We must plan for the future. We must plan adequately for growth of our cities: PM
Government of India is actively working on the Rurban Mission. This caters to those places that are growing & urbanising quickly: PM
Character & spirit of the village has to be preserved & at the same time we need to invigorate our villages with good facilities: PM
In this nation everybody is equal before the law and everyone has to follow the law: PM

ವೇದಿಕೆಯ ಮೇಲೆ ಉಪಸ್ಥಿತರಿರುವ ಎಲ್ಲಾ ಮಹನೀಯರೆ ಮತ್ತು ವಿಶಾಲ ಸಂಖ್ಯೆಯಲ್ಲಿ ಆಗಮಿಸಿರುವ ಪುಣೆಯ ಸಮಸ್ತ ಸಹೋದರ ಮತ್ತು ಸಹೋದರಿಯರೆ,

ನಮ್ಮ ದೇಶದಲ್ಲಿ ಬಹಳ ವೇಗವಾಗಿ ನಗರೀಕರಣ ಆಗುತ್ತಿದೆ. ನೀವು ಎಷ್ಟೇ ವ್ಯವಸ್ಥೆಗಳನ್ನು ಮಾಡಿದರೂ ಯಾವ ಗತಿಯಲ್ಲಿ ನಗರೀಕರಣವಾಗುತ್ತಿದೆಯೆಂದರೆ ನಾವು ಎರಡು ದಿಸೆಗಳಲ್ಲಿ ಕೆಲಸ ಮಾಡುವುದು ಬಹಳ ಅನಿವಾರ್ಯವಾಗಿ ಬಿಟ್ಟಿದೆ. ಹಳ್ಳಿಯಲ್ಲಿ ಯಾವ ಪ್ರಕಾರದ ಕೆಲಸವನ್ನು ಬೆಳೆಸಬೇಕೆಂದರೆ ಅದರಿಂದ ಉದ್ಯೋಗದ ಅವಕಾಶ ಹುಟ್ಟಬೇಕು. ಗುಣಮಟ್ಟದ ಜೀವನದಲ್ಲಿ ಗುಣಾತ್ಮಕವಾದ ಬದಲಾವಣೆ ತರಬೇಕು. ನಗರಗಳಲ್ಲಿ ಇರುವ ಸೌಲಭ್ಯಗಳು ಹಳ್ಳಿಗಳಲ್ಲೂ ಇರಬೇಕು. ಯಾವ ಅವಕಾಶಗಳು ನಗರದಲ್ಲಿ ಸಿಗುತ್ತದೆಯೋ ಆ ಅವಕಾಶಗಳು ಹಳ್ಳಿಯಲ್ಲೂ ಸಿಗಬೇಕು. ಯಾವ ಸಾಧ್ಯತೆಗಳು ನಗರದಲ್ಲಿದೆಯೋ ಆ ಸಾಧ್ಯತೆಗಳು ಹಳ್ಳಿಯಲ್ಲೂ ಇರಬೇಕು. ಆಗ ಹಳ್ಳಿಯಿಂದ ನಗರಕ್ಕೆ ಆಗುತ್ತಿರುವ ಓಟವನ್ನು ನಾವು ಸ್ವಲ್ಪ ಕಡಿಮೆ ಮಾಡಬಹುದು. ಇನ್ನೊಂದು ಕಡೆ ನಾವು ಈಗ ತಾನೆ ಜಯಶಾಲಿಗಳಾಗಿ ಬಂದಿದ್ದೇವೆ, ಐದು ವರ್ಷದಲ್ಲಿ ಮತ್ತೆ ಚುನಾವಣೆಯಲ್ಲಿ ಹೇಗೆ ಗೆಲ್ಲುವುದು ಎಂಬ ರೀತಿಯಲ್ಲಿ ಸಣ್ಣಮಟ್ಟದಲ್ಲಿ ಯೋಚಿಸುತ್ತಿದ್ದರೆ ನಗರಗಳಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಎಂದಿಗೂ ಪಾರು ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ತಾತ್ಕಾಲಿಕವಾಗಿ ರಾಜಕೀಯ ಲಾಭವಾಗಲಿ ಬಿಡಲಿ, ಇಪ್ಪತ್ತೈದು ವರ್ಷ ಮೂವತ್ತು ವರ್ಷಗಳ ನಂತರ ನಮ್ಮ ನಗರ ಹೇಗಿರುತ್ತದೆ, ನೀರಿನ ಅಗತ್ಯ ಎಷ್ಟು ಪ್ರಮಾಣದಲ್ಲಿರುತ್ತದೆ, ಎಷ್ಟು ಶಾಲೆಗಳು ಆಗಬೇಕು, ಎಷ್ಟು ಆಸ್ಪತ್ರೆಗಳು ಆಗಬೇಕು, ಟ್ರಾಫಿಕ್ ಎಷ್ಟು ಹೆಚ್ಚಾಗುತ್ತದೆ, ಅದರ ವ್ಯವಸ್ಥೆ ಏನಾಗಿರುತ್ತದೆ ಹೀಗೆ ದೀರ್ಘ ಯೋಜನೆಯ ಜೊತೆಗೆ ನಾವು ನಗರದ ವಿಕಾಸದ ಯೋಜನೆ ಹಾಕಬೇಕು. ಆಗ ವೇಗವಾಗಿ ಆಗುತ್ತಿರುವ ನಗರೀಕರಣದಲ್ಲಿ ಎದುರಾಗುವ ಸವಾಲುಗಳನ್ನು ನಾವು ಪಾರು ಮಾಡಬಹುದು. ದೆಹಲಿಯಲ್ಲಿರುವ ಸರ್ಕಾರ ನಮಗೆ ಜವಾಬ್ದಾರಿಗಳನ್ನು ಕೊಟ್ಟಿದೆ. ಆದ್ದರಿಂದ ನಾವು ನಮ್ಮ ಕಾರ್ಯವೈಖರಿಯನ್ನು ತಾತ್ಕಾಲಿಕ ಲಾಭದ ಬದಲು ಒಂದು ಶಾಶ್ವತ ಬದಲಾವಣೆಯತ್ತ ಸಾಗುವಂತೆ ಮಾಡಿದ್ದೇವೆ. ನಾವು ಹಳ್ಳಿಗಳಿಗಾಗಿ ಯೋಜನೆಗಳನ್ನು ಮಾಡಿದ್ದೇವೆ. ರರ್ಬನ್ ಮಿಶನ್, ರರ್ಬನ್ ಮಿಶನ್ ಹೇಗಿದೆಯೆಂದರೆ ನಿಧಾನವಾಗಿ ನಗರಗಳಾಗಿ ಪರಿವರ್ತಿತವಾಗುತ್ತಿರುವ ಹಳ್ಳಿಗಳು ನೋಡ ನೋಡುತ್ತಲೆ ಅವುಗಳ ಜನಸಂಖ್ಯೆಯು ಹೆಚ್ಚುತ್ತಿದೆ. ಮಹಾನಗರಗಳ ಇಪ್ಪತ್ತು ಇಪ್ಪತ್ತೈದು ಕಿಲೋ ಮೀಟರ್ಗಅಳ ಸುತ್ತಳತೆಯಲ್ಲಿ ಇರುತ್ತವೆ. ಇಂತಹ ಹಳ್ಳಿಗಳನ್ನು ಆರಿಸಿ, ಹೊರತರಲು ದೇಶದ ಎಲ್ಲಾ ರಾಜ್ಯಗಳಿಗೂ ಹೇಳಲಾಗಿದೆ. ಆ ಹಳ್ಳಿಗಳನ್ನು ರರ್ಬನ್ ಯೋಜನೆಯ ಅಡಿಯಲ್ಲಿ ವಿಕಾಸಗೊಳಿಸಲು ಒಂದು ಸವಿಸ್ತಾರವಾದ ಕೆಲಸ ನಡೆಯುತ್ತಿದೆ. ರರ್ಬನ್ ಮಿಶನ್ನ ಸರಳ ನೇರ ಅರ್ಥವೆಂದರೆ ಆತ್ಮ ಹಳ್ಳಿಯದಾಗಿರಬೇಕು, ಸೌಲಭ್ಯಗಳು ನಗರದ್ದಾಗಿರಬೇಕು. ಹಳ್ಳಿಯ ಆತ್ಮ ಸಾಯಬಾರದು. ಅದು ಸುರಕ್ಷಿತವಾಗಿರಬೇಕು, ಬೆಳೆಯಬೇಕು. ಆದರೆ ಹಳ್ಳಿಯವರು 18ನೇ ಶತಮಾನದಲ್ಲಿ ಬದುಕುವ ಅನಿವಾರ್ಯತೆ ಇರಬಾರದು. ಆದ್ದರಿಂದ ರರ್ಬನ್ ಮಿಶನ್ನ1 ಅಡಿಯಲ್ಲಿ ದೇಶ ಪೂರ್ತಿ ಇರುವ ನೂರಾರು ಹಳ್ಳಿಗಳ ಮೇಲೆ ಗಮನವನ್ನು ಕೇಂದ್ರೀಕರಿಸಲಾಗಿದೆ. ಸೌಲಭ್ಯಗಳನ್ನು ಹೆಚ್ಚು ಮಾಡುವ ಪ್ರಯತ್ನ ಮಾಡಲಾಗಿದೆ. ಇದರಿಂದ ಪಟ್ಟಣಗಳ ಮೇಲಿನ ಹೊರೆ ಕಡಿಮೆಯಾಗಬಹುದು. ಇನ್ನೊಂದು ಕಡೆ ಪಟ್ಟಣಗಳಲ್ಲಿ ದೊಡ್ಡ ಬದಲಾವಣೆ ತರುವ ಕೆಲಸ ಆಗುತ್ತಿದೆ. ಬದಲಾವಣೆಯ ಮೊದಲನೆ ಅವಶ್ಯಕತೆಗಳೆಂದರೆ ಮೂಲಭೂತ ಸೌಲಭ್ಯಗಳು. ನಮ್ಮ ದೇಶದಲ್ಲಿ ಹೆಚ್ಚಾಗಿ ಮೂಲಭೂತ ಸೌಲಭ್ಯಗಳ ಬಗ್ಗೆ ಉದಾಸೀನತೆ ಇರುತ್ತದೆ. ಇಷ್ಟರಿಂದಲೇ ಕೆಲಸ ನಡೆಯುತ್ತೆ ಅಂದರೆ ಇಷ್ಟೇ ರಸ್ತೆಯನ್ನು ಮಾಡಿ. ನಂತರ ರಸ್ತೆಯನ್ನು ಅಗಲ ಮಾಡಬೇಕಾಗಿ ಬಂದಾಗ ಜನರು ಅತಿಕ್ರಮಣ ಮಾಡುತ್ತಾರೆ. ನಂತರ ಕೋರ್ಟ್-ಕಛೇರಿ ಅಂತ ವಿಷಯ ನಡೆಯುತ್ತದೆ. ಇಪ್ಪತ್ತೈದು ಮೂವತ್ತು ವರ್ಷಗಳ ತನಕ ಯಾವುದೇ ಒಪ್ಪಂದ ಆಗುವುದಿಲ್ಲ. ನಾವು ಹೀಗೆ ನಡೆಸಿಕೊಂಡು ಬರುತ್ತಿದ್ದೇವೆ. ನೀರಿಗೆಂದು ನಲ್ಲಿಗಳನ್ನು ಹಾಕುತ್ತೇವೆ, ಈ ನಲ್ಲಿಗಳ ಪೈಪ್ ಲೈನ್ಗತಳನ್ನು ಹಾಕುವ ಕೆಲಸ ಪೂರ್ತಿಯಾಗುವ ಹೊತ್ತಿಗೆ ಅಲ್ಲಿ ಜನಸಂಖ್ಯೆ ಎಷ್ಟೊಂದು ಬೆಳೆದಿರುತ್ತೆ ಎಂದರೆ ಪೈಪ್ ಲೈನ್ಗಿಳ ಗಾತ್ರ ಚಿಕ್ಕದಾಗಿರುತ್ತದೆ. ನಂತರ ದೊಡ್ಡ ಪೈಪ್ ಲೈನ್ನ್ನು ಹಾಕುವುದು ಹೇಗೆ ಎಂಬ ಪ್ರಶ್ನೆ ಏಳುತ್ತದೆ. ಅಂದರೆ ನಾವು ವಿಕಾಸದ ಯಾವ ಮಾದರಿಯನ್ನು ತೆಗೆದುಕೊಂಡು ನಡೆದಿದ್ದೇವೆಯೋ ಅದರ ಕಾರಣದಿಂದ ತಾತ್ಕಾಲಿಕ ಲಾಭವನ್ನಂತೂ ಅನುಭವಿಸುತ್ತೇವೆ. ಆದರೆ ಇಂತಹ ವ್ಯವಸ್ಥೆಗಳು ಮುಂದೆ ಬರುವ ದಿನಗಳಲ್ಲಿ ಹೊರೆ ಎಷ್ಟಾಗಬಹುದೋ ಅದಕ್ಕೂ ನಾವು ಪರಿಹಾರ ಹುಡುಕುವುದರಲ್ಲಿ ಸಹಾಯ ಮಾಡುವುದಿಲ್ಲ.

ಇಂದು ಇಡೀ ದೇಶದಲ್ಲಿ ಒಂದೇ ಸಲಕ್ಕೆ ಐವತ್ತಕ್ಕಿಂತಲೂ ಹೆಚ್ಚು ನಗರಗಳಲ್ಲಿ ಮೆಟ್ರೊದ ದಿಕ್ಕಿನಲ್ಲಿ ಮುಂದೆ ನಡೆಸುವ ಪ್ರಯತ್ನ ನಮ್ಮದಾಗಿದೆ. ಎಷ್ಟು ದೊಡ್ಡ ಆರ್ಥಿಕ ಹೊರೆಯನ್ನು ಹೊರುವ ನಿರ್ಣಯವನ್ನು ನಾವು ಮಾಡಿದ್ದೇವೆಂಬುದನ್ನು ನೀವು ಕಲ್ಪನೆ ಮಾಡಿಕೊಳ್ಳಬಲ್ಲಿರಿ. ಅದರೆ ನಾವು ತುಣುಕುಗಳಾಗಿ ಮಾಡಿದರೆ, ಆಡಿದ ಮಾತುಗಳನ್ನು ಮುಂದೂಡಿದರೆ ಯೋಜನೆಗಳು ದುಬಾರಿಯಾಗುತ್ತವೆ. ಆ ನಗರದ ಸಮಸ್ಯೆಗಳು ಹೆಚ್ಚಾಗುತ್ತವೆ. ಹಣ ಹೂಡಿದ ನಂತರವು ಅದು ಅವಶ್ಯಕತೆಗಳನ್ನು ಪೂರ್ಣಗೊಳಿಸುವ ಸ್ಥಿತಿಯಲ್ಲಿ ಇರುವುದಿಲ್ಲ. ಆದ್ದರಿಂದ ನಮ್ಮ ಎರಡನೆ ಪ್ರಯತ್ನವೆಂದರೆ ನಾವು ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳಲಿ, ಅದನ್ನು ಕಾಲಾವಧಿಯ ಒಳಗೆ ಪೂರೈಸುವುದು. ಸಾಧ್ಯವಾದರೆ ಇಪ್ಪತ್ತೈದು ಮೂವತ್ತು ವರ್ಷಗಳ ನಂತರದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಮಾಡಲು ಪ್ರಯತ್ನಿಸುವುದು. ಈಗ ಬಹುಶಃ ಆರ್ಥಿಕವಾಗಿ ಕಾರ್ಯಸಾಧ್ಯ ಇರಲಿ, ಇಲ್ಲದಿರಲಿ ಒಂದು ಸಲ ಮಾತು ಮುಂದುವರಿದರೆ ಆರ್ಥಿಕವಾಗಿ ಸಾಧ್ಯವಾಗುವುದನ್ನು ಕೂಡ ಮೂರು ನಾಲ್ಕು ವರ್ಷಗಳಲ್ಲಿ ನಾವು ಅನುಭವ ಪಡೆಯ ತೊಡಗುತ್ತೇವೆ. ನಾವು ಜೀವನದ ಗುಣಮಟ್ಟದಲ್ಲಿ ಬದಲಾವಣೆ ತರಲು ಇಚ್ಛಿಸುತ್ತೇವೆ.

ಇಂದು ಇಡೀ ದೇಶದಲ್ಲಿ ಎರಡೂವರೆ ಲಕ್ಷ ಪಂಚಾಯತಿಗಳನ್ನು ಆಪ್ಟಿಕಲ್ ಫೈಬರ್ ನೆಟ್ ವರ್ಕ್ನೊಂ ದಿಗೆ ಜೋಡಿಸುವ ಒಂದು ಬಹು ದೊಡ್ಡ ಕೆಲಸ ನಡೆಯುತ್ತಿದೆ. ಈ ಡಿಜಿಟಲ್ ಇಂಡಿಯಾ ಕೇವಲ ನಗರಗಳಿಗೆ ಮಾತ್ರ ಇಲ್ಲ. ಇಡೀ ಭಾರತವನ್ನು ನಾವು ಆಧುನಿಕ ವ್ಯವಸ್ಥೆ ಮತ್ತು ವಿಜ್ಞಾನದ ಜೊತೆ ಜೋಡಿಸದ ಹೊರತು ನಾವು ದೇಶವನ್ನು ಮುಂದಕ್ಕೆ ತರಲು ಸಾಧ್ಯವಿಲ್ಲ. ಒಂದು ಕಾಲವೂ ಇತ್ತು ಮೂಲಭೂತ ಸೌಕರ್ಯಗಳ ಚರ್ಚೆ ನಡೆದಾಗ ರಸ್ತೆ, ರೈಲು, ಹೆಚ್ಚು ಹೆಚ್ಚಾದ ವಿಮಾನ ನಿಲ್ದಾಣಗಳ ಬಗ್ಗೆ ಮಾತನಾಡುತ್ತಿದ್ದರು. ಈಗ ಕಾಲ ಬದಲಾಗಿದೆ. ಜನರಿಗೆ ಹೈವೇಯೂ ಬೇಕು, ಐವೇ ಕೂಡ ಬೇಕು. ಹೈವೇಸ್ ಮಾಹಿತಿ ಆಧಾರಿತ ಹೈವೇಯೂ ಬೇಕು, ಐವೆ ಕೂಡ ಬೇಕು. ಐವೇಯು ಬೇಕೆಂದರೆ ಆಪ್ಟಿಕಲ್ ಫೈಬರನ್ನು ಇಡೀ ದೇಶದಲ್ಲಿ ನಿಲ್ಲಿಸಬೇಕಾಗುತ್ತದೆ. ಮೊದಲು ನೀರಿನ ನಲ್ಲಿಯನ್ನು ಹಾಕಲಾಗುತ್ತದೆ. ನೀರಿನ ಪೈಪ್ ಲೈನ್ ಗಳನ್ನು ಹಾಕಿದರೆ ಸಂತೋಷವಾಗುತ್ತದೆ. ಈಗ ಜನರು ಸಾಹೇಬರೆ ನಮಗೆ ಗ್ಯಾಸ್ ಪೈಪ್ ಲೈನ್ ಕೂಡ ಬೇಕು ಎಂದು ಕೇಳುತ್ತಾರೆ. ಕಾಲ ಬದಲಾಗಿದೆ, ಬದಲಾಗಿರುವ ಕಾಲದಲ್ಲಿ ನಾವು ವಿಕಾಸದ ವಿಚಾರಗಳನ್ನು ಕೂಡಾ ಆಧುನಿಕವಾಗಿ ಮಾಡಬೇಕು. ಆಗ ಸಾಮಾನ್ಯರಿಗೆ ಭವಿಷ್ಯದ ದಿನಗಳಲ್ಲಿ ಏನು ಅಗತ್ಯತೆಗಳಿರುತ್ತವೆಯೋ ಅವುಗಳನ್ನು ನಾವು ಪೂರೈಸಬಹುದು. ವರ್ತಮಾನ ಕಾಲದಲ್ಲಿ ಸರ್ಕಾರವು ಮೂಲಭೂತ ಸೌಕರ್ಯಗಳ ವರ್ತುಲದಲ್ಲಿ ರೈಲು ಮತ್ತು ರಸ್ತೆಗಳನ್ನು ಮೀರಿ, ವಾಟರ್ ಗ್ರಿಡ್, ಡಿಜಿಟಲ್ ನೆಟ್ವ್ರ್ಕ್, ಗ್ಯಾಸ್ ಗ್ರಿಡ್, ಸ್ಪೇಸ್ನವ ಜೊತೆ ನೇರ ಪಾರಿಭಾಷಿಕ ಸಂಪರ್ಕ ಹೊಂದಬೇಕು, ನಮ್ಮ ರೈತ ವಿಮೆಯನ್ನು ಮಾಡಿಸಿದ್ದರೆ, ಅವನು ಬೆಳೆದ ಫಸಲು ಎಷ್ಟಿತ್ತು, ಅವನ ಫಸಲಿಗೆ ಎಷ್ಟು ನಷ್ಟವಾಯಿತು ಇವು ಅಂತರಿಕ್ಷ ತಂತ್ರಜ್ಞಾನ (ಸ್ಪೇಸ್ ಟೆಕ್ನಾಲಜಿ ) ದಿಂದ ಗೊತ್ತಾಗಬೇಕು. ರೈತನಿಗೆ ಅವನಿಗೆ ಸಿಗಬೇಕಾದ ಹಣ ಪೂರ್ತಿ ಸಿಗಬೇಕು. ಈ ರೀತಿಯ ಜಾಲತಾಣವು ಸಮಯದ ಬೇಡಿಕೆಯಾಗಿದೆ. ಈ ರೂಪದಲ್ಲಿ ಭಾರತವು ಆಧುನಿಕ ಭಾರತವಾಗಬೇಕು. ವ್ಯವಸ್ಥೆಗಳು ಮತ್ತು ಸೌಲಭ್ಯಗಳಿಂದ ಸಜ್ಜಿತರಾಗಬೇಕು ಎಂಬ ಕನಸನ್ನು ಹೊತ್ತು ನಾವು ನಡೆಯುತ್ತಿದ್ದೇವೆ.

ಪುಣೆಯಲ್ಲಿ ಮೆಟ್ರೋದ ಈ ಯೋಜನೆ ಬಗ್ಗೆ ಜನರ ಕೋಪ ಬಹಳ ಸ್ವಾಭಾವಿಕ. ಇದೇ ಕೆಲಸ ಬಹಳ ಮೊದಲೇ ಆಗಿದ್ದಿದ್ದರೆ, ಕಡಿಮೆ ಖರ್ಚಿನಲ್ಲಿ ಆಗುತ್ತಿತ್ತು. ಇಷ್ಟು ವರ್ಷಗಳು ಏನು ತೊಂದರೆ ಆಗಿತ್ತೋ ಅದು ಆಗುತ್ತಿರಲಿಲ್ಲ. ಅನೇಕ ಜನರು ಕಷ್ಟದ ಕಾರಣದಿಂದ ಗಾಡಿಗಳನ್ನು ಕೊಂಡುಕೊಂಡಿದ್ದವರು ಗಾಡಿಗಳನ್ನು ಕೊಂಡುಕೊಳ್ಳುತ್ತಿರಲಿಲ್ಲ. ಮೆಟ್ರೋ ಬಂದಿದೆ ಗಾಡಿ ಕೊಂಡುಕೊಳ್ಳಲು ಏಕೆ ಖರ್ಚು ಮಾಡಬೇಕು, ಪಾರ್ಕಿಂಗ್ ಮಾಡಲು ಜಾಗವೂ ಇಲ್ಲ ಎಂದು ಅಂದುಕೊಳ್ಳುತ್ತಿದ್ದರು. ಆದ್ರೆ ತಡವಾದರೂ ಒಳ್ಳೆಯದೇ ಆಯಿತು. ಪುಣೆಯ ನನ್ನ ಸೋದರ-ಸೋದರಿಯರೆ, ಮೊದಲಿದ್ದ ಸರ್ಕಾರಗಳು ಬಹಳ ಒಳ್ಳೊಳ್ಳೆಯ ಕೆಲಸಗಳನ್ನು ನನಗಾಗಿ ಬಾಕಿ ಉಳಿಸಿ ಹೋಗಿದ್ದಾರೆ. ಆದ್ದರಿಂದ ಈ ಒಳ್ಳೆಯ ಕೆಲಸವನ್ನು ಮಾಡುವ ಅವಕಾಶ ನನಗೆ ಸಿಗುತ್ತಿದೆ. ನನಗೆ ಈ ಕಾರ್ಯದಿಂದಾಗಿ ಪುಣೆಯಲ್ಲಿ ನಿಮ್ಮೆಲ್ಲರ ನಡುವೆ ಬರುವ ಸೌಭಾಗ್ಯ ಸಿಕ್ಕಿದೆ. ನನಗೆ ಜಗತಾಪ್ಜೀರ ಎಷ್ಟು ಸಂತೋಷ ಪಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಏಕೆಂದರೆ ರಾಜಕೀಯ ಕಾರಣಗಳಿಂದಾಗಿ ಸಂತೋಷವಾದಾಗಲೂ ಅದನ್ನು ವ್ಯಕ್ತಪಡಿಸುವುದು ಸ್ವಲ್ಪ ಕಷ್ಟವಾಗುತ್ತದೆ. ಈಗ ತಾನೆ ವೆಂಕಯ್ಯಜಿಯವರು ಪುಣೆಗೆ 28 ಕೋಟಿಗೆ ಬದಲಾಗಿ 160 ಕೋಟಿ ಸಿಕ್ಕಿದೆ ಎಂದು ಹೇಳುತ್ತಿದ್ದರು, ಚುನಾವಣೆ ಬರುತ್ತಿದೆ, ಮುನಿಸಿಪಾಲಿಟಿಯ ಹತ್ತಿರ 160 ಕೋಟಿ ರೂಪಾಯಿಗಳು ಬಂದಿವೆ ಅಂದರೆ ಅದು ಏನೇನೆಲ್ಲಾ ಮಾಡಬಹುದು, ಆದರೆ ಇದೆಲ್ಲಾ ಆಗಿದ್ದು ಏಕೆಂದರೆ ಎಂಟನೇ ನವೆಂಬರ್ ರಾತ್ರಿ 8 ಗಂಟೆಗೆ ನಾನು ಘೋಷಣೆ ಮಾಡಿದ್ದರ ಕಾರಣ. ಇದು ಬರೀ ಪುಣೆಯಲ್ಲಿ ಮಾತ್ರವಲ್ಲ, ಭಾರತದ ಪ್ರತಿಯೊಂದು ಸರ್ಕಾರದ ಬಳಿ ಕೇವಲ ಬರೀ ನಗರಸಭೆಗಳಲ್ಲೇ 200-300 ಪ್ರತಿಶತ ಆದಾಯ ಹೆಚ್ಚಾಗಿದೆ. ಏಕೆಂದರೆ ಪ್ರತಿಯೊಬ್ಬನಿಗೂ ಮೋದಿ ತೆಗೆದುಕೊಂಡು ಹೋಗ್ತಾರೆ, ಅದಕ್ಕಿಂತ ಒಳ್ಳೇದು ಇದರಲ್ಲಿ ಹೂಡಿಕೆ ಮಾಡುವುದು ಎಂದು ಅನಿಸಿರುತ್ತದೆ, ಇದೂ ಒಳ್ಳೆಯದೇ ಆಯಿತು. ಇಲ್ಲ ಅಂದರೆ ನಗರ ಸಭೆಗಳಲ್ಲಿ ತೆರಿಗೆಯು ಶೇಕಡಾ 50, ಶೇ.60, ಶೇ.70ರ ಮುಂದಕ್ಕೆ ಎಂದಿಗೂ ಹೋಗುತ್ತಿರಲಿಲ್ಲ. ಕೊಡುವವರು ಯಾರಾಗಿದ್ದರು? ಸಾಮಾನ್ಯ ವ್ಯಕ್ತಿ ಕೊಡುತ್ತಿದ್ದ, ಕೊಡದಿದ್ದವರು ಯಾರಾಗಿದ್ದರು? ಆಗಾಗ ನಮ್ಮ ಅಕ್ಕ ಪಕ್ಕ ಕಾಣಿಸುತ್ತಿದ್ದವರು ಕೂಡ ಅಲ್ಲ. ಯಾರಿಗೆ ಪ್ರಭಾವ ಹೆಚ್ಚಾಗಿರುತ್ತದೆಯೋ ಅವರು ಕಾನೂನು ನಿಯಮಗಳನ್ನು ಮುರಿಯಲು ಕಾರಣರಾಗುತ್ತಾರೆ. ಇವರೆಲ್ಲರನ್ನು ದಾರಿಗೆ ತರಲಾಗಿದೆ. ದೇಶದಲ್ಲಿ ಎಲ್ಲರೂ ಸರಿ ಸಮಾನರು, ಪ್ರತಿಯೊಬ್ಬರೂ ಕಾನೂನನ್ನು ಪಾಲಿಸಬೇಕು. ಪ್ರತಿಯೊಬ್ಬರೂ ನಿಯಮಗಳನ್ನು ಪಾಲಿಸಬೇಕು. ನನ್ನ ದೇಶವಾಸಿಗಳೆ, ನಮ್ಮ ದೇಶದಲ್ಲಿ ಸರ್ಕಾರಗಳು ಹೇಗೆ ನಡೆಯುತ್ತವೆ ಅನ್ನುವುದನ್ನು ನಾನು ಹೇಳಲೇ? ನಾನು ಇದನ್ನು ಯಾರಿಗಾದರೂ ಕೆಟ್ಟದ್ದಾಗಲಿ ಎಂದು ಹೇಳುತ್ತಿಲ್ಲ. ಹೃದಯದಲ್ಲಿ ನೋವಾಗುತ್ತದೆ. ದುಃಖವಾಗುತ್ತದೆ. ನಮ್ಮ ದೇಶವನ್ನು ಏನು ಮಾಡಿಬಿಟ್ಟಿದ್ದೇವೆ! ಭಾರತದ ಲೋಕಸಭೆಯು 1988 ರಲ್ಲಿ ಬೇನಾಮಿ ಸಂಪತ್ತಿನ ಕಾನೂನನ್ನು ಅಂಗೀಕರಿಸಿತ್ತು. ಸಂಸತ್ತಿನಲ್ಲಿ ವಾದಗಳಾದವು, ಪಕ್ಷ ವಿಪಕ್ಷಗಳು ಚರ್ಚೆಮಾಡಿದವು. ಕಾನೂನು ಅಂಗೀಕೃತವಾಯಿತು. ವರ್ತಮಾನ ಪತ್ರಿಕೆಗಳಲ್ಲಿ ಶೀರ್ಷಿಕೆಗಳು ಅಚ್ಚಾದವು. ಯಾರಿಗೆ ಜಯಕಾರ ಆಗಬೇಕಾಗಿತ್ತೋ ಅವರಿಗೆ ಜಯಕಾರವಾಯಿತು. ಹಾರಗಳನ್ನು ಹಾಕಲಾಯಿತು. ಬಹಳ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆಂದು ಹೊಗಳಲಾಯಿತು. ಆದರೆ ಸಂಸತ್ತಿನಲ್ಲಿ ಅಂಗೀಕೃತವಾದ ಕಾಗದವು ಫೈಲುಗಳ ರಾಶಿಯಲ್ಲಿ ಕಳೆದು ಹೋಯಿತು. ನಾನು ಬಂದ ನಂತರ ಹೊರ ಬಂತು. ಅದರ ಪ್ರಕಟಣೆ ಆಗಿರಲಿಲ್ಲ. ಕಾನೂನು ಜಾರಿಗೆ ಬಂದಿರಲಿಲ್ಲ. 1988ರ ಆ ಕಾಲದಲ್ಲಿ ನಡೆದ ಸಂಸತ್ತಿನ ಸಭೆಯಲ್ಲಿ ಇಷ್ಟು ದೊಡ್ಡ ಮಹತ್ವಪೂರ್ಣ ನಿರ್ಣಯವನ್ನು ಆ ಸರ್ಕಾರವು ಜಾರಿಗೆ ತಂದಿದ್ದರೆ ಇಂದು ಬೇನಾಮಿ ಸಂಪತ್ತಿನ ಹೆಸರಿನಲ್ಲಿ ದೇಶದಲ್ಲಿ ಯಾವ ಪಾಪವು ಹೆಚ್ಚಾಗಿದೆಯೋ ಅದು ಹೆಚ್ಚಾಗುತ್ತಿತ್ತೇನು? ದೇಶ ಉಳಿಯುತ್ತಿತ್ತೋ, ಉಳಿಯುತ್ತಿರಲಿಲ್ಲವೋ? ಎಂತೆಂತಹ ಪಾಪಗಳನ್ನು ಮಾಡಿ ಹೋಗಿದ್ದಾರೆ. ಈಗ ನೀವು ಹೇಳಿ, ನಾನು ಕೂಡಾ ಹೀಗೇ ನಡೆಯಲು ಬಿಡಬೇಕೆ ಇಲ್ಲಾ ಸರಿ ಮಾಡಲೆ? ಸ್ವಲ್ಪ ಜೋರಾಗಿ ಹೇಳಿ ಸರಿ ಮಾಡಲೆ? ಹಾಗಾದರೆ ಈಗ ತಾನೆ ದೇವೇಂದ್ರಜಿಯವರು ನಿಮ್ಮಿಂದ ಲೈಟನ್ನು ಬೆಳಗಿಸಿದ್ದರಲ್ಲ ಮತ್ತೆ ಅದೇ ತರಹ ಲೈಟನ್ನು ಬೆಳಗಿಸಿ ಹೇಳಿ. ಸರಿ ಮಾಡಬೇಕೋ, ಮಾಡಬಾರದೋ? ದೇಶವನ್ನು ಹಾಳು ಮಾಡುವುದಕ್ಕೆ ನಡೆಯುತ್ತಿರುವ ಮಾತುಗಳನ್ನು ತಡೆಯಬೇಕೋ, ತಡೆಯಬಾರದೋ? ಸೋದರ-ಸೋದರಿಯರೆ, ಸಮಯಕ್ಕೆ ಸರಿಯಾಗಿ ದೇಶದಲ್ಲಿನ ರೋಗಗಳಿಗೆ ಚಿಕಿತ್ಸೆ ಮಾಡಿದ್ದಿದ್ದರೆ ಇಂದು ನನಗೆ ಇಂತಹ ಕಠೋರ ಹೆಜ್ಜೆಯನ್ನು ಇಡಬೇಕಾಗುತ್ತಿರಲಿಲ್ಲ. ಇವತ್ತಿಗೆ ನಲವತ್ತು ವರ್ಷಗಳ ಹಿಂದೆ ಯಾವ ಕೆಲಸವನ್ನು ಮಾಡಬೇಕಾಗಿತ್ತೋ ಆ ಕೆಲಸವನ್ನು ಮಾಡಿದ್ದಿದ್ದರೆ ಇಂದು ನನ್ನ ದೇಶದ ನೂರಿಪ್ಪತ್ತೈದು ಕೋಟಿ ಪ್ರಾಮಾಣಿಕ ಜನರು ಸಾಲಿನಲ್ಲಿ ನಿಲ್ಲಬೇಕಾಗಿ ಬರುತ್ತಿರಲಿಲ್ಲ. ದೇಶವಾಸಿಗಳು ಸರತಿಯಲ್ಲಿ ಅನುಭವಿಸುತ್ತಿದ್ದ ಕಷ್ಟಗಳು, ಅವರು ಪಡುತ್ತಿದ್ದ ತೊಂದರೆಗಳು ಎಷ್ಟಿತ್ತೋ ಅಷ್ಟೇ ನೋವು, ಕಷ್ಟವನ್ನು ನಾನೂ ಪಟ್ಟಿದ್ದೇನೆ. ಆದರೆ ಈ ನಿರ್ಣಯವನ್ನು ದೇಶಕ್ಕಾಗಿ ಮಾಡಬೇಕಾಗಿದೆ. ಯಾವ ಜನ ನಿರ್ಣಯವನ್ನು ಮಾಡಲಿಲ್ಲವೋ ಆ ಜನ ದೇಶಕ್ಕೆ ಭಾರಿ ನಷ್ಟವನ್ನುಂಟುಮಾಡಿದ್ದಾರೆ. ಆದ್ದರಿಂದ ನಾನು ನಿಮ್ಮ ಆಶೀರ್ವಾದಗಳನ್ನು ಪಡೆದು ಇಂದು ಈ ಕಠಿಣ ಹೆಜ್ಜೆಯನ್ನು ಇಡುತ್ತಿದ್ದೇನೆ.

ಸೋದರ ಸೋದರಿಯರೆ ನಾನು ಪುಣೆಯ ಬಗ್ಗೆ ವಿಶೇಷ ಅಪೇಕ್ಷೆಯನ್ನು ಹೊಂದಿದ್ದೇನೆ. ಇದು ದೇಶದ ಔದ್ಯೋಗಿಕ ಪರಂಪರೆಯ ನಗರ. ಬಹಳ ಸಮಯದಿಂದ ಕಾಶಿಯಲ್ಲಿ ವಿದ್ವ್ವಾಂಸರು ಇರುತ್ತಿದ್ದರೆಂದರೆ ಹಾಗೆ ಪುಣೆ ಕೂಡಾ ವಿದ್ವತ್ತಿಗೆ ಹೆಸರಾಗಿತ್ತು. ಐಟಿ ಉದ್ಯಮವು ಪುಣೆಯ ಜೀವನದೊಂದಿಗೆ ಬೆಸೆದುಕೊಂಡಿದೆ. ಪುಣೆ ನಗರವು ಆನ್ಲೈಗನ್ ಪೇಮೆಂಟ್ನ ದಿಸೆಯಲ್ಲಿ ವೇಗವಾಗಿ ಮುಂದುವರೆಯಬಲ್ಲುದೆ, ಇಲ್ಲಾ ಮುಂದುವರೆಯುವುದಿಲ್ಲವೇ? ನಮ್ಮ ಮೊಬೈಲ್ ಫೋನ್ ಮೊಬೈಲ್ ಬ್ಯಾಂಕ್ ಆಗಲು ಸಾಧ್ಯವೇ ಅಥವಾ ಆಗುವುದಿಲ್ಲವೇ? ಈ ಬ್ಯಾಂಕ್ ನಮ್ಮ ಅಂಗೈಯಲ್ಲಿ ಇರುವಂತಾಗುತ್ತದೆಯೇ ಇಲ್ಲಾ ಆಗುವುದಿಲ್ಲವೇ? ಯಾವಾಗ ಇಷ್ಟವಾಗುತ್ತದೋ, ಯಾವುದು ಇಷ್ಟವಾಗುತ್ತದೋ ಆಗ ತಮ್ಮ ವ್ಯಾಪಾರವನ್ನು ನಡೆಸಲು ಸಾಧ್ಯವಾಗುತ್ತದೋ ಇಲ್ಲಾ ಸಾಧ್ಯವಾಗುವುದಿಲ್ಲವೋ? ಬ್ಯಾಂಕಿನ ಸಾಲಿನಲ್ಲಿ ನಿಂತುಕೊಳ್ಳುವ ಅಗತ್ಯವಿದೆಯೇ? ಎಲ್ಲಾ ವ್ಯವಸ್ಥೆಗಳೂ ದೊರೆಯುತ್ತಿವೆಯೊ, ಇಲ್ಲವೋ? ಪುಣೆಯ ಜನರು ನನಗೆ ಸಹಾಯ ಮಾಡಬಲ್ಲರೋ ಇಲ್ಲವೋ? ಮಾಡುತ್ತೀರ ಖಂಡಿತಾ ಮಾಡುತ್ತೀರ. ನಾವು ಇ-ವ್ಯಾಲೆಟ್ನಲ ಮೂಲಕ ಅಥವಾ ಡೆಬಿಟ್ ಕಾರ್ಡಿನ ಮೂಲಕ, ಈಗಂತೂ ಆಧಾರ ಸೇವೆ ಅನುಕೂಲವೂ ಇದೆ, ಇವುಗಳ ಮೂಲಕ ವ್ಯವಹಾರ ನಡೆಸುವುದೆಂದು ತೀರ್ಮಾನಿಸೋಣ. ನಿಮ್ಮ ಆಧಾರ್ ನಂಬರು ಇರಬೇಕು, ಅಕೌಂಟಿನ ನಂಬರು ಇರಬೇಕು, ನೀವು ಬರೀ ಹೆಬ್ಬೆಟ್ಟು ಒತ್ತಿ ನಿಮಗೆ ಪೇಮೆಂಟ್ ಆಗುತ್ತದೆ. ಇಷ್ಟು ವ್ಯವಸ್ಥೆ ಆಗಿದೆ. ಈ ಮಾತನ್ನು ಒಪ್ಪಿಕೊಂಡು ನಡೆಯಿರಿ. ಇಲ್ಲಿ ರೈತನಾಯಕ ಶರದ್ ಪವಾರ್ಜಿಟ ಕುಳಿತಿದ್ದಾರೆ. ಕಬ್ಬಿನ ಬೆಳೆ ಅಧಿಕವಾದಾಗ ಕಬ್ಬಿನ ಬೆಲೆ ಕಡಿಮೆಯಾಗುತ್ತದೋ ಇಲ್ಲವೋ ಹೇಳಿ. ಈರುಳ್ಳಿ ಅಧಿಕವಾಗಿ ಬೆಳೆದಾಗ ಈರುಳ್ಳಿಯ ಬೆಲೆ ಕಡಿಮೆಯಾಗುತ್ತದೆಯೋ ಇಲ್ಲವೋ ಹೇಳಿ. ಆಲೂಗಡ್ಡೆ ಬೆಳೆ ಅಧಿಕವಾದಾಗ, ಆಲೂಗಡ್ಡೆಯ ಬೆಲೆ ಕಡಿಮೆ ಆಗುತ್ತದೋ ಇಲ್ಲವೋ. ಹಾಗೆಯೇ ನೋಟುಗಳು ಅಧಿಕವಾದಾಗ ನೋಟಿನ ಬೆಲೆ ಕೂಡ ಕಡಿಮೆ ಆಗುತ್ತದೆ. ಎಷ್ಟು ಜಾಸ್ತಿ ನೋಟುಗಳು ಮುದ್ರಿತವಾಗುತ್ತವೆಯೋ ಅಲ್ಲಿಗೆ ನೋಟುಗಳ ಬೆಲೆ ಕೊನೆಯಾಯಿತು. ನವೆಂಬರ್ ಎಂಟನೇ ತಾರೀಖಿಗಿಂತ ಮುಂಚೆ ನೂರು ರೂಪಾಯಿಯನ್ನು ಯಾರಾದರೂ ಕೇಳುತ್ತಿದ್ದರಾ, ಅದರ ಕಡೆಗೆ ಯಾರಾದರೂ ನೋಡುತ್ತಿದ್ದರಾ? ಮನೆಯಲ್ಲಿ ಮಗು ಕೂಡಾ ಸಾವಿರ, ಐನೂರು, ನೂರರ ನೋಟುಗಳಿದ್ದರೆ ಸಾವಿರ ರೂಪಾಯಿನ ನೋಟಿನ ಕಡೆ ಹೋಗುತ್ತಿತ್ತು. ನೂರು ರೂಪಾಯಿಯ ನೋಟಿನ ಕಡೆಗೆ ತಿರುಗಿಯೂ ನೋಡುತ್ತಿರಲಿಲ್ಲ. ಅದಕ್ಕೆ ಯಾವ ಬೆಲೆಯೂ ಉಳಿದಿರಲಿಲ್ಲ. ಎಂಟನೇ ತಾರೀಖಿನ ನಂತರ ನೂರು ರೂಪಾಯಿಯ ಗೌರವ ಹೆಚ್ಚಾಯಿತೋ ಇಲ್ಲವೋ? ಚಿಕ್ಕ ನೋಟಿನ ಶಕ್ತಿ ಹೆಚ್ಚಾಯಿತೋ ಇಲ್ಲವೋ? ದೇಶವಾಸಿಗಳೆ, ಎಂಟು ನವೆಂಬರ್ ನಂತರ ಭಾರತದಲ್ಲಿ ಕೂಡ ದೊಡ್ಡದರದಲ್ಲ ಚಿಕ್ಕದರ ಶಕ್ತಿ ಹೆಚ್ಚಾಗಿದೆ. ಗೆಳೆಯರೆ, ಚಿಕ್ಕದರ ಶಕ್ತಿ ಹೆಚ್ಚಾಗಿದೆ. ನನ್ನ ಹೋರಾಟ ಚಿಕ್ಕವರ ಶಕ್ತಿಯನ್ನು ಹೆಚ್ಚಿಸಲೆಂದೇ ನಡೆಯುತ್ತಿದೆ. ಬಡವರಿಗೆ ಸಾಮರ್ಥ್ಯ ಕೊಡುವುದಕ್ಕಾಗಿ ಇದೆ.

ನೀವು ನೋಡಿರಬಹುದು, ಕೆಲ ಜನರಿಗೆ ಎಲ್ಲಾ ಸರ್ಕಾರಗಳೂ ಹೀಗೆ ಇರುತ್ತವೆ ಎಂದು ಅನಿಸಿದೆ. ಮೊದಲು ಹೇಗಿತ್ತೋ ಇದೂ ಹಾಗೇ ಇರುತ್ತದೆ. ಆಯ್ತು, ಮೋದಿಜೀ ನಾಲ್ಕಾರು ದಿನ ಮಾತನಾಡುತ್ತಾರೆ, ಆಮೇಲೇನಾಗುತ್ತೆ? ಆ ನಂತರ ನಾವುಗಳೇ ನಾವುಗಳು. ವರ್ಷಗಳಿಂದ ಮಾಡಿಕೊಂಡು ಬಂದಿದ್ದೇವೆ, ಮಾಡುತ್ತೇವೆ. ಇದೇ ಗರ್ವದ ಕಾರಣ ಅವರಿಗೆ ಅನಿಸಿತು ಬ್ಯಾಂಕಿನಲ್ಲಿ ಹಾಕು, ಎಲ್ಲಾ ಕಪ್ಪು ಬಿಳಿಯಾಗಿ ಹೋಗುತ್ತದೆ ಎಂದು. ನೋಟುಗಳು ಕಪ್ಪಗಿದ್ದವು ಬೆಳ್ಳಗಾಗಲಿಲ್ಲ, ಆದರೆ ಮುಖಗಳು ಕಪ್ಪಾದವು, ಮುಖಗಳು ಕಪ್ಪಾದವು. ಕೆಲವು ಬ್ಯಾಂಕಿನವರನ್ನು ಹೊಂದಾವಣೆ ಮಾಡಿಕೊಂಡು ಮತ್ತು ಪಾಲುದಾರಿಕೆ ಮಾಡಿಕೊಂಡು ಆಟ ಆಡಲು ನೋಡಿದರು. ಈಗ ಮುಖ ತೋರಿಸಲು ಯೋಗ್ಯರಾಗಿ ಉಳಿದಿಲ್ಲ. ಈಗ ತಂತ್ರಜ್ಞಾನ ಬಹಳ ಉತ್ತಮವಾಗಿದೆ. ಯಾರು ಮನೆಯಿಂದ ಹೊರಟರೋ ಇಲ್ಲವೋ ಅಲ್ಲಿಗೆ ವಿಚಾರಣೆ ತಲುಪುತ್ತದೆ. ತಿಂಗಳು, ಎರಡು ತಿಂಗಳು, ಮೂರು ತಿಂಗಳಿನ ನಂತರ ಕೂಡ ಇದು ಪ್ರತಿಯೊಬ್ಬನನ್ನು ಹಿಂಬಾಲಿಸುತ್ತದೆ. ಹೇಳಿ ಸೋದರರೆ, ಮೊದಲು ಇರಲಿಲ್ಲ ಎಲ್ಲಿಂದ ಬಂದಿದೆ ಎಂದು ಹೇಳಬೇಕಾಗುತ್ತದೆ. ಈಗ ಬ್ಯಾಂಕಿನಲ್ಲಿ ಹಾಕಿಯಾಗಿದೆ, ಕಪ್ಪು ಬಿಳಿಯಾಯಿತು ಎಂದು ಯಾರು ಯೋಚಿಸುತ್ತೀರೋ ಅವರಿಗೆ ನಾನು ಸಂಭಾಳಿಸಿಕೊಳ್ಳಿ ಎಂದು ಹೇಳುತ್ತೇನೆ. ಇನ್ನೂ ಸಮಯವಿದೆ, ಕಾನೂನನ್ನು ಪಾಲಿಸಿ. ಬಡವರಿಗೆ ಯಾವ ಹಕ್ಕುಗಳಿವೆಯೋ ಅವನ್ನು ಹಿಂದಿರುಗಿಸಿ. ಈಗ ಉಳಿದುಕೊಳ್ಳುವ ಸಾಧ್ಯತೆ ಉಳಿದಿಲ್ಲ. ಆದ್ದರಿಂದ ನಾನು ಪುಣೆಯ ಭೂಮಿಯಿಂದ ಪ್ರತಿಯೊಬ್ಬರಿಗೂ ಹೇಳಲು ಇಷ್ಟಪಡುತ್ತೇನೆ. ಈಗಲೂ ಸಮಯವಿದೆ, ಇಂದಿಗೂ ನಿಮಗೆ ಸಹಾಯ ಮಾಡುವಂತಹ ನಿಯಮಗಳಿವೆ. ಸರಿಯಾದ ರಸ್ತೆಗೆ ಬನ್ನಿ, ಜೀವನ ಪೂರ್ತಿ ನಿಶ್ಚಿಂತೆಯಿಂದ ನಿದ್ರಿಸಿ, ಯಾವುದೇ ಚಿಂತೆ ಮಾಡುವ ವಿಷಯ ಇರುವುದಿಲ್ಲ. ಬರದಿದ್ದರೆ ನಾನಂತೂ ನಿದ್ರೆಯನ್ನು ಮಾಡುವವನಲ್ಲ, ಸೋದರ-ಸೋದರಿಯರೆ, ಈ ಕಪ್ಪುಹಣ, ಭ್ರಷ್ಟಾಚಾರ, ಖೋಟಾನೋಟು, ಈ ಭಯೋತ್ಪ್ಪಾದಕತೆ, ಈ ನಕ್ಸಲವಾದ ಇವುಗಳ ವಿರುದ್ಧ ಯುದ್ಧ ಮಾಡಿ ಎಂದು ಹೇಳಬೇಕಲ್ಲ ಅಂತ ನಾನು ಹೇಳುತ್ತಿಲ್ಲ. ಮಿತ್ರರೆ, ಬಹಳ ಧೈರ್ಯ ಮಾಡಿ ಯುದ್ಧವನ್ನು ಸಾರಿದ್ದೇನೆ. ನೂರಿಪ್ಪತ್ತೈದು ಕೋಟಿ ದೇಶವಾಸಿಗಳ ಸ್ವಭಾವವನ್ನು ನೋಡಿ ನಾನು ನಂಬಿಕೆಯಿಂದ ಹೇಳುತ್ತೇನೆ. ಈ ಹಿಡಿಯಷ್ಟು ಶಕ್ತಿಗಳು ದೇಶವನ್ನು ಹಿಡಿತದಲ್ಲಿಟ್ಟುಕೊಂಡು ತಮ್ಮ ಮನಕ್ಕೆ ಬಂದ ಹಾಗೆ ಮಾಡುತ್ತಿದ್ದರಲ್ಲ ಆ ಕಾಲ ಹೊರಟು ಹೋಗಿದೆ. ಈಗ ದೇಶದಲ್ಲಿ ಯಾರ ಮಾತು ನಡೆಯುತ್ತದೆಂದರೆ ಅದು ನೂರಿಪ್ಪತ್ತೈದು ಕೋಟಿ ದೇಶವಾಸಿಗಳದು ನಡೆಯುತ್ತದೆ. ಈ ದೇಶದಲ್ಲಿ ಧ್ವನಿ ಏಳುತ್ತದೆಂದರೆ ಅದು ದೇಶದ ನೂರಿಪ್ಪತ್ತೈದು ಕೋಟಿ ದೇಶವಾಸಿಗಳ ಧ್ವನಿ ಏಳುತ್ತದೆ. ಆ ಧ್ವನಿಯನ್ನು ಹಿಡಿಯಷ್ಟು ಜನ ಈಗ ಅಡಗಿಸಲಾರರು. ಈ ವಿಷಯವನ್ನು ಇಟ್ಟುಕೊಂಡು ನಾನು ಹೊರಟಿದ್ದೇನೆ. ಗೆಳೆಯರೆ, ಇದಕ್ಕಾಗಿ ನಾನು ದೇಶವಾಸಿಗಳಿಗೆ ಆಭಾರಿಯಾಗಿದ್ದೇನೆ. ನಾನು ಮೊದಲನೆ ದಿನ ಏನು ಹೇಳಿದ್ದೆ ಅನ್ನುವುದನ್ನು ಹೇಳುತ್ತೇನೆ, ಐವತ್ತು ದಿನಗಳ ತನಕ ತೊಂದರೆಗಳು ಆಗೇ ಆಗುತ್ತವೆ. ಜಾಸ್ತಿಯಾಗುತ್ತದೆ ಎಂತಲೂ ನಾನು ಹೇಳಿದ್ದೆ. ಐವತ್ತು ದಿನಗಳ ನಂತರ ಪ್ರಾಮಾಣಿಕ ಜನರ ತೊಂದರೆಗಳು ಕಡಿಮೆಯಾಗಲು ಆರಂಭವಾಗುತ್ತದೆ ಮತ್ತು ಅಪ್ರಾಮಾಣಿಕ ಜನರ ತೊಂದರೆಗಳು ಹೆಚ್ಚಾಗಲು ಆರಂಭವಾಗುತ್ತದೆ. ನೋಡಿದರೆ ನಿಮಗೂ ಗೊತ್ತಾಗುತ್ತದೆ, ಅಂದಹಾಗೆ ಈಗಲೂ ನೋಡುತ್ತಿರುವಿರಿ. ದೊಡ್ಡ ದೊಡ್ಡ ಮನುಷ್ಯರು ಜೈಲಿಗೆ ಹೋಗುತ್ತಿದ್ದಾರೆ. ಬ್ಯಾಂಕುಗಳ ಅನೇಕ ಜನರು ಮನೆಗೆ ಹೋಗಿದ್ದಾರೆ. ರಜಾ ಆಗಿದೆ ಮತ್ತು ಕೆಲವರು ಜೈಲಿಗೆ ಹೋಗಿದ್ದಾರೆ. ಸೋದರ-ಸೋದರಿಯರೆ ಬಹಳ ಯೋಚನೆ ಮಾಡಿ, ಅರ್ಥ ಮಾಡಿಕೊಂಡು ದೇಶವಾಸಿಗಳ ಬಗ್ಗೆ ಪೂರಾ ವಿಶ್ವಾಸವನ್ನು ಇಟ್ಟುಕೊಂಡು ಇಟ್ಟಿರುವ ಹೆಜ್ಜೆಯಿಂದ ದೇಶ ಯಶಸ್ವಿಯಾಗೇ ಆಗುತ್ತದೆ. ಇದು ನನ್ನ ನಂಬಿಕೆ. ಮೆಟ್ರೋದ ಕೆಲಸ ತೀವ್ರಗತಿಯಲ್ಲಿ ಮುಂದುವರಿಯಲಿ. ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತಿದ್ದಾಗ ನಾನು ಮಹಾರಾಷ್ಟ್ರಕ್ಕೆ ಹೇಳಿದ್ದೆ, ನೋಡಿ 15 ವರ್ಷಗಳಿಂದ ಮಹಾರಾಷ್ಟ್ರದ ಗಾಡಿ ಹಳ್ಳದಲ್ಲಿ ಸಿಕ್ಕಿಹಾಕಿಕೊಂಡಿದೆ, ಅದನ್ನು ಹೊರ ತೆಗೆಯಬೇಕೆಂದರೆ 2 ಇಂಜಿನ್ಗಟಳು ಬೇಕಾಗುತ್ತವೆ. ಒಂದು ದೆಹಲಿಯ ಇಂಜಿನ್, ಒಂದು ಮಹಾರಾಷ್ಟ್ರ ಸರ್ಕಾರದ ಇಂಜಿನ್. ನೀವು ನಮ್ಮ ಮೇಲೆ ಭರವಸೆ ಇಟ್ಟಿರಿ. ಎರಡು ಇಂಜಿನ್ಗ,ಳನ್ನು ಹಾಕಲಾಗಿದೆ. ಮೆಟ್ರೋ ಬಂತೋ ಇಲ್ಲವೋ? ಇದು ಎರಡು ಇಂಜಿನ್ ಗಳ ಶಕ್ತಿಯಾಗಿದೆ. ನೀವು ಎರಡು ಇಂಜಿನ್ ಹಾಕಲು ಅವಕಾಶ ಮಾಡಿಕೊಟ್ಟಿರಿ. ಇದಕ್ಕಾಗಿ ನಾನು ನಿಮಗೆ ಬಹಳ ಬಹಳ ಆಭಾರಿ, ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...

Prime Minister Shri Narendra Modi paid homage today to Mahatma Gandhi at his statue in the historic Promenade Gardens in Georgetown, Guyana. He recalled Bapu’s eternal values of peace and non-violence which continue to guide humanity. The statue was installed in commemoration of Gandhiji’s 100th birth anniversary in 1969.

Prime Minister also paid floral tribute at the Arya Samaj monument located close by. This monument was unveiled in 2011 in commemoration of 100 years of the Arya Samaj movement in Guyana.