್ ರಚಿಸುವ ಮೂಲಕ ನಾವು ಆಪ್ತ ಮಿತ್ರ, ಎನ್‌ಸಿಸಿ-ಎನ್‌ಎಸ್‌ಎಸ್, ಮಾಜಿ ಸೈನಿಕರ ಶಕ್ತಿಯನ್ನು ಹೇಗೆ ಬಳಸಬಹುದು ಮತ್ತು ತ್ವರಿತ ಸಂವಹನ ನಡೆಸುವ ವ್ಯವಸ್ಥೆಗಳನ್ನು ನಾವು ಮಾಡಬೇಕಾಗಿದೆ. ಸಮುದಾಯ ಕೇಂದ್ರಗಳಲ್ಲಿ ಮೊದಲ ಪ್ರತಿಕ್ರಿಯೆಗಾಗಿ ಅಗತ್ಯ ಸಲಕರಣೆಗಳ ವ್ಯವಸ್ಥೆ ಮತ್ತು ಅವುಗಳನ್ನು ನಿರ್ವಹಿಸುವ ತರಬೇತಿ ಕೂಡ ಬಹಳ ಮಹತ್ವದ್ದಾಗಿದೆ. ನನ್ನ ಅನುಭವದ ಪ್ರಕಾರ, ಕೆಲವೊಮ್ಮೆ ಡೇಟಾ ಬ್ಯಾಂಕ್ ಕೂಡ ಚೆನ್ನಾಗಿ ಕೆಲಸ ಮಾಡುತ್ತದೆ. ಗುಜರಾತಿನ ಖೇಡಾ ಜಿಲ್ಲೆಯಲ್ಲಿ 5-7 ವರ್ಷಗಳಿಗೊಮ್ಮೆ ಪ್ರವಾಹ ಬರುತ್ತಿದ್ದ ನದಿ ಇದೆ. ಒಮ್ಮೆ ವರ್ಷದಲ್ಲಿ 5 ಬಾರಿ ಪ್ರವಾಹ ಸಂಭವಿಸಿದೆ, ಆದರೆ ಆ ಸಮಯದಲ್ಲಿ ಈ ದುರಂತವನ್ನು ನಿರ್ವಹಿಸಲು ಈಗಾಗಲೇ ಸಾಕಷ್ಟು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಾಗಾಗಿ ಪ್ರತಿ ಹಳ್ಳಿಯಲ್ಲೂ ಮೊಬೈಲ್ ಫೋನ್ ಲಭ್ಯವಿದೆ. ಆದರೆ ಹಿಂದಿನ ಸಮಯದಲ್ಲಿ ಯಾವುದೇ ಸ್ಥಳೀಯ ಭಾಷೆಯಲ್ಲಿ ಸಂದೇಶ ಕಳುಹಿಸುವ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಗುಜರಾತಿಯನ್ನು ರೋಮನ್ ಲಿಪಿಯಲ್ಲಿಯೇ ಬರೆದು ಹಳ್ಳಿಯ ಜನರಿಗೆ - "ಇಷ್ಟು ಗಂಟೆಗಳ ನಂತರ ಪ್ರವಾಹದ ಸಾಧ್ಯತೆ ಇದೆ" ಎಂದು ಸಂದೇಶಗಳನ್ನು ಕಳುಹಿಸುತ್ತಿದ್ದೆವು. 5 ಜಲಪ್ರಳಯಗಳ ನಂತರವೂ ಒಂದು ಪ್ರಾಣಿ ಕೂಡ ಸತ್ತಿಲ್ಲ ಎಂದು ನನಗೆ ಸ್ಪಷ್ಟವಾಗಿ ನೆನಪಿದೆ, ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿದ ಕಾರಣ ಯಾವುದೇ ವ್ಯಕ್ತಿ ಅಥವಾ ಪ್ರಾಣಿ ಸಾವನ್ನಪ್ಪಿಲ್ಲ. ಆದ್ದರಿಂದ ನಾವು ಈ ವ್ಯವಸ್ಥೆಗಳನ್ನು ಹೇಗೆ ಬಳಸುತ್ತೇವೆ? ಸಮಯಕ್ಕೆ ಸರಿಯಾಗಿ ರಕ್ಷಣಾ ಮತ್ತು ಪರಿಹಾರ ಕಾರ್ಯ ಆರಂಭವಾದರೆ ಪ್ರಾಣಹಾನಿ ಕಡಿಮೆ ಮಾಡಬಹುದು. ಎರಡನೆಯದಾಗಿ, ತಂತ್ರಜ್ಞಾನ ಬಳಸಿಕೊಂಡು, ನಾವು ಪ್ರತಿ ಮನೆ ಮತ್ತು ಪ್ರತಿ ಬೀದಿಯ ನೈಜ ಸಮಯದ ನೋಂದಣಿ ಮತ್ತು ಮೇಲ್ವಿಚಾರಣೆಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು. ಅದು ಯಾವ ಮನೆ? ಇದು ಎಷ್ಟು ಹಳೆಯದು? ಅದು ಯಾವ ಬೀದಿ? ಒಳಚರಂಡಿಯ ಸ್ಥಿತಿ ಏನು? ವಿದ್ಯುತ್, ನೀರು ಮುಂತಾದ ನಮ್ಮ ಮೂಲಸೌಕರ್ಯಗಳ ಪರಿಸ್ಥಿತಿ ಎಂತಹುದು? ನಾನು ಕೆಲವು ದಿನಗಳ ಹಿಂದೆ ಸಭೆಯೊಂದರಲ್ಲಿದ್ದೆ. ಆ ಸಭೆಯ ವಿಷಯ 'ಉಷ್ಣ ಅಲೆ'. ಕಳೆದ ಬಾರಿ ನಾವು ಆಸ್ಪತ್ರೆಗಳಲ್ಲಿ ಎರಡು ಅಗ್ನಿ ಅವಘಡ ಸಂಬಂಧಿಸಿದುದನ್ನು ನೋಡಿದ್ದೇವೆ, ಅದು ತುಂಬಾ ನೋವಿನಿಂದ ಕೂಡಿತ್ತು.  ರೋಗಿಗಳು ಅಸಹಾಯಕರಾಗಿದ್ದರು. ಈಗ ಇಡೀ ಆಸ್ಪತ್ರೆಯ ವ್ಯವಸ್ಥೆಯನ್ನು ಒಮ್ಮೆ ಹತ್ತಿರದಿಂದ ನೋಡಿದರೆ ನಾವು ಬಹುಶಃ ದೊಡ್ಡ ಅಪಘಾತವನ್ನು ತಡೆಯಬಹುದು. ಅಲ್ಲಿನ ವ್ಯವಸ್ಥೆಗಳ ಬಗ್ಗೆ ನಾವು ಹೆಚ್ಚು ನಿಖರವಾದ ಮಾಹಿತಿಯನ್ನು ಹೊಂದಿದ್ದೇವೆ, ನಾವು ಉತ್ತಮ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ನಾನು ನಂಬುತ್ತೇನೆ.

ಸ್ನೇಹಿತರೆ,

ಇತ್ತೀಚಿನ ದಿನಗಳಲ್ಲಿ ದಟ್ಟವಾದ ನಗರ ಪ್ರದೇಶಗಳಲ್ಲಿ ಬೆಂಕಿ ಏಕಾಏಕಿ ಸಂಭವಿಸುವ ಘಟನೆಗಳು ಸಾಕಷ್ಟು ಹೆಚ್ಚಾಗಿರುವುದನ್ನು ನಾವು ನೋಡಬಹುದು. ಶಾಖ ಹೆಚ್ಚಾದಾಗ, ಕೆಲವೊಮ್ಮೆ ಆಸ್ಪತ್ರೆಯಲ್ಲಿ, ಕಾರ್ಖಾನೆಯಲ್ಲಿ, ಹೋಟೆಲ್‌ನಲ್ಲಿ ಅಥವಾ ಬಹುಮಹಡಿ ವಸತಿ ಕಟ್ಟಡದಲ್ಲಿ ಭಾರಿ ಬೆಂಕಿ ಸಂಭವಿಸುತ್ತದೆ. ಇದನ್ನು ಎದುರಿಸಲು ಮಾನವ ಸಂಪನ್ಮೂಲ ಅಭಿವೃದ್ಧಿಯಾಗಲಿ, ತಂತ್ರಜ್ಞಾನವಾಗಲಿ, ಸಂಪನ್ಮೂಲಗಳಾಗಲಿ, ವ್ಯವಸ್ಥೆಯಾಗಲಿ ನಾವು ಅತ್ಯಂತ ವ್ಯವಸ್ಥಿತವಾಗಿ ಕೆಲಸ ಮಾಡಬೇಕು. ನಾವು ಸಂಘಟಿತ 'ಸರ್ಕಾರದ ಸಂಪೂರ್ಣ' ವಿಧಾನದೊಂದಿಗೆ ಕೆಲಸ ಮಾಡಬೇಕು. ಜನನಿಬಿಡ ಪ್ರದೇಶಗಳನ್ನು ಕಾರಿನಲ್ಲಿ ತಲುಪಲು ಕಷ್ಟವಾಗುತ್ತದೆ, ಬೆಂಕಿ ನಂದಿಸಲು ಅಲ್ಲಿಗೆ ತಲುಪುವುದು ದೊಡ್ಡ ಸವಾಲಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಎತ್ತರದ ಕಟ್ಟಡಗಳಲ್ಲಿ ಬೆಂಕಿ ನಂದಿಸಲು ನಾವು ನಮ್ಮ ಅಗ್ನಿಶಾಮಕ ಸಿಬ್ಬಂದಿಯ ಕೌಶಲ್ಯವನ್ನು ನಿರಂತರವಾಗಿ ಹೆಚ್ಚಿಸಬೇಕು. ಈ ಕೈಗಾರಿಕಾ ಬೆಂಕಿ ನಂದಿಸಲು ಸಾಕಷ್ಟು ಸಂಪನ್ಮೂಲಗಳಿವೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು.

|

ಸ್ನೇಹಿತರೆ,

ಈ ವಿಪತ್ತು ನಿರ್ವಹಣಾ ಪ್ರಯತ್ನಗಳ ಮಧ್ಯೆ, ಸ್ಥಳೀಯ ಮಟ್ಟದಲ್ಲಿ ಕೌಶಲ್ಯ ಮತ್ತು ಉಪಕರಣಗಳನ್ನು ಆಧುನೀಕರಿಸುವುದು ಬಹಳ ಮುಖ್ಯ. ಉದಾಹರಣೆಗೆ, ಇತ್ತೀಚಿನ ದಿನಗಳಲ್ಲಿ ಕಾಡಿನ ತ್ಯಾಜ್ಯವನ್ನು ಜೈವಿಕ ಇಂಧನವನ್ನಾಗಿ ಪರಿವರ್ತಿಸುವ ಅನೇಕ ಉಪಕರಣಗಳಿವೆ. ನಾವು ನಮ್ಮ ಮಹಿಳಾ ಸ್ವ-ಸಹಾಯ ಗುಂಪುಗಳನ್ನು ಸೇರಿಸಿ ಅಂತಹ ಸಲಕರಣೆಗಳನ್ನು ನೀಡಬಹುದೇ? ಅವರು ಕಾಡಿನ ತ್ಯಾಜ್ಯ ಸಂಗ್ರಹಿಸಬಹುದು, ಅದನ್ನು ಸಂಸ್ಕರಿಸಬಹುದು, ಕಾಡಿನಲ್ಲಿ ಬೆಂಕಿಯಿಲ್ಲದಂತೆ ಅದರಿಂದ ವಸ್ತುಗಳನ್ನು ತಯಾರಿಸಬಹುದು ಮತ್ತು ಕಾಡಿನ ಬೆಂಕಿಯ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು. ಹೀಗೆ ಮಾಡಿದರೆ, ಅವರ ಆದಾಯವನ್ನು ಹೆಚ್ಚಿಸುವುದಲ್ಲದೆ, ಕಾಡುಗಳಲ್ಲಿ ಬೆಂಕಿಯ ಘಟನೆಗಳು ಕಡಿಮೆಯಾಗುತ್ತವೆ. ಉದ್ಯಮ ಮತ್ತು ಆಸ್ಪತ್ರೆಗಳಂತಹ ಸಂಸ್ಥೆಗಳು, ಬೆಂಕಿ ಮತ್ತು ಅನಿಲ ಸೋರಿಕೆಯಂತಹ ಹೆಚ್ಚಿನ ಅಪಾಯಗಳಿರುವಲ್ಲಿ, ಸರ್ಕಾರದೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ವಿಶೇಷ ಜನರ ಪಡೆಯನ್ನು ರಚಿಸಬಹುದು. ನಾವು ನಮ್ಮ ಆಂಬ್ಯುಲೆನ್ಸ್ ಜಾಲವನ್ನು ವಿಸ್ತರಿಸಬೇಕು, ಭವಿಷ್ಯವನ್ನು ಸಿದ್ಧಗೊಳಿಸಬೇಕು. 5ಜಿ, ಕೃತಕ ಬುದ್ಧಿಮತ್ತೆ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್(ಐಒಟಿ)ಯಂತಹ ತಂತ್ರಜ್ಞಾನಗಳೊಂದಿಗೆ ನಾವು ಅದನ್ನು ಹೇಗೆ ಹೆಚ್ಚು ಸ್ಪಂದನಾಶೀಲ ಮತ್ತು ಪರಿಣಾಮಕಾರಿಯಾಗಿ ಮಾಡಬಹುದು ಎಂಬುದರ ಕುರಿತು ಸಮಗ್ರ ಚರ್ಚೆಯ ನಂತರ ಮಾರ್ಗಸೂಚಿ ಸಿದ್ಧಪಡಿಸಬೇಕು. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ನಾವು ಡ್ರೋನ್ ತಂತ್ರಜ್ಞಾನವನ್ನು ಹೇಗೆ ಹೆಚ್ಚು ಬಳಸಿಕೊಳ್ಳಬಹುದು? ಅಂತಹ ತಂತ್ರಜ್ಞಾನಗಳ ಮೇಲೆ ನಾವು ಗಮನ ಹರಿಸಬಹುದೇ, ಇದು ವಿಪತ್ತಿನ ಬಗ್ಗೆ ನಮ್ಮನ್ನು ಎಚ್ಚರಿಸಬಲ್ಲದು ಅಥವಾ ಯಾರಾದರೂ ಅವಶೇಷಗಳಡಿ ಹೂತು ಹೋದರೆ ಮತ್ತು ವ್ಯಕ್ತಿ ಸಿಲುಕಿರುವ ಸ್ಥಳದ ಬಗ್ಗೆ ಸ್ಥಳ ಮಾಹಿತಿ ನೀಡಬಹುದೇ? ನಾವು ಈ ರೀತಿಯ ಆವಿಷ್ಕಾರದತ್ತ ಗಮನ ಹರಿಸಬೇಕು. ತಂತ್ರಜ್ಞಾನದ ಸಹಾಯದಿಂದ ಹೊಸ ವ್ಯವಸ್ಥೆಗಳನ್ನು ಸೃಷ್ಟಿಸುತ್ತಿರುವ ಇಂತಹ ಸಾಮಾಜಿಕ ಸಂಸ್ಥೆಗಳು ವಿಶ್ವದ ಹಲವು ದೇಶಗಳಲ್ಲಿವೆ. ನಾವು ಅವುಗಳನ್ನು ಅಧ್ಯಯನ ಮಾಡಬೇಕು ಮತ್ತು ಅಲ್ಲಿರುವ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು.

|
|

ಸ್ನೇಹಿತರೆ,

ಭಾರತವು ಇಂದು ವಿಶ್ವಾದ್ಯಂತದ ವಿಪತ್ತುಗಳಿಗೆ ತ್ವರಿತವಾಗಿ ಸ್ಪಂದಿಸಲು ಪ್ರಯತ್ನಿಸುತ್ತಿದ. ವಿಪತ್ತು ಪುನಶ್ಚೇತನ ಮೂಲಸೌಕರ್ಯಕ್ಕಾಗಿ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಂದು ವಿಶ್ವದ 100ಕ್ಕೂ ಹೆಚ್ಚು ದೇಶಗಳು ಭಾರತದ ನಾಯಕತ್ವದಲ್ಲಿ ರೂಪುಗೊಂಡ ವಿಪತ್ತು ಪುನಶ್ಚೇನ ಮತ್ತು ನಿರ್ವಹಣಾ ಮೂಲಸೌಕರ್ಯ ಒಕ್ಕೂಟಕ್ಕೆ ಸೇರಿಕೊಂಡಿವೆ. ಸಂಪ್ರದಾಯ ಮತ್ತು ತಂತ್ರಜ್ಞಾನ ನಮ್ಮ ಶಕ್ತಿ. ಈ ಶಕ್ತಿಯೊಂದಿಗೆ ನಾವು ಭಾರತಕ್ಕೆ ಮಾತ್ರವಲ್ಲದೆ, ಇಡೀ ಜಗತ್ತಿಗೆ ವಿಪತ್ತು ಪ್ರತಿಬಂಧಕ್ಕೆ ಸಂಬಂಧಿಸಿದ ಅತ್ಯುತ್ತಮ ಮಾದರಿಗಳನ್ನು ಸಿದ್ಧಪಡಿಸಬಹುದು. ಈ ಚರ್ಚೆಯು ಸಲಹೆಗಳು ಮತ್ತು ಪರಿಹಾರಗಳಿಂದ ತುಂಬಿರುತ್ತದೆ ಎಂದು ನನಗೆ ಖಾತ್ರಿಯಿದೆ; ಅನೇಕ ಹೊಸ ವಿಷಯಗಳು ನಮ್ಮ ಮುಂದೆ ಬರುತ್ತವೆ. ಈ 2 ದಿನಗಳ ಶೃಂಗಸಭೆಯಲ್ಲಿ ಕ್ರಿಯಾಶೀಲ ಅಂಶಗಳು ಹೊರಹೊಮ್ಮುತ್ತವೆ ಎಂಬ ವಿಶ್ವಾಸ ನನಗಿದೆ. ಮುಂಗಾರು ಹಂಗಾಮಿಗೂ ಮುನ್ನ ಈ ರೀತಿಯ ಸಿದ್ಧತೆ ಮಾಡಿಕೊಳ್ಳಲು ಸೂಕ್ತ ಸಮಯ ಎಂಬುದು ನನ್ನ ಭಾವನೆ. ಅದರ ನಂತರ, ನಾವು ಈ ವ್ಯವಸ್ಥೆಯನ್ನು ರಾಜ್ಯಗಳಲ್ಲಿ, ನಂತರ ಮೆಟ್ರೋ ನಗರಗಳು ಮತ್ತು ಪಟ್ಟಣಗಳಲ್ಲಿ ಮುಂದುವರಿಸಬೇಕು. ನಾವು ಈ ಅಭ್ಯಾಸವನ್ನು ಪ್ರಾರಂಭಿಸಿದರೆ, ಬಹುಶಃ ಮಳೆಗಾಲದ ಮುಂಚೆಯೇ ನಾವು ಇಡೀ ವ್ಯವಸ್ಥೆಯನ್ನು ಜಾಗೃತಗೊಳಿಸಬಹುದು, ಎಲ್ಲಿ ಬೇಕಾದರೂ ನಾವು ಅವಶ್ಯಕತೆಗಳನ್ನು ಪೂರೈಸಬಹುದು, ನಷ್ಟವನ್ನು ತಡೆಯಲು ಸಿದ್ಧರಾಗಬಹುದು. ಈ ಸಮಾವೇಶ ಆಯೋಜಿಸಿರುವುದಕ್ಕೆ ನಾನು ನಿಮ್ಮೆಲ್ಲರಿಗೂ ಶುಭ ಹಾರೈಸುತ್ತೇನೆ!

ತುಂಬು ಧನ್ಯವಾದಗಳು

  • Jitendra Kumar April 04, 2025

    🙏🇮🇳
  • krishangopal sharma Bjp February 03, 2025

    नमो नमो 🙏 जय भाजपा🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • krishangopal sharma Bjp February 03, 2025

    नमो नमो 🙏 जय भाजपा🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷
  • krishangopal sharma Bjp February 03, 2025

    नमो नमो 🙏 जय भाजपा🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • krishangopal sharma Bjp February 03, 2025

    नमो नमो 🙏 जय भाजपा🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷
  • krishangopal sharma Bjp February 03, 2025

    नमो नमो 🙏 जय भाजपा🙏🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम 🚩 वन्दे मातरम् जय भाजपा विजय भाजपा
  • दिग्विजय सिंह राना September 20, 2024

    हर हर महादेव
  • Jitender Kumar Haryana BJP State President September 20, 2024

    BJP
  • Jitender Kumar Haryana BJP State President September 20, 2024

    🇮🇳🙏
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Apple India produces $22 billion of iPhones in a shift from China

Media Coverage

Apple India produces $22 billion of iPhones in a shift from China
NM on the go

Nm on the go

Always be the first to hear from the PM. Get the App Now!
...
PM pays homage to the martyrs of Jallianwala Bagh
April 13, 2025

The Prime Minister Shri Narendra Modi today paid homage to the martyrs of Jallianwala Bagh. He remarked that the coming generations will always remember their indomitable spirit.

He wrote in a post on X:

“We pay homage to the martyrs of Jallianwala Bagh. The coming generations will always remember their indomitable spirit. It was indeed a dark chapter in our nation’s history. Their sacrifice became a major turning point in India’s freedom struggle.”