ಭಾರತ್ ಮಾತಾ ಕಿ -ಜೈ..!
ಭಾರತ್ ಮಾತಾ ಕಿ -ಜೈ..!
ಭಾರತ್ ಮಾತಾ ಕಿ -ಜೈ..!
ಇಂದು ಬೆಳಿಗ್ಗೆ ನಾವು ಬೆಂಗಳೂರಿಗೆ ಭೇಟಿ ನೀಡಿದ್ದೆ. ನಾನು ಬೆಳಿಗ್ಗೆಯೇ ಇಲ್ಲಿಗೆ ಆಗಮಿಸಿದೆ ಮತ್ತು ದೇಶಕ್ಕಾಗಿ ಅದ್ಭುತ ಸಾದನೆಯನ್ನು ಮಾಡಿದ ವಿಜ್ಞಾನಿಗಳನ್ನು ಭೇಟಿ ಮಾಡಲು ನಿರ್ಧರಿಸಿದೆ. ಹಾಗಾಗಿ ನಾನು ಇಂದು ಬೆಳಗಿನ ಜಾವವೇ ಬೆಂಗಳೂರಿಗೆ ಹೋಗಿದ್ದೆ. ಆದರೆ ಸುರ್ಯೋದಯಕ್ಕೂ ಮುನ್ನವೇ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಜನರು ಚಂದ್ರಯಾನದ ಯಶಸ್ಸುನ್ನು ಸಂಭ್ರಮಿಸಿದ ರೀತಿ ನಂಬಲಾಗದಷ್ಟು ಸ್ಪೂರ್ತಿದಾಯಕವಾಗಿತ್ತು. ಮತ್ತು ಈಗ ಸೂರ್ಯನು ತೀವ್ರವಾದ ಬಿಸಿಲಿನಲ್ಲಿ ಸುಡುತ್ತಿದ್ದಾನೆ, ಅದು ಚರ್ಮವನ್ನೂ ಸಹ ಸುಡುತ್ತದೆ.ಇಲ್ಲಿಗೆ ಬಂದಿರುವ ನಿಮ್ಮೊಂದಿಗೆ ಈ ತೀವ್ರವಾದ ಬಿಸಿಲಿನಲ್ಲಿ ಚಂದ್ರಯಾನದ ಯಶಸ್ಸಿನ ಸಂತೋಷದಲ್ಲಿ ಪಾಲ್ಗೊಳ್ಳಲು ಮತ್ತು ಆಚರಣೆಯ ಆನಂದ ಹಂಚಿಕೊಳ್ಳುವ ಸೌಭಾಗ್ಯ ನನಗೆ ದೊರೆತಿದೆ. ಅದಕ್ಕಾಗಿ ನಾನು ಎಲ್ಲರನ್ನೂ ಅಭಿನಂದಿಸುತ್ತೇನೆ.
ಇಂದು ಬೆಳಿಗ್ಗೆ ನಾನು ಇಸ್ರೋಗೆ ಭೇಟಿ ನೀಡಿದ್ದೆನು. ಇದೇ ಮೊದಲ ಬಾರಿಗೆ ಚಂದ್ರಯಾನ ಕಳುಹಿಸಿರುವ ಚಿತ್ರಗಳನ್ನು ಬಿಡುಗಡೆ ಮಾಡುವ ಭಾಗ್ಯ ನನಗೆ ದೊರಕಿತ್ತು. ಬಹುಶಃ ನೀವು ಆ ದೃಶ್ಯಗಳನ್ನು ಟಿವಿಯಲ್ಲಿ ನೋಡಿರಬಹುದು. ಆ ಸುಂದರ ಚಿತ್ರಗಳೇ ಅದ್ಭುತ ವೈಜ್ಞಾನಿಕ ಯಶಸ್ಸನ್ನು ಬಿಂಬಿಸುತ್ತವೆ. ಸಾಂಪ್ರದಾಯಿಕವಾಗಿ ನಮ್ಮ ಯಶಸ್ವಿ ಅಭಿಯಾನದ ಭಾಗವಾಗಿ ಅಂತಹ ಸ್ಥಳಗಳಿಗೆ ಹೆಸರಿಡುವ ಜಾಗತಿಕ ಪರಂಪರೆ ಇದೆ. ಸಾಕಷ್ಟು ಸಮಾಲೋಚನೆ ಬಳಿಕ ನಾನು ಚಂದ್ರಯಾನ-3 ಲ್ಯಾಂಡ್ ಆಗಿರುವ ಯಶಸ್ಸಿಗೆ “ಶಿವಶಕ್ತಿ’’ ಎಂದು ಹೆಸರಿಡಲು ಬಯಸುತ್ತೇನೆ. ನಾವು ಶಿವನ ಕುರಿತು ಮಾತನಾಡುವಾಗ, ಅದು ಶುಭವನ್ನು ಸೂಚಿಸುತ್ತದೆ ಮತ್ತು ನಾವು ಶಕ್ತಿಯ ಬಗ್ಗೆ ಮಾತನಾಡುವಾಗ ಅದು ನನ್ನ ದೇಶದ ಮಹಿಳೆಯ ಶಕ್ತಿಯ ಸಂಕೇತವಾಗಿದೆ. ಭಗವಾನ್ ಶಿವನ ಬಗ್ಗೆ ಹೇಳುವಾಗ ಹಿಮಾಲಯವು ನೆನಪಿಗೆ ಬರುತ್ತದೆ ಮತ್ತು ಶಕ್ತಿ (ಪವರ್) ಬಗ್ಗೆ ಹೇಳುವಾಗ ಕನ್ಯಾಕುಮಾರಿ ನನ್ನ ಮನಸ್ಸಿಗೆ ಬರುತ್ತದೆ. ಆದ್ದರಿಂದ ಹಿಮಾಲಯದಿಂದ ಕನ್ಯಾಕುಮಾರಿವರೆಗಿನ ಈ ಭಾವನೆಯನ್ನು ಸಾರವನ್ನು ಸೆರೆಹಿಡಿಯಲು ಆ ಬಿಂದುವನ್ನು “ಶಿವಶಕ್ತಿ’’ ಎಂದು ಹೆಸರಿಸಲಾಗಿದೆ. ವಾಸ್ತವದಲ್ಲಿ ಈ ಹೆಸರನ್ನು 2019ರ ಚಂದ್ರಯಾನ-2ರ ವೇಳೆಗೆ ನನ್ನ ಗಮನಕ್ಕೆ ತರಲಾಗಿತ್ತು. ಆದರೆ ನಮ್ಮ ಮನಸ್ಸು ಆಗ ಸಿದ್ಧವಿರಲಿಲ್ಲ. ನಮ್ಮ ಪ್ರಯಾಣದಲ್ಲಿ ನಾವು ನಿಜವಾಗಿಯೂ ಯಶಸ್ವಿಯಾದ ನಂತರವೇ ಚಂದ್ರಯಾನ-2 ಪಾಯಿಂಟ್ ಗೆ ಹೆಸರು ಬರುತ್ತದೆ ಎಂದು ನನ್ನ ಮನಸ್ಸಿನಲ್ಲಿ ಆಳವಾಗಿ ನಿರ್ಧರಿಸಿದ್ದೆ. ಮತ್ತು ಚಂದ್ರಯಾನ-3 ಯಶಸ್ವಿಯಾದಾಗ ಚಂದ್ರಯಾನ-2ರ ಬಿಂದುವೂ ಅದರ ಹೆಸರನ್ನು ಪಡೆದುಕೊಂಡಿತು ಮತ್ತು ಆ ಬಿಂದು(ಪಾಯಿಂಟ್)ವಿಗೆ “ತಿರಂಗ’ ( ಭಾರತದ ತ್ರಿವರ್ಣ ಧ್ವಜ) ಎಂದು ಹೆಸರಿಡಲಾಗಿದೆ. ತ್ರಿವರ್ಣ ಧ್ವಜವು ಎಲ್ಲ ಸವಾಲುಗಳನ್ನು ಜಯಿಸಲು ಶಕ್ತಿಯನ್ನು ನೀಡುತ್ತದೆ ಮತ್ತು ತ್ರಿವರ್ಣವು ಪ್ರತಿ ಕನಸನ್ನು ಪ್ರಕಟಿಸಲು ಸ್ಫೂರ್ತಿಯನ್ನು ನೀಡುತ್ತದೆ. ಆದ್ದರಿಂದ ಚಂದ್ರಯಾನ-2 ವೈಫಲ್ಯವನ್ನು ಎದುರಿಸಿತು ಮತ್ತು ಚಂದ್ರಯಾನ-3 ಯಶಸ್ಸನ್ನು ಸಾಧಿಸಿತು, ತ್ರಿವರ್ಣ ಧ್ವಜವು ಸ್ಫೂರ್ತಿಯಾಗಿ ಬದಲಾಯಿತು. ಇದರಿಂದಾಗಿ ಚಂದ್ರಯಾನ-2 ಪಾಯಿಂಟ್ ಅನ್ನು ಈಗ ತಿರಂಗಾ ಎಂದು ಕರೆಯಲಾಗುತ್ತದೆ. ನಾನು ಇಂದು ಬೆಳಿಗ್ಗೆ ಪ್ರಸ್ತಾಪಿಸಿದ್ದ ಮತ್ತೊಂದು ಮಹತ್ವದ ಅಂಶವೆಂದರೆ ಆಗಸ್ಟ್ 23 ಭಾರತದ ವೈಜ್ಞಾನಿಕ ಅಭಿವೃದ್ಧಿಯ ಪಯಣದಲ್ಲಿ ಒಂದು ಮೈಲಿಗಲ್ಲು. ಆದ್ದರಿಂದ ಭಾರತವು ಪ್ರತಿ ವರ್ಷ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸುತ್ತದೆ.
ಮಿತ್ರರೇ,
ನಾನು ಕಳೆದ ಕೆಲವು ದಿನಗಳಲ್ಲಿ ಬ್ರಿಕ್ಸ್ ಶೃಂಗಸಭೆಗಾಗಿ ದಕ್ಷಿಣ ಆಫ್ರಿಕಾದಲ್ಲಿದ್ದೆ. ಆ ಸಮಯದಲ್ಲಿ ಬ್ರಿಕ್ಸ್ ರಾಷ್ಟ್ರಗಳ ಸದಸ್ಯರ ಜತೆಗೆ ಇಡೀ ಆಫ್ರಿಕಾವನ್ನು ಆಹ್ವಾನಿಸಲಾಗಿತ್ತು. ಬ್ರಿಕ್ಸ್ ಶೃಂಗಸಭೆ ವೇಳೆ ನಾನು ಚಂದ್ರಯಾನವನ್ನು ಉಲ್ಲೇಖಿಸದ ಅಥವಾ ಅದಕ್ಕೆ ಅಭಿನಂದನೆ ಸಲ್ಲಿಸದ ಯಾರೊಬ್ಬರೂ ಇಲ್ಲ ಎಂಬುದನ್ನು ನಾನು ಗಮನಿಸಿದ್ದೇನೆ. ನಾನು ಅಲ್ಲಿ ಸ್ವೀಕರಿಸಿದ ಅಭಿನಂದನೆಗಳನ್ನು ತಕ್ಷಣವೇ ನಾನು ಎಲ್ಲಾ ವಿಜ್ಞಾನಿಗಳೊಂದಿಗೆ ಹಂಚಿಕೊಂಡಿದ್ದೇನೆ. ಮತ್ತು ನಾವು ಇಡೀ ವಿಶ್ವದಾದ್ಯಂತ ಸ್ವೀಕರಿಸಿದ ಅಭಿನಂದನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಮಿತ್ರರೇ,
ಚಂದ್ರಯಾನದ ಪಯಣ, ಅದರ ಕಾಲಾತೀತ ಸಾದನೆ ಮತ್ತು ನವಭಾರತದ ಪರಿಣಾಮ, ಹೊಸ ಕನಸುಗಳು, ಹೊಸ ಸಂಕಲ್ಪಗಳು ಮತ್ತು ಸತತ ಸಾಧನೆಗಳು ಒಂದರ ನಂತರ ಒಂದರಂತೆ ಎಲ್ಲರೂ ತಿಳಿದುಕೊಳ್ಳಲು ಬಯಸಿದ್ಧರು. ನಮ್ಮ ಭಾರತೀಯ ತ್ರಿವರ್ಣ ಧ್ವಜ ಸಾಮರ್ಥ್ಯಗಳು, ನಮ್ಮ ಯಶಸ್ಸು ಮತ್ತು ಸಾಧನೆಗಳ ಆಧಾರದ ಮೇಲೆ ಹೊಸ ಪ್ರಭಾವದ ಹೊರಹೊಮ್ಮುವಿಕೆಯನ್ನು ಜಗತ್ತು ಗ್ರಹಿಸುತ್ತಿದೆ. ಇಂದು ಜಗತ್ತು ಈ ಪ್ರಭಾವವನ್ನು ಅನುಭವಿಸುತ್ತಿದೆ ಮಾತ್ರವಲ್ಲದೆ ಅದನ್ನು ಅಂಗೀಕರಿಸುತ್ತದೆ ಮತ್ತು ಗೌರವಿಸುತ್ತದೆ.
ಮಿತ್ರರೇ,
ಬ್ರಿಕ್ಸ್ ಶೃಂಗ್ಸಸಭೆಯ ನಂತರ ನಾವು ಗ್ರೀಸ್ ಗೆ ಹೋಗಿದ್ದೆ. ಭಾರತದ ಯಾವುದೇ ಪ್ರಧಾನಿ ಗ್ರೀಸ್ ಗೆ ಭೇಟಿ ನೀಡದೆ 40 ವರ್ಷಗಳು ಕಳೆದಿವೆ. ಮಾಡದೆ ಇರುವ ಅನೇಕ ಕಾರ್ಯಗಳು ನನ್ನಿಂದ ಮಾಡಲು ಉದ್ದೇಶಿಸಿರುವುದು ನನ್ನ ಅದೃಷ್ಟ. ಗ್ರೀಸ್ ನಲ್ಲಿಯೂ ಭಾರತವು ತನ್ನ ಸಾಮರ್ಥ್ಯಗಳಿಗೆ ಗೌರವವನ್ನು ನೀಡಿತು. ಭಾರತ ಮ ತ್ತಯ ಗ್ರೀಸ್ ನಡುವಿನ ಸ್ನೇಹದಿಂದಾಗಿ ಯುರೋಪ್‌ಗೆ ಹೆಬ್ಬಾಗಿಲಾಗಬಹುದು ಎಂದು ಗ್ರೀಸ್ ಗ್ರಹಿಸುತ್ತದೆ ಮತ್ತು ಭಾರತ ಮತ್ತು ಗ್ರೀಸ್ ನಡುವಿನ ಸ್ನೇಹವು ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಸಂಬಂಧಗಳನ್ನು ಬಲಪಡಿಸಲು ಮಹತ್ವದ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ.
ಮಿತ್ರರೇ,
ಮುಂಬರುವ ದಿನಗಳಲ್ಲಿ ನಮ್ಮ ಕೆಲವು ಜವಾಬ್ದಾರಿಗಳಿವೆ. ವಿಜ್ಞಾನಿಗಳು ತಮ್ಮ ಪಾಲಿನ ಕೆಲಸವನ್ನು ಮಾಡಿದ್ದಾರೆ, ಅದು ಉಪಗ್ರಹಗಳಾಗಿರಬಹುದು ಅಥವಾ ಚಂದ್ರಯಾನ ಪಯಣವಾಗಿರಬಹುದು, ಅದು ನಮ್ಮ ಜನಸಾಮಾನ್ಯರ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡಿದೆ. ಆದ್ದರಿಂದ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನನ್ನ ದೇಶದ ಯುವಕರ ಆಸಕ್ತಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ನಾವು ಕಾರ್ಯೋನ್ಮುಖವಾಗಬೇಕಿದೆ. ನಾವು ಕೇವಲ ಆಚರಣೆಗಳು, ಉತ್ಸಾಹ ಮತ್ತು ಶಕ್ತಿಗೆ ಸೀಮಿತವಾಗುವ ಜನರಲ್ಲ. ನಾವು ಯಶಸ್ಸನ್ನು ಸಾಧಿಸಿದಾಗ, ಹೊಸ ಪ್ರಗತಿಗಾಗಿ ಬಲವಾದ ಹೆಜ್ಜೆಗಳನ್ನು ಇಡಲು ನಾವು ಸಿದ್ಧರಿದ್ದೇವೆ, ಆದ್ದರಿಂದ ಬಾಹ್ಯಾಕಾಶ ವಿಜ್ಞಾನವು ಹೇಗೆ ಕಾರ್ಯನಿರ್ವಹಿಸುತ್ತದೆ, ಉಪಗ್ರಹ ಸಾಮರ್ಥ್ಯಗಳನ್ನು ಹೇಗೆ ಬಳಸಬಹುದು ಮತ್ತು ಈ ಪ್ರಯಾಣವು ಉತ್ತಮ ಆಡಳಿತಕ್ಕಾಗಿ ಕೊನೆಯ ಮೈಲುವರೆಗೆ ವಿತರಣೆಗಾಗಿ ಸಾಮಾನ್ಯ ಜನರ ಜೀವನದಲ್ಲಿ ಸುಧಾರಣೆಗೆ ಹೇಗೆ ಉಪಯುಕ್ತವಾಗಿದೆ ಎಂಬುದನ್ನು ನಾವು ಅನ್ವೇಷಿಸಬೇಕು. ಆದ್ದರಿಂದ ನಾನು ಸರ್ಕಾರದ ಎಲ್ಲ ಇಲಾಖೆಗಳಿಗೆ ಬಾಹ್ಯಾಕಾಶ ವಿಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಅದರ ಸಾಮರ್ಥ್ಯವನ್ನು ವಿತರಣೆ, ಕ್ಷಿಪ್ರ ಸ್ಪಂದನೆ, ಪಾರದರ್ಶಕತೆ ಮತ್ತು ಖಚಿತತೆಗೆ ಬಳಸಿಕೊಳ್ಳುವಂತೆ ಕರೆ ನೀಡುತ್ತೇನೆ. ನಮ್ಮ ಇಲಾಖೆಗಳ ಕಾರ್ಯಚಟುವಟಿಕೆಗಳಲ್ಲಿ ಎಲ್ಲ ಆಯಾಮಗಳನ್ನು ನಾವು ಕಂಡುಕೊಳ್ಳಬೇಕಿದೆ. ಮುಂಬರುವ ದಿನಗಳಲ್ಲಿ ನಾವು ದೇಶದ ಯುವಜನತೆಗೆ ಹ್ಯಾಕಥಾನ್ ಗಳನ್ನು ಆಯೋಜಿಸುವ ಬಯಕೆ ಹೊಂದಿದ್ದೇವೆ. ಇತ್ತೀಚಿನ ದಿನಗಳಲ್ಲಿ ನಾವಿನ್ಯತೆಯನ್ನು ಉತ್ತೇಜಿಸಲು ಇತ್ತೀಚಿನ ದಿನಗಳಲ್ಲಿ ನಡೆಸಿದ ವಾಕಥಾನ್ ಗಳಲ್ಲಿ ನಮ್ಮ ದೇಶದ ವಿದ್ಯಾರ್ಥಿಗಳು ಸತತ 30-40 ಗಂಟೆಗಳ ಕಾಲ ಕಾರ್ಯನಿರ್ವಹಿಸಿ ಅತ್ಯುತ್ತಮ ಚಿಂತನೆಗಳನ್ನು ನೀಡಿದ್ದಾರೆ. ಸದ್ಯದಲ್ಲೇ ಅಂತಹ ಸರಣಿ ಹ್ಯಾಕಥಾನ್ ಗಳು ಆರಂಭಿಸಬೇಕು ಎಂಬುದು ನನ್ನ ಬಯಕೆ. ಇದು ಯುವ ಮನಸ್ಸುಗಳಲ್ಲಿ, ದೇಶದ ಯುವ ಪ್ರತಿಭಾವಂತರಲ್ಲಿ ಬಾಹ್ಯಾಕಾಶ ವಿಜ್ಞಾನ, ಉಪಗ್ರಹ ಮತ್ತು ತಂತ್ರಜ್ಞಾನ ಬಳಸಿ ಸಾಮಾನ್ಯ ಜನರು ಎದುರಿಸುತ್ತಿರುವ ಸವಾಲುಗಳಿಗಹೆ ಪರಿಹಾರಗಳನ್ನು ಕಂಡುಹಿಡಿಯುತ್ತಿದ್ದಾರೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ.
ಅದರ ಜತೆ ಜತೆಗೆ ನಾವು ಹೊಸ ಪೀಳಿಗೆಯನ್ನು ವಿಜ್ಞಾನದತ್ತ ಆಕರ್ಷಿಸಬೇಕಿದೆ. 21ನೇ ಶತಮಾನ ತಂತ್ರಜ್ಞಾನವನ್ನು ಆಧರಿಸಿದೆ ಮತ್ತು ದೇಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತನ್ನ ಶಕ್ತಿಯನ್ನು ಸಾಬೀತುಪಡಿಸುತ್ತಾ ಮುನ್ನಡೆಯುತ್ತಿದೆ. ಆದ್ದರಿಂದ ಕಾಲದ ಬೇಡಿಕೆಯೆಂದರೆ ನಾವು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸುವುದು, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಾವು ಹೆಚ್ಚಿನ ಶಕ್ತಿಯೊಂದಿಗೆ ಮತ್ತಷ್ಟು ಪ್ರಗತಿ ಸಾಧಿಸಬೇಕಿದೆ. ಹಾಗಾಗಿ ಹೊಸ ಪೀಳಿಗೆಯ ಮಕ್ಕಳು ಬಾಲ್ಯಾವಸ್ಥೆಯಲ್ಲಿದ್ದಾಗಲೇ ಅವರಿಗೆ ವೈಜ್ಞಾನಿಕ ಮನೋಭಾವಕ್ಕೆ ಸಜ್ಜುಗೊಳಿಸುವ ಅಗತ್ಯವಿದೆ. ಆದ್ದರಿಂದ ನಾವು ಸಾಧಿಸಿದ ಮಹತ್ವದ ಯಶಸ್ಸು, ನಮ್ಮಲ್ಲಿರುವ ಉತ್ಸಾಹ ಮತ್ತು ಶಕ್ತಿಯನ್ನು ಸಾಮರ್ಥ್ಯವನ್ನಾಗಿ ಪರಿವರ್ತಿಸಿಕೊಳ್ಳಬೇಕಿದೆ. ಆ ಸಾಮರ್ಥ್ಯವನ್ನು ರೂಢಿಸಿಕೊಳ್ಳಲು ಸೆಪ್ಟಂಬರ್ 1ರಿಂದ MyGov ನಲ್ಲಿ ಕ್ವಿಜ್ ಸ್ಪರ್ಧೆಯನ್ನು ಆಯೋಜಿಸಲಿದೆ. ಅದರ ಮೂಲಕ ನಮ್ಮ ಯುವಕರು ಸಣ್ಣ ಪ್ರಶ್ನೆಗಳು ಮತ್ತು ಉತ್ತರಗಳೊಂದಿಗೆ ತೊಡಗಿಸಿಕೊಳ್ಳುತ್ತಾರೆ ಮತ್ತು ಕ್ರಮೇಣ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ನಮ್ಮ ಹೊಸ ಶಿಕ್ಷಣ ನೀತಿಯು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಾಕಷ್ಟು ಅವಕಾಶಗಳನ್ನು ಮಾಡಿಕೊಟ್ಟಿದೆ. ನಮ್ಮ ಶಿಕ್ಷಣ ನೀತಿಯು ಇದಕ್ಕೆ ಗಮನಾರ್ಹ ಒತ್ತು ನೀಡುತ್ತದೆ ಮತ್ತು ರಸಪ್ರಶ್ನೆ ಸ್ಪರ್ಧೆಯು ನಮ್ಮ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿಯನ್ನು ಬೆಳೆಸಲು ಸಹಾಯ ಮಾಡುತ್ತದೆ. ಇಂದು ಚಂದ್ರಯಾನದ ಸುತ್ತ ಕೇಂದ್ರೀಕೃತವಾಗಿರುವ ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ನಾನು ನಮ್ಮ ದೇಶದ ವಿದ್ಯಾರ್ಥಿಗಳಿಗೆ ಮತ್ತು ಪ್ರತಿ ಶಾಲೆಯ ವಿದ್ಯಾರ್ಥಿಗಳಿಗೆ ಹೇಳಲು ಬಯಸುತ್ತೇನೆ. ದೇಶದ ಲಕ್ಷಾಂತರ ಯುವಕರು ಇದರಲ್ಲಿ ಭಾಗಿಯಾಗಬೇಕು ಮತ್ತು ನಾವು ಅದನ್ನು ಮುಂದೆ ಕೊಂಡೊಯ್ಯಬೇಕು. ಇದು ಗಮನಾರ್ಹ ಫಲಿತಾಂಶಗಳನ್ನು ನೀಡುತ್ತದೆ ಎಂದು ನಾನು ನಂಬಿದ್ದೇನೆ.
ಇಂದು ನಾನು ನಿಮ್ಮ ಗಮನವನ್ನು ಇನ್ನೊಂದು ವಿಷಯದ ಬಗ್ಗೆ ಸೆಳೆಯಲು ಬಯಸುತ್ತೇನೆ. ಜಗತ್ತಿಗೆ ಭಾರತದ ಬಗ್ಗೆ ಕುತೂಹಲ, ಆಕರ್ಷಣೆ ಮತ್ತು ನಂಬಿಕೆಯ ನಡುವೆಯೇ ಅವುಗಳನ್ನು ನಾವು ಪ್ರತ್ಯಕ್ಷವಾಗಿ ಕಾಣುವಂತಹ ಸಂದರ್ಭಗಳೂ ಸಹ ಬರುತ್ತವೆ. ನಮಗೆ ತಕ್ಷಣ ಅಂತಹ ಅವಕಾಶವಿದೆ, ಅದರಲ್ಲೂ ವಿಶೇಷವಾಗಿ ದೆಹಲಿಯ ಜನರಿಗೆ ತಕ್ಷಣದ ಅವಕಾಶವಿದೆ ಮತ್ತು ಅದು ಜಿ-20 ಶೃಂಗಸಭೆಯಾಗಿದೆ. ಒಂದು ರೀತಿಯಲ್ಲಿ, ಜಗತ್ತಿನ ಮಹತ್ವದ ನಿರ್ಣಯ ಕೈಗೊಳ್ಳುವ ನಾಯಕರು ದೆಹಲಿ ಮಣ್ಣಿನ ಮೇಲಿರಲಿದ್ದಾರೆ, ಅಂದರೆ ಭಾರತದ ನೆಲದಲ್ಲಿರಲಿದ್ದಾರೆ. ಇಡೀ ಭಾರತವೇ ಆತಿಥ್ಯ ವಹಿಸುತ್ತಿದ್ದು, ಅತಿಥಿಗಳು ದೆಹಲಿಗೆ ಆಗಮಿಸಲಿದ್ದಾರೆ.
ಜಿ-20 ಶೃಂಗಸಭೆಯ ಆತಿಥ್ಯವಯ ಇಡೀ ದೇಶದ ಜವಾಬ್ದಾರಿಯಾಗಿದೆ, ಆದರೆ ಹೆಚ್ಚಿನ ಜವಾಬ್ದಾರಿ ನನ್ನ ದೆಹಲಿಯ ಸಹೋದರ ಸಹೋದರಿಯರು, ದೆಹಲಿಯ ನಾಗರಿಕರ ಮೇಲಿದೆ. ಆದ್ದರಿಂದ ದೆಹಲಿ ಈ ಜವಾಬ್ದಾರಿಯನ್ನು ಯಾವುದೇ ಲೋಪವಿಲ್ಲದೆ ನಿಭಾಯಿಸಬಲ್ಲದು ಎಂಬುದನ್ನು ನಾವು ಇಡೀ ಜಗತ್ತಿಗೆ ತೋರಿಸಬೇಕಾಗಿದೆ. ನಮ್ಮ ದೇಶದ ಗೌರವ, ಘನತೆ ಮತ್ತು ಪ್ರತಿಷ್ಠೆಯ ಧ್ವಜವನ್ನು ಎತ್ತಿಹಿಡಿಯುವ ಅವಕಾಶ ಜನರ ಕೈಯಲ್ಲಿದೆ. ಗಣನೀಯ ಸಂಖ್ಯೆಯ ಅತಿಥಿಗಳು ಬಂದಾಗ ಸ್ವಲ್ಪ ಅನಾನುಕೂಲ ಉಂಟಾಗುತ್ತದೆ. ಕೆಲವು 5-7 ಅತಿಥಿಗಳು ನಾವು ಅವರನ್ನು ಸೋಫಾದಲ್ಲಿ ಕೂರಿಸಿ ನಾವು ಸಣ್ಣ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಏಕೆಂದರೆ “ಅತಿಥಿ ದೇವೋಭವ’’ ಅಂದರೆ ಅತಿಥಿಗಳನ್ನು ಸತ್ಕರಿಸುವುದು ಎಂಬುದು ನಮ್ಮ ಪರಂಪರೆಯಾಗಿದೆ. ಜಾಗತಿಕ ನಾಯಕರಿಗೆ ನಾವು ಹೆಚ್ಚು ಗೌರವ, ಘನತೆ ಮತ್ತು ಸ್ವಾಗತವನ್ನು ನೀಡಿದರೆ ಅವರು ನಮ್ಮ ಹೆಮ್ಮೆ, ನಮ್ಮ ಘನತೆ ಮತ್ತು ನಮ್ಮ ಖ್ಯಾತಿಯನ್ನು ಹೆಚ್ಚಿಸುತ್ತಾರೆ. ಆದ್ದರಿಂದ ಇಲ್ಲಿ ಸೆಪ್ಟಂಬರ್ 5ರಿಂದ 15ರವರೆಗೆ ಹಲವು ಚಟುವಟಿಕೆಗಳು ನಡೆಯಲಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ದೆಹಲಿ ಜನತೆಗೆ ಆಗುವ ಅನಾನುಕೂಲಗಳಿಗಾಗಿ ನಾವು ಅವರಲ್ಲಿ ಮುಂಚಿತವಾಗಿಯೇ ಕ್ಷಮೆ ಕೋರುತ್ತೇನೆ. ಮುಂಬರುವ ದಿನಗಳಲ್ಲಿ ಉಂಟಾಗಬಹುದಾದ ಅನಾನುಕೂಲಗಳ ಬಗ್ಗೆ ತಾಳ್ಮೆಯಿಂದ ಇರಬೇಕೆಂದು ನಾನು ದೆಹಲಿಯ ನಾಗರಿಕರಲ್ಲಿ ಮನವಿ ಮಾಡುತ್ತೇನೆ. ಈ ಅತಿಥಿಗಳು ಪ್ರತಿಯೊಬ್ಬರ ಅತಿಥಿಗಳು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕೆಂದು ನಾವು ಆಗ್ರಹಿಸುತ್ತೇನೆ ಮತ್ತು ನಾವು ವ್ಯತ್ಯಯ, ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ, ವಾಹನಗಳ ಸಂಚಾರಕ್ಕೆ ನಿರ್ಬಂಧ ಮತ್ತಿತರ ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಆದರೆ ಕೆಲವು ವಿಷಯಗಳು ಅತ್ಯವಶ್ಯಕ. ಮತ್ತು ಕುಟುಂಬದಲ್ಲಿ ಮದುವೆ ಇದ್ದರೆ ನಮಗೆ ತಿಳಿದಿರುವಂತೆ, ಉಗುರುಗಳನ್ನು ಕತ್ತರಿಸುವಾಗ ಸಣ್ಣ ಕಡಿತ ಸಂಭವಿಸಿದರೂ ಜನರು “ಎಚ್ಚರಿಕೆ ವಹಿಸಿ, ಇದು ವಿಶೇಷ ಸಂದರ್ಭ, ಕೆಟ್ಟದ್ದೇನೂ ಆಗಬಾರದು’’ ಎಂದು ಹೇಳುತ್ತಾರೆ. ಆದ್ದರಿಂದ ಇದು ಒಂದು ಮಹತ್ವದ ಅವಕಾಶವಾಗಿದೆ ಮತ್ತು ಕುಟುಂಬದಲ್ಲಿರುವಂತೆ ಈ ಎಲ್ಲ ಅತಿಥಿಗಳು ನಮ್ಮವರು. ನಮ್ಮೆಲ್ಲರ ಸಾಮೂಹಿಕ ಪ್ರಯತ್ನದಿಂದ ನಮ್ಮ ಜಿ-20 ಶೃಂಗಸಭೆಯು ಅದ್ಭುತವಾಗಿಲಿದೆ, ಸಕ್ರಿಯವಾಗಿರಲಿದೆ ಮತ್ತು ಇಡೀ ದೆಹಲಿ ಬಣ್ಣಗಳಲ್ಲಿ ಮಿಂದೇಳಲಿದೆ ಎಂದು ನಾನು ನಂಬಿದ್ದೇನೆ. ದೆಹಲಿಯ ನನ್ನ ನಾಗರಿಕ ಬಂಧುಗಳು ಇದನ್ನು ತಮ್ಮ ಪ್ರಯತ್ನಗಳ ಮೂಲಕ ತೋರ್ಪಡಿಸಿತ್ತಾರೆಂಬ ಸಂಪೂರ್ಣ ವಿಶ್ವಾಸ ನನ್ನಲಿದೆ.
ನನ್ನ ಸಹೋದರ ಮತ್ತು ಸಹೋದರಿಯರೇ, ನಮ್ಮ ಕುಟುಂಬದ ಸದಸ್ಯರೇ,
ಇನ್ನು ಕೆಲವೇ ದಿನಗಳಲ್ಲಿ ರಕ್ಷಾ ಬಂಧನ ಹತ್ತಿರವಾಗುತ್ತಿದೆ. ಸಹೋದರಿಯರು ತಮ್ಮ ಸಹೋದರರಿಗೆ ರಾಖೀ ಕಟ್ಟುತ್ತಾರೆ. ಮತ್ತು ನಾವೆಲ್ಲರೂ “ಚಂದಮಾಮ’’ ಹೇಳುತ್ತಾ ಬೆಳೆದು ಬಂದಿದ್ದೇವೆ. ಬಾಲ್ಯದಿಂದಲೂ ನಮಗೆ ಚಂದಮಾಮನ ಬಗ್ಗೆ ತಿಳಿಸಿಕೊಡಲಾಗಿದೆ ಮತ್ತು ನಮಗೆ ಭೂಮಿಯೇ ತನ್ನ ತಾಯಿ ಎಂದು ತಿಳಿಸಲಾಗಿದೆ. ಭೂಮಿಯೇ ನಮ್ಮ ‘ತಾಯಿ’ ಮತ್ತು ಚಂದ್ರನೇ “ಮಾಮ’. ಅದರರ್ಥ, ನಮ್ಮ ಭೂ ತಾಯಿ ಚಂದ್ರ ಮಾಮನ ಸಹೋದರಿ. ನಮ್ಮ ಭೂ ತಾಯಿ ಈ ಬಾರಿ ತನ್ನ ಸಹೋದರ ಚಂದ ಮಾಮನ ಜತೆ ರಕ್ಷಾ ಬಂಧನ್ ಹಬ್ಬವನ್ನು ಆಚರಿಸಲಿದ್ದಾರೆ. ಆದ್ದರಿಂದ ಈ ರಕ್ಷಾ ಬಂಧನ ಹಬ್ಬವನ್ನು ಸಹೋರತ್ವ, ಐಕ್ಯತೆ ಮತ್ತು ಪ್ರೀತಿಯ ವಾತಾವರಣದೊಂದಿಗೆ ಭವ್ಯವಾಗಿ ಆಚರಿಸೋಣ, ಜಿ-20 ಶೃಂಗಸಭೆಯಲ್ಲೂ ಈ ಸಹೋದರತ್ವ, ಏಕತೆ, ಈ ಪ್ರೀತಿ, ನಮ್ಮ ಸಂಸ್ಕೃತಿ ಮತ್ತು ನಮ್ಮ ಸಂಪ್ರದಾಯಗಳು ಜಗತ್ತಿಗೆ ಪರಿಚಯಿಸುತ್ತವೆ. ಮುಂಬರುವ ಹಬ್ಬಗಳು ಅದ್ದೂರಿಯಾಗಿ ನಡೆಯುತ್ತವೆ ಎಂದು ನಾನು ನಂಬಿದ್ದೇನೆ ಮತ್ತು ಸೆಪ್ಟಂಬರ್ ನಲ್ಲಿ ನಮ್ಮ ಸಾಧನೆಗಳು ಮತ್ತೊಮ್ಮೆ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ನಾನಾ ರೀತಿಯಲ್ಲಿ ಪರಿಚಯಿಸುವಂತಾಗಲಿ. ಚಂದ್ರಯಾನದ ಯಶಸ್ಸಿನಿಂದಾಗಿ ವಿಜ್ಞಾನಿಗಳು ನಮ್ಮ ರಾಷ್ಟ್ರ ಧ್ವಜವನ್ನು ಎತ್ತರಕ್ಕೆ ಎರಿಸಿದಂತೆಯೇ ನಮ್ಮ ದೆಹಲಿಯ ಜನರು ಜಿ-20 ಶೃಂಗಸಭೆಯ ಧ್ವಜವನ್ನು ಹಾರಿಸುವ ಮೂಲಕ ನಮ್ಮ ಧ್ವಜವನ್ನು ಮತ್ತಷ್ಟು ಬಲವರ್ಧನೆಗೊಳಿಸೋಣ. ಈ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ನಮ್ಮ ವಿಜ್ಞಾನಿಗಳ ಸಾಧನೆಗಳನ್ನು ಸಂಭ್ರಮಿಸಲು, ನಮ್ಮ ತ್ರಿವರ್ಣ ಧ್ವಜ ಹೆಮ್ಮೆಯಿಂದ ಹಾರಾಡುವಂತೆ ಮಾಡಲು ಪ್ರಕಾಶಿಸುವ ಸೂರ್ಯನ ತಾಪದ ನಡುವೆಯೂ ಇಲ್ಲಿ ಸೇರಿರುವ ನಿಮ್ಮೆಲ್ಲರಿಗೂ ಶುಭ ಕೋರುತ್ತೇನೆ ಮತ್ತು ನಾನು ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲರಿಗೂ ಒಗ್ಗೂಡಿ ಈಗ ಹೇಳೋಣ.
ಭಾರತ್ ಮಾತಾ ಕಿ -ಜೈ..!
ಭಾರತ್ ಮಾತಾ ಕಿ -ಜೈ..!
ಭಾರತ್ ಮಾತಾ ಕಿ -ಜೈ..!
ತುಂಭಾ ಧನ್ಯವಾದಗಳು!