Swami Vivekananda shows what one can achieve at a young age: PM Modi
The work that the youth are doing today will impact the future of the nation: PM Modi
Guide those around you on increased cashless transactions: PM Modi urges youth
Inculcate the habit of doing cashless transaction in at least ten families a day: PM urges youth
PM Modi's 3Cs mantra - Collectivity, Connectivity & Creativity
The support from youth in the fight against corruption convinces me that it is possible to bring a positive change in the nation: PM

ನನ್ನ ಯುವ ಮಿತ್ರರಿಗೂ, 21ನೇ ಯುವ ಮಹೋತ್ಸವದ ಸಂದರ್ಭದಲ್ಲಿ ವೇದಿಕೆಯಲ್ಲಿರುವ ಎಲ್ಲ ಗಣ್ಯರಿಗೂ ಅನೇಕ ಅನೇಕ ಅಭಿನಂದನೆಗಳು. ಸಮಯದ ಅಭಾವದಿಂದ ನಾನು ಖುದ್ದಾಗಿ ನಿಮ್ಮೊಂದಿಗೆ ರೋಹ್ಟಕ್ ನಲ್ಲಿ ಇಲ್ಲದಿದ್ದರೂ, ಇದನ್ನು ನೋಡಿದ ನನಗೆ ಇದು ಈಗ 21 ವರ್ಷದ ಪ್ರೌಢತ್ವ ಪಡೆದ ಯುವಕನಂತೆ ಕಾಣುತ್ತಿದೆ. ದೇಶದ ಮೂಲೆ ಮೂಲೆಗಳಿಂದ ಆಗಮಿಸಿರುವ ಯುವಕರ ಅರಳಿದ ಮುಖಗಳು ನಿಮ್ಮ ನಡುವೆ ಬೆಳಕಿನ ಹಬ್ಬವನ್ನು ಆಚರಿಸುತ್ತಿರುವಂತೆ ಅನಿಸುತ್ತಿದೆ.

ಇಂದು ರಾಷ್ಟ್ರೀಯ ಯುವ ದಿನ ಮತ್ತು ಸ್ವಾಮಿ ವಿವೇಕಾನಂದರ ಜಯಂತಿ. ಈ ಶುಭ ಸಂದರ್ಭದಲ್ಲಿ ನಾನು ದೇಶದ ಯುವಜನರಿಗೆ ಶುಭ ಕೋರುತ್ತೇನೆ. ತಮ್ಮ ಅಲ್ಪಾವಧಿಯ ಬದುಕಿನಲ್ಲಿಯೇ ಹಲವಾರು ಸಾಧನೆ ಮಾಡಿರುವುದಕ್ಕೆ ಸ್ವಾಮಿ ವಿವೇಕಾನಂದರು ಅತ್ಯುತ್ತಮ ಉದಾಹರಣೆಯಾಗುತ್ತಾರೆ. ಸ್ವಾಮಿ ವಿವೇಕಾನಂದರು ಅಪಾರವಾದ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಅವರ ಮಾತುಗಳಲ್ಲೇ ಹೇಳುವುದಾದರೆ ‘ಈಗ ನಮ್ಮ ದೇಶಕ್ಕೆ ಉಕ್ಕಿನಂಥ ಮಾಂಸಖಂಡ, ಬಲವಾದ ನರಮಂಡಲ ಹಾಗೂ ಅದರ ಜೊತೆಗೆ ಪ್ರಬಲ ಇಚ್ಛಾಶಕ್ತಿ ಇರುವವ ಯುವಕರ ಅವಶ್ಯಕತೆ ಇದೆ’.

ಸ್ವಾಮಿ ವಿವೇಕಾನಂದರು ಯಾವುದೇ ಭೇದಭಾವ ಇಲ್ಲದ, ಒಬ್ಬರ ಬಗ್ಗೆ ಮತ್ತೊಬ್ಬರು ವಿಶ್ವಾಸ ಹೊಂದಿರುವಂಥ ಯುವಕರನ್ನು ನಿರ್ಮಾಣ ಮಾಡಲು ಬಯಸಿದ್ದರು. ತನ್ನ ಭೂತಕಾಲದ ಬಗ್ಗೆ ಚಿಂತೆ ಮಾಡದೆ, ತನ್ನ ಭವಿಷ್ಯದ ಗುರಿಗಾಗಿ ಕೆಲಸ ಮಾಡುವವನೇ ಯುವಕ. ಅದೇ ರೀತಿ, ನೀವು ಯುವಕರು ಇಂದು ಏನು ಮಾಡುತ್ತೀರೋ ಅದು ದೇಶದ ಭವಿಷ್ಯ ಆಗುತ್ತದೆ.
ಸ್ನೇಹಿತರೇ, ಇಂದು ನಮ್ಮ ದೇಶದಲ್ಲಿರುವ 80 ಕೋಟಿಗೂ ಅಧಿಕ ಮಂದಿ 35ವರ್ಷ ಒಳಗಿನವರಾಗಿರುತ್ತಾರೆ. ಸ್ವಾಮಿ ವಿವೇಕಾನಂದರು ತೋರಿದ ಹಾದಿಯಲ್ಲಿ ನಡೆದರೆ, ಭಾರತ ವಿಶ್ವಗುರು ಆಗುವ ಎಲ್ಲ ಸಾಮರ್ಥ್ಯವನ್ನೂ ಹೊಂದಿದೆ.
ಇಂದು ರೋಹ್ಟಕ್ ನಲ್ಲಿ ಉಪಸ್ಥಿತರಿರುವ ನನ್ನ ಎಲ್ಲ ಸ್ನೇಹಿತರೇ, ಹರಿಯಾಣದ ಭೂಮಿ ಬಹಳ ಸ್ಫೂರ್ತಿದಾಯಕವಾದ್ದು. ಹರಿಯಾಣದ ಈ ಭೂಮಿ ವೇದ, ಉಪನಿಷತ್ತು, ಗೀತೆಯದಾಗಿದೆ. ಈ ಭೂಮಿ ವೀರರ ಅದರಲ್ಲೂ ಕರ್ಮಯೋಗಿಗಳ ಮತ್ತು ರೈತರ ಹಾಗೂ ಯೋಧರ ನಾಡಾಗಿದೆ. ಈ ನೆಲೆ ಪವಿತ್ರ ಸರಸ್ವತಿಯ ತಾಣವಾಗಿದೆ. ನಮ್ಮ ಸಂಸ್ಕೃತಿ, ನಮ್ಮ ಮೌಲ್ಯಗಳನ್ನು ಮುಂದುವರಿಸುವುದು ಹೇಗೆ ಎಂಬುದನ್ನು ಈ ಭೂಮಿಯಿಂದ ಕಲಿಯಬಹುದಾಗಿದೆ.
‘ಡಿಜಿಟಲ್ ಭಾರತಕ್ಕೆ ಯುವಜನರು’ ಎಂಬುದು ಈ ಬಾರಿಯ ಧ್ಯೇಯವಾಕ್ಯವಾಗಿದೆ ಎಂಬುದನ್ನು ಉಲ್ಲೇಖಿಸಲು ನನಗೆ ಹರ್ಷವಾಗುತ್ತದೆ. ಈ ಉತ್ಸವದಲ್ಲಿ ಯುವಕರನ್ನು ತಮ್ಮ ದೈನಂದಿನ ನಗದುರಹಿತ ವಹಿವಾಟಿನ ಕುರಿತು ತರಬೇತುಗೊಳಿಸಲಾಗುತ್ತದೆ. ನೀವು ಇಲ್ಲಿ ತರಬೇತಿ ಪಡೆದುಕೊಂಡ ಬಳಿಕ ನಿಮ್ಮ ಸುತ್ತಮುತ್ತಲ ಕನಿಷ್ಠ 10 ಕುಟುಂಬಗಳಿಗೆ ನಗದು ರಹಿತ ವಹಿವಾಟಿನ ಬಗ್ಗೆ ಕಲಿಸಿಕೊಡಿ ಎಂದು ನಾನು ಮನವಿ ಮಾಡುತ್ತೇನೆ. ಕಡಿಮೆ ನಗದಿನ ಆರ್ಥಿಕತೆಯನ್ನು ಸೃಷ್ಟಿಸುವಲ್ಲಿ ನಿಮ್ಮೆಲ್ಲರ ಪಾತ್ರ ದೊಡ್ಡದಾಗಿದೆ.  ದೇಶ ಕಪ್ಪುಹಣ ಮತ್ತು ಭ್ರಷ್ಟಾಚಾರದಿಂದ ಹೊರಬರಲು ಇದು ನಿಮ್ಮ ಒಂದು ಕೊಡುಗೆಯಾಗುತ್ತದೆ.

ಈ ಬಾರಿಯ ಉತ್ಸವದ ಲಾಂಛನವನ್ನು ಹೆಣ್ಣುಮಗಳ ರೂಪದಲ್ಲಿ ಆಯ್ಕೆ ಮಾಡಲಾಗಿದೆ. ನಾವು ಅಕ್ಕರೆಯಿಂದ ಆಕೆಗೆ ‘ಮಾರಿ ಲಾಡೋ’ ಎಂದು ಹೆಸರಿಟ್ಟಿದ್ದೇವೆ. ಈ ಉತ್ಸವದ ಮೂಲಕ ಬೇಟಿ ಬಚಾವೋ, ಬೇಟಿ ಪಡಾವೋ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನಾರ್ಹ. ಕೇಂದ್ರ ಸರ್ಕಾರ ಈ ಕಾರ್ಯಕ್ರಮವನ್ನು ಹರಿಯಾಣದಿಂದಲೇ ಆರಂಭ ಮಾಡಿತ್ತು. ಈ ಪ್ರಚಾರದ ಪರಿಣಾಮ ಇಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಆಗಿದೆ. ಪರಿಸ್ಥಿತಿ ಬದಲಾಗುತ್ತಿದೆ. ಲಿಂಗಾನುಪಾತ ಕೂಡ ಗಣನೀಯವಾಗಿ ಬದಲಾಗಿದೆ. ಇದಕ್ಕಾಗಿ ನಾನು ಹರಿಯಾಣದ ಜನತೆಯನ್ನು ಅಭಿನಂದಿಸುತ್ತೇನೆ. ಜನ ನಿರ್ಧಾರ ಮಾಡಿದರೆ, ಅಸಾಧ್ಯವಾದುದನ್ನೂ ಸಾಧಿಸಲು ಸಾಧ್ಯ ಎಂಬುದನ್ನು ಇದು ತೋರಿಸುತ್ತದೆ. ಶೀಘ್ರವೇ ಹರಿಯಾಣ ದೇಶದ ಹೆಮ್ಮೆಯ ಕೇಂದ್ರ ಆಗುತ್ತದೆ ಎಂಬುದು ನನ್ನ ವಿಶ್ವಾಸ.

ಈ ರಾಜ್ಯದ ಭವಿಷ್ಯವನ್ನು ರೂಪಿಸುವಲ್ಲಿ ಹರಿಯಾಣದ ಯುವ ಜನರು ದೊಡ್ಡ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಹರಿಯಾಣದ ಯುವ ಕ್ರೀಡಾಪಟುಗಳು ಅನೇಕ ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ಸದಾ ದೇಶಕ್ಕೆ ಹಮ್ಮೆ ತಂದಿದ್ದಾರೆ.
 ಹೊಸ ಅಭಿವೃದ್ಧಿಯ ಎತ್ತರವನ್ನು ಸಾಧಿಸಲು ಯುವಕರು ಇನ್ನೂ ಹೆಚ್ಚಿನ ಕೊಡುಗೆ ನೀಡುವುದು ತೀರಾ ಅಗತ್ಯವಾಗಿದೆ. ಭಾರತದ ಗುರಿ ಈ ಶತಮಾನವನ್ನು ಭಾರತದ ಶತಮಾನ ಮಾಡುವುದಾಗಿದ್ದು, ಇದಕ್ಕಾಗಿ ನಮ್ಮ ಯುವಕರಿಗೆ ಕೌಶಲ ಮತ್ತು ಸಾಮರ್ಥ್ಯವನ್ನು ನೀಡುತ್ತಿದೆ.
ಸ್ನೇಹಿತರೇ, ರಾಷ್ಟ್ರೀಯ ಯುವ ಮಹೋತ್ಸವ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆ. ನೀವೆಲ್ಲರೂ ವಿವಿಧ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದವರಾಗಿದ್ದೀರಿ, ನಿಮಗೆ ಪರಸ್ಪರ ಸಂವಾದ ನಡೆಸಲು ಮತ್ತು ದೇಶದ ವೈವಿಧ್ಯಮಯ ಸಂಸ್ಕೃತಿಯನ್ನು ಅರಿಯಲು ಒಂದು ಅವಕಾಶ ಲಭಿಸಿದೆ. ಏಕ ಭಾರತ – ಶ್ರೇಷ್ಠ ಭಾರತದ ನಿಜವಾದ ಅರ್ಥವೇ ಇದಾಗಿದೆ. ಈಗಷ್ಟೇ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಾಂಸ್ಕೃತಿಕ ತಂಡಗಳ ಪಥ ಸಂಚಲನವನ್ನು ನಾವು ನೋಡಿದೆವು.
ಏಕ ಭಾರತ – ಶ್ರೇಷ್ಠ ಭಾರತ ದೇಶದ ಸಾಂಸ್ಕೃತಿಕ ವೈವಿಧ್ಯವನ್ನು ಒಂದೇ ಮಾಲೆಯಲ್ಲಿ ಪೋಣಿಸುವ ಪ್ರಯತ್ನವಾಗಿದೆ. ನಮ್ಮ ದೇಶದಲ್ಲಿ ಭಾಷೆ, ಆಹಾರ ಬೇರೆ ಬೇರೆ ಆದರೂ, ಆಹಾರ ಬೇರೆಯಾದರೂ, ಸಂಸ್ಕೃತಿ ಬೇರೆಯದರೂ, ಬದುಕುವ ರೀತಿ ಬೇರೆ ಯಾದರೂ, ನಮ್ಮ ಆತ್ಮ ಒಂದೇ. ಆ ಆತ್ಮದ ಹೆಸರೇ ಭಾರತೀಯತೆ. ಅದಕ್ಕಾಗಿ ನಾವು ಹೆಮ್ಮೆ ಪಡಬೇಕು.

ಒಂದು ರಾಜ್ಯದ ಯುವಕರೊಂದಿಗೆ ಮತ್ತೊಂದು ರಾಜ್ಯದ ಯುವಕರು ಸಂವಾದ ನಡೆಸುವುದು ಒಂದು ಹೊಸ ಅನುಭವ ನೀಡುತ್ತದೆ. ಇದು ಪರಸ್ಪರರನ್ನು ಅರ್ಥೈಸಿಕೊಳ್ಳಲು ಅವಕಾಶ ನೀಡುತ್ತದೆ. ಒಟ್ಟಿಗೆ ಬಾಳುವ ಈ ಅವಕಾಶ, ಅವರಲ್ಲಿರುವ ಹಲವು ತಪ್ಪು ಕಲ್ಪನೆಗಳನ್ನು ದೂರ ಮಾಡುತ್ತದೆ ಮತ್ತು ಭಾಷೆ ಮತ್ತು ಆಹಾರದ ವೈವಿಧ್ಯತೆಗಳು ಬಾಹ್ಯ ವಿಚಾರ ಎಂಬುದು ತಿಳಿಯುತ್ತದೆ. ಅಂತರಾಳದ ವಿಷಯ ಮತ್ತಷ್ಟು ಪಾರದರ್ಶಕವಾಗುತ್ತದೆ ಮತ್ತು ನಮ್ಮ ಮೌಲ್ಯಗಳನ್ನು ಸ್ಪಷ್ಟಪಡಿಸುತ್ತದೆ, ನಮ್ಮ ಮಾನವೀಯ ಸ್ವಭಾವ ಮತ್ತು ಚಿಂತನೆ ಒಂದೇ ಎಂಬುದನ್ನು ತಿಳಿಸುತ್ತದೆ.
ಏಕ ಭಾರತ – ಶ್ರೇಷ್ಠ ಭಾರತ ಅಡಿಯಲ್ಲಿ ಎರಡು ವಿವಿಧ ರಾಜ್ಯಗಳನ್ನು ಒಂದು ವರ್ಷದ ಪಾಲುದಾರಿಕೆಗೆ ತರಲಾಗುತ್ತಿದೆ. ಈ ವರ್ಷ ಹರಿಯಾಣ ರಾಜ್ಯ ತೆಲಂಗಾಮದೊಂದಿಗೆ ಪಾಲುದಾರಿಕೆ ಹೊಂದಿದೆ. ಪರಸ್ಪರ ಸಹಕಾರಕ್ಕೆ ವಿವಿಧ ವಿಚಾರಗಳಲ್ಲಿ ಕ್ರಿಯಾ ಯೋಜನೆಗಳನ್ನು ರಚಿಸಲಾಗಿದೆ. ತೆಲಂಗಾಣದಿಂದ ಬಂದಿರುವ ಯುವಕರಿಗೆ ಹರಿಯಾಣದಲ್ಲಿ ವಿಶೇಷವಾದ್ದನ್ನು ಕಲಿಯಲು ಅವಕಾಶ ಆಗುತ್ತದೆ.
ಏಕ್ ಭಾರತ- ಶ್ರೇಷ್ಠ ಭಾರತ ಕೇವಲ ಒಂದು ಯೋಜನೆ ಅಲ್ಲ. ಇದನ್ನು ಒಂದು ಸಾಮೂಹಿಕ ಆಂದೋಲನದ ರೀತಿ ಮುಂದುವರಿಸಲಾಗಿದೆ ಮತ್ತು ಇದಕ್ಕೆ ಯುವಕರು ಹೃತ್ಫೂರ್ವಕವಾಗಿ ಬೆಂಬಲ ನೀಡಿದಾಗ ಮಾತ್ರವೇ ಇದು ಯಶಸ್ಸು ಕಾಣುತ್ತದೆ.
ಯುವ ಸ್ನೇಹಿತರೇ, ಈ ವರ್ಷ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ಶತಮಾನೋತ್ಸವ ಆಚರಿಸಲಾಗುತ್ತಿದೆ. ದೇಶದ ಯುವಕರಿಗೆ ಪಂಡಿತ್ ಅವರು ಕೊಟ್ಟ ಮಂತ್ರ ಚರೈವೇತಿ, ಚರೈವೇತಿ,  ಅಂದರೆ, ಮುನ್ನಡೆಯಿರಿ, ಮುನ್ನಡೆಯಿರಿ  ನಿಲ್ಲಬೇಡಿ, ರಾಷ್ಟ್ರ ನಿರ್ಮಾಣಕ್ಕಾಗಿ ಸದಾ ಮುನ್ನಡೆಯುತ್ತಿರಿ ಎಂದು.
ತಂತ್ರಜ್ಞಾನದ ಈ ಯುಗದಲ್ಲಿ, ಯುವಕರು ಮೂರು ಸಿ ಗಳ ಮೇಲೆ ಗಮನ ಕೊಡಬೇಕು. ನನ್ನ ಪ್ರಕಾರ ಸಿ ಎಂದರೆ COLLECTIVITY, CONNECTIVITY and CREATIVITY… (ಸಾಮೂಹಿಕತೆ, ಸಂಪರ್ಕ ಮತ್ತು ಸೃಜನಶೀಲತೆ ) ಸಾಮೂಹಿಕತೆ – ನಾವು ಒಂದಾಗದ ಹೊರತು, ಅಸಮಾನತೆಯನ್ನು ಹೋಗಲಾಡಿಸದಹೊರತು , ಸಂಘಟಿತ ಶಕ್ತಿ ಸಹಿಹೊಂದುವುದಿಲ್ಲ. ಎರಡನೆಯದು ಸಂಪರ್ಕ – ಇದು ಹೊಸ ಯುಗದ ತಂತ್ರಜ್ಞಾನ, ಇದು ಇಡೀ ವಿಶ್ವವನ್ನೇ ಚಿಕ್ಕದಾಗಿ ಮಾಡಿದೆ. ಇಡೀ ವಿಶ್ವವೇ ನಮ್ಮ ಕೈಯಲ್ಲಿದೆ. ಸಂಪರ್ಕ ಈ ಹೊತ್ತಿನ ಅಗತ್ಯವಾಗಿದೆ. ಸಂಪರ್ಕದ ಮೂಲಕ ಮತ್ತು ತಂತ್ರಜ್ಞಾನದ ಮೂಲಕ ನಾವು ಮಾನವೀಯ ಮೌಲ್ಯಗಳನ್ನೂ ಹೆಚ್ಚಿಸಬಹುದಾಗಿದೆ. ನಾನು ಹೇಳಿದ ಮೂರನೆಯ ಸಿ ಸೃಜನಶೀಲತೆ – ಅದು ಹೊಸ ಆಲೋಚನೆ ಮತ್ತು ನಾವಿನ್ಯತೆಯಿಂದ ಹಳೆಯ ಸಮಸ್ಯೆಗಳನ್ನು ಪರಿಹರಿಸುತ್ತದೆ. ನಾವು ಇದನ್ನೇ ಯುವ ಪೀಳಿಗೆಯಿಂದ ನಿರೀಕ್ಷಿಸುವುದು. ಯಾವಾಗ ಸೃಜನಶೀಲತೆ ಮುಕ್ತಾಯವಾಗುತ್ತದೋ ಆಗ ನಾವಿನ್ಯತೆ ಮತ್ತು ಅಭಿವೃದ್ಧಿ ಸಹ ಸ್ಥಗಿತವಾಗತ್ತದೆ. ಹೀಗಾಗಿ ಸೃಜನಶೀಲತೆಗೆ ಹೆಚ್ಚಿನ ಅವಕಾಶ ನೀಡಬೇಕಾಗಿದೆ.
ಹೀಗಾಗಿ ಪರಸ್ಪರ ಸಂವಾದ ನಡೆಸಿ, ಸಂಪರ್ಕದಲ್ಲಿರಿ. ಹೊಸ ಕಲ್ಪನೆಗಳ ಮೇಲೆ ಕೆಲಸ ಮಾಡಿ ಮತ್ತು ಸಾಮೂಹಿಕವಾಗಿ ಜವಾಬ್ದಾರರಾಗಿರಿ. ನಿಮ್ಮ ಚಿಂತನೆಗಳನ್ನು ಅದು ಸಣ್ಣದು ಎಂದು ಹೇಳಿ ಬಿಡಬೇಡಿ. ನೆನಪಿನಲ್ಲಿಡಿ, ಹೊಸ ಮತ್ತು ದೊಡ್ಡ ಚಿಂತನೆಗಳು ಯಾವಾಗಲೂ ಪ್ರಾಥಮಿಕ ಹಂತದಲ್ಲಿ ತಿರಸ್ಕಾರಕ್ಕೆ ಗುರಿಯಾಗುತ್ತವೆ. ಹಾಲಿ ಇರುವ ವ್ಯವಸ್ಥೆ ಹೊಸ ಕಲ್ಪನೆಗಳಿಗೆ ಸದಾ ವಿರೋಧ ವ್ಯಕ್ತಪಡಿಸುತ್ತದೆ. ಆದರೆ, ಅಂಥ ಎಲ್ಲ ವಿರೋಧಗಳೂ ನಮ್ಮ ದೇಶದ ಯುವಕರ ಮುಂದೆ ಗೌಣವಾಗುತ್ತವೆ.
ಸ್ನೇಹಿತರೆ, ಐವತ್ತು ವರ್ಷಗಳಿಗೂ ಹಿಂದೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ಏಕಾತ್ಮ ಮಾನವತಾ ವಾದದ ಬಗ್ಗೆ ಹೇಳಿದ್ದರು. ಅದರಲ್ಲಿ ದೇಶದ ಯುವಕರಿಗೆ ದೊಡ್ಡ ಸಂದೇಶವಿತ್ತು. ದೀನ್ ದಯಾಳ್ ಉಪಾಧ್ಯಾಯ ಅವರು ಕೆಡಕು, ಭ್ರಷ್ಟಾಚಾರ ನಿಗ್ರಹಿಸಿ ಮತ್ತು ದೇಶವನ್ನು ಕಟ್ಟಿ ಎಂದು ಕರೆ ನೀಡಿದ್ದರು.
“ನಾವು ಹಲವು ಆಚರಣೆಗಳನ್ನು ನಿರ್ಮೂಲನೆ ಮಾಡಬೇಕು ಮತ್ತು ಹಲವು ಸುಧಾರಣೆಗಳನ್ನೂ ಮಾಡಬೇಕು. ನಮ್ಮ ಜನತೆಯ ಹಿತಕ್ಕೆ ಮತ್ತು ರಾಷ್ಟ್ರೀಯ ಏಕತೆಗೆ ಏನು ಅಗತ್ಯವೋ ಅದನ್ನು ನಾವು ಮಾಡಬೇಕು ಮತ್ತು ಅದಕ್ಕೆ ಇರುವ ತಡೆಗಳನ್ನು ತೆಗೆದುಹಾಕಬೇಕು.

ಈಶ್ವರ ನೀಡಿರುವ ಈ ಭೌದ್ಧಿಕ ಶರೀರದಲ್ಲಿ ನ್ಯೂನತೆ ಹುಡುಕಬೇಡಿ ಅಥವಾ ಅದನ್ನು ಇಟ್ಟುಕೊಂಡು ಆತ್ಮಜ್ಞಾನಿಯಂತೆ ಓಡಾಡುವ ಅಗತ್ಯವೂ ಇಲ್ಲ. ಶರೀರದಲ್ಲಿ ಯಾವುದೇ ರೀತಿಯ ವ್ರಣ ಇದ್ದರೆ ಅದಕ್ಕೆ ಸಕಾಲದ ಶಸ್ತ್ರಚಿಕಿತ್ಸೆ ಮಾಡಿಸುವುದು ಅಗತ್ಯವಾಗುತ್ತದೆ. ಜೀವಂತ ಮತ್ತು ಆರೋಗ್ಯಪೂರ್ಣ ಅಂಗಗಳನ್ನು ಕತ್ತರಿಸುವ ಅಗತ್ಯವಿಲ್ಲ. ಸಮಾಜದಲ್ಲಿ ಇರುವ ಅಸ್ಪೃಶ್ಯತೆ ಮತ್ತು ತಾರತಮ್ಯಕ್ಕೆ ನಾವು ಕೊನೆ ಹಾಡಬೇಕಾಗಿದೆ, ತಮ್ಮಂತೆಯೇ ಪರರನ್ನೂ ಕಾಣದಿದ್ದರೆ ಅದು ದೇಶಕ್ಕೆ ಮಾರಕವಾಗುತ್ತದೆ.”.

ಪಂಡಿತ್ ಜೀ ನೀಡಿರುವ ಈ ಕರೆ ಇಂದಿಗೂ ಪ್ರಸ್ತುತವಾಗುತ್ತದೆ. ಇಂದಿಗೂ ಭ್ರಷ್ಟಾಚಾರ, ಅಸ್ಪೃಶ್ಯತೆ, ಕಪ್ಪುಹಣ, ಅನಕ್ಷರತೆ ಮತ್ತು ಅಪೌಷ್ಟಿಕತೆ ದೇಶದಲ್ಲಿದೆ. ಯುವಕರು, ಇಂಥ ಪಿಡುಗುಗಳನ್ನು ನಿರ್ಮೂಲನೆ ಮಾಡಲು ತಮ್ಮೆಲ್ಲಾ ಶಕ್ತಿಯನ್ನು ಧಾರೆ ಎರೆಯಬೇಕು. ಇತ್ತೀಚೆಗೆ ಕೇಂದ್ರ ಸರ್ಕಾರ ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಸಮರವನ್ನೇ ಸಾರಿದೆ. ಈ ಕ್ರಮಕ್ಕೆ ಯುವ ಸ್ನೇಹಿತರು ನೀಡಿರುವ ಅಭೂತಪೂರ್ವ ಬೆಂಬಲ, ನಮ್ಮ ಸಮಾಜದಿಂದ ಅಂಥ ಅನಿಷ್ಟಗಳನ್ನು ತೊಲಗಿಸುವ ನಿಮ್ಮ ಅದಮ್ಯ ಬಯಕೆಗೆ ಸಾಕ್ಷಿಯಾಗಿದೆ.
ನಾನು ನನ್ನ ದೇಶ ಬದಲಾಗುತ್ತಿದೆ ಎಂದು ಹೇಳುವಾಗ, ಅದರಲ್ಲಿ ನಿಮ್ಮೆಲ್ಲರ ಈ ಪ್ರಯತ್ನವೂ ಸೇರಿರುತ್ತದೆ. ಸಾವಿರಾರು ಮತ್ತು ಲಕ್ಷಾಂತರ ಯುವಕರು, ಸಾಮಾಜಿಕ ತಾರತಮ್ಯ ಮತ್ತು ಸವಾಲುಗಳ ವಿರುದ್ಧ ತಮ್ಮದೇ ಶೈಲಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಇದಷ್ಟೇ ಅಲ್ಲ, ಅವರು ಹೊಸ ಕಲ್ಪನೆಗಳನ್ನು ಮೂಡಿಸುತ್ತಿದ್ದಾರೆ. ನಾನು ಅವರಿಗೆ ನಾನು ವಂದಿಸದೇ ಇರಲು ಸಾಧ್ಯವೇ ಇಲ್ಲ. ಕೆಲವೇ ದಿನಗಳ ಹಿಂದೆ, ನಾನು ‘ಮನ್ ಕಿ ಬಾತ್’ (ಮನದಾಳದ ಮಾತು)ನಲ್ಲಿ ಒಬ್ಬಳು ಪುಟ್ಟ ಮಗಳ ಬಗ್ಗೆ ಪ್ರಸ್ತಾಪ ಮಾಡಿದ್ದೆ, ಆಕೆ, ಮದುವೆಯ ಸಮಾರಂಭಕ್ಕೆ ಬರುವ ಅತಿಥಿಗಳಿಗೆ ಮಾವಿನ ಸಸಿಗಳನ್ನು ಉಡುಗೊರೆಯಾಗಿ ನೀಡುವ ಕಲ್ಪನೆ ನೀಡಿದ್ದಳು. ಪರಿಸರವನ್ನು ಉಳಿಸಲು ಎಂಥ ಅದ್ಭುತ ಪರಿಕಲ್ಪನೆ ಇದಲ್ಲವೇ?

ಅದೇ ರೀತಿ, ಒಂದು ಪ್ರದೇಶದಲ್ಲಿ ಜನರು ಕಸದ ತೊಟ್ಟಿಗಳ ಕೊರತೆಗಾಗಿ ಕಚ್ಚಾಡುತ್ತಿದ್ದರು. ಅಲ್ಲಿನ ಯುವಕರು ಕಸದತೊಟ್ಟಿಗಳನ್ನು ಜಾಹೀರಾತಿನೊಂದಿಗೆ ಜೋಡಿಸಿದರು. ಈಗ ಅಲ್ಲಿ ಎಲ್ಲ ಕಡೆ ಕಸದ ತೊಟ್ಟಿ ಕಾಣುತ್ತದೆ. ಅಲ್ಲಿರುವ ಎಲ್ಲ ಕಸದ ತೊಟ್ಟಿಗಳೂ ಜಾಹೀರಾತನ್ನು ಒಳಗೊಂಡಿವೆ. ಈಗ ಕಸದ ತೊಟ್ಟಿ, ಪ್ರಚಾರದ ತೊಟ್ಟಿ (ಡಸ್ಟ್ ಬಿನ್ ಅಲ್ಲ ಆಡ್ ಬಿನ್) ಯಾಗಿದೆ.  

ಇಂಥ ಯುವಕರೂ ಇದ್ದಾರೆ. ಅವರು ಕೇವಲ 10 ದಿನದಲ್ಲಿ ರಿಲೆ ಮಾದರಿಯಲ್ಲಿ 6 ಸಾವಿರ ಕಿಲೋ ಮೀಟರ್ ಉದ್ದದ ಗೋಲ್ಡನ್ ಕ್ವಾಡ್ರಿಲ್ಯಾಟರಲ್ ಸವಾಲು ಪೂರೈಸಿದ್ದಾರೆ. ಅವರಲ್ಲಿ ಒಂದು ಆಕರ್ಷಕ ಉದ್ದೇಶ ಇತ್ತು. ‘ನಿಯಮಗಳನ್ನು ಪಾಲಿಸಿ ಮತ್ತು ಭಾರತವೇ ಆಳುತ್ತದೆ’.
ಇಂಥ ಶಕ್ತಿಶಾಲಿ ಯುವಕರು ದೇಶದ ಮೂಲೆ ಮೂಲೆಗಳಲ್ಲಿ ಇದ್ದಾರೆ. ಕೆಲವರು ಬೆಟ್ಟದ ಮೇಲಿಂದ ಹರಿಯುವ ಸಣ್ಣ ಝರಿಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಾರೆ. ಕೆಲವರು ಮನೆ ನಿರ್ಮಾಣದ ಸರಕುಗಳನ್ನು ತ್ಯಾಜ್ಯದಿಂದ ತಯಾರಿಸುತ್ತಾರೆ, ಕೆಲವರು ತಂತ್ರಜ್ಞಾನ ಬಳಸಿಕೊಂಡು ದೂರದ ಸ್ಥಳಗಳಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸುತ್ತಿದ್ದಾರೆ, ಇನ್ನು ಕೆಲವರು ಬರ ಪೀಡಿತ ಪ್ರದೇಶಗಳಲ್ಲಿ ರೈತರಿಗಾಗಿ ನೀರು ಸಂರಕ್ಷಣೆ ಮಾಡಲು ಕೆಲಸ ಮಾಡುತ್ತಿದ್ದಾರೆ. ಅಂಥ ಲಕ್ಷಾಂತರ ಯವಕರು ದೇಶ ಕಟ್ಟುವ ಕೆಲಸಕ್ಕೆ ಹಗಲಿರುಳು ದುಡಿಯುತ್ತಿದ್ದಾರೆ.
ಅಂಥ ಉತ್ಸಾಹಿ ಯುವಕರಿಗೆ ನಾನು ಮತ್ತೊಮ್ಮೆ ಸ್ವಾಮಿ ವಿವೇಕಾನಂದರ ಸಂದೇಶವನ್ನು ತಿಳಿಸಬಯಸುತ್ತೇನೆ – ಏಳಿ, ಎಚ್ಚರಗೊಳ್ಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ.

ಏಳಿ ಎಂದರೆ, ಶರೀರವನ್ನು ಚೈತನ್ಯಮಯಗೊಳಿಸಿ, ಶರೀರವನ್ನು ದೃಢವಾಗಿಟ್ಟುಕೊಳ್ಳಿ. ಕೆಲವೊಮ್ಮೆ ಜನರು ಎದ್ದಿರುತ್ತಾರೆ ಆದರೆ, ಜಾಗೃತರಾಗಿರುವುದಿಲ್ಲ. ಹೀಗಾಗಿ ಅವರು ಪರಿಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಹೀಗಾಗಿ ಎದ್ದ ಬಳಿಕ ಜಾಗೃತವಾಗಿರುವುದು ಅತಿ ಮುಖ್ಯ. ಗುರಿ ಮುಟ್ಟುವ ತನಕ ನಿಲ್ಲದಿರಿ.. ಎಂಬುದು ಉತ್ತಮ ಸಂದೇಶ ಸಾರುತ್ತದೆ. ಗುರಿಯನ್ನು ತಲುಪುವುದು ಅತಿ ಮುಖ್ಯ.

ಇದಷ್ಟೇ ಅಲ್ಲ, ಗಮ್ಯವನ್ನು ಮೊದಲೇ ಆಯ್ಕೆ ಮಾಡಿಕೊಳ್ಳಬೇಕು, ಇಲ್ಲದಿದ್ದರೆ, ಯಾರೇ ಆಗಲಿ ಹೋಗುವುದಾದರೂ ಎಲ್ಲಿಗೆ? ಹೀಗಾಗಿ, ಗುರಿ ಇದ್ದಾಗ, ಅದನ್ನು ತಲುಪಲು ಸತತ ಪರಿಶ್ರಮ ಪಡಬಹುದು.

ಸ್ನೇಹಿತರೇ, ನೀವೆಲ್ಲ, ದೇಶದ ಭೌದ್ಧಿಕ ಶಕ್ತಿಯಾಗಿ ಇಲ್ಲಿದ್ದೀರಿ. ಇಂದು ಯುವಕರ ಸೃಜನಶೀಲ ಆನ್ವಯಿಕತೆಯ ಅಗತ್ಯ ಇದೆ. ಇಂದು, ಯುವಕರ ಮನಸ್ಸನ್ನು ತಪ್ಪುದಾರಿಗೆ ಸಾಗದಂತೆ ರಕ್ಷಿಸುವ ಅಗತ್ಯವಿದೆ. ಯುವಕರನ್ನು ಅಪರಾಧ ಮತ್ತು ಚಟಗಳಿಂದ ದೂರ ಇಡುವ ಅಗತ್ಯವಿದೆ. ಸೂಕ್ತ ಚಿಂತನೆ ಮತ್ತು ನಿರ್ಧಾರದ ಬಳಿಕ ಹೊಸ ಹಾದಿಯಲ್ಲಿ ನಿಮ್ಮ ಗುರಿಯನ್ನು ಸಾಧಿಸಿ, ನಿಮ್ಮ ಮುಂದೆ ಅಗಣಿತವಾದ ಅವಕಾಶಗಳ ದಿಗಂತವೇ ಇದೆ.
ಇಂದು, ಯುವಕರು ಸೇವೆಯ ಆದರ್ಶಪ್ರಾಯ ಸಂಕೇತವಾಗಬೇಕು. ಅವರ ನಡತೆ ಮತ್ತು ಪಾತ್ರದಲ್ಲಿ ಪ್ರಾಮಾಣಿಕತೆ ಮತ್ತು ನ್ಯಾಯ ಸ್ಪುರಿಸಬೇಕು. ಅವರು ಯಾವುದೇ ಸವಾಲುಗಳನ್ನು ಎದುರಿಸಲು ಸಿದ್ಧರಿರಬೇಕು. ಅವರು ತಮ್ಮ ವೈಭವದ ಪರಂಪರೆಯ ಬಗ್ಗೆ ಹೆಮ್ಮೆ ಹೊಂದಿರಬೇಕು. ಅವರ ನಡತೆ ಮತ್ತು ಸ್ವಭಾವಗಳು ನೈತಿಕ ಮೌಲ್ಯಗಳ ಆಧಾರದಲ್ಲಿರಬೇಕು. ಏಕೆಂದರೆ ಗುರಿ ಸಾಧಿಸುವುದಕ್ಕಿಂತ ಗುರಿಯಿಂದ ವಿಮುಖರಾಗುವುದು ಸುಲಭ. ಹೀಗಾಗಿಯೇ ನಾನು ಇದಕ್ಕೆ ಒತ್ತು ನೀಡುತ್ತದ್ದೇನೆ.
ಸುಖ – ಸಂತೋಷದಿಂದ ಜೀವಿನಬೇಕು ಎಂಬುದು ಸರಿ, ಆದರೆ, ಅದರೊಂದಿಗೆ ಸಮಾಜದ ಬಗೆಗಿನ ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನೂ ನಾವು ನಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ನಾನು ಎದುರಿಸಬೇಕಾದ ಆರು ಸವಾಲುಗಳ ಬಗ್ಗೆ ಹೇಳುತ್ತೇನೆ. ಅದನ್ನು ಎದುರಿಸುವುದು ಅಗತ್ಯ.

1. ಸಮಾಜದ ಬಗೆಗೆ ಅಜ್ಞಾನ
2. ಸಮಾಜದ ಬಗೆಗೆ ಅಸಂವೇದನೆ
3. ಸಮಾಜದ ಬಗೆಗೆ ಅಪ್ರಸ್ತುತ ಆಲೋಚನೆ
4. ಜಾತಿ ಸಮುದಾಯ ಮೀರಿ ಬೆಳೆಯುವ ಅಕ್ಷಮತೆ
5. ತಾಯಿ, ಸೋದರಿ –ಮಗಳ ವಿಚಾರದಲ್ಲಿ ಅನುಚಿತ ವರ್ತನೆ
6. ಪರಿಸರದ ಬಗೆಗಿನ ಅನಾದರ, ಜವಾಬ್ದಾರಿರಹಿತ ಧೋರಣೆ.

ಇಂದಿನ ಯುವಕರು ಈ ಆರು ಸವಾಲುಗಳನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು ಮತ್ತು ಅದರಿಂದ ಹೊರಬರಲು ಶ್ರಮಿಸಬೇಕು. ನೀವು ಎಲ್ಲೇ ಜೀವಿಸುತ್ತಿರಿ ಮತ್ತುಯಾವುದೇ ಕೆಲಸ ನಿರ್ವಹಿಸುತ್ತಿರಿ, ಈ ಸವಾಲುಗಳ ಬಗ್ಗೆ ಅವಶ್ಯಕವಾಗಿ ಚಿಂತಿಸಬೇಕು ಮತ್ತು ಅದನ್ನು ದೂರ ಮಾಡಲು ಪ್ರಯತ್ನಿಸಬೇಕು.  

ನೀವೆಲ್ಲರೂ ತಂತ್ರಜ್ಞಾನ ತಿಳಿದ ಟೆಕ್ ಸೆವಿಗಳಾಗಿದ್ದೀರಿ. ನೀವು ಈ ಸಂದೇಶವನ್ನು ಸಮುದಾಯಕ್ಕೆ ತಲುಪಿಸಬೇಕು ಮತ್ತು ಸಮಾಜದಲ್ಲಿ ಧನಾತ್ಮಕವಾದ ಬದಲಾವಣೆ ಹೇಗೆ ಬರುತ್ತದೆ. ಯುವಕರೇ ನೀವೆಲ್ಲ ವಂಚಿತರ, ಶೋಷಿತರ, ದುರ್ಬಲರ ಮತ್ತು ದುಸ್ಥಿತಿಯಲ್ಲಿರುವವರ ಜೀವನವನ್ನು ಮುಟ್ಟುವ ಕೆಲಸ ಮಾಡಿ. ಇತರರ ಉತ್ತಮ ಭವಿಷ್ಯಕ್ಕಾಗಿ ನಿಮ್ಮ ಸಮಯ ಮತ್ತು ಶಕ್ತಿಯನ್ನು ನೀಡಿ. ಯುವಶಕ್ತಿ, ಯುವಕರ ಸ್ಥೈರ್ಯ ಮತ್ತು ನಿಲುವು ಬದಲಾವಣೆ ತರುವಲ್ಲಿ ಅತಿ ಪರಿಣಾಮಕಾರಿಯಾಗಿದೆ. ಇಂದು ಕೋಟ್ಯಂತರ ಯುವಕರ ದನಿ, ದೇಶದ ದನಿಯಾಗಿ ರಾಷ್ಟ್ರವನ್ನು ಇನ್ನೂ ಪ್ರಗತಿದಾಯಕವಾಗಿ ಕೊಂಡೊಯ್ಯಬೇಕಾಗಿದೆ.
ನನ್ನ ಸ್ನೇಹಿತರೆ, ನೀವೆಲ್ಲರೂ ಹೊಸ ಎತ್ತರವನ್ನು ಮುಟ್ಟಬೇಕು. ಅಭಿವೃದ್ಧಿಯ ಹೊಸ ನೋಟವನ್ನು ರೂಪಿಸಬೇಕು ಮತ್ತು ಹೊಸ ಯಶಸ್ಸು ಸಾಧಿಸಬೇಕು. ಈ ಶುಭಾಶಯಗಳೊಂದಿಗೆ ನಾನು, ರಾಷ್ಟ್ರೀಯ ಯುವ ಮಹೋತ್ಸವದ ಸಂದರ್ಭದಲ್ಲಿ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ಸ್ವಾಮಿ ವಿವೇಕಾನಂದರನ್ನು ಸ್ಮರಿಸುತ್ತಾ, ನಮ್ಮ ಅಮೂಲ್ಯ ಶಕ್ತಿಯನ್ನು ಸಮಾಜದ ಮತ್ತು ದೇಶದ ಕಲ್ಯಾಣಕ್ಕಾಗಿ ಅದರಲ್ಲೂ ಬಡ ಗ್ರಾಮೀಣರ ಮತ್ತು ರೈತರ ಕಲ್ಯಾಣಕ್ಕೆ ನಿಮ್ಮ ಬದುಕಿನ ಕೊಂಚ ಸಮಯವನ್ನು ನೀಡುವ ಸಂಕಲ್ಪ ಮಾಡಿ. ಇದು ನಿಮ್ಮ ಬದುಕಿಗೆ ಸಾರ್ಥಕತೆಯನ್ನು ಸಂತೃಪ್ತಿಯನ್ನು ನೀಡುತ್ತದೆ. ಈ ಸತ್ಕಾರ್ಯದಿಂದ ಪಡೆದ ಶಕ್ತಿಯೊಂದೇ ನಿಮ್ಮ ಶಕ್ತಿಯ ಸೆಲೆಯಾಗುತ್ತದೆ. ನನ್ನ ಶುಭಕಾಮನೆಗಳು ನಿಮ್ಮೊಂದಿಗಿದೆ. ದೇಶದ ಮೂಲೆ ಮೂಲೆಗಳಿಂದ ಆಗಮಿಸಿರುವ ಯುವಕರು, ಒಂದು ರೀತಿಯಲ್ಲಿ ಒಂದು ಪುಟ್ಟ ಭಾರತ ನನ್ನ ಮುಂದಿದೆ. ಇದು ಗೀತೆಯ ನಾಡು. ಕರ್ಮ, ನಿಷ್ಕಾಮ ಕರ್ಮ (ಸ್ವಾರ್ಥ ರಹಿತ ಕಾರ್ಯ) ತಿಳಿಸುವ ಈ ನಾಡಿನಲ್ಲಿ  ಈ ಲಘು ಭಾರತ ಹೊಸ ಸ್ಫೂರ್ತಿ ಮತ್ತು ಹೊಸ ಉತ್ಸಾಹದಿಂದ ತುಂಬಿದೆ. ನೀವು ಇದನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ, ನಿಮ್ಮೆಲ್ಲರಿಗೂ ಈ ಯುವ ಮಹೋತ್ಸವದ ಶುಭಾಶಯಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.