"ಭಾರತವು ಸದೃಢತೆ ಮತ್ತು ಪ್ರಗತಿಯ ಸಂಕೇತವಾಗಿ ಹೊರಹೊಮ್ಮಿದೆ"
"ಭಾರತದ ಬೆಳವಣಿಗೆಯ ಯಶೋಗಾಥೆಯು ನೀತಿ, ಉತ್ತಮ ಆಡಳಿತ ಮತ್ತು ನಾಗರಿಕರ ಕಲ್ಯಾಣಕ್ಕೆ ಸರ್ಕಾರದ ಉನ್ನತ ಆದ್ಯತೆಯನ್ನು ಆಧರಿಸಿದೆ"
"ಭಾರತವು ಬಲಗೊಳ್ಳುತ್ತಿರುವ ತನ್ನ ಆರ್ಥಿಕತೆ ಮತ್ತು ಕಳೆದ ದಶಕದ ಕ್ರಾಂತಿಕಾರಿ ಸುಧಾರಣೆಗಳ ಪರಿಣಾಮವಾಗಿ ಜಗತ್ತಿಗೆ ಭರವಸೆಯ ಕಿರಣವಾಗಿ ಹೊರಹೊಮ್ಮಿದೆ"
"ಅಂತರರಾಷ್ಟ್ರೀಯ ಹಣಕಾಸು ಕ್ಷೇತ್ರವನ್ನು ಮರುವ್ಯಾಖ್ಯಾನಿಸುವ ಕ್ರಿಯಾತ್ಮಕ ಪರಿಸರ ವ್ಯವಸ್ಥೆಯಾಗಿ ʻಗಿಫ್ಟ್ ಸಿಟಿʼಯನ್ನು ಪರಿಕಲ್ಪಿಸಲಾಗಿದೆ"
"ನಾವು ʻಗಿಫ್ಟ್ ಸಿಟಿʼಯನ್ನು ಹೊಸ ಯುಗದ ಜಾಗತಿಕ ಹಣಕಾಸು ಮತ್ತು ತಂತ್ರಜ್ಞಾನ ಸೇವೆಗಳ ಜಾಗತಿಕ ಕೇಂದ್ರವನ್ನಾಗಿ ಮಾಡಲು ಬಯಸುತ್ತೇವೆ"
"ಭಾರತದ 'ಗ್ಲೋಬಲ್ ಗ್ರೀನ್ ಕ್ರೆಡಿಟ್ ಇನಿಶಿಯೇಟಿವ್', ಹವಾಮಾನ ಶೃಂಗಸಭೆಯಲ್ಲಿ(ಸಿಒಪಿ 28) ಭಾರತ ಮುಂದಿಟ್ಟ ಭೂಗ್ರಹ ಸ್ನೇಹಿ ಉಪಕ್ರಮವಾಗಿದೆ"
"ಇಂದು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ʻಫಿನ್‌ಟೆಕ್‌ʼ ಮಾರುಕಟ್ಟೆಗಳಲ್ಲಿ ಭಾರತವು ಒಂದಾಗಿದೆ"
ʻಗಿಫ್ಟ್ ಐಎಫ್ಎಸ್‌ಸಿʼಯ ಅತ್ಯಾಧುನಿಕ ಡಿಜಿಟಲ್ ಮೂಲಸೌಕರ್ಯವು ವ್ಯವಹಾರಗಳ ದಕ್ಷತೆ ಹೆಚ್ಚಿಸಲು ಅನುವು ಮಾಡಿಕೊಡುವ ವೇದಿಕೆಯನ್ನು ಒದಗಿಸುತ್ತದೆ
ʻಇನ್ಫಿನಿಟಿ ಫೋರಂʼನ 2ನೇ ಆವೃತ್ತಿಯನ್ನು 'ಗಿಫ್ಟ್-ಐಎಫ್ಎಸ್‌ಸಿ: ಹೊಸ ಯುಗದ ಜಾಗತಿಕ ಹಣಕಾಸು ಸೇವಾ ಕೇಂದ್ರʼ ವಿಷಯಾಧಾರಿತವಾಗಿ ಏರ್ಪಡಿಸಲಾಗಿದೆ.

ನಮಸ್ಕಾರ! 

ಗುಜರಾತ್ ನ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಭೂಪೆಂದ್ರಭಾಯಿ, ರಾಜ್ಯ ಸರ್ಕಾರದ ಸಚಿವರೇ, ಐಎಫ್ ಸಿಎ ಅಧ್ಯಕ್ಷರಾದ ಕೆ. ರಾಜಾ ರಮಣ್ ಜೀ. ಹಣಕಾಸು ಸಂಸ್ಥೆಗಳು ಮತ್ತು ವಿವಿಧ ಸಂಘಟನೆಗಳ ಪ್ರಮುಖ ಪ್ರಸಿದ್ಧ ನಾಯಕರೇ, ಮಹಿಳೆಯರೇ ಹಾಗೂ ಮಹನೀಯರೇ. 

ಇನ್ಪಿನಿಟಿ ಫೋರಂನ ಎರಡನೇ ಆವೃತ್ತಿಗೆ ನಿಮಗೆಲ್ಲರಿಗೂ ಸ್ವಾಗತ. 2021 ರ ಡಿಸೆಂಬರ್ ನಲ್ಲಿ ಇನ್ಪಿನಿಟಿ ಫೋರಂ ಅನ್ನು ಉದ್ಘಾಟಿಸಿದ ಸಂದರ್ಭವನ್ನು ನಾನು ಸ್ಮರಿಸಿಕೊಳ್ಳುತ್ತೇನೆ; ಆಗ ಜಗತ್ತು ಸಾಂಕ್ರಾಮಿಕದಿಂದಾಗಿ ಅನಿಶ್ಚಿತತೆಯಿಂದ ಕೂಡಿತ್ತು. ಪ್ರತಿಯೊಬ್ಬರೂ ಜಾಗತಿಕ ಆರ್ಥಿಕ ಬೆಳವಣಿಗೆ ಕುರಿತು ಕಳವಳಗೊಂಡಿದ್ದರು ಮತ್ತು ಆ ಚಿಂತೆಗಳು ಈಗಲೂ ಉಳಿದುಕೊಂಡಿವೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ಸಾಲದ ಮಟ್ಟ ಮತ್ತು ಹೆಚ್ಚಿನ ಹಣದುಬ್ಬರ ಒಡ್ಡುವ ಸವಾಲಯಗಳ ಕುರಿತು ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. 

ಇಂತಹ ಸಮಯದಲ್ಲಿ ಭಾರತವು ಪ್ರಗತಿ ಮತ್ತು ಪುಟಿದೆದ್ದಿರುವ ಅದ್ಭುತ ಉದಾಹರಣೆಯಾಗಿ ಹೊರ ಹೊಮ್ಮಿದೆ. ಇಂತಹ ನಿರ್ಣಾಯಕ ಅವಧಿಯಲ್ಲಿ ಗಿಪ್ಟ್ ಸಿಟಿಯಲ್ಲಿ 21 ನೇ ಶತಮಾನದ ಆರ್ಥಿಕ ನೀತಿಗಳ ಕುರಿತ ಚರ್ಚೆಯು ಗುಜರಾತ್ ಗೆ ಹೆಮ್ಮೆಯ ಕೊಡುಗೆ ನೀಡಲಿದೆ. ಇದು ಮಹತ್ವದ ಸಾಧನೆಯಾಗಿದೆ ಮತ್ತು ಗುಜರಾತ್ ನ ಯಶಸ್ಸು, ದೇಶದ ಯಶಸ್ಸಾಗಿದೆ. 

ಸ್ನೇಹಿತರೇ

ನೀತಿಗಳಿಗೆ ಪರಮೋಚ್ಛ ಆದ್ಯತೆ ನೀಡಿದಾಗ ಉತ್ತಮ ಫಲಿತಾಂಶದ ಸಾಧನೆಯಾಗುತ್ತದೆ ಎಂಬುದನ್ನು ಇಂದು ಭಾರತ ತನ್ನ ಪ್ರಗತಿಯಗಾಥೆಯ ಮೂಲಕ ಜಗತ್ತಿಗೆ ತೋರಿಸಿದೆ. ದೇಶದ ಕಲ್ಯಾಣ ಮತ್ತು ಉತ್ತಮ ಆಡಳಿತಕ್ಕಾಗಿ ಪೂರ್ಣ ಪ್ರಮಾಣದ ಪ್ರಯತ್ನಗಳನ್ನು ಹಾಕಿದ ಸಂದರ್ಭದಲ್ಲಿ ನಾಗರಿಕರು ಆರ್ಥಿಕ ನೀತಿಯ ಆಧಾರ ಸ್ತಂಭವಾಗುತ್ತಾರೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇ 7.7 ರಷ್ಟು ಪ್ರಗತಿ ದಾಖಲಿಸಿದೆ. 2023 ರ ಜಾಗತಿಕ ಬೆಳವಣಿಗೆಗೆ ಶೇ 16 ರಷ್ಟು ಕೊಡುಗೆಯನ್ನು ಭಾರತ ನೀಡಲಿದೆ ಎಂದು ಈ ವರ್ಷದ ಸೆಪ್ಟೆಂಬರ್ ನಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿ – ಐಎಂಎಫ್ ಹೇಳಿತ್ತು. ಇದಕ್ಕೂ ಮೊದಲು 2023 ರ ಜುಲೈನಲ್ಲಿ ವಿಶ್ವಬ್ಯಾಂಕ್ ಜಾಗತಿಕ ಸವಾಲುಗಳ ನಡುವೆ ಭಾರತ ಮತ್ತು ಅದರ ಆರ್ಥಿಕತೆಯ ಬಗ್ಗೆ ಹೆಚ್ಚಿನ ಭರವಸೆ ವ್ಯಕ್ತಪಡಿಸಿತ್ತು. ಮಾರ್ಚ್ ನಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಅವರು, ಭಾರತ ಜಾಗತಿಕ ದಕ್ಷಿಣದ ಪ್ರಮುಖ ನಾಯಕತ್ವ ಹೊಂದುವ ಬಲಿಷ್ಠ ಪರಿಸ್ಥಿತಿಯಲ್ಲಿದೆ ಎಂದು ಹೇಳಿದ್ದರು. ಕೆಲವು ತಿಂಗಳ ಹಿಂದೆ, ವಿಶ್ವ ಆರ್ಥಿಕ ಒಕ್ಕೂಟದಲ್ಲಿ ರತ್ನಗಂಬಳಿ ಹಾಸುವ ಪದ್ಧತಿಯನ್ನು ಕಡಿತಗೊಳಿಸುವ ಮತ್ತು ಭಾರತದಲ್ಲಿ ಉತ್ತಮ ಹೂಡಿಕೆಯ ವಾತಾವರಣ ನಿರ್ಮಿಸುವ ಕುರಿತು ಉಲ್ಲೇಖಿಸಲಾಗಿತ್ತು. ಇಂದು ಇಡೀ ಜಗತ್ತು ಭಾರತದ ಬಗ್ಗೆ ವಿಶ್ವಾಸ ಹೊಂದಿದೆ ಮತ್ತು ಕಾರಣವಿಲ್ಲದೇ ಇವೆಲ್ಲವೂ ಆಗಿಲ್ಲ. ಇದು ಭಾರತದ ಬಲಿಷ್ಠ ಆರ್ಥಿಕತೆಯ ಪ್ರತಿಫಲವಾಗಿದೆ ಮತ್ತು ಕಳೆದ 10 ವರ್ಷಗಳಲ್ಲಿ ಸುಧಾರಣೆಯಲ್ಲಿ ಪರಿವರ್ತನೆ ತರಲಾಗಿದೆ. ಈ ಸುಧಾರಣೆಗಳು ದೇಶದ ಆರ್ಥಿಕ ಆಧಾರ ಸ್ತಂಭವನ್ನು ಬಲಗೊಳಿಸಿದೆ. ಸಾಂಕ್ರಾಮಿಕ ಸಂದರ್ಭದಲ್ಲಿ ಬಹುತೇಕ ದೇಶಗಳು ಪ್ರಾಥಮಿಕ ವಿತ್ತೀಯ ನಿರ್ವಹಣೆ ಮತ್ತು ಹಣಕಾಸು ನೆರವು ಕುರಿತು ಕೇಂದ್ರೀಕೃತಗೊಂಡಿತ್ತು. ಆದರೆ ನಾವು ಆಗ ದೀರ್ಘಕಾಲೀನ ಬೆಳವಣಿಗೆ, ಆರ್ಥಿಕ ಸಾಮರ್ಥ್ಯ ವಿಸ್ತರಣೆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವು. 

 

 

ಸ್ನೇಹಿತರೇ

ಜಾಗತಿಕ ಆರ್ಥಿಕತೆಯನ್ನು ಇನ್ನಷ್ಟು ಸಮಗ್ರಗೊಳಿಸುವ ನಿಟ್ಟಿನಲ್ಲಿ ಸುಧಾರಣೆಗಳನ್ನು ತರುವ ಬಗ್ಗೆ ನಾವು ನಮ್ಮ ಗುರಿ ಹೊಂದಿದ್ದೆವು. ಹಲವಾರು ವಲಯಗಳಲ್ಲಿ ನಾವು ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿಯನ್ನು ಹೆಚ್ಚು ಹೊಂದಿಕೊಳ್ಳುವಂತೆ ಮಾಡಿದ್ದು, ಅನುಸರಣೆ ಹೊರೆಯನ್ನು ತಗ್ಗಿಸುವ ಜೊತೆಗೆ ಮೂರು ಎಫ್.ಟಿ.ಎಗಳಿಗೆ ಸಹಿ ಹಾಕಿದ್ದೇವೆ ಹಾಗೂ ಇಂದು ಅನೇಕ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರೆಸಿದ್ದೇವೆ.  ನಾವು ಇಂದು ಗಿಪ್ಟ್ ಐಎಫ್ಎಸ್ ಸಿಎಯನ್ನು ಸ್ಥಾಪಿಸಿದ್ದು, ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ ಭಾರತೀಯ ಹಣಕಾಸು ವಲಯ ಸಮನ್ವಯಗೊಂಡಿದೆ. ಇದು ನಮ್ಮ ವಿಸ್ತೃತ ಸುಧಾರಣೆಯ ಭಾಗವಾಗಿದೆ. ಗಿಪ್ಟ್ ಸಿಟಿಯ ದೃಷ್ಟಿಕೋನವನ್ನು ಅಂತರರಾಷ್ಟ್ರೀಯ ಹಣಕಾಸು ವಲಯದ ಭೂ ಸದೃಶ್ಯವನ್ನು ಮರು ವ್ಯಾಖ್ಯಾನಿಸುವ ಕ್ರಿಯಾತ್ಮಕ ಪರಿಸರ ವ್ಯವಸ್ಥೆಯಾಗಿ ರೂಪಿಸಲಾಗಿದೆ. ಇದು ನಾವೀನ್ಯತೆ, ದಕ್ಷತೆ ಮತ್ತು ಜಾಗತಿಕ ಸಹಭಾಗಿತ್ವದಲ್ಲಿ ಹೊಸ ಮಾನದಂಡಗಳನ್ನು ನಿಗದಿಪಡಿಸಿದೆ. ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರವನ್ನು 2020 ರಲ್ಲಿ ಸ್ಥಾಪಿಸಲಾಗಿದ್ದು, ಈ ನಿಟ್ಟಿನಲ್ಲಿ ಇದು ಮೈಲಿಗಲ್ಲಿನ ಯಾನವಾಗಿದೆ. ಸವಾಲಿನ ಆರ್ಥಿಕ ಏರಿಳಿತಗಳ ನಡುವೆಯೂ ಐಎಫ್ಎಎಸ್ ಸಿಎ 27 ನಿಯಮಗಳು ಮತ್ತು 10ಕ್ಕೂ ಹೆಚ್ಚು ಚೌಕಟ್ಟುಗಳನ್ನು ರೂಪಿಸಿದ್ದು, ಇದು ಹೂಡಿಕೆಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ. 

ಇನ್ಪಿನಿಟಿ ಫೋರಂನ ಮೊದಲ ಆವೃತ್ತಿಯಲ್ಲಿ ಬಂದ ಸಲಹೆ ಮೇರೆಗೆ ಹಲವಾರು ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ನಿಮಗೆ ತಿಳಿಸಲು ಹರ್ಷವೆನಿಸುತ್ತಿದೆ. 2022 ರ ಏಪ್ರಿಲ್ ನಲ್ಲಿ ಐಎಫ್ಎಸ್ ಸಿಎ ನಿಧಿ ನಿರ್ವಹಣಾ ಚಟುವಟಿಕೆಗಳನ್ನು ನಿರ್ವಹಿಸಲು ಸಮಗ್ರ ಚೌಕಟ್ಟು ಘೋಷಿಸಲಾಗಿದೆ. ಇಂದು ಐಎಫ್ಎಸ್ ಸಿಎ ನಡಿ 80 ನಿಧಿ ನಿರ್ವಹಣೆ ಸಂಸ್ಥೆಗಳು ನೋಂದಣಿಯಾಗಿದ್ದು, 24 ಶತಕೋಟಿ ಡಾಲರ್ ಮೀರಿದ ನಿಧಿಯನ್ನು ಸ್ಥಾಪಿಸಲಾಗಿದೆ. 2024 ರಿಂದ ಗಿಪ್ಟ್ ಐಎಫ್ಎಸ್ ಸಿಯಲ್ಲಿ ಕೋರ್ಸ್ ಗಳನ್ನು ಆರಂಭಿಸಲು ಪ್ರಮುಖ ಜಾಗತಿಕ ವಿವಿಗಳಿಗೆ ಅನುಮತಿ ನೀಡಲಾಗಿದೆ. ಐಎಫ್ಎಸ್ ಸಿಎ ವಿಮಾನ ಗುತ್ತಿಗೆಯ ಚೌಕಟ್ಟನ್ನು 2022 ರಲ್ಲಿ ಹೊರಡಿಸಿತು ಮತ್ತು 26 ಘಟಕಗಳು ಇದೀಗ ಐಎಫ್ಎಸ್ ಸಿಎ ಸಹಭಾಗಿತ್ವದಲ್ಲಿ ಪ್ರಾರಂಭ ಮಾಡಿವೆ. 

ಸ್ನೇಹಿತರೇ 

ಮೊದಲ ಆವೃತ್ತಿಯ ಗಣನೀಯ ಯಶಸ್ಸಿನಿಂದಾಗಿ ನಿಮ್ಮ ಸಲಹೆಗಳ ಮೇರೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದರಿಂದ ಸಹಜವಾಗಿಯೇ ಮುಂದೇನು ಎಂಬ ಪ್ರಶ್ನೆ ಉದ್ಭವವಾಗಿದೆ. ಗಿಪ್ಟ್ ಐಎಫ್ಎಸ್ ಸಿಎ ಪ್ರಾಮುಖ್ಯತೆ ಹಾಗೆಯೇ ಉಳಿಯಲಿದೆಯೇ?. ನನ್ನ ಬಳಿ ಇದಕ್ಕೆ ಉತ್ತರ ಇಲ್ಲ. ಸರ್ಕಾರದ ಗುರಿ ಗಿಪ್ಟ್ ಐಎಫ್ಎಸ್ ಸಿಎ ಸಾಂಪ್ರದಾಯಿಕ ಹಣಕಾಸು ಮತ್ತು ಉದ್ಯಮದಿಂದಾಚೆ ಇರಿಸುವುದಾಗಿದೆ. ಗಿಪ್ಟ್ ಸಿಟಿ ಆಧುನಿಕ ತಲೆಮಾರಿನ ಹಣಕಾಸು ಮತ್ತು ತಂತ್ರಜ್ಞಾನ ಸೇವೆಗಳ ಜಾಗತಿಕ ನಾಡಿಮಿಡಿತದ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಗಿಪ್ಟ್ ಸಿಟಿಯು ಜಾಗತಿಕ ಸವಾಲುಗಳನ್ನು ಗಣನೀಯಗಾಗಿ ಬಗೆಹರಿಸಲು ಸಹಾಯ ಮಾಡಲಿದೆ ಮತ್ತು ನೀವು ಪಾಲುದಾರರು, ಈ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕಾಗುತ್ತದೆ. 

ಸ್ನೇಹಿತರೇ 

ಜಗತ್ತು ಇಂದು ಅತ್ಯಂತ ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಿರುವುದೆಂದರೆ ಅದು ಹವಾಮಾನ ಬದಲಾವಣೆ. ಭಾರತ ಜಾಗತಿಕವಾಗಿ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿರುವುದರಿಂದ ಈ ಕಾಳಜಿಗಳಿಂದ ನಾವು ಮುಖರಾಗಿಲ್ಲ ಮತ್ತು ನಾವು ಅದರ ಬಗ್ಗೆ ತಿಳಿದಿದ್ದೇವೆ. ಕಳೆದ ಕೆಲವು ವರ್ಷಗಳ ಹಿಂದೆ, ಅಂದರೆ ಭಾರತ ಕೆಲವು ದಿನಗಳ ಹಿಂದೆ ಸಿಒಪಿ ಶೃಂಗ ಸಭೆಯಲ್ಲಿ ಜಗತ್ತಿನ ಮುಂದೆ ಹೊಸ ಬದ್ಧತೆಗಳನ್ನು ವ್ಯಕ್ತಪಡಿಸಿದೆ. ಭಾರತ ಮತ್ತು ವಿಶ್ವದ ಜಾಗತಿಕ ಗುರಿಗಳನ್ನು ಸಾಧಿಸಲು ಸಾಕಷ್ಟು ವೆಚ್ಚ ಪರಿಣಾಮಕಾರಿ ಹಣಕಾಸು ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. 

 

 

ಜಿ20 ಅಧ್ಯಕ್ಷತೆಯ ಸಂದರ್ಭದಲ್ಲಿ ಜಾಗತಿಕ ಬೆಳವಣಿಗೆ ಮತ್ತು ಸುಸ್ಥಿರತೆಗೆ ಸುಸ್ಥಿರ ಹಣಕಾಸು ಆದ್ಯತೆಗಳನ್ನು ಅರ್ಥಮಾಡಿಕೊಳ್ಳುವುದು ನಮ್ಮ ಆದ್ಯತೆಗಳಲ್ಲಿ ಒಂದಾಗಿತ್ತು. ಇದರಿಂದ ಹಸಿರು, ಸ್ಥಿತಿಸ್ಥಾಪಕತ್ವ ಮತ್ತು ಎಲ್ಲರನ್ನೊಳಗೊಂಡ ಆರ್ಥಿಕತೆ ಮತ್ತು ಸಮಾಜವನ್ನು ನಿರ್ಮಿಸುವತ್ತ ಇದು ಕೊಡುಗೆ ನೀಡಲಿದೆ. ಬರುವ 2070 ರ ವೇಳೆಗೆ ನಿವ್ವಳ ಶೂನ್ಯ ಗುರಿ ಸಾಧನೆಗಾಗಿ ಭಾರತಕ್ಕೆ 10 ಟ್ರಿಲಿಯನ್ ಡಾಲರ್ ಮೊತ್ತದ ಅಗತ್ಯತೆಯಿದೆ. ಹೂಡಿಕೆಗಾಗಿ ಜಾಗತಿಕ ಹಣಕಾಸು ಮೂಲಗಳ ನೆರವು ಅಗತ್ಯವಾಗಿದೆ. ಆದ್ದರಿಂದ ಐಎಫ್ಎಸ್ ಸಿಯನ್ನು ಜಾಗತಿಕ ಸುಸ್ಥಿರ ಹಣಕಾಸು ತಾಣವನ್ನಾಗಿ ಮಾಡುವ ಗುರಿ ಹೊಂದಲಾಗಿದೆ. 

ಗಿಪ್ಟ್ ಐಎಫ್ಎಸ್ ಸಿ ಭಾರತವನ್ನು ಕಡಿಮೆ ಇಂಗಾಲ ಹೊರಸೂಸುವ ಆರ್ಥಿತೆಯನ್ನಾಗಿ ರೂಪಿಸಲು, ಹಸಿರು ಬಂಡವಾಳದ ಅಗತ್ಯ ಹರಿವಿಗೆ ಪೂರಕವಾಗಿ ಪರಿಣಾಮಕಾರಿ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿದೆ. ಹಸಿರು ಬಾಂಡ್ ಗಳು, ಸುಸ್ಥಿರ ಬಾಂಡ್ ಗಳು ಮತ್ತು ಸುಸ್ಥಿರತೆಗೆ ಸಂಬಂಧಿಸಿದ ಬಾಂಡ್ ಗಳಂತಹ ಹಣಕಾಸು ಉತ್ಪನ್ನಗಳ ಅಭಿವೃದ್ಧಿಯು ಇಡೀ ಜಗತ್ತಿಗೆ ಮಾರ್ಗ ಮತ್ತು ಪ್ರವೇಶವನ್ನು ಸುಲಭಗೊಳಿಸಲಿದೆ. ನಿಮಗೆ ತಿಳಿದಿರುವಂತೆ ಭಾರತ ‘ಜಾಗತಿಕ ಹಸಿರು ಸಾಲ ಉಪಕ್ರಮ’ ವನ್ನು ಪ್ರಕಟಿಸಿದ್ದು, ಸಿಒಪಿ28 ರಲ್ಲಿ ಭೂಗ್ರಹದ ಪರವಾದ ಉಪಕ್ರಮವನ್ನು ತೆಗೆದುಕೊಂಡಿದೆ. ಹಸಿರು ಸಾಲಕ್ಕಾಗಿ ಮಾರುಕಟ್ಟೆ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಇಲ್ಲಿನ ಎಲ್ಲಾ ಅನುಭವಿ ವ್ಯಕ್ತಿಗಳ ಕ್ರಮಗಳನ್ನು ಶ್ಲಾಘಿಸುತ್ತೇನೆ. 

ಸ್ನೇಹಿತರೇ 

ಭಾರತ ಜಗತ್ತಿನನಲ್ಲಿ ಅತಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಅತಿದೊಡ್ಡ ಹಣಕಾಸು ತಂತ್ರಜ್ಞಾನ ಮಾರುಕಟ್ಟೆ – ಫಿನ್ ಟೆಕ್ ಗಳಲ್ಲಿ ಒಂದಾಗಿದೆ. ಫಿನ್ ಟೆಕ್ ಗಳೊಂದಿಗೆ ಗಿಪ್ಟ್ ಐಎಫ್ಎಸ್ ಸಿ ದೃಷ್ಟಿಕೋನಕ್ಕೆ ಹೊಂದಿಕೆಯಾಗುವಂತೆ  ಕಾರ್ಯನಿರ್ವಹಿಸುವುದನ್ನು ಬಲಪಡಿಸಲಿದೆ. 2022 ರಲ್ಲಿ ಐಎಫ್ಎಸ್ ಸಿಎ ಫಿನ್ ಟೆಕ್ ಚೌಕಟ್ಟಿನ ಕಾರ್ಯಸೂಚಿಯನ್ನು ಬಲಪಡಿಸುವ ಸೂಚನೆಯನ್ನು ಹೊರಡಿಸಿದೆ. ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ, ಭಾರತ ಮತ್ತು ವಿದೇಶಿ ಫಿನ್ ಟೆಕ್ ಗಳನ್ನು ಉತ್ತೇಜಿಸಲು ಐಎಫ್ಎಸ್ ಸಿಎ ಕೂಡ ಒಂದು ಫಿನ್ ಟೆಕ್ ಆಗಿದೆ. ಗಿಪ್ಟ್ ಸಿಟಿಯು ಜಾಗತಿಕ ಫಿನ್ ಟೆಕ್ ಹಣಕಾಸು, ಫಿನ್ ಟೆಕ್ ಪ್ರಯೋಗಾಲಯಕ್ಕೆ ಹೆಬ್ಬಾಗಿಲಾಗಲಿದೆ. ಈ ಅವಕಾಶವನ್ನು ಹೆಚ್ಚಿನ ರೀತಿಯಲ್ಲಿ ಬಳಸಿಕೊಳ್ಳುವಂತೆ ನಾನು ನಿಮ್ಮೆಲ್ಲರನ್ನು ಪ್ರೇರೇಪಿಸುತ್ತೇನೆ. 

ಸ್ನೇಹಿತರೇ

ಗಿಪ್ಟ್ ಐಎಫ್ಎಸ್ ಸಿ ಸ್ಥಾಪನೆಯಾದ ಕೆಲವೇ ವರ್ಷಗಳಲ್ಲಿ ಇದು ಜಾಗತಿಕ ಬಂಡವಾಳದ ಹರಿವಿಗೆ ಪ್ರಮುಖ ಹೆಬ್ಬಾಗಿಲಾಗಿ ಮಾರ್ಪಟ್ಟಿದೆ ಎಂಬುದು ಸ್ವತಃ ಅಧ್ಯಯನದ ವಿಷಯವಾಗಿದೆ. ಗಿಪ್ಟ್ ಸಿಟಿ ಅಸಾಧಾರಣವಾಗಿ ಟ್ರೈ ಸಿಟಿ ಪರಿಕಲ್ಪನೆಯಲ್ಲಿ ಅಭಿವೃದ್ಧಿ ಹೊಂದಿದೆ. ಐತಿಹಾಸಿಕ ನಗರವಾದ ಅಹಮದಾಬಾದ್ ಮತ್ತು ಬಂಡವಾಳ ನಗರ ಗಾಂಧಿನಗರದ ನಡುವಿನ ಗಿಪ್ಟ್ ಸಿಟಿ ಸಂಪರ್ಕ ಅಸಾಧಾರಣವಾಗಿದೆ. ಗಿಪ್ಟ್ ಐಎಫ್ಎಸ್ ಸಿಯ ಅತ್ಯಾಧುನಿಕ ಡಿಜಿಟಲ್ ಮೂಲ ಸೌಕರ್ಯ ವ್ಯವಹಾರಗಳ ವೇಗ ಮತ್ತು ದಕ್ಷತೆಯನ್ನು ಹೆಚ್ಚಿಸುವ ವೇದಿಕೆಯನ್ನು ಒದಗಿಸಲಿದೆ. ನಿಮಗೆಲ್ಲರಿಗೂ ಜಾಗತಿಕ ಸಂಪರ್ಕ ಕುರಿತು ಅರಿವಿದೆ. ಗಿಪ್ಟ್ ಐಎಫ್ಎಸ್  ಸಿ ತಂತ್ರಜ್ಞಾನದ ಜಗತ್ತು ಮತ್ತು ಹಣಕಾಸು ಸಂಸ್ಥೆಗಳ ಹಿರಿ ತಲೆಗಳನ್ನು ಆಕರ್ಷಿಸುವ ನಿರ್ವಹಣೆಯಲ್ಲಿ ತೊಡಗಿದೆ. 

 

 

ಇಂದು ಐಎಫ್ಎಸ್ ಸಿಯಲ್ಲಿ 580 ಕಾರ್ಯಾಚಣೆಯ ಘಟಕಗಳಿವೆ. ಇದು 3 ವಿನಿಮಯ, ಅಂತರರಾಷ್ಟ್ರೀಯ ಷೇರು ವಿನಿಯಮ ಕೇಂದ್ರ, 25 ಬ್ಯಾಂಕ್ ಗಳು, ಅದರಲ್ಲಿ 9 ವಿದೇಶಿ ಬ್ಯಾಂಕ್ ಗಳು, 29 ವಿಮಾ ಘಟಕಗಳು, 2 ವಿದೇಶಿ ವಿಶ್ವವಿದ್ಯಾಲಗಳು ಮತ್ತು 50ಕ್ಕೂ ಅಧಿಕ ವೃತ್ತಿಪರ ಸೇವಾದಾರರು, ಸಮಾಲೋಚನಾ ಘಟಕಗಳು, ಕಾನೂನು ಘಟಕಗಳು ಮತ್ತು ಸಿಎ ಘಟಕಗಳನ್ನು ಒಳಗೊಂಡಿವೆ. ಗಿಪ್ಟ್ ಸಿಟಿ ಮುಂದಿನ ಕೆಲವು ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಹಣಕಾಸು ಕೇಂದ್ರವಾಗಿ ಹೊರ ಹೊಮ್ಮಲಿದೆ ಎಂಬ ವಿಶ್ವಾಸ ಹೊಂದಿದ್ದೇವೆ. 

ಸ್ನೇಹಿತರೇ 

ಭಾರತ ಅತ್ಯಂತ ಆಳವಾದ ಪ್ರಜಾಸತ್ತಾತ್ಮಕ ಮೌಲ್ಯಗಳು, ಶ್ರೀಮಂತ ವ್ಯಾಪಾರ ಮತ್ತು ವಾಣಿಜ್ಯ ಸಂಪ್ರದಾಯಗಳನ್ನು ಒಳಗೊಂಡಿರುವ ದೇಶವಾಗಿದೆ. ಭಾರತದಲ್ಲಿ ಹೂಡಿಕೆ ಮಾಡುವ ಪ್ರತಿಯೊಂದು ಕಂಪೆನಿ ಮತ್ತು ಹೂಡಿಕೆದಾರರಿಗೆ ವೈವಿಧ್ಯಮಯವಾದ ಅವಕಾಶಗಳಿವೆ. ಇದಕ್ಕೆ ಕೆಲವು ಉದಾಹರಣೆಗಳನ್ನು ನೀಡುತ್ತೇನೆ. ಇಂದು 400,000 ಪ್ರಯಾಣಿಕರು ವಾಯು ಮಾರ್ಗದಲ್ಲಿ ಸಂಚರಿಸುತ್ತಾರೆ. 2014 ರಲ್ಲಿ ವಿಮಾನಗಳ ಸಂಖ್ಯೆ 400 ರಷ್ಟಿತ್ತು. ಇದು ಈ ಸಂಖ್ಯೆ 700 ಕ್ಕೆ ಏರಿಕೆಯಾಗಿದೆ. ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ವಿಮಾನಗಳ ಸಂಖ್ಯೆ ಭಾರತದಲ್ಲಿ ದ್ವಿಗುಣಗೊಂಡಿದೆ. ಮುಂಬರುವ ವರ್ಷಗಳಲ್ಲಿ ವಿಮಾನಗಳ ಖರೀದಿ 1000 ಕ್ಕೆ ಏರಿಕೆಯಾಗಲಿದೆ.  

ಈ ಪರಿಸ್ಥಿತಿಯಲ್ಲಿ ಗಿಪ್ಟ್ ಸಿಟಿಗೆ ವಿಮಾನಗಳನ್ನು ಒದಗಿಸುವ ಸೌಲಭ್ಯಗಳ ವ್ಯಾಪ್ತಿಯು ನಿಜವಾಗಿಯೂ ಗಮನಾರ್ಹವಾಗಿದೆ. ಜಲ ಮಾರ್ಗದ ಮೂಲಕವೂ ಸರಕುಗಳನ್ನು ಸಾಗಿಸುವುದನ್ನು ಸರ್ಕಾರ ಹೆಚ್ಚಿಸಿದ್ದು, ಭಾರತದಲ್ಲಿ ಹಡಗುಗಳ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ. ಐಎಫ್ಎಸ್ ಸಿ ಹಡಗುಗಳ ಕಾರ್ಯಾಚರಣೆಯ ಚೌಕಟ್ಟು ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಪ್ರವೃತ್ತಿಯ ಲಾಭ ಮಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಇದೇ ರೀತಿ ಭಾರತ ಬಲವಾದ ಐಟಿ ಪ್ರತಿಭೆಗಳನ್ನು ಹೊಂದಿದ್ದು, ದತ್ತಾಂಶ ಕಾನೂನು ರಕ್ಷಣೆ ಮತ್ತು ಗಿಪ್ಟ್ ದತ್ತಾಂಶ ವಲಯದಲ್ಲಿ ಡಿಜಿಟಲ್ ಸುರಕ್ಷತೆಗೆ ಒತ್ತು ನೀಡಲಾಗಿದೆ. ಇದರಿಂದ ದೇಶಗಳು ಮತ್ತು ವ್ಯಾಪಾರಿಗಳ ನಡುವೆ ಡಿಜಿಟಲ್ ಸಂಪರ್ಕ ಪಡೆಯಲು ಸಹಕಾರಿಯಾಗಿದೆ. ಭಾರತದಲ್ಲಿನ ಯುವ ಪ್ರತಿಭೆಗಳಿಗೆ ಧನ್ಯವಾದಗಳು, ನಾವು ಅನೇಕ ಪ್ರಮುಖ ಜಾಗತಿಕ ಕೇಂದ್ರಗಳಿಗೆ ಆಧಾರವಾಗಿದ್ದೇವೆ. 

ಸ್ನೇಹಿತರೇ,

ಮುಂದಿನ ಕೆಲವು ವರ್ಷಗಳಲ್ಲಿ ಭಾರತ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮಲಿದೆ ಮತ್ತು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗುವ ಗುರಿ ಹೊಂದಿದೆ. ಬಂಡವಾಳ, ಡಿಜಿಟಲ್ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಹಣಕಾಸು ಸೇವೆಗಳಲ್ಲಿನ ಹೊಸ ಸುಧಾರಣೆಗಳು ಈ ಯಾನದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಇಂತಹ ಸಮರ್ಥ ನಿಯಂತ್ರಣಗಳು, ಮೂಲ ಸೌಕರ್ಯದಿಂದ ಭಾರತದ ಒಳನಾಡು ಆರ್ಥಿಕತೆಯನ್ನು ದೊಡ್ಡ ಪ್ರಮಾಣದಲ್ಲಿ ತಲುಪಲು ಸಾಧ್ಯವಾಗಲಿದೆ. ವೆಚ್ಚದ ಅನುಕೂಲತೆಗಳು, ಪ್ರತಿಭೆಗಳು, ಗಿಪ್ಟ್ ಸಿಟಿ, ಬೇರೆ ಯಾವುದಕ್ಕೂ ಸರಿಸಾಟಿಯಿಲ್ಲದ ಅವಕಾಶಗಳನ್ನು ಸೃಜಿಸಲಿದೆ. 

ಗಿಪ್ಟ್ ಐಎಫ್ಎಸ್ ಸಿ ಮೂಲಕ ಜಾಗತಿಕ ಕನಸುಗಳನ್ನು ಸಾಕಾರಗೊಳಿಸಲು ನಾವು ಮುನ್ನಡೆಯೋಣ. ಉಜ್ವಲ ಜಾಗತಿಕ ಹೂಡಿಕೆದಾರರ ಶೃಂಗಸಭೆ ಇನ್ನೇನು ಸನಿಹದಲ್ಲಿದೆ ಮತ್ತು ನಾನು ನಿಮ್ಮೆಲ್ಲರನ್ನು ಶೃಂಗಸಭೆಗೆ ಆಹ್ವಾನಿಸುತ್ತಿದ್ದೇನೆ. ನಿಮ್ಮ ಪ್ರಯತ್ನಗಳಿಗೆ ನನ್ನ ಶುಭ ಹಾರೈಕೆ. ಜಾಗತಿಕ ಸವಾಲುಗಳಿಗೆ ನಾವೀನ್ಯತೆಯ ಚಿಂತನೆಗಳನ್ನು ಪರಿಶೋಧಿಸೋಣ ಮತ್ತು ಮುನ್ನಡೆಯೋಣ

ತುಂಬಾ ಧನ್ಯವಾದಗಳು 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi