Agricultural institutions will provide new opportunities to students, help connect farming with research and advanced technology, says PM
PM calls for ‘Meri Jhansi-Mera Bundelkhand’ to make Atmanirbhar Abhiyan a success
500 Water related Projects worth over Rs 10,000 crores approved for Bundelkhand region; work on Projects worth Rs 3000 crores already commenced

ನಮ್ಮ ದೇಶದ ಕೃಷಿ ಸಚಿವರಾದ ಶ್ರೀ ನರೇಂದ್ರ ಸಿಂಗ್ ಥೋಮರ್ ಅವರೇ, ನನ್ನ ಮಂತ್ರಿ ಮಂಡಳದ ಇತರ ಸಚಿವರುಗಳೇ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ, ಇತರ ಅತಿಥಿಗಳೇ, ಎಲ್ಲ ವಿದ್ಯಾರ್ಥಿ ಮಿತ್ರರೇ ಮತ್ತು ದೇಶದ ವಿವಿಧ ಭಾಗಗಳಿಂದ ವರ್ಚುವಲ್ ಸಮಾರಂಭದಲ್ಲಿ ಸಂಪರ್ಕಿತರಾಗಿರುವ ನನ್ನ ಎಲ್ಲ ಸಹೋದರ ಮತ್ತು ಸಹೋದರಿಯರೇ, ರಾಣಿ ಲಕ್ಷ್ಮೀಬಾಯಿ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ನೂತನ ಕಾಲೇಜು ಮತ್ತು ಆಡಳಿತ ಕಟ್ಟಡಕ್ಕಾಗಿ ನಾನು ತಮ್ಮೆಲ್ಲರಿಗೂ ನನ್ನ ಶುಭಾಶಯಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇಲ್ಲಿಂದ ಪದವಿ ಪಡೆದ ಬಳಿಕ ಯುವ ಸಹೋದ್ಯೋಗಿಗಳು ಕೃಷಿ ಕ್ಷೇತ್ರದ ಸಬಲೀಕರಣಕ್ಕಾಗಿ ಶ್ರಮಿಸಲಿದ್ದಾರೆ.

ನಾನು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ವೇಳೆ ಅವರ ಸಿದ್ಧತೆ, ವಿಶ್ವಾಸ, ಉತ್ಸಾಹವನ್ನು ನೋಡಿದೆ ಮತ್ತು ಗ್ರಹಿಸಿದೆ. ಹೊಸ ಕಟ್ಟಡ ನಿರ್ಮಾಣದ ನಂತರ ಹೆಚ್ಚಿನ ಸೌಲಭ್ಯಗಳು ಲಭ್ಯವಾಗಲಿವೆ ಎಂಬ ವಿಶ್ವಾಸ ನನಗಿದೆ. ಈ ಸೌಲಭ್ಯಗಳೊಂದಿಗೆ ಹೆಚ್ಚಿನದನ್ನು ಸಾಧಿಸಲು ವಿದ್ಯಾರ್ಥಿಗಳಿಗೆ ಸ್ಫೂರ್ತಿ ಮತ್ತು ಪ್ರೋತ್ಸಾಹ ದೊರೆಯಲಿದೆ.

ಸ್ನೇಹಿತರೆ, “ನನ್ನ ಝಾನ್ಸಿಯನ್ನು ಬಿಟ್ಟುಕೊಡುವುದಿಲ್ಲ’ ಎಂದು ಒಮ್ಮೆ ರಾಣಿ ಲಕ್ಷ್ಮೀಬಾಯಿ ಅವರು ಬುಂದೇಲಖಂಡದ ನೆಲದಿಂದ ಘೋಷಣೆ ಮೊಳಗಿಸಿದ್ದರು. ನಾವೆಲ್ಲರೂ “ನನ್ನ ಝಾನ್ಸಿಯನ್ನು ಬಿಟ್ಟುಕೊಡುವುದಿಲ್ಲ’ ಎಂಬ ಈ ವಾಕ್ಯವನ್ನು ಸ್ಮರಿಸುತ್ತೇವೆ. ಇಂದು ಝಾನ್ಸಿಯಿಂದ, ಬುಂದೇಲಖಂಡದ ಈ ನೆಲದಿಂದ ಹೊಸ ಘೋಷಣೆ ಮಾಡುವ ಅಗತ್ಯವಿದೆ. “ನನ್ನ ಝಾನ್ಸಿ – ನನ್ನ ಬುಂದೇಲಖಂಡ’ ಎಂಬುದು ಆತ್ಮ ನಿರ್ಭರ ಭಾರತ ಅಭಿಯಾನವನ್ನು ಯಶಸ್ವಿಗೊಳಿಸುವುದಕ್ಕಾಗಿ ನಮ್ಮ ಎಲ್ಲ ಶಕ್ತಿ ವಿನಿಯೋಗಿಸಿ ಹೊಸ ಅಧ್ಯಾಯ ಬರೆಯುತ್ತದೆ.

ಇದರಲ್ಲಿ ಕೃಷಿಗೆ ದೊಡ್ಡ ಪಾತ್ರವಿದೆ. ನಾವು ಕೃಷಿಯಲ್ಲಿ ಸ್ವಾವಲಂಬನೆಯ ಮಾತನಾಡಿದರೆ, ಅದು ಕೇವಲ ಆಹಾರ ಧಾನ್ಯಕ್ಕೆ ಮಾತ್ರವೇ ಸೀಮಿತವಾಗಿರುವುದಿಲ್ಲ, ಅದು ಗ್ರಾಮಗಳ ಸಂಪೂರ್ಣ ಆರ್ಥಿಕತೆಯ ಸ್ವಾವಲಂಬನೆ ಕುರಿತದ್ದಾಗಿರುತ್ತದೆ. ದೇಶದ ವಿವಿಧ ಭಾಗಗಳಲ್ಲಿನ ಕೃಷಿ ಉತ್ಪನ್ನಗಳಿಗೆ ಈ ಅಭಿಯಾನ ಮೌಲ್ಯವನ್ನು ಸೇರಿಸುತ್ತದೆ ಮತ್ತು ಅವುಗಳನ್ನು ವಿಶ್ವದ ಮಾರುಕಟ್ಟೆಗಳಿಗೆ ಕೊಂಡೊಯ್ಯುವುದು ಇದರ ಉದ್ದೇಶವಾಗಿದೆ. ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸುವುದರ ಹಿಂದಿನ ಉದ್ದೇಶ ರೈತರನ್ನು ಉತ್ಪಾದಕರನ್ನಷ್ಟೇ ಅಲ್ಲದೆ ಉದ್ಯಮಿಗಳನ್ನಾಗಿ ಮಾಡುವುದಾಗಿದೆ. ರೈತರು ಮತ್ತು ಕೃಷಿ, ಕೈಗಾರಿಕೆಗಳಂತೆ ಪ್ರಗತಿಯಾದಾಗ ಹಳ್ಳಿಗಳು ಮತ್ತು ಹತ್ತಿರದ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಮತ್ತು ಸ್ವ ಉದ್ಯೋಗಕ್ಕೆ ದೊಡ್ಡ ಅವಕಾಶಗಳು ಸಿಗಲಿವೆ.

ಸ್ನೇಹಿತರೆ, ಈ ಸಂಕಲ್ಪವನ್ನು ಮನದಲ್ಲಿಟ್ಟುಕೊಂಡು ಸರ್ಕಾರ ನಿರಂತರವಾಗಿ ಹಲವಾರು ಐತಿಹಾಸಿಕ ಸುಧಾರಣೆಗಳನ್ನು ಕೃಷಿ ವಲಯದಲ್ಲಿ ಮಾಡುತ್ತಿದೆ. ಭಾರತದಲ್ಲಿ ರೈತರಿಗೆ ಸಂಕೋಲೆಯಾಗಿದ್ದ ಮಂಡಿ (ಮಾರುಕಟ್ಟೆ) ಕಾನೂನುಗಳು ಮತ್ತು ಅಗತ್ಯ ಸೇವೆಗಳ ಕಾಯಿದೆಯಂಥ ಹಲವಾರು ಕಾನೂನುಗಳಲ್ಲಿ ಈಗ ಭಾರೀ ಸುಧಾರಣೆ ಆಗಿದೆ. ಈಗ ಇತರ ಯಾವುದೇ ಕೈಗಾರಿಕೆಯಂತೆ ರೈತರು ಕೂಡ ತಮ್ಮ ಉತ್ಪನ್ನಗಳನ್ನು ದೇಶದ ಯಾವುದೇ ಭಾಗದಲ್ಲಿ, ತಮಗೆ ಉತ್ತಮ ಬೆಲೆ ದೊರಕುವ ಕಡೆ ಮಾರಾಟ ಮಾಡಬಹುದಾಗಿದೆ.

ಇದರ ಜೊತೆಗೆ ಗ್ರಾಮಗಳ ಬಳಿ ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ ಪಡಿಸುವ ಸಮಗ್ರ ಯೋಜನೆ ಮಾಡಲಾಗಿದೆ. ಇದಕ್ಕಾಗಿ ಒಂದು ಲಕ್ಷ ಕೋಟಿ ರೂ.ಗಳ ವಿಶೇಷ ನಿಧಿ ಸ್ಥಾಪಿಸಲಾಗಿದ್ದು, ಈ ಕೈಗಾರಿಕೆಗಳು ಉತ್ತಮ ಮೂಲಸೌಕರ್ಯ ಸೌಲಭ್ಯ ಪಡೆಯಲಿವೆ. ಈ ನಿಧಿ ದಾಸ್ತಾನು ಮತ್ತು ಸಂಸ್ಕರಣಾ ಸಂಬಂಧಿತ ಕೈಗಾರಿಕೆಗಳ ಆಧುನಿಕ ಮೂಲಸೌಕರ್ಯ ಸಿದ್ಧತೆಗಾಗಿ ನಮ್ಮ ರೈತ ಉತ್ಪನ್ನ ಸಂಘಟನೆ (ಎಫ್.ಪಿ.ಎಗಳಿಗೆ0 ನೆರವಾಗಲಿದೆ. ಇದು ಕೃಷಿ ಕ್ಷೇತ್ರದಲ್ಲಿ ಓದುತ್ತಿರುವ ಯುವಕರಿಗೆ ಮತ್ತು ಅವರ ಇತರ ಸ್ನೇಹಿತರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ ಮತ್ತು ನವೋದ್ಯಮಗಳಿಗೆ ಹೊಸ ದಾರಿ ತೆರೆಯಲಿವೆ.

ಸ್ನೇಹಿತರೆ, ತಂತ್ರಜ್ಞಾನ ಮತ್ತು ಆಧುನಿಕ ಸಂಶೋಧನೆಯೊಂದಿಗೆ ಬೀಜದಿಂದ ಮಾರುಕಟ್ಟೆವರೆಗೆ ಎಲ್ಲವನ್ನೂ ಸಂಪರ್ಕಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಸಂಶೋಧನಾ ಸಂಸ್ಥೆಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳಿಗೆ ಇದರಲ್ಲಿ ದೊಡ್ಡ ಪಾತ್ರವಿದೆ. ಕಳೆದ ಆರು ವರ್ಷಗಳ ಹಿಂದೆ ದೇಶದಲ್ಲಿ ಒಂದೇ ಒಂದು ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯವಿತ್ತು. ಇಂದು ದೇಶದಲ್ಲಿ ಮೂರು ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯಗಳಿವೆ. ಇದರ ಜೊತೆಗೆ ಮೂರು ರಾಷ್ಟ್ರೀಯ ಸಂಸ್ಥೆಗಳು ಅಂದರೆ ಐಎಆರ್.ಐ ಜಾರ್ಖಂಡ್, ಐಎಆರ್.ಐ ಅಸ್ಸಾಂ ಮತ್ತು ಬಿಹಾರದ ಮೋತಿಹಾರಿಯ ಮಹಾತ್ಮಾ ಗಾಂಧಿ ಸಮಗ್ರ ಕೃಷಿ ಸಂಸ್ಥೆಗಳನ್ನು ಕೂಡ ಸ್ಥಾಪಿಸಲಾಗಿದೆ. ಈ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳನ್ನು ನೀಡುವುದಷ್ಟೇ ಅಲ್ಲದೆ, ಸ್ಥಳೀಯ ರೈತರಿಗೆ ತಂತ್ರಜ್ಞಾನದ ಪ್ರಯೋಜನ ಒದಗಿಸುವುದರೊಂದಿಗೆ ಅವರ ಸಾಮರ್ಥ್ಯ ವರ್ಧನೆಗೂ ನೆರವು ನೀಡಲಿವೆ.

ಇದರ ಜೊತೆಗೆ ಸೌರ ಪಂಪ್, ಸೌರ ವೃಕ್ಷ, ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ಅಭಿವೃದ್ಧಿ, ಸೂಕ್ಷ್ಮ ನೀರಾವರಿ, ಹನಿ ನೀರಾವರಿ ಇತ್ಯಾದಿ ಅನೇಕ ಕ್ಷೇತ್ರಗಳಲ್ಲಿ ಕಾಮಗಾರಿಗಳೂ ನಡೆಯುತ್ತಿವೆ. ಈ ಉಪಕ್ರಮಗಳು ಹೆಚ್ಚಿನ ಸಂಖ್ಯೆಯ ರೈತರಿಗೆ, ವಿಶೇಷವಾಗಿ ಬುಂದೇಲ್‌ ಖಂಡ್‌ ರೈತರಿಗೆ ದೊರಕುವಂತೆ ಮಾಡುವಲ್ಲಿ ನೀವೆಲ್ಲರೂ ಪ್ರಮುಖ ಪಾತ್ರ ವಹಿಸಿದ್ದೀರಿ. ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸಿದ ಮತ್ತೊಂದು ಉದಾಹರಣೆ ಕಂಡುಬಂದಿದೆ.

ಬುಂದೇಲ್ ಖಂಡ್ ನಲ್ಲಿ ಕಳೆದ ಮೇ ತಿಂಗಳಿನಲ್ಲಿ ಮಿಡತೆಗಳ ದೊಡ್ಡ ದಾಳಿಯನ್ನು ನೀವು ನೆನಪಿಸಿಕೊಳ್ಳಬಹುದು. ಮಿಡತೆಗಳ ಹಿಂಡು ಬರುತ್ತಿರುವ ಸುದ್ದಿ ಬಂದಾಗ ತಮ್ಮ ಹಲವು ತಿಂಗಳುಗಳ ಶ್ರಮ ನಾಶವಾಗುತ್ತದೆ ಎಂದು ರೈತನಿಗೆ ನಿದ್ರೆ ಮಾಡಲೂ ಸಾಧ್ಯವಾಗಿರುವುದಿಲ್ಲ. ಮಿಡತೆಗಳಿಂದ ರೈತರ ಬೆಳೆಗಳು ಮತ್ತು ತರಕಾರಿಗಳಿಗೆ ಹಾನಿಯಾಗುವುದು ನಿಶ್ಚಿತ. ಸುಮಾರು 30 ವರ್ಷಗಳ ನಂತರ ಮಿಡತೆಗಳಿಂದ ಬುಂದೇಲ್‌ ಖಂಡ್‌ ಮೇಲೆ ದಾಳಿ ಮಾಡಿವೆ ಎಂದು ನನಗೆ ತಿಳಿಸಲಾಗಿದೆ. ಈ ಮಧ್ಯೆ, ಮಿಡತೆಗಳು ಇಲ್ಲಿಗೆ ಬರುತ್ತಿರಲಿಲ್ಲ. ಸಾಂಪ್ರದಾಯಿಕ ಮತ್ತು ಸಾಮಾನ್ಯ ವಿಧಾನಗಳ ಮೂಲಕ ಇದನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಭಾರತ ಈ ಹಿಂಡಿನಿಂದ ಮುಕ್ತವಾಗಿದೆ ಮತ್ತು ಅತ್ಯಂತ ವೈಜ್ಞಾನಿಕವಾಗಿ ಈ ದೊಡ್ಡ ದಾಳಿಯಿಂದ ಪಾರಾಗಿದೆ. ಭಾರತವು ಕರೋನಾದಿಂದ ಬಳಲದೇ ಇದ್ದಿದ್ದರೆ, ಒಂದು ವಾರ ಕಾಲ ಭಾರತೀಯ ಮಾಧ್ಯಮಗಳಲ್ಲಿ ಇದರ ಬಗ್ಗೆ ಸಕಾರಾತ್ಮಕ ಚರ್ಚೆ ನಡೆಯುತ್ತಿತ್ತು, ಅಂತಹ ದೊಡ್ಡ ಕೆಲಸ ನಡೆದಿತ್ತು. ಮಿಡತೆ ದಾಳಿಯಿಂದ ರೈತರ ಬೆಳೆಯನ್ನು ಉಳಿಸಲು, ಸಮರೋಪಾದಿಯಲ್ಲಿ ಪ್ರಯತ್ನ ನಡೆದಿತ್ತು. 12ಕ್ಕೂ ಹೆಚ್ಚು ನಿಯಂತ್ರಣ ಕೊಠಡಿಗಳನ್ನು ಝಾನ್ಸಿ ಸೇರಿದಂತೆ ವಿವಿಧ ಪಟ್ಟಣಗಳಲ್ಲಿ ತೆರೆಯಲಾಗಿತ್ತು. ರೈತರಿಗೆ ಶೀಘ್ರ ಮಾಹಿತಿ ತಲುಪಲಿ ಎಂದು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮಿಡತೆಗಳನ್ನು ಕೊಲ್ಲಲು ಮತ್ತು ನಿವಾರಿಸಲು ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ರಾಸಾಯನಿಕ ಸಿಂಪಡಿಸುವ ಯಂತ್ರಗಳೂ ಇರಲಿಲ್ಲ, ಕಾರಣ ಇಂಥ ದಾಳಿಗಳು ಸಾಮಾನ್ಯವಾಗಿ ಸಂಭವಿಸುವುದಿಲ್ಲ. ಸರ್ಕಾರ ತಕ್ಷಣವೇ ಈ ಆಧುನಿಕ ಯಂತ್ರಗಳನ್ನು ಖರೀದಿಸಿ ಜಿಲ್ಲೆಗಳಿಗೆ ರವಾನಿಸಿತು. ಅದು ಟ್ಯಾಂಕರ್‌ ಆಗಿರಲಿ, ವಾಹನಗಳು, ರಾಸಾಯನಿಕಗಳು ಅಥವಾ ಔಷಧಗಳಾಗಿರಲಿ ಎಲ್ಲಾ ಸಂಪನ್ಮೂಲಗಳನ್ನು ನಿಯೋಜಿಸಿತು. ಇದರಿಂದ ರೈತರು ಹೆಚ್ಚು ತೊಂದರೆ ಅನುಭವಿಸಲಿಲ್ಲ.

ದೊಡ್ಡ ಮರಗಳನ್ನು ರಕ್ಷಇಸಲು ಬಹುತೇಕ ಪ್ರದೇಶಗಳಲ್ಲಿ ರಾಸಾಯನಿಕ ಸಿಂಪಡಿಸಲು 12ಕ್ಕೂ ಹೆಚ್ಚು ಡ್ರೋನ್ ಗಳನ್ನು ನಿಯೋಜಿಸಲಾಗಿತ್ತು. ರೈತರನ್ನು ದೊಡ್ಡ ನಷ್ಟದಿಂದ ಪಾರು ಮಾಡಲು ಈ ಎಲ್ಲ ಪ್ರಯತ್ನ ಮಾಡಲಾಯಿತು.

ಸ್ನೇಹಿತರೇ, ಯುವ ಸಂಶೋಧಕರು ಮತ್ತು ವಿಜ್ಞಾನಿಗಳು ಒನ್ ಲೈಫ್ ಒನ್ ಮಿಷನ್‌ ನಲ್ಲಿ ನಿರಂತರವಾಗಿ ಕೆಲಸ ಮಾಡಬೇಕಾಗುತ್ತದೆ ಇದರಿಂದ ದೇಶದ ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಮತ್ತು ಆಧುನಿಕ ಕೃಷಿ ಉಪಕರಣಗಳ ಗರಿಷ್ಠ ಬಳಕೆ ಆಗುತ್ತದೆ.

ಕಳೆದ ಆರು ವರ್ಷಗಳಿಂದ, ಸಂಶೋಧನೆಯನ್ನು ಗ್ರಾಮ ಮಟ್ಟದಲ್ಲಿ ಸಣ್ಣ ರೈತರಿಗೆ ಕೃಷಿ ಮತ್ತು ವೈಜ್ಞಾನಿಕ ಸಲಹೆಯ ಲಭ್ಯತೆಯೊಂದಿಗೆ ಸಂಪರ್ಕಿಸಲು ಸಮಗ್ರ ಪ್ರಯತ್ನಗಳು ನಡೆಯುತ್ತಿವೆ. ಕ್ಯಾಂಪಸ್‌ ನಿಂದ ತಜ್ಞರನ್ನು ರೈತರ ಭೂಮಿಗೆ ಬರುವಂತೆ ಮಾಡುವ ಪರಿಸರ ವ್ಯವಸ್ಥೆ ಹೆಚ್ಚು ಪರಿಣಾಮಕಾರಿ. ನಿಮ್ಮ ವಿಶ್ವವಿದ್ಯಾಲಯ ಕೂಡ ಇದರಲ್ಲಿ ಮಹತ್ವದ ಪಾತ್ರ ಹೊಂದಿದೆ.

ಸ್ನೇಹಿತರೆ, ಕೃಷಿಗೆ ಸಂಬಂಧಿತ ಶಿಕ್ಷಣ ಮತ್ತು ಪ್ರಾಯೋಗಿಕ ಆನ್ವಯಿಕಗಳನ್ನು ಶಾಲೆಗಳಿಗೆ ತೆಗೆದುಕೊಂಡು ಹೋಗುವ ಅಗತ್ಯವಿದೆ. ಗ್ರಾಮಗಳಲ್ಲಿನ ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಕೃಷಿ ವಿಷಯಗಳನ್ನು ಪರಿಚಯಿಸುವ ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ಎರಡು ಪ್ರಯೋಜನಗಳಿವೆ. ಮೊದಲನೆಯ ಪ್ರಯೋಜನ, ಗ್ರಾಮಗಳ ವಿದ್ಯಾರ್ಥಿಗಳಲ್ಲಿ ಕೃಷಿ ಸಂಬಂಧಿತ ತಿಳಿವಳಿಕೆ ವಿಸ್ತಾರವಾಗುತ್ತದೆ, ಎರಡನೆಯ ಪ್ರಯೋಜನ, ವಿದ್ಯಾರ್ಥಿಗಳಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಕೃಷಿಯ ಬಗ್ಗೆ, ಆಧುನಿಕ ಕೃಷಿ ತಂತ್ರಜ್ಞಾನಗಳು ಹಾಗೂ ಮಾರುಕಟ್ಟೆಯ ಬಗ್ಗೆ ಮಾಹಿತಿ ನೀಡುತ್ತದೆ. ಇದು ದೇಶದಲ್ಲಿ ಕೃಷಿ ಉದ್ಯಮಶೀಲತೆಯನ್ನೂ ಉತ್ತೇಜಿಸುತ್ತದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಗತ್ಯ ಸುಧಾರಣೆಗಳನ್ನು ಪ್ರಸ್ತಾಪಿಸಲಾಗಿದೆ.

ಲಕ್ಷ್ಮಿ ಬಾಯಿಯವರ ಕಾಲದಿಂದಷ್ಟೇ ಅಲ್ಲ, ಬುಂದೇಲ್‌ ಖಂಡ್ ಸವಾಲುಗಳನ್ನು ಎದುರಿಸುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿದೆ. ಯಾವುದೇ ಸವಾಲುಗಳನ್ನು ಎದುರಿಸಲು ಬುಂದೇಲ್‌ ಖಂಡ್‌ ನ ಹೆಸರುವಾಸಿಯಾಗಿದೆ.

ಬುಂದೇಲ್ ಖಂಡ್ ಜನರು ಕೊರೊನಾ ವಿರುದ್ಧ ದೃಢವಾಗಿದ್ದಾರೆ. ಸರ್ಕಾರ ಕೂಡ ಪ್ರಯತ್ನಗಳನ್ನು ಮಾಡಿದ್ದು, ಜನರಿಗೆ ಕನಿಷ್ಠ ಸಮಸ್ಯೆಯಾಗಿದೆ. ಬಡವರ ಮನೆಯ ಒಲೆಗಳು ಉರಿಯುವುದನ್ನು ಖಾತ್ರಿ ಪಡಿಸಿಕೊಳ್ಳಲು ದೇಶದ ಇನ್ನಿತರ ಭಾಗಗಳಂತೆಯೇ ಕೋಟ್ಯಂತರ ಬಡವರಿಗೆ ಮತ್ತು ಉತ್ತರ ಪ್ರದೇಶದ ಗ್ರಾಮೀಣ ಕುಟುಂಬಗಳಿಗೆ ಉಚಿತ ಪಡಿತರ ವಿತರಿಸಲಾಗಿದೆ.

ಬುಂದೇಲ್ ಖಂಡದ ಬಹುತೇಕ 10 ಲಕ್ಷ ಬಡ ಸೋದರಿಯರಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್ ಪೂರೈಸಲಾಗಿದೆ. ಲಕ್ಷಾಂತರ ಸೋದರಿಯರ ಜನ್ ಧನ್ ಖಾತೆಗಳಲ್ಲಿ ಕೋಟ್ಯಂತರ ರೂಪಾಯಿ ಜಮಾ ಮಾಡಲಾಗಿದೆ. 700 ಕೋಟಿ ರೂ. ಗೂ ಅಧಿಕ ಹಣವನ್ನು ಉತ್ತರಪ್ರದೇಶವೊಂದರಲ್ಲೇ ಗರೀಬ್ ಕಲ್ಯಾಣ ರೋಜ್ಗಾರ್ ಯೋಜನೆ ಅಡಿ ವ್ಯಯಿಸಲಾಗಿದೆ. ಇದು ಲಕ್ಷಾಂತರ ಕಾರ್ಯಕರ್ತರಿಗೆ ಉದ್ಯೋಗ ಖಾತ್ರಿಪಡಿಸಿದೆ. ಬುಂದೇಲ್ ಖಂಡದಲ್ಲಿ ನೂರಾರು ಕೆರೆಗಳನ್ನು ದುರಸ್ತಿ ಮಾಡಲಾಗಿದೆ ಮತ್ತು ಹೊಸ ಕೆರೆ ನಿರ್ಮಿಸಲಾಗಿದೆ ಎಂದು ನನಗೆ ತಿಳಿಸಲಾಗಿದೆ.

ಸ್ನೇಹಿತರೆ, ನಾನು ಚುನಾವಣೆಗೂ ಮೊದಲು ಝಾನ್ಸಿಗೆ ಬಂದಾಗ ಬುಂದೇಲ್ ಖಂಡದ ಸೋದರಿಯರಿಗೆ ಹೇಳಿದ್ದೆ, ಹಿಂದಿನ ಐದು ವರ್ಷ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿತ್ತು, ಮುಂದಿನ ಐದು ವರ್ಷ ನೀರಿಗೆ ಸಂಬಂಧಿಸಿರುತ್ತದೆ ಎಂದು. ಸೋದರಿಯರ ಆಶೀರ್ವಾದದಿಂದಾಗಿ ಮನೆಗಳಿಗೆ ಕುಡಿಯುವ ನೀರಿನ ಲಭ್ಯತೆ ವೇಗವಾಗಿ ಸಾಗಿದೆ. ಯುಪಿ ಮತ್ತು ಎಂಪಿಯ ಹಬ್ಬಿರುವ ಬುಂದೇಲ್ ಖಂಡದ ಎಲ್ಲ ಜಿಲ್ಲೆಗಳಲ್ಲಿ ಜಲ ಮೂಲಗಳ ನಿರ್ಮಾಣ ಕಾಮಗಾರಿ ಮತ್ತು ಕೊಳವೆ ಮಾರ್ಗ ಅಳವಡಿಕೆ ತಡೆರಹಿತವಾಗಿ ಸಾಗಿದೆ. 10 ಸಾವಿರ ಕೋಟಿ ರೂ. ಮೌಲ್ಯದ ಸುಮಾರು 500 ಜಲ ಯೋಜನೆಗಳನ್ನು ಈ ವಲಯಕ್ಕೆ ಮಂಜೂರು ಮಾಡಲಾಗಿದೆ. ಕಳೆದ ಎರಡು ತಿಂಗಳುಗಳಲ್ಲಿ 3000 ಕೋಟಿ ರೂ. ಮೌಲ್ಯದ ಯೋಜನೆ ಆರಂಭಿಸಲಾಗಿದೆ. ಯೋಜನೆ ಪೂರ್ಣಗೊಂಡ ಬಳಿಕ ಬುಂದೇಲಖಂಡದ ಲಕ್ಷಾಂತರ ಕುಟುಂಬಗಳು ಇದರ ನೇರ ಪ್ರಯೋಜನ ಪಡೆಯಲಿವೆ. ಬುಂದೇಲಖಂಡದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅಟಲ್ ಭೂ ಜಲ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ಝಾನ್ಸಿಯ, ಮೊಹೋಬಾ, ಬಾಂಡಾ, ಹಮೀರ್ಪುರ, ಚಿತ್ರಕೂಟ ಮತ್ತು ಲಿತಪುರ್ ನ ನೂರಾರು ಗ್ರಾಮಗಳಲ್ಲಿನ ಅಂತರ್ಜಲ ಮಟ್ಟ ಹೆಚ್ಚಿಸಲು 700 ಕೋಟಿ ರೂ.ಗೂ ಅಧಿಕ ಮೌಲ್ಯದ ಯೋಜನೆ ನಡೆಯುತ್ತಿದೆ. ಸ್ನೇಹಿತರೆ ಬುಂದೇಲ್‌ ಖಂಡದ ಒಂದೆಡೆ ಬೆಟ್ವಾ ಹರಿದರೆ, ಮತ್ತೊಂದು ಕಡೆ ಕೆನ್ ಹರಿಯುತ್ತದೆ ಮತ್ತು ತಾಯಿ ಯಮುನಾ ಉತ್ತರಾಭಿಮುಖವಾಗಿ ಹರಿಯುತ್ತದೆ. ಆದರೂ ಇಡೀ ಪ್ರದೇಶ ನದಿಗಳ ಸಂಪೂರ್ಣ ಪ್ರಯೋಜನವನ್ನು ಪಡೆಯುತ್ತಿಲ್ಲ. ಈ ಪರಿಸ್ಥಿತಿಯನ್ನು ಬದಲಾಯಿಸಲು ಸರ್ಕಾರ ಸತತ ಪ್ರಯತ್ನಗಳನ್ನು ಮಾಡುತ್ತಿದೆ. ಕೆನ್ – ಬೆಟ್ವಾ ನದಿ ಜೋಡಣೆ ಯೋಜನೆ ಈ ಪ್ರದೇಶದ ಹಣೆ ಬರಹವನ್ನೇ ಬದಲಾಯಿಸಲಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದೊಂದಿಗೆ ಸಹಕರಿಸುತ್ತಿದೆ ಮತ್ತು ಶ್ರಮಿಸುತ್ತಿದೆ. ಅಗತ್ಯಪ್ರಮಾಣದ ನೀರು ದೊರೆತ ಬಳಿಕ ಬುಂದೇಲಖಂಡವೇ ಬದಲಾಗಿ ಹೋಗುತ್ತದೆ ಎಂಬ ಪೂರ್ಣ ವಿಶ್ವಾಸ ನನಗಿದೆ.

ಬುಂದೇಲಖಂಡ ಎಕ್ಸ್ ಪ್ರೆಸ್ ಹೆದ್ದಾರಿ ಆಗಿರಲಿ ಅಥವಾ ರಕ್ಷಣಾ ಕಾರಿಡಾರ್ ಆಗಿರಲಿ, ಸಾವಿರಾರು ಕೋಟಿ ರೂ. ಮೌಲ್ಯದ ಯೋಜನೆಗಳು ಹೊಸ ಉದ್ಯೋಗಾವಕಾಶ ಸೃಷ್ಟಿಸಲಿವೆ. ಧೈರ್ಯಶಾಲಿಗಳ ನಾಡು ಝಾನ್ಸಿ ಮತ್ತು ಸಮೀಪದ ಪ್ರದೇಶಗಳ ಈ ಭೂಮಿಯನ್ನು ದೇಶವು ರಕ್ಷಣೆಯಲ್ಲಿ ಸ್ವಾವಲಂಬಿಗಳನ್ನಾಗಿ ಮಾಡಲು ದೊಡ್ಡ ರೀತಿಯಲ್ಲಿ ಅಭಿವೃದ್ಧಿಪಡಿಸುವ ದಿನ ದೂರವೇನಿಲ್ಲ. ಒಂದು ರೀತಿಯಲ್ಲಿ ‘ಜೈ ಜವಾನ್, ಜೈ ಕಿಸಾನ್ ಮತ್ತು ಜೈ ವಿಜ್ಞಾನ’ ಮಂತ್ರ ನಾಲ್ಕು ದಿಕ್ಕುಗಳಲ್ಲಿ ಅಣುರಣಿಸುತ್ತದೆ. ಬುಂದೇಲ್‌ ಖಂಡ್‌ ನ ಪ್ರಾಚೀನ ಹಿರಿಮೆ ಮತ್ತು ಈ ಭೂಮಿಯ ಹೆಮ್ಮೆಯನ್ನು ಶ್ರೀಮಂತಗೊಳಿಸಲು ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರ ಬದ್ಧವಾಗಿವೆ.

ಭವಿಷ್ಯಕ್ಕೆ ಶುಭ ಹಾರೈಕೆಗಳೊಂದಿಗೆ ಈ ವಿಶ್ವವಿದ್ಯಾಲಯದ ಹೊಸ ಕಟ್ಟಡಕ್ಕಾಗಿ ನಿಮ್ಮೆಲ್ಲರಿಗೂ ತುಂಬಾ ತುಂಬಾ ಅಭಿನಂದನೆಗಳು. ಎರಡು ಗಜ ದೂರ ಮತ್ತು ಮಾಸ್ಕ್ ಧರಿಸುವ ಮಂತ್ರವನ್ನು ಕಡ್ಡಾಯವಾಗಿ ಪಾಲಿಸಿ. ನೀವು ಸುರಕ್ಷಿತವಾಗಿದ್ದರೆ, ರಾಷ್ಟ್ರವೂ ಸುರಕ್ಷಿತವಾಗಿರುತ್ತದೆ.

ನಿಮ್ಮೆಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು !

ಧನ್ಯವಾದಗಳು!

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
PM to attend Christmas Celebrations hosted by the Catholic Bishops' Conference of India
December 22, 2024
PM to interact with prominent leaders from the Christian community including Cardinals and Bishops
First such instance that a Prime Minister will attend such a programme at the Headquarters of the Catholic Church in India

Prime Minister Shri Narendra Modi will attend the Christmas Celebrations hosted by the Catholic Bishops' Conference of India (CBCI) at the CBCI Centre premises, New Delhi at 6:30 PM on 23rd December.

Prime Minister will interact with key leaders from the Christian community, including Cardinals, Bishops and prominent lay leaders of the Church.

This is the first time a Prime Minister will attend such a programme at the Headquarters of the Catholic Church in India.

Catholic Bishops' Conference of India (CBCI) was established in 1944 and is the body which works closest with all the Catholics across India.