"ವಿಕಸಿತ ಭಾರತಕ್ಕಾಗಿ ಬಜೆಟ್ ಸಮಗ್ರ ಬೆಳವಣಿಗೆ ಖಾತ್ರಿಗೊಳಿಸಿದೆ, ಸಮಾಜದ ಪ್ರತಿಯೊಂದು ವರ್ಗಕ್ಕೂ ಪ್ರಯೋಜನ ನೀಡುತ್ತದೆ, ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಲು ದಾರಿ ಮಾಡಿಕೊಡುತ್ತದೆ"
“ಸರ್ಕಾರವು ಉದ್ಯೋಗ ಸಂಪರ್ಕಿತ ಉತ್ತೇಜನಾ ಯೋಜನೆ ಘೋಷಿಸಿದೆ. ಇದರಿಂದ ಕೋಟಿಗಟ್ಟಲೆ ಹೊಸ ಉದ್ಯೋಗ ಸೃಷ್ಟಿಯಾಗಲಿದೆ"
"ಈ ಬಜೆಟ್ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಹೊಸ ಅಳತೆಗೋಲು(ಮಾನದಂಡ) ತರುತ್ತದೆ"
"ನಾವು ಪ್ರತಿ ನಗರ, ಪ್ರತಿ ಹಳ್ಳಿ ಮತ್ತು ಪ್ರತಿ ಮನೆಯಲ್ಲಿ ಉದ್ಯಮಿಗಳನ್ನು ರೂಪಿಸುತ್ತೇವೆ"
"ಕಳೆದ 10 ವರ್ಷಗಳಲ್ಲಿ, ಬಡವರು ಮತ್ತು ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಸಿಗುವುದನ್ನು ಸರ್ಕಾರ ಖಚಿತಪಡಿಸಿದೆ"
"ಸ್ಟಾರ್ಟಪ್‌ಗಳು ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗೆ ಈ ಬಜೆಟ್ ಹೊಸ ಮಾರ್ಗಗಳನ್ನು ತೆರೆಯಲಿದೆ"
"ಬಜೆಟ್ ರೈತರ ಮೇಲೆ ಹೆಚ್ಚಿನ ಗಮನ ಹರಿಸುತ್ತದೆ"
“ಇಂದಿನ ಬಜೆಟ್ ಹೊಸ ಅವಕಾಶಗಳು, ಹೊಸ ಶಕ್ತಿ, ಹೊಸ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಅವಕಾಶಗಳನ್ನು ತಂದಿದೆ. ಇದು ಉತ್ತಮ ಬೆಳವಣಿಗೆ ಮತ್ತು ಉಜ್ವಲ ಭವಿಷ್ಯ ತಂದಿದೆ”
"ಇಂದಿನ ಬಜೆಟ್ ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡುವಲ್ಲಿ ವೇಗವರ್ಧಕವಾಗಿ ಕಾರ್ಯ ನಿರ್ವಹಿಸುತ್ತದೆ; ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಲಿದೆ"

ಅಭಿವೃದ್ಧಿಯ ದೃಷ್ಟಿಯಿಂದ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಈ ಮಹತ್ವದ ಬಜೆಟ್ಗೆ ನಾನು ನನ್ನ ದೇಶದ ಎಲ್ಲಾ ನಾಗರಿಕರನ್ನು ಅಭಿನಂದಿಸುತ್ತೇನೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು  ಅವರ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. 

ಸ್ನೇಹಿತರೇ,

ಈ ಬಜೆಟ್ ಸಮಾಜದ ಪ್ರತಿಯೊಂದು ವರ್ಗಕ್ಕೂ ಅಧಿಕಾರ ನೀಡುತ್ತದೆ. ಇದು ನಮ್ಮ ಹಳ್ಳಿಗಳಲ್ಲಿ ಮತ್ತು ಬಡವರಿಗೆ ಮತ್ತು ರೈತರಿಗೆ ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ. ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ಬಜೆಟ್ ಮಧ್ಯಮ ವರ್ಗದ ಸಬಲೀಕರಣವನ್ನು ಮುಂದುವರೆಸುತ್ತದೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ನೀಡುತ್ತದೆ. ಇದು ಮಧ್ಯಮ ವರ್ಗಕ್ಕೆ ಹೊಸ ಶಕ್ತಿಯನ್ನು ಒದಗಿಸುತ್ತದೆ ಮತ್ತು ಬುಡಕಟ್ಟು ಸಮಾಜ, ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ಸಶಕ್ತಗೊಳಿಸಲು ದೃಢವಾದ ಯೋಜನೆಗಳನ್ನು ಒಳಗೊಂಡಿದೆ. ಇದರ ಜೊತೆಗೆ ,  ಈ ಬಜೆಟ್ ಆರ್ಥಿಕತೆಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುತ್ತದೆ ಮತ್ತು ಸಣ್ಣ ವ್ಯಾಪಾರಿಗಳು ,  MSME ಗಳು ಅಥವಾ ಸಣ್ಣ ಪ್ರಮಾಣದ ಕೈಗಾರಿಕೆಗಳ ಪ್ರಗತಿಗೆ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತದೆ. ಬಜೆಟ್ ಆರ್ಥಿಕ ಬೆಳವಣಿಗೆಯನ್ನು ಬಲಪಡಿಸುತ್ತದೆ ಮತ್ತು  ಉತ್ಪಾದನೆ ಮತ್ತು  ಮೂಲಸೌಕರ್ಯ ಕ್ಷೇತ್ರಗಳಿಗೆ ವಿಶೇಷ ಗಮನವನ್ನು ನೀಡುವ ಮೂಲಕ ಆರ್ಥಿಕ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತದೆ. 

ಸ್ನೇಹಿತರೇ,

ಉದ್ಯೋಗ ಮತ್ತು  ಸ್ವಯಂ ಉದ್ಯೋಗಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಅವಕಾಶಗಳನ್ನು ಒದಗಿಸುವುದು ನಮ್ಮ ಸರ್ಕಾರದ ನೀತಿಯಾಗಿದೆ . ಇಂದು ಮಂಡನೆಯಾಗಿರುವ ಬಜೆಟ್ ಈ ಬದ್ಧತೆಯನ್ನು ಬಲಪಡಿಸುತ್ತದೆ. ಪಿಎಲ್ಐ (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ಸ್) ಯೋಜನೆಯ ಯಶಸ್ಸಿಗೆ ದೇಶ ಮತ್ತು ವಿಶ್ವವೇ ಸಾಕ್ಷಿಯಾಗಿದೆ. ಇದೀಗ, ಈ ಬಜೆಟ್ನಲ್ಲಿ, ಉದ್ಯೋಗ ಲಿಂಕ್ಡ್ ಇನ್ಸೆಂಟಿವ್ ಯೋಜನೆಯನ್ನು ಸರ್ಕಾರ ಘೋಷಿಸಿದೆ, ಇದು ದೇಶಾದ್ಯಂತ ಕೋಟಿಗಟ್ಟಲೆ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಈ ಯೋಜನೆಯಡಿಯಲ್ಲಿ, ನಮ್ಮ ಸರ್ಕಾರವು ತಮ್ಮ ಮೊದಲ ಉದ್ಯೋಗವನ್ನು ಪ್ರಾರಂಭಿಸುವ ಯುವಕರ ಮೊದಲ ಸಂಬಳವನ್ನು ಪಾವತಿಸುತ್ತದೆ. ಇದು ಕೌಶಲ್ಯ ಅಭಿವೃದ್ಧಿ ಮತ್ತು ಉನ್ನತ ಶಿಕ್ಷಣಕ್ಕೆ ಸಹಾಯವಾಗಲಿ ಅಥವಾ 1 ಕೋಟಿ ಯುವಕರಿಗೆ ಇಂಟರ್ನ್ಶಿಪ್ ಯೋಜನೆಯಾಗಲಿ, ಇದು ಹಳ್ಳಿಗಳ ಮತ್ತು ಬಡ ಹಿನ್ನೆಲೆಯ ಯುವಕರಿಗೆ ಉನ್ನತ ಕಂಪನಿಗಳಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ ಮತ್ತು ಅವರಿಗೆ ಹೊಸ ಸಾಧ್ಯತೆಯ ಬಾಗಿಲುಗಳನ್ನು ತೆರೆಯುತ್ತದೆ. ನಾವು ಪ್ರತಿ ನಗರ, ಹಳ್ಳಿ ಮತ್ತು ಮನೆಗಳಲ್ಲಿ ಉದ್ಯಮಶೀಲತೆಯನ್ನು ಬೆಳೆಸುವ ಗುರಿಯನ್ನು ಹೊಂದಿದ್ದೇವೆ. ಇದಕ್ಕೆ ಪುಷ್ಟಿ ನೀಡುವಂತೆ ಮೇಲಾಧಾರ ರಹಿತ ಮುದ್ರಾ ಸಾಲದ ಮಿತಿಯನ್ನು 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದು ಸಣ್ಣ ವ್ಯಾಪಾರ ಮಾಲೀಕರಲ್ಲಿ, ವಿಶೇಷವಾಗಿ ಮಹಿಳೆಯರು, ದಲಿತರು ಮತ್ತು ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳ ಕುಟುಂಬಗಳಲ್ಲಿ ಸ್ವಯಂ ಉದ್ಯೋಗವನ್ನು ಉತ್ತೇಜಿಸುತ್ತದೆ.

ಸ್ನೇಹಿತರೇ,

ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ದೇಶದಲ್ಲಿನ ಅತಿ ಸಣ್ಣ ,  ಸಣ್ಣ ಮತ್ತು  ಮಧ್ಯಮ ಉದ್ಯಮಗಳ (MSME) ವಲಯವು ಮಧ್ಯಮ ವರ್ಗದೊಂದಿಗೆ ನಿಕಟವಾಗಿ ಹೆಣೆದುಕೊಂಡಿದೆ ಮತ್ತು ಬಡವರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಬಲಪಡಿಸುವುದು ಈ ದಿಕ್ಕಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ. ಈ ಬಜೆಟ್ MSME ಗಳಿಗೆ ಸಾಲದ ಸುಲಭತೆಯನ್ನು ಸುಧಾರಿಸಲು ಹೊಸ ಯೋಜನೆಯನ್ನು ಪ್ರಕಟಿಸುತ್ತದೆ. ಇದರ ಜೊತೆಗೆ ,  ಪ್ರತಿ ಜಿಲ್ಲೆಯಲ್ಲಿ ಉತ್ಪಾದನೆ ಮತ್ತು  ರಫ್ತು ವ್ಯವಸ್ಥೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಪ್ರಮುಖ ಕ್ರಮಗಳೂ ಇವೆ . ಇ-ಕಾಮರ್ಸ್ ರಫ್ತು ಕೇಂದ್ರಗಳು ಮತ್ತು ಆಹಾರ ಗುಣಮಟ್ಟ ಪರೀಕ್ಷೆಗಾಗಿ  100 ಘಟಕಗಳು  '  ಒಂದು ಜಿಲ್ಲೆ ,  ಒಂದು ಉತ್ಪನ್ನ '  ಆಂದೋಲನವನ್ನು ಬೆಂಬಲಿಸುವ ಕಾರ್ಯಕ್ರಮಗಳ ಭಾಗವಾಗಿದೆ.   

ಸ್ನೇಹಿತರೇ,

ಈ ಬಜೆಟ್ ನಮ್ಮ ಸ್ಟಾರ್ಟ್-ಅಪ್ಗಳು ಮತ್ತು  ನಾವೀನ್ಯತೆ ವ್ಯವಸ್ಥೆಗೆ ಅನೇಕ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ಬಾಹ್ಯಾಕಾಶ ಆಧಾರಿತ ಆರ್ಥಿಕತೆಯನ್ನು ಉತ್ತೇಜಿಸಲು  ರೂ 1,000  ಕೋಟಿ ನಿಧಿಯಾಗಿರಬಹುದು ಅಥವಾ  ಏಂಜೆಲ್ ತೆರಿಗೆಯನ್ನು ರದ್ದುಗೊಳಿಸುವ ನಿರ್ಧಾರವಾಗಲಿ ಹೀಗೆ  ಹಲವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ

ಸ್ನೇಹಿತರೇ,

ದಾಖಲೆಯ ಹೆಚ್ಚಿನ ಬಂಡವಾಳ ವೆಚ್ಚಗಳು (ಕ್ಯಾಪೆಕ್ಸ್) ಆರ್ಥಿಕತೆಯನ್ನು ಮುನ್ನಡೆಸುತ್ತದೆ. 12 ಹೊಸ ಕೈಗಾರಿಕಾ ನೋಡ್ಗಳು, ಹೊಸ ಉಪಗ್ರಹ ಪಟ್ಟಣಗಳ ಅಭಿವೃದ್ಧಿ ಮತ್ತು 14 ಪ್ರಮುಖ ನಗರಗಳಿಗೆ ಸಾರಿಗೆ ಯೋಜನೆಗಳು ದೇಶದಲ್ಲಿ ಹೊಸ ಆರ್ಥಿಕ ಕೇಂದ್ರಗಳನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಹೆಚ್ಚಿನ ಸಂಖ್ಯೆಯ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ.

ಸ್ನೇಹಿತರೇ,

ಪ್ರಸ್ತುತ, ರಕ್ಷಣಾ ರಫ್ತು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ರಕ್ಷಣಾ ಕ್ಷೇತ್ರವನ್ನು ಸ್ವಾವಲಂಬಿಯಾಗಿಸಲು ಈ ಬಜೆಟ್ ಹಲವು ಅವಕಾಶಗಳನ್ನು ಒದಗಿಸಿದೆ. ಭಾರತವು ವಿಶ್ವದೆಲ್ಲೆಡೆ ಆಕರ್ಷಣೆಯನ್ನು ಹೆಚ್ಚಿಸುತ್ತಿದೆ  ಮತ್ತು  ಇದರ ಪರಿಣಾಮವಾಗಿ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಪ್ರವಾಸೋದ್ಯಮ ಕ್ಷೇತ್ರವು ಬಡವರು ಮತ್ತು  ಮಧ್ಯಮ ವರ್ಗದವರಿಗೆ ಅನೇಕ ಅವಕಾಶಗಳನ್ನು ನೀಡುತ್ತದೆ. ಪ್ರಸಕ್ತ ಬಜೆಟ್ ನಲ್ಲಿ ಈ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ.

ಸ್ನೇಹಿತರೇ,

ಕಳೆದ 10 ವರ್ಷಗಳಲ್ಲಿ, ಎನ್ಡಿಎ ಸರ್ಕಾರವು ಬಡ ಮತ್ತು ಮಧ್ಯಮ ವರ್ಗದವರಿಗೆ ನಿರಂತರವಾಗಿ ತೆರಿಗೆ ವಿನಾಯಿತಿಯನ್ನು ನೀಡಿದೆ. ಈ ಬಜೆಟ್ನಲ್ಲಿ ಆದಾಯ ತೆರಿಗೆ ಕಡಿತ ಮತ್ತು ಪ್ರಮಾಣಿತ ಕಡಿತಗಳನ್ನು ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ, TDS ನಿಯಮಗಳನ್ನು ಸರಳಗೊಳಿಸಲಾಗಿದೆ, ಇದರಿಂದಾಗಿ ಪ್ರತಿ ತೆರಿಗೆದಾರರಿಗೆ ಹೆಚ್ಚುವರಿ ಉಳಿತಾಯವಾಗುತ್ತದೆ.

ಸ್ನೇಹಿತರೇ,

ಭಾರತದ ಪೂರ್ವ ಪ್ರದೇಶದ ಸಮಗ್ರ ಅಭಿವೃದ್ಧಿಯು ರಾಷ್ಟ್ರದ ಪ್ರಗತಿಗೆ ನಿರ್ಣಾಯಕವಾಗಿದೆ. ಪೂರ್ವೋದಯದ ದೃಷ್ಟಿಯ ಮೂಲಕ ನಮ್ಮ ಅಭಿಯಾನವು ಹೊಸ ವೇಗ ಮತ್ತು ಶಕ್ತಿಯನ್ನು ಪಡೆಯುತ್ತದೆ. ಪೂರ್ವ ಭಾರತದಲ್ಲಿ ಹೆದ್ದಾರಿಗಳು, ನೀರಿನ ಯೋಜನೆಗಳು ಮತ್ತು ವಿದ್ಯುತ್ ಯೋಜನೆಗಳಂತಹ ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸುವ ಮೂಲಕ ನಾವು ಅಭಿವೃದ್ಧಿಯನ್ನು ವೇಗಗೊಳಿಸುತ್ತೇವೆ.

ಸ್ನೇಹಿತರೇ,

ಈ ಬಜೆಟ್ ದೇಶದ ರೈತರಿಗೆ ಮಹತ್ವದ ಒತ್ತು ನೀಡಿದೆ. ವಿಶ್ವದ ಅತಿದೊಡ್ಡ ಆಹಾರ ಧಾನ್ಯ ಸಂಗ್ರಹ ಯೋಜನೆಯನ್ನು ಅನುಸರಿಸಿ, ನಾವು ಈಗ ತರಕಾರಿ ಉತ್ಪಾದನಾ ಕ್ಲಸ್ಟರ್ಗಳನ್ನು ಸ್ಥಾಪಿಸುತ್ತಿದ್ದೇವೆ. ಈ ಉಪಕ್ರಮವು ಸಣ್ಣ ರೈತರಿಗೆ ತಮ್ಮ ಹಣ್ಣುಗಳು, ತರಕಾರಿಗಳು ಮತ್ತು ಇತರ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಹೊಸ ಮಾರುಕಟ್ಟೆಗಳನ್ನು ತೆರೆಯುತ್ತದೆ. ಅದೇ ಸಮಯದಲ್ಲಿ, ಮಧ್ಯಮ ವರ್ಗದವರಿಗೆ ಹಣ್ಣುಗಳು ಮತ್ತು ತರಕಾರಿಗಳ ಲಭ್ಯತೆಯನ್ನು ಹೆಚ್ಚಿಸುತ್ತದೆ. ಇದು ಮಧ್ಯಮ ವರ್ಗದ ಕುಟುಂಬಗಳಿಗೆ ಉತ್ತಮ ಪೋಷಣೆಗೆ ದಾರಿ ಮಾಡಿಕೊಡುತ್ತದೆ. ಭಾರತವು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವುದು ಅತ್ಯಗತ್ಯ. ಆದ್ದರಿಂದ, ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸಲು ಬೆಂಬಲವನ್ನು ಘೋಷಿಸಲಾಗಿದೆ.

ಸ್ನೇಹಿತರೇ,

ಇಂದಿನ ಬಜೆಟ್ ಬಡತನ ನಿರ್ಮೂಲನೆ ಮತ್ತು  ಬಡವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಪ್ರಮುಖ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಬಡವರಿಗೆ ಮೂರು ಕೋಟಿ ಹೊಸ ಮನೆಗಳನ್ನು ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಯಿತು.   ' ಜನ್ ರಾಷ್ಟ್ರೀಯ ಉನ್ನತ್ ಗ್ರಾಮ ಅಭಿಯಾನ'ದ ಭಾಗವಾಗಿ  5  ಕೋಟಿ  ಬುಡಕಟ್ಟು ಕುಟುಂಬಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ಇದರ ಜೊತೆಗೆ , ' ಗ್ರಾಮ್ ಸಡಕ್ ಯೋಜನೆ'ಯು 25,000  ಹೊಸ  ಗ್ರಾಮೀಣ ಪ್ರದೇಶಗಳನ್ನು ವರ್ಷವಿಡೀ  ರಸ್ತೆ ಸೌಲಭ್ಯಗಳೊಂದಿಗೆ ಸಂಪರ್ಕಿಸುತ್ತದೆ ಮತ್ತು  ದೇಶದ ಎಲ್ಲಾ ರಾಜ್ಯಗಳಲ್ಲಿನ ದೂರದ ಹಳ್ಳಿಗಳಿಗೆ ಪ್ರಯೋಜನವನ್ನು ನೀಡುತ್ತದೆ.

ಸ್ನೇಹಿತರೇ,

ಇಂದಿನ ಬಜೆಟ್ ಹೊಸ ಅವಕಾಶಗಳನ್ನು ಮತ್ತು  ಹೊಸ ಶಕ್ತಿಯನ್ನು ತರುತ್ತದೆ . ಈ ಬಜೆಟ್ ಲೆಕ್ಕವಿಲ್ಲದಷ್ಟು ಉದ್ಯೋಗಗಳು ಮತ್ತು ಸ್ವಯಂ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತದೆ ,  ಉತ್ತಮ ಬೆಳವಣಿಗೆ ಮತ್ತು ಉಜ್ವಲ ಭವಿಷ್ಯವನ್ನು ಉತ್ತೇಜಿಸುತ್ತದೆ. ಈ ಬಜೆಟ್ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡುವ ಪ್ರಕ್ರಿಯೆಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು  ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲು ಭದ್ರ ಬುನಾದಿ ಹಾಕುತ್ತದೆ.

ನಾಡಿನ ಸಮಸ್ತ ಜನತೆಗೆ ಶುಭಹಾರೈಕೆಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi