Though diplomatic relations between India & Israel are only 25 years old, yet our ties go back several centuries: PM
Our ties with Israel are about mutual trust and friendship: PM
Jewish community has enriched India with their contribution in various fields: PM Modi

ಭಾರತದ ಪ್ರಧಾನಿಯವರು 70 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಇಲ್ಲಿಗೆ ಆಗಮಿಸಿರುವುದು ಸಂತೋಷ ಮತ್ತು ಕುತೂಹಲದ ಮಿಶ್ರ ಭಾವನೆಯನ್ನು ಮೂಡಿಸಿದೆ. ಬಹಳ ಧೀರ್ಘ ಅವಧಿಯ ಬಳಿಕ ನೀವು, ತೀರಾ ನಿಕಟ ವ್ಯಕ್ತಿಯನ್ನು ಭೇಟಿಯಾಗುವಾಗ ಮನುಷ್ಯ ಸ್ವಭಾವಕ್ಕೆ ಒದಗುವ ಅನುಭವವಿದು, ಆಗ ಮೊದಲ ವಾಕ್ಯ ನಾವು ಭೇಟಿಯಾಗದೆ ಬಹಳ ಕಾಲವಾಯಿತು ಎಂಬ ತಪ್ಪೊಪ್ಪಿಗೆಯಂತಿದ್ದರೆ ಆ ಬಳಿಕದ್ದು ಎಲ್ಲ ಹೇಗಿದೆ ಎಂದು ಕೇಳುವಂತಹ ರೀತಿಯದ್ದು. ನಾನು ನನ್ನ ಭಾಷಣವನ್ನು ಬಹಳ ಧೀರ್ಘಾವಧಿಯಿಂದ ಭೇಟಿಯಾಗದಿರುವ ಈ ತಪ್ಪೊಪ್ಪಿಗೆಯೊಂದಿಗೆ ಆರಂಭಿಸುತ್ತೇನೆ.ವಾಸ್ತವವಾಗಿ ಇದು 10,20 ಅಥವ 50 ವರ್ಷಗಳನ್ನು ತೆಗೆದುಕೊಂಡದ್ದಲ್ಲ, 70 ವರ್ಷಗಳ ಧೀರ್ಘಾವಧಿ.

 

ಭಾರತ ಸ್ವತಂತ್ರಗೊಂಡ 70 ವರ್ಷಗಳ ಬಳಿಕ , ಭಾರತದ ಪ್ರಧಾನ ಮಂತ್ರಿಯವರು ಇಸ್ರೇಲ್ ಭೂಮಿಯಲ್ಲಿ ನಿಮ್ಮ ಆಶೀರ್ವಾದ ಕೋರುತ್ತಿದ್ದಾರೆ.ಈ ಸಂಧರ್ಭದಲ್ಲಿ ನನ್ನ ಸ್ನೇಹಿತರಾದ ಇಸ್ರೇಲಿನ ಪ್ರಧಾನ ಮಂತ್ರಿ ಬೆಂಜಮಿನ್ ನೇತಾನ್ಯಾಹು ಇಲ್ಲಿ ಹಾಜರಿದ್ದಾರೆ. ಇಸ್ರೇಲಿಗೆ ಬಂದ ಬಳಿಕ, ಅವರಿಂದ ನಾನು ಪಡೆದ ಆತಿಥ್ಯ,ಮರ್ಯಾದೆ ಮತ್ತು ಗೌರವ, ಭಾರತದ 125 ಕೋಟಿ ಜನರಿಗೆ ಸಂದ ಗೌರವ. ಇಂತಹ ಪ್ರೀತಿ ಮತ್ತು ಮರ್ಯಾದೆಯನ್ನು ಈ ವಿಶ್ವದ ಯಾರೂ, ಎಂದೂ ಮರೆಯಲಾರರು. ನಮ್ಮಿಬ್ಬರಲ್ಲಿಯೂ ವಿಷೇಷ ಸಾಮಾನ್ಯ ಅಂಶಗಳಿವೆ. ನಾವಿಬ್ಬರೂ ನಮ್ಮ ನಮ್ಮ ದೇಶಗಳು ಸ್ವತಂತ್ರಗೊಂಡ ಬಳಿಕ ಜನಿಸಿದವರು.ಬೆಂಜಮಿನ್ ಅವರು ಸ್ವತಂತ್ರ ಇಸ್ರೇಲಿನಲ್ಲಿ ಜನಿಸಿದವರು ಮತ್ತು ನಾನು ಸ್ವತಂತ್ರ ಭಾರತದಲ್ಲಿ ಜನಿಸಿದವನು. ಪ್ರಧಾನ ಮಂತ್ರಿ ನೇತಾನ್ಯಾಹು ಅವರ ಒಂದು ಆಸಕ್ತಿ, ಪ್ರತೀ ಭಾರತೀಯನ ಹೃದಯವನ್ನು ತಟ್ಟುತ್ತದೆ, ಮತ್ತು ಅವರ ಆ ವಿಶೇಷ ಆಸಕ್ತಿಯೆಂದರೆ ಭಾರತೀಯ ಆಹಾರ ಕುರಿತಂತೆ ಅವರ ಪ್ರೀತಿ. ಕಳೆದ ರಾತ್ರಿಯ ಭೋಜನದ ಸಂಧರ್ಭ ಭಾರತೀಯ ಆಹಾರದೊಂದಿಗೆ ನನಗೆ ನೀಡಿದ ಆತಿಥ್ಯವನ್ನು ನಾನು ಸದಾ ನೆನಪಿನಲ್ಲಿಡುತ್ತೇನೆ .

ಕಳೆದ ಬರೇ 25 ವರ್ಷಗಳ ಅವಧಿಯಲ್ಲಿ ನಾವು ಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರಬಹುದು.ಆದರೆ ಭಾರತ ಮತ್ತು ಇಸ್ರೇಲ್ ನೂರಾರು ವರ್ಷಗಳಿಂದ ನಿಕಟ ಸಂಬಂಧವನ್ನು ಹೊಂದಿವೆ ಎನ್ನುವುದೂ ಸತ್ಯ. ಭಾರತದ ಅತ್ಯಂತ ದೊಡ್ಡ ಸೂಫಿ ಸಂತ ಬಾಬಾ ಫ಼ರೀದ್ 13 ನೇ ಶತಮಾನದಲ್ಲಿ ಜೆರುಸಲೇಂನಲ್ಲಿ ಬದುಕಿದ್ದರು ಮತ್ತು ಗುಹೆಯಲ್ಲಿ ಧ್ಯಾನನಿರತರಾಗಿದ್ದರು ಎಂದು ನಾನು ತಿಳಿದುಕೊಂಡಿದ್ದೇನೆ.ಬಳಿಕ ಇದನ್ನು ಯಾತ್ರಾ ಸ್ಥಳವಾಗಿ ಪರಿವರ್ತಿಸಲಾಯಿತು. ಇಂದು ಕೂಡಾ ಈ ಸ್ಥಳ ಭಾರತ ಮತ್ತು ಜೆರುಸಲೇಂ ನಡುವಣ ಎಂಟು ನೂರು ವರ್ಷ ಹಳೆಯ ಸಂಬಂಧಕ್ಕೆ ಸಂಕೇತವಾಗಿದೆ. 2011ರಲ್ಲಿ ಪ್ರವಾಸಿ ಭಾರತೀಯ ಪ್ರಶಸ್ತಿ ಇಸ್ರೇಲಿನ ಉಸ್ತುವಾರಿ ಶೇಖ್ ಅನ್ಸಾರಿ ಅವರಿಗೆ ಪ್ರಧಾನ ಮಾಡಲಾಗಿತ್ತು ಮತ್ತು ಅದೃಷ್ಟವಶಾತ್ ಅವರನ್ನು ಭೇಟಿಯಾಗುವ ಅವಕಾಶವೂ ಇಂದು ನನಗೆ ದೊರಕಿತು. ಭಾರತ ಮತ್ತು ಇಸ್ರೇಲ್ ಗಳು ಸಂಸ್ಕ್ರತಿ, ಸಂಪ್ರದಾಯ, ಪರಸ್ಪರ ನಂಬಿಕೆ ಮತ್ತು ಗೆಳೆತನದ ಬಂಧವನ್ನು ಹಂಚಿಕೊಂಡಿವೆ. ನಮ್ಮ ಹಬ್ಬಗಳ ನಡುವೆಯೂ ಅದ್ಭುತವಾದ ಸಂಬಂಧಗಳಿವೆ. ಭಾರತದಲ್ಲಿ ಹೋಳಿಯನ್ನು ಆಚರಿಸಲಾಗುತ್ತದೆ ಮತ್ತು ಇಸ್ರೇಲಿನಲ್ಲಿ ಪುರಿನ್ ಆಚರಿಸಲಾಗುತ್ತದೆ. ಭಾರತದಲ್ಲಿ ದಿವಾಳಿ ಆಚರಣೆ ಇದ್ದರೆ, ಇಸ್ರೇಲಿನಲ್ಲಿ ಹನುಖಾ ಆಚರಣೆಯಲ್ಲಿದೆ. ಯಹೂದಿಯರ ಮಕ್ಕಾಬಿಹಾ ಕ್ರೀಡೆಗಳು ನಾಳೆ ಉದ್ಘಾಟಿಸಲ್ಪಡುತ್ತವೆ ಎಂಬುದು ನನಗೆ ಭಾರೀ ಸಂತೋಷ ತಂದಿದೆ ಮತ್ತು ಈ ಕ್ರೀಡೆಗಾಗಿ ನಾನು ಇಸ್ರೇಲಿಯನ್ನರನ್ನು ಅಭಿನಂದಿಸುತ್ತೇನೆ. ಭಾರತ ಈ ಕ್ರೀಡೆಗಾಗಿ ತಂಡವನ್ನು ಕಳುಹಿಸಿರುವುದು ನನಗೆ ಹರ್ಷದ ಸಂಗತಿಯಾಗಿದೆ ಮತ್ತು ಈ ಸಂಧರ್ಭದಲ್ಲಿ ಭಾರತದ ಆಟಗಾರರು ಇಲ್ಲಿ ಹಾಜರಿದ್ದಾರೆ, ನಾನು ಅವರಿಗೆ ಉತ್ತಮ ಅದೃಷ್ಟವನ್ನು ಹಾರೈಸುತ್ತೇನೆ.

 

ಇಸ್ರೇಲ್ ಭೂಮಿ ಅದರ ನೇತಾರ ಪುತ್ರರ ತ್ಯಾಗದಿಂದ ತೋಯ್ದಿದೆ.ಅಂತಹ ಅನೇಕ ಕುಟುಂಬಗಳು ಇಂದಿಲ್ಲಿ ಭಾಗವಹಿಸಿರಬಹುದು., ಈ ಹೋರಾಟದಲ್ಲಿ ಅವರ ತ್ಯಾಗದ ಕಥೆಯೂ ಇರಬಹುದು.ಇಸ್ರೇಲಿನ ಶೌರ್ಯಕ್ಕೆ ನಾನು ವಂದನೆ ಸಲ್ಲಿಸುತ್ತೇನೆ.ಈ ಶೌರ್ಯವೇ ಇಸ್ರೇಲಿನ ಅಭಿವೃದ್ಧಿಗೆ ಮೂಲವಾಗಿದೆ. ಯಾವುದೇ ದೇಶದ ಅಬಿವೃದ್ಧಿ ಆ ದೇಶದ ಗಾತ್ರವನ್ನು ಅವಲಂಬಿಸಿರುವುದಿಲ್ಲ ಬದಲು ಅಲ್ಲಿಯ ನಾಗರಿಕರ ಸ್ಪೂರ್ತಿಯನ್ನು ಅವಲಂಬಿಸಿರುತ್ತದೆ. .ಗಾತ್ರ ಮುಖ್ಯವಲ್ಲ ಎಂಬುದನ್ನು ಇಸ್ರೇಲ್ ಸಾಧಿಸಿ ತೋರಿಸಿದೆ. ಈ ಸಂಧರ್ಭದಲ್ಲಿ ನಾನು ದೇಶ ಕಟ್ಟುವುದಕ್ಕಾಗಿ ಕೊಡುಗೆ ನೀಡಿದಕ್ಕಾಗಿ ಇಸ್ರೇಲ್ ಸರಕಾರದಿಂದ ಶೌರ್ಯ ಪ್ರಮಾಣಪತ್ರ ಪಡೆದ ಸೆಕೆಂಡ್ ಲೆಫ್ಟಿನೆಂಟ್ ಎಲಿಸೇ ಆಸ್ಟನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಎಲಿಸೇ ಆಸ್ಟನ್ ’ಭಾರತೀಯ’ ಎಂಬುದಾಗಿ ಕೂಡಾ ಪರಿಗಣಿಸಲ್ಪಟ್ಟಿದ್ದಾರೆ. ಬ್ರಿಟಿಷರ ಕಾಲದಲ್ಲಿ ಅವರು ಮರಾಠಾ ಲೈಟ್ ಇನ್ಫ್ಯಾಂಟ್ರಿಯಲ್ಲಿ ಕೆಲಸ ಮಾಡಿದ್ದರು. ಮೊದಲ ಮಹಾ ಯುದ್ಧದಲ್ಲಿ ಇಸ್ರೇಲಿನ ನಗರ ಹೈಫ಼ಾ ವನ್ನು ವಿಮೋಚನೆಗೊಳಿಸುವಲ್ಲಿ ಭಾರತೀಯ ಸೈನಿಕರು ಮಹತ್ವದ ಪಾತ್ರ ವಹಿಸಿದ್ದರು. ಅಂತಹ ಧೈರ್ಯಶಾಲಿ ಹುತಾತ್ಮರಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸಲು ನಾನು ನಾಳೆ ಅಲ್ಲಿಗೆ ಹೋಗುತ್ತಿದ್ದೇನೆ . 

ಕಳೆದ ರಾತ್ರಿ ನಾನು, ನನ್ನ ಗೆಳೆಯರಾದ ಪ್ರಧಾನ ಮಂತ್ರಿ ನೇತಾನ್ಯಾಹು ಅವರಲ್ಲಿಗೆ ಭೋಜನಕ್ಕೆ ಹೋಗಿದ್ದೆ. ಅಲ್ಲಿಯ ವಾತಾವರಣ ಮನೆಯ ವಾತಾವರಣದಂತಿತ್ತು. ನಾವು ಗಾಳಿಸುದ್ದಿಗಳ ಬಗ್ಗೆ ಮಾತನಾಡಿದೆವು. ಆಗ ಭಾರತೀಯ ಕಾಲಮಾನ ಬೆಳಿಗ್ಗಿನ ಜಾವದ 2.30 ಗಂಟೆಯಾಗಿತ್ತು., ಹೊರಡುವಾಗ ಅವರು ನನಗೊಂದು ಪೈಂಟಿಂಗ್ ಉಡುಗೊರೆ ಕೊಟ್ಟರು. ಅದು ಭಾರತೀಯ ಸೈನಿಕರು ಮೊದಲ ಮಹಾಯುದ್ಧದಲ್ಲಿ ಜೆರುಸಲೇಂ ಅನ್ನು ವಿಮೋಚನೆಗೊಳಿಸುವ ಹೃದಯ ಕಲಕುವ ದೃಶ್ಯವನ್ನೊಳಗೊಂಡಿತ್ತು.ಸ್ನೇಹಿತರೇ, ಈ ಸಹವಾಸದ, ಧೈರ್ಯದ ಪ್ರಕರಣದಲ್ಲಿ ನಾನು ವಿಶೇಷವಾಗಿ ಭಾರತದ ಸೇನೆಯ ಲೆಫ್ಟಿನೆಂಟ್ ಜೆ.ಎಫ಼್.ಆರ್. ಜಾಕೋಬ್ ಅವರ ಹೆಸರನ್ನು ಪ್ರಸ್ಥಾಪಿಸಲು ಇಚ್ಚಿಸುತ್ತೇನೆ. ಅವರ ಪೂರ್ವಜರು ಬಾಗ್ದಾದಿನಿಂದ ಭಾರತಕ್ಕೆ ಬಂದವರು. 1971ರಲ್ಲಿ ಬಾಂಗ್ಲಾದೇಶವು ಪಾಕಿಸ್ಥಾನದಿಂದ ಸ್ವತಂತ್ರಗೊಳ್ಳಲು ಹೋರಾಟ ಮಾಡುತ್ತಿದ್ದಾಗ, ಲೆಫ್ಟಿನೆಂಟ್ ಜೆ.ಆರ್. ಜಾಕೋಬ್ ಭಾರತದ ತಂತ್ರವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು 90,000 ಪಾಕಿಸ್ಥಾನಿ ಸೈನಿಕರು ಶರಣಾಗುವಂತೆ ಮಾಡಿದ್ದರು. ಸ್ನೇಹಿತರೆ , ಭಾರತದಲ್ಲಿ ಯಹೂದಿಯರ ಜನಸಂಖ್ಯೆ ಬಹಳ ಸಣ್ಣದು, ಆದರೆ ಅವರು ತಮ್ಮ ಹಾಜರಾತಿಯನ್ನು ಯಾವ ಕ್ಷೇತ್ರದಲ್ಲಾದರೂ ಸರಿ, ಹೆಮ್ಮೆಯಿಂದ ಸಾರುವಂತಿದ್ದಾರೆ.ಯಹೂದಿಯರು ತಮ್ಮ ಕಠಿಣ ಪರಿಶ್ರಮದಿಂದ ಪ್ರಗತಿ ಸಾಧಿಸಿದ್ದಾರೆ ಮತ್ತು ಅವರು ಸೇನೆಯಲ್ಲಿ ಮಾತ್ರವಲ್ಲ ಸಾಹಿತ್ಯ, ಸಂಸ್ಕೃತಿ, ಮತ್ತು ಚಲನ ಚಿತ್ರ ಕ್ಷೇತ್ರದಲ್ಲಿ ತಮ್ಮದೇ ಗಣ್ಯ ಸ್ಥಾನವನ್ನು ರೂಪಿಸಿಕೊಂಡಿದ್ದಾರೆ. ಇಂದಿನ ವೈಭವದ ಕಾರ್ಯಕ್ರಮದಲ್ಲಿ ಇಸ್ರೇಲಿನ ವಿವಿಧ ನಗರಗಳ ಮೇಯರ್ ಗಳು ಪಾಲ್ಗೊಂಡಿರುವುದನ್ನು ನಾನು ಗಮನಿಸಿದ್ದೇನೆ. ಭಾರತ ಮತ್ತು ಭಾರತೀಯ ಸಮುದಾಯದ ಬಗ್ಗೆ ಅವರ ಪ್ರೀತಿ ಅವರನ್ನು ಈ ಕಾರ್ಯಕ್ರಮದಲ್ಲಿ ಪಾಲುದಾರರನ್ನಾಗುವಂತೆ ಮಾಡಿದೆ. ಸುಮಾರು 80 ವರ್ಷಗಳ ಹಿಂದೆ, ಭಾರತದ ಆರ್ಥಿಕ ರಾಜಧಾನಿ ಮುಂಬಯಿಯಲ್ಲಿ ಯಹೂದಿ ಮೇಯರ್ ಆಗಿದ್ದರು. 1938ರಲ್ಲಿ ಮುಂಬಯಿಯು ಬಾಂಬೆ ಎಂದು ಕರೆಸಿಕೊಳ್ಳುತ್ತಿದ್ದ ಕಾಲದಲ್ಲಿ ಎಲಿಝ ಮೋಸೆಸ್ ಬಾಂಬೆಯ ಮೇಯರ್ ಆಗಿದ್ದರು ಎಂಬುದನ್ನು ನಾನಿಲ್ಲಿ ನೆನಪಿಸಿಕೊಳ್ಳುತ್ತೇನೆ.

 

ಬಾನುಲಿ/ ಆಕಾಶವಾಣಿಯ ವಿಶಿಷ್ಟ ರಾಗ ಶೃತಿಯ ಮುದ್ರಿಕೆಯನ್ನು ಸಂಯೋಜನೆ ಮಾಡಿದ್ದು ಯಹೂದಿ ಮಾಸ್ಟರ್ ವಾಲ್ಟರ್ ಕುಫ್ ಮ್ಯಾನ್ ಎಂಬುದು ಕೆಲ ಭಾರತೀಯರಿಗೆ ಮಾತ್ರ ತಿಳಿದಿರಬಹುದು. 1935ರಲ್ಲಿ ಅವರು ಬಾಂಬೆ ಆಕಾಶವಾಣಿಯ ನಿರ್ದೇಶಕರಾಗಿದ್ದರು. ಭಾರತದಲ್ಲಿ ವಾಸಿಸುತ್ತಿರುವ ಯಹೂದಿಗಳು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡರೂ ಕೂಡಾ ಅವರು ಇಸ್ರೇಲಿನ ಜತೆಗಿನ ಭಾವನೆಗಳನ್ನು ಹೊಂದಿದ್ದಾರೆ.ಅದೇ ರೀತಿ ಅವರು ಭಾರತದಿಂದ ಇಸ್ರೇಲಿಗೆ ಬಂದಾಗ , ಅವರು ತಮ್ಮ ಜತೆ ಭಾರತೀಯ ಸಂಸ್ಕೃತಿಯ ಛಾಯೆಯ ಜತೆ ಭಾರತದ ಜತೆ ಸಂಪರ್ಕ ಹೊಂದಿರುವಂತೆ ಇರುತ್ತಾರೆ.

 

’ಮೈ ಬೋಲಿ’ ಎಂಬ ಮರಾಠಿ ವೃತ್ತ ಪತ್ರಿಕೆ ಇಸ್ರೇಲಿನಿಂದ ಪ್ರಕಟಗೊಳ್ಳುತ್ತಿರುವುದನ್ನು ತಿಳಿದು ನನಗೆ ಅತೀವ ಸಂತೋಷವಾಗಿದೆ. ಅದೇ ರೀತಿ ಕೊಚ್ಚಿನ್ ನಿಂದ ಬಂದಿರುವ ಯಹೂದಿ ಸಮುದಾಯದ ಜನರು ಇಲ್ಲಿ ಬಹಳ ಸಂಭ್ರಮ ಮತ್ತು ಶ್ರದ್ಧೆಯಿಂದ ಓಣಂ ಆಚರಿಸುತ್ತಾರೆ. ಇದಕ್ಕೆ ಕಾರಣ ಬಾಗ್ದಾದಿ ಯಹೂದಿ ಸಮುದಾಯದವರ ಪ್ರಯತ್ನ.-ಅವರು ಬಾಗ್ದಾದಿನಿಂದ ಬಂದು ಭಾರತದಲ್ಲಿ ನೆಲೆ ನಿಂತವರು.ಕಳೆದ ವರ್ಷ ಬಾಗ್ದಾದಿ ಯಹೂದಿಗಳನ್ನು ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಭಾರತದಿಂದ ಇಸ್ರೇಲಿಗೆ ಬಂದ ಯಹೂದಿ ಸಮುದಾಯ ಇಸ್ರೇಲಿನ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರವಹಿಸಿದೆ, ಮತ್ತು ಇದಕ್ಕೆ ದೊಡ್ಡ ಉದಾಹರಣೆ ಮೊಷಾವ್ ನಿವೇಟಿಂ.

 

ನನ್ನ ಯಹೂದಿ ಸಹೋದರ ಮತ್ತು ಸಹೋದರಿಯರೇ, ಇಸ್ರೇಲಿನ ಪ್ರಥಮ ಪ್ರಧಾನಿ ಡೇವಿಡ್ ಬೆನ್ ಗುರಿಯನ್ ಅವರ, ಮರುಭೂಮಿಯನ್ನು ಹಸುರು ಮಾಡುವ ಕನಸನ್ನು ನನಸು ಮಾಡಲು ಭಾರತದಿಂದ ಇಲ್ಲಿಗೆ ಬಂದವರು ನಿರಂತರ ಶ್ರಮ ಪಟ್ಟಿದ್ದಾರೆ. ಕೊಚ್ಚಿನ್ ನಿಂದ ಬಂದ ಯಹೂದಿ ಸಮುದಾಯ ’ಮರುಭೂಮಿಯನ್ನು ನಳ ನಳಿಸುವಂತೆ’ ಮಾಡುವ ಕಲ್ಪನೆಯ ಬೃಹತ್ ಯಶಸ್ಸಿನಲ್ಲಿ ಸಹಾಯಹಸ್ತ ನೀಡಿದೆ. ಇಂದು ಪ್ರತೀ ಭಾರತೀಯರೂ ನಿಮ್ಮೆಲ್ಲರ ಬಗ್ಗೆ ಹೆಮ್ಮೆ ಪಡುತ್ತಾರೆ,-ಯಾಕೆಂದರೆ ಭಾರತ ಮತ್ತು ಇಸ್ರೇಲಿನ ಭೂಮಿಯಲ್ಲಿ ನೀವು ಮಾಡಿದ ನಿರಂತರ ಪ್ರಯತ್ನಕ್ಕಾಗಿ. ನಾನೂ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇನೆ. ಸ್ನೇಹಿತರೇ ಮೊಷಾವ್ ನಿವೇಟಿಂ ಜತೆಗೆ ಭಾರತೀಯ ಸಮುದಾಯವು ಇಸ್ರೇಲಿನ ಕೃಷಿ ಅಭಿವೃದ್ಧಿಯಲ್ಲಿ ಕೈ ಜೋಡಿಸಿದೆ.

 

ಈ ಕಾರ್ಯಕ್ರಮಕ್ಕೆ ಬರುವುದಕ್ಕೆ ಮೊದಲು ನಾನು, ಇಸ್ರೇಲಿನ ಪ್ರಖ್ಯಾತ ವ್ಯಕ್ತಿ ಬೆಜಲೆಲ್ ಎಲಿಯಾಹುರನ್ನು ಭೇಟಿಯಾಗಿದ್ದೆ.2005ರಲ್ಲಿ ಅವರು ಪ್ರವಾಸೀ ಭಾರತೀಯ ತಂಡದಲ್ಲಿ ಗೌರವಿಸಲ್ಪಟ್ಟಿದ್ದರು. ಈ ಗೌರವ ಪಡೆದ ಮೊದಲ ಇಸ್ರೇಲಿ ಅವರು.ಕೃಷಿಯಲ್ಲದೆ, ಇಸ್ರೇಲಿನಲ್ಲಿರುವ ಭಾರತೀಯ ಸಮುದಾಯ ಆರೋಗ್ಯ ಕ್ಷೇತ್ರದ ಮೇಲೂ ತನ್ನ ಪ್ರಭಾವವನ್ನು ಬೀರಿದೆ. ಇಸ್ರೇಲಿನ ವೈದ್ಯ ಡಾ.ಲೇಲ್ ಆನ್ಸನ್ ಬೆಸ್ಟ್ ಅವರು ಗುಜರಾತಿನವರು, ನನ್ನ ತವರು ರಾಜ್ಯದವರು. ಮತ್ತು ಅಹ್ಮದಾಬಾದಿನ ಬಗ್ಗೆ ಗೊತ್ತಿರುವವರಿಗೆ ಮಣಿನಗರದಲ್ಲಿರುವ ವೆಸ್ಟ್ ಸ್ಕೂಲ್ ಬಗ್ಗೆ ಗೊತ್ತಿರಬಹುದು.

ಈ ಬಾರಿ ಅವರು ಪ್ರವಾಸೀ ಭಾರತೀಯ ಸಮ್ಮಾನಕ್ಕೆ ಪಾತ್ರರಾಗಿದ್ದಾರೆ.ಡಾ. ಲೇಲ್ ಆನ್ಸನ್ ಬೆಸ್ಟ್ ಅವರು ಇಲ್ಲಿ ಪ್ರಖ್ಯಾತ ಹೃದಯ ಚಿಕಿತ್ಸಾ ತಜ್ಞರು ಮತ್ತು ಅವರ ಇಡೀ ವೃತ್ತಿ ಜೀವನ ಮಾನವ ಸೇವೆಯ ಹಲವು ದಂತಕಥೆಗಳನ್ನು ಒಳಗೊಂಡಿದೆ. ಮಿನಾಶೆ ಸಮುದಾಯದ ದಿನ ಸಮತಾ ಬಗ್ಗೆ ನಾನು ತಿಳಿದುಕೊಂಡಿದ್ದೇನೆ. ದಿನ ಅವರಿಗೆ ನೋಡುವ ಶಕ್ತಿ ಇಲ್ಲ.ಆದರೆ ಇಸ್ರೇಲ್ ಹೊಂದಿರುವಂತಹ ಇಚ್ಚಾಶಕ್ತಿಯನ್ನು ಹೊಂದಿದ್ದಾರೆ. ದಿನ ಸಮತಾ ಈ ವರ್ಷದ ಇಸ್ರೇಲ್ ಸ್ವಾತಂತ್ರ್ಯ ದಿನ ಆಚರಣೆಯ ಕಾರ್ಯಕ್ರಮಗಳನ್ನು ಉದ್ಘಾಟಿಸಿದ್ದರು.

 

ಅವರು ಈ ಕಾರ್ಯಕ್ರಮದ ಟಾರ್ಚ್ ಲೈಟರ್ ಗಳಲ್ಲಿ ಒಬ್ಬರು. ಮಗಳು ದಿನ ಸಮತಾರಿಗೆ ಶುಭ ಕಾಮನೆಗಳು.ಆಕೆ ಇನ್ನೂ ಮುಂದುವರಿಯಲಿ, ಆಕೆಗೆ ನನ್ನ ಆಶೀರ್ವಾದವಿದೆ. ಇಂದು ಈ ಸಂಧರ್ಭದಲ್ಲಿ ನಾನು ಇಸ್ರೇಲಿನ ಮಾಜಿ ಅಧ್ಯಕ್ಷ ಮತ್ತು ಹಿರಿಯ ನಾಯಕ ಶ್ರೀ ಶಿಮಾನ್ ಪೆರಿಸ್ ಅವರನ್ನು ಸ್ಮರಿಸುತ್ತೇನೆ. ನಾನು ಶ್ರೀ ಶಿಮಾನ್ ಪೆರಿಸ್ ಅವರನ್ನು ಭೇಟಿಯಾಗುವ ಅವಕಾಶ ಪಡೆದಿದ್ದೆ. ಅವರು ನಾವಿನ್ಯತೆಯ ಶೋಧದ ಮೂಲಕರ್ತ ಮಾತ್ರವಲ್ಲ ಮಾನವಕುಲದ ಕಲ್ಯಾಣಕ್ಕಾಗಿ ಅಹರ್ನಿಶಿ ದುಡಿದವರು.ಇಸ್ರೇಲಿನ ಸೇನಾ ಪಡೆಗಳಲ್ಲಿ ನಾವೀನ್ಯತೆಯ ತರಬೇತಿಯು ಬಹಳ ಮೊದಲೇ ಆರಂಭಗೊಂಡಿತ್ತು. ಪ್ರತೀ ಸಣ್ಣ ಸಮಸ್ಯೆಗಳಿಗೂ ರಚನಾತ್ಮಕ ಪರಿಹಾರ ಕಂಡು ಹುಡುಕಲು ಇಸ್ರೇಲಿನ ರಕ್ಷಣಾ ಪಡೆಗಳು ಒಂದು ಮೂಲವಾಗಿವೆ. ನಾವೀನ್ಯತೆಯ ಶೋಧದೆಡೆಗೆ ಇಸ್ರೇಲಿನ ತುಡಿತ, ಬದ್ಧತೆಗೆ ಇದುವರೆಗೆ 12ಇಸ್ರೇಲಿಗಳು ವಿವಿಧ ಕ್ಷೇತ್ರಗಳ ನೊಬೆಲ್ ಪ್ರಶಸ್ತಿ ಪಡೆದಿರುವುದು ಒಂದು ಸಾಕ್ಷಿಯಾಗಿದೆ.

 

ಯಾವುದೇ ದೇಶದ ಅಭಿವೃದ್ಧಿಯಲ್ಲಿ ನವೀನ ರೀತಿಯ ಯೋಚನೆಯ ಮಹತ್ವವನ್ನು ಇಸ್ರೇಲ್ ತೋರಿಸುತ್ತದೆ. ಕಳೆದ ದಶಕದಲ್ಲಿ ಇಸ್ರೇಲ್ ಎಲ್ಲ ಕ್ಷೇತ್ರಗಳಲ್ಲಿ ನಾವೀನ್ಯತೆಯ ಶೋಧದೊಂದಿಗೆ ಇಡೀ ವಿಶ್ವವನ್ನು ಬೆರಗುಗೊಳಿಸಿದೆ. ಮತ್ತು ತನ್ನದೇ ಆದ ಹೆಗ್ಗುರುತನ್ನು ಮೂಡಿಸಲು ಶಕ್ತವಾಗಿದೆ.ಅನೇಕ ಕ್ಷೇತ್ರಗಳ ಸಂಶೋಧನೆಯಲ್ಲಿ, ನಾವೀನ್ಯತೆಯ ಅನುಷ್ಟಾನದಲ್ಲಿ ಇಸ್ರೇಲ್ ವಿಶ್ವದ ಪ್ರಮುಖ ದೇಶಗಳನ್ನು ಹಿಂದಿಕ್ಕಿದೆ. ಉಷ್ಣ ವಿದ್ಯುತ್, ಸೌರ ಫಲಕ, ಕೃಷಿ-ಜೈವಿಕ ತಂತ್ರಜ್ಞಾನ,ಭದ್ರತಾ ಕ್ಷೇತ್ರ, ಅಥವಾ ಕ್ಯಾಮರಾಗಳಲ್ಲಿ ಬಳಸುವ ತಂತ್ರಜ್ಞಾನ ಮತ್ತು ಕಂಪ್ಯೂಟರ್ ಪ್ರೋಸೆಸ್ಸರ್ ತಂತ್ರಜ್ಞಾನದಲ್ಲಿ ಅದು ಅತ್ಯುತ್ತಮ ಸಾಧನೆ ಮಾಡಿದೆ. ಇಂತಹ ಸಾಧನೆಗಳಿಗಾಗಿ ಇಸ್ರೇಲನ್ನು “ಸ್ಟಾರ್ಟ್ ಅಪ್ ದೇಶ” ಎಂದು ಕರೆಯಲಾಗುತ್ತದೆ. ಭಾರತ ಇಂದು ವಿಶ್ವದಲ್ಲಿಯೇ ಅತ್ಯಂತ ತ್ವರಿತಗತಿಯಿಂದ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿದೆ.

 

ಸುಧಾರಣೆ, ಸಾಧನೆ, ಪರಿವರ್ತನೆ-ಇವು ನನ್ನ ಸರಕಾರದ ಮಂತ್ರಗಳಾಗಿವೆ. ಸರಕು ಮತ್ತು ಸೇವಾ ತೆರಿಗೆ ಈ ತಿಂಗಳ ಆದಿಯಿಂದ ಜಾರಿಗೆ ಬಂದಿದೆ. ಒಂದು ದೇಶ,ಒಂದು ತೆರಿಗೆ ಮತ್ತು ಒಂದು ಮಾರುಕಟ್ಟೆ ಎಂಬ ದಶಕದ ಕನಸು ಇಂದು ನಿಜವಾಗಿದೆ. ಮತ್ತು ಜಿ.ಎಸ್. ಟಿ.ಯನ್ನು ನಾನು ಸರಕು ಮತ್ತು ಸರಳ ತೆರಿಗೆ ಎಂದು ಕರೆಯುತ್ತೇನೆ, ಯಾಕೆಂದರೆ ಈಗ ಇಡೀ ದೇಶ ವ್ಯಾಪ್ತಿಯಲ್ಲಿ ಒಂದು ಮಾದರಿಯ ಉತ್ಪನ್ನಗಳಿಗೆ ಒಂದೇ ಮಾದರಿಯ ತೆರಿಗೆಯನ್ನು ವಿಧಿಸಲಾಗುತ್ತದೆ. ತೆರಿಗೆ ವ್ಯವಸ್ಥೆ ಸಣ್ಣ ವ್ಯಾಪಾರಿಯಿಂದ ಹಿಡಿದು ದೊಡ್ಡ ವ್ಯಾಪಾರೋದ್ಯಮಿಗಳವರೆಗೂ ಪ್ರತೀಯೊಬ್ಬರಿಗೂ ತೊಂದರೆಗಳನ್ನು ಕೊಡುತ್ತಿತ್ತು ಮತ್ತು ಗೊಂದಲ ಮೂಡಿಸುವಂತಿತ್ತು. ಸರ್ದಾರ್ ಪಟೇಲ್ ಅವರು ರಾಜರಾಳ್ವಿಕೆಯ ರಾಜ್ಯಗಳನ್ನು ಭಾರತದೊಳಗೆ ವಿಲಯನಗೊಳಿಸಿ ಸಮಗ್ರತೆ ತಂದಂತೆ ಜಿ.ಎಸ್.ಟಿ.ಯು ಭಾರತದ ಆರ್ಥಿಕ ಸಮಗ್ರತೆಗೆ ಕಾರಣವಾಯಿತು. ಈ ಆರ್ಥಿಕ ಸಮಗ್ರತೆಯ ಕಾರ್ಯ 2017ರಲ್ಲಿ ಯಶಸ್ವಿಯಾಯಿತು.

 

ನೈಸರ್ಗಿಕ ಸಂಪನ್ಮೂಲಗಳಾದ ಕಲ್ಲಿದ್ದಲು ಮತ್ತು ತರಂಗಾಂತರಗಳ ಹರಾಜು ಪ್ರಕ್ರಿಯೆಯನ್ನು ನಾನಿಲ್ಲಿ ಉಲ್ಲೇಖಿಸಬಯಸುತ್ತೇನೆ. ಕಲ್ಲಿದ್ದಲು ಮತ್ತು ತರಂಗಾಂತರಗಳ ಬಗ್ಗೆ ಹಿಂದೆ ಕೇಳಿ ಬಂದ ವಿಷಯಗಳ ಬಗ್ಗೆ ನಾನಿಲ್ಲಿ ಪ್ರಸ್ಥಾವಿಸಲು ಇಚ್ಚಿಸುವುದಿಲ್ಲ. ಆದರೆ ಈ ಸರಕಾರ ವ್ಯವಸ್ಥೆಯನ್ನು ಕಂಪ್ಯೂಟರೀಕರಿಸುವ ಮೂಲಕ ಹರಾಜು ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಿದೆ.ಇಂದು ಮಿಲಿಯಾಂತರ ಮತ್ತು ಕೋಟ್ಯಾಂತರ ವ್ಯವಹಾರ ನಡೆಯುತ್ತಿದ್ದರೂ ಅಲ್ಲಿ ಒಂದೇ ಒಂದು ಸಂಶಯ ಅಥವಾ ಪ್ರಶ್ನಾರ್ಥಕ ಚಿಹ್ನ್ನೆ ಉದ್ಭವಿಸಿಲ್ಲ.ನಾವು ಆರ್ಥಿಕ ವ್ಯವಸ್ಥೆಯನ್ನು ಕೂಡಾ ವ್ಯವಸ್ಥಿತವಾಗಿ ಸುಧಾರಿಸಲು ಪ್ರಯತ್ನಿಸಿದೆವು. ಭಾರತದಲ್ಲಿಯ ಪ್ರತೀಯೊಬ್ಬರೂ ರಕ್ಷಣಾ ಕ್ಷೇತ್ರದಲ್ಲಿಯ ಸುಧಾರಣೆಗಳು ಸಾಧ್ಯವಿಲ್ಲ ಎಂದು ನಂಬಿದ್ದರು.ಆದರೆ ಮೂರು ವರ್ಷದ ಅವಧಿಯಲ್ಲಿ ರಕ್ಷಣಾ ವಲಯದಲ್ಲಿ ಸುಧಾರಣೆಗಳನ್ನು ತರಲಾಯಿತು.ಮತ್ತು ಆ ವಲಯವನ್ನು ಶೇಖಡಾ ನೂರರಷ್ಟು ವಿದೇಶೀ ನೇರ ಹೂಡಿಕೆಗೆ ಮುಕ್ತ ಮಾಡಲಾಯಿತು.ಈಗ ಇಸ್ರೇಲಿನ ರಕ್ಷಣಾ ಕೈಗಾರಿಕೆಗಳು ಭಾರತದಲ್ಲಿ ಹೂಡಿಕೆ ಮಾಡಬಹುದು ಮತ್ತು ನಾವೀಗ ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ಸಂಸ್ಥೆಗಳಿಗೆ ವ್ಯೂಹಾತ್ಮಕ ಸಹಭಾಗಿತ್ವ/ಪಾಲುದಾರಿಕೆ ಒದಗಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದೇವೆ.

 

ಕಳೆದ ಮೂರು ವರ್ಷಗಳಲ್ಲಿ ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿ ನಮ್ಮ ದೇಶದಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಮಧ್ಯಮ ವರ್ಗದವರು ಮನೆಗಳನ್ನು ಕಟ್ಟುತ್ತಾರೆ ಮತ್ತು ನಂತರ ದೂರಲು ಆರಂಭಿಸುತ್ತಾರೆ. ನಾವು ಕಾನೂನಿನಲ್ಲಿ ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿ ಸುಧಾರಣೆಗಳನ್ನು ತಂದೆವು. ನಿರ್ಮಾಣ ಕ್ಷೇತ್ರದಲ್ಲಿ ಶೇಖಡಾ ನೂರರಷ್ಟು ವಿದೇಶೀ ನೇರ ಹೂಡಿಕೆಗೆ ನಾವು ಮಂಜೂರಾತಿ ನೀಡಿದ್ದೇವೆ.ಪ್ರತ್ಯೇಕವಾಗಿ ರಿಯಲ್ ಎಸ್ಟೇಟ್ ನಿಯಂತ್ರಕವನ್ನು ಸ್ಥಾಪಿಸಿದ್ದೇವೆ. ರಿಯಲ್ ಎಸ್ಟೇಟ್ ವಲಯಕ್ಕೆ ಸರಕಾರದಿಂದ ಕೈಗಾರಿಕಾ ಸ್ಥಾನ-ಮಾನ ನೀಡಲಾಗಿದೆ.

 

ಇದರಿಂದ ಈ ಕ್ಷೇತ್ರದ ಕಂಪೆನಿಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ದೊರೆಯುತ್ತದೆ ಮತ್ತು 2022ರ ಆ ನನ್ನ ಕನಸನ್ನು ಮರೆಯಲಾಗದು. 2022 ನೇ ಇಸವಿಯಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತವೆ.2022ರೊಳಗೆ ಹೊಸ ನಿರ್ಧಾರಗಳೊಂದಿಗೆ , ನಮ್ಮ ದೇಶವನ್ನು ಮುನ್ನಡೆಯ ಹೊಸ ದಿಗಂತದೆಡೆಗೆ ಕೊಂಡೊಯ್ಯಲು ನಾವು ಶಕ್ತರಾಗಬೇಕು. ಭಾರತದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಸಾಕಾರಗೊಳಿಸಬೇಕು.2022ರೊಳಗೆ ಭಾರತದ ಮನೆ ಹೊಂದಿಲ್ಲದ ಪ್ರತೀಯೊಬ್ಬ ಬಡವ ಮತ್ತು ಪ್ರತೀಯೊಂದು ಕುಟುಂಬ ವಿದ್ಯುತ್ ಮತ್ತು ನೀರಿನ ಸೌಲಭ್ಯ ಇರುವ ಸ್ವಂತ ಮನೆಗಳನ್ನು ಹೊಂದಿರಬೇಕು ಎಂದು ನಾವು ನಿರ್ಧರಿಸಿದ್ದೇವೆ. ಈ ಕನಸನ್ನು ಈಡೇರಿಸಲು ನಾವು ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕಾಮಗಾರಿಗೆ ಮೂಲಸೌಕರ್ಯದ ಸ್ಥಾನ-ಮಾನವನ್ನು ಒದಗಿಸಿದ್ದೇವೆ. ಇದರಿಂದ ಬಡವರಿಗೆ ಮನೆ ಕಟ್ಟಿಕೊಳ್ಳಲು ಸಹಾಯವಾಗುತ್ತದೆ.

 

ಈ ಮೊದಲು ವಿಮಾ ಕ್ಷೇತ್ರದಲ್ಲಿ ಸಾರ್ವಜನಿಕ ರಂಗದ ಪಾರಮ್ಯವಿತ್ತು. ಈಗ ಆರೋಗ್ಯ ಪೂರ್ಣ ಸ್ಪರ್ಧೆಯನ್ನು ಉತ್ತೇಜಿಸಲು ಖಾಸಗಿ ಕಂಪೆನಿಗಳನ್ನೂ ಈ ಕ್ಷೇತ್ರದೊಳಗೆ ತಂದಿದ್ದೇವೆ. ಈಗ ಸಾಮಾನ್ಯ ಮನುಷ್ಯ ಕೈಗೆಟಕುವ ದರದಲ್ಲಿ ವಿಮಾ ವ್ಯವಸ್ಥೆಯನ್ನು ಹೊಂದುವಂತಹ ಸ್ಪರ್ಧಾತ್ಮಕ ವಾತಾವರಣ ನಿರ್ಮಾಣಗೊಂಡಿದೆ. ವಿಮಾ ಕ್ಷೇತ್ರದ ಸುಧಾರಣೆಗಳಲ್ಲಿ ನಮ್ಮ ಸರಕಾರ ವಿದೇಶೀ ನೇರ ಹೂಡಿಕೆಯನ್ನು 26% ನಿಂದ 49% ಕ್ಕೆ ಹೆಚ್ಚಿಸಲು ನಿರ್ಧರಿಸಿದೆ. ಬ್ಯಾಂಕುಗಳನ್ನು ವಿಲೀನಗೊಳಿಸಲು ಮಹತ್ವದ ಕ್ರಮಗಳನ್ನು ದೇಶದ ಬ್ಯಾಂಕಿಂಗ್ ಕ್ಷೇತ್ರ ಕೈಗೊಂಡಿದೆ. ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸಲು ಸರಕಾರ ಹೆಚ್ಚಿನ ವಿಶೇಷ ಒತ್ತನ್ನು ನೀಡಿದೆ. ಬ್ಯಾಂಕಿಂಗ್ ವಲಯದ ನೇಮಕಾತಿಗಾಗಿ ನಾವು ಪ್ರತ್ಯೇಕ ನೇಮಕಾತಿ ಮಂಡಳಿಯನ್ನು ರಚಿಸಿದ್ದೇವೆ. ಸ್ವತಂತ್ರ ಸಂಸ್ಥೆ ಅವರನ್ನು ನೇಮಿಸುತ್ತದೆ. ನಾವು ರಾಜಕೀಯ ಅಥವಾ ಆಂತರಿಕ ಪ್ರಭಾವವನ್ನು ಕೊನೆಗೊಳಿಸಿದ್ದೇವೆ.

 

ನಾವು ನಮ್ಮ ದೇಶದಲ್ಲಿ ಎರಡು ಪ್ರಮುಖ ಕಾಯ್ದೆಗಳನ್ನು ರೂಪಿಸಿದ್ದೇವೆ-ದಿವಾಳಿ ಮತ್ತು ಸಾಲ ಸುಸ್ತಿ ಸಂಹಿತೆ. ಕೈಗಾರಿಕೋದ್ಯಮಿಗಳು ಮತ್ತು ವಿಶ್ವದ ಹೂಡಿಕೆದಾರರಲ್ಲಿ ಹೊಸ ವಿಶ್ವಾಸ ಮೂಡಿಸುವಂತಹವು ಹಾಗು ಬ್ಯಾಂಕುಗಳಿಗೆ ಹೊಸ ಬಲ ತಂದುಕೊಡಬಲ್ಲಂತಹವು. ನಮ್ಮ ದೇಶಕ್ಕೆ ಹಲವು ದಶಕಗಳಿಂದ ಇಂತಹ ಆಧುನಿಕ ದಿವಾಳಿ ಕಾಯ್ದೆಯ ಅಗತ್ಯ ಇತ್ತು. ನಾವು ಸರಕಾರದಲ್ಲಿರುವ ಪ್ರತೀ ನಿಯಮಗಳನ್ನು ಸರಳೀಕರಣಗೊಳಿಸುವ ಪ್ರಯತ್ನ ಮಾಡಿದ್ದೇವೆ. ಕನಿಷ್ತ ಸರಕಾರಿ ನಿಯಂತ್ರಣ, ಗರಿಷ್ಟ ಆಡಳಿತ ಎಂಬ ತತ್ವವನ್ನು ಗಮನದಲ್ಲಿಟ್ಟುಕೊಂಡು ಪ್ರತೀ ಬದಲಾವಣೆಗಳನ್ನು ಮಾಡತೊಡಗಿದ್ದೇವೆ. ಇದರಿಂದ ಸಾಮಾನ್ಯ ಜನರಿಗೆ ತೊಂದರೆಗಳು ಎದುರಾಗಬಾರದು, ಹೂಡಿಕೆದಾರರು ಸಣ್ಣ ಸಣ್ಣ ಸಂಗತಿಗಳಿಗಾಗಿ ಕಾಯುವಂತಾಗಬಾರದು ಎಂಬುದನ್ನಿಲ್ಲಿ ಗಮನದಲ್ಲಿಟ್ಟುಕೊಳ್ಳಲಾಗಿದೆ.

ಹಿಂದೆ ಕೈಗಾರಿಕೆ ಸ್ಥಾಪಿಸಬೇಕಿದ್ದರೆ ಅಥವಾ ಪರಿಸರ ಮಂಜೂರಾತಿ ಬೇಕಿದ್ದರೆ ಕನಿಷ್ಟ 600 ದಿನಗಳು ತಗಲುತ್ತಿದ್ದವು. ಇಂದು ಪರಿಸರ ಮಂಜೂರಾತಿಗೆ ಸಂಬಂಧಿಸಿದ ಎಲ್ಲ ಕೆಲಸ ಆರು ತಿಂಗಳೊಳಗೆ ಮುಗಿಯುವಂತೆ ಖಾತ್ರಿಗೊಳಿಸಿದ್ದೇವೆ. 2014ರಲ್ಲಿ ಕಂಪೆನಿಯನ್ನು ಸಂಸ್ಥಾ ಬದ್ಧವಾಗಿಸಲು 15 ದಿನಗಳು ಅಥವಾ ಒಂದು, ಎರಡು ಅಥವಾ ಮೂರು ತಿಂಗಳುಗಳು ತಗಲುತ್ತಿದ್ದವು. ಸರಕಾರ ಈ ಅವಧಿಯನ್ನು ಎರಡರಿಂದ ಮೂರು ವಾರಕ್ಕೆ ಇಳಿಸಲು ಯಶಸ್ವಿಯಾಗಿದೆ, ಮತ್ತು ಇತ್ತೀಚಿನ ಪರಿಸ್ಥಿತಿ ಎಂದರೆ ಅದನ್ನು 24 ಗಂಟೆಗಳಲ್ಲಿ ಮಾಡಬಹುದು.ಯುವಕರೊಬ್ಬರು ಸ್ಟಾರ್ಟ್ ಅಪ್ ಮೂಲಕ ಕೆಲಸ ಮಾಡಲು ಬಯಸಿದರೆ, ಆಗ ಆತ ಒಂದು ದಿನದಲ್ಲಿ ಕಂಪೆನಿಯನ್ನು ಸಂಸ್ಥಾ ಬದ್ಧಗೊಳಿಸಬಹುದು.

ಎರಡನೇ ಮಹಾಯುದ್ಧದಲ್ಲಿ ಎಲ್ಲವನ್ನೂ ಕಳೆದುಕೊಂಡ ದೇಶಗಳು ಸ್ವಾವಲಂಬಿಯಾಗಿದ್ದರೆ, ಅದಕ್ಕೆ ಕಾರಣ ಅವುಗಳು ತಮ್ಮ ದೇಶದ ಜನರ ಕೌಶಲ್ಯ ವೃದ್ಧಿಯತ್ತ ಗಮನ ಹರಿಸಿದ್ದು . ಈಗ ಇಂತಹ ಸುವರ್ಣಾವಕಾಶ ವಿಶ್ವದಲ್ಲಿಯೇ ಕಿರಿಯರ ದೇಶವಾಗಿರುವ ಭಾರತಕ್ಕೆ ಬಂದಿದೆ.ಇಂದು ಭಾರತ ಯುವಕರ ದೇಶವಾಗಿದೆ. ಜನಸಂಖ್ಯೆಯ 65% ಜನರು 35 ವರ್ಷದೊಳಗಿನವರು. ದೇಶವೊಂದು ಇಂತಹ ದೊಡ್ಡ ಪ್ರಮಾಣದ ಜನಸಂಖ್ಯೆಯನ್ನು ಹೊಂದಿದ್ದರೆ, ಅದರ ಕನಸುಗಳು ಅದಕ್ಕೆ ಅನ್ವಯವಾಗಿಯೇ ಇರುತ್ತವೆ.ಮತ್ತು ಅವರ ಪ್ರಯತ್ನಗಳು ಪೂರ್ಣ ಶಕ್ತಿಯನ್ನು ಒಳಗೊಂಡಿರುತ್ತವೆ. ಇದೇ ಮೊದಲ ಬಾರಿಗೆ ನಾವು ಕೌಶಲ್ಯ ಅಭಿವೃದ್ಧಿಗೆ ಉತ್ತೇಜನ ಕೊಡಲು ಪ್ರತ್ಯೇಕ ಸಚಿವಾಲಯವನ್ನು ರಚಿಸಿದೆವು.

ಈ ಮೊದಲು ಕೌಶಲ್ಯಾಭಿವೃದ್ಧಿಯ ಕೆಲಸ 21 ವಿವಿಧ ಸಚಿವಾಲಯಗಳಲ್ಲಿ ಹರಡಿ ಹೋಗಿತ್ತು, 50-55 ಇಲಾಖೆಗಳಲ್ಲಿ ಹಂಚಿ ಹೋಗಿತ್ತು. ಈ ಸರಕಾರ ಕೌಶಲ್ಯಾಭಿವೃದ್ಧಿಯ ವಿವಿಧ ಕಾರ್ಯಕ್ರಮಗಳನ್ನು ಒಂದೇ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸುವ ಮೂಲಕ ಒಂದೇ ವೇದಿಕೆಗೆ ತಂದಿತು. ಕೌಶಲ್ಯಾಭಿವೃದ್ಧಿಯನ್ನು ಪೂರ್ಣ ದೃಷ್ಟಿಕೋನದೊಂದಿಗೆ ಸಮಗ್ರವಾಗಿ ಆದ್ಯತೆ ನೀಡಬೇಕಾದ ಕ್ಷೇತ್ರವಾಗಿ ಪರಿಗಣಿಸಿತು.600ಕ್ಕೂ ಅಧಿಕ ಕೌಶಲ್ಯಾಭಿವೃದ್ಧಿ ಕೇಂದ್ರಗಳು, ಕನಿಷ್ಟ ಪ್ರತೀ ಜಿಲ್ಲೆಗೆ ಒಂದರಂತೆ ದೇಶದಲ್ಲಿ ಸ್ಥಾಪನೆಯಾಗತೊಡಗಿದವು. ಹೊಸ ದೂರದೃಷ್ಟಿಯೊಂದಿಗೆ ಭಾರತೀಯ ಕೌಶಲ್ಯ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಜಾಗತಿಕ ಗುಣಮಟ್ಟಕ್ಕೆ ಅನುಗುಣವಾಗಿ ಭಾರತೀಯ ಯುವಕರನ್ನು ತರಬೇತು ಮಾಡುವುದು ಇದರ ಹಿಂದಿನ ಆಲೋಚನೆ. ಸರಕಾರವು 50 ಭಾರತೀಯ ಅಂತಾರಾಷ್ಟ್ರೀಯ ಕೇಂದ್ರಗಳ ಜಾಲವನ್ನು ಸ್ಥಾಪಿಸುತ್ತಿದೆ. ಈ ಸಂಸ್ಥೆಗಳು ಅಂತಾರಾಷ್ಟ್ರೀಯ ಗುಣ ಮಾನದನ್ವಯ ಕೌಶಲ್ಯಗಳನ್ನು ಒದಗಿಸುತ್ತವೆ. ಕೈಗಾರಿಕೆಗಳ ಅಗತ್ಯಕ್ಕೆ ತಕ್ಕಂತೆ ನಮ್ಮ ಯುವಕರನ್ನು ತರಬೇತು ಮಾಡುವುದು ಅತ್ಯವಶ್ಯ. 

ಇದಕ್ಕಾಗಿ ಸರಕಾರ ರಾಷ್ಟ್ರೀಯ ಅಪ್ರೆಂಟಿಶಿಪ್ ಉತ್ತೇಜನ ಯೋಜನೆಗಳನ್ನು ಆರಂಭಿಸಿತು. ಈ ಯೋಜನೆಯಡಿ ಸರಕಾರ 5 ಮಿಲಿಯನ್ ಯುವಕರಿಗೆ ಅಪ್ರೆಂಟಿಶಿಪ್ ತರಬೇತಿಯನ್ನು ಒದಗಿಸುವ ಗುರಿ ಹಾಕಿಕೊಂಡಿದೆ. ಸರಕಾರ ಈ ಯೋಜನೆಯಡಿ 10,000 ಕೋಟಿ ರೂ.ಗಳನ್ನು ಖರ್ಚು ಮಾಡಲಿದೆ.ಯುವಕರಿಗೆ ಕೆಲಸ ಕಲಿಯುವ ಅವಕಾಶದ ಜತೆ ಈ ಯೋಜನೆಯ ಇನ್ನೊಂದು ಉದ್ದೇಶ ಆ ಕಂಪೆನಿಗಳನ್ನು ಮತ್ತು ಗ್ರಾಮಸ್ಥರನ್ನು ಈ ಯುವಕರಿಗೆ ಉದ್ಯೋಗ ಕೊಡುವಂತೆ ಪ್ರೋತ್ಸಾಹಿಸುವುದು. ಇದರಿಂದ ಸರಕಾರ ಉದ್ಯೋಗದಾತರಿಗೆ ಹಣಕಾಸು ಸಹಾಯ ನೀಡುತ್ತದೆ. ಮೊದಲ ಬಾರಿಗೆ ಉದ್ಯೋಗಾವಕಾಶಗಳನ್ನು ತೆರಿಗೆ ಪ್ರೋತ್ಸಾಹಧನದ ಜತೆ ಜೋಡಿಸಲಾಗಿದೆ. ಉದ್ಯೋಗದಾತರು ಉದ್ಯೋಗ ಸೃಷ್ಟಿಸಿದರೆ ಅವರಿಗೆ ತೆರಿಗೆ ಪ್ರೋತ್ಸಾಹ ಧನ ದೊರೆಯುತ್ತದೆ. ನಾವು ಅಂತಹ ಯುವಕರಲ್ಲಿ ಅನ್ವೇಷಣಾ ಮನೋಭಾವವನ್ನು ಪ್ರೋತ್ಸಾಹಿಸಲು ’ಅಟಲ್ ನಾವೀನ್ಯತಾ ಮಿಷನ್’ (ಎಐಎಂ) ಆರಂಭಿಸಿದ್ದೇವೆ. ದೇಶಾದ್ಯಂತ ಶಾಲೆ ಮತ್ತು ಕಾಲೇಜುಗಳಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತ್ವದ ಪರಿಸರ ವ್ಯವಸ್ಥೆಯನ್ನು ರೂಪಿಸಬೇಕಾದ ಅಗತ್ಯವಿದೆ. ನಾವೀನ್ಯತೆ, ಶೋಧಗಳು ಇಸ್ರೇಲಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂಬುದನ್ನು ಒಪ್ಪಲೇಬೇಕು.

ನಾವು ನಾವೀನ್ಯತೆಯ ಅನ್ವೇಷಣೆಯನ್ನು ಸ್ಥಗಿತಗೊಳಿಸಿದರೆ ಜೀವನದಲ್ಲಿ ಪ್ರಗತಿಯೇ ನಿಂತು ಬಿಡುತ್ತದೆ.

ಉತ್ಪಾದನೆ, ಸಾರಿಗೆ, ಇಂಧನ, ಕೃಷಿ, ಶುಚಿತ್ವ್ದ ರಂಗಗಳಲ್ಲಿ ನಾವೀನ್ಯತೆಯ ಉದ್ಯಮಶೀಲತ್ವವನ್ನು ಬೆಳೆಸಲು ಇನ್ ಕ್ಯೂಬೇಟರ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳು ಸ್ಟಾರ್ಟ್ ಅಪ್ ಗಳಿಗೆ ಸರಿಯಾದ ಮಾರ್ಗದರ್ಶನದ ಜತೆಗೆ ಹಣಕಾಸು ಸೌಲಭ್ಯ ಒದಗಿಸುತ್ತವೆ. ಸರಕಾರವು ಈ ಯುವಕರಿಗೆ ಅವರದೇ ವ್ಯಾಪಾರೋದ್ಯಮ ಆರಂಭಿಸಲು ಮುದ್ರಾ ಯೋಜನೆ ಆರಂಭಿಸಿದೆ. ಕಳೆದ ಮೂರು ವರ್ಷಗಳಲ್ಲಿ 8 ಕೋಟಿ ಬ್ಯಾಂಕ್ ಖಾತೆದಾರರಿಗೆ ಯಾವುದೇ ಬ್ಯಾಂಕ್ ಗ್ಯಾರಂಟಿ ಇಲ್ಲದೇ 3 ಲಕ್ಷ ಕೋಟಿ ರೂ. ಬ್ಯಾಂಕ್ ಸಾಲ ನೀಡುವ ಬಲು ದೊಡ್ಡ ಕೆಲಸ ಮಾಡಲಾಗಿದೆ.

ಸ್ನೇಹಿತರೇ, ಕೆಲವೊಮ್ಮೆ ಕಾರ್ಮಿಕ ಸುಧಾರಣೆಗಳನ್ನು ಕಾರ್ಮಿಕರಲ್ಲಿ ಸುಧಾರಣೆಗಳಿಗೆ ಸಮಾನವೆಂದು ಪರಿಭಾವಿಸಲಾಗುತ್ತದೆ. ಈ ಸರಕಾರ ಕಾರ್ಮಿಕ ಸುಧಾರಣೆಗಳನ್ನು ಕಾರ್ಮಿಕರ ಕಲ್ಯಾಣ ಮತ್ತು ಕಾರ್ಮಿಕರ ಅಭಿವೃದ್ಧಿಯ ಸಮಗ್ರ ಧೋರಣೆಯನ್ನಿಟ್ಟುಕೊಂಡು ಜಾರಿಗೆ ತಂದಿದೆ. ಉದ್ಯೋಗದಾತರು,ಉದ್ಯೋಗಿಗಳು ಮತ್ತು ಅನುಭವಗಳ ಸಮಗ್ರ ದೃಷ್ಟಿಕೋನವನ್ನು ಇಟ್ಟುಕೊಂಡು ವ್ಯಾಪಾರೋದ್ಯಮದಲ್ಲಿ ಯಾವುದೇ ಅಡ್ಡಿ-ಆತಂಕಗಳು ಬಾರದಂತೆ ನಾವು ಕಾರ್ಯೋನ್ಮುಖರಾಗಿದ್ದೇವೆ. ಮೊದಲು ವ್ಯಾಪಾರಿಗಳು ಕಾನೂನು ಕಾಯ್ದೆಗಳನ್ವಯ 56 ರಿಜಿಸ್ಟರ್ ಗಳನ್ನು ನಿರ್ವಹಿಸಬೇಕಿತ್ತು, ಕೆಲ ತಿಂಗಳ ಹಿಂದೆ ನಾವದನ್ನು 5ರಿಜಿಸ್ಟರ್ ಗಳಿಗೆ ಇಳಿಸಿದ್ದೇವೆ, ಕಾರ್ಮಿಕ ಕಾನೂನುಗಳಿಗೆ ಸಂಬಂಧಿಸಿ ಸುಧಾರಣೆ ತರುವ ಮೂಲಕ. ಕಾರ್ಮಿಕ ಕಾನೂನುಗಳ ಅನುಷ್ಟಾನಕ್ಕೆ ಸಂಬಂಧಿಸಿ ಈಗ ಬರೇ5 ರಿಜಿಸ್ಟರ್ ಗಳನ್ನು ನಿರ್ವಹಿಸಿದರೆ ಸಾಕು.

ಇದೇ ರೀತಿ ಸರಕಾರ ಶ್ರಮ ಸುವಿಧಾ ಪೋರ್ಟಲನ್ನು ಅಭಿವೃದ್ಧಿಪಡಿಸಿದೆ. ಈ ಶ್ರಮ ಸುವಿಧಾ ಪೋರ್ಟಲ್ 16 ಕಾರ್ಮಿಕ ಕಾನೂನುಗಳಿಗೆ ಸಂಬಂಧಿಸಿ ಒಂದು ವರದಿ ಸಲ್ಲಿಸುವ ಮೂಲಕ ಅವುಗಳ ಪಾಲನೆಯನ್ನು ದಾಖಲಿಸಲು ಅನುಕೂಲ ಮಾಡಿಕೊಡುತ್ತದೆ. ಇಡೀ ವರ್ಷ ಪೂರ್ತಿ ಅಂಗಡಿ ಮತ್ತು ಮುಂಗಟ್ಟುಗಳನ್ನು ಕಾರ್ಯಾಚರಿಸಲು ಅನುವು ಮಾಡಿಕೊಡುವಂತೆ ನಾವು ರಾಜ್ಯ ಸರಕಾರಗಳಿಗೆ ಸಲಹೆಗಳನ್ನು ರವಾನಿಸಿದ್ದೇವೆ.ರಾಜ್ಯಗಳಿಗೆ 1948ರ ಕಾರ್ಖಾನೆಗಳ ಕಾಯ್ದೆಯನ್ನು ತಿದ್ದುಪಡಿ ಮಾಡುವಂತೆ ಸಲಹೆ ಮಾಡಲಾಗಿದೆ, ಇದರಿಂದ ಮಹಿಳಾ ಕಾರ್ಮಿಕರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ದೊರೆಯುತ್ತದೆ. ಭಾರತೀಯ ಮಹಿಳೆಯರ ಸಕ್ರಿಯ ಪಾಲುದಾರಿಕೆಯಿಂದ ಭಾರತದ ಅಭಿವೃದ್ಧಿಯೆಡೆಗಿನ ಪ್ರಯಾಣ ಹೆಚ್ಚು ದೃಢವಾಗುತ್ತದೆ.

ಈ ಕಾರಣಕ್ಕಾಗಿ ಮಹಿಳೆಯರ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಶ್ವದ ಶ್ರೀಮಂತ ದೇಶಗಳಲ್ಲಿ ಕೂಡಾ, ಮಹಿಳಾ ಕಾರ್ಮಿಕರಿಗೆ 12 ವಾರಗಳಿಗಿಂತ ಹೆಚ್ಚಿನ ವೇತನ ಸಹಿತ ಹೆರಿಗೆ ರಜೆ ಸೌಲಭ್ಯ ಇಲ್ಲ. ನನ್ನ ಪ್ರೀತಿಯ ದೇಶವಾಸಿಗಳೇ, ಭಾರತ 26 ವಾರಗಳ ವೇತನ ಸಹಿತ ಹೆರಿಗೆ ರಜೆಯನ್ನು ಒದಗಿಸುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇನೆ. ಇದರಿಂದಾಗಿ ಅವರಿಗೆ 6 ತಿಂಗಳು ರಜೆ ಸಿಕ್ಕಂತಾಗುತ್ತದೆ. 

ಕೆಲವೊಮ್ಮೆ ಕಾರ್ಮಿಕರು ಪಿಎಫ಼್ ನಲ್ಲಿ ಠೇವಣಿಯಾಗಿದ್ದ ಅವರ ಹಣವನ್ನು ಸಣ್ಣ ಪುಟ್ಟ ಅಡಚಣೆಗಳಿಗೋಸ್ಕರ ಬಿಟ್ಟು ಬಿಡುತ್ತಾರೆ, ಇದು ಭಾರತದ ಬಡ ಕಾರ್ಮಿಕರಿಗೆ ಸೇರಿದ್ದು. ಇದರಿಂದಾಗಿ ಸರಕಾರ ಅವರಿಗೆ ಸರ್ವ-ಸಂಯೋಜಕ ಖಾತಾ ಸಂಖ್ಯೆಯನ್ನು ನೀಡುತ್ತದೆ, ನಿಮಗೆ ಆಶ್ಚರ್ಯವಾಗಬಹುದು, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಈ ಕಾರ್ಮಿಕರು ತಮ್ಮ ಕೆಲಸ ಬದಲಿಸಿದಾಗ ಅವರು ತಮ್ಮ ಇಪಿಎಫ಼್ ನಲ್ಲಿದ್ದ ಹಣವನ್ನು ಬಿಟ್ಟುಬಿಡುತ್ತಾರೆ.ಸರಕಾರ ಹೀಗೆ ಜಮೆಯಾದ 27,000 ಸಾವಿರ ಕೋಟಿ ರೂ.ಗಳ ಖಾತಾರಹಿತ ಹಣವನ್ನು ಹೊಂದಿದೆ. ಇದರ ಮಧ್ಯೆ ನಾವು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ. ಇದರನ್ವಯ ಕಾರ್ಮಿಕರು ಇನ್ನೊಂದು ಕೆಲಸಕ್ಕೆ ಹೋದರೆ ಆಗ ಆ ಕಾರ್ಮಿಕರ ಖಾತೆ ಸಂಖ್ಯೆ ಆತನೊಂದಿಗೇ ಬೆಸೆದುಕೊಂಡು ಹೋಗುತ್ತದೆ ಮತ್ತು ಆತನಿಗೆ ಹಣ ಸಿಗುತ್ತದೆ. 

ಇಂದು ಭಾರತಕ್ಕೆ ದಾಖಲೆ ಪ್ರಮಾಣದಲ್ಲಿ ವಿದೇಶೀ ಹೂಡಿಕೆ ಬರುತ್ತಿದೆ. ಅತ್ಯಂತ ಗರಿಷ್ಟ ನೇರ ವಿದೇಶೀ ಹೂಡಿಕೆ, ಸಾಗರೋತ್ತರ ಭಾರತೀಯರು ಭಾರತಕ್ಕೆ ಕಳುಹಿಸುತ್ತಿರುವ ಹಣದಿಂದ ಬರುತ್ತಿದೆ. ಇದು ಜಾಗತಿಕ ಶ್ರೇಯಾಂಕ ಏಜೆನ್ಸಿಗಳು ಮತ್ತು ಸಂಸ್ಥೆಗಳನ್ನು ಆಶ್ಚರ್ಯಚಕಿತಗೊಳಿಸಿದೆ. “ಮೇಕ್ ಇನ್ ಇಂಡಿಯಾ’ ಒಂದು ಬ್ರಾಂಡ್ ಆಗಿ ವಿಶ್ವವನ್ನು ಚಕಿತಗೊಳಿಸಿದೆ.ಡಿಜಿಟಲ್ ಕ್ಷೇತ್ರದಲ್ಲಿ ಭಾರತ ವಿಶ್ವ ನಾಯಕನಾಗಿ ರೂಪುಗೊಳ್ಳುತ್ತಿದೆ. ವಿಶ್ವ ಡಿಜಿಟಲ್ ಕ್ರಾಂತಿಗೆ ಭಾರತ ಜಾಗತಿಕ ತಾಣವಾಗುತ್ತಿದೆ. ಸ್ನೇಹಿತರೇ, ಸುಧಾರಣೆಗಳೆಂದರೆ ಹೊಸ ಕಾನೂನುಗಳನ್ನು ಮಾಡುವುದೊಂದೇ ಅಲ್ಲ. ಈಗ ಪ್ರಸ್ಥುತವಲ್ಲದ ಕಾನೂನುಗಳನ್ನು ಮತ್ತು ದೇಶದ ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವ ಕಾಯ್ದೆಗಳನ್ನು ತೆಗೆದು ಹಾಕುವುದೂ ಸುಧಾರಣೆಯ ಭಾಗ. ಇಂತಹ 1200 ಅಪ್ರಸ್ಥುತ ಕಾಯ್ದೆಗಳನ್ನು ನಾವು ಕಳೆದ 3 ವರ್ಷಗಳಲ್ಲಿ ತೆಗೆದುಹಾಕಿದ್ದೇವೆ. ಮತ್ತು ಅಪ್ರಸ್ಥುತವಾಗಿರುವ ಇನ್ನೂ 40 ಕಾಯ್ದೆಗಳನ್ನು ರದ್ದು ಮಾಡುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದೇವೆ.

ಸ್ನೇಹಿತರೇ, ಭಾರತದ ರೈತರು ಅದ್ಭುತಗಳನ್ನು ಸಾಧಿಸುವ ಸಾಮರ್ಥ್ಯವುಳ್ಳವರು. ಈ ವರ್ಷ ಅವರ ಕಠಿಣ ಪರಿಶ್ರಮದಿಂದಾಗಿ ಭಾರತ ಬಂಪರ್ ಬೆಳೆ ಉತ್ಪಾದನೆ ಮಾಡಿದೆ, ಮತ್ತು ಸ್ವಾತಂತ್ರ್ಯ ಬಂದ ಬಳಿಕದ ದಾಖಲೆ ಉತ್ಪಾದನೆಯತ್ತ ನಾವು ಸಾಗುತ್ತಿದ್ದೇವೆ. ಇದು ಉತ್ತಮ ಮುಂಗಾರು ಮತ್ತು ಕೇಂದ್ರ ಸರಕಾರದ ನೀತಿಗಳಿಂದಾಗಿ ಸಾಧ್ಯವಾಗಿದೆ. 2022ರೊಳಗೆ ರೈತರ ಆದಾಯ ದುಪ್ಪಟ್ಟಾಗಬೇಕು ಎಂಬ ನಿಟ್ಟಿನಲ್ಲಿ ಸರಕಾರ ಕಾರ್ಯನಿರತವಾಗಿದೆ. ಅದು ಆ ನಿಟ್ಟಿನಲ್ಲಿ ನೀತಿಗಳನ್ನು ರೂಪಿಸುತ್ತಿದೆ.

ರೈತರಿಗೆ ಬೀಜಗಳನ್ನು ಒದಗಿಸುವುದರಿಂದ ಹಿಡಿದು ಉತ್ಪಾದನೆಯನ್ನು ಮಾರುಕಟ್ಟೆಗೆ ಸಾಗಿಸುವವರೆಗೆ ಅವರ ಎಲ್ಲಾ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿದೆ. ಪ್ರತೀ ಕೃಷಿ ಕ್ಷೇತ್ರಕ್ಕೂ ನೀರು ಒದಗಿಸುವ ಪ್ರಧಾನ ಮಂತ್ರಿ ಕೃಷಿ ನೀರಾವರಿ ಯೋಜನೆಯನ್ನು ನಾವು ಆರಂಭಿಸಿದ್ದೇವೆ. ಧೀರ್ಘಾವಧಿಯಿಂದ ಬಾಕಿ ಉಳಿದಿದ್ದ 99-100ಬೃಹತ್ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ನಾವು ದೊಡ್ಡ ಮೊತ್ತವನ್ನು ಖರ್ಚು ಮಾಡುತ್ತಿದ್ದೇವೆ. ಅವುಗಳ ಮೇಲುಸ್ತುವಾರಿ ನೋಡಲು ಪ್ರತ್ಯೇಕ ವ್ಯವಸ್ಥೆ ರೂಪಿಸಲಾಗಿದೆ. ನಾವು ಉಪಗ್ರಹ ತಂತ್ರಜ್ಞಾನವನ್ನು , ಬಾಹ್ಯಾಕಾಶ ತಂತ್ರಜ್ಞಾನವನ್ನು ಇದಕ್ಕಾಗಿ ಬಳಸುತ್ತಿದ್ದೇವೆ. ನಾವು ಡ್ರೋನ್ ಗಳನ್ನು ಬಳಸುತ್ತಿದ್ದೇವೆ . 

ಪ್ರಧಾನ ಮಂತ್ರಿಯವರ ಕೃಷಿ ನೀರಾವರಿ ಯೋಜನೆಯಿಂದಾಗಿ ಕೃಷಿ ಭೂಮಿಯನ್ನು ಸಣ್ಣ ನೀರಾವರಿಗೆ ಒಳಪಡಿಸುವ ವೇಗ ದುಪ್ಪಟ್ಟಾಗಿದೆ. ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳನ್ನು ಒದಗಿಸುವುದರಿಂದ ಹಿಡಿದು ಅವರ ಭೂಮಿಯ ಮಣ್ಣಿನ ಆರೋಗ್ಯವನ್ನು ತಿಳಿಸುವವರೆಗೆ ಆ ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ.8ಕೋಟಿಗೂ ಅಧಿಕ ಮಂದಿ ರೈತರು ಮಣ್ಣಿನ ಆರೋಗ್ಯ ಕಾರ್ಡುಗಳನ್ನು ಪಡೆದಿದ್ದಾರೆ. ಇದರ ಒಳ್ಳೆಯ ಪರಿಣಾಮಗಳು ಬೆಳೆ ಉತ್ಪಾದನೆಯಲ್ಲಿ ಗೋಚರವಾಗಲಿವೆ. ಅದೇ ರೀತಿಯಲ್ಲಿ ಶೇಖಡಾ ನೂರು ಬೇವಿನ ಲೇಪನದಿಂದ ಯೂರಿಯಾದ ದಕ್ಷತೆ ಹೆಚ್ಚಿದೆ.

ಕೃಷಿಯ ಖರ್ಚು ಕಡಿಮೆಯಾಗಿದೆ ಮತ್ತು ಧಾನ್ಯಗಳ ಉತ್ಪಾದನೆ ಹೆಚ್ಚಿದೆ.

ಹೊಸ ಯೋಜನೆ- ಇಲೆಕ್ಟ್ರಾನಿಕ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಅಥವಾ ಇ-ನಾಮ್ ಅನ್ನು ತ್ವರಿತಗತಿಯಿಂದ ಜಾರಿಗೆ ತರಲಾಗಿದ್ದು, ಇದರಿಂದ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಇದ್ದ ತೊಂದರೆಗಳು ನಿವಾರಣೆಯಾಗಿವೆ.ನೂತನ ರಾಷ್ಟ್ರೀಯ ಆನ್ ಲೈನ್ ಮಾರುಕಟ್ಟೆಯನ್ನು ಆರಂಭಿಸಲಾಗಿದೆ ಮತ್ತು 450ಕೃಷ್ಯುತ್ಪನ್ನ ಮಾರುಕಟ್ಟೆಗಳನ್ನು ಅದಕ್ಕೆ ಜೋಡಿಸಲಾಗಿದೆ. ಕೃಷಿ ಚಟುವಟಿಕೆಗಳಲ್ಲಿಯ ಅಪಾಯದ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರಕಾರ ಕಾರ್ಯೋನ್ಮುಖವಾಗಿದೆ ಮತ್ತು ರೈತರಿಗೆ ಸುಲಭದಲ್ಲಿ ಸಾಲವನ್ನು ನೀಡುತ್ತಿದೆ.ಪ್ರಧಾನ ಮಂತ್ರಿಯವರ ಬೆಳೆ ವಿಮಾ ಯೋಜನೆಯನ್ನು ಊಹನೆಗೂ ಮೀರಿದ ವಾತಾವರಣದ ಸಂಧರ್ಭದಲ್ಲಿ ರೈತರಿಗೆ ಆಗುವ ಹಾನಿಯಿಂದ ರಕ್ಷಿಸುವುದಕ್ಕಾಗಿ ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಸರಕಾರ ಪ್ರೀಮಿಯಂ ಮೊತ್ತವನ್ನು ಕಡಿಮೆ ಮಾಡಿದೆ ಮತ್ತು ಪರಿಹಾರದ ಮೊತ್ತವನ್ನು ಹೆಚ್ಚಿಸಿದೆ.

ಸರಕಾರವು ಕೃಷಿಯ ಎಲ್ಲ ವಲಯಗಳ ಬಗ್ಗೆ ಕಾಳಜೆ ವಹಿಸುತ್ತಿದ್ದು, ರೈತರಿಗೆ ಇದರಿಂದ ಪೂರಕ ಆದಾಯ ದೊರೆಯುತ್ತದೆ.ಕಳೆದ ತಿಂಗಳು ಆಹಾರ ಸಂಸ್ಕರಣಾ ಕ್ಷೇತ್ರವನ್ನು ಬಲಪಡಿಸಲು ಸರಕಾರ ಕಿಸಾನ್ ಸಂಪದ ಯೋಜನೆಯನ್ನು ಆರಂಭಿಸಿತು. ಕಡಿಮೆ ಗುಣ ಮಟ್ಟದ ಮೂಲಸೌಕರ್ಯ ಮತ್ತು ಪೂರೈಕೆ ಸರಪಳಿಯಿಂದಾಗಿ ಇಂದಿಗೂ ಕೂಡಾ ನಾವು 1 ಲಕ್ಷ ಕೋಟಿ ರೂ. ಮೌಲ್ಯದ ಕೃಷಿ ಉತ್ಪನ್ನಗಳನ್ನು ಕಳೆದುಕೊಳ್ಳುತ್ತಿದ್ದೇವೆ.ಹಣ್ಣು ಹಂಪಲುಗಳು ಮತ್ತು ತರಕಾರಿಗಳು ಮಾರುಕಟ್ಟೆ ತಲುಪುವ ಮೊದಲೇ ಕೊಳೆತು ಹೋಗುತ್ತಿವೆ. ಕಿಸಾನ್ ಸಂಪದ ಯೋಜನೆಯಡಿ ಅಹಾರ ಸಂಸ್ಕರಣಾ ಕ್ಷೇತ್ರ ಬಲಗೊಂಡರೆ, ಅದರಿಂದ ರೈತರ ನಷ್ಟ ಕಡಿಮೆಯಾಗುತ್ತದೆ ಮತ್ತು ಅವರ ಆದಾಯ ಹೆಚ್ಚಲು ಸಹಾಯವಾಗುತ್ತದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮತ್ತು ಇಸ್ರೇಲ್ ನಿಕಟವಾಗಿ ಕೆಲಸ ಮಾಡಬಹುದು.ಕೃಷಿ ವಲಯದಲ್ಲಿ ಇಸ್ರೇಲಿನ ಸಹಕಾರ ಎರಡನೇ ಹಸಿರು ಕ್ರಾಂತಿಯಲ್ಲಿ ಭಾರತಕ್ಕೆ ನೆರವಾಗಬಹುದು. ಅದೇ ರೀತಿ ರಕ್ಷಣೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸಹಕಾರ ವೃದ್ಧಿಯಿಂದಾಗಿ ಎರಡೂ ದೇಶಗಳಿಗೆ ಹೆಚ್ಚಿನ ಅನುಕೂಲಗಳಾಗಬಹುದು. ನೂರಾರು ವರ್ಷಗಳ ಹಳೆಯ ಗೆಳೆತನವನ್ನು ಮತ್ತು 21 ನೇ ಶತಮಾನದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಎರಡೂ ದೇಶಗಳು ಜತೆಯಾಗಿ ಮುಂದಡಿ ಇಡುವುದು ಎರಡೂ ದೇಶಗಳಿಗೆ ಅತ್ಯಗತ್ಯವಾಗಿದೆ. ಇಸ್ರೇಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುತ್ತಿರುವ 600ಮಂದಿ ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ ಕೆಲವರು ಈ ಸಮಾರಂಭದಲ್ಲಿ ಹಾಜರಿದ್ದಾರೆ.

ನನ್ನ ಯುವ ಸ್ನೇಹಿತರೇ, ನೀವು ತಂತ್ರಜ್ಞಾನ ಮತ್ತು ನಾವಿನ್ಯತೆಯ ಶೋಧಕ್ಕೆ ಸಂಬಂಧಿಸಿ ಭಾರತ ಮತ್ತು ಇಸ್ರೇಲ್ ನಡುವಿನ ಸೇತುವೆಯಂತೆ. ನನ್ನ ಸ್ನೇಹಿತರಾದ ಬೆಂಜಮಿನ್ ನೇತಾನ್ಯಾಹು ಮತ್ತು ನಾನು ವಿಜ್ಞಾನದಲ್ಲಿ ನಾವಿನ್ಯತೆಯ ಅನ್ವೇಷಣೆ ಮತ್ತು ಸಂಶೋಧನೆ ಎರಡೂ ದೇಶಗಳ ಸಂಬಂಧಗಳಿಗೆ ತಳಹದಿ ಎಂಬುದನ್ನು ಒಪ್ಪಿಕೊಂಡಿದ್ದೇವೆ. ಆದ್ದರಿಂದ ನೀವು ಇಲ್ಲಿ ಏನನ್ನು ಕಲಿಯುತ್ತೀರೋ ಅದು ಭಾರತವನ್ನು ಸದೃಢಗೊಳಿಸಲು ಬಳಕೆಯಾಗುತ್ತದೆ. ಕೆಲ ಗಂಟೆಗಳ ಹಿಂದೆ, ನಾನು ಮೋಷೆ ಹೋಜಾಬರ್ಗ್ ಭೇಟಿಯಾಗಿದ್ದೆ, ಅದು ನನಗೆ ಮುಂಬಯಿ ಭಯೋತ್ಪಾದಕ ದಾಳಿಯನ್ನು ನೆನಪಿಗೆ ತಂದಿತು. ಇದರ ಹೊರತಾಗಿಯೂ ಭಯೋತ್ಪಾದನೆಯನ್ನು ಜೀವನದೆಡೆಗಿನ ಉತ್ಸಾಹ ಹೇಗೆ ಗೆಲ್ಲುತ್ತದೆ ಎಂಬುದನ್ನು ನಾನು ಈ ಸಭೆಯಲ್ಲಿ ನೋಡಿದೆ. ಸ್ಥಿರತೆ, ಶಾಂತಿ, ಮತ್ತು ಸ್ನೇಹ ಭಾರತದಂತೆ ಇಸ್ರೇಲಿಗೂ ಬಹಳ ಮುಖ್ಯ. ಸ್ನೇಹಿತರೇ, ಇಸ್ರೇಲಿನಲ್ಲಿ ಬದುಕುತ್ತಿರುವ ಭಾರತೀಯರು ಸೇವೆಗೆ,ಶೌರ್ಯಕ್ಕೆ ಮತ್ತು ಸ್ನೇಹಾಚಾರಕ್ಕೆ ಸಂಕೇತಗಳಂತಿದ್ದಾರೆ. ಸಾವಿರಾರು ಭಾರತೀಯರು ಇಲ್ಲಿ ಹಿರಿಯ ವ್ಯಕ್ತಿಗಳ ಸೇವೆಗೆ ಸಮರ್ಪಿಸಿಕೊಂಡಿದ್ದಾರೆ. ಬೆಂಗಳೂರು, ದಾರ್ಜಿಲಿಂಗ್, ಆಂಧ್ರ ಪ್ರದೇಶ ಮತ್ತು ದೇಶದ ವಿವಿಧ ಭಾಗಗಳಿಂದ ಇಲ್ಲಿಗೆ ಬಂದಿರುವ ಮತ್ತು ಸೇವೆ ಸಮರ್ಪಿಸಿಕೊಂಡು ಕಠಿಣ ದುಡಿಮೆ ಮಾಡಿದ, ಪ್ರತೀ ಇಸ್ರೇಲಿಯ ಹೃದಯವನ್ನು ಗೆದ್ದವರನ್ನು ನಾನು ಅಭಿನಂದಿಸುತ್ತೇನೆ.

ಸ್ನೇಹಿತರೇ, ಇಸ್ರೇಲಿನಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ನಾನು ಒಳ್ಳೆಯ ಸುದ್ದಿಯನ್ನು ತಿಳಿಸಲು ಇಚ್ಚಿಸುತ್ತೇನೆ.ಒಸಿಐ ಮತ್ತು ಪಿಐಒ ಕಾರ್ಡುಗಳನ್ನು ಪಡೆಯಲು ಇಸ್ರೇಲಿನಲ್ಲಿ ವಾಸಿಸುತ್ತಿರುವ ಭಾರತೀಯರು ಕಷ್ಟಗಳನ್ನು ಎದುರಿಸುತ್ತಿರುವ ಬಗ್ಗೆ ನನ್ನ ಅರಿವಿಗೆ ಬಂದಿದೆ. ಸೌಹಾರ್ದ ಸಂಬಂಧಗಳು ಯಾವುದೇ ಕಾರ್ಡು ಅಥವಾ ದಾಖಲೆಗಳನ್ನು ಅವಲಂಬಿಸಿರುವುದಿಲ್ಲ. ನಿಮಗೆ ಒಸಿಐ ಕಾರ್ಡುಗಳನ್ನು ಭಾರತ ನಿರಾಕರಿಸಲಾರದು, ಅದು ಸಾಧ್ಯವೂ ಇಲ್ಲ.ಆದ್ದರಿಂದ ನಾನು ನಿಮಗೆ ಒಳ್ಳೆಯ ಸುದ್ದಿ ತಿಳಿಸುತ್ತೇನೆ. ಸಹೋದರರೇ ಮತ್ತು ಸಹೋದರೆಯರೇ, ಕಡ್ಡಾಯ ಮಿಲಿಟರಿ ಸೇವೆ ಮಾಡಿದ್ದರೂ ಸಹಾ ಭಾರತೀಯ ಮೂಲದ ಜನರು ಒಸಿಐ ಕಾರ್ಡುಗಳನ್ನು ಹೊಂದಲು ಬಾಧ್ಯರು ಎಂಬುದನ್ನು ನಾನು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ ಮತ್ತು ಭರವಸೆ ನೀಡುತ್ತೇನೆ. ನಿಮಗೆ ಪಿಐಒ ಕಾರ್ಡುಗಳನ್ನು ಒಸಿಐ ಕಾರ್ಡುಗಳಾಗಿ ಬದಲಿಸಿಕೊಳ್ಳಲು ಕಡ್ಡಾಯ ಮಿಲಿಟರಿ ಸೇವೆಗೆ ಸಂಬಂಧಿಸಿದ ಕೆಲವು ನಿಯಮಗಳಿಂದ ಸಾಧ್ಯವಾಗಿರಲಿಕ್ಕಿಲ್ಲ. ಆ ನಿಯಮಗಳನ್ನು ಸರಳಗೊಳಿಸಲು ನಾವು ನಿರ್ಧರಿಸಿದ್ದೇವೆ.

ಇನ್ನೊಂದು ವಿಷಯ, ದೇಶಗಳ ನಡುವೆ ಸಾಂಸ್ಕೃತಿಕ ಸಂಬಂಧಗಳನ್ನು ಉತ್ತಮಪಡಿಸಲು ಇಸ್ರೇಲಿನಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸುವ ಅಗತ್ಯ ಇದೆಯೆಂಬ ಭಾವನೆ ಕೆಲಕಾಲದಿಂದ ಇತ್ತು.ಭಾರತ ಸರಕಾರ ಶೀಘ್ರದಲ್ಲಿಯೇ ಇಸ್ರೇಲಿನಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸುತ್ತದೆ ಎಂಬುದನ್ನು ನಾನಿಲ್ಲಿ ಘೋಷಿಸಲು ಇಚ್ಚಿಸುತ್ತೇನೆ.

ಭಾರತ ನಿಮ್ಮ ಹೃದಯದಲ್ಲಿದೆ ಮತ್ತು ಭಾರತೀಯ ಸಾಂಸ್ಕೃತಿಕ ಕೇಂದ್ರ ಸದಾ ನಿಮ್ಮನ್ನು ಭಾರತೀಯ ಸಂಸ್ಕೃತಿಯ ಜತೆ ಸಂಪರ್ಕ ಇರುವಂತೆ ಮಾಡುತ್ತದೆ. ಇಂದು ಈ ಸಂಧರ್ಭದಲ್ಲಿ, ಭಾರತೀಯ ಸಮುದಾಯದ ಜತೆ, ಇಸ್ರೇಲಿ ಯುವಕರು ದೊಡ್ಡ ಸಂಖ್ಯೆಯಲ್ಲಿ ಭಾರತಕ್ಕೆ ಭೇಟಿ ಕೊಡಬೇಕೆಂದು ಆಮಂತ್ರಿಸುತ್ತೇನೆ.ಭಾರತ ಮತ್ತು ಇಸ್ರೇಲ್ ಗಳು ಚಾರಿತ್ರಿಕವಾಗಿ ಸಂಪರ್ಕಿಸಲ್ಪಟ್ಟಿರುವುದು ಮಾತ್ರವಲ್ಲ, ಅವು ಸಾಂಸ್ಕೃತಿಕವಾಗಿಯೂ ಸಂಬಂಧ ಹೊಂದಿವೆ.ಮಾನವ ಮೌಲ್ಯಗಳು ಮತ್ತು ಮಾನವ ಪರಂಪರೆಯಲ್ಲಿ ಎರಡೂ ಪಾಲುದಾರರಾಗಿವೆ. ಎರಡೂ ದೇಶಗಳು ತಮ್ಮ ಸಂಪ್ರದಾಯಗಳನ್ನು ಹೇಗೆ ಗೌರವಿಸಬೇಕು ಮತ್ತು ಸಂಕಷ್ಟದ ಸಂಧರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ತಿಳಿದುಕೊಂಡಿವೆ. ಭಾರತ ಈ ಬಗ್ಗೆ ಹಲವು ಉದಾಹರಣೆಗಳನ್ನು ಹೊಂದಿದೆ ಮತ್ತು ಈ ಚಾರಿತ್ರಿಕ ಪ್ರಯಾಣ ನೋಡಲು ಇಸ್ರೇಲ್ ಯುವಕರು ಭಾರತಕ್ಕೆ ಬರುತ್ತಿರಬೇಕು.

ಅತಿಥಿಗಳನ್ನು ದೇವರೆಂದು ಪರಿಗಣಿಸುವ ನನ್ನ ದೇಶ ಮಧುರ ನೆನಪುಗಳೊಂದಿಗೆ ಮರಳುವಂತೆ ಮಾಡುತ್ತದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ.ಕೊನೆಯಲ್ಲಿ ಮತ್ತೊಮ್ಮೆ ನಾನು ಯಹೂದಿ ಸಮುದಾಯಕ್ಕೆ, ನನ್ನ ಸ್ನೇಹಿತರಾದ ಬೆಂಜಮಿನ್ ನೇತಾನ್ಯಾಹು ಮತ್ತು ಇಸ್ರೇಲಿನ ಸಮಸ್ತರಿಗೆ ನನ್ನ ಹೃದಯಾಂತರಾಳದಿಂದ ಕೃತಜ್ಞತೆ ಸಲ್ಲಿಸುತ್ತೇನೆ.

ಮತ್ತು ಸಹೋದರ, ಸಹೋದರಿಯರೇ,

ದಿಲ್ಲಿ-ಮುಂಬಯಿ-ಟೆಲ್ ಅವೀವ್ ವಿಮಾನ ಸೌಲಭ್ಯ ಆರಂಭವಾಗುತ್ತದೆ, ಆದ್ದರಿಂದ ಇಸ್ರೇಲಿ ಯುವಕರು ಭಾರತಕ್ಕೆ ಭೇಟಿ ಕೊಡಬೇಕೆಂದು ನಾನು ಕೋರಿಕೊಳ್ಳುತ್ತೇನೆ. ನಾನು ಅವರನ್ನು ಭಾರತಕ್ಕೆ ಆಹ್ವಾನಿಸುತ್ತಿದ್ದೇನೆ.

ಮತ್ತೊಮ್ಮೆ ಇಸ್ರೇಲಿನ ಜನತೆಗೆ, ಇಸ್ರೇಲಿನ ಸರಕಾರಕ್ಕೆ ಮತ್ತು ನನ್ನ ಸ್ನೇಹಿತರಾದ ಬೆಂಜಮಿನ್ ನೇತಾನ್ಯಾಹು ಅವರಿಗೆ ನನ್ನ ಹೃದಯ ತುಂಬಿದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ನಿಮಗೆಲ್ಲ ತುಂಬಾ ತುಂಬಾ ಧನ್ಯವಾದಗಳು

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
Text of PM Modi's address at the Parliament of Guyana
November 21, 2024

Hon’ble Speaker, मंज़ूर नादिर जी,
Hon’ble Prime Minister,मार्क एंथनी फिलिप्स जी,
Hon’ble, वाइस प्रेसिडेंट भरत जगदेव जी,
Hon’ble Leader of the Opposition,
Hon’ble Ministers,
Members of the Parliament,
Hon’ble The चांसलर ऑफ द ज्यूडिशियरी,
अन्य महानुभाव,
देवियों और सज्जनों,

गयाना की इस ऐतिहासिक पार्लियामेंट में, आप सभी ने मुझे अपने बीच आने के लिए निमंत्रित किया, मैं आपका बहुत-बहुत आभारी हूं। कल ही गयाना ने मुझे अपना सर्वोच्च सम्मान दिया है। मैं इस सम्मान के लिए भी आप सभी का, गयाना के हर नागरिक का हृदय से आभार व्यक्त करता हूं। गयाना का हर नागरिक मेरे लिए ‘स्टार बाई’ है। यहां के सभी नागरिकों को धन्यवाद! ये सम्मान मैं भारत के प्रत्येक नागरिक को समर्पित करता हूं।

साथियों,

भारत और गयाना का नाता बहुत गहरा है। ये रिश्ता, मिट्टी का है, पसीने का है,परिश्रम का है करीब 180 साल पहले, किसी भारतीय का पहली बार गयाना की धरती पर कदम पड़ा था। उसके बाद दुख में,सुख में,कोई भी परिस्थिति हो, भारत और गयाना का रिश्ता, आत्मीयता से भरा रहा है। India Arrival Monument इसी आत्मीय जुड़ाव का प्रतीक है। अब से कुछ देर बाद, मैं वहां जाने वाला हूं,

साथियों,

आज मैं भारत के प्रधानमंत्री के रूप में आपके बीच हूं, लेकिन 24 साल पहले एक जिज्ञासु के रूप में मुझे इस खूबसूरत देश में आने का अवसर मिला था। आमतौर पर लोग ऐसे देशों में जाना पसंद करते हैं, जहां तामझाम हो, चकाचौंध हो। लेकिन मुझे गयाना की विरासत को, यहां के इतिहास को जानना था,समझना था, आज भी गयाना में कई लोग मिल जाएंगे, जिन्हें मुझसे हुई मुलाकातें याद होंगीं, मेरी तब की यात्रा से बहुत सी यादें जुड़ी हुई हैं, यहां क्रिकेट का पैशन, यहां का गीत-संगीत, और जो बात मैं कभी नहीं भूल सकता, वो है चटनी, चटनी भारत की हो या फिर गयाना की, वाकई कमाल की होती है,

साथियों,

बहुत कम ऐसा होता है, जब आप किसी दूसरे देश में जाएं,और वहां का इतिहास आपको अपने देश के इतिहास जैसा लगे,पिछले दो-ढाई सौ साल में भारत और गयाना ने एक जैसी गुलामी देखी, एक जैसा संघर्ष देखा, दोनों ही देशों में गुलामी से मुक्ति की एक जैसी ही छटपटाहट भी थी, आजादी की लड़ाई में यहां भी,औऱ वहां भी, कितने ही लोगों ने अपना जीवन समर्पित कर दिया, यहां गांधी जी के करीबी सी एफ एंड्रूज हों, ईस्ट इंडियन एसोसिएशन के अध्यक्ष जंग बहादुर सिंह हों, सभी ने गुलामी से मुक्ति की ये लड़ाई मिलकर लड़ी,आजादी पाई। औऱ आज हम दोनों ही देश,दुनिया में डेमोक्रेसी को मज़बूत कर रहे हैं। इसलिए आज गयाना की संसद में, मैं आप सभी का,140 करोड़ भारतवासियों की तरफ से अभिनंदन करता हूं, मैं गयाना संसद के हर प्रतिनिधि को बधाई देता हूं। गयाना में डेमोक्रेसी को मजबूत करने के लिए आपका हर प्रयास, दुनिया के विकास को मजबूत कर रहा है।

साथियों,

डेमोक्रेसी को मजबूत बनाने के प्रयासों के बीच, हमें आज वैश्विक परिस्थितियों पर भी लगातार नजर ऱखनी है। जब भारत और गयाना आजाद हुए थे, तो दुनिया के सामने अलग तरह की चुनौतियां थीं। आज 21वीं सदी की दुनिया के सामने, अलग तरह की चुनौतियां हैं।
दूसरे विश्व युद्ध के बाद बनी व्यवस्थाएं और संस्थाएं,ध्वस्त हो रही हैं, कोरोना के बाद जहां एक नए वर्ल्ड ऑर्डर की तरफ बढ़ना था, दुनिया दूसरी ही चीजों में उलझ गई, इन परिस्थितियों में,आज विश्व के सामने, आगे बढ़ने का सबसे मजबूत मंत्र है-"Democracy First- Humanity First” "Democracy First की भावना हमें सिखाती है कि सबको साथ लेकर चलो,सबको साथ लेकर सबके विकास में सहभागी बनो। Humanity First” की भावना हमारे निर्णयों की दिशा तय करती है, जब हम Humanity First को अपने निर्णयों का आधार बनाते हैं, तो नतीजे भी मानवता का हित करने वाले होते हैं।

साथियों,

हमारी डेमोक्रेटिक वैल्यूज इतनी मजबूत हैं कि विकास के रास्ते पर चलते हुए हर उतार-चढ़ाव में हमारा संबल बनती हैं। एक इंक्लूसिव सोसायटी के निर्माण में डेमोक्रेसी से बड़ा कोई माध्यम नहीं। नागरिकों का कोई भी मत-पंथ हो, उसका कोई भी बैकग्राउंड हो, डेमोक्रेसी हर नागरिक को उसके अधिकारों की रक्षा की,उसके उज्जवल भविष्य की गारंटी देती है। और हम दोनों देशों ने मिलकर दिखाया है कि डेमोक्रेसी सिर्फ एक कानून नहीं है,सिर्फ एक व्यवस्था नहीं है, हमने दिखाया है कि डेमोक्रेसी हमारे DNA में है, हमारे विजन में है, हमारे आचार-व्यवहार में है।

साथियों,

हमारी ह्यूमन सेंट्रिक अप्रोच,हमें सिखाती है कि हर देश,हर देश के नागरिक उतने ही अहम हैं, इसलिए, जब विश्व को एकजुट करने की बात आई, तब भारत ने अपनी G-20 प्रेसीडेंसी के दौरान One Earth, One Family, One Future का मंत्र दिया। जब कोरोना का संकट आया, पूरी मानवता के सामने चुनौती आई, तब भारत ने One Earth, One Health का संदेश दिया। जब क्लाइमेट से जुड़े challenges में हर देश के प्रयासों को जोड़ना था, तब भारत ने वन वर्ल्ड, वन सन, वन ग्रिड का विजन रखा, जब दुनिया को प्राकृतिक आपदाओं से बचाने के लिए सामूहिक प्रयास जरूरी हुए, तब भारत ने CDRI यानि कोएलिशन फॉर डिज़ास्टर रज़ीलिएंट इंफ्रास्ट्रक्चर का initiative लिया। जब दुनिया में pro-planet people का एक बड़ा नेटवर्क तैयार करना था, तब भारत ने मिशन LiFE जैसा एक global movement शुरु किया,

साथियों,

"Democracy First- Humanity First” की इसी भावना पर चलते हुए, आज भारत विश्वबंधु के रूप में विश्व के प्रति अपना कर्तव्य निभा रहा है। दुनिया के किसी भी देश में कोई भी संकट हो, हमारा ईमानदार प्रयास होता है कि हम फर्स्ट रिस्पॉन्डर बनकर वहां पहुंचे। आपने कोरोना का वो दौर देखा है, जब हर देश अपने-अपने बचाव में ही जुटा था। तब भारत ने दुनिया के डेढ़ सौ से अधिक देशों के साथ दवाएं और वैक्सीन्स शेयर कीं। मुझे संतोष है कि भारत, उस मुश्किल दौर में गयाना की जनता को भी मदद पहुंचा सका। दुनिया में जहां-जहां युद्ध की स्थिति आई,भारत राहत और बचाव के लिए आगे आया। श्रीलंका हो, मालदीव हो, जिन भी देशों में संकट आया, भारत ने आगे बढ़कर बिना स्वार्थ के मदद की, नेपाल से लेकर तुर्की और सीरिया तक, जहां-जहां भूकंप आए, भारत सबसे पहले पहुंचा है। यही तो हमारे संस्कार हैं, हम कभी भी स्वार्थ के साथ आगे नहीं बढ़े, हम कभी भी विस्तारवाद की भावना से आगे नहीं बढ़े। हम Resources पर कब्जे की, Resources को हड़पने की भावना से हमेशा दूर रहे हैं। मैं मानता हूं,स्पेस हो,Sea हो, ये यूनीवर्सल कन्फ्लिक्ट के नहीं बल्कि यूनिवर्सल को-ऑपरेशन के विषय होने चाहिए। दुनिया के लिए भी ये समय,Conflict का नहीं है, ये समय, Conflict पैदा करने वाली Conditions को पहचानने और उनको दूर करने का है। आज टेरेरिज्म, ड्रग्स, सायबर क्राइम, ऐसी कितनी ही चुनौतियां हैं, जिनसे मुकाबला करके ही हम अपनी आने वाली पीढ़ियों का भविष्य संवार पाएंगे। और ये तभी संभव है, जब हम Democracy First- Humanity First को सेंटर स्टेज देंगे।

साथियों,

भारत ने हमेशा principles के आधार पर, trust और transparency के आधार पर ही अपनी बात की है। एक भी देश, एक भी रीजन पीछे रह गया, तो हमारे global goals कभी हासिल नहीं हो पाएंगे। तभी भारत कहता है – Every Nation Matters ! इसलिए भारत, आयलैंड नेशन्स को Small Island Nations नहीं बल्कि Large ओशिन कंट्रीज़ मानता है। इसी भाव के तहत हमने इंडियन ओशन से जुड़े आयलैंड देशों के लिए सागर Platform बनाया। हमने पैसिफिक ओशन के देशों को जोड़ने के लिए भी विशेष फोरम बनाया है। इसी नेक नीयत से भारत ने जी-20 की प्रेसिडेंसी के दौरान अफ्रीकन यूनियन को जी-20 में शामिल कराकर अपना कर्तव्य निभाया।

साथियों,

आज भारत, हर तरह से वैश्विक विकास के पक्ष में खड़ा है,शांति के पक्ष में खड़ा है, इसी भावना के साथ आज भारत, ग्लोबल साउथ की भी आवाज बना है। भारत का मत है कि ग्लोबल साउथ ने अतीत में बहुत कुछ भुगता है। हमने अतीत में अपने स्वभाव औऱ संस्कारों के मुताबिक प्रकृति को सुरक्षित रखते हुए प्रगति की। लेकिन कई देशों ने Environment को नुकसान पहुंचाते हुए अपना विकास किया। आज क्लाइमेट चेंज की सबसे बड़ी कीमत, ग्लोबल साउथ के देशों को चुकानी पड़ रही है। इस असंतुलन से दुनिया को निकालना बहुत आवश्यक है।

साथियों,

भारत हो, गयाना हो, हमारी भी विकास की आकांक्षाएं हैं, हमारे सामने अपने लोगों के लिए बेहतर जीवन देने के सपने हैं। इसके लिए ग्लोबल साउथ की एकजुट आवाज़ बहुत ज़रूरी है। ये समय ग्लोबल साउथ के देशों की Awakening का समय है। ये समय हमें एक Opportunity दे रहा है कि हम एक साथ मिलकर एक नया ग्लोबल ऑर्डर बनाएं। और मैं इसमें गयाना की,आप सभी जनप्रतिनिधियों की भी बड़ी भूमिका देख रहा हूं।

साथियों,

यहां अनेक women members मौजूद हैं। दुनिया के फ्यूचर को, फ्यूचर ग्रोथ को, प्रभावित करने वाला एक बहुत बड़ा फैक्टर दुनिया की आधी आबादी है। बीती सदियों में महिलाओं को Global growth में कंट्रीब्यूट करने का पूरा मौका नहीं मिल पाया। इसके कई कारण रहे हैं। ये किसी एक देश की नहीं,सिर्फ ग्लोबल साउथ की नहीं,बल्कि ये पूरी दुनिया की कहानी है।
लेकिन 21st सेंचुरी में, global prosperity सुनिश्चित करने में महिलाओं की बहुत बड़ी भूमिका होने वाली है। इसलिए, अपनी G-20 प्रेसीडेंसी के दौरान, भारत ने Women Led Development को एक बड़ा एजेंडा बनाया था।

साथियों,

भारत में हमने हर सेक्टर में, हर स्तर पर, लीडरशिप की भूमिका देने का एक बड़ा अभियान चलाया है। भारत में हर सेक्टर में आज महिलाएं आगे आ रही हैं। पूरी दुनिया में जितने पायलट्स हैं, उनमें से सिर्फ 5 परसेंट महिलाएं हैं। जबकि भारत में जितने पायलट्स हैं, उनमें से 15 परसेंट महिलाएं हैं। भारत में बड़ी संख्या में फाइटर पायलट्स महिलाएं हैं। दुनिया के विकसित देशों में भी साइंस, टेक्नॉलॉजी, इंजीनियरिंग, मैथ्स यानि STEM graduates में 30-35 परसेंट ही women हैं। भारत में ये संख्या फोर्टी परसेंट से भी ऊपर पहुंच चुकी है। आज भारत के बड़े-बड़े स्पेस मिशन की कमान महिला वैज्ञानिक संभाल रही हैं। आपको ये जानकर भी खुशी होगी कि भारत ने अपनी पार्लियामेंट में महिलाओं को रिजर्वेशन देने का भी कानून पास किया है। आज भारत में डेमोक्रेटिक गवर्नेंस के अलग-अलग लेवल्स पर महिलाओं का प्रतिनिधित्व है। हमारे यहां लोकल लेवल पर पंचायती राज है, लोकल बॉड़ीज़ हैं। हमारे पंचायती राज सिस्टम में 14 लाख से ज्यादा यानि One point four five मिलियन Elected Representatives, महिलाएं हैं। आप कल्पना कर सकते हैं, गयाना की कुल आबादी से भी करीब-करीब दोगुनी आबादी में हमारे यहां महिलाएं लोकल गवर्नेंट को री-प्रजेंट कर रही हैं।

साथियों,

गयाना Latin America के विशाल महाद्वीप का Gateway है। आप भारत और इस विशाल महाद्वीप के बीच अवसरों और संभावनाओं का एक ब्रिज बन सकते हैं। हम एक साथ मिलकर, भारत और Caricom की Partnership को और बेहतर बना सकते हैं। कल ही गयाना में India-Caricom Summit का आयोजन हुआ है। हमने अपनी साझेदारी के हर पहलू को और मजबूत करने का फैसला लिया है।

साथियों,

गयाना के विकास के लिए भी भारत हर संभव सहयोग दे रहा है। यहां के इंफ्रास्ट्रक्चर में निवेश हो, यहां की कैपेसिटी बिल्डिंग में निवेश हो भारत और गयाना मिलकर काम कर रहे हैं। भारत द्वारा दी गई ferry हो, एयरक्राफ्ट हों, ये आज गयाना के बहुत काम आ रहे हैं। रीन्युएबल एनर्जी के सेक्टर में, सोलर पावर के क्षेत्र में भी भारत बड़ी मदद कर रहा है। आपने t-20 क्रिकेट वर्ल्ड कप का शानदार आयोजन किया है। भारत को खुशी है कि स्टेडियम के निर्माण में हम भी सहयोग दे पाए।

साथियों,

डवलपमेंट से जुड़ी हमारी ये पार्टनरशिप अब नए दौर में प्रवेश कर रही है। भारत की Energy डिमांड तेज़ी से बढ़ रही हैं, और भारत अपने Sources को Diversify भी कर रहा है। इसमें गयाना को हम एक महत्वपूर्ण Energy Source के रूप में देख रहे हैं। हमारे Businesses, गयाना में और अधिक Invest करें, इसके लिए भी हम निरंतर प्रयास कर रहे हैं।

साथियों,

आप सभी ये भी जानते हैं, भारत के पास एक बहुत बड़ी Youth Capital है। भारत में Quality Education और Skill Development Ecosystem है। भारत को, गयाना के ज्यादा से ज्यादा Students को Host करने में खुशी होगी। मैं आज गयाना की संसद के माध्यम से,गयाना के युवाओं को, भारतीय इनोवेटर्स और वैज्ञानिकों के साथ मिलकर काम करने के लिए भी आमंत्रित करता हूँ। Collaborate Globally And Act Locally, हम अपने युवाओं को इसके लिए Inspire कर सकते हैं। हम Creative Collaboration के जरिए Global Challenges के Solutions ढूंढ सकते हैं।

साथियों,

गयाना के महान सपूत श्री छेदी जगन ने कहा था, हमें अतीत से सबक लेते हुए अपना वर्तमान सुधारना होगा और भविष्य की मजबूत नींव तैयार करनी होगी। हम दोनों देशों का साझा अतीत, हमारे सबक,हमारा वर्तमान, हमें जरूर उज्जवल भविष्य की तरफ ले जाएंगे। इन्हीं शब्दों के साथ मैं अपनी बात समाप्त करता हूं, मैं आप सभी को भारत आने के लिए भी निमंत्रित करूंगा, मुझे गयाना के ज्यादा से ज्यादा जनप्रतिनिधियों का भारत में स्वागत करते हुए खुशी होगी। मैं एक बार फिर गयाना की संसद का, आप सभी जनप्रतिनिधियों का, बहुत-बहुत आभार, बहुत बहुत धन्यवाद।